Tag: Chamba

  • ನೋಡ ನೋಡುತ್ತಿದ್ದಂತೆ ಭಾರೀ ಪ್ರಮಾಣದಲ್ಲಿ ಗುಡ್ಡ ರಸ್ತೆಗೆ ಕುಸಿದು ಬಿತ್ತು!- ವಿಡಿಯೋ ನೋಡಿ

    ನೋಡ ನೋಡುತ್ತಿದ್ದಂತೆ ಭಾರೀ ಪ್ರಮಾಣದಲ್ಲಿ ಗುಡ್ಡ ರಸ್ತೆಗೆ ಕುಸಿದು ಬಿತ್ತು!- ವಿಡಿಯೋ ನೋಡಿ

    ಶಿಮ್ಲಾ: ಕೊಡಗಿನ ರಸ್ತೆಗೆ ಗುಡ್ಡ ಕುಸಿದಂತೆ ಹಿಮಾಚಲ ಪ್ರದೇಶದ ಚಂಬಾದಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತ ಸಂಭವಿಸಿದೆ.

    ಚಂಬಾ ಹಾಗೂ ಟಿಸ್ಸಾ ಮಾರ್ಗದಲ್ಲಿ ನೋಡನೋಡುತ್ತಿದ್ದಂತೆ ಗುಡ್ಡವೊಂದು ಕುಸಿದಿದ್ದು, ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ರಸ್ತೆಗೆ ಮಣ್ಣು ಬೀಳುತ್ತಿರುವ ದೃಶ್ಯ ಸ್ಥಳೀಯರ ಮೊಬೈಲಿನಲ್ಲಿ ಸೆರೆಯಾಗಿದೆ.

    ಮಳೆಗಾಲದಲ್ಲಿ ಹಿಮಾಚಲ ಪ್ರದೇಶದ ಅನೇಕ ಭಾಗದಲ್ಲಿ ಗುಡ್ಡ ಕುಸಿತ ಸಾಮಾನ್ಯವಾಗಿದ್ದು, ಈ ಬಾರಿ ಅನೇಕ ಭಾಗಗಳಲ್ಲಿ ಗುಡ್ಡ ಕುಸಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv