Tag: champions trophy

  • ಭಾರತ ಬರಲಿ, ಬಾರದೇ ಇರಲಿ ನಾವು ಚಾಂಪಿಯನ್ಸ್‌ ಟ್ರೋಫಿ ಆಯೋಜಿಸುತ್ತೇವೆ: ಪಾಕಿಸ್ತಾನ

    ಭಾರತ ಬರಲಿ, ಬಾರದೇ ಇರಲಿ ನಾವು ಚಾಂಪಿಯನ್ಸ್‌ ಟ್ರೋಫಿ ಆಯೋಜಿಸುತ್ತೇವೆ: ಪಾಕಿಸ್ತಾನ

    ಇಸ್ಲಾಮಾಬಾದ್‌: ಭಾರತ ತಂಡ (Team India) ಪಾಕಿಸ್ತಾನಕ್ಕೆ (Pakistan) ಬಾರದೇ ಇದ್ದರೂ ನಾವು ಚಾಂಪಿಯನ್ಸ್‌ ಟ್ರೋಫಿ (Champions Trophy) ಆಯೋಜಿಸುತ್ತೇವೆ ಎಂದು ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ (PCB) ಐಸಿಸಿ ತಿಳಿಸಿದೆ ಎಂದು ವರದಿಯಾಗಿದೆ.

    ಹೈಬ್ರಿಡ್‌ ಮಾದರಿಯಲ್ಲಿ ಪಂದ್ಯ ನಡೆಸಲು ಸಾಧ್ಯವೇ ಎಂದು ಐಸಿಸಿ (ICC) ಪಿಸಿಬಿಯನ್ನು ಕೇಳಿತ್ತು. ಈ ಪ್ರಶ್ನೆಗೆ ಪಿಸಿಬಿ ಭಾರತ ತಂಡ ಪಾಕ್‌ಗೆ ಬರಲಿ ಅಥವಾ ಬಾರದೇ ಇದ್ದರೂ ಇದ್ದರೂ ನಾವು ಟೂರ್ನಿಯನ್ನು ಆಯೋಜಿಸುಸುತ್ತೇವೆ ಎಂದು ಪತ್ರ ಬರೆದಿದೆ.

    ಭದ್ರತಾ ದೃಷ್ಟಿಯಿಂದ ಭಾರತ ತಂಡ ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿತ್ತು. ಬಳಿಕ ದುಬೈಯಲ್ಲಿ (Dubai) ಹೈಬ್ರಿಡ್‌ ಮಾದರಿಯಲ್ಲಿ ಪಂದ್ಯ ನಡೆಸುವ ಬಗ್ಗೆ ಪ್ರಸ್ತಾಪವಾಗಿತ್ತು. ಈಗ ಈ ಎಲ್ಲಾ ಪ್ರಸ್ತಾಪವನ್ನು ಪಾಕಿಸ್ತಾನ ನಿರಾಕರಿಸಿದೆ. ಇದನ್ನೂ ಓದಿ: ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೆ ಐಸಿಸಿ ಟೂರ್ನಿಗಳಿಗೆ ಬಹಿಷ್ಕಾರ: ಪಾಕ್‌

    ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಇತ್ತೀಚೆಗೆ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸುವ ಸಾಧ್ಯತೆಯನ್ನು ತಳ್ಳಿಹಾಕಿದ್ದರು. ಅಂತಹ ವ್ಯವಸ್ಥೆ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಹೇಳಿದ್ದರು.

    ಈಗಾಗಲೇ ಟಿವಿ ರೈಟ್ಸ್‌ ಮಾರಾಟವಾಗಿರುವ ಕಾರಣ ಭಾರತ ತಂಡ ಒಂದು ವೇಳೆ ಭಾಗವಹಿಸದೇ ಇದ್ದರೆ ಐಸಿಸಿಗೆ ಭಾರೀ ನಷ್ಟವಾಗಲಿದೆ. ಹೀಗಾಗಿ ಐಸಿಸಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬ ಕುತೂಹಲ ಹೆಚ್ಚಾಗಿದೆ. 2025ರ ಫೆಬ್ರವರಿಯಲ್ಲಿ ಚಾಂಪಿಯನ್ಸ್‌ ಟ್ರೋಫಿ ನಡೆಸಲು ಐಸಿಸಿ ಸಿದ್ಧತೆ ನಡೆಸಿದೆ.

    ಭಾರತ ತಂಡವು 2005-2006ರಲ್ಲಿ ರಾಹುಲ್ ದ್ರಾವಿಡ್ (Rahul Dravid) ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು. ಈ ಪಂದ್ಯದಲ್ಲಿ ಇತ್ತಂಡಗಳು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದವು. ನಂತರ ರಾಜತಾಂತ್ರಿಕ ಕಾರಣಗಳಿಂದಾಗಿ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ (ICC) ಟೂರ್ನಿ ಅಥವಾ ಏಷ್ಯಾ ಕಪ್ ಟೂರ್ನಿಗಳಲ್ಲಿ ಮಾತ್ರವೇ ಪರಸ್ಪರ ಮುಖಾಮುಖಿಯಾಗುತ್ತಿವೆ.

    ಭಾರತ ಮತ್ತು ಪಾಕಿಸ್ತಾನ ಇತ್ತಂಡಗಳ ನಡುವಿನ ಪಂದ್ಯವು ಯಾವಾಗಲೂ ರಣರೋಚಕವಾಗಿರುತ್ತವೆ. 2023 ರಲ್ಲಿ ನಡೆದ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಗಳಲ್ಲಿ ಭಾಗವಹಿಸಲು ಪಾಕಿಸ್ತಾನ ತಂಡ ಭಾರತಕ್ಕೆ ಬಂದಿತ್ತು.

  • ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೆ ಐಸಿಸಿ ಟೂರ್ನಿಗಳಿಗೆ ಬಹಿಷ್ಕಾರ: ಪಾಕ್‌

    ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೆ ಐಸಿಸಿ ಟೂರ್ನಿಗಳಿಗೆ ಬಹಿಷ್ಕಾರ: ಪಾಕ್‌

    – ಭಾರತ-ಪಾಕ್‌ ಇರೋದ್ರಿಂದಲೇ ಐಸಿಸಿ ಅಸ್ತಿತ್ವದಲ್ಲಿದೆ ಎಂದ ರಶೀದ್ ಲತೀಫ್

    ಇಸ್ಲಾಮಾಬಾದ್‌: ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿಯಲ್ಲಿ‌ (hampions trophy) ಪಾಲ್ಗೊಳ್ಳುವ ವಿಚಾರದಲ್ಲಿ ಭಾರತ-ಪಾಕಿಸ್ತಾನದ ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಈಗಾಗಲೇ ಪಾಕ್‌ಗೆ ಪ್ರಯಾಣಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ, ಪಿಸಿಬಿ ಮಾತ್ರ ಬರಲೇಬೇಕೆಂದು ಪಟ್ಟು ಹಿಡಿದಿದೆ. ಈ ನಡುವೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB) ಮಹತ್ವದ ಹೇಳಿಕೆಯೊಂದನ್ನು ನೀಡಿದೆ.

    ಪಾಕ್‌ ತಂಡದ ಮಾಜಿ ನಾಯಕ ರಶೀದ್ ಲತೀಫ್, ಭಾರತ ಈ ಬಾರಿ ಪಾಕಿಸ್ತಾನಕ್ಕೆ ಹೋಗದಿದ್ದರೆ, ಐಸಿಸಿ ಕಾರ್ಯಕ್ರಮಗಳನ್ನು ಬಹಿಷ್ಕರಿಸುವ ದೊಡ್ಡ ಹೆಜ್ಜೆಯನ್ನು ಪಿಸಿಬಿ ತೆಗೆದುಕೊಳ್ಳುತ್ತದೆ ಹೇಳಿದ್ದಾರೆ. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರಲ್ಲ; ಹೊಸ ಷರತ್ತು ಮುಂದಿಟ್ಟ ಬಿಸಿಸಿಐ

    ಇದು ದ್ವಿಪಕ್ಷೀಯ ಸರಣಿ ಅಥವಾ ಏಷ್ಯಾ ಕಪ್ ಆಗಿದ್ದರೆ, ಭಾರತವು ಆಡಬೇಕೆ ಅಥವಾ ಬೇಡವೇ ಎಂದು ತಂಡಗಳನ್ನು ಕೇಳಬಹುದಿತ್ತು. ಇದು ದ್ವಿಪಕ್ಷೀಯ ಪಂದ್ಯವಾಗಿದ್ದರೆ, ಪಂದ್ಯವನ್ನು ರದ್ದು ಮಾಡಬಹುದಿತ್ತು. ಆದ್ರೆ ನೀವು ಈಗಾಗಲೇ ಸಹಿ ಮಾಡಿರುವುದರಿಂದ ಐಸಿಸಿ ಒಪ್ಪಂದಗಳನ್ನು ನಿರಾಕರಿಸಲಾಗುವುದಿಲ್ಲ. ಭಾರತವು ಗಟ್ಟಿ ನಿಲುವು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: WPL 2025 | 3ನೇ ಆವೃತ್ತಿಗೆ ಭರ್ಜರಿ ತಯಾರಿ – ರೀಟೆನ್‌ ಪಟ್ಟಿ ರಿಲೀಸ್‌

    ಈಗಾಗಲೇ ಎಲ್ಲಾ ಪ್ರಸಾರಕರು ಮತ್ತು ಪ್ರಾಯೋಜಕರು 2024-31ರ ಅವಧಿಗೆ ಸಹಿ ಮಾಡಿದ್ದಾರೆ. ಭಾರತ ತಂಡ ಭಾಗವಹಿಸಲು ನಿರಾಕರಿಸಿದ್ರೆ ಬಲವಾದ ಕಾರಣ ಇರಬೇಕು. ಬಿಸಿಸಿಐ ಭದ್ರತೆಯ ಕಾರಣಗಳನ್ನು ನೀಡಿ ಟೂರ್ನಿ ನಿರಾಕರಿಸಲು ಮುಂದಾಗುತ್ತಿದೆ. ಹಾಗಾದರೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ತಂಡಗಳು ಪಾಕಿಸ್ತಾನಕ್ಕೆ ಬರುತ್ತಿಲ್ಲವೇ? ಭಾರತವು ಪಾಕಿಸ್ತಾನಕ್ಕೆ ಹೋಗದಿದ್ದರೆ, ಪಾಕಿಸ್ತಾನವು ಐಸಿಸಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.

    ಮುಂದುವರಿದು ಪಾಕಿಸ್ತಾನ ಮತ್ತು ಭಾರತ ಇರುವುದರಿಂದಲೇ ಐಸಿಸಿ ಅಸ್ತಿತ್ವದಲ್ಲಿದೆ. ಭಾರತದಂತೆ ಪಾಕಿಸ್ತಾನ ಸರ್ಕಾರವೂ ನಾವು ಆಡುವುದಿಲ್ಲ ಎಂದು ಹೇಳಿದರೆ, ಯಾರೂ ಕೂಡ ಪಂದ್ಯವನ್ನು ವೀಕ್ಷಿಸುವುದಿಲ್ಲ. ಬಿಸಿಸಿಐನಿಂದಲೂ ಯಾವುದೇ ಪ್ರಯೋಜನ ಆಗೋದಿಲ್ಲ ಎಂದು ಕೆಣಕಿದ್ದಾರೆ. ಇದನ್ನೂ ಓದಿ: ಕೊಹ್ಲಿಗೆ ಕ್ಯಾಪ್ಟೆನ್ಸಿ ನೀಡುವ ಬಗ್ಗೆ ನಿರ್ಧಾರ ಆಗಿಲ್ಲ -‌ ಕೋಟ್ಯಂತರ ಅಭಿಮಾನಿಗಳ ಆಸೆಗೆ ಫ್ರಾಂಚೈಸಿ ತಣ್ಣೀರು

    ಚಾಂಪಿಯನ್ಸ್ ಟ್ರೋಫಿಯಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಹಾಲಿ ಚಾಂಪಿಯನ್ ಪಾಕಿಸ್ತಾನ ಸೇರಿದಂತೆ ತಲಾ 4 ತಂಡಗಳ ಎರಡು ಗುಂಪುಗಳನ್ನು ಒಳಗೊಂಡಿವೆ. ಈಗಾಗಲೇ ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ನಿಗದಿಯಾಗಿದ್ದು, ಪಾಕಿಸ್ತಾನದ ಮುಲ್ತಾನ್‌, ರಾವಲ್ಪಿಂಡಿ ಹಾಗೂ ಲಾಹೋರ್‌ ಕ್ರೀಡಾಂಗಣಗಳು ಆತಿಥ್ಯ ವಹಿಸಲು ಸಜ್ಜಾಗಿವೆ.

    ಬಿಸಿಸಿಐ ಷರತ್ತು ಏನು?
    ಚಾಂಪಿಯನ್ಸ್‌ ಟ್ರೋಫಿಗಾಗಿ ಭಾರತ ತಂಡವು ಪಾಕಿಸ್ತಾನಕ್ಕೆ (Pakistan) ಬರುವುದಿಲ್ಲ ಎಂದು ಬಿಸಿಸಿಐ ಹೇಳಿದೆ. ಜೊತೆಗೆ ಭಾರತದ ಎಲ್ಲಾ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸುವಂತೆ ಬೇಡಿಕೆಯಿಟ್ಟಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: 6,6,6,6,6,W,6 – ಒಂದೇ ಓವರ್‌ನಲ್ಲಿ 37 ರನ್‌ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ!

  • ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರಲ್ಲ; ಹೊಸ ಷರತ್ತು ಮುಂದಿಟ್ಟ ಬಿಸಿಸಿಐ

    ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರಲ್ಲ; ಹೊಸ ಷರತ್ತು ಮುಂದಿಟ್ಟ ಬಿಸಿಸಿಐ

    ಮುಂಬೈ: 2025ರ ಫೆಬ್ರವರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿಗಾಗಿ ಭಾರತ ಪುರುಷರ ಕ್ರಿಕೆಟ್‌ ತಂಡ (Team India) ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಹೇಳಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI), ಹೊಸ ಷರತ್ತು ಮುಂದಿಟ್ಟಿದೆ.

    2025ರ ಫೆಬ್ರವರಿ 19ರಿಂದ ಮಾರ್ಚ್‌ 9ರ ವರೆಗೆ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ (Champions Trophy 2025) ಪಾಕ್‌ ಆತಿಥ್ಯದಲ್ಲಿ ನಡೆಯಲಿದೆ. ಈಗಾಗಲೇ ವೇಳಾಪಟ್ಟಿ ಸಹ ನಿಗದಿಯಾಗಿದ್ದು, ಭಾರತದ ಪಂದ್ಯಗಳಿಗೆ ಲಾಹೋರ್‌ ಕ್ರೀಡಾಂಗಣ ಆತಿಥ್ಯ ವಹಿಸಲು ಸಜ್ಜಾಗಿವೆ. ಈ ಸಂಬಂಧ ಬಿಸಿಸಿಐ ಪ್ರತಿಕ್ರಿಯೆ ನೀಡಿದ್ದು, ಭಾರತ ತಂಡವು ಪಾಕಿಸ್ತಾನಕ್ಕೆ (Pakistan) ಬರುವುದಿಲ್ಲ ಎಂದು ಹೇಳಿದೆ. ಜೊತೆಗೆ ಭಾರತದ ಎಲ್ಲಾ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸುವಂತೆ ಬೇಡಿಕೆಯಿಟ್ಟಿದೆ ಎಂದು ವರದಿಯಾಗಿದೆ. ಆದ್ರೆ ವರದಿಗಳನ್ನು ತಳ್ಳಿಹಾಕಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಪಾಕಿಸ್ತಾನ ನೆಲದಲ್ಲೇ ಭಾರತ ತನ್ನ ಪಂದ್ಯಗಳನ್ನಾಡಲಿದೆ ಎಂದು ಹೇಳಿಕೊಂಡಿದೆ.

    ಪಾಕ್‌ ಆಶ್ವಾಸನೆ ಏನು?
    ಭಾರತಕ್ಕೆ ಭದ್ರತೆಯ ಕೊರತೆ ಇದೆ ಅನ್ನಿಸಿದ್ರೆ, ಲಾಹೋರ್‌ನಲ್ಲಿ ಪಂದ್ಯಗಳನ್ನು ಆಡಿದ ಬಳಿಕ ಅದೇ ದಿನ ಭಾರತಕ್ಕೆ ಪ್ರಯಾಣಿಸಬಹುದು. ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಮಾಡಲಿದೆ. ಇದರೊಂದಿಗೆ ಭಾರತೀಯ ಕ್ರಿಕೆಟ್‌ ಅಭಿಮಾನಿಗಳಿಗೆ ವಿಶೇಷ ಕೋಟಾ, ವೀಸಾ ವ್ಯವಸ್ಥೆ ಮಾಡುತ್ತೇವೆ ಎಂದು ಪಿಸಿಬಿ ಅಧ್ಯಕ್ಷ ನಖ್ವಿ ಹೇಳಿದ್ದಾರೆ.

    ಹೈಬ್ರಿಡ್‌ ಮಾದರಿಯಲ್ಲೇ ಟೂರ್ನಿ?
    ಕಳೆದ ವರ್ಷ ಏಕದಿನ ಏಷ್ಯಾಕಪ್‌ ಟೂರ್ನಿಯನ್ನಾಡಲು ಭಾರತ ತಂಡವನ್ನು ಪಾಕ್‌ಗೆ ಕಳುಹಿಸಲು ಬಿಸಿಸಿಐ ನಿರಾಕರಿಸಿದ ನಂತರ ACC (ಏಷ್ಯನ್‌ ಕ್ರಿಕೆಟ್‌ ಸಮಿತಿ) ಹೈಬ್ರಿಡ್‌ ಮಾದರಿಯಲ್ಲಿ ಆಡಿಸಲು ನಿರ್ಧರಿಸಿತು. ಏಷ್ಯಾಕಪ್‌ ಟೂರ್ನಿಯ ಹಕ್ಕು ಪಾಕಿಸ್ತಾನದ ಬಳಿಯಿದ್ದರೂ ಪಾಕ್‌ನಲ್ಲಿ ಕೇವಲ 4 ಪಂದ್ಯಗಳನ್ನಾಡಲು ಮಾತ್ರವೇ ಅನುಮತಿ ನೀಡಿತು. ಉಳಿದ 9 ಪಂದ್ಯಗಳನ್ನ ಶ್ರೀಲಂಕಾದಲ್ಲಿ ಆಡಿಸಲು ನಿರ್ಧರಿಸಿತು. ಈ ಬಾರಿಯೂ ಅದೇ ರೀತಿ ಹೈಬ್ರಿಡ್‌ ಮಾದರಿಯಲ್ಲಿ ಪಂದ್ಯಗಳನ್ನು ಆಯೋಜಿಸುವುದು ಬಹುತೇಕ ಖಚಿತವಾಗಿದೆ. ಆದ್ರೆ ಈ ಬಗ್ಗೆ ಪಿಸಿಬಿ ಹಾಗೂ ಐಸಿಸಿ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

    ಪಾಕ್‌ಗೆ ಪ್ರಯಾಣಿಸಲು ಭಾರತ ಹಿಂದೇಟು ಏಕೆ?
    ಪಾಕಿಸ್ತಾನ ಮುಸ್ಲಿಂ ರಾಷ್ಟ್ರವಾಗಿ ಬೇರ್ಪಟ್ಟ ನಂತರ ಭಾರತದ ವಿರುದ್ಧ ದ್ವೇಷ ಸಾಧಿಸುತ್ತಲೇ ಬಂದಿತು. 1947-48ರಲ್ಲಿ ರಾಜ ಹರಿಸಿಂಗ್‌ ಭಾರತದೊಂದಿಗೆ ಕಾಶ್ಮೀರ ವಿಲೀನ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಇಂಡೋ ಪಾಕ್‌ ಯುದ್ಧ (Indo Pak War) ನಡೆಯಿತು. ಆ ನಂತರ 1965ರಲ್ಲಿ ಕಾಶ್ಮೀರಕ್ಕಾಗಿ ನಡೆದ ಯುದ್ಧ, 1971ರಲ್ಲಿ ಪೂರ್ವ ಪಾಕಿಸ್ತಾನ (ಇಂದಿನ ಬಾಂಗ್ಲಾದೇಶ) ವಿಮೋಚನೆಗಾಗಿ ನಡೆದ ಯುದ್ಧ, 1999 ರಲ್ಲಿ ನಡೆದ ಕಾರ್ಗಿಲ್‌ ಯುದ್ಧ ಇವೆಲ್ಲವೂ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧವನ್ನ ಮತ್ತಷ್ಟು ಹದಗೆಡಿಸುತ್ತಾ ಹೋಯಿತು. ಆದ್ರೆ ಕ್ರೀಡೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಕಾರ್ಗಿಲ್‌ ಯುದ್ಧದ ನಂತರವೂ ಭಾರತ ಮತ್ತು ಪಾಕ್‌ ತಂಡಗಳು ದ್ವಿಪಕ್ಷಿಯ ಸರಣಿ, ಏಕದಿನ ಹಾಗೂ ಟಿ20 ಸರಣಿಗಳಲ್ಲಿ ಮುಖಾಮುಖಿಯಾಗಿವೆ. ಭಾರತ ತಂಡವು ಸಹ ಪಾಕಿಸ್ತಾನದಲ್ಲೇ ದ್ವಿಪಕ್ಷಿಯ ಸರಣಿಗಳನ್ನಾಡಿದೆ. ಆದ್ರೆ 2008ರಲ್ಲಿ ನಡೆದ ಮುಂಬೈ ದಾಳಿ (Mumbai Attack) ಎರಡು ರಾಷ್ಟ್ರಗಳ ಮೇಲೆ ಭಾರೀ ಪರಿಣಾಮ ಬೀರಿತು.

    ಭಾರತ ತಂಡವು 2005-2006ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು. ಈ ಪಂದ್ಯದಲ್ಲಿ ಇತ್ತಂಡಗಳು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದವು. ಆದ್ರೆ 2008ರಲ್ಲಿ ನಡೆದ ಮುಂಬೈ ದಾಳಿಯ ನಂತರ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ ಟೂರ್ನಿ ಅಥವಾ ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರವೇ ಪರಸ್ಪರ ಮುಖಾಮುಖಿಯಾಗುತ್ತಿವೆ. ಕಳೆದ ವರ್ಷ ಪಾಕಿಸ್ತಾನ ತಂಡ ಭಾರತದಲ್ಲಿ ನಡೆದ ವಿಶ್ವಕಪ್‌ ಟೂರ್ನಿಯಲ್ಲಿ ಪಾಕ್‌ ತಂಡ ಪಾಲ್ಗೊಂಡಿತ್ತು.

  • ನಂಬಿಕೆ ಇಲ್ಲದಿದ್ರೆ ಪ್ರತಿ ಪಂದ್ಯ ಮುಗಿದ ಬಳಿಕ ಭಾರತಕ್ಕೆ ಮರಳಬಹುದು: ಬಿಸಿಸಿಐಗೆ ಪಾಕ್‌ ಹೊಸ ಆಫರ್‌

    ನಂಬಿಕೆ ಇಲ್ಲದಿದ್ರೆ ಪ್ರತಿ ಪಂದ್ಯ ಮುಗಿದ ಬಳಿಕ ಭಾರತಕ್ಕೆ ಮರಳಬಹುದು: ಬಿಸಿಸಿಐಗೆ ಪಾಕ್‌ ಹೊಸ ಆಫರ್‌

    ನವದೆಹಲಿ: 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ (Champions Trophy 2025) ಟೂರ್ನಿಗಾಗಿ ಭಾರತ ಕ್ರಿಕೆಟ್‌ ತಂಡವು ಪಾಕಿಸ್ತಾನಕ್ಕೆ ಬರುವುದಿಲ್ಲ ಎಂದು ಈಗಾಗಲೇ ಬಿಸಿಸಿಐ ಸ್ಪಷ್ಟಪಡಿಸಿದ್ದರೂ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಮಾತ್ರ ಪದೇ ಪದೇ ಒತ್ತಾಯ ಮಾಡುತ್ತಲೇ ಇದೆ. ಈ ಬಾರಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯನ್ನು ತನ್ನ ನೆಲದಲ್ಲೇ ನಡೆಸಲು ಶತಾಯಗತಾಯ ಪ್ರಯತ್ನ ನಡೆಸುತ್ತಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB), ಬಿಸಿಸಿಐ ಮುಂದೆ ಹೊಸ ಪ್ರಸ್ತಾಪ ಇಟ್ಟಿದೆ.

    ಚಾಂಪಿಯನ್ಸ್‌ ಟ್ರೋಫಿ ವೇಳೆ ಭಾರತ ತಂಡಕ್ಕೆ (Team India) ಪಾಕಿಸ್ತಾನ ಸಂಪೂರ್ಣ ಭದ್ರತೆ ಒದಗಿಸಲಿದೆ. ಭಾರತ ತಂಡಕ್ಕೆ ಸುಲಭವಾಗಲೆಂದೇ ತಂಡದ ಎಲ್ಲಾ ಪಂದ್ಯಗಳನ್ನು ಲಾಹೋರ್‌ನಲ್ಲಿ ನಿಗದಿಪಡಿಸಲಾಗಿದೆ. ಭಾರತೀಯ ಅಭಿಮಾನಿಗಳಿಗೂ ಇದು ಅನುಕೂಲವಾಗಲಿದೆ. ಭಾರತ ತಂಡದ ಗುಂಪು ಹಂತದ ಪಂದ್ಯಗಳಿಗೆ ಅಂತರ ಇರುವುದರಿಂದ ಪ್ರತಿ ಪಂದ್ಯ ಮುಗಿದ ಬಳಿಕ ಸ್ವದೇಶಕ್ಕೆ ಮರಳಬಹುದು ಎಂದು ಬಿಸಿಸಿಐಗೆ (BCCI) ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಪತ್ರ ಬರೆದಿದೆ. ಇದನ್ನೂ ಓದಿ: ಟೀಕೆಗಳಿಗೆ ತಕ್ಕ ಉತ್ತರ – 1,338 ದಿನಗಳ ಬಳಿಕ ತವರಿನಲ್ಲಿ ಟೆಸ್ಟ್‌ ಪಂದ್ಯ ಗೆದ್ದ ಪಾಕ್‌

    ಭಾರತದ ಪಂದ್ಯಗಳು ಲಾಹೋರ್‌ನಲ್ಲಿ ಆಯೋಜಿಸಲಾಗಿದ್ದು, ಪಂಜಾಬ್‌ನ ಚಂಡೀಗಢ ಇದಕ್ಕೆ ಹತ್ತಿರದಲ್ಲಿದೆ. ಒಂದು ವೇಳೆ ಪಾಕಿಸ್ತಾನದಲ್ಲಿ ಉಳಿಯಲು ಇಚ್ಛಿಸದಿದ್ದರೆ, ಭದ್ರತೆ ಕೊರತೆ ಅನ್ನಿಸಿದರೆ, ಪ್ರತಿ ಪಂದ್ಯ ಮುಗಿದ ಬಳಿಕ ಚಂಡೀಗಢ ಅಥವಾ ದೆಹಲಿಗೆ ಟೀಂ ಇಂಡಿಯಾ ವಾಪಸ್‌ ಬರಬಹುದು ಎಂದು ಪತ್ರದಲ್ಲಿ ತಿಳಿಸಿದೆ ಎಂದು ವರದಿಗಳು ಹೇಳಿವೆ. ಇದನ್ನೂ ಓದಿ: ಜಿಯೋದಲ್ಲಿ ಐಪಿಎಲ್‌ ಬರಲ್ಲ, ಇನ್ನು ಮುಂದೆ ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರ!

    ಭಾರತ ಸರ್ಕಾರ ಭದ್ರತಾ ಕಾರಣಗಳಿಗಾಗಿ ತಂಡವನ್ನು ಕಳುಹಿಸಲು ಅನುಮತಿ ನಿರಾಕರಿಸಿದ್ದರೆ, ಬಿಸಿಸಿಐ (BCCI) ಲಿಖಿತ ರೂಪದಲ್ಲಿ ಬರೆದುಕೊಡಬೇಕು ಎಂದು ಪಟ್ಟು ಹಿಡಿದಿದ್ದ ಪಾಕ್‌ ಇದೀಗ ಹೊಸ ಪ್ರಸ್ತಾಪವನ್ನ ಬಿಸಿಸಿಐ ಮುಂದಿಟ್ಟಿದೆ. ಅಲ್ಲದೇ ಇತ್ತೀಚೆಗೆ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ವೇಳೆ, ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡುವಂತೆ ಅಲ್ಲಿನ ಸರ್ಕಾರ ಹಾಗೂ ಪಿಸಿಬಿ ಮನವಿ ಸಹ ಸಲ್ಲಿಸಿದೆ ಎಂದು ಹೇಳಲಾಗಿದೆ.

    ಭಾರತದ ಪಂದ್ಯಗಳು ಹೇಗಿವೆ?
    ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ಮೂರು ಗುಂಪು ಹಂತದ ಪಂದ್ಯಗಳನ್ನಾಡಲಿದೆ. ಸದ್ಯದ ವೇಳಾಪಟ್ಟಿಯ ಪ್ರಕಾರ ಫೆಬ್ರವರಿ 20 ರಂದು ಬಾಂಗ್ಲಾದೇಶದ ವಿರುದ್ಧ, ಫೆಬ್ರವರಿ 23 ರಂದು ಪಾಕಿಸ್ತಾನದ ವಿರುದ್ಧ, ಮಾರ್ಚ್ 2 ಎಂದು ನ್ಯೂಜಿಲೆಂಡ್ ವಿರುದ್ಧ ನಿಗದಿಯಾಗಿದೆ. ಈ ನಡುವೆ ಭಾರತ ಮತ್ತು ಕಿವೀಸ್‌ ನಡುವಿನ ಪಂದ್ಯವನ್ನು ಲಾಹೋರ್‌ನಿಂದ ರಾವಲ್ಪಿಂಡಿಗೆ ವರ್ಗಾಯಿಸುವ ಚರ್ಚೆಗಳೂ ನಡೆದಿವೆ.

    ಭಾರತ ಪಾಕ್‌ ತಂಡ ಪ್ರವೇಶಿಸುವ ಯಾವುದೇ ಸಾಧ್ಯತೆಗಳೂ ಇಲ್ಲದ ಕಾರಣ ಭಾರತದ ಲೀಗ್‌ ಪಂದ್ಯಗಳನ್ನ ಪಾಕ್‌ನಿಂದ ಹೊರಗೆ ನಡೆಸಬೇಕಾಗುತ್ತದೆ. ಒಂದು ವೇಳೆ ಭಾರತ ಫೈನಲ್‌ ತಲುಪಿದರೆ ದುಬೈನಲ್ಲಿ ನಡೆಯಲಿದೆ, ಅದರ ಖರ್ಚು ವೆಚ್ಚವನ್ನೂ ಐಸಿಸಿ ಬರಿಸಲಿದೆ ಎಂದು ಹೇಳಿದೆ.

  • ಭದ್ರತಾ ಕಾರಣಕ್ಕಾಗಿ ಭಾರತ ಸರ್ಕಾರ ಅನುಮತಿ ನಿರಾಕರಿಸಿದ್ರೆ ಬಿಸಿಸಿಐ ಬರೆದುಕೊಡಲಿ – ಪಾಕ್‌ ಪಟ್ಟು!

    ಭದ್ರತಾ ಕಾರಣಕ್ಕಾಗಿ ಭಾರತ ಸರ್ಕಾರ ಅನುಮತಿ ನಿರಾಕರಿಸಿದ್ರೆ ಬಿಸಿಸಿಐ ಬರೆದುಕೊಡಲಿ – ಪಾಕ್‌ ಪಟ್ಟು!

    ಇಸ್ಲಾಮಾಬಾದ್‌: 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ (Champions Trophy 2025) ಟೂರ್ನಿಗಾಗಿ ಭಾರತ ಕ್ರಿಕೆಟ್‌ ತಂಡವು ಪಾಕಿಸ್ತಾನಕ್ಕೆ ಬರುವುದಿಲ್ಲ ಎಂದು ಹೇಳಿದೆ. ಭಾರತ ಸರ್ಕಾರ ಭದ್ರತಾ ಕಾರಣಗಳಿಗಾಗಿ ಭಾರತ ತಂಡವನ್ನು ಕಳುಹಿಸಲು ಅನುಮತಿ ನಿರಾಕರಿಸಿದ್ದರೆ. ಬಿಸಿಸಿಐ (BCCI) ಲಿಖಿತ ರೂಪದಲ್ಲಿ ಬರೆದುಕೊಡಬೇಕು ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB) ಒತ್ತಾಯಿಸಿದೆ.

    ಭಾರತ ಕ್ರಿಕೆಟ್‌ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲು ಭಾರತ ಸರ್ಕಾರ ಅನುಮತಿ ನಿರಾಕರಿಸಿದರೆ, ಅದನ್ನು ಲಿಖಿತ ರೂಪದಲ್ಲಿ ಬರೆದುಕೊಡಬೇಕು. ಜೊತೆಗೆ ಆ ಪತ್ರವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಗೆ (ಐಸಿಸಿ) ಸಲ್ಲಿಸಬೇಕು. ಈಗಾಗಲೇ ಕರಡು ವೇಳಾಪಟ್ಟಿ ಸಿದ್ಧಗೊಂಡಿರುವುದರಿಂದ ಟೂರ್ನಿ ಪ್ರಾರಂಭವಾಗುವ 5-6 ತಿಂಗಳಿಗೆ ಮುಂಚಿತವಾಗಿಯೇ ಐಸಿಸಿಗೆ ತಿಳಿಸಬೇಕು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಹೇಳಿದೆ. ಇದನ್ನೂ ಓದಿ: ಮುಂಬೈನಲ್ಲಿ ದೇಶದ 2ನೇ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂ ನಿರ್ಮಿಸಲು ಪ್ಲ್ಯಾನ್‌!

    2025ರ ಫೆಬ್ರವರಿ 19ರಿಂದ ಮಾರ್ಚ್‌ 9ರ ವರೆಗೆ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ (Champions Trophy) ಪಾಕ್‌ ಆತಿಥ್ಯದಲ್ಲಿ ನಡೆಯಲಿದೆ. ಫೈನಲ್‌ ಪಂದ್ಯಕ್ಕೆ ಮಳೆ ಅಡ್ಡಿಯಾದ್ರೆ ಮಾರ್ಚ್‌ 10 ರಂದು ಮೀಸಲು ದಿನ ಇರಲಿದೆ. ಪಾಕಿಸ್ತಾನದ (Pakistan) ಕರಾಚಿ, ಲಾಹೋರ್, ಮುಲ್ತಾನ್ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಇದನ್ನೂ ಓದಿ: IPL ಟ್ರೋಫಿ ತಂದುಕೊಡದಿದ್ದಕ್ಕೆ ತಲೆದಂಡ – ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ಹುದ್ದೆಯಿಂದ ರಿಕಿ ಪಾಂಟಿಂಗ್​ಗೆ ಕೊಕ್​!

    ಈಗಾಗಲೇ ಪಿಸಿಬಿ ತನ್ನ ಕರಡು ವೇಳಾಪಟ್ಟಿಯನ್ನ ಐಸಿಸಿಗೆ ಸಲ್ಲಿಸಿದೆ. ಸಂಭವನೀಯ ಸೆಮಿಫೈನಲ್ ಮತ್ತು ಫೈನಲ್ ಪಂದ್ಯ ಸೇರಿದಂತೆ ಭಾರತದ ಎಲ್ಲಾ ಪಂದ್ಯಗಳನ್ನು ಲಾಹೋರ್‌ನಲ್ಲಿ ನಿಗದಿಪಡಿಸಲಾಗಿದೆ. ಪಾಕಿಸ್ತಾನದ ಹೊರಗೆ ಕೆಲವು ಪಂದ್ಯಗಳನ್ನು ಆಡುವ ಅಗತ್ಯವಿದ್ದಲ್ಲಿ ಐಸಿಸಿ ಮ್ಯಾನೇಜ್‌ಮೆಂಟ್ ಹೆಚ್ಚುವರಿ ವೆಚ್ಚವನ್ನು ಶಿಫಾರಸು ಮಾಡಲಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: Paris Olympics | ಜಿಯೋ ಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಿ

  • Champions Trophy 2025: ಭಾರತ ಕ್ರಿಕೆಟ್‌ ತಂಡವು ಪಾಕ್‌ಗೆ ಹೋಗಲ್ಲ – ಬಿಸಿಸಿಐ ಖಡಕ್‌ ನಿರ್ಧಾರ!

    Champions Trophy 2025: ಭಾರತ ಕ್ರಿಕೆಟ್‌ ತಂಡವು ಪಾಕ್‌ಗೆ ಹೋಗಲ್ಲ – ಬಿಸಿಸಿಐ ಖಡಕ್‌ ನಿರ್ಧಾರ!

    ಮುಂಬೈ: 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ (Champions Trophy 2025) ಟೂರ್ನಿಗಾಗಿ ಭಾರತ ಕ್ರಿಕೆಟ್‌ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಿಸಿಸಿಐ ಮೂಲಗಳು ಖಚಿತಪಡಿಸಿವೆ. ಭಾರತದ ಪಂದ್ಯಗಳನ್ನು ಶ್ರೀಲಂಕಾ ಅಥವಾ ದುಬೈನಲ್ಲಿ ನಡೆಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಗೆ ಕೇಳಿದೆ ಎಂದು ಬಿಸಿಸಿಐ (BCCI) ಮೂಲಗಳು ತಿಳಿಸಿವೆ.

    2025ರ ಫೆಬ್ರವರಿ 19ರಿಂದ ಮಾರ್ಚ್‌ 9ರ ವರೆಗೆ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ (Champions Trophy) ಪಾಕ್‌ ಆತಿಥ್ಯದಲ್ಲಿ ನಡೆಯಲಿದೆ. ಫೈನಲ್‌ ಪಂದ್ಯಕ್ಕೆ ಮಳೆ ಅಡ್ಡಿಯಾದ್ರೆ ಮಾರ್ಚ್‌ 10 ರಂದು ಮೀಸಲು ದಿನ ಇರಲಿದೆ. ಪಾಕಿಸ್ತಾನದ (Pakistan) ಕರಾಚಿ, ಲಾಹೋರ್, ಮುಲ್ತಾನ್ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಸದ್ಯ ಭಾರತ ಮತ್ತು ಪಾಕ್‌ ನಡುವಿನ ಪಂದ್ಯ ಲಾಹೋರ್‌ನಲ್ಲಿ ನಿಗದಿಯಾಗಿದೆ. ಆದ್ರೆ ಪಾಕಿಸ್ತಾನಕ್ಕೆ ತೆರಳಲು ಬಿಸಿಸಿಐ ಹಿಂದೇಟು ಹಾಕಿದೆ. ಇದನ್ನೂ ಓದಿ: 2.5 ಕೋಟಿ ನಗದು ಬಹುಮಾನ ನಿರಾಕರಿಸಿದ ದ್ರಾವಿಡ್‌ – ಕನ್ನಡಿಗನ ನಡೆಗೆ ವ್ಯಾಪಕ ಮೆಚ್ಚುಗೆ!

    ತನ್ನ ಎಲ್ಲಾ ಪಂದ್ಯಗಳನ್ನು ಒಂದೇ ನಗರದಲ್ಲಿ ಆಡುವಂತೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಭಾರತಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅದಕ್ಕಾಗಿ ಭಾರತದ ಎಲ್ಲಾ ಪಂದ್ಯಗಳನ್ನು ಲಾಹೋರ್‌ ಮೈದಾನದಲ್ಲೇ ನಿಗದಿಪಡಿಸಲಾಗಿತ್ತು. ಆದ್ರೆ ಭಾರತ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ. ದುಬೈ ಅಥವಾ ಶ್ರೀಲಂಕಾದಲ್ಲಿ ತನ್ನ ಪಂದ್ಯಗಳನ್ನು ಆಯೋಜಿಸುವಂತೆ ಐಸಿಸಿಗೆ ಕೇಳಿಕೊಂಡಿದೆ ಎಂದು ಬಿಸಿಸಿಐ ಖಚಿತಪಡಿಸಿದೆ. ಕಳೆದ ಮೇ ತಿಂಗಳಲ್ಲಿ ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ, ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಭಾರತ ತಂಡ ಪಾಕಿಸ್ತಾನಕ್ಕೆ ತೆರಳಲಿದೆ ಎಂದು ಹೇಳಿದ್ದರು. ಇದೀಗ ಪಾಕ್‌ಗೆ ತೆರಳುವುದಿಲ್ಲ ಎಂದು ಬಿಸಿಸಿಐ ಖಚಿತಪಡಿಸಿದೆ.

    ಹೈಬ್ರಿಡ್‌ ಮಾದರಿಯಲ್ಲಿ ಆಯೋಜನೆಯಾಗುತ್ತಾ?
    ಕಳೆದ ವರ್ಷ ಏಕದಿನ ಏಷ್ಯಾಕಪ್‌ ಟೂರ್ನಿಯನ್ನಾಡಲು ಭಾರತ ತಂಡವನ್ನು ಪಾಕ್‌ಗೆ ಕಳುಹಿಸಲು ಬಿಸಿಸಿಐ ನಿರಾಕರಿಸಿದ ನಂತರ ACC (ಏಷ್ಯನ್‌ ಕ್ರಿಕೆಟ್‌ ಸಮಿತಿ) ಹೈಬ್ರಿಡ್‌ ಮಾದರಿಯಲ್ಲಿ ಆಡಿಸಲು ನಿರ್ಧರಿಸಿತು. ಏಷ್ಯಾಕಪ್‌ ಟೂರ್ನಿಯ ಹಕ್ಕು ಪಾಕಿಸ್ತಾನದ ಬಳಿಯಿದ್ದರೂ ಪಾಕ್‌ನಲ್ಲಿ ಕೇವಲ 4 ಪಂದ್ಯಗಳನ್ನಾಡಲು ಮಾತ್ರವೇ ಅನುಮತಿ ನೀಡಿತು. ಉಳಿದ 9 ಪಂದ್ಯಗಳನ್ನ ಶ್ರೀಲಂಕಾದಲ್ಲಿ ಆಡಿಸಲು ನಿರ್ಧರಿಸಿತು. ಈ ಬಾರಿಯೂ ಅದೇ ರೀತಿ ಹೈಬ್ರಿಡ್‌ ಮಾದರಿಯಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಗಿಲ್‌, ಗಾಯಕ್‌ವಾಡ್‌ ಸ್ಫೋಟಕ ಆಟ – ಟೀಂ ಇಂಡಿಯಾಗೆ 23 ರನ್‌ಗಳ ಜಯ

    ಪಾಕ್‌ಗೆ ಪ್ರಯಾಣಿಸಲು ಭಾರತ ಹಿಂದೇಟು ಏಕೆ?
    ಪಾಕಿಸ್ತಾನ ಮುಸ್ಲಿಂ ರಾಷ್ಟ್ರವಾಗಿ ಬೇರ್ಪಟ್ಟ ನಂತರ ಭಾರತದ ವಿರುದ್ಧ ದ್ವೇಷ ಸಾಧಿಸುತ್ತಲೇ ಬಂದಿತು. 1947-48ರಲ್ಲಿ ರಾಜ ಹರಿಸಿಂಗ್‌ ಭಾರತದೊಂದಿಗೆ ಕಾಶ್ಮೀರ ವಿಲೀನ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಇಂಡೋ ಪಾಕ್‌ ಯುದ್ಧ (Indo Pak War) ನಡೆಯಿತು. ಆ ನಂತರ 1965ರಲ್ಲಿ ಕಾಶ್ಮೀರಕ್ಕಾಗಿ ನಡೆದ ಯುದ್ಧ, 1971ರಲ್ಲಿ ಪೂರ್ವ ಪಾಕಿಸ್ತಾನ (ಇಂದಿನ ಬಾಂಗ್ಲಾದೇಶ) ವಿಮೋಚನೆಗಾಗಿ ನಡೆದ ಯುದ್ಧ, 1999 ರಲ್ಲಿ ನಡೆದ ಕಾರ್ಗಿಲ್‌ ಯುದ್ಧ ಇವೆಲ್ಲವೂ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧವನ್ನ ಮತ್ತಷ್ಟು ಹದಗೆಡಿಸುತ್ತಾ ಹೋಯಿತು. ಆದ್ರೆ ಕ್ರೀಡೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಕಾರ್ಗಿಲ್‌ ಯುದ್ಧದ ನಂತರವೂ ಭಾರತ ಮತ್ತು ಪಾಕ್‌ ತಂಡಗಳು ದ್ವಿಪಕ್ಷಿಯ ಸರಣಿ, ಏಕದಿನ ಹಾಗೂ ಟಿ20 ಸರಣಿಗಳಲ್ಲಿ ಮುಖಾಮುಖಿಯಾಗಿವೆ. ಭಾರತ ತಂಡವು ಸಹ ಪಾಕಿಸ್ತಾನದಲ್ಲೇ ದ್ವಿಪಕ್ಷಿಯ ಸರಣಿಗಳನ್ನಾಡಿದೆ. ಆದ್ರೆ 2008ರಲ್ಲಿ ನಡೆದ ಮುಂಬೈ ದಾಳಿ (Mumbai Attack) ಎರಡು ರಾಷ್ಟ್ರಗಳ ಮೇಲೆ ಭಾರೀ ಪರಿಣಾಮ ಬೀರಿತು.

    ಭಾರತ ತಂಡವು 2005-2006ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು. ಈ ಪಂದ್ಯದಲ್ಲಿ ಇತ್ತಂಡಗಳು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದವು. ಆದ್ರೆ 2008ರಲ್ಲಿ ನಡೆದ ಮುಂಬೈ ದಾಳಿಯ ನಂತರ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ ಟೂರ್ನಿ ಅಥವಾ ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರವೇ ಪರಸ್ಪರ ಮುಖಾಮುಖಿಯಾಗುತ್ತಿವೆ. ಕಳೆದ ವರ್ಷ ಪಾಕಿಸ್ತಾನ ತಂಡ ಭಾರತದಲ್ಲಿ ನಡೆದ ವಿಶ್ವಕಪ್‌ ಟೂರ್ನಿಯಲ್ಲಿ ಪಾಕ್‌ ತಂಡ ಪಾಲ್ಗೊಂಡಿತ್ತು. ಇದನ್ನೂ ಓದಿ: ವಿಶ್ವ ಚಾಂಪಿಯನ್ಸ್‌ಗೆ 125 ಕೋಟಿ ರೂ. ಬಹುಮಾನ – ರೋಹಿತ್‌, ಕೊಹ್ಲಿ, ದ್ರಾವಿಡ್‌ಗೆ ಸಿಕ್ಕಿದ್ದೆಷ್ಟು? 

  • ರೋಹಿತ್‌ ನಾಯಕತ್ವದಲ್ಲಿ WTC ಫೈನಲ್‌, ಚಾಂಪಿಯನ್ಸ್‌ ಟ್ರೋಫಿ ಗೆಲ್ಲುತ್ತೇವೆ: ಜಯ್‌ ಶಾ ವಿಶ್ವಾಸ

    ರೋಹಿತ್‌ ನಾಯಕತ್ವದಲ್ಲಿ WTC ಫೈನಲ್‌, ಚಾಂಪಿಯನ್ಸ್‌ ಟ್ರೋಫಿ ಗೆಲ್ಲುತ್ತೇವೆ: ಜಯ್‌ ಶಾ ವಿಶ್ವಾಸ

    ಮುಂಬೈ: ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ನಾವು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (WTC) ಫೈನಲ್ ಮತ್ತು ಚಾಂಪಿಯನ್ಸ್ ಟ್ರೋಫಿಯನ್ನು (Champions Trophy) ಗೆಲ್ಲುತ್ತೇವೆ ಎಂಬ ವಿಶ್ವಾಸ ನನಗಿದೆ ಎಂದು ಬಿಸಿಸಿಐ (BCCI) ಕಾರ್ಯದರ್ಶಿ ಜಯ್‌ ಶಾ (Jay Shah) ಹೇಳಿದ್ದಾರೆ.

    ಈ ಮೂಲಕ ಏಕದಿನ ಮತ್ತು ಟೆಸ್ಟ್ ಮಾದರಿಗಳಲ್ಲಿ ರೋಹಿತ್ ಶರ್ಮಾ ನಾಯಕರಾಗಿ ಮುಂದುವರಿಯುವುದನ್ನು ಬಿಸಿಸಿಐ ಖಚಿತ ಪಡಿಸಿದಂತಾಗಿದೆ. ವಿಡಿಯೋ ಮೂಲಕ ಜಯ್‌ ಶಾ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು.

     

    ಟಿ20 ವಿಶ್ವಕಪ್‌ (T20 World Cup) ಗೆಲುವನ್ನು ಮುಖ್ಯ ಕೋಚ್‌ ರಾಹುಲ್ ದ್ರಾವಿಡ್, ಟಿ20 ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರಿಗೆ ಜಯ್‌ ಶಾ ಅರ್ಪಿಸಿದ್ದಾರೆ.

    ಒಂದು ವರ್ಷದೊಳಗೆ ನಾವು ಮೂರು ಫೈನಲ್‌ ಪಂದ್ಯ ಆಡಿದ್ದೇವೆ. ಕಳೆದ ವರ್ಷ ಜೂನ್ 11 ರಂದು ನಾವು WTC ಫೈನಲ್‌ನಲ್ಲಿ ಸೋತಿದ್ದೇವೆ. ನವೆಂಬರ್ 19 ರಂದು 10 ಪಂದ್ಯಗಳನ್ನು ಗೆದ್ದು ನಾವು ಹೃದಯಗಳನ್ನು ಗೆದ್ದರೂ ಏಕದಿನ ವಿಶ್ವಕಪ್‌ ಗೆಲ್ಲಲು ವಿಫಲವಾಗಿದ್ದೇವೆ. ಆದರೆ ಈ ವರ್ಷದ ಆರಂಭದಲ್ಲಿ ರಾಜ್‌ಕೋಟ್‌ನಲ್ಲಿ ನಾನು ಹೇಳಿದಂತೆ ರೋಹಿತ್ ನಾಯಕತ್ವದಲ್ಲಿ ಟೀಂ ಇಂಡಿಯಾ ಹೃದಯಗಳನ್ನು ಮತ್ತು ವಿಶ್ವಕಪ್ ಗೆದ್ದಿದೆ ಎಂದು ತಿಳಿಸಿದರು.

    ಫೈನಲ್‌ನ ಕೊನೆಯ ಐದು ಓವರ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ಜೊತೆಗೆ ಬೌಂಡರಿ ಲೈನ್‌ ಬಳಿ ಅತ್ಯುತ್ತಮ ಕ್ಯಾಚ್‌ ಹಿಡಿದ ಸೂರ್ಯಕುಮಾರ್‌ ಯಾದವ್‌ ಅವರನ್ನು ಜಯ್‌ ಶಾ ಶ್ಲಾಘಿಸಿದರು.

    2025 ರ ಫೆಬ್ರವರಿ-ಮಾರ್ಚ್‌ನಲ್ಲಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿದೆ. ಶಾ ಅವರ ಹೇಳಿಕೆಯಿಂದ ಭಾರತ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸುವುದು ಖಚಿತವಾಗಿದೆ. ಆದರೆ ಪಾಕಿಸ್ತಾನಕ್ಕೆ ತೆರಳುತ್ತಾ ಇಲ್ಲವೋ ಎನ್ನುವುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.

    ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ನಲ್ಲಿ ಎರಡು ಬಾರಿ ರೋಹಿತ್‌ ಶರ್ಮಾ ನಾಯಕತ್ವದ ಅಡಿಯಲ್ಲಿ ಫೈನಲ್‌ ಆಡಿ ರನ್ನರ್‌ ಅಪ್‌ ಸ್ಥಾನವನ್ನು ಪಡೆದುಕೊಂಡಿದೆ.

    202-25ರ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಆಡಿದ 9 ಟೆಸ್ಟ್‌ ಪಂದ್ಯಗಳಲ್ಲಿ 6 ಪಂದ್ಯ ಗೆದ್ದು74 ಅಂಕ ಸಂಪಾದಿಸಿ 68.52 ಪಿಸಿಟಿಯೊಂದಿಗೆ (ಪರ್ಸಂಟೇಜ್‌ ಆಫ್‌ ಪಾಯಿಂಟ್‌) ಮೊದಲ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 12 ಪಂದ್ಯವಾಡಿದ್ದು 8 ಪಂದ್ಯ ಗೆದ್ದು90 ಅಂಕ ಸಂಪಾದಿಸಿ 62.50 ಪಿಸಿಟಿಯೊಂದಿಗೆ ಎರಡನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಮೂರು ಟೆಸ್ಟ್ ಸರಣಿ ಆಡಲಿದೆ.

  • Champions Trophy: ಕೇಂದ್ರ ಸರ್ಕಾರ ಅನುಮತಿ ಕೊಟ್ಟರೆ ಭಾರತ ತಂಡವನ್ನು ಪಾಕ್‌ಗೆ ಕಳುಹಿಸುತ್ತೇವೆ: ಬಿಸಿಸಿಐ

    Champions Trophy: ಕೇಂದ್ರ ಸರ್ಕಾರ ಅನುಮತಿ ಕೊಟ್ಟರೆ ಭಾರತ ತಂಡವನ್ನು ಪಾಕ್‌ಗೆ ಕಳುಹಿಸುತ್ತೇವೆ: ಬಿಸಿಸಿಐ

    ಮುಂಬೈ: ಕೇಂದ್ರ ಸರ್ಕಾರ ಅನುಮತಿ ಕೊಟ್ಟರೆ, ಮುಂದಿನ ವರ್ಷ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುವುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಉಪಾಧ್ಯಕ್ಷ ರಾಜೀವ್ ಶುಕ್ಲಾ (Rajeev Shukla) ಹೇಳಿದ್ದಾರೆ.

    2025ರ ಏಪ್ರಿಲ್‌ 7ರಿಂದ ಮೇ 20ರ ವರೆಗೆ ಪಾಕ್‌ ಆತಿಥ್ಯದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ (Champions Trophy) ನಡೆಯಲಿದ್ದು, ಪಾಕಿಸ್ತಾನದ (Pakistan) ಕರಾಚಿ, ಲಾಹೋರ್, ಮುಲ್ತಾನ್ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಪಾಕಿಸ್ತಾನಕ್ಕೆ ಟೀಂ ಇಂಡಿಯಾ ತೆರಳಲಿದೆಯೇ ಅನ್ನೋ ಬಗ್ಗೆ ಮಾತನಾಡಿದ ರಾಜೀವ್ ಶುಕ್ಲಾ, ಕೇಂದ್ರ ಸರ್ಕಾರ ನಮಗೆ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇವೆ. ಅನುಮತಿ ನೀಡಿದರೆ ಭಾರತ ತಂಡವನ್ನು (Team India) ಪಾಕಿಸ್ತಾನಕ್ಕೆ ಕಳುಹಿಸುತ್ತೇವೆ ಎಂದು ತಿಳಿಸಿದ್ದಾರೆ.

    ಚಾಂಪಿಯನ್ಸ್‌ ಟ್ರೋಫಿಯ ಕರಡು ವೇಳಾಪಟ್ಟಿಯನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಗೆ ಕಳುಹಿಸಿದೆ ಎಂದು ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಹೇಳಿದ್ದಾರೆ. ಇದನ್ನೂ ಓದಿ: PublicTV Explainer: ಇಂಡೋ-ಪಾಕ್‌ ಕದನ ಯಾಕಿಷ್ಟು ರಣರೋಚಕ – ನೀವು ತಿಳಿಯಲೇಬೇಕಾದ ಸಂಗತಿಗಳಿವು..

    ಹೈಬ್ರಿಡ್‌ ಮಾದರಿಯಲ್ಲಿ ಆಯೋಜನೆಯಾಗುತ್ತಾ?
    2023ರ ಏಕದಿನ ಏಷ್ಯಾಕಪ್‌ ಟೂರ್ನಿಯನ್ನಾಡಲು ಭಾರತ ತಂಡವನ್ನು ಪಾಕ್‌ಗೆ ಕಳುಹಿಸಲು ಬಿಸಿಸಿಐ ನಿರಾಕರಿಸಿದ ನಂತರ ACC (ಏಷ್ಯನ್‌ ಕ್ರಿಕೆಟ್‌ ಸಮಿತಿ) ಹೈಬ್ರಿಡ್‌ ಮಾದರಿಯಲ್ಲಿ ಆಡಿಸಲು ನಿರ್ಧರಿಸಿತು. ಏಷ್ಯಾಕಪ್‌ ಟೂರ್ನಿಯ ಹಕ್ಕು ಪಾಕಿಸ್ತಾನದ ಬಳಿಯಿದ್ದರೂ ಪಾಕ್‌ನಲ್ಲಿ ಕೇವಲ 4 ಪಂದ್ಯಗಳನ್ನಾಡಲು ಮಾತ್ರವೇ ಅನುಮತಿ ನೀಡಿತು. ಉಳಿದ 9 ಪಂದ್ಯಗಳನ್ನ ಶ್ರೀಲಂಕಾದಲ್ಲಿ ಆಡಿಸಲು ನಿರ್ಧರಿಸಿತು. ಈ ಬಾರಿಯೂ ಅದೇ ರೀತಿ ಹೈಬ್ರಿಡ್‌ ಮಾದರಿಯಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: T20 World Cup: ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಕ್ರಿಕೆಟಿಗರಿಗೆ ಲಕ್ಷ ಲಕ್ಷ ಬಹುಮಾನ ಘೋಷಿಸಿದ ಪಾಕ್‌!

    ಪಾಕ್‌ಗೆ ಪ್ರಯಾಣಿಸಲು ಭಾರತ ಹಿಂದೇಟು ಏಕೆ?
    ಪಾಕಿಸ್ತಾನ ಮುಸ್ಲಿಂ ರಾಷ್ಟ್ರವಾಗಿ ಬೇರ್ಪಟ್ಟ ನಂತರ ಭಾರತದ ವಿರುದ್ಧ ದ್ವೇಷ ಸಾಧಿಸುತ್ತಲೇ ಬಂದಿತು. 1947-48ರಲ್ಲಿ ರಾಜ ಹರಿಸಿಂಗ್‌ ಭಾರತದೊಂದಿಗೆ ಕಾಶ್ಮೀರ ವಿಲೀನ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಇಂಡೋ ಪಾಕ್‌ ಯುದ್ಧ (Indo Pak War) ನಡೆಯಿತು. ಆ ನಂತರ 1965ರಲ್ಲಿ ಕಾಶ್ಮೀರಕ್ಕಾಗಿ ನಡೆದ ಯುದ್ಧ, 1971ರಲ್ಲಿ ಪೂರ್ವ ಪಾಕಿಸ್ತಾನ (ಇಂದಿನ ಬಾಂಗ್ಲಾದೇಶ) ವಿಮೋಚನೆಗಾಗಿ ನಡೆದ ಯುದ್ಧ, 1999 ರಲ್ಲಿ ನಡೆದ ಕಾರ್ಗಿಲ್‌ ಯುದ್ಧ ಇವೆಲ್ಲವೂ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧವನ್ನ ಮತ್ತಷ್ಟು ಹದಗೆಡಿಸುತ್ತಾ ಹೋಯಿತು. ಆದ್ರೆ ಕ್ರೀಡೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಕಾರ್ಗಿಲ್‌ ಯುದ್ಧದ ನಂತರವೂ ಭಾರತ ಮತ್ತು ಪಾಕ್‌ ತಂಡಗಳು ದ್ವಿಪಕ್ಷಿಯ ಸರಣಿ, ಏಕದಿನ ಹಾಗೂ ಟಿ20 ಸರಣಿಗಳಲ್ಲಿ ಮುಖಾಮುಖಿಯಾಗಿವೆ. ಭಾರತ ತಂಡವು ಸಹ ಪಾಕಿಸ್ತಾನದಲ್ಲೇ ದ್ವಿಪಕ್ಷಿಯ ಸರಣಿಗಳನ್ನಾಡಿದೆ. ಆದ್ರೆ 2008ರಲ್ಲಿ ನಡೆದ ಮುಂಬೈ ದಾಳಿ (Mumbai Attack) ಎರಡು ರಾಷ್ಟ್ರಗಳ ಮೇಲೆ ಭಾರೀ ಪರಿಣಾಮ ಬೀರಿತು.

    2008ರ ನವೆಂಬರ್ 26 ರಂದು ಪಾಕ್‌ ಭಯೋತ್ಪಾದಕರು ಮುಂಬೈನಲ್ಲಿ ದಾಳಿ ನಡೆಸಿದ ಬಳಿಕ ಭಾರತ ಮತ್ತು ಪಾಕಿಸ್ತಾನದ ರಾಜತಾಂತ್ರಿಕ ಸಂಬಂಧಗಳು ಮತ್ತಷ್ಟು ಹದಗೆಟ್ಟಿತು. ಭಾರತ ತಂಡವು 2005-2006ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು. ಈ ಪಂದ್ಯದಲ್ಲಿ ಇತ್ತಂಡಗಳು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದವು. ಆದ್ರೆ 2008ರಲ್ಲಿ ನಡೆದ ಮುಂಬೈ ದಾಳಿಯ ನಂತರ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ ಟೂರ್ನಿ ಅಥವಾ ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರವೇ ಪರಸ್ಪರ ಮುಖಾಮುಖಿಯಾಗುತ್ತಿವೆ. ಕಳೆದ ವರ್ಷ ಪಾಕಿಸ್ತಾನ ತಂಡ ಭಾರತದಲ್ಲಿ ನಡೆದ ವಿಶ್ವಕಪ್‌ ಟೂರ್ನಿಯಲ್ಲಿ ಪಾಕ್‌ ತಂಡ ಪಾಲ್ಗೊಂಡಿತ್ತು. ಇದನ್ನೂ ಓದಿ: ನೋವಿನಿಂದ ಬಳಲುತ್ತಿದ್ದರೂ ಸಿಎಸ್‌ಕೆಗಾಗಿ ಆಡ್ತಿದ್ದಾರೆ ಧೋನಿ – ಮಹಿಗೆ ಇರೋ ಆರೋಗ್ಯ ಸಮಸ್ಯೆ ಏನು?

  • ಐಸಿಸಿಯ 3 ಟೂರ್ನಿಗೆ ಭಾರತ ಆತಿಥ್ಯ, ಚಾಂಪಿಯನ್ ಟ್ರೋಫಿ ಪಾಕಿಸ್ತಾನದಲ್ಲಿ

    ಐಸಿಸಿಯ 3 ಟೂರ್ನಿಗೆ ಭಾರತ ಆತಿಥ್ಯ, ಚಾಂಪಿಯನ್ ಟ್ರೋಫಿ ಪಾಕಿಸ್ತಾನದಲ್ಲಿ

    ದುಬೈ: 2024 ರಿಂದ 2031 ಮುಂದಿನ 10 ವರ್ಷಗಳ ವರೆಗೆ ನಡೆಯಲಿರುವ ಐಸಿಸಿ ಟೂರ್ನಿಗಳ ಆತಿಥ್ಯ ವಹಿಸಲಿರುವ ದೇಶಗಳ ಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ಬಿಡುಗಡೆ ಮಾಡಿದೆ. ಏಕದಿನ, ಟಿ20 ವಿಶ್ವಕಪ್ ಸೇರಿ 3 ಟೂರ್ನಿಗೆ ಭಾರತ ಆತಿಥ್ಯ ವಹಿಸಲಿದ್ದು, ಪಾಕಿಸ್ತಾನಕ್ಕೆ ಚಾಂಪಿಯನ್ ಟ್ರೋಫಿ ಆತಿಥ್ಯ ನೀಡಲಾಗಿದೆ.

    2014 ರಿಂದ 2031ರ ವರೆಗೆ 8 ಐಸಿಸಿ ಟೂರ್ನಿಗಳನ್ನು 14 ದೇಶಗಳು ಆತಿಥ್ಯ ವಹಿಸಲಿದೆ. ಈ ಎಲ್ಲಾ ಟೂರ್ನಿಗಳ ಆತಿಥ್ಯದ ಸಿಂಹಪಾಲು ಭಾರತದ ಪಾಲಾಗಿದ್ದು, ಭಾರತದಲ್ಲಿ 2026ರ ಟಿ20 ವಿಶ್ವಕಪ್, 2029ರ ಚಾಂಪಿಯನ್ಸ್ ಟ್ರೋಫಿ ಮತ್ತು 2031ರ ಏಕದಿನ ವಿಶ್ವಕಪ್ ಆತಿಥ್ಯ ಭಾರತದ ಪಾಲಾಗಿದೆ. ಅಚ್ಚರಿ ಎಂಬಂತೆ 2025ರ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲು ಪಾಕಿಸ್ತಾನಕ್ಕೆ ಐಸಿಸಿ ಗ್ರೀನ್ ಸಿಗ್ನಲ್ ನೀಡಿದ್ದು, ಈ ಮೂಲಕ ಪಾಕಿಸ್ತಾನದಲ್ಲಿ 29 ವರ್ಷಗಳ ಬಳಿಕ ಮೊದಲ ಗ್ಲೋಬಲ್ ಟೂರ್ನಿ ನಡೆಸಲು ಪಾಕಿಸ್ತಾನ ಸಿದ್ಧವಾಗುತ್ತಿದೆ. ಈ ನಡುವೆ ಪಾಕಿಸ್ತಾನದಲ್ಲಿ ಆಡಲು ಇತರ ದೇಶಗಳ ತಂಡ ಒಪ್ಪಿಕೊಳ್ಳಲಿದೆಯೇ ಎಂಬ ಆತಂಕವಿದೆ. ಇದನ್ನೂ ಓದಿ: 5 ಕೋಟಿ ಬೆಲೆಯ 2 ವಾಚ್ ಸೀಜ್: ಹಾರ್ದಿಕ್ ಪಾಂಡ್ಯ ಹೇಳಿದ್ದೇನು?

    ದುಬೈನಲ್ಲಿ ಕೆಲದಿನಗಳ ಹಿಂದೆ ಮುಗಿದಿದ್ದ 2021ರ ಟಿ20 ವಿಶ್ವಕಪ್ ಬಳಿಕ 2022ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ಗೆ ಆಸ್ಟ್ರೇಲಿಯಾ ಆತಿಥ್ಯ ವಹಿಸಲಿದ್ದು, 2024ರಲ್ಲಿ ನಡೆಯುವ ಟಿ20 ವಿಶ್ವಕಪ್ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯ ವಹಿಸಲಿದೆ. 2026ರಲ್ಲಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಟಿ20 ವಿಶ್ವಕಪ್ ಆಯೋಜಿಸಲಿದೆ. 2028ರ ಟಿ20 ವಿಶ್ವಕಪ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜಂಟಿಯಾಗಿ ನಡೆಸಲಿದೆ. 2030 ಟಿ20 ವಿಶ್ವಕಪ್ ಇಂಗ್ಲೆಂಡ್, ಐರ್ಲೆಂಡ್, ಸ್ಕಾಟ್ಲೆಂಡ್ ಆತಿಥ್ಯದಲ್ಲಿ ನಡೆಸಲು ಐಸಿಸಿ ತೀರ್ಮಾನಿಸಿದೆ. ಇದನ್ನೂ ಓದಿ: IPLನಲ್ಲಿ ಬೇಡವಾಗಿದ್ದ ವಾರ್ನರ್ ಟಿ20 ವಿಶ್ವಕಪ್‍ನಲ್ಲಿ ದಾಖಲೆಯ ಒಡೆಯ

    2027ರ ಏಕದಿನ ವಿಶ್ವಕಪ್ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ನಮೀಮಿಯಾ ಆತಿಥ್ಯ ವಹಿಸಲಿದ್ದು, 2031 ರಲ್ಲಿ ಭಾರತ ಮತ್ತು ಬಾಂಗ್ಲಾದೇಶ ಜಂಟಿಯಾಗಿ ಏಕದಿನ ವಿಶ್ವಕಪ್ ಟೂರ್ನಿ ನಡೆಸಿಕೊಡಲಿದೆ. 2023ರಲ್ಲಿ ಚಾಂಪಿಯನ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿದ್ದು, 2029ರ ಚಾಂಪಿಯನ್ ಟ್ರೋಫಿ ಭಾರತದಲ್ಲಿ ನಡೆಯಲಿದೆ. ಇದನ್ನೂ ಓದಿ: ಟಿ20 ವಿಶ್ವಕಪ್ ಗೆದ್ದ ಖುಷಿಗೆ ಬೂಟ್‍ನಲ್ಲಿ ಬಿಯರ್ ಸೇವಿಸಿದ ಆಸ್ಟ್ರೇಲಿಯಾ ಆಟಗಾರರು

  • 160 ಕೋಟಿ ರೂ.ಪಾವತಿಸಿ, ಇಲ್ಲವೇ 2023 ವಿಶ್ವಕಪ್ ಆಯೋಜನೆ ಕೈಬಿಡಿ: ಐಸಿಸಿ ಎಚ್ಚರಿಕೆ

    160 ಕೋಟಿ ರೂ.ಪಾವತಿಸಿ, ಇಲ್ಲವೇ 2023 ವಿಶ್ವಕಪ್ ಆಯೋಜನೆ ಕೈಬಿಡಿ: ಐಸಿಸಿ ಎಚ್ಚರಿಕೆ

    ದುಬೈ: 2016 ವಿಶ್ವಕಪ್ ಆಯೋಜನೆಗೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಡಿಸೆಂಬರ್ 31ರ ವೇಳೆಗೆ 160 ಕೋಟಿ ರೂ. ಗಳನ್ನು ಐಸಿಸಿಗೆ ಪಾವತಿ ಮಾಡಬೇಕು ಎಂದು ಸೂಚನೆ ನೀಡಿದೆ.

    ಮುಂದಿನ 2021ರ ಚಾಂಪಿಯನ್ಸ್ ಟ್ರೋಫಿ ಹಾಗೂ 2023ರ ಏಕದಿನ ವಿಶ್ವಕಪ್ ಆತಿಥ್ಯ ಪಡೆದುಕೊಳ್ಳಲು ಐಸಿಸಿ ತಿಳಿಸಿದ ಮೊತ್ತವನ್ನು ಬಿಸಿಸಿಐ ಪಾವತಿ ಮಾಡಬೇಕಿದ್ದು, ಇಲ್ಲವಾದರೆ ಟೂರ್ನಿಯ ಆಯೋಜನೆಯ ಅವಕಾಶವನ್ನು ಕೈ ಬಿಡುವಂತೆ ಸೂಚನೆಯನ್ನು ಐಸಿಸಿ ನೀಡಿದೆ.

    ಏನಿದು ಪ್ರಕರಣ: 2016 ವಿಶ್ವಕಪ್ ಕ್ರಿಕೆಟ್ ಟೂರ್ನಿಯನ್ನು ಬಿಸಿಸಿಐ ಆಯೋಜನೆ ಮಾಡಿತ್ತು. ಈ ವೇಳೆಗೆ ಐಸಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಯಾವುದೇ ರೀತಿಯ ವಿನಾಯಿತಿ ನೀಡಿರಲಿಲ್ಲ. ಸದ್ಯ ಈ ಮೊತ್ತವನ್ನು ಬಿಸಿಸಿಐ ಪಾವತಿ ಮಾಡದ ಕಾರಣ ಐಸಿಸಿ ಒತ್ತಡ ಈ ತಂತ್ರವನ್ನು ಬಳಕೆ ಮಾಡಿದೆ. ಐಸಿಸಿ ಸೂಚನೆಯಂತೆ 160 ಕೋಟಿ ರೂ. ಪಾವತಿ ಮಾಡಲು ಬಿಸಿಸಿಐಗೆ ಕೇವಲ 10 ದಿನಗಳು ಮಾತ್ರ ಬಾಕಿ ಉಳಿದಿದೆ.

    ವಿಶ್ವಕಪ್ ಮೊತ್ತದ ಹಣ ಪಾವತಿ ಸಂಬಂಧಿಸಿದಂತೆ ಕಳೆದ ಅಕ್ಟೋಬರ್ ತಿಂಗಳಲ್ಲಿ ಸಿಂಗಪುರ್ ನಲ್ಲಿ ನಡೆದಿದ್ದ ಐಸಿಸಿ ಸಭೆಯಲ್ಲೂ ಬಿಸಿಸಿಐಗೆ ಮಾಹಿತಿ ನೀಡಲಾಗಿತ್ತು ಎಂದು ಮಾಧ್ಯಮವೊಂದು ವರದಿ ಮಾಡಿದೆ. ಒಂದು ವೇಳೆ 160 ಕೋಟಿ ರೂ ಪಾವತಿ ಮಾಡದಿದ್ದರೆ, 2023ರ ಐಸಿಸಿ ಏಕದಿನ ವಿಶ್ವಕಪ್ ಹಾಗೂ 2021 ರ ಚಾಂಪಿಯನ್ಸ್ ಟ್ರೋಫಿ ಆಯೋಜನೆಯನ್ನು ಬಿಟ್ಟುಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಜೊತೆಗೆ ಪ್ರಸಕ್ತ ವರ್ಷದಲ್ಲಿ ಯಾವುದೇ ರೀತಿಯ ಪಾಲು ಸಹ ನೀಡುವುದಿಲ್ಲ ಎಂದು ಅದು ತಿಳಿಸಿದೆ.

    ಐಸಿಸಿಗೆ 160 ಕೋಟಿ ರೂಪಾಯಿ ಪಾವತಿ ಮಾಡುವುದಕ್ಕೆ 10 ದಿನಗಳ ಕಾಲಾವಕಾಶ ಇದೆ. ಒಂದು ವೇಳೆ ಒತ್ತಡದ ಹೊರತಾಗಿಯೂ ಬಿಸಿಸಿಐ ಪಾವತಿ ಮಾಡಲು ನಿರಾಕರಿಸಿದರೆ ಐಸಿಸಿ ತನಗೆ ಪ್ರಸಕ್ತ ವರ್ಷದ ಭಾರತದ ಆದಾಯ ಹಂಚಿಕೆಯಲ್ಲಿ ಕಡಿತಗೊಳಿಸುತ್ತದೆ ಎಂಬ ಮಾತು ಸಹ ಕೇಳಿ ಬಂದಿದೆ. ಒಂದೊಮ್ಮೆ ಪಾವತಿ ಬಿಸಿಸಿಐ ಪಾವತಿ ಮಾಡಲು ವಿಫಲವಾದರೆ 2021ರ ಚಾಂಪಿಯನ್ ಟ್ರೋಫಿ ಹಾಗೂ 2023ರ ವಿಶ್ವಕಪ್ ಆಯೋಜನೆಯ ಅವಕಾಶ ಬಿಸಿಸಿಐ ಕೈ ತಪ್ಪುತ್ತದೆ. ಈ ಕುರಿತು ಐಸಿಸಿ ಮಂಡಳಿ ನಿರ್ಧಾರ ಮಾಡಲಿದೆ ಎಂಬ ಎಚ್ಚರಿಕೆಯೂ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv