– 370ನೇ ವಿಧಿ ಸೇರಿಸಿದ ದಿನದಿಂದ ಶ್ಯಾಮ್‌ಪ್ರಸಾದ್ ಮುಖರ್ಜಿ ಹೋರಾಟ
ಬೆಂಗಳೂರು: ಬಾಬಾ ಸಾಹೇಬ್ ಅಂಬೇಡ್ಕರನ್ನು ದೂರ ಇಟ್ಟು ನೆಹರೂ ಅವರು ತಮ್ಮ ಅವಶ್ಯಕತೆ ಮತ್ತು ಮುಸ್ಲಿಂ ಓಲೈಕೆಗಾಗಿ 370ನೇ ವಿಧಿಯನ್ನು ಸಂವಿಧಾನದಲ್ಲಿ ಸೇರಿಸಿದರು ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanswamy) ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಾ.ಶ್ಯಾಮ್‌ಪ್ರಸಾದ್ ಮುಖರ್ಜಿ (Shyamprasad Mukherjee) ಅವರು ಬಾಬಾ ಸಾಹೇಬ್ ಡಾ.ಅಂಬೇಡ್ಕರ್ (B R Ambedkar) ಅವರ ಜೊತೆಯಲ್ಲಿ ಕೆಲಸ ಮಾಡಿದವರು. ಅಂಬೇಡ್ಕರ್ ಅವರು ಸಂವಿಧಾನ ಬರೆದ ಸಂದರ್ಭದಲ್ಲಿ 370ನೇ ವಿಧಿಯನ್ನು ಅಳವಡಿಸಿರಲಿಲ್ಲ. ಬಾಬಾ ಸಾಹೇಬರನ್ನು ದೂರ ಇಟ್ಟು ನೆಹರೂ ಅವರು ತಮ್ಮ ಅವಶ್ಯಕತೆ ಮತ್ತು ಓಲೈಕೆಗಾಗಿ 370ನೇ ವಿಧಿಯನ್ನು ಸಂವಿಧಾನದಲ್ಲಿ ಸೇರಿಸಿದರು. 370ನೇ ವಿಧಿ ಸೇರಿಸಿದ ದಿನದಿಂದ ಡಾ.ಶ್ಯಾಮ್‌ಪ್ರಸಾದ್ ಮುಖರ್ಜಿ ಅವರು ಅದರ ವಿರುದ್ಧ ಹೋರಾಟ ಪ್ರಾರಂಭಿಸಿದ್ದರು. ಈ ದೇಶಕ್ಕಾಗಿ ಹೋರಾಟ ಮಾಡುವ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಸಮರ್ಪಿಸಿದ ಒಬ್ಬ ಮಹಾನ್ ವ್ಯಕ್ತಿ ಡಾ.ಶ್ಯಾಮ್‌ಪ್ರಸಾದ್ ಮುಖರ್ಜಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಧಿಕೃತ ನಿವಾಸದಿಂದ ತಕ್ಷಣವೇ ಚಂದ್ರಚೂಡ್ ತೆರವಿಗೆ ಕೇಂದ್ರಕ್ಕೆ ಸುಪ್ರೀಂ ಪತ್ರ
ಡಾ.ಮುಖರ್ಜಿ ಅವರು ಸ್ವಾತಂತ್ರ್ಯ ನಂತರ ಪ್ರಥಮ ಸರ್ಕಾರದಲ್ಲಿ ಮಂತ್ರಿಯಾಗಿದ್ದವರು. ಆ ಕಾಲಘಟ್ಟದಲ್ಲಿ ಬಹುಮುಖ ಪ್ರತಿಭೆಯಾಗಿದ್ದವರು. ಇವರು ಒಬ್ಬ ರಾಜಕೀಯ ನಾಯಕರು, ಶಿಕ್ಷಣ ತಜ್ಞರು, ಹೋರಾಟಗಾರರು, ಸಮಾಜ ಸೇವಕರು ಹೀಗೆ ಅನೇಕ ರೀತಿಯಲ್ಲಿ ಈ ದೇಶಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಇವರು ಬ್ರಿಟಿಷರ ವಿರುದ್ಧದ ಕ್ವಿಟ್ ಇಂಡಿಯಾ ಚಳವಳಿಯ ರುವಾರಿಯಾಗಿ ಬಹು ದೊಡ್ಡ ಹೋರಾಟವನ್ನು ರೂಪಿಸಿದ್ದರು ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಮಲಗಿದ್ದಲ್ಲೇ ಹೃದಯಾಘಾತದಿಂದ ಯೋಧ ಸಾವು – ಹುಟ್ಟೂರಲ್ಲಿ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ
ಆರ್‌ಎಸ್‌ಎಸ್ ಮತ್ತು ಬಿಜೆಪಿಯವರು ಸ್ವಾತಂತ್ರ‍್ಯಕ್ಕಾಗಿ ಕೆಲಸ ಮಾಡಿಲ್ಲ ಹಾಗೂ ಸತ್ತಿಲ್ಲ ಎಂದು ಕಾಂಗ್ರೆಸ್ಸಿನವರು ಹೇಳುತ್ತಾರೆ. ಈ ರೀತಿ ಕಾಂಗ್ರೆಸ್ಸಿಗರು ಹೇಳಲೇಬೇಕು ಯಾಕೆಂದರೆ, ಸ್ವಾತಂತ್ರ‍್ಯ ಅನ್ನುವುದು ತಮ್ಮಿಂದ ಮಾತ್ರ ಬಂದಿದೆ ಎಂಬುದು ಅವರಿಗೆ ಬೇಕಾಗಿದೆ ಎಂದು ಟೀಕಿಸಿದ್ದಾರೆ.
ಬೆಂಗಳೂರು: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ(Chalavadi Narayanswamy) ವಿರುದ್ಧ ಚಿತ್ತಾಪುರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಬೆಂಬಲಿಗರು ಹಲ್ಲೆಗೆ ಮುಂದಾಗಿರೋ ಪ್ರಕರಣದಲ್ಲಿ ಕೂಡಲೇ ಸಿಎಂ ಸಿದ್ದರಾಮಯ್ಯ ಅವರು ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಬೇಕು. ತನಿಖೆ ನಡೆಸಬೇಕು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯರು ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಎಂಎಲ್‌ಸಿಗಳು ಕೂಡಲೇ ಪ್ರಿಯಾಂಕ್ ಖರ್ಗೆ ಮತ್ತು ಗೂಂಡಾ ವರ್ತನೆ ಮಾಡಿದ ಬೆಂಬಲಿಗರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಈ ವೇಳೆ ಬಿಜೆಪಿ ಎಂಎಲ್‌ಸಿ ನವೀನ್ ಮಾತಾಡಿ, ಚಿತ್ತಾಪುರದಲ್ಲಿ ಛಲವಾದಿ ನಾರಾಯಣಸ್ವಾಮಿ ಮೇಲೆ ನಡೆದ ಹಲ್ಲೆ ಸಂಬಂಧ ಸಭಾಪತಿಗಳಿಗೆ ದೂರು ನೀಡುತ್ತೇವೆ. ಸರ್ಕಾರ, ಸಿಎಂ, ಡಿಸಿಎಂ, ಗೃಹ ಸಚಿವರು ಮತ್ತು ಪ್ರಿಯಾಂಕ್ ಖರ್ಗೆ ಮೇಲೆ ಹಕ್ಕುಚ್ಯುತಿ ಮತ್ತು ಅಟ್ರಾಸಿಟಿ ಕೇಸ್ ದಾಖಲು ಮಾಡಬೇಕು ಎಂದು ಕಿಡಿಕಾರಿದರು. ಇದನ್ನೂ ಓದಿ: ನಮ್ಮ ಜಗಳ ನಮ್ಮಲ್ಲೇ ಇರಬೇಕಿತ್ತು, ನಾನು ಸತ್ತರೂ ಯಾರೂ ಕಾರಣರಲ್ಲ: ಸಹ ಕಲಾವಿದೆ
ಈ ಸರ್ಕಾರದಲ್ಲಿ ವಿಪಕ್ಷ ನಾಯಕರು, ಶಾಸಕರಿಗೆ ರಕ್ಷಣೆ ಇಲ್ಲ. ಗೂಂಡಾ ರಾಜ್ಯವನ್ನು ಈ ಸರ್ಕಾರ ಮಾಡ್ತಿದೆ. ಛಲವಾದಿ ನಾರಾಯಣಸ್ವಾಮಿ ನಾನ್ನುಡಿಯ ಮಾತು ಹೇಳಿದ್ದಾರೆ. ಅದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಇಷ್ಟಾದರೂ ಪ್ರಿಯಾಂಕ್ ಬೆಂಬಲಿಗರು ನಾರಾಯಣಸ್ವಾಮಿ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದು ಸರಿಯಲ್ಲ. ಪೊಲೀಸರೇ ಈ ಗೂಂಡಾಗಳಿಗೆ ಸಪೋರ್ಟ್ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ರಾಮನಗರ ಹೆಸರು ಬದಲಾವಣೆ ರಿಯಲ್ ಎಸ್ಟೇಟ್‌ನ ಕರಪತ್ರದಂತೆ: ನಿಖಿಲ್ ಕುಮಾರಸ್ವಾಮಿ
ಮಲ್ಲಿಕಾರ್ಜುನ ಖರ್ಗೆ ಹಿಂದೆ ನಾಯಿ ಅನ್ನೋ ಪದ ಬಳಕೆ ಮಾಡಿದ್ರು. ಪ್ರಧಾನಿಗಳನ್ನ ವಿಷ ಸರ್ಪ ಎಂದು ಕರೆದಿದ್ದರು. ಆಗ ಯಾರು ನಮ್ಮ ಕಾರ್ಯಕರ್ತರು ಹೀಗೆ ನಡೆದುಕೊಂಡಿರಲಿಲ್ಲ. ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆ ಆಗ್ತಿದೆ. ಸಂವಿಧಾನದ ಪುಸ್ತಕ ಹಿಡಿಯೋ ರಾಹುಲ್ ಗಾಂಧಿ ಇದಕ್ಕೆ ಉತ್ತರ ಕೊಡಬೇಕು. ತನಿಖೆ ಆಗಿ ಕ್ರಮ ಆಗೋವರೆಗೂ ಸಿಎಂ ಸಿದ್ದರಾಮಯ್ಯ(Siddaramaiah) ಅವರು ಪ್ರಿಯಾಂಕ್ ಖರ್ಗೆ ಅವರನ್ನ ಸಂಪುಟದಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.
– ಸಚಿವ ಸ್ಥಾನದಿಂದ ಪ್ರಿಯಾಂಕ್ ಖರ್ಗೆ ವಜಾಕ್ಕೆ ಬಿಜೆಪಿ ಆಗ್ರಹ; ರಾಜ್ಯಪಾಲರಿಗೆ ದೂರು
ಬೆಂಗಳೂರು: ಕಲಬುರಗಿಯಲ್ಲಿ ಪೊಲೀಸ್ ಅಧಿಕಾರಿಗಳೇ ನನ್ನನ್ನು ಬಂಧನದಲ್ಲಿ ಇಟ್ಟ ಹಾಗಿತ್ತು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ(Chalavadi Narayanswamy) ಆಕ್ಷೇಪಿಸಿದರು.
ನಿನ್ನೆ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನನ್ನ ಮೇಲೆ ಹಲ್ಲೆ ಯತ್ನ, ದಿಗ್ಬಂಧನ ಮತ್ತು ಕಾಂಗ್ರೆಸ್ ಗೂಂಡಾಗಿರಿತನದ ವಿರುದ್ಧ ಇಂದು ಬಿಜೆಪಿ ನಿಯೋಗದೊಂದಿಗೆ ಗೌರವಾನ್ವಿತ ರಾಜ್ಯಪಾಲರಾದ ಶ್ರೀ @TCGEHLOT ಅವರನ್ನು ಭೇಟಿ ಮಾಡಿ ಈ ಕೃತ್ಯ ಎಸಗಿದವರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಲು ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿ ಮನವಿ… pic.twitter.com/LElQt3WJof
— Chalavadi Narayanaswamy (@NswamyChalavadi) May 22, 2025
ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್(R Ashok), ಬಿಜೆಪಿ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರ ನಿಯೋಗವು ಗುರುವಾರ ರಾಜ್ಯಪಾಲರನ್ನು ಭೇಟಿ ಮಾಡಿತ್ತು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನಗೆ ನಿಜವಾಗಲೂ ಪ್ರಾಣ ಬೆದರಿಕೆ ಇದೆ. ನನಗೆ ಏನೇ ಆದರೂ ಈ ಸರ್ಕಾರ ಮತ್ತು ಖರ್ಗೆಯವರ ಕುಮ್ಮಕ್ಕೇ ಅದಕ್ಕೆ ಕಾರಣ ಎಂದು ಆರೋಪಿಸಿದರು. ಇದನ್ನೂ ಓದಿ: ಮಡೆನೂರ್ ಮನುನನ್ನ ಬೆಂಗ್ಳೂರಿಗೆ ಕರೆತಂದ ಪೊಲೀಸ್ – ಅದು ರೇಪ್ ಅಲ್ಲ, ಒಪ್ಪಂದದ ಸಂಪರ್ಕ ಅಂದ ನಟ
ಸಿಎಂ ಸಿದ್ದರಾಮಯ್ಯ ಅವರು ಪ್ರಿಯಾಂಕ್ ಖರ್ಗೆಯವರನ್ನು(Priyank Kharge) ಸಚಿವ ಸ್ಥಾನದಿಂದ ಹೊರದೂಡಬೇಕು. ಇಲ್ಲವಾದರೆ ಮುಂದಿನ ಘಟನೆಗಳಿಗೆ ಮುಖ್ಯಮಂತ್ರಿಗಳೇ ಹೊಣೆಗಾರರು. ನನ್ನ ಭದ್ರತಾ ವ್ಯವಸ್ಥೆ ಹೆಚ್ಚಿಸಬೇಕು. ಪೊಲೀಸರು ಅಷ್ಟು ಕಡಿಮೆ ಜನರನ್ನೇ ಹೊರಕ್ಕೆ ಹಾಕಿಲ್ಲ. ಒಬ್ಬ ಗನ್‌ಮ್ಯಾನ್ ಕೊಟ್ಟರೆ, 50 ಜನ ಬಂದರೆ ಅವರೇನು ಮಾಡಲು ಸಾಧ್ಯ ಎಂದು ಕೇಳಿದರು.
ಎಐಸಿಸಿ ಅಧ್ಯಕ್ಷರ ಮಗನೆಂದರೆ ಅವರಿಗೆ ಬೇರೆ ನಿಯಮ, ಸಂವಿಧಾನ ಇದೆಯೇ? ಅವರನ್ನು ಸಚಿವರನ್ನಾಗಿ ಇಟ್ಟುಕೊಳ್ಳಲೇ ಬೇಕಾ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕನ್ನಡದ ನಟಿಯರನ್ನ ಹಾಕೊಂಡ್ರೆ ಲಾಭ ಬರಲ್ವಾ: ನಾರಾಯಣ ಗೌಡ ಆಕ್ರೋಶ
ಹೇಗಾದರೂ ನನಗೆ ಅಪಮಾನ ಮಾಡಬೇಕೆಂದು ಪ್ರಯತ್ನ ನಡೆದಿದೆ. ನಮ್ಮನ್ನು ಮುಗಿಸಲು ಪ್ರಿಯಾಂಕ್ ಖರ್ಗೆ ತೀರ್ಮಾನ ಮಾಡಿದ್ದಾರೆ. ಅವರ ಸತ್ಯ ಹೊರಹಾಕುವ ವಿಚಾರದಲ್ಲಿ ನಾನು ಅವರಿಗೆ ಕಂಟಕವಾಗಿದ್ದೇನೆ ಎಂದು ಅವರಿಗೆ ಅನಿಸಿರಬಹುದು ಎಂದು ದೂರಿದರು.
ಅವಾಚ್ಯ ಶಬ್ದಗಳಿಂದ ನನ್ನನ್ನು ಬೈದಿದ್ದಾರೆ. ದಯವಿಟ್ಟು ಸಹಕರಿಸಿ ಎಂದು ಪೊಲೀಸರು ಹೇಳಿದರು. ಬೈಯುವುದನ್ನು ಕೇಳಿಕೊಂಡು, ಇಂಕ್ ಹಾಕಿದರೆ ಹಾಕಿಸಿಕೊಂಡು, ಮೊಟ್ಟೆ ಒಡೆದರೆ ಒಡೆಸಿಕೊಂಡು ಸಹಕರಿಸಬೇಕಿತ್ತೇ? ಅಲ್ಲಿ ಬಂದಿದ್ದ 25ರಿಂದ 30 ಜನರನ್ನು ಅಲ್ಲಿಂದ ಪೊಲೀಸರಿಗೆ ದೂಡಲಾಗಿಲ್ಲ. 100ಕ್ಕೂ ಹೆಚ್ಚು ಪೊಲೀಸರಿದ್ದರು. ಗೃಹ ಸಚಿವರು, ಎಡಿಜಿಪಿ, ಎಸ್ಪಿ ಬಳಿ ಮಾತನಾಡಿದ್ದೇನೆ. ಹೆಚ್ಚುವರಿ ಎಸ್ಪಿ ಅಲ್ಲೇ ನಿಂತಿದ್ದರು. ಡಿವೈಎಸ್ಪಿ, ಸರ್ಕಲ್ ಇನ್ಸ್‌ಪೆಕ್ಟರ್, ನಾಲ್ಕೈದು ಜನ ಇನ್ಸ್‌ಪೆಕ್ಟರ್‌ಗಳಿದ್ದರೂ ನಮ್ಮನ್ನು ಹೊರಕ್ಕೆ ಕಳುಹಿಸಲಿಲ್ಲ. ಬಹುಶಃ ಅವರಿಗಿಂತ ಇವರೇ ನಮ್ಮನ್ನು ಬಂಧನದಲ್ಲಿ ಇಟ್ಟಂತಿತ್ತು ಎಂದು ಟೀಕಿಸಿದರು. ಇದನ್ನೂ ಓದಿ: ಕೆನಿಶಾಗೆ ಕೊಲೆ ಬೆದರಿಕೆ – ಆರತಿ ಸಮಸ್ಯೆಗೆ ನಾನು ಕಾರಣ ಆಗಿದ್ರೆ ಕೋರ್ಟ್ ಮುಂದೆ ನಿಲ್ಲಿಸಿ ಎಂದ ಗಾಯಕಿ
ಪ್ರಧಾನಿಯನ್ನು ವಿಷ ಸರ್ಪಕ್ಕೆ ಹೋಲಿಸಿದವರು ಯಾರು?
ಈ ದೇಶದ ಪ್ರಧಾನಿಯನ್ನು ವಿಷ ಸರ್ಪಕ್ಕೆ ಹೋಲಿಸಿದವರು ಯಾರು? ಮಲ್ಲಿಕಾರ್ಜುನ ಖರ್ಗೆಯವರು. ಇದಕ್ಕೆ ಇವತ್ತಿಗೂ ದಾಖಲೆ ಇದೆ. ಪ್ರಿಯಾಂಕ್ ಖರ್ಗೆಯವರು ಮಾತು ಮಾತಿಗೆ ಆರೆಸ್ಸೆಸ್ ಚಡ್ಡಿಯವರು ಎನ್ನುತ್ತಾರೆ. ಇದು ನಮಗೆ ಅವಮಾನ ಅಲ್ಲವೇ. ಇದೆಲ್ಲ ನೀವು ಮಾಡಬಹುದು. ನಾವೊಂದು ಗಾದೆ ಹೇಳಿದರೆ ನಿಮಗೆ ಚುಚ್ಚುತ್ತದೆಯೇ? ನಮ್ಮನ್ನು ನಾಯಿಗೆ ಹೋಲಿಸಿದ್ದಾರೆ. ಇವರಿಗೆ ಪದ್ಮಭೂಷಣಕ್ಕೆ ಶಿಫಾರಸು ಮಾಡಬೇಕೇ? ನಮ್ಮ ಕ್ಷೇತ್ರದಿಂದ ಹಾಗೇ ಕಳಿಸಬೇಕೇ ಅಂದರೆ ಪ್ರಾಣ ತೆಗೆದು ಕಳಿಸುತ್ತಿದ್ದರೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕಾನ್ ಫೆಸ್ಟಿವಲ್| ರೆಡ್ ಕಾರ್ಪೆಟ್‌ನಲ್ಲಿ ಜಾನ್ವಿ ವಾಕ್ – ‘ನನ್ನ ದೇವತೆ’ ಎಂದ ಬಾಯ್‌ಫ್ರೆಂಡ್
ನಾನು ಸತ್ಯವನ್ನೇ ಹೇಳುವವ. ತಪ್ಪಿದ್ದರೆ, ಅದು ನನ್ನ ಗಮನಕ್ಕೆ ಬಂದರೆ ನಾನು ಹೋರಾಟ ಮಾಡುವವ. ನಮ್ಮ ಪಕ್ಷದ ಮುಖಂಡರನ್ನು ಗೌರವಿಸಿ ಅವರಿಗೆ ವಿಷಯ ತಿಳಿಸಿ ಇವೆಲ್ಲ ಮಾಡುತ್ತಿದ್ದೇನೆ. ನಮ್ಮ ಪಕ್ಷದ್ದು ಸಂಘಟಿತ ಹೋರಾಟ. ಡಿ.ಜಿ, ಗೃಹ ಸಚಿವ, ಮುಖ್ಯಮಂತ್ರಿಗಳಿಗೆ ದೂರು ಕೊಡಲಿದ್ದೇವೆ. ಕೇಂದ್ರದ ಗೃಹ ಸಚಿವರಿಗೂ ಮನವಿ ಕಳುಹಿಸಲಿದ್ದೇವೆ ಎಂದು ತಿಳಿಸಿದರು.
ಮೂಕಪ್ರೇಕ್ಷಕರಾಗಿದ್ದ ಪೊಲೀಸ್ ಅಧಿಕಾರಿಗಳು
ನನ್ನ ಮೇಲೆ ಹಾಕಲು ಇಂಕ್ ತಂದಿದ್ದರು. ಬಳಿಕ ಕಾರಿನ ಮೇಲೆ ಹಾಕಿದ್ದಾರೆ. ಅಲ್ಲಿದ್ದ ಪೊಲೀಸ್ ಅಧಿಕಾರಿಗಳು ಮೂಕಪ್ರೇಕ್ಷಕರಾಗಿದ್ದರು. ನಮ್ಮವರು 400ರಿಂದ 500 ಜನರಿದ್ದರು. ಅವರು ಹಲ್ಲೆ ಮಾಡಲು ಬಂದವರನ್ನು ಹತ್ತಿರ ಬರದಂತೆ ತಡೆದರು. ಕುಪಿತನಾಗಿ ನಾನು ಪೊಲೀಸರಿಗೆ, ರಕ್ಷಣೆ ಕೊಡುವುದಾದರೆ ಕೊಡಿ, ನಾನು ಹೋಗುವುದಾಗಿ ಹೇಳಿ ಹೊರಬಂದೆ. ಆಗ, ನಮ್ಮನ್ನು ಕರೆತಂದು ಯಾದಗಿರಿಗೆ ಹೋಗಲು ಗಡಿಭಾಗದಿಂದ ಆಚೆಗೆ ಬಿಟ್ಟರು. ಪ್ರಿಯಾಂಕ್ ಖರ್ಗೆ ಬೆಂಬಲಿಗರು, ಕೆಲಸಕ್ಕೆ ಅಡ್ಡಿಪಡಿಸಿದ್ದಲ್ಲದೇ ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ರನ್ಯಾರಾವ್‌ಗೆ ಪರಮೇಶ್ವರ್ ಶಿಕ್ಷಣ ಸಂಸ್ಥೆ ಸಾಲ ಕೊಟ್ಟಿರಬಹುದು: ರಾಮಲಿಂಗಾ ರೆಡ್ಡಿ
ನಮ್ಮ ಪದಾಧಿಕಾರಿಯನ್ನು ತಳ್ಳಾಡಿ, ಬಟ್ಟೆ ಹರಿದಿದ್ದರು
ನಮ್ಮ ಪಕ್ಷದ ಎಸ್ಸಿ ಮೋರ್ಚಾದ ಮಾಜಿ ಉಪಾಧ್ಯಕ್ಷ, ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಅಂಬಾರಾಯ ಅಷ್ಟಗಿ ಅವರು ನನ್ನನ್ನು ನೋಡಲು ಬಂದಿದ್ದರು. ಅವರನ್ನು ತಳ್ಳಾಡಿ ಬಟ್ಟೆ ಹರಿದಿದ್ದಾರೆ. ಅವರನ್ನು ರಾತ್ರಿ 3 ಗಂಟೆವರೆಗೆ ಒಂದು ಕಡೆ ಕೂಡಿ ಹಾಕಿದ್ದರು. ಒದೆ ತಿಂದವರೂ ಅವರೇ, ಅವರ ಮೇಲೇ ದೂರು ನೀಡುವುದಾಗಿ ಹೆದರಿಸಿದ್ದಾರೆ ಎಂದರು. ಇದನ್ನೂ ಓದಿ: ಉಗ್ರರು ಪಾಕಿಸ್ತಾನದಲ್ಲೇ ಅಡಗಿದ್ರೂ ನುಗ್ಗಿ ಹೊಡೆಯುತ್ತೇವೆ: ಜೈಶಂಕರ್
ಬಳಿಕ ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, 5 ತಾಸು ನನ್ನನ್ನು ತಡೆಹಿಡಿದಿದ್ದೀರಿ. ಇಲ್ಲಿ ಪ್ರಜಾಪ್ರಭುತ್ವ ಇದೆಯೇ? ನಮ್ಮ ಸರ್ಕಾರ ಇದ್ದಾಗ ಸಿದ್ದರಾಮಯ್ಯನವರು ವಿಪಕ್ಷ ನಾಯಕರಾಗಿದ್ದರು. ಅವರು ಕೊಡಗಿಗೆ ಹೋಗಿದ್ದರು. ಚಲಿಸುವ ಕಾರಿಗೆ ಯಾರೋ ಒಬ್ಬ ಹುಡುಗ ಮೊಟ್ಟೆ ಬಿಸಾಕಿದ್ದ. ಆಗ ಅವರು ಎಷ್ಟೊಂದು ಮಾತನಾಡಿದ್ದರು. ನಾನು ಮಾಜಿ ಸಿಎಂ, ನನಗೇನು ಗೌರವ ಇಲ್ಲವೇ? ಪೊಲೀಸರು ಏನು ಮಾಡುತ್ತೀರಿ ಎಂದು ಸಿದ್ದರಾಮಯ್ಯ ಕೇಳಿದ್ದರು. ಆದರೆ ಈಗ ನಿಮಗೇನೂ ಅನಿಸುವುದಿಲ್ಲವೇ ಮುಖ್ಯಮಂತ್ರಿಗಳೇ ಎಂದು ಪ್ರಶ್ನೆ ಮುಂದಿಟ್ಟರು.
– ಸಿಎಂ ಅವರದ್ದೂ ಹನಿಟ್ರ‍್ಯಾಪ್ ಆಗಿರುವ ಅನುಮಾನ ಇದೆ ಎಂದ ಪರಿಷತ್ ವಿಪಕ್ಷ ನಾಯಕ
ರಾಮನಗರ: ರಾಜ್ಯ ರಾಜಕಾರಣದ ಪರಿಸ್ಥಿತಿ ಹದಗೆಟ್ಟಿದೆ. ಮಹಾನಗರ ಪಾಲಿಕೆಯ ಗಾರ್ಬೇಜ್ ರೀತಿ ಸರ್ಕಾರದ ಆಡಳಿತ ಇದೆ. ಇಂತಹ ಕೆಟ್ಟ ಸರ್ಕಾರವನ್ನ ನಾವು ಎಂದೂ ನೋಡಿಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಿಡಿಕಾರಿದ್ದಾರೆ.
ರಾಮನಗರದಲ್ಲಿ (Ramanagara) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರದಲ್ಲಿ ಅಭಿವೃದ್ಧಿ ಸಂಪೂರ್ಣ ಶೂನ್ಯ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಭಿವೃದ್ಧಿ ಬಗ್ಗೆ ಚರ್ಚೆ ಆಗದೇ ಹಣ ಹೊಡೆಯೋದು, ಹನಿಟ್ರ‍್ಯಾಪ್, ಪೋನ್ ಟ್ರ‍್ಯಾಪ್ ಬಗ್ಗೆ ಚರ್ಚೆ ಆಗುತ್ತಿದೆ. ಇಲ್ಲಿಯ ತನಕ ಸರ್ಕಾರ ಇರಲೇ ಬಾರದಿತ್ತು. ಹನಿಟ್ರ‍್ಯಾಪ್‌ನಲ್ಲಿ ಬಿಜೆಪಿಯ (BJP) ಯಾವ ನಾಯಕರೂ ಇಲ್ಲ. ಇದ್ದಿದ್ದರೇ ಸರ್ಕಾರ ಇಷ್ಟೊತ್ತಿಗೆ ತನಿಖೆಗೆ ಮುಂದಾಗುತ್ತಿತ್ತು ಎಂದರು. ಇದನ್ನೂ ಓದಿ: ಹಿಂದೂಗಳು ಸುರಕ್ಷಿತವಾಗಿದ್ದರೆ, ಮುಸ್ಲೀಮರೂ ಸುರಕ್ಷಿತ – ಯೋಗಿ ಆದಿತ್ಯನಾಥ್
ಈಗ ಕಾಂಗ್ರೆಸ್ ನಾಯಕರೇ ಕಾಂಗ್ರೆಸ್‌ನವರ ಹನಿಟ್ರ‍್ಯಾಪ್ (Honey Trap) ಮಾಡುತ್ತಿದ್ದಾರೆ. ತಮ್ಮ ವಿರುದ್ಧ ಮಾತನಾಡುವವರ ವಿರುದ್ಧ ಹನಿಟ್ರ‍್ಯಾಪ್ ಮಾಡುವ ಕೆಲಸ ಆಗುತ್ತಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಮಾತೇ ಆಡುತ್ತಿಲ್ಲ. ತನಿಖೆ ಮಾಡುತ್ತೇವೆ ಅನ್ನೋದು ಬಿಟ್ಟರೆ ಇನ್ನೇನು ಹೇಳಿಲ್ಲ. ಸಿಎಂ ಸಿದ್ದರಾಮಯ್ಯರದ್ದೂ ಹನಿಟ್ರ‍್ಯಾಪ್ ಆಗಿರುವ ಅನುಮಾನ ಇದೆ. ತನಿಖೆ ಆದರೆ ಇವರದ್ದೂ ಎಲ್ಲಿ ಆಚೆ ಬರುತ್ತೋ ಎಂಬ ಭಯ. ಅದಕ್ಕಾಗಿ ಸಿಎಂ ಈ ಬಗ್ಗೆ ತನಿಖೆಗೆ ಸೂಚಿಸುತ್ತಿಲ್ಲ ಎಂದು ಆರೋಪಿಸಿದರು. ಇದನ್ನೂ ಓದಿ: ಹನಿಟ್ರ್ಯಾಪ್ ಪ್ರಕರಣ ತನಿಖೆಗೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿದ ಸುಪ್ರೀಂ
ದಲಿತರ ಹಣವನ್ನ ಸರ್ಕಾರ ತಿಂದು ಹಾಕುತ್ತಿದೆ. ದಲಿತರಿಗೆ ಸರ್ಕಾರ ಅನ್ಯಾಯ ಮಾಡುತ್ತಿದ್ದರೂ ಕಾಂಗ್ರೆಸ್ ದಲಿತ ಸಚಿವರು, ಶಾಸಕರು ಬಾಯಿ ಬಿಡುತ್ತಿಲ್ಲ. ಇಂತಹ ಗುಲಾಮಗಿರಿಯನ್ನ ನಾನು ಎಲ್ಲಿಯೂ ನೋಡಿಲ್ಲ. ದಲಿತರ ಹಣ, ದಲಿತರಿಗೆ ಮೀಸಲಾಗಿ ಇಡಬೇಕು. ಗ್ಯಾರಂಟಿಗಾಗಿ ದಲಿತರ ಹಣ ಬಳಸಿಕೊಳ್ಳಲಾಗಿದೆ. ಅಲ್ಲದೇ ಧರ್ಮಾಧಾರಿತ ಮೀಸಲಾತಿ ಸಂವಿಧಾನ ವಿರೋಧಿ. ಡಿಸಿಎಂ ಡಿಕೆಶಿ ಸಂವಿಧಾನ ಬದಲಾವಣೆ ಮಾಡುತ್ತೇವೆ ಅಂದಿದ್ದಾರೆ. ಸಂವಿಧಾನ ಬದಲಿಸಿ ಧರ್ಮಾಧಾರಿತ ಮೀಸಲಾತಿ ಕೊಡುತ್ತೇವೆ ಎನ್ನುತ್ತಾರೆ. ಅಂಬೇಡ್ಕರ್ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು ಇದನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಡಿಸಿಎಂ ಆಗಿ ಮುಂದುವರೆಯುವ ನೈತಿಕತೆ ಡಿಕೆಶಿಗೆ ಇಲ್ಲ. ಸಿಎಂ ಸಿದ್ದರಾಮಯ್ಯ ಕೂಡಲೇ ಡಿಕೆಶಿಯನ್ನ (DK Shivakumar) ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಕಿಂಗ್ಸ್ ಗೆಲುವಿಗೆ ಕನ್ನಡಿಗನ ಕಾಣಿಕೆ – ವೈಶಾಖ್ ವಿಜಯ್ ಯಾರು?
ಸಂವಿಧಾನ ಬದಲಾವಣೆ ಬಗ್ಗೆ ಡಿಕೆಶಿ ಮಾತನಾಡಿದರೂ ದಲಿತ ಸಂಘಟನೆಗಳು ಡಿಕೆಶಿ ವಿರುದ್ಧ ಮಾತನಾಡುತ್ತಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ದಲಿತರಿಗೆ ಭಯ ಬಂದುಬಿಟ್ಟಿದೆ. ಕಾಂಗ್ರೆಸ್ ಏನೇ ಮಾತನಾಡಿದರೂ ಸುಮ್ಮನಿರುತ್ತಾರೆ. ಕಾಂಗ್ರೆಸ್ ಸುಡುವ ಮನೆ, ಇದರಲ್ಲಿ ಭವಿಷ್ಯ ಇಲ್ಲ ಅಂತ ಅಂಬೇಡ್ಕರ್ ಹೇಳಿದ್ದರು. ದಲಿತರು ಹೆದರಿಕೊಂಡು ಬದುಕುತ್ತಿದ್ದಾರೆ. ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಯಾರೇ ಮಾತನಾಡಿದರೂ ಧೈರ್ಯವಾಗಿ ವಿರೋಧಿಸಿ. ಯಾವುದೇ ಪಕ್ಷ ಆದರೂ ಸರಿಯೇ ವಿರೋಧಿಸಿ ಎಂದು ಮನವಿ ಮಾಡಿದರು. ಇದನ್ನೂ ಓದಿ: Bengaluru | ಪತ್ನಿಯ ಶೀಲ ಶಂಕಿಸಿ ಕತ್ತು ಹಿಸುಕಿ ಕೊಲೆ – ಪೊಲೀಸರ ಮುಂದೆ ಶರಣಾದ ಪತಿ
ಡಿಕೆಶಿ ರಾಜಕೀಯ ನಿವೃತ್ತಿ ಪಡೆಯೋದನ್ನ ಮಾಡಿ ತೋರಿಸಬೇಕು. ತಿರುಚೋದಕ್ಕೆ ಅದೇನು ಡ್ಯಾಂ ನೀರಲ್ಲ. ನೀವು ಒಂದು ಮಾಧ್ಯಮದಲ್ಲಿ ಕೂತು ಮಾತನಾಡಿದ್ದೀರಿ. ಇಡೀ ದೇಶವೇ ನಿಮ್ಮ ಸಂದರ್ಶನ ನೋಡಿದೆ. ನಾವೇನು ನಿಮ್ಮ ನಾಲಿಗೆಗೆ ಹಗ್ಗಕಟ್ಟಿ ತಿರುಚಿದ್ದೇವಾ? ಡಿಕೆಶಿ ಮುಂದೆ ಸಿಎಂ ಆಗುವ ಅವಕಾಶ ಹೊಂದಿರುವವರು. ಆದರೆ ಇವರ ಮಾತುಗಳನ್ನ ಕೇಳಿದರೆ ಇವರು ಸಿಎಂ ಆಗಬಾರದು. ಅವರು ವಿಚಲಿತರಾಗಿ ಇಂತಹ ಮಾತುಗಳನ್ನ ಆಡುತ್ತಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಮಣ್ಣು ತುಂಬಿದ ಟ್ರ್ಯಾಕ್ಟರ್ ಹರಿದು 5ರ ಮಗು ಸಾವು
ಬೆಂಗಳೂರು: ಗ್ಯಾರಂಟಿ ಯೋಜನೆ (Guarantee Scheme) ಕೊಡಲು ಆಗದ ಕಾಂಗ್ರೆಸ್ (Congress) ಸರ್ಕಾರ ಯೂಟರ್ನ್ ಸರ್ಕಾರ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ವಾಗ್ದಾಳಿ ನಡೆಸಿದ್ದಾರೆ.
ಶಕ್ತಿ ಯೋಜನೆ (Shakti Scheme) ಪರಿಷ್ಕರಣೆ ಬಗ್ಗೆ ಡಿಸಿಎಂ ಡಿಕೆಶಿವಕುಮಾರ್ (DK Shivakumar) ಹೇಳಿಕೆಗೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಈ ಸರ್ಕಾರಕ್ಕೆ ಉಳಿಸಿಕೊಳ್ಳಲು ಆಗುತ್ತಿಲ್ಲ. ಈ ಸರ್ಕಾರ ಯೂಟರ್ನ್ ಸರ್ಕಾರ. ನಮ್ಮನ್ನು ಹಿಟ್ ಆ್ಯಂಡ್ ರನ್ ಎನ್ನುತ್ತಾರೆ. ನೀವು ಯೂಟರ್ನ್ ಸರ್ಕಾರ. ಡಿಕೆಶಿ ಇದರ ಬಗ್ಗೆ ಶಕ್ತಿ ಯೋಜನೆ ಪರಿಷ್ಕರಣೆ ಮಾಡೋ ಬಗ್ಗೆ ಹೇಳುತ್ತಾರೆ. ರಾಮಲಿಂಗಾರೆಡ್ಡಿ ಇದರ ಬಗ್ಗೆ ಹೇಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಒಳಮೀಸಲಾತಿಗೆ ಆಯೋಗ ರಚನೆ, ವಿಳಂಬ ನೀತಿ ಅಲ್ಲ: ಸಿದ್ದರಾಮಯ್ಯ
ಜನ ಏನು ಹೇಳುತ್ತಾರೋ ನೋಡೋಣ ಎಂದು ಡಿಸಿಎಂ ಪರಿಷ್ಕರಣೆ ಬಗ್ಗೆ ಹೇಳಿದ್ದಾರೆ. ವಿರೋಧ ಬಂದ ಮೇಲೆ ಹಾಗೆಲ್ಲ ಇಲ್ಲ ಅಂತ ಸಿಎಂ ಹೇಳುತ್ತಾರೆ. ಸುಳ್ಳು, ವಂಚನೆ, ಲೂಟಿ ಮಾಡೋದು ಸರ್ಕಾರ ಎಂದು ಜನರಿಗೆ ಗೊತ್ತಿದೆ. ಹಾಗಾಗಿ ಈ ಸರ್ಕಾರ ಯೂಟರ್ನ್ ಸರ್ಕಾರ ಎಂದು ಹರಿಹಾಯ್ದರು. ಇದನ್ನೂ ಓದಿ: ಪಂಚ ಗ್ಯಾರಂಟಿಗಳಿಗೆ ಕರ್ನಾಟಕ ಸರ್ಕಾರವೇ ಮಾದರಿ: ಲಕ್ಷ್ಮಿ ಹೆಬ್ಬಾಳ್ಕರ್