Tag: Chana Pulao

  • ಚೆನ್ನ ಪಲಾವ್ ಮಾಡುವ ಸರಳ ವಿಧಾನ ನಿಮಗಾಗಿ

    ಚೆನ್ನ ಪಲಾವ್ ಮಾಡುವ ಸರಳ ವಿಧಾನ ನಿಮಗಾಗಿ

    ಇಡ್ಲಿ, ದೋಸೆ, ಮಸಾಲೆ ರೊಟ್ಟಿ, ತರಕಾರಿ ಪಲಾವ್‌, ಸವಿದಿದ್ದೇವೆ. ಆದರೆ ಇಂದು ನಾವು  ಚೆನ್ನವನ್ನು ಉಪಯೋಗಿಸಿ ಪಲಾವ್‌ ಮಾಡಿ ಸವಿದರೆ ಸಖತ್‌ ಟೇಸ್ಟ್‌ ಆಗಿರುತ್ತದೆ. ಇನ್ನೇಕ ತಡ ಚೆನ್ನ ಪಲಾವ್ ಮಾಡುವ ಸರಳ ವಿಧಾನ ಇಲ್ಲಿದೆ. ಒಮ್ಮೆ ಈ ಅಡುಗೆ ಮಾಡಲು ಟ್ರೈ ಮಾಡಿ ನೋಡಿ.

    ಬೇಕಾಗುವ ಸಾಮಗ್ರಿಗಳು:
    * ಚೆನ್ನಾ- 1 ಕಪ್
    * ಈರುಳ್ಳಿ- 1
    * ಟೊಮೆಟೋ- 1
    * ಅಡುಗೆ ಎಣ್ಣೆ- ಅರ್ಧ ಕಪ್
    * ಚಕ್ಕೆ, ಏಲಕ್ಕೆ, ಲವಂಗ, ಪಲಾವ್ ಎಲೆ- ಸ್ವಲ್ಪ
    * ಹಸಿಮೆಣಸು- ಸ್ವಲ್ಪ
    * ಮೆಣಸಿನ ಪುಡಿ- 1ಚಮಚ
    * ಅರಿಶಿಣ ಪುಡಿ- 1 ಚಮಚ
    * ದನಿಯಾ ಪೌಡರ್- 1ಚಮಚ
    * ಗರಂ ಮಸಾಲೆ- 1 ಚಮಚ

    ಮಾಡುವ ವಿಧಾನ:
    * ಒಂದು ಕುಕ್ಕರ್‌ಗೆ ಅಡುಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ, ಚಕ್ಕೆ, ಏಲಕ್ಕೆ, ಲವಂಗವನ್ನು ಹಾಕಿ ಫ್ರೈ ಮಾಡಬೇಕು.
    * ಹಸಿಮೆಣಸು, ಈರುಳ್ಳಿ, ಶುಂಠಿ, ಬಳ್ಳುಳ್ಳಿ ಪೇಸ್ಟ್, ಮೆಣಸಿನಪುಡಿ, ಅರಿಶಿಣ ಪೌಡರ್, ದನಿಯಾ ಪೌಡರ್, ಗರಂ ಮಸಾಲೆ, ಟೊಮೆಟೋವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ


    * ಈಗ ಕೊತ್ತಂಬರಿ, ಚನ್ನವನ್ನು ಹಾಕಿ ಸ್ವಲ್ಪ ಸಮಯ ಬೇಯಿಸಬೇಕು.ಇದನ್ನೂ ಓದಿ: ಫಟ್​ ಅಂತ ಮಾಡಬಹುದು ಮೈದಾ ದೋಸೆ

    * ಅಕ್ಕಿ, ಅಳತೆಗೆ ತಕ್ಕಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮುಚ್ಚಳ ಮುಚ್ಚಿ ಬೇಯಿಸಲು ಬಿಡಬೇಕು. ಈಗ ರುಚಿಯಾದ ಚೆನ್ನ ಪಲಾವ್ ಸವಿಯಲು ಸಿದ್ಧವಾಗುತ್ತದೆ.