Tag: Chamarajapet

  • ಬೆಂಗ್ಳೂರಲ್ಲಿ ಭೀಕರ ಹತ್ಯೆ – ಹಣಕ್ಕಾಗಿ ಮಾಲೀಕನ ಕೈಕಾಲು ಕಟ್ಟಿ, ಕತ್ತು ಹಿಸುಕಿ ಕೊಂದ ಕೆಲಸಗಾರ

    ಬೆಂಗ್ಳೂರಲ್ಲಿ ಭೀಕರ ಹತ್ಯೆ – ಹಣಕ್ಕಾಗಿ ಮಾಲೀಕನ ಕೈಕಾಲು ಕಟ್ಟಿ, ಕತ್ತು ಹಿಸುಕಿ ಕೊಂದ ಕೆಲಸಗಾರ

    ಬೆಂಗಳೂರು: ಹಣಕ್ಕಾಗಿ ಕೆಲಸಗಾರ ವೃದ್ಧ ಮಾಲೀಕನನ್ನು ಭೀಕರವಾಗಿ ಹತ್ಯೆಗೈದ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ.

    ಚಾಮರಾಜಪೇಟೆಯ 4ನೇ ಕ್ರಾಸ್‌ನಲ್ಲಿರುವ ಕಿಂಗ್ಸ್ ಎನ್ಕ್ಲೇವ್ ಅಪಾರ್ಟ್ಮೆಂಟ್‌ನಲ್ಲಿ ಘಟನೆ ನಡೆದಿದ್ದು, ಜುಗ್ಗರಾಜ್ ಜೈನ್(77) ಕೊಲೆಯಾದ ವ್ಯಕ್ತಿ. ಕೆಲಸಗಾರ ಬಿಜೋರಾಮ್ ಆರೋಪಿಯಾಗಿದ್ದಾನೆ.

    Crime-Scene

    ಚಾಮರಾಜಪೇಟೆಯಲ್ಲಿ ದೀಪಂ ಎಲೆಕ್ಟ್ರಿಕಲ್ಸ್‌ನ ಮಾಲೀಕರಾಗಿದ್ದ ಜುಗ್ಗರಾಜ್‌ಗೆ ಇಬ್ಬರು ಮಕ್ಕಳಿದ್ದಾರೆ. ಮೂಲತಃ ರಾಜಸ್ಥಾನದವರಾಗಿದ್ದ ಜುಗ್ಗರಾಜ್, ಕಳೆದ 4 ವರ್ಷಗಳಿಂದ ಚಾಮರಾಜಪೇಟೆಯ ಅಪಾರ್ಟ್ಮೆಂಟ್‌ನಲ್ಲಿ ಒಬ್ಬ ಮಗ ಹಾಗೂ ಸೊಸೆಯೊಂದಿಗೆ ವಾಸವಿದ್ದರು.

    ಜುಗ್ಗರಾಜ್ ಮಗ ಕೆಲಸದ ನಿಮಿತ್ತ ಗೋವಾಗೆ ತೆರಳಿದ್ದರು. ಸೊಸೆ ತನ್ನ ತಾಯಿ ಮನೆಗೆ ಹೋಗಿದ್ದರು. ಮನೆಯಲ್ಲಿ ಜುಗ್ಗರಾಜ್ ಮಾತ್ರವೇ ಇದ್ದ ಸಂದರ್ಭ ಅಂಗಡಿ ಕೆಲಸಗಾರ ಬಿಜೋರಾಮ್ ಮಾಲೀಕನ ಹತ್ಯೆಗೈದಿದ್ದಾನೆ. ಇದನ್ನೂ ಓದಿ: ರಾಯಚೂರಿನ ಪೊಲೀಸ್ ಠಾಣೆಗೆ ದೇಶದಲ್ಲೇ 5ನೇ ಸ್ಥಾನ

    POLICE JEEP

    ಕಳೆದ ಎಂಟು ತಿಂಗಳಿನಿಂದ ಕೆಲಸಕ್ಕೆ ಇದ್ದ ಬಿಜೋರಾಮ್ ಮಂಗಳವಾರ ಮಧ್ಯರಾತ್ರಿ ಸುಮಾರು 12 ಗಂಟೆಗೆ ವೃದ್ಧನ ಕೈ, ಕಾಲು ಕಟ್ಟಿ ಹಾಕಿ, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ದೋಚಿದ್ದಾನೆ. ಇದನ್ನೂ ಓದಿ: ಮೈಕ್ ವಾರ್ ಗಡುವು ಇಂದು ಅಂತ್ಯ- ಅವಧಿ ವಿಸ್ತರಣೆಗೆ ಮುಸ್ಲಿಂ ಮುಖಂಡರ ಆಗ್ರಹ

    ಮುಂಜಾನೆ ಜುಗ್ಗರಾಜ್ ಮೊಮ್ಮಗ ಅಪಾರ್ಟ್ಮೆಂಟ್‌ಗೆ ಬಂದಾಗ ವಿಷಯ ಬೆಳಕಿಗೆ ಬಂದಿದೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಚಾಮರಾಜಪೇಟೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಘಟನೆ ಬಗ್ಗೆ ಸದ್ಯ ತನಿಖೆ ನಡೆಯುತ್ತಿದ್ದು, ಆರೋಪಿಯನ್ನು ಹಿಡಿಯಲು ವಿಶೇಷ ತಂಡದ ರಚನೆ ಮಾಡಲಾಗಿದೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ಹೇಳಿದ್ದಾರೆ.

  • ಬೆಂಗಳೂರಿನಲ್ಲಿ ಸರಣಿ ಸ್ಫೋಟ – ಮೂವರು ಸಾವು, ನಾಲ್ವರ ಸ್ಥಿತಿ ಗಂಭೀರ

    ಬೆಂಗಳೂರಿನಲ್ಲಿ ಸರಣಿ ಸ್ಫೋಟ – ಮೂವರು ಸಾವು, ನಾಲ್ವರ ಸ್ಥಿತಿ ಗಂಭೀರ

    ಬೆಂಗಳೂರು: ನಗರದಲ್ಲಿ ಸರಣಿ ಸ್ಫೋಟಗೊಂಡು ಮೂವರು ಸಾವನ್ನಪ್ಪಿದ್ದು ನಾಲ್ವರು ಗಾಯಗೊಂಡಿರುವ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ. ಇದನ್ನೂ ಓದಿ: ಸೊಸೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬಲವಂತವಾಗಿ ಕೋಳಿ ರಕ್ತ ಕುಡಿಸಿದ ಮಾವ!

    ಪಟಾಕಿ ಅಂಗಡಿ, ಶ್ರೀ ಪತ್ರ ಕಾಳಿ ಅಮ್ಮನ್ ಲಾರಿ ಸರ್ವೀಸ್ ಗೋದಾಮಿಯಲ್ಲಿ ಪಟಾಕಿ ಸ್ಫೋಟ ಹಾಗೂ ಪಂಕ್ಚರ್ ಅಂಗಡಿಯಲ್ಲಿ ಹೈಡ್ರೋಲಿಕ್ ಸಿಲಿಂಡರ್ ಸ್ಫೋಟ ಸಂಭವಿಸಿದೆ. ನಗರ್ತರಪೇಟೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದರೆ, ಶ್ರೀ ಪತ್ರಕಾಳಿ ಅಮ್ಮನ್ ಲಾರಿ ಸರ್ವೀಸಸ್ ಗೋಡೌನ್‍ನಲ್ಲಿ ಪಟಾಕಿ ಸ್ಫೋಟಗೊಂಡು ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನೂ ಪಟಾಕಿ ಸ್ಫೋಟದಿಂದ ಮೃತರ ದೇಹ ಛಿದ್ರ ಛಿದ್ರಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಇದೀಗ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದಾರೆ.

    Cylinder Explosion

    ಮೃತರನ್ನು ಅಸ್ಲಾಂ, ಫಯಾಜ್, ಮನೋಹರ್ ಎಂದು ಗುರುತಿಸಲಾಗಿದೆ. ಸ್ಫೋಟದ ವೇಳೆ ಪಂಕ್ಚರ್ ಅಂಗಡಿ ಮುಂದೆ ನಿಂತಿದ್ದ 10ಕ್ಕೂ ಹೆಚ್ಚು ವಾಹನಗಳು ಜಖಂ ಆಗಿದ್ದು, ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಇದೀಗ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಘಟನಾ ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: 17 ವರ್ಷದ ದಾಂಪತ್ಯ ಅಂತ್ಯಗೊಳಿಸಿ ಡೈವೋರ್ಸ್ ಪಾರ್ಟಿ ಮಾಡಿದ ಮಹಿಳೆ

    ಈ ಸಂಬಂಧ ಡಿಸಿಪಿ ಮಾತನಾಡಿ, ಬ್ಲಾಸ್ಟ್ ಆಗಿರೋದು ಸಿಲಿಂಡರ್, ಶಾರ್ಟ್ ಸರ್ಕ್ಯೂಟ್ ಅಲ್ಲ. ಎಫ್ ಎಸ್ ಎಲ್ ಅಧಿಕಾರಿಗಳು ಬರುತ್ತಾರೆ ಎಂದು ತಿಳಿಸಿದ್ದಾರೆ.

  • ಚಾಮರಾಜಪೇಟೆಯ ರುದ್ರ ಭೂಮಿಯಲ್ಲಿ ಶವಸಂಸ್ಕಾರಕ್ಕೆ ಕ್ಯೂ

    ಚಾಮರಾಜಪೇಟೆಯ ರುದ್ರ ಭೂಮಿಯಲ್ಲಿ ಶವಸಂಸ್ಕಾರಕ್ಕೆ ಕ್ಯೂ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ವೈರಸ್ ರುದ್ರತಾಂಡವವಾಡುತ್ತಿದ್ದು, ದಿನೇ ದಿನೇ ಸೋಂಕಿತರ ಸಾವು ಹೆಚ್ಚಾಗುತ್ತಿದೆ. ಜೊತೆಗೆ ಸೋಂಕು ಇಲ್ಲದರ ಸಾವು ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಬೆಂಗಳೂರಿನ ರುದ್ರಭೂಮಿಯಲ್ಲಿ ಶವಸಂಸ್ಕಾರಕ್ಕೂ ಜನರು ಕ್ಯೂ ನಿಂತಿದ್ದಾರೆ.

    ಚಾಮರಾಜಪೇಟೆಯ ಹಿಂದೂ ರುದ್ರಭೂಮಿಯಲ್ಲಿ ಶವಸಂಸ್ಕಾರಕ್ಕೆ ನೂಕು ನುಗ್ಗಲು ಉಂಟಾಗಿದೆ. ಬೆಂಗಳೂರಿನಲ್ಲಿ ಕೊರೊನಾ ಮಾತ್ರವಲ್ಲ ಬೇರೆ ಬೇರೆ ಕಾಯಿಲೆಗೆ ಚಿಕಿತ್ಸೆ ಸಿಗದೇ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಸ್ಮಶಾನದಲ್ಲಿ ಶವಸಂಸ್ಕಾರಕ್ಕೂ ಜನಜಂಗುಳಿ ಉಂಟಾಗಿದೆ. ಚಾಮರಾಜಪೇಟೆಯ ರುದ್ರ ಭೂಮಿಯಲ್ಲಿ ನೂರಾರು ಜನರು ತಮ್ಮ ತಮ್ಮ ಆಪ್ತರ ಶವವನ್ನು ಸುಡಲು ಕಾಯುತ್ತಿದ್ದಾರೆ.

    ಕೋವಿಡ್ ರೋಗಿಗಳು ಹೊರತುಪಡಿಸಿ ಒಂದೇ ಕ್ಷಣಕ್ಕೆ ಸುಮಾರು 60 ಶವಗಳನ್ನು ಏಕಕಾಲಕ್ಕೆ ಸ್ಮಶಾನದವರು ಸುಟ್ಟು ಹಾಕಿದ್ದಾರೆ. ಆದರೆ ಇವರು ಕೊರೊನಾದಿಂದ ಮೃತಪಟ್ಟವರಲ್ಲ. ಕೊರೊನಾ ಹೊರತುಪಡಿಸಿ ಬೇರೆ ಬೇರೆ ಕಾಯಿಲೆಗೆ ಮೃತಪಟ್ಟಿದ್ದಾರೆ.

    ಬೆಂಗಳೂರಲ್ಲಿ ಕೊರೊನಾ ಸಾವಿನ ಸಂಖ್ಯೆ ದಿಢೀರ್ ಹೆಚ್ಚಳವಾಗಿದೆ. ಭಾನುವಾರ ಒಂದೇ ದಿನ 16 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಕೇವಲ 5 ದಿನದಲ್ಲಿ ಬೆಂಗಳೂರಲ್ಲಿ 50 ಮಂದಿ ಸಾವನ್ನಪ್ಪಿದ್ದಾರೆ. ಜೂನ್ 30ಕ್ಕೆ ಬೆಂಗಳೂರಲ್ಲಿ ಕೊರೊನಾಗೆ 95 ಜನರು ಮೃತಪಟ್ಟಿದ್ದರು. ಆದರೆ ಜುಲೈ 5ಕ್ಕೆ ಕೊರೊನಾಗೆ ಬೆಂಗಳೂರಲ್ಲಿ 145 ಮಂದಿ ಬಲಿಯಾಗಿದ್ದಾರೆ. ಕೇವಲ ಐದೇ ದಿನದಲ್ಲಿ ಬೆಂಗಳೂರಲ್ಲಿ 50 ಮಂದಿ ಮೃತಪಟ್ಟಿದ್ದಾರೆ.