Tag: challenging star

  • ರಾಜ್ಯದೆಲ್ಲೆಡೆ ತಾರಕ್ ಫೀವರ್ – ಬೆಳ್ಳಂಬೆಳಗ್ಗೆಯೇ ಹಲವೆಡೆ ಪ್ರದರ್ಶನ

    ರಾಜ್ಯದೆಲ್ಲೆಡೆ ತಾರಕ್ ಫೀವರ್ – ಬೆಳ್ಳಂಬೆಳಗ್ಗೆಯೇ ಹಲವೆಡೆ ಪ್ರದರ್ಶನ

    ಬೆಂಗಳೂರು: ನವರಾತ್ರಿ ಉತ್ಸವದ ಈ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಸಿನಿಮಾ ರಿಲೀಸ್ ಆಗಿದೆ. ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತಾರಕ್ ತೆರೆ ಕಾಣ್ತಿದೆ.

    ದರ್ಶನ್ ಅಭಿನಯದ ಸಿನಿಮಾ ಅಂದ್ರೆ ಥಿಯೇಟರ್‍ಗಳಲ್ಲಿ ಅಪಾರ ಬೇಡಿಕೆ ಇರುತ್ತೆ. ಹೀಗಾಗಿ ರಾಜ್ಯದ ಕೆಲವೆಡೆ ಎಕ್ಸ್‍ಟ್ರಾ ಶೋ ಏರ್ಪಡಿಸಲಾಗಿದೆ. ಬೆಂಗಳೂರಿನ ಉತ್ತರಹಳ್ಳಿಯ ವೈಭವಿ ಚಿತ್ರಮಂದಿರದಲ್ಲಿ 6.30ಕ್ಕೆ ವಿಶೇಷ ಶೋ ಶುರುವಾಗಿದೆ. ಬೆಳ್ಳಂಬೆಳಗ್ಗೆ ಮಹಿಳೆಯರು ಕೂಡ ದರ್ಶನ್ ಸಿನಿಮಾ ನೊಡಲು ಮುಗಿಬಿದ್ದಿದ್ದಾರೆ.

    `ತಾರಕ್’ ದರ್ಶನ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದು, ಹಿಂದೆಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ದರ್ಶನ ರಗ್ಬಿ ಪ್ಲೇಯರ್ ಪಾತ್ರವನ್ನು ನಿಭಾಯಿಸಿದ್ದಾರೆ. ತಾರಕ್ ಸಿನಿಮಾವನ್ನು ಮಿಲನ ಪ್ರಕಾಶ್ ನಿರ್ದೇಶಿಸಿದ್ದು, ವಿಶೇಷ ಪಾತ್ರದಲ್ಲಿ ನಟ ದೇವರಾಜ್ ನಟಿಸಿದ್ದಾರೆ. ಶೃತಿ ಹರಿಹರನ್ ಹಾಗೂ ಶಾನ್ವಿ ಶ್ರೀವಾತ್ಸವ್ ಅಭಿನಯಿಸಿದ್ದಾರೆ.

    ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದಲ್ಲಿ ಒಟ್ಟಾರೆ 6 ಹಾಡುಗಳಿವೆ. ಬಾಲಿವುಡ್ ಸಿಂಗರ್ ಅರಮಾನ್ ಮಲ್ಲಿಕ್ ಎರಡು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಗಾಯಕ ವ್ಯಾಸ್, ವಿಜಯ್ ಪ್ರಕಾಶ್ ಮತ್ತು ಗಾಯಕಿಯರಾದ ಶ್ರೇಯಾ ಘೋಷಾಲ್, ಇಂದು ನಾಗರಾಜ್, ನೀತಿ ಮೋಹನ್ ಕಂಠಸಿರಿಯಲ್ಲಿ ಹಾಡುಗಳು ಮೂಡಿಬಂದಿವೆ.

    https://www.youtube.com/watch?v=bUWVi72WlCw

  • ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜಕೀಯಕ್ಕೆ?

    ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜಕೀಯಕ್ಕೆ?

    ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ಎಂಟ್ರಿಯಾಗಿ ತಮ್ಮದೇ ಸ್ವಂತ ಪಕ್ಷ ನಿರ್ಮಿಸ್ತಿರೋ ಹೊತ್ತಲ್ಲೇ ನಟ ದರ್ಶನ್ ಕೂಡ ರಾಜಕೀಯಕ್ಕೆ ಬರ್ತಾರೆ ಅನ್ನೋ ಚರ್ಚೆ ಶುರುವಾಗಿದೆ.

    ಇದನ್ನೂ ಓದಿ:  ದರ್ಶನ್‍ಗೆ ಶುಭ ಹಾರೈಸಿದ ಸುದೀಪ್

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಇತರೆ ಸ್ಟಾರ್ ನಟರನ್ನು ಪಕ್ಷಕ್ಕೆ ಸೆಳೆಯಲು ಕಾಂಗ್ರೆಸ್ ಕಸರತ್ತು ಆರಂಭಿಸಿದೆ. ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಅಂಬರೀಶ್ ಪ್ರಯತ್ನ ಆರಂಭಿಸಿದ್ದು, ಈಗಾಗಲೇ ಹೈಕಮಾಂಡ್ ಮಟ್ಟದಲ್ಲೂ ಒಂದು ಸುತ್ತಿನ ಮಾತುಕತೆಯಾಗಿದೆ.

    ಇದನ್ನೂ ಓದಿ: ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ದರ್ಶನ್-ಅಭಿಮಾನಿಗಳು ಫುಲ್ ಖುಷ್

    ಎಲ್ಲಾ ಲೆಕ್ಕಾಚಾರದಂತೆ ನಡೆದಲ್ಲಿ 2018ರ ವಿಧಾನಸಭೆ ಚುನಾವಣೆಯಲ್ಲಿ ದರ್ಶನ್ ಕಾಂಗ್ರೆಸ್ ಪರ ಪ್ರಚಾರ ನಡೆಸಲಿದ್ದಾರೆ. ಆದ್ರೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ದರ್ಶನ್ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ ಇದೆ. ಯಾಕಂದ್ರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಎದುರಾಳಿಯಾಗಿ ದರ್ಶನ್‍ರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತಿಸಿದೆ ಎನ್ನಲಾಗಿದೆ.

    ಇದನ್ನೂ ಓದಿ: `ಕೈ’ ಬಿಟ್ಟ ಹಳ್ಳಿ ಹಕ್ಕಿ! – ಸಿಂಹಗೆ ಎದುರಾಗ್ತಾರಾ ಬ್ರಿಜೇಶ್?

  • ರಾಜ್ಯಾದ್ಯಂತ `ಚಕ್ರವರ್ತಿ’ ಚಾಲೆಂಜಿಂಗ್ ಸ್ಟಾರ್ ದರ್ಶನ – ಬಾಕ್ಸ್ ಆಫೀಸ್ ಸುಲ್ತಾನನ ಸಿನಿಮಾಕ್ಕೆ ಫಿದಾ

    ರಾಜ್ಯಾದ್ಯಂತ `ಚಕ್ರವರ್ತಿ’ ಚಾಲೆಂಜಿಂಗ್ ಸ್ಟಾರ್ ದರ್ಶನ – ಬಾಕ್ಸ್ ಆಫೀಸ್ ಸುಲ್ತಾನನ ಸಿನಿಮಾಕ್ಕೆ ಫಿದಾ

    – ರಾತ್ರಿಯಿಂದಲೇ ಅಭಿಮಾನಿಗಳಿಗೆ ಸಡಗರ

    ಬೆಂಗಳೂರು: ಸ್ಯಾಂಡಲ್ ವುಡ್‍ನಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ಚಕ್ರವರ್ತಿ’ ಸಿನಿಮಾ ತೆರೆಗೆ ಅಪ್ಪಳಿಸಿದೆ. ಗುರುವಾರ ರಾತ್ರಿಯಿಂದಲೇ ಎಲ್ಲೆಲ್ಲೂ ಸದ್ದು ಮಾಡುತ್ತಿದೆ. ಬೆಂಗಳೂರಿನ ಮಲ್ಟಿಪ್ಲೆಕ್ಸ್ ಗಳಲ್ಲಿ ಇದೇ ಮೊದಲ ಬಾರಿಗೆ ಮಧ್ಯರಾತ್ರಿ 12 ಗಂಟೆ ಚಿತ್ರ ಪ್ರದರ್ಶನಗೊಂಡಿದೆ. ಕೇವಲ ಕರ್ನಾಟಕ ಮಾತ್ರವಲ್ಲದೇ ದೆಹಲಿ ಮತ್ತು ಗುಜರಾತ್‍ನಲ್ಲಿ ತೆರೆ ಕಂಡಿದೆ. ದೇಶದ ಒಟ್ಟು 500 ಚಿತ್ರಮಂದಿರಗಳಲ್ಲಿ ಅಭಿಮಾನಿಗಳಿಗೆ ಚಕ್ರವರ್ತಿ ದರ್ಶನ ನೀಡುತ್ತಿದ್ದಾರೆ.

    ಶಿವಮೊಗ್ಗದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಕ್ರವರ್ತಿ ಸಿನೆಮಾ ಮಧ್ಯರಾತ್ರಿಯೇ ಬಿಡುಗಡೆಗೊಂಡಿದೆ. ಮಧ್ಯ ರಾತ್ರಿ ಶೋ ನೋಡಲು 8 ಗಂಟೆಯಿಂದಲೇ ಟಿಕೇಟ್ ಗಾಗಿ ಕ್ಯೂನಿಂತಿದ್ದರು. ಕೆಲ ಮಿತಿಮೀರಿದ ವರ್ತನೆ ತೋರುತ್ತಿದ್ದ ಪ್ರೇಕ್ಷಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

    ಹಲವು ಬಾರಿ ಲಘು ಲಾಠಿ ಪ್ರಹಾರವನ್ನೂ ಮಾಡಲಾಯಿತು. ಚಿತ್ರಮಂದಿರದ ಆವರಣದ ತುಂಬಾ ಅಭಿಮಾನಿಗಳು ದರ್ಶನ್ ಪರ ಘೋಷಣೆ ಕೂಗುತ್ತಿದ್ದರು. ಸಿನೆಮಾ ಪ್ರದರ್ಶನ ಆರಂಭವಾದ ನಂತರ ದರ್ಶನ್ ಎಂಟ್ರಿ ವೇಳೆ ಅಭಿಮಾನಿಗಳ ಘೋಷಣೆ ಮುಗಿಲು ಮುಟ್ಟಿತ್ತು.

    ತುಮಕೂರಿನಲ್ಲಿ ರಾತ್ರಿಯಿಂದಲೇ ಚಿತ್ರ ತೆರೆ ಕಂಡಿದೆ. ಗಾಯತ್ರಿ ಮತ್ತು ಮಾರುತಿ ಚಿತ್ರ ಮಂದಿರಗಳಲ್ಲಿ ಚಿತ್ರ ಪ್ರದರ್ಶನಗೊಂಡಿದ್ದು ಮಾರುತಿ ಚಿತ್ರ ಮಂದಿರದಲ್ಲಿ ರಾತ್ರಿ 12 ಗಂಟೆ ಮತ್ತು ಬೆಳಗಿನ ಜಾವ 4-30 ಕ್ಕೆ ವಿಶೇಷ ಪ್ರದರ್ಶನ ನಡೆಸಲಾಯಿತು. ಮಧ್ಯರಾತ್ರಿ 12 ರ ಶೋಗೂ ಅಭಿಮಾನಿಗಳು ಮುಗಿಬಿದ್ದು ಚಿತ್ರ ವೀಕ್ಷಿಸಿದರು. ಇನ್ನೂ ಕೆಲ ಅಭಿಮಾನಿಗಳು ತಮ್ಮ ಹೇರ್‍ಸ್ಟೈಲ್‍ನಲ್ಲಿಯೇ ಚಕ್ರವರ್ತಿ ಎಂಬ ಹೆಸರು ಮೂಡುವ ಹಾಗೆ ಹೇರ್‍ಕಟ್ ಮಾಡಿಸಿಕೊಂಡು ಗಮನ ಸೆಳೆದರು.

    ಇದನ್ನೂ ಓದಿ: ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಬರೆದ ಚಕ್ರವರ್ತಿ: ಧೂಳೆಬ್ಬಿಸಿದೆ ದಚ್ಚು ದರ್ಬಾರ್

    ಇದನ್ನೂ ಓದಿ: ಯುಗಾದಿಗೆ ‘ಚಕ್ರವರ್ತಿ’ ಸಿನಿಮಾದ ಟ್ರೇಲರ್ ರಿಲೀಸ್

    ಇದನ್ನೂ ಓದಿ: ನಾವ್ ಲಾಂಗ್ ಇರೋದ್ರಿಂದ ಲಾಂಗ್ ನಮ್ಗೆ ಮ್ಯಾಚಾಗುತ್ತೆ: ಫೇಸ್ ಬುಕ್ ಲೈವ್‍ನಲ್ಲಿ ನಟ ದರ್ಶನ್

  • ನಾವ್ ಲಾಂಗ್ ಇರೋದ್ರಿಂದ ಲಾಂಗ್ ನಮ್ಗೆ ಮ್ಯಾಚಾಗುತ್ತೆ: ಫೇಸ್ ಬುಕ್ ಲೈವ್‍ನಲ್ಲಿ ನಟ ದರ್ಶನ್

    ನಾವ್ ಲಾಂಗ್ ಇರೋದ್ರಿಂದ ಲಾಂಗ್ ನಮ್ಗೆ ಮ್ಯಾಚಾಗುತ್ತೆ: ಫೇಸ್ ಬುಕ್ ಲೈವ್‍ನಲ್ಲಿ ನಟ ದರ್ಶನ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ಚಕ್ರವರ್ತಿ’ ಸಿನಿಮಾ ಶುಕ್ರವಾರ ದೇಶಾದ್ಯಂತ ರಿಲೀಸ್ ಆಗಲಿದೆ. ಹೀಗಾಗಿ ನಟ ದರ್ಶನ್ ತಮ್ಮ ಅಭಿಮಾನಿಗಳಿಗಾಗಿ ಮೊತ್ತ ಮೊದಲ ಬಾರಿಗೆ ಫೇಸ್‍ಬುಕ್ ಲೈವ್‍ಗೆ ಬಂದಿದ್ದಾರೆ.

    ಸುಮಾರು 23 ನಿಮಿಷಗಳ ಕಾಲ ಸುದೀರ್ಘವಾಗಿ ಮಾತನಾಡಿರೋ ದರ್ಶನ್, ಚಕ್ರವರ್ತಿ ಸಿನಿಮಾದ ಬಗ್ಗೆ, ತಮ್ಮ ಪಾತ್ರದ ಬಗ್ಗೆ ಜೊತೆಗೆ ಇಡೀ ಚಿತ್ರತಂಡದ ಬಗ್ಗೆ ಮಾತನಾಡಿದ್ದಾರೆ. ಎರಡು ಗಂಟೆ ಇಪ್ಪತೈದು ನಿಮಿಷಗಳ ಸಿನಿಮಾ ಪಕ್ಕಾ ಎಂಟರ್‍ಟೈನ್ಮೆಂಟ್ ನೀಡುತ್ತೆ. ಕೆಟ್ಟ ಜಾಗದಲ್ಲಿ ಕುಳಿತು ಒಳ್ಳೆ ಕೆಲಸ ಮಾಡುವಂಥವರೂ ಇರ್ತಾರೆ ಅಂತವರ ಕಥೆಯ ಚಿತ್ರವಿದು ಅಂತ ದರ್ಶನ್ ಲೈವ್‍ನಲ್ಲಿ ಹೇಳಿದ್ದಾರೆ.

    ಜೊತೆಗೆ ದರ್ಶನ್ ಕೈಗೆ ಲಾಂಗ್ ಬಂದ್ರೆ ಚೆನ್ನಾಗಿರುತ್ತೆ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, “ನಾವ್ ಲಾಂಗ್ ಇರೋದ್ರಿಂದ ನಮ್ಗೆ ಲಾಂಗ್ ಮ್ಯಾಚಾಗತ್ತೆ. ಲಾಂಗ್ ಹಿಡಿಯೋದು ಶಿವಣ್ಣ ಸ್ಟೈಲ್ ಅವ್ರೇ ಜಾಸ್ತಿಯಾಗಿ ಲಾಂಗ್ ಹಿಡಿಯುತ್ತಿದ್ರು. ಅವ್ರಿಗೆ ಅದು ಚೆನ್ನಾಗಿ ಮ್ಯಾಚ್ ಆಗಿತ್ತು ಅಂದಿದ್ದಾರೆ. ಒಟ್ಟಿನಲ್ಲಿ ದರ್ಶನ್ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿರೋದು ಅಭಿಮಾನಿಗಳಲ್ಲಿ ಭಾರೀ ಸಂತಸ ತಂದಿದೆ.

  • ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಪಡೆದ ಚಾಲೆಂಜಿಂಗ್ ಸ್ಟಾರ್- ಫೋಟೋಗಳಲ್ಲಿ ನೋಡಿ

    ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಪಡೆದ ಚಾಲೆಂಜಿಂಗ್ ಸ್ಟಾರ್- ಫೋಟೋಗಳಲ್ಲಿ ನೋಡಿ

    ಶಬರಿಮಲೆ: ಏಪ್ರಿಲ್ 6ರಂದು ಇರುಮುಡಿ ಹೊತ್ತುಕೊಂಡು ಅಯ್ಯಪ್ಪಸ್ವಾಮಿಯ ದರ್ಶನಕ್ಕೆ ತೆರಳಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಶಬರಿಮಲೆಯಿಂದ ವಾಪಸ್ಸಾಗಲಿದ್ದಾರೆ.

    ಮಾಲಾಧಾರಿಯಾಗಿದ್ದ ದರ್ಶನ್ ಗುರುವಾರದಂದು ಇರುಮುಡಿ ಹೊತ್ತು ಶಬರಿಮಲೆ ಯಾತ್ರೆ ಕೈಗೊಂಡಿದ್ರು. ದರ್ಶನ್ ಜೊತೆ ಸಹೋದರ ದಿನಕರ್ ತೂಗುದೀಪ್ ಸೇರಿದಂತೆ ಇನ್ನೂ ಅನೇಕ ಆಪ್ತರು ಪ್ರಯಾಣ ಬೆಳೆಸಿದ್ರು. ದರ್ಶನ್ ಶಬರಿಮಲೆಯ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿರೋ ಫೋಟೋಗಳು ಲಭ್ಯವಾಗಿವೆ.

     

    https://www.youtube.com/watch?v=JOAsX2npLGg

    https://www.youtube.com/watch?v=mWR866nADpY

    https://www.youtube.com/watch?v=dCs5LXIe3Yw

  • ವಿಡಿಯೋ: ಕಾಲ್ನಡಿಗೆಯಲ್ಲಿ ಶಬರಿಮಲೆ ಬೆಟ್ಟ ಹತ್ತುತ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್

    ವಿಡಿಯೋ: ಕಾಲ್ನಡಿಗೆಯಲ್ಲಿ ಶಬರಿಮಲೆ ಬೆಟ್ಟ ಹತ್ತುತ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್

    ಬೆಂಗಳೂರು: ಮಾರ್ಚ್ 31ರಂದು ಅಯ್ಯಪ್ಪ ಮಾಲೆ ಧರಿಸಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಗುರುವಾರದಂದು ಇರುಮುಡಿ ಹೊತ್ತು ಶಬರಿಮಲೆಗೆ ತೆರಳಿದ್ದರು. ಇಂದು ಕಾಲ್ನಡಿಗೆಯಲ್ಲಿ ಶಬರಿಮಲೆ ಬೆಟ್ಟವನ್ನ ಹತ್ತಿ ದೇವರ ದರ್ಶನವನ್ನು ಪಡೆಯಲಿದ್ದಾರೆ.

    ಕಳೆದ 6 ವರ್ಷದಿಂದ ದರ್ಶನ್ ಶಬರಿಮಲೆ ಯಾತ್ರೆಯನ್ನ ಮಾಡಿಕೊಂಡು ಬರುತ್ತಿದ್ದಾರೆ. ಈ ವರ್ಷವು ಕೂಡ ಮಲಾಧಾರಿಯಾಗಿ ಕಠಿಣ ವ್ರತ ಕೈಗೊಂಡು ಅಯ್ಯಪ್ಪನ ದರ್ಶನ ಮಾಡುತ್ತಿದ್ದಾರೆ.

    ದರ್ಶನ್ ಜೊತೆ ಸಹೋದರ ದಿನಕರ್ ತೂಗುದೀಪ್, ನಿರ್ದೇಶಕರಾದ ಶಿವಮಣಿ, ಎಂ.ಡಿ ಶ್ರೀಧರ್, ಹೆಚ್. ವಾಸು, ದರ್ಶನ್ ಸ್ನೇಹಿತರು ಸೇರಿದಂತೆ 36 ಮಂದಿ ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ತೆರಳಿದ್ದಾರೆ. ಭಾನುವಾರ ಬೆಳಗ್ಗೆ ಶಬರಿಮಲೆ ಯಾತ್ರೆ ಮುಗಿಸಿ ದರ್ಶನ್ ವಾಪಸ್ಸಾಗಲಿದ್ದಾರೆ.

    https://www.youtube.com/watch?v=JOAsX2npLGg

  • ಅಯ್ಯಪ್ಪ ಮಾಲಾಧಾರಿಯಾದ ನಟ ದರ್ಶನ್ ಇಂದು ಶಬರಿಮಲೆಗೆ ಪ್ರಯಾಣ

    ಅಯ್ಯಪ್ಪ ಮಾಲಾಧಾರಿಯಾದ ನಟ ದರ್ಶನ್ ಇಂದು ಶಬರಿಮಲೆಗೆ ಪ್ರಯಾಣ

    ಬೆಂಗಳೂರು: ಮಾರ್ಚ್ 31ರಂದು ಅಯ್ಯಪ್ಪ ಮಾಲೆ ಧರಿಸಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಶಬರಿಮಲೆಗೆ ತೆರಳಿದ್ದಾರೆ.

    ಬೆಂಗಳೂರಿನ ಶ್ರೀರಾಂಪುರದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಇರುಮುಡಿ ಕಟ್ಟುವ ಕಾರ್ಯ ನಡೆಯುತ್ತಿದ್ದು ಅಲ್ಲಿಂದಲೇ ಶಬರಿಮಲೆಗೆ ಹೊರಡಲಿದ್ದಾರೆ. ಈಗಾಗಲೇ ಇರುಮುಡಿ ಪೂಜೆ ಶುರುವಾಗಿದೆ. ಬೆಳಗ್ಗೆ 10 ಗಂಟೆ ವೇಳೆಗೆ ಶಬರಿಮಲೆಗೆ ತೆರಳಲಿರುವ ತಂಡ ಅಯ್ಯಪ್ಪ ದರ್ಶನ ಮುಗಿಸಿ 8ನೇ ತಾರೀಖಿನಂದು ವಾಪಸ್ಸಾಗಲಿದ್ದಾರೆ.

    ದರ್ಶನ್ ಜೊತೆ ನಿರ್ದೇಶಕರಾದ ಶಿವಮಣಿ, ಎಂ.ಡಿ ಶ್ರೀಧರ್, ಹೆಚ್. ವಾಸು ಸೇರಿದಂತೆ ಅನೇಕ ಗಣ್ಯರು ಹಾಗೂ ಅಭಿಮಾನಿಗಳು ಸೇರಿ ಒಟ್ಟು 36 ಮಂದಿ ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ತೆರಳಲಿದ್ದಾರೆ.

  • ಅಯ್ಯಪ್ಪ ಮಾಲೆ ಧರಿಸಿದ ಸ್ಯಾಂಡಲ್‍ವುಡ್ ಚಕ್ರವರ್ತಿ ದರ್ಶನ್

    ಅಯ್ಯಪ್ಪ ಮಾಲೆ ಧರಿಸಿದ ಸ್ಯಾಂಡಲ್‍ವುಡ್ ಚಕ್ರವರ್ತಿ ದರ್ಶನ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಮಾಲಾಧಾರಿಯಾಗಿದ್ದಾರೆ. ಕಳೆದ ಆರೇಳು ವರ್ಷಗಳಿಂದ ನಟ ದರ್ಶನ್ ಶಬರಿಮಲೆಗೆ ಹೋಗುತ್ತಿದ್ದು ಪ್ರತಿ ವರ್ಷವೂ ದರ್ಶನ್ ಶ್ರೀರಾಮಪುರ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಾಲೆ ಹಾಕಿ, ಒಂದು ವಾರಗಳ ಕಾಲ ಮಾಲಾಧಾರಿಯಾಗಿದ್ದು ನಂತರ ಶಬರಿಮಲೆಗೆ ತೆರಳೋದು ವಾಡಿಕೆ.

    ಇಂದು ಬೆಳಗ್ಗೆ 7.30ರ ವೇಳೆಗೆ ದರ್ಶನ್, ಶ್ರೀರಾಮಪುರದ ಅಯ್ಯಪ್ಪಸ್ವಾಮಿ ಮಂದಿರಕ್ಕೆ ತೆರಳಿ ಪೂಜೆ ಮಾಡಿಸಿ ಮಾಲೆ ಧರಿಸಿದ್ರು. ಈ ಬಾರಿ ಸುಮಾರು 35 ಜನರ ತಂಡ ದರ್ಶನ್ ಜೊತೆ ಶಬರಿಮಲೆಗೆ ತೆರಳುತ್ತಿದೆ.

    ದರ್ಶನ್ ಆಪ್ತರು, ಸಿನಿಮಾ ಸಹೋದ್ಯೋಗಿಗಳು ಸೇರಿದಂತೆ ಅನೇಕರು ದರ್ಶನ್ ಜೊತೆಯಲ್ಲಿರ್ತಾರೆ. ದರ್ಶನ್ ಸಹೋದರ ದಿನಕರ್, ನಿರ್ದೇಶಕ ಹೆಚ್ ವಾಸು, ನಿರ್ದೇಶಕ ಶಿವಮಣಿ, ಎಂಡಿ ಶ್ರೀಧರ್ ಸೇರಿದಂತೆ ಅನೇಕರು ದರ್ಶನ್ ಜೊತೆ ಇಂದು ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ರು. ನಿರ್ದೇಶಕ ಎಂ ಡಿ ಶ್ರೀಧರ್ ಮಗ ಈ ಬಾರಿ ಕನ್ನಿಸ್ವಾಮಿಯಾಗಿ ಹೋಗುತ್ತಿದ್ದಾರೆ.

    ಇದನ್ನೂ ಓದಿ: ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಬರೆದ ಚಕ್ರವರ್ತಿ: ಧೂಳೆಬ್ಬಿಸಿದೆ ದಚ್ಚು ದರ್ಬಾರ್

    ಏಪ್ರಿಲ್ 6 ರಂದು ಇರುಮುಡಿ ಪೂಜೆ ನಡೆಸಿ ಅಂದೇ ಶಬರಿಮಲೆಗೆ ದರ್ಶನ್ ಪ್ರಯಾಣ ಬೆಳೆಸಲಿದ್ದಾರೆ. ಏಪ್ರಿಲ್ 8ರ ಮುಂಜಾನೆ ವಾಪಸ್ಸಾಗಲಿದ್ದಾರೆ.

  • 40ನೇ ಹುಟ್ಟುಹಬ್ಬ ಆಚರಿಸಿಕೊಂಡ ಜಗ್ಗುದಾದ: ಅಭಿಮಾನಿಗಳಿಂದ ಹಾಡು ಗಿಫ್ಟ್

    40ನೇ ಹುಟ್ಟುಹಬ್ಬ ಆಚರಿಸಿಕೊಂಡ ಜಗ್ಗುದಾದ: ಅಭಿಮಾನಿಗಳಿಂದ ಹಾಡು ಗಿಫ್ಟ್

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಬಾಕ್ಸಾಫೀಸ್ ಸುಲ್ತಾನ್ ಅಂತಾನೇ ಖ್ಯಾತಿ ಹೊಂದಿರೋ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಇಂದು 40ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಬೆಂಗಳೂರಿನ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಮಧ್ಯರಾತ್ರಿ ತಮ್ಮ ಅಭಿಮಾನಿಗಳ ಸಮುಖದಲ್ಲಿ ಕೇಕ್ ಕತ್ತಿರುಸುವ ಮೂಲಕ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡರು.

    ತಡ ರಾತ್ರಿ 2 ಗಂಟೆಯತನಕ ನೆಚ್ಚಿನ ನಟನಿಗೆ ಶುಭಾಶಯ ಕೊರಲು ಕೇಕ್ ಹಿಡಿದು ಬಾರಿ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಮನೆ ಹತ್ತಿರ ಧಾವಿಸಿ ಶುಭಾಶಯ ಕೋರಿದರು. ಅಲ್ಲದೇ ಪಟಾಕಿ ಸಿಡಿಸಿ ಸಂಭ್ರಮಿಸಿದರು. ತಡ ರಾತ್ರಿಯವರೆಗೂ ಅಭಿಮಾನಿಗಳು ಬಂದು ಶುಭಾಶಯ ಕೋರಿದ್ದೇ ನಾನು ಇಷ್ಟು ವರ್ಷ ಸಂಪಾದಿಸಿದ್ದು ಅಂತ ನಟ ದರ್ಶನ್ ಹೇಳಿದರು. ದರ್ಶನ್ ಮನೆಯ ಹತ್ತಿರ ಬರೀ ಬೆಂಗಳೂರಿನವರಷ್ಟೇ ಅಲ್ಲದೇ ಮೈಸೂರು ಶಿವಮೊಗ್ಗ ಯಾದಗಿರಿ ದಾವಣಗೆರೆ ಹಾಸನ ಜಿಲ್ಲೆಗಳಿಂದಲೂ ದರ್ಶನ್ಗೆ ಶುಭಾಶಯ ಕೊರಲು ಅವರ ಮನೆ ಹತ್ತಿರ ಬಂದಿದ್ದರು ಎನ್ನಲಾಗಿದೆ.

    ಹಾಡು ಉಡುಗೊರೆ: ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಚಾಲೆಜಿಂಗ್ ಸ್ಟಾರ್ ದರ್ಶನ್ ಅವ್ರಿಗೆ ಹಾಡೊಂದು ಉಡುಗೊರೆಯಾಗಿ ನೀಡಿದ್ದಾರೆ. ಸಂಗೀತ ನಿರ್ದೇಶಕ ಸುಪ್ರೀತ್ ಗಾಂಧಾರ ಅಂಡ್ ಟೀಮ್ ಈ ಹಾಡು ರೆಡಿ ಮಾಡಿದ್ದಾರೆ. ಹಾಡಿಗೆ ಶ್ರೀರವಿ ಸಾಹಿತ್ಯ ಬರೆದಿದ್ದು, ಸಂಜೀತ್ ಹೆಗಡೆ ಕಂಠದಾನ ಮಾಡಿದ್ದಾರೆ. ದರ್ಶನ್ 40 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಅಭಿಮಾನಿಗಳಿಗೆ ಈ ಹಾಡು ಮತ್ತಷ್ಟು ಕಿಕ್ ಕೊಡಲಿದೆ. ದರ್ಶನ್ ಅಭಿನಯಿಸಿರೋ ಬಹುತೇಕ ಸಿನಿಮಾದ ಟೈಟಲ್‍ಗಳನ್ನ ಹಾಡಿನಲ್ಲಿ ಬಳಸಲಾಗಿದ್ದು ಲಹರಿ ಮ್ಯೂಸಿಕ್ಸ್ ಸಂಸ್ಥೆ ಈ ಹಾಡನ್ನ ಮಾರುಕಟ್ಟೆಗೆ ತಂದಿದೆ.