Tag: chamundi hills

  • ಬಕ್ರೀದ್ ಹಬ್ಬ- ಇಂದು ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವಿಲ್ಲ

    ಬಕ್ರೀದ್ ಹಬ್ಬ- ಇಂದು ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವಿಲ್ಲ

    ಮೈಸೂರು: ಇಂದು ನಾಡಿನಾದ್ಯಂತ ಬಕ್ರೀದ್ ಹಬ್ಬ ಆಚರಿಸಲಾಗುತ್ತಿದ್ದು, ಇತ್ತ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

    ಹೌದು. ಬಕ್ರೀದ್ ಪ್ರಯುಕ್ತ ಇಂದು ರಜೆ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಭಾವಿಪತಿಯ ಸುಳಿವು ಕೊಟ್ಟ ವೈಷ್ಣವಿ

    ರಜೆ ದಿನವಾದ್ದ ಹಾಗೂ ಆಷಾಢ ಮಾಸವಾಗಿರುವುದರಿಂದ ಬೆಟ್ಟಕ್ಕೆ ಹೆಚ್ಚು ಜನ ಆಗಮಿಸುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರ ಪ್ರವೇಶಕ್ಕೆ ಜಿಲ್ಲಾಢಳಿತ ನಿಷೇಧ ಹೇರಿದೆ. ಆಷಾಡ ಮಾಸದ ಪ್ರತಿ ಶುಕ್ರವಾರ, ಶನಿವಾರ, ಭಾನುವಾರ ಜಿಲ್ಲಾಡಳಿತ ಈಗಾಗಲೇ ಪ್ರವೇಶಕ್ಕೆ ನಿರ್ಬಂಧ ಹೇರಿದೆ.

  • ಚಾಮುಂಡಿ ದೇವಿಯ ದರ್ಶನ ಪಡೆದ ಸಿಎಂ – ಚಿನ್ನದ ರಥಕ್ಕೆ ಬಿಎಸ್‍ವೈಗೆ ಮನವಿ

    ಚಾಮುಂಡಿ ದೇವಿಯ ದರ್ಶನ ಪಡೆದ ಸಿಎಂ – ಚಿನ್ನದ ರಥಕ್ಕೆ ಬಿಎಸ್‍ವೈಗೆ ಮನವಿ

    ಮೈಸೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದಾರೆ.

    ತಾಯಿ ಚಾಮುಂಡೇಶ್ವರಿಗೆ ಸಿಎಂ ವಿಶೇಷ ಪೂಜೆ ಸಲ್ಲಿಸಿದ್ದಾರೆ. 10 ನಿಮಿಷಗಳ ಚಾಮುಂಡೇಶ್ವರಿ ದೇವಿಯ ಮುಂದೆ ಬಿಎಸ್‍ವೈ ಪ್ರಾರ್ಥನೆ ಮಾಡಿದರು. ಇದೇ ವೇಳೆ ದೇವಾಲಯದ ಆಡಳಿತ ಮಂಡಳಿ ಸದಸ್ಯರು ಚಿನ್ನದ ರಥಕ್ಕೆ ಸಿಎಂಗೆ ಮನವಿ ಸಲ್ಲಿಕೆ ಮಾಡಿದರು. 9 ಕೋಟಿ ವೆಚ್ಚದ ರಥ ನಿರ್ಮಾಣಕ್ಕೆ ಮನವಿ ಮಾಡಲಾಯಿತು.

    ಚಾಮುಂಡಿ ಬೆಟ್ಟಕ್ಕೆ ಸಿಎಂ ಭೇಟಿ ಹಿನ್ನೆಲೆಯಲ್ಲಿ ಭದ್ರತೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಭಕ್ತಾದಿಗಳು ಹಾಗೂ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಸಿಎಂ ಬೆಟ್ಟಕ್ಕೆ ಆಗಮಿಸುತ್ತಿದ್ದಂತೆಯೇ ದೇವಾಲಯದ ಆಡಳಿತ ಮಂಡಳಿ ಪೂರ್ಣಕುಂಭ ಸ್ವಾಗತ ಕೋರಿತ್ತು.

    ಸಿಎಂಗೆ ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಶಾಸಕ ಹರ್ಷವರ್ಧನ್ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಸಾಥ್ ನೀಡಿದರು.

  • ಚಾಮುಂಡಿ ತಾಯಿಯ ದರ್ಶನ ಪಡೆದ ಅಭಿನಯ ಚಕ್ರವರ್ತಿ

    ಚಾಮುಂಡಿ ತಾಯಿಯ ದರ್ಶನ ಪಡೆದ ಅಭಿನಯ ಚಕ್ರವರ್ತಿ

    – ಅಭಿಮಾನಿಗೆ ಕಿಚ್ಚ ಕಿವಿಮಾತು

    ಮೈಸೂರು: ಸ್ಯಾಂಡಲ್‍ವುಡ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.

    ಫ್ಯಾಂಟಮ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸುದೀಪ್ ಅವರು ಇಂದು ನಿರ್ದೇಶಕ ಅನೂಪ್ ಭಂಡಾರಿ ಜೊತೆ ಆಗಮಿಸಿ ನಾಡದೇವಿಯ ದರ್ಶನ ಪಡೆದರು.

    ತಮ್ಮ ನೆಚ್ಚಿನ ನಟ ಬರುತ್ತಿದ್ದಂತೆಯೇ ಅಭಿಮಾನಿಗಳು ಸುದೀಪ್ ಜೊತೆ ಫೋಟೋ ತೆಗೆದುಕೊಳ್ಳಲು ಮುಗಿಬಿದ್ದರು. ಅಭಿಮಾನಿಗಳ ನೂಕುನುಗ್ಗಲು ಗಮನಿಸಿದ ನಟ, ಓರ್ವನಿಗೆ ಸಂಯಮದಿಂದ ವರ್ತಿಸುವಂತೆ ಕಿವಿಮಾತು ಹೇಳಿದರು.

    ದೇವಸ್ಥಾನದಲ್ಲಿ ನಿಶ್ಯಬ್ದ ಕಾಪಾಡುವಂತೆ ಬಾಯಿ ಮೇಲೆ ಬೆರಳು ಇಟ್ಟು ಸುದೀಪ್ ತಮ್ಮ ಅಭಿಮಾನಿಗಳಿಗೆ ಸನ್ನೆ ಮಾಡಿದರು. ಇದೇ ವೇಳೆ ಮಾಸ್ಕ್ ಧರಿಸದೇ ಫೋಟೋ ತೆಗೆಸಿಕೊಳ್ಳಲು ಬಂದ ಅಭಿಮಾನಿಗೆ ಮತ್ತೊಬ್ಬ ಅಭಿಮಾನಿ ಕ್ಲಾಸ್ ತೆಗೆದುಕೊಂಡ ಪ್ರಸಂಗವೂ ನಡೆಯಿತು.

    ಕೊರೊನಾದಿಂದ ಸ್ಥಗಿತವಾಗಿದ್ದ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರದ ಸೂಟಿಂಗ್ ಅನ್ ಲಾಕ್ ಬಳಿಕ ಆರಂಭಗೊಂಡಿತ್ತು. ಕೊರೊನಾ ಆತಂಕದ ನಡುವೆಯೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿದ ಚಿತ್ರತಂಡ ಶೂಟಿಂಗ್ ಮುಗಿಸಿದೆ. ಸುದಫ್ ಮತ್ತು ನಟಿ ಅಪರ್ಣಾ ಬಲ್ಲಾಳ್ ಹುಟ್ಟುಹಬ್ಬದಂದು ಚಿತ್ರದಲ್ಲಿನ ಇಬ್ಬರ ಲುಕ್ ರಿವೀಲ್ ಮಾಡಲಾಗಿತ್ತು. ಹಾಗೆಯೇ ದಟ್ಟ ಕಾಡಿನ ನಡುವೆ ಸುದೀಪ್ ದೋಣಿಯಲ್ಲಿ ಹೊರಟ ಧಗಧಗಿಸುವ ನೋಟ ಸ್ಯಾಂಡಲ್‍ವುಡ್ ಅಂಗಳದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು.

  • ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ಶಿವಣ್ಣ

    ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ಶಿವಣ್ಣ

    ಮೈಸೂರು: ಶುಕ್ರವಾರ ರಾತ್ರಿ ಚಾಮುಂಡಿ ಬೆಟ್ಟಕ್ಕೆ ನಟ ಶಿವರಾಜ್ ಕುಮಾರ್ ಭೇಟಿ ನೀಡಿ ನಾಡದೇವಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ.

    ಕುಟುಂಬ ಸಮೇತ ಬೆಟ್ಟಕ್ಕೆ ಭೇಟಿ ನೀಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿಕೊಂಡಿದ್ದಾರೆ.

    ದೀಪಾವಳಿ ಮಗಿದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಇಂದು ಸಹ ಚಾಮುಂಡಿ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

  • ಕೊರೊನಾ ನಡುವೆಯೂ ಚಾಮುಂಡಿಬೆಟ್ಟದ ಹುಂಡಿಗೆ ಭರ್ಜರಿ ಕಾಣಿಕೆ

    ಕೊರೊನಾ ನಡುವೆಯೂ ಚಾಮುಂಡಿಬೆಟ್ಟದ ಹುಂಡಿಗೆ ಭರ್ಜರಿ ಕಾಣಿಕೆ

    ಮೈಸೂರು: ಕೊರೊನಾ ವೈರಸ್ ರಾಜ್ಯದಲ್ಲಿ ತಾಂಡವವಾಡುತ್ತಿದ್ದರೂ ಮೈಸೂರಿನ ಚಾಮುಂಡಿ ಬೆಟ್ಟದ ಹುಂಡಿಗೆ ಭರ್ಜರಿ ಕಾಣಿಕೆ ಬಿದ್ದಿದೆ.

    ಅಕ್ಟೋಬರ್ ತಿಂಗಳ ಹುಂಡಿ ಹಣ ಎಣಿಕೆ ಮಾಡಿದಾಗ 65 ಲಕ್ಷದ 61 ಸಾವಿರದ 229 ರೂಪಾಯಿ ಸಂಗ್ರಹವಾಗಿತ್ತು ಎಂದು ಮುಜರಾಯಿ ತಹಶೀಲ್ದಾರ್ ಚಾಮುಂಡೇಶ್ವರಿ ದೇವಸ್ಥಾನದ ಇಓ ಯತಿರಾಜ್ ಮಾಹಿತಿ ನೀಡಿದ್ದಾರೆ. 2000 ಸಾವಿರ ಮುಖ ಬೆಲೆಯ 98 ನೋಟುಗಳು, 500 ಮುಖಬೆಲೆಯ 4,932 ನೋಟುಗಳು, 29 ಸಾವಿರ 1 ರೂಪಾಯಿ ನಾಣ್ಯ, 17 ಸಾವಿರ 2 ರೂಪಾಯಿ ನಾಣ್ಯ ಸಂಗ್ರಹವಾಗಿದೆ ಎಂದು ಅವರು ವಿವರಿಸಿದ್ದಾರೆ.

    ಪ್ರತಿವರ್ಷದಂತೆ ಈ ವರ್ಷವೂ ಭಕ್ತರಿಂದ ದೇವರಿಗೆ ಮೋಸ ಮುಂದುವರಿದಿದೆ. ಬ್ಯಾನ್ ಆದ 500 ಹಾಗೂ 1000 ಮುಖಬೆಲೆಯ ನೋಟುಗಳ ಪತ್ತೆಯಾಗಿವೆ. ಅಮಾನ್ಯಗೊಂಡ ನೋಟುಗಳು ಹುಂಡಿಯಲ್ಲಿ ಸಿಕ್ಕಿವೆ ಎಂದು ಯತಿರಾಜ್ ತಿಳಿಸಿದ್ದಾರೆ.

  • ನಾಳೆ ಮಧ್ಯಾಹ್ನದವರೆಗೆ ಚಾಮುಂಡಿ ಬೆಟ್ಟ ಪ್ರವೇಶ ನಿಷೇಧ – ರೋಹಿಣಿ ಸಿಂಧೂರಿ ಆದೇಶ

    ನಾಳೆ ಮಧ್ಯಾಹ್ನದವರೆಗೆ ಚಾಮುಂಡಿ ಬೆಟ್ಟ ಪ್ರವೇಶ ನಿಷೇಧ – ರೋಹಿಣಿ ಸಿಂಧೂರಿ ಆದೇಶ

    ಮೈಸೂರು: ಚಾಮುಂಡಿಬೆಟ್ಟದಲ್ಲಿ ರಥೋತ್ಸವ ಹಿನ್ನೆಲೆಯಲ್ಲಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧವನ್ನು ಹೇರಲಾಗಿದೆ.

    ಇಂದು ಸಂಜೆ 6 ಗಂಟೆಯಿಂದ ನಾಳೆ ಮಧ್ಯಾಹ್ನ 12 ಗಂಟೆವರೆಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸುವಂತೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.

    ಅಕ್ಟೋಬರ್ 29ರಂದು ನಡೆಯಲಿರುವ ಚಾಮುಂಡಿ ರಥೋತ್ಸವಕ್ಕೆ ಹೆಚ್ಚಿನ ಭಕ್ತಾದಿಗಳು ಆಗಮಿಸುವ ಹಿನ್ನೆಲೆಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ. ದಸರಾ ಉತ್ಸವಕ್ಕೆ ಗ್ರಾಮಸ್ಥರು ಮತ್ತು ಅಧಿಕಾರಿಗಳಿಗೆ ಮಾತ್ರ ಪ್ರವೇಶ ವಿನಾಯಿತಿ ಇರುತ್ತದೆ. ಜನಸಮೂಹವನ್ನು ಒಳಗೊಂಡಂತೆ ನಡೆಯುತ್ತಿದ್ದ ದಸರಾ ರಥೋತ್ಸವ ಈ ಬಾರಿ ಭಕ್ತರಿಗೆ ಹೆಚ್ಚಿನ ಪ್ರಮಾಣದಲ್ಲಿ ಅವಕಾಶವಿಲ್ಲ. ಸಾಂಪ್ರದಾಯಿಕವಾಗಿ ಸರಳವಾಗಿ ಉತ್ಸವ ನಡೆಯಲಿದೆ.

    ಮೈಸೂರು ದಸರಾ ಪ್ರಮುಖ ಆಕರ್ಷಣೆ ಎಂದರೆ ಜಂಬೂ ಸವಾರಿ. ದೇಶ ಮಾತ್ರವಲ್ಲ, ವಿದೇಶಗಳಲ್ಲೂ ಕಣ್ಮನ ಸೆಳೆಯುತ್ತದೆ. ಜಂಬೂ ಸವಾರಿ ಇದೇ ಮೊದಲ ಬಾರಿಗೆ ಇಷ್ಟೊಂದು ಸರಳವಾಗಿ ನಡೆದಿದೆ. ಕೊರೊನಾದಿಂದ ಈ ಬಾರಿ ಮೈಸೂರು ದಸರಾ ಉತ್ಸವ ಸರಳವಾಗಿ ನಡೆದಿದೆ. ದಸರಾ ಹಬ್ಬ ಯಶಸ್ವಿಯಾಗಿ ನಡೆಯಲೆಂದು ರೋಹಿಣಿ ಸಿಂಧೂರಿ ಹರಕೆ ಹೊತ್ತಿದ್ದರು. ಈ ಹಿನ್ನೆಲೆಯಲ್ಲಿ ನವರಾತ್ರಿ ಒಂಬತ್ತನೇ ದಿನ ತಾವೇ ಸ್ವತಃ ರಥ ಎಳೆಯುವ ಮೂಲಕ ಹರಕೆ ತೀರಿಸಿದ್ದರು.

  • ‘ಇಂಥದ್ದನ್ನ ಸಹಿಸಬೇಕಾ ಹೇಳಿ’- ಟೀಕೆಯ ಬೆನ್ನಲ್ಲೇ ಚಾಮುಂಡಿ ಬೆಟ್ಟದ ರಥದ ಚಕ್ರಗಳ ಪೇಂಟಿಂಗ್ ಬದಲಾವಣೆ

    ‘ಇಂಥದ್ದನ್ನ ಸಹಿಸಬೇಕಾ ಹೇಳಿ’- ಟೀಕೆಯ ಬೆನ್ನಲ್ಲೇ ಚಾಮುಂಡಿ ಬೆಟ್ಟದ ರಥದ ಚಕ್ರಗಳ ಪೇಂಟಿಂಗ್ ಬದಲಾವಣೆ

    ಮೈಸೂರು: ಚಾಮುಂಡಿಬೆಟ್ಟದಲ್ಲಿ ರಥದ ಚಕ್ರಕ್ಕೆ ಆಕ್ಷೇಪರ್ಹ ಚಿತ್ರರಚನೆ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಪರ ವಿರೋಧದ ನಡುವೆ ರಥದ ಚಕ್ರಗಳ ಪೇಂಟಿಂಗ್ ಬದಲಾವಣೆ ಮಾಡಲಾಗಿದೆ.

    ಸಂಸದ ಪ್ರತಾಪ್ ಸಿಂಹ ಅವರು ಚಾಮುಂಡಿ ಬೆಟ್ಟದ ರಥ ಚಕ್ರಗಳಿಗೆ ಮಾಡಿದ್ದ ಪೇಂಟಿಂಗ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರ ಹಾಕಿದ್ದರು. ಈ ಕುರಿತು ಟ್ವೀಟ್ ಮಾಡಿದ್ದ ಸಂಸದರು, ಚಾಮುಂಡಿ ಬೆಟ್ಟದ ರಥದ ಚಕ್ರಗಳಿಗೆ ಮಾಡಿ ಪೇಂಟಿಂಗ್ ನೋಡಿ… ಇಂಥದ್ದನ್ನ ಸಹಿಸಬೇಕಾ ಹೇಳಿ ಎಂದು ಪ್ರಶ್ನಿಸಿದ್ದರು. ಬಳಿಕ ಮತ್ತೊಂದು ಟ್ವೀಟ್ ಮಾಡಿ, ನಿಮ್ಮ ಗಮನಕ್ಕೆ ಇರಲಿ ಅಂತ ಫೋಟೋ ಹಾಕಿದ್ದೇನೆ. ಪಾಠ ಕಲಿಸದೇ ಬಿಡಲ್ಲ ಎಂದು ಗುಡುಗಿದ್ದರು.

    ಚಿತ್ರದಲ್ಲಿ ಏನಿತ್ತು?:
    ಚಾಮುಂಡಿ ಬೆಟ್ಟದ ಮಹಾಬಲೇಶ್ವರ ರಥದ ಚಕ್ರಗಳಿಗೆ ಹಸಿರು ಬಣ್ಣದಿಂದ ಅರ್ಧ ಚಂದ್ರ ಹಾಗೂ ಅದರ ಮೇಲೊಂದು ನಕ್ಷದ ಬಿಂಬಿಸುವಂತಹ ಕಲಾಕೃತಿ ಬಿಡಿಸಲಾಗಿತ್ತು. ಇದಕ್ಕೆ ಸಂಸದ ಪ್ರತಾಪ್ ಸಿಂಹ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ರಥದ ಚಕ್ರಗಳ ಮೇಲಿದ್ದ ಅರ್ಧ ಚಂದ್ರ ಹಾಗೂ ನಕ್ಷತ್ರದ ಬಿಂಬಿಸುವ ಕಲಾಕೃತಿಯನ್ನು ತೆಗೆದು ಹಾಕಲಾಗಿದೆ.

    ಆದರೆ ಸಂಸದರ ನಡೆಗೆ ಸಾರ್ವಜನಿಕ ವಲಯದಲ್ಲಿ ಪರ ವಿರೋಧ ವ್ಯಕ್ಯವಾಗಿತ್ತು. ಸಂಸದರೇ ಹೀಗೆ ಪ್ರಚೋದನಕಾರಿ ಪೋಸ್ಟ್ ಮಾಡಿದ್ದು ಸರಿಯೇ ಎಂದು ಕೆಲವರು ಪ್ರಶ್ನಿಸಿದ್ದರು. ಈ ವಿಚಾರ ಮುಜುರಾಯಿ ಇಲಾಖೆ ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಪೇಟಿಂಗ್ ಬದಲಾವಣೆ ಮಾಡಿದ್ದಾರೆ.

  • ಹಳೆ ಹುಡ್ಗಿ ವಾಪಸ್ ಬರ್ಲಿ ಅಂತ ಕೇಳಿಲ್ಲ – ಆದ್ರೆ ಆರ್‌ಸಿಬಿ ಕಪ್ ಗೆಲ್ಲೋ ತರ ಮಾಡಮ್ಮ

    ಹಳೆ ಹುಡ್ಗಿ ವಾಪಸ್ ಬರ್ಲಿ ಅಂತ ಕೇಳಿಲ್ಲ – ಆದ್ರೆ ಆರ್‌ಸಿಬಿ ಕಪ್ ಗೆಲ್ಲೋ ತರ ಮಾಡಮ್ಮ

    – ಮೈಸೂರಿನ ಚಾಮುಂಡಿ ಸನ್ನಿಧಾನದ ಆವರಣದಲ್ಲಿ ಅಭಿಮಾನಿಗಳಿಂದ ಪೂಜೆ

    ಬೆಂಗಳೂರು: ಕ್ರಿಕೆಟ್ ಹಬ್ಬವೆಂದೇ ಕರೆಸಿಕೊಳ್ಳುವ ಇಂಡಿಯನ್ ಪ್ರೀಮಿಯರ್ ಲೀಗ್‍ನ 13ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ತಮ್ಮ ತಂಡ ಚಾಂಪಿಯನ್ ಆಗಲಿ ಎಂದು ದೇವರ ಮೊರೆ ಹೋಗುತ್ತಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಮೈಸೂರಿನ ಚಾಮುಂಡಿ ಸನ್ನಿಧಾನದಲ್ಲಿ ಆರ್‌ಸಿಬಿ ಬ್ಯಾನರ್ ಹಿಡಿದು ಯುವಕರು ಪೂಜೆ ಮಾಡಿದ್ದಾರೆ. ಇಬ್ಬರು ಯುವಕರು ಬ್ಯಾನರ್ ಹಿಡಿದುಕೊಂಡಿದ್ದರೆ, ಮತ್ತೊಬ್ಬ ಯುವಕ ಬ್ಯಾನರಿಗೆ ಪೂಜೆ ಮಾಡಿದ್ದಾನೆ. ಇದನ್ನೂ ಓದಿ:  ಹೊಸ ದಶಕ, ಹೊಸ ಆರ್‌ಸಿಬಿ- ಹೇಗಿದ್ದ ಲೋಗೋ ಹೇಗೆ ಬದಲಾಯಿತು?

    ವಿಡಿಯೋದಲ್ಲಿ, ನೋಡು ತಾಯಿ. ನಾನು ಕೆಲಸ ಕೊಡು ಎಂದು ಕೇಳಲಿಲ್ಲ, ಹಳೆ ಹುಡುಗಿ ವಾಪಸ್ ಬರಲಿ ಎಂದು ನಾನು ಕೇಳುತ್ತಿಲ್ಲ. ನಮ್ಮ ಆರ್‌ಸಿಬಿ ಐಪಿಎಲ್ ಕಪ್ ಗೆಲ್ಲೋ ತರ ಮಾಡು ತಾಯಿ. ನಾಯಿ ಕಣ್ಣು, ನರಿ ಕಣ್ಣು ಎಲ್ಲರ ಕಣ್ಣು, ದುಷ್ಮನ್ ಕಣ್ಣುಗಳೆಲ್ಲಾ ಹೋಗಲಿ ಎಂದು ದೃಷ್ಟಿ ತೆಗೆಯುತ್ತೇನೆ. ಮಾಡಿಲ್ಲ ತಪ್ಪು ಈ ಸಲ ಬರಬೇಕು ನಮಗೆ ಕಪ್ಪು. ತಾಯಿ ಈ ಸಲ ಕಪ್ ಗೆಲ್ಲುವ ರೀತಿ ಮಾಡು ಎಂದು ದೇಗುಲದ ಆವರಣದಲ್ಲಿ ಆರ್‌ಸಿಬಿ ಅಭಿಮಾನಿಗಳು ಈಡುಗಾಯಿ ಒಡೆದಿದ್ದಾರೆ. ಇದನ್ನೂ ಓದಿ: ನಮ್ಮ ಬೆಂಗಳೂರು ಕುಟುಂಬ ರೆಡಿನಾ- ಕನ್ನಡದಲ್ಲೇ ಚಹಲ್ ಟ್ವೀಟ್

    ಕಳೆದ ತಿಂಗಳು ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ರಥೋತ್ಸವ ಜರುಗಿತ್ತು. ಈ ವೇಳೆ ಆರ್‌ಸಿಬಿ ಅಭಿಮಾನಿ ಹನೂರಿನ ರಘು ಅವರು ಬಾಳೆ ಹಣ್ಣಿನ ಮೇಲೆ `ಈ ಸಲ ಕಪ್ ನಮ್ದೆ’ ಎಂದು ಬರೆದು ಮಾದಪ್ಪನ ರಥಕ್ಕೆ ಎಸೆದು ಬೇಡಿಕೊಂಡಿದ್ದರು. ರಘು ಬಾಳೆಹಣ್ಣು ಎಸೆದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಸದ್ಯ ಆರ್‌ಸಿಬಿ ತಂಡ ಐಪಿಎಲ್‍ನಲ್ಲಿ ಕಪ್ ಗೆಲ್ಲಬೇಕು ಎಂದು ಅಭಿಮಾನಿಗಳು ಪೂಜೆ, ಹರಕೆ ಕಟ್ಟುವ ಮೂಲಕ ದೇವರ ಮೊರೆ ಹೋಗುತ್ತಿದ್ದಾರೆ.

  • ಚಾಮುಂಡಿ ದೇವಿ ದರ್ಶನ ಪಡೆದ ಎಸ್.ಟಿ ಸೋಮಶೇಖರ್

    ಚಾಮುಂಡಿ ದೇವಿ ದರ್ಶನ ಪಡೆದ ಎಸ್.ಟಿ ಸೋಮಶೇಖರ್

    ಮೈಸೂರು: ನಗರದ ಚಾಮುಂಡಿಬೆಟ್ಟಕ್ಕೆ ನೂತನ ಸಹಕಾರಿ ಸಚಿವ ಎಸ್.ಟಿ ಸೋಮಶೇಖರ್ ಭೇಟಿ ನೀಡಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನೆರವೇರಿಸಿದರು.

    ಸ್ಥಳೀಯ ಬಿಜೆಪಿ ಮುಖಂಡರೊಂದಿಗೆ ಆಗಮಿಸಿ ಚಾಮುಂಡಿ ದರ್ಶನ ಪಡೆದ ಎಸ್.ಟಿ ಸೋಮಶೇಖರ್, ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದು, ಇಲಾಖೆ ಅಧಿಕಾರ ವಹಿಸಿಕೊಂಡ ನಂತರವೂ ಟೆಂಪಲ್ ರನ್ ಮಾಡುತ್ತಿದ್ದಾರೆ.

    ಇದೆ ವೇಳೆ ಅರಣ್ಯ ಸಚಿವ ಆನಂದ್ ಸಿಂಗ್ ಮೇಲೆ ಕೇಸ್ ಇರುವ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಆನಂದ್ ಸಿಂಗ್ ಬಗ್ಗೆ ಸಿಎಂಗೆ ಎಲ್ಲಾ ಗೊತ್ತಿದೆ. ಅವರ ಎಲ್ಲ ವಿಚಾರದ ಬಗ್ಗೆ ಸಿಎಂಗೆ ಮಾಹಿತಿ ಇದೆ. ಮಂತ್ರಿ ಆದ ತಕ್ಷಣ ಪ್ರಕರಣಗಳನ್ನ ಮುಚ್ಚಿಹಾಕಲು ಸಾಧ್ಯವಿಲ್ಲ. ಆ ರೀತಿ ಮುಚ್ಚಿ ಹಾಕಿದ್ರೆ ಅಧಿಕಾರಿಗಳಿಗೆ ತೊಂದರೆ ಆಗುತ್ತೆ ಇದೆಲ್ಲಾ ಸಾಧ್ಯವಾಗೋಲ್ಲ ಬಿಡಿ ಅಂತ ಹೇಳಿದರು.

    ಸಚಿವ ಆರ್ ಅಶೋಕ್ ಪುತ್ರನ ಅಪಘಾತ ಪ್ರಕರಣ ವಿಚಾರವಾಗಿ, ಅಪಘಾತ ಪ್ರಕರಣದ ಬಗ್ಗೆ ಅಶೋಕ್ ಈಗಾಗಲೇ ಹೇಳಿಕೆ ಕೊಟ್ಟಿದ್ದಾರೆ. ಆ ವಿಚಾರದ ನನಗೆ ಬಗ್ಗೆ ಅಷ್ಟಾಗಿ ಮಾಹಿತಿ ತಿಳಿದಿಲ್ಲ. ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡುತ್ತೇನೆ ಅಂತ ಜಾರಿಕೊಳ್ಳುವ ಪ್ರಯತ್ನ ಮಾಡಿದರು.

  • ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರ

    ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರ

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಿಹಿಯಾಗಿ ಹೊಸ ವರ್ಷ ಸ್ವಾಗತಿಸಲಾಯಿತು. ಮೈಸೂರಿನ ವಿಜಯನಗರದ ಎರಡನೇ ಹಂತದಲ್ಲಿನ ಯೋಗನರಸಿಂಹಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ಲಾಡು ವಿತರಿಸಿ ಹೊಸವರ್ಷ ಸ್ವಾಗತಿಸಲಾಯಿತು.

    ಭಕ್ತರಿಗೆ ಒಟ್ಟಾರೆ 2 ಲಕ್ಷ ಲಾಡು ವಿತರಿಸಲಾಯಿತು. ಬದೇವಾಲಯದಲ್ಲಿ ಬೆಳಗಿನ ಜಾವ 4.30ರಿಂದ ಪೂಜಾ ಕೈಂಕರ್ಯಗಳು ನಡೆದಿದ್ದು, ಪೂಜೆ ನಂತರ ನೈವೇದ್ಯ ಪ್ರಸಾದವಾಗಿ ಭಕ್ತರಿಗೆ ಲಾಡು ವಿತರಿಸಲಾಯಿತು. ಮುಂಜಾನೆಯಿಂದ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ದೇವಸ್ಥಾನಕ್ಕೆ ಆಗಮಿಸಿದ ಎಲ್ಲ ಭಕ್ತರಿಗು ಲಾಡು ವಿತರಿಸಲಾಯಿತು.

    ಹೊಸ ವರ್ಷದ ಮೊದಲ ದಿನದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ಭಕ್ತಸಾಗರ ಹರಿದು ಬಂದಿದೆ. ಭಕ್ತರು ನಾಡದೇವಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಹೊಸ ವರ್ಷ ಸ್ವಾಗತಿಸಿದರು. ಮುಂಜಾನೆಯಿಂದಲೇ ದೇವಿ ದರ್ಶನಕ್ಕೆ ಭಕ್ತರು ಸರತಿ ಸಾಲಿನಲ್ಲಿ ನಿಂತು ವರ್ಷದ ಮೊದಲ ದಿನ ದೇವಿಯ ದರ್ಶನ ಪಡೆದು ಪುನೀತರಾದರು.