Tag: Chancellor

  • ಡೀಮ್ಡ್ ವಿವಿ ಕುಲಪತಿ ಹುದ್ದೆಯಿಂದ ರಾಜ್ಯಪಾಲ ಆರಿಫ್ ಖಾನ್‌ನನ್ನು ವಜಾಗೊಳಿಸಿದ ಕೇರಳ ಸರ್ಕಾರ

    ಡೀಮ್ಡ್ ವಿವಿ ಕುಲಪತಿ ಹುದ್ದೆಯಿಂದ ರಾಜ್ಯಪಾಲ ಆರಿಫ್ ಖಾನ್‌ನನ್ನು ವಜಾಗೊಳಿಸಿದ ಕೇರಳ ಸರ್ಕಾರ

    ತಿರುವನಂತಪುರಂ: ಕೇರಳ ಕಲಾಮಂಡಲಂ ಡೀಮ್ಡ್ ವಿಶ್ವವಿದ್ಯಾಲಯದ (Deemed University) ಕುಲಪತಿ (Chancellor) ಸ್ಥಾನದಿಂದ ಕೇರಳ (Kerala) ರಾಜ್ಯಪಾಲ (Governor) ಆರಿಫ್ ಮೊಹಮ್ಮದ್ ಖಾನ್ (Arif Mohammed Khan) ಅವರನ್ನು ರಾಜ್ಯ ಸರ್ಕಾರ ಗುರುವಾರ ವಜಾಗೊಳಿಸಿದೆ.

    ಕೇರಳದಲ್ಲಿ ಹಲವು ದಿನಗಳಿಂದ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಂಘರ್ಷ ನಡೆಯುತ್ತಿದ್ದು, ಇದೀಗ ತಾರಕಕ್ಕೇರಿದೆ. ಬುಧವಾರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಯಿಂದ ವಜಾಗೊಳಿಸಲು ಕೇರಳದ ಎಡ ನೇತೃತ್ವದ ಸರ್ಕಾರ (LDF) ನಿರ್ಧರಿಸಿದ್ದು, ಇಂದು ಅವರನ್ನು ವಜಾಗೊಳಿಸಿದೆ. ಇದನ್ನೂ ಓದಿ: ಮೋದಿ ಬೆಂಗಳೂರು ಡೈರಿ: ಎಷ್ಟು ಗಂಟೆಗೆ ಏನು ಕಾರ್ಯಕ್ರಮ? ಯಾವೆಲ್ಲ ರಸ್ತೆಗಳು ಬಂದ್‌?

    ಉಪಕುಲಪತಿಗಳ ನೇಮಕ ಸೇರಿದಂತೆ ವಿಶ್ವವಿದ್ಯಾಲಯಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಎರಡೂ ಕಡೆಯವರು ಹೆಚ್ಚು ಭಿನ್ನಾಭಿಪ್ರಾಯ ಹೊಂದಿದ್ದಾರೆ. ಹೀಗಾಗಿ ರಾಜ್ಯಪಾಲರನ್ನು ಕುಲಪತಿ ಹುದ್ದೆಯಿಂದ ವಜಾಗೊಳಿಸಲಾಗಿದೆ.

    ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆಡಳಿತ ಇನ್ನು ಮುಂದೆ ರಾಜ್ಯದ ವಿಶ್ವವಿದ್ಯಾಲಯಗಳ ಚುಕ್ಕಾಣಿ ಹಿಡಿಯಲು ರಾಜ್ಯಪಾಲರು ಬಯಸುವುದಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಬೆಂಗಳೂರು, ಹೈದರಾಬಾದ್‌ನಲ್ಲೂ ಇಂದಿನಿಂದ ಜಿಯೋ ಟ್ರೂ 5G ಲಭ್ಯ

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ಡಾ. ಜಯಕರ ಎಸ್.ಎಂ ನೇಮಕ

    ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ಡಾ. ಜಯಕರ ಎಸ್.ಎಂ ನೇಮಕ

    ಬೆಂಗಳೂರು: ಮಾರುತಿ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಆಂಡ್ ರಿಸರ್ಚ್, ಪ್ರಾಸ್ಥೋಡೆಂಟಿಕ್ಸ್ ವಿಭಾಗದ ಪ್ರಾಂಶುಪಾಲ ಹಾಗೂ ಮುಖ್ಯಸ್ಥರಾಗಿರುವ ಡಾ. ಜಯಕರ ಎಸ್.ಎಂ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿಯನ್ನಾಗಿ ಸೋಮವಾರ ನೇಮಿಸಲಾಗಿದೆ.

    ಜಯಕರ ಅವರನ್ನು ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿಯನ್ನಾಗಿ 4 ವರ್ಷಗಳ ಅವಧಿಗೆ ನೇಮಿಸಿದ್ದಾರೆ. ನಿರ್ಗಮಿಸುತ್ತಿರುವ ಪ್ರಭಾರ ಕುಲಪತಿಗಳಾದ ಪ್ರೊ. ಸಿಂಥಿಯಾ ಮೆನೆಜಸ್ ಅವರಿಂದ ಜಯಕರ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಈ ಬಗ್ಗೆ ರಾಜಭವನದಿಂದ ಅಧಿಸೂಚನೆ ಹೊರಡಿಸಲಾಗಿದೆ. ಇದನ್ನೂ ಓದಿ: ಸುಪ್ರೀಂನಿಂದ ಮಹಾರಾಷ್ಟ್ರದ ಎರಡೂ ಬಣದ ಶಾಸಕರಿಗೆ ತಾತ್ಕಾಲಿಕ ರಿಲೀಫ್‌

    ಜಯಕರ ಅವರನ್ನು ಕುಲಪತಿಯನ್ನಾಗಿ ನೇಮಿಸುವ ಸಂದರ್ಭ ಕುಲಸಚಿವರಾದ ಪ್ರೊ.ಎಂ. ಕೊಟ್ರೇಶ್, ಕುಲಸಚಿವ(ಮೌಲ್ಯಮಾಪನ) ಪ್ರೊ.ಜೆ.ಟಿ ದೇವರಾಜು ಹಾಗೂ ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು. ಇದನ್ನೂ ಓದಿ: ಎಐಎಡಿಎಂಕೆ ಕಿತ್ತಾಟ – ಪಳನಿಸ್ವಾಮಿ ತಾತ್ಕಾಲಿಕ ಬಾಸ್‌, ಪನ್ನೀರ್‌ಸೆಲ್ವಂ ಉಚ್ಛಾಟನೆ

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರು ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಗಳ ನೇಮಕ

    ಬೆಂಗಳೂರು ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಗಳ ನೇಮಕ

    ಬೆಂಗಳೂರು: ಕುಲಪತಿ ಪ್ರೊ.ವೇಣುಗೋಪಾಲ್ ಅವಧಿ ಮುಕ್ತಾಯ ಹಿನ್ನೆಲೆ ರಾಜ್ಯಪಾಲರು ನೂತನ ಕುಲಪತಿಗಳ ನೇಮಕ ಮಾಡಿದರು.

    ಬೆಂಗಳೂರು ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಗಳಾಗಿ(ಪ್ರಭಾರ) ಪ್ರೊ.ಸಿಂಥಿಯಾ ಮೆನಜಸ್(Dr. Cynthia Menezes) ಅವರನ್ನು ನೇಮಕ ಮಾಡಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: 500ರ ಗಡಿದಾಟಿದ ಕೋವಿಡ್ ಕೇಸ್ – ಶೂನ್ಯ ಮರಣ ಪ್ರಮಾಣ 

    ಪ್ರೊ.ಸಿಂಥಿಯಾ ಅವರು ಬೆಂಗಳೂರು ವಿವಿಯ ವಾಣಿಜ್ಯ ಮತ್ತು ನಿರ್ವಹಣೆ ವಿಭಾಗದ ಡೀನ್ ಆಗಿದ್ದರು.

     

  • ಮತ್ತೆ ಸುದ್ದಿಯಲ್ಲಿದೆ ಧಾರವಾಡ ಕರ್ನಾಟಕ ವಿವಿ- ಸುಳ್ಳು ಲೆಕ್ಕ ತೋರಿಸಿದ್ರಾ ಕುಲಪತಿ ಕೆ.ಬಿ ಗುಡಸಿ..?

    ಮತ್ತೆ ಸುದ್ದಿಯಲ್ಲಿದೆ ಧಾರವಾಡ ಕರ್ನಾಟಕ ವಿವಿ- ಸುಳ್ಳು ಲೆಕ್ಕ ತೋರಿಸಿದ್ರಾ ಕುಲಪತಿ ಕೆ.ಬಿ ಗುಡಸಿ..?

    ಧಾರವಾಡ: ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳು ಮಾಡಿದ್ದೇ ದರ್ಬಾರ್ ಆಗಿದೆ. ಇಂಥದ್ದೇ ಒಂದು ಕಾಂಡ ಧಾರವಾಡದ ಕರ್ನಾಟಕ ವಿವಿಯಲ್ಲಿ ನಡೆದಿದೆ. ಈ ವಿವಿಯ ಕುಲಪತಿಗಳು ಇಲ್ಲಿಗೆ ಬಂದ ನಂತರ ಬೇಕಾಬಿಟ್ಟಿ ಬಿಲ್ ಹಚ್ಚಿ ಹಣ ಹೊಡೆಯುತ್ತಿರುವುದು ಬೆಳಕಿಗೆ ಬಂದಿದೆ.

    ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ವಿರುದ್ಧ ದುಂದುವೆಚ್ಚ ಆರೋಪ ಕೇಳಿಬಂದಿದೆ. ಆರ್‍ಟಿಐ ಮಾಹಿತಿ ಪ್ರಕಾರ ಕುಲಪತಿ ಕೆ.ಬಿ ಗುಡಸಿ ಅಧಿಕಾರಕ್ಕೆ ಬಂದು ವರ್ಷವಾಗ್ತಿದೆ. ಅಷ್ಟರಲ್ಲೇ ಕರ್ನಾಟಕ ವಿವಿಯ ಬಂಗಲೆಗೂ ಶಿಫ್ಟ್ ಆಗಿದ್ದಾರೆ. ಆದರೆ ಅಲ್ಲಿಗೆ ಬಂದ್ಮೇಲೆ ಅವರು ಆ ಮನೆಗೆ 11 ಲಕ್ಷ ಖರ್ಚು ಮಾಡಿದ್ದಾರೆ. ಇದನು ಟೆಂಡರ್ ಕರೆಯದೇ ತುಂಡು ಗುತ್ತಿಗೆ ನೀಡಿದ್ದಾರೆ. ಕಾಮಗಾರಿಯಲ್ಲಿ ಕಿಟಕಿಯ ಕರ್ಟನ್, ಹೊಸ ಕಾಟು, ತಲೆದಿಂಬು ಸೇರಿ ಬರೋಬ್ಬರಿ 33 ಲಕ್ಷ ಖರ್ಚು ಮಾಡಿರುವುದಾಗಿ ಮಾಹಿತಿ ಸಿಕ್ಕಿದೆ. ಅದು ಹೇಗೆ ಎಂದು ಗೊತ್ತಾಗಬೇಕು. ಈ ಹಣದಲ್ಲಿ ಹೊಸ ಬಂಗಲೆಯನ್ನೇ ಕಟ್ಟಬಹುದಿತ್ತು ಎಂದು ಆರೋಪಿಸಲಾಗ್ತಿದೆ. ಇದನ್ನೂ ಓದಿ: ಕಲಬುರ್ಗಿ ಹತ್ಯೆ ಪ್ರಕರಣ – ಸಾಕ್ಷಿ ನುಡಿದ ಮಗಳು, ಪತ್ನಿ

    ಈ ವಿಚಾರ ರಾಜ್ಯಪಾಲರ ಗಮನಕ್ಕೂ ತರಲಾಗಿದೆ. ಇನ್ನು ಈ ಹಿಂದೆ ಇದ್ದ ಕುಲಪತಿ ವಾಲಿಕಾರ್ 7 ಲಕ್ಷ ರೂಪಾಯಿನಷ್ಟು ಖರ್ಚು ಮಾಡಿದ್ದಾರೆ. ತದನಂತರ ಪ್ರಮೋದ್ ಗಾಯ್ ಇದ್ದಾಗಲೂ 9 ಲಕ್ಷ ಖರ್ಚು ಮಾಡಿದ್ದಾರೆ. ಈ ಲೆಕ್ಕದಂತೆಯೇ ಹೋದರೆ ಈ ಬಂಗಲೆಗೆ 10 ವರ್ಷಗಳಲ್ಲಿ 60 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಲಾಗಿದೆ. ಆದರೆ ಸರ್ಕಾರದ ಉನ್ನತ ಶಿಕ್ಷಣ ಸಚಿವರಿಗೆ ಈ ಬಗ್ಗೆ ಕೇಳಿದರೆ, ನನ್ನ ವ್ಯಾಪ್ತಿಗೆ ಬರಲ್ಲ ಅಂತಾರೆ. 10 ಕೋಟಿ ಟೆಂಡರ್ ಮಾತ್ರ ಇವರಿಗೆ ಸಂಬಂಧ ಅಂತೆ.

    ಒಟ್ಟಿನಲ್ಲಿ ಇಲ್ಲಿ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಅಂತಾಗಿದೆ. ಸರ್ಕಾರಕ್ಕೆ ಜನರ ದುಡ್ಡಿನ ಮೇಲೆ ಅಷ್ಟೇ ಕಾಳಜಿ ಇದ್ದರೆ, ಇಂಥವರಿಗೆ ಮೂಗುದಾರ ಹಾಕಬೇಕು. ಇಲ್ಲದಿದ್ದರೆ ಜನರ ದುಡ್ಡು ನೀರಿನಲ್ಲಿ ಹೋಮದಂತೆ ಖರ್ಚಾಗುವುದರಲ್ಲಿ ಅನುಮಾನ ಇಲ್ಲ.

  • ಸಿಎಂ ಭೇಟಿ ಮಾಡಿದ ಕೃಷಿ ಕುಲಪತಿಗಳ ನಿಯೋಗ – ಮಾನವ ಸಂಪನ್ಮೂಲಗಳ ಕೊರತೆ ನೀಗಿಸುವಂತೆ ಮನವಿ

    ಸಿಎಂ ಭೇಟಿ ಮಾಡಿದ ಕೃಷಿ ಕುಲಪತಿಗಳ ನಿಯೋಗ – ಮಾನವ ಸಂಪನ್ಮೂಲಗಳ ಕೊರತೆ ನೀಗಿಸುವಂತೆ ಮನವಿ

    ಬೆಂಗಳೂರು: ಕೃಷಿ ವಿಶ್ವವಿದ್ಯಾಲಯಗಳಲ್ಲಿರುವ ಮಾನವ ಸಂಪನ್ಮೂಲಗಳ ಕೊರತೆಯನ್ನು ತುಂಬುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲರ ನೇತೃತ್ವದಲ್ಲಿ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

    ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಮಂಗಳವಾರ ಸಂಜೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಿಯೋಗ, ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಶೇ.45 ರಷ್ಟು ಶಿಕ್ಷಕರ ಹುದ್ದೆಗಳು, ಶೇ.55 ರಷ್ಟು ಶಿಕ್ಷಕೇತರ ಹುದ್ದೆ ಕೊರತೆಯಿದೆ. ವಿಶ್ವವಿದ್ಯಾಲಯ ಶಿಕ್ಷಣ ಮತ್ತು ಸಂಶೋಧನೆಗೆ 2016-17 ರಿಂದೀಚೆಗೆ ಶೇ.65 ರಷ್ಟು ಅನುದಾನ ಕಡಿತಗೊಂಡಿದೆ. ಗುಣಮಟ್ಟದ ಹಾಗೂ ಪರಿಣಾಮಕಾರಿ ಶಿಕ್ಷಣಕ್ಕೆ ಮಾನವ ಸಂಪನ್ಮೂಲಗಳ ಅಗತ್ಯತೆಯಿದೆ. ಆದರೆ ಇಷ್ಟೊಂದು ದೊಡ್ಡಮಟ್ಟದಲ್ಲಿ ಹುದ್ದೆಗಳು ಖಾಲಿಯಿರುರುವುದರಿಂದ ಈಗಿರುವ ಸಿಬ್ಬಂದಿಗಳೇ ಹೇಗೋ ಸರಿದೂಗಿಸಿಕೊಂಡು ಹೆಚ್ಚುವರಿ ಜವಾಬ್ದಾರಿಯಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    ಮಾನವ ಸಂಪನ್ಮೂಲಗಳ ಕೊರತೆಯಿಂದಾಗಿ ಕೆಲವೆಡೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಮಾನವ ಸಂಪನ್ಮೂಲಗಳ ಕೊರತೆ ವಿದ್ಯಾರ್ಥಿಗಳ ಕಲಿಕೆಯ ಮೇಲೂ ಪರಿಣಾಮ ಬೀರುತ್ತಿದ್ದು, ಅಲ್ಲದೇ ಹೆಚ್ಚುವರಿ ಜವಾಬ್ದಾರಿಯಿಂದಾಗಿ ಸಿಬ್ಬಂದಿಗಳ ಮೇಲೂ ಸಹ ಪರಿಣಾಮವುಂಟಾಗುತ್ತಿದೆ ಎಂದು ಕೃಷಿ ಸಚಿವರು ಭೇಟಿ ವೇಳೆ ಸಿಎಂಗೆ ಮನವರಿಕೆ ಮಾಡಿಕೊಟ್ಟು ಮಾನವಸಂಪನ್ಮೂಲಗಳ ಹೆಚ್ಚಳಕ್ಕೆ ಮನವಿ ಮಾಡಿದರು.

    ಭೇಟಿಗೂ ಮುನ್ನ ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ವಿಕಾಸಸೌಧದ ಕಚೇರಿಯಲ್ಲಿ ಕುಲಪತಿಗಳ ಸಮನ್ವಯ ಸಮಿತಿ ಸಭೆ ನಡೆದಿದ್ದು, ಸಭೆಯಲ್ಲಿ ಕೃಷಿ ಅನುಸಂಧಾನ ಪರಿಷತ್ತಿನ ಎಐಸಿಆರ್ ಪಿ ಯೋಜನೆಗಳಲ್ಲಿ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರದಿಂದ ಶೇ.80 ಹಾಗು ಶೇ.100 ರಷ್ಟು ಅನುದಾನ ಬರುತ್ತಿರುವುದರಿಂದ ಕೆವಿಕೆ ಹಾಗೂ ಐಸಿಆರ್ ಪೋಸ್ಟ್ ಗಳ ನೇಮಕಾತಿ ಮಾಡಲು ಕೂಡಲೇ ಅನುಮತಿ ಗೆ ಸಚಿವರಿಗೆ ಕುಲಪತಿಗಳು ಮನವಿ ಮಾಡಿದರು. ಅಲ್ಲದೇ ಶಿವಮೊಗ್ಗದ ನೂತವಾಗಿ ನಿರ್ಮಾಣಗೊಂಡಿರುವ ಇರುವಕ್ಕಿ ಕೃಷಿ ಮತ್ತು ತೋಟಗಾರಿಗೆ ವಿಶ್ವವಿದ್ಯಾಲಯದ ಉದ್ಘಾಟನೆಗೆ ದಿನಾಂಕ ನಿಗದಿಗೊಳಿಸುವ ಬಗ್ಗೆಯೂ ಚರ್ಚಿಸಲಾಯಿತು.

    ಕೃಷಿ ಶಿಕ್ಷಣ ಎಂದಮೇಲೆ ಎಲ್ಲಾ ವಿಶ್ವವಿದ್ಯಾಲಯಗಳು ಒಂದೇಯಾಗಿದ್ದು, ಯಾವುದೇ ವಿಶ್ವವಿದ್ಯಾಲಯಗಳು ಬೇರೆಬೇರೆ ಎಂದು ಭಾವಿಸಬಾರದು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮತ್ತು ಕಲಿಕೆಯ ಹಿತದೃಷ್ಟಿಯಿಂದ ಸಮಾನವಾಗಿ ಕೆಲಸ ಮಾಡಬೇಕು. ಅಲ್ಲದೇ ಕೃಷಿ ವಿಶ್ವವಿದ್ಯಾಲಯಗಳು ಕೃಷಿ ಇಲಾಖೆಯ ಜೊತೆ ನಿರಂತರ ಸಂಪರ್ಕ ಸಾಧಿಸುತ್ತಿರಬೇಕು. ಕೃಷಿಯಲ್ಲಿ ನವೀನತೆ ಹಾಗೂ ಕೃಷಿ ಇಲಾಖೆಯ ಅಭಿವೃಧ್ಧಿಗೆ ವಿಶ್ವವಿದ್ಯಾಲಯಗಳ ಸಹಭಾಗಿತ್ವವೂ ಮುಖ್ಯವಾಗಿದೆ. ಹೀಗಾಗಿ ವಿಶ್ವವಿದ್ಯಾಲಯಗಳು ತಾವು ಬೇರೆ ಎಂದು ಭಾವಿಸದೇ ಇಲಾಖೆ ಜೊತೆ ಸಂಪರ್ಕ ಸಾಧಿಸಬೇಕು. ಅಲ್ಲದೇ ಕೃಷಿ ಇಲಾಖೆಯೂ ಸಹ ವಿಶ್ವವಿದ್ಯಾಲಯಗಳಲ್ಲಿ ಆಗುತ್ತಿರುವ ಹೊಸಹೊಸ ಕೃಷಿ ಆವಿಷ್ಕಾರಗಳ ಬಗ್ಗೆ ವಿಜ್ಞಾನಿಗಳ ಜೊತೆ ಸಹಕರಿಸಬೇಕೆಂದು ಕೃಷಿ ಸಚಿವರು ಸಲಹೆ ನೀಡಿದರು.

  • ಮಾಸ್ಕ್ ಮರೆತಿದ್ದಕ್ಕೆ ಒಂದು ಕ್ಷಣ ತಬ್ಬಿಬ್ಬಾದ ಚಾನ್ಸಲರ್ ಮಾರ್ಕೆಲ್

    ಮಾಸ್ಕ್ ಮರೆತಿದ್ದಕ್ಕೆ ಒಂದು ಕ್ಷಣ ತಬ್ಬಿಬ್ಬಾದ ಚಾನ್ಸಲರ್ ಮಾರ್ಕೆಲ್

    – 10 ಲಕ್ಷಕ್ಕೂ ಅಧಿಕ ವ್ಯೂವ್, ವೀಡಿಯೋ ವೈರಲ್

    ಬರ್ಲಿನ್: ಅಧಿವೇಶನದಲ್ಲಿ ಮಾಸ್ಕ್ ಮರೆತಿದ್ದಕ್ಕೆ ಚಾನ್ಸಲರ್ ಆಂಜೆಲಾ ಮಾರ್ಕೆಲ್ ಒಂದು ಕ್ಷಣ ತಬ್ಬಿಬ್ಬಾದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕೊರೊನಾ ಎರಡನೇ ಅಲೆಯ ಆತಂಕದ ನಡುವೆ ಜರ್ಮನಿಯಲ್ಲಿ ಅಧಿವೇಶನ ಆರಂಭವಾಗಿದ್ದು, ಎಲ್ಲ ಸದಸ್ಯ ಮತ್ತು ಸಿಬ್ಬಂದಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ.

    ಶುಕ್ರವಾರ ಮಾರ್ಕೆಲ್ ಸಂಸತ್ ಉದ್ದೇಶಿಸಿ ಮಾತನಾಡಿ ತಮ್ಮ ಆಸನದಲ್ಲಿ ಆಸೀನರಾದರು. ಫೈಲ್ ಟೇಬಲ್ ಮೇಲಿಟ್ಟು ಕುಳಿತ ನಂತರ ತಾವು ಮಾಸ್ಕ್ ಪೊಡಿಯಮ್ ಮೇಲೆ ಮರೆತಿರೋದು ಜ್ಞಾಪಕಕ್ಕೆ ಬಂದಿದೆ. ಒಂದು ಕ್ಷಣ ಗಲಿಬಿಲಿಗೊಂಡ ಮಾರ್ಕೆಲ್ ಓಡಿ ಹೋಗಿ ಪೊಡಿಯಮ್ ಮೇಲಿದ್ದ ಮಾಸ್ಕ್ ತೆಗೆದುಕೊಂಡು ನಿಟ್ಟುಸಿರು ಬಿಟ್ಟಿದ್ದಾರೆ.

    ಸ್ಥಳೀಯ ನ್ಯೂಸ್ ಏಜೆನ್ಸಿ ಈ ವೀಡಿಯೋ ಹಂಚಿಕೊಂಡಿದ್ದು, ಆಂಜೆಲಾ ಮಾರ್ಕೆಲ್ ಭಾಷಣದ ಬಳಿಕ ತಮ್ಮ ಮಾಸ್ಕ್ ಪೊಡಿಯಮ್ ಮೇಲೆಯೇ ಮರೆತರು. ನಂತರ ಅವಸರವಾಗಿ ಬಂದು ಮಾಸ್ಕ್ ಎತ್ತಿಕೊಂಡ ಈ ವೀಡಿಯೋ 10 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ ಎಂದು ಬರೆಯಲಾಗಿದೆ.

  • ಅಯ್ಯಪ್ಪ ದೊರೆ ನಂತರ, ನನ್ನ ಕೊಲೆಗೂ ಸಂಚು ರೂಪಿಸಲಾಗಿದೆ- ವಿವಿ ಸಂಸ್ಥಾಪಕ

    ಅಯ್ಯಪ್ಪ ದೊರೆ ನಂತರ, ನನ್ನ ಕೊಲೆಗೂ ಸಂಚು ರೂಪಿಸಲಾಗಿದೆ- ವಿವಿ ಸಂಸ್ಥಾಪಕ

    ಬೆಂಗಳೂರು: ಅಲಯನ್ಸ್ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಅಯ್ಯಪ್ಪ ದೊರೆ ಕೊಲೆ ವ್ಯವಸ್ಥಿತವಾಗಿ ನಡೆಸಿದ್ದು, ನನ್ನ ಕೊಲೆಗೂ ಸಂಚು ರೂಪಿಸಿರುವುದು ಅಘಾತಕಾರಿ ಸಂಗತಿಯಾಗಿದೆ ಎಂದು ಅಲಯನ್ಸ್ ವಿವಿ ಸಂಸ್ಥಾಪಕ ಮಧುಕರ್ ಅಂಗೂರ್ ಆತಂಕ ವ್ಯಕ್ತಪಡಿಸಿದ್ದಾರೆ.

    ಆನೇಕಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಲಯನ್ಸ್ ಕಾಲೇಜು ನಿವೃತ್ತ ಕುಲಪತಿ ಅಯ್ಯಪ್ಪ ದೊರೆ ಕೊಲೆಯ ನಂತರ ನನ್ನ ಕೊಲೆಗೂ ಸಂಚು ರೂಪಿಸಿರುವ ಬಗ್ಗೆ ಮಾಹಿತಿ ತಿಳಿದಿದ್ದು, ದೊಡ್ಡ ಅಘಾತವಾಗಿದೆ. ಪೊಲೀಸರು ನನಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

    ಅಯ್ಯಪ್ಪ ದೊರೆ ನಮ್ಮ ವಿವಿಯ ಮೊದಲ ಚಾನ್ಸಲರ್ ಆಗಿದ್ದರು. ಅವರು ತುಂಬಾ ಶ್ರಮ ವಹಿಸಿದ್ದಾರೆ. ಆ ವ್ಯಕ್ತಿಯನ್ನು ಕಳೆದುಕೊಂಡು ತುಂಬಾ ನೋವಾಗಿದೆ. ಈ ಘಟನೆ ನನಗೆ ಮತ್ತು ಇಡೀ ವಿಶ್ವವಿದ್ಯಾಲಯಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ ಎಂದು ತಿಳಿಸಿದರು.

    ಅಯ್ಯಪ್ಪ ದೊರೆ ಕೊಲೆ ವ್ಯವಸ್ಥಿತವಾಗಿ ನಡೆಸಿರುವ ಬಗ್ಗೆ ಪೊಲೀಸರು ನನಗೆ ಮಾಹಿತಿ ನೀಡಿದ್ದು, ನನ್ನ ಕೊಲೆಗೂ ಸಂಚು ರೂಪಿಸಿರುವ ಬಗ್ಗೆ ತಿಳಿಸಿದ್ದಾರೆ. ಇದರಿಂದ ನನಗೆ ದೊಡ್ಡ ಅಘಾತವಾಗಿದೆ. ನಾನು ಶೈಲಜಾ ಚಬ್ಬಿ, ಸುದೀರ್ ಅಂಗೂರ್, ಮಾಲಾ ಗೌಡ, ಅಬ್ಬಯ್ ಜಬ್ಬಿ, ಉಷಾ ಮಾಡಳ್ಳಿ ಹಾಗೂ ಪ್ರಕಾಶ್ ಅವರನ್ನು ನಾನು ಸಂಬಂಧಿಕರೆಂದು ಕರೆಯುವುದಿಲ್ಲ. ಅವರನ್ನು ಉದ್ಯೋಗಿಗಳನ್ನಾಗಿ ತೆಗೆದುಕೊಂಡಿದ್ದೆ. ನಾನು ಯಾರನ್ನೂ ಸಂಬಂಧಿಕರೆಂದು ನೋಡಿಲ್ಲ ಎಂದು ಹೇಳಿದರು.

    ಕ್ರಮೇಣವಾಗಿ ವಿಶ್ವವಿದ್ಯಾಲಯ ಬೆಳೆದಾಗ ಎಲ್ಲರೂ ಸುಖ ಪಡಬೇಕು, ಖುಷಿ ಪಡಬೇಕಿತ್ತು. ಆದರೆ ಅವರಿಗೆ ಮತ್ಸರ ಉಂಟಾಯಿತು. ಆಗ ವಿವಿಯ ಹಣವನ್ನು ಅಕ್ರಮವಾಗಿ ದುರುಪಯೋಗ ಪಡಿಸಿಕೊಂಡಿದ್ದಾರೆ. ಡಿಜಿಟಲ್ ಸಹಿಯನ್ನು ಫೋರ್ಜರಿ ಮಾಡಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಕುರಿತು ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಈ ವೇಳೆ ಇವರ ಹೆಸರು ಬಯಲಿಗೆ ಬಂದಿತು. ನಂತರ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು. ಈ ಮೂಲಕ ಅವರು ತಪ್ಪು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

    ಹಲವು ಬಾರಿ ನನ್ನ ಮೇಲೆ ಪಿತೂರಿ ಮಾಡಿದ್ದಾರೆ. ಇವರು ನನಗೆ ಬಹಳಷ್ಟು ಕಿರುಕುಳ ನೀಡಿದ್ದು, ಇವರೆಲ್ಲರದ್ದು ಒಂದು ಗ್ಯಾಂಗ್ ಆಗಿದೆ. ನನ್ನ ಸಹಿಯನ್ನು ನಕಲಿ ಮಾಡಿ ಹಣ ಮಾಡಿದ್ದಾರೆ. ಇದೀಗ ನವೆಂಬರ್ 3 ನಡೆಯುವ ಘಟಿಕೋತ್ಸವಕ್ಕೆ ಯಾವುದೇ ಬೆಲೆಯಿಲ್ಲ. ಹೀಗಾಗಿ ಘಟಿಕೋತ್ಸವ ನಡೆಯಲು ಅನುಮತಿ ನೀಡದಂತೆ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದೇನೆ. ಯಾವ ವಿದ್ಯಾರ್ಥಿಗಳಿಗೂ ತೊಂದರೆಯಾಗಬಾರದು, ಹೀಗಾಗಿ ಘಟಿಕೋತ್ಸವ ರದ್ದುಪಡಿಸಬೇಕು ಎಂದು ಮಧುಕರ್ ಅಂಗುರ್ ಹೇಳಿದರು.

  • ಭಾರತದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ: ಡಾ.ಆರ್. ವೆಂಕಟರಾವ್

    ಭಾರತದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ: ಡಾ.ಆರ್. ವೆಂಕಟರಾವ್

    – ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ

    ಬೆಂಗಳೂರು: ಪೂಜನೀಯ ಸ್ಥಾನ ನೀಡಿರುವ ಭಾರತದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ ಎಂದು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಕುಲಪತಿ ಡಾ. ಆರ್. ವೆಂಕಟರಾವ್ ಕಳವಳ ವ್ಯಕ್ತಪಡಿಸಿದರು.

    ಯಲಹಂಕದ ರಾಜಾನುಕುಂಟೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ `ಜಂಡರ್ ಇಕ್ವಾಲಿಟಿ ಥ್ರೂ ದ ಸ್ಟ್ಯಾಟಜಿ ಆಫ್ ಜಂಡರ್ ಮೇನ್ ಸ್ಟೀಮಿಂಗ್’ ಕುರಿತು ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಹಿಳೆಯರಿಗಾಗಿ ಸಂವಿಧಾನದಲ್ಲಿ ಅನೇಕ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಸಮರ್ಪಕವಾಗಿ ಕಾರ್ಯರೂಪಕ್ಕೆ ಬರುತ್ತಿಲ್ಲ. ಮಹಿಳೆಯರಿಗೆ ವಾಕ್ ಸ್ವಾತಂತ್ರೃ ನೀಡದಿದ್ದರೆ ಸಮಾಜ ಜಡತ್ವ ಹೊಂದಲಿದೆ. ಸ್ವಾತಂತ್ರ್ಯ ನೀಡಿದಾಗ ಶಿಕ್ಷಣ, ಸಂಸ್ಕೃತಿ, ಆರ್ಥಿಕತೆಯಲ್ಲಿ ಮಹಿಳೆಯರು ಸಬಲೀಕರಣ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

    ಮಹಿಳೆಯರ ಸಾಮಾಜಿಕ ಸಬಲತೆ ಮತ್ತು ಸಮಾನತೆ ತಮ್ಮ ಕುಟುಂಬದಿಂದಲೇ ಆರಂಭವಾಗಿದೆ. ತಾಯಿಯೇ ಮೊದಲು ಗುರು, ಮನೆಯೇ ಮೊದಲ ಪಾಠಶಾಲೆ ಎಂಬುದು ನಮ್ಮ ಹಿರಿಯರು ನಾಣ್ಣುಡಿಯಾಗಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿ ಹಾಗೂ ನಮ್ಮ ಸಂಸ್ಕೃತಿ ಉಳಿಸುವುದು ತಾಯಂದಿರ ಕೈಯಲ್ಲಿದೆ ಎಂದು ತಿಳಿಸಿದರು.

    ಯುನೈಟೆಡ್ ನೇಷನ್ಸ್ ಇನ್ಫಾಮೇಷನ್ ಸೆಂಟರ್ ಫಾರ್ ಇಂಡಿಯಾ ಆ್ಯಂಡ್ ಭೂತಾನ್ ನಿರ್ದೇಶಕ ಡರ್ಕ್ ಸೆಗಾರ್ ಮಾತನಾಡಿ, ಭಾರತದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಆದರೆ, ಲೋಕಸಭೆಯಲ್ಲಿ ಮಹಿಳೆಯರು ಕೇವಲ ಶೇ.11 ರಷ್ಟು ಮಾತ್ರ ಇದ್ದಾರೆ. ಮಹಿಳೆಯರಿಗೆ ಯಾವ ರೀತಿಯ ಸ್ಥಾನಮಾನ ನೀಡಲಾಗಿದೆ ಎಂಬುದು ಇದರಲ್ಲಿಯೇ ತಿಳಿಯಲಿದೆ. ಉದ್ಯೋಗ, ರಾಜಕೀಯ ಸೇರಿದಂತೆ ಇನ್ನಿತರ ವರ್ಗಗಳಲ್ಲಿ ಮಹಿಳೆಯರಿಗೆ ಹೆಚ್ಚು ಅವಕಾಶ ಕಲ್ಪಸಬೇಕಿದೆ ಎಂದು ತಿಳಿಸಿದರು.

    ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಅಫ್ಘಾನಿಸ್ತಾನ, ಭೂತಾನ್, ಬಾಂಗ್ಲಾದೇಶ, ಇರಾಕ್, ಕೀನ್ಯಾ, ಸ್ವೀಡನ್, ತಾಂಜನೀಯ, ಸೂಡಾನ್ ಸೇರಿದಂತೆ ಇನ್ನಿತರ ದೇಶಗಳ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕುಲಾಧಿಪತಿ ಪ್ರೊ. ವಿಜಯನ್ ಇಮಾನುಲ್, ಕುಲಪತಿ ಪ್ರೊ. ರಾಧಾ ಪದ್ಮನಾಭನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಬಳ್ಳಾರಿ ವಿಎಸ್‍ಕೆ ವಿವಿ ನೇಮಕಾತಿಯಲ್ಲಿ ಅಕ್ರಮ – ಕುಲಪತಿ, ಕುಲಸಚಿವರಿಂದ್ಲೇ ದೊಡ್ಡ ಗೋಲ್‍ಮಾಲ್!

    ಬಳ್ಳಾರಿ ವಿಎಸ್‍ಕೆ ವಿವಿ ನೇಮಕಾತಿಯಲ್ಲಿ ಅಕ್ರಮ – ಕುಲಪತಿ, ಕುಲಸಚಿವರಿಂದ್ಲೇ ದೊಡ್ಡ ಗೋಲ್‍ಮಾಲ್!

    ಬಳ್ಳಾರಿ: ಸದಾ ಒಂದಿಲ್ಲೊಂದು ಹಗರಣಗಳಲ್ಲಿ ಸುದ್ದಿಯಾಗ್ತಿರೋ ಬಳ್ಳಾರಿಯಲ್ಲಿ ಇದೀಗ ಮತ್ತೊಂದು ಅಕ್ರಮ ನಡೆದಿದೆ. ಬಳ್ಳಾರಿ ವಿಎಸ್‍ಕೆ ವಿವಿ ನೇಮಕಾತಿಯಲ್ಲಿ ಗೋಲ್‍ಮಾಲ್ ನಡೆದಿದೆ.

    ವಿಶ್ವ ವಿದ್ಯಾಲಯದ ನೇಮಕಾತಿಗಳಲ್ಲಿ ಅಕ್ರಮ ತಡೆಗಟ್ಟಬೇಕಾದ ಕುಲಪತಿ ಹಾಗೂ ಆಡಳಿತ ವಿಭಾಗದ ಕುಲಸಚಿವರೇ ತಮ್ಮ ಸಂಬಂಧಿಕರಿಗೆ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹುದ್ದೆಗಳನ್ನು ಕೊಡಿಸಲು ವಿವಿ ನಿಯಮಗಳನ್ನೇ ಗಾಳಿಗೆ ತೂರಿದ್ದಾರೆ.

    ವಿಶ್ವ ವಿದ್ಯಾಲಯದ ಕುಲಪತಿ ಎಂ ಎಸ್ ಸುಭಾಷ್ ರ ಅಳಿಯ ರಮೇಶ್ ಚಂದ್ರಹಾಸ ಹಾಗೂ ಆಡಳಿತ ಕುಲಸಚಿವ ಎಸ್‍ಎ ಪಾಟೀಲರ ಪುತ್ರ ಸಂತೋಷ್ ಪಾಟೀಲ ನಿಯಮ ಉಲ್ಲಂಘಿಸಿ ಪರೀಕ್ಷೆ ಬರೆದಿರುವುದು ಇದೀಗ ಬಯಲಾಗಿದೆ. ಕುಲಪತಿ ಹಾಗೂ ಆಡಳಿತ ಕುಲಸಚಿವರು ನಡೆಸಿದ ಅಕ್ರಮದ ವಿರುದ್ಧ ಇದೀಗ ಮೌಲ್ಯಮಾಪನ ಕುಲಸಚಿವರೇ ತಕರಾರು ತಗೆದಿದ್ದಾರೆ.

    ಪೊಲೀಸ್ ಪೇದೆಯಿಂದ ಹಿಡಿದು ಉನ್ನತ ಹುದ್ದೆಗಳ ನೇಮಕಾತಿ ವೇಳೆ ಪರೀಕ್ಷಾರ್ಥಿಗಳಿಗೆ ಪರೀಕ್ಷೆ ವೇಳೆ ನಕಲು ಪ್ರತಿ ನೀಡಲಾಗುತ್ತೆ. ಆದ್ರೆ ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿವಿಯ ನೇಮಕಾತಿ ವೇಳೆ ಕುಲಪತಿಗಳು ಹಾಗೂ ಆಡಳಿತ ವಿಭಾಗದ ಕುಲಸಚಿವರ ಸಂಬಧಿಕರಿಗೆ ಅನೂಕೂಲ ಮಾಡಿಕೊಡುವ ಸಲುವಾಗಿ ಪರೀಕ್ಷೆ ಬರೆದ ಎಲ್ಲ ಅಭ್ಯರ್ಥಿಗಳಿಗೆ ಓಎಂಆರ್ ಕಾರ್ಬನ್ ಕಾಫಿ ನೀಡಿರಿಲಿಲ್ಲ. ಅಲ್ಲದೇ ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆಗಳನ್ನು ಸೀಡ್ ಕವರ್‍ನಲ್ಲಿ ತರದೇ ಓಪನ್ ಕವರ್‍ನಲ್ಲಿದ್ದ ಪ್ರಶ್ನೆ ಪ್ರತಿಕೆಗಳನ್ನು ಪರೀಕ್ಷಾರ್ಥಿಗಳಿಗೆ ನೀಡಿರುವುದು ಅಕ್ರಮವೆಂದು ಮೌಲ್ಯಮಾಪನ ಕುಲಸಚಿವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.

    ಪರೀಕ್ಷಾ ವಿಭಾಗವನ್ನು ಪರಿಗಣಿಸದೆ ನಿಯಮ ಮೀರಿ ನೇಮಕಾತಿ ನಡೆಸಿರುವ ಬಗ್ಗೆ ಮೌಲ್ಯಮಾಪನ ಕುಲಸಚಿವ ಹೊನ್ನೂ ಸಿದ್ದಾರ್ಥ, ರಾಜ್ಯಪಾಲರಿಗೆ ಬರೆದಿರುವ ಪತ್ರ ಇದೀಗ ಪಬ್ಲಿಕ್ ಟಿವಿ ಲಭ್ಯವಾಗಿದೆ. ಲಿಖಿತವಾಗಿ ದೂರು ಸಲ್ಲಿಕೆ ಮಾಡಿರುವ ಮೌಲ್ಯಮಾಪನ ಕುಲಸಚಿವರು ಅಕ್ರಮ ನೇಮಕಾತಿ ಬಗ್ಗೆ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

    ನೇಮಕಾತಿಗಳ ನಿಯಮದಡಿಯಲ್ಲಿ ಅರ್ಹತೆಯಿದ್ದವರು ಯಾರೂ ಬೇಕಾದ್ರೂ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು. ಆದ್ರೆ ಸಂಬಧಿಕರಿಗೆ ಉದ್ಯೋಗ ಕೊಡಿಸಲು ಓಎಂಆರ್ ನಕಲು ಪ್ರತಿಗಳನ್ನ ನೀಡದಿರುವುದು ಹಾಗೂ ತೆರದ ಕವರ್‍ನಲ್ಲಿದ್ದ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾರ್ಥಿಗಳಿಗೆ ವಿತರಣೆ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಹೀಗಾಗಿ ಆಡಳಿತ ವಿಭಾಗದ ಕುಲಸಚಿವರು ಹಾಗೂ ಕುಲಪತಿಗಳು ತಮ್ಮ ಸಂಬಂಧಿಕರನ್ನು ನೇಮಕಾತಿ ಮಾಡಲು ನಡೆಸಿದ ಈ ಅಕ್ರಮದ ಬಗ್ಗೆ ತನಿಖೆ ಸ್ವಂತ ಮೌಲ್ಯಮಾಪನ ಕುಲಸಚಿವರೇ ತಕರಾರು ತಗೆದು ರಾಜ್ಯಪಾಲರಿಗೆ ದೂರು ಸಲ್ಲಿಸಿರುವುದರಿಂದ ಅಕ್ರಮ ನೇಮಕಾತಿ ಪ್ರಕರಣ ಇದೀಗ ವಿವಾದ ಸೃಷ್ಠಿ ಮಾಡಿದಂತಾಗಿದೆ. ಈ ಬಗ್ಗೆ ರಾಜ್ಯಪಾಲರು ಎನೂ ಕ್ರಮ ಕೈಗೊಳ್ಳುತ್ತಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ.

     

  • ಅಲೆಯನ್ಸ್ ವಿವಿಯಲ್ಲಿ ಗುಂಡಾಗಿರಿ – ಸಿಬ್ಬಂದಿ ಮೇಲೆ ಬೌನ್ಸರ್ ಗಳಿಂದ ಹಲ್ಲೆ

    ಅಲೆಯನ್ಸ್ ವಿವಿಯಲ್ಲಿ ಗುಂಡಾಗಿರಿ – ಸಿಬ್ಬಂದಿ ಮೇಲೆ ಬೌನ್ಸರ್ ಗಳಿಂದ ಹಲ್ಲೆ

    ಬೆಂಗಳೂರು: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಅಲೆಯನ್ಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದ್ದು, ಸದ್ಯ ವಿವಿ ಆಡಳಿತ ಮಂಡಳಿ ನಡುವಿನ ಕಿತ್ತಾಟ ಬೀದಿಗೆ ಬಂದಿದೆ.

    ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಅಲೆಯನ್ಸ್ ವಿವಿ ಕುಲಪತಿ ಮಧುಕರ್ ಅಂಗೂರ್ ಬೆಂಬಲಿಗರ ಮೇಲೆ ವಿವಿ ಆಡಳಿತ ಮಂಡಳಿ ಸದಸ್ಯರಾಗಿರುವ ಶೈಲಜಾ ಚಬ್ಬಿ ಪರ ಬೌನ್ಸರ್ ಗಳಿಂದ ಹಲ್ಲೆ ಮಾಡಲಾಗಿದೆ. ವಿವಿಯಲ್ಲಿನ ಪ್ರಮುಖ ಸಮಸ್ಯೆಗೆ ಕಾರಣ ಆಡಳಿತ ಸದಸ್ಯರು ಮತ್ತು ಶೈಲಜಾ ಚಬ್ಬಿ ಅವರ ಅಧಿಕಾರ ದಾಹ ಎಂದು ಆರೋಪಿಸಲಾಗಿದೆ. ಇಬ್ಬರ ನಡುವೆ ಕಳೆದ ಎರಡು ವರ್ಷಗಳಿಂದ ಕಿತ್ತಾಟ ನಡೆಯುತ್ತಿದ್ದು ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಂಕಷ್ಟಗಳು ಹೆಚ್ಚಾಗಿವೆ.

    ಅಲೆಯನ್ಸ್ ವಿವಿ ಕುಲಪತಿಯಾಗಿ ಮಧುಕರ್ ಅಂಗೂರ್ ಜವಾಬ್ದಾರಿ ತೆಗೆದುಕೊಂಡ ಮೇಲೆ ವಿವಿ ವಾತಾವರಣ ಪ್ರಶಾಂತವಾಗಿತ್ತು. ಆದರೆ ಶುಕ್ರವಾರ ಮಧುಕರ್ ಸಹೋದರಿ ಶೈಲಜ ಚಬ್ಬಿ ಹಾಗೂ ಸುದೀರ್ ಅಂಗೂರ್ ಅಕ್ರಮವಾಗಿ ವಿವಿ ಅವರಣಕ್ಕೆ ಬೌನ್ಸರ್ ಗಳನ್ನು ಕಳುಹಿಸಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ.

    ಇಷ್ಟೆಲ್ಲಾ ಘಟನೆಗಳು ನಡೆಯುತ್ತಿದ್ದರೂ ಪೊಲೀಸರು ಕಂಡು ಕಾಣದಂತೆ ಸುಮ್ಮನಿರುವುದರಿಂದ ವಿದ್ಯಾರ್ಥಿಗಳು ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ. ಇನ್ನು ವಿವಿ ಸಿಬ್ಬಂದಿಯ ಮೇಲೆ ಹಲ್ಲೆ ಮಾಡುತ್ತಿರುವ ಕುರಿತು ಸುದ್ದಿ ಮಾಡಲು ಹೋದ ಮಾಧ್ಯಮ ಪ್ರತಿನಿಧಿಗಳಿಗೂ ಬೆದರಿಕೆ ಹಾಕಿ ಚಿತ್ರೀಕರಣ ಮಾಡದಂತೆ ತಾಕೀತು ಮಾಡಿದ್ದಾರೆ.