Tag: champai soren

  • ಆ.30 ರಂದು ಬಿಜೆಪಿ ಸೇರಲಿದ್ದಾರೆ ಜಾರ್ಖಂಡ್‌ ಮಾಜಿ ಸಿಎಂ ಚಂಪೈ ಸೊರೆನ್‌

    ಆ.30 ರಂದು ಬಿಜೆಪಿ ಸೇರಲಿದ್ದಾರೆ ಜಾರ್ಖಂಡ್‌ ಮಾಜಿ ಸಿಎಂ ಚಂಪೈ ಸೊರೆನ್‌

    ನವದೆಹಲಿ: ಜಾರ್ಖಂಡ್‌ (Jharkhand) ಮಾಜಿ ಸಿಎಂ, ಜಾರ್ಖಂಡ್ ಮುಕ್ತಿ ಮೋರ್ಚಾ (JMM) ನಾಯಕ ಚಂಪೈ ಸೊರೆನ್‌ (Champai Soren) ಆ.30 ರಂದು ಬಿಜೆಪಿ (BJP) ಸೇರಲಿದ್ದಾರೆ.

    ನವೆಂಬರ್-ಡಿಸೆಂಬರ್‌ನಲ್ಲಿ ನಡೆಯಲಿರುವ ಜಾರ್ಖಂಡ್ ವಿಧಾನಸಭಾ ಚುನಾವಣೆಯ ಸಹ-ಪ್ರಭಾರಿಯೂ ಆಗಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರೊಂದಿಗೆ ಚಂಪೈ ಸೋಮವಾರ ತಡರಾತ್ರಿ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿಯಾದ ನಂತರ ಈ ನಿರ್ಧಾರ ಪ್ರಕಟವಾಗಿದೆ.

    ಆಗಸ್ಟ್ 30 ರಂದು ಚಂಪೈ ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ ಎಂದು ಶರ್ಮಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ತಿಳಿಸಿದ್ದಾರೆ. ಚಂಪೈ ಸೊರೆನ್‌ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಕಳೆದ ಎರಡು ವಾರಗಳಿಂದ ಹರಿದಾಡುತ್ತಿತ್ತು. ಆದರೆ ಅಧಿಕೃತವಾಗಿ ತಿಳಿದು ಬಂದಿರಲಿಲ್ಲ.  ಚಂಪೈ ಸೊರೆನ್‌ ಮಾತ್ರ ಸೇರ್ಪಡೆಯಾಗುತ್ತಾರಾ ಉಳಿದ ಶಾಸಕರು ಸೇರ್ಪಡೆಯಾಗುತ್ತಾರಾ ಎನ್ನುವುದರ ಬಗ್ಗೆ ಯಾವುದೇ ವರದಿ ಪ್ರಕಟವಾಗಿಲ್ಲ. ಇದನ್ನೂ ಓದಿ: ಪರಪ್ಪನ ಜೈಲಿಂದ ಹಿಂಡಲಗಾ ಜೈಲಿಗೆ ‘ಜಗ್ಗುದಾದ’ ಶಿಫ್ಟ್ ಸಾಧ್ಯತೆ – ಬೆಳಗಾವಿ ಜೈಲಿನ ವಿಶೇಷತೆ ಏನು?

    ಪ್ರಸ್ತುತ ಹೇಮಂತ್ ಸೊರೆನ್ ಕ್ಯಾಬಿನೆಟ್‌ನಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಚಂಪೈ ಅವರು ಇನ್ನೂ ಜೆಎಂಎಂ ಪಕ್ಷ ಮತ್ತು ಸರ್ಕಾರ ಎರಡಕ್ಕೂ ರಾಜೀನಾಮೆ ನೀಡಿಲ್ಲ.

    ರಾಜ್ಯದ ಮುಖ್ಯಮಂತ್ರಿಯಾಗಿದ್ದ ಹೇಮಂತ್ ಸೊರೇನ್ (Hemant Soren) ಭೂ ಹಗರಣ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದಾಗ ಚಂಪೈ ಸೋರೆನ್ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ನೇಮಿಸಲಾಗಿತ್ತು. ಸುಮಾರು ಐದು ತಿಂಗಳ ಕಾಲ ಜೈಲಿನಲ್ಲಿದ್ದ (Jail) ಹೇಮಂತ್ ಸೊರೇನ್ ಜೂನ್ 28ರಂದು ಬಿಡುಗಡೆಯಾಗಿದ್ದರು. ಇದಾದ ನಂತರ ಚಂಪೈ ಸೊರೆನ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ರಾಜ್ಯದ ಅಧಿಕಾರವನ್ನು ಮರಳಿ ವಹಿಸಿಕೊಂಡರು. ಅಧಿಕಾರದಿಂದ ಕೆಳಗಡೆ ಇಳಿಸಿದ ಬಳಿಕ ಚಂಪೈ ಸೊರೆನ್‌ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ.

    ಚಂಪೈ ಸೊರೆನ್ ಅವರು ಫೆಬ್ರವರಿ 2 ರಿಂದ ಜುಲೈ 3 ರವರೆಗೆ ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದರು. ಜೆಎಂಎಂನ ಹಿರಿಯ ನಾಯಕರಾಗಿರುವ ಚಂಪೈ ಸೊರೆನ್ ಏಳು ಬಾರಿ ಶಾಸಕರಾಗಿದ್ದಾರೆ.

    2005 ರಿಂದ ಅವರು ನಿರಂತರವಾಗಿ ಸರಯ್ಕೆಲಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 1991 ರಲ್ಲಿ ಅವರು ಸರಯ್ಕೆಲಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾದರು. ಹೇಮಂತ್ ಸೊರೆನ್ ಅವರು 2019 ರಲ್ಲಿ ಚಂಪೈ ಸೊರೆನ್ ಅವರನ್ನು ಕ್ಯಾಬಿನೆಟ್ ಸಚಿವರನ್ನಾಗಿ ಮಾಡಿದರು. ಅವರಿಗೆ ಸಾರಿಗೆ, ಪರಿಶಿಷ್ಟ ಪಂಗಡಗಳು ಮತ್ತು ಪರಿಶಿಷ್ಟ ಜಾತಿಗಳು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಯನ್ನು ನೀಡಲಾಗಿದೆ.

    ಚಂಪೈ ಸೊರೆನ್‌ನನ್ನು ಕೊಲ್ಹಾನ್‌ನ ಹುಲಿ ಎಂದು ಕರೆಯಲಾಗುತ್ತದೆ. 2019 ರ ವಿಧಾನಸಭಾ ಚುನಾವಣೆಯಲ್ಲಿ ಕೊಲ್ಹಾನ್ ಪ್ರದೇಶದ 14 ಸ್ಥಾನಗಳಲ್ಲಿ ಬಿಜೆಪಿ ಶೂನ್ಯ ಸ್ಥಾನಗಳನ್ನು ಗಳಿಸಿತ್ತು. 2024ರಲ್ಲಿ ಲೋಕಸಭಾ ಚುನಾವಣೆಯಲ್ಲೂ ಕೊಲ್ಹಾನ್ ಭಾಗದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿತ್ತು. ಕೊಲ್ಹಾನ್ ಪ್ರದೇಶದ 14 ವಿಧಾನಸಭಾ ಕ್ಷೇತ್ರಗಳಲ್ಲಿ ಚಂಪೈ ಸೊರೆನ್‌ ಪ್ರಭಾವವಿದೆ. ಇದನ್ನೂ ಓದಿ: ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ – ಇಂದಿನಿಂದ ಮದ್ಯದ ದರ ಇಳಿಕೆ

    ಈ ವರ್ಷದ ಕೊನೆಗೆ ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆ (Vidhan Sabha Election) ನಡೆಯಲಿದೆ. ಚುನಾವಣೆ ಘೋಷಣೆಗೂ ಮುನ್ನವೇ ರಾಜಕೀಯ ಪಕ್ಷಗಳು ರಾಜಕೀಯ ಜೋರಾಗಿದೆ. ರಾಜ್ಯದಲ್ಲಿ ಒಟ್ಟು 82 ವಿಧಾನಸಭಾ ಸ್ಥಾನಗಳಿದ್ದು, ಈ ಪೈಕಿ ಒಂದು ನಾಮನಿರ್ದೇಶನ ಸ್ಥಾನವಾಗಿದೆ.

    ಜೆಎಂಯು ಪ್ರಸ್ತುತ ವಿಧಾನಸಭೆಯಲ್ಲಿ 27 ಶಾಸಕರನ್ನು ಹೊಂದಿರುವ ಅತಿದೊಡ್ಡ ಪಕ್ಷವಾಗಿದ್ದು INDIA ಒಕ್ಕೂಟದ ಭಾಗವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್, ಸಿಪಿಐ(ಎಂ) ಆರ್‌ಜೆಡಿ ಜತೆ ಮೈತ್ರಿ ಮಾಡಿಕೊಂಡು ಜೆಎಂಎಂ ಅಧಿಕಾರದಲ್ಲಿದೆ. ಕಾಂಗ್ರೆಸ್ 18, ಸಿಪಿಐ(ಎಂ) ಮತ್ತು ಆರ್‌ಜೆಡಿ ತಲಾ 1 ಶಾಸಕರನ್ನು ಹೊಂದಿದೆ.

    ಜಾರ್ಖಂಡ್‌ನಲ್ಲಿ ಬಿಜೆಪಿ ಪ್ರತಿಪಕ್ಷದಲ್ಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 24 ಸ್ಥಾನಗಳನ್ನು ಗೆದ್ದಿತ್ತು. ಇತರ ವಿರೋಧ ಪಕ್ಷಗಳಲ್ಲಿ ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ 3, ಸಿಸಿಪಿ 1 ಮತ್ತು ಇಬ್ಬರು ಪಕ್ಷೇತರ ಶಾಸಕರಿದ್ದಾರೆ.

    ಈ ಬಾರಿ ನಡೆದ ಲೋಕಸಭಾ ಚುನಾವಣೆಯ ಒಟ್ಟು 14 ಸ್ಥಾನಗಳ ಪೈಕಿ ಬಿಜೆಪಿ 8, ಜೆಎಂಎಂ 3, ಕಾಂಗ್ರೆಸ್‌ 2, ಎಜೆಸ್‌ಯಪಿ 1 ಸ್ಥಾನವನ್ನು ಗೆದ್ದುಕೊಂಡಿದೆ.

     

  • Jhakhand | ಹೊಸ ರಾಜಕೀಯ ಪಕ್ಷ ಆರಂಭಿಸುವ ಸುಳಿವು ನೀಡಿದ ಚಂಪೈ ಸೊರೆನ್

    Jhakhand | ಹೊಸ ರಾಜಕೀಯ ಪಕ್ಷ ಆರಂಭಿಸುವ ಸುಳಿವು ನೀಡಿದ ಚಂಪೈ ಸೊರೆನ್

    ನವದೆಹಲಿ: ಬಿಜೆಪಿ ಸೇರಬಹುದು ಎನ್ನಲಾಗಿದ್ದ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ (Champai Soren) ತಮ್ಮದೇ ರಾಜಕೀಯ ಪಕ್ಷವನ್ನು (New Political Party) ಅರಂಭಿಸುವ ಸುಳಿವು ನೀಡಿದ್ದು, ಒಂದು ವಾರದೊಳಗೆ ತಮ್ಮ ಮುಂದಿನ ನಡೆ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದು ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯದಿಂದ ನಿವೃತ್ತಿ ಹೊಂದುವುದು, ಹೊಸ ಪಕ್ಷವನ್ನು ಆರಂಭಿಸುವುದು ಅಥವಾ ಇನ್ನೊಂದು ಪಕ್ಷವನ್ನು ಸೇರುವುದು ನನ್ನ ಮುಂದಿರುವ ಆಯ್ಕೆಗಳು, ಸದ್ಯಕ್ಕೆ ನಿವೃತ್ತಿಯಾಗುವುದಿಲ್ಲ ಹೀಗಾಗೀ ನನ್ನ ಮುಂದೆ ಇನ್ನೆರಡು ಆಯ್ಕೆಗಳಿದೆ. ನಾನೇಕೆ ನನ್ನ ಸ್ವಂತ ಪಕ್ಷವನ್ನು ರಚಿಸಬಾರದು? ನನ್ನ ಮುಂದಿನ ನಡೆ ಒಂದು ವಾರದಲ್ಲಿ ಸ್ಪಷ್ಟವಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ರೈಲಿನಲ್ಲಿ ಉಕ್ರೇನಿಗೆ ಮೋದಿ ಭೇಟಿ – ಐಷಾರಾಮಿ ರೈಲಿನ ವಿಶೇಷತೆ ಏನು?

    ಆಗಸ್ಟ್ 18 ರಂದು ಅವರು ಕೆಲವು ಶಾಸಕರೊಂದಿಗೆ ದೆಹಲಿಗೆ ಭೇಟಿ ನೀಡಿದ ಹಿನ್ನಲೆ ಅವರು ಬಿಜೆಪಿ ಸೇರ್ಪಡೆಯಾಗಬಹುದು ಎಂದು ಊಹಿಸಲಾಗಿತ್ತು. ಆಪಾದಿತ ಭೂ ಹಗರಣ ಪ್ರಕರಣದಲ್ಲಿ ಜನವರಿ 31 ರಂದು ಇಡಿ ಹೇಮಂತ್ ಸೊರೆನ್‌ ಅವರನ್ನು ಬಂಧಿಸಿದ ನಂತರ 67 ವರ್ಷದ ಚಂಪೈ ಸೊರೆನ್ ಅವರು ಜಾರ್ಖಂಡ್ ಮುಖ್ಯಮಂತ್ರಿಯಾದರು. ಇದನ್ನೂ ಓದಿ: ಊರ್ವಶಿ ರೌಟೇಲಾ ಬೆರಳಿಗೆ ಗಾಯ- ಕಾಮೆಂಟ್ ಮಾಡಿ ನಗ್ತಿರೋದ್ಯಾಕೆ ನೆಟ್ಟಿಗರು?

    ಹೇಮಂತ್ ಸೊರೆನ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿದ ನಂತರ ಜುಲೈ 3 ರಂದು ಅವರು ಹುದ್ದೆಯಿಂದ ಕೆಳಗಿಳಿದರು. ರಾಜೀನಾಮೆ ಬಳಿಕ ಮಾತನಾಡಿದ್ದ ಅವರು ನನಗೆ ಮನಸ್ಸು ಒಡೆದು ಹೋಗಿತ್ತು. ಏನು ಮಾಡಬೇಕೆಂದು ಅರ್ಥವಾಗಲಿಲ್ಲ. ಎರಡು ದಿನಗಳ ಕಾಲ ನಾನು ಶಾಂತವಾಗಿ ಕುಳಿತು ಆತ್ಮಾವಲೋಕನ ಮಾಡಿಕೊಂಡೆ, ಇಡೀ ಘಟನೆಯಲ್ಲಿ ನನ್ನ ತಪ್ಪನ್ನು ಹುಡುಕುತ್ತಿದ್ದೆ. ನನಗೆ ಅಧಿಕಾರದ ದುರಾಸೆ ಸ್ವಲ್ಪವೂ ಇರಲಿಲ್ಲ, ನನ್ನ ಆತ್ಮಗೌರವಕ್ಕೆ ದಕ್ಕೆಯಾಗಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಜಯ್‌ ಶಾ ಮುಂದಿನ ಐಸಿಸಿ ಅಧ್ಯಕ್ಷ? – ಆಸೀಸ್‌, ಇಂಗ್ಲೆಂಡ್‌ ಬೆಂಬಲ

  • ಶೀಘ್ರವೇ ಜಾರ್ಖಂಡ್‌ ಮಾಜಿ ಸಿಎಂ ಚಂಪೈ ಸೊರೆನ್‌ ಬಿಜೆಪಿ ಸೇರ್ಪಡೆ ಸಾಧ್ಯತೆ

    ಶೀಘ್ರವೇ ಜಾರ್ಖಂಡ್‌ ಮಾಜಿ ಸಿಎಂ ಚಂಪೈ ಸೊರೆನ್‌ ಬಿಜೆಪಿ ಸೇರ್ಪಡೆ ಸಾಧ್ಯತೆ

    ರಾಂಚಿ: ಜಾರ್ಖಂಡ್‌ ಮಾಜಿ ಸಿಎಂ, ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಚಂಪೈ ಸೊರೆನ್‌ (Champai Soren) ಶೀಘ್ರವೇ ಬಿಜೆಪಿ (BJP) ಸೇರುವ ಸಾಧ್ಯತೆಯಿದೆ.

    ಇನ್ನೆರಡು ದಿನದಲ್ಲಿ ದೆಹಲಿಯಲ್ಲಿ ಬಿಜೆಪಿಯ ಕೆಲವು ದೊಡ್ಡ ನಾಯಕರನ್ನು ಭೇಟಿ ಮಾಡಿದ ನಂತರವೇ ಚಂಪೈ ಸೊರೆನ್ ಕಮಲ ಪಕ್ಷವನ್ನು ಸೇರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

    ರಾಜ್ಯದ ಮುಖ್ಯಮಂತ್ರಿಯಾಗಿದ್ದ ಹೇಮಂತ್ ಸೊರೇನ್ (Hemant Soren) ಭೂ ಹಗರಣ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದಾಗ ಚಂಪೈ ಸೋರೆನ್ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ನೇಮಿಸಲಾಗಿತ್ತು. ಸುಮಾರು ಐದು ತಿಂಗಳ ಕಾಲ ಜೈಲಿನಲ್ಲಿದ್ದ (Jail) ಹೇಮಂತ್ ಸೊರೇನ್ ಜೂನ್ 28ರಂದು ಬಿಡುಗಡೆಯಾಗಿದ್ದರು. ಇದಾದ ನಂತರ ಚಂಪೈ ಸೊರೆನ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ರಾಜ್ಯದ ಅಧಿಕಾರವನ್ನು ಮರಳಿ ವಹಿಸಿಕೊಂಡರು. ಅಧಿಕಾರದಿಂದ ಕೆಳಗಡೆ ಇಳಿಸಿದ ಬಳಿಕ ಚಂಪೈ ಸೊರೆನ್‌ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯದಲ್ಲಿ ಸದ್ಯಕ್ಕೆ ಉಪಚುನಾವಣೆ ಇಲ್ಲ

    ಚಂಪೈ ಸೊರೆನ್ ಅವರು ಫೆಬ್ರವರಿ 2 ರಿಂದ ಜುಲೈ 3 ರವರೆಗೆ ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದರು. ಜೆಎಂಎಂನ ಹಿರಿಯ ನಾಯಕರಾಗಿರುವ ಚಂಪೈ ಸೊರೆನ್ ಏಳು ಬಾರಿ ಶಾಸಕರಾಗಿದ್ದಾರೆ.

    2005 ರಿಂದ ಅವರು ನಿರಂತರವಾಗಿ ಸರಯ್ಕೆಲಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 1991 ರಲ್ಲಿ ಅವರು ಸರಯ್ಕೆಲಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾದರು. ಹೇಮಂತ್ ಸೊರೆನ್ ಅವರು 2019 ರಲ್ಲಿ ಚಂಪೈ ಸೊರೆನ್ ಅವರನ್ನು ಕ್ಯಾಬಿನೆಟ್ ಸಚಿವರನ್ನಾಗಿ ಮಾಡಿದರು. ಅವರಿಗೆ ಸಾರಿಗೆ, ಪರಿಶಿಷ್ಟ ಪಂಗಡಗಳು ಮತ್ತು ಪರಿಶಿಷ್ಟ ಜಾತಿಗಳು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಯನ್ನು ನೀಡಲಾಗಿದೆ.

    ಈ ವರ್ಷದ ಕೊನೆಯಲ್ಲಿ ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆ (Vidhan Sabha Election) ನಡೆಯಲಿದೆ. ಚುನಾವಣೆ ಘೋಷಣೆಗೂ ಮುನ್ನವೇ ರಾಜಕೀಯ ಪಕ್ಷಗಳು ರಾಜಕೀಯ ಜೋರಾಗಿದೆ. ರಾಜ್ಯದಲ್ಲಿ ಒಟ್ಟು 82 ವಿಧಾನಸಭಾ ಸ್ಥಾನಗಳಿದ್ದು, ಈ ಪೈಕಿ ಒಂದು ನಾಮನಿರ್ದೇಶನ ಸ್ಥಾನವಾಗಿದೆ. ಇದನ್ನೂ ಓದಿ: ಆ.20 ರಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಆರಂಭ

    ಜೆಎಂಯು ಪ್ರಸ್ತುತ ವಿಧಾನಸಭೆಯಲ್ಲಿ 27 ಶಾಸಕರನ್ನು ಹೊಂದಿರುವ ಅತಿದೊಡ್ಡ ಪಕ್ಷವಾಗಿದ್ದು INDIA ಒಕ್ಕೂಟದ ಭಾಗವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್, ಸಿಪಿಐ(ಎಂ) ಆರ್‌ಜೆಡಿ ಜತೆ ಮೈತ್ರಿ ಮಾಡಿಕೊಂಡು ಜೆಎಂಎಂ ಅಧಿಕಾರದಲ್ಲಿದೆ. ಕಾಂಗ್ರೆಸ್ 18, ಸಿಪಿಐ(ಎಂ) ಮತ್ತು ಆರ್‌ಜೆಡಿ ತಲಾ 1 ಶಾಸಕರನ್ನು ಹೊಂದಿದೆ.

    ಜಾರ್ಖಂಡ್‌ನಲ್ಲಿ ಬಿಜೆಪಿ ಪ್ರತಿಪಕ್ಷದಲ್ಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 24 ಸ್ಥಾನಗಳನ್ನು ಗೆದ್ದಿತ್ತು. ಇತರ ವಿರೋಧ ಪಕ್ಷಗಳಲ್ಲಿ ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ 3, ಸಿಸಿಪಿ 1 ಮತ್ತು ಇಬ್ಬರು ಪಕ್ಷೇತರ ಶಾಸಕರಿದ್ದಾರೆ.

    ಈ ಬಾರಿ ನಡೆದ ಲೋಕಸಭಾ ಚುನಾವಣೆಯ ಒಟ್ಟು 14 ಸ್ಥಾನಗಳ ಪೈಕಿ ಬಿಜೆಪಿ 8, ಜೆಎಂಎಂ 3, ಕಾಂಗ್ರೆಸ್‌ 2, ಎಜೆಸ್‌ಯಪಿ 1 ಸ್ಥಾನವನ್ನು ಗೆದ್ದುಕೊಂಡಿದೆ.

     

  • ಜೈಲಿನಿಂದ ಹೊರಬಂದ ಹೇಮಂತ್‌ ಸೊರೇನ್‌ಗೆ ಸಿಎಂ ಕುರ್ಚಿ ಬಿಟ್ಟುಕೊಟ್ಟ ಚಂಪೈ

    ಜೈಲಿನಿಂದ ಹೊರಬಂದ ಹೇಮಂತ್‌ ಸೊರೇನ್‌ಗೆ ಸಿಎಂ ಕುರ್ಚಿ ಬಿಟ್ಟುಕೊಟ್ಟ ಚಂಪೈ

    – ಜಾರ್ಖಂಡ್‌ ಸಿಎಂ ಸ್ಥಾನಕ್ಕೆ ಚಂಪೈ ಸೊರೇನ್‌ ರಾಜೀನಾಮೆ

    ರಾಂಚಿ: ಜೈಲಿನಿಂದ ಹೊರಬಂದ ಹೇಮಂತ್‌ ಸೊರೇನ್‌ಗೆ ಜಾರ್ಖಂಡ್‌ ಸಿಎಂ ಚಂಪೈ ಸೊರೇನ್‌ ಮುಖ್ಯಮಂತ್ರಿ ಖುರ್ಚಿ ಬಿಟ್ಟುಕೊಟ್ಟಿದ್ದಾರೆ. ಚಂಪೈ ಸೊರೇನ್‌ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಹೇಮಂತ್‌ ಸೊರೇನ್‌ ಆಡಳಿತಕ್ಕೆ ದಾರಿ ಮಾಡಿಕೊಟ್ಟಿದ್ದಾರೆ.

    ಅಕ್ರಮ ಹಣ ವರ್ಗಾವಣೆ, ಭೂ ಹಗರಣ ಆರೋಪ ಹೊತ್ತಿದ್ದ ಹೇಮಂತ್‌ ಸೊರೇನ್‌ ಜೈಲು ಪಾಲಾಗಿದ್ದರು. ಇದಕ್ಕೂ ಮುನ್ನ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಸಂದರ್ಭದಲ್ಲಿ ಜಾರ್ಖಂಡ್‌ ಸಿಎಂ ಆಗಿ ಚಂಪೈ ಸೊರೇನ್‌ ಅಧಿಕಾರ ವಹಿಸಿಕೊಂಡಿದ್ದರು. ಐದು ತಿಂಗಳ ಬಳಿಕ ಚಂಪೈ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯಸಭೆಯಲ್ಲಿ ಮಹಿಳೆಯರ ಪರ ದನಿಯೆತ್ತಿದ್ದ ಸುಧಾ ಮೂರ್ತಿಯನ್ನು ಹೊಗಳಿದ ಪ್ರಧಾನಿ

    ಜಾರ್ಖಂಡ್ ಮುಕ್ತಿ ಮೋರ್ಚಾದಲ್ಲಿ ಮೂರನೇ ಸ್ಥಾನದಲ್ಲಿರುವ ಚಂಪೈ ಸೊರೇನ್, ಭೂ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಅಂದಿನ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಬಂಧಿಸಿದ ಎರಡು ದಿನಗಳ ನಂತರ ಪ್ರಮಾಣವಚನ ಸ್ವೀಕರಿಸಿದ್ದರು. ಇದೇ ಜೂನ್ 28ರಂದು ಹೇಮಂತ್‌ ಸೊರೇನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

  • ವಿಶ್ವಾಸಮತ ಗೆದ್ದ ಜಾರ್ಖಂಡ್‌ ನೂತನ ಸಿಎಂ ಚಂಪೈ ಸೊರೇನ್‌

    ವಿಶ್ವಾಸಮತ ಗೆದ್ದ ಜಾರ್ಖಂಡ್‌ ನೂತನ ಸಿಎಂ ಚಂಪೈ ಸೊರೇನ್‌

    ರಾಂಚಿ: ಜಾರ್ಖಂಡ್ ನೂತನ ಮುಖ್ಯಮಂತ್ರಿ ಚಂಪೈ ಸೊರೇನ್ (Champai Soren) ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸ ಮತದ ಪರೀಕ್ಷೆಯಲ್ಲಿ ಗೆದ್ದಿದ್ದಾರೆ. 81 ಶಾಸಕರ ಪೈಕಿ 47 ಶಾಸಕರ ಬೆಂಬಲ ಪಡೆಯುವ ಮೂಲಕ ಅವರು ಯಶಸ್ವಿಯಾಗಿ ಬಹುಮತ ಸಾಬೀತುಪಡಿಸಿದ್ದಾರೆ. ಹೊಸ ಸರ್ಕಾರಕ್ಕೆ ಬಹುಮತವಿದೆ ಎಂದು ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಘೋಷಿಸಿದ ಬೆನ್ನಲ್ಲೇ ಶಾಸಕರು ಹರ್ಷೋದ್ಗಾರಗಳೊಂದಿಗೆ ಮುಖ್ಯಮಂತ್ರಿಯನ್ನು ಅಭಿನಂದಿಸಿದರು.

    ಜಾರ್ಖಂಡ್ (Jharkhand) ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಚಂಪೈ ಸೊರೇನ್ ಮೊದಲು ವಿಶ್ವಾಸಮತ ಯಾಚನೆ ಮಂಡಿಸಿದರು. ಬಳಿಕ ಮಾತನಾಡಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಚುನಾಯಿತ ರಾಜ್ಯ ಸರ್ಕಾರವನ್ನು “ಅಸ್ಥಿರಗೊಳಿಸಲು” ಪ್ರಯತ್ನಿಸಿದೆ ಎಂದು ಹೇಳಿದರು. ಈ ಮೂಲಕ ಅವರು ಬಂಧಿತ ಮತ್ತು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಕ್ಲೀನ್ ಚಿಟ್ ನೀಡಿದರು. ಇದನ್ನೂ ಓದಿ: 5 ದಿನ ಇಡಿ ಕಸ್ಟಡಿಗೆ ಹೇಮಂತ್ ಸೋರೆನ್

    ಹೇಮಂತ್ ಸೂರೇನ್ ಅವರು ಮಾಡದ ಅಪರಾಧಕ್ಕಾಗಿ ಅವರನ್ನು ಎಳೆಯಲಾಗುತ್ತಿದೆ. ಹೇಮಂತ್ ಸೊರೇನ್ (Hemant Soren) ಅವರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಬಿಜೆಪಿ ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಂಡಿದೆ ಎಂದು ಚಂಪೈ ಸೊರೇನ್ ಅವರು ವಿಶ್ವಾಸಮತ ಯಾಚನೆ ವೇಳೆ ಆರೋಪಿಸಿದರು.

    ಆಪಾದಿತ ಭೂ ಹಗರಣದಲ್ಲಿ ಪ್ರಸ್ತುತ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಹೇಮಂತ್ ಸೊರೇನ್ ಅವರು ಸೋಮವಾರದ ವಿಶ್ವಾಸ ಮತಕ್ಕೆ ಹಾಜರಾಗಿದ್ದರು. ಪಿಎಂಎಲ್‌ಎ ನ್ಯಾಯಾಲಯವು ಅದರಲ್ಲಿ ಭಾಗವಹಿಸಲು ಅನುಮತಿ ನೀಡಿದ ನಂತರ ಮತ ಚಲಾಯಿಸಲು ವಿಧಾನಸಭೆಗೆ ಆಗಮಿಸಿದ್ದರು. ವಿಧಾನಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರು. ಭೂ ಹಗರಣದಲ್ಲಿ ತನಗೆ ಇರುವ ಸಂಬಂಧವನ್ನು ಜಾರಿ ನಿರ್ದೇಶನಾಲಯ ಸಾಬೀತುಪಡಿಸಲಿ ಆರೋಪ ಸಾಬೀತಾದರೆ, “ನಾನು ರಾಜಕೀಯವನ್ನು ತೊರೆಯುತ್ತೇನೆ” ಎಂದು ಸವಾಲು ಹಾಕಿದರು. ಇದನ್ನೂ ಓದಿ: ಜಾರ್ಖಂಡ್‌ ಸಿಎಂ ಆಗಿ ಚಂಪೈ ಸೊರೇನ್‌ ಪ್ರಮಾಣವಚನ ಸ್ವೀಕಾರ

  • ಜಾರ್ಖಂಡ್‌ ಸಿಎಂ ಆಗಿ ಚಂಪೈ ಸೊರೇನ್‌ ಪ್ರಮಾಣವಚನ ಸ್ವೀಕಾರ

    ಜಾರ್ಖಂಡ್‌ ಸಿಎಂ ಆಗಿ ಚಂಪೈ ಸೊರೇನ್‌ ಪ್ರಮಾಣವಚನ ಸ್ವೀಕಾರ

    ರಾಂಚಿ: ಜಾರ್ಖಂಡ್‌ನ ನೂತನ ಮುಖ್ಯಮಂತ್ರಿಯಾಗಿ ಜಾರ್ಖಂಡ್ (Jharkhand) ಮುಕ್ತಿ ಮೋರ್ಚಾದ ಹಿರಿಯ ನಾಯಕ ಚಂಪೈ ಸೊರೇನ್ (Champai Soren) ಇಂದು (ಶುಕ್ರವಾರ) ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    67 ವಯಸ್ಸಿನ ಚಂಪೈ ಮಧ್ಯಾಹ್ನ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಎಂ ಹೇಮಂತ್ ಸೊರೇನ್ ಅವರನ್ನು ಬಂಧಿಸಲಾಗಿದೆ. ಹೀಗಾಗಿ ರಾಜ್ಯದ ಸಿಎಂ ಆಗುವಂತೆ ಚಂಪೈ ಅವರಿಗೆ ಆಹ್ವಾನ ನೀಡಿದ್ದರು. ಇದನ್ನೂ ಓದಿ: ಜಾರ್ಖಂಡ್‌ ಮಾಜಿ ಸಿಎಂ ಹೇಮಂತ್‌ ಸೋರೆನ್‌ಗೆ 1 ದಿನ ನ್ಯಾಯಾಂಗ ಬಂಧನ

    ಗುರುವಾರ ಚಂಪೈ ಸೊರೇನ್ ಅವರನ್ನು ಭೇಟಿ ಮಾಡಿದ ಕೆಲವೇ ಗಂಟೆಗಳ ನಂತರ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರು ಪ್ರಮಾಣವಚನ ಸ್ವೀಕರಿಸಲು ಆಹ್ವಾನ ಕೊಟ್ಟಿದ್ದರು. ರಾಜ್ಯದಲ್ಲಿ 18 ಗಂಟೆಗಳ ಕಾಲ ಯಾವುದೇ ಸರ್ಕಾರವಿಲ್ಲ. ಗೊಂದಲದ ಪರಿಸ್ಥಿತಿ ಇದೆ. ಸಾಂವಿಧಾನಿಕ ಮುಖ್ಯಸ್ಥರಾಗಿರುವ ನೀವು ಶೀಘ್ರದಲ್ಲೇ ಜನಪ್ರಿಯ ಸರ್ಕಾರ ರಚನೆಗೆ ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ರಾಜ್ಯಪಾಲರು ಹೇಳಿದ್ದರು.

    ಜಾರ್ಖಂಡ್‌ನ ಆಡಳಿತಾರೂಢ ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಮೈತ್ರಿಕೂಟವು 81 ಸದಸ್ಯರ ವಿಧಾನಸಭೆಯಲ್ಲಿ 47 ಶಾಸಕರನ್ನು ಹೊಂದಿದೆ. ಬಹುಮತಕ್ಕೆ 41 ಸ್ಥಾನಗಳ ಅಗತ್ಯವಿದೆ. ಪ್ರಸ್ತುತ 43 ಶಾಸಕರು ಚಂಪೈ ಸೊರೇನ್ ಅವರನ್ನು ಬೆಂಬಲಿಸಿದ್ದರು.

    ಬಿಜೆಪಿ 25 ಶಾಸಕರನ್ನು ಹೊಂದಿದೆ. AJSU ಅಥವಾ ಆಲ್ ಜಾರ್ಖಂಡ್ ವಿದ್ಯಾರ್ಥಿ ಒಕ್ಕೂಟವು ಮೂವರು ಶಾಸಕರನ್ನು ಹೊಂದಿದೆ. ಎನ್‌ಸಿಪಿ ಮತ್ತು ಎಡಪಕ್ಷಗಳು ತಲಾ ಒಂದು ಹಾಗೂ ಮೂವರು ಪಕ್ಷೇತರ ಶಾಸಕರು ಇದ್ದಾರೆ. ಇದನ್ನೂ ಓದಿ: ಹೇಮಂತ್‌ ಸೋರೆನ್‌ ತಂದೆಯೂ ಹಿಂದೆ ಜೈಲುಪಾಲು!

    ಬುಧವಾರ ಸಂಜೆ ರಾಜ್ಯಪಾಲರನ್ನು ಭೇಟಿಯಾಗಿ ಉನ್ನತ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ನಂತರ ಜಾರಿ ನಿರ್ದೇಶನಾಲಯವು ಹೇಮಂತ್ ಸೊರೇನ್ ಅವರನ್ನು ಬಂಧಿಸಿದೆ. ಅವರು 600 ಕೋಟಿ ರೂ. ಭೂ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

  • ಹೇಮಂತ್ ಸೋರೆನ್ ಅರೆಸ್ಟ್ – ಚಂಪಾಯಿ ಸೋರೆನ್ ಮುಂದಿನ ಜಾರ್ಖಂಡ್ ಸಿಎಂ

    ಹೇಮಂತ್ ಸೋರೆನ್ ಅರೆಸ್ಟ್ – ಚಂಪಾಯಿ ಸೋರೆನ್ ಮುಂದಿನ ಜಾರ್ಖಂಡ್ ಸಿಎಂ

    ರಾಂಚಿ: ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್ ಬಂಧಿಸವುದು ಖಚಿತವಾಗುತ್ತಲೇ ಆಡಳಿತ ಪಕ್ಷದ ಶಾಸಕರು ಸಭೆ ನಡೆಸಿ, ಹೇಮಂತ್ ಸೋರೆನ್ ಆಪ್ತ, ಸಚಿವ ಚಂಪಾಯಿ ಸೋರೆನ್‍ರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ.

    ರಾಜ್ಯಪಾಲರನ್ನು ಭೇಟಿ ಮಾಡಿರುವ ಆಡಳಿತ ಪಕ್ಷದ ಶಾಸಕರು, ಚಂಪಾಯಿ ಸೋರೆನ್‍ರನ್ನು (Champai Soren) ಮುಖ್ಯಮಂತ್ರಿ ಮಾಡುವಂತೆ ಮನವಿ ಮಾಡಿದ್ದಾರೆ. ಗುರುವಾರ ಚಂಪಾಯಿ ಸೋರೇನ್ ಸಿಎಂ ಆಗಿ ಅಧಿಕಾರ ಸ್ವೀಕರಿಸುವ ಸಂಭವ ಇದೆ.

    ಸೋರೆನ್ ಅರೆಸ್ಟ್: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಮಂತ್ ಸೋರೆನ್ (Hemant Soren) ಅವರನ್ನು ಬುಧವಾರ ಸಂಜೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬಂಧಿಸಿದ್ದಾರೆ. ಭಾರೀ ಭದ್ರತೆ ನಡುವೆ ರಾಂಚಿಯ ಸಿಎಂ ನಿವಾಸಕ್ಕೆ ಮಧ್ಯಾಹ್ನ ಬಂದ ಇ.ಡಿ ಅಧಿಕಾರಿಗಳು ಸತತ 8 ಗಂಟೆ ವಿಚಾರಣೆ ನಡೆಸಿ ಬಂಧನ ಮಾಡಿದರು. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್‌ – ಜಾರ್ಖಂಡ್‌ ಸಿಎಂ ಸೊರೆನ್‌ ಅರೆಸ್ಟ್‌

    ಇತ್ತ ಸೋರೆನ್ ಬಂಧನಕ್ಕೆ ಜೆಎಂಎಂ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸಿಎಂ ನಿವಾಸ, ರಾಜಭವನ, ಇಡಿ ಕಚೇರಿ ಬಳಿ ನಿಷೇಧಾಜ್ಞೆ ವಿಧಿಸಲಾಗಿದೆ. ರಾಂಚಿ ಭದ್ರತೆಗೆ 7 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಇಡಿ ಅಧಿಕಾರಿಗಳ ವಿರುದ್ಧ ಹೇಮಂತ್ ಸೋರೆನ್ ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ.