Tag: Chamarajangar

  • ಮುಸ್ಲಿಂ ಯುವತಿ ಸುಹಾನಾಗೆ ಸಚಿವ ಖಾದರ್ ಬೆಂಬಲ

    ಮುಸ್ಲಿಂ ಯುವತಿ ಸುಹಾನಾಗೆ ಸಚಿವ ಖಾದರ್ ಬೆಂಬಲ

    ಚಾಮರಾಜನಗರ: ಖಾಸಗಿ ವಾಹಿನಿಯಲ್ಲಿ ಮುಸ್ಲಿಂ ಯುವತಿ ಸುಹಾನಾ ಸೈಯದ್ ಹಿಂದೂ ಭಕ್ತಿ ಗೀತೆಯನ್ನು ಹಾಡಿದ ಪರಿಣಾಮ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ.ಖಾದರ್ ಯುವತಿಗೆ ನೈತಿಕ ಬೆಂಬಲ ನೀಡಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಧಮ್ಕಿ ಮತ್ತು ಮಾನಸಿಕ ಕಿರುಳ ನೀಡುವುದು ತಪ್ಪು, ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಂತಹ ಘಟನೆಗಳನ್ನು ತಡೆಗಟ್ಟಲು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸೈಬರ್ ಕ್ರೈಂ ಹೊಸ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಖಾದರ್ ಪ್ರತಿಕ್ರಿಯಿಸಿದರು.

    ಈ ರೀತಿಯಾಗಿ ಸಾಮಾಜಿಕ ಜಾಲಂತಾಣಗಳಲ್ಲಿ ಬೆದರಿಕರ ಹಾಕುವರು ಕೇವಲ ಶೇ.1 ರಷ್ಟು ಜನಗಳು ಮಾತ್ರ, ಇಂತಹ ಸಮಸ್ಯೆ, ಗೊಂದಲಗಳನ್ನು ಉಂಟು ಮಾಡುವವರ ವಿರುದ್ಧ ಉಳಿದ ಶೇ.99 ಜನ ಧ್ವನಿ ಎತ್ತಬೇಕು. ಧರ್ಮದ ಮುಖಂಡರು ಜನರಿಗೆ ಉಪದೇಶ ಮಾಡಬೇಕು ಎಂದು ಖಾದರ್ ಹೇಳಿದರು.

    ಇದನ್ನೂ ಓದಿ: ಸಹಿಷ್ಣುತೆಯ ಪಾಠ ಹೇಳೋ ಲದ್ದಿಜೀವಿಗಳು ಈಗ ಎಲ್ಲಿದ್ದಾರೆ- ಸುಹಾನ ವಿಚಾರದಲ್ಲಿ ಪ್ರತಾಪ್ ಸಿಂಹ ಪ್ರಶ್ನೆ

  • Exclusive: ಮಹಿಳಾ ಅಧಿಕಾರಿಗೆ ಚಾಮರಾಜನಗರ ಕಾಂಗ್ರೆಸ್ ಶಾಸಕನಿಂದ ಮಾನಸಿಕ ಕಿರುಕುಳ!

    Exclusive: ಮಹಿಳಾ ಅಧಿಕಾರಿಗೆ ಚಾಮರಾಜನಗರ ಕಾಂಗ್ರೆಸ್ ಶಾಸಕನಿಂದ ಮಾನಸಿಕ ಕಿರುಕುಳ!

    ಚಾಮರಾಜನಗರ: ಸಿಎಂ ಸಂಸದೀಯ ಕಾರ್ಯದರ್ಶಿ ಹಾಗೂ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಮಹಿಳಾ ಅಧಿಕಾರಿಯೊಬ್ಬರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಶಾಸಕರು ಸಣ್ಣ ಸಣ್ಣ ವಿಚಾರಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಜಿಲ್ಲಾ ಸಮಾಜಕಲ್ಯಾಣ ಇಲಾಖೆ ಮಹಿಳಾ ಅಧಿಕಾರಿಯಾಗಿರುವ ಸರಸ್ವತಿ ಆರೋಪಿಸಿದ್ದಾರೆ.

    ಶಾಸಕ ಪುಟ್ಟರಂಗೇಗೌಡ ಅಧಿಕಾರಿಯನ್ನು ದುರುಪಯೋಗ ಮಾಡಿಕೊಳ್ಳಲು ಮುಂದಾಗಿದ್ದು, ಇದಕ್ಕೆ ನಾನು ನಿರಾಕರಿಸಿದ್ದಕ್ಕೆ ಪ್ರತಿನಿತ್ಯವೂ ಒಂದೆಲ್ಲಾ ಒಂದು ಕಾರಣ ಇಟ್ಟುಕೊಂಡು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಸರಸ್ವತಿ ಹೇಳಿದ್ದಾರೆ.

    ವರ್ಗಾವಣೆಗೆ ಒತ್ತಡ: ಮಹಿಳಾ ಅಧಿಕಾರಿಯನ್ನು ಜಿಲ್ಲೆಯಿಂದ ವರ್ಗಾಯಿಸಲು ಶಾಸಕ ಪುಟ್ಟರಂಗಶೆಟ್ಟಿ ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರಿ ಯೋಜನೆಯನ್ನು ತಿರುಚುವಂತೆ ಒತ್ತಡ ಹೇರುತ್ತಿರುವ ಶಾಸಕ, ಕಾರಣವಿಲ್ಲದೇ ಮಹಿಳಾ ಅಧಿಕಾರಿ ವಿರುದ್ಧ ಕ್ಯಾತೆ ತೆಗೆಯುತ್ತಿದ್ದಾರಂತೆ. ಇದರಿಂದ ಕಾಂಗ್ರೆಸ್ ಶಾಸಕರು ಅಧಿಕಾರಿಗಳು ಮೇಲೆ ಹೇರುತ್ತಿರುವ ಕಿರುಕುಳ ಮತ್ತಷ್ಟು ಹೆಚ್ಚುತ್ತಿದೆ.

    ಧ್ವನಿ ಎತ್ತಲು ಆಗುತ್ತಿಲ್ಲ: ಶಾಸಕರ ಕಿರುಕುಳದಿಂದ ರೋಸಿ ಹೋಗಿರುವ ಅಧಿಕಾರಿ ಶಾಸಕರ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಗುತ್ತಿಲ್ಲ. ಒಂದು ಹಂತದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ದೂರನ್ನು ನೀಡಲು ಮುಂದಾಗಿದ್ದರು. ಆದರೆ ಮಹಿಳಾ ಅಧಿಕಾರಿ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲದೆ ದೂರನ್ನು ನೀಡದೆ ಅಸಹಾಯಕಿಯಾಗಿ ಈಗ ನಿಂತಿದ್ದಾರೆ.

    “ಮೆಂಟಲಿ ತುಂಬಾ ಟಾರ್ಚರ್ ಆಗ್ತಿದೆ. ಅವರು ಯಾರು ಹೇಳಿದ್ರೂ ಕೇಳುತ್ತಿಲ್ಲ. ನಾನು ಟ್ರಾನ್ಫರ್ ತಗೊಂಡು 2 ವರ್ಷ ಆಯ್ತು. ಈಗ ನನನ್ನು ಟ್ರಾನ್ಫರ್ ಮಾಡ್ತಾರೆ. ಮಧ್ಯದಲ್ಲೇ ನಾವು ಕೇಳಿದ್ರೆ ಟ್ರಾನ್ಫರ್ ಸಿಗಲ್ಲ. ಅವರು ಮಿನಿಸ್ಟರ್‍ಗೆ ಲೆಟರ್ ಕೊಟ್ಟಿದ್ದಾರೆ. ಖಾದರ್ ಸರ್‍ಗೆ ಲೆಟರ್ ಕೊಟ್ಟಿದ್ದಾರೆ. ಎಲ್ಲರಿಗೂ ಲೆಟರ್ ಕೊಟ್ಟು ನನ್ನನ್ನು ಟ್ರಾನ್ಫರ್ ಮಾಡಿಸ್ಬೇಕು ಅಂತ ಹೇಳಿದ್ದಾರೆ. ತುಂಬಾ ಟಾರ್ಚರ್ ಆಗ್ತಿದೆ. ಇದು ಈಗಿನದ್ದಲ್ಲ, ಕಳೆದ 7 ತಿಂಗಳಿಂದ ನಡೆಯುತ್ತಿದೆ”
    ಸರಸ್ವತಿ, ಜಿಲ್ಲಾ ಸಮಾಜಕಲ್ಯಾಣ ಇಲಾಖೆ ಮಹಿಳಾ ಅಧಿಕಾರಿ

     

    https://youtu.be/685txtxb4Bc