Tag: champions trophy

  • ಕಿವೀಸ್‌ ವಿರುದ್ಧ ಭಾರತ ಗೆದ್ದರೆ ಸೆಮಿಸ್‌ನಲ್ಲಿ ಬಲಿಷ್ಠ ಆಸೀಸ್‌ ಎದುರಾಳಿ – ಹೇಗಂತೀರಾ?

    ಕಿವೀಸ್‌ ವಿರುದ್ಧ ಭಾರತ ಗೆದ್ದರೆ ಸೆಮಿಸ್‌ನಲ್ಲಿ ಬಲಿಷ್ಠ ಆಸೀಸ್‌ ಎದುರಾಳಿ – ಹೇಗಂತೀರಾ?

    ದುಬೈ: ಲೀಗ್‌ ಸುತ್ತಿನ ಆರಂಭಿಕ ಎರಡೂ ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿ ಸೆಮಿಫೈನಲ್ಸ್‌ಗೆ ಪ್ರವೇಶ ಪಡೆದಿರುವ ಭಾರತ ಮತ್ತು ನ್ಯೂಜಿಲೆಂಡ್‌ (New Zealand) ತಂಡಗಳು ಇಂದು ಮುಖಾಮುಖಿಯಾಗುತ್ತಿವೆ. ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಧ್ಯಾಹ್ನ 2:30ಕ್ಕೆ ಪಂದ್ಯ ಆರಂಭವಾಗಲಿದೆ. ಇಂದಿನ ಪಂದ್ಯದಲ್ಲಿ ಭಾರತ (Team India) ಗೆದ್ದರೆ, ಬಲಿಷ್ಠ ಆಸ್ಟ್ರೇಲಿಯಾ (Australia) ವಿರುದ್ಧ, ಸೋತರೆ ದಕ್ಷಿಣ ಆಫ್ರಿಕಾ ವಿರುದ್ಧ ಕಾದಾಟಕ್ಕಿಳಿಯಲಿದೆ.

    ಎ-ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ – ಕಿವೀಸ್‌ ಈಗಾಗಲೇ ಸೆಮೀಸ್‌ ಪ್ರವೇಶಿಸಿರುವುದರಿಂದ ಈ ಪಂದ್ಯದ ಫಲಿತಾಂಶ ಯಾವುದೇ ಪ್ರಭಾವ ಬೀರುವುದಿಲ್ಲ. ಆದರೂ ಅಜೇಯವಾಗಿ ಸೆಮೀಸ್‌ ಪ್ರವೇಶಿಸುವ ಅವಕಾಶವನ್ನು ಪಂದ್ಯ ದಯಪಾಲಿಸಿದೆ. ಇದನ್ನೂ ಓದಿ: ಇಂದು ಭಾರತ Vs ಕಿವೀಸ್‌ ಹೈವೋಲ್ಟೇಜ್‌ ಕದನ – ಸ್ಪಿನ್ನರ್‌ಗಳ ಚಕ್ರವ್ಯೂಹ ಭೇದಿಸುವುದೇ ಟೀಂ ಇಂಡಿಯಾ?

    ತಲಾ 4 ಅಂಕ ಗಳಿಸಿದ್ದರೂ ರನ್‌ರೇಟ್‌ ಆಧಾರದಲ್ಲಿ ಕಿವೀಸ್‌ ಎ-ಗುಂಪಿನ ಅಗ್ರಸ್ಥಾನದಲ್ಲಿದ್ದರೆ, ಭಾರತ 2ನೇ ಸ್ಥಾನದಲ್ಲಿದೆ. ಭಾನುವಾರದ ಪಂದ್ಯದಲ್ಲಿ ಭಾರತ ಗೆದ್ದರೇ ತನ್ನ ಗುಂಪಿನಿಂದ ಅಗ್ರಸ್ಥಾನಿಯಾಗಿ ಹೊಮ್ಮಲಿದೆ. ಇದನ್ನೂ ಓದಿ: Champions Trophy: ಸೋತ ಇಂಗ್ಲೆಂಡ್‌ ಟೂರ್ನಿಯಿಂದ ಔಟ್‌ – ಗೆದ್ದ ದ. ಆಫ್ರಿಕಾ ಸೆಮಿಗೆ ಎಂಟ್ರಿ

    ಭಾರತ ಗೆದ್ದರೆ ಸೆಮಿಸ್‌ನಲ್ಲಿ ಆಸೀಸ್‌ ಎದುರಾಳಿ:
    ಇತ್ತ ಬಿ-ಗುಂಪಿನಲ್ಲಿ 5 ಅಂಕ ಪಡೆದಿರುವ ದಕ್ಷಿಣ ಆಫ್ರಿಕಾ ಅಗ್ರಸ್ಥಾನದಲ್ಲಿದ್ದರೆ,‌ ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದೆ. ಅಂಕಪಟ್ಟಿಯ ಪ್ರಕಾರ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಹಾಗೂ ಬಿ ಗುಂಪಿಯಲ್ಲಿ 2ನೇ ಸ್ಥಾನ ಪಡೆದ ಪಂದ್ಯಕ್ಕೆ ಹಾಗೂ ಎ-ಗುಂಪಿಯನ 2ನೇ ಸ್ಥಾನ ಪಡೆದ ತಂಡಕ್ಕೆ ಮತ್ತು ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡಗಳ ನಡುವೆ ಸೆಣಸಾಟ ನಡೆಯಲಿದೆ. ಹೀಗಾಗಿ ಭಾರತ ಇಂದಿನ ಪಂದ್ಯದಲ್ಲಿ ಬಲಿಷ್ಠ ಆಸೀಸ್‌ ತಂಡವನ್ನು ಎದುರಿಸಲೀದೆ.

    ಮರುಕಳಿಸುವುದೇ 2023ರ ವಿಶ್ವಕಪ್‌ ನೆನಪು:
    2023ರಲ್ಲಿ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್‌ ಟೂರ್ನಿ ಫೈನಲ್‌ನಲ್ಲಿ ಭಾರತ, ಆಸೀಸ್‌ ತಂಡಗಳು ಮುಖಾಮುಖಿಯಾಗಿದ್ದವು. ಅಂದು ಪ್ಯಾಟ್‌ ಕಮ್ಮಿನ್ಸ್‌ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಅಂದು ಭಾರತ ಆಸೀಸ್‌ ಬಿಗಿ ಬೌಲಿಂಗ್‌ ಹಿಡಿತಕ್ಕೆ ತತ್ತರಿಸಿ 240 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತ್ತು. ಆದ್ರೆ ಟ್ರಾವಿಸ್‌ ಹೆಡ್‌ ಅವರ ಶತಕದಾಟದಿಂದಾಗಿ ಭಾರತಕ್ಕೆ ಸೋಲಾಯಿತು. ಇದು ಇಡೀ ಭಾರತೀಯರಿಗೆ ನೋವುಂಟುಮಾಡಿತ್ತು. ಇದೀಗ ಈ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಭಾರತಕ್ಕೆ ಅವಕಾಶ ಸಿಗುವುದೇ ಅನ್ನೋದನ್ನ ಕಾದುನೋಡಬೇಕಿದೆ.

  • ಪಂದ್ಯಕ್ಕೆ ಮಳೆ ಅಡ್ಡಿ| ಆಸ್ಟ್ರೇಲಿಯಾ ಸೆಮಿಗೆ ಹೋದ್ರೂ ಅಫ್ಘಾನ್‌ಗೆ ಇನ್ನೂ ಇದೆ ಚಾನ್ಸ್‌!

    ಪಂದ್ಯಕ್ಕೆ ಮಳೆ ಅಡ್ಡಿ| ಆಸ್ಟ್ರೇಲಿಯಾ ಸೆಮಿಗೆ ಹೋದ್ರೂ ಅಫ್ಘಾನ್‌ಗೆ ಇನ್ನೂ ಇದೆ ಚಾನ್ಸ್‌!

    ಲಾಹೋರ್‌: ಚಾಂಪಿಯನ್ಸ್‌ ಟ್ರೋಫಿ (Champions Trophy) ಲೀಗ್‌ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ ಆಸ್ಟ್ರೇಲಿಯಾ (Australia) ಸೆಮಿಫೈನಲ್‌ ಪ್ರವೇಶಿಸಿದೆ. ಅಫ್ಘಾನಿಸ್ತಾನದ (Afghanistan) ಸೆಮಿ ಭವಿಷ್ಯ ಇಂಗ್ಲೆಂಡ್‌ (England) ಕೈಯಲ್ಲಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಅಫ್ಘಾನಿಸ್ತಾನ 50 ಓವರ್‌ಗಳಲ್ಲಿ 273 ರನ್‌ಗಳಿಗೆ ಆಲೌಟ್‌ ಆಯ್ತು. ನಂತರ ಆಸ್ಟ್ರೇಲಿಯಾ ಬ್ಯಾಟ್‌ ಮಾಡುವ ವೇಳೆ ಜೋರಾಗಿ ಮಳೆ ಸುರಿಯಲು ಆರಂಭಿಸಿತ್ತು. ಮಳೆಯಿಂದ ಪಂದ್ಯ ಸ್ಥಗಿತಗೊಂಡಾಗ ಆಸ್ಟ್ರೇಲಿಯಾ 12.5 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 109 ರನ್‌ ಗಳಿಸಿತ್ತು.

     

    ನಿರಂತರ ಮಳೆ (Rain) ಸುರಿದ ಹಿನ್ನೆಲೆಯಲ್ಲಿ ಕೊನೆಗೆ ಪಂದ್ಯವನ್ನು ರದ್ದುಗೊಳಿಸಲಾಯಿತು. ಅಂತಿಮವಾಗಿ ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕವನ್ನು ನೀಡಲಾಯಿತು.

    ಸದ್ಯ ಈಗ ಬಿ ಗ್ರೂಪ್‌ನಲ್ಲಿ ಆಸ್ಟ್ರೇಲಿಯಾ 4 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ ದಕ್ಷಿಣ ಆಫ್ರಿಕಾ 3 ಅಂಕದೊಂದಿಗೆ ಎರಡನೇ ಸ್ಥಾನ 3 ಅಂಕ ಪಡೆದಿರುವ ಅಫ್ಘಾನಿಸ್ತಾನ ಮೂರನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿದ್ದರೂ ಅಫ್ಘಾನಿಸ್ತಾನ ಸೆಮಿಗೆ ಹೋಗುವ ಅವಕಾಶ ಈಗಲೂ ಇದೆ.

    ಸೆಮಿ ಅವಕಾಶ ಹೇಗೆ?
    ಸದ್ಯ ಈಗ ದಕ್ಷಿಣ ಆಫ್ರಿಕಾ (South Africa) 2.140 ರನ್‌ ರೇಟ್‌ ಹೊಂದಿದ್ದರೆ ಅಫ್ಘಾನಿಸ್ತಾನ -0.990 ರನ್‌ ರೇಟ್‌ ಹೊಂದಿದೆ. ಮಾರ್ಚ್‌ 1 ಶನಿವಾರ ಕರಾಚಿಯಲ್ಲಿ ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ಪಂದ್ಯ ನಡೆಯಲಿದೆ.

    ಈ ಪಂದ್ಯದಲ್ಲಿ ಇಂಗ್ಲೆಂಡ್‌ ಜಯಗಳಿಸುವುದು ಮಾತ್ರವಲ್ಲ ಭಾರೀ ಅಂತರದಿಂದ ಗೆಲ್ಲಬೇಕಾಗುತ್ತದೆ. ಒಂದು ವೇಳೆ ಮೊದಲು ಬ್ಯಾಟ್‌ ಮಾಡಿದರೆ ಇಂಗ್ಲೆಂಡ್‌ ಕನಿಷ್ಟ 207 ರನ್‌ಗಳ ಅಂತರದಿಂದ ಜಯಗಳಿಸಬೇಕಾಗುತ್ತದೆ. ಒಂದು ವೇಳೆ ಚೇಸಿಂಗ್‌ ಮಾಡಿದರೆ ಇಂಗ್ಲೆಂಡ್‌ ಗುರಿಯನ್ನು 11.1 ಓವರ್‌ಗಳಲ್ಲಿ ಹೊಡೆಯಬೇಕಾಗುತ್ತದೆ.

    ಈ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದರೆ ಆಫ್ರಿಕಾಗೆ 1 ಅಂಕ ಸಿಗುತ್ತದೆ. ನೆಟ್‌ ರನ್‌ ರೇಟ್‌ ಉತ್ತಮವಾಗಿರುವ ಕಾರಣ ಅಫ್ರಿಕಾ 4 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೆ ಏರುತ್ತದೆ. ಭಾನುವಾರ ಭಾರತ ಮತ್ತು ನ್ಯೂಜಿಲೆಂಡ್‌ ಮಧ್ಯೆ ಕೊನೆಯ ಲೀಗ್‌ ಪಂದ್ಯ ನಡೆಯಲಿದ್ದು ಈ ಪಂದ್ಯದಲ್ಲಿ ಸೋತವರ ಜೊತೆ ಸೆಮಿಫೈನಲ್‌ ಆಡಲಿದೆ.

     

  • Champions Trophy | ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಶುಭಮನ್ ಗಿಲ್ ನಾಯಕ?

    Champions Trophy | ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಶುಭಮನ್ ಗಿಲ್ ನಾಯಕ?

    ಅಬುಧಾಬಿ: 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಮಾ.2ರಂದು ನಡೆಯಲಿರುವ ಭಾರತ ಹಾಗೂ ನ್ಯೂಜಿಲೆಂಡ್ ಪಂದ್ಯಕ್ಕೆ ಶುಭಮನ್ ಗಿಲ್ (Shubman Gill) ನಾಯಕತ್ವ ವಹಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

    ಭಾನುವಾರ ನಡೆಯಲಿರುವ ಗ್ರೂಪ್ `ಎ’ ಅಂತಿಮ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಆದರೆ ಫೆ.23 ರಂದು ನಡೆದ ಭಾರತ ಹಾಗೂ ಪಾಕಿಸ್ತಾನ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ (Rohit Sharma) ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದರು. ಈ ಹಿನ್ನೆಲೆ ರೋಹಿತ್ ಶರ್ಮಾ ಪಂದ್ಯದಿಂದ ಹೊರಗುಳಿಯುವ ನಿರ್ಧಾರ ಕೈಗೊಂಡಲ್ಲಿ ಶುಭಮನ್ ಗಿಲ್ ಭಾರತ ತಂಡವನ್ನು ಮುನ್ನಡೆಸುವಸಾಧ್ಯತೆಯಿದೆ.ಇದನ್ನೂ ಓದಿ:ಕಾಪು ಶ್ರೀಹೊಸ ಮಾರಿಗುಡಿ ಕಂಡು ನಿಬ್ಬೆರಗಾದ ನಟಿ ಶಿಲ್ಪಾ ಶೆಟ್ಟಿ 

    ಜ.18 ಘೋಷಣೆಯಾದ ಚಾಂಪಿಯನ್ಸ್ ಟ್ರೋಫಿಯ ಭಾರತ ತಂಡದಲ್ಲಿ ನಾಯಕನಾಗಿ ರೋಹಿತ್ ಶರ್ಮಾ ಹಾಗೂ ಉಪನಾಯಕನಾಗಿ ಶುಭಮನ್ ಗಿಲ್ ಆಯ್ಕೆಯಾಗಿದ್ದರು. ಇದೀಗ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಶುಭಮನ್ ಗಿಲ್ ನಾಯಕತ್ವ ವಹಿಸುವ ಸಾಧ್ಯತೆಗಳಿವೆ.

    ಕಳೆದ ವರ್ಷ ಜುಲೈನಲ್ಲಿ ಜಿಂಬಾಬ್ವೆ ವಿರುದ್ಧದ 5 ಟಿ20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸುವ ಮೂಲಕ ಶುಭಮನ್ ಗಿಲ್ ನಾಯಕತ್ವಕ್ಕೆ ಪಾದಾರ್ಪಣೆ ಮಾಡಿದ್ದರು. ಇದೀಗ ಮೊದಲ ಬಾರಿಗೆ ಏಕದಿನ ಪಂದ್ಯದಲ್ಲಿ ನಾಯಕತ್ವ ವಹಿಸುವ ಸಾಧ್ಯತೆಗಳಿವೆ. ಇತ್ತೀಚಿನ ದಿನಗಳಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ಗಿಲ್, ಐಸಿಸಿ ಏಕದಿನ ಬ್ಯಾಟ್ಸ್ಮನ್‌ಗಳ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ ಮತ್ತು 2025ರಲ್ಲಿ ಇದುವರೆಗೆ ಆಡಿದ 50 ಓವರ್‌ಗಳ 5 ಪಂದ್ಯಗಳಲ್ಲಿ 2 ಶತಕ ಮತ್ತು 2 ಅರ್ಧಶತಕಗಳಿಂದ ಒಟ್ಟು 406 ರನ್ ಗಳಿಸಿದ್ದಾರೆ.

    ಬಾಂಗ್ಲಾದೇಶ ಮತ್ತು ಪಾಕಿಸ್ತಾನ ವಿರುದ್ಧ ಆಡಿದ ಮೊದಲ ಎರಡು `ಗ್ರೂಪ್ ಎ’ ಪಂದ್ಯಗಳಲ್ಲಿ ಗೆದ್ದು ಭಾರತ ಈಗಾಗಲೇ 2025ರ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ, ಗಿಲ್ ಅಜೇಯರಾಗಿ 101 ಗಳಿಸಿದ್ದರು. ಈ ಮೂಲಕ 46.3 ಓವರ್‌ಗಳಲ್ಲಿ 229 ರನ್‌ಗಳ ಗುರಿಯನ್ನು ತಲುಪಲು ಸಹಾಯ ಮಾಡಿದರು ಮತ್ತು ಭಾನುವಾರ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ, ವಿರಾಟ್ ಕೊಹ್ಲಿ 100 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಮೂಲಕ 42.3 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 242 ರನ್‌ಗಳನ್ನು ಬೆನ್ನೆಟ್ಟಿತು.ಇದನ್ನೂ ಓದಿ: ಸಿಎಂ, ಕಾಂಗ್ರೆಸ್ ಹೆದರಿಸಲು ಡಿಕೆಶಿ ಹಿಂದುತ್ವದ ವೇಷ ಹಾಕಿದ್ದಾರೆ: ಮುನಿರತ್ನ

     

     

  • Champions Trophy: ಮೈದಾನಕ್ಕೆ ನುಗ್ಗಿ ರಚಿನ್ ರವೀಂದ್ರನನ್ನು ತಬ್ಬಿಕೊಂಡ ಉಗ್ರ ಸಂಘಟನೆಯ ಬೆಂಬಲಿಗ!

    Champions Trophy: ಮೈದಾನಕ್ಕೆ ನುಗ್ಗಿ ರಚಿನ್ ರವೀಂದ್ರನನ್ನು ತಬ್ಬಿಕೊಂಡ ಉಗ್ರ ಸಂಘಟನೆಯ ಬೆಂಬಲಿಗ!

    ರಾವಲ್ಪಿಂಡಿ: ಇಲ್ಲಿ (Rawalpindi) ನಡೆದ ನ್ಯೂಜಿಲೆಂಡ್-ಬಾಂಗ್ಲಾದೇಶ ನಡುವಿನ ಪಂದ್ಯದ ಸಂದರ್ಭದಲ್ಲಿ ನಿಷೇಧಿತ ಉಗ್ರ ಸಂಘಟನೆ ಇಸ್ಲಾಮಿಸ್ಟ್ ಪಕ್ಷ ತೆಹ್ರೀಕ್-ಎ-ಲಬೈಕ್ ಪಾಕಿಸ್ತಾನ್ (TLP) ಬೆಂಬಲಿಗನೊಬ್ಬ ಮೈದಾನಕ್ಕೆ ನುಗ್ಗಿ, ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ರಚಿನ್ ರವೀಂದ್ರ (Rachin Ravindra) ಅವರನ್ನು ಅಪ್ಪಿಕೊಂಡಿದ್ದಾನೆ. ಈ ಘಟನೆ ಪಾಕಿಸ್ತಾನದ ಭದ್ರತಾ ಪಡೆಗಳ ಕಾರ್ಯ ಹಾಗೂ ಭದ್ರತಾ ವೈಫಲ್ಯದ ಬಗ್ಗೆ ಚರ್ಚೆಗೆ ಕಾರಣವಾಗಿದೆ.

    ರಾವಲ್ಪಿಂಡಿ ಮೈದಾನದಲ್ಲಿ ರಚಿನ್ ರವೀಂದ್ರ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಮೈದಾನಕ್ಕೆ ನುಗ್ಗಿ, ಅವರನ್ನು ಹಿಂದಿನಿಂದ ತಬ್ಬಿಕೊಂಡಿದ್ದಾನೆ. ಆಗ ರಚಿನ್ ಒಂದು ಕ್ಷಣ ಆತಂಕಕ್ಕೊಳಗಾಗಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿ ಆತನನ್ನು ಬಂಧಿಸಿ ಕ್ರೀಡಾಂಗಣದಿಂದ ಹೊರಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

    ವಿಚಾರಣೆಗೆ ನಡೆಸಿದಾಗ ಆತ 2021ರಲ್ಲಿ ನಿಷೇಧಕ್ಕೊಳಗಾದ ಟಿಎಲ್‌ಪಿ ಬೆಂಬಲಿಗ ಎಂಬುದು ಗೊತ್ತಾಗಿದೆ. ಈ ವ್ಯಕ್ತಿ ರಚಿನ್ ರವೀಂದ್ರ ಅವರನ್ನು ಹಿಂದಿನಿಂದ ತಬ್ಬಿಕೊಂಡು ಟಿಎಲ್‌ಪಿ ನಾಯಕ ಸಾದ್ ರಿಜ್ವಿ ಅವರ ಚಿತ್ರವನ್ನು ಪ್ರದರ್ಶಿಸಿದ್ದಾನೆ.

    ಚಾಂಪಿಯನ್ಸ್ ಟ್ರೋಫಿ ವೇಳೆ ಪಾಕಿಸ್ತಾನದಲ್ಲಿ ಭಯೋತ್ಪಾದಕ ಬೆದರಿಕೆಗಳ ವರದಿಗಳ ನಡುವೆ ಈ ಘಟನೆ ಅನೇಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

  • ಮಳೆಯಿಂದ ಆಸ್ಟ್ರೇಲಿಯಾ, ಆಫ್ರಿಕಾ ಪಂದ್ಯ ರದ್ದು

    ಮಳೆಯಿಂದ ಆಸ್ಟ್ರೇಲಿಯಾ, ಆಫ್ರಿಕಾ ಪಂದ್ಯ ರದ್ದು

    ರಾವಲ್ಪಿಂಡಿ: ಐಸಿಸಿ ಚಾಂಪಿಯನ್‌ ಟ್ರೋಫಿಯ (ICC Champions Trophy) ಆಸ್ಟ್ರೇಲಿಯಾ (Australia) ಮತ್ತು ದಕ್ಷಿಣಾ ಆಫ್ರಿಕಾ (South Africa) ನಡುವಣ ಪಂದ್ಯ ಮಳೆಯಿಂದಾಗಿ (Rain) ರದ್ದಾಗಿದೆ.

    ಟಾಸ್‌ ಹಾಕಲು ಮಳೆ ಅವಕಾಶ ನೀಡಲಿಲ್ಲ. ಮೂರು ಗಂಟೆಗಳಿಗೂ ಹೆಚ್ಚು ಕಾಲ ವಾತಾವರಣದಲ್ಲಿ ಬದಲಾವಣೆಯಾಗದ ಕಾರಣ ಪಂದ್ಯವನ್ನು ಅಂತಿಮವಾಗಿ ರದ್ದುಗೊಳಿಸಲಾಯಿತು.

    ರದ್ದಾಗಿದ್ದರಿಂದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಯಿತು. ಬುಧವಾರ ಇಂಗ್ಲೆಂಡ್‌ ಮತ್ತು ಅಫ್ಘಾನಿಸ್ತಾನ ಮಧ್ಯೆ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಸೋತವರು ಟೂರ್ನಿಯಿಂದಲೇ ನಿರ್ಗಮಿಸಲಿದ್ದಾರೆ.

    ಬಿ ಗುಂಪಿನಿಂದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ 3 ಅಂಕ ಪಡೆದಿದ್ದರೂ ನೆಟ್‌ ರನ್‌ ರೇಟ್‌ ಉತ್ತಮವಾಗಿರುವ ಕಾರಣ ದಕ್ಷಿಣ ಆಫ್ರಿಕಾ ಮೊದಲ ಸ್ಥಾನದಲ್ಲಿದೆ. ಇಂಗ್ಲೆಂಡ್‌ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದರೆ ಅಫ್ಘಾನಿಸ್ತಾನ ಆಫ್ರಿಕಾ ವಿರುದ್ಧ ಸೋತಿದೆ.  ಇದನ್ನೂ ಓದಿ: ಸುಳ್ಳಾಯ್ತು ಐಐಟಿ ಬಾಬಾ ಭವಿಷ್ಯ – ಪಾಕ್‌ ವಿರುದ್ಧ ಗೆದ್ದು ಬೀಗಿದ ಭಾರತ

    ಎ ಗುಂಪಿನಲ್ಲಿ ನ್ಯೂಜಿಲೆಂಡ್‌ ಮತ್ತು ಭಾರತ ಈಗಾಗಲೇ ಸೆಮಿಫೈನಲ್‌ ಪ್ರವೇಶಿಸಿವೆ. ಬಾಂಗ್ಲಾದೇಶ ಮತ್ತು ಮತ್ತು ಪಾಕಿಸ್ತಾನ ಟೂರ್ನಿಯಿಂದ ನಿರ್ಗಮಿಸಿದೆ.

  • ಪಾಕ್‌ ಬಗ್ಗುಬಡಿದು ಗೆದ್ದು ಬೀಗಿದ ಭಾರತ – ಫ್ಯಾನ್ಸ್‌ ಥ್ರಿಲ್‌

    ಪಾಕ್‌ ಬಗ್ಗುಬಡಿದು ಗೆದ್ದು ಬೀಗಿದ ಭಾರತ – ಫ್ಯಾನ್ಸ್‌ ಥ್ರಿಲ್‌

    ಬೆಂಗಳೂರು: ದೆಹಲಿಯಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿ ಪಂದ್ಯದಲ್ಲಿ ಪಾಕ್‌ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸುತ್ತಿದ್ದಂತೆ ಕ್ರಿಕೆಟ್‌ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ಟೀಂ ಇಂಡಿಯಾ ಗೆಲುವನ್ನು ಎಲ್ಲೆಡೆ ಸಂಭ್ರಮಾಚರಣೆ ಮಾಡಿದ್ದಾರೆ.

    ಬೆಂಗಳೂರಿನ ಹಲವೆಡೆ ರೋಹಿತ್‌ ಶರ್ಮಾ ಪಡೆ ಗೆಲುವನ್ನು ಸಂಭ್ರಮಿಸಲಾಗಿದೆ. ಭಾರತ ಗೆಲುವು ದಾಖಲಿಸುತ್ತಿದ್ದಂತೆ ಇತ್ತ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಕಿಂಗ್‌ ಕೊಹ್ಲಿ ಶತಕವನ್ನು ಕೊಂಡಾಡಿದ್ದಾರೆ. ಇದನ್ನೂ ಓದಿ: ಕಿಂಗ್‌ ಕೊಹ್ಲಿ ಶತಕದೊಂದಿಗೆ ಭಾರತಕ್ಕೆ ವಿಜಯಮಾಲೆ – ಹೈವೋಲ್ಟೇಜ್‌ ಪಂದ್ಯದಲ್ಲಿ ಪಾಕ್‌ಗೆ ಸೋಲು

    ನಗರದ ಪಬ್‌ಗಳಲ್ಲಿ ಡಿಜೆ ಸಾಂಗ್‌ಗಳನ್ನು ಹಾಕಿ ಫ್ಯಾನ್ಸ್‌ ಕುಣಿದು ಕುಪ್ಪಳಿಸಿದ್ದಾರೆ. ಈ ಬಾರಿ ಭಾರತ ಚಾಂಪಿಯನ್ಸ್‌ ಟ್ರೋಫಿ ಗೆಲ್ಲಲಿ ಎಂದು ಶುಭಹಾರೈಸಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಹನುಮಂತಪ್ಪ ವೃತ್ತದಲ್ಲಿ ಪಟಾಕಿ‌ ಸಿಡಿಸಿ ಸೆಲಬ್ರೇಟ್‌ ಮಾಡಿದ್ದಾರೆ. ಪಾಕಿಸ್ತಾನ ವಿರುದ್ದ ಧಿಕ್ಕಾರ ಕೂಗಿ, ವಿರಾಟ್ ಕೊಹ್ಲಿಗೆ ಜೈಕಾರ ಕೂಗಿದ್ದಾರೆ. ಇದೇ ವೇಳೆ, ನರೇಂದ್ರ ಮೋದಿಗೂ ಜೈಕಾರ ಕೂಗಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: Champions Trophy: ಅತಿ ಹೆಚ್ಚು ಕ್ಯಾಚ್ ಪಡೆದ ಫೀಲ್ಡರ್, 14,000 ರನ್ ಮೈಲುಗಲ್ಲು – ಎರಡು ದಾಖಲೆ ಬರೆದ ಕೊಹ್ಲಿ

    ಬೆಳಗಾವಿಯ ಗೊಂದಳಿ ಗಲ್ಲಿಯಲ್ಲಿ ಪಟಾಕಿ ಸಿಡಿಸಿ, ಮ್ಯೂಸಿಕ್‌ಗೆ ಡ್ಯಾನ್ಸ್ ಮಾಡಿ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ. ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಕ್ರಿಕೆಟ್‌ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ.

    ಹುಬ್ಬಳ್ಳಿಯ ಚನ್ನಮ್ಮ ವೃತ್ತ, ಚಿತ್ರದುರ್ಗ, ರಾಯಚೂರು ಸೇರಿದಂತೆ ಹಲವೆಡೆ ಟೀಂ ಇಂಡಿಯಾ ಅಭಿಮಾನಿಗಳು ಗೆಲುವನ್ನು ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಆಲೌಟ್‌ – ಭಾರತಕ್ಕೆ 242 ರನ್‌ಗಳ ಟಾರ್ಗೆಟ್‌

  • ಪಾಕಿಸ್ತಾನ ಆಲೌಟ್‌ – ಭಾರತಕ್ಕೆ 242 ರನ್‌ಗಳ ಟಾರ್ಗೆಟ್‌

    ಪಾಕಿಸ್ತಾನ ಆಲೌಟ್‌ – ಭಾರತಕ್ಕೆ 242 ರನ್‌ಗಳ ಟಾರ್ಗೆಟ್‌

    – ಬೌಲಿಂಗ್‌ನಲ್ಲಿ ಮಿಂಚಿದ ಕುಲ್ದೀಪ್‌ ಯಾದವ್‌
    – ಅರ್ಧಶತಕ ಗಳಿಸಿದ ಸೌದ್ ಶಕೀಲ್

    ದುಬೈ: ಇಲ್ಲಿ ನಡೆಯುತ್ತಿರುವ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ 241ಕ್ಕೆ ಆಲೌಟ್‌ ಆಗಿ ಭಾರತಕ್ಕೆ 242 ರನ್‌ಗಳ ಗುರಿ ನೀಡಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನಕ್ಕೆ ಆರಂಭಿಕ ಆಘಾತ ಎದುರಾಯಿತು. ಕೇವಲ 10 ರನ್‌ಗಳಿಗೆ ಇಮಾಮ್-ಉಲ್-ಹಕ್ ಮತ್ತು 23 ರನ್‌ ಗಳಿಸಿ ಬಾಬರ್ ಅಜಮ್ ವಿಕೆಟ್‌ ಒಪ್ಪಿಸಿದ್ದು, ಪಾಕ್‌ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು.

    52 ರನ್‌ ಇರುವಾಗಲೇ ಪಾಕಿಸ್ತಾನ ಎರಡು ವಿಕೆಟ್‌ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಸೌದ್ ಶಕೀಲ್ ಮತ್ತು ಕ್ಯಾಪ್ಟನ್‌ ಮೊಹಮ್ಮದ್ ರಿಜ್ವಾನ್ ಜೊತೆಗೂಡಿ ತಂಡಕ್ಕೆ ಚೇತರಿಕೆ ನೀಡಿದರು. ಈ ಜೋಡಿ 144 ಬಾಲ್‌ಗಳಿಗೆ 104 ರನ್‌ ಗಳಿಸಿ ಭರವಸೆ ಮೂಡಿಸಿತು. ಸೌದ್‌ ಶಕೀಲ್‌ ಅರ್ಧಶತಕ (62 ರನ್‌, 76 ಬಾಲ್‌, 5 ಫೋರ್) ಸಿಡಿಸಿದರು.‌ ರಿಜ್ವಾನ್‌ 46 ರನ್‌ ಗಳಿಸಿದರು.

    ರಿಜ್ವಾನ್‌ ವಿಕೆಟ್‌ ಒಪ್ಪಿಸಿ ಹೊರನಡೆಯುತ್ತಿದ್ದಂತೆ ಮ್ಯಾಚ್‌ ಪಥವೇ ಬದಲಾಯಿತು. ಕ್ರೀಸ್‌ಗೆ ಬಂದ ಬ್ಯಾಟರ್‌ಗಳು ಹೆಚ್ಚು ಹೊತ್ತು ನಿಲ್ಲದೇ ವಿಕೆಟ್‌ಗಳನ್ನು ಒಪ್ಪಿಸಿ ಹೊರ ನಡೆದರು. ಸಲ್ಮಾನ್ ಆಘಾ 19, ತಯ್ಯಬ್ ತಹಿರ್ 4 ರನ್‌ ಗಳಿಸಿ ಔಟಾದರು.

    ಖುಷ್ದಿಲ್ ಷಾ 38 ರನ್‌ ಗಳಿಸಿದರು. ಶಾಹೀನ್ ಶಾ ಅಫ್ರಿದಿ ಶೂನ್ಯ ಸುತ್ತಿ ಪೆವಿಲಿಯನ್‌ ಕಡೆ ಹೆಜ್ಜೆ ಹಾಕಿದರು. ನಸೀಮ್ ಷಾ 14 ರನ್‌ ಗಳಿಸಿದರು. ಅಂತಿಮವಾಗಿ ಪಾಕಿಸ್ತಾನ 49.4 ಬಾಲ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 241 ರನ್‌ ಗಳಿಸಿತು.

    ಟೀಂ ಇಂಡಿಯಾ ಪರ ಕುಲ್ದೀಪ್‌ ಯಾದವ್‌ 3 ವಿಕೆಟ್‌ ಕಿತ್ತು ಸ್ಪಿನ್‌ ಮೋಡಿ ಮಾಡಿದರು. ಹಾರ್ದಿಕ್ ಪಾಂಡ್ಯ 2, ಹರ್ಷಿತ್ ರಾಣಾ, ಅಕ್ಷರ್ ಪಟೇಲ್‌, ರವೀಂದ್ರ ಜಡೇಜಾ ತಲಾ ಒಂದು ವಿಕೆಟ್‌ ಕಿತ್ತರು.

  • Champions Trophy 2025 | ಟಾಸ್‌ಗೆದ್ದ ಪಾಕ್‌ ಬ್ಯಾಟಿಂಗ್‌ ಆಯ್ಕೆ

    Champions Trophy 2025 | ಟಾಸ್‌ಗೆದ್ದ ಪಾಕ್‌ ಬ್ಯಾಟಿಂಗ್‌ ಆಯ್ಕೆ

    ದುಬೈ: ಭಾರತ-ಪಾಕ್‌ ನಡುವಿನ ಹೈವೋಲ್ಟೇಜ್‌ ಕದನಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣ ಸಜ್ಜಾಗಿದ್ದು, ಕೆಲವೇ ನಿಮಿಷಗಳಲ್ಲಿ ಪಂದ್ಯ ಆರಂಭವಾಗಲಿದೆ. ಮೊದಲಿಗೆ ಟಾಸ್‌ ಗೆದ್ದ ಮೊಹಮ್ಮದ್‌ ರಿಜ್ವಾನ್‌ ನಾಯಕತ್ವದ ಪಾಕ್‌ ತಂಡ ಬ್ಯಾಟಿಂಗ್‌ ಆಯ್ದುಕೊಂಡಿದೆ.

    ಇನ್ನೂ ಸತತ 12ನೇ ಬಾರಿಗೆ ಟಾಸ್‌ ಸೋತ ಭಾರತ ಫೀಲ್ಡಿಂಗ್‌ಗೆ ಇಳಿಯಲು ಮುಂದಾಗಿದೆ. ಸದ್ಯ ಪ್ಲೇಯಿಂಗ್‌-11ನಲ್ಲಿ  ಯಾವುದೇ ಬದಲಾವಣೆ ಮಾಡದ ಭಾರತ ಬಾಂಗ್ಲಾದೇಶದ ವಿರುದ್ಧ ಕಣಕ್ಕಿಳಿದ ತಂಡವನ್ನೇ ಅಖಾಡಕ್ಕಿಳಿಸಲು ಮುಂದಾಗಿ ಮೊಹಮ್ಮದ್‌ ಶಮಿ ಸಾರಥ್ಯದಲ್ಲಿ ಬೌಲಿಂಗ್‌ ಪಡೆ ಮುನ್ನಡೆಯಲಿದೆ. ಇದನ್ನೂ ಓದಿ: ಪಾಕ್ ವಿರುದ್ಧ ಭಾರತದ ಗೆಲುವಿಗಾಗಿ ವಿಶೇಷ ಪೂಜೆ- ಬೆಂಗಳೂರು ಕ್ರೀಡಾಭಿಮಾನಿಗಳಿಂದ ಶುಭ ಹಾರೈಕೆ 

    ಟೀಂ ಇಂಡಿಯಾದ ಪ್ಲೇಯಿಂಗ್‌-11 
    ರೋಹಿತ್‌ ಶರ್ಮಾ, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ಅಕ್ಷರ್‌ ಪಟೇಲ್‌, ಕೆ.ಎಲ್‌ ರಾಹುಲ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಹರ್ಷಿತ್‌ ರಾಣಾ, ಮೊಹಮ್ಮದ್‌ ಶಮಿ, ಕುಲ್ದೀಪ್‌ ಯಾದವ್‌.
    ಪಾಕಿಸ್ತಾನ ತಂಡದ ಪ್ಲೇಯಿಂಗ್‌-11
    ಇಮಾಮ್‌ ಉಲ್‌ಹಕ್‌, ಬಾಬರ್‌ ಆಜಂ, ಸೌದ್‌ ಶಕೀಲ್‌, ಮೊಹಮ್ಮದ್‌ ರಿಜ್ವಾನ್‌ (ನಾಯಕ), ತಯ್ಯಾಬ್‌ ತಾಹಿರ್‌, ಸಲ್ಮಾನ್‌ ಆಘ, ಖುಶ್ದಿಲ್ ಶಾ, ಶಾಹೀನ್ ಶಾ ಆಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್, ಅಬ್ರಾರ್ ಅಹ್ಮದ್.
  • Champions Trophy 2025 | ಆಲ್ ದಿ ಬೆಸ್ಟ್ ಟೀಂ ಇಂಡಿಯಾ – ನಾಡಿನಾದ್ಯಂತ ಅಭಿಮಾನಿಗಳಿಂದ ಶುಭ ಹಾರೈಕೆ

    Champions Trophy 2025 | ಆಲ್ ದಿ ಬೆಸ್ಟ್ ಟೀಂ ಇಂಡಿಯಾ – ನಾಡಿನಾದ್ಯಂತ ಅಭಿಮಾನಿಗಳಿಂದ ಶುಭ ಹಾರೈಕೆ

    ಹಾಸನ/ ಚಾಮರಾಜನಗರ/ ಚಿಕ್ಕಬಳ್ಳಾಪುರ: ಭಾರತ – ಪಾಕಿಸ್ತಾನ (Ind vs Pak) ನಡುವಿನ ಚಾಂಪಿಯನ್ಸ್‌ ಟ್ರೋಫಿ ಹೈವೋಲ್ಟೇಜ್‌ ಪಂದ್ಯಕ್ಕೆ ಕ್ಷಣಗಣನೆ ಬಾಕಿಯಿದೆ. ಬ್ಲಾಕ್‌ಬಸ್ಟರ್‌ ಸಂಡೇ (ಇಂದು)ಯಂದು ಮಧ್ಯಾಹ್ನ 2:30ರ ವೇಳೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ಶುರುವಾಗಲಿದೆ. ಈ ರಣರೋಚಕ ಕದನಕ್ಕೆ ಕಾದು ಕುಳಿತಿರುವ ರಾಜ್ಯದ ಕ್ರೀಡಾ ಅಭಿಮಾನಿಗಳು ವಿವಿಧ ದೇವಾಲಯಗಳಲ್ಲಿ ವಿಶೇ ಪೂಜೆ ಹಮ್ಮಿಕೊಂಡಿದ್ದರೆ, ಇನ್ನೂ ಕೆಲವರು ತಾವಿದ್ದಲ್ಲೇ ಗೆದ್ದು ಬಾ ಭಾರತ, ಆಲ್‌ ದಿ ಬೆಸ್ಟ್‌ ಟೀಂ ಇಂಡಿಯಾ ಅಂತ ಶುಭ ಹಾರೈಸಿದ್ದಾರೆ. ಯಾವ ಜಿಲ್ಲೆಯಲ್ಲಿ ಏನಾಗಿದೆ ಎಂಬುದನ್ನು ಮುಂದೆ ನೋಡೋಣ…

    ಹಾಸನ
    ಇಂದು ಭಾರತ-ಪಾಕಿಸ್ತಾನ ತಂಡಗಳ ನಡುವೆ ದುಬೈನಲ್ಲಿ ಹೈವೋಲ್ಟೇಜ್ ಪಂದ್ಯವಿದ್ದು ಟೀಂ ಇಂಡಿಯಾ ಗೆದ್ದೆ ಗೆಲ್ಲುತ್ತದೆ ಎಂದು ಹಾಸನದ ಕ್ರಿಕೆಟ್ ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತ-ಪಾಕಿಸ್ತಾನ ಪಂದ್ಯವೆಂದರೆ ಯುದ್ಧದ ರೀತಿ ಇರುತ್ತದೆ. ಏನೇ ಆಗಲಿ ಭಾರತ ಗೆಲ್ಲಲಿ ಅಂತ ತಂಡಕ್ಕೆ ಶುಭಕೋರಿದ್ದಾರೆ.

    ಚಾಮರಾಜನಗರ
    ಪಾಕಿಸ್ತಾನದ ವಿರುದ್ಧ ಭಾರತದ ಗೆಲುವಿಗೆ ಚಾಮರಾಜನಗರದಲ್ಲಿ ಕ್ರಿಕೆಟ್ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಚಾಮರಾಜನಗರದ ಜನಾರ್ಧನಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಭಾರತ ಜಯಗಳಿಸಲಿ ಎಂದು ಸಂಕಲ್ಪ ಮಾಡಿದ್ದಾರೆ. ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲ ಆಟಗಾರರ ಹೆಸರಿನಲ್ಲಿ ಅರ್ಚನೆ ಸಹ ಮಾಡಿಸಿದ್ದಾರೆ. ದೇವರ ಪಾದದ ಬಳಿ ಆಟಗಾರರ ಹೆಸರುಳ್ಳ ಕಾರ್ಡ್ ಇಟ್ಟು ಪೂಜೆ ಮಾಡಿಸಿದ್ದಾರೆ.

    ಚಿಕ್ಕಬಳ್ಳಾಪುರ
    ಬದ್ಧವೈರಿಗಳ ಕಾಳಗದಲ್ಲಿ ಭಾರತ ಗೆದ್ದು ಬೀಗಲಿ ಅಂತ ಚಿಕ್ಕಬಳ್ಳಾಪುರ ನಗರದ ಸರ್ ಎಂ.ವಿ ಕ್ರೀಡಾಂಗಣದಲ್ಲಿ ಪುಟಾಣಿ ಕ್ರಿಕೆಟಿಗರು ಶುಭ ಕೋರಿದ್ದಾರೆ.

    ದಾವಣಗೆರೆ
    ಇಂಡೋ ಪಾಕ್‌ ಹೈವೋಲ್ಟೇಜ್‌ ಪಂದ್ಯದಲ್ಲಿ ಟೀಂ ಇಂಡಿಯಾ ವಿಜಯಿಯಾಗಲಿ, ಟ್ರೋಫಿಯನ್ನೂ ಗೆಲ್ಲಲ್ಲಿ. 2017ರ ಸೋಲಿನ ಸೇಡು ತೀರಿಸಿಕೊಳ್ಳಲಿ ಅಂತ ದಾವಣಗೆರೆಯ ಕ್ರೀಡಾಭಿಮಾನಿಗಳು ಶುಭಕೋರಿದ್ದಾರೆ. ಭಾರತ ಖಂಡಿತಾ 2017ರ ಸೇಡು ತೀರಿಸಿಕೊಳ್ಳಲಿದೆ. ನಮ್ಮ ಆಟಗಾರರು ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಬೌಲಿಂಗ್ ಲೈನ್ ಆಪ್, ಬ್ಯಾಂಟಿಂಗ್‌ ಹಾಗೂ ಫಿಲ್ಡಿಂಗ್ ಲೈನ್ನಪ್ ಕೂಡ ಉತ್ತಮವಾಗಿದೆ ಎಂದು ಕ್ರಿಕೇಟ್ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

    ಧಾರವಾಡ
    ವಿದ್ಯಾಕಾಶಿ ಧಾರವಾಡದಲ್ಲೂ ಭಾರತದ ಕ್ರಿಕೆಟ್ ತಂಡಕ್ಕೆ ಅಭಿಮಾನಿಗಳು ವಿಶ್‌ ಮಾಡಿದ್ದಾರೆ. ಧಾರವಾಡ ಕರ್ನಾಟಕ ವಿವಿಯಲ್ಲಿ ಇವತ್ತು ಡಿಪಿಎಲ್ ಮ್ಯಾಚ್ ನಡೆಯುವ ಸ್ಥಳದಿಂದಲೇ ಆಲ್ ದಿ ಬೆಸ್ಟ್ ಇಂಡಿಯಾ ಎಂದು ಶುಭ ಕೊರಿರುವ ಅಭಿಮಾನಿಗಳು, ಇವತ್ತು ಬದ್ಧ ವೈರಿ ಪಾಕಿಸ್ತಾನದ ಹುಟ್ಟಡಗಿಸಲಿ ಎಂದು ಹಾರೈಸಿದ್ದಾರೆ.

  • Champions Trophy; ಟೀಂ ಇಂಡಿಯಾ ಗೆಲುವಿಗಾಗಿ ಮಹಾ ಕುಂಭದಲ್ಲಿ ವಿಶೇಷ ಪೂಜೆ

    Champions Trophy; ಟೀಂ ಇಂಡಿಯಾ ಗೆಲುವಿಗಾಗಿ ಮಹಾ ಕುಂಭದಲ್ಲಿ ವಿಶೇಷ ಪೂಜೆ

    ಲಕ್ನೋ: ಇಂದು ದುಬೈನ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಇಡೀ ದೇಶವೇ ಕಾತರದಿಂದ ಕಾಯುತ್ತಿದೆ. ಈ ಹಿನ್ನೆಲೆ ದೇಶದ ಹಲವೆಡೆ ಕ್ರಿಕೆಟ್ ಅಭಿಮಾನಿಗಳು ಭಾರತದ ಗೆಲುವಿಗಾಗಿ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ. ಅದೇ ರೀತಿ ಪ್ರಯಾಗ್‌ರಾಜ್‌ನಲ್ಲಿ (Prayagraj) ನಡೆಯುತ್ತಿರುವ ಮಹಾ ಕುಂಭಮೇಳದಲ್ಲೂ (Maha Kumbh Mela) ಟೀಂ ಇಂಡಿಯಾ (Team India) ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಲಾಗಿದೆ.

    ರೋಹಿತ್ ಶರ್ಮ ಸಾರಥ್ಯದ ಭಾರತ ತಂಡ ಚಾಂಪಿಯನ್ಸ್ ಟ್ರೋಫಿಯ (Champions Trophy) ‘ಎ’ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಭಾನುವಾರ (ಇಂದು) ಬದ್ಧ ವೈರಿ ಪಾಕಿಸ್ತಾನ ತಂಡದ ಸವಾಲು ಎದುರಿಸಲಿದೆ. ಈ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಳ್ಳುವ ಗುರಿಯಲ್ಲಿದೆ. ಹಾಗೆಯೇ ಮೊಹಮದ್ ರಿಜ್ವಾನ್ ನೇತೃತ್ವದ ಪಾಕಿಸ್ತಾನ, ಟೂರ್ನಿಯಿಂದ ಹೊರಗುಳಿಯುವುದನ್ನು ತಪ್ಪಿಸಬೇಕಾದ ಒತ್ತಡದಲ್ಲಿ ಕಣಕ್ಕಿಳಿಯುತ್ತಿದೆ. ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕಾಗಿ ಯುವತಿಯ ಕಾರು, ಬೈಕ್‌ಗಳಿಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ

    ಬಾಂಗ್ಲಾದೇಶ ಎದುರು ಆರು ವಿಕೆಟ್‌ಗಳ ಜಯ ಸಾಧಿಸಿರುವ ಟೀಮ್ ಇಂಡಿಯಾ ಉತ್ತಮ ಸ್ಥಿತಿಯಲ್ಲಿದ್ದರೆ, ನ್ಯೂಜಿಲೆಂಡ್ ವಿರುದ್ಧ 60 ರನ್‌ಗಳಿಂದ ಸೋತಿರುವ ಪಾಕಿಸ್ತಾನ, ‘ಮಾಡು ಇಲ್ಲವೇ ಮಡಿ’ ಪರಿಸ್ಥಿತಿ ಎದುರಿಸುತ್ತಿದೆ. ಹೀಗಾಗಿ ಪಂದ್ಯ ತೀವ್ರ ಹೈವೋಲ್ಟೇಜ್ ಪಡೆಯುವ ನಿರೀಕ್ಷೆಯಿದ್ದು, ಅಭಿಮಾನಿಗಳಿಗೆ ರಸದೌತಣ ಉಣಬಡಿಸುವ ಸಾಧ್ಯತೆ ಇದೆ. ಉಪಖಂಡದ ಎದುರಾಳಿಗಳಾದ ಭಾರತ-ಪಾಕ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊನೆಯದಾಗಿ 2017ರ ಫೈನಲ್‌ನಲ್ಲಿ ಎದುರಾಗಿದ್ದವು. ಆ ಪಂದ್ಯದಲ್ಲಿ ಪಾಕಿಸ್ತಾನ 180 ರನ್‌ಗಳಿಂದ ಭಾರತ ತಂಡವನ್ನು ಸೋಲಿಸಿ ಮೊದಲ ಸಲ ಚಾಂಪಿಯನ್ ಆಗಿತ್ತು. ಈಗ ರಿಜ್ವಾನ್ ಮತ್ತು ತಂಡ ಆ ಜಯದ ಸ್ಫೂರ್ತಿ ಪಡೆಯಲು ಹಾತೊರೆಯುತ್ತಿದೆ. ಆದರೆ ಎಲ್ಲಾ ವಿಭಾಗಗಳಲ್ಲಿ ತನ್ನ ಕಾರ್ಯಕ್ಷಮತೆಯನ್ನು ಸುಧಾರಿಸಿಕೊಳ್ಳಬೇಕಾದ ಅಗತ್ಯವಿದೆ. ಇದನ್ನೂ ಓದಿ: ಪಂದ್ಯಕ್ಕೂ ಮುನ್ನವೇ ಪಾಕ್‌ ಹೈಡ್ರಾಮಾ – ಏನೇ ಆದ್ರೂ ಭಾರತವನ್ನು ಸೋಲಿಸಬೇಕು ಎಂದ ಪಿಸಿಬಿ ಮುಖ್ಯಸ್ಥ

    ಸದಾ ತೀವ್ರತೆಯನ್ನುಂಟು ಮಾಡುವ ಉಭಯ ರಾಷ್ಟ್ರಗಳ ನಡುವಿನ ಪಂದ್ಯವು ದುಬೈನಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳಲ್ಲಿ ಶಾಂತತೆ ನೆಲೆಯೂರಿದೆ. ಕರಾಚಿಯಲ್ಲಿ ಕಿವೀಸ್ ವಿರುದ್ಧ ಸೋತ ನಂತರ ದುಬೈಗೆ ಆಗಮಿಸಿರುವ ಪಾಕ್, ಸ್ಥಳೀಯ ವಾತಾವರಣಕ್ಕೆ ಈಗಾಗಲೇ ಹೊಂದಿಕೊಂಡಿದೆ. ಇದನ್ನೂ ಓದಿ: ಶಿವಸೇನೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಾರ್ಯಕರ್ತರ ಪುಂಡಾಟ

    ಬಾಂಗ್ಲಾದೇಶ ವಿರುದ್ಧ 41 ರನ್ ಗಳಿಸಿದ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ, ಫಾರ್ಮ್ ಕಂಡುಕೊಂಡಿರುವುದನ್ನು ಬಿಂಬಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 8ನೇ ಶತಕ ಗಳಿಸಿ ಭಾರತ ತಂಡದ ಗೆಲುವನ್ನು ಸುಲಭಗೊಳಿಸಿದ ಶುಭಮನ್ ಗಿಲ್, ಮತ್ತೊಂದು ಸೊಬಗಿನ ಆಟಕ್ಕೆ ಸಜ್ಜುಗೊಂಡಿದ್ದಾರೆ. ಇದನ್ನೂ ಓದಿ: `ಮಹಾ’ ಸಾರಿಗೆ ನಿಗಮಕ್ಕೆ `ಗ್ಯಾರಂಟಿ’ ಭಾರ; ಉಚಿತ ಯೋಜನೆಯಿಂದ ದಿನಕ್ಕೆ 3 ಕೋಟಿ ನಷ್ಟ: ಸಚಿವ ಪ್ರತಾಪ್