Tag: chamarajanagar

  • ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ವೇಷದಲ್ಲಿ ಬಂದು ಶ್ರೀಗಂಧಕ್ಕೆ ಕೊಡಲಿ – 33 ತುಂಡುಗಳು ವಶ, ಆರೋಪಿ ಅರೆಸ್ಟ್

    ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ವೇಷದಲ್ಲಿ ಬಂದು ಶ್ರೀಗಂಧಕ್ಕೆ ಕೊಡಲಿ – 33 ತುಂಡುಗಳು ವಶ, ಆರೋಪಿ ಅರೆಸ್ಟ್

    – ಬಾಲಕ ವಶಕ್ಕೆ, ಇಬ್ಬರು ಪರಾರಿ

    ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ (Male Mahadeshwara Hills) ಭಕ್ತರ ವೇಷದಲ್ಲಿ ಬಂದು ಶ್ರೀಗಂಧ (Sandalwood) ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆ (Forest Department) ಸಿಬ್ಬಂದಿ ಬಂಧಿಸಿದ್ದಾರೆ.

    ಬಂಧಿತನನ್ನು ತಮಿಳುನಾಡು ಮೂಲದ ಸೆಡೆಯಾನ್ ಎಂದು ಗುರುತಿಸಲಾಗಿದೆ. ಆರೋಪಿ ಬೆಟ್ಟದ ಆನೆತಲೆದಿಂಬ ಬಳಿ ಗಂಧದ ತುಂಡುಗಳನ್ನು ಸಾಗಿಸುತ್ತಿದ್ದ. ಬಂಧಿತನಿಂದ 33 ಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಶ್ರೀಗಂಧ ಕಳ್ಳತನ – 41 ಕೆಜಿ ಶ್ರೀಗಂಧ ತುಂಡು ಸಮೇತ ಮೂವರ ಬಂಧನ

    ಮತ್ತೊಂದು ಪ್ರಕರಣದಲ್ಲಿ ಭಕ್ತರಂತೆ ಬಂದು ಗಂಧ ಕಳ್ಳತನಕ್ಕೆ ಯತ್ನಿಸುತ್ತಿದ್ದ ಬಾಲಕನನ್ನು ಅರಣ್ಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಈತನ ಜೊತೆಗಿದ್ದ ಇಬ್ಬರು ಪರಾರಿಯಾಗಿದ್ದಾರೆ. ಹನೂರು ತಾಲೂಕಿನ ಕೊಕ್ಕಬೋರೆ ಪ್ರದೇಶದ ದೊಡ್ಡ ಬರೇಹಳ್ಳದ ಬಳಿ ಶ್ರೀಗಂಧ ಮರ ಕತ್ತರಿಸುವ ವೇಳೆ ಅರಣ್ಯ ಸಿಬ್ಬಂದಿ ದಾಳಿ ನಡೆಸಿದ್ದರು. ಈ ವೇಳೆ ಬಾಲಕ ಸಿಕ್ಕಿಬಿದ್ದಿದ್ದಾನೆ.

    ಕಳ್ಳರು ಭಕ್ತರ ವೇಷದಲ್ಲಿ ಬೆಟ್ಟಕ್ಕೆ ಬಂದು ಮಲೆ ಮಹದೇಶ್ವರ ವನ್ಯಧಾಮದ ಮೀಸಲು ಅರಣ್ಯ ಪ್ರದೇಶ ಪ್ರವೇಶಿಸುತ್ತಿದ್ದರು. ಅಲ್ಲಿ ಗಂಧದ ಮರಗಳನ್ನು ಕತ್ತರಿಸಿ ಕೊಂಡೊಯ್ಯುತ್ತಿದ್ದರು. ಇಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದಾರೆ. ಪರಾರಿಯಾದ ಶ್ರೀಗಂಧ ಕಳ್ಳರನ್ನು ಪೆರುಮಾಳ್ ಹಾಗೂ ಮುರುಗನ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಬಂಡೀಪುರದ ಅರಣ್ಯಕ್ಕೆ ಅಕ್ರಮ ಪ್ರವೇಶ; 6 ಜೀವಂತ ಆಮೆ, 72 ಕೆಜಿ ಶ್ರೀಗಂಧ ತುಂಡು ವಶ – ಆರೋಪಿ ಬಂಧನ

  • ಮಾದಪ್ಪನ ಬೆಟ್ಟದಲ್ಲಿ ಹುಂಡಿ ಎಣಿಕೆ – 29 ದಿನಗಳಲ್ಲಿ 1.70 ಕೋಟಿ ಸಂಗ್ರಹ

    ಮಾದಪ್ಪನ ಬೆಟ್ಟದಲ್ಲಿ ಹುಂಡಿ ಎಣಿಕೆ – 29 ದಿನಗಳಲ್ಲಿ 1.70 ಕೋಟಿ ಸಂಗ್ರಹ

    ಚಾಮರಾಜನಗರ: ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwar Hills) ಹುಂಡಿ ಎಣಿಕೆ ಕಾರ್ಯ ನಡೆದಿದೆ. ಕೇವಲ 29 ದಿನಗಳಲ್ಲಿ ಮಾದಪ್ಪ ಕೋಟಿ ಒಡೆಯನಾಗಿದ್ದು, 1.70 ಕೋಟಿ ರೂ. ಸಂಗ್ರಹವಾಗಿದೆ.

    ಚಾಮರಾಜನಗರ (Chamarajanagar) ಜಿಲ್ಲೆಯ ಹನೂರು (Hanuru) ತಾಲೂಕಿನ ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರುವಾರ (ಸೆ.18) ತಡರಾತ್ರಿವರೆಗೂ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದೆ. ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಹುಂಡಿ ಎಣಿಕೆ ನಡೆಯಿತು.ಇದನ್ನೂ ಓದಿ: ದಸರಾ ಆನೆಗಳ ತಬ್ಬಿಕೊಂಡು ಯುವತಿ ರೀಲ್ಸ್‌: ದುಡ್ಡಿದ್ದವರ ದರ್ಬಾರ್‌ಗೆ ಅಧಿಕಾರಿಗಳು ಸಾಥ್‌?

    ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಸರ್ಕಾರಿ ರಜಾ ದಿನ, ಅಮಾವಾಸ್ಯೆ, ಜಾತ್ರಾ ಮಹೋತ್ಸವ ಸೇರಿದಂತೆ ವಿವಿಧ ಕಾರಣಗಳಿಂದ ಕಡಿಮೆ ದಿನಗಳಲ್ಲೇ ಅಧಿಕ ಹಣ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ. 30 ಗ್ರಾಂ ಚಿನ್ನ ಹಾಗೂ 1,100 ಬೆಳ್ಳಿ ಸಾಮಾನುಗಳು ಸಂಗ್ರಹವಾಗಿದೆ. ಇನ್ನೂ ಇ-ಹುಂಡಿಯಿಂದ 3.9 ಲಕ್ಷ ರೂ. ಹಣ ಸಂಗ್ರಹವಾಗಿದೆ. ಚಲಾವಣೆಯಲ್ಲಿ ಇಲ್ಲದ 2,000 ಮುಖಬೆಲೆಯ 3 ನೋಟುಗಳು ಹುಂಡಿಯಲ್ಲಿ ಸಿಕ್ಕಿವೆ.

  • ಬಂಡೀಪುರ | ಸಫಾರಿ ವಾಹನವನ್ನು ಅಟ್ಟಾಡಿಸಿದ ಕಾಡಾನೆ – ವೀಡಿಯೋ ವೈರಲ್

    ಬಂಡೀಪುರ | ಸಫಾರಿ ವಾಹನವನ್ನು ಅಟ್ಟಾಡಿಸಿದ ಕಾಡಾನೆ – ವೀಡಿಯೋ ವೈರಲ್

    ಚಾಮರಾಜನಗರ: ಸಫಾರಿ ವಾಹನದ ಮೇಲೆ ಕಾಡಾನೆಯೊಂದು (Wild Elephant) ದಾಳಿಗೆ ಯತ್ನಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ (Bandipura) ಸಫಾರಿಯಲ್ಲಿ ನಡೆದಿದೆ.

    ಸಫಾರಿ (Safari) ರಸ್ತೆಯ ಪಕ್ಕದಲ್ಲಿ ನಿಂತಿದ್ದ ಕಾಡಾನೆಯೊಂದು ಸಫಾರಿ ಜೀಪ್ ಕಂಡ ಕೂಡಲೇ ಅಟ್ಟಾಡಿಸಿಕೊಂಡು ಬಂದಿದೆ. ಈ ವೇಳೆ ಚಾಲಕ ಎಚ್ಚೆತ್ತುಕೊಂಡು ಜೀಪ್ ಅನ್ನು ರಿವರ್ಸ್ ಚಲಾಯಿಸಿ ಅಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಕ್ರಿಕೆಟ್‌ ಪಂದ್ಯ ನಡೆಯುತ್ತಿದ್ದಾಗ ಪಾಕ್‌ ಸ್ಟೇಡಿಯಂನಲ್ಲಿ ಸ್ಫೋಟ – ಓರ್ವ ಸಾವು, ಹಲವರಿಗೆ ಗಾಯ

     ಈ ವೇಳೆ ಕೋಪಗೊಂಡ ಕಾಡಾನೆ ನೆಲಕ್ಕೆ ಕಾಲು ಕೆರೆದು ವಾರ್ನಿಂಗ್ ಕೊಟ್ಟಿದೆ. ಸಫಾರಿ ಜೀಪ್ ಅನ್ನು ಕಾಡಾನೆ ಅಟ್ಟಾಡಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಚಾಮರಾಜನಗರ | ಲಾರಿ, ಕಾರು ಮೊಪೆಡ್ ನಡುವೆ ಸರಣಿ ಅಪಘಾತ – ನಾಲ್ವರು ಬಾಲಕರ ದುರ್ಮರಣ

    ಚಾಮರಾಜನಗರ | ಲಾರಿ, ಕಾರು ಮೊಪೆಡ್ ನಡುವೆ ಸರಣಿ ಅಪಘಾತ – ನಾಲ್ವರು ಬಾಲಕರ ದುರ್ಮರಣ

    ಚಾಮರಾಜನಗರ: ಗಾಳೀಪುರ ಸಮೀಪದ ರಿಂಗ್ ರಸ್ತೆಯಲ್ಲಿ ಸಂಭವಿಸಿದ್ದ ಲಾರಿ, ಕಾರು ಹಾಗೂ ಮೊಪೆಡ್ ನಡುವಿನ ಸರಣಿ ಅಪಘಾತದಲ್ಲಿ (Accident) ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

    ಮೊಪೆಡ್ ನಲ್ಲಿ ಹೋಗುತ್ತಿದ್ದ ನಾಲ್ವರ ಪೈಕಿ ಸ್ಥಳದಲ್ಲೇ ಮೆರಾನ್ ಎಂಬ ಬಾಲಕ‌ ಸಾವನ್ನಪ್ಪಿದ್ದ. ಗಂಭೀರವಾಗಿ ಗಾಯಗೊಂಡಿದ್ದ ರೆಹಾನ್, ಆದಾನ್ ಪಾಷಾ, ಫೈಜಲ್ ಎಂಬ ಬಾಲಕರನ್ನು ಸಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೂವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: Bidar | ಶಾಲಾ ಬಸ್ ಹರಿದು 6ರ ಬಾಲಕಿ ದಾರುಣ ಸಾವು

    ಈ ಸಂಬಂಧ ಚಾಮರಾಜನಗರ (Chamarajanagar) ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹೈದರಾಬಾದ್‌ನಲ್ಲಿ ಮುಂಬೈ ಪೊಲೀಸರ ದಾಳಿ – 12,000 ಕೋಟಿ ಮೌಲ್ಯದ ಮಾದಕ ವಸ್ತು ವಶ

  • ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಸರ ಎಗರಿಸುತ್ತಿದ್ದ ಖತರ್ನಾಕ್ ಕಳ್ಳಿ ಅಂದರ್

    ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಸರ ಎಗರಿಸುತ್ತಿದ್ದ ಖತರ್ನಾಕ್ ಕಳ್ಳಿ ಅಂದರ್

    ಚಾಮರಾಜನಗರ: ಗ್ರಾಹಕರ ಸೋಗಿನಲ್ಲಿ ಜ್ಯುವೆಲರಿ ಶಾಪ್‌ಗೆ ಹೋಗಿ ಚಿನ್ನದ ಸರ ಎಗರಿಸುತ್ತಿದ್ದ ಖತರ್ನಾಕ್ ಕಳ್ಳಿಯನ್ನು ಚಾಮರಾಜನಗರ ಪಟ್ಟಣ ಪೊಲೀಸರು (Chamarajanagar Town Police) ಬಂಧಿಸಿದ್ದಾರೆ.

    ಲೀಲಾ ಬಂಧಿತ ಕಳ್ಳಿ. ಈಕೆ ಆಭರಣ ಖರೀದಿಸುವ ನೆಪದಲ್ಲಿ ಚಾಮರಾಜನಗರದ ಜ್ಯುವೆಲರಿ ಶಾಪ್‌ಗೆ ಎಂಟ್ರಿ ಕೊಟ್ಟು, 9 ಗ್ರಾಂ ಚಿನ್ನದ ಸರ ಹಾಗೂ ಪಿರಿಯಾಪಟ್ಟಣದಲ್ಲಿ 5 ಗ್ರಾಂನ ಒಡವೆಯನ್ನು ಕಳ್ಳತನ ಮಾಡಿದ್ದಳು. ಇದನ್ನೂ ಓದಿ: ʻಬುರುಡೆʼ ಕೇಸ್‌ | ಮತ್ತೊಂದು ರಹಸ್ಯ ಸ್ಫೋಟ – ಕಾಡಿನಿಂದ ಬರುಡೆ ತಂದಿದ್ದ ಒರಿಜಿನಲ್ ವಿಡಿಯೋ ಲಭ್ಯ

    ಅಂಗಡಿಯ ಸಿಬ್ಬಂದಿಯನ್ನು ಯಾಮಾರಿಸಿ ಆರೋಪಿಯು ಚಿನ್ನ ಕಳ್ಳತನ ಮಾಡುತ್ತಿದ್ದಳು. ಕಳ್ಳಿಯ ಕೈಚಳಕದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಖತರ್ನಾಕ್ ಕಳ್ಳಿಯನ್ನು ಚಾಮರಾಜನಗರ ಪಟ್ಟಣ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಧರ್ಮಸ್ಥಳ ಬುರುಡೆ ಕೇಸ್ – ನಾಳೆ ಸದನದಲ್ಲಿ ಪರಂ ಉತ್ತರ

    ಧರ್ಮಸ್ಥಳ ಬುರುಡೆ ಕೇಸ್ – ನಾಳೆ ಸದನದಲ್ಲಿ ಪರಂ ಉತ್ತರ

    ಚಾಮರಾಜನಗರ: ಧರ್ಮಸ್ಥಳ ಪ್ರಕರಣದ (Dharmasthala Mass Burials) ಬಗ್ಗೆ ನಾಳೆ (ಸೋಮವಾರ) ಸದನದಲ್ಲಿ ಸಂಪೂರ್ಣ ಉತ್ತರ ನೀಡುತ್ತೇನೆ ಎಂದು ಗೃಹ ಸಚಿವ ಜಿ ಪರಮೇಶ್ವರ್ (G Parameshwar) ತಿಳಿಸಿದ್ದಾರೆ

    ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಬಿಜೆಪಿ ಧರ್ಮಸ್ಥಳ ಚಲೋ ನಡೆಸಿರುವ ಬಗ್ಗೆ ಗುಂಡ್ಲುಪೇಟೆಯಲ್ಲಿ ಪ್ರತಿಕ್ರಿಯಿಸಿದ ಅವರು, ಯಾರೂ ಸಹ ರಾಜಕಾರಣ ಮಾಡಬಾರದು. ಧರ್ಮಸ್ಥಳ ಪ್ರಕರಣ ನ್ಯಾಯಕ್ಕೆ ಹಾಗೂ ಕಾನೂನಿಗೆ ಸಂಬಂಧಿಸಿದ ವಿಚಾರವಾಗಿದೆ. ಯಾವುದೇ ವ್ಯಕ್ತಿ ಕಂಪ್ಲೆಂಟ್ ಕೊಟ್ಟರೆ ಪೋಲಿಸರು ಎಫ್‌ಐಆರ್ ಹಾಕಿ ತನಿಖೆ ಮಾಡುತ್ತಾರೆ. ತಪ್ಪು ಕಂಡು ಬಂದರೆ ಮಾತ್ರ ಕೇಸ್ ಮುಂದುವರಿಸುತ್ತಾರೆ ಎಂದರು. ಇದನ್ನೂ ಓದಿ: ಕಾಫಿನಾಡ ಮಲೆನಾಡು ಭಾಗದಲ್ಲಿ ಭಾರೀ ಮಳೆ – ಸೋಮವಾರ ಶಾಲೆಗಳಿಗೆ ರಜೆ ಘೋಷಣೆ

    ಇದು ಅಷ್ಟಕ್ಕೇ ಸೀಮಿತವಾಗಬೇಕೆ ವಿನಃ ರಾಜಕೀಯ ಮಾಡಬಾರದು. ಇದರಲ್ಲಿ ಧಾರ್ಮಿಕ ವಿಚಾರ ಎಳೆದು ತರೋದು ಸರಿಯಲ್ಲ. ಎಸ್‌ಐಟಿ ತನಿಖೆ ಪೂರ್ಣಗೊಳ್ಳಲು ಬಿಡಬೇಕು, ಸತ್ಯಾಸತ್ಯತೆ ಗೊತ್ತಾಗುತ್ತೆ. ಮಧ್ಯಂತರ ವರದಿ ಕೊಡಬೇಕಾ, ಅಂತಿಮ ವರದಿ ಕೊಡಬೇಕಾ ಎಂಬುದು ಎಸ್‌ಐಟಿಗೆ ಬಿಟ್ಟ ವಿಚಾರ. ಸರ್ಕಾರ ಅವರಿಗೆ ಯಾವುದೇ ನಿರ್ದೇಶನ ಕೊಡಲ್ಲ. ಎಸ್‌ಐಟಿ ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬಿಹಾರದಲ್ಲಿ ಮತದಾರರ ಹಕ್ಕುಗಳ ಯಾತ್ರೆಗೆ ಚಾಲನೆ – ಬಿಜೆಪಿ, ಚು. ಆಯೋಗ ವಿರುದ್ಧ ರಾಗಾ ವಾಗ್ದಾಳಿ

    ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆದಿದೆ ಎಂಬ ಡಿಸಿಎಂ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರ ಅಭಿಪ್ರಾಯ ಹೇಳಿದ್ದಾರೆ. ಆದರೆ ಇದು ರಾಜಕೀಯ ಆಗಬಾರದು. ಯಾರೂ ಕೂಡ ರಾಜಕೀಯ ಮಾಡಬಾರದು. ಮತ್ತೆ ಶವಗಳಿಗೆ ಶೋಧಕಾರ್ಯ ನಡೆಸುವ ಬಗ್ಗೆ ಎಸ್‌ಐಟಿ ತೀರ್ಮಾನ ಮಾಡುತ್ತದೆ. ಎಲ್ಲೋ ಒಂದು ಕಡೆ ಅಂತ್ಯ ಆಗುತ್ತೆ ಎನ್ನುವ ಮೂಲಕ ಶವಗಳ ಶೋಧ ಕಾರ್ಯಕ್ಕೆ ಫುಲ್‌ಸ್ಟಾಪ್ ಇಡುವ ಸುಳಿವು ನೀಡಿದರು. ಇದನ್ನೂ ಓದಿ: ಶರಣಬಸಪ್ಪ ಅಪ್ಪ ಲಿಂಗೈಕ್ಯ – ಪತ್ರದ ಮೂಲಕ ಪ್ರಧಾನಿ ಮೋದಿ ಸಂತಾಪ

  • ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕಂದಾಯ ಇಲಾಖೆಯಿಂದ ಜಮೀನು ವಶ – ಮನನೊಂದು ಮಹಿಳೆ ಆತ್ಮಹತ್ಯೆ

    ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕಂದಾಯ ಇಲಾಖೆಯಿಂದ ಜಮೀನು ವಶ – ಮನನೊಂದು ಮಹಿಳೆ ಆತ್ಮಹತ್ಯೆ

    ಚಾಮರಾಜನಗರ: ಅಂಬೇಡ್ಕರ್ ಭವನ (Ambedkar Bhavan) ನಿರ್ಮಾಣ ಮಾಡುವುದಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು (Revenue Department officials) ಜಮೀನು ವಶ ಪಡಿಸಿಕೊಂಡ ಹಿನ್ನೆಲೆ ಮನನೊಂದು ಮಹಿಳೆ ನೇಣಿಗೆ ಶರಣಾದ ಘಟನೆ ಚಾಮರಾಜನಗರದಲ್ಲಿ (Chamarajanagar) ನಡೆದಿದೆ.

    ರಾಜಮ್ಮ (52) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಚಾಮರಾಜನಗರ ಜಿಲ್ಲೆ ಹನೂರು (Hanur) ತಾಲೂಕಿನ ದೊಡ್ಡಾಲತ್ತೂರಿನಲ್ಲಿ ಘಟನೆ ನಡೆದಿದೆ. ರಾಜಮ್ಮರಿಗೆ ಪಿತ್ರಾರ್ಜಿತವಾಗಿ 90 ಸೆಂಟ್ಸ್ ಭೂಮಿ ಬಂದಿತ್ತು. ಇದ್ದ ಚೂರುಪಾರು ಭೂಮಿಯಲ್ಲಿ ಕುಟುಂಬ ವ್ಯವಸಾಯ ಮಾಡಿಕೊಂಡಿತ್ತು. ಕಳೆದ ವಾರ ಇದ್ದಕ್ಕಿದ್ದ ಹಾಗೆ ಬಂದ ಕಂದಾಯ ಇಲಾಖೆಯ ಅಧಿಕಾರಿಗಳು 20 ಸೆಂಟ್ಸ್ ಭೂಮಿ ವಶಪಡಿಸಿಕೊಂಡಿದ್ದರು. ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಜಮೀನು ವಶಪಡಿಸಿಕೊಳ್ಳಲಾಗಿತ್ತು. ಇದರಿಂದ ಬೇಸತ್ತು ರಾಜಮ್ಮ ಇಂದು ಮುಂಜಾನೆ ತಮ್ಮ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ| ಗುಂಡಿ ತೋಡಿದ್ದ ಕಾರ್ಮಿಕರ ಸಹಿ ಪಡೆದು ಕಳುಹಿಸಿದ ಎಸ್‌ಐಟಿ

    ರಾಜಮ್ಮರ ಶವ ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವವರೆಗೂ ಯಾವುದೇ ಕಾರಣಕ್ಕೂ ಶವ ತೆಗೆಯುವುದಿಲ್ಲವೆಂದು ಪ್ರತಿಭಟನೆ ನಡೆಸಿದರು. ಘಟನೆ ಸಂಬಂಧ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಶ್ರಾವಣ ಶನಿವಾರ – ಕೋಲಾರದ ಚಿಕ್ಕ ತಿರುಪತಿ, ಬಂಗಾರ ತಿರುಪತಿ ದೇವಾಲಯದಲ್ಲಿ ಭಕ್ತ ಸಾಗರ

  • ತೀರ್ಪಿಗೂ ಹಿಂದಿನ ದಿನ ಬನ್ನಾರಿಗೆ ದರ್ಶನ್ ಭೇಟಿ

    ತೀರ್ಪಿಗೂ ಹಿಂದಿನ ದಿನ ಬನ್ನಾರಿಗೆ ದರ್ಶನ್ ಭೇಟಿ

    – ಸುವರ್ಣಾವತಿ ಡ್ಯಾಂ ಬಳಿ ಟೋಲ್ ದಾಟಿರುವ ವೀಡಿಯೋ ವೈರಲ್

    ಚಾಮರಾಜನಗರ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಸುಪ್ರೀಂ ಕೋರ್ಟ್ (Supreme Court) ತೀರ್ಪಿಗೂ ಹಿಂದಿನ ದಿನ ಅಂದರೆ ಬುಧವಾರ ನಟ ದರ್ಶನ್ (Darshan) ಬನ್ನಾರಿಗೆ ತೆರಳಿದ್ದರು ಎಂದು ತಿಳಿದುಬಂದಿದೆ.

    ಜಾಮೀನು ರದ್ದು ಆದೇಶ ಹೊರಬಿದ್ದ ಬೆನ್ನಲ್ಲೇ ನಟ ದರ್ಶನ್‌ಗಾಗಿ ಪೊಲೀಸರು ಎಲ್ಲಾ ಕಡೆ ಹುಡುಕುತ್ತಿದ್ದಾರೆ. ಆರ್‌ಆರ್ ನಗರ, ಹೊಸಕೆರೆಹಳ್ಳಿ ಹಾಗೂ ಮೈಸೂರಿನ ಫಾರಂ ಹೌಸ್‌ನಲ್ಲೂ ಪೊಲೀಸರು ದರ್ಶನ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ದರ್ಶನ್ ಎಲ್ಲೂ ಪತ್ತೆಯಾಗಿಲ್ಲ. ತೀರ್ಪಿನ ಹಿಂದಿನ ದಿನ ಅಂದರೆ ಬುಧವಾರ ಚಾಮರಾಜನಗರ ಜಿಲ್ಲೆಯ ಸುವರ್ಣಾವತಿ ಡ್ಯಾಂ ಬಳಿಯ ಟೋಲ್ ಗೇಟ್ ಮೂಲಕ ದರ್ಶನ್ ಪ್ರಯಾಣಿಸಿರುವ ವಾಹನಗಳ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಮತ್ತೆ ಬಳ್ಳಾರಿ ಜೈಲಿಗೆ ಶಿಫ್ಟ್ ಆಗ್ತಾರಾ ದರ್ಶನ್?

    ಟೋಲ್ ಮೂಲಕ ದರ್ಶನ್ ವಾಹನ ತೆರಳಿರುವ ವೀಡಿಯೋವನ್ನು ‘ಡಿ ಬಾಸ್’ ಎಂದು ಅಭಿಮಾನಿಗಳು ಸ್ಟೇಟಸ್‌ಗಳಲ್ಲಿ ಹಾಕಿಕೊಂಡಿದ್ದಾರೆ. ರಾತ್ರಿ ಮೈಸೂರು ಸಮೀಪದ ತಮ್ಮ ಫಾರಂ ಹೌಸ್‌ನಲ್ಲಿದ್ದ ದರ್ಶನ್ ಇಂದು ಬೆಳ್ಳಂಬೆಳಗ್ಗೆ ತಮಿಳುನಾಡಿಗೆ ಪ್ರಯಾಣ ಬೆಳೆಸಿರುವ ಶಂಕೆ ವ್ಯಕ್ತವಾಗಿದೆ. ತಮಿಳುನಾಡು ಕಡೆ ಹೋಗಿದ್ದಾರೆ ಅಂತಾ ಒಂದು ಮಾಹಿತಿ ಇದ್ದರೆ ಮತ್ತೊಂದು ಮಾಹಿತಿ ಪ್ರಕಾರ ಮಡಿಕೇರಿಯ ಶುಂಠಿಕೊಪ್ಪ ಭಾಗಕ್ಕೆ ತೆರಳಿದ್ದಾರೆ ಎನ್ನಲಾಗ್ತಿದೆ. ಇದನ್ನೂ ಓದಿ: ನಟ ದರ್ಶನ್‌ಗೆ ಪೊಲೀಸರ ತೀವ್ರ ಶೋಧ – ಮೈಸೂರಿನ ಮನೆ, ಫಾರ್ಮ್‌ಹೌಸ್‌ನಲ್ಲಿ ಹುಡುಕಾಟ

    ಇನ್ನು ದರ್ಶನ್ ಬೇಲ್ ರದ್ದು ಹಿನ್ನೆಲೆ ದರ್ಶನ್ ಬಟ್ಟೆ ತೆಗೆದುಕೊಂಡು ಹೋಗಲು ಅಳಿಯ ಚಂದನ್ ಆರ್‌ಆರ್ ನಗರದ ನಿವಾಸಕ್ಕೆ ಆಗಮಿಸಿದ್ದಾರೆ. ದರ್ಶನ್ ಬಟ್ಟೆ ಇರುವ ಸೂಟ್ ಕೇಸ್ ತೆಗೆದುಕೊಂಡ ಚಂದನ್ ಅದನ್ನು ಕಾರಿನಲ್ಲಿ ಇಟ್ಟುಕೊಂಡು ಮನೆಯಿಂದ ತೆರಳಿದ್ದಾರೆ ಎನ್ನಲಾಗಿದೆ.  ಇದನ್ನೂ ಓದಿ: ರಾಜ್ಯ ತೊರೆದಿದ್ದಾರಾ ಕೊಲೆ ಆರೋಪಿ ದರ್ಶನ್‌?

  • ಕಾವೇರಿ ವನ್ಯಧಾಮದಲ್ಲಿ ಎರಡು ಹುಲಿ ಮರಿಗಳ ಸಾವು – ಹಸಿವಿನಿಂದ ಸಾವನ್ನಪ್ಪಿರುವ ಶಂಕೆ

    ಕಾವೇರಿ ವನ್ಯಧಾಮದಲ್ಲಿ ಎರಡು ಹುಲಿ ಮರಿಗಳ ಸಾವು – ಹಸಿವಿನಿಂದ ಸಾವನ್ನಪ್ಪಿರುವ ಶಂಕೆ

    ಚಾಮರಾಜನಗರ: ಇಲ್ಲಿನ ಕಾವೇರಿ ವನ್ಯಧಾಮದಲ್ಲಿ (Cauvery Wildlife Sanctuary) ಎರಡು ಹುಲಿ ಮರಿಗಳು ಸಾವನ್ನಪ್ಪಿದ ಘಟನೆ ನಡೆದಿದೆ. ಹಸಿವಿನಿಂದ ನಿತ್ರಾಣಗೊಂಡು ಹುಲಿ ಮರಿಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

    ಚಾಮರಾಜನಗರ (Chamarajanagar) ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಧಾಮದ ಶಾಗ್ಯ ಶಾಖೆಯ ಹೊಳೆಮೂರ್ದಟ್ಟಿ ಗಸ್ತಿನ ಕಿರಬನಕಲ್ಲುಗುಡ್ಡ ಬಳಿ ಸಾವನ್ನಪ್ಪಿವೆ. ಇದನ್ನೂ ಓದಿ: ಸಿದ್ದರಾಮಯ್ಯನವರ ಕೈ ಬಲಪಡಿಸುವ ಕಡೆಗೆ ನಮ್ಮ ಚಿಂತನೆ ಇರಲಿ: ಅಭಿಮಾನಿಗಳಿಗೆ ರಾಜಣ್ಣ ಭಾವುಕ ಪತ್ರ

    ಸುಮಾರು 10 ದಿನದ ಹಿಂದೆಯೇ ಒಂದು ಹೆಣ್ಣು, ಒಂದು ಗಂಡು ಹುಲಿ ಮರಿಗಳು ಸಾವನ್ನಪ್ಪಿವೆ. ತಾಯಿಯಿಂದ ಹುಲಿ ಮರಿಗಳು ಬೇರ್ಪಟ್ಟಿದ್ದವು ಎಂಬ ಮಾಹಿತಿಯಿದೆ. ಇದನ್ನೂ ಓದಿ: ಸತ್ಯ ಹೇಳಿದ್ದಕ್ಕೆ ಎಸ್ಟಿ ನಾಯಕನ ಕತ್ತು ಹಿಡಿದು ಹೊರದಬ್ಬಿದೆ ಕಾಂಗ್ರೆಸ್: ಪ್ರಹ್ಲಾದ್ ಜೋಶಿ

    ಅರಣ್ಯ ಇಲಾಖೆ ಸಿಬ್ಬಂದಿ ಗಸ್ತಿನ ವೇಳೆ ಹುಲಿ ಮರಿಗಳ ಸಾವು ಬೆಳಕಿಗೆ ಬಂದಿದೆ. ಎರಡು ಮೂರು ದಿನಗಳ ವ್ಯತ್ಯಾಸದಲ್ಲಿ ಹುಲಿ ಮರಿಗಳು ಸಾವನ್ನಪ್ಪಿದೆ. ತಾಯಿಯಿಂದ ಬೇರ್ಪಟ್ಟು ಹಸಿವಿನಿಂದ ನಿತ್ರಾಣಗೊಂಡು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

  • ಇಂದು ವಿಶ್ವ ಆನೆ ದಿನಾಚರಣೆ – ಆನೆಗಳ ಸಂಖ್ಯೆಯಲ್ಲಿ ಚಾಮರಾಜನಗರ ರಾಜ್ಯದಲ್ಲೇ ನಂ.1

    ಇಂದು ವಿಶ್ವ ಆನೆ ದಿನಾಚರಣೆ – ಆನೆಗಳ ಸಂಖ್ಯೆಯಲ್ಲಿ ಚಾಮರಾಜನಗರ ರಾಜ್ಯದಲ್ಲೇ ನಂ.1

    ಚಾಮರಾಜನಗರ: ವನ್ಯ ಪ್ರಾಣಿಗಳ ತಾಣ ಅಂದ್ರೆ ಅದು ಚಾಮರಾಜನಗರ. ರಾಜ್ಯದಲ್ಲಿ ಎರಡು ಹುಲಿ ಸಂರಕ್ಷಿತ ಅರಣ್ಯ ಹಾಗೂ ಎರಡು ವನ್ಯಧಾಮ ಹೊಂದಿರುವ ಏಕೈಕ ಜಿಲ್ಲೆ. ಚಾಮರಾಜನಗರ ಹುಲಿಗಳಲ್ಲಿ ಅಷ್ಟೇ ಅಲ್ಲ, ಆನೆಗಳ ಸಂಖ್ಯೆಯಲ್ಲೂ ಕೂಡ ರಾಜ್ಯದಲ್ಲಿಯೇ ನಂಬರ್ 1 ಆಗಿದೆ.

    ಹೌದು, ಆ.12ರಂದು ವಿಶ್ವ ಆನೆಗಳ ದಿನವನ್ನಾಗಿ ಆಚರಿಸಲಾಗುತ್ತದೆ. ರಾಜ್ಯದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ ಚಾಮರಾಜನಗರ. ಇದೊಂದು ವನ್ಯಜೀವಿಗಳ ವಾಸಸ್ಥಾನವೆಂದರೆ ತಪ್ಪಲ್ಲ. 2023ರ ಆನೆ ಗಣತಿ ಪ್ರಕಾರ ರಾಜ್ಯದಲ್ಲಿ 6,395 ಆನೆಗಳಿದ್ದವು. ಈ ಪೈಕಿ ಚಾಮರಾಜನಗರ ಜಿಲ್ಲೆಯಲ್ಲೇ 2,500ಕ್ಕೂ ಹೆಚ್ಚು ಆನೆಗಳಿದ್ದವು. ಬಂಡೀಪುರದಲ್ಲಿ 1,116, ಬಿಆರ್‌ಟಿ 619, ಮಹದೇಶ್ವರ ವನ್ಯಧಾಮ 706, ಕಾವೇರಿ ವನ್ಯಧಾಮದಲ್ಲಿ 236 ಆನೆಗಳಿದ್ದವು. ಇದೀಗ ಆನೆಗಳ ಸಂಖ್ಯೆಯಲ್ಲಿ ಏರಿಯಾಗಿದೆ.ಇದನ್ನೂ ಓದಿ: ಆಟವಾಡುತ್ತಾ ಬಾವಿಗೆ ಬಿದ್ದ 8ರ ಬಾಲಕಿ ಸಾವು

    ಅರಣ್ಯಾಧಿಕಾರಿಗಳ ಮಾಹಿತಿ ಪ್ರಕಾರ, ಬಂಡೀಪುರದಲ್ಲಿ 1,500ಕ್ಕೂ ಹೆಚ್ಚು, ಮಹದೇಶ್ವರ, ಕಾವೇರಿ, ಬಿಆರ್‌ಟಿ ಮೂರು ಸೇರಿ ಅಂದಾಜು 1,800ಕ್ಕೂ ಹೆಚ್ಚು ಆನೆಗಳಿವೆ ಎಂದು ತಿಳಿಸಿದ್ದಾರೆ. ಅದಲ್ಲದೇ ರಾಜ್ಯದಲ್ಲಿ ಕೂಡ ಆನೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. 2025ರ ವರದಿ ಇನ್ನೂ ಅಧಿಕಾರಿಗಳ ಕೈಸೇರಬೇಕಿದೆ.

    ಇನ್ನೂ ಚಾಮರಾಜನಗರ ಜಿಲ್ಲೆಯ ಅಭಯಾರಣ್ಯಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಲೂ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಶ್ರಮವು ಕಾರಣವಾಗಿದೆ. ಅಲ್ಲದೇ ಕಾಡಂಚಿನ ಜನರು ಅರಣ್ಯ ಇಲಾಖೆಗೆ ಸಾಕಷ್ಟು ಸಹಕಾರ ಕೊಡ್ತಿದ್ದಾರೆ. ಕಾಡಾನೆ-ಮಾನವ ಸಂಘರ್ಷ ತಪ್ಪಿಸುವ ನಿಟ್ಟಿನಲ್ಲಿ ಕೈಗೊಂಡ ಹಲವು ಕಾರ್ಯಗಳ ಪರಿಣಾಮ ಆನೆಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ರೈಲ್ವೆ ಬ್ಯಾರಿಕೇಡ್, ಸೋಲಾರ್ ತಂತಿ ಅಳವಡಿಕೆ, ಆನೆ ಕಂದಕ ಸೇರಿ ಹಲವು ಯೋಜನೆಗಳ ಪರಿಣಾಮ ಕಾಡಾನೆ ಸಂಖ್ಯೆ ಹೆಚ್ಚಳಕ್ಕೆ ನೆರವಾಗಿದೆ.ಇದನ್ನೂ ಓದಿ: ಧರ್ಮಸ್ಥಳ ನಿಗೂಢ ಶವ ಕೇಸಲ್ಲಿ ಮಾನವ ಹಕ್ಕುಗಳ ಆಯೋಗ ಎಂಟ್ರಿ