Tag: Chandan Shetty

  • ಚಂದನ್, ನಿವೇದಿತಾ ಮದ್ವೆ ದಿನಾಂಕ ಫಿಕ್ಸ್

    ಚಂದನ್, ನಿವೇದಿತಾ ಮದ್ವೆ ದಿನಾಂಕ ಫಿಕ್ಸ್

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್- 5’ ವಿನ್ನರ್ ಕನ್ನಡದ ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ಬಾರ್ಬಿ ಡಾಲ್ ನಿವೇದಿತಾ ಗೌಡ ಮದುವೆ ದಿನಾಂಕ ಫಿಕ್ಸ್ ಆಗಿದೆ.

    ಇತ್ತೀಚೆಗೆ ಸಂದರ್ಶನವೊಂದಲ್ಲಿ ಮಾತನಾಡಿದ ನಿವೇದಿತಾ ಗೌಡ ತಮ್ಮ ಮದುವೆ ದಿನಾಂಕವನ್ನು ಅಧಿಕೃತವಾಗಿ ತಿಳಿಸಿದ್ದಾರೆ. ಚಂದನ್ ಹಾಗೂ ನಿವೇದಿತಾ ಮುಂದಿನ ತಿಂಗಳು ಫೆಬ್ರವರಿ 25 ಮತ್ತು 26 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇವರ ಮದುವೆ ಮೈಸೂರಿನ ಕನ್ವೆನ್ಶನ್ ಹಾಲ್‍ನಲ್ಲಿ ನಡೆಯಲಿದೆ. ಹೀಗಾಗಿ ಈಗಿನಿಂದಲೇ ಎರಡು ಮನೆಯವರು ಮದುವೆಯ ತಯಾರಿ ನಡೆಸುತ್ತಿದ್ದಾರೆ.

    ಮದುವೆ ತಯಾರಿ ನಡುವೆಯೂ ನಿವೇದಿತಾ ಗೌಡ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಅಂದರೆ ನಿವೇದಿತಾ ಗೌಡಗೆ ಉದ್ಯೋಗ ಸಿಕ್ಕಿದೆ. ಈ ಖುಷಿಯನ್ನು ಇನ್‍ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.

    ನನಗೆ ಏರ್‌ಪೋರ್ಸ್‌ನಲ್ಲಿ ಕೆಲಸ ಮಾಡಬೇಕೆಂಬ ಆಸೆ ಇತ್ತು. ಈಗ ನಾನು ಇಷ್ಟಪಟ್ಟ ಕೆಲಸವೇ ಸಿಕ್ಕಿದೆ. ಏರ್‌ಪೋರ್ಟಿನಲ್ಲಿ ಕೆಲಸ ಮಾಡಲು ತುಂಬಾ ತಾಳ್ಮೆ, ಫ್ಯಾಶನ್ ಮತ್ತು ಆಸಕ್ತಿ ಇರಬೇಕು. ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಸಿಕ್ಕಿದ್ದು, ಆಪರೇಶನ್ ಅಸಿಸ್ಟಂಟ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ತಮ್ಮ ಕೆಲಸದ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

    ನನ್ನ ಮತ್ತು ಚಂದನ್ ಇಷ್ಟದಂತೆ ಮದುವೆ ನಡೆಯುತ್ತಿದೆ. ಸದ್ಯಕ್ಕೆ ಇಬ್ಬರು ಕೆಲಸದಲ್ಲಿ ಬ್ಯುಸಿಯಿದ್ದೇವೆ. ಮನೆಯವರು ಮದುವೆ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ತಮ್ಮ ಮದುವೆಯ ತಯಾರಿಯ ಬಗ್ಗೆ ನಿವೇದಿತಾ ಹೇಳಿದ್ದಾರೆ.

    ಅಕ್ಟೋಬರ್ 21ರಂದು ಚಂದನ್ ಶೆಟ್ಟಿ ತಮ್ಮ ಆತ್ಮೀಯ ಗೆಳತಿ ಬಾರ್ಬಿ ಗರ್ಲ್ ನಿವೇದಿತಾ ಗೌಡ ಜೊತೆ ಮೈಸೂರಿನ ಖಾಸಗಿ ಹೋಟೆಲಿನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಶುಭ ಸಮಾರಂಭದಲ್ಲಿ ಎರಡೂ ಕುಟುಂಬದ ಸದಸ್ಯರು ಹಾಗೂ ಆಪ್ತರಷ್ಟೇ ಭಾಗಿಯಾಗಿದ್ದರು.

    ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ಅಭಿಮಾನಿಗಳ ಮುಂದೆ ಗೆಳತಿ ನಿವೇದಿತಾರಿಗೆ ಪ್ರಪೋಸ್ ಮಾಡಿದ್ದರು. ವೇದಿಕೆಯಲ್ಲಿಯೇ ರಿಂಗ್ ತೊಡಿಸಿ ತಮ್ಮ ಪ್ರೇಮ ವಿಚಾರವನ್ನು ಚಂದನ್ ಅಧಿಕೃತವಾಗಿ ಹೇಳಿಕೊಂಡಿದ್ದರು.

    ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ನಿವೇದಿತಾ ಮತ್ತು ಚಂದನ್ ಪ್ರೇಮ ಜೋಡಿಗಳ ರೀತಿಯಲ್ಲಿಯೇ ಬಿಂಬಿತವಾಗಿದ್ದರು. ರಿಯಾಲಿಟಿ ಶೋ ಬಳಿಕ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಹೇಳಿದ್ದರು. ಕಳೆದ ಎರಡು ವರ್ಷಗಳಿಂದ ಚಂದನ್ ಮತ್ತು ನಿವೇದಿತಾ ನಡುವೆ ಪ್ರೇಮಾಂಕುರವಾಗಿದೆ ಎಂಬಿತ್ಯಾದಿ ಸುದ್ದಿಗಳು ಹರಿದಾಡಿದ್ದವು. ಆದ್ರೆ ಎಲ್ಲಿಯೂ ಚಂದನ್ ಮತ್ತು ನಿವೇದಿತಾ ತಮ್ಮ ಸಂಬಂಧದ ಬಗ್ಗೆ ಸ್ಪಷ್ಟವಾಗಿ ಹೇಳಿಕೊಂಡಿರಲಿಲ್ಲ. ಕೊನೆಗೆ ದಸರಾ ಹಬ್ಬದಂದು ತಮ್ಮ ಪ್ರೀತಿಯನ್ನು ಚಂದನ್ ಹೇಳಿಕೊಂಡಿದ್ದರು.

  • ಭಾವಿ ಪತ್ನಿಗೆ ಕೆನಡಾದಿಂದ ಚಂದನ್ ಸರ್ಪ್ರೈಸ್

    ಭಾವಿ ಪತ್ನಿಗೆ ಕೆನಡಾದಿಂದ ಚಂದನ್ ಸರ್ಪ್ರೈಸ್

    ಬೆಂಗಳೂರು: ‘ಬಿಗ್‍ಬಾಸ್’ ವಿನ್ನರ್ ಚಂದನ್ ಶೆಟ್ಟಿ ತಮ್ಮ ಭಾವಿ ಪತ್ನಿ ನಿವೇದಿತಾ ಗೌಡಗೆ ಕೆನಡಾದಿಂದಲೇ ಸರ್ಪ್ರೈಸ್ ನೀಡಿದ್ದಾರೆ.

    ಹೌದು. ಈ ಬಾರಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಒಟ್ಟಿಗೆ ಹೊಸ ವರ್ಷವನ್ನು ಆಚರಣೆ ಮಾಡಿಲ್ಲ. ಯಾಕೆಂದರೆ ಚಂದನ್ ಕಾರ್ಯಕ್ರಮವೊಂದಕ್ಕೆ ಕೆನಡಾಗೆ ಹೋಗಿದ್ದಾರೆ. ಹೀಗಾಗಿ ಅಲ್ಲಿಂದಲೇ ನಿವೇದಿತಾಗೆ  ಒಂದು ವಿಡಿಯೋ ಮಾಡಿ ಸರ್ಪ್ರೈಸ್ ನೀಡಿದ್ದಾರೆ. ಇದನ್ನೂ ಓದಿ: ಮದುವೆ ತಯಾರಿಯಲ್ಲಿ ಚಂದನ್- ನಿವೇದಿತಾ

    ಚಂದನ್ ಕೆನಡಾದಲ್ಲಿ ಸ್ನೋ ಏಂಜಲ್ ತಯಾರಿಸಿ, ಆ ವಿಡಿಯೋನ ನಿವೇದಿತಾ ಗೌಡಗೆ ಕಳುಹಿಸುವ ಮೂಲಕ ಸರ್ಪ್ರೈಸ್ ಕೊಟ್ಟಿದ್ದಾರೆ. ತನ್ನ ಭಾವಿ ಪತಿ ನೀಡಿರುವ ಸರ್ಪ್ರೈಸ್ ಅನ್ನು ನಿವೇದಿತಾ ಗೌಡ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಜೊತೆಗೆ “ಇದು ತುಂಬಾ ಕ್ಯೂಟ್ ಆಗಿದೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. 2020ರ ಹೊಸ ವರ್ಷದಂದು ನಿನ್ನನ್ನು ತುಂಬಾ ಮಿಸ್ ಮಾಡಿಕೊಂಡೆ. ಹೊಸ ವರ್ಷದ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಎಲ್ಲರಿಗೂ ಹೊಸ ವರ್ಷದ ಶುಭಾಶಯವನ್ನು ಕೋರಿದ್ದಾರೆ.

    ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ‘ಬಿಗ್‍ಬಾಸ್’ ಮನೆಯೊಳಗೆ ಭೇಟಿಯಾಗಿದ್ದು, ಇಬ್ಬರು ಸ್ನೇಹಿತರಾಗಿದ್ದರು. ಇಬ್ಬರ ಸ್ನೇಹ ಪ್ರೀತಿಯಾಗಿ ಬದಲಾಗಿದ್ದು, ಚಂದನ್ ಶೆಟ್ಟಿ ಮೈಸೂರು ಯುವ ದಸರಾ ವೇದಿಕೆ ಮೇಲೆ ನಿವೇದಿತಾ ಗೌಡ ಕೈಬೆರಳಿಗೆ ಉಂಗುರ ತೊಡಿಸುವ ಮೂಲಕ ಎಲ್ಲರ ಮುಂದೆಯೇ ಪ್ರಪೋಸ್ ಮಾಡಿದ್ದರು. ಬಳಿಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಿಶ್ಚಿತಾರ್ಥ ಸಮಾರಂಭ ಕೂಡ ಅದ್ಧೂರಿಯಾಗಿ ನಡೆದಿದೆ. ಸದ್ಯದಲ್ಲೇ ಇಬ್ಬರು ಮದುವೆಯಾಗಲಿದ್ದಾರೆ.

    https://www.instagram.com/p/B6xk92HJd9E/

  • ಚಂದನ್ ಶೆಟ್ಟಿ ಕಂಠಸಿರಿಯಲ್ಲಿ ‘ರೌಡಿ ಬೇಬಿ’ ಹಾಡು

    ಚಂದನ್ ಶೆಟ್ಟಿ ಕಂಠಸಿರಿಯಲ್ಲಿ ‘ರೌಡಿ ಬೇಬಿ’ ಹಾಡು

    ಸುಮುಖ ಎಂಟರ್ ಟೈನರ್ಸ್ ಹಾಗೂ ವಾರ್ ಫುಟ್ ಸ್ಟುಡಿಯೋಸ್ ಲಾಂಛನದಲ್ಲಿ ಎಸ್.ಎಸ್. ರವಿಗೌಡ ಹಾಗೂ ಶ್ಯಾಮಲಾ ರೆಡ್ಡಿ ಅವರು ನಿರ್ಮಿಸುತ್ತಿರುವ ‘ರೌಡಿ ಬೇಬಿ` ಚಿತ್ರಕ್ಕಾಗಿ ಡಾ. ವಿ.ನಾಗೇಂದ್ರ ಪ್ರಸಾದ್ ಅವರು ಬರೆದಿರುವ ‘ಸಾಗು ಮುಂದೆ ಸಾಗು ಈ ಭೂಮಿ ದೊಡ್ಡದು’ ಹಾಡನ್ನು ಖ್ಯಾತ ಗಾಯಕ ಚಂದನ್ ಶೆಟ್ಟಿ ಹಾಡಿದ್ದಾರೆ. ಅರ್ಮಾನ್ ಸಂಗೀತ ನೀಡಿದ್ದಾರೆ.

    ರೆಡ್ಡಿ ಕೃಷ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಮಂಗಳೂರು, ಕೇರಳ, ಬೆಂಗಳೂರು ಮುಂತಾದ ಕಡೆ ಮೂವತ್ತು ದಿನಗಳ ಚಿತ್ರೀಕರಣ ನಡೆದಿದೆ. ಈ ಹಿಂದೆ ‘ಪ್ರಯಾಣಿಕರ ಗಮನಕ್ಕೆ’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ರೆಡ್ಡಿ ಕೃಷ್ಣ ಅವರು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

    ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಡಾ. ವಿ.ನಾಗೇಂದ್ರ ಪ್ರಸಾದ್, ಸಿಂಪಲ್ ಸುನಿ, ಚೇತನ್ ಕುಮಾರ್ ಕಿನಾಲ್ ರಾಜ್ ಬರೆದಿದ್ದಾರೆ. ಸಾಮ್ರಾಟ್ ಛಾಯಾಗ್ರಹಣ, ಪ್ರಮೋದ್ ಸೋಮರಾಜ್ ಸಂಕಲನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಎರಡು ಸಾಹಸ ಸನ್ನಿವೇಶಗಳಿದ್ದು, ಚಂದ್ರು ಸಾಹಸ ನಿರ್ದೇಶನ ಮಾಡಿದ್ದಾರೆ. ಚೇತನ್ ಕುಮಾರ್ ಸಂಭಾಷಣೆ ಬರೆದಿದ್ದಾರೆ.

    ನಿರ್ಮಾಪಕ ರವಿಗೌಡ ಅವರು ಈ ಚಿತ್ರದ ನಾಯಕರಾಗಿ ನಟಿಸಿದ್ದು, ಹೀರಕೌರ್, ದಿವ್ಯರಾವ್, ಅರುಣ ಬಾಲರಾಜ್, ಅಮಿತ್, ಕೆಂಪೇಗೌಡ, ಶ್ರೀನಾಥ್ ವಸಿಷ್ಠ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಚಂದನ್ ಶೆಟ್ಟಿಗೆ ಬ್ಯಾನ್ ವಾರ್ನಿಂಗ್ ಕೊಟ್ಟ ಎಸ್ಪಿ

    ಚಂದನ್ ಶೆಟ್ಟಿಗೆ ಬ್ಯಾನ್ ವಾರ್ನಿಂಗ್ ಕೊಟ್ಟ ಎಸ್ಪಿ

    ಮೈಸೂರು: ಯುವ ದಸರಾ ವೇದಿಕೆಯಲ್ಲಿ ಗಾಯಕ ಚಂದನ್ ಶೆಟ್ಟಿ ನಿವೇದಿತಾ ಗೌಡಾಗೆ ಪ್ರಪೋಸ್ ಮಾಡಿದ ಪ್ರಕರಣದ ಬಗ್ಗೆ ಎಸ್‌ಪಿ ರಿಷ್ಯಂತ್ ಚಂದನ್ ಶೆಟ್ಟಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಎಸ್‌ಪಿ ಅವರು, ಈ ರೀತಿ ವರ್ತನೆ ಮರುಕಳಿಸಿದರೆ ಸರ್ಕಾರಿ ಕಾರ್ಯಕ್ರಮದಿಂದ ನಿಮ್ಮನ್ನು ಬ್ಯಾನ್ ಮಾಡುತ್ತೇವೆ ಎಂದು ಚಂದನ್ ಶೆಟ್ಟಿಗೆ ಎಚ್ಚರಿಕೆ ನೀಡಿದ್ದೇವೆ. ಈ ಸಂಬಂಧ ಗಂಭೀರವಲ್ಲದ ಅಪರಾಧ(ಎನ್‌ಸಿ) ಕೂಡ ಮಾಡಲಾಗಿದೆ, ಅದು ಕೂಡ ವಿಚಾರಣೆ ನಡೆಯುತ್ತದೆ. ಚಂದನ್ ಶೆಟ್ಟಿ ಮಾತ್ರವಲ್ಲ ಸರ್ಕಾರಿ ವೇದಿಕೆಯನ್ನು ಖಾಸಗಿ ಕ್ಷಣಕ್ಕೆ ಬಳಸಿಕೊಳ್ಳುವ ಎಲ್ಲಾ ಕಲಾವಿದರಿಗೂ ಈ ಎಚ್ಚರಿಕೆ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಚಂದನ್- ನಿವೇದಿತಾ ಅದ್ಧೂರಿ ನಿಶ್ಚಿತಾರ್ಥ

    ಚಂದನ್ ಪ್ರಪೋಸ್ ಪ್ರಕರಣದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ವಿಚಾರ ಜಿಲ್ಲಾಧಿಕಾರಿಗಳಿಗೆ ಬಿಟ್ಟಿದ್ದೇವೆ. ಅವರು ಎಲ್ಲವನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಎಸ್‌ಪಿ ಸ್ಪಷ್ಟಪಡಿಸಿದರು.

    ನಾನು ಯಾವುದೇ ಕೆಟ್ಟ ಉದ್ದೇಶದಿಂದ ಆ ರೀತಿ ಮಾಡಿಲ್ಲ. ವೇದಿಕೆಯಲ್ಲಿ ನಾನು ಮದುವೆ ಅಥವಾ ಎಂಗೆಜ್‌ಮೆಂಟ್ ಆಗಿಲ್ಲ. ವೇದಿಕೆ ಮೇಲೆ ಜನರ ಮುಂದೆ ನಿವೇದಿತಾ ಅವರ ಗಮನ ಸೆಳೆಯಲು ಪ್ರಪೋಸ್ ಮಾಡಿದೆ. ಅದರಲ್ಲಿ ಬೇರೆ ಉದ್ದೇಶ ಇರಲಿಲ್ಲ. ಜನರು ಕೂಡ ಆರ್ಕಷಿತರಾಗುತ್ತಾರೆ ಎಂದು ಈ ರೀತಿ ನಡೆದುಕೊಂಡೆ ಎಂದು ಚಂದನ್ ವಿವರಣೆ ನೀಡಿದ್ದಾರೆ. ಎಂದು ಎಸ್‌ಪಿ ತಿಳಿಸಿದ್ದಾರೆ. ಇದನ್ನೂ ಓದಿ:ಟೀಕಾಕಾರರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

    ನಡೆದಿದ್ದೇನು?
    ಯುವ ದಸರಾ ಕಾರ್ಯಕ್ರಮದಲ್ಲಿ ಚಂದನ್ ನಿವೇದಿತಾ ಪೋಷಕರು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮ ನೀಡಿ ಜನರನ್ನು ಮನರಂಜಿಸುತ್ತಿದ್ದ ಚಂದನ್ ವೇದಿಕೆಯಲ್ಲೇ ನಿವೇದಿತಾರಿಗೆ ಮಂಡಿಯೂರಿ ಪ್ರಪೋಸ್ ಮಾಡಿದ್ದರು, ಅಲ್ಲದೇ ಉಂಗುರ ಕೂಡ ತೊಡಿಸಿದ್ದರು. ಈ ವೇಳೆ ನೆರೆದಿದ್ದ ಮಂದಿ ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟುವ ಮೂಲಕ ಇಬ್ಬರನ್ನೂ ಅಭಿನಂದಿಸಿದ್ದರು. ಇದನ್ನೂ ಓದಿ:ತಪ್ಪಾಗಿದ್ದರೆ ಕ್ಷಮೆ ಇರಲಿ, ಸರ್ಪ್ರೈಸ್ ಕೊಡಲು ಈ ರೀತಿ ಮಾಡಿದೆ: ಚಂದನ್ ಶೆಟ್ಟಿ

    ಈ ಬೆನ್ನಲ್ಲೇ ಪ್ರಪೋಸ್ ಮಾಡಿರುವ ವಿಚಾರ ಭಾರೀ ವಿವಾದಕ್ಕೀಡಾಯಿತು. ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ಇದು ಬೇಡವಾಗಿತ್ತು ಎಂದು ಅನೇಕರು ಖಂಡಿಸಿದ್ದರು. ಇನ್ನೂ ಕೆಲವರು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು. ಈ ಸಂಬಂಧ ಪ್ರತಿಕ್ರಿಯಿಸಿದ ಚಂದನ್, ನಾನು ಮಾಡಿರುವುದು ತಪ್ಪಾಗಿದ್ದರೆ ಕ್ಷಮಿಸಿ ಬಿಡಿ ಅಂದಿದ್ದರು. ಇತ್ತ ನಾವು ವೇದಿಕೆಯಲ್ಲಿ ಮದುವೆಯಾಗಿಲ್ಲ. ಒಂದು ವೇಳೆ ನಾವು ಅಲ್ಲಿ ಮದುವೆಯಾಗುತ್ತಿದ್ದರೆ ಅದನ್ನು ನಾನು ತಪ್ಪು ಅಂತ ಒಪ್ಪಿಕೊಳ್ಳುತ್ತಿದ್ದೆ ಎಂದು ಸಮರ್ಥಿಸಿಕೊಂಡಿದ್ದರು.

    ಆದರೆ ಮೈಸೂರಿನ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಮೇಲೆ ದೂರು ದಾಖಲು ಮಾಡಿದ್ದರು. ಸರ್ಕಾರಿ ವೇದಿಕೆ ದುರ್ಬಳಕೆ, ಸಾರ್ವಜನಿಕ ಸ್ಥಳದಲ್ಲಿ ಅನುಚಿತ ವರ್ತನೆ ಕುರಿತು ಚಂದನ್ ಮೇಲೆ ಕೇಸಾದರೆ, ನಿವೇದಿತಾರಿಂದ ಅತಿಕ್ರಮ ಪ್ರವೇಶ, ಸಂಚುರೂಪಿಸಿ ಪ್ರಚಾರ ಪಡೆದ ಆರೋಪಗಳ ಮೇಲೆ ದೂರು ದಾಖಲು ಮಾಡಲಾಗಿತ್ತು. ಇದನ್ನೂ ಓದಿ:ವೇದಿಕೆ ಮೇಲೆ ಮದುವೆ ಆಗಿದ್ರೆ ತಪ್ಪು ಅಂತ ಒಪ್ಪಿಕೊಳ್ಳುತ್ತಿದ್ದೆ: ನಿವೇದಿತಾ ಗೌಡ

    ಸರ್ಕಾರಿ ಕಾರ್ಯಕ್ರಮವನ್ನು ತಪ್ಪಾಗಿ ಬಳಸಿಕೊಂಡಿದ್ದಕ್ಕೆ ಚಂದನ್ ಶೆಟ್ಟಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಮೋಸಿನ್ ಖಾನ್ ಆಗ್ರಹಿಸಿದ್ದರು. ಮೈಸೂರು ಯೂತ್ ಕಾಂಗ್ರೆಸ್, ಕರ್ನಾಟಕ ಪ್ರಜಾಪಾರ್ಟಿ, ಸಾಮಾಜಿಕ ಹೋರಾಟಗಾರ ಗಂಗರಾಜುರಿಂದ ದೂರುಗಳು ದಾಖಲಾಗಿದ್ದು, ಚಂದನ್ ಶೆಟ್ಟಿ, ನಿವೇದಿತಾ ಮೇಲೆ ದೂರುಗಳ ಸಂಖ್ಯೆ ಹೆಚ್ಚಾಗಿತ್ತು.

  • ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿದ ಚಂದನ್ ಶೆಟ್ಟಿ

    ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿದ ಚಂದನ್ ಶೆಟ್ಟಿ

    ಕೊಪ್ಪಳ: ರ‍್ಯಾಪರ್ ಹಾಗೂ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿದ್ದಾರೆ.

    ಚಂದನ್ ಶೆಟ್ಟಿ ಹೊಸಪೇಟೆಯಲ್ಲಿ ನೂತನ ಸಿನಿಮಾ ಪ್ರೊಡಕ್ಷನ್ ಹೌಸ್ ಓಪನಿಂಗ್‍ಗೆ ಬಂದಿದ್ದರು. ಈ ವೇಳೆ ಅವರು ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಹನುಮ ಜನಿಸಿದ ನಾಡು ಎಂದೇ ಪ್ರಖ್ಯಾತಿ ಪಡೆದಿರುವ ಅಂಜನಾದ್ರಿ ಬೆಟ್ಟಕ್ಕೆ ಒಟ್ಟು 575 ಮೆಟ್ಟಿಲುಗಳಿದೆ. ಚಂದನ್ ಈ ಬೆಟ್ಟ ಹತ್ತಿ ಹನುಮನ ದರ್ಶನ ಪಡೆದಿದ್ದಾರೆ.

    ಕಳೆದ ತಿಂಗಳಷ್ಟೇ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಕೂಡ ಅಂಜನಾದ್ರಿ ಬೆಟ್ಟಗೆ ಭೇಟಿ ನೀಡಿ ಹನುಮನ ದರ್ಶನ ಪಡೆದಿದ್ದರು. ಅಂಜನಾದ್ರಿ ಬೆಟ್ಟಕ್ಕೆ ಈ ಹಿಂದೆ ಪ್ರಮುಖ ರಾಜಕಾರಣಿಗಳು ಹಾಗೂ ಸಿನಿಮಾ ಕಲಾವಿದರು ಗಳು ಭೇಟಿ ನೀಡಿದ್ದರು.

    ಸೋಮವಾರ ಚಂದನ್ ಶೆಟ್ಟಿ ತಮ್ಮ ಆತ್ಮೀಯ ಗೆಳತಿ ಬಾರ್ಬಿ ಗರ್ಲ್ ನಿವೇದಿತಾ ಗೌಡ ಜೊತೆ ಮೈಸೂರಿನ ಖಾಸಗಿ ಹೋಟೆಲಿನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಶುಭ ಸಮಾರಂಭದಲ್ಲಿ ಎರಡೂ ಕುಟುಂಬದ ಸದಸ್ಯರು ಹಾಗೂ ಆಪ್ತರಷ್ಟೇ ಭಾಗಿಯಾಗಿದ್ದರು.

    ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ಅಭಿಮಾನಿಗಳ ಮುಂದೆ ಗೆಳತಿ ನಿವೇದಿತಾರಿಗೆ ಪ್ರಪೋಸ್ ಮಾಡಿದ್ದರು. ವೇದಿಕೆಯಲ್ಲಿಯೇ ರಿಂಗ್ ತೊಡಿಸಿ ತಮ್ಮ ಪ್ರೇಮ ವಿಚಾರವನ್ನು ಚಂದನ್ ಅಧಿಕೃತವಾಗಿ ಹೇಳಿಕೊಂಡಿದ್ದರು. ಸೋಮವಾರ ಚಂದನ್, ನಿವೇದಿತಾಗೆ ಮತ್ತೊಮ್ಮೆ ರಿಂಗ್ ತೊಡಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

  • ಚಂದನ್- ನಿವೇದಿತಾ ಅದ್ಧೂರಿ ನಿಶ್ಚಿತಾರ್ಥ

    ಚಂದನ್- ನಿವೇದಿತಾ ಅದ್ಧೂರಿ ನಿಶ್ಚಿತಾರ್ಥ

    ಮೈಸೂರು: ಗಾಯಕ ಚಂದನ್ ಶೆಟ್ಟಿ ಮತ್ತು ಬಾರ್ಬಿ ಗರ್ಲ್  ನಿವೇದಿತಾ ಗೌಡ ನಿಶ್ವಿತಾರ್ಥ ಇಂದು ಮೈಸೂರಿನ ಖಾಸಗಿ ಹೋಟೆಲಿನಲ್ಲಿ ಅದ್ಧೂರಿಯಾಗಿ ನಡೆದಿದೆ.

    ಈ ಶುಭಸಮಾರಂಭದಲ್ಲಿ ಎರಡೂ ಕುಟುಂಬದ ಸದಸ್ಯರು ಹಾಗೂ ಆಪ್ತರಷ್ಟೇ ಭಾಗಿಯಾಗಿದ್ದರು. ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ಅಭಿಮಾನಿಗಳ ಮುಂದೆ ಗೆಳತಿ ನಿವೇದಿತಾರಿಗೆ ಪ್ರಪೋಸ್ ಮಾಡಿದ್ದರು. ವೇದಿಕೆಯಲ್ಲಿಯೇ ರಿಂಗ್ ತೊಡಿಸಿ ತಮ್ಮ ಪ್ರೇಮ ವಿಚಾರವನ್ನು ಚಂದನ್ ಅಧಿಕೃತವಾಗಿ ಹೇಳಿಕೊಂಡಿದ್ದರು. ಇದೀಗ ಚಂದನ್, ನಿವೇದಿತಾಗೆ ಮತ್ತೊಮ್ಮೆ ರಿಂಗ್ ತೊಡಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ನಿವೇದಿತಾ ಮತ್ತು ಚಂದನ್ ಪ್ರೇಮ ಜೋಡಿಗಳ ರೀತಿಯಲ್ಲಿಯೇ ಬಿಂಬಿತವಾಗಿದ್ದರು. ರಿಯಾಲಿಟಿ ಶೋ ಬಳಿಕ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಹೇಳಿಕೊಂಡು ಬರುತ್ತಿದ್ದರು. ಈ ಮಧ್ಯೆ ಕಳೆದ ಎರಡು ವರ್ಷಗಳಿಂದ ಚಂದನ್ ಮತ್ತು ನಿವೇದಿತಾ ನಡುವೆ ಪ್ರೇಮಾಂಕುರವಾಗಿದೆ ಎಂಬಿತ್ಯಾದಿ ಸುದ್ದಿಗಳು ಹರಿದಾಡಿದ್ದವು. ಆದರೆ ಚಂದನ್ ನಿವೇದಿತಾ ಎಲ್ಲಿಯೂ ತಮ್ಮ ಸಂಬಂಧದ ಬಗ್ಗೆ ಸ್ಪಷ್ಟವಾಗಿ ಹೇಳಿಕೊಂಡಿರಲಿಲ್ಲ.

    ಯುವ ದಸರಾದಲ್ಲಿ ಚಂದನ್ ರಿಂಗ್ ತೊಡಿಸುವ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು. ಸಾರ್ವಜನಿಕ ವೇದಿಕೆಯಲ್ಲಿ ಈ ರೀತಿ ಪ್ರೇಮ ನಿವೇದನೆ ಸಲ್ಲಿಸಿದ್ದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ನಡೆದಿದ್ದವು.

  • ಸೋಮವಾರ ಚಂದನ್ ಶೆಟ್ಟಿ-ನಿವೇದಿತಾ ಗೌಡ ನಿಶ್ಚಿತಾರ್ಥ

    ಸೋಮವಾರ ಚಂದನ್ ಶೆಟ್ಟಿ-ನಿವೇದಿತಾ ಗೌಡ ನಿಶ್ಚಿತಾರ್ಥ

    ಬೆಂಗಳೂರು: ಗಾಯಕ ಚಂದನ್ ಶೆಟ್ಟಿ ಮತ್ತು ಬಾರ್ಬಿ ನಿವೇದಿತಾ ಗೌಡ ನಿಶ್ವಿತಾರ್ಥ ಸೋಮವಾರ ಮೈಸೂರಿನಲ್ಲಿ ನಡೆಯಲಿದೆ.

    ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಿಶ್ಚಿತಾರ್ಥ ನಡೆಯಲಿದ್ದು, ಕುಟುಂಬದ ಆಪ್ತರು ಮಾತ್ರ ಭಾಗಿಯಾಗಲಿದ್ದಾರೆ. ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ಅಭಿಮಾನಿಗಳ ಮುಂದೆ ಗೆಳತಿ ನಿವೇದಿತಾರಿಗೆ ಪ್ರಪೋಸ್ ಮಾಡಿದ್ದರು. ವೇದಿಕೆಯಲ್ಲಿಯೇ ರಿಂಗ್ ತೊಡಿಸಿ ತಮ್ಮ ಪ್ರೇಮ ವಿಚಾರವನ್ನು ಚಂದನ್ ಅಧಿಕೃತವಾಗಿ ಹೇಳಿಕೊಂಡಿದ್ದರು. ಇದನ್ನೂ ಓದಿ: ಪ್ರೀತಿ ಒಪ್ಪಿಕೊಂಡ ಗೊಂಬೆಗೆ ಥ್ಯಾಂಕ್ಸ್ ಹೇಳಿದ ಚಂದನ್ ಶೆಟ್ಟಿ

    ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ನಿವೇದಿತಾ ಮತ್ತು ಚಂದನ್ ಪ್ರೇಮ ಜೋಡಿಗಳ ರೀತಿಯಲ್ಲಿಯೇ ಬಿಂಬಿತವಾಗಿದ್ದರು. ರಿಯಾಲಿಟಿ ಶೋ ಬಳಿಕ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಅಂತಾ ಹೇಳಿದ್ದರು. ಕಳೆದ ಎರಡು ವರ್ಷಗಳಿಂದ ಚಂದನ್ ಮತ್ತು ನಿವೇದಿತಾ ನಡುವೆ ಪ್ರೇಮಾಂಕುರವಾಗಿದೆ ಎಂಬಿತ್ಯಾದಿ ಸುದ್ದಿಗಳು ಹರಿದಾಡಿದ್ದವು. ಆದ್ರೆ ಎಲ್ಲಿಯೂ ಚಂದನ್ ಮತ್ತು ನಿವೇದಿತಾ ತಮ್ಮ ಸಂಬಂಧದ ಬಗ್ಗೆ ಸ್ಪಷ್ಟವಾಗಿ ಹೇಳಿಕೊಂಡಿರಲಿಲ್ಲ. ಇದನ್ನೂ ಓದಿ:   ಚಂದನ್ ಶೆಟ್ಟಿಯನ್ನು ಮಹಾಪರಾಧ ಮಾಡಿದವನಂತೆ ಕಾಣೋದು ಸಾಕು: ಪ್ರತಾಪ್ ಸಿಂಹ

    ಯುವ ದಸರಾದಲ್ಲಿ ಚಂದನ್ ರಿಂಗ್ ತೊಡಿಸುವ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು. ಸಾರ್ವಜನಿಕ ವೇದಿಕೆಯಲ್ಲಿ ಈ ರೀತಿ ಪ್ರೇಮ ನಿವೇದನೆ ಸಲ್ಲಿಸಿದ್ದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ನಡೆದಿದ್ದವು. ಇದನ್ನೂ ಓದಿ: ತಪ್ಪಾಗಿದ್ದರೆ ಕ್ಷಮೆ ಇರಲಿ, ಸರ್ಪ್ರೈಸ್ ಕೊಡಲು ಈ ರೀತಿ ಮಾಡಿದೆ: ಚಂದನ್ ಶೆಟ್ಟಿ

  • ಚಂದನ್-ನಿವೇದಿತಾ ಪ್ರೀತಿ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ

    ಚಂದನ್-ನಿವೇದಿತಾ ಪ್ರೀತಿ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕನ್ನಡ ರ‍್ಯಾಪರ್, ಬಿಗ್‍ಬಾಸ್ ವಿಜೇತ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಪ್ರೀತಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

    ಬಿಗ್ ಬಾಸ್ ಶೋ ಹಿನ್ನೆಲೆಯಲ್ಲಿ ಗುರುವಾರ ಖಾಸಗಿ ವಾಹಿನಿ ಸುದ್ದಿಗೋಷ್ಠಿಯನ್ನು ಆಯೋಜಿಸಿತ್ತು. ಈ ವೇಳೆ ಸುದೀಪ್ ಅವರಿಗೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಪ್ರೀತಿ ಬಗ್ಗೆ ಪ್ರಶ್ನಿಸಲಾಯಿತು. ಆಗ ಸುದೀಪ್, ಇದು ಬಿಗ್ ಬಾಸ್‍ನಿಂದ ನಡೆದಿರುವುದು ಎಂದು ನಾನು ಹೇಳಲ್ಲ, ಬಿಗ್ ಬಾಸ್ ಮುಗಿದ ಮೇಲೆ ನಡೆದಿರುವುದು ಎಂದು ಪ್ರತಿಕ್ರಿಯಿಸಿದ್ದಾರೆ.  ಇದನ್ನೂ ಓದಿ:ಬಿಗ್‍ಬಾಸ್ ಸಂಭಾವನೆ ಎಷ್ಟು – ಪತ್ನಿ ವಿಚಾರ ಪ್ರಸ್ತಾಪಿಸಿ ಸ್ಮಾರ್ಟ್ ಉತ್ತರ ನೀಡಿದ ಕಿಚ್ಚ

    ಇದು ಅವರಿಬ್ಬರ ಜೀವನ, ಅವರು ಮದುವೆ ಆಗಬೇಕು ಎಂದು ಇದ್ದಾರೆ. ಇದು ಬಿಗ್‍ಬಾಸ್‍ನಿಂದ ನಡೆದಿರುವುದು ಎಂದು ನಾನು ಹೇಳಲ್ಲ, ಇದು ಬಿಗ್‍ಬಾಸ್ ಮುಗಿದ ಮೇಲೆ ನಡೆದಿರುವುದು. ಅವರಿಬ್ಬರ ವಿಷಯ ಕೇಳಿ ಖುಷಿಯಾಗಿದ್ದೇನೆ. ಅದಕ್ಕೂ, ನನಗೂ ಸಂಬಂಧ ಇಲ್ಲ. ಇಬ್ಬರಿಗೂ ಒಳ್ಳೆಯದಾಗಲಿ ಎಂದು ಸುದೀಪ್ ಹೇಳಿದ್ದಾರೆ.  ಇದನ್ನೂ ಓದಿ: ಬಿಗ್‍ಬಾಸ್ ಸೀಸನ್ 7 – `ಬಿಗ್’ಹೌಸ್‍ಗೆ ಹೋಗ್ತಿರೋ ಸಂಭಾವ್ಯ ಸ್ಪರ್ಧಿಗಳ ಪಟ್ಟಿ

    ಕಳೆದ ವಾರ ಮೈಸೂರಿನಲ್ಲಿ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಚಂದನ್, ನಿವೇದಿತಾ ಪೋಷಕರು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮ ನೀಡಿ ಜನರನ್ನು ಮನರಂಜಿಸುತ್ತಿದ್ದ ಚಂದನ್ ವೇದಿಕೆಯಲ್ಲೇ ನಿವೇದಿತಾಳಿಗೆ ಮಂಡಿಯೂರಿ ಪ್ರಪೋಸ್ ಮಾಡಿದ್ದರು ಅಲ್ಲದೇ ಉಂಗುರ ಕೂಡ ತೊಡಿಸಿದ್ದರು. ಈ ವೇಳೆ ನೆರೆದಿದ್ದ ಮಂದಿ ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟುವ ಮೂಲಕ ಇಬ್ಬರನ್ನೂ ಅಭಿನಂದಿಸಿದ್ದರು.

    ಈ ಬೆನ್ನಲ್ಲೇ ಪ್ರಪೋಸ್ ಮಾಡಿರುವ ವಿಚಾರ ಭಾರೀ ವಿವಾದಕ್ಕೀಡಾಯಿತು. ದಸರಾ ಕಾರ್ಯಕ್ರಮದ ವೇದಿಕೆಯಲ್ಲೇ ಇದು ಬೇಡವಾಗಿತ್ತು ಎಂದು ಅನೇಕರು ಖಂಡಿಸಿದ್ದರು. ಇನ್ನೂ ಕೆಲವರು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು. ಈ ಸಂಬಂಧ ಪ್ರತಿಕ್ರಿಯಿಸಿದ ಚಂದನ್, ನಾನು ಮಾಡಿರುವುದು ತಪ್ಪಾಗಿದ್ದರೆ ಕ್ಷಮಿಸಿ ಬಿಡಿ ಎಂದಿದ್ದಾರೆ. ಇತ್ತ ನಾವು ವೇದಿಕೆಯಲ್ಲಿ ಮದುವೆಯಾಗಿಲ್ಲ. ಒಂದು ವೇಳೆ ನಾವು ಅಲ್ಲಿ ಮದುವೆಯಾಗುತ್ತಿದ್ದರೆ ಅದನ್ನು ನಾನು ತಪ್ಪು ಎಂದು ಒಪ್ಪಿಕೊಳ್ಳುತ್ತಿದ್ದೆ ಎಂದು ನಿವೇದಿತಾ ಸಮರ್ಥಿಸಿಕೊಂಡಿದ್ದಾರೆ.

  • ನಾನು ಇದ್ದಿದ್ದರೆ ಚಂದನ್, ನಿವೇದಿತಾಗೂ ಮದುವೆ ಮಾಡಿಸುತ್ತಿದ್ದೆ: ವಾಟಾಳ್ ನಾಗರಾಜ್

    ನಾನು ಇದ್ದಿದ್ದರೆ ಚಂದನ್, ನಿವೇದಿತಾಗೂ ಮದುವೆ ಮಾಡಿಸುತ್ತಿದ್ದೆ: ವಾಟಾಳ್ ನಾಗರಾಜ್

    ಬೆಂಗಳೂರು: ನಾನು ಯುವ ದಸರಾ ಕಾರ್ಯಕ್ರಮದಲ್ಲಿ ಇದ್ದಿದ್ದರೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡರಿಗೂ ಮದುವೆ ಮಾಡಿಸುತ್ತಿದ್ದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವ ದಸರಾ ಕಾರ್ಯಕ್ರಮದಲ್ಲಿ ಪ್ರೇಮ ನಿವೇದನೆ ಮಾಡಿಕೊಂಡ ಚಂದನ್ ಶೆಟ್ಟಿಗೆ ನನ್ನ ಬೆಂಬಲವಿದೆ. ಪ್ರೇಮಿಗಳಿಗೆ ನನ್ನ ಬೆಂಬಲ ಯಾವಾಗಲೂ ಇದ್ದೆ ಇರುತ್ತದೆ. ನಾನು ಅಲ್ಲಿ ಇದ್ದಿದ್ದರೆ ಅವರಿಬ್ಬರಿಗೂ ಮದುವೆ ಮಾಡಿಸುತ್ತಿದ್ದೆ ಎಂದು ತಿಳಿಸಿದ್ದಾರೆ.

    ಚಂದನ್ ಮತ್ತು ನಿವೇದಿತಾ ಅವರ ಮೇಲೆ ಪೊಲೀಸ್ ದೂರು ದಾಖಲಿಸಿರುವುದು ತಪ್ಪು. ಅವರು ಠಾಣೆಗೆ ಕರೆದುಕೊಂಡು ಹೋಗಿ ಮದುವೆ ಮಾಡಿಸಬೇಕಿತ್ತು. ಅದನ್ನು ಬಿಟ್ಟು ಕೇಸ್ ಹಾಕಿದ್ದಾರೆ. ನಾನು ದಸರಾ ಮುಗಿದ ಮೇಲೆ ಈ ವಿಚಾರವಾಗಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇನೆ. ನಾವು ಅವರಿಗೆ ಬೆಂಬಲ ನೀಡಬೇಕು ಅದನ್ನು ಬಿಟ್ಟು ಮಂತ್ರಿ ರೀತಿ ಶಾಪ ಹಾಕಬಾರದು. 6 ತಿಂಗಳ ನಂತರ ಏನೋ ಆಗುತ್ತೆ ಎಂದು ಶಾಪ ಹಾಕಿದರೆ ಅವರ ಗತಿ ಏನ್ ಆಗಬೇಕು ಎಂದು ಪ್ರಶ್ನೆ ಮಾಡಿದರು. ಇದನ್ನು ಓದಿ:  ಪ್ರೀತಿ ಒಪ್ಪಿಕೊಂಡ ಗೊಂಬೆಗೆ ಥ್ಯಾಂಕ್ಸ್ ಹೇಳಿದ ಚಂದನ್ ಶೆಟ್ಟಿ

    ನಡೆದಿದ್ದೇನು?
    ಕಳೆದ ಶನಿವಾರ ಯುವ ದಸರಾ ಕಾರ್ಯಕ್ರಮದಲ್ಲಿ ಚಂದನ್ ನಿವೇದಿತಾ ಪೋಷಕರು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮ ನೀಡಿ ಜನರನ್ನು ಮನರಂಜಿಸುತ್ತಿದ್ದ ಚಂದನ್ ವೇದಿಕೆಯಲ್ಲೇ ನಿವೇದಿತಾಳಿಗೆ ಮಂಡಿಯೂರಿ ಪ್ರಪೋಸ್ ಮಾಡಿದ್ದರು ಅಲ್ಲದೇ ಉಂಗುರ ಕೂಡ ತೊಡಿಸಿದ್ದರು. ಈ ವೇಳೆ ನೆರೆದಿದ್ದ ಮಂದಿ ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟುವ ಮೂಲಕ ಇಬ್ಬರನ್ನೂ ಅಭಿನಂದಿಸಿದ್ದರು.

    ಈ ಬೆನ್ನಲ್ಲೇ ಪ್ರಪೋಸ್ ಮಾಡಿರುವ ವಿಚಾರ ಭಾರೀ ವಿವಾದಕ್ಕೀಡಾಗಿತ್ತು. ದಸರಾ ಕಾರ್ಯಕ್ರಮದ ವೇದಿಕೆಯಲ್ಲೇ ಇದು ಬೇಡವಾಗಿತ್ತು ಎಂದು ಅನೇಕರು ಖಂಡಿಸಿದರು. ಇನ್ನೂ ಕೆಲವರು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು. ಈ ಸಂಬಂಧ ಪ್ರತಿಕ್ರಿಯಿಸಿದ ಚಂದನ್, ನಾನು ಮಾಡಿರುವುದು ತಪ್ಪಾಗಿದ್ದರೆ ಕ್ಷಮಿಸಿ ಬಿಡಿ ಅಂದಿದ್ದಾರೆ. ಇತ್ತ ನಾವು ವೇದಿಕೆಯಲ್ಲಿ ಮದುವೆಯಾಗಿಲ್ಲ. ಒಂದು ವೇಳೆ ನಾವು ಅಲ್ಲಿ ಮದುವೆಯಾಗುತ್ತಿದ್ದರೆ ಅದನ್ನು ನಾನು ತಪ್ಪು ಅಂತ ಒಪ್ಪಿಕೊಳ್ಳುತ್ತಿದ್ದೆ ಎಂದು ಸಮರ್ಥಿಸಿಕೊಂಡಿದ್ದರು. ಇದನ್ನು ಓದಿ: ಚಂದನ್-ನಿವೇದಿತಾ ನಿಶ್ಚಿತಾರ್ಥ ಮಾಡ್ಕೊಂಡಿರೋದು ಅಕ್ಷಮ್ಯ ಅಪರಾಧ- ವಿ.ಸೋಮಣ್ಣ

    ಈ ಮಧ್ಯೆ ಉಸ್ತುವಾರಿ ಸಚಿವ ವಿ ಸೋಮಣ್ಣ ಪ್ರತಿಕ್ರಿಯಿಸಿ, ಯುವ ದಸರಾ ವೇದಿಕೆಯಲ್ಲಿ ಗಾಯಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಿಶ್ಚಿತಾರ್ಥ ಮಾಡಿಕೊಂಡಿರುವುದು ಅಕ್ಷಮ್ಯ ಅಪರಾಧ. ನಾಡಿನ ಅಧಿದೇವತೆಯ ನಾಡಹಬ್ಬದ ವೇದಿಕೆಯಲ್ಲಿ ಈ ರೀತಿ ಆಗಬಾರದಿತ್ತು. ತಪ್ಪೆಸಗಿರುವ ಅವರಿಬ್ಬರಿಗೂ ಬರುವ ಆರು ತಿಂಗಳಲ್ಲಿ ದೇವಿಯೇ ಶಿಕ್ಷೆ ನೀಡುತ್ತಾರೆ. ಈ ರೀತಿ ಆಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಇದಕ್ಕೆ ದಸರಾ ಉಪಸಮಿತಿ ಕಾರಣವಲ್ಲ. ಈ ಸಂಬಂಧ ಮೈಸೂರು ಜಿಲ್ಲಾ ಅಧೀಕ್ಷಕ ಹಾಗೂ ಯುವ ದಸರಾ ಉಪಸಮಿತಿಯ ಕಾರ್ಯಾಧ್ಯಕ್ಷರೂ ಆಗಿರುವ ರಿಷ್ಯಂತ್ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಚಂದನ್ ಶೆಟ್ಟಿ ಮತ್ತು ನಿವೇದಿತಾರಿಗೆ ಕಾರಣ ಕೇಳಿ ಪೊಲೀಸ್ ಇಲಾಖೆಯಿಂದ ನೋಟಿಸ್ ನೀಡಲಾಗುತ್ತದೆ ಎಂದು ಕಿಡಿಕಾರಿದ್ದರು.

  • ಚಂದನ್ ಲವ್ ಪ್ರಪೋಸ್ ಬಗ್ಗೆ ವಿಪರೀತ ಅರ್ಥ ಕಲ್ಪಿಸೋದು ಬೇಡ: ಸಿಟಿ ರವಿ

    ಚಂದನ್ ಲವ್ ಪ್ರಪೋಸ್ ಬಗ್ಗೆ ವಿಪರೀತ ಅರ್ಥ ಕಲ್ಪಿಸೋದು ಬೇಡ: ಸಿಟಿ ರವಿ

    ರಾಮನಗರ: ಹೆಣ್ಣು-ಗಂಡಿನ ನಡುವಿನ ಒಲವು ತಡೆಯೋಕ್ಕಾಗಲ್ಲ, ಅದು ಎಲ್ಲದಕ್ಕೂ ಮೀರಿದ್ದು. ಅದಕ್ಕೆ ವಿಪರೀತ ಅರ್ಥ ಕಲ್ಪಿಸುವುದು ಬೇಡ ಎಂದು ಮೈಸೂರು ಯುವ ದಸರದಲ್ಲಿ ಚಂದನ್ ಶೆಟ್ಟಿ ನಿವೇದಿತಾಗೆ ಲವ್ ಪ್ರಫೋಸ್ ಮಾಡಿದ್ದ ವಿಚಾರವಾಗಿ ಸಚಿವ ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ.

    ದಸರಾ ಹಿನ್ನೆಲೆ ರಾಮನಗರದಲ್ಲಿ ನಡೆಯುತ್ತಿರುವ ಆಹಾರ ಮೇಳದಲ್ಲಿ ಸಿ.ಟಿ ರವಿ ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೈಸೂರು ಯುವ ದಸರಾ ಕಾರ್ಯಕ್ರಮದಲ್ಲಿ ಬಿಗ್‍ಬಾಸ್ ಖ್ಯಾತಿಯ ರ‍್ಯಾಪರ್ ಚಂದನ್ ಶೆಟ್ಟಿ ನಿವೇದಿತಾಗೆ ರಿಂಗ್ ತೊಡಿಸಿ ಪ್ರೇಮ ನಿವೇದನೆ ಮಾಡಿಕೊಂಡ ವಿಚಾರವಾಗಿ ಮಾತನಾಡಿದರು. ಡಿವಿಜಿಯವರ ಕಗ್ಗದ ಸಾಲುಗಳನ್ನು ಉಲ್ಲೇಖಿಸಿ ಚಂದನ್ ಪರ ಬ್ಯಾಟಿಂಗ್ ಮಾಡಿದರು. ಇದನ್ನೂ ಓದಿ:ಚಂದನ್ ಶೆಟ್ಟಿಯನ್ನು ಮಹಾಪರಾಧ ಮಾಡಿದವನಂತೆ ಕಾಣೋದು ಸಾಕು: ಪ್ರತಾಪ್ ಸಿಂಹ

    ಮಣ್ಣಿನ ಆತುರಕ್ಕಿಂತ ಚಿನ್ನದ ಆತುರ ಲೇಸು, ಚಿನ್ನದ ಆತುರಕ್ಕಿಂತ ಗಂಡು ಹೆಣ್ಣಿನ ಒಲವು ದೊಡ್ಡದು ಎಂದು ಡಿವಿಜಿಯವರು ಹೇಳಿದ್ದಾರೆ. ಹಾಗೆಯೇ ಗಂಡು-ಹೆಣ್ಣಿನ ಒಲವು ತಡೆಯಲು ಸಾಧ್ಯವಿಲ್ಲ, ಅದು ಎಲ್ಲಕ್ಕೂ ಮೀರಿದ್ದು. ಚಂದನ್ ನಿವೇದಿತಾ ವಿಚಾರವನ್ನು ಎಳೆದುಕೊಂಡು ಹೋಗುತ್ತಾ, ಅದಕ್ಕೆ ವಿಪರೀತ ಅರ್ಥ ಕಲ್ಪಿಸುವುದು ಬೇಡ ಎಂದರು. ಇದನ್ನೂ ಓದಿ:ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಬಾರದೆಂಬ ರೂಲ್ಸ್ ಇದ್ಯಾ? ಪ್ರಮೋದ್ ಮುತಾಲಿಕ್

    ಯುವ ದಸರಾ ವೇದಿಕೆ ಮೇಲೆ ಚಂದನ್ ಅವರು ನಿವೇದಿತಾಗೆ ಪ್ರಪೋಸ್ ಮಾಡಿರುವ ವಿಷಯ ಸದ್ಯ ಭಾರೀ ಸುದ್ದಿಯಲ್ಲಿದೆ. ಅಭಿಮಾನಿಗಳು ಈ ಕ್ಯೂಟ್ ಜೋಡಿ ಪ್ರೀತಿ ವಿಚಾರ ತಿಳಿದು ಖುಷಿಪಟ್ಟಿದ್ದರೆ. ಕೆಲವರು ಸಾರ್ವಜನಿಕ ವೇದಿಕೆ ಮೇಲೆ ಚಂದನ್ ತನ್ನ ಪ್ರೀತಿ ನಿವೇದನೆ ಮಾಡಿದ್ದು ತಪ್ಪು ಎಂದು ವಿರೋಧಿಸಿದ್ದಾರೆ.