Tag: chandan achar

  • ಬೆಂಗಳೂರು ಬಾಯ್ಸ್ ಕೊಟ್ಟ ನಾಲ್ಕು ಐಕಾನಿಕ್ಸ್ ಕ್ಯಾರೆಕ್ಟರ್ ಝಲಕ್

    ಬೆಂಗಳೂರು ಬಾಯ್ಸ್ ಕೊಟ್ಟ ನಾಲ್ಕು ಐಕಾನಿಕ್ಸ್ ಕ್ಯಾರೆಕ್ಟರ್ ಝಲಕ್

    ವಿ.ಮೇಕರ್ಸ್ ನಿರ್ಮಾಣದಲ್ಲಿ ಮೂಡಿ ಬಂದಿರುವ ‘ಬೆಂಗಳೂರು ಬಾಯ್ಸ್’  (Bangalore Boys) ಸಿನಿಮಾದ ಮೊದಲ ನೋಟ ಬಿಡುಗಡೆಯಾಗಿದೆ. ಎರಡು ನಿಮಿಷ ಐವತ್ತೈದು ಸೆಕೆಂಡ್ ಇರುವ ಟ್ರೈಲರ್ ಫನ್-ಎಮೋಷನ್, ಸೆಂಟಿಮೆಂಟ್, ರೋಮ್ಯಾನ್ಸ್, ಮೋಜು-ಮಸ್ತಿ, ಪಂಚಿಂಗ್ ಡೈಲಾಗ್ ಕಿಕ್ ಗಳಿಂದ ಕೂಡಿದೆ.

    ವೇಸ್ಟ್ ಎನಿಸಿಕೊಳ್ಳುವ ಲಾಸ್ಟ್ ಬೆಂಚ್ ಸ್ಟೂಡೆಂಟ್ ಬದುಕಿನಲ್ಲಿ ಸಾಧನೆಯ ಗುರಿಮುಟ್ಟಿದ ಸಾಕಷ್ಟು ಉದಾಹರಣೆಗಳಿವೆ. ಅಂತಹದ್ದೇ ಕಥಾಹಂದರ ಹೊಂದಿರುವ ಸಿನಿಮಾ ಬೆಂಗಳೂರು ಬಾಯ್ಸ್. ತೊಂಬತ್ತರ ದಶಕದಲ್ಲಿ ಸೂಪರ್ ಹಿಟ್ ಸಿನಿಮಾಗಳಾದ ರಣಧೀರ, ಅಂತ , ಓಂ ಹಾಗೂ ಎ ಚಿತ್ರಗಳ ಪಾತ್ರದಲ್ಲಿ ಅಭಿಷೇಕ್ ದಾಸ್, ಸಚಿನ್ ಚೆಲುವರಾಯಸ್ವಾಮಿ (Sachin Cheluvarayaswamy), ಚಂದನ್ ಆಚಾರ್ (Chandan Achar), ರೋಹಿತ್ ಮಿಂಚಿದ್ದಾರೆ. ಇವರಿಗೆ ಜೋಡಿಯಾಗಿ ಪ್ರಗ್ಯ ನಯನ, ವೈನಿಧಿ ಜಗದೀಶ್, ಜಯಶ್ರೀ ಆಚಾರ್ ಹಾಗೂ ಸೋನಿ ನಟಿಸಿದ್ದಾರೆ. ಇದನ್ನೂ ಓದಿ:ಅಂಬಿ ಪುತ್ರನ ಅದ್ದೂರಿ ಕಲ್ಯಾಣ- ಮದುವೆಯ ಕಲರ್‌ಫುಲ್ ಫೋಟೋಸ್

    ಕಾಮಿಡಿ ಕಿಂಗ್ ಚಿಕ್ಕಣ ಪ್ರಮುಖ ಪಾತ್ರವೊಂದ್ರಲ್ಲಿ ನಟಿಸಿದ್ದು, ಐಟಿಬಿಟಿ ಉದ್ಯೋಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅರಸು ಸಾಹಿತ್ಯದ ಹಾಡಿಗೆ ಕಂಠ ಕೂಡ ಕುಣಿಸಿದ್ದಾರೆ.  ಉಮೇಶ್, ಪಿಡಿ ಸತೀಶ್, ಮೋಹನ್ ಜೂನೇಜಾ ಸೇರಿದಂತೆ ಹಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ. ಶೂಟಿಂಗ್ ಮುಗಿಸಿ ಬಿಡುಗಡೆ ರೆಡಿಯಾಗಿರೋ ಬೆಂಗಳೂರು ಬಾಯ್ಸ್ ಸಿನಿಮಾಗೆ ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾ ಖ್ಯಾತಿಯ ಗುರುದತ್‌ ಗಾಣಿಗ  (Gurudutt Ganiga)ಕ್ರಿಯೇಟಿವ್‌ ನಿರ್ದೇಶಕರಾಗಿ ಕೆಲಸ ಮಾಡಿದ್ದು, ರವಿ ಶ್ರೀರಾಮ್ ಕೋ ಡೈರೆಕ್ಟರ್ ಆಗಿ ದುಡಿದಿದ್ದಾರೆ.

    ರಿಜೋ ಪಿ ಜಾನ್ ಛಾಯಾಗ್ರಹಣ, ಧರ್ಮ ವಿಶ್ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. . ಸಿನಿಮಾ ಆಸಕ್ತಿ ಹೊಂದಿರುವ ತೆಲುಗು ಮೂಲದ ವಿಕ್ರಮ್‌ ಕೆ.ವೈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಪ್ರಶಾಂತ್ ರಾವ್ ಪುರಂ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಸದ್ಯ ಟ್ರೇಲರ್ ಮೂಲಕ ಕಿಕ್ ಕೊಟ್ಟಿರುವ ಬೆಂಗಳೂರು ಬಾಯ್ಸ್ ಆದಷ್ಟು ಬೆಳ್ಳಿತೆರೆಮೇಲೆ ಅಬ್ಬರಿಸಲಿದೆ.

  • ‘ಮಂಗಳವಾರ ರಜಾದಿನ’ ಯಶಸ್ವಿ ಪ್ರದರ್ಶನ – ಯುವಿನ್ ಚೊಚ್ಚಲ ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಮಹಾಪೂರ

    ‘ಮಂಗಳವಾರ ರಜಾದಿನ’ ಯಶಸ್ವಿ ಪ್ರದರ್ಶನ – ಯುವಿನ್ ಚೊಚ್ಚಲ ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಮಹಾಪೂರ

    ಳೆದ ಸಿನಿ ಶುಕ್ರವಾರ ಬಿಡುಗಡೆಯಾದ ‘ಮಂಗಳವಾರ ರಜಾದಿನ’ ಚಿತ್ರ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರಾಜ್ಯಾದ್ಯಂತ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಈ ಚಿತ್ರದ ಮೂಲಕ ಯುವ ನಿರ್ದೇಶಕ ಯುವಿನ್ ಮೊದಲ ಸಿನಿಮಾ ನಿರ್ದೇಶನದಲ್ಲೇ ಗೆಲುವಿನ ನಗೆ ಬೀರಿದ್ದಾರೆ.

    ಬಿಗ್‍ಬಾಸ್ ಖ್ಯಾತಿಯ ಚಂದನ್ ಆಚಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದಲ್ಲಿ ಲಾಸ್ಯ ನಾಗರಾಜ್ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ. ರಜನಿಕಾಂತ್, ಗೋಪಾಲಕೃಷ್ಣ ದೇಶಪಾಂಡೆ, ಹರಿಣಿ, ಜಹಂಗೀರ್, ಸೇರಿದಂತೆ ಹಲವು ಕಲಾವಿದರನ್ನೊಳಗೊಂಡ ‘ಮಂಗಳವಾರ ರಜಾದಿನ’ ಚಿತ್ರ ಎಲ್ಲರ ಗಮನ ಸೆಳೆದಿದೆ. ಯುವಿನ್ ನಿರ್ದೇಶನ ಮೆಚ್ಚುಗೆಗೆ ಪಾತ್ರವಾಗಿದೆ. ಕಾಮಿಡಿ ಹಾಗೂ ಭಾವನಾತ್ಮಕ ಅಂಶಗಳನ್ನೊಳಗೊಂಡ ಮಂಗಳವಾರ ರಜಾದಿನ ಕ್ಷೌರಿಕನ ಕುರಿತಾದ ಕಥಾಹಂದರವನ್ನು ಒಳಗೊಂಡಿದೆ.

    ಕ್ಷೌರಿಕ ಹುಡುಗನಿಗೆ ಬಾಲ್ಯದಿಂದಲೂ ನಟ ಸುದೀಪ್ ಇಷ್ಟದ ನಟ. ಸುದೀಪ್ ಗೆ ಹೇರ್ ಕಟ್ ಮಾಡಬೇಕು ಎನ್ನುವುದು ಆ ಹುಡುಗನ ಕನಸು. ಆ ಕನಸಿನ ನನಸಿನ ಪಯಣದಲ್ಲಿ ಏನೆಲ್ಲ ಆಗುತ್ತೆ ಅನ್ನೋದರ ಸುತ್ತ ಹೆಣೆದ ಚಿತ್ರ ‘ಮಂಗಳವಾರ ರಜಾದಿನ’ ಸಿನಿಮಾ. ಕಾಮಿಡಿ ಜೊತೆಗೆ ಭಾವನಾತ್ಮಕ ಅಂಶಗಳು ಬೆರೆತಿರೋ ಮಂಗಳವಾರ ರಜಾದಿನ ಸಿನಿರಸಿಕರನ್ನು ನಗಿಸುವುದರ ಜೊತೆ ಭಾವನಾತ್ಮಕವಾಗಿಯೂ ಕಾಡುತ್ತದೆ. ಎಲ್ಲೂ ಕೂಡ ನಿರ್ದೇಶಕ ಯುವಿನ್ ಮೊದಲ ನಿರ್ದೇಶನದ ಸಿನಿಮಾ ಎನಿಸುವುದಿಲ್ಲ ಅಷ್ಟು ಅಚ್ಚುಕಟ್ಟಾಗಿ ಸಿನಿಮಾವನ್ನು ತೆರೆ ಮೇಲೆ ತಂದಿದ್ದಾರೆ.

    ನಿರ್ದೇಶಕರ ಪ್ರಯತ್ನಕ್ಕೆ ಸಿನಿಮಾ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಭರವಸೆಯ ನಿರ್ದೇಶಕನಾಗಿ ಯುವಿನ್ ಹೊರ ಹೊಮ್ಮಿದ್ದಾರೆ. ಚೊಚ್ಚಲ ಸಿನಿಮಾಕ್ಕೆ ಪ್ರೇಕ್ಷಕರು ತೋರುತ್ತಿರುವ ಪ್ರೀತಿಗೆ ನಿರ್ದೇಶಕ ಯುವಿನ್ ಕೂಡ ಸಂತಸಗೊಂಡಿದ್ದಾರೆ. ‘ಮಂಗಳವಾರ ರಜಾದಿನ’ ತ್ರಿವರ್ಗ ಫಿಲಂಸ್ ಬ್ಯಾನರ್ ನಡಿ ನಿರ್ಮಾಣವಾಗಿದ್ದು ಕೆ.ವಿ.ಎನ್ ಪ್ರೊಡಕ್ಷನ್ಸ್ ರಾಜ್ಯಾದ್ಯಂತ ಸಿನಿಮಾ ಬಿಡುಗಡೆ ಮಾಡಿದೆ.

  • ಮಹಿಳಾ ಸ್ಪರ್ಧಿಗಳ ರಹಸ್ಯ ಬಿಚ್ಚಿಟ್ಟ ಚಂದನ್ – ಮರ್ಯಾದೆ ಹೋಗ್ತಿದೆ ಎಂದ ದೀಪಿಕಾ

    ಮಹಿಳಾ ಸ್ಪರ್ಧಿಗಳ ರಹಸ್ಯ ಬಿಚ್ಚಿಟ್ಟ ಚಂದನ್ – ಮರ್ಯಾದೆ ಹೋಗ್ತಿದೆ ಎಂದ ದೀಪಿಕಾ

    ಬೆಂಗಳೂರು: ಬಿಗ್ ಬಾಸ್ ಸೀಸನ್-7ರಲ್ಲಿ ಚಂದನ್ ಮನೆಯ ಮಹಿಳಾ ಸ್ಪರ್ಧಿಗಳ ರಹಸ್ಯ ಬಿಚ್ಚಿಟ್ಟಿದ್ದು, ಇದನ್ನು ಕೇಳಿಸಿಕೊಂಡ ದೀಪಿಕಾ ದಾಸ್ ನನ್ನ ಮರ್ಯಾದೆ ಹೋಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಶನಿವಾರ ‘ವಾರದ ಕತೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸುದೀಪ್ ಬಿಗ್ ಬಾಸ್ ಮನೆಯ ಮೊದಲನೇ ದಿನದ ಅನುಭವವನ್ನು ಕೇಳುತ್ತಿರುತ್ತಾರೆ. ಸುದೀಪ್, ಚಂದನ್ ಅವರನ್ನು ಕೇಳಿದಾಗ ಅವರು ಮಹಿಳಾ ಸ್ಪರ್ಧಿಗಳ ರಹಸ್ಯ ಬಿಚ್ಚಿಟ್ಟಿದ್ದಾರೆ. ಚಂದನ್ ಅವರ ಮಾತು ಕೇಳಿ ದೀಪಿಕಾ, ಪ್ರಿಯಾಂಕಾ ಹಾಗೂ ಭೂಮಿ ಮೊದಲು ಮುಜುಗರಕ್ಕೆ ಒಳಗಾದರು. ನಂತರ ದೀಪಿಕಾ ನನ್ನ ಮರ್ಯಾದೆ ಹೋಗುತ್ತಿದೆ ಎಂದು ತಮ್ಮ ಮುಖವನ್ನು ಮುಚ್ಚಿಕೊಂಡರು.

    ಬಿಗ್ ಬಾಸ್ ಮನೆಗೆ ಬಂದ ಮೊದಲನೇ ದಿನ ನಾನು ಮಹಿಳಾ ಸ್ಪರ್ಧಿಗಳನ್ನು ಮಾತನಾಡಿಸಿ ಮಲಗಿದ್ದೆ. ಮರುದಿನ ಎಲ್ಲರೂ ಎದ್ದಾಗ ನನಗೆ ಶಾಕ್ ಆಯಿತು. ಯಾರು ಯಾವ ಹುಡುಗಿ ಎಂದು ಗುರುತು ಹಿಡಿಯಲು ಆಗಲಿಲ್ಲ. ನಾನು ಭೇಟಿ ಮಾಡಿದ್ದಾಗ ಮಹಿಳಾ ಸ್ಪರ್ಧೆಗಳು ನಾಲ್ಕು ಇಂಚು ಮೇಕಪ್ ಹಾಕಿದ್ದರು ಎಂದು ಚಂದನ್ ಹೇಳಿದಾಗ ದೀಪಿಕಾ ಅವರ ಮೀಜರ್‍ಮೆಂಟ್ ಮಾಡಿದ್ದರು ಅನಿಸುತ್ತೆ. ಹಾಗಾಗಿ ಈ ರೀತಿ ಹೇಳುತ್ತಿದ್ದಾರೆ ಎಂದು ಖಡಕ್ಕಾಗಿ ಪ್ರತಿಕ್ರಿಯಿಸಿದರು.

    ದೀಪಿಕಾ ಮಾತು ಕೇಳಿ ಚಂದನ್ ಇರಲಿ ಬಿಡಿ ಸರ್ ತೊಂದರೆ ಇಲ್ಲ ಎಂದು ಹೇಳಿದ್ದಾರೆ. ತಕ್ಷಣ ದೀಪಿಕಾ ಸರ್ ನಮ್ಮ ಮರ್ಯಾದೆ ಹೋಗುತ್ತಿದೆ ಎಂದು ತಮ್ಮ ಮುಖವನ್ನು ಮುಚ್ಚಿಕೊಂಡಿದ್ದಾರೆ. ಬಳಿಕ ಸುದೀಪ್ ಒಬ್ಬರನ್ನು ಕಂಡು ಹಿಡಿಯಲು ಎಷ್ಟು ಹೊತ್ತು ತೆಗೆದುಕೊಂಡ್ರಿ ಎಂದು ಪ್ರಶ್ನಿಸಿದಾಗ ಚಂದನ್, ಭೂಮಿರನ್ನು ಮೇಕಪ್ ಇಲ್ಲದೆ ನೋಡಿದಾಗ ನಾನು ಶಾಕ್ ಆದೆ. ಏಕೆಂದರೆ ಮೇಕಪ್ ಹಾಕಿದಾಗ ಭೂಮಿ ದೊಡ್ಡ ವ್ಯಕ್ತಿ ರೀತಿ ಕಾಣಿಸ್ತಿದ್ರೂ, ಮೇಕಪ್ ಇಲ್ಲದಾಗ ಚಿಕ್ಕ ಹುಡುಗಿ ತರ ಕಾಣಿಸುತ್ತಿದ್ದರು ಎಂದು ಚಂದನ್ ತಿಳಿಸಿದರು.

  • ವಾಂಗಿಬಾತ್, ಚಿತ್ರಾನ್ನಕ್ಕಾಗಿ ಚಂದನ್-ದೀಪಿಕಾ ನಡ್ವೆ ಗಲಾಟೆ

    ವಾಂಗಿಬಾತ್, ಚಿತ್ರಾನ್ನಕ್ಕಾಗಿ ಚಂದನ್-ದೀಪಿಕಾ ನಡ್ವೆ ಗಲಾಟೆ

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರಲ್ಲಿ ವಾಂಗಿಬಾತ್ ಮತ್ತು ಚಿತ್ರಾನ್ನಕ್ಕಾಗಿ ಚಂದನ್ ಆಚಾರ್ ಮತ್ತು ದೀಪಿಕಾ ದಾಸ್ ಮಧ್ಯೆ ಗಲಾಟೆ ನಡೆದಿದೆ.

    ದೀಪಿಕಾ ಮತ್ತು ಚಂದನ್ ಸೇರಿದಂತೆ  ಮನೆಯ ಸದಸ್ಯರು ಸೇರಿಕೊಂಡು ಅಡುಗೆ ಮಾಡುತ್ತಿದ್ದರು. ಈ ವೇಳೆ ದೀಪಿಕಾ ದಾಸ್ ಮತ್ತು ಚಂದನ್ ಆಚಾರ್ ಮಧ್ಯೆ ಅಡುಗೆ ಮಾಡುವ ವಿಚಾರಕ್ಕೆ ವಾಗ್ವಾದ ನಡೆದಿದೆ. ಚಂದನ್, ನಾಳೆ ನೀವು ಮಾಡಿ, ನಾಳಿದ್ದು ನಾನು ಅಡುಗೆ ಮಾಡುತ್ತೀನಿ ಎಂದು ಹೇಳಿದ್ದಾರೆ. ಆಗ ದೀಪಿಕಾ ನಾಳೆ ವಾಂಗಿಬಾತ್ ಮಾಡುತ್ತೀನಿ ಎಂದರು. ಚಂದನ್ ನಾಳಿದ್ದು ನಾನು ಚಿತ್ರಾನ್ನ ಮಾಡುತ್ತೇನೆ ಎಂದು ಇಬ್ಬರು ಚರ್ಚಿಸುತ್ತಿದ್ದರು. ಕೊನೆಗೆ ಚಿತ್ರಾನ್ನ ಮಾಡೋದಾ, ವಾಂಗಿಬಾತ್ ಮಾಡೋದಾ ಎಂಬ ಕಾರಣಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು.

    ಆಗ ಕೋಪಗೊಂಡು ದೀಪಿಕಾ, ಚಂದನ್ ನೀವು ನನಗೆ ತುಂಬಾ ಇರಿಟೇಟ್ ಮಾಡುತ್ತಿದ್ದೀರಾ. ಎಲ್ಲರೂ ಇಲ್ಲಿ ಬೇರೆ ಬೇರೆ ಮನಸ್ಥಿತಿಯಲ್ಲಿ ಇದ್ದಾರೆ. ನಿಮ್ಮ ತರ ಯಾರೂ ಇಲ್ಲ, ಬೇರೆಯವರ ಬಗ್ಗೆ ಮಾತನಾಡಿಬೇಡಿ. ನಿಮ್ಮ ಮನಸ್ಥಿತಿ ಬಗ್ಗೆ ತಿಳಿದುಕೊಳ್ಳಿ ಎಂದು ಗರಂ ಆದರು. ಆಗ ಚಂದನ್, ನಾವೇನು ಇಲ್ಲಿ ಸುಮ್ಮನೆ ತಿಂದುಕೊಂಡು ಹೋಗಬೇಕಾ. ನನ್ನದೇ ನಡಿಯಬೇಕು, ನನ್ನದೇ ಆಗಬೇಕು. ನಿಮ್ಮ ತರಹದ ಮನಸ್ಥಿತಿ ನನ್ನಲಿಲ್ಲ ಎಂದು ವಾದ ಮಾಡಿದರು.

    ಬೇರೆಯವರ ಬಗ್ಗೆ ಬೆರಳು ತೋರಿಸಬೇಡಿ. ಸಣ್ಣ ಮನಸ್ಥಿತಿ ಬಿಡಿ, ನನ್ನ ಹತ್ತಿರ ವಾದ ಮಾಡಕ್ಕೆ ಬರಬೇಡಿ ಎಂದು ದೀಪಿಕಾ ಹೇಳಿದರೆ, ಚಂದನ್, ಡಬಲ್ ಗೇಮ್ ಆಡಬೇಡಿ, ನನ್ನ ಮನಸ್ಥಿತಿ ನನಗೆ ಗೊತ್ತು, ನಾಲಿಗೆ ಮೇಲೆ ಒಂದು ವಿಚಾರ ಇರಲಿ ಎಂದು ಒಬ್ಬರಿಗೊಬ್ಬರು ಕಿತ್ತಾಡಿದರು. ಕೊನೆಗೆ ದೀಪಿಕಾ ಬೇಸರಗೊಂಡು ಅಡುಗೆ ಮನೆಯಿಂದ ಹೊರ ಹೋದರು.

    ಇತ್ತ ಚಂದನ್, ಕ್ಯಾಪ್ಟನ್ ಕಿಶನ್ ಜೊತೆಯೂ ವಾದ ಮಾಡಿದ್ದಾರೆ. ನನ್ನದೇ ನಡಿಯಬೇಕು ಅಂತಿದೆಯಲ್ಲಾ ಅದನ್ನು ಮನೆಯಲ್ಲಿ ಇಟ್ಟುಕೊಳ್ಳಲಿ ಎಂದು ದೀಪಿಕಾ ಬಗ್ಗೆ ಹೇಳಿದ್ದಾರೆ. ಏನಾದರೂ ಆದರೆ ಚಂದನ್ ಎಂದು ಮನೆಯವರೆಲ್ಲಾ ಹೇಳುತ್ತಾರೆ. ಇದೊಂದು ಸಣ್ಣ ವಿಚಾರ, ಇದನ್ನೂ ಇಷ್ಟೊಂದು ಕಾಂಪ್ಲಿಕೇಟ್ ಮಾಡಬಾರದಿತ್ತು. ನಮ್ಮನ್ನು ಮಾತಾಡಕ್ಕೂ ಬಿಡಲ್ಲ, ಅಡುಗೆ ಮಾಡಕ್ಕೂ ಬಿಡಲ್ಲ, ಮೇಲೊಂದು ಹಿಂದೊಂದು ಮಾತನಾಡಕ್ಕೆ ಬರಲ್ಲ ಎಂದು ಚಂದನ್ ವಾದ ಮಾಡಿದರು.

  • ದೃಷ್ಟಿ ಆಗುತ್ತೆ ನನ್ನ ಹುಡುಗಿಗೆ ಹಾಗೆ ನೋಡ್ಬೇಡಿ: ಚಂದನ್

    ದೃಷ್ಟಿ ಆಗುತ್ತೆ ನನ್ನ ಹುಡುಗಿಗೆ ಹಾಗೆ ನೋಡ್ಬೇಡಿ: ಚಂದನ್

    ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿ ಚಂದನ್ ದೃಷ್ಟಿ ಆಗುತ್ತೆ ನನ್ನ ಹುಡುಗಿಗೆ ಹಾಗೆ ನೋಡಬೇಡಿ ಎಂದು ಹೇಳುವುದರ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ.

    ಬುಧವಾರ ಬಿಗ್ ಬಾಸ್, ಜೋಡಿ ಸ್ಪರ್ಧಿಗಳಿಗೆ ಟಾಸ್ಕ್ ಒಂದನ್ನು ನೀಡಿದ್ದರು. ಈ ಟಾಸ್ಕ್ ನಲ್ಲಿ ಚಂದನ್ ಹಾಗೂ ದೀಪಿಕಾ ಸೋಲುತ್ತಾರೆ. ಹಾಗಾಗಿ ಬಿಗ್ ಬಾಸ್ ಅವರಿಗೆ ಡ್ಯಾನ್ಸ್ ಮಾಡುವ ಶಿಕ್ಷೆಯನ್ನು ನೀಡುತ್ತಾರೆ. ಅಲ್ಲದೆ ಅವರಿಗೆ ಟೈಯರ್ಡ್ ಆದಾಗ ಬೇರೆ ಸ್ಪರ್ಧಿಗಳಿಗೆ ಡ್ಯಾನ್ಸ್ ಮಾಡಲು ಹೇಳಿದ್ದರು.

    ಚಂದನ್ ಹಾಗೂ ದೀಪಿಕಾ ಹೆಡ್‍ಫೋನ್ ಹಾಕಿ ಡ್ಯಾನ್ಸ್ ಮಾಡುವಾಗ ಶೈನ್ ಹಾಗೂ ಚೈತ್ರಾ ಅವರ ಮುಂದೆ ನಿಂತುಕೊಂಡು ಮಾತನಾಡುತ್ತಿರುತ್ತಾರೆ. ಈ ವೇಳೆ ದೀಪಿಕಾ ಇಬ್ಬರಿಗೆ ಫ್ರೆಶಪ್ ಆಗಲು ಹೇಳುತ್ತಾರೆ. ಆದರೆ ಶೈನ್, ದೀಪಿಕಾ ಅವರನ್ನು ಮಾತನಾಡಿಸುತ್ತಿರುತ್ತಾರೆ. ಇದನ್ನು ನೋಡಿದ ಚಂದನ್ ದೃಷ್ಟಿ ಆಗುತ್ತೆ ನನ್ನ ಹುಡುಗಿಗೆ ಹಾಗೆ ನೋಡಬೇಡಿ ಎಂದು ಶೈನ್‍ಗೆ ಹೇಳಿದ್ದಾರೆ. ಚಂದನ್ ಮಾತು ಕೇಳಿ ಶೈನ್ ಹಾಗೂ ಚೈತ್ರಾ ಶಾಕ್ ಆಗಿದ್ದಾರೆ.

    ಈ ಮೊದಲು ಚಂದನ್, ನೀನು ದೀಪಿಕಾಗೆ ಏನೂ ಹೇಳಬೇಡ. ನಿನ್ನ ಪಾಟ್ನರ್ ಬಗ್ಗೆ ನೀನು ನೋಡಿಕೋ. ನನ್ನ ಪಾಟ್ನರ್‍ಗೆ ನೀನು ಏನು ಹೇಳಬೇಡ ಎಂದು ಕಿಶನ್‍ಗೆ ವಾರ್ನ್ ಮಾಡಿದ್ದರು. ಆಗ ಕಿಶನ್, ದೀಪಿಕಾ ನನ್ನ ಸ್ನೇಹಿತೆ. ಅವರ ಜೊತೆ ಮಾತನಾಡಬೇಡ ಎಂದು ಹೇಳುವುದಕ್ಕೆ ನಿನಗೆ ಹಕ್ಕಿಲ್ಲ ಎಂದು ಚಂದನ್‍ಗೆ ಹೇಳಿದ್ದರು. ಇಬ್ಬರ ನಡುವೆ ವಾದ-ವಿವಾದ ಹೆಚ್ಚಾಗುತ್ತಿದ್ದಂತೆ ದೀಪಿಕಾ, ಚಂದನ್ ಅವರಿಗೆ ಸಮಾಧಾನ ಮಾಡಿದ್ದಾರೆ.