Tag: Chandan

  • ಗುಂಪು ಸೇರುವುದಕ್ಕಿಂತ 500 ಕೋತಿಗಳಿಗೆ ಆಹಾರ ನೀಡುವುದು ಒಳ್ಳೆಯದು: ಚಂದನ್

    ಗುಂಪು ಸೇರುವುದಕ್ಕಿಂತ 500 ಕೋತಿಗಳಿಗೆ ಆಹಾರ ನೀಡುವುದು ಒಳ್ಳೆಯದು: ಚಂದನ್

    – ನಂದಿ ಬೆಟ್ಟದಲ್ಲಿರುವ ಮಂಗಳಿಗೆ ಬಾಳೆಹಣ್ಣು ನೀಡಿದ ನಟ

    ಬೆಂಗಳೂರು: ಗುಂಪು ಸೇರುವುದಕ್ಕಿಂತ 500 ಕೋತಿಗಳಿಗೆ ಆಹಾರ ನೀಡುವುದು ಒಳ್ಳೆಯದು ಎಂದು ಬಿಗ್ ಬಾಸ್ ಖ್ಯಾತಿಯ ನಟ ಚಂದನ್ ಅವರು ಹೇಳಿದ್ದಾರೆ.

    ಕೊರೊನಾ ವೈರಸ್ ಭೀತಿಯಿಂದ ದೇಶ ಲಾಕ್‍ಡೌನ್ ಆಗಿದೆ. ಜನರಿಗೆ ಊಟ ಸಿಗದೆ ಪರಾದಾಡುತ್ತಿದ್ದಾರೆ. ಇನ್ನೂ ಈ ದಿನಗಳಲ್ಲಿ ಪ್ರಾಣಿ ಪಕ್ಷಿಗಳ ಕಷ್ಟವಂತು ಹೇಳತೀರದು. ಹಾಗಾಗಿ ಹಲವಾರು ಈ ಲಾಕ್‍ಡೌನ್ ಸಮಯದಲ್ಲಿ ಪ್ರಾಣಿ ಪಕ್ಷಿಗಳ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಅಂತಯೇ ನಟ ಚಂದನ್ ಅವರು ಕೂಡ ನಂದಿ ಬೆಟ್ಟಕ್ಕೆ ತೆರಳಿ ಅಲ್ಲಿನ ಕೋತಿಗಳಿಗೆ ಬಾಳೆಹಣ್ಣು ನೀಡಿ ಬಂದಿದ್ದಾರೆ.

    https://www.instagram.com/p/B-cJpFwAw91/

    ಈ ವಿಚಾರವಾಗಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಚಂದನ್, ಪಾಠವನ್ನು ಕಲಿತೆ. ಸಾಮಾಜಿಕ ಅಂತರ ಎಂಬುದನ್ನು ನಾವು ಯಾವಾಗ ಕಲಿಯುತ್ತೆವೆ ಎಂದರೆ, 500 ಮಂಗಗಳಿಗೆ ಆಹಾರ ನೀಡುವುದು ಗುಂಪು ಸೇರುವುದಕ್ಕಿಂತ ಒಳ್ಳೆಯದು ಎಂದು ನಮಗೆ ಅರ್ಥವಾದಾಗ ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ಕೋತಿಗೆ ಬಾಳೆಹಣ್ಣು ನೀಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

    https://www.instagram.com/p/B-CN2ddgZeM/

    ನಂದಿ ಬೆಟ್ಟದಲ್ಲಿ ಸಾಕಷ್ಟು ಮಂಗಗಳು ಇದ್ದಾವೆ. ಇವುಗಳು ಅಲ್ಲಿಗೆ ಬರುವ ಪ್ರವಾಸಿಗರು ನೀಡುವ ಆಹಾರವನ್ನು ನಂಬಿ ಮತ್ತು ಅಲ್ಲಿನ ಅಂಗಡಿಗಳನ್ನು ನಂಬಿ ಬದುಕುತ್ತಿದ್ದವು. ಈಗ ದೇಶವೇ ಲಾಕ್‍ಡೌನ್ ಆಗಿದೆ. ಜೊತೆಗೆ ನಂದಿ ಬೆಟ್ಟದ ಬಾಗಿಲು ಮುಚ್ಚಿದೆ. ಅಲ್ಲಿಗೆ ಯಾವುದೇ ಪ್ರವಾಸಿಗರು ಹೋಗುತ್ತಿಲ್ಲ. ಅಂಗಡಿಗಳು ತೆರೆಯುತ್ತಿಲ್ಲ. ಆದ್ದರಿಂದ ಅಲ್ಲಿರುವ ಸಾವಿರಾರು ಮಂಗಗಳು ಹಸಿವಿನಿಂದ ಬಳಲುತ್ತಿವೆ. ಇದನ್ನು ಅರಿತ ಚಂದನ್ ಅಲ್ಲಿಗೆ ಹೋಗಿ ಅವುಗಳಿಗೆ ಆಹಾರ ನೀಡಿದ್ದಾರೆ.

    https://www.instagram.com/p/B9WlVsagIVt/

    ಸಾಕಷ್ಟು ಸಿನಿಮಾ ನಟ-ನಟಿಯರು ಕೂಡ ತಮ್ಮ ಮನೆ ಅಕ್ಕಪಕ್ಕ ನಾಯಿಗಳು ಮತ್ತು ಬೀದಿನಾಯಿಗಳಿಗೆ ಊಟ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಇತ್ತೀಚೆಗಷ್ಟೇ ನಟಿ ಐಂದ್ರಿಂತಾ ರೇ ಅವರು ತಮ್ಮ ಮನೆಯ ಅಕ್ಕಪಕ್ಕದ ಬೀದಿನಾಯಿಗಳಿಗೆ ಊಟ ನೀಡಿದ್ದರು. ಈ ಹಿಂದೆ ಸಂಯುಕ್ತ ಹೊರನಾಡು ಅವರು ಕೂಡ ತಮ್ಮ ಸ್ನೇಹಿತ ಬಳಗವನ್ನು ಕಟ್ಟಿಕೊಂಡು ಬೆಂಗಳೂರಿನ ಹಲವಡೆ ಬೀದಿನಾಯಿಗಳಿಗೆ ಆಹಾರ ನೀಡಿದ್ದರು.

  • ಮನೆಯಿಂದ ಹೊರ ಬಂದ ಚಂದನ್ ಆಚಾರ್

    ಮನೆಯಿಂದ ಹೊರ ಬಂದ ಚಂದನ್ ಆಚಾರ್

    ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಕಿಶನ್ ಎಲಿಮಿನೇಟ್ ಆದ ಬೆನ್ನಲ್ಲೇ ಚಂದನ್ ಮನೆಯಿಂದ ಹೊರ ಬಂದಿದ್ದಾರೆ. ಈ ಹಿಂದೆಯೇ ಕಿಚ್ಚ ಸುದೀಪ್ ಡಬಲ್ ಎಲಿಮಿನೇಶನ್ ನಡೆಯಲಿದೆ ಎಂದು ಹೇಳಿದ್ದರು. ಹಾಗೆಯೇ ಈ ಶನಿವಾರ ಕಿಶನ್ ಮನೆಯಿಂದ ಹೋದ ಮರುದಿನವೇ ಚಂದನ್ ಎಲಿಮಿನೇಟ್ ಆಗಿದ್ದಾರೆ.

    ಭಾನುವಾರ ಚಂದನ್ ಆಚಾರ್ ಮನೆಯಿಂದ ಹೊಸ ಹೋಗುವ ಮೂಲಕ ಸ್ಪರ್ಧಿಗಳಿಗೆ ಶಾಕ್ ನೀಡಿದ್ದಾರೆ. ಚಂದನ್ ಬಿಗ್ ಬಾಸ್ ಮನೆಯಿಂದ ಹೊರ ಬರುವಾಗ ಮುಖ್ಯದ್ವಾರದ ಬಳಿ ಸ್ಪರ್ಧಿಗಳ ಜೊತೆ ಸೆಲ್ಫಿ ತೆಗೆದುಕೊಂಡರು. ಬಳಿಕ ಮತ್ತೆ ಮನೆಯ ಬಾಗಿಲ ಬಳಿ ಓಡಿ ಹೋಗಿ ನೆಲ ಮುಟ್ಟಿ ನಮಸ್ಕಾರ ಮಾಡಿದ್ದಾರೆ. ಇದನ್ನು ನೋಡಿದ ಪ್ರೇಕ್ಷಕರು ಚಂದನ್ ಅವರ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಚಂದನ್ ಮನೆಯಿಂದ ಹೊರ ಬರುವಾಗ ಪ್ರಿಯಾಂಕ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಇದನ್ನೂ ಓದಿ: ಕಿಶನ್ ಕಣ್ಣೀರು ಹಾಕ್ತಿದ್ದಂತೆ ಜಾಕೆಟ್ ಬಿಚ್ಚಿ ಕೊಟ್ಟ ಕಿಚ್ಚ

    ಬಿಗ್ ಬಾಸ್ ಮನೆಯಿಂದ ವೇದಿಕೆಗೆ ಬಂದ ಚಂದನ್, ಸುದೀಪ್ ಅವರ ಮುಂದೆ ನಾನು ಸೋತಿರಬಹುದು. ಆದರೆ ನಾನು ಸತ್ತಿಲ್ಲ. ಬಿಗ್ ಬಾಸ್ ಮನೆಯಲ್ಲಿ ಹೇಗೆ ಬದುಕಿದ್ದೇನೋ ಅದೇ ರೀತಿ ಹೊರಗಿನ ಬದುಕಿನಲ್ಲಿ ಬದುಕಿದ್ದರೆ ನಾವೇ ರಾಜರಾಗಿರುತ್ತಿದ್ವಿ. ನಾವು ನಾವಾಗಿ ಇರುವುದಕ್ಕೆ ಬಿಗ್ ಬಾಸ್ ತುಂಬಾ ಪಾಠಗಳನ್ನು ಹೇಳಿಕೊಡುತ್ತಿತ್ತು. ಬಿಗ್ ಬಾಸ್ ನಮ್ಮನ್ನು ತಾಯಿಯಂತೆನೋಡಿಕೊಳ್ಳುತ್ತಿತ್ತು. ಮೂರು ಹೊತ್ತು ಊಟ ಕೊಡುತ್ತಿತ್ತು. ಈಗಿನ ಕಾಲದಲ್ಲಿ ನಮಗೆ ಮೂರು ಹೊತ್ತು ಊಟ ಯಾರು ಹಾಕುತ್ತಾರೆ. ಆದರೆ ಬಿಗ್ ಬಾಸ್ ನಮಗೆ ಮೂರು ಹೊತ್ತು ಊಟ ನೀಡಿದೆ.

    ನಾನು ಎಲ್ಲರಿಗೂ ಪ್ರೀತಿ ನೀಡಿದ್ದೇನೆ. ನಾನು ಖಾರವಾಗಿ ಮಾತನಾಡಿರಬಹುದು. ಆದರೆ ನಾನು ಇರುವುದೇ ಹೀಗೆ. ಅದು ಕೆಲವರಿಗೆ ಇಷ್ಟವಾಗುತ್ತೆ, ಕೆಲವರಿಗೆ ಇಷ್ಟವಾಗಲ್ಲ ಎಂದರು. ಇದೇ ವೇಳೆ ತಮ್ಮ ತಂದೆ-ತಾಯಿ ಬಳಿ ಮಾತನಾಡಿದ ಚಂದನ್, ನಾನು 10 ಕಿ.ಮೀ ಸೈಕಲ್‍ನಲ್ಲಿ ನಟನಾ ಶಾಲೆಗೆ ಹೋಗುವಾಗ ಇದೆಲ್ಲಾ ಯಾಕೆ ಬೇಕು ನಿನಗೆ ಎಂದು ತಲೆ ಕೆಡಿಸಿಕೊಂಡಿದ್ರಿ. ಈಗ ನನ್ನ ಜರ್ನಿ ಶುರುವಾಗಿದ್ದು, ನನಗೆ ಸುದೀಪ್ ಅವರ ಸಪೋರ್ಟ್ ಇದೆ. ನೀವು ಈಗ ಏನೂ ಮಾತನಾಡುವುದಕ್ಕೆ ಆಗಲ್ಲ. ನನ್ನ ಜರ್ನಿ ಈಗ ಶುರುವಾಗಿದ್ದು, ಇದಕ್ಕೆ ಕಿರೀಟವೊಂದು ಸಿಕ್ಕಿದೆ ಎಂದು ಚಂದನ್ ಹೇಳಿದ್ದಾರೆ.

  • ಮದುವೆ ತಯಾರಿಯಲ್ಲಿ ಚಂದನ್- ನಿವೇದಿತಾ

    ಮದುವೆ ತಯಾರಿಯಲ್ಲಿ ಚಂದನ್- ನಿವೇದಿತಾ

    ಬೆಂಗಳೂರು: ಬಿಗ್ ಬಾಸ್ ಸೀಸನ್- 5 ವಿಜೇತ, ಕನ್ನಡದ ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ಬಾರ್ಬಿ ಡಾಲ್ ನಿವೇದಿತಾ ಗೌಡ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.

    ಚಂದನ್ ಹಾಗೂ ನಿವೇದಿತಾ ಮುಂದಿನ ವರ್ಷ ಫೆಬ್ರವರಿ ತಿಂಗಳ ಕೊನೆ ವಾರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಈಗಿನಿಂದಲೇ ಮದುವೆಯ ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ಅಕ್ಟೋಬರ್ 21ರಂದು ಚಂದನ್ ಶೆಟ್ಟಿ ತಮ್ಮ ಆತ್ಮೀಯ ಗೆಳತಿ ಬಾರ್ಬಿ ಗರ್ಲ್ ನಿವೇದಿತಾ ಗೌಡ ಜೊತೆ ಮೈಸೂರಿನ ಖಾಸಗಿ ಹೋಟೆಲಿನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಶುಭ ಸಮಾರಂಭದಲ್ಲಿ ಎರಡೂ ಕುಟುಂಬದ ಸದಸ್ಯರು ಹಾಗೂ ಆಪ್ತರಷ್ಟೇ ಭಾಗಿಯಾಗಿದ್ದರು.

    ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ಅಭಿಮಾನಿಗಳ ಮುಂದೆ ಗೆಳತಿ ನಿವೇದಿತಾರಿಗೆ ಪ್ರಪೋಸ್ ಮಾಡಿದ್ದರು. ವೇದಿಕೆಯಲ್ಲಿಯೇ ರಿಂಗ್ ತೊಡಿಸಿ ತಮ್ಮ ಪ್ರೇಮ ವಿಚಾರವನ್ನು ಚಂದನ್ ಅಧಿಕೃತವಾಗಿ ಹೇಳಿಕೊಂಡಿದ್ದರು.

    ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ನಿವೇದಿತಾ ಮತ್ತು ಚಂದನ್ ಪ್ರೇಮ ಜೋಡಿಗಳ ರೀತಿಯಲ್ಲಿಯೇ ಬಿಂಬಿತವಾಗಿದ್ದರು. ರಿಯಾಲಿಟಿ ಶೋ ಬಳಿಕ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಹೇಳಿದ್ದರು. ಕಳೆದ ಎರಡು ವರ್ಷಗಳಿಂದ ಚಂದನ್ ಮತ್ತು ನಿವೇದಿತಾ ನಡುವೆ ಪ್ರೇಮಾಂಕುರವಾಗಿದೆ ಎಂಬಿತ್ಯಾದಿ ಸುದ್ದಿಗಳು ಹರಿದಾಡಿದ್ದವು. ಆದ್ರೆ ಎಲ್ಲಿಯೂ ಚಂದನ್ ಮತ್ತು ನಿವೇದಿತಾ ತಮ್ಮ ಸಂಬಂಧದ ಬಗ್ಗೆ ಸ್ಪಷ್ಟವಾಗಿ ಹೇಳಿಕೊಂಡಿರಲಿಲ್ಲ.

  • ಸುಜಾತ, ಚಂದನ್, ಚೈತ್ರಾಗೆ ಕಿಚ್ಚ ಸುದೀಪ್ ಕ್ಲಾಸ್

    ಸುಜಾತ, ಚಂದನ್, ಚೈತ್ರಾಗೆ ಕಿಚ್ಚ ಸುದೀಪ್ ಕ್ಲಾಸ್

    ಬೆಂಗಳೂರು: ಬಿಗ್ ಬಾಸ್ ಸೀಸನ್-7ರಲ್ಲಿ ಸೇಬಿಗಾಗಿ ಜಗಳ ಆಡಿದ ಸುಜಾತ, ಚಂದನ್ ಹಾಗೂ ಚೈತ್ರಾ ಕೋಟೂರು ಅವರಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡರು.

    ಶನಿವಾರ ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಸುದೀಪ್ ಮೊದಲು ಸುಜಾತ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಚೈತ್ರಾ ಅವರು ಸೇಬು ತೆಗೆದುಕೊಂಡ ನಂತರ ಮರುದಿನ ಅವರಿಗೆ ನೀಡದಿದ್ದರೆ ಅಲ್ಲಿಗೆ ಎಲ್ಲವೂ ಸರಿ ಹೋಗುತ್ತಿತ್ತು. ಅದನ್ನು ಬಿಟ್ಟು ನೀವು ಕಾಮನ್‍ಸೆನ್ಸ್, ನಾನ್‍ಸೆನ್ಸ್ ಎಂಬ ಪದ ಬಳಸಿ ಈ ರೀತಿ ಮಾತನಾಡುವ ಅವಶ್ಯಕತೆ ಇರಲಿಲ್ಲ ಎಂದರು. ಸುದೀಪ್ ಹೇಳುತ್ತಿದ್ದಂತೆ ಸುಜಾತ, ಚೈತ್ರಾ ಅವರ ಬಳಿ ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ: ಒಂದು ಆ್ಯಪಲ್‍ನ ಕತೆ – ಸೇಬಿಗಾಗಿ ಬಿಗ್ ಮನೆಯಲ್ಲಿ ಸ್ಪರ್ಧಿಗಳಿಂದ ರಂಪಾಟ

    ಇದಾದ ಬಳಿಕ ಚೈತ್ರಾ ಬಳಿ ಮಾತನಾಡಿದ ಸುದೀಪ್, ಚೈತ್ರಾ ನೀವು ಕ್ಯಾಮೆರಾ ಬಳಿ ಹೋಗಿ ನನ್ನ ಜೊತೆ ಯಾರು ಮಾತನಾಡಲ್ಲ, ಯಾರೂ ಸೇರಲ್ಲ, ನನ್ನನ್ನು ಟಾರ್ಗೆಟ್ ಮಾಡುತ್ತಾರೆ ಎಂದು ಹೇಳುತ್ತಿದ್ದೀರಿ. ಆದರೆ ಆ್ಯಪಲ್ ವಿಷಯಕ್ಕಾಗಿ ಜಗಳವಾಗಿ ನೀವು ಅಳುವಾಗ ಹಲವು ಸ್ಪರ್ಧಿಗಳು ನಿಮ್ಮನ್ನು ಸಮಾಧಾನ ಮಾಡಲು ಬಂದಿದ್ದರು. ಸ್ಪರ್ಧಿಗಳ ಬಳಿ ಹೋಗಿ ನಾನು ನಿಮ್ಮ ಬಗ್ಗೆ ತಪ್ಪು ತಿಳಿದುಕೊಂಡಿದ್ದೆ, ಧನ್ಯವಾದಗಳು ಎಂದು ಕೂಡ ಹೇಳಲಿಲ್ಲ ಎಂದು ಚೈತ್ರಾ ಅವರಿಗೆ ಬುದ್ಧಿವಾದ ಹೇಳಿದರು.

    ಆ್ಯಪಲ್ ಜಗಳದಲ್ಲಿ ಡಿಸೆನ್ಸಿ ಎಂಬ ಪದ ಬಳಸಿದ ಚಂದನ್ ಅವರಿಗೂ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದು, ನಿಮ್ಮ ಪ್ರಕಾರ ಡಿಸೆನ್ಸಿ ಎಂದರೆ ಏನು ಎಂದು ಚಂದನ್ ಅವರಿಗೆ ಪ್ರಶ್ನಿಸಿದ್ದರು. ಈ ವೇಳೆ ಮಾತನಾಡಿದ ಚಂದನ್, ಬೆಳಗ್ಗೆ ಎದ್ದ ತಕ್ಷಣ ಸುಜಾತ ಅವರು ಚೈತ್ರಾಗೆ ನೀವು ಆ್ಯಪಲ್ ತಿಂದ್ರಾ ಎಂದು ಪ್ರಶ್ನಿಸಿದರು. ಆಗ ಚೈತ್ರಾ ನಾನು ತಿಂದೆ ಎಂದು ಹೇಳುವ ಬದಲು ಚಂದನ್, ರಾಜು, ಕುರಿ ಪ್ರತಾಪ್ ಅವರಿಗೆ ಕೊಟ್ಟೆ ಎಂದು ಹೇಳಿದರು. ಇದರಿಂದ ಕೋಪ ಬಂತು ಎಂದು ಚಂದನ್ ಹೇಳಿದ್ದಾರೆ.

    ಚೈತ್ರಾ ತಮ್ಮ ತಪ್ಪನ್ನು ಮುಚ್ಚಿಕೊಳ್ಳುವ ಸಲುವಾಗಿ ಅವರು ಎಲ್ಲರ ಜೊತೆ ಹಂಚಿಕೊಂಡರು. ಚೈತ್ರಾ ಅವರ ಈ ವರ್ತನೆ ನನಗೆ ಇಷ್ಟವಾಗಿಲ್ಲ. ಈ ಸಣ್ಣ ವಿಷಯದಲ್ಲಿ ಸ್ನೇಹಿತ ನನಗೆ ಸಹಾಯ ಮಾಡಿದ್ದಾರೆ. ಈ ವಿವಾದವನ್ನು ಹುಷಾರಾಗಿ ನಿಭಾಯಿಸಿದ್ದರೆ ನಾನು ಕೋಪ ಮಾಡಿಕೊಳ್ಳುವ ಪ್ರಶ್ನೆಯೇ ಇರುತ್ತಿರಲಿಲ್ಲ ಎಂದು ಚಂದನ್ ತಿಳಿಸಿದ್ದರು. ಈ ವೇಳೆ ಸುದೀಪ್, ನೀವು ಡಿಸೆನ್ಸಿ ಬಗ್ಗೆ ಮಾತನಾಡುತ್ತಿದ್ದಿರಿ. ಆದರೆ ಒಬ್ಬರ ಕೈ ಹಿಡಿದು ಎಳೆಯುವುದು ಡಿಸೆನ್ಸಿ ಅಲ್ಲ. ಮೊದಲು ನೀವು ಸರಿಯಾಗಿರಿ ಬಳಿಕ ಮತ್ತೊಬ್ಬರಿಗೆ ಡಿಸೆನ್ಸಿ ಪದವನ್ನು ಬಳಸಿ ಎಂದರು. ಆಗ ಚಂದನ್, ಸುದೀಪ್ ಅವರ ಬಳಿ ಕ್ಷಮೆ ಕೇಳಿದ್ದಾರೆ.

  • ನಕ್ಕು ನಿರಾಳವಾಗಲು ನೋಡಲೇ ಬೇಕಾದ ಚಿತ್ರ ಕೆಮಿಸ್ಟ್ರಿ ಆಫ್ ಕರಿಯಪ್ಪ!

    ನಕ್ಕು ನಿರಾಳವಾಗಲು ನೋಡಲೇ ಬೇಕಾದ ಚಿತ್ರ ಕೆಮಿಸ್ಟ್ರಿ ಆಫ್ ಕರಿಯಪ್ಪ!

    ಬೆಂಗಳೂರು: ಸಮಸ್ಯೆಗಳು ಏನೇ ಇದ್ದರೂ ನಗುಮುಖದಿಂದಲೇ ಎದುರುಗೊಂಡರೆ ಎಲ್ಲವೂ ಸುಖಮಯವಾಗಿರುತ್ತದೆ ಅಂತೊಂದು ಮಾತಿದೆ. ಅದರ ಸಾರವನ್ನೇ ಆತ್ಮವಾಗಿಸಿಕೊಂಡು ಭರಪೂರ ನಗುವಿನ ಒಡ್ಡೋಲಗದಲ್ಲಿಯೇ ಗಂಭೀರ ವಿಚಾರವನ್ನ ಹೇಳೋ ವಿಭಿನ್ನ ಬಗೆಯ ಚಿತ್ರ ಕೆಮಿಸ್ಟ್ರಿ ಆಫ್ ಕರಿಯಪ್ಪ. ಇಲ್ಲಿ ಎಲ್ಲರ ಬದುಕಿಗೂ ಹತ್ತಿರಾದ ಗಂಭೀರ ವಿಚಾರಗಳಿವೆ. ಭಾವನಾತ್ಮಕ ಸನ್ನಿವೇಶಗಳೂ ಇವೆ. ಪ್ರೀತಿ, ಪ್ರೇಮ ಸೇರಿದಂತೆ ಎಲ್ಲವೂ ಇವೆ. ಆದರೆ ಯಾವುದೂ ಗೋಜಲಾಗದಂತೆ ನೋಡುಗರನ್ನೆಲ್ಲ ಜಂಜಾಟ ಮರೆತು ನಗುವಂತೆ ಮಾಡೋ ಸಿನಿಮಾ ಕೆಮಿಸ್ಟ್ರಿ ಆಫ್ ಕರಿಯಪ್ಪ.

    ಪೋಸ್ಟರ್‍ಗಳ ಮೂಲಕವೇ ಇದು ಭಿನ್ನ ಜಾಡಿನ ಚಿತ್ರ ಅನ್ನೋ ಸುಳಿವು ಸಿಕ್ಕಿತ್ತು. ಟ್ರೈಲರ್ ಹೊರ ಬಂದಾಗ ಈ ಸಿನಿಮಾ ಪೋಲಿತನ ಹೊದ್ದ ಸಂಭಾಷಣೆಗಳಿಂದಲೇ ಶೃಂಗರಿಸಲ್ಪಟ್ಟಿದೆಯಾ ಎಂಬ ಗುಮಾನಿಯೂ ಕಾಡಿತ್ತು. ಆದರೆ ಈ ಸಿನಿಮಾ ನೋಡಿದ ಪ್ರತಿಯೊಬ್ಬರ ಮುಖದಲ್ಲಿಯೂ ವಿಶಿಷ್ಟವಾದ ಚಿತ್ರವೊಂದನ್ನು ನೋಡಿದ ತೃಪ್ತಿಯ ಮಂದಹಾಸ ಸ್ಪಷ್ಟವಾಗಿಯೇ ಮೂಡಿಕೊಳ್ಳುತ್ತದೆ. ಇದುವೇ ಡಿಎಸ್ ಮಂಜುನಾಥ್ ನಿರ್ಮಾಣ ಮಾಡಿರೋ ಕುಮಾರ್ ನಿರ್ದೇಶನದ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಗೆಲುವಿನ ಮೊದಲ ಹೆಜ್ಜೆ!

    ಈ ಸಿನಿಮಾ ಕಥೆ ತೀರಾ ಸಂಕೀರ್ಣವಾದದ್ದೇನೂ ಅಲ್ಲ. ಆದರೆ ಅದನ್ನು ಹೇಳಿರೋ ರೀತಿ, ದೃಶ್ಯ ಕಟ್ಟಿರೋ ಜಾಣ್ಮೆಯೇ ಎಲ್ಲರಿಗೂ ಆಪ್ತವಾಗಿಸುತ್ತದೆ. ಮಧ್ಯಮ ವರ್ಗದ ಅಪ್ಪ ಅಮ್ಮ ಮತ್ತು ಅವರಿಗೊಬ್ಬ ಮಗ ಉತ್ತರ ಕುಮಾರ. ಎದೆಮಟ್ಟ ಬೆಳೆದ ಮಗನಿಗೆ ಊರು ತುಂಬಾ ನೂರಾರು ಹುಡುಗೀರನ್ನ ನೋಡಿದರೂ ಸಂಬಂಧ ಕುದುರಿಕೊಳ್ಳೋದಿಲ್ಲ. ಇದರಿಂದಾಗಿ ಈ ಪುಟ್ಟ ಕುಟುಂಬದ ಯಜಮಾನ ಕರಿಯಪ್ಪನಿಗೆ ಮಹಾ ತಲೆನೋವು ಶುರುವಾಗಿ ಬಿಡುತ್ತದೆ. ಒಂದು ಕಡೆ ಮಗನ ವಯಸ್ಸು ಮದುವೆಯ ಗಡಿ ದಾಟುತ್ತಿದೆ. ಇನ್ನೊಂದು ಕಡೆ ಯಾವ ಸಂಬಂಧವೂ ಕುದುರುತ್ತಿಲ್ಲ ಅನ್ನೋ ಸಂಕಟದಲ್ಲಿ ಕರಿಯಪ್ಪ ಇರುವಾಗಲೇ ಪುತ್ರ ಉತ್ತರ ಕುಮಾರ ಚೆಂದದ ಹುಡುಗಿಯೊಬ್ಬಳಿಗೆ ಕಾಳು ಹಾಕಲಾರಂಭಿಸಿರುತ್ತಾನೆ.

    ಹೀಗೆ ಪ್ರೀತಿಸಿ ಮದುವೆಯಾಗೋ ಉತ್ತರ ಕುಮಾರನಿಗೆ ಮೊದಲ ರಾತ್ರಿಯ ದಿನವೇ ಮರ್ಮಾಘಾತ ಮಾಡೋ ಅಂಶ ಯಾವುದು, ಒಂದು ಏಜಿನಲ್ಲಿ ಹೆಣ್ಣುಮಕ್ಕಳು ಆತುರದಿಂದ ವರ್ತಿಸೋದರಿಂದಾಗಿ ಏನೇನೆಲ್ಲ ಸಂಭವಿಸುತ್ತದೆ ಅನ್ನೋ ಕುತೂಹಲ ತಣಿಸಿಕೊಳ್ಳಲು ನೇರವಾಗಿ ಚಿತ್ರ ಮಂದಿರಕ್ಕೆ ತೆರಳಿ. ಅಲ್ಲಿ ಕರಿಯಪ್ಪನ ಕೆಮಿಸ್ಟ್ರಿ ನಿಮ್ಮನ್ನು ಭರಪೂರವಾಗಿ ನಗಿಸುತ್ತಲೇ ಭಾವುಕರನ್ನಾಗಿಸುತ್ತದೆ. ಮತ್ತೆ ನಗುವಿನ ಕಡಲಿಗೆ ತಳ್ಳಿ ಖುಷಿಗೊಳಿಸುತ್ತದೆ. ಈ ಸಿನಿಮಾದ ಅಸಲೀ ಯಶಸ್ಸಿನ ಗುಟ್ಟಿರೋದೇ ಅಲ್ಲಿ.

    ನಿರ್ದೇಶಕ ಕುಮಾರ್ ಪ್ರತೀ ಹಂತದಲ್ಲಿಯೂ ಸೂಕ್ಷ್ಮವಾಗಿಯೇ ಕಾರ್ಯ ನಿರ್ವಹಿಸಿದ್ದಾರೆ. ಅದರಿಂದಲೇ ಅವರು ಗೆದ್ದಿದ್ದಾರೆ. ನಾಯಕ ಚಂದನ್ ಮತ್ತು ನಾಯಕಿ ಸಂಜನಾ ಆನಂದ್ ಕೂಡಾ ಚೆಂದಗೆ ನಟಿಸಿದ್ದಾರೆ. ಕರಿಯಪ್ಪನ ಪಾತ್ರಕ್ಕೆ ಜೀವ ತುಂಬಿರೋ ತಬಲಾ ನಾಣಿ ಇಲ್ಲಿ ಬೇರೆಯದ್ದೇ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲ ಪಾತ್ರವರ್ಗವೂ ಆಪ್ತವಾಗಿದೆ. ಬದುಕಿನ ಕಥೆಯನ್ನು ಹಾಸ್ಯದ ಮೂಲಕವೇ ಹೇಳೋ ಕೆಮಿಸ್ಟ್ರಿ ಆಫ್ ಕರಿಯಪ್ಪ ಎಲ್ಲರಿಗೂ ಇಷ್ಟವಾಗೋ ಚಿತ್ರ ಅನ್ನೋದರಲ್ಲಿ ಸಂದೇಹವಿಲ್ಲ.

    ರೇಟಿಂಗ್- 4/5 

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲವ್ ಮ್ಯಾರೇಜ್, ಅರೆಂಜ್ ಮ್ಯಾರೇಜ್ ಪ್ರಶ್ನೆಗೆ ಪೋಷಕರ ಮುಂದೆಯೇ ಚಂದನ್ ಸ್ಪಷ್ಟನೆ

    ಲವ್ ಮ್ಯಾರೇಜ್, ಅರೆಂಜ್ ಮ್ಯಾರೇಜ್ ಪ್ರಶ್ನೆಗೆ ಪೋಷಕರ ಮುಂದೆಯೇ ಚಂದನ್ ಸ್ಪಷ್ಟನೆ

    ಬೆಂಗಳೂರು: ಇತ್ತೀಚೆಗೆ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಅವರ ಮದುವೆಯ ಬಗ್ಗೆ ಸುದ್ದಿಯಾಗುತ್ತಲೇ ಇದೆ. ಚಂದನ್ ಪ್ರೀತಿಸಿ ಮದುವೆಯಾಗುತ್ತಾರಾ ಅಥವಾ ಮನೆಯಲ್ಲಿ ತೋರಿಸುವ ಹುಡುಗಿಯನ್ನು ವರಿಸುತ್ತಾರಾ ಎಂಬ ಪ್ರಶ್ನೆಗಳು ಹರಿದಾಡುತ್ತಿದ್ದವು. ಈಗ ಈ ಎಲ್ಲ ಗೊಂದಲಗಳಿಗೂ ಚಂದನ್ ಸ್ಪಷ್ಟನೆ ಕೊಟ್ಟಿದ್ದಾರೆ.

    ಚಂದನ್ ತಾವು ಲವ್ ಮ್ಯಾರೇಜ್ ಆಗುವುದಾಗಿ ತಮ್ಮ ತಂದೆ-ತಾಯಿಯ ಮುಂದೆಯೇ ಹೇಳಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ‘ಕನ್ನಡ ಕೋಗಿಲೆ’ ಕಾರ್ಯಕ್ರಮದಲ್ಲಿ ಚಂದನ್ ನಾನು ಪ್ರೀತಿಸಿ ಮದುವೆಯಾಗುವುದಾಗಿ ಹೇಳಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಚಂದನ್ ತೀರ್ಪುಗಾರರಾಗಿದ್ದು, ನಿರೂಪಕಿ ಅನುಪಮ ಗೌಡ ಅವರು ಚಂದನ್ ಗೆ ಲವ್ ಮ್ಯಾರೇಜ್ ಅಥವಾ ಅರೆಂಜ್ ಮ್ಯಾರೇಜ್ ಆಗಲು ಇಷ್ಟ ಪಡುತ್ತೀರ ಎಂದು ಪ್ರಶ್ನೆ ಕೇಳುತ್ತಾರೆ.

    ಅನುಪಮ ಗೌಡ ಅವರು ಕೇಳಿದ ಪ್ರಶ್ನೆಗೆ ಚಂದನ್ ತಾಯಿ ಮಧ್ಯ ಪ್ರವೇಶಿಸಿ, ಚಂದನ್ ಲವ್ ಅಥವಾ ಅರೆಂಜ್ ಯಾವ ರೀತಿಯ ಮದುವೆಯಾದರು ನನಗೆ ಒಪ್ಪಿಗೆ ಇದೆ. ನಾನು ಎಲ್ಲದಕ್ಕೂ ರೆಡಿ ಇದ್ದೀನಿ ಎಂದು ನಗುನಗುತ್ತಲೆ ಉತ್ತರಿಸಿದ್ದಾರೆ. ಬಳಿಕ ಅಮ್ಮ ಕೊಟ್ಟ ಉತ್ತರಕ್ಕೆ ಚಂದನ್ ಪ್ರತಿಕ್ರಿಯಿಸಿ, ಅವರೆ ಒಪ್ಪಿಗೆ ಸೂಚಿಸಿದ್ದಾರೆ ಅಂದರೆ ನಾನು ಲವ್ ಮ್ಯಾರೇಜ್ ಆಗುತ್ತೇನೆ ಎಂದು ಉತ್ತರಿಸಿದ್ದಾರೆ.

    ಇದೇ ವೇಳೆ ನಟ ಸಾಧುಕೋಕಿಲ ಅವರು, ಚಂದನ್ ಪ್ರೀತಿ ಮಾಡಿದ್ದಾರ, ಹುಡುಗಿ ಇದರಾ, ಇಲ್ಲವಾ ಎಂದು ಚಂದನ್ ಅವರ ಕಾಲೆಳೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಚಂದನ್ ಬೆಂಬಲಕ್ಕೆ ನಿಂತ ಬಾರ್ಬಿ ಗರ್ಲ್

    ಚಂದನ್ ಬೆಂಬಲಕ್ಕೆ ನಿಂತ ಬಾರ್ಬಿ ಗರ್ಲ್

    ಬೆಂಗಳೂರು: ಗಾಂಜಾ ಕಿಕ್ ಸಾಂಗ್ ಮೂಲಕ ಬಿಗ್ ಬಾಸ್ ನ ವಿನ್ನರ್ ಚಂದನ್ ಶೆಟ್ಟಿ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಈಗ ಚಂದನ್ ಬೆಂಬಲಕ್ಕೆ ಬಿಗ್ ಬಾಸ್‍ನ ಮತ್ತೋರ್ವ ಸ್ಪರ್ಧಿಯಾಗಿದ್ದ ನಿವೇದಿತಾ ಗೌಡ ನಿಂತಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ನಿವೇದಿತಾ ಗೌಡ, ಆ ಸಾಂಗ್ ಬಗ್ಗೆ ನನಗೆ ಹೆಚ್ಚಾಗಿ ಗೊತ್ತಿರಲಿಲ್ಲ. ಚಂದನ್ ಒಬ್ಬ ಗಾಯಕರಾಗಿ ಆ ಹಾಡನ್ನು ಹಾಡಿದ್ದಾರೆ. ಅವರೇನು ಲಿರಿಕ್ಸ್ ಮಾಡಿಲ್ಲ. ಇದೊಂದು ಹಳೆಯ ಹಾಡು ಅಷ್ಟೆ. ಉದ್ದೇಶ ಪೂರ್ವಕವಾಗಿ ಈ ಹಾಡು ಮಾದಕ ವಸ್ತುಗಳಿಗೆ ಪ್ರಚೋದನೆ ಮಾಡುತ್ತಿಲ್ಲ. ಇದು ಒಂದು ಹಾಡು, ಅದನ್ನು ಒಬ್ಬ ಸಿಂಗರಾಗಿ ಹಾಡಿದ್ದಾರೆ ಅಷ್ಟೆ ಎಂದು ಹೇಳಿದ್ದಾರೆ.

    ಚಂದನ್ ಲಿರಿಕ್ಷ್ ಬರೆದು ಹಾಡಿಲ್ಲ. ಆದ್ದರಿಂದ ಅವರ ಮೇಲೆ ಈ ರೀತಿ ಕೇಸ್ ಹಾಕುವುದು ಸರಿಯಲ್ಲ. ಈ ರೀತಿ ಘಟನೆಗಳು ಸಾಮಾನ್ಯವಾಗಿದೆ. ಈ ಪರಿಸ್ಥಿತಿಯನ್ನು ಚಂದನ್ ಚನ್ನಾಗಿ ನಿಭಾಯಿಸುತ್ತಾರೆ. ತಮ್ಮ ತಪ್ಪು ಏನು ಇಲ್ಲ ಎಂದು ಚಂದನ್ ಗೆ ಗೊತ್ತಿದ್ದರಿಂದ ಶಾಂತವಾಗಿದ್ದಾರೆ. ಅದೇ ರೀತಿ ಶಾಂತವಾಗಿ ನಿಭಾಯಿಸುತ್ತಿದ್ದಾರೆ. ಈ ಹಾಡು ಇತ್ತೀಚೆಗೆ ಮಾಡಿಲ್ಲ. ಆದ್ದರಿಂದ ಇದನ್ನು ದೊಡ್ಡದಾಗಿ ಮಾಡುವ ಅವಶ್ಯಕತೆ ಇಲ್ಲ ಎಂದು ಚಂದನ್ ಪರ ಮಾತನಾಡಿದ್ದಾರೆ.

    ಮಂಗಳವಾರ ಚಂದನ್ ಸಿಸಿಬಿ ಪೊಲೀಸ್ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದು, ಬಳಿಕ ಹೊರ ಬಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ನನ್ನದು ಯಾವುದೇ ತಪ್ಪಿಲ್ಲ. ಅಂತ್ಯ ಚಿತ್ರಕ್ಕಾಗಿ ಮುತ್ತು ಎಂಬವರು ಸಾಹಿತ್ಯ ಬರೆದಿದ್ದು, ಕೇವಲ 5 ಸಾವಿರ ರೂ. ಸಂಭಾವನೆಗಾಗಿ ನಾನು ನನ್ನ ಜವಾಬ್ದಾರಿ ಮರೆತು ಸಂಗೀತ ಸಂಯೋಜನೆ ಮಾಡಿ ಹಾಡಿರುವುದಾಗಿ ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿರುವೆ ಎಂದು ತಿಳಿಸಿದ್ದರು.

    ಏನಿದು ಪ್ರಕರಣ?
    ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಸಿಂಗರ್ ಚಂದನ್ ಶೆಟ್ಟಿಗೆ ಬಂಧನ ಭೀತಿ ಎದುರಾಗಿತ್ತು. ಚಂದನ್ ಶೆಟ್ಟಿ ಸಂಗೀತ ಸಂಯೋಜನೆಯ ಅಂತ್ಯ ಸಿನಿಮಾದ ಗಾಂಜಾ ಕಿಕ್ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿತ್ತು. ಆದರೆ ಗಾಂಜಾ ಕಿಕ್ ಹಾಡಿನಲ್ಲಿ ಮಾದಕ ವಸ್ತುಗಳನ್ನು ಸೇವಿಸುವ ಕುರಿತು ವೈಭವಿಕರಿಸಿ ತೋರಿಸಲಾಗಿದೆ. ಹೀಗಾಗಿ ಖುದ್ದು ಸ್ವಯಂ ದೂರು ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಚಂದನ್ ಶೆಟ್ಟಿಗೆ ಸಮನ್ಸ್ ಜಾರಿ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಿವೀಲ್ ಆಯ್ತು `ಕಿನಾರೆ’ ಸಿನಿಮಾದ ಕೋಳಿ ಸಾಂಗು – ಚಂದನ್ ಹಾಡಿಗಿದೆ ಹುಚ್ಚು ಹಿಡಿಸೋ ಗುಂಗು !

    ರಿವೀಲ್ ಆಯ್ತು `ಕಿನಾರೆ’ ಸಿನಿಮಾದ ಕೋಳಿ ಸಾಂಗು – ಚಂದನ್ ಹಾಡಿಗಿದೆ ಹುಚ್ಚು ಹಿಡಿಸೋ ಗುಂಗು !

    ಬೆಂಗಳೂರು: ಮ್ಯೂಸಿಕ್ ಬಜಾರ್ ಗೆ  ಹೊಸದೊಂದು ಹಾಡು ಎಂಟ್ರಿ ಕೊಟ್ಟಿದೆ. ನಯಾ ಹಾಡಿನ ಬಗ್ಗೆ ಆ್ಯಕ್ಷನ್ ಪ್ರಿನ್ಸ್ ಧೃವ ಸರ್ಜಾ ಮಾತನಾಡಿದ್ದಾರೆ.

    ಕಿನಾರೆ ನಿಮಗೆಲ್ಲಾ ತಿಳಿದಿರುವ ಹಾಗೇ ರೆಡ್ ಆ್ಯಪಲ್ ಮತ್ತು ಅದಿತಿ ಫಿಲ್‍ಂ ಬ್ಯಾನರ್ ನಲ್ಲಿ ರೆಡಿಯಾಗುತ್ತಿರುವ ಸಿನಿಮಾವಾಗಿದೆ. ಈ ಸಿನಿಮಾ ಒಂದು ಘಟನೆಯಿಂದ ಎರಡು ಮುಗ್ಧ ಜೀವಗಳ ಬದುಕಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ ಅನ್ನೋದನ್ನ ಹೇಳಲು ಹೊರಟಿದೆ. ಈಗಾಗಲೇ ಸಿನಿಮಾದ ಟೀಸರ್ ಮತ್ತು ಮೇಕಿಂಗ್ ಬಹಳಷ್ಟು ಭರವಸೆ ಮೂಡಿಸಿದೆ.

    ಚಿತ್ರತಂಡ ಈಗ ಮೊದಲ ಹಾಡನ್ನ ರಿವೀಲ್ ಮಾಡಿದ್ದು ಇನ್ನಷ್ಟು ನಿರೀಕ್ಷೆ ಹೆಚ್ಚಿಸಿದೆ. ಹೊಸ ಪ್ರತಿಭೆಗಳು ಸೇರಿಕೊಂಡು ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ದೇವರಾಜ್ ಪೂಜಾರಿ ಆ್ಯಕ್ಷನ್ ಕಟ್ ಹೇಳಿದ್ದು, ನಟ ಸತೀಶ್ ಮತ್ತು ನಟಿ ಗೌತಮಿ ಬಣ್ಣ ಹಚ್ಚಿದ್ದಾರೆ. ಅಭಿಷೇಕ್ ಕಾಸರಗೋಡು ಕ್ಯಾಮೆರಾ ಕೈ ಚಳಕ ತೋರಿಸಿದ್ದಾರೆ.

    ನಿರ್ದೇಶಕ ರವಿ ಪೂಜಾರಿ ಬರೆದಿರುವ ಸಾಹಿತ್ಯಕ್ಕೆ ಸುರೇಂದ್ರನಾಥ್ ಟ್ಯೂನ್ ಕಂಪೋಸ್ ಮಾಡಿದ್ದಾರೆ. ಚಂದನ್ ಶೆಟ್ಟಿ ಕಂಠಸಿರಿಯಲ್ಲಿ ಮೂಡಿಬಂದಿರುವ ಕೋಳಿ ಸಾಂಗ್ ಕಿನಾರೆಯ ಸತ್ವ ಸಾರುತ್ತಿದೆ. ಈ ತಿಂಗಳು ವಾರಕ್ಕೊಂದು ಹೊಸ ಹಾಡು ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡಿದೆ. ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ಟ್, ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.

    ಕಡಲ ಕಿನಾರೆಯ ಕಥೆಯನ್ನ ಹೇಳುತ್ತಿರುವ ಚಿತ್ರತಂಡ ಮಂಗಳೂರು, ಉಡುಪಿ, ಕಾಸರಗೋಡು ಸೇರಿದಂತೆ ಹಲವು ಕಡೆ ಚಿತ್ರೀಕರಣ ಕಂಪ್ಲೀಟ್ ಮಾಡಿಕೊಂಡಿದೆ. ಹಾಡುಗಳಿಂದ ಹೈಪ್ ಕ್ರಿಯೇಟ್ ಮಾಡಿ ಥೇಟರ್ ಗೆ ಎಂಟ್ರಿ ಕೊಡಲು ಸಜ್ಜಾಗಿದ್ದು, ರಿವಿಲ್ ಆಗಿರೋ ಹಾಡು ಮತ್ತು ಟೀಜರ್ ನಿಂದ ಹೊಸ ಥರ ಸಿನಿಮಾ ಸಿನಿರಸಿಕರನ್ನ ರಂಜಿಸಬಹುದು ಅನ್ನೊ ಕ್ಲೂ ಸಿಕ್ಕಿದೆ.

  • ಪತಿಯ ಸಾವಿನಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ನಿರೂಪಕ ಚಂದನ್ ಪತ್ನಿ ಇನ್ನಿಲ್ಲ!

    ಪತಿಯ ಸಾವಿನಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ನಿರೂಪಕ ಚಂದನ್ ಪತ್ನಿ ಇನ್ನಿಲ್ಲ!

    ಬೆಂಗಳೂರು: ಪತಿಯ ಸಾವಿನಿಂದ ಮನನೊಂದು ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ನಿರೂಪಕ ಚಂದನ್ ಪತ್ನಿ ಮೀನಾ ಇದೀಗ ಮೃತಪಟ್ಟಿದ್ದಾರೆ.

    ಪತಿ ಚಂದನ್ ಸಾವಿನ ಬಳಿಕ ತೀವ್ರ ನೊಂದಿದ್ದ ಮೀನಾ ತನ್ನ ಮಗನನ್ನು ಕೊಲೆ ಮಾಡಿ ತಾನೂ ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೀನಾ ಗುರುವಾರ ರಾತ್ರಿ 10 ಗಂಟೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರುಳೆದಿದ್ದಾರೆ.

    ಖಾಸಗಿ ವಾಹಿನಿ ನಿರೂಪಕ ಚಂದನ್ ಸಾವಿನ ಬಳಿಕ ಮಾನಸಿಕವಾಗಿ ಕುಗ್ಗಿದ್ದ ಮೀನಾ ಏನಾದ್ರೂ ಮಾಡಿಕೊಳ್ಳಬಹುದೆಂದು ಆಕೆಯ ಅಣ್ಣ ಮತ್ತು ತಂದೆ ಒಂದು ವಾರದಿಂದ ಕಾವಲು ಕಾಯುತ್ತಿದ್ದರು. ಆದರೆ ಗುರುವಾರ ಬೆಳಗ್ಗೆ ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆಯಲ್ಲಿ ಯಾರೂ ಇಲ್ಲದ ವೇಳೆ ಮೀನಾ ತನ್ನ 13 ವರ್ಷದ ಮಗ ತುಷಾರ್ ನ ಕತ್ತು ಕೊಯ್ದು ಕೊಲೆ ಮಾಡಿದ್ದರು. ಬಳಿಕ ತಾನೂ ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಘಟನೆಯಲ್ಲಿ ಚಂದನ್ ಮಗ ತುಷಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದನು. ಆದ್ರೆ ಮೀನಾ ಅವರನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿತ್ತು. ಇದನ್ನೂ ಓದಿ: ನಿರೂಪಕ ಚಂದನ್ ಸಾವಿನ ಬಳಿಕ ಮಗನ ಕತ್ತು ಕೊಯ್ದು, ಆ್ಯಸಿಡ್ ಕುಡಿದ ಪತ್ನಿ

    ಮೃತ ಚಂದನ್ ಚಿಕ್ಕಪ್ಪ ವಿಜಯ್ ಕುಮಾರ್ ಗುರುವಾರ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀನಾ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಬೆಳಗ್ಗೆ 11 ಗಂಟೆ ವೇಳೆಗೆ ನಮಗೆ ಮಾಹಿತಿ ಗೊತ್ತಾಯಿತು. ಮೀನಾಗೆ ಮೊದಲು ಕೊಲಂಬೊಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕರೆದುಕೊಂಡು ಹೋಗಿ ನಂತರ ಅಲ್ಲಿಂದ ವಿಕ್ಟೋರಿಯಾಗೆ ಕರೆದುಕೊಂಡು ಹೋಗಲಾಯಿತು. ವಿಕ್ಟೋರಿಯಾ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಲ್ಲಿ ಮನೆಯಲ್ಲಿ ಏನ್ ಆಗಿತ್ತು ಎನ್ನುವ ಬಗ್ಗೆ ಮಾಹಿತಿ ಇಲ್ಲ. ಪಕ್ಕದ ಮನೆಯವರು ಆಸ್ಪತ್ರೆಗೆ ಸೇರಿಸಿದ್ದರು. ಈಗ ಮೀನಾ ಆರೋಗ್ಯದಲ್ಲಿ ಚೇತರಿಕೆ ಕಾಣುತಿತ್ತು. ಪುತ್ರ ತುಷಾರ್ ಮರಣೋತ್ತರ ಪರೀಕ್ಷೆ ಆಗಿದ್ದು, ಶುಕ್ರವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಿದ್ದರು. ಸದ್ಯ ಮೀನಾ ಕೂಡ ಚಿಕಿತ್ಸೆ ಫಲಕಾರಿ ಆಗದೇ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ನಿರೂಪಕ ಚಂದನ್ ಪುತ್ರ!

    ತುಷಾರ್ ಸಾವಿನ ಬಳಿಕ ಆತನ ಕಣ್ಣನ್ನು ಕುಟುಂಬದವರು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮರೆದಿದ್ದಾರೆ.

  • ಸಾವಿನಲ್ಲೂ ಸಾರ್ಥಕತೆ ಮೆರೆದ ನಿರೂಪಕ ಚಂದನ್ ಪುತ್ರ!

    ಸಾವಿನಲ್ಲೂ ಸಾರ್ಥಕತೆ ಮೆರೆದ ನಿರೂಪಕ ಚಂದನ್ ಪುತ್ರ!

    ಬೆಂಗಳೂರು: ಖಾಸಗಿ ವಾಹಿನಿ ನಿರೂಪಕ ಚಂದನ್ ಪತ್ನಿ ತಮ್ಮ ಮಗ ತುಷಾರ್ ನನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈಗ ತುಷಾರ್ ಕಣ್ಣನ್ನು ಕುಟುಂಬದವರು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮರೆದಿದ್ದಾರೆ.

    ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆಯಲ್ಲಿ ಮೀನಾ ತನ್ನ 13 ವರ್ಷದ ಮಗ ತುಷಾರ್ ನ ಕತ್ತು ಕೊಯ್ದು ಕೊಲೆ ಮಾಡಿ, ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚಂದನ್ ಮಗ ತುಷಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ಚಂದನ್ ಸಾವಿನ ಬಳಿಕ ಮಾನಸಿಕವಾಗಿ ಕುಗ್ಗಿದ್ದ ಪತ್ನಿ ಮೀನಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರವಾಗಿ ಮನನೊಂದಿದ್ದ ಮೀನಾ ಏನಾದ್ರೂ ಮಾಡಿಕೊಳ್ಳಬಹುದೆಂದು ಆಕೆಯ ಅಣ್ಣ ಮತ್ತು ತಂದೆ ಒಂದು ವಾರದಿಂದ ಕಾವಲು ಕಾಯುತ್ತಿದ್ದರು. ಆದರೆ ಇಂದು ಬೆಳಗ್ಗೆ ಮನೆಯಲ್ಲಿ ಯಾರು ಇಲ್ಲದ ವೇಳೆ ಮೀನಾ ಮಗನನ್ನು ಕೊಲೆಗೈದಿದ್ದಾರೆ.

    ಸದ್ಯ ಮೀನಾ ಸ್ಥಿತಿ ಚಿಂತಾಜನಕವಾಗಿದ್ದು, ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈಗ ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್‍ಗೆ ದಾಖಲಿಸಲಾಗಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.