Tag: chamundi hills

  • ಕಾಂತಾರ ಸಕ್ಸಸ್‌ – ದೈವಾರಾಧನೆಯಲ್ಲಿ ಎಲ್ಲೂ ತಪ್ಪಾಗಿಲ್ಲ, ನಾನೇನು ಹೊಸಬನಲ್ಲ: ರಿಷಬ್‌ ಶೆಟ್ಟಿ

    ಕಾಂತಾರ ಸಕ್ಸಸ್‌ – ದೈವಾರಾಧನೆಯಲ್ಲಿ ಎಲ್ಲೂ ತಪ್ಪಾಗಿಲ್ಲ, ನಾನೇನು ಹೊಸಬನಲ್ಲ: ರಿಷಬ್‌ ಶೆಟ್ಟಿ

    – ಕಾಂತಾರ ನೆಕ್ಸ್ಟ್‌ ಚಾಪ್ಟರ್ ಬಗ್ಗೆ ರಿಷಭ್‌ ಹೇಳಿದ್ದೇನು?; ಮುಂದಿನ ಸಿನಿಮಾ ಯಾವುದು?

    ಕಾಂತಾರ ಚಾಪ್ಟರ್‌-1 (Kantara Chapter 1) ಸಕ್ಸಸ್‌ ಬೆನ್ನಲ್ಲೇ ನಟ ರಿಷಬ್‌ ಶೆಟ್ಟಿ (Rishab Shetty) ಅವರಿಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದರು. ತಾಯಿ ಚಾಮುಂಡಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದರು. ನಾನು ದೈವವನ್ನ ನಂಬುವಂತವನು. ದೈವದ ಅನುಮತಿ ಪಡೆದೇ ಸಿನಿಮಾ ಮಾಡಿದ್ದೇನೆ. ನಾಡಿನ ಜನತೆಯಿಂದ ಅದ್ಭುತ ಯಶಸ್ಸು ಸಿಕ್ಕಿದೆ ಎಂದರಲ್ಲದೇ ಗಳಿಕೆಯ ಬಗ್ಗೆ ನಾನು ಮಾತನಾಡುವುದಿಲ್ಲ. ಕನ್ನಡಿಗರಿಗೆ ಧನ್ಯವಾದಗಳನ್ನ ತಿಳಿಸುತ್ತೇನೆ. ನಾನು ಸಿನಿಮಾ ಡೈರೆಕ್ಟರ್ ಅಷ್ಟೇ. ಲೆಕ್ಕದ ವಿಚಾರದಲ್ಲಿ ನಾನಿಲ್ಲ. ವಿಜಯ ಕಿರಗಂದೂರು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದರು.

    ದೈವಾರಾಧಕರ ವಿರೋಧಕ್ಕೆ ರಿಷಬ್‌ ಖಡಕ್‌ ಉತ್ತರ
    ಇನ್ನೂ ದೈವರಾದಕರು (Daivaradhakas) ಸಿನಿಮಾ ಬಗ್ಗೆ ವಿರೋಧ ಎತ್ತಿರುವ ಕುರಿತ ಪ್ರಶ್ನೆಗೆ, ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದುಕೊಂಡಿದ್ದೇನೆ. ದೈವ ದೇವರ ವಿಚಾರಗಳನ್ನ ಸಿನಿಮಾದಲ್ಲಿ ಮಾತ್ರ ಮಾತನಾಡುತ್ತೇನೆ. ಯಾರು ಏನು ಬೇಕಾದರೂ ಮಾತನಾಡಲಿ. ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಇಡೀ ತಂಡದ ಮೇಲೆ ದೈವದ ಆಶೀರ್ವಾದ ಇದೆ. ನಾನು ದೈವವನ್ನ ನಂಬುತ್ತೇನೆ ಆರಾಧನೆ ಮಾಡುತ್ತೇನೆ. ಎಲ್ಲಿಯೂ ತಪ್ಪುಗಳು ಆಗದಂತೆ ಹಿರಿಯರ ಮಾರ್ಗದರ್ಶನ ಪಡೆದು ಸಿನಿಮಾ ಮಾಡಿದ್ದೇನೆ. ನಾನು ಹೊಸಬನಲ್ಲ, ದೈವದ ಸಿನಿಮಾ ಮಾಡುವವರು ಸರಿಯಾದ ರೀತಿಯಲ್ಲಿ ಸಿನಿಮಾ ಮಾಡಬೇಕು. ಕುಂದಾಪುರದ ಕೆರಾಡಿ ಗ್ರಾಮದಿಂದ‌ ಬಂದು ಜನರಿಗೆ ರೀಚ್ ಆಗುವ ರೀತಿ ಸಿನಿಮಾ ಮಾಡುತ್ತಿದ್ದೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಿನಿಮಾಗೆ ಒಳ್ಳೆಯ ಹೆಸರು ಬಂದಿದೆ. ಇದರಿಂದ ತುಂಬಾ ಖುಷಿಯಾಗಿದೆ ಎಂದ ರಿಷಬ್, ಕಾಂತಾರ ನೆಕ್ಸ್ಟ್‌ ಚಾಪ್ಟರ್ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು.

    ನನ್ನ ಮುಂದಿನ ಚಿತ್ರ ʻಜೈ ಹನುಮಾನ್‌ʼ. ಇದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದರು. ಇನ್ನೂ ಅಮಿತಾಬಚ್ಚನ್ ಭೇಟಿಯಾದ ಬಗ್ಗೆ ಮಾತನಾಡಿದ ರಿಷಬ್, ಕನ್ನಡದಲ್ಲಿ ಅಣ್ಣಾವ್ರು ಹೇಗೊ ಅದೇ ರೀತಿ ಬಾಲಿವುಡ್‌ನಲ್ಲಿ ಅಮಿತಾಬಚ್ಚನ್. ಅಣ್ಣಾವ್ರು ಯಾವ ರೀತಿ ನೋಡುತ್ತೇವೆ. ಅದೇ ರೀತಿ ಅಮಿತಾಬಚ್ಚನ್ ಅವರನ್ನು ಅಲ್ಲಿಯ ಜನ ನೋಡುತ್ತಾರೆ. ಅವರು ವಿಶೇಷ ವ್ಯಕ್ವಿತ್ವ ಹಂಚಿಕೊಂಡಿದ್ದಾರೆ. ಕಾಂತಾರಕ್ಕೆ ನಾನು ಚಿರ ಖುಣಿಯಾಗಿದ್ದೇನೆ ಎಂತ ಹೇಳಿದ್ದಾರೆ ಎಂದರು.

    ಫ್ಯಾನ್ಸ್‌ ವಾರ್‌ ಬಗ್ಗೆ ರಿಷಬ್‌ ಹೇಳಿದ್ದೇನು?
    ಸಲಹೆ ಕೊಡುವಷ್ಟು ದೊಡ್ಡವನು ನಾನಲ್ಲ. ಎಲ್ಲ ನಟರನ್ನು ಅಭಿಮಾನಿಯಾಗಿ ನೋಡುತ್ತೇನೆ. ಕನ್ನಡ ಚಿತ್ರರಂಗದ ಬಗ್ಗೆ ಎಲ್ಲರೂ ಹೆಮ್ಮೆ ಪಡುವ ಕಾಲ ಬಂದಿದೆ ಎಂದು ಹೇಳಿದರು. ದೈವದ ರೀತಿ ಚಿತ್ರ ಮಂದಿರದ ಮುಂದೆ ನಟನೆ ಮಾಡುತ್ತಿರುವ ವಿಚಾರ ಬಗ್ಗೆಯೂ ಪ್ರತಿಕ್ರಿಯಿಸಿ, ಯಾರು ಕೂಡ ದೈವದ ಅನುಕರಣೆ ಮಾಡಬಾರದು ಎಂದರು.

    ದೈವದ ಅನುಕರಣೆ ಮಾಡಬೇಡಿ
    ಏಕೆಂದ್ರೆ ನಾವು ಕೇವಲ ಸಿನಿಮಾ ಮಾತ್ರ ಮಾಡಿಲ್ಲ, ನಿಜವಾದ ಶ್ತದ್ಧೆ ಭಕ್ತಿಯಿಂದ ಮಾಡಿರುತ್ತೇವೆ. ಜನ ಥಿಯೇಟರ್‌ ಹೊರಗೆ ಈ ರೀತಿ ಕೂಗೋದು ನೋಡಿದ್ರೆ, ಇದರಿಂದ ನನಗೂ ಸಹ ಬೇಜಾರಾಗಿದೆ. ಯಾರೂ ಕೂಡ ಈ ರೀತಿ ದೈವದ ಅನುಕರಣೆ ಮಾಡಬೇಡಿ. ಇದರಿಂದ ಬೇಸರವಾಗುತ್ತೆ ಎಂದು ಹೇಳಿದರು. ಲೆಕ್ಕಚಾರದ ವಿಚಾರವಾಗಿ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದರು.

  • ಕಾಂತಾರ ಚಾಪ್ಟರ್ 1 ಯಶಸ್ವಿ ಪ್ರದರ್ಶನ – ಚಾಮುಂಡಿ ಬೆಟ್ಟಕ್ಕೆ ರಿಷಬ್ ಶೆಟ್ಟಿ ಭೇಟಿ

    ಕಾಂತಾರ ಚಾಪ್ಟರ್ 1 ಯಶಸ್ವಿ ಪ್ರದರ್ಶನ – ಚಾಮುಂಡಿ ಬೆಟ್ಟಕ್ಕೆ ರಿಷಬ್ ಶೆಟ್ಟಿ ಭೇಟಿ

    ಮೈಸೂರು: ಕಾಂತಾರ ಚಾಪ್ಟರ್ 1 ಯಶಸ್ವಿ ಪ್ರದರ್ಶನ ಬೆನ್ನಲ್ಲೇ ನಟ ರಿಷಬ್ ಶೆಟ್ಟಿ (Rishab Shetty) ಚಾಮುಂಡಿ ಬೆಟ್ಟಕ್ಕೆ (Chamundi Hills) ಭೇಟಿ ನೀಡಿ, ದೇವಿ ದರ್ಶನ ಪಡೆದುಕೊಂಡರು.

    ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಅವರು ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲವೂ ಖುಷಿಯಾಗಿದೆ. ನಾಡಿನ ಜನತೆ ಹಾಗೂ ದೇಶದಾದ್ಯಂತ ತುಂಬಾ ಅದ್ಭುತವಾದ ಯಶಸ್ಸನ್ನು ಕೊಟ್ಟಿದ್ದಾರೆ. ಯಾವತ್ತೋ ಹೇಳಿದ್ದೇ ಈ ಸಿನಿಮಾದ ಯಶಸ್ಸು ಮೊದಲು ಕನ್ನಡಿಗರಿಗೆ ಸಲ್ಲಬೇಕು. ಅದೇ ರೀತಿ ಈ ಬಾರಿಯೂ ಇನ್ನೊಂದು ಚಾಪ್ಟರ್ ಜನರಿಗೆ ತಲುಪಿರುವ ರೀತಿ ಹಾಗೂ ಅವರು ಒಪ್ಪಿಕೊಂಡಿರುವ ರೀತಿ ತುಂಬಾ ಖುಷಿಯಾಗಿದೆ ಎಂದು ತಿಳಿಸಿದರು.ಇದನ್ನೂ ಓದಿ: ಶ್ರೀಮುರುಳಿ ಸಮ್ಮುಖದಲ್ಲಿ `ಬಿಳಿಚುಕ್ಕಿ ಹಳ್ಳಿಹಕ್ಕಿ’ ಟ್ರೈಲರ್ ರಿಲೀಸ್‌

    ಚಾಮುಂಡಿ ಬೆಟ್ಟದಿಂದ ನಂಜನಗೂಡಿಗೆ ಭೇಟಿ ನೀಡಿ ಶ್ರೀಕಂಠೇಶ್ವರ ಸ್ವಾಮಿ ದರ್ಶನ ಪಡೆದು ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಸಂಜೆ 4ಗಂಟೆಗೆ ಮೈಸೂರಿನ ಗಾಯತ್ರಿ ಚಿತ್ರಮಂದಿರಕ್ಕೆ ಭೇಟಿ ನೀಡಲಿದ್ದಾರೆ.

     

  • ದಸರಾ ಜಂಬೂಸವಾರಿಗೆ ಕೌಂಟ್ ಡೌನ್ – ಭರದಿಂದ ಸಾಗಿದ ತಯಾರಿ

    ದಸರಾ ಜಂಬೂಸವಾರಿಗೆ ಕೌಂಟ್ ಡೌನ್ – ಭರದಿಂದ ಸಾಗಿದ ತಯಾರಿ

    ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಜಂಬೂಸವಾರಿಗೆ (Mysuru Dasara Jamboo Savari) ಒಂದು ದಿನ ಮಾತ್ರ ಬಾಕಿ ಇದ್ದು, ಅರಮನೆಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.

    ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಜಂಬೂಸವಾರಿಗೆ ಕೌಂಟ್ ಡೌನ್ ಶುರುವಾಗಿದೆ. ಇದಕ್ಕೂ ಮುನ್ನ ಅಂಬಾವಿಲಾಸ ಅರಮನೆ ಒಳಭಾಗ ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗಿದ್ದು, ನಾಳೆಯ ಜಂಬೂಸವಾರಿ ವೀಕ್ಷಣೆ ಸೇರಿದಂತೆ ನಾಳಿನ ಎಲ್ಲಾ ಕಾರ್ಯಕ್ರಮಗಳಿಗೆ ಸಿದ್ಧತೆಯಾಗಿದೆ. ಇದನ್ನೂ ಓದಿ: ಮುಂದಿನ ವರ್ಷವೂ ಯಾಕೆ ಪುಷ್ಪಾರ್ಚನೆ ಮಾಡಬಾರದು? Hope So ನಾನೇ ಮಾಡಬಹುದು: ಸಿಎಂ

    ಈ ಬಾರಿ ಅಂಬಾವಿಲಾಸ ಅರಮನೆ ಆವರಣದಲ್ಲಿ 48 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಕಳೆದ ವರ್ಷ 60 ಸಾವಿರಕ್ಕೂ ಹೆಚ್ಚು ಜನರಿಗೆ ದಸರಾ ವೀಕ್ಷಣೆಗೆ ಅಂಬಾವಿಲಾಸ ಅರಮನೆ ಆವರಣದಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಇತ್ತೀಚಿನ ಕೆಲ ಕಾಲ್ತುಳಿತ ಅವಘಢ ಹಿನ್ನೆಲೆ ಸರ್ಕಾರ ಮತ್ತು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ವೀಕ್ಷಕರ ಸಂಖ್ಯೆ ಇಳಿಕೆ ಮಾಡಿದೆ. ಅಲ್ಲದೇ ಒಳಭಾಗ ಪೊಲೀಸ್ ಭದ್ರತೆ ಕೂಡ ಹೆಚ್ಚು ಮಾಡಿದೆ. ಇನ್ನೂ ಪಾಸ್ ಇದ್ದವರಿಗೆ ಮಾತ್ರ ಅರಮನೆ ಒಳಭಾಗ ದಸರಾ ವೀಕ್ಷಣೆಗೆ ಅವಕಾಶ ನೀಡಿಲಾಗಿದೆ. ಸಿಎಂ ಸೇರಿದಂತೆ ಹಲವು ಕ್ಯಾಬಿನೆಟ್ ಸಚಿವರು ಕೂಡ ಜಂಬೂಸವಾರಿಯಲ್ಲಿ ಭಾಗಿಯಾಗಲಿದ್ದಾರೆ. ಗಣ್ಯರು, ಅಧಿಕಾರಿಗಳು, ಸಾರ್ವಜನಿಕರು, ರಾಜಮನೆತನದ ಕುಟುಂಬಸ್ಥರು, ನ್ಯಾಯಾಧೀಶರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಕರೂರ್ ಕಾಲುಳ್ತಿತ ದುರಂತ; 2 ವಾರ ತಮಿಳುನಾಡು ಪ್ರವಾಸ ರದ್ದಗೊಳಿಸಿದ ವಿಜಯ್

    ಇನ್ನೂ ನಾಳೆ ಬೆಳಗ್ಗೆ 11 ಗಂಟೆ ನಂತರ ಪಾಸ್ ಹೊಂದಿರುವ ಸಾರ್ವಜನಿಕರಿಗೆ ಅರಮನೆ ಪ್ರವೇಶ ನೀಡಲಿದ್ದಾರೆ. ಈಗಾಗಲೇ ನಗರ ವ್ಯಾಪ್ತಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನಗರದಾದ್ಯಂತ 9 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆಯಾಗಿದ್ದು, ಅಂಬಾರಿ ಸಾಗುವ ರಾಜ ಮಾರ್ಗ ಸೇರಿದಂತೆ ನಗರ ವ್ಯಾಪ್ತಿ ಹೆಚ್ಚಿನ ಸಿಸಿಟಿವಿ ಅಳವಡಿಕೆ ಮಾಡಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಅಲ್ಲದೇ ಅಂಬಾರಿ ಸಾಗುವ ಮಾರ್ಗದುದ್ದಕ್ಕೂ ರಸ್ತೆ ಬದಿ ತಾತ್ಕಾಲಿಕ ತಡೆಗೋಡೆ ನಿರ್ಮಾಣ ಮಾಡಿದ್ದು, ಅಂಬಾರಿ ಸಾಗುವಾಗ ಜನ ದಾಟಿ ರಸ್ತೆಗೆ ಬಾರದಂತೆ ಕ್ರಮವಹಿಸಲಾಗಿದೆ. ಇದನ್ನೂ ಓದಿ: 1 ಪಂದ್ಯದ ಆಟದಿಂದ ಕೊಹ್ಲಿ, ಸಾಲ್ಟ್‌ ಹಿಂದಿಕ್ಕಿ ಟಿ20ಯಲ್ಲಿ ಅಭಿಷೇಕ್‌ ಶರ್ಮಾ ವಿಶ್ವದಾಖಲೆ

    ಒಟ್ಟಾರೆ ಜಂಬೂಸವಾರಿಗೆ ಸಿದ್ಧತೆಗಳೆಲ್ಲಾ ಆಗಿದ್ದು, ಅಂಬಾರಿ ಹೊತ್ತು ಸಾಗುವ ಅಭಿಮನ್ಯು ರಾಜಗಾಂರ್ಭಿಯತೆಯೊಂದಿಗೆ ತಾಯಿ ಚಾಮುಂಡೇಶ್ವರಿ ಆಶೀರ್ವಾದಕ್ಕೂ ಜನ ಕಾತುರದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ: ಬಿಸಿಸಿಐ ಮುಂದೆ ಮಂಡಿಯೂರಿದ ಪಾಕ್‌ ಸಚಿವ – ಕದ್ದೊಯ್ದಿದ್ದ ಏಷ್ಯಾ ಕಪ್‌ ವಾಪಸ್‌

  • Mysuru Dasara | ನೀಲಿ ಜರಿ ಸೀರೆಯಿಂದ ಕಂಗೊಳಿಸುತ್ತಿರುವ ಚಾಮುಂಡಿ ದೇವಿ

    Mysuru Dasara | ನೀಲಿ ಜರಿ ಸೀರೆಯಿಂದ ಕಂಗೊಳಿಸುತ್ತಿರುವ ಚಾಮುಂಡಿ ದೇವಿ

    – ಕಬ್ಬಿನ ಜಲ್ಲೆ ಮತ್ತು ಹೂವಿನಿಂದ ಚಾಮುಂಡಿ ದೇವಸ್ಥಾನ ಅಲಂಕಾರ

    ಮೈಸೂರು: ದಸರಾ (Mysuru Dasara) ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. ತಾಯಿ ಚಾಮುಂಡಿಯ ಉತ್ಸವ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಕೂರಿಸಲಾಗಿದೆ. ನೀಲಿ ಜರಿ ಸೀರೆಯನ್ನು ತಾಯಿ ಚಾಮುಂಡಿಗೆ ಉಡಿಸಿದ್ದು, ವಜ್ರದ ಕಣ್ಣುಗಳಿಂದ ದೇವಿ ಕಂಗೊಳಿಸುತ್ತಿದೆ. ಈ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಉದ್ಘಾಟನೆ ಆಗಲಿದೆ.

    ಇನ್ನು ಚಾಮುಂಡಿ ದೇವಸ್ಥಾನವನ್ನು ಕಬ್ಬಿನ ಜಲ್ಲೆ ಮತ್ತು ಹೂಗಳಿಂದ ಅಲಂಕೃತ ಮಾಡಲಾಗಿದೆ. ದೇವಸ್ಥಾನ ಒಳ ಭಾಗದಲ್ಲಿನ ಪ್ರತಿ ಕಂಬಕ್ಕೂ ಕಬ್ಬು ಕಟ್ಟಿ ಅಲಂಕಾರ ಮಾಡಲಾಗಿದೆ. ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿ ನಾಡಹಬ್ಬಕ್ಕೆ ಅದ್ದೂರಿ ಚಾಲನೆ ನೀಡಲು ಜಿಲ್ಲಾಡಳಿತ ಸಜ್ಜಾಗಿದೆ. ಇದನ್ನೂ ಓದಿ: ಇಂದಿನಿಂದ ಉಳಿತಾಯ ಹಬ್ಬ| ನಾವು ದಿನನಿತ್ಯ ಬಳಸುವ ಯಾವ ವಸ್ತುಗಳ ಬೆಲೆ ಎಷ್ಟು ಇಳಿಕೆ?

    ವಿರೋಧದ ನಡುವೆಯೂ ಲೇಖಕಿ ಬಾನು ಮುಷ್ತಾಕ್ ಈ ಬಾರಿ ದಸರಾ ಉದ್ಘಾಟನೆ ನೆರವೇರಿಸಲಿದ್ದಾರೆ, ಹೀಗಾಗಿ ಜಿಲ್ಲಾಡಳಿತದ ವತಿಯಿಂದ ಬಾನು‌ ಮುಷ್ತಾಕ್ ಮತ್ತು ದಸರಾ ಉದ್ಘಾಟನಾ ಸಮಯದಲ್ಲಿ ಬಿಗಿ ಭದ್ರತೆ ನೀಡಲಾಗಿದೆ.  ಇಂದು ಮುಂಜಾನೆಯಿಂದಲೇ ವಿವಿಧ ಅಭಿಷೇಕ, ಪೂಜಾಕೈಂಕರ್ಯಗಳು ನೆರವೇರಿದೆ. ಬಳಿಕ ಬೆಳ್ಳಿರಥಯಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನ ವೇದಿಕೆಗೆ ತಂದು ಪುಷ್ಪಾರ್ಚನೆ ಮಾಡಲಿದ್ದಾರೆ. ಬೆಳಿಗ್ಗೆ 10:10ರಿಂದ 10:40ರ ವೃಶ್ಚಿಕ ಶುಭ ಲಗ್ನದಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಲೇಖಕಿ ಬಾನು ಮುಷ್ತಾಕ್ ಪುಷ್ಪಾರ್ಚನೆ ಮಾಡಿ ದಸರಾ ಉದ್ಘಾಟನೆ ಮಾಡಲಿದ್ದಾರೆ. ಇದನ್ನೂ ಓದಿ: ಇಂದಿನಿಂದ ನಂದಿನಿ ಉತ್ಪನ್ನಗಳ ಬೆಲೆ ಇಳಿಕೆ- ಮೊದಲು ಎಷ್ಟು? ಈಗ ಎಷ್ಟು ಇಳಿಕೆ?

    ಇನ್ನೂ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, 1 ಸಾವಿರ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಮಳೆ ಹಿನ್ನೆಲೆ ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದ್ದು, ವಿವಿಐಪಿ, ವಿಐಪಿ ಹಾಗೂ ಪಾಸ್ ಹೊಂದಿದವರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ದಸರಾ ಉದ್ಘಾಟನೆ ಮುಗಿಯುವವರೆಗೂ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ನಿರ್ಬಂಧ ಹೇರಲಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿ ಹಲವು ಸಚಿವರು, ಶಾಸಕರು, ಸಂಸದರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಇಂದಿನಿಂದ ಜಾತಿ ಗಣತಿ ಆರಂಭ – ಬೆಂಗಳೂರಲ್ಲಿ 3 ದಿನ ವಿಳಂಬ

    ದಸರಾ ಉದ್ಘಾಟನೆಗೊಂಡ ಬಳಿಕ ಹಲವು ದಸರಾ ಕಾರ್ಯಕ್ರಮಗಳಿಗೆ ಇಂದೇ ಚಾಲನೆ ಸಿಗಲಿದೆ. ಮಧ್ಯಾಹ್ನ 12:30ಕ್ಕೆ ಫಲಪುಷ್ಪ ಪ್ರದರ್ಶನ ಉದ್ಘಾಟನೆ, ಬಳಿಕ ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳಕ್ಕೆ ಚಾಲನೆ, ಸಂಜೆ 4ಕ್ಕೆ ದೇವರಾಜ ಅರಸು ಕ್ರೀಡಾಂಗಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿಗೆ ಉದ್ಘಾಟನೆ ಭಾಗ್ಯ, ಅರಮನೆ ಆರವಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಗುತ್ತೆ. ಸಂಜೆ 6:30ಕ್ಕೆ ಸಯ್ಯಾಜಿರಾವ್ ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರ ಉದ್ಘಾಟನೆಯಾಗಲಿದೆ. ಇದನ್ನೂ ಓದಿ: ದಸರಾ ಉದ್ಘಾಟಿಸಲಿರುವ ಬಾನು ಮುಷ್ತಾಕ್‌ಗೆ ಬಿಗಿ ಭದ್ರತೆ

    ಇನ್ನು ದಸರಾ ಉದ್ಘಾಟನೆ ಆಗುತ್ತಿದ್ದಂತೆ ಅರಮನೆಯಲ್ಲಿ ಖಾಸಗಿ ದರ್ಬಾರ್ ಸಹ ನಡೆಯಲಿದೆ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರತ್ನಖಚಿತ ಸಿಂಹಾಸವನ್ನೇರಿ ಖಾಸಗಿ ದರ್ಬಾರ್ ನೆರವೇರಿಸಲಿದ್ದಾರೆ. ಹೀಗಾಗಿ ಸಿಂಹಾಸನವನ್ನು ಅರಮನೆಯ ಸ್ಟ್ರಾಂಗ್ ರೂಂನಿಂದ ತಂದು ಕನ್ನಡಿ ತೊಟ್ಟಿಯಲ್ಲಿ ಜೋಡಣೆ ಮಾಡಲಿದ್ದಾರೆ. ಇದನ್ನೂ ಓದಿ: Navratri 2025 Day 1: ಶೈಲಪುತ್ರಿಯ ಮಹತ್ವವೇನು?

    ಒಂದೆಡೆ ದಸರಾ ಉದ್ಘಾಟನೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದ್ರೆ, ಅತ್ತ ಅರಮನೆಯಲ್ಲೂ ಇಂದಿನಿಂದ ವಿವಿಧ ಪೂಜಾ ಕೈಂಕರ್ಯ ಹಾಗೂ ಖಾಸಗಿ ದರ್ಬಾರ್ ಆರಂಭಗೊಳ್ಳಲಿದೆ. ನವರಾತ್ರಿಯ ವೈಭವ ಕಣ್ತುಂಬಿಕೊಳ್ಳಲು ಲಕ್ಷಾಂತರ ಪ್ರವಾಸಿಗರು ಮೈಸೂರಿನತ್ತ ಬರುತ್ತಿದ್ದು, ಪ್ರವಾಸಿಗರ ಆಕರ್ಷಿಸಲು ಮೈಸೂರು ಸಜ್ಜಾಗಿದೆ. ಇದನ್ನೂ ಓದಿ: ಎತ್ತರದ ಬೆಟ್ಟದಲ್ಲಿ ನೀರು ನಿಲ್ಲೋದಿಲ್ಲ, ಹಾಗೆ ಎಲ್ಲಾ ಕಷ್ಟಗಳೂ ಜಾರಿ ಹೋಗುತ್ತವೆ: ವೀರೇಂದ್ರ ಹೆಗ್ಗಡೆ

  • ನಾಳೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ – ಚಾಮುಂಡಿ ಬೆಟ್ಟದಲ್ಲಿ ಭರದ ಸಿದ್ಧತೆ

    ನಾಳೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ – ಚಾಮುಂಡಿ ಬೆಟ್ಟದಲ್ಲಿ ಭರದ ಸಿದ್ಧತೆ

    ಮೈಸೂರು: ನಾಳೆ ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವ ಉದ್ಘಾಟನೆಯಾಗಲಿದ್ದು, ದಸರಾ ಉದ್ಘಾಟನೆಗೆ ಚಾಮುಂಡಿ ಬೆಟ್ಟದಲ್ಲಿ (Chamundi Hills) ಭರದ ಸಿದ್ಧತೆ ನಡೆದಿದೆ.

    ಈಗಾಗಲೇ ಚಾಮುಂಡೇಶ್ವರಿ ಉತ್ಸವ ಮೂರ್ತಿ ಶುಚಿಗೊಳಿಸಿ ಸಿದ್ಧತೆ ಮಾಡಿಕೊಂಡ ಅರ್ಚಕರು, ಹಸಿರು ಸೀರೆಯುಡಿಸಿ ತಯಾರಿ ಮಾಡಿಕೊಂಡಿದ್ದಾರೆ. ನಾಳೆ ಮುಂಜಾನೆಯಿಂದಲೇ ವಿವಿಧ ಅಭಿಷೇಕ, ಪೂಜಾಕೈಂಕರ್ಯಗಳು ನೆರವೇರಿದ ಬಳಿಕ ಬೆಳ್ಳಿರಥಯಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನ ವೇದಿಕೆಗೆ ತಂದು ಪುಷ್ಪಾರ್ಚನೆ ನಡೆಸಲಾಗುತ್ತದೆ. ನಾಳೆ 10:40ರ ವೃಶ್ಚಿಕ ಶುಭ ಲಗ್ನದಲ್ಲಿ ಉತ್ಸವ ಮೂರ್ತಿಗೆ ಲೇಖಕಿ ಭಾನುಮುಷ್ತಾಕ್ ಪುಷ್ಪಾರ್ಚನೆ ಮಾಡಿ ದಸರಾ ಉದ್ಘಾಟನೆ ನಡೆಸಲಿದ್ದಾರೆ. ಈ ಬಗ್ಗೆ ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಶ್ರೀರಂಗಪಟ್ಟಣದಿಂದ ಮೈಸೂರಿಗೆ ದಸರಾ ಬಂದಿದ್ದು ಹೇಗೆ?

    ಇನ್ನೂ ಚಾಮುಂಡೇಶ್ವರಿ ದೇವಾಲಯ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, 1 ಸಾವಿರ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಮಳೆ ಹಿನ್ನೆಲೆ ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದ್ದು, ವಿವಿಐಪಿ, ವಿಐಪಿ ಹಾಗೂ ಪಾಸ್ ಹೊಂದಿದವರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ದಸರಾ ಉದ್ಘಾಟನೆ ಮುಗಿಯುವವರೆಗೂ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ನಿರ್ಬಂಧ ಹೇರಲಾಗಿದ್ದು, ಆಹ್ವಾನಿತರಿಗೆ ಮಾತ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವಕಾಶ ನೀಡಲಾಗಿದೆ. ಕಾರ್ಯಕ್ರಮದಲ್ಲಿ ದಸರಾ ಉದ್ಘಾಟಕಿ ಭಾನುಮುಷ್ತಾಕ್, ಸಿಎಂ ಸಿದ್ದರಾಮಯ್ಯ ಸೇರಿ ಹಲವು ಸಚಿವರು, ಶಾಸಕರು, ಸಂಸದರು ಭಾಗಿಯಾಗಲಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಇದನ್ನೂ ಓದಿ: ಫಾದರ್ ಸಿದ್ದರಾಮಯ್ಯ ಕುಲ ಶಾಸ್ತ್ರೀಯ ಅಧ್ಯಯನ ಮಾಡಬೇಕು: ಸುನಿಲ್ ಕುಮಾರ್ ಟಾಂಗ್

  • ಮೈಸೂರು | ಬಿಜೆಪಿಗೂ ಮುನ್ನವೇ ಹಿಂದೂ ಜಾಗರಣ ವೇದಿಕೆಯಿಂದ ʻಚಾಮುಂಡಿ ಬೆಟ್ಟ ಚಲೋ’ ಯಾತ್ರೆ

    ಮೈಸೂರು | ಬಿಜೆಪಿಗೂ ಮುನ್ನವೇ ಹಿಂದೂ ಜಾಗರಣ ವೇದಿಕೆಯಿಂದ ʻಚಾಮುಂಡಿ ಬೆಟ್ಟ ಚಲೋ’ ಯಾತ್ರೆ

    ಮೈಸೂರು: ದಸರಾ ಉದ್ಘಾಟಕರಾಗಿ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌ (Banu Mushtaq) ಆಯ್ಕೆಯನ್ನ ವಿರೋಧಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಸೆ.9ರಂದು ʻಚಾಮುಂಡಿ ಬೆಟ್ಟ ಚಲೋʼ (Chamundeshwari Chalo) ಯಾತ್ರೆ ಹಮ್ಮಿಕೊಳ್ಳಲಾಗಿದೆ.

    ನಗರದ ಕುರುಬಾರಹಳ್ಳಿ ವೃತ್ತದಿಂದ ಚಾಮುಂಡಿ ಬೆಟ್ಟಕ್ಕೆ ಯಾತ್ರೆ ಹಮ್ಮಿಕೊಳ್ಳಲಾಗಿದೆ. ʻನಮ್ಮ ನಡಿಗೆ ತಾಯಿ ಚಾಮುಂಡೇಶ್ವರಿ‌ʼ ಸನ್ನಿಧಿಗೆ ಹೆಸರಿನಲ್ಲಿ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಇದನ್ನೂ ಓದಿ: ದಸರಾ ಉದ್ಘಾಟನೆಗೆ ಸರ್ಕಾರದಿಂದ ಬಾನು ಮುಷ್ತಾಕ್‌ಗೆ ಅಧಿಕೃತ ಆಹ್ವಾನ

    R Ashok 5

    ಇತ್ತೀಚೆಗಷ್ಟೇ ವಿಪಕ್ಷ ನಾಯಕ ಆರ್‌. ಅಶೋಕ್ , ‌ʻಚಾಮುಂಡೇಶ್ವರಿ ದೇವಾಲಯದ (Chamundeshwari Temple) ಪಾವಿತ್ರ‍್ಯತೆಗೆ ಧಕ್ಕೆಯಾದರೆ ‘ಧರ್ಮಸ್ಥಳ ಚಲೋ’ ಮಾದರಿಯಲ್ಲಿ ‘ಚಾಮುಂಡೇಶ್ವರಿ ಚಲೋ’ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಕಾಂಗ್ರೆಸ್ ಸರ್ಕಾರಕ್ಕೆ ಚಾಮುಂಡೇಶ್ವರಿ ತಾಯಿ ಒಳ್ಳೆಯ ಬುದ್ಧಿಯನ್ನು ನೀಡಲಿ. ಹಿಂದೂಗಳ ಶ್ರದ್ಧಾ ಕೇಂದ್ರವನ್ನು ಟಾರ್ಗೆಟ್ ಮಾಡುವ ಮನಸ್ಥಿತಿಯನ್ನು ನಿವಾರಿಸಲಿ. ಹಿಂದೂಗಳ ಧಾರ್ಮಿಕ ಕೇಂದ್ರ ಯಾವಾಗಲೂ ರಕ್ಷಣೆಯಾಗಬೇಕು, ಪವಿತ್ರವಾಗಿ ಇರಬೇಕು. ಹಿಂದೂಗಳ ಭಾವನೆಗೆ ಧಕ್ಕೆಯಾಗಬಾರದು ಎಂದು ಮನವಿ ಮಾಡಿದ್ದರು. ಆದ್ರೆ ಬಿಜೆಪಿ ಯಾತ್ರೆಗೂ ಮುನ್ನವೇ ಹಿಂದೂ ಜಾಗರಣ ವೇದಿಕೆಯು ಚಾಮುಂಡಿ ಬೆಟ್ಟ ಚಲೋ ಹಮ್ಮಿಕೊಂಡಿದೆ. ಇದನ್ನೂ ಓದಿ: ಧರ್ಮಸ್ಥಳ ಬಳಿಕ ಚಾಮುಂಡೇಶ್ವರಿ ಚಲೋ: ಅಶೋಕ್

    Banu Mushtaq dasara invitation

    ಬಾನು ಮುಷ್ತಾಕ್‌ಗೆ ಅಧಿಕೃತ ಆಹ್ವಾನ
    ಇನ್ನೂ ಇತ್ತೀಚೆಗಷ್ಟೇ ದಸರಾ ಉದ್ಘಾಟನೆಗೆ ಮುಷ್ತಾಕ್‌ರಿಗೆ ಸರ್ಕಾರದಿಂದ ಅಧಿಕೃತ ಆಹ್ವಾನ ನೀಡಲಾಗಿದೆ. ಹಾಸನ (Hasaan) ನಗರದ ಅಮಿರ್ ಮೊಹಲ್ಲಾದಲ್ಲಿರುವ ಬಾನು ಮುಷ್ತಾಕ್ ಅವರ ನಿವಾಸಕ್ಕೆ ದಸರಾ ವಿಶೇಷಧಿಕಾರಿ ಆಗಿರುವ ಮೈಸೂರು ಡಿಸಿ ಲಕ್ಷ್ಮಿಕಾಂತರೆಡ್ಡಿ ಹಾಗೂ ಎಡಿಸಿ ಶಿವರಾಜ್ ಅವರು ತೆರಳಿದ್ದರು. ಶಾಲು ಹೊದಿಸಿ, ಹಾರ ಹಾಕಿ, ಮೈಸೂರು ಪೇಟ ತೊಡಿಸಿ, ಆನೆ ವಿಗ್ರಹದ ಜೊತೆ ಆಹ್ವಾನ ಪತ್ರಿಕೆ ನೀಡಿ ಅಧಿಕೃತವಾಗಿ ಆಹ್ವಾನಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿಗೆ ಕನ್ನಡ ಬರುತ್ತಾ ಅಂತ ಕೇಳಿದ ಸಿಎಂ – ಸ್ವಲ್ಪ ಸ್ವಲ್ಪ ಬರುತ್ತೆ; ಮುರ್ಮು ಉತ್ತರ

  • ಸೋಮವಾರ ಮೈಸೂರಿಗೆ ರಾಷ್ಟ್ರಪತಿ ಮುರ್ಮು – ಅರಮನೆಗೆ ಭೇಟಿ, ಚಾಮುಂಡಿ ಬೆಟ್ಟದಲ್ಲೂ ವಿಶೇಷ ಪೂಜೆ

    ಸೋಮವಾರ ಮೈಸೂರಿಗೆ ರಾಷ್ಟ್ರಪತಿ ಮುರ್ಮು – ಅರಮನೆಗೆ ಭೇಟಿ, ಚಾಮುಂಡಿ ಬೆಟ್ಟದಲ್ಲೂ ವಿಶೇಷ ಪೂಜೆ

    ಮೈಸೂರು: ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಾಳೆ ಮೈಸೂರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಬರಲಿದ್ದಾರೆ. ದ್ರೌಪದಿ ಮುರ್ಮು ರಾಷ್ಟ್ರಪತಿ ಆದ ನಂತರ ಎರಡನೇ ಬಾರಿಗೆ ಮೈಸೂರಿಗೆ (Mysuru) ಬರುತ್ತಿದ್ದಾರೆ.

    ಕಳೆದ ಬಾರಿ ದಸರಾ ಉದ್ಘಾಟನೆಗೆಗಾಗಿ ದ್ರೌಪದಿ ಮುರ್ಮು ಮೈಸೂರಿಗೆ ಬಂದಿದ್ದರು. ನಾಳೆ ಮಧ್ಯಾಹ್ನ 3:20ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ರಾಷ್ಟ್ರಪತಿ ಆಗಮಿಸಲಿದ್ದು, ಸಿಎಂ ಸಿದ್ದರಾಮಯ್ಯ ರಾಷ್ಟ್ರಪತಿಗಳನ್ನು ಸ್ವಾಗತಿಸಲಿದ್ದಾರೆ. ಅಲ್ಲಿಂದ ನೇರವಾಗಿ ರಾಷ್ಟ್ರಪತಿಗಳು ವಾಕ್ ಮತ್ತು ಶ್ರವಣ ಸಂಸ್ಥೆ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ರಾತ್ರಿ 8 ಗಂಟೆಗೆ ಚಾಮುಂಡಿ ಬೆಟ್ಟಕ್ಕೆ (Chamundi Hills) ಭೇಟಿ ನೀಡಿ ಚಾಮುಂಡಿ ತಾಯಿ ದರ್ಶನ ಪಡೆಯಲಿದ್ದಾರೆ. ಇದನ್ನೂ ಓದಿ: ತಲೆ ಮೇಲೆ ಕ್ಯಾಂಟರ್‌ ಹರಿದು ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ

    ಸೆಪ್ಟೆಂಬರ್ 2ರಂದು ಬೆಳಗ್ಗೆ ಅರಮನೆಗೆ ಭೇಟಿ ನೀಡಿ ಕೆಲ ಕಾಲ ಅರಮನೆ (Mysuru Palace) ವೀಕ್ಷಿಸಲಿದ್ದಾರೆ. ನಂತರ ರಾಜವಂಶದ ಆತಿಥ್ಯ ಸ್ವೀಕರಿಸಲಿದ್ದಾರೆ. ರಾಜವಂಶದ ಆತಿಥ್ಯ ಮುಗಿಸಿ ಅಲ್ಲಿಂದ ನೇರವಾಗಿ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದು ದೆಹಲಿಗೆ ತೆರಳಲಿದ್ದಾರೆ. ಇದನ್ನೂ ಓದಿ: ನಾಳೆ ಎನ್‌ಐಎ ತನಿಖೆಗೆ ಆಗ್ರಹಿಸಿ ಬಿಜೆಪಿಯಿಂದ ಧರ್ಮಸ್ಥಳ ಚಲೋ, ಜಾಗೃತಿ ಸಮಾವೇಶ

    ರಾಷ್ಟ್ರಪತಿಗಳು ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದು, ಹೋಟೆಲ್ ಸುತ್ತ ಭದ್ರತೆ ಹೆಚ್ಚು ಮಾಡಿದ್ದಾರೆ. ರಾಷ್ಟ್ರಪತಿಗಳು ಸಂಚರಿಸುವ ಮಾರ್ಗಗಳ ರಸ್ತೆ ರಿಪೇರಿ ಕೂಡ ನಡೆದಿದೆ. ಈ ನಡುವೆ ಲಲಿತ್ ಮಹಲ್ ರಸ್ತೆಯ 50ಕ್ಕೂ ಹೆಚ್ಚು ಅಂಗಡಿಗಳ ತೆರವು ಕಾರ್ಯಾಚರಣೆ ಪಾಲಿಕೆ ಸಿಬ್ಬಂದಿ ಮಾಡಿದಕ್ಕೆ ವ್ಯಾಪಾರಿಗಳು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಡಿಕೆಶಿ ಒಂದು ಕಾಲು ಬಿಜೆಪಿಯಲ್ಲಿ ಇಟ್ಟಿದ್ದಾರೆ: ಯತ್ನಾಳ್ ಹೊಸ ಬಾಂಬ್

  • ಧರ್ಮಸ್ಥಳ ಬಳಿಕ ಚಾಮುಂಡೇಶ್ವರಿ ಚಲೋ: ಅಶೋಕ್

    ಧರ್ಮಸ್ಥಳ ಬಳಿಕ ಚಾಮುಂಡೇಶ್ವರಿ ಚಲೋ: ಅಶೋಕ್

    ಬೆಂಗಳೂರು/ಮೈಸೂರು: ಚಾಮುಂಡೇಶ್ವರಿ ದೇವಾಲಯದ (Chamundeshwari Temple) ಪಾವಿತ್ರ‍್ಯತೆಗೆ ಧಕ್ಕೆಯಾದರೆ ‘ಧರ್ಮಸ್ಥಳ ಚಲೋ’ ಮಾದರಿಯಲ್ಲಿ ‘ಚಾಮುಂಡೇಶ್ವರಿ ಚಲೋ’ (Chamundeshwari Chalo) ಹೋರಾಟ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಚಾಮುಂಡಿ ಬೆಟ್ಟದ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರಕ್ಕೆ ಚಾಮುಂಡೇಶ್ವರಿ ತಾಯಿ ಒಳ್ಳೆಯ ಬುದ್ಧಿಯನ್ನು ನೀಡಲಿ. ಹಿಂದೂಗಳ ಶ್ರದ್ಧಾ ಕೇಂದ್ರವನ್ನು ಟಾರ್ಗೆಟ್ ಮಾಡುವ ಮನಸ್ಥಿತಿಯನ್ನು ನಿವಾರಿಸಲಿ. ಹಿಂದೂಗಳ ಧಾರ್ಮಿಕ ಕೇಂದ್ರ ಯಾವಾಗಲೂ ರಕ್ಷಣೆಯಾಗಬೇಕು, ಪವಿತ್ರವಾಗಿ ಇರಬೇಕು. ಹಿಂದೂಗಳ ಭಾವನೆಗೆ ಧಕ್ಕೆಯಾಗಬಾರದು ಎಂದು ತಾಯಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದರು. ಇದನ್ನೂ ಓದಿ: ಹಿಂದೂ ಶ್ರದ್ಧಾ ಕೇಂದ್ರದ ಮೇಲೆ ಅಪಮಾನ, ಅಪಪ್ರಚಾರವನ್ನು ಬಿಜೆಪಿ ಸಹಿಸುವುದಿಲ್ಲ: ಕ್ಯಾ.ಬ್ರಿಜೇಶ್ ಚೌಟ

    ಮೈಸೂರಿನ ಒಡೆಯರ್ ರಾಜವಂಶಸ್ಥರು ನೂರಾರು ವರ್ಷಗಳಿಂದಲೂ ದಸರಾ ಆಚರಿಸಿಕೊಂಡು ಬಂದಿದ್ದಾರೆ. ಇಂತಹ ಪವಿತ್ರವಾದ ಹಬ್ಬವನ್ನು ಕಾಂಗ್ರೆಸ್ ಸರ್ಕಾರ ಅಪವಿತ್ರ ಮಾಡಬಾರದು. ಇದು ಹಿಂದೂಗಳ ದೇವಾಲಯ ಅಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಅಂದಮೇಲೆ ಇದು ಯಾರದ್ದು? ಇವರಿಗೆ ಧೈರ್ಯವಿದ್ದರೆ ಮಸೀದಿ ಮುಂದೆ ಹೋಗಿ ಇದು ಮುಸ್ಲಿಮರದ್ದಲ್ಲ ಎಂದು ಹೇಳಲಿ. ಶಬರಿಮಲೆ ಅಯ್ಯಪ್ಪ, ತಿರುಪತಿ ನಂತರ ಧರ್ಮಸ್ಥಳ ಹಾಗೂ ಚಾಮುಂಡೇಶ್ವರಿ ದೇವಾಲಯಗಳನ್ನು ಗುರಿ ಮಾಡಲಾಗಿದೆ ಎಂದು ದೂರಿದರು. ಇದನ್ನೂ ಓದಿ: ಚಿನ್ನಯ್ಯನನ್ನು ಬಾಡಿಗಾರ್ಡ್‌ ಎಂದಿದ್ರು, ದೆಹಲಿಗೆ ಅವ್ರು ಕರೆದುಕೊಂಡು ಹೋಗಿದ್ರು: ಸುಜಾತ ಭಟ್‌

    ಚುನಾವಣೆ ಸಮಯದಲ್ಲಿ ಮುಸ್ಲಿಮರ ಮೂಗಿಗೆ ತುಪ್ಪ ಸವರಲಿ. ಅದನ್ನು ಬಿಟ್ಟು ಈ ಸಮಯದಲ್ಲಿ ಓಲೈಕೆ ಮಾಡಲಾಗುತ್ತಿದೆ. ಧರ್ಮಸ್ಥಳಕ್ಕೆ ನಾವೆಲ್ಲರೂ ಹೋಗಿ ಧರ್ಮಸ್ಥಳ ಚಲೋ ಮಾಡಲಿದ್ದೇವೆ. ಚಾಮುಂಡೇಶ್ವರಿ ದೇವಾಲಯಕ್ಕೆ ಧಕ್ಕೆಯಾದರೆ ಆಗ ಚಾಮುಂಡೇಶ್ವರಿ ಚಲೋ ಎಂದು ಹೋರಾಟ ಮಾಡುತ್ತೇವೆ. ಅಯೋಧ್ಯೆಯನ್ನು ಉಳಿಸಲು 500 ವರ್ಷ ಹೋರಾಡಿದ್ದೇವೆ. ಟೂಲ್ ಕಿಟ್ ಸಂಸ್ಕೃತಿ ಮುಂದುವರಿಸಿದರೆ ಕಾಂಗ್ರೆಸ್‌ನ ಅವನತಿ ಆರಂಭವಾಗಲಿದೆ ಎಂದರು. ಇದನ್ನೂ ಓದಿ: ಭಾರತ & ಚೀನಾ ಸ್ನೇಹಿತರಾಗಿರುವುದೇ ಉತ್ತಮ ಆಯ್ಕೆ: ಕ್ಸಿ ಜಿನ್‌ಪಿಂಗ್‌

     

  • ದಸರಾ ದಂಗಲ್ – ಮೌನ ಮುರಿದ ರಾಜವಂಶಸ್ಥೆ ಪ್ರಮೋದಾ ದೇವಿ

    ದಸರಾ ದಂಗಲ್ – ಮೌನ ಮುರಿದ ರಾಜವಂಶಸ್ಥೆ ಪ್ರಮೋದಾ ದೇವಿ

    – ದೇವಸ್ಥಾನ ವಿಚಾರದಲ್ಲಿ ರಾಜಕೀಯ ಬೆರೆಸಿದ್ದಕ್ಕೆ ಬೇಸರ

    ಮೈಸೂರು: ಚಾಮುಂಡಿ ಬೆಟ್ಟ (Chamundi Hills) ಹಿಂದೂಗಳಿಗೆ ಸೇರಿದಲ್ಲ ಎಂಬ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿಕೆ ಬಗ್ಗೆ ಯದುವಂಶಸ್ಥೆ ಪ್ರಮೋದಾದೇವಿ ಒಡೆಯರ್ (Pramoda Devi Wadiyar) ಮೌನ ಮುರಿದಿದ್ದಾರೆ. ಚಾಮುಂಡಿ ಬೆಟ್ಟ ಹಿಂದೂಗಳದ್ದು ಅಂತಾ ಗಟ್ಟಿಧ್ವನಿಯಲ್ಲಿ ಪ್ರತಿಪಾದಿಸಿದ್ದಾರೆ. ಜೊತೆಗೆ ಚಾಮುಂಡಿ ತಾಯಿಯನ್ನು ರಾಜಕೀಯ ವಿಷಯವಾಗಿ ಮಾಡಿಕೊಂಡದ್ದಕ್ಕೂ ಬೇಸರ ಹೊರ ಹಾಕಿದ್ದಾರೆ.

    ಚಾಮುಂಡಿ ಬೆಟ್ಟ ಹಿಂದೂಗಳದಲ್ಲ ಎಂಬ ಡಿಕೆ ಶಿವಕುಮಾರ್ ಹೇಳಿಕೆ ರಾಜಕೀಯವಾಗಿ ಬಹಳ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ಈ ಬೆಳವಣಿಗೆ ಬಗ್ಗೆ ರಾಜವಂಶಸ್ಥೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಚಾಮುಂಡಿ ಬೆಟ್ಟ ಹಿಂದೂಗಳಿಗೆ ಸೇರಿದ್ದು. ಚಾಮುಂಡಿ ಹಿಂದೂ ದೇವರು. ಯದುವಂಶಕ್ಕೆ ಮನೆ ದೇವರು. ಚಾಮುಂಡಿ ದೇವಿ ಯದುವಂಶಕ್ಕೆ ಧಾರ್ಮಿಕ ತಾಯಿ ಇದ್ದಂತೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಾಗಿ ಎಂ.ಎ ಸಲೀಂ ನೇಮಕ

    ಚಾಮುಂಡಿ ದೇವಸ್ಥಾನದಲ್ಲಿ ಹಿಂದೂ ಧಾರ್ಮಿಕ ವಿಧಿವಿಧಾನದಿಂದ ಪೂಜೆ ನಡೆಯುತ್ತದೆ. ಈ ಬಗ್ಗೆ ರಾಜಕಾರಣಿಗಳು ಏನೂ ಬೇಕಾದರು ಹೇಳಲಿ. ಕರೆಯುವವರು ಏನಾದರೂ ಕರೆಯಲಿ. ಅವರು ಹೇಳಿದ ತಕ್ಷಣ ಅವರು ಹೇಳಿದಂತೆ ಆಗಲ್ಲ ಎಂದು ಡಿಕೆ ಶಿವಕುಮಾರ್‌ಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಉಡುಪಿ ಶ್ರೀಕೃಷ್ಣ ಮಠಕ್ಕೆ ಡಿಕೆಶಿ ಭೇಟಿ – ನಾಡಿನ ಒಳಿತಿಗಾಗಿ ಡಿಸಿಎಂ ಪ್ರಾರ್ಥನೆ

    ರಾಜ ಮನೆತನ ದೇವಸ್ಥಾನ ವಿಚಾರದಲ್ಲಿ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿದೆ. ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆ ಆದರೂ ಅದು ಅಧಿಕೃತ ಅಲ್ಲ. ನ್ಯಾಯಾಲಯದ ಆದೇಶ ಬಂದ ಮೇಲೆ ಅಷ್ಟೆ ಎಲ್ಲಾವು ಸ್ಪಷ್ಟ ಆಗೋದು ಎಂದು ಹೇಳುವ ಮೂಲಕ ಚಾಮುಂಡಿ ಬೆಟ್ಟ ಸರ್ಕಾರದ್ದೋ ಅಥವಾ ಯದುವಂಶದ್ದಾ ಎಂಬ ಪ್ರಶ್ನೆ ಇನ್ನೂ ಜೀವಂತವಾಗಿದೆ ಎಂದು ಸೂಚ್ಯವಾಗಿ ಹೇಳಿದ್ದಾರೆ. ಇದನ್ನೂ ಓದಿ: ಬುರುಡೆ ಕೇಸ್‌ಗೆ ಬೆಂಗಳೂರು ಲಿಂಕ್ – ಚಿನ್ನಯ್ಯ ನನ್ನ ಮನೆಯಲ್ಲಿದ್ದ, ತಲೆಬುರುಡೆ ತಂದಿದ್ದ; ʻಪಬ್ಲಿಕ್ ಟಿವಿʼಗೆ ಜಯಂತ್ ಸ್ಫೋಟಕ ಹೇಳಿಕೆ

    ಚಾಮುಂಡಿ ದೇವಸ್ಥಾನವನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಕ್ಕೆ ನನಗೆ ಬೇಸರವಿದೆ ಎಂದ ಪ್ರಮೋದಾದೇವಿ ಒಡೆಯರ್, ದಸರಾ ಉದ್ಘಾಟಕರ ವಿಚಾರದಲ್ಲಿ ನನ್ನ ಅಭಿಪ್ರಾಯ ಏನೂ ಇಲ್ಲ. ಕರೆದವರು, ಕರೆಸಿಕೊಂಡವರಿಗಷ್ಟೇ ಅದು ಗೊತ್ತು. ಸರ್ಕಾರದ ದಸರಾ ನಮ್ಮ ಪರಂಪರೆ ಭಾಗವಲ್ಲ. ನಮ್ಮ ದಸರಾ ಖಾಸಗಿಯಾಗಿಯೆ ನಡೆಯುತ್ತದೆ. ಸರ್ಕಾರ ಅವರಿಗೆ ಬೇಕಾದ ರೀತಿ ದಸರಾ ಮಾಡುತ್ತಾರೆ. ಅದಕ್ಕೂ ನಮಗೂ ಸಂಬಂಧ ಇಲ್ಲ ಎಂದಿದ್ದಾರೆ. ದಸರಾ ವಿಚಾರದಲ್ಲಿ ಇಲ್ಲಿವರೆಗೆ ಆಗಿರುವ ರಾಜಕೀಯವೇ ಸಾಕು. ಆ ವಿಚಾರ ಇನ್ನು ಮುಂದುವರಿಸುವುದು ಬೇಡ ಎಂದಿದ್ದಾರೆ. ಇದನ್ನೂ ಓದಿ: ನೋಂದಣಿ, ಮುದ್ರಾಂಕ ಶುಲ್ಕ ನೆರೆ ರಾಜ್ಯಗಳ ದರಗಳೊಂದಿಗೆ ಸಮೀಕರಿಸಿ ಪರಿಷ್ಕರಣೆ – ಮುಲೈ ಮುಗಿಲನ್

  • ಅಲ್ಲಾ ನಿಮ್ಮನ್ನು ಮಸೀದಿಗೆ ಕರೆಸಿಕೊಳ್ಳಲ್ಲ, ನಮ್ಮ ದೇವರು ಹೇಗೆ ಕರೆಸಿಕೊಳ್ಳುತ್ತೆ: ಬಾನು ಮುಷ್ತಾಕ್‌ಗೆ ಪ್ರತಾಪ್ ಸಿಂಹ ಪ್ರಶ್ನೆ

    ಅಲ್ಲಾ ನಿಮ್ಮನ್ನು ಮಸೀದಿಗೆ ಕರೆಸಿಕೊಳ್ಳಲ್ಲ, ನಮ್ಮ ದೇವರು ಹೇಗೆ ಕರೆಸಿಕೊಳ್ಳುತ್ತೆ: ಬಾನು ಮುಷ್ತಾಕ್‌ಗೆ ಪ್ರತಾಪ್ ಸಿಂಹ ಪ್ರಶ್ನೆ

    – ಅರಿಶಿನ, ಕುಂಕುಮ ಬಗ್ಗೆ ಬಾನು ಮುಷ್ತಾಕ್‌ಗೆ ದ್ವೇಷದ ಭಾವನೆ ಇದೆ ಎಂದ ಮಾಜಿ ಸಂಸದ

    ಮೈಸೂರು: ನೀವು ನಂಬಿರುವ ಅಲ್ಲಾ ನಿಮ್ಮನ್ನು ಮಸೀದಿಗೆ ಕರೆಸಿಕೊಳ್ಳಲ್ಲ, ನಮ್ಮ ದೇವರು ಹೇಗೆ ಕರೆಸಿಕೊಳ್ಳುತ್ತಾರೆ ಎಂದು ಬಾನು ಮುಷ್ತಾಕ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಪ್ರಶ್ನಿಸಿದರು.

    ದಸರಾ ಉದ್ಘಾಟಕರಾಗಿ ಬಾನು ಮುಷ್ತಾಕ್ ಆಯ್ಕೆಯಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮುಸ್ಲಿಂ ಅನ್ನುವ ಕಾರಣಕ್ಕೆ ನಾನು ವಿರೋಧಿಸುತ್ತಿಲ್ಲ. ಟಿಪ್ಪು ಜಯಂತಿ ಮಾಡಿ ಎಂದು ಮುಸ್ಲಿಮರು ಕೇಳಿರಲಿಲ್ಲ. ಸಿದ್ದರಾಮಯ್ಯ ಮುಸ್ಲಿಮರ ಓಲೈಕೆಗಾಗಿ ಟಿಪ್ಪು ಜಯಂತಿ ಮಾಡಿದರು. ಬಾನು ಮುಷ್ತಾಕ್‌ರನ್ನು ದಸರಾ ಉದ್ಘಾಟನೆಗೆ ಕರೆಯಿರಿ ಎಂದು ಯಾವ ಮುಸ್ಲಿಮರು ಕೇಳಿರಲಿಲ್ಲ. ಅದರೂ ಸಿದ್ದರಾಮಯ್ಯ ಮಾಡಿದರು. ಬಾನು ಮುಷ್ತಾಕ್ ಅವರಿಗೆ ನೇರವಾಗಿ ಪ್ರಶ್ನೆ ಕೇಳ್ತೀನಿ. ಜನ ಸಾಹಿತ್ಯ ಭಾಷಣದಲ್ಲಿ ನಿಮ್ಮ ಭಾಷಣ ಏನಿತ್ತು? ಮುಸ್ಲಿಮರು ಕನ್ನಡ ಕಲಿಯಲು ಭುವನೇಶ್ವರಿ ತಾಯಿ ಮೂರ್ತಿ ಅಡ್ಡಿಯಾಯಿತು ಎಂದು ಅವರು ಹೇಳಿದ್ದಾರೆ. ಭುವನೇಶ್ವರಿಗೆ ಅರಿಶಿನ, ಕುಂಕುಮ ಇಟ್ಟಿದ್ದರಿಂದ ಮುಸ್ಲಿಮರು ಕನ್ನಡ ಕಲಿಯಲು ಆಗಿಲ್ಲ ಎಂದು ಮುಷ್ತಾಕ್ ಹೇಳಿದ್ದು ಸತ್ಯ ತಾನೆ? ಕನ್ನಡವನ್ನು ಭುವನೇಶ್ವರಿ ಆಗಿ ಒಪ್ಪದ ಬಾನು ಮುಷ್ತಾಕ್, ನಾಡದೇವಿ ರೂಪದಲ್ಲಿನ ಚಾಮುಂಡಿಯನ್ನು ಒಪ್ಪುತ್ತಾರಾ? ಅರಿಶಿನ, ಕುಂಕುಮ ಬಗ್ಗೆ ಯಾಕೆ ಬಾನು ಮುಷ್ತಾಕ್‌ಗೆ ತಕರಾರು, ಕಿರಿಕಿರಿ ಇದೆ? ಹಿಂದೂಗಳ ಮನೆಯಲ್ಲಿ ಯಾರೇ ಸುಮಂಗಲಿ ಹೋದರೂ ಕುಂಕುಮ ಕೊಡುತ್ತಾರೆ. ದೇವಸ್ಥಾನಕ್ಕೆ ಹೋದರೆ ಕುಂಕುಮ ಪ್ರಸಾದವಾಗಿ ಕೊಡುತ್ತಾರೆ. ಇಂತಹ ಕುಂಕುಮವೇ ಬಾನು ಮುಷ್ತಾಕ್‌ಗೆ ಕಿರಿಕಿರಿ ಉಂಟು ಮಾಡಿದೆ. ಅರಿಶಿನ ಕುಂಕುಮ ಬಗ್ಗೆ ಅವರಿಗೆ ದ್ವೇಷದ ಭಾವನೆ ಇದೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಚಾಮುಂಡೇಶ್ವರಿ ತಾಯಿ ನನ್ನನು ಕರಸಿಕೊಳ್ಳುತ್ತಿದ್ದಾರೆ: ಬಾನು ಮುಷ್ತಾಕ್‌

    ನೀವು ನಂಬಿರುವ ನಿಮ್ಮ ಅಲ್ಲಾ ನಿಮ್ಮನ್ನು ಮಸೀದಿಗೆ ಕರೆಸಿಕೊಳ್ಳುವುದಿಲ್ಲ. ನಮ್ಮ ದೇವರು ಹೇಗೆ ಕರೆಸಿ ಕೊಳ್ಳುತ್ತಾರೆ? ತಮಿಳುನಾಡಿನಲ್ಲಿ ಮುಸ್ಲಿಮಗೆ ಮಾತೃ ಭಾಷೆ ತಮಿಳು. ಕರ್ನಾಟಕದಲ್ಲಿ ಯಾಕೆ ಮುಸ್ಲಿಮರಿಗೆ ಮಾತೃ ಭಾಷೆ ಕನ್ನಡ ಆಗಲ್ಲ? ತಲೆ ಮಾಸಿದ ಕಾಂಗ್ರೆಸ್ ನಾಯಕರು ನನಗೂ ಪ್ರಶ್ನೆ ಮಾಡಿದ್ದಾರೆ. ಇಸ್ಲಾಂ, ಕಿಶ್ಚಿಯನ್ ಅಕ್ರಮಣಕಾರಿ ಆಗಿ ಭಾರತಕ್ಕೆ ಬಂದವರು. ನಮ್ಮ ಆಚಾರ, ವಿಚಾರ, ಸಂಸ್ಕೃತಿ ಒಡೆದು ಹಾಕಲು ಯತ್ನಿಸಿದ್ದು, ಘಜ್ನಿ, ಮೊಗಲರು. ಇದೇ ರೀತಿ ನಮ್ಮ ನಂಬಿಕೆಯನ್ನು ಬಾನು ಮುಷ್ತಾಕ್ ಒಡೆಯುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

    ಬಾನು ಮುಷ್ತಾಕ್ ಆಯ್ಕೆ ಸ್ವಾಗತಿಸಿದ ಸಂಸದ ಯದುವೀರ್ ಹೇಳಿಕೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿ, ಬಿಜೆಪಿ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಏನೂ ಮಾತಾಡ್ತಾರಾ ಅದೇ ನಮ್ಮ ಮಾತು. ಅದೇ ನಮ್ಮ ನಿಲುವು. ನಮ್ಮ ಪಕ್ಷದ ನಿಲುವನ್ನೇ ನಾನು ಮಾತಾಡಿದ್ದೇನೆ. ಮೈಸೂರಿಗರಿಗೆ ಒಂದು ಪ್ರಶ್ನೆ ಕೇಳ್ತೀನಿ. ಭುವನೇಶ್ವರಿ ಬಗ್ಗೆ ಅವಮಾನಕಾರಿಯಾಗಿ ಮಾತಾಡಿದ ಬಾನು ಮುಷ್ತಾಕ್ ದಸರಾ ಉದ್ಘಾಟಿಸಬೇಕಾ? ಜನರೇ ಹೇಳಲಿ ಎಂದರು. ಇದನ್ನೂ ಓದಿ: ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆ – ಸರ್ಕಾರದ ನಿರ್ಧಾರ ಸ್ವಾಗತಿಸಿದ ಯದುವೀರ್

    ಆರ್‌ಎಸ್‌ಎಸ್ ಗೀತೆ ಹಾಡಿದ್ದಕ್ಕೆ ಡಿಕೆ ಶಿವಕುಮಾರ್ ಕ್ಷಮೆ ಕೇಳಿದ ಬಗ್ಗೆ ಮಾತನಾಡಿ, ನಮಸ್ತೆ ಸದಾ ವತ್ಸಲೆ ಅರ್ಥ ಮಾತೃಭೂಮಿಗೆ ವಂದಿಸು ಅಂತಾ. ಈ ಗೀತೆ ಹಾಡಿದ್ದಕ್ಕೆ ಡಿಕೆ ಶಿವಕುಮಾರ್‌ಗೆ ಕ್ಷಮೆ ಕೇಳುವ ಸ್ಥಿತಿ ಬಂದಿದೆ ಎಂದರೆ ಕಾಂಗ್ರೆಸ್‌ಗೆ ಮಾತೃಭೂಮಿ ಮೇಲೆ ಎಷ್ಟು ಗೌರವವಿದೆ ನೋಡಿ ಎಂದು ಕುಟುಕಿದರು.