Tag: Chandan Shetty

  • ಧ್ರುವ ಸರ್ಜಾ ಮಧ್ಯಸ್ಥಿಕೆ ವಹಿಸಿದ್ರೆ ಚಂದನ್-ನಿವೇದಿತಾ ಒಂದಾಗಬಹುದು: ಪ್ರಥಮ್

    ಧ್ರುವ ಸರ್ಜಾ ಮಧ್ಯಸ್ಥಿಕೆ ವಹಿಸಿದ್ರೆ ಚಂದನ್-ನಿವೇದಿತಾ ಒಂದಾಗಬಹುದು: ಪ್ರಥಮ್

    ಮಂಡ್ಯ: ಚಂದನ್ ಶೆಟ್ಟಿ, ನಿವೇದಿತಾ ಗೌಡ ಮಧ್ಯೆ ನಟ ಧ್ರುವ ಸರ್ಜಾ (Dhruva Sarja) ಮಧ್ಯಸ್ಥಿಕೆ ವಹಿಸಿದರೆ ಎಲ್ಲವೂ ಸರಿಯಾಗುತ್ತದೆ. ಧ್ರುವ ಸರ್ಜಾ ಇಂತಹ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಿದ್ದಾರೆ ಎಂದು ನಟ ಪ್ರಥಮ್ (Actor Pratham) ಹೇಳಿದ್ದಾರೆ.

    ಚಂದನ್-ನಿವೇದಿತಾ ಡಿವೋರ್ಸ್ (Chandan Shetty-Niveditha Gowda Divorce) ವಿಚಾರವಾಗಿ ಮಂಡ್ಯದಲ್ಲಿ (Mandya) ಮಾತನಾಡಿದ ಅವರು, ಚಂದನ್, ನಿವೇದಿತಾ ಬೇರ್ಪಟ್ಟ ಮಾತ್ರಕ್ಕೆ ಅವರಿಬ್ಬರೂ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಆಗ್ತಾರಾ? ಒಂದು ಶೋ ಮುಖ್ಯನಾ ಜೀವನ ಮುಖ್ಯನಾ ಎಂದು ಯೋಚನೆ ಮಾಡಿದರೆ ಜೀವನವೇ ಮುಖ್ಯ, ಚೆನ್ನಾಗಿ ಬದುಕಬೇಕು. ಕೆರಿಯರ್ ಬಗ್ಗೆ ಯೋಚಿಸದೆ ಇಬ್ಬರು ಮದುವೆ ಆಗಿಲ್ಲಾ. ಎಲ್ಲವನ್ನು ಯೋಚಿಸಿಯೇ ಅವರು ಮದುವೆ ಆಗಿದ್ದಾರೆ. ಸುಂದರವಾದ ಬದುಕು, ಇಬ್ಬರು ಚೆನ್ನಾಗಿ ಬದುಕುಬೇಕು ಎಂದರು. ಇದನ್ನೂ ಓದಿ:‌ ಡಾಲಿ ಧನಂಜಯ್ ನಟನೆಯ ‘ಕೋಟಿ’ ಚಿತ್ರದ ಮೊದಲ ಟಿಕೇಟ್ ‘ಕಿಚ್ಚ’ನಿಗೆ

    ಧ್ರುವ ಅವರ ಮಾತನ್ನು ಚಂದನ್ ಕೇಳುತ್ತಾರೆ. ನಿವೇದಿತಾ-ಚಂದನ್ ವಿಚ್ಛೇದನ ವಿಚಾರದಲ್ಲಿ ಧ್ರುವ ಸರ್ಜಾ ಮಧ್ಯಸ್ಥಿಕೆ ವಹಿಸಲಿ. ಚಂದನ್‌ಗೆ ಒಳ್ಳೆಯದಾಗಲಿ ಎಂದು ಧ್ರುವ ಪೊಗರು ಸಿನೆಮಾದಲ್ಲಿ ಅವಕಾಶ ಕೊಟ್ಟರು. ಪ್ರೀತಿ ಇದ್ದರೆ ಚಂದನ್, ಧ್ರುವ ಮಾತನ್ನು ಕೇಳುತ್ತಾರೆ. ಮಿಲನಾ ಸಿನಿಮಾದಲ್ಲಿ ವಿಚ್ಛೇದನ ಬಳಿಕವೂ ಒಂದಾಗಲ್ವಾ? ಇಚ್ಛಾಶಕ್ತಿ ಬೇರಾವುದು ದೊಡ್ಡದಲ್ಲ. ನಾನು ಮಿಲನಾ ಫಿಲ್ಮ್ ಕ್ಲೈಮ್ಯಾಕ್ಸ್ ಕಟ್ ಮಾಡಿ ಚಂದನ್‌ಗೆ ಕಳುಹಿಸುತ್ತೇನೆ. ಅದನ್ನು ನೋಡಿಯಾದರೂ ಚಂದನ್ ಮನಸ್ಸು ಬದಲಾಗಲಿ ಎಂದು ಹೇಳಿದರು. ಇದನ್ನೂ ಓದಿ: ಡಿವೋರ್ಸ್ ವಿಚಾರ ಅಧಿಕೃತವಾಗಿ ಬಹಿರಂಗಪಡಿಸಿದ ಚಂದನ್- ನಿವೇದಿತಾ

    ಯುವ ದಸರಾ ವೇದಿಕೆಯಲ್ಲಿ ಚಂದನ್ ಪ್ರಪೋಸ್ ಮಾಡಿದ್ದು ನನಗೆ ಎಫೆಕ್ಟ್ ಆಗಿತ್ತು. ಆ ಘಟನೆಯಿಂದ ಯುವ ದಸರಾ ವೇದಿಕೆಯಲ್ಲಿ ನನ್ನ ಸಿನಿಮಾ ಪ್ರೊಮೋಷನ್‌ಗೆ ಅವಕಾಶ ಸಿಗಲಿಲ್ಲ. ಅದರಿಂದ ಚಂದನ್ ಮೇಲೆ ಕೆಲದಿನ ಕೋಪ ಮಾಡಿಕೊಂಡಿದ್ದೆ. ಬಳಿಕ ಪರಸ್ಪರ ಮಾತನಾಡಿದಾಗ ನಾವಿಬ್ಬರು ಒಳ್ಳೆಯ ಸ್ನೇಹಿತರಾದೆವು. ಚಂದನ್‌ಗೆ ಕೇಳುವ ವಿವೇಚನೆ ಇದೆ. ಅರೇಂಜ್ ಮ್ಯಾರೇಜ್ ಆದರೆ ಕಂಟ್ರೋಲ್ ಇರುತ್ತದೆ. ಲವ್ ಮ್ಯಾರೇಜ್ ಆದರೆ ನಮ್ಮ ಜುಟ್ಟು ಅವರ ಕೈಯಲ್ಲಿರುತ್ತದೆ. ಈ ಹಿಂದೆ ಯಾವ ವಿಚ್ಛೇದನವೂ ಇರಲಿಲ್ಲ. ನಮ್ಮ ಹಿರಿಯರು ನೂರಾರು ಕಾಲ ದಾಂಪತ್ಯ ಜೀವನ ನಡೆಸಿಲ್ವಾ ಎಂದು ಉದಾಹರಣೆ ನೀಡಿದರು. ಇದನ್ನೂ ಓದಿ: ಜೂನ್‌ 21ರಿಂದ ಶುರುವಾಗಲಿದೆ ಅನಿಲ್ ಕಪೂರ್ ನಿರೂಪಣೆಯ ಬಿಗ್ ಬಾಸ್ ಒಟಿಟಿ

    350 ಕಿ.ಮೀ ದೂರದಲ್ಲಿ ಕಾರ್ಯಕ್ರಮ ಇದ್ದರೂ ಮದುವೆ ದಿನ ನಮ್ಮ ಮನೆಗೆ ಬಂದು ಚಂದನ್ ವಿಶ್ ಮಾಡಿದ್ದರು. ಮದುವೆ, ತಾಳಿ ಬಗ್ಗೆ ಚಂದನ್‌ಗೆ ಗೌರವ ಇದೆ. ಯಾರೋ ಮಧ್ಯದಲ್ಲಿ ತೊಂದರೆ ಮಾಡಿದ್ದಾರೆ ಅಷ್ಟೇ. ಹಾಳಾದರೆ ಖುಷಿ ಪಡುವವರು ಸಾಕಷ್ಟು ಜನ ಇದ್ದಾರೆ. ನಾನು ಒಳ್ಳೆಯದಾಗಲಿ ಎಂದು ಬಯಸುತ್ತೇನೆ. ನಿಮ್ಮ ನಿರ್ಧಾರ ಸರಿ ಎನ್ನುವವರು ಯಾರೂ ಕಷ್ಟದಲ್ಲಿ ಬರಲ್ಲ. ಹಾಳಾಗಲಿ ಎನ್ನುವವರ ಮಧ್ಯೆ ಚೆನ್ನಾಗಿ ಬದುಕು ಚಂದನ್. ಅವರಿಬ್ಬರನ್ನು ಒಂದು ಮಾಡುವಂತೆ ಜನರು ನನಗೆ ಮೆಸೆಜ್ ಮಾಡುತ್ತಿದ್ದಾರೆ. ನನ್ನ ಮಾತು ಕೇಳ್ತಾರಾ ಅವರು? ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು. ಇದನ್ನೂ ಓದಿ: 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಚಂದನ್ ಶೆಟ್ಟಿ, ನಿವೇದಿತಾ ಗೌಡ

  • ಡಿವೋರ್ಸ್ ವಿಚಾರ ಅಧಿಕೃತವಾಗಿ ಬಹಿರಂಗಪಡಿಸಿದ ಚಂದನ್- ನಿವೇದಿತಾ

    ಡಿವೋರ್ಸ್ ವಿಚಾರ ಅಧಿಕೃತವಾಗಿ ಬಹಿರಂಗಪಡಿಸಿದ ಚಂದನ್- ನಿವೇದಿತಾ

    ರ‍್ಯಾಪರ್ ಚಂದನ್ ಶೆಟ್ಟಿ (Rapper Chandan Shetty) ಹಾಗೂ ನಿವೇದಿತಾ ಗೌಡ ಡಿವೋರ್ಸ್ (Chandan- Niveditha Divorce) ಸುದ್ದಿ ಇಂದು (ಶುಕ್ರವಾರ) ಸಂಜೆಯ ವೇಳೆ ಭಾರೀ ಬಿರುಗಾಳಿಯನ್ನೇ ಎಬ್ಬಿಸಿತ್ತು. ಮೊದ ಮೊದಲು ಇದು ಸಿನಿಮಾ ಪ್ರಮೋಷನ್ ಎಂದುಕೊಂಡಿದ್ದವರಿಗೆ ದಂಪತಿ ಕೊನೆಗೂ ಶಾಕ್ ಕೊಟ್ಟರು.

    ಹೌದು. ಚಂದನ್ ಹಾಗೂ ನಿವೇದಿತಾ (Niveditha Gowda) ವಿಚ್ಛೇದನಕ್ಕಾಗಿ ಗುರುವಾರ ಶಾಂತಿನಗರದ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದರು. ಈ ಬೆನ್ನಲ್ಲೇ ಇಂದು ಇಬ್ಬರೂ ಹಾಜರಾಗಿದ್ದು, ಕೋರ್ಟ್ ವಿಚ್ಛೇದವನ್ನು ಕೂಡ ಮಂಜೂರು ಮಾಡಿದೆ. ಬಳಿಕ ಇಬ್ಬರೂ ಕೈ ಕೈ ಹಿಡಿದುಕೊಂಡು ಕೋರ್ಟ್‍ನಿಂದ ಹೊರ ನಡೆದಿದ್ದಾರೆ. ಇಷ್ಟೆಲ್ಲಾ ಆದರೂ ಈ ಸುದ್ದಿ ನಿಜವೋ ಸುಳ್ಳೋ ಎಂಬ ಗೊಂದಲ ಎಲ್ಲರಲ್ಲಿಯೂ ಮೂಡಿತು.

     

    ಈ ನಡುವೆ ಸಂಜೆ ಇಬ್ಬರೂ ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಡಿವೋರ್ಸ್ ವಿಚಾರವನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. ಕಾನೂನು ಬದ್ಧವಾಗಿ ಪರಸ್ಪರ ಒಪ್ಪಂದದಿಂದ ಸಂಬಂಧ ಕೊನೆಗೊಳಿಸುವುದಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ತಮ್ಮ 4 ವರ್ಷಗಳ ದಾಂಪತ್ಯಕ್ಕೆ ಬ್ರೇಕ್ ಹಾಕಿರುವುದು ನಿಜವಾಗಿದೆ. ಇದನ್ನೂ ಓದಿ: ಡಿವೋರ್ಸ್ ಬಳಿಕ ಕೈ ಕೈ ಹಿಡಿದು ಹೊರಬಂದ ಚಂದನ್ ಶೆಟ್ಟಿ, ನಿವೇದಿತಾ ಗೌಡ

    ಚಂದನ್ ಶೆಟ್ಟಿ ಬರೆದುಕೊಂಡಿದ್ದೇನು..?: ಇಂದು, ನಾನು ಮತ್ತು ನಿವೇದಿತಾ ಮದುವೆಯಾಗಿ ನಾಲ್ಕು ವರ್ಷಗಳ ನಂತರ ಕಾನೂನುಬದ್ಧವಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮ ಸ್ವಂತ ಸಂತೋಷ ಮತ್ತು ಬೆಳವಣಿಗೆಯ ಮೇಲೆ ಕೇಂದ್ರೀಕರಿಸುವುದು ಮುಖ್ಯ ಎಂದು ಅರ್ಥಮಾಡಿಕೊಳ್ಳುವ ಮೂಲಕ ನಾವು ನಮ್ಮ ಮದುವೆಯನ್ನು ಉತ್ತಮ ರೀತಿಯಲ್ಲಿ ಕೊನೆಗೊಳಿಸುತ್ತಿದ್ದೇವೆ. ಈ ಕಷ್ಟದ ಸಮಯದಲ್ಲಿ ನಾವು ಮಾಧ್ಯಮಗಳು, ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ಬೆಂಬಲವನ್ನು ಕೇಳುತ್ತೇವೆ. ನಾವು ನಮ್ಮ ದಾರಿಯಲ್ಲಿ ಹೋಗುತ್ತಿದ್ದರೂ ಸಹ, ನಾವು ಇನ್ನೂ ಪರಸ್ಪರ ಬಲವಾದ ಸ್ನೇಹ ಮತ್ತು ಗೌರವವನ್ನು ಹೊಂದಿದ್ದೇವೆ. ಈ ಸವಾಲಿನ ಅವಧಿಯಲ್ಲಿ ನಿಮ್ಮ ಬೆಂಬಲ ನಮ್ಮಿಬ್ಬರ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ.

    ಇದೇ ರೀತಿ ನಿವೇದಿತಾ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಇಬ್ಬರ ಡಿವೋರ್ಸ್ ವಿಚಾರ ಅಭಿಮಾನಿಗಳಿಗಂತೂ ಶಾಕ್ ತಂದಿದ್ದು, ಈ ಕುರಿತು ಭಾರೀ ಚರ್ಚೆಯಾಗುತ್ತಿದೆ. ಒಟ್ಟಿನಲ್ಲಿ ಇಬ್ಬರೂ ಪರಸ್ಪರ ಮಾತುಕತೆ ನಡೆಸಿ ಒಂದು ನಿರ್ಧಾರಕ್ಕೆ ಬಂದಿರುವುದಂತೂ ಸತ್ಯ. ಈ ನಡುವೆ ಡಿವೋರ್ಸ್ ಆದರೂ ಬಲವಾದ ಸ್ನೇಹ ಹಾಗೂ ಗೌರವವನ್ನು ಹೊಂದಿರುವುದಾಗಿ ಇಬ್ಬರೂ ತಿಳಿಸಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಕೋರ್ಟ್‌ ನಿಂದ ಇಬ್ಬರೂ ಕೈಕೈ ಹಿಡಿದುಕೊಂಡೇ ತೆರಳಿದ್ದಾರೆ.

  • ಡಿವೋರ್ಸ್ ಬಳಿಕ ಕೈ ಕೈ ಹಿಡಿದು ಹೊರಬಂದ ಚಂದನ್ ಶೆಟ್ಟಿ, ನಿವೇದಿತಾ ಗೌಡ

    ಡಿವೋರ್ಸ್ ಬಳಿಕ ಕೈ ಕೈ ಹಿಡಿದು ಹೊರಬಂದ ಚಂದನ್ ಶೆಟ್ಟಿ, ನಿವೇದಿತಾ ಗೌಡ

    ಟ, ಗಾಯಕ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ (Niveditha Gowda) ವಿಚ್ಛೇದನ (Divorce) ಪಡೆದಿದ್ದಾರೆ. 2ನೇ ಹೆಚ್ಚುವರಿ ನ್ಯಾಯಾಲಯವು ವಿಚ್ಛೇದನ ಮಂಜೂರು ಮಾಡಿದೆ. 4 ವರ್ಷಗಳ ದಾಂಪತ್ಯಕ್ಕೆ ಬ್ರೇಕ್ ಬಿದ್ದ ಬಳಿಕ ಮಾಧ್ಯಮಗಳ ಕಣ್ಣು ತಪ್ಪಿಸಲು ಕೋರ್ಟ್‌ನ ಹಿಂದಿನ ಗೇಟ್‌ನಿಂದ ಇಬ್ಬರೂ ಕೈ ಕೈ ಹಿಡಿದು ಚಂದನ್ ಶೆಟ್ಟಿ ಮತ್ತು ನಿವೇದಿತಾ ಹೊರಬಂದಿದ್ದಾರೆ. ಇದನ್ನೂ ಓದಿ:4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಚಂದನ್ ಶೆಟ್ಟಿ, ನಿವೇದಿತಾ ಗೌಡ

    ಡಿವೋರ್ಸ್ ಬಳಿಕ ಸಾಮಾನ್ಯವಾಗಿ ಜೋಡಿಗಳು ಜಗಳ ಆಡ್ತಾರೆ, ಮುಖ ಸಿಂಡರಿಸಿಕೊಂಡು ಹೋಗುತ್ತಾರೆ. ಆದರೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಫ್ರೆಂಡ್ಲಿ ಆಗಿಯೇ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಬೆಂಗಳೂರಿನ ಶಾಂತಿನಗರದ ಕೌಟುಂಬಿಕ ನ್ಯಾಯಾಲಕ್ಕೆ ಹಾಜರಾದ ಈ ಜೋಡಿ ಅಕ್ಕ ಪಕ್ಕ ಕುಳಿತು ವಿಚಾರಣೆ ಎದುರಿಸಿದ್ದಾರೆ. ಡಿವೋರ್ಸ್ ಮಂಜೂರಿನ ಬಳಿಕ ಕೈ ಕೈ ಹಿಡಿದುಕೊಂಡು ತೆರಳಿದ ವಿಡಿಯೋಗಳು ಭಾರಿ ವೈರಲ್ ಆಗಿದೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ.

    ಈ ಹಿಂದೆ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್, ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ಡಿವೋರ್ಸ್ ಪಡೆಯುವಾಗಲೂ ಫ್ರೆಂಡ್ಲಿ ಆಗಿಯೇ ದಾಂಪತ್ಯಕ್ಕೆ ಕೊನೆ ಹಾಡಿದ್ದರು. ಇಂದಿಗೂ ಅವರ ಮಾಜಿ ಪಾರ್ಟ್ನರ್‌ಗಳು ಏಲ್ಲೇ ಸಿಕ್ಕಿದ್ದರೂ ಖುಷಿಯಿಂದ ಮಾತನಾಡುತ್ತಾರೆ. ಅದೇ ರೀತಿ ಚಂದನ್ ಮತ್ತು ನಿವೇದಿತಾ ಕೂಡ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದು ಸ್ನೇಹಿತರಾಗಿಯೇ ಕೋರ್ಟ್‌ನಿಂದ ಇಬ್ಬರೂ ಕೈ ಕೈ ಹಿಡಿದು ನಗುತ್ತಲೇ ಹೊರಬಂದಿದ್ದಾರೆ.

    ಅಂದಹಾಗೆ, ಬಿಗ್‌ ಬಾಸ್‌ ಕನ್ನಡ ಸೀಸನ್‌ 5ರಲ್ಲಿ ಇಬ್ಬರೂ ಪರಿಚಿತರಾದರು. ಬಳಿಕ 2019ರಲ್ಲಿ ಮೈಸೂರು ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ನಿವೇದಿತಾಗೆ ಚಂದನ್‌ ಪ್ರಪೋಸ್‌ ಮಾಡಿದ್ದರು. ಎರಡು ಕುಟುಂಬದ ಒಪ್ಪಿಗೆ ಪಡೆದು 2020ರಲ್ಲಿ ಚಂದನ್‌ ಮತ್ತು ನಿವೇದಿತಾ ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು.

  • 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಚಂದನ್ ಶೆಟ್ಟಿ, ನಿವೇದಿತಾ ಗೌಡ

    4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಚಂದನ್ ಶೆಟ್ಟಿ, ನಿವೇದಿತಾ ಗೌಡ

    ಸ್ಯಾಂಡಲ್‌ವುಡ್ ನಟ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ (Niveditha Gowda) ದಾಂಪತ್ಯ ಅಂತ್ಯವಾಗಿದೆ. 2ನೇ ಹೆಚ್ಚುವರಿ ನ್ಯಾಯಾಲಯವು ವಿಚ್ಛೇದನ (Divorce) ಮಂಜೂರು ಮಾಡಿದೆ. ಈ ಮೂಲಕ ಚಂದನ್ ಶೆಟ್ಟಿ ಮತ್ತು ನಿವೇದಿತಾರ 4 ವರ್ಷಗಳ ದಾಂಪತ್ಯಕ್ಕೆ ಬ್ರೇಕ್ ಬಿದ್ದಿದೆ.

    ಗಾಯಕ ಚಂದನ್ ಶೆಟ್ಟಿ ಮತ್ತು ನಟಿ ನಿವೇದಿತಾ ಗೌಡ ವಿಚ್ಚೇಧನಕ್ಕೆ ಬೆಂಗಳೂರಿನ ಶಾಂತಿನಗರದ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ಇಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ಡಿವೋರ್ಸ್‌ಗೆ ಮುಂದಾಗಿದ್ದರು. 2ನೇ ಹೆಚ್ಚುವರಿ ನ್ಯಾಯಾಲಯ ವಿಚ್ಛೇದನಕ್ಕೆ ಅನುಮತಿ ನೀಡಿದೆ. ಇದನ್ನೂ ಓದಿ:ಚಿರು ಸರ್ಜಾ 4ನೇ ವರ್ಷದ ಪುಣ್ಯ ಸ್ಮರಣೆ- ಕುಟುಂಬಸ್ಥರಿಂದ ಪೂಜೆ

    ಬಿಗ್ ಬಾಸ್ ಮನೆಯಲ್ಲಿ ಈ ಜೋಡಿ ಪ್ರೀತಿಸಿ, ಅಲ್ಲಿಂದ ವಾಪಸ್ಸು ಬಂದ ನಂತರ ಅದ್ಧೂರಿಯಾಗಿ ಮದುವೆಯಾಗಿದ್ದರು. ಈ ಇಬ್ಬರೂ ಅನ್ಯೋನ್ಯ ಜೀವನ ನಡೆಸುತ್ತಿದ್ದರು ಎನ್ನುವುದಕ್ಕೆ ಅವರೇ ಮಾಡಿಕೊಂಡಿದ್ದ ಹಲವಾರು ರೀಲ್ಸ್ ಸಾಕ್ಷಿಯಾಗಿದ್ದವು. ಈಗ ಡಿವೋರ್ಸ್ ಮೂಲಕ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದ್ದಾರೆ.

  • ಡಿವೋರ್ಸ್‌ಗೆ ಮುಂದಾದ ಚಂದನ್ ಶೆಟ್ಟಿ, ನಿವೇದಿತಾ ಗೌಡ ದಂಪತಿ

    ಡಿವೋರ್ಸ್‌ಗೆ ಮುಂದಾದ ಚಂದನ್ ಶೆಟ್ಟಿ, ನಿವೇದಿತಾ ಗೌಡ ದಂಪತಿ

    ಸ್ಯಾಂಡಲ್ ವುಡ್ ಕ್ಯೂಟ್ ಕಪಲ್‌ಗಳಲ್ಲಿ ಒಂದಾದ ಸಂಗೀತ ನಿರ್ದೇಶಕ, ಗಾಯಕ ಚಂದನ್ ಶೆಟ್ಟಿ (Chandan Shetty) ಮತ್ತು ನಟಿ ನಿವೇದಿತಾ ಗೌಡ (Niveditha Gowda) ಡಿವೋರ್ಸ್‌ಗೆ ಮುಂದಾಗಿದ್ದಾರೆ. ವಿಚ್ಚೇಧನ ನೀಡುವಂತೆ ಬೆಂಗಳೂರಿನ ಶಾಂತಿನಗರದ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ:ನನ್ನ ತಾಯಿ ಕೂಡ ಪ್ರತಿಭಟನೆಯಲ್ಲಿದ್ರು- ಕಂಗನಾಗೆ ಕಪಾಳಮೋಕ್ಷ ಮಾಡಿದ ಸಿಬ್ಬಂದಿ ಸಮರ್ಥನೆ

    ಬಿಗ್ ಬಾಸ್ ಮನೆಯಲ್ಲಿ ಈ ಜೋಡಿ ಪ್ರೀತಿಸಿ, ಅಲ್ಲಿಂದ ವಾಪಸ್ಸು ಬಂದ ನಂತರ ಅದ್ಧೂರಿಯಾಗಿ ಮದುವೆಯಾಗಿದ್ದರು. ಈ ಇಬ್ಬರೂ ಅನ್ಯೋನ್ಯ ಜೀವನ ನಡೆಸುತ್ತಿದ್ದರು ಎನ್ನುವುದಕ್ಕೆ ಅವರೇ ಮಾಡಿಕೊಂಡಿದ್ದ ಹಲವಾರು ರೀಲ್ಸ್ ಸಾಕ್ಷಿಯಾಗಿದ್ದವು. ಆದರೆ, ಏಕಾಏಕಿ ಇಬ್ಬರೂ ನಿನ್ನೆಯಷ್ಟೇ ಡಿವೋರ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.

    ಡಿವೋರ್ಸ್ ಕಾರಣ ತಿಳಿದುಕೊಂಡಿಲ್ಲ. ಆದರೆ, ಇಂದು ಇಬ್ಬರೂ ಬೆಂಗಳೂರಿನ ಫ್ಯಾಮಿಲಿ ಕೋರ್ಟ್‌ಗೆ ಹಾಜರಾಗಿದ್ದರು. ಇಬ್ಬರೂ ಒಪ್ಪಿಗೆಯ ಮೇರೆಗೆ ಅರ್ಜಿ ಸಲ್ಲಿಸಿದ್ದಾರೆ.

  • ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಟ್ರೈಲರ್ ರಿಲೀಸ್

    ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಟ್ರೈಲರ್ ರಿಲೀಸ್

    ಚಂದನ್ ಶೆಟ್ಟಿ (Chandan Shetty) ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ ಚಿತ್ರ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ (Vidhyarthi Vidyarthiniyare). ಶೀರ್ಷಿಕೆಯಲ್ಲಿಯೇ ಟೀನೇಜ್ ಸ್ಟೋರಿಯ ಕಂಪು ಹೊಂದಿರುವ ಈ ಸಿನಿಮಾ ಈಗಾಗಲೇ ನಾನಾ ಕ್ರೀಯಾಶೀಲ ಚಟುವಟಿಕೆಗಳ ಮೂಲಕ ಪ್ರೇಕ್ಷಕರನ್ನು ತಲುಪಿಕೊಂಡಿತ್ತು. ಆ ಕಾರಣದಿಂದಲೇ ಎಲ್ಲರೂ ಟ್ರೈಲರ್ (Trailer) ನತ್ತ ದೃಷ್ಟಿ ನೆಟ್ಟಿದ್ದರು. ಇದೀಗ ಚಿತ್ರತಂಡ ಯುವ ಆವೇಗದಿಂದ ತೊನೆದಾಡುತ್ತಿರುವಂತೆ ಭಾಸವಾಗುವ ಟ್ರೈಲರ್ ಅನ್ನು ಬಿಡುಗಡೆಗೊಳಿಸಿದೆ. ಅದರೊಳಗೆ ಹದಿಹರೆಯದ ಮನಸುಗಳ ನಾನಾ ಮಗ್ಗುಲುಗಳು ಹರೆಯದ ತೊರೆಯೊಂದಿಗೆ ದುಮ್ಮಿಕ್ಕಿ ಹರಿದಿವೆ. ಈ ಟ್ರೈಲರ್ ಅನ್ನು ಸೈಡ್ ಎ ಅಂತ ಹೆಸರಿಸಲಾಗಿದೆ. ಇದನ್ನು ನೋಡುತ್ತಲೇ ಒಟ್ಟಾರೆ ಸಿನಿಮಾದಲ್ಲೇನೋ ಇದೆಯೆಂಬ ಗಟ್ಟಿಯಾದ ಭರವಸೆ ತಂತಾನೇ ಮೂಡಿಕೊಳ್ಳುತ್ತೆ. ಸೈಡ್ ಬಿ ಟ್ರೈಲರ್ ಗಾಗಿ ಕಾತರವೂ ಮೂಡಿಕೊಳ್ಳುತ್ತೆ. ಅಷ್ಟರಮಟ್ಟಿಗೆ ಈ ಟ್ರೈಲರ್ ಪರಿಣಾಮಕಾರಿಯಾಗಿ ಮೂಡಿ ಬಂದಿದೆ.

    `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಟೈಟಲ್ಲೇ ಹೇಳುವಂತೆ ಯೂತ್ಸ್ ಸಬ್ಜೆಕ್ಟ್ ಸಿನಿಮಾ. ಕಾಲೇಜ್ ಹುಡುಗ, ಹುಡುಗಿಯರ, ಹದಿ ಹರೆಯದ ಹುಚ್ಚು ಮನಸ್ಸಿನ ಹೊಯ್ದಾಟವನ್ನು ಇಲ್ಲಿ ತೆರೆದಿಡಲಾಗಿದೆ. ಹಾಗಂತ ಇದು ಮಾಮೂಲಿಯಾಗೂ ಇದು ಸಿದ್ಧಸೂತ್ರದ ಚೌಕಟ್ಟಿಗೊಳಪಟ್ಟಿಲ್ಲ ಅನ್ನೋದು ಟ್ರೇಲರ್ ಎಳೆಯಲ್ಲಿ ಸ್ಪಷ್ಟವಾಗುತ್ತದೆ. ಹೊಡೆದಾಟ, ಬಡಿದಾಟ, ರ್ಯಾಗಿಂಗ್, ಬಿಸಿ ರಕ್ತದ ಹುಡುಗರ ಪುಂಡಾಟಿಕೆ ಸೇರಿದಂತೆ ಇಲ್ಲಿ ಎಲ್ಲವೂ ಇದೆ. ಅದರ ಜೊತೆ ಜೊತೆಗೇ ಶೈಕ್ಷಣಿಕ ಪರಿಸರದ ಕ್ರೌರ್ಯದ ಮುಖವೊಂದನ್ನು ಬಯಲಾಗಿಸುವ ಪ್ರಯತ್ನವೂ ಗಮನ ಸೆಳೆಯುವಂತಿದೆ. ಮೋಜು ಮಸ್ತಿಯಲ್ಲಿ ಮೈಮರೆತ ಮನಸ್ಥಿತಿಗಳ ಕಥೆಯ ಸೂಚನೆಯಿದೆ. ಹಿಡಿತ ತಪ್ಪಿದ ಮಕ್ಕಳನ್ನು ಹಾದಿಗೆ ತರುವ ಯತ್ನವೂ ಇದೆ. ಪ್ರಸ್ತುತ ಕಾಲದ ಟೀನೇಜ್ ಹುಡುಗರ ಕಹಾನಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದೆ ಟ್ರೇಲರ್.

    ಚಂದನ್ ಶೆಟ್ಟಿ ಈ ಚಿತ್ರದ ಮೂಲಕ ಡಿಫರೆಂಟಾಗಿ ಕಾಣಿಸಲಿದ್ದಾರೆಂಬ ನಿಖರ ಮಾಹಿತಿಯನ್ನು ನಿರ್ದೇಶಕ ಅರುಣ್ ಅಮುಕ್ತ ನೀಡುತ್ತಾ ಬಂದಿದ್ದಾರೆ. ಅವರ ಪಾತ್ರವನ್ನು ಅಷ್ಟೇ ಗೌಪ್ಯವಾಗಿ ಕಾಪಾಡಿಕೊಂಡು ಸಿನಿಮಾ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ ಚಿತ್ರತಂಡ. ಒಟ್ಟಾರೆಯಾಗಿ ಟ್ರೈಲರ್ ನೋಡಿದರೆ ನಿರ್ದೇಶಕರು ಹೊಸದೇನನ್ನೋ ಹೇಳುವ ಪ್ರಯತ್ನ ಮಾಡಿದ್ದಾರೆ ಅನ್ನೋದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಅರುಣ್ ಅಮುಕ್ತ ಅತ್ಯಂತ ಆಸ್ಥೆಯಿಂದ ಈ ಸಿನಿಮಾವನ್ನು ರೂಪಿಸಿದ್ದಾರೆಂಬುದಕ್ಕೂ ಕೂಡಾ ಈ ಟ್ರೈಲರಿನಲ್ಲಿ ಸಾಕ್ಷಿಗಳಿದ್ದಾವೆ. ಕಾಲೇಜು ಕೇಂದ್ರಿತ ಕಥೆ ಅಂದಾಕ್ಷಣ ಒಂದು ಕಲ್ಪನೆ ಮೊಳೆತುಕೊಳ್ಳುತ್ತದೆ. ಅದನ್ನು ಮೀರಿದ ಆತ್ಮದೊಂದಿಗೆ ಅರುಣ್ ಅಮುಕ್ತ ಈ ಸಿನಿಮಾವನ್ನು ದೃಷ್ಯೀಕರಿಸಿರುವ ಲಕ್ಷಣಗಳಿವೆ. ಈವರೆಗೂ ಹಂತ ಹಂತವಾಗಿ ಕಾಯ್ದುಕೊಂಡಿದ್ದ ಕುತೂಹಲವನ್ನು ಈ ಸೈಡ್ ಎ ಟ್ರೈಲರ್ ಸಾರ್ಥಕಗೊಳಿಸಿದೆ.

    ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶ್ರೀಕಾಂತ್ ಜಿ ಕಶ್ಯಪ್ ಕಾರ್ಯಕಾರಿ ನಿರ್ಮಾಪಕ, ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ ಅರುಣ್ ಸುರೇಶ್  ಈ ಹಾಡಿಗೆ ಛಾಯಾಗ್ರಹಣ ಮಾಡಿದ್ದಾರೆ. ಚಂದನ್ ಶೆಟ್ಟಿ , ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

  • ‘ಸೂತ್ರಧಾರಿ’ಗಾಗಿ 14 ಕೆಜಿ ತೂಕ ಇಳಿಸಿಕೊಂಡ ಚಂದನ್ ಶೆಟ್ಟಿ

    ‘ಸೂತ್ರಧಾರಿ’ಗಾಗಿ 14 ಕೆಜಿ ತೂಕ ಇಳಿಸಿಕೊಂಡ ಚಂದನ್ ಶೆಟ್ಟಿ

    ಪಾತ್ರಗಳಿಗಾಗಿ ಕಲಾವಿದರು ಕಸರತ್ತು ಮಾಡೋದು ಹೊಸದೇನೂ ಅಲ್ಲ. ಆದರೆ ಗಾಯಕ ಕಂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ, ಇದೇ ಮೊದಲ ಬಾರಿಗೆ ಹೀರೋ ಆಗಿ ಅಭಿನಯಿಸಿದ್ದಾರೆ. ಅವರ ಮೊದಲ ಸಿನಿಮಾದ ಪಾತ್ರಕ್ಕಾಗಿ ಬರೋಬ್ಬರಿ 14 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಅದು ಇನ್ಸ್ಪೆಕ್ಟರ್ ಪಾತ್ರಕ್ಕಾಗಿ ಎನ್ನುವುದು ವಿಶೇಷ.

    ಚಂದನ್ ಶೆಟ್ಟಿ (Chandan Shetty) ನಾಯಕನಾಗಿ ನಟಿಸುತ್ತಿರುವ ‘ಸೂತ್ರಧಾರಿ’ ಚಿತ್ರದ  ‘ಡ್ಯಾಶ್’ ಸಾಂಗ್ ಸಾಕಷ್ಟು ವೀಕ್ಷಣೆಯಾಗಿ ಜನರ ಮನ ಗೆದ್ದಿದೆ. ನಂತರ ಈ (Sutradhari) ಚಿತ್ರಕ್ಕಾಗಿ ವಿಜಯ್ ಈಶ್ವರ್ ಬರೆದಿರುವ ‘ಟ್ರೆಂಡಿಂಗಲ್ ಬರ್ಬೇಕಂದ್ರೆ ಏನ್ ಮಾಡ್ಬೇಕು’ ಎಂಬ ಹಾಡು ಬಿಡುಗಡೆ ಆಗಿ ಜನರ ಮನಸು ಸೆಳೆದಿದೆ‌. ಚಂದನ್ ಶೆಟ್ಟಿ ಈ ಹಾಡಿಗೆ ಸಂಗೀತ ನೀಡಿ, ಹಾಡಿದ್ದಾರೆ. ಮೋಹನ್ ಮಾಸ್ಟರ್ ನೃತ್ಯ ನಿರ್ದೇಶಿಸಿರುವ ಈ ಹಾಡಿಗೆ ಚಂದನ್ ಶೆಟ್ಟಿ ಹಾಗೂ ಅಪೂರ್ವ ಹೆಜ್ಜೆ ಹಾಕಿದ್ದಾರೆ.

    ಸೂತ್ರಧಾರಿ ಸಿನಿಮಾ ಕಿರಣ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ನಾಯಕಿ ಅಪೂರ್ವ, ನಟರಾದ ಪ್ರಶಾಂತ್ ನಟನ, ಗಿರೀಶ್, ಗಣೇಶ್ ನಾರಾಯಣ್ ಮುಂತಾದವರ ತಾರಾ ಬಳಗವಿದೆ.

  • `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ರೋಲ್ ಮಾಡೆಲ್ ಸಿನಿಮಾ : ನಟ ರಘು ರಾಮನಕೊಪ್ಪ

    `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ರೋಲ್ ಮಾಡೆಲ್ ಸಿನಿಮಾ : ನಟ ರಘು ರಾಮನಕೊಪ್ಪ

    ರುಣ್ ಅಮುಕ್ತ (Arun Amukta) ನಿರ್ದೇಶನದಲ್ಲಿ ಮೂಡಿ ಬಂದಿರುವ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ (Vidyarthi Vidyarthiniyare) ಚಿತ್ರದ ಬಗ್ಗೆ ಪ್ರೇಕ್ಷಕ ವಲಯದಲ್ಲಿ ಚರ್ಚೆ ಶುರುವಾಗಿದೆ. ಹಂತ ಹಂತವಾಗಿ ಅಂಥದ್ದೊಂದು ಕುತೂಹಲ ನೋಡುಗರಲ್ಲಿ ಮೂಡಿಕೊಳ್ಳುವಂತೆ ಮಾಡುವಲ್ಲಿ ಚಿತ್ರತಂಡ ಯಶ ಕಂಡಿದೆ. ಹೀಗೆ ಸಾಗಿ ಬಂದಿರುವ ಈ ಸಿನಿಮಾದ ಚಿತ್ರೀಕರಣವೀಗ ಸಮಾಪ್ತಿಗೊಂಡಿದೆ. ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯೊಂದನ್ನು ಆಯೋಜಿಸಿದ್ದ ಚಿತ್ರತಂಡ ಮಾಧ್ಯಮಗಳ ಮುಂದೆ ಒಂದಷ್ಟು ವಿಚಾರಗಳನ್ನು ತೆರೆದಿಟ್ಟಿದೆ. ಈ ಹಂತದಲ್ಲಿ ಚಿತ್ರೀಕರಣ ನಡೆದ ಬಗೆ, ಪಾತ್ರದ ಝಲಕ್ಕುಗಳೆಲ್ಲವೂ ಆಯಾ ಪಾತ್ರಗಳನ್ನು ನಿರ್ವಹಿಸಿದ ಕಲಾವಿದರ ಕಡೆಯಿಂದಲೇ ಅನಾವರಣಗೊಂಡಿರೋದು ವಿಶೇಷ.

    ಈ ಸಿನಿಮಾದಲ್ಲಿ ಬಹುಮುಖ್ಯವಾದ ಪಾತ್ರವೊಂದನ್ನು ರಘು ರಾಮನಕೊಪ್ಪ (Raghu Ramakoppa) ನಿಭಾಯಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಹುಬೇಡಿಕೆ ಹೊಂದಿರುವ ನಟ ರಘು. ಸಿನಿಮಾದಿಂದ ಸಿನಿಮಾಗೆ ಅವರ ಪಾಲಿಗೆ ಭಿನ್ನವಾದ ಪಾತ್ರಗಳೇ ಒಲಿದು ಬರುತ್ತಿವೆ. ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದಲ್ಲಿ ಈವರೆಗಿನದ್ದಕ್ಕಿಂತ ವಿಶೇಷವಾದ ಪಾತ್ರ ಸಿಕ್ಕ ಖುಷಿ ಅವರಲ್ಲಿದೆ. ಈ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದ ರಘು ರಾಮನಕೊಪ್ಪ ಒಂದಿಡೀ ಚಿತ್ರತಂಡದ ಕಾರ್ಯವೈಖರಿಯನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಲೇ, ತಮ್ಮ ಪಾತ್ರದ ಬಗ್ಗೆ ಒಂದಷ್ಟು ಅಂಶಗಳನ್ನು ಹಂಚಿಕೊಂಡಿದ್ದಾರೆ.

    ಸಿನಿಮಾ ಬಗ್ಗೆ ಕನಸಿಟ್ಟುಕೊಂಡವರಿಗೆಲ್ಲ ಪ್ರತಿಯೊಂದರಲ್ಲಿಯೂ ಪ್ರೇರಣೆಯಾಗಬಲ್ಲ ರೋಲ್ ಮಾಡೆಲ್ಲಿನಂತಾ ಚಿತ್ರ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಎಂಬುದು ರಘು ಅವರ ಅಚಲ ವಿಶ್ವಾಸ. ಯಾಕೆಂದರೆ, ಪಾತ್ರಗಳನ್ನು ಕಲಾವಿದರಿಗೆ ಕನೆಕ್ಟ್ ಮಾಡೋದರಿಂದ ಹಿಡಿದು, ಕಲಾವಿದರನ್ನು ಹೇಗೆಲ್ಲ ನಡೆಸಿಕೊಳ್ಳಬೇಕು ಎಂಬಲ್ಲಿಯವರೆಗೂ ಅವರ ಪಾಲಿಗೆ ಈ ಸಿನಿಮಾ ವಿಶೇಷ ಅನ್ನಿಸಿದೆಯಂತೆ. ಇನ್ನುಳಿದಂತೆ, ಬೇರೆ ಬೇರೆ ತೆರನಾದ ಪಾತ್ರಗಳನ್ನು ಬಯಸುವ ರಘು ಪಾಲಿಗಿಲ್ಲಿ ಬೇರೆಯದ್ದೇ ಶೇಡಿನ ಪಾತ್ರ ಸಿಕ್ಕಿದೆಯಂತೆ.

    ಸಾಮಾನ್ಯವಾಗಿ ಹಾಸ್ಯ ಪ್ರಧಾನ ಪಾತ್ರಗಳ ಮೂಲಕ ರಘು ರಾಮಕೊಪ್ಪ ಪ್ರಸಿದ್ಧರು. ಆದರೆ, ಅರುಣ್ ಅಮುಕ್ತ ಅದಕ್ಕೆ ತದ್ವಿರುದ್ಧ ಪಾತ್ರವೊಂದನ್ನು ರಘು ಅವರಿಗಾಗಿಯೇ ಸೃಷ್ಟಿಸಿದ್ದಾರೆ. ಅದರ ಫಲವಾಗಿ ರಘು ಇಲ್ಲಿ ಆಟೋ ಡ್ರೈವರ್ ಆಗಿ ಕಾಣಿಸಿಕೊಂಡಿದ್ದಾರೆ. ಓರ್ವ ಮಗಳ ತಂದೆಯಾಗಿ, ಕುಟುಂಬದ ಜವಾಬ್ದಾರಿ ಹೊತ್ತ ಗೃಹಸ್ಥನಾಗಿ, ಮಗಳ ಬದುಕಿನಲ್ಲಾಗುವ ಘಟನಾವಳಿಗಳನ್ನು ಕಂಡು ಸಂಕಟ ಪಡುವ ಅಪ್ಪನಾಗಿ ಅವರಿಲ್ಲಿ ಕಾಣಿಸಿಕೊಂಡಿದ್ದಾರಂತೆ. ಒಟ್ಟಾರೆಯಾಗಿ, ಅದೊಂದು ಭಾವನಾತ್ಮಕ ಅಂಶಗಳಿರುವ ಪಾತ್ರ. ಹೀಗೆ ಕಲಾವಿದರನ್ನು ಒಂದೇ ಬಗೆಯ ಪಾತ್ರಗಳಿಗೆ ಕಟ್ಟುಬೀಳುವಂತೆ ಮಾಡದೆ, ಹೊಸಾ ಸಾಧ್ಯತೆಗಳಿಗೆ ತೆರೆದುಕೊಳ್ಳಲು ಅವಕಾಶ ಮಾಡಿಕೊಟ್ಟ ಈ ಚಿತ್ರತಂಡಕ್ಕೆ ರಘು ರಾಮನಕೊಪ್ಪ ಕೃತಜ್ಞತೆ ಸಲ್ಲಿಸಿದ್ದಾರೆ. ಇದಲ್ಲದೇ ಈ ತಂಡದಿಂದ ಇನ್ನು ಮುಂದೆ ಬಿಗ್ ಪ್ರಾಜೆಕ್ಟುಗಳು ಸೃಷ್ಟಿಯಾಗುವ ಭರವಸೆಯನ್ನೂ ಕೂಡಾ ಹೊರಹಾಕಿದ್ದಾರೆ.

     

    ತಾರಾ ಬಳಗ, ತಾಂತ್ರಿಕತೆ ಸೇರಿದಂತೆ ಎಲ್ಲ ದಿಕ್ಕಿನಲ್ಲಿಯೂ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ಭಿನ್ನವಾಗಿ ಮೂಡಿ ಬಂದಿವೆ ಎಂಬುದು ಚಿತ್ರತಂಡದ ಭರವಸೆ. ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ. ಅಮರ್, ಭಾವನಾ, ಮಾನಸಿ, ಮನೋಜ್ ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

  • ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಂತೃಪ್ತಿ ತಂದ ಚಿತ್ರ ಅಂತಾರೆ ನಿರ್ಮಾಪಕರು

    ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಂತೃಪ್ತಿ ತಂದ ಚಿತ್ರ ಅಂತಾರೆ ನಿರ್ಮಾಪಕರು

    ಯಾವುದೇ ಕಥೆಯೊಂದು ಸಿನಿಮಾ ರೂಪ ಧರಿಸಿ, ಪ್ರೇಕ್ಷಕರನ್ನು ಮುಖಾಮುಖಿಯಾಗೋ ಪ್ರಕ್ರಿಯೆಯ ಹಿಂದೆ ನಿರ್ಮಾಪಕರ ಪಾತ್ರ ಪ್ರಧಾನವಾಗಿರುತ್ತದೆ. ಅಷ್ಟಕ್ಕೂ ಸಿನಿಮಾ ಅನ್ನೋದೊಂದು ಟೀಮ್ ವರ್ಕ್. ಎಲ್ಲರ ಶ್ರಮ, ಪ್ರತಿಭೆಗಳ ಸಮ್ಮಿಲನದಿಂದ ಚಿತ್ರವೊಂದು ರೂಪುಗೊಳ್ಳುತ್ತದೆಂಬುದು ಸತ್ಯ. ಆದರೆ ನಿರ್ಮಾಪಕರ ಸಾಥ್ ಇಲ್ಲದೇ ಹೋದರೆ, ಅಂಥಾ ಕನಸೊಂದು ಸಾಕಾರಗೊಳ್ಳುವುದೇ ಕನಸಿನ ಮಾತಾಗುತ್ತದೆ. ಈ ನಿಟ್ಟಿನಲ್ಲಿ ನೋಡಹೋದರೆ, ಇದೀಗ ಚಿತ್ರೀಕರಣ ಮುಗಿಸಿಕೊಂಡಿರುವ, ಅರುಣ್ ಅಮುಕ್ತ (Arun Amukta) ನಿರ್ದೇಶನದ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ (Vidyarthi Vidyarthiniyare) ಚಿತ್ರದ ಮುಖ್ಯ ಶಕ್ತಿಯಂತಿರುವವರು ನಿರ್ಮಾಪಕರಾದ ಸುಬ್ರಮಣ್ಯ ಕುಕ್ಕೆ (Subramanya Kukke) ಮತ್ತು ಎ.ಸಿ ಶಿವಲಿಂಗೇಗೌಡ.

    ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಚಿತ್ರೀಕರಣ ಐವತ್ತು ದಿನಗಳ ಕಾಲ ಅವ್ಯಾಹತವಾಗಿ ನಡೆದಿದೆ. ಹಾಗೆ ಕುಂಬಳಕಾಯಿ ಒಡೆದಾದ ನಂತರದಲ್ಲಿ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳತ್ತ ಗಮನಹರಿಸಿದೆ. ಇದೇ ಹೊತ್ತಿನಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸುವ ಮೂಲಕ ಮಾಧ್ಯಮ ಪ್ರತಿನಿಧಿಗಳನ್ನು ಮುಖಾಮುಖಿಯಾಗಿದೆ. ಈ ಹೊತ್ತಿನಲ್ಲಿ ಸದರಿ ಸಿನಿಮಾದ ಪಾತ್ರಧಾರಿಗಳೆಲ್ಲ ಪಾಲ್ಗೊಂಡು ಲವಲವಿಕೆಯಿಂದ ಮಾತಾಡಿದ್ದಾರೆ. ಪ್ರಧಾನವಾಗಿ ನಿರ್ಮಾಪಕರಾದ ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ (Shivalingegowda) ಕೂಡಾ ನಿರ್ಮಾಪಕರಾಗಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

    ಸಾಮಾನ್ಯವಾಗಿ, ಹೊಸಬರ ತಂಡವೊಂದಕ್ಕೆ ಸಾಥ್ ಕೊಡಲು ಹೆಚ್ಚಿನ ನಿರ್ಮಾಪಕರು ಹಿಂದೇಟು ಹಾಕುತ್ತಾರೆ. ಆದರೆ, ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ನಿರ್ದೇಶಕ ಅರುಣ್ ಅಮುಕ್ತ ಹೇಳಿದ ಕಥೆ ಕೇಳಿ ಖುಷಿಗೊಂಡು ಒಪ್ಪಿಗೆ ಸೂಚಿಸಿದ್ದರಂತೆ. ಮುಖ್ಯಭೂಮಿಕೆಯಲ್ಲಿ ಹೊಸಬರಿದ್ದರೂ ಕೂಡಾ ಯಾವುದೇ ಅಳುಕಿಲ್ಲದೆ ಸಾಥ್ ಕೊಟ್ಟಿದ್ದರಂತೆ. ಇದೆಲ್ಲದಕ್ಕೂ ಕಾರಣ ಕಥೆಯ ಮೇಲಿನ ನಂಬಿಕೆ ಮತ್ತು ಅದನ್ನು ಎಲ್ಲರೂ ಬೆರಗಾಗುವಂತೆ ಅರುಣ್ ಅಮುಕ್ತ ಮಾಡುತ್ತಾರೆಂಬ ಭರವಸೆ ಎಂಬ ವಿಚಾರವನ್ನು ನಿರ್ಮಾಪಕರಿಬ್ಬರೂ ವ್ಯಕ್ತಪಡಿಸಿದ್ದಾರೆ. ಒಂದೇ ಆವೇಗದಲ್ಲಿ ಚಿತ್ರೀಕರಣ ಮುಗಿಸಿಕೊಂಡ ನಿರ್ದೇಶಕರು, ಕಲಾವಿದರು ಮತ್ತು ತಾಂತ್ರಿಕ ವರ್ಗಕ್ಕೆ ನಿರ್ಮಾಪಕರು ಭೇಷ್ ಅಂದಿದ್ದಾರೆ. ನಿಖರವಾಗಿ ಹೇಳಬೇಕೆಂದರೆ, ಒಂದೊಳ್ಳೆ ಸಿನಿಮಾ ಮಾಡಿರುವ ತುಂಬು ತೃಪ್ತಿ ಅವರ ಮಾತುಗಳಲ್ಲಿ ಸ್ಪಷ್ಟವಾಗಿ ಧ್ವನಿಸಿದೆ.

     

    ತಾರಾ ಬಳಗ, ತಾಂತ್ರಿಕತೆ ಸೇರಿದಂತೆ ಎಲ್ಲ ದಿಕ್ಕಿನಲ್ಲಿಯೂ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ಭಿನ್ನವಾಗಿ ಮೂಡಿ ಬಂದಿವೆ ಎಂಬುದು ಚಿತ್ರತಂಡದ ಭರವಸೆ. ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ. ಅಮರ್, ಭಾವನಾ, ಮಾನಸಿ, ಮನೋಜ್ ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

  • ಅಜರ್ ಪಾತ್ರ ತುಂಬಾ ವಿಶೇಷವಾಗಿದೆ : ನಟ ಪ್ರಣವ್

    ಅಜರ್ ಪಾತ್ರ ತುಂಬಾ ವಿಶೇಷವಾಗಿದೆ : ನಟ ಪ್ರಣವ್

    ಚಂದನ್ ಶೆಟ್ಟಿ (Chandan Shetty) ನಾಯಕನಾಗಿ ನಟಿಸಿರುವ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’  (Vidyarthi Vidyarthiniyare) ಚಿತ್ರವೀಗ ನಿರ್ಣಾಯಕ ಘಟ್ಟ ತಲುಪಿಕೊಂಡಿದೆ. ಬಹುಶಃ ಯಾರೂ ನಿರೀಕ್ಷಿಸಿರದ ವೇಗದಲ್ಲಿ ಈ ಸಿನಿಮಾವೀಗ ಚಿತ್ರೀಕರಣ ಮುಗಿಸಿಕೊಂಡಿದೆ. ಕುಂಬಳಕಾಯಿ ಒಡೆದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳತ್ತ ಹೊರಳಿಕೊಂಡಿರುವ ಚಿತ್ರತಂಡ ಪತ್ರಿಕಾಗೋಷ್ಠಿ ನಡೆಸಿದೆ. ಈ ವೇದಿಕೆಯಲ್ಲಿ ಚಿತ್ರೀಕರಣ ನಡೆಸಿದ ರೀತಿ, ಅದರಿಂದ ದಕ್ಕಿದ ಅನುಭವ, ಪಾತ್ರಗಳ ಆಯ್ಕೆ, ಅವುಗಳ ಗುಣಲಕ್ಷಣ ಮುಂತಾದ ಒಂದಷ್ಟು ಮುಖ್ಯ ವಿಚಾರಗಳನ್ನು ಹಂಚಿಕೊಳ್ಳಲಾಗಿದೆ.

    ಇದು ಅರುಣ್ ಅಮುಕ್ತ (Arun Amukta) ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಅರುಣ್ ಅತ್ಯಂತ ಜಾಣ್ಮೆಯಿಂದ, ಅಂದುಕೊಂಡಿದ್ದಕ್ಕಿಂತಲೂ ತುಸು ಬೇಗನೆ ಚಿತ್ರೀಕರಣ ಮುಗಿಸಿಕೊಂಡಿದ್ದಾರೆ. ಈ ಪತ್ರಿಕಾ ಗೋಷ್ಠಿಯ ಮೂಲಕ ಪಾತ್ರಗಳನ್ನು ಆಯಾ ಕಲಾವಿದರ ದೃಷ್ಟಿಕೋನದ ಮೂಲಕ ಪ್ರೇಕ್ಷಕರತ್ತ ದಾಟಿಸುವ ಪ್ರಯತ್ನ ಮಾಡಿದ್ದಾರೆ. ಇರದಲ್ಲಿ ಚಂದನ್ ಶೆಟ್ಟಿ ನಾಯಕನಾಗಿ ನಟಿಸಿದ್ದರೆ, ಮೂರು ಜೋಡಿಗಳು ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಅದರಲ್ಲೊಂದು ಪಾತ್ರವಾಗಿರುವವರು ಪ್ರಣವ್ (Pranav). ಈ ಬಗೆಗಿನ ಒಂದಷ್ಟು ವಿವರಗಳನ್ನು ಈ ಪತ್ರಿಕಾ ಗೋಷ್ಠಿಯಲ್ಲಿ ಪ್ರಣವ್ ಹಂಚಿಕೊಂಡಿದ್ದಾರೆ.

    ಪ್ರಣವ್ ಈ ಹಿಂದೆ ಒಂದಷ್ಟು ಸಿನಿಮಾಗಳಲ್ಲಿ ಪಾತ್ರಗಳನ್ನು ನಿರ್ವಹಿಸಿದ್ದರಂತೆ. ಆದರೆ, ಪೂರ್ಣ ಪ್ರಮಾಣದ ಪಾತ್ರವೊಂದು ಅವರ ಪಾಲಿಗೆ ಒಲಿದು ಬಂದಿರೋದು ಈ ಚಿತ್ರದ ಮೂಲಕವೇ. ಇಂಥಾದ್ದೊಂದು ಅವಕಾಶ ಕೊಟ್ಟ ನಿರ್ಮಾಪಕರುಗಳು ಮತ್ತು ನಿರ್ದೇಶಕರನ್ನು ಮೆಚ್ಚಿಕೊಳ್ಳುತ್ತಲೇ ಅವರ ತಮ್ಮ ಪಾತ್ರದ ಬಗ್ಗೆ ಒಂದಷ್ಟು ಮಾತಾಡಿದ್ದಾರೆ. ಅವರಿಲ್ಲಿ ಅಜರ್ ಎಂಬ ಕಾಲೇಜು ಹುಡುಗನ ಪಾತ್ರವನ್ನು ನಿರ್ವಹಿಸಿದ್ದಾರಂತೆ. ಆದರೆ ಗೌಪ್ಯತೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಅದರ ಗುಣಲಕ್ಷಣಗಳನ್ನು ಬಿಟ್ಟುಕೊಡದಂತೆ ಪ್ರಣವ್ ಜಾಣತನ ತೋರಿಸಿದ್ದಾರೆ. ಒಟ್ಟಾರೆಯಾಗಿ ನಾಯಕನಾಗುವ ಅವರ ಕನಸು ಈ ಮೂಲಕ ನನಸಾಗಿದೆ.

     

    ತಾರಾ ಬಳಗ, ತಾಂತ್ರಿಕತೆ ಸೇರಿದಂತೆ ಎಲ್ಲ ದಿಕ್ಕಿನಲ್ಲಿಯೂ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ಭಿನ್ನವಾಗಿ ಮೂಡಿ ಬಂದಿವೆ ಎಂಬುದು ಚಿತ್ರತಂಡದ ಭರವಸೆ. ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ. ಅಮರ್, ಭಾವನಾ, ಮಾನಸಿ, ಮನೋಜ್ ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.