Tag: challenging star

  • ಟಾಲಿವುಡ್‍ನಲ್ಲಿ ‘ರಾಬರ್ಟ್’ ಸಿನಿಮಾಗೆ ಅಡ್ಡಿ – ಕಿಚ್ಚ ಸುದೀಪ್ ಹೇಳಿದ್ದೇನು?

    ಟಾಲಿವುಡ್‍ನಲ್ಲಿ ‘ರಾಬರ್ಟ್’ ಸಿನಿಮಾಗೆ ಅಡ್ಡಿ – ಕಿಚ್ಚ ಸುದೀಪ್ ಹೇಳಿದ್ದೇನು?

    ಬೆಂಗಳೂರು: ನನ್ನ ಸಿನಿಮಾವನ್ನು ನಾನು ಕಾಪಾಡಿಕೊಂಡು ಬಂದಿದ್ದೇನೆ, ಅವರ ಸಿನಿಮಾವನ್ನು ಕಾಪಾಡಿಕೊಳ್ಳುವಷ್ಟು ತಾಕತ್ತು ದೇವರು ಅವರಿಗೂ ಕೊಟ್ಟಿದ್ದಾನೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

    ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಕನ್ನಡಚಿತ್ರರಂಗಕ್ಕೆ ಪಾದರ್ಪಣೆ ಮಾಡಿ ಇಂದಿಗೆ 25 ವರ್ಷ ತುಂಬಿದೆ. ಈ ವೇಳೆ ಟಾಲಿವುಡ್ ನಲ್ಲಿ ನಟ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಬಿಡುಗಡೆ ಅಡ್ಡಿ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್, ನಾನು ಇನ್ನೊಬ್ಬರ ಸಿನಿಮಾವನ್ನು ನಿಭಾಯಿಸುವಷ್ಟು ದೊಡ್ಡ ಕಲಾವಿದನಲ್ಲ. ಸಲಹೆ ನೀಡುವಂತ ವ್ಯಕ್ತಿ ಕೂಡ ಅಲ್ಲ. ಒಂದು ಸಿನಿಮಾ ಮಾಡಿದ ಮೇಲೆ ಅದು ನನ್ನ ಜವಾಬ್ದಾರಿ ನನ್ನ ಸಿನಿಮಾವನ್ನು ನಾನು ಕಾಪಾಡಿಕೊಂಡು ಬಂದಿದ್ದೇನೆ. ಅವರ ಸಿನಿಮಾವನ್ನು ಕಾಪಾಡಿಕೊಳ್ಳುವಷ್ಟು ತಾಕತ್ತು ದೇವರು ಅವರಿಗೂ ಕೊಟ್ಟಿದ್ದಾನೆ. ಹಾಗಾಗಿ ನಾವು ಆ ಸಿನಿಮಾದ ಬಗ್ಗೆ ಈ ಸಂದರ್ಭದಲ್ಲಿ ಮಾತನಾಡುವುದು ತಪ್ಪಾಗಬಹುದು ಎಂದು ಹೇಳಿದ್ದಾರೆ.

    ಜನವರಿ 29ರಂದು ಟಾಲಿವುಡ್‍ನಲ್ಲಿ ರಾಬರ್ಟ್ ಚಿತ್ರ ಬಿಡುಗಡೆ ತಡೆ ಕುರಿತಂತೆ ಮಾಧ್ಯಮದವರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಮ್ಮಲ್ಲಿರುವವರು ಕನ್ನಡಾಭಿಮಾನ ಬೆಳೆಸಿಕೊಳ್ಳಿ ಎಂದು ಹೇಳುತ್ತಾರೆ, ಆದರೆ ತಮಿಳು ಹಾಗೂ ತೆಲುಗಿನವರಿಗೆ ಇರುವಷ್ಟು ಭಾಷಾಭಿಮಾನ ನಮ್ಮವರಿಗೆ ಒಂದಿಷ್ಟು ಕೂಡ ಇಲ್ಲ ಎಂಬುವುದನ್ನು ನೇರವಾಗಿ ಹೇಳುತ್ತೇನೆ ಎಂದು ಪ್ರತಿಕ್ರಿಯಿಸಿದ್ದರು. ಕನ್ನಡದವರ ಹತ್ತಿರ ಬಂದು ತಮಿಳಿನವರು ತಮಿಳಿನಲ್ಲಿ ಮಾತನಾಡಿದರೆ, ನಾವು ತಮಿಳಿನಲ್ಲಿಯೇ ಮಾತನಾಡುತ್ತೇವೆ. ತೆಲುಗಿನವರು ಬಂದು ತೆಲುಗಿನಲ್ಲಿ ಮಾತನಾಡಿಸಿದರೆ, ನಾವು ತೆಲುಗಿನಲ್ಲಿ ಮಾತನಾಡುತ್ತೇವೆ. ಆದರೆ ಅವರಲ್ಲಿ ಯಾರಾದರೂ ಕನ್ನಡದಲ್ಲಿ ಮಾತನಾಡುತ್ತಾರಾ? ಎಂದು ಮರು ಪ್ರಶ್ನೆ ಮಾಡಿದ್ದರು.

  • ಚಾಲೆಂಜಿಂಗ್ ಸ್ಟಾರ್ ಲ್ಯಾಂಬೋರ್ಗಿನಿ ಮುಂದೆ ಪೊಲೀಸರ ಫೋಟೋ ಶೂಟ್

    ಚಾಲೆಂಜಿಂಗ್ ಸ್ಟಾರ್ ಲ್ಯಾಂಬೋರ್ಗಿನಿ ಮುಂದೆ ಪೊಲೀಸರ ಫೋಟೋ ಶೂಟ್

    ದಾವಣಗೆರೆ: ಸ್ಯಾಂಡಲ್‍ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಲ್ಯಾಂಬೋರ್ಗಿನಿ ಕಾರು ಮೇಲೆ ಪೊಲೀಸರೂ ಮೋಹ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಒಬ್ಬೊಬ್ಬರೇ ಸಿಬ್ಬಂದಿ ಕಾರು ಮುಂದೆ ನಿಂತು ಫೊಟೋ ತೆಗೆಸಿಕೊಂಡಿದ್ದಾರೆ.

    ಹೌದು. ದರ್ಶನ್ ಅವರು ದಾವಣಗೆರೆಯ ಎಸ್ ಎಸ್ ಮಲ್ಲಿಕಾರ್ಜುನ ಫಾರ್ಮ್ ಗೌಸ್‍ಗೆ ಭೇಟಿ ನೀಡಿದ್ದಾರೆ. ಹಳದಿ ಬಣ್ಣದ ಲ್ಯಾಂಬೋರ್ಗೀನಿ ಕಾರಿನಲ್ಲಿ ಬಂದಿರುವ ನಟ ದಾವಣಗೆರೆಯ ಶಾಮನೂರು ಗೆಸ್ಟ್ ಹೌಸ್ ನಲ್ಲಿ ತಂಗಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್ ವುಡ್ ನಲ್ಲಿ ಫಸ್ಟ್ ಟೈಂ ಲ್ಯಾಂಬೋರ್ಗಿನಿಗೆ ಒಡೆಯರಾದ ದರ್ಶನ್: ವಿಡಿಯೋ ನೋಡಿ

    ದರ್ಶನ್ ಉಳಿದುಕೊಂಡಿರುವ ಹಿನ್ನೆಲೆಯಲ್ಲಿ ಗೆಸ್ಟ್ ಹೌಸ್ ಗೆ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದಾರೆ. ಈ ವೇಳೆ ಪೊಲೀಸರು ಲ್ಯಾಂಬೋರ್ಗೀನಿ ಕಾರು ಜೊತೆ ಫೋಟೋ ಕ್ಲಿಕ್ಕಿಸಿ ಕೊಂಡಿದ್ದಾರೆ. ಒಬ್ಬೊಬ್ಬರೇ ಸಿಬ್ಬಂದಿ ಕಾರು ಮುಂದೆ ನಿಂತು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಮತ್ತೊಂದು ಲ್ಯಾಂಬೋರ್ಗಿನಿ ಕಾರಿಗೆ ಒಡೆಯನಾದ ದರ್ಶನ್

    ಭಾನುವಾರ ಮಧ್ಯಾಹ್ನ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿಯಲ್ಲಿನ ಶಾಮನೂರ ಅವರ ತೋಟಕ್ಕೆ ದರ್ಶನ್ ಭೇಟಿ ನೀಡಿದ್ದರು. ಅಲ್ಲಿನ ಗೋ ಪಾಲನೆ ಬಗ್ಗೆ ಮಾಹಿತಿ ಸಂಗ್ರಹಿಸಿ ನಂತರ ದಾವಣಗೆರೆ ನಗರದ ಕಲ್ಲೇಶ್ವರ ರೈಸ್ ಮಿಲ್ ಬಳಿ ಕುದುರೆಗಳ ಪಾಲನೆ ಬಗ್ಗೆ ಮಾಹಿತಿ ಪಡೆದಿದ್ದರು. ಈ ವೇಳೆ ನಟ ದರ್ಶನ್‍ಗೆ ಶಾಸಕ ಶಾಮನೂರ ಶಿವಶಂಕರಪ್ಪ ಪುತ್ರ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸಾಥ್ ನೀಡಿದ್ದರು. ಸಂಜೆವರೆಗೆ ವಿವಿಧ ಫಾರ್ಮ್ ಹೌಸ್‍ಗೆ ದರ್ಶನ್ ಭೇಟಿ ನೀಡಿದ್ದು, ಮಾಹಿತಿ ಸಂಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆಯಿಂದಲೇ ಪೊಲೀಸರು ಬಂದೋಬಸ್ತ್ ನೀಡುತ್ತಿದ್ದಾರೆ.

  • ಭದ್ರಾ ಜಲಾಶಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ

    ಭದ್ರಾ ಜಲಾಶಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ

    – ಭದ್ರಾ ಅಭಯಾರಣ್ಯದಲ್ಲಿ ಇಂದು ಸಫಾರಿ

    ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಭದ್ರಾ ಜಲಾಶಯಕ್ಕೆ ಸ್ಯಾಂಡಲ್‍ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಕ್ರವಾರ ಸಂಜೆ ಭೇಟಿ ನೀಡಿ ಜಲಾಶಯ ವೀಕ್ಷಣೆ ಮಾಡಿದ್ದಾರೆ.

    ನಂತರ ಬಿಆರ್ ಪಿಯ ಜಂಗಲ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿರುವ ದರ್ಶನ್, ಎರಡು ದಿನ ಜಂಗಲ್ ರೆಸಾರ್ಟ್‍ನಲ್ಲಿ ಉಳಿಯಲಿದ್ದಾರೆ. ಇಂದು ಭದ್ರಾ ಅಭಯಾರಣ್ಯದಲ್ಲಿ ಸಫಾರಿ ನಡೆಸಿ ಫೋಟೋಗ್ರಫಿ ಮಾಡಲಿದ್ದಾರೆ.

    ಹಾಸ್ಯನಟ ಚಿಕ್ಕಣ್ಣ ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಸ್ನೇಹಿತರೊಂದಿಗೆ ದರ್ಶನ್ ಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಜಲಾಶಯ ವೀಕ್ಷಣೆ ಮಾಡಿದರು. ಇಂದು ಅಭಯಾರಣ್ಯದಲ್ಲಿ ಸಫಾರಿ ನಡೆಸಲಿದ್ದಾರೆ.

     

  • ಫಾರ್ಮ್ ಹೌಸ್‍ನಲ್ಲಿ ಕುದುರೆಗಳಿಗೆ ದಚ್ಚು ಮಾಲಿಶ್

    ಫಾರ್ಮ್ ಹೌಸ್‍ನಲ್ಲಿ ಕುದುರೆಗಳಿಗೆ ದಚ್ಚು ಮಾಲಿಶ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಜಾಲೆಂಜಿಂಗ್ ಸ್ಟಾರ್ ದರ್ಶನ್ ಇಂಡಸ್ಟ್ರಿಯಲ್ಲಿ ಓಡುವ ಕುದುರೆ ಅಂತಾನೇ ಕರೆಸಿಕೊಳ್ಳುವ ನಟ. ಸದ್ಯ ದರ್ಶನ್ ಸಿನಿಮಾ ಕೆಲಸಗಳಿಲ್ಲದೆ ಏನ್ ಮಾಡುತ್ತಿದ್ದಾರೆ ಎನ್ನುವ ಲಕ್ಷಾಂತ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ.

    ದರ್ಶನ್ ಅವರಿಗೆ ಪ್ರಾಣಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಮೈಸೂರಿನ ಟಿ ನರಸೀಪುರ ರಸ್ತೆಯಲ್ಲಿರುವ ತಮ್ಮ ತೂಗುದೀಪ ಫಾರ್ಮ್ ಹೌಸ್‍ನಲ್ಲಿ ಕುದುರೆ, ಗೋವು ಸೇರಿದಂತೆ ಪ್ರಾಣಿ, ಪಕ್ಷಿಗಳನ್ನು ಸಾಕಿದ್ದಾರೆ. ದಚ್ಚು ಆಗಾಗ ಫಾರ್ಮ್‍ಗೆ ಹೋಗಿ ಅವುಗಳೊಂದಿಗೆ ಕಾಲ ಕಳೆಯುತ್ತಾರೆ. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಹೆಚ್ಚಿನ ಸಮಯವನ್ನು ದಚ್ಚು ಅಲ್ಲಿಯೇ ಕಳೆಯುತ್ತಿದ್ದಾರೆ.

    ಕೊರೊನಾ ಲಾಕ್‍ಡೌನ್ ಹಿನ್ನೆಲೆ ಸಿನಿಮಾ ಚಿತ್ರೀಕರ ನಿಂತಿದೆ. ಕಳೆದ ಮೂರು ತಿಂಗಳಿಂದ ದರ್ಶನ್ ಆರ್.ಆರ್. ನಗರದ ಮನೆಯಲ್ಲಿಯೇ ಉಳಿದಿದ್ದರು. ಸದ್ಯ ಲಾಕ್‍ಡೌನ್ ಸಡಿಲಿಕೆ ಸಿಕ್ಕಿದ್ದರಿಂದ ಪ್ರಯಾಣಕ್ಕೆ ಅನುಕೂಲವಾಗಿದೆ. ಹೀಗಾಗಿ ಅವರು ಬೆಂಗಳೂರಿನಿಂದ ತಮ್ಮ ತೂಗುದೀಪ ಫಾರ್ಮ್ ಹೌಸ್‍ಗೆ ಭೇಟಿ ನೀಡಿ, ಪ್ರಾಣಿಗಳ ಕಾಲ ಕಳೆಯುತ್ತಿದ್ದಾರೆ.

    ಪ್ರಾಣಕ್ಕಿಂತ ಪ್ರಾಣಿಗಳನ್ನು ಹೆಚ್ಚಾಗಿ ಪ್ರೀತಿಸುವ ದಾಸ ಮೈಸೂರಿನಲ್ಲಿರು ತೂಗು ದೀಪ್ ಫಾಂ ಹೌಸ್‍ನಲ್ಲಿ ಫ್ರೆಂಡ್ಸ್ ಹಾಗೂ ಫ್ಯಾಮಿಯರ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಕುದುರೆಗೆ ಮಾಲಿಶ್ ಮಾಡುತ್ತಾ, ನೆಚ್ಚಿನ ಪ್ರಾಣಿಗಳ ಜೊತೆಗೆ ಅದ್ಭುತವಾದ ಸಮಯವನ್ನು ಕಳೆಯುತ್ತಿದ್ದಾರೆ. ದರ್ಶನ್ ಜೊತೆಗೆ ಅಕ್ಕನ ಮಗ ಸಹ ಮಾವನಿಗೆ ಸಾಥ್ ಕೊಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಡಿಬಾಸ್ ಸಿಂಪ್ಲಿಸಿಟಿ ತುಂಬಿರುವ ವಿಡಿಯೋ ಸದ್ಯ ವೈರಲ್ ಆಗಿದೆ.

    https://www.facebook.com/Dcompany171/videos/2548816882037590

  • ದರ್ಶನ್ ನಿರೀಕ್ಷೆಯಲ್ಲಿದ್ದ ಬಸವ ಸಾವು

    ದರ್ಶನ್ ನಿರೀಕ್ಷೆಯಲ್ಲಿದ್ದ ಬಸವ ಸಾವು

    ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿಯ ನಿರೀಕ್ಷೆಯಲ್ಲಿದ್ದ ಬಸವ ಇಂದು ವಿಧಿವಶವಾಗಿದೆ.

    ಮೈಸೂರು ಸಮೀಪದ ಕೆ.ಆರ್.ನಗರ ತಾಲೂಕಿನ ಕಾಳಮ್ಮನಕೊಪ್ಪಲು ಗ್ರಾಮದ ಬಸವನ ಅನಾರೋಗ್ಯದಿಂದ ನರಳುತ್ತಿತ್ತು. ಬಸವ ಬೇಗ ಚೇತರಿಸಿಕೊಳ್ಳಲಿ ಎಂದು ಗ್ರಾಮಸ್ಥರು ನಿತ್ಯ ಪೂಜೆ, ಪುನಸ್ಕಾರಗಳಲ್ಲಿ ತೊಡಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದೆ.

    ಕಾಳಮ್ಮನಕೊಪ್ಪಲು ಗ್ರಾಮಸ್ಥರಿಗೆ ಊರ ದೈವವೇ ಆಗಿದ್ದ ಬಸವ ಅನಾರೋಗ್ಯಕ್ಕೆ ತುತ್ತಾಗಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್ ಬಸವನನ್ನು ಭೇಟಿ ಮಾಡಿದ್ದರು. ಗ್ರಾಮಸ್ಥರೆಲ್ಲರೂ ದರ್ಶನ್ ಅವರು ಪುನಃ ಬಂದು ಭೇಟಿ ಮಾಡಿದರೆ ಬಸವ ಉಳಿಯುತ್ತಾನೆ ಎಂದು ದಚ್ಚು ಭೇಟಿಗೂ ಮನವಿ ಮಾಡಿದ್ದರು. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ದರ್ಶನ್ ಅವರಿಗೆ ಬಸವನನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ದರ್ಶನ್ ಅವರ ಪರವಾಗಿ ಅವರ ಸ್ನೇಹಿತರು ಬಸವನಿಗೆ ಔಷಧಿಗಳನ್ನು ತರಿಸಿ ಕೊಟ್ಟಿದ್ದರು.

    ದಚ್ಚು ಸ್ಪರ್ಶದ ಬಳಿಕ ದಾರಿ ಬಿಟ್ಟಿದ್ದ ಬಸವ:
    2019 ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರ ಪರ ದರ್ಶನ್ ಪ್ರಚಾರ ನಡೆಸಿದ್ದರು. ಈ ವೇಳೆ ದಚ್ಚು ಕೆ.ಆರ್.ನಗರ ತಾಲೂಕಿನ ಕಾಳಮ್ಮನಕೊಪ್ಪಲು ಗ್ರಾಮಕ್ಕೆ ಹೋಗಿದ್ದರು. ಅಭಿಮಾನಿಗಳು ಸೇರಿದಂತೆ ಅಪಾರ ಜನಸ್ತೋಮ ಗ್ರಾಮದಲ್ಲಿ ನೆರೆದಿತ್ತು. ಆದರೆ ಪ್ರಚಾರದ ಮಾರ್ಗದಲ್ಲಿ ಬಂದ ಬಸವ ಗುಟುರು ಹಾಕಿ ಅಡ್ಡಿಯಾಗಿ ನಿಂತಿತ್ತು. ಬಸವನನ್ನು ಕಂಡ ಜನ ಬೆದರಿ ನಿಂತಿದ್ದರು.

    ಪ್ರಚಾರ ವಾಹನದಿಂದ ಕೆಳಗೆ ಇಳಿದು ಬಂದ ದರ್ಶನ್, ಪರಿಚಯವಿರದ ಬಸವ ಕಡೆಗೆ ಧಾವಿಸಿ, ಅದರ ಮೈದಡವಿ ಸಮಾಧಾನ ಮಾಡಿದ್ದರು. ದರ್ಶನ್ ನಡವಳಿಕೆಗೆ ಸ್ಪಂದಿಸಿದ ಬಸವ ಶಾಂತವಾಗಿತ್ತು. ಈ ಪ್ರಸಂಗ ಎಲ್ಲರಿಗೂ ಅಚ್ಚರಿಯನ್ನು ಉಂಟು ಮಾಡಿತ್ತು. ಅಂದಿನಿಂದ ದರ್ಶನ್ ಜೊತೆಗೆ ಬಾಂಧವ್ಯ ಬೆಸೆದುಕೊಂಡಿದ್ದ ಬಸವನ ಕಾಲಿಗೆ ಇತ್ತೀಚೆಗೆ ಪೆಟ್ಟು ಬಿದ್ದಿತ್ತು. ಗಾಯಗೊಂಡಿದ್ದ ಬಸವ ಮಲಗಿದ ಜಾಗ ಬಿಟ್ಟು ಏಳಲೇ ಇಲ್ಲ. ಚಿಕಿತ್ಸೆ ಫಲಕಾರಿಯಾಗದೆ ಬಸವ ಸಾವನ್ನಪ್ಪಿದೆ.

  • ದರ್ಶನ್ ಅಭಿಮಾನಿಗಳಿಗೆ ಗುಡ್‍ನ್ಯೂಸ್

    ದರ್ಶನ್ ಅಭಿಮಾನಿಗಳಿಗೆ ಗುಡ್‍ನ್ಯೂಸ್

    ಬೆಂಗಳೂರು: ದರ್ಶನ್ ಅಭಿಮಾನಿಗಳಿಗೆ ಗುಡ್‍ನ್ಯೂಸ್. ರಾಬರ್ಟ್ ಚಿತ್ರದ ಪೋಸ್ಟರ್ ಸೋಮವಾರ ಬೆಳಗ್ಗೆ ಬಿಡುಗಡೆಯಾಗಲಿದೆ.

    ಹೌದು, ಈ ಸಂಬಂಧ ನಿರ್ದೇಶಕ ತರುಣ್ ಸುಧೀರ್ ಟ್ವೀಟ್ ಮಾಡಿ ಮೇ 25ರ 11 ಗಂಟೆ 5 ನಿಮಿಷಕ್ಕೆ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ದರ್ಶನ್ ಅವರ ಖಾತೆಯಿಂದ ಪೋಸ್ಟರ್ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

    ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ರಾಬರ್ಟ್ ಸಿನಿಮಾ ರಿಲೀಸ್ ಆಗಿ, ಐವತ್ತು ದಿನ ಮುಗಿಸಿ, ನೂರನೇ ದಿನದತ್ತ ಭರ್ಜರಿಯಾಗಿ ಓಡುತ್ತಿರಬೇಕಿತ್ತು. ಆದರೆ ಕೊರೊನಾ ಕ್ರಿಮಿಯಿಂದ ಎಲ್ಲವೂ ಉಲ್ಟಾ ಪಲ್ಟಾ ಆಗಿದೆ. ಈ ಮೂಲಕ ವರ್ಷದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಈ ನಡುವೆಯೇ ರಾಬರ್ಟ್ ಸಿನಿಮಾವನ್ನು ಆನ್‍ಲೈನ್ ಅಲ್ಲಿ ಬಿಡುಗಡೆ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಈ ಸುದ್ದಿಯನ್ನು ಉಮಾಪತಿ ಸುಳ್ಳು ಎಂದು ಹೇಳಿದ್ದಾರೆ.

    ದರ್ಶನ್ ಫ್ಯಾನ್ಸ್ ರಾಬರ್ಟ್ ಚಿತ್ರವನ್ನು ಕೈಬಿಡಲ್ಲ ಥೀಯೇಟರ್ ಗೆ ಬಂದು ಸಿನಿಮಾ ನೋಡುತ್ತಾರೆ ಎಂದು ಹೇಳಿ ಚಿತ್ರದ ನಿರ್ದೇಶಕ ಉಮಾಪತಿ ಅವರು ಅಮೆಜಾನ್ ಕಂಪನಿ ನೀಡಿದ ಭಾರೀ ಆಫರ್ ತಿರಸ್ಕರಿಸಿದ್ದಾರೆ.

    ರಾಬರ್ಟ್ ಸಿನಿಮಾವನ್ನು ಆನ್‍ಲೈನ್‍ನಲ್ಲೇ ರಿಲೀಸ್ ಮಾಡಲು ಬೇಡಿಕೆ ಇಡಲಾಗಿತ್ತು. ಕೋಟಿ ಕೋಟಿ ಕೊಡುತ್ತೇವೆ ನಮಗೆ ರಾಬರ್ಟ್ ಕೊಡಿ ಎಂದು ಅಮೆಜಾನ್ ಫ್ರೈಮ್ ಅವರು ಬೇಡಿಕೆ ಇಟ್ಟಿದ್ದರು.

    ಈ ಬಗ್ಗೆ ಮಾತನಾಡಿದ್ದ ಚಿತ್ರದ ನಿರ್ಮಾಪಕ ಉಮಾಪತಿ ಅವರು, ಅಮೆಜಾನ್ ಚಾನೆಲ್‍ನಿಂದ ನಮ್ಮ ರಾಬರ್ಟ್ ಸಿನಿಮಾಕ್ಕೆ ಆಫರ್ ಬಂದಿದ್ದು ನಿಜ. 70 ಕೋಟಿಗೆ ಅವರು ಬೇಡಿಕೆ ಇಟ್ಟಿದ್ದೂ ಸತ್ಯ. ಆದರೆ ನಾವು ಒಪ್ಪಲಿಲ್ಲ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವವರೆಗೂ ಓಟಿಟಿ ಫ್ಲಾಟ್‍ಫಾರ್ಮ್‍ಗಳಲ್ಲಿ ರಾಬರ್ಟ್ ರಿಲೀಸ್ ಮಾಡಲ್ಲ. ತಡವಾದರೂ ಪರವಾಗಿಲ್ಲ. ಥೀಯೇಟರ್ ನಲ್ಲೇ ಬಿಡುಗಡೆ ಮಾಡುತ್ತೇವೆ ಎಂದು ರಾಜಾರೋಷವಾಗಿ ಹೇಳಿದ್ದಾರೆ.

    ಕೊರೊನಾ ಮುಗಿದ ಮೇಲೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದೇ ಬರುತ್ತಾರೆ ಎನ್ನುವ ಬಲವಾದ ನಂಬಿಕೆ ಇದೆ. ದರ್ಶನ್ ಅಭಿಮಾನಿಗಳು ಯಾವುದೇ ಕಾರಣಕ್ಕೂ ಸಿನಿಮಾ ಕೈ ಬಿಡುವುದಿಲ್ಲ. ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡುವುದಕ್ಕೆ ಮುಗಿಬೀಳುತ್ತಾರೆ. ಅಂದಹಾಗೆ ಈಗಾಗಲೇ ನಮ್ಮ ಚಿತ್ರಕ್ಕೆ ಹಾಕಿದ ಬಂಡವಾಳ ಹಲವು ಮೂಲಗಳಿಂದ ವಾಪಸ್ ಬಂದಿದೆ. ಇನ್ನು ಮುಂದೆ ಬರುವುದೆಲ್ಲವೂ ಲಾಭವೇ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ರಿಲೀಸ್‍ಗೂ ಮೊದಲೇ ದಾಖಲೆ ಲೆಕ್ಕದಲ್ಲಿ ಲಾಭದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

    ಸಿನಿಮಾ ರಿಲೀಸ್‍ಗೆ ರೆಡಿಯಾಗಿ ತಿಂಗಳುಗಳೇ ಕಳೆದಿವೆ. ಹಲವು ಬಾರಿ ರಿಲೀಸ್ ಡೇಟ್ ಕೂಡ ಹೊರಬಿದ್ದಿತ್ತು. ಅಷ್ಟರಲ್ಲಿ ಕೊರೊನಾದಿಂದ ಥೀಯೇಟರ್ ಗಳು ಬಂದ್ ಅದವು. ಇಂದು ಹಾಕಿದ ಬಂಡವಾಳಕ್ಕೆ ಹೆಚ್ಚು ಕಮ್ಮಿ ಡಬಲ್ ದುಡ್ಡು. ಜೊತೆಗೆ ಎಷ್ಟೆಷ್ಟು ಜನರು ನೋಡುತ್ತಾರೊ, ಅಷ್ಟಷ್ಟು ಹಣ ನಿರ್ಮಾಪಕರು ಮತ್ತು ಚಾನೆಲ್ ನಡುವೆ ಹಂಚಿಕೆಯಾಗುತ್ತದೆ.

  • ರಾಬರ್ಟ್ ಸಿನಿಮಾದಿಂದ ಹೊರಬಿತ್ತು ಸಿಹಿ ಸುದ್ದಿ

    ರಾಬರ್ಟ್ ಸಿನಿಮಾದಿಂದ ಹೊರಬಿತ್ತು ಸಿಹಿ ಸುದ್ದಿ

    ಬೆಂಗಳೂರು: ಬಹು ನಿರೀಕ್ಷೆಯಿಂದ ಕಾಯುತ್ತಿರುವ ರಾಬರ್ಟ್ ಸಿನಿಮಾದ ಅಡ್ಡಾದಿಂದ ನಿರ್ದೇಶಕ ತರುಣ್ ಸುಧೀರ್ ಸಿಹಿ ಸುದ್ದಿ ನೀಡಿದ್ದಾರೆ.

    ಟ್ವೀಟ್ ಮಾಡಿರುವ ನಿರ್ದೇಶಕ ತರುಣ್ ಸುಧೀರ್ ಅವರು, ರಾಬರ್ಟ್ ಸಿನಿಮಾದ ಹಾಡೊಂದು ಮಾರ್ಚ್ 3ರಂದು ಸಂಜೆ 5.01 ಕ್ಕೆ ಬಿಡುಗಡೆಯಾಗಲಿದೆ. ಈ ಹಾಡು ಡಿಬಾಸ್ ಅಭಿಮಾನಿಗಳಿಗೆ ಒಂದು ಉಡುಗೊರೆಯಾಗಿದೆ. ಹಾಡಿನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಾಳೆ ಸಂಜೆ 5 ಗಂಟೆವರೆಗೆ ಕಾಯಿರಿ. ಯಾವಾಗಲೂ ನಮ್ಮೊಂದಿಗೆ ಇರಿ ಎಂದು ಬರೆದುಕೊಂಡಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ್‍ನಲ್ಲಿ ರಾಬರ್ಟ್ ಸ್ಯಾಂಡಲ್‍ವುಡ್‍ನಲ್ಲಿ ಸದ್ದು ಮಾಡಲು ಸಿದ್ಧವಾಗುತ್ತಿದೆ. ಚಿತ್ರತಂಡವು ಈಗಾಗಲೇ ತಂಡ ಶೇ.90 ರಷ್ಟು ಚಿತ್ರೀಕರಣ ಮುಗಿಸಿದ್ದು, ಇನ್ನುಳಿದಿರುವುದು ಹಾಡಿನ ಶೂಟಿಂಗ್ ಮಾತ್ರ ಬಾಕಿ ಇದೆ.

    ದರ್ಶನ್ ಅವರ 43ನೇ ಹುಟ್ಟುಹಬ್ಬದ ಸಂಭ್ರಮದಂತೆ ರಾಬರ್ಟ್ ಚಿತ್ರ ತಂಡ ರಾಬರ್ಟ್ ಸಿನಿಮಾದ ಟೀಸರ್ ಬಿಡುಗಡೆ ಮಾಡಿತ್ತು. ಈ ಮೂಲಕ ಡಿ ಬಾಸ್ ಹಾಗೂ ಅವರ ಅಭಿಮಾನಿಗಳಿಗೆ ಉಡುಗೊರೆ ನೀಡಿತ್ತು.

    ಇದಕ್ಕೂ ಎರಡು ದಿನ ಮುನ್ನ ಅಂದ್ರೆ ಪ್ರೇಮಿಗಳ ದಿನದಂದು ‘ರಾಬರ್ಟ್’ ಚಿತ್ರದ ಮೊದಲ ಟೀಸರ್ ರಿಲೀಸ್ ಆಗಿತ್ತು. ಇದರ ಬೆನ್ನಲ್ಲೇ ಫೆಬ್ರವರಿ 29ರ ಸಂಜೆ 5 ಗಂಟೆಗೆ ರಾಬರ್ಟ್ ಚಿತ್ರಕ್ಕೆ ಸಂಬಂಧಪಟ್ಟಂತೆ ವಿಷಯವೊಂದನ್ನು ಘೋಷಣೆ ಮಾಡುವುದಾಗಿ ನಿರ್ದೇಶಕ ತರುಣ್ ಸುಧೀರ್ ಟ್ವೀಟ್ ಮಾಡಿದ್ದರು. ಈ ವಿಷಯ ಹೊರಬೀಳುತ್ತಿದ್ದಂತೆ ಮತ್ತೊಮ್ಮೆ ರಾಬರ್ಟ್ ಕುರಿತಾದ ಚರ್ಚೆಗಳು ಪ್ರಾರಂಭವಾಗಿತ್ತು.

    ಇಂದು ಪ್ರತಿಕ್ರಿಯೆ ನೀಡಿರುವ ತರುಣ್ ಸುಧೀರ್ ಅವರು ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ರಾಬರ್ಟ್ ಅನ್ನು ಏಪ್ರಿಲ್ 9ರಂದು ತೆರೆಗೆ ತರಲು ಚಿತ್ರತಂಡ ಡೇಟ್ ಫಿಕ್ಸ್ ಮಾಡಿಕೊಂಡಿದೆ. ಕ್ರೈಸ್ತರ ಪವಿತ್ರ ದಿನ ಗುಡ್ ಫ್ರೈಡೆ ಉಡುಗೊರೆಯಾಗಿ ರಾಬರ್ಟ್ ಅನ್ನು ತೆರೆಗೆ ತರಲು ನಿರ್ದರಿಸಿದೆ ಎನ್ನಲಾಗಿದೆ.

    ಸಂಜಯ್, ಅಕ್ಬರ್ ಹಾಗೂ ರಾಬರ್ಟ್ ಎಂದು ಮೂರು ಪಾತ್ರದಲ್ಲಿ ದರ್ಶನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಶಾ ಭಟ್ ಸಿನಿಮಾದ ನಾಯಕಿಯಾಗಿದ್ದು, ಜಗಪತಿ ಬಾಬು ವಿಲನ್ ಆಗಿ ದರ್ಶನ್‍ಗೆ ಟಕ್ಕರ್ ಕೊಟ್ಟಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಸಿನಿಮಾದ ಆ್ಯಕ್ಷನ್ ಕಟ್ ಹೇಳಿದ್ದು, ಉಮಾಪತಿ ಬಂಡವಾಳ ಹಾಕಿದ್ದಾರೆ. ಅರ್ಜುನ್ ಜನ್ಯ ಸಂಗೀತ ಹಾಗೂ ಹಿನ್ನೆಲೆ ಸಂಗೀತ ನೀಡಿದ್ದಾರೆ.

  • ಸಿಎಂ ಕಾಲಿಗೆ ಬಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್

    ಸಿಎಂ ಕಾಲಿಗೆ ಬಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ.

    ನಗರದ ಜೆಪಿ ಪಾರ್ಕ್ ನಲ್ಲಿ ನಿರ್ಮಾಪಕ ಮುನಿರತ್ನ ಅವರ ನೇತೃತ್ವದಲ್ಲಿ ಕುರುಕ್ಷೇತ್ರ ಸಿನಿಮಾದ ಶತದಿನೋತ್ಸವ ಸಮಾರಂಭ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ದರ್ಶನ್, ಸಿಎಂ ಯಡಿಯೂರಪ್ಪ, ಅಭಿಷೇಕ್ ಅಂಬರೀಷ್, ಶ್ರೀನಿವಾಸ್ ಮೂರ್ತಿ, ರವಿಶಂಕರ್, ಹರಿಕೃಷ್ಣ, ಯಶಸ್ಸ್ ಸೂರ್ಯ, ಶಾಸಕ ಬೈರತಿ ಬಸವರಾಜ್ ಭಾಗವಹಿಸಿದ್ದರು. ವೇದಿಕೆಗೆ ಆಗಮಿಸಿದ ದರ್ಶನ್ ಸಿಎಂ ಯಡಿಯೂರಪ್ಪ ಅವರ ಕಾಲಿಗೆ ನಮಸ್ಕರಿಸಿದರು. ಬಳಿಕ ಎಲ್ಲರನ್ನೂ ಮಾತನಾಡಿಸಿ ತಮ್ಮ ಆಸನದ ಮೇಲೆ ಕುಳಿತುಕೊಂಡರು.

    ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ 30 ಅಡಿ ಶಿವನ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರತಿಮೆಯ ದರ್ಶನ ಪಡೆಯಲು ಭಕ್ತರು ಬರುತ್ತಿದ್ದಾರೆ. ಆಹೋ ರಾತ್ರಿ ಜಾಗರಣೆ ಮತ್ತು ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.

    ಕುರುಕ್ಷೇತ್ರ ಸಿನಿಮಾದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಅವರು ಭೀಷ್ಮನ ಪಾತ್ರ ಮಾಡಿದ್ದರು. ಹೀಗಾಗಿ ಅವರ ಪರವಾಗಿ ನೆನಪಿನ ಕಾಣಿಕೆ ಸ್ವೀಕರಿಸಲು ಅಭಿಷೇಕ್ ಅಂಬರೀಶ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

    ಈ ವೇಳೆ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ನಾಡಿನ ಜನತೆಗೆ ಶಿವರಾತ್ರಿ ಹಬ್ಬದ ಶುಭಾಷಯ ಕೋರಿದರು. ಅಪರೂಪದ ಮತ್ತು ವಿಭಿನ್ನ ಕಾರ್ಯಕ್ರಮ ಆಯೋಜಿಸಿದ ಮುನಿರತ್ನ ಅವರಿಗೆ ಧನ್ಯವಾದ ಹೇಳುತ್ತೇನೆ. ನಾನು ಒಂದು ಗಂಟೆಗಳ ಕಾಲ ಇದ್ದು ಸಮಾರಂಭವನ್ನ ನೋಡಿದ್ದೇನೆ ಖುಷಿ ಆಗಿದೆ ಎಂದು ತಿಳಿಸಿದರು.

  • ತೋಟದ ಮನೆಯಲ್ಲಿ ರಾಸುಗಳ ಕಿಚ್ಚು ಹಾಯಿಸಿ ಸಂಕ್ರಾಂತಿ ಸಂಭ್ರಮಿಸಿದ ಡಿಬಾಸ್

    ತೋಟದ ಮನೆಯಲ್ಲಿ ರಾಸುಗಳ ಕಿಚ್ಚು ಹಾಯಿಸಿ ಸಂಕ್ರಾಂತಿ ಸಂಭ್ರಮಿಸಿದ ಡಿಬಾಸ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ತೋಟದ ಮನೆಯಲ್ಲಿ ರಾಸುಗಳ ಕಿಚ್ಚು ಹಾಯಿಸಿ ಸಂಕ್ರಾಂತಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.

    ಡಿಬಾಸ್ ದರ್ಶನ್ ಅವರು ಮೈಸೂರಿನ ಟಿ.ನರಸೀಪುರದ ರಸ್ತೆಯಲ್ಲಿರುವ ತಮ್ಮ ತೂಗುದೀಪ ಫಾರಂನಲ್ಲಿ ಆಪ್ತರು ಹಾಗೂ ಗೆಳೆಯರೊಂದಿಗೆ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ತೋಟದ ಮನೆಯಲ್ಲಿರುವ ದನಗಳ ಜೊತೆ ತಮ್ಮಿಷ್ಟದ ಕುದುರೆಗಳನ್ನು ಕಿಚ್ಚು ಹಾಯಿಸಿ ಸಂಕ್ರಾಂತಿಯನ್ನು ಸಂಭ್ರಮಿಸಿದ್ದಾರೆ.

    https://twitter.com/DBossFc171/status/1217458422993440768

    ನಟ ದರ್ಶನ್ ಅವರು ತಮ್ಮಿಷ್ಟದ ಬಿಳಿ ಕುದುರೆಯನ್ನು ಹಿಡಿದು ಕಿಚ್ಚು ಹಾಯಿಸುತ್ತಿರುವ ಫೋಟೋ ಹಾಗೂ ವಿಡಿಯೋವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ರಾಬರ್ಟ್’ ಸಿನಿಮಾದ ಎರಡನೇ ಮೋಷನ್ ಪೋಸ್ಟರ್ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ದರ್ಶನ್, `ಎಲ್ಲರಿಗೂ ವರ್ಷದ ಮೊದಲನೆಯ ಹಬ್ಬ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಎಳ್ಳು, ಬೆಲ್ಲ ಸವಿಯುತ್ತಾ ನಮ್ಮ ರಾಬರ್ಟ್ ಚಿತ್ರದ ಎರಡನೇ ಲುಕ್ ಪೋಸ್ಟರ್ ನಿಮಗಾಗಿ ಬಿಡುಗಡೆ ಮಾಡುತ್ತಿದ್ದೇವೆ. ನೋಡಿ ಆಶೀರ್ವದಿಸಿ’ ಎಂದು ಬರೆದುಕೊಂಡಿದ್ದರು.

    ರಿಲೀಸ್ ಆಗಿರುವ ಲುಕ್ ಮೋಷನ್ ಪೋಸ್ಟರ್ 53 ಸೆಕೆಂಡ್‍ಗಳಿದ್ದು, ಅದ್ಭುತವಾಗಿ ಮೂಡಿ ಬಂದಿದೆ. ದರ್ಶನ್ ಆಂಜನೇಯ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಹೆಗಲ ಮೇಲೆ ರಾಮನ ಪಾತ್ರದ ಮಗುವನ್ನು ಕೂರಿಸಿಕೊಂಡಿದ್ದಾರೆ. ಪುಟ್ಟ ರಾಮ ರಾವಣ ನ ಪ್ರತಿಕೃತಿಯನ್ನು ದಹಿಸಲು ಬಿಲ್ಲು ಹಿಡಿದಿರುವುದನ್ನು ಕಾಣಬಹುದಾಗಿದೆ.

    ಕುರುಕ್ಷೇತ್ರದಲ್ಲಿ ದುರ್ಯೋಧನನಾಗಿ ನೋಡಿದ್ದ ಅಭಿಮಾನಿಗಳು `ರಾಬರ್ಟ್’ ಸಿನಿಮಾದಲ್ಲಿ ಆಂಜನೇಯನ ಅವತಾರದಲ್ಲಿ ದರ್ಶನ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ರಿಲೀಸ್ ಆಗಿರುವ ಎರಡನೇ ಪೋಸ್ಟರ್ ಸಿನಿಮಾದ ಮೇಲಿನ ಕೂತುಹಲವನ್ನು ಮತ್ತುಷ್ಟು ಹೆಚ್ಚಿಸಿದೆ.

  • ಅಬ್ಬರಿಸುತ್ತಲೇ ಪ್ರೇಕ್ಷಕರ ಮನಗೆದ್ದ ಒಡೆಯ!

    ಅಬ್ಬರಿಸುತ್ತಲೇ ಪ್ರೇಕ್ಷಕರ ಮನಗೆದ್ದ ಒಡೆಯ!

    ಸಂದೇಶ್ ನಾಗರಾಜ್ ಅರ್ಪಿಸಿ, ಎನ್.ಸಂದೇಶ್ ನಿರ್ಮಾಣ ಮಾಡಿರುವ ಒಡೆಯ ಚಿತ್ರ ತೆರೆಕಂಡು ಇದೀಗ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನವೇ ಭರಪೂರ ಓಪನಿಂಗ್ ಪಡೆದುಕೊಂಡಿದ್ದ ಈ ಸಿನಿಮಾ ಬಾಯಿಂದಬಾಯಿಗೆ ಹರಡಿಕೊಂಡ ಸದಭಿಪ್ರಾಯಗಳಿಂದಲೇ ಎರಡನೇ ದಿನ ಮತ್ತಷ್ಟು ಹೌಸ್‍ಫುಲ್ ಪ್ರದರ್ಶನದೊಂದಿಗೆ ಮಹಾ ಗೆಲುವಿನತ್ತ ದಾಪುಗಾಲಿಡುತ್ತಿದೆ. ಅಷ್ಟಕ್ಕೂ ಮೊದಲಿನಿಂದ ಬಿಡುಗಡೆಯ ಕಡೇ ಘಳಿಗೆಯವರೆಗೂ ಒಡೆಯನ ಮೇಲೆ ಕುದುರಿಕೊಂಡಿದ್ದ ಕ್ರೇಜ್ ಇತ್ತಲ್ಲಾ ಅದು ದೊಡ್ಡ ಮಟ್ಟದ ಗೆಲುವಿನ ಮುನ್ಸೂಚನೆಯಂತಿತ್ತು.

    ಒಂದೊಳ್ಳೆ ಕಂಟೆಂಟು ಮತ್ತು ಅದರಲ್ಲಿ ಮಾಸ್ ಮತ್ತು ಫ್ಯಾಮಿಲಿ ಮ್ಯಾನ್ ಆಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ ರೀತಿಗಳೇ ಅದನ್ನು ನಿಜವಾಗಿಸಿವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರದ್ದು ಮಾಸ್, ಫ್ಯಾಮಿಲಿ ಸೆಂಟಿಮೆಂಟ್ ಸೇರಿದಂತೆ ಎಲ್ಲ ಥರದ ಪಾತ್ರಗಳಿಗೂ ಸರಿ ಹೊಂದುವಂಥಾ ನಟನೆ. ಒಂದು ಕಡೆ ಅವರ ಅಭಿಮಾನಿಗಳು ದರ್ಶನ್ ಸದಾ ಆಕ್ಷನ್ ಓರಿಯಂಟೆಡ್ ಪಾತ್ರಗಳಲ್ಲಿಯೇಮಿಂಚಬೇಕೆಂದು ಬಯಸುತ್ತಾರೆ. ಮತ್ತೊಂದು ಕಡೆಯಿಂದ ಫ್ಯಾಮಿಲಿ ಪ್ರೇಕ್ಷಕರು ಅವರನ್ನು ಮತ್ತೆ ಮತ್ತೆ ಫ್ಯಾಮಿಲಿ ಮ್ಯಾನ್ ಆಗಿ ಕಣ್ತುಂಬಿಕೊಳ್ಳಲು ಕಾತರಿಸುತ್ತಾರೆ. ಈ ಥರದ ಪ್ರೇಕ್ಷಕರ ಎಲ್ಲ ಬೇಡಿಕೆ, ಆಶಯಗಳನ್ನೂ ತಣಿಸುವಂಥಾ ರೀತಿಯಲ್ಲಿ ಒಡೆಯ ಮೂಡಿ ಬಂದಿದೆ. ಈ ಕಾರಣದಿಂದಲೇ ಎರಡನೇ ದಿನ ಮತ್ತಷ್ಟು ಆವೇಗದಿಂದ ಈ ಸಿನಿಮಾಮುನ್ನುಗ್ಗುತ್ತಿದೆ.

    ಒಡೆಯ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಇದೀಗ ಉತ್ತಮ ಪ್ರದರ್ಶನ ನೀಡುತ್ತಿದೆ. ದರ್ಶನ್ ಅವರಂಥಾ ಸ್ಟಾರ್ ನಟರ ಸಿನಿಮಾಗಳೆಂದ ಮೇಲೆ ಒಂದು ಕ್ರೇಜ್, ದೊಡ್ಡ ಮಟ್ಟದ ನಿರೀಕ್ಷೆಗಳು ಇದ್ದೇ ಇರುತ್ತವೆ. ಆದರೆ ಅದೆಲ್ಲವನ್ನೂ ಮೀರಿದಂಥಾ ಮೇಲ್ಮಟ್ಟದಲ್ಲಿ ಅಂಥಾ ಸಿನಿಮಾಗಳು ಮೂಡಿ ಬಂದಾಗ ಪ್ರೇಕ್ಷಕರ ಸಂತಸಕ್ಕೆ ಎಲ್ಲೆಗಳೇ ಇರುವುದಿಲ್ಲ. ಒಡೆಯನ ಗೆಲುವಿನ ನಾಗಾಲೋಟದ ಹಿಂದೆ ಇದೇ ಅಂಶ ಪ್ರಧಾನವಾಗಿ ಕೆಲಸ ಮಾಡಿದೆ.

    ಒಡೆಯ ಚಿತ್ರ ದರ್ಶನ್ ಅವರನ್ನು ಬೇರೆಯದ್ದೇ ಥರದಲ್ಲಿ ಅನಾವರಣಗೊಳಿಸಲಿದೆ ಅನ್ನೋ ನಂಬಿಕೆ ಈ ಹಿಂದಿನಿಂದಲೇ ಹುಟ್ಟಿಕೊಂಡಿತ್ತು. ಅವರಿಲ್ಲಿ ಗಜೇಂದ್ರನಾಗಿ ಅಬ್ಬರಿಸಿದ ರೀತಿ ಎಲ್ಲ ನಿರೀಕ್ಷೆಗಳನ್ನೂ ಮೀರಿದ ಸ್ವರೂಪದ್ದು. ಇದರಿಂದಾಗಿಯೇ ಎಲ್ಲ ವರ್ಗದ ಪ್ರೇಕ್ಷಕರಿಗೂ ಒಡೆಯ ಇಷ್ಟವಾಗಿದ್ದಾರೆ. ಈ ಹಿಂದೆ ಎನ್. ಸಂದೇಶ್ ಅವರು ತಮ್ಮ ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರಿನ ಮೂಲಕ ದರ್ಶನ್ ಅಭಿನಯದ ಪ್ರಿನ್ಸ್ ಮತ್ತು ಮಿಸ್ಟರ್ ಐರಾವತ ಎಂಬೆರಡು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಅವೆರಡೂ ಸಿನಿಮಾಗಳು ಕೂಡಾ ಸೂಪರ್ ಹಿಟ್ ಆಗಿದ್ದವು. ಒಡೆಯ ಚಿತ್ರ ಆ ಸಾಲಿನಲ್ಲಿ ಸಂದೇಶ್ ಪ್ರೊಡಕ್ಷನ್ಸ್‍ಗೆ ಹ್ಯಾಟ್ರಿಕ್ ಗೆಲುವು ತಂದು ಕೊಟ್ಟಿದೆ.

    ಫ್ಯಾಮಿಲ್ ಕಂ ಆಕ್ಷನ್ ಸ್ವರೂಪದ ಈ ಕಥೆ ನಿಜಕ್ಕೂ ಮೋಡಿ ಮಾಡಿದೆ. ವರ್ಷದ ಕೊನೆಯನ್ನು ಒಡೆಯ ಒಂದೊಳ್ಳೆ ಸಿನಿಮಾ ನೋಡಿದ ಖುಷಿಯಿಂದಲೇ ಶೃಂಗಾರಗೊಳ್ಳುವಂತೆ ಮಾಡಿದ್ದಾನೆ. ನೀವಿನ್ನೂ ಈ ಸಿನಿಮಾ ನೋಡಿಲ್ಲ ಎಂದಾದರೆ ಖಂಡಿತಾ ಒಮ್ಮೆನೋಡಿ. ಅತ್ಯುತ್ತಮ ಚಿತ್ರ ನೋಡಿದ ಖುಷಿಯೊಂದು ಮನಸು ಸೋಕುತ್ತದೆ.