Tag: Chamaraja Nagar

  • ಓಮಿಕ್ರಾನ್ ಆತಂಕ – ಬಂಡೀಪುರದಲ್ಲಿ ನ್ಯೂ ಇಯರ್ ಮೋಜು ಮಸ್ತಿಗೆ ಬ್ರೇಕ್!

    ಓಮಿಕ್ರಾನ್ ಆತಂಕ – ಬಂಡೀಪುರದಲ್ಲಿ ನ್ಯೂ ಇಯರ್ ಮೋಜು ಮಸ್ತಿಗೆ ಬ್ರೇಕ್!

    ಚಾಮರಾಜನಗರ: ರಾಜ್ಯದಲ್ಲಿ ಕೊರೊನಾ ವೈರಸ್ ರೂಪಾಂತರಿ ಓಮಿಕ್ರಾನ್ ಸೋಂಕು ಭೀತಿ ಹೆಚ್ಚಾಗಿದೆ. ಪರಿಣಾಮವಾಗಿ ಈ ವರ್ಷ ಬಂಡೀಪುರ ಅರಣ್ಯ ಧಾಮದಲ್ಲಿ ಹೊಸ ವರ್ಷಾಚರಣೆಯನ್ನು ನಿಷೇಧಿಸಲಾಗಿದೆ.

    ಡಿಸೆಂಬರ್ 31 ಹಾಗೂ ಜನವರಿ 1ರಂದು ಬಂಡೀಪುರದಲ್ಲಿ ಹೊಸವರ್ಷಾಚರಣೆಯನ್ನು ಪ್ರತಿ ವರ್ಷ ಅದ್ದೂರಿಯಾಗಿ ನಡೆಸಲಾಗುತ್ತದೆ. ಆದರೆ ಸದ್ಯ ಕೊರೊನಾ ಸೋಂಕಿನ ಭೀತಿ ಹೆಚ್ಚಿರುವುದರಿಂದ ಹೊಸ ವರ್ಷ ಸಂಭ್ರಮಾಚರಣೆಗೆ ಅಧಿಕಾರಿಗಳು ನಿಷೇಧ ಹೇರಿದ್ದಾರೆ. ಇದನ್ನೂ ಓದಿ: 5 ದಿನಗಳ ಕಾಲ ದುಬೈ ಪ್ರವಾಸ ಹೊರಟ ಬಿಎಸ್‍ವೈ

    ಡಿಸೆಂಬರ್ 31 ಹಾಗೂ ಜನವರಿ 1 ರಂದು ಅರಣ್ಯ ಇಲಾಖೆಯ ಡಾರ್ಮೆಟರಿಗಳು, ಕಾಟೇಜ್ ಹಾಗೂ ಗೆಸ್ಟ್ ಹೌಸ್‌ಗಳಲ್ಲಿ ವಾಸ್ತವ್ಯ ನಿರ್ಬಂಧಿಸಿದ್ದು, ಆನ್‌ಲೈನ್ ಬುಕಿಂಗ್ ಕೂಡಾ ಬ್ಲಾಕ್ ಮಾಡಲಾಗಿದೆ.

    ಹೊಸ ವರ್ಷದ ಸಲುವಾಗಿ ಬಂಡೀಪುರದಲ್ಲಿ ಕೇವಲ ಮೋಜು-ಮಸ್ತಿಗಷ್ಟೇ ಬ್ರೇಕ್ ಹಾಕಲಾಗಿದೆ. ಎಂದಿನಂತೆ ಬೆಳಗ್ಗೆ ಹಾಗೂ ಸಂಜೆ ಸಫಾರಿ ಇರಲಿದೆ. ಆದರೆ ವಾಸ್ತವ್ಯ ಹೂಡುವಂತಿಲ್ಲ ಎಂದು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ನಟೇಶ್ ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ ಮುಂದೂಡಿ, ರ‍್ಯಾಲಿ-ಸಮಾರಂಭ ನಿಲ್ಲಿಸಿ: ಚುನಾವಣಾ ಆಯೋಗ, ಕೇಂದ್ರಕ್ಕೆ ಕೋರ್ಟ್‌ ಒತ್ತಾಯ

  • ಯಡಿಯೂರಪ್ಪ ಎಂದಿಗೂ ಕರ್ನಾಟಕದ ರಾಜಾಹುಲಿ : ಸೋಮಶೇಖರ್

    ಯಡಿಯೂರಪ್ಪ ಎಂದಿಗೂ ಕರ್ನಾಟಕದ ರಾಜಾಹುಲಿ : ಸೋಮಶೇಖರ್

    ಚಾಮರಾಜನಗರ: ಅಧಿಕಾರವಿರಲಿ, ಇಲ್ಲದಿರಲಿ ಕರ್ನಾಟಕದ ರಾಜಾಹುಲಿ ಎಂದಿಗೂ ಬಿ.ಎಸ್ ಯಡಿಯೂರಪ್ಪ ಅವರೇ ಆಗಿರುತ್ತಾರೆ ಎಂದು ಸಹಕಾರ ಸಚಿವ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

    ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಸೂಚನೆ ಮೇರೆಗೆ ರಘು ಕೌಟಿಲ್ಯರಿಗೆ ಟಿಕೆಟ್ ನೀಡಲಾಗಿದೆ. ಅವರ ಮಾತನ್ನು ಪಕ್ಷದಲ್ಲಿ ಎಂದಿಗೂ ತೆಗೆದು ಹಾಕಲಾಗುವುದಿಲ್ಲ ಎಂದು ಹೇಳಿದರು.

    ತಿಮ್ಮಯ್ಯ ಅವರ ಹತ್ತಿರ ಹಣವಿದೆ ಎಂದು ಕಾಂಗ್ರೆಸ್ ಈ ಬಾರಿ ಅವರಿಗೆ ಟಿಕೆಟ್ ನೀಡಿದೆ. ಇದರಿಂದಾಗಿ ಧರ್ಮಸೇನಾರಿಗೆ ಟಿಕೆಟ್ ಸಿಗಲಿಲ್ಲ. ಹಣವೊಂದೇ ಚುನಾವಣೆಯಲ್ಲಿ ಮುಖ್ಯವಲ್ಲ ಎಂದ ಅವರು ಪ್ರಚಾರಕ್ಕೆ ಸರಿಯಾಗಿ ಸಿದ್ದರಾಮಯ್ಯ ಬಂದರಷ್ಟೇ ಕಾಂಗ್ರೆಸ್ ಟೇಕಾಫ್ ಆಗುತ್ತದೆ ಎಂದು ಕಾಂಗ್ರೆಸ್ ಕಾಲೆಳೆದರು.

    ಅವರು ಜೆಡಿಎಸ್ ವಿಚಾರವಾಗಿ ಮಾತನಾಡಿ, ಹೆಚ್‌ಡಿ ಕುಮಾರಸ್ವಾಮಿ ಅವರನ್ನು ಜಿಟಿ ದೇವೇಗೌಡ, ಕೆ ಮಹದೇವ್ ಇಬ್ಬರು ಸೇರಿ ಕಾಲೆಳೆಯುತ್ತಿದ್ದಾರೆ ಎಂದರು. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ – ಮಗನನ್ನು ಹತ್ಯೆಗೈದು ತಾಯಿ ಆತ್ಮಹತ್ಯೆ

    ಇದೇ ವೇಳೆ ಮೈತ್ರಿ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯಲ್ಲಿ ಯಾವ ಪಕ್ಷದೊಂದಿಗೂ ಬಿಜೆಪಿ ಮೈತ್ರಿ ಮಾಡಿಕೊಂಡಿಲ್ಲ. ಆದರೆ ಕಾಂಗ್ರೆಸ್, ಜೆಡಿಎಸ್ ನವರು ಬಂದು ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಹೇಳುತ್ತಾ ಮತ ಕೇಳುತ್ತಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ:  ಸಿಎಂ ಬಿಎಸ್‍ವೈಗೆ ‘ರಾಜಾಹುಲಿ’ ಹೆಸ್ರು ಬಂದಿದ್ದು ಹೇಗೆ?

  • ಬಸ್, ಟಿಪ್ಪರ್ ಮುಖಾಮುಖಿ- ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

    ಬಸ್, ಟಿಪ್ಪರ್ ಮುಖಾಮುಖಿ- ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

    ಚಾಮರಾಜನಗರ: ಬಸ್ ಹಾಗೂ ಟಿಪ್ಪರ್ ನಡುವೆ ಡಿಕ್ಕಿಯಾಗಿದ್ದು, ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಈ ಘಟನೆ ನಡೆದಿದೆ. ಗುಂಡ್ಲುಪೇಟೆ -ಮೈಸೂರು ಹೆದ್ದಾರಿಯ ಹೊರವಲಯದಲ್ಲಿ ಬಸ್ ಮತ್ತು ಟಿಪ್ಪರ್ ಮುಖಾಮುಖಿಯಾಗಿದ್ದು, ಬಸ್‍ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

    ಬಿಳಿಕಲ್ಲು ತುಂಬಿದ ಟಿಪ್ಪರ್ ಲಾರಿಯ ಅತಿ ವೇಗವೇ ಅನಾಹುತಕ್ಕೆ ಕಾರಣವೆಂದು ಆರೋಪಿಸಲಾಗಿದೆ. ಘಟನೆಯಿಂದಾಗಿ ಬಸ್ಸಿನ ಕಿಟಕಿ, ಗಾಜುಗಳು ಪುಡಿಯಾಗಿದೆ. ಅಪಘಾತದ ರಭಸಕ್ಕೆ ಸುಮಾರು 5ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಗಾಯಗಳಾಗಿವೆ. ಎದುರು ಬರುತ್ತಿದ್ದ ಟಿಪ್ಪರ್ ರಭಸ ನೋಡಿ, ಬಸ್ ಚಾಲಕ ಪಕ್ಕಕ್ಕೆ ವಾಹನ ಚಲಾಯಿಸಿದ್ದಾರೆ. ಇದರಿಂದಾಗಿ ಭಾರೀ ಅನಾಹುತ ಆಗುವುದು ತಪ್ಪಿದೆ. ಇದನ್ನೂ ಓದಿ: ವಿದ್ಯಾರ್ಥಿಗೆ ಸೋಂಕು – ಶಾಲೆಯ ಎಲ್ಲ ಮಕ್ಕಳಿಗೂ ಕೊರೊನಾ ಟೆಸ್ಟ್

    ಅಪಘಾತದಲ್ಲಿ ಬಸ್ ಚಾಲಕ ಶ್ಯಾಮುಗೆ ಕೈ ಮತ್ತು ಬೆನ್ನಿನ ಭಾಗಕ್ಕೆ ತೀವ್ರ ಪೆಟ್ಟುಗಳಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಬಸ್‍ನ ಮುಂಬದಿಯ ಪಕ್ಕಕ್ಕೆ ಟಿಪ್ಪರ್ ಗುದ್ದಿದೆ. ಘಟನೆ ಕುರಿತಾಗಿ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸುಳ್ವಾಡಿ ವಿಷ ಪ್ರಸಾದ ಸೇವಿಸಿ ಮೃತಪಟ್ಟವರಿಗೆ ಗಿಡ ನೆಟ್ಟು ಶ್ರದ್ಧಾಂಜಲಿ

    ಸುಳ್ವಾಡಿ ವಿಷ ಪ್ರಸಾದ ಸೇವಿಸಿ ಮೃತಪಟ್ಟವರಿಗೆ ಗಿಡ ನೆಟ್ಟು ಶ್ರದ್ಧಾಂಜಲಿ

    ಚಾಮರಾಜನಗರ: ಸುಳ್ವಾಡಿ ವಿಷ ಪ್ರಸಾದ ಸೇವಿಸಿ ಮೃತಪಟ್ಟವರಿಗೆ ಗಿಡ ನೆಡುವ ಮೂಲಕ ವಿಶೇಷವಾಗಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

    ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ ಗುತ್ ಮಾರಮ್ಮನ ದೇವಾಲಯದ ಪ್ರಸಾದ ಸೇವಿಸಿ ಸಾವನ್ನಪ್ಪಿದವರಿಗೆ ವಿಶೇಷ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಪಕ್ಕದಲ್ಲಿ ಅರಳಿ ಹಾಗೂ ಬೇವಿನ ಗಿಡ ನೆಟ್ಟು ವಿಷ ದುರಂತದಲ್ಲಿ ಮಡಿದವರಿಗಾಗಿ ಹಾಲು ತುಪ್ಪ ಎರೆದು ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು.

    ಡಿಸೆಂಬರ್ 14, 2018 ರಲ್ಲಿ ಸುಳ್ವಾಡಿ ಮಾರಮ್ಮನ ವಿಷ ದುರಂತದಲ್ಲಿ 17 ಜನ ವಿಷ ಪ್ರಾಶನ ಮಾಡಿ ಸಾವನ್ನಪ್ಪಿದ್ದರು. 120 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದರು. ಸಾವನ್ನಪ್ಪಿದ ಎಲ್ಲರಿಗೂ ಮೃತರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.