Tag: Chamarajnagara

  • Chamarajanagara Lok Sabha 2024: ಕಾಂಗ್ರೆಸ್ ಕೋಟೆಗೆ ಎಂಟ್ರಿ ಕೊಟ್ಟಿರೋ ಬಿಜೆಪಿ ಮತ್ತೆ ಸಿಂಹಾಸನ ಏರುತ್ತಾ?

    Chamarajanagara Lok Sabha 2024: ಕಾಂಗ್ರೆಸ್ ಕೋಟೆಗೆ ಎಂಟ್ರಿ ಕೊಟ್ಟಿರೋ ಬಿಜೆಪಿ ಮತ್ತೆ ಸಿಂಹಾಸನ ಏರುತ್ತಾ?

    – ಸಚಿವ ಹೆಚ್.ಸಿ.ಮಹದೇವಪ್ಪ ಪುತ್ರನಿಗೆ ಕಾಂಗ್ರೆಸ್ ಟಿಕೆಟ್?
    – ಸತತ ಎರಡನೇ ಬಾರಿ ಗೆಲ್ಲುತ್ತಾ ಬಿಜೆಪಿ?

    ಜಾನಪದ ಕಲೆಗಳ ತವರೂರು ಚಾಮರಾಜನಗರ. ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಾಥ ಸ್ವಾಮಿ ಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಕುರಿತ ಐತಿಹ್ಯಗಳು ಜಾನಪದ ಕಲೆಯಲ್ಲಿ ಹಾಸು ಹೊಕ್ಕಾಗಿದೆ. ಗಡಿಜಿಲ್ಲೆ ಚಾಮರಾಜನಗರ ಲೋಕಸಭಾ ಚುನಾವಣಾ ವಿಚಾರದಲ್ಲೂ ತನ್ನದೇ ಆದ ಮಹತ್ವ ಹೊಂದಿದೆ.

    ಚಾಮರಾಜನಗರ (Chamarajanagara) ಲೋಕಸಭಾ ಕ್ಷೇತ್ರ 90 ರ ದಶಕದವರೆಗೂ ಕಾಂಗ್ರೆಸ್‌ನ (Congress) ನೆಲೆಯಾಗಿತ್ತು. ನಂತರದ ಸಂದರ್ಭದಲ್ಲಿ ಇಲ್ಲಿ ಕಾಂಗ್ರೆಸ್ ನಿಧಾನವಾಗಿ ತನ್ನ ಅಸ್ತಿತ್ವ ಕಳೆದುಕೊಂಡಿತು. ಈ ಅವಧಿಯಲ್ಲಿ ಜೆಡಿಎಸ್, ಜೆಡಿಯು ಇಲ್ಲಿ ನೆಲೆ ಕಂಡುಕೊಂಡವು. ಮೊಟ್ಟ ಮೊದಲ ಬಾರಿಗೆ ಕಳೆದ ಚುನಾವಣೆಯಲ್ಲಿ ಬಿಜೆಪಿ (BJP) ಗೆಲುವಿನೊಂದಿಗೆ ಕ್ಷೇತ್ರದಲ್ಲಿ ಕಮಲ ಅರಳಿಸಿದೆ. ಈ ಬಾರಿಯ ಚುನಾವಣಾ ಕಣವೂ ರಂಗೇರಿದೆ.

     

    ಕ್ಷೇತ್ರ ಪರಿಚಯ
    1952 ರಲ್ಲಿ ಕ್ಷೇತ್ರ ರಚನೆಯಾಯಿತು. ಚಾಮರಾಜನಗರ 1952 ಹಾಗೂ 1957 ರಲ್ಲಿ ಮೈಸೂರು (Mysuru) ದ್ವಿಸದಸ್ಯ ಕ್ಷೇತ್ರವಾಗಿತ್ತು. 1962 ರಲ್ಲಿ ಚಾಮರಾಜನಗರ ಎಸ್ಸಿ (SC) ಮೀಸಲು ಕ್ಷೇತ್ರವಾಗಿ ಉದಯವಾಯಿತು. ಅಲ್ಲಿಂದ ಕಾಂಗ್ರೆಸ್ 10, ಜನತಾದಳ 2, ಜೆಡಿಎಸ್, ಜೆಡಿಯು, ಬಿಜೆಪಿ ತಲಾ ಒಂದು ಬಾರಿ ಗೆದ್ದಿವೆ. 2019ರಲ್ಲಿ ಮೊದಲ ಬಾರಿಗೆ ಇಲ್ಲಿ ಬಿಜೆಪಿ ಖಾತೆ ತೆರೆದಿತ್ತು. ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದು ಬಿಜೆಪಿ ಸೇರಿದ್ದ ಶ್ರೀನಿವಾಸ್ ಪ್ರಸಾದ್ ಕ್ಷೇತ್ರದಲ್ಲಿ ಗೆದ್ದು ಸಂಸದರಾದರು.

    ವಿಧಾನಸಭಾ ಕ್ಷೇತ್ರಗಳೆಷ್ಟು?
    ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರವು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಚಾಮರಾಜನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳು ಹಾಗೂ ಮೈಸೂರು ಜಿಲ್ಲೆಯ ನಾಲ್ಕು ಕ್ಷೇತ್ರಗಳನ್ನು ಹೊಂದಿದೆ. ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು ಹಾಗೂ ಮೈಸೂರು ಜಿಲ್ಲೆಯ ತಿ.ನರಸೀಪುರ, ನಂಜನಗೂಡು, ವರುಣಾ, ಹೆಚ್.ಡಿ.ಕೋಟೆ ಕ್ಷೇತ್ರಗಳನ್ನು ಒಳಗೊಂಡಿದೆ.  ಇದನ್ನೂ ಓದಿ: ಸಾಲಗಾರರ ಕಾಟ – ಬೆಂಗಳೂರಿನಲ್ಲಿ ಇಬ್ಬರು ಗಂಡು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

    ಕ್ಷೇತ್ರದ ಮತದಾರರೆಷ್ಟು?
    ಚಾಮರಾಜನಗರ ಕ್ಷೇತ್ರದಲ್ಲಿ 17,68,555 ಒಟ್ಟು ಮತದಾರರಿದ್ದಾರೆ. ಅವರ ಪೈಕಿ ಪುರುಷರು 8,74,183 ಹಾಗೂ ಮಹಿಳಾ ಮತದಾರರು 8,94,268 ಮತದಾರರಿದ್ದಾರೆ. ತೃತೀಯ ಲಿಂಗಿ ಮತದಾರರು 104 ಮಂದಿಯಿದ್ದಾರೆ.

    ಕಳೆದ ಚುನಾವಣೆಯಲ್ಲಿ ಏನಾಗಿತ್ತು?
    2019 ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀನಿವಾಸ್ ಪ್ರಸಾದ್ (Srinivasa Prasad) ಗೆಲುವು ಸಾಧಿಸಿದ್ದರು. ಈ ಅವಧಿಯಲ್ಲಿ ಜೆಡಿಎಸ್-ಕಾಂಗ್ರೆಸ್ (JDS-Congress) ಸಮ್ಮಿಶ್ರ ಸರ್ಕಾರವು ರಾಜ್ಯದಲ್ಲಿ ಚುನಾವಣೆ ಎದುರಿಸಿದ್ದವು. ಹೀಗಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಸೋತಿದ್ದರು. ಕಾಂಗ್ರೆಸ್‌ನಿಂದ ಧ್ರುವನಾರಾಯಣ್ ಸ್ಪರ್ಧಿಸಿ ಪರಾಭವಗೊಂಡಿದ್ದರು. ಕೇವಲ 1,817 ಮತಗಳ ಅಂತರದಿಂದ ಬಿಜೆಪಿ ಗೆಲುವು ಸಾಧಿಸಿತ್ತು. ಇದೀಗ ವಾತಾವರಣ ಬದಲಾಗಿದ್ದು ಲೋಕಸಭಾ ವ್ಯಾಪ್ತಿಯ 8 ಕ್ಷೇತ್ರದಲ್ಲಿ 7 ಮಂದಿ ಕಾಂಗ್ರೆಸ್, ಒಬ್ಬ ಜೆಡಿಎಸ್ ಶಾಸಕರಿದ್ದಾರೆ. ಬಿಜೆಪಿ ಒಂದು ಸ್ಥಾನ ಗೆಲ್ಲಲು ವಿಫಲವಾಗಿದೆ. ಅಲ್ಲದೇ ವಯಸ್ಸು ಹಾಗೂ ಅನಾರೋಗ್ಯದ ಹಿನ್ನೆಲೆ ಶ್ರೀನಿವಾಸ್ ಪ್ರಸಾದ್ ರಾಜಕಾರಣದಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ.

    ಬಿಜೆಪಿಯಿಂದ ಎಸ್.ಬಾಲರಾಜ್ ಕಣಕ್ಕೆ
    ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದ ಚಾಮರಾಜನಗರ ಕ್ಷೇತ್ರದಿಂದ ಬಿಜೆಪಿ ಎಸ್.ಬಾಲರಾಜ್ (S Balaraj) ಅವರಿಗೆ ಮಣೆ ಹಾಕಿದೆ. ವಯಸ್ಸು ಹಾಗೂ ಅನಾರೋಗ್ಯದ ಕಾರಣದಿಂದ ಹಾಲಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಪಾಳಯದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿತ್ತು. ಈಚೆಗೆ ನಿಧನರಾದ ಐಎಎಸ್ ಅಧಿಕಾರಿಯಾಗಿದ್ದ ಕೆ.ಶಿವರಾಂ ಅವರ ಪತ್ನಿಗೆ ಬಿಜೆಪಿ ಟಿಕೆಟ್ ನೀಡಲಿದೆ ಎಂದು ಸುದ್ದಿ ಹರಿದಾಡಿತ್ತು. ಇದರ ಜೊತೆಗೆ ಪಕ್ಷದಲ್ಲಿ ಮಾಜಿ ಸಚಿವರಾದ ಎನ್.ಮಹೇಶ್, ಕೋಟೆ ಶಿವಣ್ಣ, ನಿವೃತ್ತ ಐಎಎಸ್ ಅಧಿಕಾರಿ ಡಾ.ರಾಜು, ಶ್ರೀನಿವಾಸ್ ಪ್ರಸಾದ್ ಅಳಿಯ ಡಾ. ಸಂಜಯ್, ಜಿಪಂ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಪಕ್ಷದ ಮುಖಂಡ ವೆಂಕಟರಮಣಸ್ವಾಮಿ(ಪಾಪು) ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ, ಬಿಜೆಪಿ ಮಾಜಿ ಶಾಸಕ ಬಾಲರಾಜ್‌ಗೆ ಟಿಕೆಟ್ ನೀಡಿದೆ.ಇದನ್ನೂ ಓದಿ: ಪಾಕಿಸ್ತಾನ ಸೂಪರ್‌ ಲೀಗ್‌ಗಿಂತಲೂ ನಮ್ಮ ಹೆಣ್ಮಕ್ಕಳ ಟೂರ್ನಿಯೇ ಹೆಚ್ಚು ಶ್ರೀಮಂತ

    2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸಿದ್ದವು. ಆದರೆ ಈ ಸಲ ಉಲ್ಟಾ ಆಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಾಗಿವೆ. ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿಯ ಬಾಲರಾಜ್ ಕಣದಲ್ಲಿದ್ದಾರೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದು ಇನ್ನೂ ಘೋಷಣೆಯಾಗಿಲ್ಲ. ಸಚಿವ ಹೆಚ್.ಸಿ.ಮಹದೇವಪ್ಪ (Mahadevappa) ಸ್ಪರ್ಧೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಒತ್ತಾಯಿಸಿದ್ದರು. ಆದರೆ ಪುತ್ರನಿಗೆ ಚಾಮರಾಜನಗರ ಕ್ಷೇತ್ರದ ಟಿಕೆಟ್ ಕೊಡುವಂತೆ ಹೆಚ್.ಸಿ.ಮಹದೇವಪ್ಪ ಕೇಳುತ್ತಿದ್ದಾರೆ. ತಾನು ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಕ್ಷೇತ್ರದ ಟಿಕೆಟ್ ಹೆಚ್.ಸಿ.ಮಹದೇವಪ್ಪ ಪುತ್ರ ಸುನೀಲ್ ಬೋಸ್‌ಗೆ (Sunil Bose) ಸಿಗಬಹುದು ಎಂದು ಹೇಳಲಾಗುತ್ತಿದೆ. ‘ಕೈ’ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಮಾಜಿ ಶಾಸಕ ನಂಜುಂಡಸ್ವಾಮಿ, ಕಾಂಗ್ರೆಸ್ ಮುಖಂಡ ಕಿರಣ್ ಕುಮಾರ್, ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಪುಷ್ಪಾ ಅಮರ್‌ನಾಥ್, ಮುಖಂಡ ಡಿ.ಎನ್.ನಟರಾಜು, ಮಾಜಿ ಸಂಸದ ಕಾಗಲವಾಡಿ ಶಿವಣ್ಣ ಕೂಡ ಇದ್ದಾರೆ.

    ಕಾಂಗ್ರೆಸ್‌ಗೆ ಪ್ಲಸ್: ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ 7 ರಲ್ಲಿ ಕಾಂಗ್ರೆಸ್ ಶಾಸಕರೇ ಇದ್ದಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಚಸ್ಸು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದು, ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಅಭ್ಯರ್ಥಿಗಳ ಕೈ ಹಿಡಿಯಬಹುದು, ಕ್ಷೇತ್ರದಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿಸುವ ಸಾಧ್ಯತೆ.

    ಕಾಂಗ್ರೆಸ್ ಮೈನಸ್: ಸಂಘಟನಾ ಚತುರ, ಮಾಜಿ ಸಂಸದ ಧ್ರುವನಾರಾಯಣ (Dhruvanarayana) ಹಠಾತ್ ನಿಧನ, ಅಭಿವೃದ್ದಿ ಕಾರ್ಯಗಳಿಗೆ ಅನುದಾನ ಕೊರತೆಯಿಂದ ಚುನಾವಣೆ ಮೇಲೆ ಪರಿಣಾಮ ಬೀರಬಹುದು, ವರುಣಾ ಕ್ಷೇತ್ರ ಹೊರತುಪಡಿಸಿ ಉಳಿದ 7 ವಿಧಾನಸಭಾ ಕ್ಷೇತ್ರಗಳು ಅಭಿವೃದ್ಧಿ ಕಾಣದಿರುವುದು, ಎಸ್‌ಸಿ/ಎಸ್‌ಟಿಗೆ ಮೀಸಲಿಟ್ಟ ಅನುದಾನ ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆಯಿಂದ ಆ ಸಮುದಾಯಗಳ ಅಸಮಾಧಾನಕ್ಕೆ ಕಾರಣವಾಗಬಹುದು, ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದು. ಇದನ್ನೂ ಓದಿ: ಮುಸ್ಲಿಮರ ಬಹುಪತ್ನಿತ್ವ ಕಂಡು ಬೇರೆಯವರಿಗೆ ಹೊಟ್ಟೆಕಿಚ್ಚು: ಜಾವೇದ್‌ ಅಖ್ತರ್‌

     

    ಬಿಜೆಪಿ ಪ್ಲಸ್: ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಲಿಂಗಾಯತ ಹಾಗೂ ಒಕ್ಕಲಿಗ ಮತಗಳ ಕ್ರೋಢೀಕರಣ, ಪ್ರಧಾನಿ ಮೋದಿ (PM Narendra Modi) ವರ್ಚಸ್ಸು (ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಬರಲಿ ಎಂಬ ಜನರ ಮನಸ್ಥಿತಿ), ಮೀಸಲು ಕ್ಷೇತ್ರವಾಗಿದ್ದರಿಂದ ಲಿಂಗಾಯತ ಹಾಗೂ ಒಕ್ಕಲಿಗರ ಮತಗಳ ಜೊತೆಗೆ ದಲಿತ ಮತಗಳು ಬಿಜೆಪಿಗೆ ಬೀಳಬಹುದು.

    ಬಿಜೆಪಿ ಮೈನಸ್: ಹಾಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅನಾರೋಗ್ಯ ಹಿನ್ನೆಲೆ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸ ಮಾಡದೇ ಇರುವುದು, ಪಕ್ಷದಲ್ಲಿ ಸಂಘಟನೆಯ ಕೊರತೆ, ಇಡೀ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇಲ್ಲದಿರುವುದು, ವರ್ಚಸ್ವಿ ಹಾಗೂ ಮುಂಚೂಣಿ ನಾಯಕರ ಕೊರತೆ.

    ಜಾತಿವಾರು ಲೆಕ್ಕಾಚಾರ
    ಪರಿಶಿಷ್ಟ ಜಾತಿ- 4.5 ಲಕ್ಷ
    ಲಿಂಗಾಯತ- 3.5 ಲಕ್ಷ
    ನಾಯಕ- 2.5 ಲಕ್ಷ
    ಉಪ್ಪಾರ- 2 ಲಕ್ಷ
    ಕುರುಬ- 1.20 ಲಕ್ಷ
    ಒಕ್ಕಲಿಗ- 1.50 ಲಕ್ಷ
    ಮುಸ್ಲಿಂ- 80 ಸಾವಿರ
    ಇತರೆ- 2 ಲಕ್ಷ

     

  • ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ಶೆಟ್ಟರ್‌ಗೆ ತಟ್ಟಿತು ಕೈ ಕಾರ್ಯಕರ್ತರ ಪ್ರತಿಭಟನೆ ಬಿಸಿ

    ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ಶೆಟ್ಟರ್‌ಗೆ ತಟ್ಟಿತು ಕೈ ಕಾರ್ಯಕರ್ತರ ಪ್ರತಿಭಟನೆ ಬಿಸಿ

    ಚಾಮರಾಜನಗರ: ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ವಿಶ್ರಾಂತಿ ಪಡೆಯಲೆಂದು ನಗರದ ಕೆ.ಗುಡಿಯ ಜಂಗಲ್ ಲಾಡ್ಜನಲ್ಲಿದ್ದರು ಅವರು ವಾಪಸ್ ಆಗುವ ವೇಳೆ ಕೈ  (Congress) ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕಳೆದ ಎರಡು ದಿನಗಳಿಂದ ಕುಟುಂಬದ ಜೊತೆಗೆ ವಿಶ್ರಾಂತಿ ಪಡೆಯಲೆಂದು ಚಾಮರಾಜನಗರ (Chamarajanagar)  ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತಾರಣ್ಯದ ಕೆ.ಗುಡಿಯ ಜಂಗಲ್ ಲಾಡ್ಜ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಪತ್ನಿ ಶಿಲ್ಪಾ ಶೆಟ್ಟರ್ ಅವರು ಕೆ.ಗುಡಿ ಜಂಗಲ್ ಲಾಡ್ಜ್‌ಗೆ ಆಗಮಿಸಿದ್ದರು. ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ – ಮೋದಿ, ನಡ್ಡಾ ನೇತೃತ್ವದಲ್ಲಿ 2 ದಿನ ಹೈವೋಲ್ಟೇಜ್ ಸಭೆ

    ಜದೀಶ್ ಶೆಟ್ಟರ್ ಅವರು ತಮ್ಮ ವಿಶ್ರಾಂತಿ ಮುಗಿಸಿ ತೆರಳುವ ವೇಳೆ ಅವರಿದ್ದ ಸ್ಥಳಕ್ಕೆ ಬಂದ ಕಾಂಗ್ರೆಸ್ ಕಾರ್ಯರ್ತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗಿ ಪ್ರತಿಭಟನೆ ನಡೆಸಿದ ವೇಳೆ ಜಗದೀಶ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರು ಶೆಟ್ಟರ್ ವಾಸ್ತವ್ಯ ಹೂಡಿದ್ದ ಸ್ಥಳಕ್ಕೆ ತೆರಳಿ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಕೇಸ್‌ – 108 ಆರೋಪಿಗಳಿಗೆ ಜಾಮೀನು, ದರ್ಗಾದಲ್ಲಿ ಸಂಭ್ರಮಾಚರಣೆ

    ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಶೆಟ್ಟರ್ ಇತ್ತೀಚಿಗೆ ಕಾಂಗ್ರೆಸ್ ತೊರೆದು ಮರಳಿ ಬಿಜೆಪಿ ಸೇರಿದ್ದರು. ಇದನ್ನೂ ಓದಿ: ನೇಣು ಬಿಗಿದುಕೊಂಡು ಮಹಿಳಾ ಪೇದೆ ಆತ್ಮಹತ್ಯೆ

  • ಹೊಗೇನಕಲ್‌ನ ಒಂದಿಂಚು ಜಾಗವನ್ನು ಬೇರೆಯವರಿಗೆ ಬಿಟ್ಟುಕೊಡಲ್ಲ: ಸೋಮಣ್ಣ

    ಹೊಗೇನಕಲ್‌ನ ಒಂದಿಂಚು ಜಾಗವನ್ನು ಬೇರೆಯವರಿಗೆ ಬಿಟ್ಟುಕೊಡಲ್ಲ: ಸೋಮಣ್ಣ

    ಚಾಮರಾಜನಗರ: ಹೊಗೇನಕಲ್‌ನಲ್ಲಿ ಒಂದಿಂಚು ಜಾಗವನ್ನು ಬೇರೆಯವರಿಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

    ಹೊಗೇನಕಲ್‌ನಲ್ಲಿ 400 ಎಕರೆ ವಿಸ್ತೀರ್ಣದ ನಡುಗುಡ್ಡೆಯನ್ನು ತಮಿಳುನಾಡು ಸರ್ಕಾರ ಅತಿಕ್ರಮಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ರಾಜ್ಯದ ಸಣ್ಣ ಹಕ್ಕನ್ನು ಸಹ ಬೇರೆಯವರಿಗೆ ಬಿಟ್ಟು ಕೊಡಲ್ಲ, ನಮ್ಮ ಹಕ್ಕನ್ನು ನಾವು ಕಾಯ್ದುಕೊಳ್ಳುತ್ತೇವೆ. ನಮಗೆ ಆ ಶಕ್ತಿಯಿದೆ ಎಂದರು.

    Somanna

    ಜಂಟಿ ಸರ್ವೆ ಪುನಾರಾಂಭಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಯಾವ್ಯಾವ ಕಾಲಕ್ಕೇ ಏನಾಗಬೇಕೋ ಆ ರೀತಿಯೇ ಆಗುತ್ತದೆ. ಕರ್ನಾಟಕದ ಒಂದು ಇಂಚು ಜಾಗವನ್ನು ಬೇರೆಯವರಿಗೆ ಬಿಟ್ಟುಕೊಡಲ್ಲ. ನಮ್ಮ ನೆಲದಲ್ಲಿ ಇನ್ನೊಬ್ಬರು ಬಂದು ಸೇರಿಕೊಳ್ಳಲು ಅವಕಾಶ ಕೊಡಲ್ಲ ಎಂದು ಭರವಸೆ ನೀಡಿದರು. ಇದನ್ನೂ ಓದಿ: ನನ್ನ ವಿಜಯನಗರದ ಜನ ದುಃಖದಲ್ಲಿದ್ದಾರೆ: ಆನಂದ್ ಸಿಂಗ್

    ತಮಿಳುನಾಡು ಕೈಗೊಂಡಿರುವ ಹೊಗೇನಕಲ್ ಎರಡನೇ ಹಂತದ ಕುಡಿಯುವ ನೀರಿನ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಕುಡಿದ ಮೇಲೆ ತಮಿಳುನಾಡಿನವರು ನೀರು ಕುಡಿಯುತ್ತಾರೆ ವಿನಾಃ ಅವರು ಕುಡಿದ ನೀರನ್ನು ನಾವು ಕುಡಿಯೋದಿಲ್ಲ, ಅವರ ಹಕ್ಕನ್ನು ಕಾಯ್ದುಕೊಳ್ಳೋದು ಅವರ ಕರ್ತವ್ಯ. ನಮ್ಮ ಹಕ್ಕನ್ನು ಕಾಯ್ದುಕೊಳ್ಳೋದು ನಮ್ಮ ಕರ್ತವ್ಯವಾಗಿದ್ದು, ನಮ್ಮ ಜನರಿಗೆ ಅನ್ಯಾಯ ಮಾಡಿಕೊಂಡು ಅವರಿಗೆ ನೀರು ಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನಮಗೆ ಗೌರವ ಕೊಟ್ಟಿದ್ದಕ್ಕೆ ಜಾರಕಿಹೊಳಿಗೆ ಅಭಿನಂದನೆ: ಎಚ್‍ಡಿಕೆ

  • ಐ ಡೋಂಟ್ ಕೇರ್, ಐ ಡೋಂಟ್ ಲೈಕ್ – ಲಸಿಕೆ ಬೇಡವೆಂದು ಹಠ ಹಿಡಿದ ವೃದ್ಧ

    ಐ ಡೋಂಟ್ ಕೇರ್, ಐ ಡೋಂಟ್ ಲೈಕ್ – ಲಸಿಕೆ ಬೇಡವೆಂದು ಹಠ ಹಿಡಿದ ವೃದ್ಧ

    ಚಾಮರಾಜನಗರ: ಲಸಿಕೆ ಹಾಕಲು ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿದ್ದ ವೇಳೆ ಐ ಡೋಂಟ್ ಕೇರ್, ಐ ಡೋಂಟ್ ಲೈಕ್ ಎಂದು ಇಂಗ್ಲಿಷ್ ಡೈಲಾಗ್‍ಗಳ ಮೂಲಕ ವೃದ್ಧ ವ್ಯಾಕ್ಸಿನ್ ನಿರಾಕರಿಸಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಚಾಮರಾಜನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ ಕಳೆದ ಎರಡ್ಮೂರು ತಿಂಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ನರ್ಸ್ ಮತ್ತು ಆಶಾ ಕಾರ್ಯಕರ್ತೆಗೆ ಐ ಡೋಂಟ್ ಲೈಕ್, ಐ ಡೋಂಟ್ ಕೇರ್, ಸ್ಟಾಪ್ ಮೀ ಎಂದೆಲ್ಲಾ ಡೈಲಾಗ್ ಹೊಡೆದು ನಾನು ಲಸಿಕೆ ಪಡೆಯುವುದಿಲ್ಲ ಎಂದು ಹಠ ಹಿಡಿದು ವೃದ್ಧ ಲಸಿಕೆ ನಿರಾಕರಿಸಿದ್ದಾರೆ. ಇದನ್ನೂ ಓದಿ: ಜನವರಿ 1 ರಿಂದ ಎಟಿಎಂ ಶುಲ್ಕ ಹೆಚ್ಚಳ

    ಲಸಿಕೆ ಹಾಕಿಸಿಕೊಂಡರೆ 100 ವರ್ಷ ಬದುಕ್ತೀನಾ? 100 ವರ್ಷ ಬದುಕುವ ಹಾಗೇನಾದರು ಇದ್ದರೆ ಲಸಿಕೆ ಕೊಡಿ ಇಲ್ಲದಿದ್ದರೆ ಬೇಡ. ವ್ಯಾಕ್ಸಿನ್ ಹಾಕಿಸಿಕೊಮಡರು ಸಾಯ್ತಿನಿ, ಇಲ್ಲದಿದ್ದರೂ ಸಾಯ್ತಿನಿ, ಐಡೋಂಟ್ ಕೇರ್ ಕೊರೊನಾ ಎಂದೆಲ್ಲಾ ಕುಟುಂಬ ಸದಸ್ಯರ ಮುಂದೆಯೇ ವೃದ್ಧ ಕಿರಿಕ್ ಮಾಡಿದ್ದಾರೆ. ಸದ್ಯ ಈ ಹಳೇ ವೀಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮಧ್ಯಾಹ್ನ ನಿದ್ದೆ ಮಾಡುವ ಸೊಸೆಗೆ ಗೂಸಾ ಕೊಟ್ಟ ಅತ್ತೆ, ಮಾವ

  • ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ- ಕತ್ತು, ಹೊಟ್ಟೆಗೆ ಚಾಕು ಇರಿದು ನಾಲ್ವರ ಕೊಲೆ

    ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ- ಕತ್ತು, ಹೊಟ್ಟೆಗೆ ಚಾಕು ಇರಿದು ನಾಲ್ವರ ಕೊಲೆ

    ಚಾಮರಾಜನಗರ: ವೈಯಕ್ತಿಕ ದ್ವೇಷಕ್ಕೆ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗುಂಡ್ಲುಪೇಟೆ ಪಟ್ಟಣದ ಜಾಕೀರ್ ಹುಸೇನ್ ನಗರದಲ್ಲಿ ಕೊಲೆ ನಡೆದಿದೆ.

    ಜಾಕೀರ್ ಹುಸೇನ್ ನಿವಾಸಿಗಳಾದ ಜಕಾವುಲ್ಲಾ, ಇದ್ರೀಶ್, ಪೈಜಲ್ ಹಾಗೂ ಮತ್ತೋರ್ವ ಕೊಲೆಯಾದ ದುರ್ದೈವಿಗಳು. ಮೃತರು ಪಟ್ಟಣದ ಪುರಸಭೆ ಸದಸ್ಯ ನೂರುಲ್ಲಾ ಗುಂಪಿನವರಾಗಿದ್ದರು. ಎರಡು ಕುಟುಂಬಗಳ ನಡುವಿನ ಕಲಹದಿಂದಾಗಿ ಕೊಲೆ ನಡೆದಿದೆ ಎನ್ನಲಾಗಿದೆ.

    ರಂಜಾನ್ ಮುಗಿದ ಬಳಿಕ ಮಂಗಳವಾರ ರಾತ್ರಿ 10 ಗಂಟೆ ವೇಳೆಗೆ ನಡೆದ ಗಲಾಟೆಯಲ್ಲಿ ಅಸ್ಲಾಂ, ಜಮೀರ್ ಸಂಗಡಿಗರು ಜಕಾವುಲ್ಲಾ, ಇದ್ರೀಶ್, ಪೈಜಲ್ ಮೇಲೆ ದಾಳಿ ಮಾಡಿ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮೂವರು ಸ್ಥಳದಲ್ಲಿ ಮೃತಪಟ್ಟರೆ, ಓರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮತ್ತೋರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಈ ಸಂಬಂಧ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೈದ ದುಷ್ಕರ್ಮಿಗಳು ತಲೆ ಮರೆಸಿಕೊಂಡಿದ್ದಾರೆ. ಕೊಲೆ ನಡೆದಿದ್ದು ಯಾಕೆ? ಯಾರೆಲ್ಲ ಭಾಗಿಯಾಗಿದ್ದರು ಎನ್ನುವ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ರಾತ್ರಿ ಸ್ಥಳದಲ್ಲಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟರು.

    ಮೂಲಗಳ ಪ್ರಕಾರ ಪಟ್ಟಣದ ಪುರಸಭೆ ಸದಸ್ಯ ನೂರುಲ್ಲಾ ಗುಂಪಿನ ಮತ್ತು ಮತ್ತೊಂದು ಗುಂಪಿನ ನಡುವೆ ಹಿಂದೆಯೂ ಘರ್ಷಣೆ ನಡೆದಿತ್ತು. ಆಗ ಕೆಲ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಹೀಗಾಗಿ ಎರಡು ಗುಂಪುಗಳ ನಡುವೆ ವೈಷಮ್ಯ ಜೋರಾಗಿಯೇ ವಿತ್ತು. ಇದೇ ವಿಚಾರವಾಗಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡು ಮತ್ತೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ.

  • 11 ವರ್ಷ ಜೈಲುವಾಸ ಅನುಭವಿಸಿದ್ದ ಹಾಡುಗಾರನಿಗೆ ಬೇಕಿದೆ ಆಟೋ ನೆರವು

    11 ವರ್ಷ ಜೈಲುವಾಸ ಅನುಭವಿಸಿದ್ದ ಹಾಡುಗಾರನಿಗೆ ಬೇಕಿದೆ ಆಟೋ ನೆರವು

    ಚಾಮರಾಜನಗರ: “ಒಳಿತು ಮಾಡು ಮನುಸ ನೀನು ಇರೋದು ಮೂರು ದಿವಸ” ಹಾಡನ್ನು ಹಾಡಿ ಸಾಮಾಜಿಕ ಜಾಲತಾಣದಲ್ಲಿ ಹವಾ ಎಬ್ಬಿಸಿರುವ ಹಾಡುಗಾರರಿಗೆ ಜೀವನದ ಬಂಡಿ ಓಡಿಸಲು ಆಟೋದ ಅಗತ್ಯವಿದೆ.

    ಜಿಲ್ಲೆಯ ಬಾಗಲಿಯ ಮಹಾದೇವ್ ಸ್ವಾಮಿ ಅವರು ಇದೀಗ ಕರುನಾಡಿನ ಮನೆ ಮಾತಾಗಿರುವ ಹಾಡುಗಾರನಾಗಿದ್ದಾರೆ. ಇವರ ವಯಸ್ಸು, 34 ವರ್ಷ, ಪತ್ನಿ, ಮಗು, ತಾಯಿಯೊಂದಿಗೆ ವಾಸವಾಗಿದ್ದಾರೆ. ತಾನು ಮಾಡದ ತಪ್ಪಿಗೆ ಜೀವಾವಧಿ ಶಿಕ್ಷೆ ಅನುಭವಿಸಿದ್ರು.

    ಜೈಲಿನಲ್ಲಿ ಕಷ್ಟ ಅನುಭವಿಸುತ್ತಿದ್ದ ಮಹಾದೇವ್ ಸ್ವಾಮಿ ಆತ್ಮಹತ್ಯೆಗೆ ವಿಫಲ ಪ್ರಯತ್ನ ಮಾಡಿದ್ರು. ತನ್ನ ತಾಯಿ-ತಂಗಿಗಾಗಿ ಬದುಕಬೇಕೆಂಬ ಹಠ ತೊಟ್ಟರು. ಅದೊಂದು ದಿನ ಜೈಲಿನಲ್ಲಿ ಐಪಿಎಸ್ ಅಧಿಕಾರಿ ಮುಂದೆ ದೇವರ ನಾಮ ಹಾಡಿ ಮೆಚ್ಚುಗೆ ಗಳಿಸಿದ್ರು. ಸತತ 11 ವರ್ಷ 3 ತಿಂಗಳು ಜೈಲುವಾಸ ಅನುಭವಿಸಿ ಜೈಲಿನಿಂದ ಬಿಡುಗಡೆಗೊಂಡು ಮುಂದಿನ ದಾರಿ ಕಾಣದೇ ಇದ್ದರು.

    ಸ್ವಂತ ಪದಗಳನ್ನು ಕಟ್ಟಿ ಜನಪದ ಗೀತೆಗಳನ್ನು ಹಾಡುವುದರಲ್ಲಿ ನಿಪುಣನಾಗಿದ್ದ ಮಹಾದೇವ್ ಸ್ವಾಮಿಗೆ ಖಾಸಗಿ ವಾಹಿನಿಯೊಂದರಲ್ಲಿ ಹಾಡುವ ಅವಕಾಶ ಒದಗಿಬಂತು. ಅಲ್ಲಿ `ಒಳಿತು ಮಾಡು ಮನುಸ ನೀನು ಇರೋದು ಮೂರು ದಿವಸ’ ಅನ್ನೋ ಹಾಡನ್ನು ಹಾಡಿದ್ದಕ್ಕೆ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.

    ಕಿರುತೆರೆಯಲ್ಲಿ ಸತತ 8 ವಾರಗಳನ್ನು ತನ್ನ ವಿಭಿನ್ನ ಶೈಲಿಯ ಹಾಡಿನಿಂದ ರಂಜಿಸಿರುವ ಗ್ರಾಮೀಣ ಪ್ರತಿಭೆ ಮಹಾದೇವ್ ಸ್ವಾಮಿ ಜನರ ಮೆಚ್ಚುಗೆ ಗಳಿಸಿದ್ದಾರೆ. ಜೀವನ ನಿರ್ವಹಣೆಗೆ ಅಲ್ಲೊಂದು ಇಲ್ಲೊಂದು ಸಿಗುವ ಅರ್ಕೆಸ್ಟ್ರಾಗಳಲ್ಲಿ ಹಾಡಿ ಬರುವ ಅಲ್ಪ ಆದಾಯದಲ್ಲಿ ಜೀವನ ಕಟ್ಟಿಕೊಂಡಿದ್ದಾರೆ.

    ಕಿತ್ತು ತಿನ್ನುವ ಬಡತನ, ಸಂಬಂಧಿಕರಿಂದ ದೂರ ಉಳಿದಿರುವ ಸ್ವಾಮಿ ಪತ್ನಿ ಮತ್ತು ಒಂದು ಮುದ್ದಾದ ಹೆಣ್ಣು ಮಗುವಿನೊಂದಿಗೆ ವಾಸವಾಗಿದ್ದು. ಮಗುವಿನ ಮುಂದಿನ ಭವಿಷ್ಯ ಹೇಗೆ ಅನ್ನೋ ಚಿಂತೆಯಲ್ಲಿದ್ದಾರೆ. ಕಲೆಯನ್ನು ಮುಂದುವರಿಸಲು ಹಾಗೂ ಸ್ವಾಭಿಮಾನದಿಂದ ಜೀವನ ಮಾಡಲು ಯಾರಾದ್ರೂ ದಾನಿಗಳು ಆಟೋ ನೀಡಿದ್ರೆ ಸ್ವಾಭಿಮಾನದ ಜೀವನ ನಡೆಸಲು ಸಹಾಯವಾಗುತ್ತಾದೆ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ನೆರವು ಬಯಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=i7yRu5-F4P4

  • ಗುಂಡ್ಲುಪೇಟೆ ಉಪಚುನಾವಣೆ: ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ನಡುವೆ ಕಲ್ಲು ತೂರಾಟ

    ಗುಂಡ್ಲುಪೇಟೆ ಉಪಚುನಾವಣೆ: ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ನಡುವೆ ಕಲ್ಲು ತೂರಾಟ

    ಚಾಮರಾಜನಗರ: ಗುಂಡ್ಲುಪೇಟೆ ಉಪಚುನಾವಣಾ ಕಣ ಅಕ್ಷರಶಃ ರಣರಂಗವಾಗಿದೆ. ಒಂದು ಕಡೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದರೆ, ಮತ್ತೊಂದು ಕಡೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಕಲ್ಲು ತೂರಾಟ ನಡೆಯಿತು. ಇದನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸ ನಡೆಸಿದರು.

    ಗುಂಡ್ಲುಪೇಟೆ ಉಪಚುನಾವಣಾ ಕಣ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಇಂದು ಎರಡು ಪಕ್ಷದ ಅಭ್ಯರ್ಥಿಗಳು ಉಪಚುನಾವಣೆಯ ನಾಮಪತ್ರ ಸಲ್ಲಿಸಿದ್ರು. ಇದಕ್ಕೂ ಮುನ್ನ ಎರಡು ಪಕ್ಷದ ಅಭ್ಯರ್ಥಿಗಳು ಪಕ್ಷ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ಗುಂಡ್ಲುಪೇಟೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ರು. ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಮೆರವಣಿಗೆ ನಡೆಸಿದ್ರೆ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ ಪ್ರಸಾದ್ ಅವರು ಸಚಿವ ಯು.ಟಿ.ಖಾದರ್ ಜೊತೆಗೂಡಿ ಭರ್ಜರಿ ರೋಡ್ ಶೋ ಮಾಡಿದ್ರು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿಯ ಸಾವಿರಾರು ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ 766 ರಲ್ಲಿರುವ ತಾಲೂಕು ಕಚೇರಿ ಆವರಣದ ಮುಂದೆ ಜಮಾವಣೆಗೊಂಡರು.

    ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತು. ಇದಾದ ಬಳಿಕ ಎರಡು ಪಕ್ಷಗಳ ಕಾರ್ಯಕರ್ತರು ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಈ ಹಂತದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಪ್ರಯತ್ನಿಸಿದರು. ಈ ವೇಳೆ ಪೊಲೀಸ್ ರ ಮಾತು ಕೇಳದೆ ಕಾರ್ಯಕರ್ತರು ಕಲ್ಲು ತೂರಾಟ ಮಾಡಲು ಮುಂದಾದರು. ಪರಿಸ್ಥಿತಿ ಉದ್ವಿಗ್ನ ಸ್ಥಿತಿಗೆ ತಲುಪಿದ ಕಾರಣ ಪೊಲೀಸರು ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ರು. ಕಲ್ಲು ತೂರಾಟ ಹಾಗೂ ಲಾಠಿ ಚಾರ್ಚ್ ವೇಳೆ ಎರಡು ಪಕ್ಷದ ಕಾರ್ಯಕರ್ತರಿಗೆ ಹಾಗೂ ಪೊಲೀಸರಿಗೆ ಸಣ್ಣ ಪುಟ್ಟಗಾಯಗಳಾಗಿದ್ದು, ಗಾಯಳುಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಒಟ್ಟಿನಲ್ಲಿ ಶಾಂತಿಯುತವಾಗಿ ನಡೆಯಬೇಕಿದ್ದ ನಾಮಪತ್ರ ಸಲ್ಲಿಕೆ ಕಾರ್ಯ, ಅಕ್ಷರಶಃ ರಣ ರಂಗವಾಗಿದ್ದು ಸುಳ್ಳಲ್ಲ. ದಿನದಿಂದ ದಿನಕ್ಕೆ ಚುನಾವಣಾ ಕಣ ರಂಗೇರುತ್ತಿದ್ದು, ಮುಂದಿನ ದಿಗಳಲ್ಲಿ ಎರಡು ಪಕ್ಷಗಳ ಚುನಾವಣಾ ಕುಸ್ತಿ ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕಿದೆ

  • ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಸಿಲುಕಿದ ಆನೆಯ ರಕ್ಷಣೆ

    ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಸಿಲುಕಿದ ಆನೆಯ ರಕ್ಷಣೆ

    ಚಾಮರಾಜನಗರ: ಆನೆಯೊಂದು ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಸಿಲುಕಿಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ನಡೆದಿದೆ.

    ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿರುವ ಕೃಷ್ಣಯ್ಯನ ಕಟ್ಟೆ ಎಂಬಲ್ಲಿ ಆನೆ ಕೆಸರಿನಲ್ಲಿ ಸಿಲುಕಿಕೊಂಡಿತ್ತು. ಭೀಕರ ಬರಗಾಲದಿಂದ ಅಲ್ಪಸ್ವಲ್ಪ ನೀರಿದ್ದ ಕಾರಣ ಈ ಘಟನೆ ನಡೆದಿದೆ.

    ಇಂದು ಬೆಳಗ್ಗೆ ಆನೆಗಳು ನೀರು ಕುಡಿಯಲು ಬಂದಾಗ ಒಂದು ಆನೆ ಕೆಸರಿನಲ್ಲಿ ಸಿಕ್ಕಿಕೊಂಡಿತ್ತು. ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿ ಆನೆ ಕೆಸರಿನಲ್ಲಿ ಸಿಲುಕಿರುವ ದೃಶ್ಯ ಕಂಡು ಜೆಸಿಬಿ ಯಂತ್ರ ತರಿಸಿ ಆನೆಯನ್ನು ಮೇಲೆತ್ತಿ ರಕ್ಷಿಸಿದ್ದಾರೆ.

    https://www.youtube.com/watch?v=ROnJakgagu8

     

  • 2 ವರ್ಷಗಳ ಕಾಲ ಬಿಳಿರಂಗನ ಬೆಟ್ಟದ ರಂಗನಾಥ ಸ್ವಾಮಿ ದೇವಾಸ್ಥಾನ ಬಂದ್

    2 ವರ್ಷಗಳ ಕಾಲ ಬಿಳಿರಂಗನ ಬೆಟ್ಟದ ರಂಗನಾಥ ಸ್ವಾಮಿ ದೇವಾಸ್ಥಾನ ಬಂದ್

    ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಬಿಳಿಗಿರಿ ರಂಗನಾಥ್ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯದ ಹಿನ್ನೆಲೆಯಲ್ಲಿ ಈ ತಿಂಗಳ 15 ರಿಂದ ಮುಂದಿನ ಎರಡು ವರ್ಷಗಳ ಕಾಲ ದೇವಾಲಯವನ್ನು ಮುಚ್ಚಲಾಗುತ್ತಿದೆ.

    ಸುಮಾರು 500 ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ದೇವಾಲಯ ಶಿಥಿಲಗೊಂಡಿರುವುದರಿಂದ ದೇವಾಲಯವನ್ನು ಸದ್ಯ 2.90 ಕೋಟಿ ರೂಪಾಯಿ ವೆಚ್ಚದಲ್ಲಿ ದುರಸ್ಥಿ ಮಾಡಲಾಗುತ್ತಿದೆ. ರಾಜ್ಯ ಪುರಾತತ್ವ ಇಲಾಖೆಯಿಂದ ಈಗಾಗಲೇ ಹಣ ಬಿಡುಗಡೆಯಾಗಿದ್ದು, ಮುಂದಿನ ವಾರದಿಂದ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಪ್ರಾರಂಭವಾಗಲಿದೆ.

    ದೇವಸ್ಥಾನದ ಕಾಮಗಾರಿ ಹಿನ್ನೆಲೆಯಲ್ಲಿ ಭಕ್ತಾದಿಗಳು ಮಾರ್ಚ್ 15 ರವರೆಗೆ ರಂಗನಾಥ್ ಸ್ವಾಮಿಯ ದರ್ಶನವನ್ನು ಪಡೆಯಬಹುದಾಗಿದೆ. ಮಾರ್ಚ್ 15ರ ನಂತರ ಪೂಜೆ ವಿಧಿವಿಧಾನಗಳ ಮೂಲಕ ದೇವರ ಹಾಗೂ ಅಮ್ಮನವರ ವಿಗ್ರಹಗಳನ್ನು ಮುಚ್ಚಿಡಲಾಗುತ್ತದೆ. ಮಾರ್ಚ್ 18 ರಂದು ಧಾರ್ಮಿಕ ದತ್ತಿ ಇಲಾಖೆಗೆ ದೇವಾಲಯವನ್ನು ಹಸ್ತಾಂತರ ಮಾಡಲಾಗುತ್ತದೆ. ಈ ಹಿಂದೆ ಇದ್ದ ಪ್ರಾಚೀನ ಶೈಲಿಯ ಮಾದರಿಯಲ್ಲಿ ದೇವಾಲಯವನ್ನು ನಿರ್ಮಾಣ ಮಾಡಲಾಗುತ್ತದೆ. ಮುಂದಿನ ಎರಡು ವರ್ಷಗಳ ಕಾಲ ದೇವಾಲಯದಲ್ಲಿ ನಡೆಯುವ ಚಿಕ್ಕ ಮತ್ತು ದೊಡ್ಡ ರಥೋತ್ಸವಗಳನ್ನು ಕೂಡ ರದ್ದುಗೊಳಿಸಲಾಗಿದೆ.

     

  • ಬಿಳಿಗಿರಿ ರಂಗನ ಬೆಟ್ಟದಲ್ಲಿ ನಿಯಂತ್ರಣಕ್ಕೆ ಬಂದ ಬೆಂಕಿ

    ಬಿಳಿಗಿರಿ ರಂಗನ ಬೆಟ್ಟದಲ್ಲಿ ನಿಯಂತ್ರಣಕ್ಕೆ ಬಂದ ಬೆಂಕಿ

    ಚಾಮರಾಜನಗರ: ಕಳೆದ ಎಂಟು ದಿನಗಳಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಮೂರು ದಿನಗಳಿಂದ ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಣಾ ಪ್ರದೇಶ ಅಕ್ಷರಶಃ ಬೆಂಕಿಯಿಂದ ಹೊತ್ತಿ ಉರಿದಿತ್ತು. ಇದೀಗ ಬೆಂಕಿಯನ್ನು ನಂದಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

    ಬೆಂಕಿ ಜ್ವಾಲೆಯ ನಡುವೆ ಅರಣ್ಯ ಇಲಾಖೆ ಸಿಬ್ಬಂದಿಗಳು ಹಗಲಿರುಳು ನಿದ್ದೆ, ಊಟವಿಲ್ಲದೇ ನಡೆಸಿದ ಕಾರ್ಯಚರಣೆಯ ಫಲವಾಗಿ ಬೆಂಕಿ ಸಂಪೂರ್ಣ ಹತೋಟಿಗೆ ಬಂದಿದೆ. ಕಿಡಿಗೇಡಿಗಳು ಹಚ್ಚಿದ್ದ ಬೆಂಕಿಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ಸಾವಿರಕ್ಕೂ ಅಧಿಕ ಎಕರೆ ಅರಣ್ಯ ಪ್ರದೇಶ ನಾಶವಾಗಿದೆ. ಅಲ್ಲದೇ ಅಲವಾರು ಪ್ರಾಣಿ ಸಂಕುಲ ಬೆಂಕಿಯ ಕಿನ್ನಾಲೆಗೆ ತುತ್ತಾಗಿವೆ.

    ಬಂಡೀಪುರದ ಕಲ್ಕರೆ, ಗುಂಡ್ರೆ, ಮದ್ದೂರು ಅರಣ್ಯ ಪ್ರದೇಶ ಹಾಗೂ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಣಾ ಪ್ರದೇಶದ ಮದಲೆಮಾವು, ಪುಣಜೂರು, ಬೆಡಗುಳಿ ಪ್ರದೇಶದಲ್ಲಿ ಬಿದ್ದಿದ್ದ ಬೆಂಕಿ ಸಂಪೂರ್ಣ ಹತೋಟಿಗೆ ಬಂದಿದೆ.