Tag: chamundi hills

  • ಹಳೆ ಮೈಸೂರು ಜೀವನಾಡಿ KRS ಭರ್ತಿ- ನಾಳೆ ಸಿಎಂ ಬಾಗಿನ ಅರ್ಪಣೆ

    ಹಳೆ ಮೈಸೂರು ಜೀವನಾಡಿ KRS ಭರ್ತಿ- ನಾಳೆ ಸಿಎಂ ಬಾಗಿನ ಅರ್ಪಣೆ

    ಮೈಸೂರು: ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ ಜಲಾಶಯ ವರುಣನ ಕೃಪೆಯಿಂದ ಈ ಬಾರಿ ಅವಧಿಗೂ ಮುನ್ನವೇ ಭರ್ತಿಯಾಗಿದೆ. ಕಾವೇರಿ ತಾಯಿಗೆ ನಾಳೆ ಸಿಎಂ ಬಾಗಿನ ಅರ್ಪಿಸಲಿದ್ದಾರೆ.

    ಕಳೆದ 20 ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಹಳೆ ಮೈಸೂರು ಭಾಗದ ಜೀವನಾಡಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್ ಡ್ಯಾಂ ಈ ಬಾರಿ ಅವಧಿಗೂ ಮುನ್ನವೇ ಭರ್ತಿಯಾಗಿದೆ. ಪ್ರತಿ ವರ್ಷ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಭರ್ತಿಯಾಗುತ್ತಿದ್ದ ಕೆಆರ್‌ಎಸ್, ಈ ಬಾರಿ ಜುಲೈ ಎರಡನೇ ವಾರದಲ್ಲೇ ಭರ್ತಿಯಾಗಿದೆ.

    ಕೆಆರ್‍ಎಸ್ ಭರ್ತಿಯಾಗಿರುವ ಹಿನ್ನೆಲೆ ನಾಳೆ ಮಧ್ಯಾಹ್ನ 12.10ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾವೇರಿ ತಾಯಿಗೆ ಬಾಗಿನ ಅರ್ಪಿಸಲಿದ್ದಾರೆ. ನಾಳೆ ಚಾಮುಂಡಿ ಬೆಟ್ಟಕ್ಕೆ ಸಿಎಂ ಭೇಟಿ ನೀಡಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ಹೆಚ್‍ಡಿ.ಕೋಟೆಯ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ. ಮಧ್ಯಾಹ್ನ ಕೆಆರ್‌ಎಸ್ ಜಲಾಶಯಕ್ಕೆ ಬಾಗಿನ ಬಿಡಲಿದ್ದಾರೆ. ಅಂದಹಾಗೇ ಸಿಎಂ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ಒಂದು ವರ್ಷದ ಅವಧಿಯಲ್ಲಿ ಎರೆಡೆರಡು ಬಾರಿ ಬಾಗಿನ ಸಮರ್ಪಣೆ ಭಾಗ್ಯ. ಸಿಎಂ ಆಗಿ ಎರಡನೇ ಬಾರಿ ಕಾವೇರಿ ಹಾಗೂ ಕಪಿಲೆಗೆ ಬಾಗಿನ ಅರ್ಪಿಸಲಿದ್ದಾರೆ. ಇದನ್ನೂ ಓದಿ: ಪಕ್ಷದ ಅಧ್ಯಕ್ಷರು ಇಡಿ ಮುಂದೆ ಹೋಗುವಾಗ ನಾನು ಹುಟ್ಟುಹಬ್ಬ ಆಚರಿಸೋದು ಸರಿಯಲ್ಲ: ಖರ್ಗೆ

    ಇತ್ತ ಕಾವೇರಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಇಬ್ಬರು ಯುವಕರ ಮೃತದೇಹ ಪತ್ತೆಯಾಗಿದೆ. ಜುಲೈ 12 ರಂದು ಕೆಆರ್‌ಎಸ್ ಡ್ಯಾಂ ಬಳಿ ನದಿಗೆ ಹಾರಿದ್ದ ಬೆಂಗಳೂರು ನಿವಾಸಿ ಅಶೋಕ್ ಮೃತದೇಹ ಶ್ರೀರಂಗಪಟ್ಟಣದ ಮಹದೇವಪುರದ ಪವರ್ ಪ್ಲಾಂಟ್ ಬಳಿ ಪತ್ತೆಯಾಗಿದೆ. ಮತ್ತೊಂದೆಡೆ ನದಿಗೆ ಹಾರಿದ್ದ ಮೈಸೂರು ಮೂಲದ ಸೃಜನ್ ಮೃತದೇಹ ಪಶ್ಚಿಮ ವಾಹಿನಿಯಲ್ಲಿ ಪತ್ತೆಯಾಗಿದೆ. ಮಲೆನಾಡಿನಲ್ಲಿ ಭಾರೀ ಮಳೆ ಹಿನ್ನೆಲೆ ರಾಯಚೂರಿನಲ್ಲಿ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ನಾಲ್ಕು ದಿನಗಳ ಹಿಂದೆ ತುಂಗಭದ್ರಾ ನದಿಯಲ್ಲಿ ನಾಪತ್ತೆಯಾದ ಅರ್ಚಕನ ಪತ್ತೆಗೆ ಶೋಧ ಮುಂದುವರಿದಿದೆ. ಮೂರು ದಿನಗಳಿಂದ ಸತತ ಹುಡುಕಾಟ ನಡೆಸಿದ್ರೂ ಮೃತದೇಹ ಮಾತ್ರ ಪತ್ತೆಯಾಗಿಲ್ಲ.

    ರಾಯಚೂರು ಜಿಲ್ಲೆ ದೇವರಗುಡಿ ಗ್ರಾಮದಲ್ಲಿ ಸೇತುವೆ, ರಸ್ತೆ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇವರಗುಡಿ ಗ್ರಾಮದಿಂದ ಪಗಡದಿನ್ನಿ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಜೀವ ಪಣಕ್ಕಿಟ್ಟು ಹಳ್ಳವನ್ನ ದಾಟಿಕೊಂಡು ಹೋಗಬೇಕು. ಕೈಯಲ್ಲಿ ಸ್ಕೂಲ್ ಬ್ಯಾಗ್, ಪ್ಯಾಂಟು, ಚಪ್ಪಲಿ ಹಿಡಿದುಕೊಂಡು ಮಕ್ಕಳು ಮಕ್ಕಳು ಹಳ್ಳ ದಾಟಿ ಹೋಗ್ತಾರೆ. ರಸ್ತೆ ಅಥವಾ ಸೇತುವೆ ನಿರ್ಮಾಣಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇಂದು ಆಷಾಢ ಮಾಸದ ಮೊದಲ ಶುಕ್ರವಾರ – ಚಾಮುಂಡಿ ಬೆಟ್ಟದಲ್ಲಿ ಹಬ್ಬದ ಸಂಭ್ರಮ

    ಇಂದು ಆಷಾಢ ಮಾಸದ ಮೊದಲ ಶುಕ್ರವಾರ – ಚಾಮುಂಡಿ ಬೆಟ್ಟದಲ್ಲಿ ಹಬ್ಬದ ಸಂಭ್ರಮ

    ಮೈಸೂರು: ಇಂದು ಆಷಾಢ ಮಾಸ ಮೊದಲ ಶುಕ್ರವಾರ. ಆಷಾಢ ಮಾಸದ ನಾಲ್ಕು ಶುಕ್ರವಾರಗಳಲ್ಲೂ ಚಾಮುಂಡಿ ತಾಯಿಯ ದರ್ಶನ ಮಾಡಿದರೆ ಒಳ್ಳೆಯದಾಗುತ್ತೆ ಎಂಬ ಭಾವನೆ. ಹೀಗಾಗಿ ಆಷಾಢದ ಎಲ್ಲಾ ಶುಕ್ರವಾರದಂದು ಹೆಚ್ಚಿನ ಸಂಖ್ಯೆಯ ಭಕ್ತರು ಚಾಮುಂಡಿ ಬೆಟ್ಟಕ್ಕೆ ಬರ್ತಾರೆ. ಭಕ್ತರ ಅನುಕೂಲಕ್ಕಾಗಿ ಚಾಮುಂಡಿ ಬೆಟ್ಟದಲ್ಲಿ ಸಕಲ ವ್ಯವಸ್ಥೆಗಳು ಆಗಿವೆ.

    ತಿರುಪತಿ ಮಾದರಿಯಲ್ಲಿ ಭಕ್ತರಿಗೆ ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಯಿ ಚಾಮುಂಡಿ ದರ್ಶನಕ್ಕೆ ಬರುವ ಭಕ್ತರಿಗೆ ನ್ಯೂ ರೂಲ್ಸ್ ಮಾಡಲಾಗಿದೆ. ಎರಡು ಡೋಸ್ ಕೊರೋನಾ ಲಸಿಕೆ ಕಡ್ಡಾಯ ಹಾಕಿಸಿರಬೇಕು. ಇಲ್ಲದಿದ್ದರೆ 72 ಗಂಟೆ ಮುಂಚಿತವಾದ ಕೋವಿಡ್ ನೆಗೆಟಿವ್ ರೀಪೋರ್ಟ್ ಇರಬೇಕು. ಹಾಗಿದ್ರೆ ಮಾತ್ರ ಚಾಮುಂಡಿ ಬೆಟ್ಟ ಪ್ರವೇಶಕ್ಕೆ ಅವಕಾಶ ಇರಲಿದೆ. ಮುಂಜಾನೆ 5.30ರಿಂದ ರಾತ್ರಿ 9.30ರವರೆಗೆ ದರ್ಶನಕ್ಕೆ ಅವಕಾಶವಿದೆ. ಇದನ್ನೂ ಓದಿ: ಶಿಂಧೆ ಸಿಎಂ ಎಂದು ಘೋಷಣೆಯಾಗುತ್ತಿದ್ದಂತೆ ಟೇಬಲ್ ಹತ್ತಿ ಡ್ಯಾನ್ಸ್ ಮಾಡಿದ ಬಂಡಾಯ ಶಾಸಕರು

    ಭಕ್ತರಿಗೆ ಮೂರು ಸಾಲಿನಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರತ್ಯೇಕ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಮಳೆ-ಬಿಸಿಲು ರಕ್ಷಣೆಗೆ ಟೆಂಟ್ ನಿರ್ಮಿಸಲಾಗಿದೆ. ದೇವಸ್ಥಾನದ ಮುಂಭಾಗ ಬೆಳಗ್ಗೆ 6.30 ರಿಂದ ರಾತ್ರಿ 8.30 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಟ್ಟದಲ್ಲಿನ ಮಹಿಷಾಸುರ ಪ್ರತಿಮೆ ಆವರಣದಲ್ಲಿ ದಾನಿಗಳು ಭಕ್ತರಿಗೆ ಬಾಳೆಲೆ ಊಟಕ್ಕೆ ವ್ಯವಸ್ಥೆ ಮಾಡಿದ್ದಾರೆ. ಪ್ರಸಾದ ರೂಪದಲ್ಲಿ ಹಾರ್ಲಿಕ್ಸ್, ಮೈಸೂರು ಪಾಕ್ ವಿತರಣೆ ಮಾಡಲು ಶ್ರೀಚಾಮುಂಡೇಶ್ವರಿ ಸೇವಾ ಸಮಿತಿ ಮುಂದಾಗಿದೆ.

    30 ಮಂದಿ ಬಾಣಸಿಗರು 30 ಸಾವಿರ ಮೈಸೂರು ಪಾಕ್ ತಯಾರಿಸಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಇದೆ. ಭಕ್ತರು ಲಲಿತ್ ಮಹಲ್ ಬಳಿಯ ಮೈದಾನದಲ್ಲಿ ತಮ್ಮ ವಾಹನ ನಿಲ್ಲಿಸಿ, ಉಚಿತವಾಗಿ ಬಸ್‍ನಲ್ಲಿ ಬೆಟ್ಟಕ್ಕೆ ಹೋಗುವ ವ್ಯವಸ್ಥೆ ಇದೆ.

    Live Tv

  • ಚಾಮುಂಡಿ ಬೆಟ್ಟದ ನಂದಿ ಮಾರ್ಗ ಮತ್ತಷ್ಟು ಕುಸಿತದ ಭೀತಿ – ವರ್ಷವಾದರೂ ದುರಸ್ತಿ ಮಾಡದ ಸರ್ಕಾರ

    ಚಾಮುಂಡಿ ಬೆಟ್ಟದ ನಂದಿ ಮಾರ್ಗ ಮತ್ತಷ್ಟು ಕುಸಿತದ ಭೀತಿ – ವರ್ಷವಾದರೂ ದುರಸ್ತಿ ಮಾಡದ ಸರ್ಕಾರ

    ಮೈಸೂರು: ಇಲ್ಲಿನ ಚಾಮುಂಡಿ ಬೆಟ್ಟದ ಬಗ್ಗೆ ರಾಜ್ಯ ಸರ್ಕಾರಕ್ಕೆ ಇರುವ ನಿರ್ಲಕ್ಷ್ಯ ಎಂಥದ್ದು ಎಂಬುದಕ್ಕೆ ಕನ್ನಡಿ ಈ ವರದಿ. ಚಾಮುಂಡಿ ಬೆಟ್ಟದ ನಂದಿ ಮಾರ್ಗದಲ್ಲಿ ಭೂ ಕುಸಿತ ಉಂಟಾಗಿ ಒಂದು ವರ್ಷ ಕಳೆದಿದೆ. ಆದರೆ ದುರಸ್ತಿ ಕಾಮಗಾರಿ ಮಾತ್ರ ಇನ್ನೂ ಶುರುವಾಗಿಲ್ಲ. ಈ ನಡುವೆ ಈ ರಸ್ತೆಯ ಮತ್ತಷ್ಟು ಭಾಗ ಬಿರುಕು ಮೂಡಿದೆ. ಅಲ್ಲಿಗೆ ಈ ಬಾರಿಯ ಅಬ್ಬರದ ಮುಂಗಾರಿನ ಎಫೆಕ್ಟ್ ನಲ್ಲಿ ಚಾಮುಂಡಿ ಬೆಟ್ಟದ ನಂದಿ ಮಾರ್ಗದ ಭಾಗ ಮತ್ತಷ್ಟು ಕುಸಿಯುವುದು ನಿಶ್ಚಿತ.

    ಅತಿಯಾದ ಮಳೆ ಪರಿಣಾಮ ಒಂದು ವರ್ಷದ ಹಿಂದೆ ಚಾಮುಂಡಿ ಬೆಟ್ಟದ ನಂದಿ ಮಾರ್ಗ ದಲ್ಲಿ ಬೆಟ್ಟ ಕುಸಿತವಾಗಿತ್ತು. ಮೂರು ವರ್ಷದಲ್ಲಿ ಎರಡನೇ ಬಾರಿಗೆ ಅತಿ ದೊಡ್ಡ ಪ್ರಮಾಣದ ಬೆಟ್ಟ ಕುಸಿತ ಇದಾಗಿತ್ತು. ಅಂದಿನಿಂದ ನಂದಿ ದರ್ಶನಕ್ಕೆ ರಸ್ತೆ ಮಾರ್ಗದಲ್ಲಿ ಪ್ರಮಾಸಿಗರು ಹೋಗಲು ಆಗುತ್ತಿಲ್ಲ. ಈ ರಸ್ತೆಯ ದುರಸ್ತಿ ಮಳೆಗಾಲ ನಿಂತ ಕೂಡಲೇ ಮಾಡುತ್ತೇವೆ ಎಂದು ಹೇಳಿದ್ದ ಸರ್ಕಾರ ಅದನ್ನು ಮರೆತಿದೆ. ಈಗ ಕುಸಿತದ ಪ್ರದೇಶದ ಆಸು-ಪಾಸು ಕೂಡ ಇದೆ ರಸ್ತೆ ಬಿರುಕು ಬಿಟ್ಟಿದ್ದು ಈ ಬಾರಿಯ ಮುಂಗಾರಿನಲ್ಲಿ ಅದು ಕುಸಿತವಾಗುವುದು ನಿಶ್ಚಿತ.

    ಮಳೆಗಾಲ ಮುಗಿದು ಬಿರು ಬೇಸಿಗೆ ಬಂದು ಮತ್ತೆ ಮಳೆ ಶುರುವಾಗುತ್ತಿದ್ದರು ಕಾಮಗಾರಿ ಆರಂಭಿಸುವ ಮಾತಿರಲಿ, ಅದರ ಟೆಂಡರ್ ಪ್ರಕ್ರಿಯೆ ಪೂರ್ಣವಾಗಿಲ್ಲ. ಕುಸಿತ ಉಂಟಾದ ಪ್ರದೇಶದ ಎಡ – ಬಲದ ಭಾಗದ ರಸ್ತೆ ಸಂಪೂರ್ಣವಾಗಿ ಬಿರುಕು ಬಿಟ್ಟಿದ್ದು ಮತ್ತಷ್ಟು ಮಣ್ಣಿನ ಕುಸಿತ ಆಗುವ ಅಪಾಯ ಸೂಚಿಸುತ್ತಿದೆ. ಇದನ್ನೂ ಓದಿ: ಕೊಲ್ಲೋದೊಂದೇ ಮಾರ್ಗವಾದ್ರೆ ಬಹಳಷ್ಟು ಜನ ಬದುಕೋ ಅರ್ಹತೆ ಕಳೆದುಕೊಳ್ತಾರೆ: ಸಿ.ಟಿ ರವಿ

    ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ನೀಡಿರುವ ವರದಿಯಂತೆ ವೈಜ್ಞಾನಿಕ ಹಾಗೂ ನವ ತಂತಜ್ಞಾನದ ಮೂಲಕ ಕಾಮಗಾರಿ ನಡೆಸಲು ಲೋಕೋಪಯೋಗಿ ಇಲಾಖೆ 9.75 ಕೋಟಿ ರೂ. ಅಂದಾಜು ವೆಚ್ಚ ತಯಾರಿಸಿದೆ. ತಮಿಳುನಾಡಿನ ಹೊಸೂರು ಹಾಗೂ ಮಡಿಕೇರಿ ಮೂಲದ ಕಂಪನಿಗಳು ಟೆಂಡರ್‍ಗೆ ಪೈಪೋಟಿ ನಡೆಸಿದ್ದು, ಸದ್ಯ ಮಡಿಕೇರಿ ಮೂಲದ ಕಂಪೆನಿಗೆ ಟೆಂಡರ್ ಆಗಿದ್ದರೂ ಸರ್ಕಾರದಿಂದ ಇನ್ನೂ ಅನುಮೋದನೆ ಸಿಕ್ಕಿಲ್ಲ. ವರ್ಕ್ ಆರ್ಡರ್ ಇಲ್ಲದೆ ಟೆಂಡರ್ ಪಡೆದಿರುವ ಕಂಪನಿ ಕೆಲಸ ಆರಂಭಿಸಿಲ್ಲ. ಈಗ ಮುಂಗಾರು ರಾಜ್ಯಕ್ಕೆ ಆಗಮಿಸುವ ದಿನಗಣನೆ ಶುರುವಾಗಿದೆ.

    chamundi hill landslide

    ಭೂಮಿ ಕುಸಿತ ಉಂಟಾಗಿದ್ದ ಜಾಗದಲ್ಲಿ ಹೆಚ್ಚು ಮಳೆ ಸುರಿದರೆ ಭೂಮಿ ತೇವಾಂಶ ಮತ್ತೆ ಹೆಚ್ಚಾಗುತ್ತದೆ. ಈ ವೇಳೆ ಜೆಸಿಬಿ ಹಾಗೂ ಇತರ ಉಪಕರಣಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ಮಳೆ ಸಂಪೂರ್ಣವಾಗಿ ನಿಂತು ಭೂಮಿ ಗಟ್ಟಿಯಾದ ನಂತರವಷ್ಟೇ ಕಾಮಗಾರಿ ಆರಂಭಿಸಬೇಕಾಗುತ್ತದೆ. ಆದರೆ ಈ ಬಾರಿ ಒಂದು ತಿಂಗಳು ಮುಂಚಿತವಾಗಿ ಬೇಸಿಗೆ ಶುರುವಾಗಿದ್ದ ಹಿನ್ನೆಲೆಯಲ್ಲಿ ಮಳೆಗಾಲವೂ ಬೇಗ ಆರಂಭವಾಗುತ್ತಿದೆ. ಅಲ್ಲಿಗೆ ಈ ಬಾರಿ ಕಾಮಗಾರಿ ನಡೆಸುವುದು ಅಸಾಧ್ಯ.

    ಬೆಟ್ಟದಲ್ಲಿ ಪದೇ ಪದೆ ಭೂ ಕುಸಿತ ಉಂಟಾಗದಂತೆ ತಡೆಯಲು ಹೇಗೆ ವೈಜ್ಞಾನಿಕ ವಾಗಿ ತಡೆಗೋಡೆ ಕಟ್ಟ ಬೇಕೆಂದು ವಿಜ್ಞಾನಿಗಳು ಸ್ಪಷ್ಟವಾಗಿ ವರದಿ ಕೊಟ್ಟಿದ್ದಾರೆ. ಸರ್ಕಾರದ ವಿಳಂಬ ನೀತಿ ಪರಿಣಾಮ ಈ ಬಾರಿಯ ಮುಂಗಾರಿನ ಅಬ್ಬರದಲ್ಲೂ ಚಾಮುಂಡಿ ಬೆಟ್ಟದಲ್ಲಿ ಭೂ ಕುಸಿತ ನಿಶ್ಚಿತ ಎಂಬ ಸ್ಥಿತಿಗೆ ಬಂದಿದೆ.

    Live Tv

  • ಮಿನಿಸ್ಟರ್‌ಗಳು ಏನೇನೋ ಮಾತಾಡ್ತಿದ್ದಾರೆ, ಅವರಿಗೆ ಒಳ್ಳೆಯದಾಗ್ಲಿ ರಾಜ್ಯಕ್ಕೂ ಹಿತವಾಗ್ಲಿ: ಡಿಕೆಶಿ

    ಮಿನಿಸ್ಟರ್‌ಗಳು ಏನೇನೋ ಮಾತಾಡ್ತಿದ್ದಾರೆ, ಅವರಿಗೆ ಒಳ್ಳೆಯದಾಗ್ಲಿ ರಾಜ್ಯಕ್ಕೂ ಹಿತವಾಗ್ಲಿ: ಡಿಕೆಶಿ

    ಮೈಸೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ನಡೆಸುವ ಪಾದೆಯಾತ್ರೆಗೆ ಮಿನಿಸ್ಟರ್ ಗಳು ಏನೇನೋ ಮಾತನಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ, ರಾಜ್ಯಕ್ಕು ಹಿತವಾಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

    ಚಾಮುಂಡಿಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ್ಳೆಯ ಕಾರ್ಯ ಮಾಡುವ ಮುನ್ನ ಚಾಮುಂಡೇಶ್ವರಿ ದೇವಿಗೆ ಪೂಜೆ ಮಾಡಿದ್ದೇನೆ. ಎಲ್ಲಾ ಅಡಚಣೆ ಸಂಹಾರ ಮಾಡುವ ಶಕ್ತಿ ದೇವಿಗೆ ಇದೆ. ಹಿಂದಿನಿಂದ ದೇವಿಯ ಶಕ್ತಿಯನ್ನ ನಾವು ನಂಬಿಕೊಂಡಿದ್ದೇವೆ. ಅದಕ್ಕಾಗಿ ನಾವು ಹೋರಾಟಕ್ಕೂ ಮುನ್ನ ದೇವರ ದರ್ಶನ ಮಾಡಿದ್ದೇವೆ. ರಾಜ್ಯದ ಹಿತಕ್ಕಾಗಿ ನಾವು ಈ ಮೇಕೆದಾಡ ಹೋರಾಟ ಮಾಡುತ್ತಿದ್ದೇವೆ. ಕುಡಿಯುವ ನೀರನ್ನು ಜನರಿಗೆ ಕೊಡಬೇಕು ಅನ್ನೋದು ನಮ್ಮ ಹೋರಾಟ ಎಂದರು.

    ಇದೇ ವೇಳೆ ಬಿಜೆಪಿ ನಾಯಕರ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಿನಿಸ್ಟರ್ ಗಳು ಏನೇನೋ ಮಾತನಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ, ರಾಜ್ಯಕ್ಕೂ ಹಿತವಾಗಲಿ. ಅವರು ಈಗ ಗಿಮಿಕ್ ಅಂತಿದ್ದಾರೆ. ವಾಜಪೇಯಿ ಕಾಲದಲ್ಲಿ ಅಡ್ವಾಣಿಯವರು ರಥಯಾತ್ರೆ ಮಾಡಿದ್ರು. ದೇವೆಗೌಡರು ಹಿಂದೆ ಬೇಕಾದಷ್ಟು ಯಾತ್ರೆಗಳನ್ನು ಮಾಡಿದ್ರು ಅದಕ್ಕೆ ಏನಂತ ಹೇಳಬೇಕು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾಜಕೀಯ ಬಿಕ್ಕಟ್ಟು – ಸುಡಾನ್‌ ಪ್ರಧಾನಿ ರಾಜೀನಾಮೆ ಘೋಷಣೆ

    ಕುಮಾರಸ್ವಾಮಿಯವರು ಯಾತ್ರೆ ಮಾಡ್ತೀನಿ ಅಂತಾ ಇದ್ದಾರೆ. ಯಡಿಯೂರಪ್ಪನವರು ಐದು ತಂಡ ಮಾಡಿಕೊಂಡು ಯಾತ್ರೆ ಮಾಡ್ತೀನಿ ಅಂದ್ರು. ಇದಕ್ಕೆಲ್ಲ ಏನ್ ಅಂತ ಹೇಳಬೇಕು. ಎಲೆಕ್ಷನ್ ಟೈಮ್ ನಲ್ಲಿ ಇಡೀ ದೇಶದಲ್ಲಿ ಎಲ್ಲೂ ಕೊರೊನಾ ಇರಲಿಲ್ವಾ..?, ಈಗ ಮಾತನಾಡುತ್ತಿರುವವರಿಗೆ ಒಳ್ಳೆಯದಾಗಲಿ ಎಂದು ಡಿಕೆಶಿ ಹೇಳಿದರು.

  • ಸ್ನೇಹಿತರೊಂದಿಗೆ ಶ್ವೇತಾ ಚೆಂಗಪ್ಪ ಮೋಜು, ಮಸ್ತಿ – ಫೋಟೋ ವೈರಲ್

    ಸ್ನೇಹಿತರೊಂದಿಗೆ ಶ್ವೇತಾ ಚೆಂಗಪ್ಪ ಮೋಜು, ಮಸ್ತಿ – ಫೋಟೋ ವೈರಲ್

    ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಟಿ ಶ್ವೇತಾ ಚೆಂಗಪ್ಪ ಸ್ನೇಹಿತರನ್ನು ಭೇಟಿಯಾಗಿ ಸಖತ್ ಎಂಜಾಯ್ ಮಾಡಿದ್ದಾರೆ.

    Swetha Changappa

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ತಂಡದ ಸದಸ್ಯರೊಂದಿಗೆ ಶ್ವೇತಾ ಚೆಂಗಪ್ಪ ಮೈಸೂರಿನ ಚಾಂಮುಡಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಬಳಿಕ ನಟ ಮಂಡ್ಯ ರಮೇಶ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರೊಂದಿಗೆ ಸೆಲ್ಫಿಕ್ಲಿಕ್ಕಿಸಿಕೊಂಡಿದ್ದಾರೆ. ಕೊನೆಯದಾಗಿ ಹಲವು ದಿನಗಳ ಬಳಿಕ ಒಟ್ಟಿಗೆ ಸ್ನೇಹಿತೊಂದಿಗೆ ಕುಳಿತು ಊಟ ಮಾಡಿದ್ದಾರೆ.

    Swetha Changappa

    ಸದ್ಯ ಈ ಫೋಟೋಗಳನ್ನು ಶ್ವೇತಾ ಚೆಂಗಪ್ಪ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ಶ್ವೇತಾ ಜೊತೆಗೆ ಅಪರ್ಣ ವಸ್ತಾರೆ, ಕುರಿ ಪ್ರತಾಪ್, ರೆಮೋ, ಮಾಲಿನಿ ಜಯಪ್ರಕಾಶ್, ಶಾಲಿನಿ ಜಯಪ್ರಕಾಶ್ ಇರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಮೈಸೂರಿನ ಚಿತ್ರನಗರಿಗೆ ಪುನೀತ್ ರಾಜ್‍ಕುಮಾರ್ ಹೆಸರಿಡಲು ಚಿಂತನೆ: ಎಸ್‍ಟಿಎಸ್

     

    View this post on Instagram

     

    A post shared by Swetha Changappa (@swethachangappa)

    ಫೋಟೋ ಜೊತೆಗೆ ನಾನು ನಗಲು ಬಯಸದಿದ್ದರೂ ಸಹ ನನ್ನನ್ನು ನಗಿಸುವವರನ್ನು ನಾನು ಪ್ರೀತಿಸುತ್ತೇನೆ ಮತ್ತು ಯಾವಾಗಲೂ ನಂಬುತ್ತೇನೆ. ಜಗತ್ತನ್ನು ವಿಭಿನ್ನವಾಗಿ ಕಾಣುವಂತೆ ಮಾಡುವ ಜನರೊಂದಿಗೆ ನಿಮ್ಮ ಸಮಯವನ್ನು ಕಳೆಯಿರಿ. ನಿಮ್ಮೆಲ್ಲರನ್ನು ಭೇಟಿಯಾಗಿದ್ದು ಮತ್ತು ನಿಮ್ಮೆಲ್ಲರ ಜೊತೆ ಸಮಯ ಕಳೆದಿದ್ದು, ಬಹಳ ಸಂತಸ ತಂದಿದೆ. ಲವ್ ಯು ಆಲ್ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳ ಪ್ರಶ್ನೆಗೆ ಖಡಕ್ ಉತ್ತರ ನೀಡಿದ ರಾಧಿಕಾ ಪಂಡಿತ್

  • ಚಾಮುಂಡಿಬೆಟ್ಟ ಭೂಕುಸಿತ ದುರಸ್ತಿ ಕಾರ್ಯ ತ್ವರಿತವಾಗಿ ನಡೆಸಿ : ಎಸ್‌ಟಿಎಸ್‌ ಸೂಚನೆ

    ಚಾಮುಂಡಿಬೆಟ್ಟ ಭೂಕುಸಿತ ದುರಸ್ತಿ ಕಾರ್ಯ ತ್ವರಿತವಾಗಿ ನಡೆಸಿ : ಎಸ್‌ಟಿಎಸ್‌ ಸೂಚನೆ

    ಮೈಸೂರು: ಸತತ 10 ದಿನಗಳಿಂದ ಬಿದ್ದ ಭಾರೀ ಮಳೆಯ ಪರಿಣಾಮ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ದುರಸ್ತಿ ಕಾರ್ಯ ತ್ವರಿತವಾಗಿ ನಡೆಸಲು ಜಿಲ್ಲಾಧಿಕಾರಿಗಳಿಗೆ ಸಹಕಾರ ಸಚಿವ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರು ಖಡಕ್ ಸೂಚನೆ ನೀಡಿದ್ದಾರೆ.

    ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಚಾಮುಂಡಿಬೆಟ್ಡದಲ್ಲಿ ಬೃಹತ್ ನಂದಿ ಪ್ರತಿಮೆಗೆ ತೆರಳುವ ಮಾರ್ಗದಲ್ಲಿ ಭೂಕುಸಿತ ಉಂಟಾಗಿ ರಸ್ತೆ ಹಾನಿಗೀಡಾಗಿರುವುದು ದುರದೃಷ್ಟಕರ. ಜಿಲ್ಲಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿ ತುರ್ತು ಕ್ರಮ ಕೈಗೊಳ್ಳಬೇಕು. ಮುಂದಾಗಬಹುದಾದ ಅನಾಹುತ ತಪ್ಪಿಸಲು ಕೂಡಲೇ ಆ ರಸ್ತೆ ಸಂಚಾರವನ್ನು ಬಂದ್ ಮಾಡಿ, ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕು. ಆದಷ್ಟು ಶೀಘ್ರದಲ್ಲಿ ನಾನು ಬಂದು ಪರಿಶೀಲಿಸುತ್ತೇನೆ. ದುರಸ್ತಿ ಕಾರ್ಯವನ್ನು ಸಮರೋಪಾದಿಯಲ್ಲಿ ತೆಗೆದುಕೊಂಡು ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕೆಂದು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಮಧ್ಯರಾತ್ರಿ ಸಿಎಂಗೆ ಝೀರೋ ಟ್ರಾಫಿಕ್‌ – ಅರ್ಧಗಂಟೆ ಸರ್ವಿಸ್‌ ರಸ್ತೆಯಲ್ಲಿ ನಿಂತ ವಾಹನಗಳು

    ಕಳೆದ ಕೆಲದಿನಗಳಿಂದ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಬೆಂಗಳೂರು ಸಹಿತ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ. ಹಿಂಗಾರು ಮಾರುತಗಳಿಂದ ಅಕ್ಟೋಬರ್ ಕೊನೆಯ ವಾರದಲ್ಲಿ ಮತ್ತೆ ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಭಾರೀ ಮಳೆ – ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ

  • ಭಾರೀ ಮಳೆ – ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ

    ಭಾರೀ ಮಳೆ – ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ

    ಮೈಸೂರು: ಸತತ 10 ದಿನಗಳಿಂದ ಬಿದ್ದ ಭಾರೀ ಮಳೆಯ ಪರಿಣಾಮ ಬುಧವಾರ ರಾತ್ರಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ ಉಂಟಾಗಿದೆ.

    ಚಾಮುಂಡಿ ಬೆಟ್ಟದಿಂದ ನಂದಿಗೆ ಹೋಗುವ ಮಾರ್ಗದಲ್ಲಿ ಈ ಗುಡ್ಡ ಕುಸಿತ ಸಂಭವಿಸಿದೆ. ಹೆಚ್ಚು ಕಡಿಮೆ 60 ಅಡಿಗಳಷ್ಟು ಗುಡ್ಡ ಕುಸಿದಿದೆ. ಗುಡ್ಡ ಕುಸಿತದಿಂದ ಪ್ರವಾಸಿಗರ ಸಂಚಾರಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಇದನ್ನೂ ಓದಿ: ಮಧ್ಯರಾತ್ರಿ ಸಿಎಂಗೆ ಝೀರೋ ಟ್ರಾಫಿಕ್‌ – ಅರ್ಧಗಂಟೆ ಸರ್ವಿಸ್‌ ರಸ್ತೆಯಲ್ಲಿ ನಿಂತ ವಾಹನಗಳು

    ಮೈಸೂರಿನಲ್ಲಿ ಧಾರಾಕಾರ ಮಳೆ ಬಂದಿದ್ದು ಕಳೆದ 10 ದಿನಗಳಿಗೆ ಹೋಲಿಸಿದರೆ ನಿನ್ನೆ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಹೀಗಾಗಿ ದೊಡ್ಡ ಮಟ್ಟದಲ್ಲಿ ಗುಡ್ಡ ಕುಸಿತವಾಗಿದೆ. ಎರಡು ವರ್ಷದ ಹಿಂದೆಯೂ ಇದೇ ಮಾರ್ಗದ ಮತ್ತೊಂದು ಭಾಗದಲ್ಲಿ ಗುಡ್ಡ ಕುಸಿತವಾಗಿತ್ತು. ಇದನ್ನೂ ಓದಿ: ಮರದ ಜೊತೆ ನಟಿ ನಯನತಾರಾ ಮದುವೆ

    ಕಳೆದ ಕೆಲದಿನಗಳಿಂದ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಬೆಂಗಳೂರು ಸಹಿತ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ. ಹಿಂಗಾರು ಮಾರುತಗಳಿಂದ ಅಕ್ಟೋಬರ್ ಕೊನೆಯ ವಾರದಲ್ಲಿ ಮತ್ತೆ ದಕ್ಷಿಣ ಕರ್ನಾಟಕದ ಭಾಗಗಳಲ್ಲಿ  ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

  • ಇಂದು, ನಾಳೆ ಚಾಮುಂಡಿ ಬೆಟ್ಟ ಓಪನ್: ಎಸ್.ಟಿ.ಸೋಮಶೇಖರ್

    ಇಂದು, ನಾಳೆ ಚಾಮುಂಡಿ ಬೆಟ್ಟ ಓಪನ್: ಎಸ್.ಟಿ.ಸೋಮಶೇಖರ್

    ಮೈಸೂರು: ರಾತ್ರಿ ಎಂಟು ಗಂಟೆಗೆ ಬಂದ್ ಆಗುತ್ತಿದ್ದ ಚಾಮುಂಡೇಶ್ವರಿ ದೇವಸ್ಥಾನವನ್ನು ಇಂದು ಮತ್ತು ನಾಳೆ ರಾತ್ರಿ 10 ಗಂಟೆಯವರೆಗೆ ತೆರೆದು ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಸೂಚನೆ ನೀಡಲಾಗಿದೆ ಎಂದು ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

    ಅರಮನೆ ಆವರಣದಲ್ಲಿ ಇಂದು ಬೆಳಗ್ಗೆ ಮಾವುತರು ಮತ್ತು ಕಾವಾಡಿಗರಿಗೆ ಆಯೋಜಿಸಿದ್ದ ಉಪಹಾರ ಕೂಟದಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ದೇವಸ್ಥಾನವನ್ನು ರಾತ್ರಿ 8 ಗಂಟೆಗೆ ಬಂದ್ ಮಾಡಲಾಗುತ್ತಿತ್ತು. ನಗರದ ದೀಪಾಲಂಕಾರ ನೋಡಿಕೊಂಡು ದೇವಸ್ಥಾನಕ್ಕೆ ತೆರಳುವವರು ತಾಯಿ ಚಾಮುಂಡೇಶ್ವರಿಯ ದರ್ಶನ ಮಾಡಲೆಂದು ಶುಕ್ರವಾರದವರೆಗೆ ರಾತ್ರಿ 10 ಗಂಟೆಯವರೆಗೆ ದರ್ಶನದ ಅವಧಿ ವಿಸ್ತರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.

    ಜಂಬೂಸವಾರಿಗೆ ಎಲ್ಲ ಸಿದ್ಧತೆ ಆಗಿದೆ. ಕೋವಿಡ್ ನಿಯಮಗಳನ್ನು ಉಲ್ಲಂಘಿಸದೇ 500 ಜನರಿಗೆ ಜಂಬೂಸವಾರಿ ವೀಕ್ಷಿಸಲು ಅವಕಾಶ ನೀಡಲಾಗಿದೆ. ಕೆಲವರು ಒಂದು ವಾರ, ಮತ್ತೆ ಕೆಲವರು ದೀಪಾವಳಿವರೆಗೆ ದೀಪಾಲಂಕಾರ ವಿಸ್ತರಣೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಅವರ ಬಳಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ನಾಡಿನೆಲ್ಲೆಡೆ ಆಯುಧಪೂಜೆಯ ಸಂಭ್ರಮ – ರಾಜವಂಶಸ್ಥರ ಆಯುಧಗಳಿಗೆ ಪೂಜೆ ಸಲ್ಲಿಸಲಿರುವ ಯದುವೀರ್

    ಇದೇ ವೇಳೆ ಡಿಕೆ. ಶಿವಕುಮಾರ್ ಪರ್ಸಂಟೇಜ್ ವಿಚಾರ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದ ಹಿರಿಯ ನಾಯಕರು ಈ ಬಗ್ಗೆ ಹೇಳಿದ್ದಾರೆ. ನಾನು ಶಾಸಕನಾಗಿದ್ದಾಗ ಇದೇನು ಇರಲಿಲ್ಲ. ಆದರೆ ಈಗ ಅವರಿಗೆ ಗೊತ್ತಿರಬಹುದು ಅದಕ್ಕೆ ಹೇಳಿದ್ದಾರೆ. ಕಾಂಗ್ರೆಸ್‍ನಲ್ಲಿ ಷಡ್ಯಂತ್ರ ನಡೆಯುತ್ತಿದೆ ಎಂದು ಹಿಂದೆಯೇ ಹೇಳಿದ್ದೆ. ಸಿದ್ದರಾಮಯ್ಯ ವರ್ಸಸ್ ಡಿಕೆ. ಶಿವಕುಮಾರ್ ಷಡ್ಯಂತ್ರ ನಡೆಯುಸುತ್ತಿದ್ದಾರೆ. ಇದು ಆ ಪಕ್ಷದ ಆಂತರಿಕ ವಿಚಾರ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಸಿಂಹಕ್ಕೂ ಅಂಜದೇ ಮಾಂಸ ತಿನ್ನಿಸಿದ ರಾಕಿ ಬಾಯ್ – ವೀಡಿಯೋ ವೈರಲ್

    23 ಸಚಿವರನ್ನು ಸಿದ್ದರಾಮಯ್ಯ ಬೀದಿಪಾಲು ಮಾಡಿದರು ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತಂತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಪಕ್ಷ ಬಿಡುವಂತೆ ಹೇಳಿಲ್ಲ. ಇದು ಹಳೇ ವಿಷಯ, ಇದನ್ನೇ ಮತ್ತೆ, ಮತ್ತೆ ಹೇಳುವುದು ಸರಿಯಲ್ಲ. ಕುಮಾರಸ್ವಾಮಿ ಅವರು ರಾತ್ರಿ 10 ಗಂಟೆಗೆ ಮಲಗಿ, ಕಣ್ಮುಚ್ಚಿಕೊಂಡು ಯೋಚಿಸಿದರೆ 23 ಜನ ಯಾಕೆ ಹೋದರು ಅಂತ ಗೊತ್ತಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

  • ಚಾಮುಂಡಿ ಭಕ್ತರಿಗಿಲ್ಲ ಅಮ್ಮನವರ ದರ್ಶನ- 3ದಿನ ಪ್ರವೇಶಕ್ಕೆ ನಿರ್ಬಂಧ

    ಚಾಮುಂಡಿ ಭಕ್ತರಿಗಿಲ್ಲ ಅಮ್ಮನವರ ದರ್ಶನ- 3ದಿನ ಪ್ರವೇಶಕ್ಕೆ ನಿರ್ಬಂಧ

    ಮೈಸೂರು: ನಾಳೆ ಮಹಾಲಯ ಅಮವಾಸ್ಯೆಯಾಗಿದೆ ಚಾಮುಂಡಿ ಬೆಟ್ಟಕ್ಕೆ ಹೋಗಬೇಕು ಎಂದು ನೀವು ಏನಾದ್ರೂ ಅಂದುಕೊಂಡಿದ್ದರೆ ನಿರಾಸೆ ಉಂಟಾಗಲಿದೆ. ಮೂರು ದಿನ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧವನ್ನು ಹೇರಲಾಗಿದೆ. ಇದನ್ನೂ ಓದಿ: ಶಾರೂಖ್‌ ಪುತ್ರನ ಲೆನ್ಸ್‌ ಬಾಕ್ಸ್, ಇನ್ನೊಬ್ಬಳು ಯುವತಿಯ ಬ್ಯಾಗಲ್ಲಿದ್ದ ಸ್ಯಾನಿಟರಿ ಪ್ಯಾಡಲ್ಲಿತ್ತು ಮಾದಕ ವಸ್ತು!

    ಗುರುವಾರ ನಾಡ ಹಬ್ಬ ದಸರಾ ಉದ್ಘಾಟನೆಯನ್ನು ಮಾಡಲಾಗುತ್ತದೆ. ಹೀಗಾಗಿ ಈ ಹಿನ್ನಲೆಯಲ್ಲಿ ಮೂರು ದಿನಗಳ ಕಾಲ ದೇವಿ ದರ್ಶಕ್ಕೆ ಭಕ್ತಾದಿಗಳಿಗೆ ನಿರ್ಬಂಧವನ್ನು ಹೇರಲಾಗಿದೆ. ಇಂದು, ನಾಳೆ ಮತ್ತು ನಾಡಿದ್ದು ಒಟ್ಟೂ ಮೂರು ದಿನಗಳ ಕಾಲ ಚಾಮುಂಡಿ ದೇವಿಯ ದರ್ಶನಕ್ಕೆ ಭಕ್ತಾಧಿಗಳಿಗೆ ನಿರ್ಬಂಧವನ್ನು ಜಿಲ್ಲಾಢಳಿತ ಹೇರಿದೆ. ಕೋವಿಡ್ ನಿರ್ಬಂಧ ಕಾರಣವನ್ನು ಕೂಡ ಜಿಲ್ಲಾಡಿತದ ಆದೇಶದಲ್ಲಿ ಹೇಳಲಾಗಿದೆ. ಇದನ್ನೂ ಓದಿ: ಮುಂಬೈ ಡ್ರಗ್ಸ್ ಪ್ರಕರಣ – ಐಷಾರಾಮಿ ಹಡಗಿನಲ್ಲಿ ತಗ್ಲಾಕ್ಕೊಂಡ ಬೆಂಗಳೂರಿಗರು..!

    ಚಾಮುಂಡಿ ಬೆಟ್ಟಕ್ಕೆ ಹೋಗಬೇಕು ಎಂದು ಕೊಂಡವರಿಗೆ ನಿರಾಸೆ ಉಂಟಾಗಲಿದೆ. ಕೊರೊನಾ ನಿರ್ಭಂದಗಳಿರುವುದರಿಂದ ಜನ ತುಂಬಾ ಸೇರಿ ಬಿಟ್ಟರೆ ತೊಂದರೆಯಾಗುತ್ತದೆ. ದಸರಾ ಉದ್ಘಾಟನೆಯ ಸಿದ್ಧತೆಗೆ ತೊಂದರೆಯಾಗುತ್ತದೆ ಎನ್ನುವ ಕಾರಣದಿಂದಾಗಿ ಪ್ರವೇಶಕ್ಕೆ ನಿರ್ಭಂಧವನ್ನು ಹೇರಲಾಗಿದೆ.

  • ಚಾಮುಂಡಿ ತಾಯಿ ದರ್ಶನ ಪಡೆದ ಗೃಹ ಸಚಿವ ಅರಗ ಜ್ಞಾನೇಂದ್ರ

    ಚಾಮುಂಡಿ ತಾಯಿ ದರ್ಶನ ಪಡೆದ ಗೃಹ ಸಚಿವ ಅರಗ ಜ್ಞಾನೇಂದ್ರ

    – ಕ್ರೈಂ ನಿಯಂತ್ರಣಕ್ಕೆ ಚಾಮುಂಡಿ ಮೊರೆ ಹೋದ ಸಚಿವ

    ಮೈಸೂರು: ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಇಂದು ಚಾಮುಂಡಿ ತಾಯಿಯ ದರ್ಶನ ಪಡೆದಿದ್ದಾರೆ. ಗೃಹ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಭೇಟಿ ನೀಡಿರುವ ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿಯ ದರ್ಶನ ಪಡೆದಿದ್ದಾರೆ. ಬಳಿಕ ಜಲದರ್ಶಿನಿಗೆ ತೆರಳಿ ನಂತರ ಪೊಲೀಸ್ ಕಮೀಷರ್ ಕಚೇರಿಗೆ ತೆರಳಿದ್ದಾರೆ.

    ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾನು ಗೃಹ ಸಚಿವನಾದ ಬಳಿಕ ಇದೇ ಮೊದಲ ಬಾರಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಮಾಡಿದ್ದೇನೆ. ದರ್ಶನ ಮಾಡಿ ನನಗೆ ತುಂಬಾ ಸಂತೋಷವಾಗಿದೆ. ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ನನಗೆ, ನಮ್ಮ ಪೊಲೀಸ್ ಇಲಾಖೆಗೆ ಶಕ್ತಿಕೊಡುವಂತೆ ಕೇಳಿಕೊಂಡಿದ್ದೇನೆ ಎಂದರು. ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ಜಗತ್ತು ಒಟ್ಟಾಗಿ ಹೋರಾಡಬೇಕು: ಭಾರತ

    ರಾಜ್ಯದ ಜನತೆ ಒಳ್ಳೆದು ಮಾಡ್ಲಿ, ಒಳ್ಳೆಯ ಮನಸ್ಸು ಕೊಡ್ಲಿ ಎಂದು ಪ್ರಾರ್ಥಿಸಿದ್ದೇನೆ. ಕಾನೂನು ಸುವ್ಯವಸ್ಥೆ ಹತೋಟಿಗೆ ಬರುವಂತೆ ಪ್ರಾರ್ಥಿ ಸಿದ್ದೀನಿ. ರಾಜ್ಯದಲ್ಲಿ ಕ್ರೈಂ ರೇಟ್ ಕಡಿಮೆ ಆಗೋದಲ್ಲ, ಕ್ರೈಂ ಆಗದಂತೆ ಚಾಮುಂಡೇಶ್ವರಿ ಕೇಳಿಕೊಂಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಬೂಲ್‍ನಲ್ಲಿ 7 ಸರಣಿ ಬಾಂಬ್ ಸ್ಫೋಟ – 90ಕ್ಕೂ ಹೆಚ್ಚು ಬಲಿ, 150ಕ್ಕೂ ಹೆಚ್ಚು ಮಂದಿಗೆ ಗಾಯ

    ಅರಮನೆ ನಗರಿಯಲ್ಲಿ ಪೈಶಾಚಿಕ ಕೃತ್ಯವೊಂದು ನಡೆದಿದೆ. ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ನಡೆದಿದೆ. ಘಟನೆ ನಡೆದ ಎರಡು ದಿನಗಳ ಬಳಿಕ ಗೃಹ ಸಚಿವರು ಜಿಲ್ಲೆಗೆ ಭೇಟಿ ನೀಡಿದ್ದಾರೆ. ಕಾನೂನು ಸುವ್ಯವಸ್ಥೆ ಗೃಹ ಇಲಾಖೆಯಲ್ಲಿ ಅಡಿಯಲ್ಲಿ ಬರುವುದು ಸಚಿವರಿಗೆ ಗೊತ್ತಿಲ್ಲವಾ..?. ಪ್ರಕರಣದ ಗಂಭೀರತೆ ಗೊತ್ತಾಗಿದ್ರೆ ಮೊನ್ನೆಯೇ ಮೈಸೂರಿಗೆ ತೆರಳಿ ಪ್ರಕರಣದ ಗಂಭೀರತೆ ಅರ್ಥಮಾಡಿಕೊಳ್ಳಬೇಕಿತ್ತು. ಸದಾ ಸ್ವರ್ಗ ಎನ್ನುತ್ತಿದ್ದ ಮೈಸೂರಲ್ಲಿ ಸರಣಿ ಕಾನೂನು ಸುವ್ಯವಸ್ಥೆ ಹದಗೆಟ್ಟ ಪ್ರಕರಣಗಳು ನಡೆದಿವೆ. ಆದರೂ ಅರಗ ಜ್ಞಾನೇಂದ್ರ ಏನೂ ನಡೆಯುತ್ತಿಯಲ್ಲವೇನೋ ಎಂಬಂತೆ ಇದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಐಸಿಸ್-ಕೆ ಉಗ್ರರ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುಡುಗು