Tag: chaluvarayaswamy

  • ಕಾವೇರಿ ನೀರಿಗೆ ತಮಿಳುನಾಡು ಬೇಡಿಕೆ – ಯಾವ ತಿಂಗಳು ಎಷ್ಟು ನೀರು ಬಿಡಬೇಕು?

    ಕಾವೇರಿ ನೀರಿಗೆ ತಮಿಳುನಾಡು ಬೇಡಿಕೆ – ಯಾವ ತಿಂಗಳು ಎಷ್ಟು ನೀರು ಬಿಡಬೇಕು?

    ಮಂಡ್ಯ: ಕಾವೇರಿ (Cauvery) ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಸಂಪೂರ್ಣವಾಗಿ ಕುಗ್ಗಿದ್ದು, ಅಲ್ಪ ಮಳೆ ಬಿದ್ದ ಪರಿಣಾಮ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕೆಆರ್‌ಎಸ್ ಡ್ಯಾಂನಲ್ಲಿ (KRS Dam) ಕೊಂಚ ಪ್ರಮಾಣದಲ್ಲಿ ಮಾತ್ರ ನೀರು ಶೇಖರಣೆಯಾಗಿದೆ.

    ಸದ್ಯ ಡ್ಯಾಂನಲ್ಲಿ 89 ಅಡಿಯಲ್ಲಿ 15.349 ಟಿಎಂಸಿ ನೀರು ಇದೆ. ಈ ಪೈಕಿ 8 ಟಿಎಂಸಿಯಷ್ಟು ನೀರನ್ನು ಮಾತ್ರ ಬಳಕೆ ಮಾಡಿಕೊಳ್ಳಬಹುದು. ಈ ಹೊತ್ತಿನಲ್ಲಿ ತಮಿಳುನಾಡು (Tamil Nadu) ಪ್ರತಿವರ್ಷ ನೀಡುವಂತೆ ಈ ತಿಂಗಳ ಹಂಚಿಕೆ ನೀರನ್ನು ಬಿಡುವಂತೆ ಕಾವೇರಿ ನಿರ್ವಹಣಾ ಮಂಡಳಿಯಲ್ಲಿ ಪ್ರಸ್ತಾಪ ಮಾಡಿದೆ. ಇದನ್ನೂ ಓದಿ: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೂ ಸೋಮಣ್ಣ ಟವೆಲ್? – ಕಾರ್ಯಕರ್ತರ ಸಭೆಯಲ್ಲಿ ಇಂಗಿತ

    ಡ್ಯಾಂನಲ್ಲಿ ಇರುವ ನೀರು ಎರಡು ತಿಂಗಳು ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡಬಹದು. ಇತ್ತ ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಬೆಳೆಗಳಿಗೆ ನೀರು ಇಲ್ಲದ ಕಾರಣ ಬೆಳೆಗಳು ಒಣಗುತ್ತಿವೆ. ಹೀಗಿರುವಾಗ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲು ಕಷ್ಟಸಾಧ್ಯವಾಗಿದೆ. ಈ ಬಗ್ಗೆ ಸಿಎಂ ಹಾಗೂ ನೀರಾವರಿ ಸಚಿವರೊಂದಿಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವುದಾಗಿ ಸಚಿವ ಚಲುವರಾಯಸ್ವಾಮಿ (Chaluvarayaswamy) ಹೇಳಿದ್ದಾರೆ. ಇದನ್ನೂ ಓದಿ: ಜು.19 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ – ಲಕ್ಷ್ಮಿ ಹೆಬ್ಬಾಳ್ಕರ್‌

    ಈ ಕುರಿತು ಸಂಸದೆ ಸುಮಲತಾ ಅಂಬರೀಶ್ (Sumalatha Ambareesh), ಸದ್ಯದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಕೊಡುವುದು ಕಷ್ಟ ಇದೆ. ಟ್ರಿಬ್ಯೂನಲ್ ಪ್ರಕಾರ ನೀರಿನ ಹಂಚಿಕೆ ವಿಚಾರದಲ್ಲಿ ನಿಯಮಗಳು ಇವೆ. ಸದ್ಯ ಮಳೆ ತುಂಬಾ ಕಡಿಮೆ ಬೀಳುತ್ತಿದ್ದು, ಕೆಆರ್‌ಎಸ್ ನೀರಿನ ಮಟ್ಟ ಆತಂಕಕರವಾಗಿ ಇದೆ. ಈ ಬಗ್ಗೆ ಮೊದಲು ರಾಜ್ಯದ ಸಚಿವರ ಜೊತೆ ತುರ್ತು ಸಭೆ ನಡೆಸಿ ಬಳಿಕ ಕೇಂದ್ರ ಸರ್ಕಾರ ಹಾಗೂ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿ ಪ್ರವಾಹಕ್ಕೆ ಬಿಜೆಪಿಯೇ ಕಾರಣ – AAP ಆರೋಪ

    ಅಂತಿಮ ಐತೀರ್ಪು ಪ್ರಕಾರ ಯಾರಿಗೆ ಎಷ್ಟು ನೀರು?
    ನ್ಯಾ. ಎನ್.ಪಿ.ಸಿಂಗ್, ನ್ಯಾ. ಸುಧೀರ್ ನಾರಿಯನ್, ನ್ಯಾ. ಎನ್.ಎಸ್. ರಾವ್ ಅವರನ್ನು ಒಳಗೊಂಡ ಕಾವೇರಿ ನ್ಯಾಯಾಧಿಕರಣ 2007ರ ಫೆಬ್ರವರಿ 2ರಂದು ಅಂತಿಮ ಐತೀರ್ಪು ನೀಡಿತು. ಈ ಐತೀರ್ಪಿನ ಅನ್ವಯ ಕಾವೇರಿ ಕಣಿವೆಯಲ್ಲಿ 740 ಟಿಎಂಸಿ ನೀರಿದೆ ಎಂದು ಲೆಕ್ಕಹಾಕಲಾಯಿತು. ಕರ್ನಾಟಕಕ್ಕೆ 270 ಟಿಎಂಸಿ, ತಮಿಳುನಾಡಿಗೆ 419 ಟಿಎಂಸಿ, ಕೇರಳಕ್ಕೆ 30 ಟಿಎಂಸಿ, ಪುದುಚೇರಿಗೆ 10, ಪರಿಸರ ಸಂರಕ್ಷಣೆಗೆ 10 ಟಿಎಂಸಿ, ಸಮುದ್ರ ಸೇರುವ ನೀರು 4 ಟಿಎಂಸಿ ಟಿಎಂಸಿ ನೀರನ್ನು ಹಂಚಲಾಯಿತು. ನ್ಯಾಯಾಧಿಕರಣ 192 ಟಿಎಂಸಿ ನೀರನ್ನು ಕರ್ನಾಟಕಕ್ಕೆ ಹರಿಸುವಂತೆ ಆದೇಶಿಸಿತು. ಇದರ ಜೊತೆ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಸೂಚಿಸಿತು. ಇದನ್ನೂ ಓದಿ: ಎರಡು ದಿನಗಳ ಫ್ರಾನ್ಸ್ ಪ್ರವಾಸ ಮುಗಿಸಿ UAEಯತ್ತ ಹೊರಟ ಮೋದಿ

    ಯಾವ ತಿಂಗಳಿನಲ್ಲಿ ತಮಿಳುನಾಡಿಗೆ ಎಷ್ಟು ಟಿಎಂಸಿ ನೀರು?
    ಜೂನ್ 10, ಜುಲೈ 34, ಅಗಸ್ಟ್ 50, ಸೆಪ್ಟೆಂಬರ್ 40, ಅಕ್ಟೋಬರ್ 22, ನವೆಂಬರ್ 15, ಡಿಸೆಂಬರ್ 8, ಜನವರಿ 3, ಫೆಬ್ರವರಿ 2.5, ಮಾರ್ಚ್ 2.5, ಏಪ್ರಿಲ್ 2.5, ಮೇ 2.5 ಸೇರಿ ಒಟ್ಟು 192 ಟಿಎಂಸಿ ನೀರನ್ನು ಕನಾಟಕ ಪ್ರತಿವರ್ಷ ತಮಿಳುನಾಡಿಗೆ ಹರಿಸಬೇಕು. ಇದನ್ನೂ ಓದಿ: ಗ್ರಾಹಕರಿಗೆ ಶಾಕ್ ಮೇಲೆ ಶಾಕ್ – ಆಷಾಢ ಮುಗಿಯುತ್ತಿದ್ದಂತೆ ಹೋಟೆಲ್ ದರ ಏರಿಕೆ ಬರೆ ಫಿಕ್ಸ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • KSRTC ಚಾಲಕನ ವರ್ಗಾವಣೆ ಯಾವ ಕಾರಣಕ್ಕೆ ಎಂಬ ಮಾಹಿತಿ ತರಿಸಿಕೊಳ್ತೀನಿ: ರಾಮಲಿಂಗಾ ರೆಡ್ಡಿ

    KSRTC ಚಾಲಕನ ವರ್ಗಾವಣೆ ಯಾವ ಕಾರಣಕ್ಕೆ ಎಂಬ ಮಾಹಿತಿ ತರಿಸಿಕೊಳ್ತೀನಿ: ರಾಮಲಿಂಗಾ ರೆಡ್ಡಿ

    ಬೆಂಗಳೂರು: ನಾಗಮಂಗಲದಲ್ಲಿ (Nagamangala) ಕೆಎಸ್‌ಆರ್‌ಟಿಸಿ ಚಾಲಕ (KSRTC Driver) ಆತ್ಮಹತ್ಯೆಗೆ ಯತ್ನಿಸಿದ್ದು ಯಾವ ಕಾರಣಕ್ಕೆ ಎಂಬ ಬಗ್ಗೆ ಮಾಹಿತಿ ಇಲ್ಲ. ವರ್ಗಾವಣೆ (Transfer) ಯಾವ ಕಾರಣಕ್ಕೆ ಎಂಬ ಮಾಹಿತಿ ತರಿಸಿಕೊಳ್ಳುತ್ತೇನೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿಕೆ ನೀಡಿದ್ದಾರೆ.

    ಮಂಡ್ಯ (Mandya) ಜಿಲ್ಲೆಯ ನಾಗಮಂಗಲ ಬಸ್ ಡಿಪೋದ ಚಾಲಕ ಜಗದೀಶ್, ಸಚಿವ ಚಲುವರಾಯಸ್ವಾಮಿ ಸೂಚನೆಯಂತೆ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ತೀವ್ರ ಅಸ್ವಸ್ಥರಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ರಾಮಲಿಂಗಾ ರೆಡ್ಡಿ, ಯಾವ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಮಾಹಿತಿಯಿಲ್ಲ. ಯಾರಾದ್ರೂ ಕಂಡಕ್ಟರ್, ಡ್ರೈವರ್‌ ವರ್ಗಾವಣೆಗೆ ನಮ್ಮವರೆಗೂ ಬರುತ್ತಾರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: KSRTC ನೌಕರ ಆತ್ಮಹತ್ಯೆಗೆ ಪ್ರಯತ್ನಿಸಿದ್ದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ – ಚಲುವರಾಯಸ್ವಾಮಿ ಸ್ಪಷ್ಟನೆ

    ಘಟನೆಯ ಕುರಿತು ಎಂಡಿ ಬೆಳಗ್ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ವರ್ಗಾವಣೆ ಯಾವ ಕಾರಣಕ್ಕೆ ಎಂಬ ಮಾಹಿತಿಯನ್ನು ತರಿಸಿಕೊಳ್ಳುತ್ತೇನೆ. ಸಚಿವ ಚಲುವರಾಯಸ್ವಾಮಿ (Chaluvarayaswamy) ಒತ್ತಡ ಇತ್ತಾ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ. ಡೆತ್‌ನೋಟ್ ಬರೆದಿದ್ದಾರೆ ಅಂತಾ ಮಾಹಿತಿ ಕೊಟ್ಟಿದ್ದಾರೆ. ಆತ್ಮಹತ್ಯೆ ಯತ್ನದ ನಂತರ ಚಿಕಿತ್ಸೆ ನಡೆಯುತ್ತಿದೆ. ಯಾರು ಒತ್ತಡ ಹಾಕಿದರು, ವರ್ಗಾವಣೆಗೆ ಕಾರಣ ಏನು ಎನ್ನುವ ಬಗ್ಗೆ ಮಾಹಿತಿ ತರಿಸಿಕೊಳ್ಳುತ್ತೇನೆ ಎಂದರು. ಇದನ್ನೂ ಓದಿ: ಸರ್ಕಾರ ರಾಜಕೀಯ ತೆವಲಿಗಾಗಿ ಜೀವದ ಜೊತೆ ಚೆಲ್ಲಾಟವಾಡ್ತಿದೆ – KSRTC ನೌಕರನ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸರ್ಕಾರ ರಾಜಕೀಯ ತೆವಲಿಗಾಗಿ ಜೀವದ ಜೊತೆ ಚೆಲ್ಲಾಟವಾಡ್ತಿದೆ – KSRTC ನೌಕರನ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ

    ಸರ್ಕಾರ ರಾಜಕೀಯ ತೆವಲಿಗಾಗಿ ಜೀವದ ಜೊತೆ ಚೆಲ್ಲಾಟವಾಡ್ತಿದೆ – KSRTC ನೌಕರನ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ

    – ಕೃಷಿ ಸಚಿವರ ವಜಾಗೊಳಿಸಿ ತನಿಖೆ ನಡೆಸಲು ಹೆಚ್‌ಡಿಕೆ ಆಗ್ರಹ

    ಮೈಸೂರು: ಬೆಳ್ಳಂಬೆಳಗ್ಗೆ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಆತ್ಮಹತ್ಯೆಗೆ ಯತ್ನಿಸಿದ ನಾಗಮಂಗಲ ಡಿಪೋ (Nagamangala Bus Depot) ಸಾರಿಗೆ ನೌಕರ ಜಗದೀಶ್ ಆರೋಗ್ಯ ವಿಚಾರಿಸಿದ್ದಾರೆ.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಹೆಚ್‌ಡಿಕೆ, ಆತ್ಮಹತ್ಯೆ ಯತ್ನಿಸಿದ KSRTC ನೌಕರ ವೆಂಟಿಲೇಟರ್‌ನಲ್ಲಿದ್ದಾರೆ. ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಇನ್ನೂ 48 ಗಂಟೆ ಐಸಿಯುನಲ್ಲೇ ಇಡಬೇಕಾಗುತ್ತದೆ ಅಂತಾ ವೈದ್ಯರು ಹೇಳಿದ್ದಾರೆ. ಈ ಸರ್ಕಾರ ಅಧಿಕಾರಕ್ಕೆ ಬಂದು 50 ದಿನ ಆಗಿಲ್ಲ. ಆಗಲೇ ಇಷ್ಟು ದ್ವೇಷದ ರಾಜಕಾರಣ ಶುರುವಾಗಿದೆ. ದುಡ್ಡು ತೆಗೆದುಕೊಂಡು ವರ್ಗಾವಣೆ ಮಾಡ್ತಿದ್ದಾರೆ. ಚುನಾವಣೆಗೆ ಖರ್ಚು ಮಾಡಿದ ಹಣ ಮತ್ತೆ ವಾಪಸ್ ಪಡೆಯೋದಕ್ಕೆ ವರ್ಗಾವಣೆ ದಂಧೆ ಶುರುಮಾಡಿದ್ದಾರೆ. ಆದ್ರೆ ಜೀವಗಳ ಜೊತೆ ಚೆಲ್ಲಾಟ ಆಡುವ ಇಂತಹ ಚಿಲ್ಲರೆ ರಾಜಕಾರಣ ಮಾಡೋದು ಸರಿಯಲ್ಲ. ಇದನ್ನ ಸುಮ್ಮನೆ ಬಿಡಲ್ಲ. ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಲುವರಾಯಸ್ವಾಮಿ ನೆರಳಲ್ಲಿ ವರ್ಗಾವಣೆ ಆರೋಪ- KSRTC ಸಿಬ್ಬಂದಿ ಆತ್ಮಹತ್ಯೆಗೆ ಯತ್ನ

    ಕಾಂಗ್ರೆಸ್ ಶಾಸಕರಿಂದ ಒತ್ತಡ:
    ಆತ್ಮಹತ್ಯೆಗೆ ಯತ್ನಿಸಿರುವ ಜಗದೀಶ್ ಕುಟುಂಬ JDS ನಿಷ್ಠಾವಂತ ಕಾರ್ಯಕರ್ತ. ಜಗದೀಶ್ ಪತ್ನಿ ಪಂಚಾಯಿತಿ ಸದಸ್ಯೆ. ಹೀಗಾಗಿ ಕಿರುಕುಳ ನೀಡಿದ್ದಾರೆ. ಈ ಸರ್ಕಾರ ಏನು ಶಾಶ್ವತನಾ? ಅಧಿಕಾರದ ದರ್ಪ ಈ ಮಟ್ಟಕ್ಕೆ ಹೋಗಬಾರದು. ಕೃಷಿ ಸಚಿವರ ಛೇಲಾ ಅವನೂ ಕೂಡ ರೌಡಿ ಅಂತೆ. ಅವನಿಂದ ಜಗದೀಶ್ ಕುಟುಂಬದ ಮೇಲೆ ಒತ್ತಡವಿದೆ. ಜಗದೀಶ್ ಪತ್ನಿಗೆ ಕಾಂಗ್ರೆಸ್‌ಗೆ ಬೆಂಬಲಿಸಲು ಒತ್ತಡ ಹಾಕಿದ್ದಾರೆ. ಡೆತ್‌ನೋಟ್ ನಲ್ಲಿ ನಾಗಮಂಗಲದ ಶಾಸಕರ ಒತ್ತಡವೇ ಕಾರಣ ಅಂತಾ ಬರೆದಿದ್ದಾನೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಇಂತಹ ಮಂತ್ರಿಯನ್ನ ಸರ್ಕಾರದಿಂದ ವಜಾಗೊಳಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: 80 ಅಡಿ ಆಳದ ಕಂದಕಕ್ಕೆ ಉರುಳಿದ ಬಸ್‌ – 27 ಮಂದಿ ದಾರುಣ ಸಾವು, 17 ಮಂದಿಗೆ ಗಾಯ

    ಕೃಷಿ ಮಂತ್ರಿಯನ್ನ ವಜಾಗೊಳಿಸಿ:
    ಪೊಲೀಸ್ ಅಧಿಕಾರಿಯನ್ನ FIR ದಾಖಲಿಸಿದ್ರಾ ಅಂತಾ ಕೇಳಿದ್ರೆ, ಜಗದೀಶ್ ಇನ್ನೂ ಸತ್ತಿಲ್ಲ ಅದಕ್ಕೆ ಎಫ್‌ಐಆರ್ ಹಾಕಿಲ್ಲ ಅಂತಾರೆ. ಹಣದ ದಂಧೆ ಆಯ್ತು. ಈಗ ರಾಜಕೀಯದ ತೇವಲುಗಳಿಗೆ ಜೀವದ ಜೊತೆ ಚೆಲ್ಲಾಟ ಶುರು ಮಾಡಿದ್ದಾರೆ. ಉದ್ಧಟತನದ ಕೃಷಿ ಮಂತ್ರಿಯನ್ನ ತಕ್ಷಣವೇ ಸರ್ಕಾರದಿಂದ ವಜಾಗೊಳಿಸಬೇಕು. ಈ ಬಗ್ಗೆ ಇವತ್ತು ವಿಧಾನಸಭೆಯಲ್ಲಿ ಚರ್ಚಿಸುತ್ತೇನೆ. ಇದಕ್ಕಿಂತಾ ಮುಖ್ಯ ವಿಚಾರ ಇನ್ನೇನಿದೆ ಹೇಳಿ? ಮಂತ್ರಿಗಳನ್ನು ಮೊದಲು ಹದ್ದು ಬಸ್ತಿನಲ್ಲಿ ಇಟ್ಟುಕೊಂಡು ಅಧಿಖಾರಿಗಳು ಮುಕ್ತವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕಿದೆ ಎಂದು ಹೇಳಿದ್ದಾರೆ.

    ಶಾಸಕರಿಗೆ ಗೌರವ ಸಿಗುತ್ತಿಲ್ಲ:
    ವಿರೋಧ ಪಕ್ಷದ ಶಾಸಕರು ಇರುವ ಸ್ಥಳಗಳಲ್ಲಿ ಯಾರೂ ಅವರಿಗೆ ಮರ್ಯಾದೆ ಕೊಡುತ್ತಿಲ್ಲ. ಕಾಂಗ್ರೆಸ್ ಶಾಸಕರ ಪಾಡೋ ಏನೇನೋ ಆಗಿದೆ. ಕೆಲವರು ನಮ್ಮ ಬಳಿಯೇ ನೋವನ್ನ ಹೇಳಿಕೊಂಡಿದ್ದಾರೆ. ವರ್ಗಾವಣೆಗೆ ಸ್ಥಳೀಯ ಶಾಸಕರ ಶಿಫಾರಸು ಇದ್ದರೆ ಸಾಲಲ್ಲ. ಹಣ ಕೊಡಲೇಬೇಕಾಗಿದೆ. ಇದುವರೆಗೂ ಆಗಿರುವ ಬಹುತೇಕ ವರ್ಗಾವಣೆಗಳಲ್ಲೂ ಹಣದ ವ್ಯವಹಾರ ನಡೆದಿದೆ. ಎಲ್ಲಾ ವರ್ಗಾವಣೆ ಗೂ ಹಣದ ರೇಟ್ ಫಿಕ್ಸ್ ಆಗಿದೆ ಎಂದು ಆರೋಪಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಗದೀಶ್ ಆತ್ಮಹತ್ಯೆ ಯತ್ನಕ್ಕೆ ಚಲುವರಾಯಸ್ವಾಮಿ ಕಾರಣ- ಗೆಳೆಯರು, ಕುಟುಂಬಸ್ಥರು ಆಕ್ರೋಶ

    ಜಗದೀಶ್ ಆತ್ಮಹತ್ಯೆ ಯತ್ನಕ್ಕೆ ಚಲುವರಾಯಸ್ವಾಮಿ ಕಾರಣ- ಗೆಳೆಯರು, ಕುಟುಂಬಸ್ಥರು ಆಕ್ರೋಶ

    ಮಂಡ್ಯ: ಕೆಎಸ್‍ಆರ್ ಟಿಸಿ ಬಸ್ ಚಾಲಕ ಕಂ ನಿರ್ವಾಹಕನ ಆತ್ಮಹತ್ಯೆ ಯತ್ನಕ್ಕೆ ಕಾಂಗ್ರೆಸ್ ಶಾಸಕ ಚಲುವರಾಯಸ್ವಾಮಿ (Chaluvarayaswamy) ಕಾರಣ ಎಂದು ಜಗದೀಶ್ ಸ್ನೇಹಿತರು ಹಾಗೂ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

    ಚಲುವರಾಯಸ್ವಾಮಿ ತನ್ನ ಚೇಲಾಗಳ ಮಾತು ಕೇಳಿ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ಜಗದೀಶ್ ಕುಟುಂಬ ಜೆಡಿಎಸ್ ಪರ ಗುರುತಿಸಿಕೊಂಡಿತ್ತು. ಸುರೇಶ್ ಗೌಡ ಪರ ಜಗದೀಶ್ (KSRTC Bus Driver Jagadeesh) ಕುಟುಂಬ ಚುನಾವಣೆಯಲ್ಲಿ ಕೆಲಸ ಮಾಡಿತ್ತು. ಅಲ್ಲದೇ ಜಗದೀಶ್ ಹೆಂಡತಿ ಜೆಡಿಎಸ್ (JDS) ಬೆಂಬಲಿತ ಗ್ರಾ.ಪಂ ಸದಸ್ಯೆ. ಅವರಿಗೆ ಗ್ರಾ.ಪಂ ಅಧ್ಯಕ್ಷೆ ಆಗುವ ಅವಕಾಶ ಇತ್ತು ಎಂದು ಹೇಳಿದ್ದಾರೆ.

    ಕಾಂಗ್ರೆಸ್ (Congress) ಮುಖಂಡರು ನಮ್ಮ ಪಕ್ಷಕ್ಕೆ ಬನ್ನಿ ಇಲ್ಲವೇ ನಿನ್ನ ಗಂಡನ ಕೆಲಸಕ್ಕೆ ತೊಂದರೆ ಮಾಡ್ತೀವಿ ಎಂದಿದ್ದರು. ಹಾಗಿದ್ದರೂ ಜಗದೀಶ್ ಪತ್ನಿ ಕಾಂಗ್ರೆಸ್ ಹೋಗಲು ನೀರಾಕರಿಸಿದ್ದರು. ಹೀಗಾಗಿ ತನ್ನ ಬೆಂಬಲಿಗರ ಮಾತು ಕೇಳಿ ಚಲುವರಾಯಸ್ವಾಮಿ ದ್ವೇಷದ ರಾಜಕೀಯ ಮಾಡಿದ್ದಾರೆ. ಜಗದೀಶ್ ಆತ್ಮಹತ್ಯೆ ಯತ್ನಕ್ಕೆ ಚಲುವರಾಯಸ್ವಾಮಿ ಕಾರಣರಾಗಿದ್ದಾರೆ. ಜಗದೀಶ್ ಜೀವಕ್ಕೆ ಹೆಚ್ಚು ಕಡಿಮೆ ಆದ್ರೆ ಅವರ ಕುಟುಂಬ ನೋಡಿಕೊಳ್ಳೋರು ಯಾರು ಎಂದು ಸ್ನೇಹಿತರು ಕಿಡಿಕಾರಿದ್ದಾರೆ. ಇದನ್ನೂ ಓದಿ: JDS ಪರ ಪ್ರಚಾರ ಮಾಡಿದ್ದಕ್ಕೆ ಮಗನ ವರ್ಗಾವಣೆ- ಆತ್ಮಹತ್ಯೆಗೆ ಯತ್ನಿಸಿದ ಜಗದೀಶ್ ತಂದೆ ಬೇಸರ

    ವಿಷ ಸೇವಿಸಿದ ಚಾಲಕ ಜಗದೀಶ್ ಸ್ಥಿತಿ ಚಿಂತಾಜನಕವಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಬುಧವಾರ ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಜಗದೀಶ್ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸ್ಥಿತಿ ಬಗ್ಗೆ ಏನೂ ಹೇಳು ಆಗಲ್ಲ. ಬದುಕಿಸಲು ಪ್ರಯತ್ನ ಮಾಡ್ತೇವೆ ಎಂದು ವೈದ್ಯರು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಲುವರಾಯಸ್ವಾಮಿ ನೆರಳಲ್ಲಿ ವರ್ಗಾವಣೆ ಆರೋಪ- KSRTC ಸಿಬ್ಬಂದಿ ಆತ್ಮಹತ್ಯೆಗೆ ಯತ್ನ

    ಚಲುವರಾಯಸ್ವಾಮಿ ನೆರಳಲ್ಲಿ ವರ್ಗಾವಣೆ ಆರೋಪ- KSRTC ಸಿಬ್ಬಂದಿ ಆತ್ಮಹತ್ಯೆಗೆ ಯತ್ನ

    ಮಂಡ್ಯ: ಜಿಲ್ಲೆಯ ಕೆಎಸ್‍ಆರ್ ಟಿಸಿ ನಾಗಮಂಗಲ ಡಿಪೋದ (Nagamangala Bus Depot) ಚಾಲಕ, ಸಚಿವ ಚಲುವರಾಯಸ್ವಾಮಿ (Chaluvarayaswamy) ಸೂಚನೆಯಂತೆ ವರ್ಗಾವಣೆ ಮಾಡಿದ್ದಾರೆಂದು ಆರೋಪಿಸಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

    ತೀವ್ರ ಅಸ್ವಸ್ಥಗೊಂಡಿರುವ ಜಗದೀಶ್‍ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಆತ್ಮಹತ್ಯೆ ಯತ್ನಕ್ಕೂ ಮುನ್ನ ಬರೆದಿಟ್ಟಿದ್ದ ಡೆತ್‍ನೋಟ್ ಬೆಳಕಿಗೆ ಬಂದಿದೆ. ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಚಾಲಕ ಕಮ್ ನಿರ್ವಾಹಕ ಜಗದೀಶ್ ಡೆತ್‍ನೋಟ್ ಬರೆದಿದ್ರು. ಇದನ್ನೂ ಓದಿ: ಕಾಲುವೆಗೆ ಬಿಟ್ಟಿರುವ ಕುಡಿಯುವ ನೀರಿಗೂ ಕನ್ನ – ಅಧಿಕಾರಿಗಳ ನಿರ್ಲಕ್ಷ್ಯ

    ಡೆತ್‍ನೋಟ್‍ನಲ್ಲೇನಿದೆ..?: ನನ್ನ ವರ್ಗಾವಣೆಗೆ ಕಾರಣ ಏನೆಂದು ಡಿಪೋ ಮ್ಯಾನೇಜರ್ ಕೇಳಿದೆ. ನಿಯಂತ್ರಣಾಧಿಕಾರಿಗಳು ವರ್ಗಾವಣೆ ಮಾಡಿದ್ದಾರೆ ಎಂದರು. ಅವರನ್ನ ಕೇಳಿದಾಗ ಕೃಷಿ ಸಚಿವರ ಆದೇಶದ ಮೇರೆಗೆ ವರ್ಗಾವಣೆ (Bus Driver Jagadeesh Transfer) ಎಂದರು. ನನ್ನ ಮೇಲೆ ಸಚಿವರಿಗೆ ಯಾಕಿಷ್ಟು ಕೋಪವೆಂದು ತಿಳಿಯದೆ ನೊಂದಿದ್ದೇನೆ. ಈ ಒತ್ತಡ, ಅವಮಾನ ಸಹಿಸಲು ನನ್ನಿಂದ ಆಗುತ್ತಿಲ್ಲ. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ಕೊಡುವಂತೆ ಜಗದೀಶ್ ಪತ್ರ ಬರೆದಿದ್ದಾರೆ.

    ನನ್ನ ಆತ್ಮಹತ್ಯೆಗೆ ಶಾಸಕರೇ ಕಾರಣ ಎಂದು ಡೆತ್‍ನೋಟ್‍ನಲ್ಲಿ ಆರೋಪಿಸಿದ್ದಾರೆ. ಸದ್ಯ ತೀವ್ರ ಅಸ್ವಸ್ಥಗೊಂಡಿರುವ ಜಗದೀಶ್‍ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇತ್ತ ಈ ಸಂಬಂಧ ಕರ್ತವ್ಯಕ್ಕೆ ಹಾಜರಾಗದೆ ಸಾರಿಗೆ ಸಿಬ್ಬಂದಿ ಆಕ್ರೋಶ ಹೊರಹಾಕುತ್ತಿದ್ದಾರೆ. ನಾಗಮಂಗಲದ ಡಿಪೋದಿಂದ ಯಾವುದೇ ಕೆಎಸ್‍ಆರ್‍ಟಿಸಿ ಬಸ್‍ಗಳು ಇನ್ನೂ ಹೊರಟಿಲ್ಲ. ಹೀಗಾಗಿ 60ಕ್ಕೂ ಹೆಚ್ಚು ಬಸ್‍ಗಳು ನಿಂತಲ್ಲೇ ನಿಂತಿವೆ. ಬಸ್ ಸಂಚಾರ ಸ್ಥಗಿತ ಹಿನ್ನೆಲೆಯ್ಲಲಿ ನಿಲ್ದಾಣ ಪ್ರಯಾಣಿಕರಿಲ್ಲದೆ ಖಾಲಿ ಖಾಲಿ ಎನಿಸುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚುನಾವಣೆ ಗೆಲ್ಲೋಕೆ ಚೀಪ್ ಪಾಪ್ಯುಲಾರಿಟಿ ಮಾಡಬೇಕು- ಗ್ಯಾರಂಟಿಗಳ ಬಗ್ಗೆ ಕೃಷಿ ಸಚಿವ ಬಾಂಬ್

    ಚುನಾವಣೆ ಗೆಲ್ಲೋಕೆ ಚೀಪ್ ಪಾಪ್ಯುಲಾರಿಟಿ ಮಾಡಬೇಕು- ಗ್ಯಾರಂಟಿಗಳ ಬಗ್ಗೆ ಕೃಷಿ ಸಚಿವ ಬಾಂಬ್

    ಬೆಂಗಳೂರು: ಚುನಾವಣೆ ಗೆಲ್ಲೋಕೆ ಚೀಪ್ ಪಾಪ್ಯುಲಾರಿಟಿ ಮಾಡಬೇಕು ಎಂದು ಗ್ಯಾರಂಟಿಗಳ ಬಗ್ಗೆ ಕೃಷಿ ಸಚಿವ ಚೆಲುವರಾಯಸ್ವಾಮಿ (Chaluvarayaswamy) ಹೊಸ ಬಾಂಬ್ ಸಿಡಿಸಿದ್ದಾರೆ.

    ಸದ್ಯ ಸಚಿವರ ಮಾತು ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಖತ್ ವೈರಲ್ ಆಗುತ್ತಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಸಚಿವರು ಹೇಳಿರೋದು ಏನು?: ಫಲಿತಾಂಶಕ್ಕಾಗಿ ಎಲ್ಲವನ್ನೂ ಮಾಡಬೇಕು. ಚೀಪ್ ಪಾಪ್ಯುಲಾರಿಟಿ ಇಲ್ಲದ್ದು ಪಲ್ಲದ್ದು ಮಾಡಬೇಕು. ಸಿಎಂ ಸಿದ್ದರಾಮಯ್ಯಗೆ ಇಷ್ಟ ಆಗುತ್ತೋ ಇಲ್ಲವೋ ಮಾಡಬೇಕು. ನಮ್ಮ ಮನಸ್ಸಿಗೆ ಒಪ್ಪುತ್ತೋ ಇಲ್ಲವೋ ಆದರೂ ಮಾಡಬೇಕು. ಫಲಿತಾಂಶವೇ ಅನಿವಾರ್ಯ ರಿಸಲ್ಟ್ ಗಾಗಿ ಎಲ್ಲವನ್ನೂ ಮಾಡಬೇಕು ಅಂತ ಸಚಿವರು ಹೇಳಿದ್ದಾರೆ.

    ಒಟ್ಟಿನಲ್ಲಿ ಕಾಂಗ್ರೆಸ್ ಗ್ಯಾರಂಟಿ ಗೊಂದಲಗಳ ಮಧ್ಯೆ ಸಚಿವರ ಮಾತು ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

  • ಯಡಿಯೂರಪ್ಪ ಇಲ್ಲ ಅಂದ್ರೆ ಬಿಜೆಪಿ ಇಲ್ಲ: ಚೆಲುವರಾಯಸ್ವಾಮಿ

    ಯಡಿಯೂರಪ್ಪ ಇಲ್ಲ ಅಂದ್ರೆ ಬಿಜೆಪಿ ಇಲ್ಲ: ಚೆಲುವರಾಯಸ್ವಾಮಿ

    ಮಂಡ್ಯ: ಬಿಜೆಪಿಯಲ್ಲಿ ನೂರು ಬಾಗಿಲು, ನಮ್ಮಲ್ಲಿ ಒಂದೇ ಬಾಗಿಲು. ಯಡಿಯೂರಪ್ಪ (B.S Yediyurappa) ಇಲ್ಲ ಅಂದ್ರೆ ಬಿಜೆಪಿ (BJP) ಇಲ್ಲ. ಅಧಿಕಾರದ ದರ್ಪದಲ್ಲಿ ಬಿಜೆಪಿಯವ್ರು ಮಾತಾಡುತ್ತಿದ್ದಾರೆ ಅಷ್ಟೇ ಎಂದು ಮಾಜಿ ಸಂಸದ ಚೆಲುವರಾಯಸ್ವಾಮಿ (Chaluvarayaswamy) ತಿರುಗೇಟು ನೀಡಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆ (Bharat Jodo Yatre) ಉತ್ಸಾಹದಿಂದ ಸಾಗುತ್ತಿದೆ. ಸೋನಿಯಾ ಗಾಂಧಿ (Sonia Gandhi) ಯವರು ಭಾಗವಹಿಸ್ತಿರೋದು ನಮಗೆಲ್ಲ ಹೆಮ್ಮೆ. ಅಧಿಕಾರಕ್ಕಿಂತ ಹೆಚ್ಚಾಗಿ ಪ್ರಜಾಪ್ರಭುತ್ವ ಗಟ್ಟಿ ಮಾಡಲು ರಾಹುಲ್ ಗಾಂಧಿ (Rahul Gandhi) ಈ ಯಾತ್ರೆ ಮಾಡುತ್ತಿದ್ದಾರೆ ಎಂದರು.

    ಪಾದಯಾತ್ರೆಗೆ ಪಕ್ಷಾತೀತವಾಗಿ ಬೆಂಬಲ ಸಿಕ್ತಿದೆ. ಈ ಭಾಗ ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರ ಕೋಟೆಯಾಗಿತ್ತು. ನಂತರ ಜೆಡಿಎಸ್ ಕೋಟೆಯಾಗಿತ್ತು. ಮುಂದೆ ಜನ ಯಾರ ಕಡೆ ತೀರ್ಪು ಕೊಡ್ತಾರೆ ಅಂತ ನೋಡಿ ಎಂದು ಹೇಳಿದರು. ಇದನ್ನೂ ಓದಿ: ಇಂದಿನಿಂದ ಭಾರತ್ ಜೋಡೋ ಪುನಾರಂಭ- ರಾಹುಲ್ ಜೊತೆ ಹೆಜ್ಜೆ ಹಾಕಲಿರೋ ಸೋನಿಯಾ

    ಕಾಂಗ್ರೆಸ್ (Congress) ನವರು ಮೊದಲು ಜೋಡೋ ಆಗಲಿ ಎಂಬ ಬಿಜೆಪಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯಲ್ಲಿ ಬೊಮ್ಮಾಯಿ-ಶೆಟ್ಟರ್ ಜೋಡಣೆ ಆಗಿದ್ದಾರಾ..?, ಅಶೋಕ್ – ಸೋಮಣ್ಣ ಜೋಡಣೆ ಆಗಿದ್ದಾರಾ..?. ಈ ರೀತಿ ನಮ್ಮಲ್ಲಿ ಯಾವುದೇ ಸಂಘರ್ಷ ಇಲ್ಲ ಎಂದು ಮಾಜಿ ಸಂಸದರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    Live Tv
    [brid partner=56869869 player=32851 video=960834 autoplay=true]

  • ಮಹಿಳಾ ದಿನಾಚರಣೆ ದಿನ ಜೆಡಿಎಸ್, ಕಾಂಗ್ರೆಸ್ ಬೆಂಬಲಿಗರಿಂದ ಪ್ರತ್ಯೇಕ ಅಶ್ಲೀಲ ನೃತ್ಯ

    ಮಹಿಳಾ ದಿನಾಚರಣೆ ದಿನ ಜೆಡಿಎಸ್, ಕಾಂಗ್ರೆಸ್ ಬೆಂಬಲಿಗರಿಂದ ಪ್ರತ್ಯೇಕ ಅಶ್ಲೀಲ ನೃತ್ಯ

    ಮಂಡ್ಯ: ವಿಶ್ವ ಮಹಿಳೆಯರ ದಿನದಂದೇ ಮಧ್ಯರಾತ್ರಿವರೆಗೆ ತುಂಡು ಬಟ್ಟೆ ಧರಿಸಿರುವ ಹುಡುಗಿಯರನ್ನು ಕರೆತಂದು ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರ ಬೆಂಬಲಿಗರು ಮಂಡ್ಯ ಜಿಲ್ಲೆಯ ನಾಗಮಂಗಲ ಕ್ಷೇತ್ರದಲ್ಲಿ ಅಶ್ಲೀಲ ನೃತ್ಯ ಮಾಡಿಸಿದ್ದಾರೆ.

    ನಾಗಮಂಗಲ ತಾಲೂಕಿನ ತೊಳಸಿ ಕೊಂಬರಿ ಗೇಟ್ ಗ್ರಾಮದಲ್ಲಿ ಗ್ರಾಮ ದೇವತೆ ಹಬ್ಬದ ಪ್ರಯುಕ್ತ ಜೆಡಿಎಸ್ ಶಾಸಕ ಸುರೇಶ್‍ಗೌಡ ಹಾಗೂ ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಬೆಂಬಲಿಗರು ಪ್ರತ್ಯೇಕವಾಗಿ ಆರ್ಕೇಸ್ಟ್ರಾ ಆಯೋಜನೆ ಮಾಡಿದ್ದರು. ಈ ವೇಳೆ ಎರಡು ಪಕ್ಷದ ಬೆಂಬಲಿಗರು ತುಂಡು ಬಟ್ಟೆ ಧರಿಸಿರುವ ಹುಡುಗಿಯರನ್ನು ಕರೆಸಿ ಹಸಿ-ಬಿಸಿಯಾಗಿ ನೃತ್ಯ ಮಾಡಿಸಿದ್ದಾರೆ. ಇದನ್ನೂ ಓದಿ: ಗ್ರಾಮದೇವತೆ ಹಬ್ಬದಲ್ಲಿ ಅಶ್ಲೀಲ ನೃತ್ಯ – ಕೈ ಬೆಂಬಲಿಗರ ವಿರುದ್ಧ ಆಕ್ರೋಶ

    ಕಾಂಗ್ರೆಸ್ ಬೆಂಬಲಿಗರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಸಭ್ಯ ನೃತ್ಯ ಬೆಳಗ್ಗೆ ವೈರಲ್ ಆಗಿತ್ತು. ಇದೀಗ ಜೆಡಿಎಸ್ ಬೆಂಬಲಿಗರು ಆಯೋಜಿಸಿದ್ದ ಅಶ್ಲೀಲ ಮಾದರಿ ನೃತ್ಯ ಬಿಡುಗಡೆಯಾಗಿದೆ. ರಾಜಕೀಯ ಲಾಭಕ್ಕಾಗಿ ಎಲ್ಲದಕ್ಕೂ ಜೈ ಅನ್ನುವ ಈ ರಾಜಕೀಯ ಪಕ್ಷಗಳು, ವಿಶ್ವ ಮಹಿಳಾ ದಿನದಂದೇ ಅಶ್ಲೀಲ ಮಾದರಿ ಡ್ಯಾನ್ಸ್ ಮಾಡಿಸಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಯುವಕರ ಓಲೈಕೆಗೆ ಹೀಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿಗರು ಮಾಡುತ್ತಿದ್ದಾರೆ. ಇದನ್ನೂ ಓದಿ: ಐಷಾರಾಮಿ ಜೀವನಕ್ಕಾಗಿ ಡ್ರಗ್ಸ್ ಡೀಲ್ ಮಾಡ್ತಿದ್ದ ಬೆಂಗಳೂರಿನ ಲವರ್ಸ್ ಬಂಧನ

    ಗ್ರಾಮ ದೇವತೆ ಹಬ್ಬಕ್ಕೆ ಬೇರೆಡೆಯಿಂದ ಹುಡುಗಿಯರನ್ನ ಕರೆಸಿ ಆರ್ಕೆಸ್ಟ್ರಾ ಆಯೋಜನೆ ಮಾಡಿದ್ದರು. ಗ್ರಾಮ ದೇವತೆ ಹಬ್ಬದ ಪ್ರಯುಕ್ತ ಗ್ರಾಮದಲ್ಲಿಯೇ ಆಯೋಜನೆ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮಧ್ಯರಾತ್ರಿ ಅರೆಬರೆ ಬಟ್ಟೆ ತೊಟ್ಟು ಮಾದಕ ನೃತ್ಯ ಮಾಡಿ ಗ್ರಾಮದ ಯುವಕರನ್ನು ಹುಡುಗಿಯರು ಹುಚ್ಚೆಬ್ಬಿಸಿದ್ದು, ಹಾಲಿ-ಮಾಜಿ ಶಾಸಕರ ಬೆಂಬಲಿಗರಿಂದ ಪ್ರತ್ಯೇಕ ಆರ್ಕೆಸ್ಟ್ರಾ ಆಯೋಜನೆ ಮಾಡಿದ್ದಾರೆ.

    ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ, ಜೆಡಿಎಸ್ ಪಕ್ಷದ ಶಾಸಕ ಸುರೇಶ್ ಗೌಡ ಬೆಂಬಲಿಗರು ಪ್ರತ್ಯೇಕವಾಗಿ ಪ್ರತ್ಯೇಕ ವೇದಿಕೆಯಲ್ಲಿ ಸನ್ಮಾನ ಮಾಡಿ ನಂತರ ಅವರಿಬ್ಬರೂ ತೆರಳಿದ ನಂತರ ಈ ರೀತಿ ನೃತ್ಯ ನಡೆಸಲಾಗಿದೆ. ವಿಶ್ವ ಮಹಿಳಾ ದಿನಾಚರಣೆ ದಿನವೇ ಪಡ್ಡೆ ಹುಡುಗಿಯರನ್ನು ಕರೆಸಿ ಮಧ್ಯರಾತ್ರಿವರೆಗೂ ಕುಣಿಸಿದ್ದಕ್ಕೆ ಸಾರ್ವಜನಿಕರು ಕಿಡಿಕಾರಿದ್ದಾರೆ.

  • ಗ್ರಾಮದೇವತೆ ಹಬ್ಬದಲ್ಲಿ ಅಶ್ಲೀಲ ನೃತ್ಯ – ಕೈ ಬೆಂಬಲಿಗರ ವಿರುದ್ಧ ಆಕ್ರೋಶ

    ಗ್ರಾಮದೇವತೆ ಹಬ್ಬದಲ್ಲಿ ಅಶ್ಲೀಲ ನೃತ್ಯ – ಕೈ ಬೆಂಬಲಿಗರ ವಿರುದ್ಧ ಆಕ್ರೋಶ

    – ವೇದಿಕೆ ಮೇಲೆ ಬಾಲಕನನ್ನು ಕರೆ ತಂದ ಡ್ಯಾನ್ಸರ್‌ಗಳು

    – ಗ್ರಾಮದಲ್ಲಿ ಕಾಂಗ್ರೆಸ್, ಜೆಡಿಎಸ್‍ನಿಂದ ರಸಮಂಜರಿ ಕಾರ್ಯಕ್ರಮ

    ಮಂಡ್ಯ: ಚುನಾವಣೆ ಅಖಾಡ ಹತ್ತಿರ ಆಗುತ್ತಿದ್ದ ಹಾಗೆ ಮತದಾರರನ್ನು ಸೆಳೆಯಲು ರಾಜಕೀಯ ಮುಖಂಡರು ಒಂದೆಲ್ಲಾ ಒಂದು ಗಿಮಿಕ್‍ಗಳನ್ನು ಮಾಡುತ್ತಾನೆ ಇರುತ್ತಾರೆ. ಇದೀಗ ಅಂತಹದೇ ಒಂದು ಗಿಮಿಕ್ ಮಾಡಲು ಹೋಗಿ ಕಾಂಗ್ರೆಸ್ ಮುಖಂಡನ ಬೆಂಬಲಿಗರು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

    ನಾಗಮಂಗಲ ತಾಲೂಕಿನ ತೊಳಸಿಕೊಂಬರಿ ಗ್ರಾಮದ ಗ್ರಾಮದೇವತೆ ಹಬ್ಬದ ಅಂಗವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್‍ನ ಎರಡು ಗುಂಪು ಪ್ರತ್ಯೇಕವಾಗಿ ವೇದಿಕೆ ನಿರ್ಮಾಣ ಮಾಡಿ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಒಂದು ಗುಂಪು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ಮತ್ತೊಂದು ಗುಂಪು ಶಾಸಕ ಸುರೇಶ್‍ಗೌಡರನ್ನು ಕರೆಸಿ ವೇದಿಕೆಯ ಮೇಲೆ ಸನ್ಮಾನ ಮಾಡಿ ವೇದಿಕೆ ಮೇಲೆ ಭಾಷಣ ಮಾಡಿಸಿದ್ದರು. ಇದನ್ನೂ ಓದಿ: ಐಷಾರಾಮಿ ಜೀವನಕ್ಕಾಗಿ ಡ್ರಗ್ಸ್ ಡೀಲ್ ಮಾಡ್ತಿದ್ದ ಬೆಂಗಳೂರಿನ ಲವರ್ಸ್ ಬಂಧನ

    ಇದಾದ ಬಳಿಕ ಸುರೇಶ್‍ಗೌಡ ಬೆಂಬಲಿಗರು ವೇದಿಕೆಯ ಮೇಲೆ ಒಂದಷ್ಟು ನೃತ್ಯ ಕಾರ್ಯಕ್ರಮವನ್ನು ನಡೆಸಿದರು. ಇನ್ನೊಂದು ಕಡೆ ಇದೇ ಊರಿನಲ್ಲಿ ಚಲುವರಾಯಸ್ವಾಮಿ ಬೆಂಬಲಿಗರು ಸಹ ನೃತ್ಯ ಕಾರ್ಯಕ್ರಮ ಮಾಡಿದ್ದರು. ಆದರೆ ಚಲುವರಾಯಸ್ವಾಮಿ ಬೆಂಬಲಿಗರು ಮಾಡಿಸಿದ ಈ ನೃತ್ಯ ಕಾರ್ಯಕ್ರಮದಲ್ಲಿ ಡ್ಯಾನ್ಸರ್‍ಗಳು ಅರೆಬರೆ ಬಟ್ಟೆ ಧರಿಸಿ ನೃತ್ಯ ಮಾಡಿದ್ದರು. ಈ ವೇಳೆ ಬಾಲಕನೊಬ್ಬನನ್ನು ಡ್ಯಾನ್ಸರ್‍ಗಳು ವೇದಿಕೆಯ ಮೇಲೆ ಕರೆತಂದು ಅಶ್ಲೀಲವಾಗಿ ನಡೆದುಕೊಂಡಿದ್ದಾರೆ. ಅಲ್ಲದೇ ನೃತ್ಯಗಾರ್ತಿಯರು ಇಡೀ ಕಾರ್ಯಕ್ರಮ ಉದ್ದಕ್ಕೂ ಅಶ್ಲೀಲವಾಗಿ ನಡೆದುಕೊಂಡಿದ್ದು, ಸಭ್ಯಸ್ಥರು ತಲೆ ತಗ್ಗಿಸುವ ರೀತಿಯಲ್ಲಿ ವರ್ತನೆ ಮಾಡಿದ್ದಾರೆ. ಇದನ್ನೂ ಓದಿ : ಮಹಿಳಾ ದಿನಾಚರಣೆಗಾಗಿ ವಿಶೇಷ ಪೋಸ್ಟರ್ ರಿಲೀಸ್ ಮಾಡಿದ ಕೆಜಿಎಫ್ 2 ತಂಡ

    ಚಲುವರಾಯಸ್ವಾಮಿ ಬೆಂಬಲಿಗರು ಈ ರೀತಿ ಕಾರ್ಯಕ್ರಮ ನಡೆಸಿದ್ದರಿಂದ ಮಂಡ್ಯ ಜಿಲ್ಲೆಯ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈ ಹಿಂದೆ 2004ರಲ್ಲಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ನಾಗಮಂಗಲ ತಾಲೂಕಿನ ದೇವಾಲಪುರ ಗ್ರಾಮದಲ್ಲಿ ಚುನಾವಣೆ ಪೂರ್ವದಲ್ಲಿ ಇದೇ ರೀತಿಯ ಕಾರ್ಯಕ್ರಮ ನಡೆಸಿದ್ದರು. ಇದಾದ ಬಳಿಕ ಸಾರ್ವಜನಿಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರ ಜೊತೆಗೆ ಆ ಚುನಾವಣೆಯಲ್ಲಿ ಶಿವರಾಮೇಗೌಡ ಸೋಲು ಕಂಡಿದ್ದರು. ಇದೀಗ ಅದೇ ಹಾದಿಯನ್ನು ಚಲುವರಾಯಸ್ವಾಮಿ ಬೆಂಬಲಿಗರು ಹಿಡಿದಿರುವುದು ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ.

    ಒಟ್ಟಾರೆ ಗ್ರಾಮದೇವತೆ ಹಬ್ಬದ ನೆಪದಲ್ಲಿ ಈ ರೀತಿಯ ಅಶ್ಲೀಲ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಕ್ಕರೆ ನಾಡಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಚಲುವರಾಯಸ್ವಾಮಿ ಬೆಂಬಲಿಗರ ಈ ವರ್ತನೆ ವಿರುದ್ಧ ಹಾಗೂ ಚಲುವರಾಯಸ್ವಾಮಿ ವಿರುದ್ಧ ಸದ್ಯ ನಾಗಮಂಗಲದ ಜನರು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರುತ್ತಿದ್ದಾರೆ.

  • ಇಬ್ಬರನ್ನ ಜಗಳಕ್ಕೆ ಬಿಟ್ಟು ಸೇಫ್ ಆದಂತಿದೆ: ಸುಮಲತಾ, ಹೆಚ್‍ಡಿಕೆ ಸಮರಕ್ಕೆ ಚಲುವರಾಯಸ್ವಾಮಿ ಪ್ರತಿಕ್ರಿಯೆ

    ಇಬ್ಬರನ್ನ ಜಗಳಕ್ಕೆ ಬಿಟ್ಟು ಸೇಫ್ ಆದಂತಿದೆ: ಸುಮಲತಾ, ಹೆಚ್‍ಡಿಕೆ ಸಮರಕ್ಕೆ ಚಲುವರಾಯಸ್ವಾಮಿ ಪ್ರತಿಕ್ರಿಯೆ

    ಮಂಡ್ಯ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಂಸದೆ ಸುಮಾಲತಾ ನಡುವಿನ ಗಲಾಟೆ ಬಗ್ಗೆ ಮಾಜಿ ಸಚಿವ ಚಲುವರಾಯಸ್ವಾಮಿ ಬೇಸರ ಹೊರಹಾಕಿದ್ದು, ಸರ್ಕಾರದಿಂದ ಮಾಡಬೇಕಾದ ಕೆಲಸವನ್ನು ರಸ್ತೆಯಲ್ಲಿ ಬೀದಿಜಗಳ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

    ಮಂಡ್ಯ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಚರ್ಚಿಸಿದ ನಂತರ ಮಾತನಾಡಿದ ಅವರು, ಸುಮಲತಾ ಮತ್ತು ಕುಮಾರಸ್ವಾಮಿ ಟಾಕ್‍ಫೈಟ್ ಬಗ್ಗೆ ಮಾತನಾಡಬಾರದು ಎಂದು ತೀರ್ಮಾನಿದ್ದೇನೆ. ಒಂದು ಕಡೆ ಮಾಜಿ ಮುಖ್ಯಮಂತ್ರಿ ಟೀಂ. ಮತ್ತೊಂದು ಕಡೆ ಸಂಸದರು. ಯಾವ ಉದ್ದೇಶದಿಂದ ಇವರು ಫೈಟ್ ಮಾಡುತ್ತಿದ್ದಾರೆ ನನಗೆ ಅರ್ಥ ಆಗುತ್ತಿಲ್ಲ. ಸರ್ಕಾರದಿಂದ ಮಾಡಬೇಕಾದ ಕೆಲಸವನ್ನು ರೋಡಲ್ಲಿ ಬೀದಿಜಗಳ ಮಾಡಿಕೊಂಡಿದ್ದಾರೆ. ರೈತರು ಕೋವಿಡ್‍ನಿಂದ ತತ್ತರಿಸಿ ಹೋಗಿದ್ದಾರೆ. ಆರ್ಥಿಕ ಅವ್ಯವಸ್ಥೆ ಆಗಿದೆ. ಶುಗರ್ ಫ್ಯಾಕ್ಟರಿ ನಿಂತಿದೆ. ಮನ್ಮುಲ್ ಹಗರಣ ಆಗಿದೆ. ನೀರನ್ನು ಸರಿಯಾಗಿ ಕೊಡದೆ ರೈತರ ಬೆಳೆ ಹಾನಿಯಾಗಿದೆ. ಈ ರೀತಿಯ ನೂರಾರು ಸಮಸ್ಯೆ ಇದೆ. ಈ ಸಮಯದಲ್ಲಿ ವೈಯಕ್ತಿಕ ಪ್ರತಿಷ್ಟೆ ಮಾಡಿಕೊಂಡು ಹೋಗುವುದು ನಮ್ಮ ಜಿಲ್ಲೆಯ ಹಿತದಿಂದ ಒಳ್ಳೆಯದಲ್ಲ ಎಂದರು.

    ಎಲ್ಲ ಸಮಸ್ಯೆಗೂ ಪರಿಹಾರ ಇವರ ಕಿತ್ತಾಟ ಎಂಬ ರೀತಿ ಸರ್ಕಾರ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇವರಿಬ್ಬರನ್ನು ಬೀದಿಗೆ ಬಿಟ್ಟು ನಾವು ಸೇಫಾಗಿರಬಹುದು. ರೈತರ ಸಮಸ್ಯೆ ಪರಿಹರಿಸಲು ಸ್ವಲ್ಪ ಸಮಯ ಸಿಗಲಿದೆ ಎಂದು ಸರ್ಕಾರ ಸುಮ್ಮನಿರುವಂತಿದೆ. ಇಲ್ಲಿ ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಕಿಡಿಕಾರಿದ್ದಾರೆ.

    ಕೆಆರ್‍ಎಸ್ ಅಣೆಕಟ್ಟೆಗೆ ಸಮಸ್ಯೆ ಇರುವ ಬಗ್ಗೆ, 20 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸುವ ಬಗ್ಗೆ ಹಿಂದಿನಿಂದಲೂ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು. ಈ ಜಗಳದಿಂದ ಅವರು ಜಿಲ್ಲೆಯ ರೈತರ ಪರ ಇಲ್ಲ ಎಂಬುದು ಎದ್ದು ಕಾಣುತ್ತಿದೆ ಎಂದು ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.