Tag: Chaluvanarayanaswamy

  • ಮೇಲುಕೋಟೆಯಲ್ಲಿ ಪೊಂಗಲ್, ತುಳಸಿ ಪ್ರಸಾದ ಸ್ವೀಕರಿಸಿದ ನಟಿ ರಚಿತಾ ರಾಮ್

    ಮೇಲುಕೋಟೆಯಲ್ಲಿ ಪೊಂಗಲ್, ತುಳಸಿ ಪ್ರಸಾದ ಸ್ವೀಕರಿಸಿದ ನಟಿ ರಚಿತಾ ರಾಮ್

    ಟಿ ರಚಿತಾ ರಾಮ್ (Rachita Ram) ಮೇಲುಕೋಟೆಗೆ (Melukote) ತೆರಳಿ ತಮ್ಮ ಮನೆದೇವರು ಚೆಲುವನಾರಾಯಣಸ್ವಾಮಿ (Chaluvanarayanaswamy) ದರ್ಶನ ಪಡೆದಿದ್ದಾರೆ. ನಿನ್ನೆ ಮೇಲುಕೋಟೆಗೆ ಆಗಮಿಸಿದ್ದ ಅವರು ದೇವರ ದರ್ಶನ ಪಡೆದು ಪೊಂಗಲ್ ಮತ್ತು ತುಳಸಿ ಪ್ರಸಾದ ಸ್ವೀಕರಿಸಿದ್ದಾರೆ. ಹಲವು ಕಾಲ ದೇವಸ್ಥಾನದಲ್ಲೇ ಇದ್ದು, ಪ್ರಾರ್ಥಿಸಿದ್ದಾರೆ.

    ಈ ವೇಳೆಯಲ್ಲಿ ಮಾತನಾಡಿರುವ ಅವರು ಏಪ್ರಿಲ್ ನಲ್ಲಿ ನಡೆಯುವ ವೈರಮುಡಿ ಜಾತ್ರೆ ಮಹೋತ್ಸವದಲ್ಲಿ ಭಾಗಿಯಾಗಿ ತಮ್ಮ ಕೈಲಾದ ಸೇವೆಯನ್ನು ಮಾಡುವುದಾಗಿ ತಿಳಿಸಿದ್ದಾರೆ. ಹತ್ತು ದಿನಗಳ ಕಾಲ ನಡೆಯುವ ವೈರಮುಡಿ ಜಾತ್ರಾ ಮಹೋತ್ಸವದಲ್ಲಿ ಒಂದು ದಿನ ಬರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ಜೊತೆ ಜೊತೆಯಲಿ’ ಶಿಲ್ಪಾ ಅಯ್ಯರ್

    ದೇವರ ದರ್ಶನ ಮುಗಿಸಿ ಆಚೆ ಬರುತ್ತಿದ್ದಂತೆಯೇ ಅಭಿಮಾನಿಗಳು ಅವರ ಸುತ್ತುವರೆದು ಫೋಟೋ ತಗೆಸಿಕೊಂಡು ಸಂಭ್ರಮಿಸಿದರು.  ದೇವರ ದರ್ಶನದ ನಂತರ ಕಲ್ಯಾಣಿಗೂ ಅವರು ತೆರಳಿ ನಾಮಹಾಕಿಸಿಕೊಂಡು ರಾಜಗೋಪುರ ದರ್ಶನ ಮಾಡಲು ತೆರಳಿದರು. ಈ ಸಂದರ್ಭದಲ್ಲಿ ಅರ್ಚಕರಾದ ನಾರಾಯಣ ಪ್ರಸಾದ್ ಭಟ್ಟರ್ ಹಾಗೂ ಇತರರು ಉಪಸ್ಥಿತರಿದ್ದರು. ದೇವಾಲಯದ ಪರಿಚಯವನ್ನು ರಚಿತಾಗೆ ಮಾಡಿಸಿದರು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವೈರಮುಡಿ ಮಹೋತ್ಸವಕ್ಕೂ ತಟ್ಟುತ್ತಾ ಕೊರೊನಾ ಬಿಸಿ – ಭಕ್ತರಲ್ಲಿ ಆತಂಕ

    ವೈರಮುಡಿ ಮಹೋತ್ಸವಕ್ಕೂ ತಟ್ಟುತ್ತಾ ಕೊರೊನಾ ಬಿಸಿ – ಭಕ್ತರಲ್ಲಿ ಆತಂಕ

    ಮಂಡ್ಯ: ಮೇಲುಕೋಟೆಯ ಪ್ರಸಿದ್ಧ ಚಲುವನಾರಾಯಣಸ್ವಾಮಿಯ ವೈರಮುಡಿ ಮಹೋತ್ಸವಕ್ಕೂ ಕೊರೊನಾ ವೈರಸ್ ಭೀತಿ ತಟ್ಟುತ್ತಾ ಎಂಬ ಆತಂಕ ಭಕ್ತರಲ್ಲಿ ಕಾಡುತ್ತಿದೆ.

    ಏಪ್ರಿಲ್ 2ರಂದು ಮೇಲುಕೋಟೆಯ ವಿಶ್ವ ಪ್ರಸಿದ್ಧ ಚಲುವನಾರಾಯಣಸ್ವಾಮಿಯ ವೈರಮುಡಿ ಮಹೋತ್ಸವ ನಡೆಸಲು ಈಗಾಗಲೇ ಮಂಡ್ಯ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಆದರೆ ಇತ್ತ ರಾಜ್ಯ ಸೇರಿದಂತೆ ದೇಶಾದ್ಯಂತ ಕೊರೊನಾ ವೈರಸ್‍ನ ಭೀತಿ ಎದುರಾಗಿದೆ. ಈ ಹಿನ್ನೆಲೆ ರಾಜ್ಯಾದ್ಯಂತ ಸರ್ಕಾರ 1 ವಾರಗಳ ಕಾಲ ಸೀಮಿತ ವಲಯಗಳಿಗೆ ಬಂದ್‍ನ್ನು ಸಹ ಘೋಷಣೆ ಮಾಡಿದೆ. ಹೀಗಾಗಿ ರಾಜ್ಯಾದ್ಯಂತ ಯಾವುದೇ ಜಾತ್ರಾ ಮಹೋತ್ಸವಗಳು ಜರುಗದಂತೆ ಆದೇಶವನ್ನೂ ಹೊರಡಿಸಲಾಗಿದೆ.

    ಕೊರೊನಾ ವೈರಸ್ ಭೀತಿ ಒಂದು ವೇಳೆ ನಿಲ್ಲದಿದ್ದರೆ ಏಪ್ರಿಲ್ 2ರಂದು ನಡೆಯುವ ವೈರಮುಡಿ ಮಹೋತ್ಸವಕ್ಕೂ ಕೊರೊನಾ ಬಿಸಿ ತಟ್ಟಲಿದೆ. ವೈರಮುಡಿ ಮಹೋತ್ಸವ ಇನ್ನೂ 15 ದಿನಗಳು ಇರುವ ಕಾರಣ ವೈರಮುಡಿ ಮಹೋತ್ಸವಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಪ್ರತಿ ವರ್ಷ ಈ ಮಹೋತ್ಸವಕ್ಕೆ ಲಕ್ಷಾಂತರ ಜನರು ಬರುತ್ತಿದ್ದರು. ಆದರೆ ಈ ಬಾರಿ ವೈರಮುಡಿ ಮಹೋತ್ಸವ ನಡೆದರು ಸಹ ಕೊರೊನಾ ವೈರಸ್ ಭೀತಿಯಿಂದ ಜನರು ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

    ಇತಿಹಾಸದಲ್ಲೇ ವೈರಮುಡಿ ಮಹೋತ್ಸವ ಒಂದು ಬಾರಿಯೂ ಸಹ ನಿಂತಿಲ್ಲ. ವೈರಮುಡಿ ಮಹೋತ್ಸವ ನಿಲ್ಲುವ ಸಾಧ್ಯತೆ ಕಡಿಮೆ ಇದೆ. ಮಹೋತ್ಸವಕ್ಕೆ 15 ದಿನಗಳು ಇರುವ ಕಾರಣ ಈ ಬಗ್ಗೆ ಸಚಿವರು ಹಾಗೂ ಅರ್ಚಕರ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಮಂಡ್ಯ ಜಿಲ್ಲಾಧಿಕಾರಿ ವೆಂಕಟೇಶ್ ಅವರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.