Tag: Chamarajpet

  • ಚಾಮರಾಜಪೇಟೆ | ಆರ್‌ಎಸ್‌ಎಸ್‌ ಕಚೇರಿಗೆ ಪೊಲೀಸರಿಂದ ಬಿಗಿ ಭದ್ರತೆ

    ಚಾಮರಾಜಪೇಟೆ | ಆರ್‌ಎಸ್‌ಎಸ್‌ ಕಚೇರಿಗೆ ಪೊಲೀಸರಿಂದ ಬಿಗಿ ಭದ್ರತೆ

    ಬೆಂಗಳೂರು: ರಾಜ್ಯದಲ್ಲಿ ಭಾನುವಾರ (ಅ.12) ನಡೆದ ಎರಡು ಬೆಳವಣಿಗೆಗಳ ಬಗ್ಗೆ ಆರ್‌ಎಸ್‌ಎಸ್‌ ರಾಜ್ಯ ಘಟಕದ ಚಾಮರಾಜಪೇಟೆಯ (Chamarajpet) ಕಚೇರಿಯಲ್ಲಿ ಇಂದು (ಅ.13) ಸಭೆ ನಡೆಸುವ ಸಾಧ್ಯತೆ ಇದೆ. ಇದರಿಂದಾಗಿ ಆರ್‌ಎಸ್‌ಎಸ್‌ (RSS) ಕಚೇರಿ ಕೇಶವ ಕೃಪಕ್ಕೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.

    ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ಸರ್ಕಾರಿ ಜಾಗ ನೀಡದಂತೆ ಸಚಿವ ಪ್ರಿಯಾಂಕ್ ಖರ್ಗೆಯವರು ಸಿಎಂಗೆ ಪತ್ರ ಬರೆದಿದ್ದರು. ಅದಲ್ಲದೇ ಜೆಪಿ ಪಾರ್ಕ್‌ನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ಶಾಸಕ ಮುನಿರತ್ನ ಅವರನ್ನ ಕರಿಟೋಪಿ ಎಂಎಲ್‌ಎ ಎಂದಿದ್ದರು. ಈ ಎರಡು ವಿಚಾರವಾಗಿ ಆರ್‌ಎಸ್‌ಎಸ್‌ ಸಭೆ ನಡೆಸುವ ಸಾಧ್ಯತೆ ಇದೆ. ಇದನ್ನೂ ಓದಿ: ಸರ್ಕಾರಿ ಸ್ಥಳಗಳು, ಮುಜರಾಯಿ ದೇವಸ್ಥಾನಗಳಲ್ಲಿ ಆರ್‌ಎಸ್‌ಎಸ್‌ ಎಲ್ಲಾ ಚಟುವಟಿಕೆ ಬ್ಯಾನ್‌?

    ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ ನಿಷೇಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಚಿವ ಪ್ರಿಯಾಂಕ ಖರ್ಗೆ (Priyank Kharge) ಪತ್ರ ಬರೆದಿದ್ದರು. ಶಾಲಾ-ಕಾಲೇಜು ಮೈದಾನಗಳು, ಸಾರ್ವಜನಿಕ ಪಾರ್ಕ್, ಮುಜರಾಯಿ ದೇವಸ್ಥಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು. ಈ ಸಂಬಂಧ, ಕಾನೂನು ರೂಪಿಸಬೇಕು ಅಂತ ಅ. 4ರಂದು ಮನವಿ ಸಲ್ಲಿಸಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದು, ಪರಿಶೀಲಿಸಿ ಕೂಡಲೆ ಅಗತ್ಯ ಕ್ರಮ ವಹಿಸಿ ಎಂದು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್‌ಗೂ ತಾಲಿಬಾನ್‌ಗೂ ಏನೂ ವ್ಯತ್ಯಾಸ ಇಲ್ಲ. ಸರ್ಕಾರಿ ಶಾಲೆಗಳ ಜಾಗ ಆರ್‌ಎಸ್‌ಎಸ್‌ಗಾಗಿ ಬಳಕೆ ಆಗಬಾರದು. ನಮ್ಮದು ಬಸವ ತತ್ವದ ಮೇಲೆ ನಡೆಯುವ ಸರ್ಕಾರ ಎಂದಿದ್ದಾರೆ.

    ಪ್ರಿಯಾಂಕ್ ಪತ್ರದಲ್ಲೇನಿದೆ..?
    * ಜನ ಸಮುದಾಯದಲ್ಲಿ ದ್ವೇಷ ಬಿತ್ತುವ ವಿಭಜಕ ಶಕ್ತಿಗಳು ತಲೆ ಎತ್ತಿದಾಗ ಅವುಗಳನ್ನು ನಿಗ್ರಹಿಸುವುದಕ್ಕಾಗಿ,
    * ದೇಶದ ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯುವುದಕ್ಕಾಗಿ,
    * ಸಮಗ್ರತೆ, ಸಮಾನತೆ & ಏಕತೆಯ ಮೂಲಭೂತ ತತ್ವಗಳನ್ನೊಳಗೊಂಡ ಸಂವಿಧಾನವು ನಮಗೆ ಸರ್ಕಾರ ನೀಡುತ್ತದೆ.
    * ಆರ್‌ಎಸ್‌ಎಸ್ ಸರ್ಕಾರಿ, ಅನುದಾನಿತ ಶಾಲೆಗಳು, ಸಾರ್ವಜನಿಕ ಸರ್ಕಾರಿ ಮೈದಾನಗಳನ್ನು ಬಳಸಿಕೊಳ್ಳುತ್ತಿದೆ.
    * ಘೋಷಣೆಗಳನ್ನು ಕೂಗುತ್ತಾ ಮಕ್ಕಳು, ಯುವ ಸಮುದಾಯದ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆ ತುಂಬುತ್ತಿದೆ.
    * ಭಾರತದ ಐಕ್ಯತೆಯ ವಿರುದ್ಧವಾಗಿ, ಸಂವಿಧಾನದ ಆಶಯಗಳ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ.
    * ಪೊಲೀಸ್ ಅನುಮತಿ ಪಡೆಯದೆ ದೊಣ್ಣೆಗಳನ್ನು ಹಿಡಿದು ಆಕ್ರಮಣಕಾರಿ ಪ್ರದರ್ಶನ ನಡೆಸುತ್ತಿದೆ.
    * ಈ ಮೂಲಕ ಮುಗ್ದ ಮಕ್ಕಳು, ಯುವಜನರ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ.
    * ಸಮಾಜದ ಸ್ವಾಸ್ಥ್ಯದ ಹಿತದೃಷ್ಟಿಯಿಂದ ಸರ್ಕಾರಿ ಶಾಲೆ, ಅನುದಾನಿತ ಶಾಲೆಗಳು, ಮೈದಾನಗಳು
    * ಉದ್ಯಾನವನಗಳು, ಮುಜರಾಯಿ ದೇವಸ್ಥಾನಗಳು, ಪುರಾತತ್ವ ಇಲಾಖೆಯ ಸ್ಥಳಗಳು, ಯಾವುದೇ ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಶಾಖೆ, ಸಾಂಘಿಕ್ ಅಥವಾ ಬೈಠಕ್ ಹೆಸರಲ್ಲಿ ನಡೆಸುವ ಎಲ್ಲಾ ಬಗೆಯ ಚಟುವಟಿಕೆಗಳಿಗೆ ನಿಷೇಧ ಹೇರಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: RSS ನಿಷೇಧಕ್ಕೆ ಪ್ರಿಯಾಂಕ್‌ ಖರ್ಗೆ ಪತ್ರ – ಸರ್ಕಾರದ ನಡೆಯ ಮೇಲೆ ನಿಗಾ ಇಡಲು ಬಿಜೆಪಿ ಸಮಿತಿ ರಚನೆ

  • 1.57 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ ಕೇರ್ ಟೇಕರ್ ಲೇಡಿ ಅರೆಸ್ಟ್

    1.57 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ ಕೇರ್ ಟೇಕರ್ ಲೇಡಿ ಅರೆಸ್ಟ್

    ಬೆಂಗಳೂರು: 1.57 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ ಕೇರ್ ಟೇಕರ್ ಮಹಿಳೆಯನ್ನು ಚಾಮರಾಜಪೇಟೆ ಪೊಲೀಸರು (Chamarajpet Police) ಬಂಧಿಸಿದ್ದಾರೆ.

    ಚಾಮರಾಜಪೇಟೆ ಮೂಲದ ಕೇರ್ ಟೇಕರ್ (Care Taker) ಉಮಾ ಬಂಧಿತ ಆರೋಪಿ. ಚಾಮರಾಜಪೇಟೆಯ ಉದ್ಯಮಿ ರಾಧ, ಕೇರ್ ಟೇಕರ್ ಉಮಾ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಭದ್ರತಾ ವೈಫಲ್ಯ?- ಡ್ಯಾಂನ ಕ್ರಸ್ಟ್ ಗೇಟ್ ಬಳಿ ಓಡಾಡುತ್ತ ಸೆಲ್ಫಿ ವೀಡಿಯೋ

    ದೂರುದಾರೆ ರಾಧ ಅವರು ಚಾಮರಾಜಪೇಟೆಯಲ್ಲಿ ಕೂಡು ಕುಟುಂಬದಲ್ಲಿ ವಾಸವಿದ್ದರು. ಅಲ್ಲದೇ ಅವರು ನಗರ್ತಪೇಟೆಯಲ್ಲಿ ಸ್ವಂತ ಸೆಕ್ಯೂರಿಟಿ ಏಜೆನ್ಸಿಯನ್ನು ಹೊಂದಿದ್ದರು. ಸುಮಾರು 8 ತಿಂಗಳಿನಿಂದ ದೂರುದಾರೆ ಅವರ ಅಕ್ಕ ಸುಜಾತರಿಗೆ ಹುಷಾರಿಲ್ಲದೆ ಬೆಡ್ ರಿಡೆನ್ ಆಗಿದ್ದರಿಂದ ಅವರನ್ನು ನೋಡಿಕೊಳ್ಳಲು ಕೇರ್ ಟೇಕರ್ ನೇಮಕಕ್ಕೆ ಮುಂದಾಗಿದ್ದರು. ಇದನ್ನೂ ಓದಿ: ಹಾವೇರಿ | ಸಾರಿಗೆ ಬಸ್‌ಗೆ ಕಾರು ಡಿಕ್ಕಿ – ಇಬ್ಬರು ದುರ್ಮರಣ, ಓರ್ವ ಗಂಭೀರ

    ಕಳೆದ 3 ತಿಂಗಳ ಹಿಂದೆ ಏಜೆನ್ಸಿ ಮೂಲಕ ಉಮಾ ಎಂಬ ಮಹಿಳೆ ಕೇರ್ ಟೇಕರ್ ಆಗಿ ನೇಮಕಗೊಂಡಿದ್ದಳು. ದೂರುದಾರೆ ಮನೆಯ ಬೀರುವಿನಲ್ಲಿ ಸುಜಾತ ಅವರು ಸೈಟ್ ಮಾರಾಟ ಮಾಡಿದ್ದ 67 ಲಕ್ಷ ರೂ. ಇಟ್ಟಿದ್ದರು. ಜೊತೆಗೆ ಚಿನ್ನ, ಬೆಳ್ಳಿ ಸೇರಿ ಸುಮಾರು 95 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಇಟ್ಟಿದ್ದರು. ಇದನ್ನೂ ಓದಿ: ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಳ – ಕೃಷ್ಣಾ ನದಿಗೆ 29,226 ಕ್ಯೂಸೆಕ್ ನೀರು ಬಿಡುಗಡೆ

    ಜೂ. 9ರಂದು ದೂರುದಾರೆ ಬೀರು ತೆರೆದು ನೋಡಿದಾಗ ಹಣ ಮತ್ತು ಚಿನ್ನಾಭರಣ ಇರಲಿಲ್ಲ. ಸಿಸಿಟಿವಿ ಕ್ಯಾಮೆರಾದಲ್ಲಿ ಪರಿಶೀಲಿಸಿದಾಗ ಕೇರ್ ಟೇಕರ್ ಮಹಿಳೆಯ ಕೃತ್ಯ ಬಯಲಾಗಿದ್ದು, ಜೂ. 4ರಂದು ಬೆಳಗ್ಗೆ ಉಮಾ ತನ್ನ ಕೈಯಲ್ಲಿ ಒಂದು ಬ್ಯಾಗನ್ನು ತೆಗೆದುಕೊಂಡು ಹೊರಗೆ ಹೋಗಿದ್ದಳು. ನಂತರ ಅದೇ ದಿನ ಸಂಜೆ 6.30ಕ್ಕೆ ವಾಪಸ್ ಮನೆಗೆ ಬಂದಿರುವ ದೃಶ್ಯ ಸೆರೆಯಾಗಿದೆ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ದುರಂತ – ಸಾವಿನ ಸಂಖ್ಯೆ 274ಕ್ಕೆ ಏರಿಕೆ

    ಈ ಬಗ್ಗೆ ದೂರುದಾರೆ, ಉಮಾಳನ್ನು ಪ್ರಶ್ನೆ ಮಾಡಿದಾಗ ತನಗೆ ಗೊತ್ತಿಲ್ಲ ಎಂದಿದ್ದಳು. ಕೇರ್ ಟೇಕರ್ ಉಮಾ ಮೇಲೆ ಅನುಮಾವಿದೆ ಎಂದು ಚಾಮರಾಜಪೇಟೆ ಪೊಲೀಸರಿಗೆ ದೂರು ನೀಡಲಾಗಿತ್ತು. ಇದನ್ನೂ ಓದಿ: ಅಹಮದಾಬಾದ್ ವಿಮಾನ ಪತನ – 5 ತಂಡಗಳಿಂದ ತನಿಖೆ

    ಪೊಲೀಸರು ಉಮಾಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಬಯಲಾಗಿದೆ. ಉಮಾ ತನ್ನ ಮಗಳ ಮನೆಯಲ್ಲಿ ಇಟ್ಟಿದ್ದ ಸುಮಾರು 60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇನ್ನುಳಿದ ಹಣ ಹಾಗೂ ಚಿನ್ನದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬ್ಲ್ಯಾಕ್‌ಬಾಕ್ಸ್‌ನಲ್ಲಿ ಅಡಗಿದೆ ವಿಮಾನ ದುರಂತದ ರಹಸ್ಯ – ನಾಳೆಯೊಳಗೆ ಅಪಘಾತಕ್ಕೆ ಅಸಲಿ ಕಾರಣ ಸಿಗುತ್ತಾ?

    ಚಾಮರಾಜಪೇಟೆ ಪೊಲೀಸರು ಆರೋಪಿ ಕೇರ್ ಟೇಕರ್ ಮಹಿಳೆ ಉಮಾಳನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ವ್ಯಕ್ತಿಯೊಬ್ಬನಿಂದ ಕಿರುಕುಳ ಆರೋಪ – ಬಿಬಿಎಂಪಿ ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ಮಹಿಳೆ ಆತ್ಮಹತ್ಯೆ

    ವ್ಯಕ್ತಿಯೊಬ್ಬನಿಂದ ಕಿರುಕುಳ ಆರೋಪ – ಬಿಬಿಎಂಪಿ ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ಮಹಿಳೆ ಆತ್ಮಹತ್ಯೆ

    ಬೆಂಗಳೂರು: ಬಿಬಿಎಂಪಿ ಕಚೇರಿಯಲ್ಲಿ (BBMP Office) ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜಪೇಟೆಯಲ್ಲಿ (Chamarajpet) ನಡೆದಿದೆ.

    ನಂದಿನಿ (32) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಫೆ.23ರ ರಾತ್ರಿ 9:30ರ ವೇಳೆಗೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾರೂ ಇಲ್ಲದಾಗ ನೇಣು ಬಿಗಿದುಕೊಂಡು ನಂದಿನಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ನೋಡಿ ಪೊಲೀಸರು ಬರುವ ಮುನ್ನವೇ ಕುಟುಂಬಸ್ಥರು ಮೃತದೇಹ ಕೆಳಗೆ ಇಳಿಸಿದ್ದಾರೆ.

    ಏನು ಕಾರಣ?
    ಬಿಬಿಎಂಪಿ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದ ನಂದಿನಿ, 8 ವರ್ಷಗಳ ಹಿಂದೆ ಸೂರ್ಯ ಎಂಬಾತನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದಂಪತಿಗೆ ಒಂದು ಹೆಣ್ಣು ಮತ್ತು ಒಂದು ಗಂಡು ಮಗು ಇದೆ. ನಂದಿನಿಗೆ ವ್ಯಕ್ತಿಯೊಬ್ಬ ಆಗಾಗ್ಗೆ ಫೋನ್‌ ಮಾಡಿ ಕಿರಿಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಇದರಿಂದಾಗಿ ಪತಿ-ಪತ್ನಿ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ವ್ಯಕ್ತಿಯ ನಿರಂತರ ಕಿರುಕುಳದಿಂದ ಮನನೊಂದಿದ್ದ ನಂದಿನಿ ಆತ್ಮಹತ್ಯೆ ಮಾಡಿಕೊಂದಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮರಾಠಿ ಪುಂಡರಿಂದ ಕಂಡಕ್ಟರ್ ಮೇಲೆ ಹಲ್ಲೆ – ಇಂದು ಬೆಳಗಾವಿಗೆ ರಾಮಲಿಂಗಾ ರೆಡ್ಡಿ ಭೇಟಿ

    https://youtu.be/9aRZwimkiN0?si=xbbnxnn7DdqQ0q5b

    ಸದ್ಯ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜಪೇಟೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಉದಯಗಿರಿ ಗಲಭೆ ಕಿಚ್ಚು – ಇಂದು ಮಧ್ಯರಾತ್ರಿವರೆಗೆ ಮೈಸೂರಿನಲ್ಲಿ ನಿಷೇಧಾಜ್ಞೆ

  • ಹಸುವಿನ ಕೆಚ್ಚಲು ಕೊಯ್ದವನು ಮಾನಸಿಕ ಅಸ್ವಸ್ಥ ಅಲ್ಲ, ಹಲಾಲ್ ಕೋರ್ ಸಾಬಿ: ಪ್ರತಾಪ್ ಸಿಂಹ ಕಿಡಿ

    ಹಸುವಿನ ಕೆಚ್ಚಲು ಕೊಯ್ದವನು ಮಾನಸಿಕ ಅಸ್ವಸ್ಥ ಅಲ್ಲ, ಹಲಾಲ್ ಕೋರ್ ಸಾಬಿ: ಪ್ರತಾಪ್ ಸಿಂಹ ಕಿಡಿ

    – ದರಿದ್ರ ಕಾಂಗ್ರೆಸ್ ಮೊದಲು ತೊಲಗಲಿ

    ಮೈಸೂರು: ಹಸುವಿನ ಕೆಚ್ಚಲು ಕೊಯ್ದದ್ದು ಮಾನಸಿಕ ಅಸ್ವಸ್ಥ ಅಲ್ಲ, ಹಲಾಲ್ ಕೋರ್ ಸಾಬಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ವಾಗ್ದಾಳಿ ನಡೆಸಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯರನ್ನು ಬಲವಂತದಿಂದ ಕೆಳಗೆ ಇಳಿಸಿದರೆ ಕಾಂಗ್ರೆಸ್ ಇಬ್ಭಾಗ ಮಾಡುತ್ತಾರೆ. ಇಬ್ಭಾಗವಾದ ಕಾಂಗ್ರೆಸ್‌ಗೆ ಹಸುವಿನ ಕೆಚ್ಚಲು ಕೊಯ್ಯುವ ಸಾಬಿಯ ಚಿತ್ರವನ್ನೇ ಪಕ್ಷದ ಚಿಹ್ನೆ ಮಾಡಿಕೊಳ್ಳುತ್ತಾರೆ. ಪರಮೇಶ್ವರ್ ಈ ರಾಜ್ಯದ ಅಸಹಾಯಕ ಗೃಹ ಸಚಿವ. ಹಸುವಿನ ಕೆಚ್ಚಲು ಕೊಯ್ದವನು ಮಾನಸಿಕ ಅಸ್ವಸ್ಥ ಅಲ್ಲ. ಅವನ ರಕ್ಷಣೆಗೆ ನಿಂತವರ ಮೆದುಳಿನಲ್ಲಿ ಮಾನಸಿಕ ಅಸ್ವಸ್ಥತೆ ಇದೆ ಎಂದು ಕೆಂಡಕಾರಿದ್ದಾರೆ. ಇದನ್ನೂ ಓದಿ: ಸತೀಶ್‌ ಜಾರಕಿಹೊಳಿ ತಲೆಎಣಿಗೆ ಅಸ್ತ್ರಕ್ಕೆ ಡಿಕೆಶಿ ಕೆಂಡಾಮಂಡಲ

    ಹಲಾಲ್ ಕೋರ್ ಸಾಬರ್ ಮಾಡಿರುವ ಕೃತ್ಯ ಇದು. ಹಲಾಲ್ ಕೋರ್ ಸಾಬಿ ಹಿಂದೂಗಳ ಭಾವನೆ ಕೆರಳಿಸಲು ಮಾಡಿರುವ ಕೃತ್ಯ ಇದು. ತಾಲಿಬಾನ್ ಆಡಳಿತದ ಲಕ್ಷಣ ಇದು. ದರಿದ್ರ ಕಾಂಗ್ರೆಸ್ ಮೊದಲು ತೊಲಗಲಿ. ಹಸುವಿನ ಕೆಚ್ಚಲು ಕೊಯ್ದ ಸಾಬಾಣ್ಣ ಮಾನಸಿಕ ಅಸ್ವಸ್ತ ಅಲ್ಲ. ಒಬ್ಬ ಹಲಾಲ್ ಕೋರ್ ಸಾಬಿ. ಜಮೀರ್ ಅವರೇ ಮೂರು ಹಸು ಖರೀದಿ ಮಾಡಿ ಕೊಟ್ಟ ತಕ್ಷಣ ಎಲ್ಲಾ ಮುಗಿದು ಹೋಯ್ತಾ? ಇವರು ಮನೆಯವರನ್ನು ಕೊಚ್ಚಿ ಆಮೇಲೆ ಪರಿಹಾರ ಕೊಟ್ಟರೆ ಸುಮ್ಮನೆ ಇರುತ್ತಾರಾ? ನಂಜನಗೂಡಿನಲ್ಲಿ ಗೋಮಾಂಸ ಭಕ್ಷಕರು ಹಸು ಕದಿಯಲು ಬಂದು ಗೋವಿನ ಬಾಲ ಕಟ್ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

    ವಿಜಯಪುರ ಡಿಸಿಗೆ ಸಿಎಂ ಗದರಿದ ಪ್ರಕರಣ ಕುರಿತು ಮಾತನಾಡಿ, ಈ ಹಿಂದೆ ಮೈಸೂರು ಡಿಸಿ ಆಗಿದ್ದ ಶಿಖಾ ಅವರನ್ನು ಸಿದ್ದರಾಮಯ್ಯ ಶಿಷ್ಯ ಮರೀಗೌಡ ಅವಮಾನ ಮಾಡಿದ್ದರು. ಮರೀಗೌಡನಂಥವರನ್ನು ಛೂ ಬಿಟ್ಟು ಅವಮಾನ ಮಾಡ್ತಿದ್ದರು. ಈಗ ಸಿದ್ದರಾಮಯ್ಯ ಅವರೇ ಅವಮಾನ ಮಾಡಲು ಮುಂದಾಗಿದ್ದಾರೆ. ಸಾರ್ವಜನಿಕ ಸಮಾರಂಭ ವೇದಿಕೆ ಮೇಲೆ ಡಿಸಿ ಕುಳಿತರೆ ಸಿಎಂಗೆ ಏನಾದರೂ ಚುಚ್ಚುತ್ತಾ? ವಿಜಯಪುರ ಡಿಸಿಯ ಜಾತಿ ನೋಡಿ ಸಿದ್ದರಾಮಯ್ಯ ಟಾರ್ಗೆಟ್ ಮಾಡ್ತಾ ಇದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅಧ್ಯಕ್ಷ ಪಟ್ಟಕ್ಕಾಗಿ ನಾನು ಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದೆ: ಪರಮೇಶ್ವರ್‌

    ಸಿದ್ದರಾಮಯ್ಯಗೆ ಲಿಂಗಾಯತ, ಒಕ್ಕಲಿಗ ಅಧಿಕಾರಿಗಳ ಕಂಡರೆ ಮೊದಲಿಂದ ಆಗಲ್ಲ. ಇದೇ ಕಾರಣಕ್ಕೆ ಈ ಎರಡು ಸಮುದಾಯದ ಅಧಿಕಾರಿಗಳ ಬಡ್ತಿಯನ್ನೇ ಸಿದ್ದರಾಮಯ್ಯ ತಪ್ಪಿಸಿದ್ದರು. ಸಿದ್ದರಾಮಯ್ಯಗೆ ಸದಾ ಜಾತಿಯ ಹುಳ ಕಾಡುತ್ತಿರುತ್ತದೆ. 39 ಜನ ಲಿಂಗಾಯತ ಶಾಸಕರು ಇರದಿದ್ದರೆ ಸಿದ್ದರಾಮಯ್ಯ ಸಿಎಂ ಆಗ್ತಿದ್ರಾ? ಯಾಕೆ ನಿಮಗೆ ಈ ಜಾತಿ ಮೇಲೆ ಇಷ್ಟು ಸಿಟ್ಟು. ಐಎಎಸ್ ಒಕ್ಕೂಟ ಸಿಎಂ ನಡೆಯನ್ನು ಖಂಡಿಸಬೇಕು. ಮುಖ್ಯ ಕಾರ್ಯದರ್ಶಿ ಸರ್ಕಾರದ ಬಾಲ ಬಡಿಯುವ ಕೆಲಸ ಮಾಡುವುದನ್ನು ಬಿಟ್ಟು, ಈ ಪ್ರಕರಣದಲ್ಲಿ ತಮ್ಮ ಸಹೋದ್ಯೋಗಿ ಪರ ನಿಲ್ಲಲಿ ಎಂದು ಒತ್ತಾಯಿಸಿದ್ದಾರೆ.

  • ಮೂರು ಹಸು ಕೊಡಿಸಿದ ಜಮೀರ್ ಅಹಮದ್

    ಮೂರು ಹಸು ಕೊಡಿಸಿದ ಜಮೀರ್ ಅಹಮದ್

    ಬೆಂಗಳೂರು: ಕೊಟ್ಟ ಮಾತಿನಂತೆ ಚಾಮರಾಜಪೇಟೆ (Chamarajpet) ಶಾಸಕ, ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ (Zameer Ahmed Khan) ಅವರು ಮೂರು ಹಸುಗಳನ್ನು ನೀಡಿದ್ದಾರೆ.

    ವಿನಾಯಕ ನಗರದಲ್ಲಿ ನಡೆದ ಹಸುವಿನ ಕೆಚ್ಚಲು ಕೊಯ್ದ ಅಹಿತಕರ ಘಟನೆ (Bengaluru Cow Horror Case) ಹಿನ್ನೆಲೆಯಲ್ಲಿ ಹಸುವಿನ ಮಾಲೀಕ ಕರ್ಣ ಅವರ ತಾಯಿ ಸವರಿ ಅಮ್ಮಳ್, ಸಹೋದರಿ ಅಮುದಾ ಅವರಿಗೆ ಸಚಿವ ಜಮೀರ್ ಅಹಮದ್ ಖಾನ್ ಅವರು ಮೂರು ಲಕ್ಷ ರೂ. ವೆಚ್ಚದಲ್ಲಿ ಮೂರು ಹಸು ಖರೀದಿಸಿ ನೀಡಿದರು.  ಇದನ್ನೂ ಓದಿ: ಹಸುವಿನ ಕೆಚ್ಚಲು ಕೊಯ್ದ ಪ್ರಕರಣ – ಮಾಲೀಕನಿಗೆ 2 ಹಸು, 1 ಕರು ನೀಡಿದ ಪಿ.ಸಿ ಮೋಹನ್‌

    ಈ ವೇಳೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಕೆಎಂಡಿಸಿ ಅಧ್ಯಕ್ಷ ಅಲ್ತಾಫ್ ಖಾನ್, ಮುಖಂಡರಾದ ಅತುಶ್, ಗೌಸಿ, ವಿನಾಯಕ್, ಪ್ರಸಾದ್ ಉಪಸ್ಥಿತರಿದ್ದರು.

    ಈ ಸಂದರ್ಭದಲ್ಲಿ ಮಾತನಾಡಿದ ಅಮುದಾ, ಹಸು ನಿರಾಕರಿಸಿದ ನನ್ನ ಸಹೋದರನ ಪರವಾಗಿ ನಾನು ಕ್ಷಮೆ ಕೋರುತ್ತೇನೆ. ಜಮೀರಣ್ಣ ಅವರು ಒಳ್ಳೆ ಮನಸ್ಸಿನಿಂದ ಹಸು ಕೊಡಿಸಿದ್ದಾರೆ. ಕೆಲವರು ಇದರಲ್ಲಿ ರಾಜಕಾರಣ ಮಾಡುತ್ತಿದ್ದು, ನಾವು ಶಾಸಕರ ಜತೆ ಇದ್ದೇವೆ ಎಂದು ಹೇಳಿದರು.

     

  • ಹಸುವಿನ ಕೆಚ್ಚಲು ಕೊಯ್ದ ಪ್ರಕರಣ – ಮಾಲೀಕನಿಗೆ 2 ಹಸು, 1 ಕರು ನೀಡಿದ ಪಿ.ಸಿ ಮೋಹನ್‌

    ಹಸುವಿನ ಕೆಚ್ಚಲು ಕೊಯ್ದ ಪ್ರಕರಣ – ಮಾಲೀಕನಿಗೆ 2 ಹಸು, 1 ಕರು ನೀಡಿದ ಪಿ.ಸಿ ಮೋಹನ್‌

    ಬೆಂಗಳೂರು: ಚಾಮರಾಜಪೇಟೆಯಲ್ಲಿ (Chamarajpet) ಹಸುವಿನ (Cow) ಕೆಚ್ಚಲು ಕೊಯ್ದಿದ್ದ ಪ್ರಕರಣಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದ ಸಂಸದ ಪಿ.ಸಿ ಮೋಹನ್‌ (P.C Mohan) ಅವರು ಹಸುವಿನ ಮಾಲೀಕನಿಗೆ 2 ಹಸು ಹಾಗೂ ಒಂದು ಕರುವನ್ನು ನೀಡಿದ್ದಾರೆ.

    ಹಸು ಮಾಲೀಕ ಕರ್ಣನಿಗೆ ಸಾಂತ್ವನ ಮಾಡಿದ ಸಂಸದರು. ನಾನು ವೈಯಕ್ತಿಕವಾಗಿ ಹಸುವನ್ನು ನೀಡಿದ್ದೇನೆ ಎಂದಿದ್ದಾರೆ.

    ವಾದ್ಯಮೇಳಗಳ ಮೂಲಕ ಹಸು ಹಾಗೂ ಕರುವನ್ನು ಕರ್ಣ ಅವರ ಮನೆಗೆ ತಲುಪಿಸಿದ್ದಾರೆ. ಹಸು ನೀಡುವ ಮುನ್ನ, ಹಸು ಹಾಗೂ ಕರುವಿಗೆ ಚಾಮರಾಜಪೇಟೆಯ ಮಾರಿಯಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿಸಲಾಯಿತು. ಬಳಿಕ ಹಸುವನ್ನು ಕರ್ಣ ಅವರ ಸುಪರ್ದಿಗೆ ನೀಡಲಾಗಿದೆ.

    ಚಾಮರಾಜಪೇಟೆಯ (Chamarajpet) ವಿನಾಯಕ ನಗರದಲ್ಲಿ ಶನಿವಾರ ರಾತ್ರಿ ರಸ್ತೆಯಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲನ್ನು ಕೊಯ್ದಿದ್ದು ಈಗ ಪಶು ಆಸ್ಪತ್ರೆಯಲ್ಲಿ (Veterinary Hospital) ಚಿಕಿತ್ಸೆ ನೀಡಲಾಗಿತ್ತು. ಘಟನಾ ಸ್ಥಳಕ್ಕೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿಸಿ ಮೋಹನ್‌ ಸ್ಥಳಕ್ಕೆ ಆಗಮಿಸಿ ಪೊಲೀಸರಿಗೆ ಕ್ಲಾಸ್‌ ತೆಗೆದುಕೊಂಡಿದ್ದರು. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕಾಂಗ್ರೆಸ್‌ ಸರ್ಕಾರದ ವಾಗ್ದಾಳಿ ನಡೆಸಿದ್ದರು.

  • ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣ – ಓರ್ವ ಆರೋಪಿ ಅರೆಸ್ಟ್‌

    ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣ – ಓರ್ವ ಆರೋಪಿ ಅರೆಸ್ಟ್‌

    ಬೆಂಗಳೂರು: ಇಲ್ಲಿನ ಚಾಮರಾಜಪೇಟೆಯಲ್ಲಿ (Chamarajpet) ಹಸುಗಳ ಕೆಚ್ಚಲು (Cows Udder) ಕೊಯ್ದು ವಿಕೃತಿ ಮೆರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಬಂಧಿಸಿ ಸ್ಥಳ ಮಹಜರು ನಡೆಸಿರುವ ಸೋಕೋ ಟೀಂ ತಡರಾತ್ರಿಯಿಂದಲೇ ವಿಚಾರಣೆ ಆರಂಭಿಸಿದೆ. ಇದನ್ನೂ ಓದಿ: ಮೂರು ಹೊಸ ಹಸುಗಳನ್ನು ನಾನೇ ಕೊಡಿಸುತ್ತೇನೆ: ಜಮೀರ್ 

    ಏನಿದು ಅಮಾನವೀಯ ಪ್ರಕರಣ?
    ಬೀದಿಯಲ್ಲಿ ಮಲಗಿದ್ದ 3 ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆ ಚಾಮರಾಜಪೇಟೆಯಲ್ಲಿ ಭಾನುವಾರ ನಡೆದಿದೆ. ವಿನಾಯಕ ನಗರದಲ್ಲಿ ತಡರಾತ್ರಿ ಕರ್ಣ ಎಂಬುವರಿಗೆ ಸೇರಿದ್ದ 3 ಹಸುಗಳ ಕೆಚ್ಚಲು ಕೊಯ್ದ ರಕ್ತದ ಕೋಡಿಯನ್ನೇ ಹರಿಸಿದ್ದರು. ಸದ್ಯ ಹಸುಗಳಿಗೆ ಚಾಮರಾಜಪೇಟೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕಾಟನ್ ಪೇಟೆ ಪೊಲೀಸರು ತನಿಖೆ ಆರಂಭಿಸಿದ್ದರು. ಇದನ್ನೂ ಓದಿ: ಹಸುಗಳನ್ನು ಹೋರಾಟಕ್ಕೆ ಕರೆದುಕೊಂಡು ಹೋಗಿದ್ದಕ್ಕೆ ಕೆಚ್ಚಲಿಗೆ ಕತ್ತರಿ!

    ಇನ್ನೂ ಈ ಪ್ರಕರಣದಲ್ಲೂ ರಾಜಕೀಯ ಕೆಸರೆರಚಾಟಕ್ಕೆ ಶುರುವಾಗಿದೆ. ಘಟನೆ ಬೆಳಕಿಗೆ ಬರ್ತಿದ್ದಂತೆ ಬಿಜೆಪಿ ನಾಯಕರು ಸ್ಥಳಕ್ಕೆ ಭೇಟಿ ಕೊಟ್ರು.. ಸ್ಥಳೀಯ ಸಂಸದ ಪಿಸಿ ಮೋಹನ್ ಸ್ಥಳ ಪರಿಶೀಲಿಸಿ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದರು. ವಿಪಕ್ಷ ನಾಯಕ ಅಶೋಕ್ ಕೂಡ ಸ್ಥಳಕ್ಕಾಗಮಿಸಿ, ಕಾಂಗ್ರೆಸ್ ಸರ್ಕಾರ ಬಂದ್ಮೇಲೆ ಸಂಕ್ರಾಂತಿಗೆ ಹಸುವಿನ ಕೆಚ್ಚಲು ಕೊಯ್ದಿರೋ ಗಿಫ್ಟ್ ಕೊಟ್ಟಿದ್ದಾರೆ. ಇದು ಜಿಹಾದಿ ಮನಸ್ಥಿತಿ, ಹಾಲು ಕೊಡುವ ಕೆಚ್ಚಲು ಕೊಯ್ದಿದ್ದಾರೆ ಎಂದು ಕಿಡಿಕಾರಿದ್ರು.

    ಈ ವೇಳೆ ವೈಯಕ್ತಿಕವಾಗಿ 1 ಲಕ್ಷ ಪರಿಹಾರವನ್ನೂ ಘೋಷಿಸಿದ್ರು. ಇತ್ತ, ಹಿಂದೂ ಮುಖಂಡರೂ ಘಟನೆಯನ್ನು ಉಗ್ರವಾಗಿ ಖಂಡಿಸಿದ್ದಾರೆ. ಘಟನೆಯನ್ನು ಸಿಎಂ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತೆ ಅಂದಿದ್ದಾರೆ. ಸ್ಥಳೀಯ ಶಾಸಕರೂ ಆಗಿರುವ ಸಚಿವ ಜಮೀರ್, ಕಾಟನ್‌ಪೇಟೆ ಪಶುವೈದ್ಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತೆ. 3 ಹೊಸ ಹಸುಗಳನ್ನು ನಾನೇ ಕೊಡಿಸ್ತೀನಿ ಅಂದಿದ್ದಾರೆ. ಇದನ್ನೂ ಓದಿ: ಛೇ ಇದೆಂತಾ ವಿಕೃತಿ! – ಹಸುಗಳ ಕೆಚ್ಚಲು ಕೊಯ್ದ ದುರುಳರು

  • ಮೂರು ಹೊಸ ಹಸುಗಳನ್ನು ನಾನೇ ಕೊಡಿಸುತ್ತೇನೆ: ಜಮೀರ್

    ಮೂರು ಹೊಸ ಹಸುಗಳನ್ನು ನಾನೇ ಕೊಡಿಸುತ್ತೇನೆ: ಜಮೀರ್

    – ಹಸುವಿನ ಕೆಚ್ಚಲು ಕೊಯ್ದ ಘಟನಾ ಸ್ಥಳಕ್ಕೆ ಜಮೀರ್ ಭೇಟಿ

    ಬೆಂಗಳೂರು: ಪ್ರಾಣಿಗಳ ಮೇಲೆ ಯಾಕೆ ದ್ವೇಷ? ಈ ಥರ ಮಾಡಿದವನು ಮನುಷ್ಯನೇ ಅಲ್ಲ. ಏನೇ ದ್ವೇಷ, ಗಲಾಟೆ ಇದ್ದರೂ ಈ ಥರ ಮಾಡಬಾರದು ಎಂದು ಸಚಿವ ಜಮೀರ್ ಅಹ್ಮದ್ (Zameer Ahmed Khan) ಹೇಳಿದ್ದಾರೆ.

    ಚಾಮರಾಜಪೇಟೆಯಲ್ಲಿ (Chamrajpet) ಹಸುಗಳ ಕೆಚ್ಚಲು (Cow’s Udder) ಕೊಯ್ದ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು, ಇರಿತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಹಸುಗಳನ್ನು ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಕನ್ನಡತಿ, ಮದ್ದೂರಿನ ಸೊಸೆಗೆ ಮಿಸೆಸ್ ಇಂಡಿಯಾ ಕಿರೀಟ

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು, ಮುಖ್ಯಮಂತ್ರಿಗಳು ಬಳ್ಳಾರಿಯಲ್ಲಿ ಇದ್ದೆವು. ವಿಚಾರ ಗೊತ್ತಾದ ತಕ್ಷಣ ಮುಖ್ಯಮಂತ್ರಿಗಳು ಕಮೀಷನರ್‌ಗೆ ಕರೆ ಮಾಡಿ ಅದು ಯಾರೇ ಆಗಿರಲಿ, ಕೂಡಲೇ ಬಂಧಿಸುವಂತೆ ಹೇಳಿದ್ದಾರೆ. ನಾನು ಕೂಡ ಪೊಲೀಸರಿಗೆ ಹೇಳಿದ್ದೇನೆ. ಯಾರೇ ಆದರೂ ಅವನ ಮೇಲೆ ಕಠಿಣ ಕ್ರಮ ಆಗಬೇಕು. ಮೂರು ಹೊಸ ಹಸುಗಳನ್ನು ನಾನೇ ಕೊಡಿಸುತ್ತೇನೆ. ಅವರ ಕುಟುಂಬದ ಜೊತೆಗೆ ನಾನು ಇದ್ದೇನೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಚಿರತೆ ಕಾಟಕ್ಕೆ ಬೆಚ್ಚಿಬಿದ್ದ ಬನಶಂಕರಿ ಲೇಔಟ್‌ ಜನರು

    ನಾಳೆ ಅವರ ಮನೆ ಬಳಿ ಹೋಗಿ ಹೊಸ ಹಸುಗಳನ್ನು ಕೊಡಿಸಿ. ಹಸು ಕೊಡಿಸೋ ಜವಾಬ್ದಾರಿ ನಿನ್ನದು ಎಂದು ವಿನಯ್ ಎಂಬಾತನಿಗೆ ಜಮೀರ್ ಸೂಚನೆ ನೀಡಿದರು. ಇದನ್ನೂ ಓದಿ: ಮೊಬೈಲ್ ಕೊಡಿಸದ್ದಕ್ಕೆ ಮಗ ಆತ್ಮಹತ್ಯೆ – ಅದೇ ಹಗ್ಗಕ್ಕೆ ನೇಣು ಬಿಗಿದು ತಂದೆ ಸೂಸೈಡ್

  • ಹಸುಗಳನ್ನು ಹೋರಾಟಕ್ಕೆ ಕರೆದುಕೊಂಡು ಹೋಗಿದ್ದಕ್ಕೆ ಕೆಚ್ಚಲಿಗೆ ಕತ್ತರಿ!

    ಹಸುಗಳನ್ನು ಹೋರಾಟಕ್ಕೆ ಕರೆದುಕೊಂಡು ಹೋಗಿದ್ದಕ್ಕೆ ಕೆಚ್ಚಲಿಗೆ ಕತ್ತರಿ!

    ಬೆಂಗಳೂರು: ಪ್ರತಿಭಟನೆಗೆ ಹಸುಗಳನ್ನು ಕರೆದುಕೊಂಡು ಹೋಗಿದ್ದಕ್ಕೆ ಚಾಮರಾಜಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲನ್ನು ಕತ್ತರಿಸಿದ್ರಾ ಎಂಬ ಪ್ರಶ್ನೆ ಎದ್ದಿದೆ.

    ಹೌದು. 6 ತಿಂಗಳ ಹಿಂದೆ ಚಾಮರಾಜಪೇಟೆಯ ಪಶು ಆಸ್ಪತ್ರೆ ಎತ್ತಂಗಡಿಗೆ ಪ್ಲ್ಯಾನ್ ನಡೆದಿತ್ತು. ಪ್ರತಿಭಟನೆಯ ವೇಳೆ ಈ ಹಸುಗಳನ್ನು ಮಾಲೀಕರು ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರು.

    ಕೆಲ ದಿನಗಳ ಹಿಂದೆ ಹಸುವಿನ ಗುದಾದ್ವಾರಕ್ಕೆ ಪೈಪ್ ಇಟ್ಟು ವಿಕೃತಿ ಮೆರೆದಿದ್ದರು. ಈಗ ಶನಿವಾರ ಕೆಚ್ಚಲುಗೆ ಚಾಕು ಹಾಕಿ ಇರಿದಿದ್ದಾರೆ. ಪಶು ಆಸ್ಪತ್ರೆ ಉಳಿಸಲು ನಡೆಸಿದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಕ್ಕೆ ವಿರೋಧಿಗಳು ಈ ಕೃತ್ಯ ಎಸಗಿರಬಹುದೆಂಬ ಅನುಮಾನವನ್ನು ಮಾಲೀಕರು ವ್ಯಕ್ತಪಡಿಸಿದ್ದಾರೆ.

     

    ಚಾಮರಾಜಪೇಟೆಯ (Chamarajpet) ವಿನಾಯಕ ನಗರದಲ್ಲಿ ಶನಿವಾರ ರಾತ್ರಿ ರಸ್ತೆಯಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲನ್ನು ಕೊಯ್ದಿದ್ದು ಈಗ ಪಶು ಆಸ್ಪತ್ರೆಯಲ್ಲಿ (Veterinary Hospital) ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಹಸುವಿನ ಕೆಚ್ಚಲು ಕೊಯ್ದ ನೀಚರನ್ನು ಬಂಧಿಸದಿದ್ದರೇ ಜಮೀರ್ ವಿರುದ್ಧ ಹೋರಾಟ: ಮುತಾಲಿಕ್ ಎಚ್ಚರಿಕೆ

    ಘಟನೆ ನಡೆದ ಸ್ಥಳಕ್ಕೆ 20ಕ್ಕೂ ಹೆಚ್ಚು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದಾರೆ. ಈ ಭಾಗದಲ್ಲಿ ಡ್ರಗ್ಸ್, ಗಾಂಜಾ ಸೇವನೆ ಹೆಚ್ಚಿದ್ದರೂ ಪೊಲೀಸರು ಇದಕ್ಕೆ ಕಡಿವಾಣ ಹಾಕುತ್ತಿಲ್ಲ ಮಹಿಳಾ ನಿವಾಸಿಗಳು ದೂರಿಸಿದ್ದಾರೆ.

    ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿಸಿ ಮೋಹನ್‌ ಸ್ಥಳಕ್ಕೆ ಆಗಮಿಸಿ ಪೊಲೀಸರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ರಾಜ್ಯದದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕಾಂಗ್ರೆಸ್‌ ಸರ್ಕಾರದ ವಾಗ್ದಾಳಿ ನಡೆಸಿದರು.

     

    ಪ್ರತಿಭಟನೆ ಯಾಕೆ?
    ಚಾಮರಾಜಪೇಟೆ ಪಶು ಆಸ್ಪತ್ರೆಯು ಹಲವು ವರ್ಷಗಳಿಂದ ಪಶುಗಳಿಗೆ ಚಿಕಿತ್ಸೆ ನೀಡಲು ಅನುಕೂಲವಾಗಿತ್ತು. ಸರ್ಕಾರ ಈ ಆಸ್ಪತ್ರೆ ಭೂಮಿಯನ್ನು ವಕ್ಫ್ ಬೋರ್ಡ್‌ಗೆ ನೀಡಿ ಆದೇಶ ಹೊರಡಿಸಿತ್ತು. ಜೊತೆಗೆ ಪಶು ಆಸ್ಪತ್ರೆಯನ್ನೂ ಸ್ಥಳಾಂತರ ಮಾಡಿತ್ತು. ಸರ್ಕಾರದ ಆದೇಶವನ್ನು ಪ್ರಶ್ನಿಸಿ ಚಾಮರಾಜಪೇಟೆ ನಿವಾಸಿಗಳು ಪ್ರತಿಭಟನೆ ನಡೆಸಿದ್ದರು. ಅಷ್ಟೇ ಅಲ್ಲದೇ ಹೈಕೋರ್ಟ್‌ನಲ್ಲಿ ಸರ್ಕಾರದ ಆದೇಶದ ವಿರುದ್ಧ ಅರ್ಜಿ ಸಲ್ಲಿಸಿದ್ದರು.

    ಈ ಅರ್ಜಿಯನ್ನು ವಿಚಾರಣೆ ಮಾಡಿದ ಕೋರ್ಟ್‌ ಚಾಮರಾಜಪೇಟೆ ಪಶು ಆಸ್ಪತ್ರೆಯನ್ನು ವಕ್ಫ್ ಬೋರ್ಡ್‌ಗೆ ನೀಡಲಾದ ಸರ್ಕಾರಿ ಆದೇಶಕ್ಕೆ ತಡೆಯನ್ನು ನೀಡಿದೆ. ಜೊತೆಗೆ ಚಾಮರಾಜಪೇಟೆಯ ಪಶು ಆಸ್ಪತ್ರೆ ಸ್ಥಳಾಂತರ ಮಾಡುವುದನ್ನು ಕೂಡ ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳುಯಂತೆ ಹೈಕೊರ್ಟ್ ಸೂಚನೆ ನೀಡಿತ್ತು.

     

  • ಛೇ ಇದೆಂತಾ ವಿಕೃತಿ! – ಹಸುಗಳ ಕೆಚ್ಚಲು ಕೊಯ್ದ ದುರುಳರು

    ಛೇ ಇದೆಂತಾ ವಿಕೃತಿ! – ಹಸುಗಳ ಕೆಚ್ಚಲು ಕೊಯ್ದ ದುರುಳರು

    ಬೆಂಗಳೂರು: ಕಿಡಿಗೇಡಿಗಳು ಮೂರು ಹಸುಗಳ (cows) ಕೆಚ್ಚಲು ಕೊಯ್ದು ವಿಕೃತಿ ಮೆರೆದ ಘಟನೆ ಚಾಮರಾಜಪೇಟೆಯ (Chamarajpet) ವಿನಾಯಕ ನಗರದಲ್ಲಿ ನಡೆದಿದೆ.

    ಶನಿವಾರ ರಾತ್ರಿ ರಸ್ತೆಯಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲನ್ನು ಕೊಯ್ದಿದ್ದು ಈಗ ಪಶು ಆಸ್ಪತ್ರೆಯಲ್ಲಿ (Veterinary Hospital) ಚಿಕಿತ್ಸೆ ನೀಡಲಾಗುತ್ತಿದೆ.

    ಘಟನೆ ನಡೆದ ಸ್ಥಳಕ್ಕೆ 20ಕ್ಕೂ ಹೆಚ್ಚು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದಾರೆ. ಈ ಭಾಗದಲ್ಲಿ ಡ್ರಗ್ಸ್, ಗಾಂಜಾ ಸೇವನೆ ಹೆಚ್ಚಿದ್ದರೂ ಪೊಲೀಸರು ಇದಕ್ಕೆ ಕಡಿವಾಣ ಹಾಕುತ್ತಿಲ್ಲ ಎಂದು ದೂರಿದ್ದಾರೆ. ಇದನ್ನೂ ಓದಿ: ನಿರ್ದೇಶಕರ ಬಳಿ ಕ್ಷಮೆ ಕೋರಿದ ರಶ್ಮಿಕಾ ಮಂದಣ್ಣ

    ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿಸಿ ಮೋಹನ್‌ ಸ್ಥಳಕ್ಕೆ ಆಗಮಿಸಿ ಪೊಲೀಸರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ರಾಜ್ಯದದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕಾಂಗ್ರೆಸ್‌ ಸರ್ಕಾರದ ವಾಗ್ದಾಳಿ ನಡೆಸಿದರು.

    ಕಾಟನ್ ಪೇಟೆ ಠಾಣೆ ಇನ್ಸ್‌ಪೆಕ್ಟರ್‌, ಚಿಕ್ಕಪೇಟೆ ಉಪ ವಿಭಾಗದ ಎಸಿಪಿ ಶನಿವಾರ ರಾತ್ರಿ ನೈಟ್ ರೌಂಡ್ಸ್ ನಲ್ಲಿದ್ದರು.