Tag: Chamundi

  • ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು: ಡಿಕೆಶಿಗೆ ಆರ್.ಅಶೋಕ್ ತಿರುಗೇಟು

    ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು: ಡಿಕೆಶಿಗೆ ಆರ್.ಅಶೋಕ್ ತಿರುಗೇಟು

    – ಚಾಮುಂಡಿಯನ್ನು ಒಪ್ಪುವವರು ಮಾತ್ರ ದಸರಾ ಉದ್ಘಾಟಿಸಬೇಕು ಅಂತ ಕಾನೂನು ತರ್ತೀವಿ: ವಿಪಕ್ಷ ನಾಯಕ

    ಬೆಂಗಳೂರು: ಮೈಸೂರು ಚಾಮುಂಡಿ ಬೆಟ್ಟ ಕೇವಲ ಹಿಂದೂಗಳ ಸ್ವತ್ತಲ್ಲ ಎನ್ನುವ ಡಿಸಿಎಂ ಡಿಕೆಶಿ ಹೇಳಿಕೆಗೆ ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಕಿಡಿ ಕಾರಿಕಾರಿದ್ದಾರೆ.

    ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು. ಮುಸ್ಲಿಮರ ಸ್ವತ್ತಲ್ಲ. ನೂರು ಡಿಕೆಶಿ ಬಂದರೂ ಏನು ಮಾಡೋಕೆ ಆಗಲ್ಲ. ಇದು ಹಿಂದೂಗಳ ಸ್ವತ್ತೆ. ಧರ್ಮಸ್ಥಳ, ತಿರುಪತಿ, ಎಲ್ಲವೂ ಹಿಂದೂಗಳ ಸ್ವತ್ತೆ. ಇದನ್ನ ಮುಟ್ಟಿದ್ರೆ ದಂಗೆ ಆಗುತ್ತೆ ಹುಷಾರ್ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಚಾಮುಂಡೇಶ್ವರಿ ಕೇವಲ ಹಿಂದೂಗಳ ಆಸ್ತಿ ಅಲ್ಲ: ಡಿ.ಕೆ.ಶಿವಕುಮಾರ್

    ಎಲ್ಲಾ ಧರ್ಮವನ್ನ ಒಪ್ಪುತ್ತೇನೆ ಅನ್ನೋದು ಕಾಂಗ್ರೆಸ್‌ಗೆ ಅರ್ಥ ಆಗಲ್ಲ. ಇದನ್ನ ಒಪ್ಪಲ್ಲ. ನಮಸ್ತೆ ಇಟಲಿ ಅಂತ ಹೇಳಿದ್ರೆ ಡಿಕೆಶಿಗೆ ಅವಾರ್ಡ್ ಕೊಟ್ಟಿರುವರು. ಈಗ ಅವರನ್ನ ಎಲ್ಲರೂ ವಿರೋಧಿಸುತ್ತಿದ್ದಾರೆ. ಅವರ ಮೇಲೆ ಮುಗಿ ಬೀಳುತ್ತಿದ್ದಾರೆ. ಕಾಂಗ್ರೆಸ್‌ಗೆ ಉಳಿಗಾಲವಿಲ್ಲ. ಮುಂದೆ ಕಾಂಗ್ರೆಸ್‌ಗೆ ಭವಿಷ್ಯ ಇಲ್ಲ. ಕ್ಷಮೆ ಕೇಳೋದು ಯಾಕೆ? ಭಾರತಮಾತೆಗೆ ಅಥವಾ ಕನ್ನಡ ಮಾತೆ, ಮುಸ್ಲಿಮರಿಗೆ ಬೈಯ್ದಿದ್ದಾರಾ? ಆಶ್ಚರ್ಯ ಆಗ್ತಿದೆ. ತಪ್ಪು ಬಯ್ದಿದ್ದರೆ ಕ್ಷಮೆ ಕೇಳೋದು ಸರಿ. ಭಾರತ ಮಾತೆಗೆ ನಮಸ್ಕಾರ ಹೇಳುವುದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

    ಬಾನು ಮುಸ್ತಾಕ್‌ ದಸರಾ ಉದ್ಘಾಟನೆಗೆ ವಿರೋಧ ಕುರಿತು ಮಾತನಾಡಿ, ಮುಸ್ಲಿಮರೇ ಮೂರ್ತಿ ಪೂಜೆ ಮಾಡಲ್ಲ ಅಂತ ಹೇಳಿದ್ದಾರೆ. ಯಾರೇ ಹೇಳಿದ್ರು ಮೂರ್ತಿ ಪೂಜೆ ಅದು ಅಪರಾಧ ಅಂತಾರೆ. ಚಾಮುಂಡೇಶ್ವರಿ ಪೂಜೆ ಮಾಡಿ ದಸರಾ ಹೊರಡುವುದು. ಹೂ ಹಾಕಿ ಪೂಜೆ ಮಾಡಿ ಹೊರಡಬೇಕು. ಅವರ ಧರ್ಮದಲ್ಲಿ ಇದಕ್ಕೆ ಅವಕಾಶ ಇಲ್ಲ. ಕಾಂಗ್ರೆಸ್‌ಗೆ ಮುಸ್ಲಿಂ ವೋಟ್ ಬಿಟ್ಟರೆ ತಲೆಯಲ್ಲಿ ಬೇರೆನೂ ಇಲ್ಲ. ಹಿಂದೂಗಳಲ್ಲಿ ಯೋಗ್ಯತೆ ಇಲ್ವಾ? ದಸರಾ ಉದ್ಘಾಟನೆಗೆ ಹಿಂದೂಗಳು ಇರಲಿಲ್ವಾ? ನಮ್ಮ ಸರ್ಕಾರ ಬಂದಾಗ ಇದಕ್ಕೆ ಒಂದು ಕಾನೂನು ತರ್ತೀವಿ. ಚಾಮುಂಡಿಯನ್ನ ಯಾರು ಒಪ್ಪುವರೋ ಅವರು ಮಾತ್ರ ಉದ್ಘಾಟನೆ ಮಾಡಬೇಕು ಅನ್ನೋ ಕಾನೂನು ತರುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಅಧ್ಯಕ್ಷ ಸಿದ್ದರಾಮಯ್ಯ, ಉಪಾಧ್ಯಕ್ಷರಾಗಿ ಡಿಕೆ ಶಿವಕುಮಾರ್‌ ನೇಮಕ

    ಮೈಸೂರಿನಲ್ಲಿ ಪರಮೇಶ್ವರೋತ್ಸವ ವಿಚಾರವಾಗಿ ಮಾತನಾಡಿ, ಪರಮೇಶ್ವರ್ ಹಿರಿಯರು. ಎರಡು ಬಾರಿ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಪರಮೇಶ್ವರ್ ಯಾವತ್ತೋ ಮುಖ್ಯಮಂತ್ರಿ ಆಗಬೇಕಿತ್ತು. ಕಾಂಗ್ರೆಸ್ ಅವರನ್ನ ಕರಿಬೇವಿನ ಥರ ಬಳಕೆ ಮಾಡಿಕೊಳ್ಳುತ್ತಿದೆ. ಯಾವಾಗ ಬೇಕೋ ಅವಾಗ ಬಳಕೆ ಮಾಡಿಕೊಳ್ಳುತ್ತಾರೆ. ಊಟ ಮಾಡುವಾಗ ಎತ್ತಿ ಪಕ್ಕಕ್ಕೆ ಇಡುತ್ತಾರೆ. ಅವರು ಒಳ್ಳೆಯವರು ಎಂದು ಹೇಳಿದ್ದಾರೆ.

  • ಚಾಮುಂಡಿ ತಾಯಿಯ ದರ್ಶನ ಬಂದ್

    ಚಾಮುಂಡಿ ತಾಯಿಯ ದರ್ಶನ ಬಂದ್

    ಮೈಸೂರು: ಕೇತುಗ್ರಸ್ತ ಸೂರ್ಯ ಗ್ರಹಣ (Solar Eclipse) ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ದೇಗುಲವನ್ನು ಬಂದ್ ಮಾಡಲಾಗಿದೆ.

    ಆಡಳಿತ ಮಂಡಳಿಯು ಇಂದು ಬೆಳಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಿತ್ತು. ಇದೀಗ ಮಧ್ಯಾಹ್ನ ಒಂದು ಗಂಟೆಯ ಬಳಿಕ ದೇವರ ದರ್ಶನವಿರುವುದಿಲ್ಲ ಅಂತಾ ಪ್ರಕಟಣೆ ಹೊರಡಿಸಿದೆ. ಇದನ್ನೂ ಓದಿ: ಬೆಳಗಾವಿಯ ಬಹುತೇಕ ದೇಗುಲಗಳಲ್ಲಿ ದೇವರ ದರ್ಶನಕ್ಕೆ ಅವಕಾಶ, ಎಂದಿನಂತೆ ಪೂಜೆ

    ಇದೀಗ ಒಂದು ಗಂಟೆಯಾದ ಹಿನ್ನೆಲೆಯಲ್ಲಿ ಚಾಮುಂಡಿ (Chamundi Devi) ತಾಯಿಯ ದರ್ಶನ ಬಂದ್ ಆಗಿದೆ. ಗ್ರಹಣ ಸ್ಪರ್ಶ, ಮೋಕ್ಷ ಕಾಲದಲ್ಲಿ ಚಾಮುಂಡಿ ತಾಯಿಗೆ ವಿಶೇಷ ಪೂಜೆ ನಡೆಯಲಿದೆ. ನಾಡಿನ ಒಳಿತಿಗಾಗಿ ವಿಶೇಷ ಪೂಜೆ ನಡೆಯಲಿದೆ ಎಂದು ತಿಳಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಅಧಿಕಾರಿಗಳ ಮಧ್ಯೆ ಸಂಘರ್ಷ – ಎಲ್ಲವನ್ನೂ ಚಾಮುಂಡಿ ತಾಯಿ ನೋಡುತ್ತಿದ್ದಾಳೆ ಎಂದ ಎಸ್‍ಟಿಎಸ್

    ಅಧಿಕಾರಿಗಳ ಮಧ್ಯೆ ಸಂಘರ್ಷ – ಎಲ್ಲವನ್ನೂ ಚಾಮುಂಡಿ ತಾಯಿ ನೋಡುತ್ತಿದ್ದಾಳೆ ಎಂದ ಎಸ್‍ಟಿಎಸ್

    ಮೈಸೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲವನ್ನು ಚಾಮುಂಡಿ ತಾಯಿ ನೋಡುತ್ತಿದ್ದಾಳೆ. ನ್ಯಾಯದ ತೀರ್ಮಾನ ಚಾಮುಂಡಿ ತಾಯಿಗೆ ಬಿಟ್ಟ ವಿಚಾರ ಎಂದು ಇಬ್ಬರು ಐಎಎಸ್ ಅಧಿಕಾರಿಗಳ ನಡುವಿನ ಸಂಘರ್ಷ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆ ನೀಡಿದ್ದಾರೆ.

    ಮೈಸೂರಿನಲ್ಲಿ ನಿನ್ನೆಯಿಂದ ನಡೆಯುತ್ತಿರುವ ಇಬ್ಬರು ಐಎಎಸ್ ಅಧಿಕಾರಿಗಳ ನಡುವಿನ ಸಂಘರ್ಷದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎಸ್.ಟಿ. ಸೋಮಶೇಖರ್, ಘಟನೆಯ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಇಂದು ಮುಖ್ಯ ಕಾರ್ಯದರ್ಶಿ ಅವರು ಕೂಡ ಮೈಸೂರಿಗೆ ಬರುತ್ತಿದ್ದಾರೆ. ಮೈಸೂರಿನಲ್ಲಿ ಅಧಿಕಾರಿಗಳು ಅಹಂ ಬಿಟ್ಟು ಅವರವರ ಕೆಲಸ ಮಾಡಬೇಕು. ಮೈಸೂರಿನ ಚಾಮುಂಡಿ ದೇವಿ ಎಲ್ಲವನ್ನೂ ನೋಡುತ್ತಿದ್ದಾಳೆ. ಯಾವುದು ಕೆಟ್ಟದ್ದು, ಯಾವುದು ಒಳ್ಳೆಯದು ಎನ್ನುವುದು ಅವಳಿಗೆ ಗೊತ್ತು. ಯಾರು ಯಾರ ಮೇಲೆ ದ್ವೇಷ ಕಾರುತ್ತಿದ್ದಾರೆ ಎಂಬುದು ಅವಳಿಗೆ ಗೊತ್ತಿದೆ ಎಂದರು. ಇದನ್ನೂ ಓದಿ:12 ಕೋಟಿ ಸಿಎಸ್‍ಆರ್ ಫಂಡ್ ಖರ್ಚಿನ ಮಾಹಿತಿ ಕೇಳಿದ್ದೆ ಅಷ್ಟೇ – ರೋಹಿಣಿ ಸಿಂಧೂರಿ

    ನಾನು ದೇವರಿಗೆ ಒಂದು ನಮಸ್ಕಾರ ಹಾಕುತ್ತೇನೆ ಯಾರು ಸರಿಯಾಗಿ ಕೆಲಸ ಮಾಡುತ್ತಾರೆ ಪ್ರಾಮಾಣಿಕರಾಗಿದ್ದಾರೋ ಅವರನ್ನು ರಕ್ಷಿಸು ಎಂದು ಕೇಳಿಕೊಳ್ಳುವುದು ಬಿಟ್ಟು ಬೇರೆ ಬೇರೆ ಏನೂ ಇಲ್ಲ ಎಂದು ಅಭಿಪ್ರಾಯಪಟ್ಟರು.

    ಸಂಘರ್ಷ ಏನು ?

    ನಿನ್ನೆತುರ್ತು ಸುದ್ದಿಗೋಷ್ಠಿ ನಡೆಸಿದ ಶಿಲ್ಪಾನಾಗ್, ಜಿಲ್ಲಾಧಿಕಾರಿಗಳು ಸಿಟಿಗೆ ಒಂದು ಮಾನದಂಡ, ಗ್ರಾಮಾಂತರಕ್ಕೆ ಒಂದು ಮಾನದಂಡ ಮಾಡಿದ್ದಾರೆ. ಸಿಟಿಯಲ್ಲಿ ಕಮಿಷನರ್ ವಿಫಲವಾಗಿದ್ದಾರೆ ಎಂದು ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಡಳಿತದಿಂದ ನಮಗೆ ಯಾವುದೇ ಸಹಕಾರ ದೊರೆತಿಲ್ಲ. ಸಿಎಸ್‍ಆರ್ ಫಂಡ್‍ನಿಂದ ನಾವು ಕೆಲಸ ಮಾಡುತ್ತಿದ್ದೇವೆ. ಎಲ್ಲರಿಗೂ ಒಂದು ಸಹನೆ ಇರುತ್ತೆ, ಸಹನೆ ಒಡೆದಾಗ ಏನು ಮಾಡಬೇಕು. ಒಬ್ಬರು ಐಎಎಸ್ ಅಧಿಕಾರಿಯಾಗಿ ಮತ್ತೊಬ್ಬ ಅಧಿಕಾರಿ ಮೇಲೆ ದಬ್ಬಾಳಿಕೆ ಮಾಡೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.

    ಮಾಧ್ಯಮಗಳಲ್ಲಿ ಪಾಲಿಕೆ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ನನ್ನನ್ನ ಟಾರ್ಗೆಟ್ ಮಾಡಲಾಗಿದೆ. ನನ್ನನ್ನ ತುಳಿಯುವ ವ್ಯವಸ್ಥಿತ ಪಿತೂರಿ ನಡೆದಿದ್ದು, ಅವರ ಇಗೋಯಿಂದ ನಮ್ಮ ಕೆಲಸಕ್ಕೆ ಮನ್ನಣೆ ಸಿಗುತ್ತಿಲ್ಲ ಎಂದು ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದರು. ನನಗೆ ಕೆಲಸ ಮಾಡುವ ಆಸಕ್ತಿಯೇ ಇಲ್ಲದಂತಾಗಿದ್ದು, ಚೀಫ್ ಸೆಕ್ರಟರಿ ಸ್ಥಾನ ರಾಜೀನಾಮೆ ನೀಡುತ್ತಿರುವ ವಿಷಯವನ್ನ ತಿಳಿಸಿ ಭಾವುಕರಾದರು. ಇದನ್ನೂ ಓದಿ:ಶಿಲ್ಪಾ ನಾಗ್‍ರಂತಹ ದಕ್ಷ ಅಧಿಕಾರಿಗಳ ಸೇವೆ ಅಗತ್ಯ, ಸಿಎಂ ಗಮನಕ್ಕೆ ತರುತ್ತೇನೆ: ರಾಮ್‍ದಾಸ್

    ಈ ರೀತಿಯ ಜಿಲ್ಲಾಧಿಕಾರಿ ಯಾವುದೇ ಜಿಲ್ಲೆಗೂ ಸಿಗಬಾರದು. ಟಾರ್ಗೆಟ್ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಮೈಸೂರು ಜಿಲ್ಲೆ ಬಿಟ್ಟು ತೊಲಗಿ, ತುಂಬಾ ಚೀಪ್ ಮೆಂಟಾಲಿಟಿ ಅಧಿಕಾರಿ ಅವರು. ಒಳ್ಳೆಯ ಜನರು ಇರೋ ಮೈಸೂರು ನಗರದಲ್ಲಿ ಜಿಲ್ಲಾಧಿಕಾರಿಗಳು ಈ ರೀತಿ ಗಲೀಜು ಎಬ್ಬಿಸುತ್ತಿದ್ದಾರೆ. ಯಾಕೆ ಈ ರೀತಿ ಹಠ ಮಾಡುತ್ತಿದ್ದಾರೋ ಗೊತ್ತಿಲ್ಲ. ನಾನು 2014ನೇ ಬ್ಯಾಚ್ ಅಧಿಕಾರಿ, ಅವರು 2009 ನೇ ಬ್ಯಾಚ್ ಅಧಿಕಾರಿ. ನನ್ನ ಮೇಲಿನ ಅವರ ದ್ವೇಷ ಮೈಸೂರು ಜನರ ಮೇಲೆ ಪರಿಣಾಮ ಆಗೋದು ಬೇಡ. ನಾನೇ ಸುಪ್ರೀಂ ಅಂತಾ ಅಧಿಕಾರಿಗಳ ಸಭೆಯಲ್ಲಿ ವರ್ತನೆ ಮಾಡುತ್ತಿದ್ದಾರೆ. ಹಿರಿಯ ಅಧಿಕಾರಿಗಳಿಗೆ ಗೌರವ ಕೊಡದೆ ಅಧಿಕಾರಿಗಳನ್ನ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.