Tag: Championship

  • ಥಾಮಸ್ ಕಪ್ ಚಾಂಪಿಯನ್ಸ್ ಟೀಂನಲ್ಲಿದ್ದ ಬೆಂಗಳೂರಿನ ಲಕ್ಷ್ಯ ಸೇನ್‌ಗೆ ರಾಜ್ಯ ಸರ್ಕಾರದ ಗೌರವ

    ಥಾಮಸ್ ಕಪ್ ಚಾಂಪಿಯನ್ಸ್ ಟೀಂನಲ್ಲಿದ್ದ ಬೆಂಗಳೂರಿನ ಲಕ್ಷ್ಯ ಸೇನ್‌ಗೆ ರಾಜ್ಯ ಸರ್ಕಾರದ ಗೌರವ

    ಬೆಂಗಳೂರು: ಇದೇ ಮೊದಲ ಬಾರಿಗೆ ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿರುವ ಭಾರತ ತಂಡಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಕೆ.ಸಿ.ನಾರಾಯಣಗೌಡ ಅಭಿನಂದನೆ ಸಲ್ಲಿಸಿದ್ದಾರೆ.

    KCN

    14 ಬಾರಿ ಚಾಂಪಿಯನ್ ಇಂಡೋನೇಷ್ಯಾ ತಂಡವನ್ನು ಮಣಿಸಿರುವ ಭಾರತ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ತಂಡದಲ್ಲಿ ಬೆಂಗಳೂರಿನ ಆಟಗಾರ ಇರುವುದು ಕರ್ನಾಟಕಕ್ಕೆ ಮತ್ತಷ್ಟು ಹೆಮ್ಮೆ ತರಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸದ್ಯ ಬೆಂಗಳೂರಿನ ದ್ರಾವಿಡ್ ಪಡುಕೊಣೆ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ಲಕ್ಷ್ಯ ಸೇನ್ ತರಬೇತಿ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಥಾಮಸ್ ಕಪ್ ಗೆದ್ದ ಭಾರತ ತಂಡದೊಂದಿಗೆ ಇಡೀ ದೇಶವೇ ಸಂಭ್ರಮಿಸಿದೆ: ಮೋದಿ

    THOMAS (1)

    ಭಾರತದ ಕ್ರೀಡಾಪಟುಗಳ ಸಾಧನೆ ಶ್ಲಾಘನೀಯವಾಗಿದ್ದು, ಈ ಐತಿಹಾಸಿಕ ಗೆಲುವು ನಮ್ಮ ದೇಶದ ಯುವಜನತೆಗೆ ಸ್ಫೂರ್ತಿ ನೀಡಲಿದೆ. ಭಾರತದ ಗೆಲುವಿಗೆ ತಮ್ಮದೇ ಕೊಡುಗೆ ನೀಡಿರುವ ಬೆಂಗಳೂರಿನ ಲಕ್ಷ್ಯ ಸೇನ್ ಅವರಿಗೆ ರಾಜ್ಯ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಜೊತೆಗೆ ಲಕ್ಷ್ಯ ಸೇನ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ರಾಷ್ಟ್ರೀಯ ಮಟ್ಟದ ಐಸ್ ಸ್ಕೇಟಿಂಗ್: ಮಂಗಳೂರಿನ ಅನಘಾಗೆ ಬೆಳ್ಳಿ ಪದಕ

    ರಾಷ್ಟ್ರೀಯ ಮಟ್ಟದ ಐಸ್ ಸ್ಕೇಟಿಂಗ್: ಮಂಗಳೂರಿನ ಅನಘಾಗೆ ಬೆಳ್ಳಿ ಪದಕ

    ಮಂಗಳೂರು: ದೆಹಲಿಯ ಗುರುಗ್ರಾಮದಲ್ಲಿ ಐಸ್ ಸ್ಕೇಟಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಆಯೋಜಿಸಿದ ರಾಷ್ಟ್ರೀಯ ಸ್ಪೀಡ್ ಐಸ್ ಸ್ಕೇಟಿಂಗ್ ಚಾಂಪಿಯನ್‍ಶಿಪ್-2019 ನಲ್ಲಿ ಮಂಗಳೂರಿನ ಅನಘಾ ಬೆಳ್ಳಿ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.

    2019ರ ಆಗಸ್ಟ್ 8 ಹಾಗೂ 9 ರಂದು ನಡೆದ ರಾಷ್ಟ್ರೀಯ ಮಟ್ಟದ ಐಸ್ ಸ್ಕೇಟಿಂಗ್‍ನ 500 ಮೀಟರ್ ಐಸ್ ರಿಂಕ್ ರೇಸ್‍ನ 10 ವರ್ಷದೊಳಗಿನ ವಿಭಾಗದಲ್ಲಿ ಅನಘಾ ಬೆಳ್ಳಿ ಪದಕ ಪಡೆದಿದ್ದಾಳೆ.

    ಮಂಗಳೂರಿನ ಡಾ.ರಾಜೇಶ್ ಹುಕ್ಕೇರಿ ಹಾಗೂ ಡಾ.ಅನಿತಾ ರಾಜೇಶ್ ದಂಪತಿಯ ಪುತ್ರಿಯಾದ ಅನಘಾ ಬಿಜೈ ಲೂಡ್ರ್ಸ್ ಸೆಂಟ್ರಲ್ ಸ್ಕೂಲ್‍ನ 4 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಮಂಗಳೂರಿನ ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್‍ನ ಸದಸ್ಯೆಯಾಗಿರುವ ಅನಘಾ ತರಬೇತುದಾರರಾದ ಮೋಹನ್ ದಾಸ್.ಕೆ ಹಾಗೂ ಜಯರಾಜ್ ಅವರಿಂದ ತರಬೇತಿ ಪಡೆಯುತ್ತಿದ್ದಾಳೆ. ಇದರ ಜೊತೆಗೆ ರಾಷ್ಟ್ರೀಯ ಐಸ್ ಸ್ಕೇಟಿಂಗ್ ತರಬೇತುದಾರ ಅವಧೂತ್ ಥಾವಡೆ ಅವರಿಂದಲೂ ಅನಘಾ ಐಸ್ ಸ್ಕೇಟಿಂಗ್ ತರಬೇತಿ ಪಡೆಯುತ್ತಿದ್ದಾಳೆ.

  • ರಾಷ್ಟ್ರೀಯ ಐಸ್ ಸ್ಕೇಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಬೆಳ್ಳಿ ಪದಕ ಪಡೆದ ಮಂಗ್ಳೂರು ವಿದ್ಯಾರ್ಥಿನಿ

    ರಾಷ್ಟ್ರೀಯ ಐಸ್ ಸ್ಕೇಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಬೆಳ್ಳಿ ಪದಕ ಪಡೆದ ಮಂಗ್ಳೂರು ವಿದ್ಯಾರ್ಥಿನಿ

    ಮಂಗಳೂರು: ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಐಸ್ ಸ್ಕೇಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಮಂಗಳೂರಿನ ಡ್ಯಾಷೆಲ್ ಅಮಂಡಾ ಕೊನ್ಸೆಸ್ಸೊ ಎರಡು ಬೆಳ್ಳಿ ಪದಕ ಪಡೆದಿದ್ದು, ಈ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

    15ನೇ ರಾಷ್ಟ್ರೀಯ ಐಸ್ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನ್ನು ಐಸ್ ಸ್ಕೇಟಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ನವೆಂಬರ್ 17 ಹಾಗೂ 18 ರಂದು ದೆಹಲಿಯಲ್ಲಿ ಆಯೋಜಿಸಿತ್ತು. ಈ ಚಾಂಪಿಯನ್ ಶಿಪ್‍ನ 13 ವರ್ಷದೊಳಗಿನ ವಿಭಾಗದಲ್ಲಿ ಮಂಗಳೂರಿನ ಅಮಂಡಾ ಕೊನ್ಸೆಸ್ಸೊ ಭಾಗವಹಿಸಿ ಬೆಳ್ಳಿ ಪದಕ ಪಡೆದಿದ್ದಾರೆ.

    ಡ್ಯಾಷೆಲ್ ಅಮಂಡಾ ಕೊನ್ಸೆಸ್ಸೊ ನಗರದ ಮಾಲೆಮಾರ್ ನಿವಾಸಿಯಾದ ಫ್ರಾನ್ಸಿಸ್ ಹಾಗೂ ಡೋರಿಸ್ ದಂಪತಿಯ ಪುತ್ರಿಯಾಗಿದ್ದು, ಮಂಗಳೂರಿನ ನೀರುಮಾರ್ಗದ ಕೇಂಬ್ರಿಡ್ಜ್ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ. ಅಲ್ಲದೇ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ಸದಸ್ಯರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸ್ಕೇಟಿಂಗ್ ಸ್ಪರ್ಧೆ: ಹೈ ಫ್ಲೈಯರ್ಸ್ ಕ್ಲಬ್‍ಗೆ 23 ಪದಕ

    ಸ್ಕೇಟಿಂಗ್ ಸ್ಪರ್ಧೆ: ಹೈ ಫ್ಲೈಯರ್ಸ್ ಕ್ಲಬ್‍ಗೆ 23 ಪದಕ

    ಮಂಗಳೂರು: 2018-19 ನೇ ಸಾಲಿನ ಸ್ಪೀಡ್ ರೋಲರ್ ಸ್ಕೇಟಿಂಗ್ ಓಪನ್ ಚಾಂಪಿಯನ್ ಶಿಪ್ ಅ.27 ಮತ್ತು 28ರಂದು ಮಂಗಳೂರಿನ ಅಶೋಕ್ ನಗರದಲ್ಲಿರುವ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನ ಆಶ್ರಯದಲ್ಲಿ ನಡೆಯಿತು.

    8 ವರ್ಷ ಕೆಳಗಿನ ವಿಭಾಗದಲ್ಲಿ ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನ 15 ಸ್ಕೇಟರ್ ಗಳು ಭಾಗವಹಿಸಿ, 5 ಚಿನ್ನ, 5 ಬೆಳ್ಳಿ ಮತ್ತು 13 ಕಂಚಿನ ಪದಕಗಳ ಸಹಿತ ಒಟ್ಟು 23 ಪದಕಗಳನ್ನು ಪಡೆದರು.

    ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನ ಸ್ಕೇಟರ್ ಗಳಾದ ಆಯುಷ್ ಲೆಹೆಲ್ ಮಹೇಶ್ 2 ಚಿನ್ನ, ಸೈದಾ ಐರಾ ಸಫಿಯಾ 2 ಚಿನ್ನ, ಶನೋನ್ ಜಾಯೆಲ್ ಪ್ರಸಾದ್ 1 ಚಿನ್ನ ಹಾಗು 1 ಬೆಳ್ಳಿ, ರಿಷಾ ಶೆಟ್ಟಿ 2 ಬೆಳ್ಳಿ, ತಕ್ಷಕ್ ಎ. ಶೆಟ್ಟಿ 2 ಬೆಳ್ಳಿ, ಆಲಿಯಾ ನೀಲಗಾರ್ 2 ಕಂಚು, ದೇವಿಕಾ ಎಂ. 2 ಕಂಚು, ಆರುಷ್ ಎ ಪುತ್ರನ್ 2 ಕಂಚು, ಕೆ.ಜೆ ಶ್ರೀ ದತ್ತ್ 2 ಕಂಚು, ನಿಝಾ ಆಯೆಷಾ ನಝೀಬ್ 2 ಕಂಚು, ಅಭಿನಂದ್ ಡಿ ಶೆಟ್ಟಿ 2 ಕಂಚು, ಪಿ. ಧನ್ವಿ ಶಾಂತಾರಾಮ್ 1 ಕಂಚು, ದೇಶಿಕ್ ಎಂ 1 ಕಂಚು ಪದಕಗಳನ್ನು ಪಡೆದರು.

    ಪದಕ ವಿಜೇತ ವಿದ್ಯಾರ್ಥಿಗಳೆಲ್ಲರೂ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನ ತರಬೇತುದಾರರಾದ ಮೋಹನ್ ದಾಸ್, ಜಯರಾಜ್ ಮತ್ತು ರಮಾನಂದ್ ಯು. ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv