Tag: Chandan Shetty

  • ರ‍್ಯಾಪರ್‌ ಚಂದನ್ ಶೆಟ್ಟಿಗೆ ಪತ್ನಿ ನಿವೇದಿತಾ ಕರೆಯೋ ಹೆಸರು ಕುಕ್ಕಿ

    ರ‍್ಯಾಪರ್‌ ಚಂದನ್ ಶೆಟ್ಟಿಗೆ ಪತ್ನಿ ನಿವೇದಿತಾ ಕರೆಯೋ ಹೆಸರು ಕುಕ್ಕಿ

    ಗಂಡನ ಹೆಸರನ್ನು ಯಾರು ಏನಂತ ಕರೆಯುತ್ತಾರೋ ಗೊತ್ತಿಲ್ಲ. ಆದರೆ, ಕನ್ನಡದ ರ‍್ಯಾಪರ್‌ ಚಂದನ್ ಶೆಟ್ಟಿ ಅವರ ಪತ್ನಿ, ಕಿರುತೆರೆ ಬಾರ್ಡಿ ಬಾಲ್ ನಿವೇದಿತಾ ಮಾತ್ರ ಗಂಡನನ್ನು ಡಿಫರೆಂಟ್ ಹೆಸರಿನಿಂದ ಕರೆಯುತ್ತಾರೆ. ಆ ಹೆಸರು ಮೊನ್ನೆಯಷ್ಟೇ ರಿವಿಲ್ ಆಗಿದೆ.  ಇದನ್ನು ಓದಿ: ‘ಅಣ್ಣಾವ್ರ ನಾಡು’: ಡಾ.ರಾಜ್ ಕುಮಾರ್ ನೆನೆದ ರಾಕಿಂಗ್ ಸ್ಟಾರ್ ಯಶ್

    ಸದ್ಯ ಖಾಸಗಿ ಮನರಂಜನಾ ವಾಹಿನಿಯೊಂದರ ರಿಯಾಲಿಟಿ ಶೋನಲ್ಲಿ ನಿವೇದಿತಾ ಭಾಗಿಯಾಗಿದ್ದಾರೆ. ಇದರ ಗ್ರ್ಯಾಂಡ್ ಓಪನಿಂಗ್ ವೇದಿಕೆಯ ಮೇಲೆ ನಿವೇದಿತಾ ಇದ್ದರು. ನಿಮ್ಮನ್ನು ವೆಲ್ ಕಮ್ ಮಾಡೋಕೆ ವಿಶೇಷ ಅತಿಥಿಯೊಬ್ಬರು ವೇದಿಕೆಯ ಮೇಲೆ ಬರಲಿದ್ದಾರೆ ಎಂದು ನಿರೂಪಕ ಪಾವಗಡ ಮಂಜು ಹೇಳುತ್ತಾರೆ. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಬಂದಿದ್ದು ಚಂದನ್ ಶೆಟ್ಟಿ. ಗಂಡನನ್ನು ನೋಡುತ್ತಿದ್ದಂತೆಯೇ ನಿವೇದಿತಾ ಸರ್ಪ್ರೈಸ್ ರೀತಿಯಲ್ಲಿ.. ‘ಓ.. ಕುಕ್ಕಿ..’ ಎಂದು ಕರೆಯುತ್ತಾರೆ. ಇಂಥದ್ದೊಂದು ಹೆಸರನ್ನು ಕರೆಯುತ್ತಿದ್ದಂತೆಯೇ ಆ  ಕಾರ್ಯಕ್ರಮದ ಜಡ್ಜ್ ಆಗಿದ್ದ ಸೃಜನ್ ಲೋಕೇಶ್ ಅವರು ನಿವಿಯಲ್ಲಿ ಕಾಲೆಳೆಯುತ್ತಾರೆ. ‘ಒಂದೇ ಬಾರಿ ಕುಕ್ಕಿ.. ಪದೇ ಪದೇ ಕುಕ್ಕಿಕ್ಕಿಕ್ಕಿ. ಮಾಡಬೇಡಿ’ ಎನ್ನುತ್ತಾರೆ. ಹೀಗೆ ತಮಾಷೆಯಾಗಿಯೇ ಕಾರ್ಯಕ್ರಮ ಸಾಗುತ್ತದೆ. ಇದನ್ನೂ ಓದಿ : ಸೂಪರ್‌ಸ್ಟಾರ್ ಮಹೇಶ್ ಬಾಬು ಜೊತೆ ಕಾಣಿಸಿಕೊಂಡ ಮೇಘಾ ಶೆಟ್ಟಿ

    ಚಂದನ್ ಮತ್ತು ನಿವೇದಿತಾ ಯಾವ ರೀತಿಯಲ್ಲಿ ಅನ್ಯೋನ್ಯವಾಗಿದ್ದಾರೆ ಅಂದರೆ, ಚಂದನ್ ಸ್ವತಃ ಹೆಂಡತಿಯನ್ನೇ ಕಾಲೆಳೆಯುತ್ತಾರೆ. ಇದೇ ಸಂದರ್ಭದಲ್ಲಿ ‘ನೀವು ಕಾರ್ಯಕ್ರಮ ಮುಗಿದ ಮೇಲೆ ಮನೆಗೆ ಬರ್ತೀರಿ.. ನೆನಪಿಡಿ’ ಎಂದು ಕಣ್ಣಲ್ಲೇ ಬೆದರಿಸುತ್ತಾರೆ. ಅದನ್ನು ಪದೇ ಪದೇ ಹೇಳುವ ಮೂಲಕ ಚಂದನ್ ಅವರನ್ನು ಹೆದರಿಸುತ್ತಾರೆ. ಆಗ ನಗುತ್ತಲೇ ಚಂದನ್, ‘ಹೌದೌದು.. ಮನೆಗೆ ಹೋಗಬೇಕು’ ಎಂದು ಅವರು ತಮಾಷೆ ಮಾಡುತ್ತಾರೆ. ಇದನ್ನೂ ಓದಿ : ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ರಾಕಿಂಗ್ ಸ್ಟಾರ್ ಯಶ್ ಭೇಟಿ

    ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘ಪತಿಯನ್ನು ಇಂಥದ್ದೊಂದು ಹೆಸರಿನಿಂದ ಕರೆಯುವುದನ್ನು ನಾವು ಮೊದಲ ಬಾರಿಗೆ ನೋಡುತ್ತಿದ್ದೇವೆ’ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ನಾಯಿಮರಿಗೆ ಕರೆಯುವ ಹೆಸರನ್ನು ಚಂದನ್ ಗೆ ಇಟ್ಟಿದ್ದಾರಲ್ಲ ಪಾಪ ಎಂದೂ ಕೆಲವರು ಕಾಮೆಂಟ್ ಮಾಡಿದ್ದಾರೆ.

  • ಹಲ್ಲು ಮುರಿದುಕೊಂಡು ವಿಡಿಯೋ ಮಾಡಿದ ಚಂದನದ ಬೊಂಬೆ ನಿವೇದಿತಾ :ಓಡೋಡಿ ಬಂದ ಚಂದನ್ ಶೆಟ್ಟಿ

    ಹಲ್ಲು ಮುರಿದುಕೊಂಡು ವಿಡಿಯೋ ಮಾಡಿದ ಚಂದನದ ಬೊಂಬೆ ನಿವೇದಿತಾ :ಓಡೋಡಿ ಬಂದ ಚಂದನ್ ಶೆಟ್ಟಿ

    ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಬಿಗ್ ಬಾಸ್ ನಿವಿ, ಅವರ ಮನೆಯಲ್ಲಿ ಬಿದ್ದು ಹಲ್ಲು ಮುರಿದುಕೊಂಡಿದ್ದಾರಂತೆ. ಹಾಗಂತ ಸ್ವತಃ ನಿವೇದಿತಾ ಅವರೇ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಅರ‍್ರೇ ಚಂದನದ ಗೊಂಬೆಗೆ ಏನ್ ಆಯ್ತು ಅನ್ಕೋತ್ತಿದ್ದೀರಾ..ಇದಕ್ಕೇಲ್ಲ ಉತ್ತರ ಇಲ್ಲಿದೆ ನೋಡಿ.

    ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರೋ ನಿವಿ, ತಮ್ಮ ಸಂತೋಷದ ಕ್ಷಣವನ್ನು ಆಗಾಗ ಇಂಟರ್‌ನೆಟ್‌ನಲ್ಲಿ ಶೇರ್ ಮಾಡುತ್ತಾರೆ. ಈಗಾಗಲೇ ಇನ್ಸ್ಟಾಗ್ರಾಂನಲ್ಲಿ ೧ ಮಿಲಿಯನ್ ಫಾಲೋವರ್ಸ್ ಹೊಂದಿರೋ ನಿವಿ, ಯೂಟ್ಯೂಬ್‌ನಲ್ಲೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಈಗ ಅಸಲಿ ಮ್ಯಾಟ್ರು ಏನಪ್ಪಾ ಅಂದ್ರೆ ನಟಿ ನಿವೇದಿತಾ ಹಲ್ಲು ಮುರಿದುಕೊಂಡಿರುವ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

    ನಿವೇದಿತಾ, ಸಾಕು ನಾಯಿ ಜೊತೆ ಆಟವಾಡ್ತಿರೋವಾಗ ಮೆಟ್ಟಿಲಿನಿಂದ ಮುಗ್ಗರಿಸಿದ ವಿಚಾರವನ್ನು ನಿವಿ ಹೇಳಿಕೊಂಡಿದ್ದಾರೆ. ಈ ವಿಷಯವನ್ನು ಮೊದಲು ಪತಿ ಚಂದನ್‌ಗೆ ಕರೆ ಮಾಡಿ ಹೇಳಿಕೊಂಡಿದ್ದಾರೆ. ಮ್ಯೂಸಿಕ್ ಸ್ಟುಡಿಯೋದಲ್ಲಿ ಬ್ಯುಸಿಯಿದ್ದ ಚಂದನ್ ನಿವಿಗಾಗಿ ಕೆಲಸ ಪಕ್ಕಕಿಟ್ಟು ಓಡೋಡಿ ಬಂದಿದ್ದಾರೆ. ನಂತರ ಮೈಸೂರಿನಲ್ಲಿದ್ದ ತನ್ನ ತಾಯಿಗೂ ಕಾಲ್ ಮಾಡಿ ಹೀಗೆ ಹೇಳಿದ್ದಾರೆ.ಅಚ್ಚರಿಯ ವಿಷಯ ಏನಪ್ಪಾ ಅಂದರೆ ಪತಿಗೆ ಏಪ್ರಿಲ್ ಫೂಲ್ ಮಾಡೋಕೆ ಈಷ್ಟೆಲ್ಲಾ ಸರ್ಕಸ್ ಮಾಡಿದ್ದಾರೆ. ಇದನ್ನು ಓದಿ:ಕನ್ನಡದ ಇಬ್ಬರು ಸೂಪರ್ ಸ್ಟಾರ್ ಚಿತ್ರಕ್ಕೆ `ಮದಗಜ’ ಮಹೇಶ್ ಆ್ಯಕ್ಷನ್ ಕಟ್ :ನಂತರ ಬಾಲಿವುಡ್ ಸಿನಿಮಾ

     

    ನಿವಿ ಹೇಳಿದ್ದೇ ನಿಜ ಅಂತಾ ನಂಬಿ ಮನೆಗೆ ಬಂದಿದ್ದ ಪತಿ ಚಂದನ್ ಆ ನಂತರ ಇದು ಫ್ರ್ಯಾಂಕ್ ಎಂದು ತಿಳಿದಿದೆ. ಸದ್ಯ ನಿವೇದಿತಾ ಮಾಡಿರೋ ತಮಾಷೆಯ ವಿಡಿಯೋ ಇಂಟರ್‌ನೆಟ್‌ನಲ್ಲಿ ಸಿಕ್ಕಾಪಟ್ಟೆ ವಿವ್ಸ್ ಗಿಟ್ಟಿಸಿಕೊಳ್ಳುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್ ಆಗಿರೋ ನಿವಿ ತುಂಟಾಟ ನೆಟ್ಟಿಗರಿಗೆ ಖುಷಿ ಕೊಟ್ಟಿದೆ.

  • ಬೇಬಿ ಡಾಲ್ ನಿವೇದಿತಾ ತಾಯಿ ಆಗುತ್ತಿದ್ದಾರಾ?- ಚಂದನ್ ಶೆಟ್ಟಿ ಹೇಳಿದ್ದೇನು?

    ಬೇಬಿ ಡಾಲ್ ನಿವೇದಿತಾ ತಾಯಿ ಆಗುತ್ತಿದ್ದಾರಾ?- ಚಂದನ್ ಶೆಟ್ಟಿ ಹೇಳಿದ್ದೇನು?

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್‌ಬಾಸ್‌ ಕಾರ್ಯಕ್ರಮ ಮೂಲಕವಾಗಿ ಜನಮನ್ನಣೆ ಪಡೆದುಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ. ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು, ಆಗಾಗ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಈ ಜೋಡಿ ಹೊಸ ವಿಚಾರವೊಂದಕ್ಕೆ ಸುದ್ದಿಯಾಗಿದ್ದಾರೆ.


    ಈ ಜೋಡಿ ಏನ್ ಮಾಡಿದ್ರು, ಸುದ್ದಿ ಎನ್ನುವಷ್ಟರ ಮಟ್ಟಿಗೆ ಫೇಮಸ್ ಆಗಿರುವ ಚಂದನ್, ನಿವೇದಿತಾಗೆ ದೊಡ್ಡ ಮಟ್ಟದ ಅಭಿಮಾನಿಗಳ ಬಳಗವೇ ಇದೆ. ಸದ್ಯ ಈ ಜೋಡಿ ಪೋಷಕರಾಗುತ್ತಿದ್ದಾರೆ, ಬೇಬಿ ಡಾಲ್‌ಗೆ ಪುಟ್ಟ ಬೇಬಿ ಬರಲಿದೆ. ಚಂದನ್‌ಗೆ ಹೆಣ್ಣುಮಗುವಿನ ತಂದೆ ಆಗುವ ಆಸೆ ಅಂತೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ


    ನಿವೇದಿತಾ ಹೊಸ ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಲಿದ್ದಾರೆ. ಆದರೆ ಈ ಮಧ್ಯೆ ಅವರು ತಾಯಿ ಆಗುತ್ತಿದ್ದಾರೆ ಎನ್ನುವ ಸುದ್ದಿ ಮಾತ್ರ ಅಭಿಮಾನಿಗಳಿಗೆ ಸಂಭ್ರಮಕ್ಕೆ ಕಾರಣವಾಗಿದೆ. ಚಂದನ್ ಅವರಿಗೆ ಅವರಿಗೆ ಹೆಣ್ಣು ಮಗು ಎಂದರೆ ಬಹಳ ಇಷ್ಟವಂತೆ. ಹೀಗಾಗಿ ಅವರು ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನವ ಗುಸುಗುಸು ಸುದ್ದಿಯೊಂದು ಹರಿದಾಡುತ್ತಿದೆ. ಈ ಕುರಿತಾಗಿ ನಿವೇದಿತಾ, ಚಂದನ್ ಸ್ಪಷ್ಟನೆ ನೀಡಬೇಕಾಗಿದೆ.

    2020ರಲ್ಲಿ 26ರಂದು ಈ ಜೋಡಿ ಕುಟುಂಬಸ್ಥರು, ಗುರುಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದರು. ಮೈಸೂರಿನಲ್ಲಿ ಈ ಜೋಡಿ ಅದ್ದೂರಿಯಾಗಿ ಮದುವೆಯಾದರು. ಸಾಕಷ್ಟು ಸಿನಿಮಾ ತಾರೆಯರು ಕೂಡ ಇವರ ಮದುವೆಗೆ ಸಾಕ್ಷಿ ಆಗಿದ್ದರು. ಇದೀಗ ನಿವೇದಿತಾ ರಿಯಾಲಿಟಿ ಶೋನಲ್ಲಿ ತೊಡಗಿಕೊಂಡಿದ್ದಾರೆ. ಚಂದನ್ ಕೆಲವು ಸಿನಿಮಾಗಳಿಗೆ ಮ್ಯೂಸಿಕ್ ಮಾಡುವಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಸುದ್ದಿಗೆ ಚಂದನ್, ನಿವೇದಿತಾ ಏನ್ ಹೇಳುತ್ತಾರೆ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

    ಚಂದನ್‌ ಶೆಟ್ಟಿ ಸ್ಪಷ್ಟನೆ: ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು. ಇದು ಏಪ್ರಿಲ್‌ ಫೂಲ್‌ ಸುದ್ದಿಯಾಗಿದೆ ಎಂದು ಚಂದನ್‌ ಶೆಟ್ಟಿ ಪಬ್ಲಿಕ್‌ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.

    ಇದನ್ನೂ ಓದಿ: ʼಆರ್‌ಆರ್‌ಆರ್‌ʼ ರಿಲೀಸ್ ಆದ ಕೆಲವೇ ದಿನಗಳಲ್ಲಿ 100 ಮಿಲಿಯನ್ ದಾಖಲೆ

  • ಜೇಮ್ಸ್ ಟ್ರೇಡ್ ಮಾರ್ಕ್ ಹಾಡಿಗೆ ಪುನೀತ್ ಭರ್ಜರಿ ಸ್ಟೆಪ್: ಭಾವುಕರಾದ ಅಭಿಮಾನಿಗಳು

    ಜೇಮ್ಸ್ ಟ್ರೇಡ್ ಮಾರ್ಕ್ ಹಾಡಿಗೆ ಪುನೀತ್ ಭರ್ಜರಿ ಸ್ಟೆಪ್: ಭಾವುಕರಾದ ಅಭಿಮಾನಿಗಳು

    ಇಂದು ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಪ್ರೊಮೊಷನ್ ಸಾಂಗ್ ‘ಟ್ರೇಡ್ ಮಾರ್ಕ್’ ಬಿಡುಗಡೆ ಆಗಿದೆ. ರಿಲೀಸ್ ಆದ ಕೆಲವೇ ನಿಮಿಷಗಳಲ್ಲೇ ಈ ಹಾಡು ವೈರಲ್ ಆಗಿದ್ದು, ಈ ಸಿನಿಮಾದ ಕೆಲ ಹಾಡಿಗೆ ಪುನೀತ್ ಅವರು ಹಾಕಿದ ಸ್ಟೆಪ್ ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ. ಇದನ್ನೂ ಓದಿ : ಪ್ರಶ್ನೆ ಮಾಡುವುದನ್ನು ನಿಲ್ಲಿಸಲ್ಲ : ಮತ್ತೆ ಗುಡುಗಿದ ನಟ ಚೇತನ್

    ನಟನೆಯಷ್ಟೇ ನೃತ್ಯದಲ್ಲೂ ಪುನೀತ್ ಪಳಗಿದವರು. ಕೆಲವು ಸಲ ಸಿನಿಮಾ ಗೆಲ್ಲದಿದ್ದರೂ, ಹಾಡುಗಳು ಸೂಪರ್ ಹಿಟ್ ಆದ ಉದಾಹರಣೆಗಳು ಕೂಡ ಇವೆ. ಅದರಲ್ಲೂ ಹಾಡಿಗಾಗಿ ಅವರು ಹಾಕುವ ಸ್ಟೆಪ್ ಕೂಡ ವಿಭಿನ್ನವಾಗಿರುತ್ತವೆ. ಹಾಗಾಗಿ ಅಪ್ಪು ಡಾನ್ಸ್ ಅಂದರೆ ಎಲ್ಲರಿಗೂ ಇಷ್ಟ. ಜೇಮ್ಸ್ ನಲ್ಲೂ ಅವರು ಪವರ್ ಫುಲ್ ಆಗಿಯೇ ನೃತ್ಯ ಮಾಡಿದ್ದಾರೆ. ಇದೀಗ ಬಿಡುಗಡೆ ಆಗಿರುವ ಪ್ರಮೋಷನಲ್ ಸಾಂಗ್ ನಲ್ಲಿ ಒಂದಷ್ಟು ತುಣುಕುಗಳನ್ನು ಹಾಕಿದ್ದಾರೆ ನಿರ್ದೇಶಕರು. ಈ ನೃತ್ಯವೇ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿದೆ. ಇಂತಹ ಡಾನ್ಸಿಗಾದರೂ ನೀವು ಇರಬೇಕಿತ್ತು ಎನ್ನುವ ಭಾವುಕ ನುಡಿಗಳನ್ನು ಅಭಿಮಾನಿಗಳು ಆಡಿದ್ದಾರೆ. ಇದನ್ನೂ ಓದಿ : ಶಿವರಾತ್ರಿ ವಿಶೇಷ: ತೆರೆಗೆ ಶಿವನಾಗಿ ದರ್ಶನ ಕೊಟ್ಟ ನಟ ಶಿವರು

    ಟ್ರೇಡ್ ಮಾರ್ಕ್ ಇದೊಂದು ಲಿರಿಕಲ್ ವಿಡಿಯೋ ಆಗಿದ್ದು, ಜೇಮ್ಸ್ ಸಿನಿಮಾದ ಮುಹೂರ್ತದಂದು ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕ್ಲ್ಯಾಪ್ ಮಾಡುವ ದೃಶ್ಯದಿಂದ ಶುರುವಾಗುತ್ತದೆ. ಚಂದನ್ ಶೆಟ್ಟಿ, ಆಶಿಕಾ ರಂಗನಾಥ್, ಶ್ರೀಲೀಲಾ, ಮೋಹನ್ ಮೊದಲಾದವರು ಸ್ಟೆಪ್ ಹಾಕಿದ್ದಾರೆ. ಅಲ್ಲದೇ, ಜೇಮ್ಸ್ ಸಿನಿಮಾದ ಹಾಡಿನ ಕೆಲ ತುಣುಕುಗಳನ್ನೂ ಈ ವಿಡಿಯೋದಲ್ಲಿ ಹಾಕಲಾಗಿರುವುದು ಮತ್ತೊಂದು ವಿಶೇಷ. ಇದನ್ನೂ ಓದಿ : ಹರಿಪ್ರಿಯಾ ಟೆಂಪಲ್ ರನ್: ಉಡುಪಿ ಮಠದ ಆನೆಯೊಂದಿಗೆ ಸಮಯ ಕಳೆದ ನಟಿ

    ಚರಣ್ ರಾಜ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಟ್ರೇಡ್ ಮಾರ್ಕ್ ಗೀತೆಗೆ ವಿಕ್ಕಿ, ಅದಿತಿ ಸಾಗರ್ ಮತ್ತು ಚಂದನ್ ಶೆಟ್ಟಿ, ಶರ್ಮಿಳಾ, ಯುವ ರಾಜ್ ಕುಮಾರ್ ಮತ್ತು ಚರಣ್ ರಾಜ್ ದನಿಯಾಗಿದ್ದಾರೆ. ಚೇತನ್ ಕುಮಾರ್ ಸಾಹಿತ್ಯದಲ್ಲಿ ಹಾಡು ಮೂಡಿ ಬಂದಿದೆ.

  • ಚಂದನ್, ನಿವೇದಿತಾ ದಾಂಪತ್ಯಕ್ಕೆ 2 ವರ್ಷ – ಔಟ್ ಆಫ್ ಸ್ಟೇಶನ್‍ಗೆ ಹಾರಿದ ಕ್ಯೂಟ್ ಜೋಡಿ

    ಚಂದನ್, ನಿವೇದಿತಾ ದಾಂಪತ್ಯಕ್ಕೆ 2 ವರ್ಷ – ಔಟ್ ಆಫ್ ಸ್ಟೇಶನ್‍ಗೆ ಹಾರಿದ ಕ್ಯೂಟ್ ಜೋಡಿ

    ಬೆಂಗಳೂರು: ಸ್ಯಾಂಡಲ್‍ವುಡ್ ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

    ಚಂದನ್ ಹಾಗೂ ನಿವೇದಿತಾ ಗೌಡ ಆಗಾಗ ಫೋಟೋ ಹಾಗೂ ವೀಡಿಯೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಇತ್ತೀಚೆಗಷ್ಟೇ ಚಂದನ್ ಲಕ್ ಲಕ್ ಲಂಬೋರ್ಗಿನಿ ಹಾಡು ಬಿಡುಗಡೆ ಮಾಡಿದ್ದರು. ಇನ್ನೂ ಈ ಹಾಡು ಸಖತ್ ಸದ್ದು ಮಾಡಿತ್ತು. ಸದ್ಯ ಚಂದನ್ ನಿವೇದಿತಾ ಕೈ ಹಿಡಿದು ಇಂದಿಗೆ 2 ವರ್ಷ ತುಂಬಿದ್ದು, ಇದೇ ಖುಷಿಯಲ್ಲಿ ಜೋಡಿ ಔಟ್ ಆಫ್ ಸ್ಟೇಷನ್‍ನಲ್ಲಿ ಟೂರ್ ಹೊಡೆಯುತ್ತಿದ್ದಾರೆ.

    ಈ ವಿಶೇಷ ದಿನದಂದು ನಿವೇದಿತಾ ಗೌಡ ತಮ್ಮ ಮದುವೆಯ ಫೋಟೋಗಳನ್ನು ಕೊಲಾಜ್ ಮಾಡಿರುವ ಪುಟ್ಟ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಸಿಹಿ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಇನ್ನೂ ಈ ಕ್ಯೂಟ್ ಜೋಡಿಗೆ ಸ್ನೇಹಿತರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇದನ್ನೂ ಓದಿ: ಮತ್ತೊಬ್ಬ ರಾಜಕಾರಣಿ ಪುತ್ರ ಚಂದನವನದಲ್ಲಿ ‘ಗತವೈಭವ’ ಮಾಡಲು ಎಂಟ್ರಿ!

    ಬಿಗ್‍ಬಾಸ್ ಸೀಸನ್-5ರಲ್ಲಿ ಖ್ಯಾತಿ ಪಡೆದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ. ಬಿಗ್‍ಬಾಸ್ ಮನೆಯಿಂದ ಹೊರಬಂದ ಮೇಲೆ ಈ ಜೋಡಿ ಪ್ರೀತಿಯಲ್ಲಿ ಬಿದ್ದಿದ್ದರು. ಮೈಸೂರಿನ ದಸರಾ ಕಾರ್ಯಕ್ರಮದ ವೇಳೆ ಚಂದನ್ ನಿವೇದಿತಾ ಬಳಿ ಪ್ರೇಮ ನಿವೇದನೆ ಮಾಡಿಕೊಳ್ಳುವ ಮೂಲಕ ನಿವೇದಿತಾ ಮುಂದೆ ಮದುವೆ ಪ್ರಪೋಸಲ್ ಇಟ್ಟರು. ಈ ವೇಳೆ ಚಂದನ್ ಪ್ರೀತಿಗೆ ಮನಸೋತು ನಿವೇದಿತಾ ಗೌಡ ಕೂಡ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದರು.

    ನಂತರ 2020ರ ಫೆಬ್ರವರಿ 27ರಂದು ಮೈಸೂರಿನಲ್ಲಿ ಶುಭ ಮೂಹೂರ್ತದಲ್ಲಿ ಶುಭ ಮೂಹೂರ್ತದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಚಂದನ್ ನಿವೇದಿತರನ್ನು ವರಿಸಿದರು. ಈ ಜೋಡಿ ಮದುವೆಗೆ ಅನೇಕ ಚಿತ್ರರಂಗದ ಗಣ್ಯರು ಆಗಮಿಸಿ ಶುಭ ಕೋರಿದ್ದರು. ಇದನ್ನೂ ಓದಿ: ದೇಶ ವಿದೇಶದಲ್ಲಿ ಜೇಮ್ಸ್ ಅಬ್ಬರ ಶುರು – ಭಾರತ ಸೇರಿದಂತೆ ಒಟ್ಟು 15 ದೇಶಗಳಲ್ಲಿ ಜೇಮ್ಸ್!

  • ಚಂದನ್ ಶೆಟ್ಟಿ ವಿರುದ್ಧ ದೂರು ದಾಖಲು

    ಚಂದನ್ ಶೆಟ್ಟಿ ವಿರುದ್ಧ ದೂರು ದಾಖಲು

    ಬೆಂಗಳೂರು: ಮಾದಪ್ಪನ ಗೀತೆಯನ್ನು ಅಶ್ಲೀಲವಾಗಿ ತೋರಿಸಿರುವ ಆರೋಪದ ಮೇರೆಗೆ ಬಿಗ್‍ಬಾಸ್ ವಿನ್ನರ್, ರ‍್ಯಾಪರ್ ಚಂದನ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ.

    ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಚಂದನ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ. ಬಜರಂಗದಳ ಮುಖಂಡ ತೇಜಸ್ ಗೌಡ ಅವರು ಚಂದನ್ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ಸಂಬಂಧ ಕಬ್ಬನ್ ಪಾರ್ಕ್ ಪೊಲೀಸರು ಎನ್‍ಸಿಆರ್(ಗಂಭೀರವಲ್ಲದ ಪ್ರಕರಣ) ದಾಖಲು ಮಾಡಿದ್ದಾರೆ. ಇದನ್ನೂ ಓದಿ: ಚಂದನ್ ಶೆಟ್ಟಿಗೆ ಬ್ಯಾನ್ ವಾರ್ನಿಂಗ್ ಕೊಟ್ಟ ಎಸ್ಪಿ

    ಹಿಂದೂ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವ ರೀತಿಯಲ್ಲಿ ಜಾನಪದ ಗೀತೆಯನ್ನು ಚಿತ್ರೀಕರಣ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಚಂದನ್ ಶೆಟ್ಟಿ ವಿರುದ್ಧ ಕ್ರಮಕೈಗೊಳ್ಳುವಂತೆ ತೇಜಸ್ ಗೌಡ ದೂರು ನೀಡಿದ್ದಾರೆ.

    ಏನಿದು ಪ್ರಕರಣ?
    ಗಣೇಶ ಹಬ್ಬಕ್ಕೆ ‘ಕೋಲು ಮಂಡೆ ಜಂಗಮ ದೇವರು’ ಎಂಬ ಹೊಸ ರ‍್ಯಾಪ್ ಸಾಂಗ್ ಅನ್ನು ಚಂದನ್ ಶೆಟ್ಟಿ ಯೂಟ್ಯೂಬ್‍ನಲ್ಲಿ ಬಿಡುಗಡೆ ಮಾಡಿದ್ದರು. ಆದರೆ ಮಾದಪ್ಪನ ಗೀತೆಯನ್ನು ಅಶ್ಲೀಲವಾಗಿ ತೋರಿಸಿರುವ ಆರೋಪ ಚಂದನ್ ಶೆಟ್ಟಿ ವಿರುದ್ಧ ಕೇಳಿಬಂದಿದೆ. ಶಿವಶರಣೆ ಸಂಕಮ್ಮನ ಬಗ್ಗೆ ಅಶ್ಲೀಲ ಪ್ರದರ್ಶಿಸಲಾಗಿದೆ ಮತ್ತು ಭಕ್ತಿ ಗೀತೆಯನ್ನು ತಿರುಚಲಾಗಿದೆ. ಈ ಮೂಲಕ ಮಾದಪ್ಪನ ಭಕ್ತರ ಧಾರ್ಮಿಕ ಮನೋಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚಂದನ್ ಶೆಟ್ಟಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

    ಈ ಸಂಬಂಧ ವಿಡಿಯೋ ಮಾಡಿ ಸ್ಪಷ್ಟನೆ ಕೊಟ್ಟ ಚಂದನ್, ಯಾರ ಭಾವನೆಗಳಿಗೂ ಧಕ್ಕೆ ಉಂಟು ಮಾಡಲು ಈ ಹಾಡನ್ನು ಮಾಡಿಲ್ಲ. ಈಗಿನ ಪೀಳಿಗೆಗೆ ನಮ್ಮ ಜಾನಪದ ತಲುಪಲಿ ಅನ್ನೋ ಕಾರಣಕ್ಕೆ ರ್ಯಾಪ್ ಹಾಡಿನ ರೂಪ ಕೊಟ್ಟಿದ್ದೆ. ಇದರಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದರು. ನಂತರ ಚಂದನ್ ಶೆಟ್ಟಿ ವಿಡಿಯೋವನ್ನು ಯೂಟ್ಯೂಬ್ ಖಾತೆಯಿಂದ ಡಿಲೀಟ್ ಮಾಡಿದ್ದಾರೆ.

  • ಸಂಕಮ್ಮನನ್ನ ತುಂಬಾ ಮಾಡರ್ನೈಸ್ ಮಾಡಿದ್ದಾರೆ: ದೊಡ್ಡ ರಂಗೇಗೌಡ್ರು

    ಸಂಕಮ್ಮನನ್ನ ತುಂಬಾ ಮಾಡರ್ನೈಸ್ ಮಾಡಿದ್ದಾರೆ: ದೊಡ್ಡ ರಂಗೇಗೌಡ್ರು

    ಬೆಂಗಳೂರು: ಸಂಕಮ್ಮನನ್ನ ತುಂಬಾ ಮಾಡರ್ನೈಸ್ ಮಾಡಿದ್ದಾರೆ ಎಂದು ಹೇಳುವ ಮೂಲಕ ರ‍್ಯಾಪರ್ ಚಂದನ್ ಶೆಟ್ಟಿ ಹಾಡಿಗೆ ಸಾಹಿತಿ ದೊಡ್ಡ ರಂಗೇಗೌಡ್ರು ಗರಂ ಆಗಿದ್ದಾರೆ.

    ಚಂದನ್ ಶೆಟ್ಟಿ ಸಾಂಗ್ ವಿವಾದದ ಬಗ್ಗೆ ಮಾತನಾಡಿದ ದೊಡ್ಡ ರಂಗೇಗೌಡರು, ಐದು ಸಾವಿರ ವರ್ಷಗಳ ಇತಿಹಾಸ ಇರುವ ಸಾಹಿತ್ಯ ಪರಂಪರೆಗೆ ಚ್ಯುತಿ ಬರುವಂತೆ ಮಾಡಿದ್ದಾರೆ. ಸೃಜನ ಶೀಲನೆ ಕಷ್ಟದ ವಿಷಯ. ನಾನು ಸದಾ ಬರಹಗಾರರ ಪರವಾಗಿಯೇ ಇರುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮಾದಪ್ಪನ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ- ಕ್ಷಮೆ ಕೇಳಿದ ಚಂದನ್

    ಈ ಕೋಲು ಮಂಡೆ ಸಾಂಗ್‍ನಲ್ಲಿ ಅತ್ಯಾಧುನಿಕ ರೂಪ ಕೊಡಲು ಹೋಗಿದ್ದಾರೆ. ಸಂಕಮ್ಮನನ್ನ ತುಂಬಾ ಆಧುನಿಕವಾಗಿ ರೂಪಿಸಿದ್ದಾರೆ. ನಾನು ನಿಮ್ಮಲ್ಲಿ ಕೇಳುವುದೇನೆಂದರೆ ಇದನ್ನ ದಯವಿಟ್ಟು ಡಿಲೀಟ್ ಮಾಡಿ. ನಾನು ಓದಿರುವ ಜಾನಪದ ಕೃತಿಯಲ್ಲಿ ಶಿವ ಶರಣೆಯ ಬಗ್ಗೆ ಎಲ್ಲಿಯೂ ಈ ರೀತಿ ಬರೆದಿಲ್ಲ. ಜನ ರೊಚ್ಚಿಗೇಳುವ ಮೊದಲು ಈ ಹಾಡನ್ನ ಡಿಲೀಟ್ ಮಾಡಿ ಎಂದಿದ್ದಾರೆ. ಇದನ್ನೂ ಓದಿ: ಮಲೆ ಮಹದೇಶ್ವರ ಭಕ್ತರ ಕೆಂಗಣ್ಣಿಗೆ ಗುರಿಯಾದ ಚಂದನ್ ಶೆಟ್ಟಿ

    ನಾನು ಜನುಮದ ಜೋಡಿ ಮಾಡುವಾಗ ವಿ.ಮನೋಹರ್ ಮತ್ತು ನಾಗಾಭರಣ ಸೇರಿ ಸಾಹಿತ್ಯ ಬರೆದಿದ್ದು. ಈ ಹಾಡಿಗೆ ಜಾನಪದದ ಕೃತಿಯನ್ನೇ ಬರೆಯಬೇಕು. ಆದರೆ ಇಲ್ಲಿ ಎಲ್ಲೋ ಚಂದನ್ ಶೆಟ್ಟಿ ಎಡವಿದ್ದಾರೆ, ತಿರುಚಿದ್ದಾರೆ. ಒಬ್ಬ ಲೇಖಕ ಒಂದು ರೇಖೆಯ ಗಡಿಯನ್ನ ದಾಟಿದ್ದಾರೆ. ಮಾದಪ್ಪನ ಬಗ್ಗೆ ಪರಂಪರಗತವಾಗಿ ಅಧ್ಯಯನ ಮಾಡಿಕೊಂಡು ಬಂದಿದ್ದಾರೆ. ಅಂತವರಿಗೆ ಅಪಚಾರವಾಗುವ ನಿಟ್ಟಿನಲ್ಲಿ ಈ ಹಾಡು ಮೂಡಿಬಂದಿದೆ ಎಂದು ಗರಂ ಆದರು.

    ಸಾಹಿತ್ಯ ಮತ್ತು ಚಿತ್ರೀಕರಣ ಎರಡನ್ನ ಬದಲಾಯಿಸಿ. ಹಾಡು ಬಿಟ್ಟರೆ ಯಾರಿಗೂ ಸಮಸ್ಯೆ ಇಲ್ಲ. ಚಂದನ್ ಶೆಟ್ಟಿ ಇದನ್ನ ಕೈ ಬಿಡಬೇಕು. ನಾವು ಇನ್ನೇನು ಹೊಸತನ ಮಾಡುವುದಕ್ಕೆ ಆಗಲ್ಲ. ಇರುವುದು ಅದೇ ಸ್ವರ ಅದರಲ್ಲೇ ಹೇಳಬೇಕು. ಹೂವಿನ ವಿಷಯದಲ್ಲಿ ಪ್ಲಾಸ್ಟಿಕ್ ಹೂವನ್ನ ಕೊಟ್ಟಿದ್ದಾರೆ. ಇದರಿಂದ ಜನಪದವನ್ನ ಕೆಣಕುವ ಪ್ರಯತ್ನ ಮಾಡಬೇಡಿ ಎಂದು ರಂಗೇಗೌಡರು ಕಿಡಿಕಾರಿದರು.

  • ಮಾದಪ್ಪನ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ- ಕ್ಷಮೆ ಕೇಳಿದ ಚಂದನ್

    ಮಾದಪ್ಪನ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ- ಕ್ಷಮೆ ಕೇಳಿದ ಚಂದನ್

    ಬೆಂಗಳೂರು: ತನ್ನ ವಿರುದ್ಧ ಜನಪದ ಹಾಡು ತಿರುಚಿದ ಆರೋಪ ಕೇಳಿ ಬರುತ್ತಿದ್ದಂತೆಯೇ ಕನ್ನಡ ರ‍್ಯಾಪರ್, ಬಿಗ್ ಬಾಸ್ ವಿಜೇತ ಚಂದನ್ ಶೆಟ್ಟಿ ಜನತೆಯಲ್ಲಿ ಕ್ಷಮೆ ಕೇಳಿದ್ದಾರೆ.

    ಈ ಸಂಬಂಧ ವಿಡಿಯೋ ಮಾಡಿ ಸ್ಪಷ್ಟನೆ ಕೊಟ್ಟ ಚಂದನ್, ಯಾರ ಭಾವನೆಗಳಿಗೂ ಧಕ್ಕೆ ಉಂಟು ಮಾಡಲು ಈ ಹಾಡನ್ನು ಮಾಡಿಲ್ಲ. ಈಗಿನ ಪೀಳಿಗೆಗೆ ನಮ್ಮ ಜಾನಪದ ತಲುಪಲಿ ಅನ್ನೋ ಕಾರಣಕ್ಕೆ ರ್ಯಾಪ್ ಹಾಡಿನ ರೂಪ ಕೊಟ್ಟಿದ್ದೆ. ಇದರಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.

    ಏನಿದು ಘಟನೆ?:
    ಗಣೇಶ ಹಬ್ಬಕ್ಕೆ ‘ಕೋಲು ಮಂಡೆ ಜಂಗಮ ದೇವರು’ ಎಂಬ ಹೊಸ ರ‍್ಯಾಪ್ ಸಾಂಗ್ ಅನ್ನು ಚಂದನ್ ಶೆಟ್ಟಿ ಯೂಟ್ಯೂಬ್‍ನಲ್ಲಿ ಬಿಡುಗಡೆ ಮಾಡಿದ್ದರು. ಇದೀಗ ಮಾದಪ್ಪನ ಗೀತೆಯನ್ನು ಅಶ್ಲೀಲವಾಗಿ ತೋರಿಸಿರುವ ಆರೋಪ ಚಂದನ್ ಶೆಟ್ಟಿ ವಿರುದ್ಧ ಕೇಳಿಬಂದಿದೆ.

    ಶಿವಶರಣೆ ಸಂಕಮ್ಮನ ಬಗ್ಗೆ ಅಶ್ಲೀಲ ಪ್ರದರ್ಶಿಸಲಾಗಿದೆ ಮತ್ತು ಭಕ್ತಿ ಗೀತೆಯನ್ನು ತಿರುಚಲಾಗಿದೆ. ಈ ಮೂಲಕ ಮಾದಪ್ಪನ ಭಕ್ತರ ಧಾರ್ಮಿಕ ಮನೋಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚಂದನ್ ಶೆಟ್ಟಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

    ಮಲೆ ಮಹದೇಶ್ವರ ಸ್ವಾಮಿ ಗ್ರೂಪ್‍ನಲ್ಲಿ ಚಾಮರಾಜನಗರ ಜಿಲ್ಲೆಯ ಹಲವು ಯುವಕರು ಚಂದನ್ ವಿರುದ್ಧ ಕಿಡಿಕಾರಿದ್ದಾರೆ. ಹಾಡು ವೈರಲ್ ಆದ್ರೂ, ಚಾಮರಾಜನಗರದಲ್ಲಿ ಈ ಹಾಡಿಗೆ ವಿರೋಧ ವ್ಯಕ್ತವಾಗಿದೆ. ಆಗಸ್ಟ್ 23 ರಂದು ಈ ವಿಡಿಯೋ ಬಿಡುಗಡೆಯಾಗಿದ್ದು, ಈಗಾಗಲೇ 35 ಲಕ್ಷಕ್ಕೂ ಅಧಿಕ ವ್ಯೂ ಕಂಡಿದೆ. ಯೂಟ್ಯೂಬ್‍ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ಆಗಿದೆ.

  • ಮಲೆ ಮಹದೇಶ್ವರ ಭಕ್ತರ ಕೆಂಗಣ್ಣಿಗೆ ಗುರಿಯಾದ ಚಂದನ್ ಶೆಟ್ಟಿ

    ಮಲೆ ಮಹದೇಶ್ವರ ಭಕ್ತರ ಕೆಂಗಣ್ಣಿಗೆ ಗುರಿಯಾದ ಚಂದನ್ ಶೆಟ್ಟಿ

    ಚಾಮರಾಜನಗರ: ಬಿಗ್‍ಬಾಸ್ ವಿಜೇತ ಹಾಗೂ ರ‍್ಯಾಪರ್ ಚಂದನ್ ಶೆಟ್ಟಿ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಈ ಬಾರಿ ಅವರು ಮಲೆ ಮಹದೇಶ್ವರ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಘಟನೆಯೇನು..?
    ಗಣೇಶ ಹಬ್ಬಕ್ಕೆ ‘ಕೋಲು ಮಂಡೆ ಜಂಗಮ ದೇವರು’ ಎಂಬ ಹೊಸ ರ‍್ಯಾಪ್ ಸಾಂಗ್ ಅನ್ನು ಚಂದನ್ ಶೆಟ್ಟಿ ಯೂಟ್ಯೂಬ್‍ನಲ್ಲಿ ಬಿಡುಗಡೆ ಮಾಡಿದ್ದರು. ಇದೀಗ ಮಾದಪ್ಪನ ಗೀತೆಯನ್ನು ಅಶ್ಲೀಲವಾಗಿ ತೋರಿಸಿರುವ ಆರೋಪ ಚಂದನ್ ಶೆಟ್ಟಿ ವಿರುದ್ಧ ಕೇಳಿಬಂದಿದೆ.

    ಶಿವಶರಣೆ ಸಂಕಮ್ಮನ ಬಗ್ಗೆ ಅಶ್ಲೀಲ ಪ್ರದರ್ಶಿಸಲಾಗಿದೆ ಮತ್ತು ಭಕ್ತಿ ಗೀತೆಯನ್ನು ತಿರುಚಲಾಗಿದೆ. ಈ ಮೂಲಕ ಮಾದಪ್ಪನ ಭಕ್ತರ ಧಾರ್ಮಿಕ ಮನೋಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚಂದನ್ ಶೆಟ್ಟಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

    ಮಲೆ ಮಹದೇಶ್ವರ ಸ್ವಾಮಿ ಗ್ರೂಪ್‍ನಲ್ಲಿ ಚಾಮರಾಜನಗರ ಜಿಲ್ಲೆಯ ಹಲವು ಯುವಕರು ಚಂದನ್ ವಿರುದ್ಧ ಕಿಡಿಕಾರಿದ್ದಾರೆ. ಹಾಡು ವೈರಲ್ ಆದ್ರೂ, ಚಾಮರಾಜನಗರದಲ್ಲಿ ಈ ಹಾಡಿಗೆ ವಿರೋಧ ವ್ಯಕ್ತವಾಗಿದೆ. ಈ ಹಿಂದೆ ಯುವ ದಸರಾ ವೇದಿಕೆಯಲ್ಲಿ ಎಂಗೇಜ್‍ಮೆಂಟ್ ಆಗಿ ಚಂದನ್ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಈಗಾಗಲೇ ಯುವ ದಸರಾ ವೇದಿಕೆಯಿಂದ ಚಂದನ್ ಬ್ಯಾನ್ ಆಗಿದ್ದಾರೆ. ಇದೀಗ ಧಾರ್ಮಿಕ ಮನೋಭಾವನೆಗೆ ಧಕ್ಕೆ ತಂದು ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.

    ಆಗಸ್ಟ್ 23 ರಂದು ಈ ವಿಡಿಯೋ ಬಿಡುಗಡೆಯಾಗಿದ್ದು, ಈಗಾಗಲೇ 35 ಲಕ್ಷಕ್ಕೂ ಅಧಿಕ ವ್ಯೂ ಕಂಡಿದೆ. ಯೂ ಟ್ಯೂಬ್‍ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ಆಗಿದೆ.

  • ಬೆಂಗ್ಳೂರಿಗೆ ಬಂದಾಗ ಚಿರು ಇದೇ ಮನೆಯಲ್ಲೇ ಆಶ್ರಯ ಕೊಟ್ಟಿದ್ರು- ಚಂದನ್ ಶೆಟ್ಟಿ

    ಬೆಂಗ್ಳೂರಿಗೆ ಬಂದಾಗ ಚಿರು ಇದೇ ಮನೆಯಲ್ಲೇ ಆಶ್ರಯ ಕೊಟ್ಟಿದ್ರು- ಚಂದನ್ ಶೆಟ್ಟಿ

    ಬೆಂಗಳೂರು: ನಾನು ಫಸ್ಟ್ ಟೈಮ್ ಬೆಂಗಳೂರಿಗೆ ಬಂದಾಗ ನಟ ಚಿರಂಜೀವಿ ಸರ್ಜಾ ಅವರು ಆಶ್ರಯ ಕೊಟ್ಟಿದ್ದರು. ಅವರು ನನ್ನ ಪಾಲಿನ ಗಾಡ್ ಫಾದರ್ ಎಂದು ಬಿಗ್ ಬಾಸ್ ಖ್ಯಾತಿಯ ರ‍್ಯಾಪರ್ ಚಂದನ್ ಶೆಟ್ಟಿ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಚಂದನ್ ಶೆಟ್ಟಿ, ಚಿರು ಅವರ ನಿಧನದ ಸುದ್ದಿ ಕೇಳಿ ಆಘಾತವಾಯಿತು. ನನ್ನ ತಂದೆ-ತಾಯಿ ಊರಲ್ಲಿದ್ರು. ಆದ್ರೆ ನಾನು ಬೆಂಗಳೂರಿಗೆ ಬಂದಾಗ ಏನು ಮಾಡಬೇಕು ಅಂತ ತಿಳಿದಿರಲಿಲ್ಲ. ಆಗ ಚಿರು ಅವರು ಅರ್ಜುನ್ ಸಜ್ರಾ ಅವರಿಗೆ ನನ್ನನ್ನು ಪರಿಚಯ ಮಾಡಿಸಿ, ಈ ಹುಡುಗ ಚೆನ್ನಾಗಿ ಹಾಡುತ್ತಾನೆ. ಇವರಿಗೆ ಉತ್ತಮ ಭವಿಷ್ಯವಿದೆ. ಹೀಗಾಗಿ ನಮ್ಮ ಮನೆಯಲ್ಲೇ ಇಟ್ಟುಕೊಳ್ಳೋಣ ಎಂದು ಹೇಳಿದ್ದರು. ಆಗ ಇದೇ ಮನೆಯಲ್ಲೇ ಅವರು ನನಗೆ ಆಶ್ರಯ ಕೊಟ್ಟಿದ್ದರು ಎಂದು ನೆನೆದರು.

    ಚಿರಂಜೀವಿ ಸರ್ಜಾ ಅವರ ಮನೆಯಲ್ಲಿ ಸುಮಾರು ಒಂದು ವರ್ಷ ಇದ್ದೆ. ಈ ಮಧ್ಯೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಬಳಿ ಕಲಿಯಲು ಅವಕಾಶ ಮಾಡಿಕೊಟ್ಟಿದ್ದರು. ಬಳಿಕ ವರದನಾಯ್ಕ್ ಸಿನಿಮಾಕ್ಕೆ ಮೊದಲು ಅವಕಾಶ ಕೊಟ್ಟಿದ್ದರು ಎಂದು ಕಣ್ಣೀರು ಹಾಕಿದರು.

    ನನಗಿಂತ ಎಷ್ಟೇ ದೊಡ್ಡವರಾಗಿದ್ದರೂ ಸರ್ ಅಂತ ಕರಿಬೇಡ. ಚಿರು ಅಂತ ಕರೆದರೆ ಸಾಕು ಎಂದು ಹೇಳಿದ್ದರು. ಅವರಿಗೆ ಪಕ್ಷಿ, ಪ್ರಾಣಿಗಳೆಂದೆ ತುಂಬಾ ಪ್ರೀತಿ. ಅವರ ಅಗಲಿಕೆ ಮನಸ್ಸಿಗೆ ಬೇಜಾರು, ನೋವು ತಂದಿದೆ ಎಂದು ಭಾವುಕರಾದರು.