Tag: Chance

  • ‘ನನಗೆ ಅವಕಾಶ ಕೊಡಿ’ ಎಂದು ಪೋಸ್ಟ್ ಹಾಕಿದ ರಂಗಿತರಂಗ ಖ್ಯಾತಿಯ ನಟಿ

    ‘ನನಗೆ ಅವಕಾಶ ಕೊಡಿ’ ಎಂದು ಪೋಸ್ಟ್ ಹಾಕಿದ ರಂಗಿತರಂಗ ಖ್ಯಾತಿಯ ನಟಿ

    ನ್ನಡ ಸಿನಿಮಾ ರಂಗದಲ್ಲಿ ಸಂಚಲನವನ್ನೇ ಸೃಷ್ಟಿ ಮಾಡಿದ್ದ ‘ರಂಗಿತರಂಗ’ (Rangitaranga) ಚಿತ್ರವು ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಆನಂತರ ದೇಶ ವಿದೇಶಗಳಲ್ಲೂ ತನ್ನ ಗೆಲುವಿನ ಪತಾಕೆಯನ್ನು ಹಾರಿಸಿತ್ತು. ರಾತ್ರೋರಾತ್ರಿ ಅನೂಪ್ ಭಂಡಾರಿ (Anoop Bhandari)ಎಂಬ ನಿರ್ದೇಶಕ, ನಿರೂಪ ಭಂಡಾರಿ ಎನ್ನುವ ನಟ ಹಾಗೂ  ಆವಂತಿಕಾ ಶೆಟ್ಟಿ (Avantika Shetty) ಎನ್ನುವ ನಟಿ ಫೇಮಸ್ ಆಗಿ ಬಿಟ್ಟರು. ಭಾರತೀಯ ಸಿನಿಮಾ ರಂಗದ ಅನೇಕ ದಿಗ್ಗಜರು ಈ ಚಿತ್ರದ ಬಗ್ಗೆ ಮಾತನಾಡಿದರು. ಆನಂತರ ಅನೂಪ್ ನಡೆದದ್ದು ಹಾದಿ ಆಯಿತು.

    ರಂಗಿತರಂಗದ ನಂತರ ಅನೂಪ್ ‘ರಾಜರಥ’ ಚಿತ್ರ ಮಾಡಿದರೂ, ಅದು ಹೇಳಿಕೊಳ್ಳುವಂತಹ ಗೆಲುವನ್ನು ತಂದುಕೊಡಲಿಲ್ಲ. ಆದರೂ, ಅವರು ಛಲ ಬಿಡದೇ ಭಾರೀ ಬಜೆಟ್ ಚಿತ್ರಕ್ಕೆ ಕೈ ಹಾಕಿ ಗೆಲುವು ಕಂಡರು. ಆದರೆ, ಆವಂತಿಕಾ ಶೆಟ್ಟಿಗೆ ಮಾತ್ರ ನಂತರದ ಸಿನಿಮಾಗಳಲ್ಲಿ ಅಷ್ಟೇನೂ ಯಶಸ್ಸು ಮತ್ತು ಬೇಡಿಕೆ ಬರಲಿಲ್ಲ. ಎರಡ್ಮೂರು ಚಿತ್ರಗಳನ್ನು ಮಾಡಿ, ತೆರೆಮರೆಗೆ ಸರಿದುಬಿಟ್ಟರು ಆವಂತಿಕಾ. ಈಗ ಮತ್ತೆ ಸಿನಿಮಾ ಮಾಡುವ ಆಸೆಯನ್ನು ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ: ಹೊಸ ಫೋಟೋಶೂಟ್‌ನಲ್ಲಿ ಮಹಾಲಕ್ಷ್ಮಿಯಂತೆ ಕಂಗೊಳಿಸಿದ ನಟಿ ಅಮೂಲ್ಯ

    ಕುಟುಂಬದ ಸಮಸ್ಯೆಯ ಕಾರಣದಿಂದಾಗಿ ಆವಂತಿಕಾ ಸಿನಿಮಾ ರಂಗದಿಂದಲೇ ದೂರ ಸರಿದರಂತೆ. ನೆಮ್ಮದಿಗಾಗಿ ಆಧ್ಯಾತ್ಮದತ್ತ ಒಲವು ಬೆಳೆಸಿಕೊಂಡರಂತೆ. ಕೋವಿಡ್ ಮತ್ತಿತರ ಕಾರಣದಿಂದಾಗಿ ಬರೋಬ್ಬರಿ ಐದು ವರ್ಷಗಳಿಂದ ಅವರು ಯಾವುದೇ ಸಿನಿಮಾ ಮಾಡಿಲ್ಲ. ಮುಂಬೈನಲ್ಲೇ ಬೀಡುಬಿಟ್ಟಿದ್ದರಿಂದ ಕನ್ನಡ ಮಾತನಾಡಲು ಕೂಡ ಕಷ್ಟವಾಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಆವಂತಿಕಾ, ‘ನನಗೆ ಸಿನಿಮಾದಲ್ಲಿ ನಟಿಸುವ ಆಸಕ್ತಿಯಿದೆ. ಯಾರಾದರೂ ಅವಕಾಶ ಕೊಡಬೇಕು ಅಷ್ಟೆ. ಅವಕಾಶ ಕೊಟ್ಟರೆ ಖಂಡಿತವಾಗಿಯೂ ನಟಿಸುತ್ತೇನೆ. ಈ ಮೂಲಕ ಅವಕಾಶಕ್ಕಾಗಿ ಕೇಳುತ್ತಿದ್ದೇನೆ’ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಅಲ್ಲದೇ, ತಮ್ಮ ವೈಯಕ್ತಿಕ ಬದುಕಿನ ಬಗ್ಗೆಯೂ ಅವರು ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ.

  • ‘ವಿಕ್ರಮ್’ ಗೆಲುವಿನಿಂದ ಬಾಲಿವುಡ್ ಗೆ ಹಾರಿದ ನಿರ್ದೇಶಕ ಲೋಕೇಶ್

    ‘ವಿಕ್ರಮ್’ ಗೆಲುವಿನಿಂದ ಬಾಲಿವುಡ್ ಗೆ ಹಾರಿದ ನಿರ್ದೇಶಕ ಲೋಕೇಶ್

    ಮಿಳಿನ ಖ್ಯಾತ ನಟ ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಬೇಟೆಯಾಡಿದೆ. ಅದು ಯಾವ ಮಟ್ಟಿಗೆ ಯಶಸ್ಸು ತಂದುಕೊಟ್ಟಿದೆ ಎಂದರೆ, ಕಮಲ್ ಈವರೆಗೂ ಮಾಡಿದ್ದ ಅಷ್ಟೂ ಸಾಲವನ್ನು ತೀರಿಸಿದೆಯಂತೆ. ಅಲ್ಲದೇ, ಹಲವು ವರ್ಷಗಳ ನಂತರ ಕಮಲ್ ಅವರಿಗೆ ದೊಡ್ಡ ಮಟ್ಟದ ಯಶಸ್ಸೂ ತಂದುಕೊಟ್ಟಿದೆ. ಹಾಗಾಗಿ ಕಮಲ್ ಜೊತೆ ನಿರ್ದೇಶಕ ಲೋಕೇಶ್ ಕೂಡ ಇದೀಗ ಸ್ಟಾರ್ ಡೈರೆಕ್ಟರ್ ಆಗಿದ್ದಾರೆ.

    ವಿಕ್ರಮ್ ಭಾರೀ ಯಶಸ್ಸಿನ ಬೆನ್ನಲ್ಲೆ ಅವರಿಗೆ ಬಾಲಿವುಡ್ ನಲ್ಲಿ ಅವಕಾಶ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಅದೂ ಸಲ್ಮಾನ್ ಖಾನ್ ಸಿನಿಮಾದಲ್ಲಿ ಅನ್ನುವುದು ಮತ್ತೊಂದು ವಿಶೇಷ. ಸ್ವತಃ ಸಲ್ಮಾನ್ ಖಾನ್ ಅವರೇ ಲೋಕೇಶ್ ಅವರನ್ನು ಸಂಪರ್ಕಿಸಿ, ಮುಂದಿನ ದಿನಗಳಲ್ಲಿ ಕೆಲಸ ಮಾಡುವ ಆಹ್ವಾನ ನೀಡಿದ್ದಾರಂತೆ. ಈ ವಿಷಯ ಬಿಟೌನ್ ನಲ್ಲಿ ಭಾರೀ ಸದ್ದಂತೂ ಮಾಡುತ್ತಿದೆ. ಸಲ್ಮಾನ್ ಖಾನ್ ಕೂಡ ಓಡುವ ಕುದುರೆ ಆಗಿರುವುದರಿಂದ ಈಗಿನಿಂದಲೇ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಇದನ್ನೂ ಓದಿ:ಅವಳಿ ಮಕ್ಕಳಿಗೆ ತಾಯಿಯಾಗಲಿದ್ದಾರಾ ಆಲಿಯಾ: ರಣ್‌ಬೀರ್‌ ಕೊಟ್ರು ಬ್ರೇಕಿಂಗ್‌ ನ್ಯೂಸ್

    ವಿಕ್ರಮ್ ಸಿನಿಮಾದ ಬಹುತೇಕ ಯಶಸ್ಸನ್ನು ತನ್ನ ನಿರ್ದೇಶಕ ಮತ್ತು ಟೀಮ್ ಗೆ ಅರ್ಪಿಸಿದ್ದರು ಕಮಲ್. ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಸಹಾಯಕ ನಿರ್ದೇಶಕರಿಗೂ ಕೂಡ ಹಲವು ಉಡುಗೊರೆಯನ್ನು ನೀಡಿದ್ದರು. ಅಷ್ಟರ ಮಟ್ಟಿಗೆ ವಿಕ್ರಮ್ ಸಿನಿಮಾ ಗೆಲುವನ್ನು ದಾಖಲಿಸಿತ್ತು. ಹಾಗಾಗಿ ವಿಕ್ರಮ್ ಯಶಸ್ಸು ನಿರ್ದೇಶಕರಿಗೆ ಮತ್ತೊಂದು ಗುರುತರ ಜವಾಬ್ದಾರಿಯನ್ನು ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ರಾನು ಮೊಂಡಲ್‍ಗೆ ಅವಕಾಶ ನೀಡಿದ್ದೇಕೆ – ಹಿಮೇಶ್ ಸ್ಪಷ್ಟನೆ

    ರಾನು ಮೊಂಡಲ್‍ಗೆ ಅವಕಾಶ ನೀಡಿದ್ದೇಕೆ – ಹಿಮೇಶ್ ಸ್ಪಷ್ಟನೆ

    ಮುಂಬೈ: ಇಂಟರ್ ನೆಟ್ ಸ್ಟಾರ್ ರಾನು ಮೊಂಡಲ್ ಅವರಿಗೆ ಸಿನಿಮಾದಲ್ಲಿ ಅವಕಾಶ ನೀಡಿದ್ದೇಕೆ ಎಂಬುದನ್ನು ಗಾಯಕ ಹಿಮೇಶ್ ರೇಶ್ಮಿಯಾ ರಿವೀಲ್ ಮಾಡಿದ್ದಾರೆ.

    ಹಿಮೇಶ್ ಅವರು ತಮ್ಮ ಮುಂಬರುವ ‘ಹ್ಯಾಪಿ ಹಾರ್ಡಿ ಔರ್ ಹೀರ್’ ಚಿತ್ರದ ಪ್ರಮೋಶನ್‍ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಖಾಸಗಿ ವಾಹಿನಿಯಲ್ಲಿ ಸಂದರ್ಶನ ನೀಡುವಾಗ ರಾನು ಮೊಂಡಲ್ ಅವರ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಅವರಿಗೆ ಸಿನಿಮಾದಲ್ಲಿ ಹಾಡಲು ಅವಕಾಶ ನೀಡಿದ್ದು ಏಕೆ ಎಂಬ ವಿಷಯವನ್ನು ಬಹಿರಂಗಗೊಳಿಸಿದ್ದಾರೆ.

    ನನ್ನ ಚಿತ್ರದ 5-6 ಹಾಡುಗಳು ರೆಕಾರ್ಡ್ ಆಗಿತ್ತು. ಉಳಿದ ಹಾಡುಗಳಿಗೆ ಕೆಲವು ಅಂಶಗಳನ್ನು ಹುಡುಕುತ್ತಿದ್ದೆ. ನನ್ನ ಚಿತ್ರಕ್ಕಾಗಿ ನಾನು ಎಂತಹ ಮಹಿಳಾ ಗಾಯಕಿಯನ್ನು ಹುಡುಕುತ್ತಿದ್ದೆ ಎಂದರೆ ಆ ಕಾಲದಲ್ಲಿ ಲತಾ ಅವರು ಹೇಗೆ ಹಾಡುತ್ತಿದ್ದರೋ ಈ ಕಾಲದಲ್ಲಿ ಅವರ ಧ್ವನಿಯಂತೆ ಇರುವ ಮಹಿಳಾ ಗಾಯಕಿಯನ್ನು ಹುಡುಕುತ್ತಿದ್ದೆ ಎಂದು ಹೇಳಿದ್ದಾರೆ.

    ರಾನು ಅವರು ರಿಯಾಲಿಟಿ ಶೋಗೆ ಬಂದಾಗ ಇವರು ನನ್ನ ಚಿತ್ರದಲ್ಲಿ ಹಾಡಲು ಪರ್ಫೆಕ್ಟ್ ಎಂದು ನನಗೆ ಅನಿಸಿತ್ತು. ನಾನು ಒಂದು ಕನೆಕ್ಷನ್ ಹುಡುಕುತ್ತಿದೆ. ಅದು ನನಗೆ ರಾನು ಅವರ ಧ್ವನಿಯಲ್ಲಿ ಸಿಕ್ಕಿತ್ತು. ಅವರು ರಿಯಾಲಿಟಿ ಶೋನಲ್ಲಿ ಕೇವಲ 2 ನಿಮಿಷ ‘ಏಕ್ ಪ್ಯಾರ್ ಕಾ ನಗ್ಮಾ ಹೇ’ ಹಾಡನ್ನು ಹಾಡಿದ್ದರು. ಅಂದು ಅವರು ಆ 2 ನಿಮಿಷದಲ್ಲಿ ಅಷ್ಟು ಚೆನ್ನಾಗಿ ಹಾಡಿರಲಿಲ್ಲ ಎಂದರೆ ಇಂದು ಇದೆಲ್ಲಾ ಆಗಲು ಸಾಧ್ಯವಿರುತ್ತಿರಲಿಲ್ಲ ಎಂದರು.

    ರಾನು ಅವರ ಹಾಡು ಕೇಳಿದ ಮರುದಿನವೇ ನಾನು ಅವರಿಗೆ ಕರೆ ಮಾಡಿ ಸಿನಿಮಾದಲ್ಲಿ ಹಾಡುವಂತೆ ಹೇಳಿದೆ. ಅವರು ನನ್ನ ಮಾತು ಕೇಳಿ ಹಾಡು ಕೂಡ ಹಾಡಿದ್ದರು. ನಂತರ ರಾನು ಅವರು ಹಾಡಿದ ಹಾಡನ್ನು ನಾನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದೆ ಅಷ್ಟೇ. ನಂತರ ನಾನು ಏನೂ ಮಾಡಿಲ್ಲ. ಜನರೇ ಎಲ್ಲವನ್ನು ಮಾಡಿದ್ದಾರೆ. ‘ತೇರಿ ಮೇರಿ ಕಹಾನಿ’ ಈಗ ಗ್ಲೋಬಲ್ ನಂಬರ್ 1 ಹಾಡು ಆಗಿದೆ ಎಂದು ಹಿಮೇಶ್ ತಿಳಿಸಿದ್ದಾರೆ.

  • ಜೀವನ ನಿರ್ವಹಣೆಗೆ ಟ್ಯಾಕ್ಸಿ ಓಡಿಸುತ್ತಿದ್ದ ಶಂಕರ್ ಅಶ್ವಥ್‍ಗೆ ಆಸರೆಯಾದ ದರ್ಶನ್!

    ಜೀವನ ನಿರ್ವಹಣೆಗೆ ಟ್ಯಾಕ್ಸಿ ಓಡಿಸುತ್ತಿದ್ದ ಶಂಕರ್ ಅಶ್ವಥ್‍ಗೆ ಆಸರೆಯಾದ ದರ್ಶನ್!

    ಬೆಂಗಳೂರು: ಸಿನಿಮಾ ಅವಕಾಶ ಇಲ್ಲದೆ ಊಬರ್ ಕ್ಯಾಬ್ ಓಡಿಸುತ್ತಿರುವ ಹಿರಿಯ ನಟ ಕೆ.ಎಸ್.ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

    ಶಂಕರ್ ಅಶ್ವಥ್ ಕ್ಯಾಬ್ ಡ್ರೈವರ್ ಆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಸುದ್ದಿ ತಿಳಿದ ಬಳಿಕ ಕನ್ನಡ ಚಿತ್ರರಂಗದ ಕೆಲವರು ಶಂಕರ್ ಸಹಾಯಕ್ಕೆ ಮುಂದಾಗಿದ್ದರು. ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶಂಕರ್ ಅಶ್ವಥ್ ಕುಟುಂಬಕ್ಕೆ ಪರೋಕ್ಷವಾಗಿ ನೆರವಾಗಿದ್ದಾರೆ. ಇದನ್ನೂ ಓದಿ: ಜೀವನ ನಿರ್ವಹಣೆಗೆ ಕ್ಯಾಬ್ ಡ್ರೈವರ್ ಆದ ಕೆ.ಎಸ್. ಅಶ್ವಥ್ ಪುತ್ರ!

    ಸದ್ಯ ಚಾಲೆಂಜಿಂಗ್ ಸ್ಟಾರ್ ಅಭಿನಯಿಸುತ್ತಿರುವ ಯಜಮಾನ ಚಿತ್ರದಲ್ಲಿ ಶಂಕರ್ ಅಶ್ವಥ್ ಅವರಿಗೂ ಸಿನಿಮಾದಲ್ಲಿ ಅವಕಾಶ ನೀಡಿ ಎಂದು ದರ್ಶನ್ ಚಿತ್ರತಂಡದ ಹತ್ತಿರ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ದರ್ಶನ್ ಹಾಗೂ ಶಂಕರ್ ಅಶ್ವಥ್ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದೇನೆ: ಶಂಕರ್ ಅಶ್ವಥ್

    ಯಜಮಾನ ಚಿತ್ರದಲ್ಲಿ ನನಗೂ ಅವಕಾಶ ನೀಡುವಂತೆ ದರ್ಶನ್ ಚಿತ್ರತಂಡಕ್ಕೆ ಹೇಳಿದ್ದಾರೆ ಎಂದು ಸ್ವತಃ ಶಂಕರ್ ಅಶ್ವಥ್ ತಮ್ಮ ಫೇಸ್ ಬುಕ್‍ನಲ್ಲಿ ಹೇಳಿಕೊಂಡಿದ್ದಾರೆ. ಸದ್ಯ ಶಂಕರ್ ಅಶ್ವಥ್ ಅವರಿಗೆ ಸಿನಿಮಾ ಅವಕಾಶಗಳು ಹುಡುಕಿಕೊಂಡು ಬರುತ್ತಿದೆ. ಇದನ್ನೂ ಓದಿ: ಶಂಕರ್ ಅಶ್ವಥ್‍ರನ್ನು ಭೇಟಿ ಮಾಡಿದ ಪ್ರಥಮ್

  • ಬಿಗ್ ಬಾಸ್ ಮನೆಯಿಂದ ಹೊರಬಂದ್ಮೇಲೆ ಹೀಗಿದೆ ದಿವಾಕರ್ ಲೈಫ್!

    ಬಿಗ್ ಬಾಸ್ ಮನೆಯಿಂದ ಹೊರಬಂದ್ಮೇಲೆ ಹೀಗಿದೆ ದಿವಾಕರ್ ಲೈಫ್!

    ಬೆಂಗಳೂರು: ಬಿಗ್ ಬಾಸ್ ಎನ್ನುವ ಬಿಗ್ ರಿಯಾಲಿಟಿ ಕಾರ್ಯಕ್ರಮದಲ್ಲಿ ಒಬ್ಬ ಕಾಮನ್‍ಮ್ಯಾನ್ ಆಗಿ ದಿವಾಕರ್ ಮನೆಯೊಳಗೆ ಹೋಗಿದ್ದರು. ಆದರೆ ದಿವಾಕರ್ ಬರುವಾಗ ಸೆಲೆಬ್ರಿಟಿ ಆಗಿ ಹೊರಗೆ ಬಂದರು. ಸೆಮಿಫೈನಲಿಸ್ಟ್ ಆಗಿ ಹೊರಹೊಮ್ಮಿದ ದಿವಾಕರ್ ಗೆ ಅವಕಾಶಗಳ ಸುರಿಮಳೆ ಬರುತ್ತೆ ಎಂದು ಊಹಿಸಲಾಗಿತ್ತು. ಆದರೆ ದಿವಾಕರ್ ಬಾಳಲ್ಲಿ ಅದೃಷ್ಟದೇವಿಯ ಆಗಮನ ಆಗಲೇ ಇಲ್ಲ.

    ದಿವಾಕರ್ ಟ್ಯಾಲೆಂಟ್ ನೋಡಿ ಹಲವು ನಿರ್ಮಾಪಕರು ಮನೆ ಮುಂದೆ ಕ್ಯೂ ನಿಲ್ಲಬಹುದೇನೋ ಎನ್ನುವುದು ಎಲ್ಲರ ಆಲೋಚನೆಯಾಗಿತ್ತು. ಆದರೆ ಸದ್ಯಕ್ಕಿರೋದು ಒಂದೇ ಒಂದು ಪ್ರಾಜೆಕ್ಟ್. ಅಂದುಕೊಂಡಂಗೆಲ್ಲಾ ಆಗಿದ್ದರೆ ದಿವಾಕರ್ ಗೆ ಈಗ ಕೈತುಂಬಾ ಕೆಲಸ ಇರಬೇಕಿತ್ತು. ಆದ್ರೆ ಇರೋ ಒಬ್ಬ ಮಗನನ್ನ ಚೆನ್ನಾಗಿ ನೋಡಿಕೊಳ್ಳಬೇಕು, ಹೆಂಡತಿಯನ್ನ ಖುಷಿಯಾಗಿ ಇಡಬೇಕು ಎನ್ನುವ ಆಸೆ ಹೊತ್ತ ಕಂಗಳು ಮತ್ತದೇ ಸೇಲ್ಸ್ ಅಂಗಡಿ ಕಡೆ ತಿರುಗಿನೋಡುವಂತಾಗಿದೆ. ಮೊದಲು ಯಾವ ಕೆಲಸ ದಿವಾಕರ್ ಗೆ ಕೈ ಹಿಡಿದಿತ್ತೋ ಅದೇ ಕೆಲಸ ದಿವಾಕರ್ ಗೆ ಈಗ ಅನ್ನ ನೀರು ಕೊಡುತ್ತಿದೆ.

    ದಿವಾಕರ್ ಮಹಾ ಸ್ವಾಭಿಮಾನಿ ಎನ್ನುವುದು ಬಿಗ್ ಬಾಸ್ ಶೋ ನೋಡಿದವರಿಗೆ ತಿಳಿದಿರುತ್ತೆ. ಹೇಳಿ ಕೇಳಿ ದಿವಾಕರ್ ಗೆ ಗೊತ್ತಿರೋದು ಒಂದು ಪುಟ್ಟ ಪ್ರಪಂಚ. ಬಿಗ್ ಬಾಸ್ ಮನೆಯ ಒಂದಿಷ್ಟು ಗಣ್ಯರು ಬಿಟ್ಟರೆ ಹೊರಗಿನ ಜಗತ್ತು ದಿವಾಕರ್ ಗೆ ತಿಳಿಯದು. ಮನೆಯಿಂದ ಹೊರ ಬರುವಾಗ ಅನೇಕರು ಸಲಹೆ ಸೂಚನೆ ಏನೋ ಕೊಟ್ಟರು. ಆದರೆ ಕೆಲಸ ಕೊಡಲಿಲ್ಲ. ಇವತ್ತಲ್ಲಾ ನಾಳೆ ಅದೃಷ್ಟ ದೇವತೆ ಮನೆ ಮುಂದೆ ಬರಬಹುದು ಎಂದು ಕಾದು ಕುಳಿತಿದ್ದ ದಿವಾಕರ್ ಗೆನಿರಾಶೆ ಆಗಿದೆ. ಆದರೂ ಆತ್ಮವಿಶ್ವಾಸ ಕೈಬಿಟ್ಟಿಲ್ಲ.

    ದಿವಾಕರ್ ಗೆ ಇಷ್ಟೊಂದು ಆತ್ಮವಿಶ್ವಾಸ ಇರೋದಕ್ಕೆ ಕಾರಣ ಒಬ್ಬ ವ್ಯಕ್ತಿ. ಬಿಗ್ ಬಾಸ್ ಮನೆಯಲ್ಲಿದ್ದಾಗಲೂ ದಿವಾಕರ್ ಗೆ ಹುರಿದುಂಬಿಸುತ್ತಿದ್ದ ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ನೈತಿಕವಾಗಿ, ಆರ್ಥಿಕವಾಗಿ ಬೆಂಬಲ ಕೊಡುತ್ತಿದ್ದಾರೆ. ಮುಂದೆ ತಮ್ಮ ಸಿನಿಮಾದಲ್ಲಿ ಪಾತ್ರ ಕೊಡೋದಾಗಿಯೂ ಭರವಸೆ ಕೊಟ್ಟಿದ್ದಾರಂತೆ. ಆದರೆ ಅಲ್ಲಿಯವರೆಗಾದರೂ ಜೀವನ ನಡೀಬೇಕಲ್ಲ. ನಾಡಿನ ಪಾಲಿಗೆ ದಿವಾಕರ್ ಗೆ ಸೆಲೆಬ್ರಿಟಿ ಎನ್ನುವ ಲೇಬಲ್ ಬಿದ್ದಿದೆ. ಸೇಲ್ಸ್ ಬ್ಯಾಗ್ ಹಾಕಿಕೊಂಡು ಊರೂರು ಸುತ್ತೋಕೆ ಮನಸ್ಸು ಒಪುತ್ತಿಲ್ಲ. ಆದರೂ ಜನರ ಪ್ರೀತಿ ದಿವಾಕರ್ ಕೈಬಿಟ್ಟಿಲ್ಲ.

    ಬಿಗ್ ಬಾಸ್ ಮನೆಯಲ್ಲಿದ್ದಾಗ ದಿವಾಕರ್ ಕೈ ಸೇರಿದ್ದ ಮೂರು ಮತ್ತೊಂದಿಷ್ಟು ಹಣ. ಯಾರನ್ನೋ ಹುಡುಕಿಕೊಂಡು ಕೆಲಸ ಕೊಡಿ ಎಂದು ಕೇಳುವ ಮನಸ್ಸು ದಿವಾಕರ್ ಗೆ ಇಲ್ಲ. ಆದರೆ ಒಂದಲ್ಲ ಒಂದು ದಿನ ಒಳ್ಳೆಯದಾಗುತ್ತೆ ಎನ್ನುವ ಭರವಸೆ ದಿವಾಕರ್ ಗೆ ಇದೆ.