Tag: Chaluvarajaswamy

  • ಮಂಡ್ಯದಲ್ಲಿ ಸಮಗ್ರ ಕೃಷಿ ವಿಶ್ವವಿದ್ಯಾಲಯಕ್ಕೆ ಸಚಿವ ಸಂಪುಟ ಅನಮೋದನೆ -ಸಾಕಾರಗೊಂಡ ದಶಕಗಳ ಕನಸು

    ಮಂಡ್ಯದಲ್ಲಿ ಸಮಗ್ರ ಕೃಷಿ ವಿಶ್ವವಿದ್ಯಾಲಯಕ್ಕೆ ಸಚಿವ ಸಂಪುಟ ಅನಮೋದನೆ -ಸಾಕಾರಗೊಂಡ ದಶಕಗಳ ಕನಸು

    ಮಂಡ್ಯ: ಜಿಲ್ಲೆಯ ನೂತನ ಸಮಗ್ರ ಕೃಷಿ ವಿಶ್ವವಿದ್ಯಾಲಯ (Agriculture University) ಸ್ಥಾಪಿಸಬೇಕೆನ್ನುವ ಬಹುದಿನದ ಕನಸು ನನಸಾಗುವ ಹಂತ ತಲುಪಿದೆ.

    ಸಮಗ್ರ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿ ಸ್ಥಾಪನೆಯಿಂದ ರೈತರ ಅನೇಕ ಸಮಸ್ಯೆಗಳಿಗೆ ವಿಶೇಷವಾಗಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಒಂದೇ ಮೂಲದಿಂದ ಪರಿಹಾರ ದೊರಕಿಸಬೇಕೆಂಬ ಮಹತ್ವಕಾಂಕ್ಷಿ ಕನಸನ್ನ ನನಸಾಗಿಸುವ ಉದ್ದೇಶವನ್ನು ಕೃಷಿ ಸಚಿವರು ಚಲುವರಾಯಸ್ವಾಮಿ (Chaluvarajaswamy) ಹೊಂದಿದ್ದರು.

    ಈಗಾಗಲೇ ರಾಜ್ಯದ ಶಿವಮೊಗ್ಗದಲ್ಲಿ (Shivamogga) ಸಸ್ಯಾಧಾರಿತ ಕೃಷಿ ವಿಜ್ಞಾನಗಳ ಸಮಗ್ರ ಕೃಷಿ ಹಾಗೂ ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯವು 2013 ರಿಂದ ರೈತರ ಆಶೋತ್ತರಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ಇದೇ ಮಾದರಿಯಲ್ಲೇ ಮಂಡ್ಯದಲ್ಲೂ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಲು ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆ ದೊರೆತಿದೆ. ಇದನ್ನೂ ಓದಿ: ಕುಂಭಮೇಳದಲ್ಲಿ 7 ಅಡಿ ಎತ್ತರದ ರಷ್ಯಾದ ಬಾಬಾ – ‘ಪರಶುರಾಮನ ಅವತಾರ’ ಎಂದ ಭಕ್ತರು

    ನೂತನವಾಗಿ ಪ್ರಾರಂಭಿಸುವ ವಿಶ್ವವಿದ್ಯಾಲಯಕ್ಕೆ ಬೆಂಗಳೂರು ಕೃಷಿ ವಿವಿಯಿಂದ ಮಂಡ್ಯ ಕೃಷಿ ಕಾಲೇಜು (ವಿ.ಸಿ ಫಾರಂ), ಹಾಸನ ಕೃಷಿ ಕಾಲೇಜು ಹಾಗೂ ಚಾಮರಾಜನಗರ ಕೃಷಿ ಕಾಲೇಜುಗಳು ಹಾಗೂ ಶಿವಮೊಗ್ಗ ವಿಶ್ವವಿದ್ಯಾಲಯದಿಂದ ಪೊನ್ನಂಪೇಟೆ ಅರಣ್ಯ ಕಾಲೇಜು ಹಾಗೂ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಮೈಸೂರು ತೋಟಗಾರಿಕೆ ಕಾಲೇಜು ಮಂಡ್ಯ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಗೊಳ್ಳುತ್ತಿವೆ.

    ನೂತನವಾಗಿ ಪ್ರಾರಂಭಗೊಳ್ಳುವ ಮಂಡ್ಯ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳು ಸೇರ್ಪಡೆಗೊಳ್ಳುತ್ತವೆ. ಕಾರಣ ಈ ಜಿಲ್ಲೆಗಳಲ್ಲಿರುವ ಯಾವುದೇ ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳ ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣಾ ಘಟಕಗಳು ಯಥಾವತ್ತಾಗಿ ಮಂಡ್ಯ ಕೃಷಿ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಗೊಳ್ಳುತ್ತವೆ.

    ಶಿವಮೊಗ್ಗ ತೋಟಗಾರಿಕೆ ಮತ್ತು ಕೃಷಿ ವಿಶ್ವವಿದ್ಯಾಲಯದ ಮಾದರಿಯಲ್ಲಿ ಮಂಡ್ಯದಲ್ಲಿ ಪ್ರಾರಂಭಿಸುವ ನೂತನ ಕೃಷಿ ವಿಶ್ವವಿದ್ಯಾಲಯವನ್ನು ಕೂಡಾ ಎಲ್ಲಾ ಸಸ್ಯ ಶಾಸ್ತ್ರಗಳ ಸಮನ್ವಯತೆಯನ್ನು ಸಾಧಿಸಿ ಮಂಡ್ಯ ಸಮಗ್ರ ಕೃಷಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: Aeroindia 2025| ಯಲಹಂಕ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡಗಳ ಕ್ರೇನ್ ಎತ್ತರ ಇಳಿಸಿ: ಬಿಬಿಎಂಪಿ

  • ಬಿಗ್ ಬಾಸ್ ವಿನ್ನರ್ ಶಶಿ ನಟನೆಯ ‘ಮೆಹಬೂಬ’ ಚಿತ್ರಕ್ಕೆ ಸಚಿವರ ಸಾಥ್

    ಬಿಗ್ ಬಾಸ್ ವಿನ್ನರ್ ಶಶಿ ನಟನೆಯ ‘ಮೆಹಬೂಬ’ ಚಿತ್ರಕ್ಕೆ ಸಚಿವರ ಸಾಥ್

    ಬಿಗ್ ಬಾಸ್ ( Bigg Boss) ಖ್ಯಾತಿಯ ಶಶಿ (Shashi) ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಅವರ ಹುಟ್ಟುಹಬ್ಬದ ಸ್ಪೆಷಲ್ ಆಗಿ ಚಿತ್ರತಂಡ ‘ಮೆಹಬೂಬ’ (Mehbooba) . ಪೋಸ್ಟರ್ ಬಿಡುಗಡೆ ಮಾಡಿದೆ. ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿಂದು ಕೃಷಿ ಸಚಿವ ಚಲುವರಾಯಸ್ವಾಮಿ ಪೋಸ್ಟರ್ ಬಿಡುಗಡೆ ಮಾಡಿ ಇಡೀ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

    ಬಳಿಕ ಸಚಿವ ಚಲುವನಾರಾಯಣಸ್ವಾಮಿ ಮಾತನಾಡಿ, ಮೆಹಬೂಬಾ ಸಿನಿಮಾಗೆ ಶಶಿ ಪ್ರೊಡ್ಯೂಸರ್ – ಹೀರೋ ಅವರೇ..ಲಾಭ-ನಷ್ಟ ಹಾಗೂ ಹೆಸರು ಅವ್ರದ್ದೇ. ರಾಜ್ಯದ ಜನ ಆಶೀರ್ವಾದ ಮಾಡಬೇಕಾಗುತ್ತದೆ. ನಾಯಕಿ ನನ್ನ ಗೆಳೆಯನ ಮಗಳು. ಹೀಗಾಗಿ ಇಬ್ಬರಿಗೆ ಸಿನಿಮಾ ಸಕ್ಸಸ್ ತರಲಿ. ಇತ್ತೀಚೆಗೆ ಅನೇಕ ಚಿತ್ರಗಳು ಸಕ್ಸಸ್ ಆಗುತ್ತಿವೆ. ಜನರಿಗೆ ಯಾವ ರೀತಿ ಚಿತ್ರಗಳು ಇಷ್ಟಪಡುತ್ತಾರೆ. ಇಷ್ಟಪಡಲ್ಲ ಅನ್ನುವುದು ಊಹೆ ಮಾಡಲು ಆಗುವುದಿಲ್ಲ. ನಿಮ್ಮೆಲ್ಲ ಸಹಕಾರ ಇಡೀ ತಂಡ ಮೇಲೆ ಇರಲಿ ಎಂದರು.

    ನಾಯಕ ಶಶಿ ಮಾತನಾಡಿ, ಮೆಹಬೂಬ ನನಗೆ ಎಮೋಷನಲ್ ಜರ್ನಿ. ಒಂದು ವಿಷಯವನ್ನು ಜನರಿಗೆ ತಲುಪಬೇಕು ಎನ್ನುವುದು ನಮ್ಮ ಸಿನಿಮಾ ಅಜೆಂಡವಾಗಿರುತ್ತದೆ. 200 ಸಿನಿಮಾಗಳು ಬಂದರು. ಹೆಸರುಮಾಡೋದು 10 ರಿಮದ 15 ಸಿನಿಮಾಗಳು. ಆ 10-15 ಸಿನಿಮಾಗಳಲ್ಲಿ ನಮ್ಮೊಂದು ಒಂದು ಆಗಲಿ ಅನ್ನೋದು ನಮ್ಮ ಕನಸು. ಖುಷಿ ತಂದುಕೊಟ್ಟ ಸಿನಿಮಾ ಮೆಹಬೂಬಾ. ಶೂಟಿಂಗ್ ಕಂಪ್ಲೀಟ್ ಆಗಿದೆ. ಆ ಖುಷಿ ವಿಚಾರವನ್ನು ಹಂಚಿಕೊಳ್ಳಲು ನಿಮ್ಮ ಮುಂದೆ ಬಂದಿದ್ದೇವೆ. ಫೆಬ್ರವರಿಯಲ್ಲಿ ನಿಮ್ಮ ಮುಂದೆ ತರುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.

    ನಿರ್ದೇಶಕ ಅನೂಪ್ ಆಂಟೊನಿ ಮಾತನಾಡಿ, ಮೆಹಬೂಬ ನನ್ನ ಎರಡನೇ ಸಿನಿಮಾ. ಶೂಟಿಂಗ್ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ ಹಂತದಲ್ಲಿದೆ. ಫೆಬ್ರವರಿಗೆ ರಿಲಿಸ್ ಮಾಡಲು ಪ್ಲಾನ್ ಮಾಡುತ್ತಿದ್ದೇವೆ. ಅದ್ಭುತ ಲವ್ ಸ್ಟೋರಿ. ಶಶಿ ಸರ್ ಲಾಂಚ್ ಆಗುತ್ತಿದ್ದಾರೆ. ಪವನ್ ಮೇಡಂ ಅದ್ಭುತ ನಟನೆ ಚಿತ್ರದಲ್ಲಿದೆ. ಒಟ್ಟು ಚಿತ್ರದಲ್ಲಿ 5 ಹಾಡುಗಳಿವೆ ಎಂದರು. ಮಾರ್ಡನ್ ರೈತ ಎಂದು ಖ್ಯಾತಿ ಪಡೆದಿರುವ ಶಶಿ ಮೆಹಬೂಬ ಸಿನಿಮಾ ಮೂಲಕ ನಾಯಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ನಾಯಕನನಾಗಿ ಬಣ್ಣ ಹಚ್ಚುವುದರ ಜೊತೆಗೆ ನಿರ್ಮಾಪಕನಾಗಿಯೂ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

    ಕೇರಳದಲ್ಲಿ ನಡೆದ ನೈಜಘಟನೆಯೊಂದನ್ನು ಆಧರಿಸಿ ಈ ಚಿತ್ರ ಸಿದ್ಧವಾಗುತ್ತಿದೆ. ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಬಿರುಸಿನಿಂದ ಸಾಗಿದೆ. ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣವಾಗಿದೆ. ಮ್ಯಾಥ್ಯೂಸ್‌ ಮನು ಸಂಗೀತ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್ ಹಾಗೂ ರಘು ಶಾಸ್ತ್ರೀ ರಚಿಸಿದ್ದಾರೆ. ಸಂಭಾಷಣೆಯನ್ನು ರಘು ಶಾಸ್ತ್ರೀ ಅವರೇ ಬರೆದಿದ್ದಾರೆ. ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ಕಲೈ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.