Tag: Chalkruthi

  • ಚಾಕೃತಿಯಲ್ಲಿ ಅರಳಿದ ‘ಕೆಜಿಎಫ್’ ಯಶ್ – ವಿಡಿಯೋ ನೋಡಿ

    ಚಾಕೃತಿಯಲ್ಲಿ ಅರಳಿದ ‘ಕೆಜಿಎಫ್’ ಯಶ್ – ವಿಡಿಯೋ ನೋಡಿ

    ಬೆಂಗಳೂರು: ದೇಶ- ಹೊರದೇಶದಲ್ಲಿ ಹವಾ ಕ್ರಿಯೆಟ್ ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾಕ್ಕೆ ಈಗ ಚಾಕೃತಿ ಮೂಲಕ ಗೌರವ ಸಲ್ಲಿಸಲಾಗಿದೆ.

    ಚಾಕೃತಿ ಕರಕುಶಲ ಕಲಾವಿದ ಸಚಿನ್ ಸಂಘೆ ಅವರು ನಟ ಯಶ್ ಚಾಕೃತಿಯನ್ನು ತಯಾರು ಮಾಡಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ ಯಶ್ ಕಾಣಿಸಿಕೊಂಡಿದ್ದ ಒಂದು ಲುಕ್ ಅನ್ನು ಸಚಿನ್ ಸಂಘೆ ಅವರು ಕಲಾಕೃತಿಯಾಗಿ ರೂಪಿಸಿದ್ದಾರೆ. ಈ ಬಗ್ಗೆ ಸ್ವತಃ ಸಚಿನ್ ಸಂಘೆ ಟ್ವೀಟ್ ಮಾಡಿದ್ದು, ಕೆಜಿಎಫ್ ಸಿನಿಮಾ ಕನ್ನಡಿಗರ ಹೆಮ್ಮೆಯಾಗಿದೆ. ಹೀಗಾಗಿ ಅವರಿಗಾಗಿ ಚಾಕೃತಿ ಮೂಲಕ ಗೌರವ ಸಲ್ಲಿಸಲಾಗಿದೆ” ಎಂದು ಬರೆದು ಯಶ್ ಚಾಕೃತಿಯ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ದರ್ಶನ್ ಗೆ ವಿನೂತನ ಗಿಫ್ಟ್ ನೀಡಿದ ಟೆಕ್ಕಿ – ಯಾರಿದು ಸಚಿನ್ ಸಂಘೆ?

    ಈ ಟ್ವೀಟನ್ನು ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ಹೊಂಬಾಳೆ ಫಿಲ್ಮ್ಸ್ ಸೇರಿದಂತೆ ಇತರರಿಗೆ ಟ್ಯಾಗ್ ಮಾಡಿದ್ದಾರೆ. ಇದನ್ನು ನೋಡಿದ ನಿರ್ದೇಶಕ ಪ್ರಶಾಂತ್ ನೀಲ್ ಅವರು, ಅದ್ಭುತವಾಗಿದೆ, ಧನ್ಯವಾದಗಳು ಎಂದು ರೀಟ್ವೀಟ್ ಮಾಡಿದ್ದಾರೆ.

    “ನಿಮ್ಮ ಹೆಸರಿನಂತೆ ನೀವು ‘ನೀಲಾ’ ಕಾಶದಷ್ಟೆ ಪ್ರಶಾಂತ, ಕೆಲಸದಲ್ಲಿ ನೀವು ಭೋರ್ಗರೆವ ಕಾರ್ಮುಗಿಲಿನಂತೆ ವಿಕ್ರಾಂತ” ಎಂದು ಮತ್ತೆ ಸಚಿನ್ ಸಂಘೆ ಅವರು ಪ್ರಶಾಂತ್ ನೀಲ್ ಅವರಿಗೆ ರೀಟ್ವೀಟ್ ಮಾಡಿದ್ದಾರೆ.

    ಸಚಿನ್ ಸಂಘೆ ಅವರು ಯಶ್ ಚಾಕೃತಿ ಮಾತ್ರವಲ್ಲದೇ ಅದರ ತಯಾರಿಕಾ ವಿಡಿಯೋವನ್ನು ಕೂಡ ಪೋಸ್ಟ್ ಮಾಡಿದ್ದಾರೆ. ಸುಣ್ಣದ ಬಳಪ (ಚಾಕ್ ಪೀಸ್) ನಲ್ಲಿ ಅರಳಿರುವ ಯಶ್ ಅವರ ಭಾವಚಿತ್ರ ನೋಡುಗರ ಗಮನ ಸೆಳೆಯುವಂತಿದೆ. ಈಗ ಮೇಕಿಂಗ್ ವಿಡಿಯೋ ಸಹ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ಈ ಹಿಂದೆ ಸಚಿನ್ ಸಂಘೆ ಅವರು, ನಟ ದರ್ಶನ್ ಅವರ ಚಾಕೃತಿ ಮಾಡಿದ್ದು, ಅವರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv