Tag: chaluvarayaswamy

  • ಜೀವ ಮಣ್ಣಿಗೆ ಹೋಗುವವರೆಗೂ ಮಂಡ್ಯ ಜಿಲ್ಲೆಗೆ ಬರ್ತೀನಿ: ಹೆಚ್‍ಡಿಕೆ

    ಜೀವ ಮಣ್ಣಿಗೆ ಹೋಗುವವರೆಗೂ ಮಂಡ್ಯ ಜಿಲ್ಲೆಗೆ ಬರ್ತೀನಿ: ಹೆಚ್‍ಡಿಕೆ

    ಮಂಡ್ಯ: ನನಗೆ ಗೌರವ ಕೊಟ್ಟಿರುವ ಲಕ್ಷಾಂತರ ಜನ ಮಂಡ್ಯ ಜಿಲ್ಲೆಯಲ್ಲಿದ್ದಾರೆ. ಹೀಗಾಗಿ ಜೀವ ಮಣ್ಣಿಗೆ ಹೋಗುವವರೆಗೂ ಮಂಡ್ಯ ಜಿಲ್ಲೆಗೆ ಬರುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನ್‍ಮುಲ್ ಹಗರಣ ಮುಚ್ಚಿಹಾಕಲು ದೇವೇಗೌಡರು, ಕುಮಾರಸ್ವಾಮಿ ಸಿಎಂ ಜೊತೆ ಮಾತನಾಡಿದ್ದಾರೆ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿದರು. ನಿನ್ನೆ ಮಾಜಿ ಸಚಿವ ಚೆಲುವನಾರಾಯಣಸ್ವಾಮಿ ಮಾಡಿದ ಆರೋಪಕ್ಕೆ ಎಚ್‍ಡಿಕೆ ತಿರುಗೇಟು ನೀಡಿದ ಹೆಚ್‍ಡಿಕೆ, ಹೌದು ನಾನು, ದೇವೇಗೌಡರು ಸಿಎಂ ಜೊತೆ ಮಾತನಾಡಿದ್ದೇವೆ. ನೀವು ಯಾವ ತನಿಖೆಯಾದರೂ ಮಾಡಿಕೊಳ್ಳಿ.  ಹಗರಣ ಬಯಲಿಗೆಳೆದ ಆ ಡಳಿತ ಮಂಡಳಿ ವಿರುದ್ಧವೇ ಕ್ರಮ ಯಾಕೆ ಎಂದು ಸಿಎಂಗೆ ಹೇಳಿದ್ದೇವೆ. ನನ್ನ ಬಡ್ಡಿ ಮಗ ಎನ್ನುತ್ತಾರಲ್ಲ, ಅವರು ನಮಗೆ ಬಡ್ಡಿ ಕೊ ಡುವುದಿರಲಿ ನಾನು ಕೊಟ್ಟ ಅಸಲೇ ವಾಪಸ್ ಕೊಟ್ಟಿಲ್ಲ ಎಂದು ಗರಂ ಆದರು.

    ನಾನೇ ಸಿಎಂಗೆ ಹೇಳಿ ಟೈಂ ನಿಗದಿ ಮಾಡ್ತೀನಿ. ಈ ವಯಸ್ಸಿನಲ್ಲಿ ಮಾದೇಗೌಡರು ಯಾಕೆ ಆ ಮಾಹಾನುಭಾವನೇ ಕರೆದುಕೊಂಡು ಹೋಗಲಿ. ಹಗರಣ ಹೊರತಂದಿದ್ದೇ ಈ ಆಡಳಿತ ಮಂಡಳಿ. ಇವರಿಗೆ ಮಾನ ಮರ್ಯಾದೆ ಇದ್ದರೆ ಹಗರಣದ ತನಿಖೆ ನಡೆಸೋ ಬಗ್ಗೆ ಮಾತನಾಡಲಿ. ಇವರ ಅಪ್ಪಣೆ ತಗೊಂಡು ನಾನು ಮಂಡ್ಯಕ್ಕೆ ಬರಬೇಕಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಶಾಸಕ ಪರಮೇಶ್ವರ್ ನಾಯ್ಕ್ ಸೋದರನಿಂದ ವೃದ್ಧನ ಮೇಲೆ ಹಲ್ಲೆಗೆ ಯತ್ನ

    ನನ್ನ ಜನ ಬಡವರಿದ್ದಾರೆ, ಈ ಜಿಲ್ಲೆಯ ಜನ ಋಣ ಹೊರಿಸಿದ್ದಾರೆ. ನನಗೆ ಗೌರವ ಕೊಟ್ಟಿರುವ ಲಕ್ಷಾಂತರ ಜನ ಇಲ್ಲಿದ್ದಾರೆ. ಜೀವ ಮಣ್ಣಿಗೋಗೊವರೆಗೂ ಮಂಡ್ಯ ಜಿಲ್ಲೆಗೆ ಬರ್ತೀನಿ. ಮಾತನಾಡುವಾಗ ಎಚ್ಚರಿಕೆ ಇರಲಿ. ಏನ್ ಇವರ ಋಣ ತಿಂದಿದ್ದವಾ, ಹಲ್ಲು ಹಿಡಿದು ಮಾತನಾಡಲಿ. ಸೋತು ಮನೆಯಲ್ಲಿ ಮಲಗಿದ್ದಾಗ ಎಂಪಿ ಮಾಡಿದೆ. ಸ್ವಂತ ದುಡಿಮೆಯಲ್ಲಿ ಪಾರ್ಲಿಮೆಂಟ್ ಗೆ ಹೋಗಿದ್ರಾ ಇವರು ಎಂದು ಚಲುವರಾಯಸ್ವಾಮಿ ವಿರುದ್ಧ ಏಕವಚನದಲ್ಲಿಯೇ ಹೆಚ್‍ಡಿಕೆ ವಾಗ್ದಾಳಿ ನಡೆಸಿದರು.

    ಇದೇ ವೇಳೆ ದಲಿತರಿಗೆ ಸಿಎಂ ಹುದ್ದೆ ತಪ್ಪಿಸಿದ್ದು ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದ ಹೆಚ್‍ಡಿಕೆ, ದಲಿತರನ್ನು ಸಿಎಂ ಮಾಡಬೇಕು ಎಂದು ಈವರೆಗೆ ಕಾಂಗ್ರೆಸ್ ನವರಿಗೆ ಗೊತ್ತಿರಲಿಲ್ವ…? ಸ್ವಾತಂತ್ರ್ಯ ಬಂದ ಬಳಿಕ 60 ವರ್ಷ ರಾಜ್ಯ ಆಳಿದಾಗ ಗೊತ್ತಾಗಲಿಲ್ವ. ಈಗ ದಲಿತರ ಹೆಸರು ಬರ್ತಿದೆಯಾ? ದಲಿತರು ಸಿಎಂ ಆಗೋದನ್ನು ನಾನು ತಪ್ಪಿಸಲಿಲ್ಲ. ದಲಿತರನ್ನು ಸಿಎಂ ಆಗುವುದನ್ನು ತಪ್ಪಿಸಿದ್ದೇ ಈಗ ಮತ್ತೆ ಸಿಎಂ ಆಗಬೇಕು ಎಂದು ಹೇಳಿಕೊಳ್ಳುತ್ತಿದ್ದಾರಲ್ಲ ಅವರು. ಯಾರೂ ಮಾಡದೇ ಇರುವ ಸಾಧನೆ ಮಾಡಿ, ನಾನಿದ್ದರೇ ಕಾಂಗ್ರೆಸ್ ಅಂತ ಹೇಳ್ತಾರಲ್ಲ. 130 ಸೀಟಿನಲ್ಲಿ ಮುಖ್ಯಮಂತ್ರಿಯಾಗಿ 78ಕ್ಕೆ ಬಂದರಲ್ಲ ಅವರು ದಲಿತ ಸಿಎಂ ಆಗೋದನ್ನು ತಪ್ಪಿಸಿದ್ದು ಹೇಳಿಕೆ. ದಲಿತರು ಸಿಎಂ ಆಗೋದನ್ನು ತಪ್ಪಿಸಿದ್ದೇ ಸಿದ್ದರಾಮಯ್ಯ ಎಂದು ಹೆಸರೇಳದೇ ಹೆಚ್‍ಡಿಕೆ ವಾಗ್ದಾಳಿ ನಡೆಸಿದರು.

  • ನನ್ನ ಮಗನಂತೆ ನಿಖಿಲ್ ಎಂದಿದ್ದ ಚಲುವರಾಯಸ್ವಾಮಿ ಇಂದು ಮಾತಾಡಲೇ ಇಲ್ಲ

    ನನ್ನ ಮಗನಂತೆ ನಿಖಿಲ್ ಎಂದಿದ್ದ ಚಲುವರಾಯಸ್ವಾಮಿ ಇಂದು ಮಾತಾಡಲೇ ಇಲ್ಲ

    ಮಂಡ್ಯ: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ನನ್ನ ಮಗನಿದ್ದಂತೆ ಎಂದು ಹೇಳಿದ್ದ ಮಾಜಿ ಸಚಿವ ಚಲುವರಾಯಸ್ವಾಮಿ ಇಂದು ಎದುರು ಬದುರಾದರೂ ಒಬ್ಬರಿಗೊಬ್ಬರು ಮಾತನಾಡಿಸಲೇ ಇಲ್ಲ.

    ಲೋಕಸಭಾ ಚುನಾವಣೆ ವೇಳೆ ಬದ್ಧವೈರಿಗಳಾಗಿ ಬದಲಾಗಿರುವ ನಿಖಿಲ್ ಮತ್ತು ಚಲುವರಾಯಸ್ವಾಮಿ ಇಂದು ಕೆ.ಆರ್ ಪೇಟೆ ಮಿನಿ ವಿಧಾನಸೌಧದಲ್ಲಿ ಮುಖಾಮುಖಿ ಆದರು. ಕಾರಿಡಾರ್ ನಲ್ಲಿ ಇಬ್ಬರೂ ಇದ್ದರು. ಚಲುವರಾಯಸ್ವಾಮಿ ನಡೆದುಕೊಂಡು ಬರುತ್ತಿದ್ದರೆ, ನಿಖಿಲ್ ಆ ಕಡೆ ಮುಖ ತಿರುಗಿಸಿದರು. ಚಲುವರಾಯಸ್ವಾಮಿಯೂ ಮಾತಾಡಿಸಲು ಹೋಗಲಿಲ್ಲ. ಈ ಮೂಲಕ ವೈರತ್ವ ಕಡಿಮೆ ಆಗಿಲ್ಲ ಅನ್ನೋದನ್ನ ಸಾಬೀತುಪಡಿಸಿದ್ರು.

    ನಿಖಿಲ್ ಮಗನಿದ್ದಂತೆ:
    ಜೆಡಿಎಸ್ ಅನರ್ಹ ಶಾಸಕ ನಾರಾಯಣ ಗೌಡರ ಬಳಿಕ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಕೆ.ಆರ್ ಪೇಟೆ ಉಪಚುನಾವಣೆ ಹೊಸ್ತಿಲಲ್ಲಿ ಮತ್ತೆ ನಿಖಿಲ್ ಕುಮಾರಸ್ವಾಮಿ ಅವರ ಸೋಲಿನ ಪರಾಮರ್ಶೆ ಮಾಡಿದ್ದರು.

    ನಿಖಿಲ್ ಒಳ್ಳೆಯ ಹುಡುಗ. ರಾಜಕಾರಣ ಮಾಡುವುದಕ್ಕೆ ಇನ್ನೂ ಸಮಯ ಇತ್ತು. ದೊಡ್ಡದಾಗಿ ಮೀಸೆ ತಿರುಗಿಸಿ ಕರೆತಂದು ಸೋಲಿಸಿದರು. ನಿಖಿಲ್ ಎಲ್ಲೋ ಒಂದು ಕಡೆ ರಾಜಕಾರಣ ಮಾಡುಕೊಳ್ಳುತ್ತಿದ್ದರು. ಅವರನ್ನು ಕರೆತಂದು ಸೋಲಿಸಿದರು. ಸಿ.ಎಸ್ ಪುಟ್ಟರಾಜು ಅವರೇ ಚುನಾವಣೆಯ ಜವಾಬ್ದಾರಿ ತೆಗೆದುಕೊಂಡಿದ್ದರು ಎಂದು ಹೇಳುವ ಮೂಲಕ ಪರೋಕ್ಷವಾಗಿ ನಿಖಿಲ್ ಸೋಲಿಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಕಾರಣ ಎಂದು ಆರೋಪಿಸಿದ್ದರು.

    ನನಗೂ ಕುಮಾರಸ್ವಾಮಿಗೂ ವೈರತ್ವ ಇದೆ. ಹಾಗಂತ ನಿಖಿಲ್ ಜೊತೆಗೂ ವೈರತ್ವ ಕಟ್ಟಿಕೊಳ್ಳೋದಕ್ಕೆ ಆಗುತ್ತಾ. ಅವನೂ ನನ್ನ ಮಗ ಇದ್ದಂಗೆ. ಸಿ.ಎಸ್ ಪುಟ್ಟರಾಜು ಮಂಡ್ಯ ಜಿಲ್ಲೆಯ ಪ್ರಶ್ನಾತೀತ ನಾಯಕರಾಗಿದ್ದಾರೆ. ರಾಜ್ಯಕ್ಕೆ ದೇವೇಗೌಡರು ಇದ್ದಂತೆ ಮಂಡ್ಯಕ್ಕೆ ಸಿ.ಎಸ್.ಪುಟ್ಟರಾಜು ಇದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬುದ್ಧಿ ಕಲಿಸಿಲ್ವಾ? ಹಾಗೆ ನಾರಾಯಣಗೌಡರಿಗೂ ಜನ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದ್ದರು.

  • ಆಪ್ತರನ್ನೇ ಬಿಟ್ಟು ದಾಳ ಉರುಳಿಸಿದ ‘ಟಗರು’-ಒಂದೇ ಅಸ್ತ್ರ, ಎರಡು ಟಾರ್ಗೆಟ್

    ಆಪ್ತರನ್ನೇ ಬಿಟ್ಟು ದಾಳ ಉರುಳಿಸಿದ ‘ಟಗರು’-ಒಂದೇ ಅಸ್ತ್ರ, ಎರಡು ಟಾರ್ಗೆಟ್

    ಬೆಂಗಳೂರು: ಪಕ್ಷ ಸಂಘಟನೆಗೆ ಮುಂದಾಗಿರುವ ಮಾಜಿ ಸಿಎಂ, ಕಾಂಗ್ರೆಸ್ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ತಮ್ಮ ಆಪ್ತರ ಮೂಲಕ ಹೊಸ ದಾಳ ಉರುಳಿಸಿದ್ದಾರೆ. ಒಂದು ಅಸ್ತ್ರದ ಮೂಲಕ ಎರಡು ಗುರಿ ತಲುಪಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಹೊಸ ದಾಳದ ಮೂಲಕ ಕೆಲವರಿಗೆ ಶಾಕ್ ನೀಡಲು ಸಿದ್ದರಾಮಯ್ಯ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ರಿಟರ್ನ್ ಆಫರ್:
    ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಅವರಿಗೆ ಸಿದ್ದರಾಮಯ್ಯ ಆಫರ್ ನೀಡಿದ್ದಾರಂತೆ. ಈಗಾಗಲೇ ಯೋಗೇಶ್ವರ್ ಜೊತೆ ಸಿದ್ದರಾಮಯ್ಯರ ಅಣತಿಯಂತೆ ಆಪ್ತ ಚಲುವರಾಯ ಸ್ವಾಮಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದರೆ ಯೋಗೇಶ್ವರ್, ಮಂತ್ರಿ ಮಾಡ್ತೀನಿ ಎಂದು ಆಪರೇಷನ್ ಕಮಲಕ್ಕೆ ನನ್ನನ್ನು ಬಳಸಿಕೊಂಡರು. ಬಿಜೆಪಿಗೆ ಸೇರಿದ್ದಾಗಿದೆ, ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಹೋಗುತ್ತಿರಬೇಕು. ಮತ್ತೆ ಕಾಂಗ್ರೆಸ್‍ಗೆ ಬರೋಣ ಅಂದ್ರೆ ಡಿಕೆ ಬ್ರದರ್ಸ್ ಭಯವಿದೆ. ನನಗೂ ಒಳ್ಳೆಯ ಕಾಲ ಬರುತ್ತೆ, ನನ್ನನ್ನು ಬಿಟ್ಟು ಬಿಡಿ ಎಂದು ಸಿದ್ದರಾಮಯ್ಯರ ಆಫರ್ ತಿರಸ್ಕರಿದ್ದಾರೆ ಎಂದು ತಿಳಿದು ಬಂದಿದೆ.

    ಸಿಪಿವೈ ಅಸ್ತ್ರ ಯಾಕೆ?
    ಸಿ.ಪಿ.ಯೋಗೇಶ್ವರ್ ಮತ್ತೆ ಕಾಂಗ್ರೆಸ್ ಗೆ ಬಂದರೆ ಪರೋಕ್ಷವಾಗಿ ರಾಮನಗರದ ಭಾಗದಲ್ಲಿ ಡಿ.ಕೆ.ಸಹೋದರರ ವಿರುದ್ಧ ಪ್ರಬಲ ನಾಯಕನನ್ನು ಕರೆ ತಂದಂತಾಗುತ್ತದೆ. ಇತ್ತ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸುವ ರಾಮನಗರದ ಪ್ರಬಲ ನಾಯಕರಾಗಿರುವ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾದ್ರೆ ಬಂದ್ರೆ ಜೆಡಿಎಸ್ ಗೆ ತಿರುಗೇಟು ನೀಡಿದಂತಾಗುತ್ತದೆ. ಹಾಗಾಗಿ ಸಿದ್ದರಾಮಯ್ಯ ಇನ್ನೊಂದು ಸುತ್ತಿನ ಮಾತುಕತೆ ನಡೆಸುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

  • ನಾರಾಯಣಗೌಡ, ಚಲುವರಾಯಸ್ವಾಮಿಯವರಿಂದ ಹೇಳಿಸಿಕೊಳ್ಳುವಷ್ಟು ದೇವೇಗೌಡರು ಧೃತಿಗೆಟ್ಟಿಲ್ಲ- ಪುಟ್ಟರಾಜು

    ನಾರಾಯಣಗೌಡ, ಚಲುವರಾಯಸ್ವಾಮಿಯವರಿಂದ ಹೇಳಿಸಿಕೊಳ್ಳುವಷ್ಟು ದೇವೇಗೌಡರು ಧೃತಿಗೆಟ್ಟಿಲ್ಲ- ಪುಟ್ಟರಾಜು

    ಮಂಡ್ಯ: ನಾರಾಯಣಗೌಡರಿಂದ ವಾಗ್ದಾಳಿ ಮಾಡಿಸಿಕೊಳ್ಳುವಷ್ಟು ದೇವೇಗೌಡರು ಧೃತಿಗೆಟ್ಟಿಲ್ಲ. ಅವರಿಂದ ಹೇಳಿಸಿಕೊಳ್ಳುವಷ್ಟರ ಮಟ್ಟಿಗೆ ನಾವಿನ್ನೂ ಬಂದಿಲ್ಲ. ಅಲ್ಲದೆ ಜೆಡಿಎಸ್ ಬಗ್ಗೆ ಮಾತನಾಡುವ ಚಲುವರಾಯಸ್ವಾಮಿ ಯಾವ ಪಕ್ಷ ಎಂದು ಹೇಳಬೇಕು ಎಂದು ಮಾಜಿ ಸಚಿವ ಪುಟ್ಟರಾಜು ವಾಗ್ದಾಳಿ ನಡೆಸಿದ್ದಾರು.

    ಜಿಲ್ಲೆಯ ಪಾಂಡವಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಲುವರಾಯಸ್ವಾಮಿ ಅವರು ಯಾವ ಪಕ್ಷ ಎಂದು ಹೇಳಬೇಕು. ಹಗಲು ಸಿದ್ದರಾಮಯ್ಯ ಅವರ ಪಕ್ಕ ಕುಳಿತುಕೊಂಡು ಯಡಿಯೂರಪ್ಪ ಅವರನ್ನು ಬೈಯುತ್ತಾರೆ. ರಾತ್ರಿ ಯಡಿಯೂರಪ್ಪ ಅವರ ಜೊತೆ ಕೂತು ಊಟ ಮಾಡುತ್ತಾರೆ. ಚಲುವರಾಯಸ್ವಾಮಿ ಮೊದಲು ಯಾವ ಪಕ್ಷ ಎಂದು ಗುರುತಿಸಿಕೊಳ್ಳಬೇಕು ಹರಿಹಾಯ್ದಿದ್ದಾರೆ.

    ದೇವೇಗೌಡರು ಮತ್ತು ಅವರ ಮಕ್ಕಳ ಮೇಲೆ ದ್ವೇಷ ಮಾಡಿದವರು ಮನೆಗೆ ಹೋಗಿದ್ದಾರೆ. ಚಲುವರಾಯಸ್ವಾಮಿ ಬಾಳೆ ಎಲೆ ಆಗಬೇಕೇ ಹೊರತು, ಎಂಜಲು ಎಲೆ ಆಗಬಾರದು. ರಾಜಕೀಯವಾಗಿ ಬೆಳೆಯಬೇಕೆಂದರೆ ಬೆಳೆಯಲಿ. ನನ್ನ ರಾಜಕೀಯ ಇತಿಹಾಸದಲ್ಲಿ ನಾನು ಕುದುರೆಯ ಮೇಲೆ ಇದ್ದೇನೆ. ಜನರೊಟ್ಟಿಗೆ ನಿಂತು ಕೆಲಸ ಮಾಡುತ್ತೀದ್ದೇನೆ. ನಾನು ಮೊದಲಿನಿಂದ ಹೇಗೆ ಇದ್ದೇನೋ ಈಗಲೂ ಹಾಗೇ ಇದ್ದೇನೆ ಎಂದು ಕುಟುಕಿದರು.

    ಶಿವಕುಮಾರ್ ಹಾಗೂ ಕುಮಾರಸ್ವಾಮಿ ಅವರನ್ನು ಬೇರೆ ಮಾಡಲು ಚಲುವರಾಯಸ್ವಾಮಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಈಗ ಸರಿಯಾಗಿ ನೆಲೆ ಇಲ್ಲವಲ್ಲ, ಹೀಗಾಗಿ ಅವರ ಬೇಳೆ ಬೇಯಿಸಿಕೊಳ್ಳಬೇಕಿದೆ. ಹೀಗಾಗಿ ಏನೆನೋ ಮಾತನಾಡುತ್ತಿದ್ದಾರೆ. ಡಿಕೆಶಿ- ಕುಮಾರಸ್ವಾಮಿ ಸಂಬಂಧವನ್ನು ಬೇರ್ಪಡಿಸುವ ಹುನ್ನಾರವನ್ನು ಚಲುವರಾಯಸ್ವಾಮಿ ಮಾಡುತ್ತಿದ್ದಾರೆ. ಚಲುವರಾಯಸ್ವಾಮಿ ಚುನಾವಣೆಯಲ್ಲಿ ಸೋತ ಬಳಿಕ ಗುರುತಿಸಿಕೊಳ್ಳಲು ಇಂತಹ ಹೇಳಿಕೆ ಕೊಡುತ್ತಿದ್ದಾರೆ ಎಂದು ದೂರಿದರು.

    ಮಂಡ್ಯದ ಮೈ ಷುಗರ್ ಸಕ್ಕರೆ ಕಾರ್ಖಾನೆ ಆರಂಭಿಸಬೇಕು. ಕಾರ್ಖಾನೆ ಆರಂಭವಾಗದೇ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಕಾರ್ಖಾನೆ ಒಂದು ವಾರದಲ್ಲಿ ಆರಂಭವಾಗಬೇಕು. ಇಲ್ಲವಾದಲ್ಲಿ ದಸರಾ ನಡೆಯಲು ಬಿಡುವುದಿಲ್ಲ ಎಂದು ತಿಳಿಸಿದರು. ಇದೇ ವೇಳೆ ನಿಖಿಲ್ ಸೋಲಿನ ಜವಾಬ್ದಾರಿಯನ್ನು ನಾನು ಹೊತ್ತುಕೊಂಡಿದ್ದೇನೆ ಎಂದು ಈಗಾಲೇ ಹೇಳಿದ್ದೇನೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

  • ಸರ್ಕಾರ ಉಳಿಸಲು ಡಿಕೆಶಿ ಬೆನ್ನಿಗೆ ನಿಂತರು, ಎಚ್‍ಡಿಕೆ ಕನಿಷ್ಟ ಹೋರಾಟಕ್ಕೂ ಬರಲಿಲ್ಲ- ಚೆಲುವರಾಯಸ್ವಾಮಿ

    ಸರ್ಕಾರ ಉಳಿಸಲು ಡಿಕೆಶಿ ಬೆನ್ನಿಗೆ ನಿಂತರು, ಎಚ್‍ಡಿಕೆ ಕನಿಷ್ಟ ಹೋರಾಟಕ್ಕೂ ಬರಲಿಲ್ಲ- ಚೆಲುವರಾಯಸ್ವಾಮಿ

    ಮಂಡ್ಯ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಟ್ಟ ಉಳಿಸಲು ಎಲ್ಲರನ್ನೂ ಎದುರು ಹಾಕಿಕೊಂಡರು. ಆಗ ಅವರೊಂದಿಗೆ ಡಿಕೆಶಿ ಒಬ್ಬರೇ ಇದ್ದರು. ಇಂದು ಅವರೊಂದಿಗೆ ಕುಮಾರಸ್ವಾಮಿ ನಿಲ್ಲಲಿಲ್ಲ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರಿಗೆ ಇಂತಹ ಕಷ್ಟ ಬಂದಿದ್ದರೆ ಡಿ.ಕೆ.ಶಿವಕುಮಾರ್ ಸ್ಟೇಷನ್ ಹತ್ತಿರವೇ ಕೂರುತ್ತಿದ್ದರು. ಆದರೆ ಎಚ್‍ಡಿಕೆ ಡಿಕೆಶಿಗೆ ಕನಿಷ್ಟ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡಲಿಲ್ಲ. ಒಕ್ಕಲಿಗ ಸಂಘಟನೆಗಳಿಂದ ನಡೆದ ಹೋರಾಟಕ್ಕೆ ಬಾರದೇ ಚನ್ನಪಟ್ಟಣದಲ್ಲಿ ಕಾರ್ಯಕ್ರಮ ಹಾಕಿಕೊಂಡರು. ಉದ್ದೇಶ ಪೂರ್ವಕವಾಗಿ ಚನ್ನಪಟ್ಟಣಕ್ಕೆ ಹೋಗಿದ್ರಾ? ಹೋರಾಟಕ್ಕೆ ಹೋಗುವ ಜನರಿಂದ ದೂರ ಉಳಿಯಲು ಹೋಗಿದ್ರಾ ಎಂದು ಡಿಕೆಶಿ ಪರ ಒಕ್ಕಲಿಗ ಸಮುದಾಯದ ಹೋರಾಟಕ್ಕೆ ಗೈರಾದ ಎಚ್‍ಡಿಕೆಗೆ ಚಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ.

    ಡಿ.ಕೆ.ಶಿವಕುಮಾರ್ ಮಾಡಬಾರದ ಅಪರಾಧ ಮಾಡಿಲ್ಲ. ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆಗೆ ಮಾಡಿಕೊಳ್ಳಲೂ ಡಿಕೆಶಿ ಬಿಡಲಿಲ್ಲ. ಕಾಂಗ್ರೆಸ್ ರಕ್ಷಣೆ ಮಾಡಿಕೊಳ್ಳಲು ನಿಂತಿದ್ದರು. ಈ ಸಿಟ್ಟು ಬಿಜೆಪಿ ನಾಯಕರಿಗೆ ಡಿಕೆಶಿ ಮೇಲೆ ಇತ್ತು. ಈ ಹಿಂದೆ ದೇವೇಗೌಡರ ಕುಟುಂಬಕ್ಕೂ ಡಿಕೆಶಿಗೂ ವೈಮನಸ್ಸಿತ್ತು. ಹೀಗಾಗಿ ಇದೆಲ್ಲ ಚರ್ಚೆ ನಡೆಯುತ್ತಿದೆ. ಮುಂದೊಂದು ದಿನ ಸತ್ಯ ಹೊರಗಡೆ ಬರುತ್ತದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಡಿಕೆಶಿ ಬಂಧನಕ್ಕೆ ದೇವೇಗೌಡರ ಕುಟುಂಬ ಕಾರಣ ಎಂದು ದೂರಿದರು.

    ಈ ಹಿಂದೆ ಒಕ್ಕಲಿಗ ಸಮುದಾಯ ಡಿಕೆಶಿ ಬಂಧನ ಖಂಡಿಸಿ ಪ್ರತಿಭಟನೆ ನಡೆಸಿದಾಗ ಎಚ್‍ಡಿಕೆ ಭಾಗವಹಿಸಿರಲಿಲ್ಲ. ಇದಕ್ಕೆ ತಿರುಗೇಟು ನೀಡಿದ್ದ ಚೆಲುವರಾಯಸ್ವಾಮಿ, ಡಿಕೆಶಿಗೆ ದರೋಡೆ ಮಾಡೋದಕ್ಕೆ ನಾವು ಹೇಳಿದ್ವಾ, ಇದಕ್ಕೆಲ್ಲ ನಾನು ಹೊಣೆಯೇ? ಇದು ಮಾಜಿ ಸಿಎಂ ಕುಮಾರಸ್ವಾಮಿ ಬಾಯಿಂದ ಬಂದ ಮಾತುಗಳಂತೆ. ಮೈಸೂರಿನ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಹೀಗೆಂದು ಎಚ್‍ಡಿಕೆ ಹೇಳಿದ್ದಂತೆ. ಡಿಕೆಶಿ ಪರ ಹೋರಾಟದ ಸಭೆಗೆ ಹೋಗಲಿಲ್ಲ ಎಂದು ದೂಷಣೆ ಮಾಡುತ್ತಿದ್ದಾರೆ. ಇಂತಹ ದರೋಡೆ ಮಾಡೋದಕ್ಕೆ ಹೇಳಿದ್ವಾ ನಾವು. ದರೋಡೆ ಮಾಡಿ ಸಾರ್ವಜನಿಕವಾಗಿ ಹಂಚುತ್ತಿದ್ದಾರಾ? ಇದಕ್ಕೆ ನಾನು ಹೊಣೆನಾ? ನಾನು ಸಭೆಗೆ ಯಾಕೆ ಹೋಗಬೇಕಿತ್ತು ಎಂದು ಸಭೆಯಲ್ಲಿ ಮಾತನಾಡಿದ್ದಾರಂತೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಿಚಾಯಿಸಿದ್ದಾರೆ.

  • ಚಲುವರಾಯಸ್ವಾಮಿ ಸಂಬಂಧಿಕರಿಂದ ಟ್ರ್ಯಾಕ್ಟರ್ ಹತ್ತಿಸಿ ರೈತರ ಹತ್ಯೆಗೆ ಯತ್ನ?

    ಚಲುವರಾಯಸ್ವಾಮಿ ಸಂಬಂಧಿಕರಿಂದ ಟ್ರ್ಯಾಕ್ಟರ್ ಹತ್ತಿಸಿ ರೈತರ ಹತ್ಯೆಗೆ ಯತ್ನ?

    ಮಂಡ್ಯ: ಜಿಲ್ಲೆಯ ನಾಗಮಂಗಲ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಚಲುವರಾಯಸ್ವಾಮಿ ಅವರ ಸಂಬಂಧಿಕರು ಎನ್ನಲಾದವರಿಂದ ಟ್ರ್ಯಾಕ್ಟರ್ ಹತ್ತಿಸಿ ರೈತರ ಕುಟುಂಬವನ್ನು ಹತ್ಯೆ ಮಾಡಲು ಯತ್ನಿಸಿ ದರ್ಪ ಮೆರೆದಿರುವ ಘಟನೆಯೊಂದು ನಡೆದಿದೆ.

    ಕೋರೆ ನಡೆಸಲು ಜಮೀನು ಕೊಡಲಿಲ್ಲ ಎಂದು ಟ್ರ್ಯಾಕ್ಟರ್ ಹತ್ತಿಸಿ ರೈತ ಕುಟುಂಬವನ್ನು ಕೊಲ್ಲಲು ಮುಂದಾಗಿದ್ದಾರೆ. ಬುಧವಾರ ಜಿಲ್ಲೆಯ ನಾಗಮಂಗಲ ತಾಲೂಕಿನ ಇಜ್ಜಲಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಜ್ಜಲಘಟ್ಟ ಗ್ರಾಮದ ರೈತ ಮರಿಗೌಡ ಹಾಗೂ ಅವರ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

    ಮರಿಗೌಡ ಅವರ ಜಮೀನಿನ ಪಕ್ಕದಲ್ಲಿ ಗಣಿಗಾರಿಕೆ ಮಾಡಲು ಅನುಮತಿ ತೆಗೆದುಕೊಳ್ಳಲಾಗಿತ್ತು. ಹಾಗೆಯೇ ಮರಿಗೌಡರ ಜಮೀನಿನ ಮೇಲೂ ಕಣ್ಣು ಇಟ್ಟಿದ್ದ ಅವರು, ಜಮೀನನ್ನು ಬಿಟ್ಟು ಕೊಡಿ ಎಂದು ಕಿರಿಕ್ ತೆಗೆದಿದ್ದಾರೆ. ಆದರೆ ನಾನು ನನ್ನ ಜಮೀನಿನಲ್ಲಿ ತೆಂಗಿನ ಗಿಡ ನೆಟ್ಟಿದ್ದೇನೆ, ನಾನು ಇದನ್ನು ಬಿಟ್ಟು ಕೊಡಲ್ಲ ಎಂದು ಮರಿಗೌಡರು ನಿರಾಕರಿಸಿದ್ದರು.

    ಇಷ್ಟಕ್ಕೆ ಕೋಪಗೊಂಡ  ಮಾಜಿ ಶಾಸಕರ ಸಂಬಂಧಿಕರು ಎನ್ನಲಾದವರು ತಮ್ಮ ಬೆಂಬಲಿಗರೊಂದಿಗೆ ಜಮೀನಿಗೆ ಬಂದು ಗಲಾಟೆ ಮಾಡಿದ್ದಾರೆ. ಜಮೀನಿನಲ್ಲಿದ್ದ ತೆಂಗಿನ ಗಿಡಗಳು ಮತ್ತು ಡ್ರಿಪ್ ಪೈಪ್‍ಗಳನ್ನು ಕಿತ್ತು ಹಾಕಿ ದರ್ಪ ಮೆರೆದಿದ್ದಾರೆ. ಇದಾದ ಬಳಿಕ ಮರಿಗೌಡರಿಗೆ ಹಾಗೂ ಅವರ ಮಗ, ಮಗಳು, ತಾಯಿ, ಹೆಂಡತಿ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಲೆಗೆ ಮಾಡಲು ಯತ್ನಿಸಿದ್ದಾರೆ.

    ರೈತ ಕುಟುಂಬದ ಮೇಲೆ ದರ್ಪ ಮೆರೆದಿರುವ ದೃಶ್ಯಗಳನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಈ ಸಂಬಂಧ ರೈತ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಈ ಬಗ್ಗೆ ಮಾಜಿ ಶಾಸಕ ಚಲುವರಾಯ ಸ್ವಾಮಿ ಅವರ ಅಣ್ಣನ ಮಗ  ಉಮೇಶ್ ಪ್ರತಿಕ್ರಿಯಿಸಿ, ನನಗೂ ಅದಕ್ಕೂ ಸಂಬಂಧವಿಲ್ಲ. ನಾನು ರಾಜಿ ಪಂಚಾಯ್ತಿ ಮಾಡಲೆಂದು ಸ್ಥಳಕ್ಕೆ ತೆರಳಿದ್ದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.

  • ಜನರ ಮೇಲೆ ಕಾಳಜಿಯಿಲ್ಲ- ಮತ್ತೆ ಸಿಎಂ ವಿರುದ್ಧ ಚಲುವರಾಯಸ್ವಾಮಿ ಗುಡುಗು

    ಜನರ ಮೇಲೆ ಕಾಳಜಿಯಿಲ್ಲ- ಮತ್ತೆ ಸಿಎಂ ವಿರುದ್ಧ ಚಲುವರಾಯಸ್ವಾಮಿ ಗುಡುಗು

    ಮಂಡ್ಯ: ಸಿಎಂ ತನ್ನ ಹೆಸರು ಉಳಿಸಿಕೊಳ್ಳಲು ರೇವಣ್ಣ ಅವರ ಹೆಸರನ್ನು ಡ್ಯಾಮೇಜ್ ಮಾಡುತ್ತಿದ್ದಾರೆ ಎಂದು ಹೇಳಿದ ಬೆನ್ನಲ್ಲೇ ಇದೀಗ ಮತ್ತೆ ಮಾಜಿ ಸಚಿವ ಚಲುವರಾಯಸ್ವಾಮಿ ಅವರು ಗುಡುಗಿದ್ದಾರೆ.

    ಸಿಎಂ ವಿರುದ್ಧ ಮತ್ತೆ ಆಕ್ರೋಶ ಹೊರಹಾಕಿದ ಮಾಜಿ ಸಚಿವ, ಮಂಡ್ಯದಲ್ಲಿ ನೀರಿಗಾಗಿ ರೈತರು ಹೋರಾಟ ಮಾಡುತ್ತಿದ್ದಾರೆ. ಈ ಜಿಲ್ಲೆಯ ಜನರ ಬಗ್ಗೆ ಸರ್ಕಾರದ ತೀರ್ಮಾನ ಏನು? ಮುಖ್ಯಮಂತ್ರಿ ಮಂಡ್ಯ ಜನರ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

    ಜಿಲ್ಲೆಯಲ್ಲಿರುವ ಶಾಸಕರು, ಮಂತ್ರಿಗಳು ಮತ್ತು ಜನರು ಸರ್ಕಾರದ ಜೊತೆ ಚರ್ಚೆ ಮಾಡಿ ಜಿಲ್ಲೆಯ ಸಮಸ್ಯೆ ಪರಿಹರಿಸಲು ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ಈಗ ಪ್ರಾಧಿಕಾರದ ಕಡೆ ಕೈ ತೋರಿಸುತ್ತಾರೆ. ಆದರೆ ಜಿಲ್ಲೆಯ ಜನರಿಗೆ ನೀರು ಕೊಡಲು ನಿಮ್ಮ ಪ್ರಯತ್ನ ಏನು ಎಂದು ಪ್ರಶ್ನಿಸಿ, ಮಳೆಯಾಗುವ ನೀರಿಕ್ಷೆಯಿರುವುದರಿಂದ ನಮ್ಮ ರೈತರಿಗೆ ನೀರು ಕೊಟ್ಟು, ತಮಿಳುನಾಡಿಗೂ ಕೊಡುವ ಅವಕಾಶ ಇದೆ ಎಂದರು.

    ಜಿಲ್ಲೆಯ ಜನರ ಬಗ್ಗೆ ನಿಮಗೆ ದ್ವೇಷ ಇದೆಯಾ? ರಾಜಕಾರಣ ಏನಾದರೂ ಮಾಡಿ. ಪಕ್ಷಕ್ಕಿಂತ ಹೆಚ್ಚು ನಮಗೆ ಜಿಲ್ಲೆಯ ಜನರ ಬಗ್ಗೆ ಕಾಳಜಿ ಇದೆ. ಸ್ವಾತಂತ್ರ್ಯ ನಂತರ ಮಂಡ್ಯ ಜಿಲ್ಲೆ ಬಗ್ಗೆ ಇಷ್ಟು ತಾತ್ಸಾರ ನೋಡಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಅವರನ್ನು ಕೇಳಿದರೆ ನನ್ನನ್ನೇನು ಕೇಳುತ್ತೀರಿ, ಡೆಲ್ಲಿಗೆ ಹೋಗಿ ಎನ್ನುತ್ತಾರೆ. ಹಾಗಾದರೆ ಇವರು ಯಾಕೆ ಇದ್ದಾರೆ. ಜಿಲ್ಲೆಯ ಬಗ್ಗೆ ಇವರಿಗೆ ಏನು ಗೌರವ ಇದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಮುಖ್ಯಮಂತ್ರಿ ಆಗಿ ಮುಂದುವರಿಯಲು ವಹಿಸುವ ಕಾಳಜಿಯಷ್ಟೇ ಜಿಲ್ಲೆಯ ಜನರ ಬಗ್ಗೆಯೂ ಕಾಳಜಿ ವಹಿಸಲಿ. ಈ ರೀತಿಯ ಸರ್ಕಾರ ಹಿಂದೆ ಬಂದಿಲ್ಲ, ಮುಂದೆ ಬರೋದು ಇಲ್ಲ ಅನಿಸುತ್ತೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

    ಶಾಸಕರ ರಾಜೀನಾಮೆ ವಿಚಾರ ಬಗ್ಗೆ ಮಾತನಾಡಿದ ಅವರು, ಈ ರೀತಿಯ ರಾಜಕಾರಣ ಎಂದೂ ನೋಡಿಲ್ಲ. ಮುಂದೆ ನೋಡುವ ಪರಿಸ್ಥಿತಿ ಬರೋದು ಬೇಡ. 48 ಗಂಟೆಗಳಲ್ಲಿ ಕೋರ್ಟ್ ತೀರ್ಪಿದೆ. ಆ ನಂತರ ಏನಾಗುತ್ತದೆ ಎಂದು ನೋಡೋಣ. ನಾನೊಬ್ಬ ಕಾಂಗ್ರೆಸ್ ಲೀಡರ್ ಆಗಿರೋದ್ರಿಂದ ಸರ್ಕಾರದ ಬಗ್ಗೆ ನನ್ನ ನಿಜವಾದ ಅಭಿಪ್ರಾಯ ಹೇಳಲು ಆಗಲ್ಲ ಎಂದು ಹೇಳಿದರು.

  • ಸಿಎಂ ತನ್ನ ಹೆಸ್ರು ಉಳಿಸಿಕೊಳ್ಳಲು ರೇವಣ್ಣನ ಹೆಸ್ರಿಗೆ ಡ್ಯಾಮೇಜ್ ಮಾಡ್ತಿದ್ದಾರೆ: ಚಲುವರಾಯಸ್ವಾಮಿ

    ಸಿಎಂ ತನ್ನ ಹೆಸ್ರು ಉಳಿಸಿಕೊಳ್ಳಲು ರೇವಣ್ಣನ ಹೆಸ್ರಿಗೆ ಡ್ಯಾಮೇಜ್ ಮಾಡ್ತಿದ್ದಾರೆ: ಚಲುವರಾಯಸ್ವಾಮಿ

    ಮಂಡ್ಯ: ರಾಜ್ಯದಲ್ಲಿ ಮುಖ್ಯಮಂತ್ರಿಗಳು ತನ್ನ ಹೆಸರನ್ನು ಉಳಿಸಿಕೊಳ್ಳಲು ರೇವಣ್ಣನ ಹೆಸರನ್ನು ಡ್ಯಾಮೇಜ್ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಚಲುವರಾಯಸ್ವಾಮಿ ಆರೋಪಿಸಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಈ ಸ್ಥಿತಿಗೆ ಮುಖ್ಯಮಂತ್ರಿಗಳೇ ಕಾರಣ. ಆದರೆ ರೇವಣ್ಣ ಅವರಿಂದ ಈ ರೀತಿ ಆಗಿದೆ ಅಂತಿದ್ದಾರೆ. ಹಾಗಾದರೆ ಅವರನ್ನೇ ಸಚಿವ ಸ್ಥಾನದಿಂದ ಹೊರಗಿಟ್ಟು ಸರ್ಕಾರ ನಡೆಸಬಹುದಿತ್ತು ಎಂದು ಗರಂ ಆದರು.

    ಮೈತ್ರಿ ಸರ್ಕಾರ ಈ ರೀತಿ ಆಗಲು ಅಣ್ಣ-ತಮ್ಮಂದಿರೇ ಹೊಣೆ ಮುಖ್ಯಮಂತ್ರಿ ಇಲ್ಲದೇ ರೇವಣ್ಣ ಒಬ್ಬರೇ ಹೊಣೆಯಾಗಲು ಸಾಧ್ಯವಿಲ್ಲ. ಅಂತಿಮವಾಗಿ ಸಹಿ ಹಾಕುವವರು, ನಿರ್ಧಾರ ತೆಗೆದುಕೊಳ್ಳುವವರು ಮುಖ್ಯಮಂತ್ರಿ ತಾನೇ. ಮುಖ್ಯಮಂತ್ರಿಗಳು ತನ್ನ ಹೆಸರು ಉಳಿಸಿಕೊಳ್ಳಲು ರೇವಣ್ಣ ಹೆಸರು ಡ್ಯಾಮೇಜ್ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

    ರಾಜ್ಯದಲ್ಲಿ ನಡೆಯುತ್ತಿರವ ವಿದ್ಯಮಾನಗಳಿಗೆ ನೇರ ಹೊಣೆ ಮುಖ್ಯಮಂತ್ರಿಯೇ ಹೊರತು ರೇವಣ್ಣ ಅಲ್ಲ. ರಾಜಕೀಯ ಅನುಭವ ಇಲ್ಲದವರು ರೇವಣ್ಣ ಎನ್ನುತ್ತಾರೆ ಅಷ್ಟೇ. ರೇವಣ್ಣ ಅವರು ಮುಖ್ಯಮಂತ್ರಿಗಳನ್ನು ಮೀರಿ ಏನು ಮಾಡಲು ಸಾಧ್ಯ. ಹೀಗಾಗಿ ರೇವಣ್ಣ ಅವರ ಹಿಂದೆ ಮುಖ್ಯಮಂತ್ರಿಗಳು ಇದ್ದಾರೆ ಎಂದು ಸಿಎಂ ವಿರುದ್ಧ ಕಿಡಿಕಾರಿದರು.

    ದೇವೇಗೌಡರ ಕುಟುಂಬದವರ ಕಿರುಕುಳ ರಾಜೀನಾಮೆಗೆ ಕಾರಣ ಎಂಬ ವಿಚಾರದ ಬಗ್ಗೆ ಮಾತನಾಡಿ, ಹೆಗಡೆಯವರ ಕಾಲದಿಂದ ಇಲ್ಲಿಯವರೆಗೂ ಅದು ಮುಂದುವರಿದಿದೆ ಎಂದು ಪರೋಕ್ಷವಾಗಿ ಕಿರುಕುಳದ ಬಗ್ಗೆ ಚಲುವರಾಯ ಸ್ವಾಮಿ ಒಪ್ಪಿಕೊಂಡರು. ನಾವು ಏಳು ಜನ ತಪ್ಪು ಮಾಡಿ ಪಕ್ಷ ಬಿಟ್ಟು ಬರಲಿಲ್ಲ. ಇಂದು ನಾರಾಯಣಗೌಡ ಪಕ್ಷ ಬಿಟ್ಟು ಬಂದು ಮಾತನಾಡುತ್ತಿದ್ದಾರೆ. ಅದೇ ಸ್ಥಿತಿ ಸಚಿವ ಪುಟ್ಟರಾಜುಗೂ ಬರಬಹುದು ಎಂದು ಭವಿಷ್ಯ ನುಡಿದರು.

  • ನಂದು ಲೋಕೋಪಯೋಗಿ, ನೀರಾವರಿ ನನ್ನ ಇಲಾಖೆಗೆ ಬರಲ್ಲ: ರೇವಣ್ಣ

    ನಂದು ಲೋಕೋಪಯೋಗಿ, ನೀರಾವರಿ ನನ್ನ ಇಲಾಖೆಗೆ ಬರಲ್ಲ: ರೇವಣ್ಣ

    ಮಂಡ್ಯ: ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ, ನೀರಾವರಿ ನನ್ನ ಇಲಾಖೆಗೆ ಬರಲ್ಲ. ನನ್ನದು ಲೋಕೋಪಯೋಗಿ ಇಲಾಖೆ ಎಂದು ರೇವಣ್ಣ ಉತ್ತರ ನೀಡಿದ್ದಾರೆ.

    ಇಂದು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯನ್ನು ಮುಖ್ಯಮಂತ್ರಿಗಳು ಕಡೆಗಣಿಸುತ್ತಿದ್ದಾರೆ ಎಂಬ ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕೆಲವರು ಆಪಾದನೆ ಮಾಡುತ್ತಾರೆ ಬಿಡಿ ಎಂದು ಹೇಳಿದ್ದಾರೆ.

    ಚಲುವರಾಯಸ್ವಾಮಿ ಪೊಳ್ಳು ಆಪಾದನೆಗಳಿಗೆ ಉತ್ತರ ಕೊಡುತ್ತಾ ಹೋದರೆ ಪೊಳ್ಳೆದ್ದು ಹೋಗುತ್ತೇವೆ. ಮಂಡ್ಯ ಜಿಲ್ಲೆಗೆ ಕಾವೇರಿ ನೀರಿನ ಅವಶ್ಯಕತೆ ಇರೋ ಬಗ್ಗೆ ಸಂಸತ್‍ನಲ್ಲಿ ಪ್ರಜ್ವಲ್ ರೇವಣ್ಣ ಮಾತನಾಡಿದ್ದಾರೆ. ಹೇಮಾವತಿ ನದಿಯಲ್ಲಿರುವ ನೀರು ಸಹ ಇನ್ನು ಕೇವಲ ಹತ್ತು ದಿನ ಮಾತ್ರ ಕುಡಿಯಲು ಸಿಗುತ್ತದೆ ಎಂದು ತಿಳಿಸಿದರು.

    ಇನ್ನು ಮಧ್ಯಂತರ ಚುನಾವಣೆ ಬರುವ ಬಗ್ಗೆ ಕೇಳಿದಾಗ, ನನಗೆ ಆದರ ಬಗ್ಗೆ ಗೊತ್ತಿಲ್ಲ. ನಾನು ಕೇವಲ ರೋಡ್ ಮಂತ್ರಿ ನೀವು ಅದನ್ನು ರಾಷ್ಟ್ರೀಯ ಅಧ್ಯಕ್ಷರನ್ನೇ ಕೇಳಿ ಎಂದು ಹೇಳಿದ್ದಾರೆ.

  • ಋಣಮುಕ್ತ ಪತ್ರದಿಂದ ಯಾವ ಪ್ರಯೋಜನವೂ ಇಲ್ಲ – ಚಲುವರಾಯಸ್ವಾಮಿ

    ಋಣಮುಕ್ತ ಪತ್ರದಿಂದ ಯಾವ ಪ್ರಯೋಜನವೂ ಇಲ್ಲ – ಚಲುವರಾಯಸ್ವಾಮಿ

    ಮಂಡ್ಯ: ಸಾಲಮನ್ನಾದ ಋಣಮುಕ್ತ ಪತ್ರದಿಂದ ಯಾವ ಪ್ರಯೋಜನವೂ ಇಲ್ಲ ಎಂದು ಮಾಜಿ ಶಾಸಕ ಚಲುವರಾಯಸ್ವಾಮಿ ಹೇಳಿದ್ದಾರೆ.

    ಇಂದು ಜಿಲ್ಲೆಯ ನಾಗಮಂಗಲ ತಾಲೂಕಿನ ಹೆತ್ತಗೋನಹಳ್ಳಿ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ರೈತ ಹನುಮಂತಯ್ಯ ಅವರ ಮನೆಗೆ ಭೇಟಿ ನೀಡಿದ್ದ ಚಲುವರಾಯಸ್ವಾಮಿ ಅವರು ರೈತ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ನಂತರ ಮುಖ್ಯಮಂತ್ರಿ ಬಗ್ಗೆ ಮಾತನಾಡಿದ ಅವರು ಲಕ್ಷಾಂತರ ಜನರ ಜೀವನದ ಜೊತೆ ಆಟವಾಡಬೇಡಿ ಎಂದು ಎಚ್ಚರಿಕೆ ನೀಡಿದರು.

    ರೈತ ಹನುಮಂತಯ್ಯ ಅವರು ಬ್ಯಾಂಕಿಗೆ ಹೋಗಿ ಸಾಲಮನ್ನಾದ ಬಗ್ಗೆ ಕೇಳಿದ್ದಾರೆ. ಸಿಬ್ಬಂದಿ ಯಾವ ಸಾಲವೂ ಮನ್ನಾವಾಗಿಲ್ಲ ಎಂದು ಹೇಳಿದ್ದಾರೆ. ಈ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಇದನ್ನೆಲ್ಲಾ ಯೋಚಿಸಬೇಕು. ಯಾವುದೋ ಒಂದು ಪ್ರಕರಣದಲ್ಲಿ ಒಬ್ಬರಿಗೆ ಸಹಾಯ ಮಾಡಿದರೆ ಒಬ್ಬರ ಜೀವ ಉಳಿಸಬಹುದು. ಆದರೆ ರಾಜ್ಯದಲ್ಲಿ ಲಕ್ಷಾಂತರ ರೈತರು ಸಮಸ್ಯೆಯಲ್ಲಿದ್ದಾರೆ. ರಾಜ್ಯದ ಎಲ್ಲ ರೈತರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಚಲುವರಾಯಸ್ವಾಮಿ ಹೇಳಿದರು.

    ನೀವು ಕೊಡುವ ಋಣಮುಕ್ತ ಪತ್ರದಿಂದ ಬ್ಯಾಂಕ್‍ನವರು ಸಾಲ ಮನ್ನಾ ಮಾಡಲ್ಲ. ಋಣಮುಕ್ತ ಪತ್ರ ನೀವು ಕೊಡುವುದನ್ನು ನಿಲ್ಲಿಸಿ. ರೈತರಿಗೆ ಋಣಮುಕ್ತ ಪತ್ರವನ್ನು ಬ್ಯಾಂಕ್ ನೀಡಬೇಕು. ಅದನ್ನು ಬಿಟ್ಟು ಮುಖ್ಯಮಂತ್ರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ನೀಡಬಾರದು. ಬ್ಯಾಂಕಿನವರು ಕೊಟ್ಟರೆ ಆ ಪತ್ರಕ್ಕೆ ಮೌಲ್ಯವಿರುತ್ತದೆ. ಆದ್ದರಿಂದ ಬ್ಯಾಂಕ್‍ನವರಿಂದ ಋಣಮುಕ್ತ ಪತ್ರ ಕೊಡಿಸಿ ಆಗ ಮಾತ್ರ ಅದು ಊರ್ಜಿತ ಆಗುತ್ತದೆ ಎಂದು ತಿಳಿಸಿದರು.

    ಸಾಲಮನ್ನಾ ಘೋಷಣೆ ಮಾಡುವಾಗ ನೇರವಾಗಿ ಕೋ-ಆಪರೇಟೀವ್ ಬ್ಯಾಂಕ್ ಸಾಲ ಮಾತ್ರ ಮನ್ನಾ ಮಾಡುತ್ತೇನೆ ಎಂದು ಹೇಳಿದ್ದರೆ ಈಗ ಈ ರೀತಿಯ ಪರಿಸ್ಥಿತಿ ಎದುರಿಸಬೇಕಾಗಿರಲಿಲ್ಲ. ಎಲ್ಲಾ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿದ್ದರಿಂದಲೇ ರೈತರು ಇಂದಲ್ಲ ನಾಳೆ ಸಾಲಮನ್ನಾ ಆಗುತ್ತೆ ಎನ್ನುವ ಮನೋಭಾವದಲ್ಲಿದ್ದಾರೆ. ಮಾಡುವುದಾದರೆ ಪೂರ್ಣ ಪ್ರಮಾಣದಲ್ಲಿ ಸಾಲಮನ್ನಾ ಮಾಡಿ ಕ್ಲೋಸ್ ಮಾಡಿ. ಇಲ್ಲದಿದ್ದರೆ ಯಾವ ಸಾಲ ಮನ್ನಾ ಮಾಡುತ್ತೀರಾ, ಯಾವ ಸಾಲ ಮನ್ನಾ ಮಾಡುವುದಿಲ್ಲ ಎಂಬುದರ ಬಗ್ಗೆ ಮಾಹಿತಿ ಕೊಡಿ. ರೈತರು ಹೋರಾಟ ಮಾಡಿ ಅವರ ಬದುಕು ರೂಪಿಸಿಕೊಳ್ಳುತ್ತಾರೆ. ಅದನ್ನು ಬಿಟ್ಟು ಲಕ್ಷಾಂತರ ಜನರ ಜೀವನದ ಜೊತೆ ಆಟವಾಡಬೇಡಿ ಎಂದು ಕಿಡಿಕಾರಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]