Tag: Chamrajnagar

  • ಕಾಡಾನೆಯೊಂದಿಗೆ ಸೆಲ್ಫಿ – 20 ಸಾವಿರ ರೂ. ದಂಡ

    ಕಾಡಾನೆಯೊಂದಿಗೆ ಸೆಲ್ಫಿ – 20 ಸಾವಿರ ರೂ. ದಂಡ

    ಚಾಮರಾಜನಗರ: ಕಾಡಾನೆಯೊಂದಿಗೆ (Elephant) ಸೆಲ್ಫಿ ಕ್ಲಿಕ್ಕಿಸಿಕೊಂಡ ಇಬ್ಬರು ಪ್ರವಾಸಿಗರಿಗೆ ತಲಾ 10 ಸಾವಿರ ರೂ. ದಂಡ ವಿಧಿಸಿರುವ ಘಟನೆ ಚಾಮರಾಜನಗರ (Chamrajnagar) ಜಿಲ್ಲೆಯ ಗಡಿಯ ತಮಿಳುನಾಡಿನ ಅಸನೂರು ಬಳಿ ನಡೆದಿದೆ.

    ತೆಲಂಗಾಣ ನಿಜಾಮ್‍ಪೇಟೆ ಮೂಲದ ದಿಲೀಪ್ ಕುಮಾರ್ (42) ಹಾಗೂ ಶ್ಯಾಂಪ್ರಸಾದ್(31) ದಂಡ ಕಟ್ಟಿರುವ ಪ್ರವಾಸಿಗರು. ಕಾರಿನಲ್ಲಿ ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಮೂಲಕ ಇವರು ಕೊಯಮತ್ತೂರಿಗೆ ತೆರಳುತ್ತಿದ್ದರು. ಈ ವೇಳೆ ಆಸನೂರು ಬಳಿ ಆನೆ ನಿಂತಿದ್ದನ್ನು ನೋಡಿದ್ದಾರೆ. ನಂತರ ಕಾರಿನಿಂದ ಇಳಿದು ಕಾಡಾನೆಯ ಸಮೀಪ ಹೋಗಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದನ್ನೂ ಓದಿ: ಸದನದಲ್ಲಿ ಸಿದ್ದರಾಮಯ್ಯ-ಹೆಚ್‌ಡಿಕೆ ಮಧ್ಯೆ ಬೆಂಕಿ ಫೈಟ್‌

    ಈ ವೇಳೆ ಗಸ್ತು ತಿರುಗುತ್ತಿದ್ದ ತಮಿಳುನಾಡಿನ (Tamil Nadu) ಅರಣ್ಯ ಇಲಾಖೆ (Forest Department) ಸಿಬ್ಬಂದಿ ಗಮನಿಸಿದ್ದಾರೆ. ಇನ್ನೇನೂ ವಿಚಾರಿಸಬೇಕು ಎನ್ನುವಷ್ಟರಲ್ಲಿ ಕಾರು ಹತ್ತಿ ಪರಾರಿಯಾಗಿದ್ದರು. ಬಳಿಕ ಬಣ್ಣಾರಿ ಚೆಕ್ ಪೋಸ್ಟ್‌ಗೆ ಸಿಬ್ಬಂದಿ ಮಾಹಿತಿ ನೀಡಿದ್ದರು. ಅಲ್ಲಿ ಕಾರನ್ನು ತಡೆದು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೇಜಾವಾಬ್ದಾರಿ ತೋರಿದ ಇಬ್ಬರಿಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಇದನ್ನೂ ಓದಿ: Chandrayaan-3: ಬಹುನಿರೀಕ್ಷಿತ ಚಂದ್ರಯಾನ-3 ಗಗನನೌಕೆ ಜು.14, ಮಧ್ಯಾಹ್ನ 2:35ಕ್ಕೆ ಉಡಾವಣೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾರು ಅಡ್ಡಗಟ್ಟಿ ಸುಲಿಗೆ ಮಾಡಿದ್ದ ನಾಲ್ವರು ದರೋಡೆಕೋರರು ಅರೆಸ್ಟ್

    ಕಾರು ಅಡ್ಡಗಟ್ಟಿ ಸುಲಿಗೆ ಮಾಡಿದ್ದ ನಾಲ್ವರು ದರೋಡೆಕೋರರು ಅರೆಸ್ಟ್

    ಚಾಮರಾಜನಗರ: ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದವರನ್ನು ಸುಲಿಗೆ ಮಾಡಿ ಪರಾರಿಯಾಗಿದ್ದ ನಾಲ್ವರು ಖತರ್ನಾಕ್ ದರೋಡೆಕೋರರ ಗುಂಪನ್ನು ಹಡೆಮುರಿಕಟ್ಟುವಲ್ಲಿ ಕೊಳ್ಳೇಗಾಲ ಗ್ರಾಮಾಂತರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬೆಂಗಳೂರಿನ ಭರತ್ ಅಲಿಯಾಸ್ ಹುಳಿಮಾವು, ಹನುಮೇಗೌಡ, ಕಿರಣ್, ಪ್ರತಾಪ್ ಬಂಧಿತ ಆರೋಪಿಗಳಾಗಿದ್ದಾರೆ. ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದವರ ಹಣ ಮತ್ತು ಮೊಬೈಲ್ ದೋಚಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮೆಲಾನಿಯಾ ಟ್ರಂಪ್, ಕೇಜ್ರಿವಾಲ್ ಶಾಲೆಯನ್ನು ಮಾತ್ರ ನೋಡಬೇಕೆಂದಿದ್ದರು: ದೆಹಲಿ ಸಿಎಂ

     

    ಕಳೆದ ತಿಂಗಳಷ್ಟೆ ತಮಿಳುನಾಡು ಮೂಲದ ಶಿವು ಹಾಗೂ ಸ್ನೇಹಿತ ದಿನೇಶ್, ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದರು. ಈ ವೇಳೆ ಮಧುವನಹಳ್ಳಿಯ ಮುಖ್ಯ ರಸ್ತೆಯ ಬಳಿ ಕಾರಿನಲ್ಲಿ ಬಂದ ಆರೋಪಿಗಳು ಶಿವು ಹಾಗೂ ದಿನೇಶ್ ಬರುತ್ತಿದ್ದ ಕಾರನ್ನು ಅಡ್ಡಗಟ್ಟಿ ಹಣ ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದರು.

    ಬಳಿಕ ಶಿವು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆ ಡಿವೈಎಸ್ಪಿ ಜಿ.ನಾಗರಾಜು ಮಾರ್ಗದರ್ಶನದಲ್ಲಿ ಎರಡು ಪ್ರತ್ಯೇಕ ತಂಡಗಳ ಮೂಲಕ ಕಾರ್ಯಾಚರಣೆಗಿಳಿದಿದ್ದರು. ಇದನ್ನೂ ಓದಿ: ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಕಹಳೆ – ರಷ್ಯಾ ಮೇಲೆ ಹಣಕಾಸು ಸೇರಿ ವಿವಿಧ ನಿರ್ಬಂಧ ಹೇರಿದ ಅಮೆರಿಕ!

    ತಿಂಗಳುಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಖತರ್ನಾಕ್ ನಾಲ್ವರು ಆರೋಪಿಗಳ ಬೆನ್ನತ್ತಿದ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸ್ವಿಫ್ಟ್ ಡಿಸೈರ್ ಕಾರು ಮತ್ತು ಫೋನ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

    ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕರು ನಗದು ಬಹುಮಾನವನ್ನು ಘೋಷಿಸಿದ್ದಾರೆ.

  • ಕಾಡಂಚಿನ ಪ್ರದೇಶದ ನಾಯಿಗಳ ಹೊಣೆ ಅರಣ್ಯ ಇಲಾಖೆಗೆ

    ಕಾಡಂಚಿನ ಪ್ರದೇಶದ ನಾಯಿಗಳ ಹೊಣೆ ಅರಣ್ಯ ಇಲಾಖೆಗೆ

    ಚಾಮರಾಜನಗರ: ಬಂಡೀಪುರ ಹುಲಿ ಯೋಜನೆಯ ಕಾಡಂಚಿನ ಗ್ರಾಮಗಳ ಬೀದಿನಾಯಿಗಳ ಆರೋಗ್ಯ ಹೊಣೆಯನ್ನು ಅರಣ್ಯ ಇಲಾಖೆಯೇ ಹೊರಲಾರಂಭಿಸಿದೆ.

    ವನ್ಯಜೀವಿಗಳಿಗೆ ಬೀದಿನಾಯಿಗಳಿಂದ ರೋಗ ಹರಡಬಾರದೆಂಬ ಉದ್ದೇಶದಿಂದ ಅರಣ್ಯ ಇಲಾಖೆ ಬೀದಿನಾಯಿಗಳ ಆರೋಗ್ಯದ ಮೇಲೂ ಕಾಳಜಿ ವಹಿಸುತ್ತಿದ್ದು, ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ನೀಡುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ. ಈ ಮೂಲಕ ತಾಲೂಕು ಆಡಳಿತ ನಿರ್ವಹಿಸಬೇಕಿದ್ದ ಜವಾಬ್ದಾರಿಯನ್ನು ಅರಣ್ಯ ಇಲಾಖೆ ನಿರ್ವಹಿಸುತ್ತಿರುವುದು ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ.

    ಕಾಳಜಿ ತೋರಿದ ಇಲಾಖೆ
    ಅರಣ್ಯ ಇಲಾಖೆ ವನ್ಯಜೀವಿಗಳ ಮೇಲಿನ ಕಾಳಜಿ ಮತ್ತು ಆರೋಗ್ಯಕರ ಪರಿಸರ ಕಾಪಾಡಿಕೊಳ್ಳಲು ಇದೀಗ ಬೀದಿನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ನೀಡುತ್ತಿದೆ. ಈ ಹಿಂದೆ ಜಾನುವಾರುಗಳನ್ನು ಅರಣ್ಯದೊಳಗೆ ಬಿಡುವುದನ್ನು ನಿಯಂತ್ರಿಸಿದರ ಪರಿಣಾಮ ಕಾಲುಬಾಯಿ ಜ್ವರ, ಅಂಥ್ರಾಕ್ಸ್ ಮುಂತಾದ ರೋಗಗಳು ನಿಯಂತ್ರಣಗೊಂಡಿತ್ತು.

    ಇತ್ತೀಚಿನ ದಿನಗಳಲ್ಲಿ ಕಾಡಂಚಿನ ಪ್ರದೇಶಗಳಲ್ಲಿ ರೇಬಿಸ್ ಹಾಗೂ ಇತರ ರೋಗ ಪೀಡಿತ ಬೀದಿನಾಯಿಗಳನ್ನು ಚಿರತೆ ಹಾಗೂ ಹುಲಿಗಳು ಬೇಟೆಯಾಡಿ ತಿನ್ನುವ ಸಂಭವಿರುವುದರಿಂದ ವ್ಯಾಘ್ರಗಳಿಗೂ ರೋಗ ಹರಡಬಹುದೆಂದು ಊಹಿಸಿ ಅರಣ್ಯ ಇಲಾಖೆ ಬೀದಿನಾಯಿಗಳ ಆರೈಕೆಯಲ್ಲಿ ತೊಡಗಿದೆ. ಇಷ್ಟೇ ಅಲ್ಲದೆ ಬೀದಿ ನಾಯಿಗಳ ಸಂತಾನ ನಿಯಂತ್ರಿಸುವ ಸಲುವಾಗಿ ಸಂತಾನ ಶಕ್ತಿ ಹರಣ ಚಿಕಿತ್ಸೆ ನೀಡಲಾಗಿದೆ.

    ಎಲ್ಲೆಲ್ಲಿ ಕಾರ್ಯಾಚರಣೆ?
    ಬಂಡೀಪುರ ಹುಲಿ ಯೋಜನೆಯ ಕಾಡಂಚಿನ ಗ್ರಾಮಗಳಾದ ಜಕ್ಕಹಳ್ಳಿ, ಮಂಗಲ, ಚಿಕ್ಕಯಲಚೆಟ್ಟಿ, ಲೊಕ್ಕೆರೆ, ಆಡಿನಕಣಿವೆ ಮುಂತಾದ ಗ್ರಾಮಗಳಲ್ಲಿ ಮಹಾರಾಷ್ಟ್ರ ಮೂಲದ ಸ್ವಯಂಸೇವಾ ಸಂಸ್ಥೆಯು ವ್ಯಾಕ್ಸಿನ್ ಹಾಕುತ್ತಿದ್ದು, ಇದರ ವೆಚ್ಚವನ್ನು ಅರಣ್ಯ ಇಲಾಖೆ ಭರಿಸುತ್ತಿದೆ. ಸದ್ಯ ಸುಮಾರು 100ಕ್ಕೂ ಹೆಚ್ಚಿನ ಬೀದಿನಾಯಿಗಳಿಗೆ ಚುಚ್ಚುಮದ್ದು ನೀಡಲಾಗಿದೆ.

  • ಹೆಂಗಸರು ಸೆಲ್ಫಿ ಸೆಲ್ಫಿ ಎಂದು ನನ್ನನ್ನು ಹಿಡಿದುಕೊಳ್ಳುತ್ತಾರೆ: ಸಿಎಂ

    ಹೆಂಗಸರು ಸೆಲ್ಫಿ ಸೆಲ್ಫಿ ಎಂದು ನನ್ನನ್ನು ಹಿಡಿದುಕೊಳ್ಳುತ್ತಾರೆ: ಸಿಎಂ

    ಚಾಮರಾಜನಗರ: ಇತ್ತೀಚಿನ ದಿನಗಳಲ್ಲಿ ಸೆಲ್ಫಿ ಮೂಲಕ ಸುದ್ದಿಯಾಗಿದ್ದ ಸಿದ್ದರಾಮಯ್ಯ ಈಗ ಸೆಲ್ಫಿ ಅಂದರೆ ದೊಡ್ಡ ಹಿಂಸೆ ಎಂದು ಹೇಳಿದ್ದಾರೆ.

    ಇಂದು ಚಾಮರಾಜನಗರದಲ್ಲಿ ದಿ. ಮಹದೇವಪ್ರಸಾದ್ ಸಮಾಧಿಗೆ ಪೂಜೆ ಮಾಡಲು ತೆರಳಿದ್ದರು. ಪೂಜೆ ಮಾಡಿ ವಾಪಸ್ ಬಂದು ಫೋಟೋ ತೆಗೆದುಕೊಳ್ಳುವಾಗ ಈ ರೀತಿ ಒಂದು ಹಾಸ್ಯ ಚಟಾಕಿಯನ್ನು ಸಿಡಿಸಿದ್ದಾರೆ.

    ಮದುವೆಗಳಿಗೆ ಹಾಗೂ ಕಾರ್ಯಕ್ರಮಗಳಿಗೆ ಹೋದರೆ ಹೆಂಗಸರು ಸೆಲ್ಫಿ ಸೆಲ್ಫಿ ಎಂದು ನನ್ನನ್ನು ಹಿಡಿದು ಕೊಳ್ಳುತ್ತಾರೆ. ಅಯ್ಯೋ ಅದು ದೊಡ್ಡ ಹಿಂಸೆ ಎಂದು ಸೆಲ್ಫಿ ಕ್ರೇಜ್ ಬಗ್ಗೆ ಮಾತನಾಡಿದ್ದಾರೆ.

    ಈ ಹಿಂದೆ ಶಿವಮೊಗ್ಗದಲ್ಲಿ ನಡೆದಿದ್ದ ಹಕ್ಕು ಪತ್ರ ವಿತರಣಾ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಆಗಮಿಸಿದ್ದರು. ಈ ವೇಳೆ ಹಲವು ವಿದ್ಯಾರ್ಥಿನಿಯರು ಮುಖ್ಯಮಂತ್ರಿಗಳೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದರು. ಸಿಎಂ ಜೊತೆ ವಿದ್ಯಾರ್ಥಿನಿ ಸೆಲ್ಫಿ ಕ್ಲಿಕ್ಕಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಈ ಹಿಂದೆ ಸಿಎಂ ಮಂಗಳೂರಿನಲ್ಲಿ ಮೇಯರ್ ಕವಿತಾ ಸನೀಲ್ ಅವರ ಹೊಟ್ಟೆಗೆ ಪಂಚ್ ಕೊಟ್ಟಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 2016ರಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತರೀಕೆರೆ ತಾಲೂಕು ಪಂಚಾಯ್ತಿ ಸದಸ್ಯೆಯಾಗಿರುವ ಗಿರಿಜಾ ಶ್ರೀನಿವಾಸ್ ಎಂಬವರು ಸಿಎಂಗೆ ಮುತ್ತು ಕೊಟ್ಟಿದ್ದರು.

  • ಕೆಟ್ಟ ಕಾಫಿ ಕೊಟ್ಟದ್ದಕ್ಕೆ ಕೆನ್ನೆಗೆ ಏಟು: ಪತ್ನಿಯನ್ನು ಕೊಂದ ಪತಿ ಅರೆಸ್ಟ್

    ಕೆಟ್ಟ ಕಾಫಿ ಕೊಟ್ಟದ್ದಕ್ಕೆ ಕೆನ್ನೆಗೆ ಏಟು: ಪತ್ನಿಯನ್ನು ಕೊಂದ ಪತಿ ಅರೆಸ್ಟ್

    ಚಾಮರಾಜನಗರ: ಕೆಟ್ಟ ಕಾಫಿ ಕೊಟ್ಟಿದ್ದೀಯಾ ಎಂದು ಪತಿಯೊಬ್ಬ ಪತ್ನಿಯ ಕೆನ್ನೆ ಹೊಡೆದು ಕೊಲೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೆಲಂಬಳ್ಳಿ ಗ್ರಾಮದಲ್ಲಿ ಜರುಗಿದೆ.

    ಮಮತಾ (24) ಕೊಲೆಯಾದ ಮಹಿಳೆ. ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ಶಿವಕುಮಾರ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ವ್ಯವಸಾಯ ಮಾಡುತ್ತಿರುವ ಶಿವಕುಮಾರ್ ಮಮತಾ ದಂಪತಿಗೆ ಎರಡು ಗಂಡು ಮಕ್ಕಳಿದ್ದು, ಇಂದು ಬೆಳಗ್ಗೆ ಒಬ್ಬ ಮಗನನ್ನು ಶಿವಕುಮಾರ್ ಶಾಲೆಗೆ ಬಿಟ್ಟು ಮನೆಗೆ ಬಂದಿದ್ದಾನೆ. ಬೆಳಿಗ್ಗೆ ತಿಂಡಿ ತಿನ್ನುವ ವೇಳೆ ಮಮತಾ ನಿನ್ನೆಯ ಹಾಲನ್ನು ಹಾಕಿ ಕಾಫಿ ಮಾಡಿಕೊಟ್ಟಿದ್ದಾರೆ.

    ಕಾಫಿಯನ್ನು ಕುಡಿದ ಕೂಡಲೇ ಸಿಟ್ಟಾದ ಶಿವಕುಮಾರ್ ಕೆಟ್ಟ ಕಾಫಿ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿ, ಅಲ್ಲೇ ಪತ್ನಿಯ ಕೆನ್ನೆಗೆ ಬಲವಾಗಿ ಹೊಡೆದಿದ್ದಾನೆ. ಈ ಪೆಟ್ಟನ್ನು ತಾಳಲಾರದೇ ಮಮತಾ ಅಲ್ಲೇ ಕುಸಿದುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪತ್ನಿ ಸಾವನ್ನಪ್ಪಿದ್ದನ್ನು ತಿಳಿದ ಶಿವಕುಮಾರ್ ಯಾರಿಗೂ ನನ್ನ ಮೇಲೆ ಅನುಮಾನ ಬಾರದೇ ಇರಲೆಂದು ಶವವನ್ನು ಸೀರೆ ಬಳಸಿ ಮೇಲಕ್ಕೆ ಕಟ್ಟಿ ಮನೆಯಿಂದ ಕಾಲ್ಕಿತ್ತಿದ್ದಾನೆ.

    ಬೆಳಕಿಗೆ ಬಂದಿದ್ದು ಹೇಗೆ?
    ಸಂಜೆ ವೇಳೆ ಮಮತಾ ಮನೆಗೆ ಪರಿಚಯಸ್ಥರು ಹೋಗಿದ್ದಾರೆ. ಈ ವೇಳೆ ಒಳಗಡೆ ಶವ ನೇತಾಡುತ್ತಿರುವುದನ್ನು ನೋಡಿ ಕೂಡಲೇ ಮಮತಾ ಪೋಷಕರಿಗೆ ಕರೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪತಿ ಶಿವಕುಮಾರ್‍ಗೂ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.

    ಪೊಲೀಸರು ಸ್ಥಳಕ್ಕೆ ಬಂದು ಆತ್ಮಹತ್ಯೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ. ಈ ಸಂದರ್ಭದಲ್ಲಿ ಪರಿಚಯದ ವ್ಯಕ್ತಿಗಳು ದಂಪತಿ ಮಧ್ಯೆ ಕೌಟುಂಬಿಕ ವಿಚಾರದ ಬಗ್ಗೆ ಗಲಾಟೆ ನಡೆಯುತ್ತಲೇ ಇತ್ತು ಎನ್ನುವುದನ್ನು ತಿಳಿಸಿದ್ದಾರೆ. ಈ ವಿಚಾರ ತಿಳಿದು ಪೊಲೀಸರು ಮತ್ತು ಪೋಷಕರಿಗೆ ಅನುಮಾನ ಬಂದು ಮತ್ತಷ್ಟು ಪ್ರಶ್ನೆ ಕೇಳಿದಾಗ ಶಿವಕುಮಾರ್ ನಡೆದ ಘಟನೆಯನ್ನು ವಿವರಿಸಿದ್ದಾನೆ ಎಂದು ಮಮತಾ ಸಹೋದರ ಪುನೀತ್ ಹೇಳಿದ್ದಾರೆ.

    ವಿಚಾರ ತಿಳಿದ ಮಮತಾ ಪೋಷಕರು ಶಿವಕುಮಾರ್ ವಿರುದ್ಧ ದೂರು ನೀಡಿದ್ದು, ಪೊಲೀಸರು ಶಿವಕುಮಾರ್‍ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

  • ಕುಡಿಯೋಕೆ ನೀರಿಲ್ಲದೆ ಸಾವನ್ನಪ್ಪುತ್ತಿವೆ ಪ್ರಾಣಿಗಳು: ಇಲ್ಲಿದೆ ಕರ್ನಾಟಕದ ಬರದ ಚಿತ್ರಣ

    ಕುಡಿಯೋಕೆ ನೀರಿಲ್ಲದೆ ಸಾವನ್ನಪ್ಪುತ್ತಿವೆ ಪ್ರಾಣಿಗಳು: ಇಲ್ಲಿದೆ ಕರ್ನಾಟಕದ ಬರದ ಚಿತ್ರಣ

    ಅರುಣ್ ಸಿ  ಬಡಿಗೇರ್
    ಬೆಂಗಳೂರು: ಸಾಯುವ ಸ್ಥಿತಿಯಲ್ಲಿ ಬಾಯ್ತೆರೆದು ನಿಂತಿದ್ದಾಳೆ ಧರಿತ್ರಿ. ಹನಿ ನೀರಿಗಾಗಿ ಪರದಾಡುತ್ತಿದ್ದಾರೆ ಭೂ ತಾಯಿ ಮಕ್ಕಳು. ಇನ್ನೊಂದು ತಿಂಗಳು ಕಳೆದರೆ ಬಿಸಿಲಿನ ಬೇಗುದಿಗೆ ಸುಟ್ಟು ಕರಕಲಾಗಲಿವೆ ದೇಹಗಳು. ಒಣಗಿ ಹೋಗಲಿವೆ ಮರಗಿಡಗಳು. ಅನಾಥ ಶವವಾಗಿ ಬೀಳಲಿವೆ ಪ್ರಾಣಿ ಪಕ್ಷಿಗಳು. ಬತ್ತಿ ಹೋಗಿವೆ ಕೆರೆ ಕಟ್ಟೆಗಳು. ಬರಿದಾಗಿದೆ ನದಿಗಳ ಒಡಲು. ಇಂಗಿ ಹೋಗಿದೆ ಭೂ ಜಲದಗಣ್ಣು. ಕಣ್ಣೀರಿಡಲು ಬತ್ತಿ ಹೋಗಿದೆ ದೇಹದ ನೀರು. ಇದೆಲ್ಲವು ರಾಜ್ಯದ ಭೀಕರ ಬರಗಾಲದ ರೌದ್ರ ಚಿತ್ರಣ. ಬರ ಹೇಗಿದೆ ಎನ್ನುವುದನ್ನು ತಿಳಿಯಲು ರಾಜ್ಯದಲ್ಲಿ 2500 ಕಿಮೀ ಸಂಚರಿಸಿ ಪಬ್ಲಿಕ್ ಟಿವಿಯ ತಂಡ ಪ್ರತ್ಯಕ್ಷ ವರದಿ ಮಾಡಿದೆ. ಈ ಸಂದರ್ಭದಲ್ಲಿ ನಮ್ಮ ತಂಡಕ್ಕೆ ಕಂಡಿರೋ ಬರಗಾಲದ ಸ್ಥಿತಿಯನ್ನ ನಿಮ್ಮ ಮುಂದೆ ಇಡುವ ಪ್ರಯತ್ನವಿದು.

    ನೀರಿನ ವಿಷ್ಯದಲ್ಲಿ ಬೆಂಗಳೂರಿಗರು ಪುಣ್ಯವಂತರು. 4-5 ಕಿಮೀ ಬಿಂದಿಗೆ ಹಿಡಿದುಕೊಂಡು ನೀರು ಹೊತ್ತು ತರೋ ಪರಿಸ್ಥಿತಿ ಇಲ್ಲಿಲ್ಲ. ಶಾಲೆಬಿಟ್ಟು ನೀರು ತರಬೇಕಾದ ಅನಿವಾರ್ಯತೆ ಇಲ್ಲಿಲ್ಲ. ನೀರು ತರದೆ ಇದ್ದರೆ ಅಪ್ಪ ಅಮ್ಮನ ಕಡೆ ಹೊಡಿಸಿಕೊಳ್ಳುವಷ್ಟು ಹೀನಾಯ ಸ್ಥಿತಿ ಇಲ್ಲಿನ ಮಕ್ಕಳಿಗೆ ಬಂದಿಲ್ಲ. ಕೆಲಸ ಬಿಟ್ಟು ನೀರಿಗಾಗಿ ಬೋರ್‍ವೆಲ್ ಮುಂದೆ ಸರತಿ ಸಾಲಿನಲ್ಲಿ ನಿಲ್ಲೋ ಸ್ಥಿತಿ ಇಲ್ಲಿಲ್ಲ. ನಿದ್ದೆಗೆಟ್ಟು ಕರೆಂಟ್‍ಗಾಗಿ ಕಾದು ರಾತ್ರಿಯೆಲ್ಲ ನೀರಿಗಾಗಿ ಅಲೆದಾಡೋ ಪ್ರಸಂಗ ಬಂದಿಲ್ಲ. ಕುಡಿಯೋ ನೀರಿಗಾಗಿ ಒಂದು ಕಡೆ, ಬಳಸೋ ನೀರಿಗಾಗಿ ಇನ್ನೊಂದು ಕಡೆ ಹೋಗಿ ಬಿಂದಿಗೆ ತುಂಬಿಕೊಂಡು ಬರೋ ದುರ್ದೈವ ಇಲ್ಲಿಲ್ಲ. ನೀರಿಲ್ಲದ ಊರು ಅಂತ ಹೆಣ್ಣು ಕೊಡದೇ ಇರುವಷ್ಟು ಬರಗೆಟ್ಟು ಹೋಗಿಲ್ಲ ಈ ಬೆಂಗಳೂರು. ಬತ್ತಿಹೋದ ನದಿಯಲ್ಲಿ 5 ಅಡಿ ಗುಂಡಿ ತೋಡಿ ಬಂದ ನೀರನ್ನ ಗಂಟೆ ಗಟ್ಟಲೆ ಕುಳಿತು ಒಂದು ಬಿಂದಿಗೆ ತುಂಬಿಸಿಕೊಂಡು 4 ಕಿಮೀ ನಡೆದುಕೊಂಡು ಹೋಗುವ ಹೀನಾಯ ಸ್ಥಿತಿ ಬೆಂಗಳೂರಿನಲ್ಲಿ ಕಾಣಿಸುತ್ತಿಲ್ಲ. ಎಲ್ಲೋ ಹರಿಯೋ ನದಿಯಿಂದ ನೀರನ್ನ ಪಡೆದು ದಾಹ ತೀರಿಸಿಕೊಳ್ಳೋ ಬೆಂಗಳೂರಿನವರಷ್ಟು ಪುಣ್ಯವಂತರು ಹಳ್ಳಿಯ ಜನರಲ್ಲ.

    ಜಲಾಶಯಗಳಲ್ಲಿ ವಾಸನೆ ಬರುತ್ತಿದೆ ನೀರು
    ಕೆಆರ್‍ಎಸ್, ಹಾರಂಗಿ, ಹೇಮಾವತಿ, ಕಬಿನಿ ಜಲಾಶಯ ಸೇರಿದಂತೆ ಹಲವು ಜಲಾಶಯಗಳಲ್ಲಿ ನೀರು ಕಪ್ಪಾಗುತ್ತಿದೆ. ಜಲಾಶಯಗಳು ಬರಿದಾಗುವ ಸ್ಥಿತಿ ಬಂದೊದಗಿದೆ. ಜಲಾಶಯದ ಹಿನ್ನಿರಿನ ಹತ್ತಿರ ಹೋಗ್ತಿದ್ದಂತೆ ಮೀನು ಸತ್ತಾಗ ಬರೋ ವಾಸಯಂತೆ ನೀರು ವಾಸನೆ ಬರುತ್ತಿದೆ. ಈ ನೀರನ್ನ ಶುದ್ಧಿಕರಿಸಿ ಬೇಸಿಗೆಯಲ್ಲಿ ಕುಡಿಯೋಕೆ ನೀರು ಸರಬರಾಜು ಮಾಡಲಾಗುತ್ತೆ. ಇನ್ನು ಈ ಜಲಾಶಯದ ನೀರು ನಾಲೆಗಳ ಮೂಲಕ ಮಂಡ್ಯ ಜಿಲ್ಲೆಗೆ ತಲುಪಬೇಕು. ಆದ್ರೆ ನಾಲೆಯಲ್ಲಿ ನೀರನ್ನ ಬಿಡಲಾಗುತ್ತಿಲ್ಲ. ಹಾಗಾಗಿ ನಾಲೆಯನ್ನ ನಂಬಿರೋ ಮಂಡ್ಯ ಜನಕ್ಕೆ ಎಪ್ರಿಲ್ ನಂತರ ಹಾಹಾಕಾರ ಉಂಟಾಗೋದ್ರಲ್ಲಿ ಯಾವುದೇ ಡೌಟೇ ಇಲ್ಲ.

    ನಾಗರಹೊಳೆ ಹಾಗೂ ಬಂಡಿಪುರ ಕಾಡು ಪ್ರಾಣಿಗಳು ನಂಬಿರೋ ಕಬಿನಿ ಜಲಾಶಯದ ನೀರು ಬರಿದಾಗುತ್ತಾ ಸಾಗಿದೆ. ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಈ ಕಾಡು ಪ್ರಾಣಿಗಳ ಸ್ಥಿತಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇನ್ನೊಂದು ದುರ್ದೈವ ಅಂದ್ರೆ ಜಲಾಶಯದ ಪಕ್ಕದಲ್ಲೆ ಇರೋ ಹತ್ತಾರು ಹಳ್ಳಿಗಳಿಗೆ ಕುಡಿಯೋಕೆ ನೀರು ಸಿಗೋದೆ ಇಲ್ಲ. ಜಲಾಶಯದಿಂದ ಸುತ್ತಲಿರೋ ಹಳ್ಳಿಗಳ ಕೆರೆಗಳಿಗೆ ನೀರನ್ನ ತುಂಬಿಸಬೇಕು ಅನ್ನೋ ಕನಿಷ್ಟ ಜ್ಞಾನವೂ ನಮ್ಮ ಜನಪ್ರತಿನಿಧಿಗಳಿಗಿಲ್ಲ.

    ಜಲಾಶಯವೇ ಬತ್ತಿ ಹೋದಾಗ
    50 ವರ್ಷದ ಇತಿಹಾಸ ಹೊಂದಿರೋ ಚಾಮರಾಜನಗರ ಜಿಲ್ಲೆ ಚಿಕ್ಕಹೊಳೆ ಜಲಾಶಯ ಸಂಪೂರ್ಣ ಬರಿದಾಗಿದೆ. ಧರಿತ್ರಿ ಹನಿ ನೀರಿಗೆ ಬಾಯ್ತೆರೆದು ಬಿಸಿಲಿನ ದವಡೆಯಲ್ಲಿ ಒದ್ದಾಡುತ್ತಿದ್ದಾಳೆ. ಸುತ್ತಮುತ್ತಲಿನ 21 ಹಳ್ಳಿಗಳ ಜನರ ದಾಹ ನೀಗಿಸುತ್ತಿದ್ದ ಈ ಜಲಾಶಯದ ದಾಹ ತೀರಿಸುವವರು ಯಾರು. ಈ ಜಲಾಶಯದ ಸುತ್ತಲಿರೋ ಕಾಡು ಪ್ರಾಣಿಗಳಂತೂ ನೀರಿಲ್ಲದೆ ಸಾವಿನ ದವಡೆಯಲ್ಲಿವೆ. ಒಂದು ಕಡೆ ಕಾಡ್ಗಿಚ್ಚು ಇನ್ನೊಂದು ಕಡೆ ನೀರಿನ ಬವಣೆ. ಇದರ ಮಧ್ಯೆ ಕಾಡು ಪ್ರಾಣಿಗಳು ದಿಕ್ಕು ಕಾಣದೆ ಸಾಯೋ ಸ್ಥಿತಿಗೆ ಬಂದು ತಲುಪಿವೆ. ಮನುಷ್ಯರೇನೋ ಟ್ಯಾಂಕರ್ ತರಿಸಿ ನೀರು ಕುಡಿತಾರೆ, ಆದ್ರೆ ಪ್ರಾಣಿಗಳ ಸ್ಥಿತಿ ಏನು..?

    ಮರಳು ದಂಧೆಗೆ ಬೀಳುತ್ತಾ ಕಡಿವಾಣ?
    ಕಾವೇರಿ ಉಗಮ ಸ್ಥಾನದಲ್ಲಿ ಹೆಚ್ಚು ಮಳೆ ಸುರಿದಾಗ ನಮ್ಮ ಆಸ್ತಿ ಪಾಸ್ತಿ ಹಾನಿಯಾಗುತ್ತೆ, ಬೆಳೆದ ಬೆಳೆ ನಾಶವಾಗುತ್ತೆ. ಆಗ ನಮ್ಮನ್ನ ನೋಡೋರೆ ದಿಕ್ಕಿರಲ್ಲ. ಆಗ ಮಂಡ್ಯದ ಜನ ಖುಷಿ ಪಡುತ್ತಾರೆ. ಕಾವೇರಿ ತುಂಬಿ ಹರಿಯುತ್ತಿದ್ದಾಳೆಂದು ಸಂಭ್ರಮಿಸ್ತಾರೆ. ಆದ್ರೆ ನಾವಿಲ್ಲ ಕಣ್ಣೀರು ಹಾಕ್ತೀವಿ ಅಂತಾ ಕೊಡಗಿನ ಭಾಗಮಂಡಲದ ಜನ ನೋವಿನಿಂದ ಹೇಳಿಕೊಳ್ತಾರೆ. ಇದಲ್ಲದೆ ಕಾವೇರಿ ಒಡಲಲ್ಲಿ ಮರಳುದಂಧೆ ಕೂಡ ಎಗ್ಗಿಲ್ಲದೆ ಸಾಗಿದೆ, ಇದೆಲ್ಲದಕ್ಕಿಂತ ಹೆಚ್ಚಾಗಿ ಕಾವೇರಿ ನದಿಯ ಒತ್ತುವರಿ ಮಾಡಿ ಕಟ್ಟಡಗಳನ್ನ ಕಟ್ಟಿಕೊಳ್ಳೋಕೆ ಜನ ಶುರು ಮಾಡಿದ್ದಾರೆ. ಚರಂಡಿ ನೀರನ್ನೆಲ್ಲ ಕಾವೇರಿ ನದಿಗೆ ಹರಿಯಬಿಡ್ತಿದ್ದಾರೆ. ಇದರ ಮಧ್ಯೆ ಕಾವೇರಿ ಕಲುಷಿತಗೊಂಡು ಬತ್ತಿ ಹೋಗುತ್ತಿದ್ದಾಳೆ. ಈಗಲೇ ಇದರ ಸಂರಕ್ಷಣೆ ಮಾಡದೇ ಇದ್ದರೆ ಗಂಗಾ ನದಿಯಂತೆ ಸಂಪೂರ್ಣ ಮಲೀನವಾಗೋದ್ರಲ್ಲಿ ಯಾವುದೇ ಸಂದೇಹವಿಲ್ಲ.

    ಎಲ್ಲೆಲ್ಲೂ ಜಾನುವಾರುಗಳ ಮೂಳೆಗಳೆ ಪತ್ತೆ
    ಇನ್ನು ನಮ್ಮ ತಂಡ ತೆರಳಿದ ಹಲವು ಜಲಾಶಯಗಳು, ಬತ್ತಿಹೋದ ನದಿ, ಹೊಳೆ, ಕಾಲುವೆ, ಕೆರೆ ಪಕ್ಕದಲ್ಲಿ ಪ್ರಾಣಿಗಳ ಮೂಳೆಗಳು ಕಂಡುಬಂದ್ವು. ಒಂದು ಕಡೆ ಮಳೆ ಇಲ್ಲದೆ ಹಸಿರೆಲ್ಲ ಮರೆಯಾಗಿದೆ. ಇನ್ನೊಂದು ಕಡೆ ಬಿಸಿಲಿನ ಝಳ. ಇದರ ಮಧ್ಯೆ ಕುಡಿಯೋಕೆ ನೀರಿಲ್ಲದೆ ಅನೇಕ ಪ್ರಾಣಿಗಳು ಸಾವನ್ನಪ್ಪುತ್ತಿವೆ. ಪ್ರಾಣಿಗಳ ಅವಶೇಷ ನೋಡ್ತಾ ಇದ್ರೆ ಕಣ್ಣಂಚಲ್ಲಿ ನೀರು ಬರದೆ ಇರದು. ಇನ್ನೂ ಕೆಲವು ಕಡೆಯಲ್ಲಂತೂ ನೀರಿಲ್ಲದೆ ಮೀನುಗಳ ಮಾರಣಹೋಮ ನಡೆಯುತ್ತಿದೆ. ಜಲಚರಗಳು ಜೀವನ್ಮರಣದ ಮಧ್ಯೆ ಹೋರಾಡುತ್ತಿವೆ. ಬುದ್ಧಿ ಜೀವಿ ಮನುಷ್ಯ ಮಾತ್ರ ದುಡ್ಡುಕೊಟ್ಟು ನೀರು ಖರೀದಿಸ್ತಾನೆ. ಆದ್ರೆ, ಮೂಖ ಪ್ರಾಣಿಗಳ ವೇದನೆಯನ್ನ ಕೇಳೋರಾದ್ರು ಯಾರು..?

    ಪ್ರಾಣಿಗಳಿಗಾಗಿ ಟ್ಯಾಂಕರ್ ನೀರು.
    ಕುಡಿಯೋಕೆ ನೀರು ಸಿಕ್ರೆ ಸಾಕು ಅನ್ನೋ ಈ ಕಾಲದಲ್ಲಿ ಒಂದು ವಿಶೇಷ ಗ್ರಾಮವೊಂದಿದೆ. ಈ ರಂಗಪುರ ಗ್ರಾಮ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿದೆ. ಈ ಗ್ರಾಮದ ಜನರಿಗೆ ಕುಡಿಯೋಕೆ ನೀರಿನ ಸಮಸ್ಯೆ. ಆದ್ರೆ, ಈ ಗ್ರಾಮದ ಜನ ಮಾತ್ರ ತಮಗೆ ಎಷ್ಟೆ ಕಷ್ಟವಾದ್ರು ಚಿಂತೆಯಿಲ್ಲ ಪ್ರಾಣಿಗಳು ನೀರಿಲ್ಲದೆ ಸಾವನ್ನಪ್ಪಬಾರದು ಅಂತಾ ಒಣಗಿ ಹೋಗಿರೋ ಕೆರೆಗೆ ವಾರಕ್ಕೊಮ್ಮೆ ಟ್ಯಾಂಕರ್‍ನಿಂದ ನೀರು ಸುರಿಯುತ್ತಿದ್ದಾರೆ. ಕೆರೆ ತುಂಬಿಸೋಕೆ ಸಾಧ್ಯವಾಗದೆ ಇದ್ದರು ಕುರಿ, ದನಕರುಗಳು, ಮಂಗಗಳು, ನಾಯಿಗಳು, ಪಕ್ಷಿಗಳು ತಮ್ಮ ದಾಹ ತೀರಿಸಿಕೊಳ್ಳುತ್ತಿವೆ.

    ಗೋ ಶಾಲೆಗಳು
    ನಮ್ಮ ತಂಡ ಹೋದ ಕೆಲವು ಕಡೆ ಗೋ ಶಾಲೆಗಳು ಸಿಕ್ವು. ಸರ್ಕಾರವೇನೋ ಗೋ ಶಾಲೆಗಳ ವ್ಯವಸ್ಥೆ ಮಾಡ್ತಿದೆ. ಆದ್ರೆ, ಕೆಲ ಗೋ ಶಾಲೆಗಳಲ್ಲಿ ಚಿರತೆ ಕಾಟವಿದೆ. ಇನ್ನೂ ಕೆಲವು ಕಡೆ ರಾತ್ರಿ ವಿದ್ಯುತ್ ಸಂಪರ್ಕವೇ ಇಲ್ಲ. ಗೋವುಗಳ ಜೊತೆ ಬಂದ ಮಾಲೀಕರು ಕತ್ತಲಲ್ಲೆ ರಾತ್ರಿ ಕಳೆಯೋ ಹಾಗಾಗಿದೆ. ಹಾವುಗಳ ಕಾಟ ಬೇರೆ ಇದೆ. ಗೋವುಗಳಿಗೆ ನೀರಿನ ವ್ಯವಸ್ಥೆ ಏನೋ ಮಾಡಿದ್ದಾರೆ. ಆದ್ರೆ ಗೋವುಗಳ ಜೊತೆ ಬಂದವರು ಉಪವಾಸ ಕೂರುವಂತಾಗಿದೆ. ಮನೆಗೆ ಹೋಗಿ ಬರಬೇಕಂದ್ರೆ ಹಳ್ಳಿಯಿಂದ 30-40 ಕಿಮೀ ದೂರದಲ್ಲಿದ್ದಾರೆ. ಹೋಗಿ ಬರೋದಕ್ಕೂ ವ್ಯವಸ್ಥೆ ಇಲ್ಲ. ಯಾಕಂದ್ರೆ ಬಹಳಷ್ಟು ಗೋ ಶಾಲೆಗಳಿರೋದು ಮುಖ್ಯ ರಸ್ತೆಯಿಂದ ಬಹುದೂರ ಒಳಗಡೆ. ಅಲ್ಲಿ ಬಸ್ ಸೌಲಭ್ಯವಂತೂ ಇಲ್ಲವೆ ಇಲ್ಲ. ಇದೇನೂ ದೊಡ್ಡ ಸಮಸ್ಯೆ ಅಲ್ಲ. ಆದ್ರೂ ಸಂಬಂಧ ಪಟ್ಟವರು ಸ್ವಲ್ಪ ವ್ಯವಸ್ಥೆ ಮಾಡಿದ್ರೆ ಒಳ್ಳೆಯದಾಗುತ್ತೆ.

  • ಡ್ರೋನ್‍ನಲ್ಲಿ ಮಲೆ ಮಹದೇಶ್ವರ ಜಾತ್ರಾ ವೈಭವ ವೀಕ್ಷಿಸಿ

    ಡ್ರೋನ್‍ನಲ್ಲಿ ಮಲೆ ಮಹದೇಶ್ವರ ಜಾತ್ರಾ ವೈಭವ ವೀಕ್ಷಿಸಿ

    ಚಾಮರಾಜನಗರ: ಕೊಳ್ಳೆಗಾಲ ತಾಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ವೈಭವದ ಶಿವರಾತ್ರಿ ಜಾತ್ರಾಮಹೋತ್ಸವ ವಿಜೃಂಭಣೆಯಿಂದ ಜರುಗಿತು.

    ರಾಜ್ಯದ ನಾನಾ ಭಾಗಗಳಿಂದ ಭಕ್ತ ಸಮೂಹವೇ ಹರಿದು ಬಂದಿತ್ತು. ‘ಉಘೇ ಮಾದಪ್ಪ ಉಘೇ ಮಾದಪ್ಪ’ ಎಂಬ ಉದ್ಗೋಷವನ್ನು ಹೇಳುತ್ತಾ ಭಕ್ತರು ದೇವರ ಜಾತ್ರೆಯಲ್ಲಿ ಭಾಗವಹಿಸಿದ್ದರು.

    ಜಾತ್ರೆಯ ಸಂಭ್ರಮ ಸಡಗರವನ್ನು ಡ್ರೋನ್ ಕ್ಯಾಮರಾ ದಲ್ಲಿ ಸೆರೆಹಿಡಿಯಲಾಗಿದೆ. ಮಲೆ ಮಹದೇಶ್ವರ ಬೆಟ್ಟದ ರಾತ್ರಿ ಮತ್ತು ಹಗಲಿನಲ್ಲಿ ಜಾತ್ರೆಯ ಸೌಂದರ್ಯ ಹೇಗಿರುತ್ತದೆ ಎನ್ನುವುದನ್ನು ನೀವೇ ನೋಡಿ.

    https://www.youtube.com/watch?v=Hpcx0MtV_sk