Tag: chamarajanagr

  • ಸ್ವಾಮೀಜಿ ನಕ್ಸಲೈಟ್ ಆಗ್ಬೇಕಿತ್ತು, ದುರ್ದೈವ ಖಾವಿ ಹಾಕಿದ್ದಾರೆ: ಯತ್ನಾಳ್ ಕಿಡಿ

    ಸ್ವಾಮೀಜಿ ನಕ್ಸಲೈಟ್ ಆಗ್ಬೇಕಿತ್ತು, ದುರ್ದೈವ ಖಾವಿ ಹಾಕಿದ್ದಾರೆ: ಯತ್ನಾಳ್ ಕಿಡಿ

    ಚಾಮರಾಜನಗರ: ಹಿಂದೂ ಧರ್ಮದ ಆಧಾರದ ಮೇಲೆ ನಾವು ವೀರಶೈವ ಲಿಂಗಾಯತರಾಗಿದ್ದೇವೆ. ಪಾಪ ಆ ಸ್ವಾಮೀಜಿ ನಕ್ಸಲೈಟ್ (Naxalite) ಆಗಬೇಕಿತ್ತು. ಕಮ್ಯೂನಿಸ್ಟ್ (Communist) ಆಗಿದ್ದಾರೆ. ದುರ್ದೈವ ಅವರು ಖಾವಿ ಹಾಕಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಕಿಡಿಕಾರಿದ್ದಾರೆ.

    ಚಾಮರಾಜನಗರ (Chamarajanagar) ಜಿಲ್ಲೆ ಬರ ಪ್ರವಾಸಕ್ಕೆ ಬಂದ ಸಂದರ್ಭದಲ್ಲಿ ಗಣಪತಿ ನಮ್ಮ ಸಂಸ್ಕೃತಿಯಲ್ಲ ಎಂಬ ಸಾಣೇಹಳ್ಳಿ ಶ್ರೀ (Sanehalli Shree) ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ಕೇಜ್ರಿವಾಲ್ ಪತ್ನಿಗೆ ದೆಹಲಿ ಹೈಕೋರ್ಟ್ ಬಿಗ್ ರಿಲೀಫ್

    ರಾಜ್ಯೋತ್ಸವ ಪ್ರಶಸ್ತಿ ಸಲುವಾಗಿ ಕೆಲವು ಮಠಾಧೀಶರು ಹಿಂದೂ ವಿರೋಧಿ ಹೇಳಿಕೆ ಕೊಡುತ್ತಿದ್ದಾರೆ. ಮುಂದಿನ ಬಾರಿಯಾದರೂ ಕೊಡಲಿ ಎಂಬುದು ಅವರ ಉದ್ದೇಶವಾಗಿದೆ. ಈಗಾಗಲೇ ಒಬ್ಬ ಸ್ವಾಮೀಜಿಗೆ ಕೊಟ್ಟಿದ್ದಾರೆ. ಪ್ರಶಸ್ತಿ, ಜೀವನ ವೆಚ್ಚ ಎಲ್ಲವನ್ನೂ ಕೊಡುತ್ತಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಮೋದಿಗೆ ನಾಚಿಕೆ ಆಗಬೇಕು: ಹೆಚ್‌ಕೆ ಪಾಟೀಲ್ ಕಿಡಿ

    ಹಿಂದೂ ಧರ್ಮದ ವಿರುದ್ಧ ಮಾತನಾಡಲೂ ಪೇಯ್ಡ್ ಸಾಹಿತಿಗಳಿದ್ದರೆ, ಪೇಯ್ಡ್ ಭಗವಾಧ್ವಜ ಹಾಕಿಕೊಂಡ ಕಳ್ಳರಿದ್ದಾರೆ. ಹಿಂದೂ ವಿರೋಧಿ ಹೇಳಿಕೆ ಕೊಟ್ಟರೆ ಮಠಕ್ಕೆ ಕೋಟ್ಯಂತರ ರೂ. ಅನುದಾನ ಕೊಡುತ್ತಾರೆ ಎಂಬ ನಂಬಿಕೆ. ಹೀಗಾಗಿ ಹಿಂದೂ ಸನಾತನ ಧರ್ಮದ ಬಗ್ಗೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದುರಾಡಳಿತ ಪ್ರಶ್ನೆ ಮಾಡಿದ್ದಕ್ಕೆ ನನ್ನನ್ನು ಬರ ಅಧ್ಯಯನ ತಂಡದಿಂದ ಹೊರಗಿಟ್ಟಿದ್ದಾರೆ: ರೇಣುಕಾಚಾರ್ಯ ಅಸಮಾಧಾನ

  • ಅಪಘಾತವಾಗಿ ರಕ್ತದ ಮಡುವಿನಲ್ಲಿದ್ದರೂ ನೀರು ಕೊಡಿ ಅಂದ್ರು- ವೀಡಿಯೋ ಮಾಡ್ತಾ ನಿಂತ ಕಂಡಕ್ಟರ್, ಡ್ರೈವರ್

    ಅಪಘಾತವಾಗಿ ರಕ್ತದ ಮಡುವಿನಲ್ಲಿದ್ದರೂ ನೀರು ಕೊಡಿ ಅಂದ್ರು- ವೀಡಿಯೋ ಮಾಡ್ತಾ ನಿಂತ ಕಂಡಕ್ಟರ್, ಡ್ರೈವರ್

    ಚಾಮರಾಜನಗರ: ಅಪಘಾತಕ್ಕೀಡಾಗಿ ನೀರು ಕೊಡಿ ಎಂದು ಕೂಗಾಡಿದರೂ ಅವರಿಗೆ ನೀರು ಕೊಡದೆ ಅಮಾನವೀಯತೆ ತೋರಿದ ಘಟನೆಯೊಂದು ಚಾಮರಾಜನಗರದಲ್ಲಿ ನಡೆದಿದೆ.

    ಹೌದು. ಶನಿವಾರ ಗುಂಡ್ಲುಪೇಟೆ ಯಿಂದ ಊಟಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ ಬಂಡೀಪುರದ ಬಳಿ  ಅಪಘಾತ ನಡೆದಿತ್ತು. ಘಟನೆಯಲ್ಲಿ ಬೈಕ್ ಸವಾರರಾದ ತೆರಕಣಾಂಬಿಯ ಸೋಮಣ್ಣ, (22), ಗುಂಡ್ಲುಪೇಟೆ ಯ ಗೋಕುಲ್(21) ಗಂಭೀರ ಗಾಯಗೊಂಡು ಸಾವು-ಬದುಕಿನ ಮಧ್ಯೆ ಹೋರಾಡುತ್ತಾ ನೀರು ಕೊಡಿ ಎಂದು ಅಂಗಲಾಚಿದ್ದಾರೆ. ಆದರೆ ನೆರೆದಿದ್ದ ಸ್ಥಳೀಯರು ಸೇರಿದಂತೆ ಬಸ್ ಚಾಲಕ ಹಾಗೂ ನಿರ್ವಾಹಕ ತಮ್ಮ ಮೊಬೈಲ್ ನಲ್ಲಿ ದೃಶ್ಯ ಸೆರೆ ಹಿಡಿಯುತ್ತಿದ್ದರೇ ವಿನಃ ಅವರಿಗೆ ನೀರು ಕೊಡುವ ಗೋಜಿಗೆ ಹೋಗಿಲ್ಲ.

    ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಅಮಾನವೀಯತೆ ತೋರಿದ ಡ್ರೈವರ್ ಹಾಗೂ ಕಂಡಕ್ಟರ್ ವಿರುದ್ಧ ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ವಿಡಿಯೋದಲ್ಲಿ, ರಕ್ತದ ಮಡುವಿನಲ್ಲಿ ಬಿದ್ದಿರುವ ಯುವಕರು ದಯಮಾಡಿ ನೀರು ಕೊಡಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಆದರೆ ಅದನ್ನು ಕಿವಿಗೆ ಹಾಕಿಕೊಳ್ಳದ ಬಸ್ ಡ್ರೈವರ್ ಹಾಗೂ ಕಂಡಕ್ಟರ್ ತಮ್ಮ ಪಾಡಿಗೆ ವಿಡಿಯೋ ಮಾಡುವುದರಲ್ಲಿ ಬ್ಯುಸಿಯಾಗಿರುವುದನ್ನು ನಾವು ಕಾಣಬಹುದು.

    ಒಟ್ಟಿನಲ್ಲಿ ನೀರು ಬೇಕೆಂದು ಅಂಗಲಾಚಿದ್ರೂ ಯಾರೂ ನೀರು ನೀಡಿಲ್ಲ. ಅಲ್ಲದೆ ಗಂಭೀರ ಗಾಯಗೊಂಡ ಪರಿಣಾಮ ಯುವಕರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸುಳ್ವಾಡಿ ವಿಷಪ್ರಸಾದ ದುರಂತ- ಪೊಲೀಸರ ನಡೆಯ ಬಗ್ಗೆ ಎದ್ದಿದೆ ಅನುಮಾನ

    ಸುಳ್ವಾಡಿ ವಿಷಪ್ರಸಾದ ದುರಂತ- ಪೊಲೀಸರ ನಡೆಯ ಬಗ್ಗೆ ಎದ್ದಿದೆ ಅನುಮಾನ

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷಪ್ರಸಾದ ಸೇವಿಸಿ 15 ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಇದೀಗ ಪೊಲೀಸರು ನಾಲ್ವರನ್ನು ಜೈಲಿಗಟ್ಟಿದ್ದಾರೆ.

    ರಾತ್ರೋರಾತ್ರಿ ಆರೋಪಿಗಳನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ಈ ಬೆನ್ನಲ್ಲೇ ಜೈಲಿಗಟ್ಟಿದ್ದಾರೆ. ಇದೀಗ ಪೊಲೀಸರ ಈ ನಡೆಯ ಬಗ್ಗೆ ತೀವ್ರ ಅನುಮಾನ ಸೃಷ್ಟಿಯಾಗಿದೆ. ಇದನ್ನೂ ಓದಿ: ಪೊಲೀಸರೇ ನಮ್ಮ ಮನೆಯಲ್ಲಿ ವಿಷ ಇಟ್ಟಿದ್ದಾರೆ – ವಿಷಜಂತು ಅಂಬಿಕಾ ಹೈಡ್ರಾಮ

    ಪೊಲೀಸರ ನಡೆಯಿಂದ ಎದ್ದಿರುವ ಪ್ರಶ್ನೆಗಳೇನು?:
    10 ದಿನ ಕಸ್ಟಡಿಗೆ ಕೇಳಿದ್ದ ಪೊಲೀಸರು ಕೇವಲ 2 ದಿನದಲ್ಲಿ ತನಿಖೆ ಮುಗಿಸಿದ್ದು ಹೇಗೆ?. ಅಂಬಿಕಾಳ ನಡೆ ಪೊಲೀಸರಿಗೆ ಭಯ ತರಿಸಿದೆಯೇ? ಜಿಲ್ಲಾ ಪೊಲೀಸರಿಂದ ನನಗೆ ನ್ಯಾಯ ಸಿಗೋದಿಲ್ಲ ಎಂಬ ಹೇಳಿಕೆ ಪೊಲೀಸರಿಗೆ ನಡುಕ ಹುಟ್ಟಿಸಿದೆಯೇ ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿವೆ.

    ಅಂಬಿಕಾಳ ಬಳಿ ಅಧಿಕಾರಿಗಳು, ರಾಜಕೀಯ ಮುಖಂಡರು ಮತ್ತು ಮಠಾಧೀಶರ ಮಹತ್ತರವಾದ ದಾಖಲೆಗಳಿರುವುದು ನಿಜನಾ. ಯಾಕಂದ್ರೆ ಪದೇ ಪದೇ ಅಂಬಿಕಾ ಮಾಧ್ಯಮದವರ ಮುಂದೆ ಬಂದ್ರೆ ಅಕ್ರಮಗಳನ್ನ ಬಾಯಿ ಬಿಡುವಳೇ ಎಂಬ ಅನುಮಾನ ಪೊಲೀಸರಿಗಿದೆಯೇ ಅನ್ನೋ ಪ್ರಶ್ನೆಯೂ ಮೂಡಿದೆ. ಇದನ್ನೂ ಓದಿ: ಸುಳ್ವಾಡಿ ಕೇಸ್ – ಅಂಬಿಕಾ ಬಳಿಕ ಪೊಲೀಸರ ಮುಂದೆ ವಿಷಸ್ವಾಮಿ ನಾಟಕ!

    ಇಂದು ಮದ್ಯಾಹ್ನವರೆಗೆ ಕಾಲಾವಕಾಶವಿದ್ದರೂ ಮಧ್ಯರಾತ್ರಿ ಹಾಜರಿಪಡಿಸಿದ ಮರ್ಮ ಏನು? ಅಂಬಿಕಾ ಬಳಿ ಇರುವ ಕೆಲವು ದಾಖಲೆ ಪೊಲೀಸರ ಬಳಿಯೂ, ಕೆಲವು ದಾಖಲೆಗಳು ಆಕೆರ ಆಪ್ತರ ಬಳಿ ಇದೆಯೇ? ಅಂಬಿಕಾ ಸಿಬಿಐ ತನಿಖೆ ಕೇಳೋದಾದರೂ ಏಕೆ? ತನ್ನ ಬಳಿ ಇರುವ ದಾಖಲಾತಿಯನ್ನ ಜಿಲ್ಲಾ ಪೊಲೀಸರಿಗೆ ನೀಡಿದರೆ ನಾಶಪಡಿಸುವ ಸಾಧ್ಯತೆ ಇದೆಯೇ ಎಂಬ ಅನುಮಾನ ಇದೆಯೇ? ಸಿಬಿಐ ಮುಂದೆ ಶರಣು ಪಡಿಸಿದರೆ ಅಧಿಕಾರಿಗಳು ಮತ್ತು ರಾಜಕಾರಣಿಗಳ ಮತ್ತೊಂದು ಮುಖ ಕಳಚಿ ಬೀಳಲಿದೆಯೇ ಅನ್ನೋ ಪ್ರಶ್ನೆಗಳ ಸುರಿಮಳೆಯೇ ಇದೀಗ ಎದ್ದಿದೆ. ಇದನ್ನೂ ಓದಿ: ಮಾರಮ್ಮ ದೇವಸ್ಥಾನದ ದುರಂತ – ಆರೋಪಿಗಳು ಜೈಲಿಗೆ ಶಿಫ್ಟ್

    https://www.youtube.com/watch?v=Ejrz4lVX5-4

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಳ್ವಾಡಿ ದುರಂತ- ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದ ತಂದೆಯ ಕಣ್ಣೀರ ಕಥೆ ಓದಿ

    ಸುಳ್ವಾಡಿ ದುರಂತ- ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದ ತಂದೆಯ ಕಣ್ಣೀರ ಕಥೆ ಓದಿ

    ಮೈಸೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷಪ್ರಸಾದ ಸೇವಿಸಿ ಸಾವಿಗೀಡಾದವರ ಒಂದೊಂದು ಮನಕಲಕುವ ಘಟನೆಗಳನ್ನು ಕೇಳಿದ್ರೆ ನಿಮ್ಮ ಮನವೂ ಕಲಕುತ್ತದೆ. ದೇವಸ್ಥಾನದ ಅಡುಗೆ ತಯಾರಿಸಿದ ಪುಟ್ಟಸ್ವಾಮಿ ಸದ್ಯ ಚೇತರಿಸಿಕೊಳ್ಳುತ್ತಿದ್ದು, ಮಗಳನ್ನು ಉಳಿಸಿಕೊಳ್ಳಲು ಪರದಾಡಿದ ತಮ್ಮ ಕಣ್ಣೀರ ಕಥೆಯೊಂದನ್ನು ಪಬ್ಲಿಕ್ ಟಿವಿ ಜೊತೆ ಬಿಚ್ಚಿಟ್ಟಿದ್ದಾರೆ.

    ನನ್ನ ಹೊಟ್ಟೆಗೆ ವಿಷ ಪ್ರಸಾದ ಸೇರಿದೆ ಅಂತ ಗೊತ್ತಿದ್ರೂ ನನ್ನ ಮಗಳನ್ನು ಉಳಿಸಿಕೊಳ್ಳಲು ಶತ ಪ್ರಯತ್ನ ಮಾಡಿದ್ದೆ. ಆದ್ರೆ ಕೊನೆಗೂ ನನ್ನ ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಷ್ಟು ಮಾತ್ರವಲ್ಲದೇ ಆಕೆಯ ಅಂತ್ಯಕ್ರಿಯೆಗೆ ಹೋಗುವ ಅವಕಾಶವನ್ನೂ ದೇವರು ನನಗೆ ನೀಡಿಲ್ಲ ಅಂತ ಪುಟ್ಟಸ್ವಾಮಿ ಕಣ್ಣೀರು ಹಾಕಿದ್ದಾರೆ.

    ಪುಟ್ಟಸ್ವಾಮಿ ಹೇಳಿದ್ದೇನು..?
    ನಾನು ರಾತ್ರಿ ಪಾಳಿಯದಲ್ಲಿ ಕೆಲಸ ಮಾಡುತ್ತಿದ್ದೆ. ಹೀಗಾಗಿ ಮಗಳು ನನ್ನ ನೋಡಲು ಬಂದಿದ್ದಳು. ಬೆಳಗ್ಗೆ ಗುದ್ದಲಿ ಪೂಜೆ ಇತ್ತು. ಆದ್ದರಿಂದ ಅಡುಗೆಗೆ ಸ್ವಲ್ಪ ಸಹಾಯ ಮಾಡಿದೆ. ಅಡುಗೆ ಆದ ಬಳಿಕ ನನ್ನ ಮಗಳು ಊಟ ಮಾಡಿದ್ದಾಳೆ. ಅವಳ ಊಟದಲ್ಲಿ ಅರ್ಧ ಉಳಿದಿತ್ತು. ಆವಾಗ ಆಕೆ ಅಪ್ಪ ನನಗೆ ಬೇಡ ನನಗೆ ಊಟ ಮಾಡಲು ಆಗುತ್ತಿಲ್ಲ ಅಂತ ಹೇಳಿದಳು. ನಾನೂ ಊಟ ಮಾಡಿದೆ ಅಂತ ಪುಟ್ಟಸ್ವಾಮಿ ಹೇಳಿದ್ರು.

    ಸ್ವಲ್ಪ ಹೊತ್ತು ಬಳಿಕ ನನ್ನ ಮಗಳು ಬಿದ್ದು ಒದ್ದಾಡುತ್ತಿದ್ದಳು. ಮಗಳು ಯಾಕೆ ಬಿದ್ದು ಒದ್ದಾಡುತ್ತಿದ್ದಾಳೆ ಅಂತ ಊರಿನ ಆಸ್ಪತ್ರೆಗೆ ಕರೆದುಕೊಂಡು ಬಂದೆ. ಸುಳ್ವಾಡಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿ ಬೇರೆ ಕಡೆ ಅಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿ ಅಂದ್ರು. ಆದ್ರೆ ನಾನು ಬರುವಾಗಲೇ ಅಂಬುಲೆನ್ಸ್ ಹೊರಟಿತ್ತು. ಹೀಗಾಗಿ ನಾನು ಬೈಕಿನಲ್ಲಿ ಆಕೆಯನ್ನು ಸುಳ್ವಾಡಿಯಿಂದ 15 ಕಿ.ಮೀ ದೂರದಲ್ಲಿರುವ ರಾಮಾಪುರಕ್ಕೆ ಕರೆದುಕೊಂಡು ಬಂದೆ ಅಂತ ತಮ್ಮ ದುಃಖ ತೋಡಿಕೊಂಡರು.

    ನನ್ನ ಮಗಳನ್ನು ಆಸ್ಪತ್ರೆಗೆ ಸೇರಿಸಿದಾಗ ನನ್ನ ಹೊಟ್ಟೆಯೂ ತೊಳೆಸಿದಂತೆ ಆಗುತ್ತಿತ್ತು. ಆದ್ರೆ ಮೊದಲು ನನ್ನ ಮಗಳು ಚೆನ್ನಾಗಿರಬೇಕು. ನನಗೆ ಏನಾದ್ರೂ ಪರವಾಗಿಲ್ಲ. ಹೀಗಾಗಿ ಫಸ್ಟ್ ಮಗಳನ್ನು ತೋರಿಸಿ ಆಮೇಲೆ ನಾನು ಆಸ್ಪತ್ರೆಗೆ ಹೋಗುತ್ತೇನೆ ಅಂತ ಯೋಚಿಸಿದೆ. ಅದುವರೆಗೂ ನನ್ನ ಬಗ್ಗೆ ಯಾರ ಜೊತೆನೂ ಹೇಳಿಕೊಂಡಿಲ್ಲ. ಎಲ್ಲರ ಬಳಿಯೂ ನಾನು ಚೆನ್ನಾಗಿದ್ದೇನೆ ಅಂತಾನೇ ಹೇಳುತ್ತಾ ಬಂದೆ. ಆದ್ರೆ ಹೊಟ್ಟೆ ತೊಳೆಸುತ್ತಾ ಇತ್ತು. ವಾಂತಿ ಬರುವಂತೆ ಆಗುತ್ತಿತ್ತು. ನನ್ನ ಚಲನವಲನ ಕಂಡು ಸ್ಥಳೀಯರು ನೀನು ಮೊದಲು ಗಾಡಿ ಹತ್ತು ಅಂತ ಹೇಳುತ್ತಿದ್ದರು. ಆವಾಗ ನಾನು, ನನ್ನ ಮಗಳೇ ಹಿಂಗೆ ಇರುವಾಗ ನಾನು ಫಸ್ಟ್ ಗಾಡಿ ಹತ್ತಿ ಏನು ಮಾಡಲಿ ಅಂತ ಪ್ರಶ್ನಿಸಿದೆ. ನನಗೆ ಆಗಲೇ ತುಂಬಾ ಬೇಜಾರಾಗುತ್ತಿತ್ತು ಅಂತ ದುಃಖಿತರಾದ್ರು.

    ಕೊನೆಗೆ ನನ್ನ ಮಗಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಳು. ಆಕೆ ತೀರಿಕೊಂಡ ನಂತರ ನಾನು ಸತ್ತು ಹೋಗುತ್ತೆನೋ ಅಂತ ನನಗೂ ಹೊಟ್ಟೆ ತೊಳೆಸುತ್ತೆ, ವಾಂತಿ ಬಂದಂಗೆ ಆಗುತ್ತಿದೆ ಅಂತ ಹೇಳಿಕೊಂಡೆ. ಆಮೇಲೆ ಅವರು ನನ್ನನ್ನು ಆಸ್ಪತ್ರೆಗೆ ದಾಖಲಿಸಿದ್ರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಯಾರು ಎಂಬುದನ್ನು ಕಂಡುಹಿಡಿಯಬೇಕು. ಅಲ್ಲದೇ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಅಂತ ಹೇಳಿ ಗದ್ಗದಿತರಾದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಂಡೀಪುರದಲ್ಲಿ ಸಫಾರಿಗೆ ಹೋದಾಗ ದಾಳಿಗೆ ಮುಂದಾದ ಮರಿಯಾನೆ!

    ಬಂಡೀಪುರದಲ್ಲಿ ಸಫಾರಿಗೆ ಹೋದಾಗ ದಾಳಿಗೆ ಮುಂದಾದ ಮರಿಯಾನೆ!

    ಚಾಮರಾಜನಗರ: ಸಫಾರಿಗೆ ತೆರಳಿದ್ದ ವೇಳೆ ಕಾಡಾನೆ ದಾಳಿಯಿಂದ ಪ್ರವಾಸಿಗರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ.

    ಭಾನುವಾರ ಸಂಜೆ ಪ್ರವಾಸಿಗರು ಬಂಡೀಪುರಕ್ಕೆ ಬಂದಿದ್ದರು. ಹೀಗೆ ಬಂದವರು ಸಫಾರಿ ಹೋಗುತ್ತಿದ್ದ ವೇಳೆ ನಾಲ್ಕು ಆನೆಗಳಿದ್ದ ಗುಂಪೊಂದನ್ನು ನೋಡಿದ್ದಾರೆ. ಆದ್ರೆ ಪ್ರವಾಸಿಗರು ತಮ್ಮ ಪಾಡಿಗೆ ತಾವು ಹೋಗುತ್ತಿದ್ದರು. ಇದೇ ಸಂದರ್ಭದಲ್ಲಿ ಗುಂಪಿನಲ್ಲಿದ್ದ ಆನೆಗಳ ಪೈಕಿ ಮರಿಯಾನೆಯೊಂದು ಏಕಾಏಕಿ ದಾಳಿ ಮಾಡಲು ಮುಂದಾಗಿದೆ.

    ಅದೃಷ್ಟವಶಾತ್ ವಾಹನದ ಚಾಲಕನ ಸಮಯ ಪ್ರಜ್ಞೆಯಿಂದ ಪ್ರವಾಸಿಗರು ಪಾರಾಗಿದ್ದಾರೆ. ಮರಿಯಾನೆಗೆ ಪ್ರವಾಸಿಗರು ತೊಂದರೆ ಮಾಡಬಹುದು ಎಂದು ಭಾವಿಸಿ ಈ ದಾಳಿ ಮಾಡಲು ಮುಂದಾಗಿರಬಹುದು ಎಂದು ಅಂದಾಜಿಸಲಾಗಿದೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=o9_ovJwjnIY