Tag: Chamaraj Pete

  • ಶಿಶು ಕಿಡ್ನ್ಯಾಪ್‌ ಕೇಸ್ – ಅಪರಾಧಿಗೆ 10 ವರ್ಷ ಸಜೆ, 1 ಲಕ್ಷ ರೂ. ದಂಡ

    ಶಿಶು ಕಿಡ್ನ್ಯಾಪ್‌ ಕೇಸ್ – ಅಪರಾಧಿಗೆ 10 ವರ್ಷ ಸಜೆ, 1 ಲಕ್ಷ ರೂ. ದಂಡ

    ಬೆಂಗಳೂರು: ನವಜಾತ ಶಿಶು ಕಿಡ್ನ್ಯಾಪ್‌ ಪ್ರಕರಣದ ಅಪರಾಧಿಗೆ ಕೋರ್ಟ್ 10 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿದೆ.

    ಅಪರಾಧಿ ರಶ್ಮಿ, 5 ವರ್ಷಗಳ ಹಿಂದೆ ವಾಣಿ ವಿಲಾಸ ಆಸ್ಪತ್ರೆಯಿಂದ (Vani Vilas Hospital) ಆಗ ತಾನೆ ಹುಟ್ಟಿದ್ದ ನವಾಜಾತ ಶಿಶುವನ್ನ ಕಿಡ್ನ್ಯಾಪ್‌ ಮಾಡಿದ್ದಳು. ಪ್ರಕರಣದ ಅಪರಾಧಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ಸಿಸಿಹೆಚ್ 51ರ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ರಾಜ್ಯಸಭಾ ಸಂಸದನಿಗೆ ವಿಧಾನಸಭೆ ಉಪ ಚುನಾವಣೆಗೆ ಟಿಕೆಟ್ – ಪಂಜಾಬ್‌ನಿಂದ ಸಂಸತ್‌ಗೆ ಕೇಜ್ರಿವಾಲ್?

    ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣ ಬಸವನಗುಡಿ ಮಹಿಳಾ ಠಾಣೆಗೆ ವರ್ಗಾವಣೆಯಾಗಿತ್ತು. ತಲೆಮರೆಸಿಕೊಂಡಿದ್ದ ರಶ್ಮಿಯನ್ನು 1 ವರ್ಷದ ಬಳಿಕ ಮಹಿಳಾ ಠಾಣೆ ಇನ್ಸ್‌ಪೆಕ್ಟರ್‌ ಮೀನಾಕ್ಷಿ ಮತ್ತು ಅವರ ತಂಡ ಬಂಧಿಸಿ, ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಇದೀಗ ಕೋರ್ಟ್‌ನಲ್ಲಿ ವಿಚಾರಣೆ ಮುಗಿದಿದ್ದು, ಅಪರಾಧಿಗೆ ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ: ನ್ಯಾಚುರಲ್ ನಾನಿಯ ಮಾಸ್ ಟೀಸರ್ ಹಿಟ್ 3

    ಸರ್ಕಾರದ ಪರವಾಗಿ ಪಿ.ಪಿ.ಬಿ.ಹೆಚ್.ಭಾಸ್ಕರ್ ವಾದ ಮಂಡಿಸಿದ್ದರು.

  • ಪಾದರಾಯನಪುರವೇನು ಜಮೀರ್ ಅಜ್ಜನಾ ಆಸ್ತಿನಾ: ಪ್ರಮೋದ್ ಮುತಾಲಿಕ್ ಕಿಡಿ

    ಪಾದರಾಯನಪುರವೇನು ಜಮೀರ್ ಅಜ್ಜನಾ ಆಸ್ತಿನಾ: ಪ್ರಮೋದ್ ಮುತಾಲಿಕ್ ಕಿಡಿ

    – ಶಾಸಕರಾದ ತಕ್ಷಣ ಪಾಳೆಗಾರಿಕೇನಾ

    ಧಾರವಾಡ: ಪಾದರಾಯನಪುರವೇನು ಜಮೀರ್ ಅಜ್ಜನಾ ಆಸ್ತಿನಾ? ಶಾಸಕರಾದ ತಕ್ಷಣ ಪಾಳೆಗಾರಿಕೇನಾ? ಶಾಸಕ ಜಮೀರ್ ಅಹ್ಮದ್ ಚಾಮರಾಜ್ ಪೇಟೆಯ ಶಾಸಕ ಅಷ್ಟೇ, ಚಾಮರಾಜ್ ಕೋಟೆಯ ಶಾಸಕ ಅಲ್ಲ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಪಾದರಾಯನಪುರದಂತ ಘಟನೆಗಳು ಪದೇ ಪದೇ ನಡೆದಿರುವುದು ಖಂಡನೀಯ. ಇದರ ಹಿಂದೆ ಒಂದು ಕೈವಾಡವಿದೆ ಎಂದು ಸಂಶಯ ವ್ಯಕ್ತಪಡಿಸಿದರು.

    ಪಾದರಾಯನಪುರ ಪಾಕಿಸ್ತಾನದಲ್ಲಿ ಇಲ್ಲ, ನಮ್ಮ ದೇಶದಲ್ಲೇ ಇದೆ. ಇಲ್ಲಿ ಹೋಗುವಾಗ ನಮ್ಮನ್ನ ಕೇಳಿ ಹೋಗಬೇಕು ಅಂತಿರಲ್ಲಾ ಎಂದು ಶಾಸಕ ಜಮೀರ್ ವಿರುದ್ಧ ಆಕ್ರೋಶ ಹೊರಹಾಕಿದರು. ಅವರನ್ನ ಅಮಾಯಕರು ಎಂದು ಹೇಳುವುದು ಸರಿಯಲ್ಲ. ಇದಕ್ಕೆ ಸಮರ್ಥನೆ ಮಾಡಿಕೊಳ್ಳಬೇಡಿ. ನೀವೇ ಈ ಘಟನೆಗೆ ಕಾರಣ. ಮೇಲಿಂದ ಮೇಲೆ ಈ ಘಟನೆಯಾಗುತ್ತಿರುವುದು ಕೊರೊನಾ ಹಬ್ಬಿಸಲಿಕ್ಕೆ ಎಂದು ಆರೋಪಿಸಿದರು.

    ರಾತ್ರಿ ಅಲ್ಲಿ ಗಲಭೆ ಮಾಡಿದ್ದು ಸರಿಯಲ್ಲ. ವೈದ್ಯರನ್ನ ಹಾಗೂ ಪೊಲೀಸರನ್ನ ಓಡಿಸಿದವರು ಮನುಷ್ಯರಾ ಎಂದು ಮುತಾಲಿಕ್ ಪ್ರಶ್ನಿಸಿದರು. ಈ ರೋಗ ಒಬ್ಬರಿಂದ ಒಬ್ಬರಿಗೆ ಹಬ್ಬುತ್ತಿದೆ. ಕೆಲವರು 24 ಗಂಟೆ ಕೆಲಸ ಮಾಡುತ್ತಿದ್ದಾರೆ, ಅವರ ಮೇಲೆ ಹಲ್ಲೆ ಮಾಡಿರುವುದು ಸರಿಯಲ್ಲ. ಇದರ ಹಿಂದೆ ಧರ್ಮ ಇಲ್ಲಾ ಎನ್ನುತ್ತಾರೆ. ಹಾಗಾದ್ರೆ ತಬ್ಲಿಘಿ ಯಾವ ಧರ್ಮ ಎಂದು ಪ್ರಶ್ನೆ ಮಾಡಿದರು.