ನವದೆಹಲಿ: ಸೂಪರ್ ಸಂಡೇ (ಮಾ.9) ರಂದು ದುಬೈನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಫೈನಲ್ (Champions Trophy Final) ಪಂದ್ಯಕ್ಕೆ ಬರೋಬ್ಬರಿ 5,000 ಕೋಟಿ ರೂ.ಗಳಷ್ಟು ಬೆಟ್ಟಿಂಗ್ (Betting) ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಭೂಗತ ಲೋಕದ (Underworld) ನೆರಳಲ್ಲಿ ಬೃಹತ್ ಮೊತ್ತದ ಬೆಟ್ಟಿಂಗ್ ನಡೆದಿದ್ದು, ವಿಶ್ವದ ದೊಡ್ಡ ಬುಕಿಗಳೆಲ್ಲಾ ದುಬೈ ಸೇರಿದ್ದಾರೆ. ಎಲ್ಲರಿಗೂ ಟೀಂ ಇಂಡಿಯಾ (Team India) ಗೆಲ್ಲುವ ಫೇವರೇಟ್ ಆಗಿದೆ ಎನ್ನಲಾಗಿದೆ. ಇದನ್ನೂ ಓದಿ: ಹರ್ಲೀನ್ ಡಿಯೋಲ್ ಅಬ್ಬರದ ಬ್ಯಾಟಿಂಗ್‌ಗೆ ಡೆಲ್ಲಿ ಬರ್ನ್ – ಗುಜರಾತ್‌ಗೆ 5 ವಿಕೆಟ್‌ಗಳ ರೋಚಕ ಜಯ

ಅನೇಕ ಬುಕ್ಕಿಗಳು ಅಂಡರ್‌ವರ್ಲ್ಡ್‌ನೊಂದಿಗೆ ಸಂಪರ್ಕ ಹೊಂದಿದೆ. ಅದಕ್ಕಾಗಿಯೇ ಪ್ರತಿ ಬಾರಿ ಹೈವೋಲ್ಟೇಜ್ ಪಂದ್ಯಗಳು ನಡೆಯುವಾಗ ವಿಶ್ವದಾದ್ಯಂತ ದೊಡ್ಡ ದೊಡ್ಡ ಬುಕ್ಕಿಗಳು ದುಬೈನಲ್ಲಿ (Dubai) ಸೇರುತ್ತಾರೆ. ಭೂಗತ ದೊರೆ ದಾವೂದ್ ಇಬ್ರಾಹಿಂ ಗ್ಯಾಂಗ್‌ನ ʻಡಿ ಕಂಪನಿʼ ದುಬೈನಲ್ಲಿ ಈ ರೀತಿ ಹೈವೋಲ್ಟೇಜ್ ಕ್ರಿಕೆಟ್ ಪಂದ್ಯಗಳ ಮೇಲೆ ಬೆಟ್ಟಿಂಗ್ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಈ ನಡುವೆ ದೆಹಲಿ ಪೊಲೀಸರ ಅಪರಾಧ ವಿಭಾಗವು ಚಾಂಪಿಯನ್ಸ್ ಟ್ರೋಫಿ ಸಮಯದಲ್ಲಿ ದೊಡ್ಡಮಟ್ಟದಲ್ಲಿ ಬೆಟ್ಟಿಂಗ್ ನಡೆಸಿದ್ದ ಕನಿಷ್ಠ ಐವರು ಬುಕ್ಕಿಗಳನ್ನು ಬಂಧಿಸಿದೆ. ಬಂಧಿತರು ಭಾರತ-ಆಸೀಸ್ ನಡುವಿನ ಸೆಮಿಫೈನಲ್ ಪಂದ್ಯದ ಮೇಲೆ ಬೆಟ್ಟಿಂಗ್ ನಡೆಸಿದ್ದರು. ಅವರ ತನಿಖೆ ಬಳಿಕ ದುಬೈ ನಂಟಿರುವುದು ಬೆಳಕಿಗೆ ಬಂದಿದೆ.

ಬಂಧಿತ ಪರ್ವೀನ್ ಕೊಚ್ಚರ್ ಮತ್ತು ಸಂಜಯ್ ಕುಮಾರ್ ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳನ್ನ ಬಳಸಿಕೊಂಡು ಲೈವ್ ಬೆಟ್ಟಿಂಗ್ ನಡೆಸುತ್ತಿದ್ದಾಗ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಸಿಕ್ಕ ಹಲವಾರು ಎಲೆಕ್ಟ್ರಾನಿಕ್ ಉಪಕರಣಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: Olympics 2028 | ತರಬೇತಿಗಾಗಿ 60 ಕ್ರೀಡಾಪಟುಗಳಿಗೆ ವಾರ್ಷಿಕ ತಲಾ 10 ಲಕ್ಷ ಪ್ರೋತ್ಸಾಹ ಧನ
ಬೆಟ್ಟಿಂಗ್ ನಡೆಯುತ್ತಿದ್ದದ್ದು ಹೇಗೆ?
ಪರ್ವೀನ್ ಕೊಚ್ಚರ್ ʻಲಕ್ಕಿ.ಕಾಮ್ʼ ಎಂಬ ಬೆಟ್ಟಿಂಗ್ ವೆಬ್‌ಸೈಟ್‌ನಿಂದ ಮಾಸ್ಟರ್ ಐಡಿ ಖರೀದಿಸಿದ್ದ, ಬೆಟ್ಟಿಂಗ್ ಐಡಿಗಳನ್ನು ರಚಿಸಿ ಅದನ್ನ ಪಂಟರ್‌ಗಳಿಗೆ ಮಾರಾಟ ಮಾಡ್ತಿದ್ದ. ಆದ್ರೆ ಪ್ರತಿ ಬೆಟ್ಟಿಂಗ್ ವಹಿವಾಟಿನ ಮೇಲೆ 3% ಕಮಿಷನ್ ಚಾರ್ಜ್ ಮಾಡುತ್ತಿದ್ದ. ಇನ್ನೂ ಆಫ್‌ಲೈನ್ ಬೆಟ್ಟಿಂಗ್‌ಗಾಗಿ ಆರೋಪಿಗಳು ದೂರವಾಣಿ ಕರೆ ಮೂಲಕ ನಡೆಸುತ್ತಿದ್ದರು. ಬೆಟ್ಟಿಂಗ್ ಪ್ರಮಾಣವನ್ನು ಅವಲಂಬಿಸಿ ಅದನ್ನು ನೋಟ್‌ಪ್ಯಾಡ್‌ಗಳಲ್ಲಿ ದಾಖಲಿಸಿಕೊಳ್ಳುತ್ತಿದ್ದ.

ಆರೋಪಿ ಪರ್ವಿನ್ ಕಳೆದ 2 ವರ್ಷಗಳಿಂದ ಬೆಟ್ಟಿಂಗ್ ವ್ಯವಹಾರ ನಡೆಸುತ್ತಿದ್ದ. ಅದಕ್ಕಾಗಿ ತಿಂಗಳಿಗೆ 35,000 ರೂ.ಗೆ ಮನೆಯೊಂದನ್ನ ಬಾಡಿಗೆಗೆ ಪಡೆದಿದ್ದ. ಈತ ಪ್ರತಿ ಪಂದ್ಯದಿಂದ ಸುಮಾರು 40,000 ರೂ. ಲಾಭ ಗಳಿಸುತ್ತಿದ್ದ. ಆದ್ರೆ ಈ ಸಂಪೂರ್ಣ ನೆಟ್‌ವರ್ಕ್ ದುಬೈನಿಂದ ನಿಯಂತ್ರಿಸಲಾಗುತ್ತಿತ್ತು ಎಂದು ತನಿಖೆ ವೇಳೆ ಸ್ಫೋಟಕ ರಹಸ್ಯ ಬಯಲಾಗಿದೆ. ಇದನ್ನೂ ಓದಿ: ಯುಪಿ ವಿರುದ್ಧ ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್
