Tag: Chaluvaraya Swamy

  • ಜೆಡಿಎಸ್ ಬಂಡಾಯ ಶಾಸಕರಿಂದ ಇಂದು ಶಕ್ತಿಪ್ರದರ್ಶನ – ಕೈ ಟಿಕೆಟ್‍ಗಾಗಿ ಚಲುವರಾಯಸ್ವಾಮಿ ತಂತ್ರ

    ಜೆಡಿಎಸ್ ಬಂಡಾಯ ಶಾಸಕರಿಂದ ಇಂದು ಶಕ್ತಿಪ್ರದರ್ಶನ – ಕೈ ಟಿಕೆಟ್‍ಗಾಗಿ ಚಲುವರಾಯಸ್ವಾಮಿ ತಂತ್ರ

    ಮಂಡ್ಯ: ಜೆಡಿಎಸ್ ನಿಂದ ಅಮಾನತ್ತಾದ ಶಾಸಕ ಚಲುವರಾಯಸ್ವಾಮಿ ಇದೇ ಪ್ರಥಮ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.

    ಇಂದು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡುತ್ತಿದ್ದಾರೆ. ಸರ್ಕಾರಿ ಕಾರ್ಯಕ್ರಮವೇ ಆದರೂ ಪರೋಕ್ಷವಾಗಿ ಚೆಲುವರಾಯಸ್ವಾಮಿ ಜೆಡಿಎಸ್ ವರಿಷ್ಠರ ವಿರುದ್ಧ ನಡೆಸುತ್ತಿರುವ ಶಕ್ತಿ ಪ್ರದರ್ಶನ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಖಾಸಗಿ ವೈದ್ಯರ ವಿಧೇಯಕ ಮಂಡನೆಯನ್ನೇ ಮುಂದೂಡಲಾಗಿದೆ ಎಂಬ ಚರ್ಚೆ ಶುರುವಾಗಿದೆ.

    ಈಗಾಗಲೇ ನಾಗಮಂಗಲ ತಾಲೂಕಿನಲ್ಲಿ ಫ್ಲೆಕ್ಸ್ ಗಳ ಅಬ್ಬರ ಕೂಡ ಜೋರಾಗಿದ್ದು, ಜಮೀರ್ ಅಹಮದ್, ಬಾಲಕೃಷ್ಣ ಅವರ ಭಾವಚಿತ್ರಗಳೂ ರಾರಾಜಿಸುತ್ತಿವೆ. ಶಕ್ತಿ ಪ್ರದರ್ಶನದ ಜೊತೆಗೆ ಕಾಂಗ್ರೆಸ್ ಟಿಕೆಟ್ ಖಾತ್ರಿ ಪಡಿಸಿಕೊಳ್ಳಲು ಚಲುವರಾಯಸ್ವಾಮಿ ಕಾರ್ಯಕ್ರಮ ಯಶಸ್ಸಿಗೆ ಕೆಲಸ ಮಾಡ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ.