Tag: Chameleon

  • ಊಸರವಳ್ಳಿಯಂತೆ ಬಣ್ಣ ಬದಲಾಗುವ ಚರ್ಮ ಮನುಷ್ಯನಿಗೂ ಬಂತು

    ಊಸರವಳ್ಳಿಯಂತೆ ಬಣ್ಣ ಬದಲಾಗುವ ಚರ್ಮ ಮನುಷ್ಯನಿಗೂ ಬಂತು

    ಸಿಯೋಲ್: ನೈಸರ್ಗಿಕ ಜೀವವಿಜ್ಞಾನದಿಂದ ಪ್ರೇರಿತವಾದ ದಕ್ಷಿಣ ಕೊರಿಯಾದ ಸಂಶೋಧಕರು ಊಸರವಳ್ಳಿಯಂತೆ ಬದಲಾಗುವ ಕೃತಕ ಚರ್ಮವನ್ನು ಕಂಡು ಹಿಡಿದಿದ್ದಾರೆ.

    sದಕ್ಷಿಣ ಕೊರಿಯಾದ ಸಿಯೋಲ್ ರಾಷ್ಟ್ರೀಯ ವಿಶ್ವವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪ್ರಾಧ್ಯಾಪಕ ಕೋ ಸೆಯುಂಗ್ ಹ್ವಾನ್ ಈ ಕೃತಕ ಚರ್ಮವನ್ನು ಕಂಡು ಹಿಡಿದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, ನೈಸರ್ಗಿಕ ಜೀವವಿಜ್ಞಾನದಿಂದ ಪ್ರೇರಿತನಾಗಿ ಕೃತಕ ಚರ್ಮದಂತಹ ವಸ್ತುವನ್ನು ಕಂಡು ಹಿಡಿದಿದ್ದೇನೆ. ಈ ಕೃತಕ ಚರ್ಮ ತಾಪಮಾನಕ್ಕೆ ತಕ್ಕಂತೆ ಊಸರವಳ್ಳಿಯ ರೀತಿ ತಕ್ಷಣ ತನ್ನ ಬಣ್ಣವನ್ನ ಬದಲಾಯಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಕ್ಷುಲ್ಲಕ ಕಾರಣಕ್ಕೆ ಕುಟುಂಬಗಳ ಮಧ್ಯೆ ಮಾರಾಮಾರಿ- ಮೂವರಿಗೆ ಗಾಯ

    ಒಂದು ವೇಳೆ ನಾವು ಮರುಭೂಮಿ ರೀತಿಯ ಪ್ರದೇಶಕ್ಕೆ ಹೋದರೆ ಈ ರೀತಿಯ ಚರ್ಮವನ್ನು ಧರಿಸಬಹುದು. ಈ ಮೂಲಕ ನಾವು ಎಷ್ಟೇ ಬಿಸಿಲಿನಲ್ಲಿದ್ದರೂ ಸುಲಭವಾಗಿ ಓಡಾಡಬಹುದು. ಅದೇ ರೀತಿ ನಾವು ತಯಾರಿಸುವ ಈ ಕೃತಕ ಚರ್ಮವನ್ನು ಆ ವಾತಾವರಣಕ್ಕೆ ತಕ್ಕಂತೆ ಬದಲಾಯಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ಸಾಲಬಾಧೆ ತಾಳದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಕೋ ಸೆಯುಂಗ್ ಹ್ವಾನ್ ಮತ್ತು ಅವರ ತಂಡ ವಿವಿಧ ಬಣ್ಣಗಳ ಮೇಲೆ ರೋಬೋಟ್ ಅನ್ನು ಬಿಟ್ಟು ತಮ್ಮ ಪ್ರಯೋಗವನ್ನು ಪ್ರದರ್ಶಿಸಿದರು. ರೋಬೋಟ್ ಕೆಂಪು, ನೀಲಿ ಮತ್ತು ಹಸಿರು ಬಣ್ಣಗಳ ಮೇಲೆ ಹೋಗುತ್ತ ಇದ್ದಂತೆ ಆ ಬಣ್ಣಗಳಿಗೆ ತಿರುಗುತ್ತಿತ್ತು ಇದನ್ನು ನೋಡಿದ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಬೆರಗಾಗಿ ನಿಂತಿದ್ದರು. ಇದನ್ನೂ ಓದಿ: ಸಿಲಿಂಡರ್ ಸ್ಫೋಟ- ಮೊಮ್ಮಗಳ ಸಮಯ ಪ್ರಜ್ಞೆಯಿಂದ ಉಳೀತು ಅಜ್ಜಿ ಜೀವ

    ಈ ಕುರಿತು ಪ್ರತಿಕ್ರಿಯಿಸಿದ ಕೋ, ಸೆನ್ಸರ್‍ಗಳಿಂದ ಪತ್ತೆಯಾದ ಬಣ್ಣದ ಮಾಹಿತಿಯನ್ನು ಮೈಕ್ರೊಪ್ರೊಸೆಸರ್ ಗೆ ಮತ್ತು ನಂತರ ಸಿಲ್ವರ್ ನ್ಯಾನೊವೈರ್ ಹೀಟರ್‍ಗಳಿಗೆ ವರ್ಗಾಯಿಸಲಾಗುತ್ತದೆ. ಹೀಟರ್‍ಗಳು ಒಂದು ನಿರ್ದಿಷ್ಟ ತಾಪಮಾನವನ್ನು ತಲುಪಿದ ನಂತರ, ಥರ್ಮೋಕ್ರೋಮಿಕ್ ಲಿಕ್ವಿಡ್ ಸ್ಫಟಿಕ ಪದರವು ಅದರ ಬಣ್ಣವನ್ನು ಬದಲಾಯಿಸುತ್ತೆ ಎಂದು ತಿಳಿಸಿದರು.

  • ವಿಶ್ವದಲ್ಲೇ ಅತ್ಯಂತ ಚಿಕ್ಕ ಊಸರವಳ್ಳಿ ಪತ್ತೆ ಮಾಡಿದ ವಿಜ್ಞಾನಿಗಳು

    ವಿಶ್ವದಲ್ಲೇ ಅತ್ಯಂತ ಚಿಕ್ಕ ಊಸರವಳ್ಳಿ ಪತ್ತೆ ಮಾಡಿದ ವಿಜ್ಞಾನಿಗಳು

    ಬರ್ಲಿನ್: ವಿಶ್ವದಲ್ಲೇ ಅತ್ಯಂತ ಚಿಕ್ಕ ಊಸರವಳ್ಳಿ ಪತ್ತೆಯಾಗಿದೆ. ಮಾನವನ ಬೆರಳ ತುದಿಯಲ್ಲಿ ಕೂರುವಷ್ಟು ಚಿಕ್ಕದಾದ ಹೊಸ ಪ್ರಭೇದದ ಗೋಸುಂಬೆ (ಊಸರವಳ್ಳಿ)ಯನ್ನು ಮಡಗಾಸ್ಕರ್ ಮತ್ತು ಜರ್ಮನಿಯ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

    ವಿಶ್ವದ ಅತಿ ಚಿಕ್ಕದಾದ ಸರೀಸೃಪಗಳಿಗೆ ಸ್ಪರ್ಧೆ ನೀಡುವಂತಿದೆ ಊಸರವಳ್ಳಿಯಾಗಿದೆ. ಅಂತರರಾಷ್ಟ್ರೀಯ ಸಂಶೋಧಕರ ತಂಡವೊಂದು ಈ ಹೊಸ ಪ್ರಬೇಧವನ್ನು ವರ್ಗೀಕರಿಸಿ, ಅದಕ್ಕೆ ಬ್ರುಕೇಶಿಯಾ ನಾನಾ ಎಂದು ಹೆಸರಿಟ್ಟಿದ್ದು, ಈ ಊಸರವಳ್ಳಿ ಫೋಟೋ ಸಾಮಾಜಿಕಜಾಲತಾಣದಲ್ಲಿ ಹರಿದಾಡುತ್ತಿದೆ.

    ವಿಜ್ಞಾನಿ ಫ್ರಾಂಕ್ ಗ್ಲಾವ್ ಹೇಳುವ ಪ್ರಕಾರ ಗಂಡು ಮಾದರಿಯ ಹೊಸ ಪ್ರಭೇದದ ದೇಹವು ಕೇವಲ 13.5 ಮಿಲಿಮೀಟರ್ ಉದ್ದವಿದೆ (1/2 ಇಂಚಿಗಿಂತ ಸ್ವಲ್ಪ ಹೆಚ್ಚು) ಇದೆ. ಈ ಹಿಂದೆ ಪತ್ತೆಯಾಗಿ ದಾಖಲೆಯನ್ನು ಸೃಷ್ಟಿಸಿದ್ದ, ಬ್ರೂಕೆಸಿಯಾ ಕುಟುಂಬದ ಮತ್ತೊಂದು ತಳಿಯ ಅಳತೆಗಿಂತ ಇದು ಕನಿಷ್ಠ 1.5 ಮಿ.ಮೀ ಚಿಕ್ಕದಾಗಿದೆ ಎಂದು ಅವರು ಹೇಳಿದ್ದಾರೆ.

    ಇಲ್ಲಿನ ಮ್ಯೂಸಿಕ್‍ನಲ್ಲಿರುವ ಬವೇರಿಯನ್ ರಾಜ್ಯ ಪ್ರಾಣಿಶಾಸ್ತ್ರ ಸಂಗ್ರಹಾಲಯದ ಸರೀಸೃಪಗಳ ತಜ್ಞ ಫ್ರಾಂಕ್ ಗ್ಲಾವ್, 2012 ರಲ್ಲಿ ಸ್ಥಳೀಯ ಮಾರ್ಗದರ್ಶಿಯೊಬ್ಬ ಪರ್ವತದ ಪಕ್ಕದಲ್ಲಿ ಚಿಕ್ಕದಾದ ಗಂಡು ಮತ್ತು ಸ್ವಲ್ಪ ದೊಡ್ಡದಾದ ಹೆಣ್ಣು ಜಾತಿಯ ಗೋಸುಂಬೆಯನ್ನು ಪತ್ತೆ ಮಾಡಿದ್ದರು. ಇಂಥ ಚಿಕ್ಕದಾದ ಗೋಸುಂಬೆ ಪ್ರಭೇದಗಳನ್ನು ಹುಡುಕಬೇಕೆಂದರೆ, ನಿಮ್ಮ ಮೊಣಕಾಲುಗಳನ್ನು ನೆಲಕ್ಕೆ ಒತ್ತಿ ಕುಳಿತು, ಸಣ್ಣ ಕಣ್ಣುಗಳನ್ನು ಮಾಡಿಕೊಂಡು ಅತ್ಯಂತ ಸೂಕ್ಷ್ಮವಾಗಿ ಹುಡುಕಬೇಕು. ಅವು ಅಷ್ಟು ಸಣ್ಣದಾದ ಪ್ರಭೇದಗಳು ಎಂದು ಫ್ರಾಂಕ್ ತಿಳಿಸಿದ್ದಾರೆ.

  • ಚೆಂಡಿನಂತೆ ಊಸರವಳ್ಳಿ ಹಿಡಿದು ಆಟ ಆಡಿದ ಕೋತಿಗಳು

    ಚೆಂಡಿನಂತೆ ಊಸರವಳ್ಳಿ ಹಿಡಿದು ಆಟ ಆಡಿದ ಕೋತಿಗಳು

    ಚಿಕ್ಕಬಳ್ಳಾಪುರ: ಊಸರವಳ್ಳಿ ಹಿಡಿದು ಕೋತಿಗಳು ಚೆಂಡಿನಂತೆ ಆಟ ಆಡಿರುವ ಅಪರೂಪದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗಡಿದಂ ಗ್ರಾಮದ ಬಳಿ ನಡೆದಿದೆ.

    ಕೋತಿಗಳು ಊಸರವಳ್ಳಿವನ್ನು ಕ್ರಿಕೆಟ್ ಚೆಂಡಿನಂತೆ ಮನಸ್ಸೋ ಇಚ್ಚೆ ಕೈಯಲ್ಲಿ ಹಿಡಿದು ಅಟ್ಟಾಡಿಸಿದೆ. ಅಲ್ಲದೆ ಬಟ್ಟೆ ಒಗೆದ ರೀತಿಯಲ್ಲಿ ಅದನ್ನು ಬಾರಿಸಿದೆ. ಊಸರವಳ್ಳಿಯನ್ನೆ ತಮ್ಮ ಆಟದ ಚೆಂಡು ಮಾಡಿಕೊಂಡಿದ್ದ ಕೋತಿಗಳ ಕೀಟಲೆ ನೋಡುಗರಿಗೆ ಮನರಂಜನೆ ನೀಡುತ್ತಿತ್ತು. ಕ್ಷಣಕ್ಕೊಂದು ಬಣ್ಣ ಬದಲಾಯಿಸುತ್ತಾ, ತನ್ನ ವಿಷದ ಉಸಿರಾಟದಿಂದಲೇ ಎಲ್ಲರನ್ನು ಭಯಭೀತಿ ಗೊಳಿಸುತ್ತಿದ್ದ ಊಸರವಳ್ಳಿಯೇ ಕೋತಿಗಳ ಕೈಗೆ ಸಿಲುಕಿ ಪ್ರಾಣ ಸಂಕಟದಿಂದ ನರಳಿದೆ.

    ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಗಡಿದಂ ಗ್ರಾಮದ ಬಳಿಯ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಬಳಿ ಭಾನುವಾರ ರಜೆ ಎಂದು ಭಕ್ತರು ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ಐದಾರು ಕೋತಿಗಳ ಹಿಂಡು ಊಸರವಳ್ಳಿಯನ್ನು ಹಿಡಿದು ದೇವಸ್ಥಾನದ ಬಳಿ ಇರುವ ಹೊಂಗೆ ಮರದ ಬಳಿ ಆಟ ಆಡುತ್ತಿದ್ದವು.

    ಒಂದು ಕೋತಿ ಇತ್ತ ಕಡೆಯಿಂದ ಮತ್ತೊಂದು ಕೋತಿ ಅತ್ತ ಕಡೆಯಿಂದ ಚೆಂಡಿನಂತೆ ಊಸರವಳ್ಳಿಯನ್ನು ಹಿಡಿದು ಆಟ ಆಡಿದೆ. ಕೋತಿಗಳ ಕೈಗೆ ಸಿಕ್ಕ ಊಸರವಳ್ಳಿ ರಕ್ಷಣೆಗೆ ಗೀಳಿಡುತ್ತಿದ್ರೆ, ಇತ್ತ ಕೋತಿಗಳು ಸಿಕ್ಕಿದ್ದೆ ಚಾನ್ಸ್ ಎಂದು ಆಟವಾಡಿದೆ.

    https://www.youtube.com/watch?v=-Ml0nl5dvV8