ಇನ್ನೂ 5ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದು, ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಸದ್ಯ ಸ್ಥಳದಲ್ಲಿ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮತ್ತು ಲೋಕೋಪಯೋಗಿ ಇಲಾಖೆಯ ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಜೊತೆಗೆ ಜೆಸಿಬಿ ಮತ್ತು ಇತರ ಉಪಕರಣಗಳನ್ನು ಬಳಸಿಕೊಂಡು ಅವಶೇಷಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿವೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಅವಶೇಷಗಳಡಿಯಲ್ಲಿ ಸಿಲುಕಿದ್ದ ಇಬ್ಬರನ್ನು ಜೀವಂತವಾಗಿ ಹೊರತೆಗೆಯಲಾಗಿದೆ. ಸ್ಥಳದಲ್ಲೇ ಆಂಬ್ಯುಲೆನ್ಸ್ ಹಾಗೂ ವೈದ್ಯಕೀಯ ತಂಡ ಬೀಡುಬಿಟ್ಟಿವೆ ಎಂದು ತಿಳಿಸಿದ್ದಾರೆ.
ಡೆಹ್ರಾಡೂನ್: ಉತ್ತರಾಖಂಡದ (Uttarakhand) ರುದ್ರಪ್ರಯಾಗ, (Rudraprayag) ಚಮೋಲಿ, (Chamoli) ಜಿಲ್ಲೆಗಳಲ್ಲಿ ಭಾರೀ ಮೇಘಸ್ಫೋಟ (Cloudburst) ಸಂಭವಿಸಿದ್ದು, ಹಲವರು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಮೇಘಸ್ಫೋಟದಿಂದಾಗಿ ಹಠಾತ್ ಪ್ರವಾಹ ಉಂಟಾಗಿದ್ದು, ದೇವಲ್‌ನ ಮೊಪಾಟಾ ಪ್ರದೇಶದಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ. ಇನ್ನೂ 15ಕ್ಕೂ ಹೆಚ್ಚು ಜಾನುವಾರುಗಳು ನೀರಿನಲ್ಲಿ ಕೊಚ್ಚಿಹೋಗಿವೆ. ರುದ್ರಪ್ರಯಾಗ ಜಿಲ್ಲೆಯಲ್ಲಿ ಅಲಕನಂದಾ ಮತ್ತು ಮಂದಾಕಿನಿ ನದಿಗಳ ಸಂಗಮದಲ್ಲಿ ನೀರಿನ ಮಟ್ಟ ನಿರಂತರವಾಗಿ ಏರಿಕೆಯಾಗುತ್ತಿದ್ದು, ಹನುಮಾನ್ ದೇವಾಲಯ ಮುಳುಗಡೆಯಾಗಿದೆ.ಇದನ್ನೂ ಓದಿ: ಹಾಸನ | ರಸ್ತೆಗೆ ಮರ ಕೆಡವಿ ವಾಹನ ಸವಾರರನ್ನು ತಡೆದ ಗಜರಾಜ!
ಶ್ರೀನಗರ ಮತ್ತು ರುದ್ರಪ್ರಯಾಗ ನಡುವಿನ ಬದರಿನಾಥ ಹೆದ್ದಾರಿ ಮುಳುಗಡೆಯಾದ ಹಿನ್ನೆಲೆ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಾಗಿ ಯಾತ್ರಿಕರನ್ನು ಪರ್ಯಾಯ ಮಾರ್ಗಗಳ ಮೂಲಕ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಭದ್ರತಾ ದೃಷ್ಟಿಯಿಂದ ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಇನ್ನೂ ಕೇದಾರನಾಥ ಕಣಿವೆಯ ಲಾವಾರಾ ಗ್ರಾಮದಲ್ಲಿಯೂ ಭೀಕರ ಪ್ರವಾಹ ಉಂಟಾಗಿದೆ. ಪರಿಣಾಮ ರಸ್ತೆಯ ಸೇತುವೆಯೊಂದು ಕೊಚ್ಚಿಹೋಗಿದ್ದು, ಚೆನಾಗಡ್‌ನಲ್ಲಿಯೂ ಗಂಭೀರ ಪರಿಸ್ಥಿತಿ ಉಂಟಾಗಿದೆ. ಭಾರೀ ಮಳೆಯ ಹಿನ್ನೆಲೆ ರುದ್ರಪ್ರಯಾಗ, ಬಾಗೇಶ್ವರ, ಚಮೋಲಿ, ಹರಿದ್ವಾರ ಮತ್ತು ಪಿಥೋರಗಢ ಜಿಲ್ಲೆಗಳಾದ್ಯಂತ ಇಂದು (ಆ.29) ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಪರಿಸ್ಥಿತಿ ನಿಭಾಯಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ಭರವಸೆ ನೀಡಿದ್ದಾರೆ.ಇದನ್ನೂ ಓದಿ: ಸಾಮೂಹಿಕ ಗಣೇಶ ವಿಸರ್ಜನೆಗೆ ಬೆಂಗ್ಳೂರಿನ ಕೆಲವು ಏರಿಯಾಗಳಲ್ಲಿ ಮದ್ಯ ನಿಷೇಧ
ಡೆಹ್ರಾಡೂನ್: ಶನಿವಾರ ಮುಂಜಾನೆ ಉತ್ತರಾಖಂಡದ (Uttarakhand) ಚಮೋಲಿ (Chamoli) ಜಿಲ್ಲೆಯಲ್ಲಿ ಮೇಘಸ್ಫೋಟ (Cloudburst) ಸಂಭವಿಸಿದ ಪರಿಣಾಮ ಅನೇಕ ಮನೆಗಳು ಸರ್ವನಾಶವಾಗಿದ್ದು, ಹಲವರು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.
VIDEO | Uttarakhand: Heavy rainfall since late evening has caused massive destruction in Chamoli district’s Tharali region. A cloudburst late Friday night buried several vehicles under debris in Radibagad and Chepado.
ಶನಿವಾರ ಮುಂಜಾನೆ 1 ಗಂಟೆಯ ಸುಮಾರಿಗೆ ಮೇಘಸ್ಫೋಟ ಸಂಭವಿಸಿದೆ. ಅವಶೇಷಗಳಡಿ ಹುಡುಗಿಯೊಬ್ಬಳು ಸಿಲುಕಿಕೊಂಡಿದ್ದು, ಪೊಲೀಸ್ ಹಾಗೂ ಎಸ್‌ಡಿಆರ್‌ಎಫ್ ತಂಡದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮೇಘಸ್ಫೋಟದಿಂದ ಅನೇಕ ವಾಹನಗಳು ಹಾಗೂ ಅಂಗಡಿಗಳು ಸಹ ಜಲಸಮಾಧಿಯಾಗಿದೆ. ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳ ಆರೋಪ – ಗೃಹಿಣಿ ಆತ್ಮಹತ್ಯೆ
#WATCH | Uttarakhand: Due to a cloudburst in Tharali of Chamoli district, debris has entered houses, the market, and the SDM’s residence. District Magistrate and relief teams have left for the spot. Two people are reported missing: Uttarakhand Disaster Management Secretary Vinod… pic.twitter.com/V2aesFekFf
ಡೆಹ್ರಾಡೂನ್, ತೆಹ್ರಿ, ಪೌರಿ, ಚಮೋಲಿ, ರುದ್ರಪ್ರಯಾಗ, ನೈನಿತಾಲ್ ಮತ್ತು ಅಲ್ಮೋರಾ ಸೇರಿದಂತೆ ರಾಜ್ಯದಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ರಕ್ಷಣಾ ತಂಡಗಳೊಂದಿಗೆ ಜಿಲ್ಲಾಧಿಕಾರಿ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಥರಾಲಿ ಬಜಾರ್, ರಾಡಿಬಾಗ್ ಮತ್ತು ಚೆಪ್ಡೊ ಗ್ರಾಮಗಳು ಹೆಚ್ಚು ಹಾನಿಗೊಳಗಾಗಿವೆ ಎಂದು ವರದಿಗಳು ತಿಳಿಸಿವೆ. ಮೇಘಸ್ಫೋಟದ ಪರಿಣಾಮ ಅವಶೇಷಗಳು ರಸ್ತೆಯಲ್ಲಿ ಬಿದ್ದಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದನ್ನೂ ಓದಿ: ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ, ಮಾಜಿ ಸಂಸದ ಸುರವರಂ ಸುಧಾಕರ ರೆಡ್ಡಿ ನಿಧನ
ಪಿಥೋರಗಢದಲ್ಲಿ, ಭೂಕುಸಿತದಿಂದಾಗಿ ಥಾಲ್-ಮುನ್ಸಾರಿ ಮತ್ತು ಮುನ್ಸಾರಿ-ಮಿಲಮ್ ರಸ್ತೆಗಳು ಮುಚ್ಚಲ್ಪಟ್ಟಿವೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಮಳೆ ಮತ್ತು ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ನಿವಾಸಿಗಳು ಜಾಗರೂಕರಾಗಿರುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಅನೇಕ ಗ್ರಾಮಸ್ಥರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: ಮಹೇಶ್ ಶೆಟ್ಟಿ ತಿಮರೋಡಿಗೆ ಜೈಲಾ? ಬೇಲಾ? – ಇಂದು ಉಡುಪಿ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ
ಡೆಹ್ರಾಡೂನ್: ಉತ್ತರಾಖಂಡದ (Uttarakhand) ಚಮೋಲಿ (Chamoli) ಜಿಲ್ಲೆಯ ಹೆಲಾಂಗ್ (Helang) ಬಳಿಯ ಟಿಹೆಚ್‌ಡಿಸಿಯ (THDC) ವಿಷ್ಣುಗಡ್ ಜಲವಿದ್ಯುತ್ ಯೋಜನಾ ಸ್ಥಳದಲ್ಲಿ (Vinshnugad Hydro-Electricity Project) ಶನಿವಾರ ಭೂಕುಸಿತ ಸಂಭವಿಸಿದ ಪರಿಣಾಮ ಹನ್ನೆರಡು ಕಾರ್ಮಿಕರು ಗಾಯಗೊಂಡಿದ್ದಾರೆ.
ಭೂಕುಸಿತ ಉಂಟಾದ ವೇಳೆ ಸ್ಥಳದಲ್ಲಿ ಸುಮಾರು 300 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂದೀಪ್ ತಿವಾರಿ ಹೇಳಿದ್ದಾರೆ. ಘಟನೆಯಲ್ಲಿ ಎಂಟು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಮಲಯಾಳಂ ನಟ ಕಲಾಭವನ್ ನವಾಸ್ ಹೋಟೆಲ್ ರೂಮ್‌ನಲ್ಲಿ ಶವವಾಗಿ ಪತ್ತೆ – ಹೃದಯಾಘಾತ ಶಂಕೆ
ಮುಂಗಾರು ಮಳೆಯ (Rain) ವೇಳೆ ಚಳಿ ಅಂತ ಕೆಲವರು ಬೆಚ್ಚಗೆ ಮನೆಯಲ್ಲಿ ಕೂತರೇ ಇನ್ನೂ ಕೆಲವರು ಪ್ರವಾಸ, ಟ್ರಕ್ಕಿಂಗ್ ಅಂತ ಹೊರಡುತ್ತಾರೆ. ಅದರಲ್ಲೂ ಜಿಟಿಜಿಟಿ ಮಳೆಯ ನಡುವೆ ಟ್ರಕ್ಕಿಂಗ್ ಹೋಗೋದು ಸುಲಭದ ಮಾತಲ್ಲ. ಆದರೆ ಅದರಲ್ಲೂ ಒಂಥರಾ ಖುಷಿ ಸಿಗುತ್ತದೆ. ಮಳೆಯ ನಡುವೆ ಹಚ್ಚಹಸಿರಾಗಿರುವ ಪರಿಸರದ ರಮಣೀಯ ದೃಶ್ಯಗಳು ಮನಸ್ಸಿಗೆ ಮುದ ನೀಡುತ್ತವೆ. ಇದೀಗ ಜೂನ್1ರಿಂದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಿಕೊಂಡಿರುವ ʼವ್ಯಾಲಿ ಆಫ್ ಫ್ಲವರ್ಸ್ʼ ತೆರೆದಿದ್ದು, ಪರಿಸರ ಪ್ರೇಮಿಗಳು ಹಾಗೂ ಚಾರಣ ಪ್ರಿಯರು ತೆರಳಲು ಇದು ಉತ್ತಮ ಸಮಯವಾಗಿದೆ. ಹಾಗಿದ್ರೆ ಎಲ್ಲಿದೆ ಈ ʼವ್ಯಾಲಿ ಆಫ್ ಫ್ಲವರ್ಸ್ʼ? ತೆರಳೋದು ಹೇಗೆ? ಅಲ್ಲಿನ ವಿಶೇಷತೆಗಳೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ʼವ್ಯಾಲಿ ಆಫ್ ಫ್ಲವರ್ಸ್ʼ ಎಲ್ಲಿದೆ?
ಉತ್ತರಾಖಂಡದ (Uttarakhand) ಚಮೋಲಿ (Chamoli) ಜಿಲ್ಲೆಯಲ್ಲಿರುವ ʼವ್ಯಾಲಿ ಆಫ್ ಫ್ಲವರ್ಸ್ʼ (Valley Of Flowers) ನ್ಯಾಷನಲ್ ಪಾರ್ಕ್, ಉತ್ತರಾಖಂಡ್ ರಾಜ್ಯದ ಸ್ಥಳೀಯ ಆಲ್ಪೈನ್ ಹೂಗಳು ಮತ್ತು ಹುಲ್ಲುಗಾವಲು ಪ್ರದೇಶಗಳಿಂದ ಕೂಡಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಈ ಸುಂದರ ಪ್ರವಾಸಿ ತಾಣ ಮೋನಾಲ್ ಫೆಸೆಂಟ್ ಬರ್ಡ್ಸ್ ಸೇರಿದಂತೆ ಹಲವು ಎತ್ತರದ ಪಕ್ಷಿಗಳ ತವರೂರಾಗಿದೆ. ʼವ್ಯಾಲಿ ಆಫ್ ಫ್ಲವರ್ಸ್ʼ ಸಮುದ್ರ ಮಟ್ಟದಿಂದ 3,352 ಮೀಟರ್ ಎತ್ತರದಲ್ಲಿದೆ.
ಟ್ರಕ್ಕಿಂಗ್‌ಗೆ ತೆರಳುವ ಪ್ರದೇಶಗಳೆಲ್ಲಾ ಹೂವುಗಳಿಂದ ಆವೃತ್ತ ಆಗಿರುತ್ತೆ. ಅತ್ಯಂತ ಆಕರ್ಷಣೀಯ ಆಗಿರುತ್ತದೆ. ಪ್ರಕೃತಿಯ ಸೊಬಗಿಗೆ ಮತ್ತಷ್ಟು ಅಂದವನ್ನು ಈ ಹೂವಿನ ರಾಶಿ ನೀಡುತ್ತದೆ. ಉತ್ತರಾಖಂಡದ ಈ ಹೂವಿನ ಕಣಿವೆಯಲ್ಲಿ 300 ಬಗೆಯ ಹೂಗಳು ಬೆಳೆಯುತ್ತವೆ. ಇವುಗಳಿಂದ ಉತ್ತರಾಖಂಡದ ಈ ಅರಣ್ಯ ಪ್ರದೇಶದ ಹಸಿರಿಗೆ ಮತ್ತಷ್ಟು ಮೆರಗು ಮೂಡಿದೆ. ಅದ್ರಲ್ಲೂ ಜೂನ್‌ನಿಂದ ಅಕ್ಟೋಬರ್ ಕಾಲಘಟ್ಟದಲ್ಲಿ ಹೂಗಳು ಅರಳುತ್ತವೆ. ಈ ಸಮಯದಲ್ಲಿ ಚಾರಣದ ಅನುಭವವೇ ರೋಮಾಂಚಕವಾಗಿ ಇರುತ್ತದೆ.
ಹೂವಿನ ಚಪ್ಪರದಂತೆ ಕಾಣುವ ಬೆಟ್ಟಗಳ ಈ ಕಣಿವೆಗೆ ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಹೋಗುತ್ತಾರೆ.. ಉತ್ತರಾಖಂಡದ ಈ ಹೂವಿನ ಕಣಿವೆಗೆ ನೀವೇನಾದರೂ ಚಾರಣ ಹೋಗಬೇಕು ಅಂತಾ ಅಂದುಕೊಂಡಿದ್ದರೆ ಈ ವಿಷಯಗಳನ್ನ ತಿಳಿದುಕೊಂಡಿರಬೇಕು.
ಯುನೆಸ್ಕೋ ಪಾರಂಪರಿಕ ತಾಣ:
ಈ ಉತ್ತರಾಖಂಡದ ಹೂವಿನ ಕಣಿವೆ ಪ್ರದೇಶವು ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಯಲ್ಲಿದೆ. 2005ರಲ್ಲೇ ಈ ಪ್ರದೇಶವನ್ನು ಯುನೆಸ್ಕೋ ಪಟ್ಟಿಗೆ ಸೇರಿಸಿ ಘೋಷಣೆ ಪ್ರಕಟಿಸಲಾಗಿದೆ.
ಅತ್ಯಂತ ಹೆಚ್ಚು ಜೀವವೈವಿಧ್ಯತೆ:
ಮತ್ತೊಂದು ವಿಚಾರ ಏನಂದರೆ ಹೂಗಳ ಸೊಬಗಿನಿಂದ ಕೂಡಿರುವ ಈ ಅರಣ್ಯ ಪ್ರದೇಶದಲ್ಲಿ ಜೀವ ವೈವಿಧ್ಯತೆ ಉತ್ತಮ ರೀತಿಯಾಗಿ ಇರುತ್ತದೆ. ಹೂಗಳ ರಾಶಿ ಇರುವಂತಹ ಈ ಕಣಿವೆಯಲ್ಲಿ ಅತ್ಯಂತ ಅಪರೂಪದ ಜೀವಿಗಳು ಕೂಡ ವಾಸ ಮಾಡುತ್ತವೆ. ಅದ್ರಲ್ಲೂ ಏಷ್ಯಾದ ಕರಡಿ, ಹಿಮ ಚಿರತೆ, ಹಿಮ ಮೇಕೆಯಂತಹ ಪ್ರಾಣಿಗಳು ಹೆಚ್ಚಾಗಿ ಇರುತ್ತವೆ.
ಆಧ್ಯಾತ್ಮಿಕ ತಾಣಗಳು
ಹೂವುಗಳಿಂದ ಆವೃತವಾಗಿರುವ ಈ ಕಣಿವೆ, ಆಧ್ಯಾತ್ಮಿಕ ಮತ್ತು ಧಾರ್ಮಿಕ ತಾಣಗಳಿಂದ ಕೂಡಿದೆ. ಪ್ರಶಾಂತತೆಗೆ ಖ್ಯಾತಿ ಪಡೆದಿದೆ. ಧ್ಯಾನಕ್ಕೆ, ಮನಶಾಂತಿಗೆ ಸೂಕ್ತ ಜಾಗಗಳಾಗಿ ಇರುತ್ತವೆ. ಹೇಮಕುಂಡ್ ಸಾಹೇಬ್ ಗುರುಧ್ವಾರ ಪ್ರದೇಶವೂ ಈ ಕಣಿವೆ ವ್ಯಾಪ್ತಿಯಲ್ಲಿದೆ. ಪ್ರತಿ ವರ್ಷ ಸಾವಿರಾರು ಭಕ್ತರು ಈ ಹೇಮಕುಂಡ್ ಸಾಹೇಬ್‌ಗೆ ಭೇಟಿ ನೀಡುತ್ತಾರೆ. ಆಧ್ಯಾತ್ಮಿಕ ಪ್ರವಾಸದ ದೃಷ್ಟಿಯಿಂದ ಸಾವಿರಾರು ಜನರನ್ನ ಈ ಪ್ರದೇಶವೂ ತನ್ನತ್ತ ಸೆಳೆಯುತ್ತದೆ.
ಹೂವುಗಳಿಂದ ಹೆಚ್ಚಾಗಿ ಅವೃತವಾಗಿರುವ ಈ ಪ್ರದೇಶದಲ್ಲಿ ಚಾರಣಕ್ಕೂ ಕೂಡ ಸಾಹಸಮಯ ಆಗಿರುತ್ತದೆ. ಇವು ಕೆಲವೊಂದು ವಿಶಾಲವಾಗಿಯೂ ಮತ್ತೆ ಕೆಲವೆಡೆ ಕಡಿದಾದ ಪ್ರದೇಶಗಳಿಂದ ಕೂಡಿರುತ್ತದೆ. ಗೋವಿಂದಘಾಟ್ ಪ್ರದೇಶವೇ ಇದಕ್ಕೆ ಉತ್ತಮ ನಿದರ್ಶನ. ಸುಮಾರು 17 ಕಿಲೋ ಮೀಟರ್ ಹಾದಿಯ ಈ ಚಾರಣವೂ, ಅತ್ಯಂತ ಸಾಹಸಮಯವಾಗಿರುತ್ತದೆ, ಹೂವಿನ ದಾರಿಯು ದುರ್ಗಮವಾಗಿರುತ್ತದೆ.
ಭೇಟಿಗೆ ಯಾವ ಸಮಯ ಉತ್ತಮ?
ಜೂನ್‌ನಿಂದ ಅಕ್ಟೋಬರ್‌ವರೆಗೆ ಬೇಸಿಗೆಯ ತಿಂಗಳುಗಳಲ್ಲಿ ಮಾತ್ರ ಸಂದರ್ಶಕರಿಗೆ ತೆರೆದಿರುತ್ತದೆ. ಏಕೆಂದರೆ ವರ್ಷದ ಉಳಿದ ಭಾಗಗಳಲ್ಲಿ ಭಾರೀ ಹಿಮವು ಆವರಿಸುತ್ತದೆ.
5 ರಿಂದ 12 ವರ್ಷದೊಳಗಿನ ಮಕ್ಕಳಿಗೆ ತಲಾ 25 ರೂ. ಮತ್ತು 12 ವರ್ಷಕ್ಕಿಂತ ಮೇಲ್ಪಟ್ಟವರಿಗೆ ತಲಾ 35 ರೂ. ಪ್ರವೇಶ ಶುಲ್ಕವಿರುತ್ತ ದೆ.ಮಂಗಳವಾರದಿಂದ ಭಾನುವಾರದವರೆಗೆ ಬೆಳಗ್ಗೆ 6ರಿಂದ ಮಧ್ಯಾಹ್ನ12 ಗಂಟೆಯವರೆಗೆ ಹಾಗೂ ಮಧ್ಯಾಹ್ನ 3ರಿಂದ ರಾತ್ರಿ 9ಗಂಟೆಯವರೆಗೆ ತೆರೆದಿರುತ್ತದೆ. ಸೋಮವಾರ ಉದ್ಯಾನವನ ಮುಚ್ಚಿರುತ್ತದೆ.
ವ್ಯಾಲಿ ಆಫ್ ಫ್ಲವರ್ಸ್ ಪ್ರಸಿದ್ಧ ಏಕೆ?
-600 ಕ್ಕೂ ಹೆಚ್ಚು ಹೂಬಿಡುವ ಪ್ರಭೇದಗಳು ಕಣಿವೆಯಲ್ಲಿ ವಾಸಿಸುತ್ತವೆ, ಇದರಲ್ಲಿ ಆಲ್ಪೈನ್ ಹೂವುಗಳು ಮತ್ತು ಉತ್ತರಾಖಂಡದ ರಾಜ್ಯದ ಹೂವು, ಬ್ರಹ್ಮಕಮಲ ಸೇರಿವೆ.
-ಚಿರತೆಗಳು, ಏಷ್ಯಾಟಿಕ್ ಕಪ್ಪು ಕರಡಿಗಳು, ಕಂದು ಕರಡಿಗಳು, ಕಸ್ತೂರಿ ಜಿಂಕೆಗಳು ಮತ್ತು ನೀಲಿ ಕುರಿಗಳಂತಹ ವೈವಿಧ್ಯಮಯ ಪ್ರಾಣಿ ಪ್ರಭೇದಗಳು ಕಾಣಸಿಗುತ್ತವೆ.
-ಪುಷ್ಪಾವತಿ ನದಿಯು ಹಿಮದಿಂದ ಆವೃತವಾದ ಪರ್ವತಗಳು, ಬಂಡೆಗಳು, ಹಿಮನದಿಗಳು, ಜಲಪಾತಗಳು ಮತ್ತು ರುದ್ರರಮಣೀಯ ದೃಶ್ಯಾವಳಿಗಳಿಂದ ಆವೃತವಾಗಿದೆ.
-ರಾಷ್ಟ್ರೀಯ ಉದ್ಯಾನವನ ಎಂದು ಪ್ರಸಿದ್ಧಿ ಪಡೆದಿದೆ.
-ಇಲ್ಲಿನ ಸೊಂಪಾದ ಕಾಡುಗಳು ಮತ್ತು ಶುದ್ಧ ಗಾಳಿಯು ಪ್ರವಾಸಿಗರಿಗೆ ಉಲ್ಲಾಸಕರ ಅನುಭವವನ್ನು ನೀಡುತ್ತದೆ ಮತ್ತು ಕಣ್ಣುಗಳನ್ನು ಆಕರ್ಷಿಸುತ್ತದೆ.
ತಲುಪುವುದು ಹೇಗೆ? ರಸ್ತೆಯ ಮೂಲಕ: ಡೆಹ್ರಾಡೂನ್‌ನಿಂದ ಗೋವಿಂದಘಾಟ್‌ಗೆ ರಸ್ತೆಯ ಮೂಲಕ 300 ಕಿ.ಮೀ ಪ್ರಯಾಣ ಬೆಳೆಸಬೇಕು. ಡೆಹ್ರಾಡೂನ್‌ನಿಂದ ರಿಷಿಕೇಶವನ್ನು ತಲುಪಲು, ನೀವು ಖಾಸಗಿ ಅಥವಾ ಸಾರ್ವಜನಿಕ ಬಸ್ಸುಗಳನ್ನು ಆರಿಸಿಕೊಳ್ಳಬಹುದು. ರಿಷಿಕೇಶದಿಂದ ಗೋವಿಂದಘಾಟ್ ತಲುಪಲು ಕ್ಯಾಬ್ ಅನ್ನು ಬಾಡಿಗೆಗೆ ಪಡೆಯುವ ಆಯ್ಕೆಯಿರುತ್ತದೆ. ರಿಷಿಕೇಶ್‌ನಿಂದ ಕೈಗೆಟಕುವ ದರದಲ್ಲಿ ಜೀಪ್‌ಗಳು ಲಭ್ಯವಿವೆ. ಪರ್ಯಾಯವಾಗಿ, ಡೆಹ್ರಾಡೂನ್‌ನಿಂದ ಗೋವಿಂದಘಾಟ್‌ಗೆ ನೇರವಾಗಿ ಕ್ಯಾಬ್ ಅನ್ನು ಬಾಡಿಗೆಗೆ ಪಡೆಯುವ ಅನುಕೂಲವೂ ಇದೆ.
ವಿಮಾನದ ಮೂಲಕ: ಡೆಹ್ರಾಡೂನ್‌ಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ. ವ್ಯಾಲಿ ಆಫ್ ಫ್ಲವರ್ಸ್‌ಗೆ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಲು, ನೀವು ಡೆಹ್ರಾಡೂನ್‌ನಿಂದ ರೈಲುಗಳು, ಬಸ್ಸುಗಳು ಅಥವಾ ಕ್ಯಾಬ್ ಬಾಡಿಗೆ ಸೇರಿದಂತೆ ವಿವಿಧ ಸಾರಿಗೆ ಆಯ್ಕೆ ಮಾಡಬಹುದು. ಈ ಮಾರ್ಗವು ಸಾಮಾನ್ಯವಾಗಿ ಮೊದಲು ರಿಷಿಕೇಶಕ್ಕೆ ಪ್ರಯಾಣಿಸುವುದನ್ನು ಒಳಗೊಂಡಿರುತ್ತದೆ. ಸುಮಾರು 270 ಕಿಮೀ ದೂರ ಕ್ರಮಿಸಿದ ಬಳಿಕ ನೀವು ಗೋವಿಂದ ಘಾಟ್‌ಗೆ ತಲುಪಬಹುದು. ಗೋವಿಂದ ಘಾಟ್‌ನಿಂದ ಚಾರಣ ಆರಂಭಗೊಳ್ಳುತ್ತದೆ.
ಡೆಹ್ರಾಡೂನ್: ಉತ್ತರಾಖಂಡದ (Uttarakhand) ಚಮೋಲಿಯ ಹಿಮಕುಸಿತ ಸ್ಥಳದಲ್ಲಿ ಮತ್ತೊಬ್ಬ ಕಾರ್ಮಿಕನ ಮೃತದೇಹ ಪತ್ತೆಯಾಗಿದ್ದು, ಮೃತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಇನ್ನುಳಿದ ಮೂವರಿಗಾಗಿ ಶೋಧ ಮುಂದುವರಿದಿದೆ. ವಿಶೇಷ ರೆಕೊ ರಾಡಾರ್‌ಗಳು, ಡ್ರೋನ್ (Drone) ಮತ್ತು ಹಿಮಪಾತ ರಕ್ಷಣಾ ಶ್ವಾನಗಳನ್ನ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ.
ಹಿಮಕುಸಿತ ಪ್ರದೇಶದಲ್ಲಿ ಭಾರತೀಯ ಸೇನೆ, ವಾಯುಪಡೆ, ಇಂಡೋ ಟಿಬೆಟಿಯನ್ ಗಡಿ ಪೊಲೀಸ್, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಶುಕ್ರವಾರ 33, ಶನಿವಾರ 17 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.
ಮಳೆಯಿಂದ ಕಾರ್ಯಾಚರಣೆಗೆ ಅಡ್ಡಿ:
ಒಂದೆಡೆ ಹಿಮ ಮತ್ತೊಂದೆಡೆ ಭಾರೀ ಮಳೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಹೀಗಾಗಿ ಕಳೆದ ಎರಡೂ ದಿನ ರಾತ್ರಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ವಿವಿಧ ರಕ್ಷಣಾ ತಂಡಗಳೊಂದಿಗೆ ಅಗ್ನಿಶಾಮಕ ದಳದ 200ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಗೆ ಕೈಜೋಡಿಸಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ಕಾಣಿಸಿಕೊಂಡಿದ್ದ ʻಕೈʼ ಕಾರ್ಯಕರ್ತೆ ಸೂಟ್‌ಕೇಸ್‌ನಲ್ಲಿ ಶವವಾಗಿ ಪತ್ತೆ
ಉಳಿದ ಮೂವರು ಕಾರ್ಮಿಕರ ರಕ್ಷಣೆಗೆ ಹರಸಾಹಸ ನಡೆಸುತ್ತಿರುವ ಅಧಿಕಾರಿಗಳು ವಿಶೇಷ ರೆಕೊ ರಾಡಾರ್‌ಗಳು, ಡ್ರೋನ್‌ಗಳು ಮತ್ತು ಹಿಮಪಾತ ರಕ್ಷಣಾ ಶ್ವಾನಗಳನ್ನ ಬಳಸಿಕೊಂಡಿದ್ದಾರೆ. ಶನಿವಾರ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, ಹಿಮಕುಸಿತ ಪ್ರದೇಶಗಳನ್ನ ವೈಮಾನಿಕ ಸಮೀಕ್ಷೆ ಮೂಲಕ ವೀಕ್ಷಣೆ ಮಾಡಿದ್ದಾರೆ. ಜೊತೆಗೆ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಮಾಹಿತಿಯನ್ನೂ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಜನರು ಸರ್ಕಾರದಿಂದ ಭಿಕ್ಷೆ ಬೇಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ: ಬಿಜೆಪಿ ನಾಯಕ ಪ್ರಹ್ಲಾದ್ ಪಟೇಲ್
ಡೆಹ್ರಾಡೂನ್: ಉತ್ತರಾಖಂಡದ (Uttarakhand Avalanche) ಚಮೋಲಿ ಜಿಲ್ಲೆಯಲ್ಲಿ ಹಿಮಪಾತ ಸಂಭವಿಸಿದ್ದು, ಮಾನಾ ಗ್ರಾಮದಲ್ಲಿ 57 ಕಾರ್ಮಿಕರು ಸಿಲುಕಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಜಿಲ್ಲಾಡಳಿತ, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ITBP) ಮತ್ತು ಗಡಿ ರಸ್ತೆ ಸಂಸ್ಥೆ (BRO) ತಂಡಗಳು ಸ್ಥಳದಲ್ಲಿ ಕಾರ್ಯಾಚರಣೆಗೆ ಇಳಿದಿವೆ.
ಶುಕ್ರವಾರ ಬೆಳಗ್ಗೆ 07:15 ರ ಸುಮಾರಿಗೆ ಮಾನಾ ಮತ್ತು ಬದರಿನಾಥ್ ನಡುವೆ ಇರುವ BRO ಕಾರ್ಮಿಕ ಶಿಬಿರವು ಹಿಮಪಾತಕ್ಕೆ ತುತ್ತಾಯಿತು. ಎಂಟು ಕಂಟೇನರ್‌ಗಳು ಮತ್ತು ಒಂದು ಶೆಡ್‌ನಲ್ಲಿ 57 ಕಾರ್ಮಿಕರು ಸಿಲುಕಿದ್ದಾರೆ.
ಐಬೆಕ್ಸ್ ಬ್ರಿಗೇಡ್‌ನ 100 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಒಳಗೊಂಡ ಭಾರತೀಯ ಸೇನೆಯ ಕ್ಷಿಪ್ರ ಕಾರ್ಯ ತಂಡಗಳನ್ನು ಸಜ್ಜುಗೊಳಿಸಲಾಗಿದೆ. ವೈದ್ಯರು, ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 11:50 ರ ಹೊತ್ತಿಗೆ, ತಂಡಗಳು ಐದು ಕಂಟೇನರ್‌ಗಳನ್ನು ಪತ್ತೆಹಚ್ಚಿವೆ. 10 ಮಂದಿಯನ್ನು ರಕ್ಷಿಸಲಾಗಿದೆ. ಅವರ ಪೈಕಿ ನಾಲ್ವರು ಸಿಬ್ಬಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ. ಸಿಕ್ಕಿಬಿದ್ದವರನ್ನು ರಕ್ಷಿಸುವ ಉದ್ದೇಶದಿಂದ ಉಳಿದ ಮೂರು ಕಂಟೇನರ್‌ಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಇದನ್ನೂ ಓದಿ: ಯಮುನಾ ಸ್ವಚ್ಛತೆಗೆ ಮಿಷನ್ ಮೋಡ್; ಮಾಸ್ಟರ್ ಪ್ಲ್ಯಾನ್ ಸಿದ್ಧ
ಈ ಪ್ರದೇಶದಲ್ಲಿ ಭಾರೀ ಹಿಮಪಾತ ಮುಂದುವರಿದಿದೆ. GREF ಜೋಶಿಮಠ ಮತ್ತು ಮಾನಾ ನಡುವಿನ ರಸ್ತೆಯನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿದೆ. ರಕ್ಷಣಾ ಮತ್ತು ವೈದ್ಯಕೀಯ ಸಹಾಯಕ್ಕಾಗಿ ಜೋಶಿಮಠದಿಂದ ಹೆಚ್ಚುವರಿ ವೈದ್ಯಕೀಯ ಸಂಪನ್ಮೂಲಗಳನ್ನು ಮಾನಾಗೆ ಸಜ್ಜುಗೊಳಿಸಲಾಗಿದೆ.
ಡೆಹ್ರಾಡೂನ್: ವಿದ್ಯುತ್ ಅವಘಡದಿಂದ (Electric Shock) ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಮತ್ತು ಐವರು ಗೃಹ ರಕ್ಷಕರು ಸೇರಿದಂತೆ ಕನಿಷ್ಠ 16 ಜನ ಸಾವನ್ನಪ್ಪಿದ ಘಟನೆ ಉತ್ತರಾಖಂಡದ (Uttarakhand) ಚಮೋಲಿಯಲ್ಲಿ (Chamoli) ಬುಧವಾರ ನಡೆದಿದೆ.
ನದಿ ಅಣೆಕಟ್ಟಿನ ಮೇಲೆ ವಿದ್ಯುತ್ ತಂತಿ ಹಾದು ಹೋಗಿತ್ತು. ಇದನ್ನು ಸ್ಪರ್ಶಿಸಿ ಬಹುತೇಕರು ಮೃತಪಟ್ಟಿದ್ದಾರೆ. ಯೋಜನೆಯ ಉಸ್ತುವಾರಿ ಗಣೇಶ್ ಲಾಲ್ ಮೊದಲು ಸಾವನ್ನಪ್ಪಿದರು. ಬಳಿಕ ಉಳಿದವರು ಇದನ್ನು ಸ್ಪರ್ಶಿಸಿದ್ದಾರೆ. ಇದು ಟ್ರಾನ್ಸ್‌ಫಾರ್ಮರ್ ಸ್ಫೋಟಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ 7 ಜನ ಗಾಯಗೊಂಡಿದ್ದು, ಅವರನ್ನು ಹೆಲಿಕಾಪ್ಟರ್ ಮೂಲಕ ರಿಷಿಕೇಶದ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಲು ಆದೇಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ಇದನ್ನೂ ಓದಿ: ತಂದೆಯನ್ನ ಕೊಂದು 15 ದಿನಗಳ ಬಳಿಕ ಪೊಲೀಸರಿಗೆ ಶರಣಾದ ಪಾಪಿ ಮಗ
ಡೆಹ್ರಾಡೂನ್: ಪೊಲೀಸರು ತನಿಖೆ ನಡೆಸುವಾಗ ಕಳ್ಳನೊಬ್ಬ ತನ್ನ ತಪ್ಪನ್ನು ರಾಪ್ ಸಾಂಗ್ ಮೂಲಕ ವಿಶಿಷ್ಟ ರೀತಿಯಲ್ಲಿ ಒಪ್ಪಿಕೊಂಡಿರುವ ಘಟನೆ ಉತ್ತರಾಖಂಡದಲ್ಲಿ (Uttarakhand) ನಡೆದಿದೆ.
ಚಮೋಲಿಯ (Chamoli) ಅಂಗಡಿಯೊಂದರಲ್ಲಿ ಮೊಬೈಲ್ (mobile) ಹಾಗೂ ಕ್ಯಾಮೆರಾ (Camera) ಕಳವು ಮಾಡಿದ ಆರೋಪದ ಮೇರೆಗೆ ಸುಮಿತ್ ಖತ್ರಿ (19) ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ತನಿಖೆ ನಡೆಸುವ ವೇಳೆ ಈ ಪ್ರಸಂಗ ನಡೆದಿದೆ. ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಧರ್ಮೇಂದ್ರ, ಅಮಿತಾಭ್, ಅಂಬಾನಿ ಮನೆಯಲ್ಲಿ ಬಾಂಬ್: ಪೊಲೀಸರಿಂದ ಶೋಧ
ರಾಪರ್ ಆಗುವ ಆಸೆಯಿಂದ ಹಣವಿಲ್ಲದೆ ಖತ್ರಿ ಕಳ್ಳತನವೆಸಗಿದ್ದಾನೆ. ತನಿಖೆ ಸಂದರ್ಭದಲ್ಲಿ ತನ್ನ ತಪ್ಪಿಗೆ ಮರುಕಪಟ್ಟಿದ್ದಾನೆ.
ಫೆ. 19 ರಂದು ಮಂದಿರ ಮಾರ್ಗದ (Mandir Marg) ಸಂಜಯ್ ಸಿಂಗ್ ಎಂಬವರಿಗೆ ಸೇರಿದ್ದ ಅಂಗಡಿಯ ಬೀಗ ಒಡೆದು 3.5 ಲಕ್ಷ ರೂ ಮೌಲ್ಯದ ಐದು ಮೊಬೈಲ್‍ಗಳನ್ನು ಹಾಗೂ ಒಂದು ಕ್ಯಾಮೆರಾವನ್ನು ಕಳ್ಳತನ ಮಾಡಲಾಗಿತ್ತು. ಈ ಕುರಿತು ಅಂಗಡಿಯ ಮಾಲೀಕ ಗೋಪೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಆರೋಪಿಯಂದ ಕದ್ದ ವಸ್ತುಗಳನ್ನು ವಶಪಡಿಸಿಕೊಂಡು ಸಂಜಯ್ ಸಿಂಗ್‍ಗೆ ಮರಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅನುಷ್ಕಾಳೇ ನನ್ನ ಸ್ಫೂರ್ತಿ ಎಂದು ಪತ್ನಿಯನ್ನು ಹಾಡಿ ಹೊಗಳಿದ ವಿರಾಟ್ ಕೊಹ್ಲಿ
ಡೆಹ್ರಾಡೂನ್: ಹಿಮ ಪ್ರಳಯಕ್ಕೆ ತುತ್ತಾದ ಉತ್ತರಾಖಂಡ್‍ನ ಚಮೋಲಿ ಜಿಲ್ಲೆಯಲ್ಲಿ ಸತತ ಮೂರನೇ ದಿನವೂ ರಕ್ಷಣಾ ಕಾರ್ಯ ಮುಂದುವರಿದಿದೆ.
ತಪೋವನ ಜಲವಿದ್ಯುತ್ ಕೇಂದ್ರದ ಸುರಂಗದಲ್ಲಿ ತುಂಬಿದ ಕೆಸರನ್ನು ತೆರವು ಮಾಡಲಾಗಿದ್ದು, ಈ ವೇಳೆ ಹಲವು ಶವ ಪತ್ತೆಯಾಗಿವೆ. ಇದುವರೆಗೂ ಮೃತರ ಸಂಖ್ಯೆ 31ಕ್ಕೆ ಹೆಚ್ಚಳವಾಗಿದೆ. ಸರಿಸುಮಾರು 30 ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ 160 ಮಂದಿ ಪತ್ತೆಯಾಗಬೇಕಿದೆ.
ಹಿಮಸುನಾಮಿಗೆ ತುತ್ತಾದ ಗ್ರಾಮಗಳಲ್ಲಿಯೂ ರಕ್ಷಣಾ ಕಾರ್ಯಚರಣೆಗಳು ಭರದಿಂದ ನಡೆಯುತ್ತಿವೆ. ಹೆಲಿಕಾಪ್ಟರ್ ಮೂಲಕ ಆಹಾರ ವಿತರಣೆ ಮುಂದುವರಿದಿದೆ. ಈ ಮಧ್ಯೆ ಹಿಮಪ್ರಳಯಕ್ಕೆ ಮುನ್ನ ಹಾಗೂ ಹಿಮಪ್ರಳಯದ ನಂತರ ಎಂಬ ಎರಡು ಸ್ಯಾಟಲೈಟ್ ಇಮೇಜ್‍ಗಳನ್ನು ಪ್ಲಾನೆಟ್ ಲ್ಯಾಬ್ಸ್ ಇಂಕ್ ರಿಲೀಸ್ ಮಾಡಿದೆ. ಇದನ್ನೂ ಓದಿ: ನಂದಾದೇವಿ ಹಿಮಪರ್ವತ ಕುಸಿತ, ಕೊಚ್ಚಿ ಹೋಯ್ತು ಸೇತುವೆ – ನಡೆದಿದ್ದು ಏನು?
ಹಿಮ ಪ್ರಳಯಕ್ಕೆ ಮುನ್ನ ಅಂದ್ರೆ ಫೆಬ್ರವರಿ 6ರಂದು ನಿರ್ಗಲ್ಲುಗಳು ಇರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಫೆಬ್ರವರಿ 7ರಂದು ನಿರ್ಗಲ್ಲುಗಳು ಮುರಿದು ಬಿದ್ದಿರೋದು ಸ್ಯಾಟಲೈಟ್ ಚಿತ್ರಗಳಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ. 1970ರಲ್ಲಿ ನಡೆದಿದ್ದ ಚಿಪ್ಕೋ ಚಳಿವಳಿಯ ಕೇಂದ್ರಬಿಂದು ರೇಣಿ ಗ್ರಾಮದ ಸುತ್ತಮುತ್ತಲೇ ಈ ದುರಂತ ನಡೆದಿರೋದು ವಿಪರ್ಯಾಸ. ಇದನ್ನೂ ಓದಿ: ಹಿಮ ಪ್ರಳಯ- ಒಂದು ಫೋನ್ ಕರೆಯಿಂದ ಉಳಿಯಿತು 12 ಜನರ ಜೀವ