Tag: challenge

  • ಸಚಿವ ಅನಂತ್‍ಕುಮಾರ್ ಹೆಗ್ಡೆಗೆ ವಾದ್ರಾ ಸಹೋದರಿ ಪತಿ ಚಾಲೆಂಜ್

    ಸಚಿವ ಅನಂತ್‍ಕುಮಾರ್ ಹೆಗ್ಡೆಗೆ ವಾದ್ರಾ ಸಹೋದರಿ ಪತಿ ಚಾಲೆಂಜ್

    ನವದೆಹಲಿ: ಹಿಂದೂ ಹುಡುಗಿಯ ಮೈ ಮುಟ್ಟಿದ ಕೈ ಇರಬಾರದು ಎಂಬ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆಯವರ ಹೇಳಿಕೆ ದೇಶದ್ಯಾಂತ ಭಾರೀ ಸದ್ದು ಮಾಡಿದ್ದು, ಇದೀಗ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಸಹೋದರಿಯ ಪತಿ, ಕಾಂಗ್ರೆಸ್ ನಾಯಕ ತೆಹಸೀನ್ ಪೂನವಾಲಾ ಸಚಿವರಿಗೆ ಚಾಲೆಂಜ್ ಹಾಕಿದ್ದಾರೆ.

    ನಾನು ನನ್ನ ಹಿಂದೂ ಜೀವನ ಸಂಗಾತಿಯ ಮೈ ಮುಟ್ಟಿದ್ದೇನೆ. ಇದೀಗ ನನ್ನನ್ನು ನೀವೇನು ಮಾಡುತ್ತೀರಿ ಎಂದು ಫೋಟೋ ಸಮೇತ ಸಚಿವರಿಗೆ ಟ್ವೀಟ್ ಮೂಲಕ ಚಾಲೆಂಜ್ ಹಾಕಿದ್ದಾರೆ.

    ಟ್ವೀಟ್ ನಲ್ಲೇನಿದೆ..?
    ”ಶುಭ ಮಧ್ಯಾಹ್ನ ಅನಂತ್ ಕುಮಾರ್ ಹೆಗ್ಡೆಯವರೇ.. ನೋಡಿ ನನ್ನ ಕೈಗಳು ನನ್ನ ಹಿಂದೂ ಹೆಣ್ಣನ್ನು ಟಚ್ ಮಾಡಿವೆ. ಇದೀಗ ನೀವು ನನ್ನನ್ನು ಏನು ಮಾಡುತ್ತೀರಿ. ಇದು ನನ್ನ ಚಾಲೆಂಜ್ ಸರ್” ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

    ಹೆಗ್ಡೆ ಹೇಳಿದ್ದೇನು..?
    ಜಾತಿ ವಿಷಬೀಜ ಸಮಾಜದಲ್ಲಿ ಸೇರಿಕೊಂಡ ಬಳಿಕ ನಾವು ನಿರ್ಮಾಣ ಮಾಡಿದ್ದನ್ನು ನಮ್ಮದು ಎಂದು ಹೇಳಿಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದ್ದೇವೆ. ನಮ್ಮ ಹಿಂದೂಗಳು ಒಗ್ಗಟ್ಟಾಗಿ ನಿಲ್ಲದೇ ಇದ್ದರೆ ಏನಾಗುತ್ತದೆ ಎಂಬುವುದನ್ನು ಇತಿಹಾಸ ನೋಡಿದರೆ ನಮಗೆ ಅರಿವಾಗುತ್ತದೆ. ಆದ್ದರಿಂದ ಜಾತಿ ಪ್ರಶ್ನೆ ಇಲ್ಲದೆ ಹಿಂದೂ ಹುಡುಗಿಯ ಮುಟ್ಟಿದರೆ ಆ ಕೈ ಇರಬಾರದು ಎಂದು ಮಡಿಕೇರಿಯಲ್ಲಿ ಪರಿವರ್ತನಾ ಟ್ರಸ್ಟ್, ಹಿಂದೂ ಜಾಗರಣ ವೇದಿಕೆ ಆಯೋಜನೆ ಮಾಡಿದ್ದ ಸಾಮಾಜಿಕ ಸಮರಸತಾ ಸಮಾವೇಶ, ಹಿಂದೂ ಐಕ್ಯ ಸಮ್ಮೇಳನದಲ್ಲಿ ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿದ್ದರು.

    https://www.youtube.com/watch?v=sZnllwvVLOs

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಟ ಸುದೀಪ್ ಕ್ಲಾಸ್ – ಅರ್ಧ ತಲೆ ಬೋಳಿಸಿದ ಆ್ಯಂಡಿ

    ನಟ ಸುದೀಪ್ ಕ್ಲಾಸ್ – ಅರ್ಧ ತಲೆ ಬೋಳಿಸಿದ ಆ್ಯಂಡಿ

    ಬೆಂಗಳೂರು: ಬಿಸ್‍ ಬಾಸ್ ಸೀಸನ್ 6ರಲ್ಲಿ ಸ್ಪರ್ಧಿ ಆ್ಯಂಡಿ ಪ್ರತಿದಿನವೂ ಏನಾದರೂ ತರ್ಲೆ ಮಾಡಿಕೊಂಡು ಸುದ್ದಿಯಾಗುತ್ತಲೇ ಇರುತ್ತಾರೆ. ಈಗ ಮತ್ತೆ ತಮ್ಮ ಅರ್ಧ ತಲೆ ಬೊಳಿಸಿಕೊಂಡು ಆ್ಯಂಡಿ ಸುದ್ದಿಯಾಗಿದ್ದಾರೆ.

    ವಾರದ ಕೊನೆಯಲ್ಲಿ ಪ್ರಸಾರವಾಗುವ ಸಂಚಿಕೆಯಲ್ಲಿ ಸುದೀಪ್ ಅವರು, ತಾವೇ ತಮ್ಮ ಅರ್ಧ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಮಾತುಕೊಟ್ಟಿದ್ದೀರಿ. ಆದರೆ ಅದನ್ನು ಮರೆತು ಬಿಟ್ಟಿದ್ದೀರಾ ಎಂದು ಆ್ಯಂಡಿಗೆ ಕೊಟ್ಟ ಮಾತನ್ನು ತಪ್ಪಬಾರದು ಅಂತ ಕ್ಲಾಸ್ ತೆಗೆದುಕೊಂಡಿದ್ದರು. ಕೊನೆಗೆ ಆ್ಯಂಡಿ ಕೊಟ್ಟ ಮಾತಿನಂತೆ ತಮ್ಮ ಅರ್ಧತಲೆ ಬೋಳಿಸಿಕೊಂಡಿದ್ದಾರೆ.

    ಸವಾಲು ಹಾಕಿದ್ದ ಆ್ಯಂಡಿ
    ಬಿಗ್ ಬಾಸ್ ಸ್ಪರ್ಧಿಗಳನ್ನು ಎರಡು ತಂಡ ಮಾಡಿ ಅವರಿಗೆ ಟಾಸ್ಕ್ ಕೊಟ್ಟಿತ್ತು. ಆಗ ಆ್ಯಂಡಿ, ” ನಮ್ಮ ತಂಡದ ಬಗ್ಗೆ ಕವಿತಾ ಸರಿಯಾದ ನಿರ್ಧಾರ ತೆಗೆದುಕೊಂಡು ಗೆಲ್ಲಿಸಿದರೆ, ನಾನು ಅರ್ಧ ತಲೆ ಬೋಳಿಸಿಕೊಂಡು ಬಿಗ್ ಮನೆಯಲ್ಲಿ ಇರುತ್ತೀನಿ” ಎಂದು ಶಶಿ ಬಳಿ ಚಾಲೆಂಜ್ ಹಾಕಿದ್ದರು. ಕೊನೆಗೂ ಕವಿತಾ ಅವರು ತಮ್ಮ ತಂಡವನ್ನು ಟಾಸ್ಕ್ ನಲ್ಲಿ ಗೆಲ್ಲಿಸಿದ್ದರು. ಆದರೆ ತಮ್ಮ ತಂಡ ಗೆದ್ದಿದ್ದ ಖುಷಿಯಲ್ಲಿ ಆ್ಯಂಡಿ ಮತ್ತು ಶಶಿ ಇಬ್ಬರು ಚಾಲೆಂಜ್ ಬಗ್ಗೆ ಮರೆತಿದ್ದರು.

    ಈ ಹಿಂದೆ ಕೂಡ ಬಿಗ್‍ಬಾಸ್ ಸ್ಪರ್ಧಿಗಳಿಗೆ ಲಕ್ಷುರಿ ಬಜೆಟ್ ಕೊಟ್ಟಿದ್ದರು. ಅದರಲ್ಲಿ ಬಂದಂತಹ ಪದಾರ್ಥವನ್ನೂ ನಾನು ಮುಟ್ಟಲ್ಲ ಅಂತ ಆ್ಯಂಡಿ ಹೇಳಿದ್ದರು. ಆದರೆ ಲಡ್ಡು ಮತ್ತು ಚಿಕನ್ ಬಂದ ಕೂಡಲೇ ಆ್ಯಂಡಿ ತಮ್ಮ ಮಾತನ್ನು ಮರೆತು ಲಡ್ಡು ತಿಂದಿದ್ದರು. ಆದ್ದರಿಂದ ಒಂದೇ ವಾರದಲ್ಲಿ ಎರಡು ಬಾರಿ ಆ್ಯಂಡಿ ಮಾತು ತಪ್ಪಿದ್ದರು. ಇದರಿಂದ ಸುದೀಪ್ ಅವರು ಆ್ಯಂಡಿಗೆ ಮಾತಿನ ಪ್ರಕಾರ ನಡೆದುಕೊಳ್ಳಬೇಕು ಎಂದು ಕ್ಲಾಸ್ ತೆಗೆದುಕೊಂಡಿದ್ದರು.

    ಮೊದಲಿಗೆ ಆ್ಯಂಡಿ ತಮ್ಮ ಅರ್ಧತಲೆ ಬೋಳಿಸಿಕೊಳ್ಳಲು ಒಪ್ಪಿಕೊಂಡಿರಲಿಲ್ಲ. ಅರ್ಧ ತಲೆ ಬೋಳಿಸಿಕೊಂಡರೆ ನಾನು ತುಂಬಾ ಕೆಟ್ಟದಾಗಿ ಕಾಣಿಸುತ್ತೇನೆ, ಬೇಡ ಸರ್ ಎಂದು ಆಂಡಿ ಸುದೀಪ್ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ ಸುದೀಪ್ ‘ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಿ. ಇನ್ನು ಮುಂದೆ ಬಿಗ್ ಬಾಸ್‍ ಮನೆಯಲ್ಲಿ ಯಾವುದೇ ಪ್ರಾಮಿಸ್, ಚಾಲೆಂಜ್ ಮಾಡಬೇಡಿ ಎಂದು ಸುದೀಪ್ ಕ್ಲಾಸ್ ತೆಗೆದುಕೊಂಡರು. ಕೊನೆಗೆ ನಟ ಸುದೀಪ್ ಮಾತನ್ನು ಒಪ್ಪಿಕೊಂಡು ತಾವು ಮಾತು ಕೊಟ್ಟಂತೆ ಅರ್ಧ ತಲೆ ಬೋಳಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನಾನು ನಿನ್ನೇ ಲವ್ ಮಾಡ್ತೀನಿ ಏನ್ ಬೇಕಾದ್ರೂ ಮಾಡ್ಕೋ: ಸೋನು ಪಾಟೀಲ್ ಓಪನ್ ಚಾಲೆಂಜ್

    ನಾನು ನಿನ್ನೇ ಲವ್ ಮಾಡ್ತೀನಿ ಏನ್ ಬೇಕಾದ್ರೂ ಮಾಡ್ಕೋ: ಸೋನು ಪಾಟೀಲ್ ಓಪನ್ ಚಾಲೆಂಜ್

    ಬೆಂಗಳೂರು: ಬಿಗ್‍ಬಾಸ್-6 ಎರಡನೇ ವಾರದಲ್ಲಿ ಸೋನು ಪಾಟೀಲ್ ತನ್ನ ಸಹ ಸ್ಪರ್ಧಿ ಗಾಯಕ ನವೀನ್ ಸಜ್ಜು ಅವರಿಗೆ ಎಲ್ಲರ ಸಮ್ಮುಖದಲ್ಲಿ ಐ ಲವ್ ಯೂ ಎಂದು ಹೇಳಿದ್ದರು. ಈ ಬಗ್ಗೆ ನವೀನ್ ಮಾತನಾಡುವಾಗ ಸೋನು ನಾನು ನಿನ್ನೇ ಲವ್ ಮಾಡ್ತೀನಿ ಏನ್ ಬೇಕಾದ್ರೂ ಮಾಡ್ಕೋ ಎಂದು ಸೋನು ಓಪನ್ ಚಾಲೆಂಜ್ ಮಾಡಿದ್ದಾರೆ.

    ಈ ಹಿಂದೆ ನವೀನ್ ತಮ್ಮ ಜರ್ಕಿನ್ ಕೊಟ್ಟಿದ್ದಕ್ಕೆ ಸೋನು ನೀನು ನನಗೆ ಒಳ್ಳೆಯ ಸ್ನೇಹಿತನಾಗಿದ್ದೀಯಾ. ಹಾಗಾಗಿ ನಿನಗೆ ಐ ಲವ್ ಯೂ ಅಂತಾ ಬಿಗ್‍ಬಾಸ್ ಚಟುವಟಿಕೆಯಲ್ಲಿ ಹೇಳಿದ್ದರು. ಈ ಬಳಿಕ ಮನೆಯಲ್ಲಿದ್ದವರು ನವೀನ್ ಹಾಗೂ ಸೋನು ಬಗ್ಗೆ ಮಾತನಾಡಲು ಶುರು ಮಾಡಿದರು. ಮನೆಯ ಸದಸ್ಯರು ಈ ರೀತಿ ಮಾತನಾಡುತ್ತಿರುವುದು ನವೀನ್ ಅವರಿಗೆ ಇಷ್ಟವಾಗಲಿಲ್ಲ. ಅವರು ಸೋನುಗೆ ನನ್ನ ಜೊತೆ ಈ ರೀತಿ ಮಾತನಾಡೋದನ್ನು ನಿಲ್ಲಿಸು ಅಂತ ಮನವಿ ಮಾಡಿಕೊಂಡಿದ್ದರು.

    ನವೀನ್ ಎಲ್ಲರ ಬಳಿ ಚೆನ್ನಾಗಿಯೇ ಮಾತನಾಡುತ್ತೀಯಾ. ನನ್ನ ಬಳಿ ಯಾಕೆ ಮಾತನಾಡಲ್ಲ ಎಂದು ಹೇಳಿ ಸಹ ಸ್ಪರ್ಧಿ ಸ್ನೇಹ ಬಳಿ ತೆರಳಿ ಅಳಲು ಶುರು ಮಾಡಿದರು. ಸೋನು ಅಳುವ ರೀತಿ ಮಾಡಿ ನಮ್ಮನ್ನ ಫೂಲ್ ಮಾಡ್ತಿದ್ದಾಳೆಂದು ಸಹ ಸ್ಪರ್ಧಿಗಳು ಹೇಳತೊಡಗಿದರು. ಕೂಡಲೇ ಇತರರ ಮಾತುಗಳಿಂದ ಕೋಪಗೊಂಡ ಸೋನು ಪಾಟೀಲ್, ನೀನು ನನಗೆ ಸ್ನೇಹಿತನಾಗಿ ಇಷ್ಟ. ಲವ್ ಮಾಡಿದ್ರೆ ನಾನು ನಿನ್ನೇ ಲವ್ ಮಾಡ್ತೀನಿ. ಅದು ಏನ್ ಮಾಡಿಕೊಳ್ಳತ್ತೀಯೋ ಮಾಡಿಕೋ ಎಂದು ಸವಾಲು ಹಾಕಿ ಬೇರೆ ಕಡೆ ನಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಿಯಕರ ಮಾಡಿದ ಚಾಲೆಂಜ್‍ಗೆ ವಿಷ ಕುಡಿದ ಪ್ರೇಯಸಿ..!

    ಪ್ರಿಯಕರ ಮಾಡಿದ ಚಾಲೆಂಜ್‍ಗೆ ವಿಷ ಕುಡಿದ ಪ್ರೇಯಸಿ..!

    ಬೆಂಗಳೂರು: ಪ್ರಿಯಕರ ಮಾಡಿದ ಚಾಲೆಂಜ್‍ಗೆ ಪ್ರೇಯಸಿಯೊಬ್ಬಳು ವಿಷ ಕುಡಿದು ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯ ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿತ್ತಿಗನೂರು ಗ್ರಾಮದಲ್ಲಿ ನಡೆದಿದೆ.

    ಹರೀಶ್(20) ಚಾಲೆಂಜ್ ಮಾಡಿದ ಪ್ರಿಯಕರನಾಗಿದ್ದು, ದಿವ್ಯ (19) ಸಾವನ್ನಪ್ಪಿದ್ದ ಪ್ರೇಯಸಿ. ಕಳೆದ ಮಂಗಳವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಪ್ರಿಯಕರ ಹರೀಶ್ ಮತ್ತು ದಿವ್ಯ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಒಂದು ದಿನ ಇಬ್ಬರು ಭೇಟಿಯಾಗಿದ್ದು, ಈ ವೇಳೆ ನನ್ನ ಮೇಲೆ ನಿನಗೆ ನಿಜವಾದ ಪ್ರೀತಿ ಇದ್ದರೆ ವಿಷ ಕುಡಿ ಎಂದು  ಹರೀಶ್ ಚಾಲೆಂಜ್ ಮಾಡಿದ್ದಾನೆ. ದಿವ್ಯ ಪ್ರಿಯಕರನ ಮಾತನ್ನು ನಂಬಿ ವಿಷ ಕುಡಿದ್ದಾಳೆ. ಬಳಿಕ ಮನೆಗೆ ತೆರಳಿದ್ದಾಳೆ.

    ಮನೆಗೆ ಹೋದ ಬಳಿಕ ದಿವ್ಯ ವಾಂತಿ ಮಾಡಲು ಶುರು ಮಾಡಿದ್ದಾಳೆ. ತಕ್ಷಣ ಆಕೆಯನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಒಂದು ದಿನದ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ದಿವ್ಯ ಮೃತಪಟ್ಟಿದ್ದಾಳೆ.

    ಸದ್ಯಕ್ಕೆ ಪ್ರಿಯಕರ ಹರೀಶ್ ವಿರುದ್ಧ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದಿವ್ಯ ಸಾವನ್ನಪ್ಪಿದ ವಿಷಯ ತಿಳಿದು ಇತ್ತ ಆರೋಪಿ ಹರೀಶ್ ಪರಾರಿಯಾಗಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಂಗ್ರೆಸ್ Vs ಬಿಜೆಪಿ: ಅನುದಾನ ಹಂಚಿಕೆ 1 ರೂ. ಹೆಚ್ಚಾದರೆ ನಾನು ರಾಜಕೀಯ ನಿವೃತ್ತಿ: ಶ್ರೀರಾಮುಲು

    ಕಾಂಗ್ರೆಸ್ Vs ಬಿಜೆಪಿ: ಅನುದಾನ ಹಂಚಿಕೆ 1 ರೂ. ಹೆಚ್ಚಾದರೆ ನಾನು ರಾಜಕೀಯ ನಿವೃತ್ತಿ: ಶ್ರೀರಾಮುಲು

    ಬಳ್ಳಾರಿ: ಕಾಂಗ್ರೆಸ್‍ನಲ್ಲಿ ಸಿಎಂ ಆದಾಗ ಕೊಟ್ಟ ಅನುದಾನವೆಷ್ಟು, ಯಡಿಯೂರಪ್ಪ ಅವರು ಸಿಎಂ ಆದಾಗ ಬಳ್ಳಾರಿಗೆ ಕೊಟ್ಟ ಅನುದಾನ ಎಷ್ಟು ಎಂಬುದಕ್ಕೆ ಶ್ವೇತಪತ್ರ ಹೊರಡಿಸಲಿ. ಒಂದು ವೇಳೆ ಈ ದಾಖಲೆಯಲ್ಲಿ ಅನುದಾನ ಹಂಚಿಕೆಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್ 1 ರೂ. ಹೆಚ್ಚಿಗೆ ಬಂದಿದ್ದರೂ ನಾನು ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದು ಶಾಸಕ ಶ್ರೀರಾಮುಲು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಮುಲು ಜಿಲ್ಲೆಗೆ ಏನೂ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದು ಮಾತನಾಡುತ್ತಿದ್ದಾರೆ ಅಲ್ಲವೇ? ಈ ಬಗ್ಗೆ ಇಂದು ನಾನು ಬಹಿರಂಗವಾಗಿ ಸವಾಲನ್ನು ಹಾಕುತ್ತಿದ್ದೇನೆ. ಪ್ರಧಾನಿ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಐದು ವರ್ಷವಾಗಿದೆ. ಬಳ್ಳಾರಿಯಿಂದ ಚಿತ್ರದುರ್ಗಕ್ಕೆ, ಚಿತ್ರದುರ್ಗದಿಂದ ಹೊಸಪೇಟೆಗೆ, ಹೊಸಪೇಟೆಯಿಂದ ಧಾರವಾಡಕ್ಕೆ, ಇದೇ ರೀತಿ ಬೀದರ್‍ನಿಂದ ಶ್ರೀರಂಗಪಟ್ಟಣಕ್ಕೆ ಸುಮಾರು 10 ಸಾವಿರಕೋಟಿ ಅನುದಾನವನ್ನು ಕೇವಲ ರಸ್ತೆಗೆ ಮಾತ್ರ ನೀಡಿದ್ದಾರೆ. ಯಡಿಯೂರಪ್ಪ ಅವರು ಸಿಎಂ ಆದಾಗ ಬಳ್ಳಾರಿಗೆ ಸುಮಾರು 8 ಕೋಟಿ ರೂ. ಅನುದಾನವನ್ನು ನೀಡಿದ್ದಾರೆ. ಏನೂ ಬೇಕಾದರೂ ಆಗಲಿ ನಾನು ಸವಾಲು ಸ್ವೀಕಾರ ಮಾಡುತ್ತಿದ್ದೇನೆ. ಅಭಿವೃದ್ಧಿ ಮಾಡಿದ್ದರೂ ಕಾಂಗ್ರೆಸ್ ನಾಯಕರು ಇಲ್ಲವೆಂದು ಹೇಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

    ನನ್ನ ಮಾತುಗಳು ಬದಲಾವಣೆ ಇರಬಹುದು. ಆದರೆ ದಾಖಲಾತಿಗಳನ್ನು ಮುಚ್ಚಿಡಲು ಸಾಧ್ಯವಿಲ್ಲ. ಶ್ವೇತಪತ್ರದ ದಾಖಲಾತಿಗಳನ್ನು ತೆಗೆಯಲಿ. ಒಂದು ರೂಪಾಯಿ ಹೆಚ್ಚಾದಲ್ಲಿ ನಾನು ರಾಜಕೀಯದಿಂದ ನಿವೃತ್ತನಾಗುತ್ತೇನೆ. ಇದನ್ನು ನಾನು ಸವಾಲಾಗಿ ಸ್ವೀಕಾರ ಮಾಡುತ್ತೇನೆ. ಅಷ್ಟೇ ಅಲ್ಲದೇ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಅವರಿಗೆ ಉತ್ತರವನ್ನು ಕೊಡುತ್ತೇನೆ ಎಂದು ತಿಳಿಸಿದರು.

    ಪ್ರಾಯಶಃ ಕಾಂಗ್ರೆಸಿನ ನಾಯಕರಿಗೆ ಸೋಲುತ್ತಿವೆ ಎಂಬ ಭಯ ಪ್ರಾರಂಭವಾಗಿದೆ. ಅವರು ಮಾತನಾಡುವಂತಹ ಭಾಷೆ ಲಂಗು ಲಗಾಮು ಇಲ್ಲದೇ ಇರುವ ಭಾಷೆಯನ್ನು ಬಳಕೆ ಮಾಡುತ್ತಿದ್ದಾರೆ. ಭಾಷೆ ಎಲ್ಲರಿಗೂ ಬರುತ್ತೆ. ಭಾಷೆ ಮಾತನಾಡುವ ಸಂದರ್ಭದಲ್ಲಿ ಒಬ್ಬ ಮನುಷ್ಯ ಬೈಯಲೇಬೇಕು, ಮಾತನಾಡಬೇಕು ಎಂದರೆ ಏನೂ ಬೇಕಾದರೂ ಮಾತನಾಡುವ ಶಕ್ತಿ ಆತನಿಗಿದೆ. ಹೀಗಾಗಿ ಇವತ್ತು ನಾನು ದೊಡ್ಡ ದೊಡ್ಡ ಮಾತುಗಳನ್ನು ಮಾತನಾಡುವುದಿಲ್ಲ. ನನ್ನ ಜಿಲ್ಲೆಯ ಜನರು ನನ್ನ ಕೈ ಹಿಡಿದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹುಲಿಯ ಬಾಯಿಗೆ ಕೈ ಹಾಕಿದ ಶ್ರೀರಾಮುಲು ಶೀಘ್ರವೇ ಜೈಲಿಗೆ: ಕೈ ಮುಖಂಡ ಆಂಜನೇಯಲು

    ಹುಲಿಯ ಬಾಯಿಗೆ ಕೈ ಹಾಕಿದ ಶ್ರೀರಾಮುಲು ಶೀಘ್ರವೇ ಜೈಲಿಗೆ: ಕೈ ಮುಖಂಡ ಆಂಜನೇಯಲು

    ಬಳ್ಳಾರಿ: ಡಿಕೆ ಶಿವಕುಮಾರ್ ಜೈಲಿಗೆ ಹೋಗಲಿದ್ದಾರೆ ಎಂದು ಹೇಳಿದ ನೀವೂ ಸಹ ಜೈಲಿಗೆ ಹೋಗುವ ಕಾಲ ಹತ್ತಿರ ಬಂದಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಜೆ ಎಸ್ ಆಂಜನೇಯಲು ಶ್ರೀರಾಮುಲು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೆಡ್ಡಿ-ರಾಮುಲು ಅಧಿಕಾರದಲ್ಲಿದ್ದಾಗ ಗಣಿಗಾರಿಕೆಯಲ್ಲಿ ಲೂಟಿ ಮಾಡಿದ್ದೂ ಜನರು ಮರೆತಿಲ್ಲ. ಶಾಸಕ ಶ್ರೀರಾಮುಲುಗೆ ಬಳ್ಳಾರಿ ಜನರ ಮೇಲೆ ನಂಬಿಕೆಯಿಲ್ಲ. ಹೀಗಾಗಿ ಅವರು ಮೊಳಕಾಲ್ಮೂರು ಕ್ಷೇತ್ರಕ್ಕೆ ಹೋಗಿ ಸ್ಫರ್ಧಿಸಿದರು ಎಂದು ಹೇಳಿದರು.

    ಶ್ರೀರಾಮುಲು ಸಹ 27 ಎಕರೆ ಜಮೀನು ಕಬಳಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ನಿಮ್ಮ ವಿರುದ್ಧವೂ ಸಹ ಲೋಕಾಯುಕ್ತದಲ್ಲಿ ಕೇಸಿದೆ. ನೀವೂ ಸಹ ಜೈಲಿಗೆ ಹೋಗುವ ಕಾಲ ಸನ್ನಿಹಿತವಾಗಿದೆ. ಹುಲಿಯ ಬಾಯಿಗೆ ಕೈ ಹಾಕುತ್ತಿದ್ದೀರಿ ಹುಷಾರ್ ಎಂದು ಶ್ರೀರಾಮುಲು ಅವರ ಮಾತಿಗೆ ತಿರುಗೇಟು ನೀಡಿದರು.

    ಬಳ್ಳಾರಿ ಜನರನ್ನು ದಡ್ರು ಎಂದು ತಿಳಿದುಕೊಂಡಿದ್ದಿರಾ. ರಾಜ್ಯದಲ್ಲಿ ಮಂತ್ರಿಯಾಗಬೇಕಾದಾಗ ಮೊಳಕಾಲ್ಮೂರಿನಲ್ಲಿ ನಿಂತುಕೊಂಡಿದ್ದೀರಿ. ಕೇಂದ್ರದಲ್ಲಿ ಮಂತ್ರಿಯಾಗಬೇಕಾದ್ರೆ ಬಳ್ಳಾರಿಯಲ್ಲಿ ನಿಂತುಕೊಳ್ಳುತ್ತೀರಿ. ಬಳ್ಳಾರಿ ಜನರನ್ನು ಕೇವಲ ಮಂತ್ರಿಯಾಗುವುದಕ್ಕೆ ಮಾತ್ರ ಉಪಯೋಗಿಸಿಕೊಳ್ಳುತ್ತಿದ್ದೀರಿ. ಬಳ್ಳಾರಿ ಜನರನ್ನು ಏನೆಂದು ತಿಳಿದುಕೊಂಡಿದ್ದೀರಿ? ಒಂದು ಬಾರಿ ಬಿಜೆಪಿಯಲ್ಲಿ ಅವಕಾಶ ನೀಡಿದ್ದಕ್ಕೆ ಅಕ್ರಮ ಗಣಿಗಾರಿಕೆ ಲೂಟಿ ಮಾಡಿದ್ದೀರಿ ಎಂದು ಆಕ್ರೋಶ ಹೊರ ಹಾಕಿದರು.

    ನಿಮಗೆ ತಾಕತ್ ಇದ್ದರೆ ನೀವು ನಾಗೇಂದ್ರ ವಿರುದ್ಧ ಸ್ಪರ್ಧೆ ಮಾಡಬೇಕಿತ್ತು. ಅದು ಬಿಟ್ಟು ಸೋಲುವ ಭಯದಿಂದ ಬೇರೆ ಕಡೆ ಸ್ಪರ್ಧೆ ಮಾಡಿದ್ರಿ. ನೀವೂ ರಾಜೀನಾಮೆ ನೀಡಿ ಬಂದು ನನ್ನ ವಿರುದ್ಧ ಗೆಲುವು ಸಾಧಿಸಿದರೆ ನಾನು ಬಳ್ಳಾರಿ ಬಿಟ್ಟೇ ಹೋಗುತ್ತೇನೆ. ಒಂದು ವೇಳೆ ನೀವು ಸೋತರೇ ಬಳ್ಳಾರಿ ಬಿಟ್ಟು ಹೋಗ್ತೀರಾ ಎಂದು ಆಂಜನೇಯಲು ಶ್ರೀರಾಮುಲುಗೆ ಸವಾಲು ಎಸೆದರು.

    ರಾಜೀನಾಮೆ ನೀಡಿ ಮೂರು ಬಾರಿ ಜನರಿಗೆ ಮೋಸ ಮಡಿದ ನೀವು ಬಳ್ಳಾರಿಗೆ ನೀಡಿದ ಕೊಡಗೆ ಏನು ಎನ್ನುವುದನ್ನು ತೋರಿಸಿ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಮಮಂದಿರಕ್ಕೆ ಪಾಯ ಹಾಕಿ ಎಂಪಿ ಚುನಾವಣೆ ಎದುರಿಸಿ: ಮೋದಿಗೆ ಬೆಳ್ಳುಬ್ಬಿ ಸವಾಲ್

    ರಾಮಮಂದಿರಕ್ಕೆ ಪಾಯ ಹಾಕಿ ಎಂಪಿ ಚುನಾವಣೆ ಎದುರಿಸಿ: ಮೋದಿಗೆ ಬೆಳ್ಳುಬ್ಬಿ ಸವಾಲ್

    ಬಾಗಲಕೋಟೆ: ರಾಮಮಂದಿರ ಹೆಸರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯ ಮಾಡುತ್ತಿದ್ದಾರೆ. ನಿಮ್ಮ ಹತ್ತಿರ ದಮ್ ಇದ್ದರೆ ರಾಮಮಂದಿರಕ್ಕೆ ಪಾಯಾ ಹಾಕಿ. ನಂತರ ಲೋಕಸಭಾ ಚುನಾವಣೆ ಎದುರಿಸಿ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರು ಸವಾಲು ಹಾಕಿದ್ದಾರೆ.

    ನಗರದಲ್ಲಿ ನಡೆದ ಜೆಡಿಎಸ್ ನೂತನ ಜಿಲ್ಲಾಧ್ಯಕ್ಷ ಪದಗ್ರಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸವಾಲು ಕೇವಲ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಷ್ಟೇ ಅಲ್ಲ, ರಾಜ್ಯ ಹಾಗೂ ಕೇಂದ್ರ ಬಿಜೆಪಿ ಮುಖಂಡರಿಗೂ ಅನ್ವಯವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

    ಬಿಜೆಪಿಯವರು ಯುವಕರನ್ನು ಬಲಿ ಕೊಟ್ಟರು, ಬ್ರಾಹ್ಮಣ ಕುಟುಂಬಗಳನ್ನು ಸರ್ವನಾಶ ಮಾಡಿದರು. ಕಳೆದ ವರ್ಷವೇ ಕೃಷಿ ಉತ್ಪನ್ನದ ಕನಿಷ್ಠ ಬೆಂಬಲ ಬೆಲೆಯನ್ನು ಏರಿಕೆ ಮಾಡಬಹುದಿತ್ತು. ಆದರೆ ಮಾಡಲಿಲ್ಲ. ಈಗ ಲೋಕಸಭೆ ಚುನಾವಣೆ ಉದ್ದೇಶದಿಂದ ಈ ನಿರ್ಧಾರಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ದೂರಿದರು.

    ಪ್ರಧಾನಿ ಮೋದಿ ಅವರ ಹೆಸರಿನ ಮೇಲೆ ಕತ್ತೆಗೂ ಟಿಕೆಟ್ ಕೊಟ್ಟರೆ ಆಯ್ಕೆಯಾಗುತ್ತಾರೆಯೇ? ಅನೇಕ ನಾಯಕರಿದ್ದರೂ ಅವರಿಗೆ ಅವಕಾಶ ನೀಡಲಿಲ್ಲ. ಹೀಗಾಗಿ ನಾನು ಬಿಜೆಪಿ ಬಿಟ್ಟು ಬಂದೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಟಿಕೆಟ್ ದೊರೆತರೆ ಗೆಲುವು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಪೈಲ್ವಾನ್ ಚಾಲೆಂಜ್ ಆಯ್ತು, ಫಿಟ್‍ನೆಸ್ ಚಾಲೆಂಜ್ ಆಯ್ತು ಈಗ ಮುದ್ದೆ ತಿನ್ನೋ ಚಾಲೆಂಜ್!

    ಪೈಲ್ವಾನ್ ಚಾಲೆಂಜ್ ಆಯ್ತು, ಫಿಟ್‍ನೆಸ್ ಚಾಲೆಂಜ್ ಆಯ್ತು ಈಗ ಮುದ್ದೆ ತಿನ್ನೋ ಚಾಲೆಂಜ್!

    ಬೆಂಗಳೂರು: ಸಿಎಂ ಕುಮಾರಸ್ವಾಮಿ ಹಾಗೂ ಆಹಾರ ಸಚಿವ ಜಮೀರ್ ಅವರಿಗೆ ಮುದ್ದೆ ತಿನ್ನುವ ಚಾಲೆಂಜ್ ಅನ್ನು ಬೆಂಗಳೂರಿನ ಕುರುಬರಹಳ್ಳಿ ಜನ ಹಾಕಿದ್ದಾರೆ.

    ಪಡಿತರ ಚೀಟಿಯಲ್ಲಿ ವಿತರಿಸುವ ರಾಗಿಯಲ್ಲಿ ಬರೀ ಟೊಳ್ಳು ರಾಗಿ, ಕಲ್ಲು, ಮಣ್ಣು ತುಂಬಿದ್ದು, ಮನುಷ್ಯರು ತಿನ್ನಲು ಸಾಧ್ಯವಾಗದ ರೀತಿಯಲ್ಲಿ ಈ ಕಳಪೆ ಗುಣಮಟ್ಟದ ರಾಗಿಯನ್ನು ವಿತರಣೆ ಮಾಡಲಾಗಿದೆ. ಇದರಿಂದ ಸಿಟ್ಟಿಗೆದ್ದ ಜನ ಈ ಕಳಪೆ ರಾಗಿಯನ್ನು ಸಿಎಂ ಕುಮಾರಸ್ವಾಮಿ ಹಾಗೂ ಜಮೀರ್ ಅವರ ವಿಳಾಸಕ್ಕೆ ಕಳುಹಿಸಿ ನೀವು ಮುದ್ದೆ ಮಾಡ್ಕೊಂಡು ತಿನ್ನಿ, ನೀವು ತಿಂದ ಮೇಲೆ ನಾವು ತಿನ್ನುತ್ತೆವೆ ಎಂದು ಚಾಲೆಂಜ್ ಮಾಡಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ ಪರಮೇಶ್ ಎಂಬವರು ಪಡಿತರ ವ್ಯವಸ್ಥೆಯಲ್ಲಿ ಹೆಚ್ಚಿನ ಗೋಲ್ ಮಾಲ್ ನಡೆಯುತ್ತಿದ್ದು, ಕಳಪೆ ಆಹಾರ ವಿತರಣೆ ಮಾಡುತ್ತಿದ್ದಾರೆ. ಅದ್ದರಿಂದ ಮುಖ್ಯಮಂತ್ರಿಗಳು ಹಾಗೂ ಆಹಾರ ಸಚಿವರು ಸಹ ಈ ಕುರಿತು ಗಮನ ಹರಿಸಬೇಕಿದೆ. ನ್ಯಾಯ ಬೆಲೆ ಅಂಗಡಿಯಲ್ಲಿ ಈ ಕುರಿತು ಪ್ರಶ್ನೆ ಮಾಡಿದರೆ ಅಗತ್ಯವಿದ್ದರೆ ತೆಗೆದುಕೊಂಡು ಹೋಗಿ ಇಲ್ಲವಾದರೆ ಬಿಡಿ ಎಂದು ಬೇಜಾವಾಬ್ದಾರಿ ಉತ್ತರ ನೀಡುತ್ತಾರೆ. ಅದ್ದರಿಂದ ಈ ಆಹಾರವನ್ನು ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಜಮೀರ್ ಅವರಿಗೆ ಕಳುಹಿಸಿ ಕೊಡುತ್ತಿದ್ದೇವೆ. ಅವರು ಈ ರಾಗಿಯಿಂದ ಮುದ್ದೆ ಮಾಡಿ ತಿಂದು ತೋರಿಸಲಿ, ಬಳಿಕ ನಾವು ಸೇವಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಸುದೀಪ್ ಸವಾಲ್ ಸ್ವೀಕರಿಸಿ ಡಿಫರೆಂಟಾಗಿಯೇ ರಿಪ್ಲೈ ಕೊಟ್ರು ಉಪ್ಪಿ- ವಿಡಿಯೋ ವೈರಲ್

    ಸುದೀಪ್ ಸವಾಲ್ ಸ್ವೀಕರಿಸಿ ಡಿಫರೆಂಟಾಗಿಯೇ ರಿಪ್ಲೈ ಕೊಟ್ರು ಉಪ್ಪಿ- ವಿಡಿಯೋ ವೈರಲ್

    ಬೆಂಗಳೂರು: ನಟ ಕಿಚ್ಚ ಸುದೀಪ್ ಸಿನಿಮಾರಂಗದವರಿಗೆ `ಹಮ್ ಫಿಟ್ ತೋ ಇಂಡಿಯಾ ಫಿಟ್’ ಎಂದು ಸವಾಲ್ ಹಾಕಿದ್ದು, ಈಗ ಎಲ್ಲೆಲ್ಲೂ ಆ ಸವಾಲಿನದ್ದೇ ಸುದ್ದಿಯಾಗಿದೆ.

    ಒಬ್ಬರಿಂದ ಒಬ್ಬರಿಗೆ ಪಾಸ್ ಆಗುವ ಈ ಫಿಟ್ ನೆಸ್ ಚಾಲೆಂಜ್ ನಿಜಕ್ಕೂ ಸಖತ್ ಕುತೂಹಲಕಾರಿಯಾಗಿದೆ. ಇತ್ತೀಚೆಗೆ ಸುದೀಪ್ `ಹಮ್ ಫಿಟ್ ತೋ ಇಂಡಿಯಾ ಫಿಟ್’ ಸವಾಲನ್ನು ರಿಯಲ್ ಸ್ಟಾರ್ ಉಪ್ಪೆಂದ್ರ ಅವರಿಗೆ ಹಾಕಿದ್ದರು. ಸುದೀಪ್ ಹಾಕಿದ್ದ ಸವಾಲು ಸ್ವೀಕರಿಸಿದ ಉಪ್ಪಿ ಡಿಫರೆಂಟಾಗಿಯೇ ಉತ್ತರಿಸಿದ್ದಾರೆ.

    ಸುದೀಪ್ ಸವಾಲ್ ಸ್ವೀಕರಿಸಿದ ಉಪ್ಪಿ, ಜಿಮ್ ನಲ್ಲಿ ನಿಂತು ಡಂಬಲ್ಸ್ ಎತ್ತಿ ಪೋಸ್ ಕೊಡುತ್ತಾರೆ ಅಂದುಕೊಂಡಿದ್ದರು. ಆದರೆ ಅವರು ಕೈಯಲ್ಲಿ ಗುದ್ದಲಿ ಹಿಡಿದು ಮಣ್ಣು ಅಗೆದು ತೋರಿಸಿದ್ದಾರೆ. ಇದಕ್ಕಿಂತ ಬೆಸ್ಟ್ ವರ್ಕ್ ಔಟ್ ಮತ್ತೊಂದಿಲ್ಲ ಸುದೀಪ್ ಅಂತ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಉಪ್ಪಿಯ ಕಸರತ್ತು ನೋಡಿದ ಕಿಚ್ಚ ಕೈಮುಗಿದು ಅಭಿನಂದನೆ ತಿಳಿಸಿದ್ದಾರೆ.

    ಸುದೀಪ್ ಸವಾಲ್:
    ಕಿಚ್ಚ ಸುದೀಪ್ ಭಾರತ ತಂಡದ ಕ್ರಿಕೆಟರ್ ವಿನಯ್ ಕುಮಾರ್ ಅವರ ಚಾಲೆಂಜ್ ಸ್ವೀಕರಿಸಿದ್ದರು. ವಿನಯ್ ಕುಮಾರ್ ಚಾಲೆಂಜ್ ಸ್ವೀಕರಿಸಿದ ನಂತರ ಕಿಚ್ಚ ಬಾಲಿವುಡ್ ನಟ ರಿತೇಶ್ ದೇಶಮುಖ್, ಸೋಹೆಲ್ ಖಾನ್, ತಮ್ಮ ಪತ್ನಿ ಪ್ರಿಯಾ ಸುದೀಪ್, ಯಶ್ ಹಾಗೂ ಶಿವರಾಜ್‍ಕುಮಾರ್ ಅವರಿಗೆ ಫಿಟ್ನೆಸ್ ಚಾಲೆಂಜ್ ನೀಡಿದ್ದರು. ಈಗ ಸುದೀಪ್ ಕನ್ನಡ ಚಿತ್ರರಂಗದವರಿಗೆ ಹೊಸ ಸವಾಲು ಹಾಕಿದ್ದರು.

    ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು ಅಂದ್ರೇನು?
    ಸುದೀಪ್ `ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು’ ಎನ್ನುವ ಸವಾಲು ಹಾಕಿದ್ದರು. `ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು’ ಚಾಲೆಂಜ್ ಎಂದರೆ ಇಂದಿನ ತಮ್ಮ ಫೋಟೋವೊಂದನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಬೇಕು. ನಂತರ ಪ್ರತಿದಿನ ವರ್ಕ್ ಔಟ್ ಮಾಡಿ ಒಂದು ತಿಂಗಳ ನಂತರ ಅವರು ಮತ್ತೆ ತಮ್ಮ ಫೋಟೋವನ್ನು ಅಪ್ಲೋಡ್ ಮಾಡಬೇಕು. ಆಗ ಎರಡು ಫೋಟೋಗಳ ಮೂಲಕ ಅದರಲ್ಲಿ ಏನೆಲ್ಲಾ ಬದಲಾವಣೆಯಾಗಿರುತ್ತದೆ ಎಂಬುದನ್ನು ತೋರಿಸಬೇಕು.

    https://twitter.com/nimmaupendra/status/1007954441142751232

  • ಸಿನಿಮಾರಂಗದವರಿಗೆ ಕಿಚ್ಚನಿಂದ ಹೊಸ ಸವಾಲ್

    ಸಿನಿಮಾರಂಗದವರಿಗೆ ಕಿಚ್ಚನಿಂದ ಹೊಸ ಸವಾಲ್

    ಬೆಂಗಳೂರು: ಇತ್ತೀಚೆಗೆ ನಟ ಸುದೀಪ್ ಫಿಟ್ ನೆಸ್ ಚಾಲೆಂಜ್ ಸ್ವೀಕರಿಸಿದ್ದು, ವಿಡಿಯೋ ಅಪ್ಲೋಡ್ ಮಾಡಿದ್ದರು. ಈಗ ಸುದೀಪ್ ಅವರೇ ಹೊಸದೊಂದು ಚಾಲೆಂಜ್ ಹಾಕಿದ್ದಾರೆ.

    ಕಿಚ್ಚ ಸುದೀಪ್ ಭಾರತ ತಂಡದ ಕ್ರಿಕೆಟರ್ ವಿನಯ್ ಕುಮಾರ್ ಅವರ ಚಾಲೆಂಜ್ ಸ್ವೀಕರಿಸಿದ್ದರು. ವಿನಯ್ ಕುಮಾರ್ ಚಾಲೆಂಜ್ ಸ್ವೀಕರಿಸಿದ ನಂತರ ಕಿಚ್ಚ ಬಾಲಿವುಡ್ ನಟ ರಿತೇಶ್ ದೇಶಮುಖ್, ಸೋಹೆಲ್ ಖಾನ್, ತಮ್ಮ ಪತ್ನಿ ಪ್ರಿಯಾ ಸುದೀಪ್, ಯಶ್ ಹಾಗೂ ಶಿವರಾಜ್‍ಕುಮಾರ್ ಅವರಿಗೆ ಫಿಟ್ನೆಸ್ ಚಾಲೆಂಜ್ ನೀಡಿದ್ದರು. ಈಗ ಸುದೀಪ್ ಕನ್ನಡ ಚಿತ್ರರಂಗದವರಿಗೆ ಹೊಸ ಸವಾಲು ಹಾಕಿದ್ದಾರೆ.

    ಸುದೀಪ್ `ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು’ ಎನ್ನುವ ಸವಾಲು ಹಾಕಿದ್ದಾರೆ. `ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು’ ಚಾಲೆಂಜ್ ಎಂದರೆ ಇಂದಿನ ತಮ್ಮ ಫೋಟೋವೊಂದನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಬೇಕು. ನಂತರ ಪ್ರತಿದಿನ ವರ್ಕ್ ಔಟ್ ಮಾಡಿ ಒಂದು ತಿಂಗಳ ನಂತರ ಅವರು ಮತ್ತೆ ತಮ್ಮ ಫೋಟೋವನ್ನು ಅಪ್ಲೋಡ್ ಮಾಡಬೇಕು. ಆಗ ಎರಡು ಫೋಟೋಗಳ ಮೂಲಕ ಅದರಲ್ಲಿ ಏನೆಲ್ಲಾ ಬದಲಾವಣೆಯಾಗಿರುತ್ತದೆ ಎಂಬುದನ್ನು ತೋರಿಸಬೇಕು.

    ಸುದೀಪ್ ಈ ಸವಾಲನ್ನು ಬರೆದು ನಿರ್ದೇಶಕ ಪವನ್ ಒಡೆಯರ್, ನಿರ್ಮಾಪಕ ಕಾರ್ತಿಕ್, ಅನೂಪ್ ಭಂಡಾರಿ ಮತ್ತು ನಟ ರಾಜೀವ್ ಅವರಿಗೆ ಟ್ವೀಟ್ ಮಾಡಿದ್ದಾರೆ. ಸುದೀಪ್ ಹಾಕಿದ್ದ ಸವಾಲನ್ನು ಪವನ್ ಒಡೆಯರ್ ಸ್ವೀಕರಿಸಿ ಮರು ಟ್ವೀಟ್ ಮಾಡಿದ್ದಾರೆ. “ಸುದೀಪ್ ಸರ್ ನಾನು ನಿಮ್ಮ ಸವಾಲನ್ನು ಸ್ವೀಕರಿಸುತ್ತಿದ್ದೇನೆ. ಈಗ ನನ್ನ ಇಂದಿನ ಫೋಟೋ ಅಪ್ಲೋಡ್ ಮಾಡಿದ್ದೇನೆ. ನಂತರ ಒಂದು ತಿಂಗಳಾದ ಮೇಲೆ ಬದಲಾವಣೆಯ ಜೊತೆ ಫೋಟೋ ಹಾಕುತ್ತೇನೆ” ಎಂದು ಬರೆದು ರೀ ಟ್ವೀಟ್ ಮಾಡಿದ್ದಾರೆ.

    ಸುದೀಪ್ ಹಾಕಿದ್ದ ಸವಾಲನ್ನು `ಹೆಬ್ಬುಲಿ’ ಮತ್ತು `ಪೈಲ್ವಾನ್’ ಸಿನಿಮಾ ನಿರ್ದೇಶಕರಾದ ಕೃಷ್ಣ ಕೂಡ ಸ್ವೀಕರಿಸಿದ್ದಾರೆ. ಜೊತೆಗೆ ನಿರ್ಮಾಪಕ ಕಾರ್ತಿಕ್ ಕೂಡ ಚಾಲೆಂಜ್ ಸ್ವೀಕರಿಸಿದ್ದಾರೆ. ಕೃಷ್ಣ ಅವರು ಸವಾಲನ್ನು ಸ್ವೀಕರಿಸಿದ ನಂತರ ಸುದೀಪ್ ತಮ್ಮ ಶೂಟಿಂಗ್ ಮುಗಿಯುವಷ್ಟರಲ್ಲಿ ಐದು ಕೆಜಿ ತೂಕ ಕಡಿಮೆ ಮಾಡಿಕೊಳ್ಳಲು ತಿಳಿಸಿದ್ದಾರೆ.