ಬೆಂಗಳೂರು: 1.57 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ ಕೇರ್ ಟೇಕರ್ ಮಹಿಳೆಯನ್ನು ಚಾಮರಾಜಪೇಟೆ ಪೊಲೀಸರು (Chamarajpet Police) ಬಂಧಿಸಿದ್ದಾರೆ.
ಚಾಮರಾಜಪೇಟೆ ಮೂಲದ ಕೇರ್ ಟೇಕರ್ (Care Taker) ಉಮಾ ಬಂಧಿತ ಆರೋಪಿ. ಚಾಮರಾಜಪೇಟೆಯ ಉದ್ಯಮಿ ರಾಧ, ಕೇರ್ ಟೇಕರ್ ಉಮಾ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಕೆಆರ್ಎಸ್ ಅಣೆಕಟ್ಟೆಯಲ್ಲಿ ಭದ್ರತಾ ವೈಫಲ್ಯ?- ಡ್ಯಾಂನ ಕ್ರಸ್ಟ್ ಗೇಟ್ ಬಳಿ ಓಡಾಡುತ್ತ ಸೆಲ್ಫಿ ವೀಡಿಯೋ
ದೂರುದಾರೆ ರಾಧ ಅವರು ಚಾಮರಾಜಪೇಟೆಯಲ್ಲಿ ಕೂಡು ಕುಟುಂಬದಲ್ಲಿ ವಾಸವಿದ್ದರು. ಅಲ್ಲದೇ ಅವರು ನಗರ್ತಪೇಟೆಯಲ್ಲಿ ಸ್ವಂತ ಸೆಕ್ಯೂರಿಟಿ ಏಜೆನ್ಸಿಯನ್ನು ಹೊಂದಿದ್ದರು. ಸುಮಾರು 8 ತಿಂಗಳಿನಿಂದ ದೂರುದಾರೆ ಅವರ ಅಕ್ಕ ಸುಜಾತರಿಗೆ ಹುಷಾರಿಲ್ಲದೆ ಬೆಡ್ ರಿಡೆನ್ ಆಗಿದ್ದರಿಂದ ಅವರನ್ನು ನೋಡಿಕೊಳ್ಳಲು ಕೇರ್ ಟೇಕರ್ ನೇಮಕಕ್ಕೆ ಮುಂದಾಗಿದ್ದರು. ಇದನ್ನೂ ಓದಿ: ಹಾವೇರಿ | ಸಾರಿಗೆ ಬಸ್ಗೆ ಕಾರು ಡಿಕ್ಕಿ – ಇಬ್ಬರು ದುರ್ಮರಣ, ಓರ್ವ ಗಂಭೀರ
ಕಳೆದ 3 ತಿಂಗಳ ಹಿಂದೆ ಏಜೆನ್ಸಿ ಮೂಲಕ ಉಮಾ ಎಂಬ ಮಹಿಳೆ ಕೇರ್ ಟೇಕರ್ ಆಗಿ ನೇಮಕಗೊಂಡಿದ್ದಳು. ದೂರುದಾರೆ ಮನೆಯ ಬೀರುವಿನಲ್ಲಿ ಸುಜಾತ ಅವರು ಸೈಟ್ ಮಾರಾಟ ಮಾಡಿದ್ದ 67 ಲಕ್ಷ ರೂ. ಇಟ್ಟಿದ್ದರು. ಜೊತೆಗೆ ಚಿನ್ನ, ಬೆಳ್ಳಿ ಸೇರಿ ಸುಮಾರು 95 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಇಟ್ಟಿದ್ದರು. ಇದನ್ನೂ ಓದಿ: ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಳ – ಕೃಷ್ಣಾ ನದಿಗೆ 29,226 ಕ್ಯೂಸೆಕ್ ನೀರು ಬಿಡುಗಡೆ
ಜೂ. 9ರಂದು ದೂರುದಾರೆ ಬೀರು ತೆರೆದು ನೋಡಿದಾಗ ಹಣ ಮತ್ತು ಚಿನ್ನಾಭರಣ ಇರಲಿಲ್ಲ. ಸಿಸಿಟಿವಿ ಕ್ಯಾಮೆರಾದಲ್ಲಿ ಪರಿಶೀಲಿಸಿದಾಗ ಕೇರ್ ಟೇಕರ್ ಮಹಿಳೆಯ ಕೃತ್ಯ ಬಯಲಾಗಿದ್ದು, ಜೂ. 4ರಂದು ಬೆಳಗ್ಗೆ ಉಮಾ ತನ್ನ ಕೈಯಲ್ಲಿ ಒಂದು ಬ್ಯಾಗನ್ನು ತೆಗೆದುಕೊಂಡು ಹೊರಗೆ ಹೋಗಿದ್ದಳು. ನಂತರ ಅದೇ ದಿನ ಸಂಜೆ 6.30ಕ್ಕೆ ವಾಪಸ್ ಮನೆಗೆ ಬಂದಿರುವ ದೃಶ್ಯ ಸೆರೆಯಾಗಿದೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ದುರಂತ – ಸಾವಿನ ಸಂಖ್ಯೆ 274ಕ್ಕೆ ಏರಿಕೆ
ಈ ಬಗ್ಗೆ ದೂರುದಾರೆ, ಉಮಾಳನ್ನು ಪ್ರಶ್ನೆ ಮಾಡಿದಾಗ ತನಗೆ ಗೊತ್ತಿಲ್ಲ ಎಂದಿದ್ದಳು. ಕೇರ್ ಟೇಕರ್ ಉಮಾ ಮೇಲೆ ಅನುಮಾವಿದೆ ಎಂದು ಚಾಮರಾಜಪೇಟೆ ಪೊಲೀಸರಿಗೆ ದೂರು ನೀಡಲಾಗಿತ್ತು. ಇದನ್ನೂ ಓದಿ: ಅಹಮದಾಬಾದ್ ವಿಮಾನ ಪತನ – 5 ತಂಡಗಳಿಂದ ತನಿಖೆ
ಪೊಲೀಸರು ಉಮಾಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಬಯಲಾಗಿದೆ. ಉಮಾ ತನ್ನ ಮಗಳ ಮನೆಯಲ್ಲಿ ಇಟ್ಟಿದ್ದ ಸುಮಾರು 60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇನ್ನುಳಿದ ಹಣ ಹಾಗೂ ಚಿನ್ನದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬ್ಲ್ಯಾಕ್ಬಾಕ್ಸ್ನಲ್ಲಿ ಅಡಗಿದೆ ವಿಮಾನ ದುರಂತದ ರಹಸ್ಯ – ನಾಳೆಯೊಳಗೆ ಅಪಘಾತಕ್ಕೆ ಅಸಲಿ ಕಾರಣ ಸಿಗುತ್ತಾ?
ಚಾಮರಾಜಪೇಟೆ ಪೊಲೀಸರು ಆರೋಪಿ ಕೇರ್ ಟೇಕರ್ ಮಹಿಳೆ ಉಮಾಳನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.


