Tag: chamundi hills

  • ನಾಡದೇವತೆ ಚಾಮುಂಡಿಗೆ ಪೂಜೆ ಇಲ್ಲ – ಶುಕ್ರವಾರವೇ ಶಕ್ತಿ ದೇವತೆಯ ಸನ್ನಿಧಾನಕ್ಕೆ ಬೀಗ

    ನಾಡದೇವತೆ ಚಾಮುಂಡಿಗೆ ಪೂಜೆ ಇಲ್ಲ – ಶುಕ್ರವಾರವೇ ಶಕ್ತಿ ದೇವತೆಯ ಸನ್ನಿಧಾನಕ್ಕೆ ಬೀಗ

    ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಪ್ರತಿಭಟನೆ ಮುಂದುವರಿದಿದ್ದು, ಭಕ್ತರಿಗೆ ಪ್ರವೇಶವನ್ನು ನಿರ್ಬಂಧ ಮಾಡಲಾಗಿದೆ.

    ಅರ್ಚಕರು ಮತ್ತು ಸಿಬ್ಬಂದಿ ಅನಿರ್ದಾಷ್ಟವಧಿ ಮುಷ್ಕರ ನಡೆಸುತ್ತಿದ್ದಾರೆ. ದೇವಸ್ಥಾನದ ಸಿಬ್ಬಂದಿ ಭಕ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಜಗಳ ಬಿಡಿಸಲು ಪೊಲೀಸರ ಹರಸಾಹಸ ಪಟ್ಟಿದ್ದಾರೆ. ಕೊನೆಗೂ ಪ್ರತಿಭಟನಾ ಸಿಬ್ಬಂದಿ ಬೇಡಿಕೆಗೆ ಮಣಿದ ಪೊಲೀಸರು ಹೊರಗಡೆಯಿಂದಲೇ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

    ಇಂದಿನಿಂದ ನೌಕರರು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದರು. ದೇವಾಲಯದ 183 ಮಂದಿ ಖಾಯಂ ನೌಕರರು ಹಾಗೂ 37 ಮಂದಿ ಗುತ್ತಿಗೆ ನೌಕರರು ಪ್ರತಿಭಟನೆ ಮಾಡುತ್ತಿದ್ದಾರೆ. ಗರ್ಭಗುಡಿಯ ಮುಂಭಾಗವೇ ಅರ್ಚಕರು ಧರಣಿ ಕುಳಿತು ಪ್ರತಿಭಟನೆ ಆರಂಭಿಸಿದ್ದು, ದೇವಾಲಯದ ಒಳಗೆ ಹೊರಗೆ ಎರಡು ಕಡೆ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಚಾಮುಂಡಿ ಬೆಟ್ಟದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಪ್ರತಿಭಟನೆ ನಡೆಯುತ್ತಿದೆ.

    ಚಾಮುಂಡಿಬೆಟ್ಟದಲ್ಲಿ ನೌಕರರ ಪ್ರತಿಭಟನೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಪೂಜೆ ಸಲ್ಲಿಸಿದ್ದ ಬಳಿಕ 8 ಗಂಟೆಯಿಂದ ಪೂಜೆ ಸ್ಥಗಿತಗೊಂಡಿದೆ. ಅಷ್ಟೇ ಅಲ್ಲದೇ ಗರ್ಭಗುಡಿಗೆ ಭಕ್ತರ ಪ್ರವೇಶವನ್ನು ನಿಷೇಧಿಸಿದ್ದರು. ಪರಿಣಾಮ ದೇವಾಲಯದ ಒಳಗೆ ಮಂಗಳಾರತಿ ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಕುಂಕುಮ ವಿತರಣೆ ಮತ್ತು ತಿರ್ಥ ವಿತರಣೆಯೂ ಸ್ಥಗಿತಗೊಂಡಿದ್ದು, ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ದೇವರ ದರ್ಶನಕ್ಕೆ ಆಗಮಿಸಿದ್ದ ಭಕ್ತರು ಅರ್ಧದಿಂದಲೇ ದರ್ಶನ ಪಡೆದು ವಾಪಸ್ ಹೋಗುತ್ತಿದ್ದಾರೆ.

    ದೇವಾಲಯಗಳ ನೌಕರರ ಪ್ರಮುಖ 7 ಬೇಡಿಕೆ:
    1. ಶೇ.30ರಷ್ಟು ವೇತನ ಹೆಚ್ಚಳ ಹಾಗೂ ಹೆಚ್ಚುವರಿ ತುಟ್ಟಿಭತ್ಯೆ ಆದಾಗ ಮಂಜೂರು ಮಾಡಿಕೊಳ್ಳಲು ಖಾಯಂ ಆದೇಶ ನೀಡಬೇಕು.
    2. ವಾರ್ಷಿಕ ಬೋನಸ್ ಪಾವತಿಸದಿರುವ ಬಗ್ಗೆ ಹಾಗೂ ಪ್ರತಿ ವರ್ಷ ಒಂದು ತಿಂಗಳ ಪೂರ್ತಿ ವೇತನವನ್ನ ಪಾವತಿಸಲು ಖಾಯಂ ಆದೇಶ ನೀಡಬೇಕು.
    3. ತಾತ್ಕಾಲಿಕ ನೌಕರರನ್ನು ಖಾಯಂಗೊಳಿಸಲು ತುರ್ತಾಗಿ ಆದೇಶಿಸಬೇಕು.
    4. ಅನುಕಂಪದ ಆಧಾರದ ಮೇಲೆ ಮೃತಪಟ್ಟ ನೌಕರರ ಕುಟುಂಬಸ್ಥರಿಗೆ ರಾಜ್ಯದ ಎಲ್ಲಾ ಇಲಾಖೆಯಲ್ಲಿ ನೌಕರಿ ನೀಡಬೇಕು.
    5. ದೇವಾಲಯದ ನೌಕರರಿಗೆ ವೈದ್ಯಕೀಯ ಸೌಲಭ್ಯವನ್ನ ಮಂಜೂರು ಮಾಡಬೇಕು.
    6. ಮೃತ ದೇವಾಲಯದ ನೌಕರರುಗಳ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಬೇಕು.
    7. ನೌಕರರ ತಿಂಗಳ ವೇತವನ್ನು ಬೆಟ್ಟದ ಶಾಖೆಯ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ ಬಟಾವಡೆ ಮಾಡಬೇಕು.

    https://www.youtube.com/watch?v=8gyZUeLcgbM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕೊನೆಯ ಆಷಾಢ ಮಾಸ – ಚಾಮುಂಡಿಗೆ ವಿಶೇಷ ಪೂಜೆ

    ಕೊನೆಯ ಆಷಾಢ ಮಾಸ – ಚಾಮುಂಡಿಗೆ ವಿಶೇಷ ಪೂಜೆ

    ಮೈಸೂರು: ಇಂದು ಕೊನೆಯ ಆಷಾಢ ಮಾಸದ ನಾಲ್ಕನೇ ಶುಕ್ರವಾರವಾಗಿದ್ದು, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜಾ ಪುನಸ್ಕಾರಗಳು ನಡೆಯುತ್ತಿವೆ.

    ಮುಂಜಾನೆಯಿಂದಲೇ ಅಭಿಷೇಕ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ದೇವಿ ದರ್ಶನಕ್ಕಾಗಿ ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ಭಕ್ತರು ನಿಂತಿದ್ದಾರೆ. ತಾಯಿ ಚಾಮುಂಡೇಶ್ವರಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹರಿದು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಚಾಮುಂಡಿ ಬೆಟ್ಟದಲ್ಲಿ ಸಡಗರ ಮನೆ ಮಾಡಿದೆ.

    ಭಕ್ತರು ದೇವಿ ದರ್ಶನಕ್ಕಾಗಿ 300 ರೂ., ಮತ್ತು 50 ರೂ., ಧರ್ಮ ದರ್ಶನದ ಕ್ಯೂಗಳಲ್ಲಿ ಸಾಲುಗಟ್ಟಿ ನಿಂತಿದ್ದಾರೆ. ದೇವಾಲಯ ಒಳ ಮತ್ತು ಹೊರಾವರಣ ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಭಕ್ತರು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.

    ಪ್ರತಿವಾರದಂತೆ ಕಡೆಯ ಶುಕ್ರವಾರಕ್ಕೂ ಕೆಎಸ್‍ಆರ್  ಟಿಸಿ ಉಚಿತ ಸೇವೆ ಮಾಡಲಾಗಿದ್ದು, ಲಲಿತ ಮಹಲ್ ಹೆಲಿಪ್ಯಾಡ್ ನಿಂದ ಚಾಮುಂಡಿ ಬೆಟ್ಟ-ಚಾಮುಂಡಿ ಬೆಟ್ಟದಿಂದ ಹೆಲಿಪ್ಯಾಡ್ ವರೆಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರ ವಾಹನಗಳು ಕೂಡ ಹ್ಯಾಲಿಪ್ಯಾಡ್ ನಲ್ಲೇ ನಿಲುಗಡೆ ಮಾಡಬೇಕಾಗಿದೆ.

    ಆಷಾಢ ಮಾಸದ ಕೊನೆಯ ಶುಕ್ರವಾರ ಹಿನ್ನೆಲೆಯಲ್ಲಿ ಬಿಎಸ್‍ವೈ ಪುತ್ರ ವಿಜಯೇಂದ್ರ ಇಂದು ಬೆಟ್ಟ ಹತ್ತಿ ಚಾಮುಂಡೇಶ್ವರಿ ದರ್ಶನ ಪಡೆಯಲಿದ್ದಾರೆ. ಬೆಟ್ಟದಲ್ಲಿ ವಾಹನ ದಟ್ಟಣೆ ತಪ್ಪಿಸಲು ಸಂಚಾರ ಮಾರ್ಗದಲ್ಲಿ ಬದಲಾವಣೆಯಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

  • ನಾಡು ಸಮೃದ್ಧಿ ಆಗಿರೋ ಕಾರಣ ಅದ್ಧೂರಿ ದಸರಾ ಮಾಡೋಣ – ಸಿಎಂ

    ನಾಡು ಸಮೃದ್ಧಿ ಆಗಿರೋ ಕಾರಣ ಅದ್ಧೂರಿ ದಸರಾ ಮಾಡೋಣ – ಸಿಎಂ

    ಮೈಸೂರು: ರಾಜ್ಯ ಹಲವು ಡ್ಯಾಂಗಳು ಭರ್ತಿಯಾಗಿ ನಾಡು ಸಮೃದ್ಧಿಯಾಗಿದ್ದು, ಈ ಬಾರಿ ಅದ್ಧೂರಿ ದಸರಾ ಆಚರಣೆ ಮಾಡುವುದಾಗಿ ಸಿಎಂ ಕುಮಾರಸ್ವಾಮಿ ಅವರು ಮೈಸೂರಿನಲ್ಲಿ ಹೇಳಿದ್ದಾರೆ.

    ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಸಿಎಂ ಹೆಚ್‍ಡಿಕೆ, ರಾಜ್ಯದ ಹಲವು ಜಲಾಶಯಗಳು ಭರ್ತಿಯಿಂದ ನಾಡು ಸಮೃದ್ಧಿಯಾಗಿದೆ. ಈ ಬಾರಿ ಉತ್ತಮ ಮಳೆ ಬಿದ್ದಿರುವುದರಿಂದ ವಿದ್ಯುತ್ ಸಮಸ್ಯೆಯೂ ನಿವಾರಣೆ ಆಗಿದೆ. 12 ವರ್ಷಗಳ ನಂತರ ಕೆಲ ಜಲಾಶಯಗಳಿಗೆ ನಾನೇ ಬಾಗಿನ ಅರ್ಪಣೆ ಮಾಡುತ್ತಿದ್ದೇನೆ. ಇದಕ್ಕೆಲ್ಲ ತಾಯಿ ಚಾಮುಂಡೇಶ್ವರಿಯ ಆಶಿರ್ವಾದ ಕಾರಣವಾಗಿದ್ದು, ನಾಡು ಸಮೃದ್ಧಿ ಆಗಿರೋ ಕಾರಣ ಅದ್ಧೂರಿ ದಸರಾ ಮಾಡುತ್ತೇವೆ. ನಾವು ಮಾಡುವ ದಸರಾ ಆಚರಣೆ ರಾಜ್ಯಕ್ಕೆ ಮಾದರಿಯಾಗುತ್ತದೆ. ಈ ಕುರಿತು ಈಗಾಗಲೇ ವಿಧಾನಸಭೆಯಲ್ಲಿ ಸಭೆ ಕರೆದು ಚರ್ಚೆ ನಡೆದಿದೆ ಎಂದು ಹೇಳಿದ್ದಾರೆ.

    ಆಷಾಢ ಮಾಸದ ಮೊದಲ ಶುಕ್ರವಾರ ಚಾಮುಂಡೇಶ್ವರಿ ಪೂಜೆ ಸಲ್ಲಿಸಿದ ಸಿಎಂ ರಾಜ್ಯದ ಅಭಿವೃದ್ಧಿಗೆ ಹಾಗೂ ರೈತರ ನೆಮ್ಮದಿಯ ಜೀವನಕ್ಕೆ ತಾಯಿಯಲ್ಲಿ ಪ್ರಾರ್ಥಿಸಿದ್ದೇನೆ. ಇಂದು ನನ್ನ ಜೊತೆ ಹಲವು ಸಚಿವರು ಜೊತೆಗಿದ್ದು ತಾಯಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಕಬಿನಿ ಹಾಗೂ ಕೆಆರ್‍ಎಸ್ ಜಲಾಶಯಗಳಿಗೆ ಬಾಗಿನ ಅರ್ಪಣೆ ಮಾಡುವ ಶುಭಕಾರ್ಯವನ್ನು ಇಟ್ಟುಕೊಂಡಿದ್ದೇವೆ. ಈ ಎಲ್ಲ ಕಾರಣದಿಂದ ಆಷಾಢ ಶುಕ್ರವಾರದಂದು ಪೂಜೆಗೆ ಬಂದಿದ್ದೇವೆ ಎಂದು ಹೇಳಿದರು.

    ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಸಿಎಂ ಹೆಚ್‍ಡಿಕೆ ಹೇಳಿಕೆ ಆಷಾಢ ಮಾಸ, ಈ ಮಾಸದಲ್ಲಿ ಯಾವುದೇ ಶುಭಕಾರ್ಯಗಳನ್ನ ನಡೆಸೋದಿಲ್ಲ. ಆದರೆ ಇದೇ ಮಾಸದಲ್ಲಿ ದೇವರ ಆರಾಧನೆಯಿಂದ ಸಂಪೂರ್ಣ ಫಲ ಪ್ರಾಪ್ತಿಯಾಗುತ್ತದೆ ಎಂಬುದು ಆಸ್ತಿಕರ ನಂಬಿಕೆ. ಅದರಲ್ಲೂ ಆಷಾಢ ಮಾಸದಲ್ಲಿ ಶಕ್ತಿದೇವತೆಗಳ ಆರಾಧನೆಯಿಂದ ಕುಟುಂಬ ಸದಸ್ಯರ ಆರೋಗ್ಯ, ಐಶ್ವರ್ಯ ಸಂಪತ್ತು ಅಭಿವೃದ್ಧಿಯಾಗುತ್ತೆ ಅನ್ನೋದು ಭಕ್ತರ ನಂಬಿಕೆ. ಈ ನಂಬಿಕೆಯಿಂದಲೇ ನೂರಾರು ವರ್ಷಗಳಿಂದ ಮೈಸೂರಿನ ಅಧಿದೇವತೆಯಾದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಷಾಢ ಮಾಸದ ವಿಶೇಷ ಪೂಜಾ ಕೈಂಕರ್ಯಗಳನ್ನು ಆಯೋಜಿಸುತ್ತಾ ಬರಲಾಗಿದೆ.

  • ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ನಟ ದರ್ಶನ್ ಭೇಟಿ

    ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ನಟ ದರ್ಶನ್ ಭೇಟಿ

    ಮಂಡ್ಯ: ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಇಂದು ಮೈಸೂರಿನ ಚಾಮುಂಡಿಬೆಟ್ಟಕ್ಕೆ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಭೇಟಿ ನೀಡಿದ್ದಾರೆ.

    ಪ್ರತಿ ವರ್ಷ ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ದರ್ಶನ್ ಭೇಟಿ ನೀಡುತ್ತಾರೆ. ಅದೇ ರೀತಿ ಈ ವರ್ಷವೂ ಕೂಡ ತಮ್ಮ ಸ್ನೇಹಿತರೊಂದಿಗೆ ಚಾಮುಂಡಿಬೆಟ್ಟಕ್ಕೆ ಆಗಮಿಸಿ ಚಾಮುಂಡಿ ತಾಯಿಯ ದರ್ಶನ ಪಡೆದಿದ್ದಾರೆ. ಇತ್ತ ಬೆಟ್ಟಕ್ಕೆ ದರ್ಶನ್ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಹರ್ಷೋದ್ಗಾರ ವ್ಯಕ್ತಪಡಿಸಿದ್ದಾರೆ.

    ದರ್ಶನ್ ಕಂಡು ಪುಳಕಿತರಾದ ಯುವಸಮೂಹ, ಅಭಿಮಾನಿಗಳನ್ನ ನಿಯಂತ್ರಿಸುವಾಗ ನೂಕುನುಗ್ಗಲು ಏರ್ಪಟ್ಟಿದ್ದು, ಪೊಲೀಸರು ದರ್ಶನ್ ಅವರನ್ನು ಒಳ ಬಿಡಲು ಹರಸಾಹಸ ಪಟ್ಟಿದ್ದಾರೆ. ಬಳಿಕ ದರ್ಶನ್ ಹರಸಾಹಸ ಪಟ್ಟು ದೇವಾಲಯವನ್ನು ಪ್ರವೇಶಿಸಿದ್ದು, ಕೊನೆಗೂ ಚಾಮುಂಡಿ ತಾಯಿಯ ದರ್ಶನ ಪಡೆದು ದಚ್ಚು ವಾಪಸ್ಸಾಗಿದ್ದಾರೆ. ಈ ವೇಳೆ ದರ್ಶನ್ ಜೊತೆ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದರು.

    ಆಷಾಢ ಮಾಸ, ಈ ಮಾಸದಲ್ಲಿ ಯಾವುದೇ ಶುಭಕಾರ್ಯಗಳನ್ನ ನಡೆಸೋದಿಲ್ಲ. ಆದ್ರೆ ಇದೇ ಮಾಸದಲ್ಲಿ ದೇವರ ಆರಾಧನೆಯಿಂದ ಸಂಪೂರ್ಣ ಫಲ ಪ್ರಾಪ್ತಿಯಾಗುತ್ತದೆ ಅನ್ನೋದು ಆಸ್ತಿಕರ ನಂಬಿಕೆ. ಅದರಲ್ಲೂ ಆಷಾಢ ಮಾಸದಲ್ಲಿ ಶಕ್ತಿದೇವತೆಗಳ ಆರಾಧನೆಯಿಂದ ಕುಟುಂಬ ಸದಸ್ಯರ ಆರೋಗ್ಯ, ಐಶ್ವರ್ಯ ಸಂಪತ್ತು ಅಭಿವೃದ್ದಿಯಾಗುತ್ತೆ ಅನ್ನೋದು ಭಕ್ತರ ನಂಬಿಕೆ. ಈ ನಂಬಿಕೆಯಿಂದಲೇ ನೂರಾರು ವರ್ಷಗಳಿಂದ ಮೈಸೂರಿನ ಅಧಿದೇವತೆಯಾದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಷಾಢ ಮಾಸದ ವಿಶೇಷ ಪೂಜಾ ಕೈಂಕರ್ಯಗಳನ್ನು ಆಯೋಜಿಸುತ್ತಾ ಬರಲಾಗಿದೆ.

  • ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ವಿಶೇಷ ಪೂಜೆ- ಲಕ್ಷಾಂತರ ಭಕ್ತರು ಭೇಟಿ!

    ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ವಿಶೇಷ ಪೂಜೆ- ಲಕ್ಷಾಂತರ ಭಕ್ತರು ಭೇಟಿ!

    ಮೈಸೂರು: ಪ್ರತಿ ವರ್ಷದಂತೆ ಈ ವರ್ಷವೂ ಮೈಸೂರಿನ ಅಧಿದೇವತೆಯಾದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಷಾಢ ಮಾಸದ ವಿಶೇಷ ಪೂಜೆ ನಡೆಯುತ್ತಿದ್ದು, ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ.

    ಆಷಾಢ ಮಾಸದ ನಾಲ್ಕು ಶುಕ್ರವಾರಗಳಲ್ಲಿ ವಿಶೇಷ ಪೂಜೆ ನೆರವೇರಲಿದ್ದು. ಶುಕ್ರವಾರ ಮುಂಜಾನೆ 3.30ಕ್ಕೆ ಮಹಾನ್ಯಾಸ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ನೇರವೇರಿಸಿ ತಾಯಿ ಚಾಮುಂಡಿಗೆ ಲಕ್ಷೀ ರೂಪದಲ್ಲಿ ಅಲಂಕಾರ ಮಾಡಿ ಮಹಾಮಂಗಳಾರತಿ ನೆರವೇರಲಿದೆ.

    ಈ ದೃಶ್ಯ ಕಣ್ತುಂಬಿಕೊಳ್ಳಲು ಲಕ್ಷಾಂತಕರ ಭಕ್ತರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡುತ್ತಿದ್ದು, ಸ್ವತಹ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸಹ ಬೆಟ್ಟಕ್ಕೆ ಭೇಟಿ ನೀಡಿ ಆಷಾಢ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ಆಷಾಢ ಶುಕ್ರವಾರದಂದು ಹೆಚ್ಚು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಮುಂಜಾನೆ 5.30 ರಿಂದ ರಾತ್ರಿ 10.00 ಗಂಟೆಯವರೆಗು ದರ್ಶನದ ಅವಕಾಶ ಕಲ್ಪಿಸಲಾಗಿದೆ. ಮೂರು ಸರತಿ ಸಾಲು ನಿರ್ಮಿಸಿದ್ದು, ಧರ್ಮದರ್ಶನ, 50 ರೂ. ಹಾಗೂ 300 ರೂ. ಟಿಕೆಟ್ ನೀಡಿ ಚಾಮುಂಡಿಯ ದರ್ಶನ ಪಡೆಯಬಹುದಾಗಿದೆ.

    ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಈ ವರ್ಷವೂ ಹೆಲಿಪ್ಯಾಡ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿ ಅಲ್ಲಿಂದ ಸರ್ಕಾರಿ ಬಸ್‍ನಲ್ಲಿ ಉಚಿತವಾಗಿ ಬೆಟ್ಟಕ್ಕೆ ಕರೆದುಕೊಂಡು ಹೋಗಿ ವಾಪಸ್ ಕರೆ ತರುವ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಖಾಸಗಿ ವಾಹನಗಳು ಬೆಟ್ಟಕ್ಕೆ ತೆರಳುವಂತಿಲ್ಲ ಗಣ್ಯರಿಗೆ ಪಾಸ್ ಮೂಲಕ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿದೆ.

    ಆಷಾಢ ಮಾಸ, ಈ ಮಾಸದಲ್ಲಿ ಯಾವುದೇ ಶುಭಕಾರ್ಯಗಳನ್ನ ನಡೆಸೋದಿಲ್ಲ. ಆದ್ರೆ ಇದೇ ಮಾಸದಲ್ಲಿ ದೇವರ ಆರಾಧನೆಯಿಂದ ಸಂಪೂರ್ಣ ಫಲ ಪ್ರಾಪ್ತಿಯಾಗುತ್ತದೆ ಅನ್ನೋದು ಆಸ್ತಿಕರ ನಂಬಿಕೆ. ಅದರಲ್ಲೂ ಆಷಾಢ ಮಾಸದಲ್ಲಿ ಶಕ್ತಿದೇವತೆಗಳ ಆರಾಧನೆಯಿಂದ ಕುಟುಂಬ ಸದಸ್ಯರ ಆರೋಗ್ಯ, ಐಶ್ವರ್ಯ ಸಂಪತ್ತು ಅಭಿವೃದ್ದಿಯಾಗುತ್ತೆ ಅನ್ನೋದು ಭಕ್ತರ ನಂಬಿಕೆ. ಈ ನಂಬಿಕೆಯಿಂದಲೇ ನೂರಾರು ವರ್ಷಗಳಿಂದ ಮೈಸೂರಿನ ಅಧಿದೇವತೆಯಾದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಷಾಢ ಮಾಸದ ವಿಶೇಷ ಪೂಜಾ ಕೈಂಕರ್ಯಗಳನ್ನು ಆಯೋಜಿಸುತ್ತಾ ಬರಲಾಗಿದೆ.

  • 15 ದಿನಗಳ ನಂತರ ತನ್ನ ಹೊಸ ಸ್ನೇಹಿತನನ್ನು ಹೊರ ಕರೆದುಕೊಂಡು ಹೋದ್ರು ದರ್ಶನ್!

    15 ದಿನಗಳ ನಂತರ ತನ್ನ ಹೊಸ ಸ್ನೇಹಿತನನ್ನು ಹೊರ ಕರೆದುಕೊಂಡು ಹೋದ್ರು ದರ್ಶನ್!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಗೆ ಹೊಸ ಸ್ನೇಹಿತ ಬಂದು ಸುಮಾರು 15 ದಿನಗಳೇ ಕಳೆಯಿತು. ಆ ಸ್ನೇಹಿತನನ್ನು ದರ್ಶನ್ ಇಷ್ಟು ದಿನ ತಮ್ಮ ಮನೆಯಲ್ಲೇ ಇರಿಸಿಕೊಂಡಿದ್ದರು. ಆದರೆ ಶೂಟಿಂಗ್‍ಯಿಂದ ವಾಪಸ್ಸಾಗಿ ದರ್ಶನ್ ತಮ್ಮ ಹೊಸ ಸ್ನೇಹಿತನನ್ನು ಕರೆದುಕೊಂಡು ಒಂದು ಜಾಗಕ್ಕೆ ಹೋಗಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಲ್ಲಿಗಾದರೂ ಬರುತ್ತಾರೆ ಅನ್ನುವ ಸುಳಿವು ಸಿಕ್ಕಿದರೆ ಅಲ್ಲಿ ಜನಜಾತ್ರೆ ಶುರುವಾಗುತ್ತದೆ. ಈ ಸಂದರ್ಭಕ್ಕೆ ಇದೀಗ ಮೈಸೂರು ಸಾಕ್ಷಿಯಾಯ್ತು. ಹೇಗೋ ಏನೋ ದರ್ಶನ್ ಮೈಸೂರಿಗೆ ಬರುತ್ತಾರೆ ಎನ್ನುವ ಸುಳಿವಿನಿಂದಾಗಿ ಶನಿವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಭಕ್ತರ ಜೊತೆ ದರ್ಶನ್ ಭಕ್ತರು ಸೇರಿಕೊಂಡಿದ್ದರು.

    ಕೊನೆಗೂ ತಮ್ಮ ಹೊಸ ಸ್ನೇಹಿತನ ಜೊತೆ ದರ್ಶನ್ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದರು. ದರ್ಶನ್ ಮನೆಗೆ ಬಂದ ಹೊಸ ಸ್ನೇಹಿತ ಅಂದರೆ ಅವರ ಫೆವರೇಟ್ ಕಾರು ಫೋರ್ಡ್ ಮಸ್ಟ್ಯಾಂಗ್ ಕಾರ್. ಈ ಕಾರು ದರ್ಶನ್ ಮನೆಗೆ ಮೆ 19ರಂದೇ ಆಗಮಿಸಿತ್ತು. ಆದರೆ ದರ್ಶನ್ ಸಿನಿಮಾ ಚಿತ್ರೀಕರಣ ಮತ್ತು ವೈಯಕ್ತಿಕ ಕೆಲಸದಲ್ಲಿ ಬ್ಯುಸಿಯಾದರು. ಹೀಗಾಗಿ ಆ ಕಾರನ್ನು ರಸ್ತೆಗೆ ತಂದಿರಲಿಲ್ಲ.

    ಆ ಕಾರ್ ಓಡಿಸದಿರೋದಕ್ಕೆ ಇನ್ನೊಂದು ಬಲವಾದ ಕಾರಣ ಎಂದರೆ ದರ್ಶನ್ ಯಾವುದೇ ವಾಹನ ಖರೀದಿಸಿದರು ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಪೂಜೆ ನೆರವೇರಿಸಿಯೇ ಮುನ್ನಡೆಯೋದು. ಹೀಗಾಗಿ ಸಮಯದ ಅಭಾವದಿಂದ ಇಲ್ಲಿಯವರೆಗೂ ದರ್ಶನ್ ತಮ್ಮ ಹಳದಿ ಬಣ್ಣದ ಫೋರ್ಡ್ ಕಾರಿಗೆ ತಾಯಿ ಚಾಮುಂಡೇಶ್ವರಿ ದರ್ಶನ ಮಾಡಿಸಿರಲಿಲ್ಲ. ಇದೀಗ ದರ್ಶನ್ ಚಾಮುಂಡೇಶ್ವರಿ ಬೆಟ್ಟಕ್ಕೆ ತಮ್ಮ ಹೊಸ ಕಾರ್ ತೆಗೆದುಕೊಂಡು ಹೋಗಿದ್ದರು.

    ದರ್ಶನ್ ತಮ್ಮ ನೂತನ ಫೋರ್ಡ್ ಕಾರಿನಲ್ಲಿ ಚಾಮುಂಡೇಶ್ವರಿ ಸನ್ನಿಧಿ ತಲುಪುತ್ತಿದ್ದಂತೆಯೇ ಮೈಸೂರಿನಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ದರ್ಶನ್ ಹೊಸ ಕಾರಿನ ಫೋಟೋ ಜೊತೆಗೆ ದರ್ಶನ್ ಜೊತೆ ಫೋಟೋ ತೆಗೆಸಿಕೊಂಡು ಖುಷಿಪಟ್ಟರು. ಈ ಹಿಂದೆ ದರ್ಶನ್ ಲ್ಯಾಂಬೋರ್ಗಿನಿ ಖರೀದಿಸಿದಾಗಲೂ ಇದೇ ರೀತಿ ಫ್ಯಾನ್ಸ್ ದರ್ಶನ್ ದರ್ಶನಕ್ಕಾಗಿ ಮುಗಿಬಿದ್ದಿದ್ದರು. ಇದೀಗ ಮತ್ತೊಂದು ಹೊಸ ಕಾರ್ ಜೊತೆ ದರ್ಶನ್ ಬಂದಾಗ ಚಾಮುಂಡಿ ಬೆಟ್ಟದಲ್ಲಿ ದರ್ಶನ್ ಜಯಘೋಶ ಮುಗಿಲುಮುಟ್ಟಿತ್ತು.

  • ನಾಡದೇವತೆ ಚಾಮುಂಡಿಗೆ 31 ಕೆ.ಜಿ ತೂಕದ 2 ಬೆಳ್ಳಿ ಆನೆ ಅರ್ಪಿಸಿದ ಡಿಕೆಶಿ

    ನಾಡದೇವತೆ ಚಾಮುಂಡಿಗೆ 31 ಕೆ.ಜಿ ತೂಕದ 2 ಬೆಳ್ಳಿ ಆನೆ ಅರ್ಪಿಸಿದ ಡಿಕೆಶಿ

    ಮೈಸೂರು: ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಇಂಧನ ಸಚಿವ ಡಿಕೆ ಶಿವಕುಮಾರ್ 31 ಕೆಜಿ ತೂಕದ ಎರಡು ಬೆಳ್ಳಿ ಆನೆಗಳನ್ನ ಅರ್ಪಿಸಿದ್ದಾರೆ.

    ಪತ್ನಿ ಜೊತೆ ದೇವಸ್ಥಾನಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್, ಎರಡು ದೊಡ್ಡ ಬೆಳ್ಳಿ ಆನೆಗಳನ್ನ ದೇವಿಗೆ ಸಲ್ಲಿಸಿದ್ರು. ಆದಾಯ ತೆರಿಗೆ ಇಲಾಖೆ ದಾಳಿ ನಂತರ ದೇವಸ್ಥಾನಕ್ಕೆ ಆಗಮಿಸಿ ಡಿಕೆಶಿ ಹರಕೆ ಕಟ್ಟಿಕೊಂಡಿದ್ದರು. ಹೀಗಾಗಿ ಇವತ್ತು ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಬೆಳ್ಳಿ ಆನೆ ಸಮರ್ಪಣೆ ಮಾಡಿದ್ದಾರೆ. ಭಾನುವಾರದಂದು ಡಿಕೆಶಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ತುಲಾಭಾರ ನೆರವೇರಿಸಿ ಸುಬ್ರಹ್ಮಣ್ಯ ಸ್ವಾಮಿಗೆ ಹರಕೆ ತೀರಿಸಿದ್ದರು.

    ಹರಕೆ ತೀರಿಸಿದ ನಂತರ ಮಾತನಾಡಿದ ಡಿಕೆಶಿ, ಹಿಂದೆ ನೀಡಿದ್ದ ಬೆಳ್ಳಿ ಆನೆ ಸರಿ ಇರಲಿಲ್ಲ. ಹೀಗಾಗಿ ಈಗ ಹೊಸ ಬೆಳ್ಳಿ ಆನೆ ನೀಡಿದ್ದೇನೆ. ಅಂದುಕೊಂಡಿದ್ದು ಈಡೇರಿದೆ. ಇದರಿಂದ ಹರಕೆ ತೀರಿಸಿದ್ದೇನೆ. ಏನು ಅಂದುಕೊಂಡಿದ್ದೆ. ಏನು ಆಯಿತು ಎನ್ನುವುದು ಭಕ್ತನಿಗೂ ದೇವರಿಗೂ ಬಿಟ್ಟ ವಿಚಾರ. ಇದನ್ನು ಸಾರ್ವಜನಿಕವಾಗಿ ಹೇಳಲು ಆಗುವುದಿಲ್ಲ. ಮನಸ್ಸಿನಲ್ಲಿ ಏನೋ ಇಟ್ಟುಕೊಂಡಿದ್ದೇನೆ. ಮುಂದೆ ಇನ್ನೇನೂ ಇಟ್ಟುಕೊಂಡಿರುತ್ತೇವೆ. ಹೀಗಾಗಿ ಇಂತಹ ಭಕ್ತಿ ಸಮರ್ಪಣೆ ಅಂತ ಹೇಳಿದ್ರು.

    ನಾನು ಯಾವತ್ತೂ ತಪ್ಪು ಮಾಡಿಲ್ಲ. ಮೋಸ ಮಾಡಿಲ್ಲ. ದಗಲ್‍ಬಾಜಿ ಮಾಡಿಲ್ಲ. ಇದರಿಂದ ದೇವಿ ನನಗೆ ಸದಾ ರಕ್ಷಣೆ ಮಾಡುತ್ತಾಳೆ. ಕಳ್ಳತನ ಮಾಡಿದವರಿಗೆ, ಮೋಸ ಮಾಡಿದವರಿಗೆ ಭಯ ಇರಬೇಕು. ನನಗೆ ಅಂತಹ ಭಯ ಇಲ್ಲ. ಕುಕ್ಕೆಯಲ್ಲಿ ನನ್ನ ಅಭಿಮಾನಿಗಳ ಹರಕೆಯಂತೆ ನಿನ್ನೆ ತುಲಾಭಾರ ಮಾಡಿಸಿದ್ದೇನೆ. ಆದಾಯ ತೆರಿಗೆ ಇಲಾಖೆ ದಾಳಿಗೂ ಇದಕ್ಕೂ ಸಂಬಂಧ ಇಲ್ಲ ಅಂದ್ರು.

  • ವಿಡಿಯೋ: ಚಾಮುಂಡಿಬೆಟ್ಟದಲ್ಲಿ ಭಕ್ತೆಯ ಮೇಲೆ ಏಕಾಏಕಿ ಎರಗಿದ ಮಂಗಗಳು

    ವಿಡಿಯೋ: ಚಾಮುಂಡಿಬೆಟ್ಟದಲ್ಲಿ ಭಕ್ತೆಯ ಮೇಲೆ ಏಕಾಏಕಿ ಎರಗಿದ ಮಂಗಗಳು

    ಮೈಸೂರು: ನಾಡ ಅಧಿದೇವತೆ ಚಾಮುಂಡಿಬೆಟ್ಟದಲ್ಲಿ ಬೆಟ್ಟಕ್ಕೆ ಬಂದಿದ್ದ ಭಕ್ತೆಯ ಮೇಲೆ ಮಂಗಗಳು ಏಕಾಏಕಿ ಎರಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಎರಡು ಮಂಗಗಳು ಮಹಿಳೆ ಮೇಲೆ ಹಲವಾರು ಬಾರಿ ಎರಗಿ ಮೈ ಪರಚಿವೆ. ಹೀಗಾಗಿ ಎಷ್ಟೇ ಕಿರುಚಿಕೊಂಡರು ಮಂಗಗಳು ಎರಗುವುದನ್ನು ಬಿಡಲಿಲ್ಲ. ಕಂಗಾಲಾಗಿ ಮಂಗಗಳಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿದ್ದ ವೇಳೆ ಅಲ್ಲಿಯೇ ಇದ್ದ ಯುವಕನೊಬ್ಬ ಆಗಮಿಸಿ ಮಂಗಗಳನ್ನು ಓಡಿಸಿದ್ದಾರೆ.

    ಈ ದೃಶ್ಯಗಳನ್ನು ಅಲ್ಲೆ ಬೆಟ್ಟಕ್ಕೆ ಬಂದಿದ್ದ ಭಕ್ತರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

     

    https://youtu.be/DlKyhPAUC2s