Tag: challenging star

  • ಸೆಡ್ಡು ಹೊಡೆದರೆ ಗೆದ್ದೇ ತೀರುವ ಹಠದ ಒಡೆಯ!

    ಸೆಡ್ಡು ಹೊಡೆದರೆ ಗೆದ್ದೇ ತೀರುವ ಹಠದ ಒಡೆಯ!

    ದರ್ಶನ್ ಅಭಿಮಾನಿಗಳ ಪಾಲಿಗೆ ಹ್ಯಾಟ್ರಿಕ್ ಹಬ್ಬದಂತೆ ಬಿಂಬಿಸಲ್ಪಟ್ಟಿದ್ದ ಚಿತ್ರ ಒಡೆಯ. ಒಂದು ಪಕ್ಕಾ ಫ್ಯಾಮಿಲಿ ಕಂ ಮಾಸ್ ಸಬ್ಜೆಕ್ಟಿನೊಂದಿಗೆ ರೂಪುಗೊಂಡಿರೋ ಈ ಚಿತ್ರವೀಗ ಬಿಡುಗಡೆಯಾಗಿದೆ. ಸಂದೇಶ್ ಪ್ರೊಡಕ್ಷನ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ಶುರುವಾತಿನಿಂದಲೂ ಮೂಡಿಸಿದ್ದ ನಿರೀಕ್ಷೆ, ಕುತೂಹಲಗಳದ್ದೊಂದು ಚೆಂದದ ಹಾದಿ. ದರ್ಶನ್ ಯಾವುದೇ ಸಿನಿಮಾಗಳಲ್ಲಿ ಅಭಿನಯಿಸಿದರೂ ಕೂಡಾ ಇಂಥಾದ್ದೊಂದು ಕ್ರೇಜ್ ಹುಟ್ಟಿಕೊಳ್ಳೋದು ಅಪರೂಪದ ವಿದ್ಯಮಾನವೇನಲ್ಲ. ಆದರೆ, ಒಡೆಯನ ವಿಚಾರದಲ್ಲಿ ಅದರ ತೀವ್ರತೆ ತುಸು ಹೆಚ್ಚೇ ಇತ್ತು. ಅದೆಲ್ಲವೂ ತಣಿಯುವಂತೆ, ನಿರೀಕ್ಷೆಗೂ ಮೀರಿದ ಶೈಲಿಯಲ್ಲಿ ಈ ಸಿನಿಮಾವೀಗ ಪ್ರೇಕ್ಷಕರನ್ನು ಎದುರುಗೊಂಡಿದೆ.

    ಈಗಾಗಲೇ ದರ್ಶನ್ ಅವರ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದ ಎಂ.ಡಿ ಶ್ರೀಧರ್ ನಿರ್ದೇಶನ, ಈ ಹಿಂದೆಯೇ ಎರಡು ಯಶಸ್ವೀ ಚಿತ್ರಗಳನ್ನು ದರ್ಶನ್‍ರೊಂದಿಗೆ ಕೊಡಮಾಡೊರೋ ಸಂದೇಶ್ ಪ್ರೊಡಕ್ಷನ್ ಬ್ಯಾನರ್‍ನ ನಿರ್ಮಾಣ… ಇದೆಲ್ಲದರೊಂದಿಗೆ ಮತ್ತೊಂದು ಮಹಾ ಗೆಲುವು ದಕ್ಕಿಸಿಕೊಳ್ಳುವ ಆವೇಗದೊಂದಿಗೇ ಈ ಸಿನಿಮಾ ಸಾಗಿ ಬಂದಿತ್ತು. ಒಂದರೆ ಕ್ಷಣವೂ ಅತ್ತಿತ್ತ ಕದಲದಂಥಾ ಕ್ಯೂರಿಯಾಸಿಟಿ, ಸದಾ ಅಂತರ್ಗತ ಒರತೆಯಂತೆ ಫ್ಯಾಮಿಲಿ ಸೆಂಟಿಮೆಂಟಿನ ಪಸೆಯನ್ನು ಕಾಪಾಡಿಕೊಂಡು ಸಾಗುವ ಗಟ್ಟಿ ಕಥೆ ಮತ್ತು ಇದೆಲ್ಲದರ ಕೇಂದ್ರ ಬಿಂದುವಾಗಿ ಅಬ್ಬರಿಸೋ ಗಜೇಂದ್ರನ ಪಾತ್ರಗಳೆಲ್ಲವೂ ಸೇರಿ ಒಡೆಯ ಚಿತ್ರವನ್ನು ಬೇರೆಯದ್ದೇ ಮಟ್ಟಕ್ಕೇರಿಸಿ ಬಿಟ್ಟಿವೆ.

    ಇಲ್ಲಿನ ಕಥೆಯ ಕೇಂದ್ರಬಿಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರ್ವಹಿಸಿರುವ ಗಜೇಂದ್ರನ ಪಾತ್ರ. ಗಜೇಂದ್ರ ಟ್ರೇಡಿಂಗ್ ಮತ್ತು ಟ್ರಾನ್ಸ್‍ಪೋರ್ಟ್ ಕಂಪೆನಿಯ ಮಾಲೀಕ. ಹೀಗೆ ತನ್ನ ವ್ಯವಹಾರದಲ್ಲಿ ಬ್ಯುಸಿಯಾಗಿದ್ದುಕೊಂಡೇ ವ್ಯಕ್ತಿಗತವಾಗಿ ತಮ್ಮಂದಿರ ಪ್ರೀತಿಯನ್ನೇ ಜಗತ್ತೆಂದುಕೊಂಡವನು ಗಜೇಂದ್ರ. ಹಾಗಂತ ಈತನದ್ದು ತನ್ನ ವ್ಯವಹಾರ ಮತ್ತು ವೈಯಕ್ತಿಕ ಬದುಕನ್ನೇ ಜಗತ್ತಾಗಿಸಿಕೊಂಡಿರೋ ವ್ಯಕ್ತಿತ್ವಲ್ಲ. ಗಜೇಂದ್ರ ಅನ್ಯಾಯ ಕಂಡರೆ ಕೆಂಡವಾಗಿ ಆರ್ಭಟಿಸುತ್ತಾನೆ. ಪ್ರೀತಿಯ ಮುಂದೆ ಕರಗುತ್ತಲೇ ರೈತರ ಪರವಾಗಿ ನಿಂತು ಬಡಿದಾಡುತ್ತಾನೆ. ಅನ್ಯಾಯವೆಸಗುವಾತ ಎಂಥಾದ್ದೇ ರಕ್ಕಸ ಪ್ರವೃತ್ತಿ ಹೊಂದಿದವನಾಗಿದ್ದರೂ ಸೆಡ್ಡು ಹೊಡೆದು ನಿಂತು ಮಣ್ಣು ಮುಕ್ಕಿಸುತ್ತಾನೆ.

    ಇದಿಷ್ಟು ಕಥಾ ಎಳೆಯೇ ದರ್ಶನ್ ಒಡೆಯನಾಗಿ ಅದ್ಯಾವ ಪರಿಯಾಗಿ ಮಿಂಚಿದ್ದಾರೆಂಬುದನ್ನು ಸಾರಿ ಹೇಳುತ್ತದೆ. ಮುಂದಿನ ಕಥೆಯ ಎಳೆ ಹೇಳೋದಕ್ಕಿಂತ ಅದನ್ನು ಸಿನಿಮಾ ಮಂದಿರಗಳಲ್ಲಿ ನೋಡಿ ಖುಷಿ ಪಡುವುದೇ ಉತ್ತಮ. ಒಟ್ಟಾರೆಯಾಗಿ ಇಡೀ ಚಿತ್ರದಲ್ಲಿ ಮಾಸ್ ಮತ್ತು ಫ್ಯಾಮಿಲಿ ಸೆಂಟಿಮೆಂಟ್ ಕಥೆಗಳು ಒಟ್ಟೋಟ್ಟಾಗಿಯೇ ಸಾಗುತ್ತವೆ. ಅದೆಲ್ಲವೂ ಕಣ್ಮನ ತಣಿಸುವಂಥಾ ದೃಷ್ಯ ವೈಭವದ ಮೂಲಕ ಮತ್ತಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಈ ಮೂಲಕ ನಿರ್ದೇಶಕ ಎಂ.ಡಿ ಶ್ರೀಧರ್ ತಮ್ಮ ಕುಸುರಿ ಕಲೆಯ ಪಾಂಡಿತ್ಯವನ್ನು ಸಾಬೀತುಗೊಳಿಸಿದ್ದಾರೆ. ದರ್ಶನ್ ಅವರನ್ನು ಶ್ರೀಧರ್ ಇಲ್ಲಿ ಓರ್ವ ನಟನಾಗಿ ಮತ್ತೊಂದು ಮಟ್ಟಕ್ಕೇರುವಂತೆಯೇ ದೃಶ್ಯ ಕಟ್ಟಿದ್ದಾರೆ. ದರ್ಶನ್ ಗಜೇಂದ್ರನಾಗಿ ಅಬ್ಬರಿಸಿದ ರೀತಿಯ ಬಗೆಗಂತೂ ಯಾವ ವಿವರಣಗಳ ಅಗತ್ಯವೂ ಇಲ್ಲ.

    ಹೀಗೆ ದರ್ಶನ್ ಅವರೊಂದಿಗೆ ಸಲೀಸಾಗಿ ಎಣಿಸಲೂ ಕಷ್ಟವಾಗುವಷ್ಟು ದೊಡ್ಡ ತಾರಾಗಣ ಸಾಥ್ ನೀಡಿದೆ. ಆ ಇಡೀ ತಾರಾಗಣವನ್ನು ಇಲ್ಲಿನ ದೃಷ್ಯಗಳಿಗೆ ಬೇಕಾದಂತೆ ದುಡಿಸಿಕೊಳ್ಳಲಾಗಿದೆ. ಇಲ್ಲಿ ಪ್ರತಿ ಪಾತ್ರಗಳೂ ಮನಸಲ್ಲಿ ನೆಲೆ ನಿಲ್ಲುತ್ತವೆ. ರವಿಶಂಕರ್, ಶರತ್ ಲೋಹಿತಾಶ್ವ ಎಂದಿನಂತೆಯೇ ವಿಲ್ಲನ್ನುಗಳಾಗಿ ಅಬ್ಬರಿಸಿದ್ದಾರೆ. ಸಾಮಾನ್ಯವಾಗಿ ಅಬ್ಬರದ ಪಾತ್ರಗಳಲ್ಲಿ ಕಾಣಿಸಿಕೊಳ್ಳೋ ದೇವರಾಜ್ ಇಲ್ಲಿ ಮತ್ತಷ್ಟು ಭಿನ್ನವಾದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಒಟ್ಟಾರೆಯಾಗಿ ಒಡೆಯ ಎಲ್ಲ ವರ್ಗದ ಪ್ರೇಕ್ಷಕರೂ ಕೂತು ನೋಡಿ ಮನತಣಿಸಿಕೊಳ್ಳುವಂಥಾ ಸ್ವರೂಪದಲ್ಲಿಯೇ ಮೂಡಿ ಬಂದಿದೆ.

    ರೇಟಿಂಗ್: 4 / 5

  • ಸಂಬಂಧಗಳಿಗೆ ಬೆಲೆ ಕೊಡುವ ಒಡೆಯನ ಆಕ್ಷನ್ ಅಚ್ಚರಿ!

    ಸಂಬಂಧಗಳಿಗೆ ಬೆಲೆ ಕೊಡುವ ಒಡೆಯನ ಆಕ್ಷನ್ ಅಚ್ಚರಿ!

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಚಿತ್ರ ಪರಿಪೂರ್ಣವಾದ ಕೌಟುಂಬಿಕ ಕಥಾ ಹಂದರ ಹೊಂದಿರೋ ಚಿತ್ರವೆಂಬ ವಿಚಾರ ಈಗಾಗಲೇ ಜಾಹೀರಾಗಿದೆ. ಟ್ರೇಲರ್, ಟೀಸರ್ ಮತ್ತು ಹಾಡುಗಳ ಮೂಲಕ ಒಡೆಯನ ಅದ್ದೂರಿತನದ ಮಜಲುಗಳು ಸಹ ಅನಾವರಣಗೊಂಡಿವೆ. ಸಂದೇಶ್ ನಾಗರಾಜ್ ಅರ್ಪಿಸಿ, ಎನ್ ಸಂದೇಶ್ ಅವರು ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರಿನಲ್ಲಿ ನಿರ್ಮಾಣ ಮಾಡಿರುವ ಚಿತ್ರವಿದು. ಇದರಲ್ಲಿ ದರ್ಶನ್ ತುಂಬಿದ ಮನೆಯ ಒಡೆಯನಾಗಿ, ಬಂಧಗಳಿಗೆ ಬೆಲೆ ಕೊಡುವ ನಾಯಕನಾಗಿ ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಭರ್ಜರಿ ಆಕ್ಷನ್ ಸನ್ನಿವೇಶಗಳೂ ಈ ಸಿನಿಮಾದಲ್ಲಿ ಹೇರಳವಾಗಿದೆ. ಅದುವೇ ಈ ಚಿತ್ರದ ಪ್ರಧಾನ ಆಕರ್ಷಣೆ ಅನ್ನೋದು ಚಿತ್ರತಂಡದ ಭರವಸೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿಜ ಜೀವನದಲ್ಲಿಯೂ ಸ್ನೇಹಕ್ಕೆ, ಪ್ರೀತಿಗೆ ತುಂಬಾನೇ ಬೆಲೆ ಕೊಡುವಂಥಾ ವ್ಯಕ್ತಿತ್ವ ಹೊಂದಿರುವವರು. ಅವರನ್ನು ಫ್ಯಾಮಿಲಿ ಸಬ್ಜೆಕ್ಟಿನ ಚಿತ್ರಗಳಲ್ಲಿಯೇ ಕಾಣ ಬಯಸುವ ದೊಡ್ಡ ಪ್ರೇಕ್ಷಕ ವರ್ಗವೇ ಕನ್ನಡದಲ್ಲಿದೆ. ಆಗಾಗ ಆ ವರ್ಗದ ಪ್ರೇಕ್ಷಕರನ್ನು ತಣಿಸುವಂಥಾ ಸಿನಿಮಾಗಳಲ್ಲಿ ದರ್ಶನ್ ನಟಿಸುತ್ತಾರೆ. ಆದರೆ ಒಡೆಯ ಪೂರ್ತಿಯಾಗಿ ಫ್ಯಾಮಿಲಿ ಪ್ಯಾಕೇಜಿನಂಥಾ ಚಿತ್ರ. ತನ್ನನ್ನು ನಂಬಿದವರಿಗಾಗಿ ಏನು ಮಾಡಲೂ ಸಿದ್ಧವಿರುವ ಈ ಒಡೆಯ, ಎದುರಾಳಿಗಳು ಯಾರೇ ಇದ್ದರೂ ಎದೆ ಅದುರಿಸುವಂತೆ ಅಬ್ಬರಿಸಲೂ ಹಿಂದೆ ಮುಂದೆ ನೋಡುವವನಲ್ಲ. ಒಡೆಯ ಗಜೇಂದ್ರನ ಈ ಗುಣವೇ ಸದರಿ ಸಿನಿಮಾವನ್ನು ಪಕ್ಕಾ ಆಕ್ಷನ್ ಚಿತ್ರವಾಗಿಯೂ ಗಮನ ಸೆಳೆಯುವಂತೆ ಮಾಡಿದೆ.

    ದರ್ಶನ್ ಅಭಿಮಾನಿಗಳು ಸದಾ ಅವರನ್ನು ಆಕ್ಷನ್ ಪಾತ್ರಗಳಲ್ಲಿಯೇ ನೋಡಲು ಬಯಸುತ್ತಾರೆ. ಅಂಥವರೆಲ್ಲರನ್ನೂ ತಣಿಸುವಂಥಾ ಹೈ ವೋಲ್ಟೇಜ್ ಸಾಹಸ ಸನ್ನಿವೇಶಗಳು ಈ ಚಿತ್ರದಲ್ಲಿವೆ. ಅದರ ಝಲಕ್‍ಗಳು ಈಗಾಗಲೇ ಟ್ರೇಲರ್, ಟೀಸರ್‍ಗಳಲ್ಲಿ ಕಾಣಿಸಿವೆ. ಒಟ್ಟಾರೆಯಾಗಿ ಒಡೆಯನನ್ನು ನಿರ್ದೇಶಕ ಎಂ ಡಿ ಶ್ರೀಧರ್ ಇಲ್ಲಿನ ನೇಟಿವಿಟಿಗೆ ಒಗ್ಗಿಸಿಕೊಂಡು ರೂಪಿಸಿದ್ದಾರೆ. ಈ ಹಿಂದೆ ದರ್ಶನ್ ಅವರ ಫಸ್ಟ್ ಲುಕ್ ಅಭಿಮಾನಿಗಳು ಹುಚ್ಚೇಳುವಂತೆ ಮಾಡಿತ್ತು. ಅದನ್ನೇ ಮೀರಿಸುವಂಥಾ ಚೆಂದದ ಲುಕ್ಕುಗಳಲ್ಲಿ ದರ್ಶನ್ ಇಲ್ಲಿ ಒಡೆಯನಾಗಿ ಕಂಗೊಳಿಸಿದ್ದಾರೆ. ಇದೆಲ್ಲವೂ ಈ ವಾರವೇ ಪ್ರೇಕ್ಷಕರೆಲ್ಲರ ಮುಂದೆ ಅನಾವರಣಗೊಳ್ಳಲಿವೆ.

  • ಕೊಡಗಿನ ಕುವರಿ ಸನಾ ತಿಮ್ಮಯ್ಯ ಪ್ರಕಾರ ಒಡೆಯ ಅಂದರೆ

    ಕೊಡಗಿನ ಕುವರಿ ಸನಾ ತಿಮ್ಮಯ್ಯ ಪ್ರಕಾರ ಒಡೆಯ ಅಂದರೆ

    ಸಂದೇಶ್ ನಾಗರಾಜ್ ಅರ್ಪಿಸಿ, ಎನ್ ಸಂದೇಶ್ ನಿರ್ಮಾಣ ಮಾಡಿರುವ ಒಡೆಯ ಚಿತ್ರ ಈ ವಾರ ತೆರೆಗಾಣುತ್ತಿದೆ. ಈ ಮೂಲಕ ಅದೆಷ್ಟೋ ಕಾಲದಿಂದ ಅಭಿಮಾನಿಗಳಲ್ಲಿ ನಿಗಿನಿಗಿಸುತ್ತಿದ್ದ ಕಾತರ, ನಿರೀಕ್ಷೆಗಳೆಲ್ಲವೂ ಸಾಕಾರಗೊಳ್ಳುವ ಕ್ಷಣಗಳಿಗೆ ಕೌಂಟ್ ಡೌನ್ ಶುರುವಾಗಿದೆ. ಈ ಸಿನಿಮಾ ಆರಂಭವಾದ ಕ್ಷಣದಿಂದಲೇ ಇದರ ನಾಯಕಿ ಯಾರಾಗುತ್ತಾರೆಂಬ ಕುತೂಹಲ ಹುಟ್ಟಿಕೊಂಡಿತ್ತು. ಈ ಸಾಲಿನಲ್ಲಿ ಒಂದಷ್ಟು ಲೀಡ್ ನಟಿಯರ ಹೆಸರುಗಳೂ ತೇಲಿ ಹೋಗಿದ್ದವು. ಆದರೆ ಕಡೆಯೂ ಒಡೆಯನ ಒಡತಿಯಾಗಿ ನಿಕ್ಕಿಯಾಗಿದ್ದು ಕೊಡಗಿನ ಕುವರಿ ರಾಘವಿ ತಿಮ್ಮಯ್ಯ. ಮೊದಲ ಹೆಜ್ಜೆಯಲ್ಲಿಯೇ ಎಲ್ಲರೂ ಹುಬ್ಬೇರಿಸುವಂಥಾ ಅವಕಾಶ ಗಿಟ್ಟಿಸಿಕೊಂಡಿದ್ದ ರಾಘವಿಯ ಲಕ್ಕು ಈ ಸಿನಿಮಾ ಮೂಲಕವೇ ಬದಲಾಗೋ ಲಕ್ಷಣಗಳಿವೆ. ಈ ಕಾರಣದಿಂದಲೇ ಅವರು ಹೆಸರು ಬದಲಾವಣೆ ಮಾಡಿಕೊಂಡು ಇದೀಗ ಸನಾ ತಿಮ್ಮಯ್ಯ ಆಗಿ ಅವತರಿಸಿದ್ದಾರೆ.

    ಚಾಲೆಂಜಿಂಗ್ ಸ್ಟಾರ್‌ಗೆ ನಾಯಕಿಯಾಗಬೇಕೆಂಬ ಆಸೆ ಮತ್ತು ಪೈಪೋಟಿ ಲೀಡ್ ನಟಿಯರ ವಲಯದಲ್ಲಿಯೇ ಇರುತ್ತದೆ. ಹಾಗಿರುವಾಗ ಹೊಸಾ ಹುಡುಗಿ ಸನಾ ಅವಕಾಶವನ್ನು ತನ್ನದಾಗಿಸಿಕೊಂಡಾಗ ಸಹಜವಾಗಿಯೇ ಎಲ್ಲರೂ ಹೆಬ್ಬೇರಿಸಿದ್ದರು. ಆದರೆ ಇಲ್ಲಿರೋ ತನ್ನ ಸವಾಲಿನಂಥಾ ಪಾತ್ರವನ್ನು ಸನಾ ಎಲ್ಲರೂ ಮೆಚ್ಚಿಕೊಳ್ಳುವಂತೆಯೇ ನಿಭಾಯಿಸಿದ್ದಾರಂತೆ. ಅದು ಸಾಧ್ಯವಾದದ್ದು ದರ್ಶನ್ ಹಾಗೂ ಇಡೀ ಚಿತ್ರತಂಡದ ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದಲೇ ಅನ್ನೋದು ಸನಾ ಅಭಿಪ್ರಾಯ. ಈ ನಿಟ್ಟಿನಲ್ಲಿ ಒಡೆಯ ಅಂದರೆ ಅವರ ಪಾಲಿಗೆ ಮಾರ್ಗದರ್ಶಕ ಮತ್ತು ಆತ್ಮಬಂಧು. ತನಗೆ ಇಂಥಾದ್ದೊಂದು ಅವಕಾಶ ಕೊಟ್ಟಿರೋ ಸಂದೇಶ್ ಪ್ರೊಡಕ್ಷನ್ಸ್ ಬಗ್ಗೆಯೂ ಸನಾಗೆ ಅಪಾರವಾದ ಗೌರವಾಧರಗಳಿವೆ.

    ಸನಾಗೆ ಆರಂಭಿಕ ಹೆಜ್ಜೆಯಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗಿ ನಟಿಸೋ ಅವಕಾಶ ಕೂಡಿ ಬಂದಿರೋದರ ಬಗ್ಗೆ ಖುಷಿಯಿದೆ. ಸವಾಲಿನಂಥಾ ನಾಯಕಿಯ ಪಾತ್ರವನ್ನೂ ಸಮರ್ಥವಾಗಿ ನಿರ್ವಹಿಸಿರೋದರ ಬಗ್ಗೆ ಹೆಮ್ಮೆಯೂ ಇದೆ. ಇದರ ಜೊತೆ ಜೊತೆಗೇ ಒಡೆಯ ಕನ್ನಡಿಗರೆಲ್ಲರ ಪ್ರೀತಿ ಸಂಪಾದಿಸುವಂಥಾ ಹೆಮ್ಮೆಯ ಚಿತ್ರವಾಗಿ ಮೂಡಿ ಬಂದಿದೆಯೆಂಬ ಭರವಸೆ, ಅದು ದೊಡ್ಡ ಮಟ್ಟದಲ್ಲಿಯೇ ಗೆಲುವು ಕಾಣಲಿದೆ ಎಂಬ ನಂಬಿಕೆ ಸನಾರದ್ದು. ಇದೆಲ್ಲ ಏನೇ ಇದ್ದರೂ ಚೊಚ್ಚಲ ಚಿತ್ರದಲ್ಲಿಯೇ ದರ್ಶನ್ ನಾಯಕಿಯಾದ ಸನಾ ಅದೃಷ್ಟ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತೆ. ಸಿನಿಮಾ ಬಿಡುಗಡೆಯಾದ ನಂತರ ಸನಾ ನಟನೆಯನ್ನು ನೋಡಿಯೂ ಅದೇ ಅಚ್ಚರಿ ಮತ್ತೆ ಮಿರುಗುವಂತಾಗೋದರಲ್ಲಿ ಯಾವ ಸಂದೇಹವೂ ಇಲ್ಲ.

  • 11 ದುಬಾರಿ ಕಾರುಗಳಿಗೆ ಆಯುಧ ಪೂಜೆ ಸಲ್ಲಿಸಿದ ದಚ್ಚು

    11 ದುಬಾರಿ ಕಾರುಗಳಿಗೆ ಆಯುಧ ಪೂಜೆ ಸಲ್ಲಿಸಿದ ದಚ್ಚು

    – ಪುಟ್ಟ ಪೋರಿಯೊಂದಿಗೆ ಡಿಬಾಸ್ ಡ್ಯಾನ್ಸ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ದುಬಾರಿ ಕಾರುಗಳ ಒಡೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದು ದಿನ ತಡವಾಗಿ ಆಯುಧ ಪೂಜೆಯನ್ನು ಆಚರಿಸಿದ್ದಾರೆ. ಆರ್.ಆರ್. ನಗರದಲ್ಲಿರುವ ತೂಗುದೀಪ್ ಮನೆಯ ಮುಂದೆ ಕಾರುಗಳ ಪೂಜೆ ಮಾಡುವ ಮೂಲಕ ಅದ್ಧೂರಿ ಆಯುಧ ಪೂಜೆಯನ್ನು ನೆರವೇರಿಸಿದ್ದಾರೆ.

    ಒಂದು ದಿನತಡವಾದ್ರು ಲೆಟೇಸ್ಟಾಗಿ ಆಯುಧ ಪೂಜೆ ಮಾಡಿರುವ ದಾಸನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನವರಾತ್ರಿಯ ಆಯುಧ ಪೂಜೆಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಯಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ.

    ದರ್ಶನ್ ಬಿಎಂಡಬ್ಲು, ರೇಂಜ್ ರೋವರ್, ಜಾಗ್ವರ್, ಫಾಚ್ರ್ಯೂನರ್ ಕಾರುಗಳಿವೆ. ಅಷ್ಟೇ ಅಲ್ಲದೆ ಲ್ಯಾಂಬೋರ್ಗಿನಿನ ನ್ಯೂ ಎಡಿಷನ್, ಫೋರ್ಡ್ ಮಸ್ಟಂಗ್ ಸ್ಪೋಟ್ರ್ಸ್ ಕಾರ್ ಗಳನ್ನು ದಚ್ಚು ಹೊಂದಿದ್ದಾರೆ.

    ಕೀನ್ಯಾ ಪ್ರವಾಸ ಮುಗಿಸಿದ ಬಳಿಕ ದರ್ಶನ್ ರಾಬರ್ಟ್ ಚಿತ್ರದ ಶೂಟಿಂಗ್‍ಗಾಗಿ ಲಕ್ನೌಗೆ ತೆರಳಿದ್ದರು. ಮೊನ್ನೆಯಷ್ಟೇ ಬೆಂಗಳೂರಿಗೆ ವಾಪಸ್ಸಾಗಿದ್ದ ದಾಸ ಬಿಡುವಿಲ್ಲದಂತೆ ಶೂಟಿಂಗ್‍ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಯಾವುದೇ ಕಾರ್ ಖರೀದಿಸಿದರು ಮೊದಲು ಚಾಮುಂಡೇಶ್ವರಿ ಪಾದಕ್ಕೆರಗಿ ಪೂಜೆ ಮಾಡಿಸಿ ಬರುತ್ತಾರೆ. ಇದೀಗ ಚಾಮುಂಡೇಶ್ವರಿ ಅಂಬಾರಿ ಮೆರವಣಿಗೆಯ ಉತ್ಸವದ ದಿನ ಆಯುಧ ಪೂಜೆ ಮಾಡಿ ಸಂಭ್ರಮಿಸಿದ್ದಾರೆ.

    ಜೊತೆಗೆ ಇತ್ತೀಚೆಗೆ ರಿಲ್ಯಾಕ್ಸ್ ಮೂಡಿನಲ್ಲಿದ್ದಾಗ ದರ್ಶನ್ ತಮ್ಮದೇ ಅಭಿನಯದ ಚಕ್ರವರ್ತಿ ಸಿನಿಮಾದ ಒಂದು ಮಳೆ ಬಿಲ್ಲು ಒಂದು ಮಳೆ ಮೋಡ ಹಾಡಿಗೆ ಮಸ್ತಾಗೆ ಹೆಜ್ಜೆಹಾಕಿದ್ದಾರೆ. ಅದು ಪುಟಾಣಿ ಮಗುವಿನ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ದರ್ಶನ್ ಜೊತೆಗೆ ಸೃಜನ್ ಲೋಕೇಶ್ ಕೂಡ ಸಾಥ್ ನೀಡಿದ್ದಾರೆ. ಒಂದು ಕಡೆ ಚಾಲೆಂಜಿಂಗ್ ಸ್ಟಾರ್ ಕಾಸ್ಟ್ ಲೀ ಕಾರುಗಳನ್ನು ಒಟ್ಟಾಗಿ ಕಣ್ತುಂಬಿಕೊಳ್ಳುತ್ತಿರುವ ಅಭಿಮಾನಿಗಳು ಥ್ರಿಲ್ಲಾಗಿದ್ದು, ದಚ್ಚು ಸ್ಟೆಪ್ ನೋಡಿ ಫೀದಾ ಆಗುತ್ತಿದ್ದಾರೆ. ಲೈಕ್ಸ್ ಮೇಲೆ ಲೈಕ್ಸ್ ಕೊಡುತ್ತಿದ್ದಾರೆ.

  • ಟಕ್ಕರ್ ಆಡಿಯೋ ಬಿಡುಗಡೆ ಮಾಡಿದ ದರ್ಶನ್

    ಟಕ್ಕರ್ ಆಡಿಯೋ ಬಿಡುಗಡೆ ಮಾಡಿದ ದರ್ಶನ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುಟುಂಬದ ಹುಡುಗ ಮನೋಜ್ ಕುಮಾರ್ ನಾಯಕನಾಗಿ ನಟಿಸಿರುವ ಟಕ್ಕರ್ ಚಿತ್ರದ ಟೀಸರ್ ಹಾಗೂ ಆಡಿಯೋ ಬಿಡುಗಡೆ ಸಮಾರಂಭ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು.

    ನಟ ದರ್ಶನ್ ಮುಖ್ಯ ಅತಿಥಿಯಾಗಿ ಆಗಮಿಸಿ ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ, ಮನೋಜ್ ಬೇರೆ ಯಾರೂ ಅಲ್ಲ. ನನ್ನ ಅಕ್ಕನ ಮಗ. ನಮ್ಮ ದೊಡ್ಡಪ್ಪನ ಮೊಮ್ಮಗ. ನನ್ನ ಜೊತೆ ಅಂಬರೀಶ ಹಾಗೂ ಚಕ್ರವರ್ತಿ ಚಿತ್ರಗಳಲ್ಲಿ ಆ್ಯಕ್ಟ್ ಮಾಡಿದ್ದಾನೆ. ಸಿನಿಮಾರಂಗದಲ್ಲಿ ಸಾಕಷ್ಟು ಕಷ್ಟ ಪಟ್ಟಿದ್ದಾನೆ. ಈ ಸಿನಿಮಾದಲ್ಲಿ ಒಳ್ಳೇ ಕಂಟೆಂಟ್ ಇದೆ. ಟೀಸರ್‍ನಲ್ಲಿ ಎಲ್ಲರ ಶ್ರಮ ಎದ್ದು ಕಾಣುತ್ತಿದೆ. ಈ ಚಿತ್ರದ ನಿರ್ಮಾಪಕರಾದ ನಾಗೇಶ್ ಅವರು ಸಾಕಷ್ಟು ಸಿನಿಮಾಗಳ ಬಗ್ಗೆ ಅಪಾರವಾದ ಪ್ರೀತಿ ಹೊಂದಿದ್ದಾರೆ. ಕೊರಿಯೋಗ್ರಾಫರ್ ಮೋಹನ್ ಕಸದಲ್ಲೂ ರಸ ತೆಗೆಯೋ ವ್ಯಕ್ತಿ. ಮಲೇಶಿಯಾದಲ್ಲಿ ಶೂಟ್ ಮಾಡಿರುವ ಡ್ಯೂಯೆಟ್ ಸಾಂಗನ್ನು ಬರೀ ಎರಡು ದಿನಗಳಲ್ಲಿ ಎಷ್ಟು ಅದ್ಭುತವಾಗಿ ಮಾಡಿಕೊಟ್ಟಿದ್ದಾನೆ. ಮನೋಜ್ ಕೂಡಾ ಸ್ಕ್ರೀನ್ ಮೇಲೆ ತುಂಬಾ ಚೆನ್ನಾಗಿ ಕಾಣುತ್ತಿದ್ದಾನೆ” ಎಂದರು.

    ಕೆ.ಎನ್.ನಾಗೇಶ್ ಕೋಗಿಲು ಅವರ ನಿರ್ಮಾಣದ ಈ ಚಿತ್ರಕ್ಕೆ ವಿ.ರಘುಶಾಸ್ತ್ರಿ ಆಕ್ಷನ್ ಕಟ್ ಹೇಳಿದ್ದಾರೆ. ಮನೋಜ್‍ಗೆ ನಾಯಕಿಯಾಗಿ ಪುಟ್ಟಗೌರಿ ಮದುವೆ ಖ್ಯಾತಿಯ ರಂಜನಿ ರಾಘವನ್ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ರಘುಶಾಸ್ತ್ರಿ ಮಾತನಾಡಿ, ‘ರನ್ ಆಂಟನಿ’ ನಂತರ ನಾನು ರೆಡಿ ಮಾಡಿಕೊಂಡಿದ್ದ ಕಥೆಯಿದು. ಚಿತ್ರಕ್ಕೆ 65 ದಿನಗಳ ಕಾಲ ಮೈಸೂರು, ಬೆಂಗಳೂರು ಮತ್ತು ಮಲೇಶಿಯಾದಲ್ಲಿ ಮೂರು ಷೆಡ್ಯೂಲ್‍ನಲ್ಲಿ ಚಿತ್ರೀಕರಿಸಿದ್ದೇವೆ. ನಮ್ಮ ಮನೆಯ ಹೆಣ್ಣುಮಕ್ಕಳು ನಮ್ಮ ಮನೆಯಲ್ಲೇ ಸೇಫ್ ಆಗಿಲ್ಲ ಎನ್ನುವುದೇ ಈ ಸಿನಿಮಾದ ಕಾನ್ಸೆಪ್ಟ್. ಸೈಬರ್ ಕ್ರೈಂ ಹಿನ್ನೆಲೆಯಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ. ಚಿತ್ರದಲ್ಲಿ ಕದ್ರಿ ಮಣಿಕಾಂತ್ ಅವರು ಚಿತ್ರಕ್ಕೆ ಪಕ್ಕಾ ಮಾಸ್ ಮತ್ತು ಮೆಲೋಡಿ ಟ್ಯೂನ್ ಕೊಟ್ಟಿದ್ದಾರೆ. ವಿಲನ್ ಆಗಿ ಭಜರಂಗಿ ಖ್ಯಾತಿಯ ಸೌರವ್ ಲೋಕಿ ಕಾಣಿಸಿಕೊಂಡಿದ್ದಾರೆ. 30 ನಿಮಿಷಗಳ ಗ್ರಾಫಿಕ್ಸ್ ಕೂಡ ಇದರಲ್ಲಿದೆ. ಟಕ್ಕರ್ ಎಂದರೆ ಪಾಸಿಟಿವ್ ಹಾಗೂ ನೆಗಟಿವ್ ಎರಡೂ ಅರ್ಥವಿದ್ದು ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಸಂಘರ್ಷಣೆ ಈ ಚಿತ್ರದಲ್ಲಿದೆ. ಲವ್ ಸ್ಟೋರಿ ಜೊತೆಗೆ ಆಕ್ಷನ್ ಪ್ಯಾಕ್ ಇರುವ ಚಿತ್ರ ಎಂದರು.

    ನಿರ್ಮಾಪಕ ನಾಗೇಶ್ ಕೋಗಿಲು ಮಾತನಾಡಿ, ಹುಲಿರಾಯ ನಂತರ ನಮ್ಮ ಬ್ಯಾನರ್‍ನ ಎರಡನೇ ಚಿತ್ರ. ಸೋಷಿಯಲ್ ಮೀಡಿಯಾಗಳಿಂದಾಗುವ ಅವಘಡಗಳ ಬಗ್ಗೆ ಚಿತ್ರದಲ್ಲಿ ಹೇಳಿದ್ದೇವೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ವಿ. ನಾಗೇಂದ್ರ ಪ್ರಸಾದ್ ಹಾಗೂ ರಘುಶಾಸ್ತ್ರಿ ಸಾಹಿತ್ಯ ಬರೆದಿದ್ದಾರೆ ಎಂದು ಹೇಳಿದರು.

    ನಾಯಕ ಮನೋಜ್‍ಕುಮಾರ್ ಮಾತನಾಡಿ, ಇದೊಂದು ನಾರ್ಮಲ್ ಕಥೆ. ಸೈಬರ್ ಕ್ರೈಮ್ ವಿಷಯ ಇಟ್ಟುಕೊಂಡು ನಿರ್ದೇಶಕರು ಕಥೆ ಮಾಡಿದ್ದಾರೆ. ಕಮರ್ಷಿಯಲ್ ಆಗಿ ಚಿತ್ರವನ್ನು ಹೇಳಬೇಕೆಂದು ಐದು ಫೈಟ್ಸ್ ಇಟ್ಟಿದ್ದೇವೆ. ಈ ಚಿತ್ರಕ್ಕೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬೆನ್ನೆಲುಬಾಗಿ ನಿಂತಿದ್ದಾರೆ. ಪ್ರತೀ ಹಂತದಲ್ಲೂ ದರ್ಶನ್ ಮತ್ತು ದಿನಕರ್ ಅವರು ನೀಡುತ್ತಾ ಬಂದಿರುವ ಮಾರ್ಗದರ್ಶನಕ್ಕೆ ಟಕ್ಕರ್ ತಂಡ ಅಭಾರಿಯಾಗಿದೆ ಎಂದರು.

    ನಾಯಕಿ ರಂಜನಿ ರಾಘವನ್ ಮಾತನಾಡಿ ಇದು ನನ್ನ ಎರಡನೇ ಚಿತ್ರ, ಎಂಬಿಬಿಎಸ್ ಓದುತ್ತಿರುವ ಮೆಡಿಕಲ್ ಸ್ಟೂಡೆಂಟ್ ಆಗಿ ನಾನು ಕಾಣಿಸಿಕೊಂಡಿದ್ದೇನೆ. ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ ಖುಷಿ ಇದೆ ಎಂದರು. ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಮಾತನಾಡಿ ನಾನು ಕಮರ್ಷಿಯಲ್ ಸಿನಿಮಾ ಮಾಡಬೇಕೆಂದು ಕಾಯುತ್ತಿದ್ದಾಗ ರಘು ಈ ಸಿನಿಮಾ ಮ್ಯೂಸಿಕ್ ಮಾಡಲು ಕರೆದರು. ರಘು ಜೊತೆ ಇದು ಎರಡನೇ ಸಿನಿಮಾ. ಹೀರೋ ಇಂಟ್ರಡಕ್ಷನ್ ಸಾಂಗನ್ನು ಶಶಾಂಕ್ ಶೇಷಗಿರಿ ಅದ್ಭುತವಾಗಿ ಹಾಡಿದ್ದಾರೆ. ಡ್ಯುಯೆಟ್ ಹಾಡನ್ನು ವಿಜಯಪ್ರಕಾಶ್ ಮತ್ತು ಅನುರಾಧ ಭಟ್ ಹಾಗೂ ಮೋಟಿವೇಷನಲ್ ಸಾಂಗನ್ನು ಸಂಜಿತ್ ಹೆಗ್ಡೆ ಹಾಡಿದ್ದಾರೆ ಎಂದು ಹೇಳಿಕೊಂಡರು.

    ಖಳನಾಯಕ ಭಜರಂಗಿ ಲೋಕಿ, ಸಾಹಿತಿ ವಿ.ನಾಗೇಂದ್ರ ಪ್ರಸಾದ್, ಛಾಯಾಗ್ರಾಹಕ ವಿಲಿಯಮ್ ಡೇವಿಡ್ ಅಶ್ವಥ್ ಗುರೂಜಿ, ಕೆಪಿ.ನಾಗರಾಜ್, ಅರವಿಂದ್ ಕೌಶಿಕ್, ಗಾಯಕ ಶಶಾಂಕ್ ಶೇಷಗಿರಿ ಹಾಗೂ ಇತರ ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.

  • ಎದುರಿಗೆ ಇದ್ದವ್ರು ಹೇಗಿರುತ್ತಾರೋ, ನಾನೂ ಹಾಗೇ ಇರ್ತ್ತೇನೆ: ದರ್ಶನ್ ಕೌಂಟರ್

    ಎದುರಿಗೆ ಇದ್ದವ್ರು ಹೇಗಿರುತ್ತಾರೋ, ನಾನೂ ಹಾಗೇ ಇರ್ತ್ತೇನೆ: ದರ್ಶನ್ ಕೌಂಟರ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವಿಟ್ಟರ್‌ನಲ್ಲಿ ಕೌಂಟರ್ ಕೊಟ್ಟಿದ್ದಾರೆ. ಆದರೆ ಅದು ಯಾರಿಗೆ ಎನ್ನುವುದನ್ನು ಡಿ ಬಾಸ್ ತಿಳಿಸಿಲ್ಲ.

    ದರ್ಶನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ‘ನಾನು ಐಸ್‍ಕ್ಯಾಂಡಿಯಷ್ಟು ಸಿಹಿ. ನೀರಿನಷ್ಟು ತಂಪು, ಕೆಟ್ಟತನದಲ್ಲಿ ನರಕ ತೋರಿಸುತ್ತೇನೆ. ಪ್ರಾಮಾಣಿಕತೆಯಲ್ಲಿ ಯೋಧನಷ್ಟು ನಿಷ್ಠ. ಎದುರಿಗೆ ಇದ್ದವರು ಹೇಗಿರುತ್ತಾರೊ, ನಾನೂ ಹಾಗೇ ಇರುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಡಿಬಾಸ್ ಈ ಪಂಚಿಂಗ್ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲ ಅಭಿಮಾನಿಗಳು ದರ್ಶನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲ ಸಿನಿಮಾ ಪ್ರಿಯರು ತಮ್ಮ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

    ಬಾಸ್. ಈ ಹೇಳಿಕೆ ನಿಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವಂತ್ತಿದೆ. ಆದರೆ ಅಭಿಮಾನಿಗಳು ಇದನ್ನು ಮತ್ತೊಂದು ಆಯಾಮದಲ್ಲಿ ನೋಡುವುದು ಬೇಡ ಎಂದು ನಿಶಾ ದರ್ಶ ವಿಜಿ ಎಂಬವರು ರಿಟ್ವೀಟ್ ಮಾಡಿದ್ದಾರೆ.

    https://twitter.com/Nish_Darsh_Vijz/status/1167743721628004357

  • ಮೂರು ವಾರದಾಚೆಗೂ ಅಬ್ಬರಿಸುತ್ತಾ ಮುನ್ನುಗ್ಗುತ್ತಿರೋ ಕುರುಕ್ಷೇತ್ರ!

    ಮೂರು ವಾರದಾಚೆಗೂ ಅಬ್ಬರಿಸುತ್ತಾ ಮುನ್ನುಗ್ಗುತ್ತಿರೋ ಕುರುಕ್ಷೇತ್ರ!

    ಬೆಂಗಳೂರು: ಕನ್ನಡದ ಹೆಮ್ಮೆಯ ಚಿತ್ರ ಕುರುಕ್ಷೇತ್ರ ಕನ್ನಡಿಗರೆಲ್ಲರ ಪ್ರೀತಿ ಗೆಲ್ಲುವಲ್ಲಿ ಯಶ ಕಂಡಿದೆ. ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾದಾಗ ಈ ಸಿನಿಮಾ ಬಗ್ಗೆ ಎಂಥಾ ಕ್ರೇಜ್ ಇತ್ತೋ ಅದು ಈ ಕ್ಷಣಕ್ಕೂ ನಿಗಿನಿಗಿಸುತ್ತಿದೆ. ಪ್ರಾಕೃತಿಕ ವಿಕೋಪ ಸೇರಿದಂತೆ ಎಲ್ಲ ಅಡೆತಡೆಗಳನ್ನೂ ನೀಗಿಕೊಂಡು ಕುರುಕ್ಷೇತ್ರ ಥೇಟರುಗಳಲ್ಲಿ ವಿಜಯ ಯಾತ್ರ ನಡೆಸುತ್ತಿದೆ. ಕಲೆಕ್ಷನ್ನಿನಲ್ಲಿಯೂ ಅಂಥಾದ್ದೇ ದಾಖಲೆ ಮಾಡುತ್ತಿರೋ ಕುರುಕ್ಷೇತ್ರಕ್ಕೆ ಜನ ತೋರುತ್ತಿರೋ ಪ್ರೀತಿ ಕಂಡು ನಿರ್ಮಾಪಕ ಮುನಿರತ್ನ ಸೇರಿದಂತೆ ಇಡೀ ಚಿತ್ರತಂಡವೇ ಖುಷಿಗೊಂಡಿದೆ.

    ಕುರುಕ್ಷೇತ್ರದ ಯಶದ ಯಾತ್ರೆ ಯಶಸ್ವಿಯಾಗಿಯೇ ಮೂರು ವಾರಗಳನ್ನು ದಾಟಿಕೊಂಡಿದೆ. ಈ ಚಿತ್ರ ಬಿಡುಗಡೆಯಾಗಿ ಹದಿನೇಳನೇ ದಿನವಾದ ಭಾನುವಾರವಂತೂ ಟಿಕೆಟ್‍ಗಳು ಸೋಲ್ಡ್ ಔಟ್ ಆಗಿದ್ದವು. ಅಷ್ಟಕ್ಕೂ ಬಿಗ್ ಬಜೆಟ್‍ನ ಈ ಚಿತ್ರ ಕರ್ನಾಟಕದಲ್ಲಿ ನೆರೆ ಹಾವಳಿ ಉಲ್ಬಣಿಸಿದ್ದ ಘಳಿಗೆಯಲ್ಲಿಯೇ ಬಿಡುಗಡೆಯಾಗಿತ್ತು. ಉತ್ತರ ಕರ್ನಾಟಕವೇ ಪ್ರವಾಹದಿಂದ ಕಂಗಾಲಾಗಿ, ಕರ್ನಾಟಕದ ಎಲ್ಲಾ ಕಡೆಗಳಲ್ಲಿ ಇಂಥಾದ್ದೇ ವಾತಾವರಣ ಇದ್ದುದರಿಂದ ಪರಿಸ್ಥಿತಿ ಹೇಗಾಗುತ್ತದೋ ಅನ್ನೋ ಆತಂಕವಂತೂ ಇದ್ದೇ ಇತ್ತು. ಆದರೆ ಕುರುಕ್ಷೇತ್ರ ಮನ್ನ ಹೆಮ್ಮೆಯ ಚಿತ್ರವೆಂಬ ಭಾವವೇ ದೊಡ್ಡ ಮಟ್ಟದ ಗೆಲುವಿಗೆ ಬುನಾದಿಯಾಗಿ ಬಿಟ್ಟಿದೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿರೋ ಕೌರವೇಶ್ವರನ ಪಾತ್ರವೂ ಸೇರಿದಂತೆ ಬಹುತೇಕ ಪಾತ್ರಗಳು ಕಮಾಲ್ ಮಾಡಿವೆ. ಇದು ದರ್ಶನ್ ಅವರ ಐವತ್ತನೇ ಚಿತ್ರ. ಈ ಮಹತ್ವದ ಘಟ್ಟ ಕೂಡಾ ಮಹಾ ಗೆಲುವೊಂದರ ಮೂಲಕವೇ ಸಮೃದ್ಧವಾಗಿದೆ. ದರ್ಶನ್ ಅಂದರೇನೇ ಬಾಕ್ಸಾಫೀಸ್ ಸುಲ್ತಾನ್ ಎಂಬ ಬಿರುದು ಹೊಂದಿರೋ ನಟ. ಆ ಬಿರುದಿಗೆ ಮತ್ತಷ್ಟು ಗರಿ ಮೂಡಿಸುವಂಥಾ ಗೆಲುವಿನತ್ತ ಕುರುಕ್ಷೇತ್ರ ಮುನ್ನುಗ್ಗುತ್ತಿದೆ. ಯಾಕೆಂದರೆ ನೂರು ಕೋಟಿಯನ್ನು ಮೀರಿ ಕಲೆಕ್ಷನ್ನು ಮಾಡಿದ ದರ್ಶನ್ ಅಭಿನಯದ ಮೊದಲ ಚಿತ್ರವಾಗಿಯೂ ಕುರುಕ್ಷೇತ್ರ ದಾಖಲಾಗೋ ಲಕ್ಷಣಗಳಿವೆ.

  • ದಸರಾ ಹಬ್ಬಕ್ಕೆ ದರ್ಶನ ನೀಡಲಿದ್ದಾನಾ ‘ಒಡೆಯ’?

    ದಸರಾ ಹಬ್ಬಕ್ಕೆ ದರ್ಶನ ನೀಡಲಿದ್ದಾನಾ ‘ಒಡೆಯ’?

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರುಕ್ಷೇತ್ರದ ವಿಚಾರದಲ್ಲಿಯೂ ಬಾಕ್ಸಾಫೀಸ್ ಸುಲ್ತಾನ ಎಂಬ ಬಿರುದಿಗೆ ತಕ್ಕುದಾಗಿಯೇ ಅಬ್ಬರಿಸಿದ್ದಾರೆ. ಅದೇನೇ ಅಡೆತಡೆಗಳು ಬಂದರೂ ಕುರುಕ್ಷೇತ್ರದತ್ತ ಜನರ ಪ್ರೀತಿ, ಆದರಗಳು ಮಾತ್ರ ಕಡಿಮೆಯಾಗಿಲ್ಲ. ಕನ್ನಡ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಕೂಡಾ ಕುರುಕ್ಷೇತ್ರ ಮನಗೆದ್ದಿದೆ. ಕೌರವೇಂದ್ರನಾಗಿ ದರ್ಶನ್ ಎಲ್ಲರಿಗೂ ಆಪ್ತವಾಗಿದ್ದಾರೆ. ಕುರುಕ್ಷೇತ್ರದ ಬಿಸಿ ಹೀಗೆ ಮುಂದುವರೆದಿರುವಾಗಲೇ ದರ್ಶನ್ ‘ಒಡೆಯ’ನಾಗಿ ಶೀಘ್ರದಲ್ಲಿಯೇ ಅಭಿಮಾನಿಗಳ ಮುಂದೆ ಅವತರಿಸೋ ಸನ್ನಾಹದಲ್ಲಿದ್ದಾರೆ.

    ಯಜಮಾನ ಚಿತ್ರದ ಬಳಿಕ ದರ್ಶನ್ ಒಡೆಯ ಚಿತ್ರದ ಚಿತ್ರೀಕರಣವನ್ನು ವೇಗವಾಗಿ ಮುಗಿಸಿಕೊಂಡಿದ್ದರು. ಪಕ್ಕಾ ಪ್ಲ್ಯಾನಿಂಗ್‍ನೊಂದಿಗೆ ಬೇಗನೆ ಈ ಸಿನಿಮಾದ ಚಿತ್ರೀಕರಣ ಸಮಾಪ್ತಿಯಾಗಿದೆ. ಇದೀಗ ಇದರ ಅಂತಿಮ ಕೆಲಸ ಕಾರ್ಯಗಳು ನಡೆಯುತ್ತಿವೆ. ಈ ತಿಂಗಳ ಕಡೇಯ ಹೊತ್ತಿಗೆಲ್ಲ ಇದರ ಎಲ್ಲ ಕೆಲಸವೂ ಸಮಾಪ್ತಿಯಾಗುತ್ತದೆ. ಆದ್ದರಿಂದಲೇ ಮುಂದಿನ ತಿಂಗಳು ದಸರಾ ಗಿಫ್ಟ್ ಎಂಬಂತೆ ಒಡೆಯನ ದರ್ಶನ ಮಾಡಿಸಲು ಚಿತ್ರತಂಡ ತಯಾರಾಗಿರುವಂತಿದೆ.

    ಎಲ್ಲವೂ ಅಂದುಕೊಂಡಂತೆಯೇ ಆದರೆ ಒಡೆಯ ಚಿತ್ರ ಸೆಪ್ಟೆಂಬರ್ 22ರಂದು ತೆರೆಗಾಣೋ ಸಾಧ್ಯತೆಗಳಿವೆ. ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ಮೂಡಿ ಬಂದಿರೋ ಈ ಅದ್ದೂರಿ ಚಿತ್ರ ಎಚ್‍ಡಿ ಶ್ರೀಧರ್ ನಿರ್ದೇಶನದಲ್ಲಿ ಮೂಡಿ ಬಂದಿದೆ. ದರ್ಶನ್ ಖದರ್ ಅನ್ನು ಮತ್ತಷ್ಟು ಮಿರುಗಿಸುವಂಥಾ ಕಥೆ ಹೊಂದಿರೋ ಈ ಚಿತ್ರದ ಬಗ್ಗೆ ಅವರ ಅಭಿಮಾನಿಗಳು ಕೂಡಾ ಭಾರೀ ಕುತೂಹಲವಿಟ್ಟುಕೊಂಡು ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಯಶಸ್ ಮತ್ತು ಪಂಕಜ್ ದರ್ಶನ್ ಸಹೋದರರಾಗಿ ನಟಿಸಿದ್ದಾರೆ. ಬೃಹತ್ ತಾರಾಬಳಗವನ್ನು ಹೊಂದಿರೋ ಈ ಚಿತ್ರ ಮುಂದಿನ ತಿಂಗಳು ತೆರೆಗಾಣೋದು ಬಹುತೇಕ ಖಚಿತ.

  • ದರ್ಶನ್ ಕೈಯಿಂದ ಲಾಂಚ್ ಆಗಲಿದೆ ನನ್ನ ಪ್ರಕಾರ ಟ್ರೇಲರ್!

    ದರ್ಶನ್ ಕೈಯಿಂದ ಲಾಂಚ್ ಆಗಲಿದೆ ನನ್ನ ಪ್ರಕಾರ ಟ್ರೇಲರ್!

    ಬೆಂಗಳೂರು: ತಾವು ಸಾಲುಸಾಲಾಗಿ ಅದೆಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದರೂ ಹೊಸಬರ ತಂಡಗಳ ನಡೆಗಳತ್ತ ಸದಾ ಒಂದು ಕಣ್ಣಿಟ್ಟು, ಸಕಾಲಿಕವಾಗಿ ಅಂಥಾ ತಂಡಗಳಿಗೆ ಸಾಥ್ ಕೊಟ್ಟು ಪೊರೆಯುತ್ತಾ ಬಂದಿರುವವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಇದುವರೆಗೂ ಅದೆಷ್ಟೋ ಹೊಸಬರು ಅವರ ಸಹಾಯದಿಂದಲೇ ನಿರಾಳವಾಗಿದ್ದಾರೆ. ಗೆದ್ದು ದಡ ಸೇರಿದ್ದಾರೆ. ಇದೀಗ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಾ ಇದೇ ಇಪ್ಪತ್ಮೂರರಂದು ಬಿಡುಗಡೆಗೆ ರೆಡಿಯಾಗಿರೋ ನನ್ನಪ್ರಕಾರ ಚಿತ್ರಕ್ಕೂ ದರ್ಶನ್ ಸಾಥ್ ಕೊಟ್ಟಿದ್ದಾರೆ. ಈ ಚಿತ್ರದ ಟ್ರೇಲರ್ ಅನ್ನು ದರ್ಶನ್ ಬಿಡುಗಡೆಗೊಳಿಸಲಿದ್ದಾರೆ.

    ಇಂಥಾದ್ದೊಂದು ಖುಷಿಯ ಸಂಗತಿಯನ್ನು ಚಿತ್ರತಂಡವೇ ಜಾಹೀರು ಮಾಡಿದೆ. ಆ ಪ್ರಕಾರವಾಗಿ ಹೇಳೋದಾದರೆ ಇದೇ ಹದಿನೈದನೇ ತಾರೀಕು ಗುರುವಾರ ಚಾ.ಲೆಂಜಿಂಗ್ ಸ್ಟಾರ್ ದರ್ಶನ್ ನನ್ನ ಪ್ರಕಾರದ ಟ್ರೇಲರ್ ಲಾಂಚ್ ಮಾಡಲಿದ್ದಾರೆ. ಆರಂಭದಿಂದಲೂ ದರ್ಶನ್ ಅವರು ನವ ನಿರ್ದೇಶಕ ವಿನಯ್ ಅವರ ಚೊಚ್ಚಲ ಚಿತ್ರವಾದ ನನ್ನ ಪ್ರಕಾರವನ್ನು ಗಮನಿಸುತ್ತಾ ಬಂದಿದ್ದರಂತೆ. ಅದರ ಕ್ರಿಯೇಟಿವಿಟಿ, ಅದು ಹುಟ್ಟು ಹಾಕಿರೋ ಕ್ರೇಜ್ ಕಂಡು ಖುಷಿಗೊಂಡಿರೋ ದರ್ಶನ್ ಆಡಿಯೋ ಲಾಂಚ್ ಮಾಡಲು ಒಪ್ಪಿಕೊಂಡಿದ್ದಾರೆ. ಈ ಚಿತ್ರತಂಡಕ್ಕೆ ಸದಾ ಸಾಥ್ ನೀಡುವ ಭರವಸೆಯನ್ನೂ ಕೊಟ್ಟಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ಸಾಥ್ ಸಿಕ್ಕಿತೆಂದರೆ ಆನೆಬಲ ಸಿಕ್ಕಷ್ಟೇ ಚಿತ್ರತಂಡಗಳು ಸಂಭ್ರಮಿಸುತ್ತವೆ. ಅದರಲ್ಲಿಯೂ ಹೊಸ ಅಲೆಯ, ಹೊಸ ಬಗೆಯ ಚಿತ್ರವಾದ ನನ್ನಪ್ರಕಾರ ಚಿತ್ರತಂಡವೂ ಕೂಡಾ ಅಂಥಾದ್ದೇ ಸಂಭ್ರಮದಲ್ಲಿದೆ. ಪ್ರಿಯಾಮಣಿ ಮುಖ್ಯಭೂಮಿಕೆಯಲ್ಲಿ ನಟಿಸಿರೋ ಈ ಚಿತ್ರದಲ್ಲಿ ಕಿಶೋರ್, ಮಯೂರಿ ಮುಂತಾದವರೂ ನಟಿಸಿದ್ದಾರೆ. ಈಗಾಗಲೇ ಪೋಸ್ಟರ್, ಹಾಡು ಮುಂತಾದವುಗಳಿಂದ ಬಹುನಿರೀಕ್ಷಿತ ಚಿತ್ರವಾಗಿಯೂ ನನ್ನಪ್ರಕಾರ ಹೊರ ಹೊಮ್ಮಿದೆ. ಇದೇ ಇಪ್ಪತ್ಮೂರರಂದು ಬಿಡುಗಡೆಯಾಗಲಿರೋ ಈ ಚಿತ್ರಕ್ಕಾಗಿ ಪ್ರೇಕ್ಷಕರು ಕಾತರರಾಗಿದ್ದಾರೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ ಅವರೇ ಸಾಥ್ ಕೊಟ್ಟಿರೋದರಿಂದ ನನ್ನಪ್ರಕಾರದ ಗೆಲುವು ಮತ್ತಷ್ಟು ನಿಚ್ಚಳವಾಗಿದೆ.

  • ದರ್ಶನ್ ಚಾಲೆಂಜಿಂಗ್ ಸ್ಟಾರ್ ಆಗಿ 16 ವರ್ಷ

    ದರ್ಶನ್ ಚಾಲೆಂಜಿಂಗ್ ಸ್ಟಾರ್ ಆಗಿ 16 ವರ್ಷ

    ಬೆಂಗಳೂರು: ನಟ ದರ್ಶನ್ ಅವರಿಗೆ ಚಾಲೆಂಜಿಂಗ್ ಸ್ಟಾರ್ ಎಂಬ ಬಿರುದು ಸಿಕ್ಕಿ ಮೇ 23ಕ್ಕೆ 16 ವರ್ಷವಾಗಿದೆ.

    ಮೇ 23 ರಂದು ಚಾಲೆಂಜಿಂಗ್ ಸ್ಟಾರ್ ಬಿರುದು ಸಿಕ್ಕಿ 16 ವರ್ಷ ಆಗಿದಕ್ಕೆ ಹಾಗೂ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದಕ್ಕೆ ಅಭಿಮಾನಿಗಳು ದರ್ಶನ್ ಅವರ ಮನೆ ಮುಂದೆ ಜಮಾಯಿಸಿದ್ದರು.

    2003ರಲ್ಲಿ ದರ್ಶನ್ ಅವರಿಗೆ ಚಾಲೆಂಜಿಂಗ್ ಸ್ಟಾರ್ ಎಂಬ ಬಿರುದು ಸಿಕ್ಕಿದೆ. ಇದಾದ ಬಳಿಕ ತಮ್ಮ ನೆಚ್ಚಿನ ನಟ ದರ್ಶನ್ ಅವರ ಅಭಿಮಾನಿಗಳು, ‘ಡಿ-ಬಾಸ್’, ‘ಬಾಕ್ಸ್ ಆಫೀಸ್ ಸುಲ್ತಾನ್’ ಎಂಬ ಅನೇಕ ಬಿರುದುಗಳನ್ನು ಅವರ ಅಭಿಮಾನಿಗಳು ನೀಡಿದ್ದಾರೆ.

    ದರ್ಶನ್ ಅವರು 2001ರಲ್ಲಿ ‘ಮೆಜೆಸ್ಟಿಕ್’ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ನಟನಾಗಿ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ದರ್ಶನ್ ಅವರು ‘ಕರಿಯಾ’, ‘ನಮ್ಮ ಪ್ರೀತಿಯ ರಾಮು’ ಹಾಗೂ ‘ಕಲಾಸಿಪಾಳ್ಯ’ ಚಿತ್ರ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

    ದರ್ಶನ್ ಅವರು ಬಹುನಿರೀಕ್ಷಿತ 50ನೇ ಚಿತ್ರ ‘ಮುನಿರತ್ನ ಕುರುಕ್ಷೇತ್ರ’ ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರ ರಿಲೀಸ್‍ಗೆ ಸಿದ್ಧವಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ವಿಶ್ವಾದ್ಯಂತ ತೆರೆಕಾಣುತ್ತಿದೆ.