ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕುಟುಂಬದ ವಿರುದ್ಧ ಬಂದಿರುವ ದೂರಿನ ಬಗ್ಗೆ ದಾಖಲೆ ಸಹಿತ ವಿವರವಾದ ಮಾಹಿತಿ ನೀಡುವಂತೆ ರಾಜ್ಯಪಾಲ ಗೆಹ್ಲೋಟ್ (Thawar Chand Gehlot) ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚಿಸಿದ್ದಾರೆ.
ಖರ್ಗೆ ಒಡೆತನದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(KIADB) ಸಿಎ ನಿವೇಶನದ ನೀಡಿದ ಪ್ರಕರಣದ ವಿವರ ಕೊಡಿ ಎಂದು ಆದೇಶಿಸಿದ್ದಾರೆ. ಈ ಮೂಲಕ ರಾಜ್ಯಪಾಲರು ಮತ್ತೊಂದು ದಾಳ ಉರುಳಿಸಿದ್ದಾರೆ.
ಇತ್ತೀಚೆಗಷ್ಟೇ ಕೆಐಎಡಿಬಿ ಸಿಎ ನಿವೇಶನ ಮಾರಾಟ ಪ್ರಕರಣ ಸಂಬಂಧ ಪರಿಷತ್ ಪ್ರತಿ ಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ (Chalavadi Narayanaswamy) ದೂರು ನೀಡಿದ್ದರು. ನಾರಾಯಣಸ್ವಾಮಿ ದೂರಿನ ಹಿನ್ನೆಲೆಯಲ್ಲಿ ಸರ್ಕಾರದಿಂದ ಹಚ್ಚಿನ ವಿವರಣೆ ನೀಡುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತು ಸೇವನೆ ಪ್ರಕರಣ: ವಾರ್ಡನ್ ಅಮಾನತು
ಛಲವಾದಿ ಆರೋಪ ಏನು?
ಬೆಂಗಳೂರಿನ ಏರೋಸ್ಪೇಸ್ ಪಾರ್ಕ್‌ನಲ್ಲಿ 5 ಎಕರೆ ನಾಗರಿಕ ಸೌಕರ್ಯಗಳ ನಿವೇಶನವನ್ನು ಕೆಐಎಡಿಬಿ ಖರ್ಗೆ ಕುಟುಂಬದ ಒಡೆತನದಲ್ಲಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಮಂಜೂರು ಮಾಡಿದೆ. ಮಾರ್ಚ್ 4 ರಂದು ಅರ್ಜಿಗಳ ಪರಿಶೀಲನೆ ನಡೆದಿದ್ದು, ಮಾರ್ಚ್ 5 ರಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ನಿರ್ಣಯ ಕೈಗೊಂಡು ಮಾರ್ಚ್ 6 ರಿಂದ ಹಂಚಿಕೆ ಪತ್ರಗಳನ್ನು ನೀಡಲಾಗಿದೆ. ಇಷ್ಟೊಂದು ಅವಸರದಲ್ಲಿ ಹಂಚಿಕೆ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಖರ್ಗೆ ಕುಟುಂಬಕ್ಕೆ ಸಿಎ ಸೈಟ್ ಹಂಚಿಕೆ ಮತ್ತೊಂದು ಮುಡಾ ಹಗರಣ- ಛಲವಾದಿ ನಾರಾಯಣಸ್ವಾಮಿ
ಟ್ರಸ್ಟ್‌ಗೆ ನೀಡಲಾಗಿರುವ ನಿವೇಶನ ಹಂಚಿಕೆಯಲ್ಲಿ ಹಲವು ಲೋಪಗಳಾಗಿವೆ. ಈ ಅಕ್ರಮದಿಂದ ಸರ್ಕಾರಕ್ಕೆ ಸುಮಾರು ರೂ1,000 ಕೋಟಿ ನಷ್ಟವಾಗಿದೆ. ಅರ್ಜಿ ಸಲ್ಲಿಸಲು ಕೇವಲ 14 ದಿನಗಳ ಕಾಲಾವಕಾಶ ನೀಡಿ ತರಾತುರಿಯಲ್ಲಿ ಪ್ರಕ್ರಿಯೆ ಮುಗಿಸಿರುವುದರಿಂದ ಸಿಎ ನಿವೇಶನಗಳ ಹಂಚಿಕೆಗೆ ಅಧಿಸೂಚನೆ ಹೊರಡಿಸಿರುವ ಬಗ್ಗೆಯೂ ಹಲವರಿಗೆ ತಿಳಿಯದಂತಾಗಿದೆ. ಇದು KIADB ಇತಿಹಾಸದಲ್ಲಿ ನಡೆದಿರುವ ಅತಿದೊಡ್ಡ ಲೋಪ ಎಂದು ಆರೋಪಿಸಿದ್ದರು.
ಬೆಂಗಳೂರು: ವಿಪಕ್ಷ ನಾಯಕನಾಗಿ ನನ್ನ ಸ್ಥಾನದ ಗೌರವ ಉಳಿಸುವ ಕೆಲಸ ಮಾಡುತ್ತೇನೆ. ನೀವು ನಿಮ್ಮ ಸಚಿವ ಸ್ಥಾನಕ್ಕೆ ಅನುಗುಣವಾಗಿ ಮಾತನಾಡಬೇಕಿತ್ತು ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅವರು ಸಚಿವ ಎಂ.ಬಿ ಪಾಟೀಲರಿಗೆ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಜಾತಿಯವ, ನನಗ್ಯಾರೂ ಕೇಳೋರಿಲ್ಲ ಅಂತ ಲಜ್ಜೆಗೆಟ್ಟವ ಎಂದಿದ್ದೀರಲ್ಲವೇ? ನೀವು ಹರಿಶ್ಚಂದ್ರರೇ? ಎಂದು ಎಂ.ಬಿ ಪಾಟೀಲ್ (MB Patil) ಅವರಿಗೆ ಪ್ರಶ್ನಿಸಿದರಲ್ಲದೇ, ಈ ಪ್ರಪಂಚದಲ್ಲಿ ಯಾರೂ ಹರಿಶ್ಚಂದ್ರರಲ್ಲ ಎಂದು ನುಡಿದರು. ಇದನ್ನೂ ಓದಿ: ಛಲವಾದಿ ನಾರಾಯಣಸ್ವಾಮಿ ಒಬ್ಬ ಶೆಡ್ ಗಿರಾಕಿ – ಎಂ.ಬಿ ಪಾಟೀಲ್ ಲೇವಡಿ
302 ಡೆಫಾಡೆಲ್ ಅಪಾರ್ಟ್‍ಮೆಂಟ್ ಯಾರದ್ದು? ನಿಮ್ಮದೇ ಅಲ್ಲವೇ? ಎಂದು ಎಂ.ಬಿ.ಪಾಟೀಲರನ್ನು ಕೇಳಿದ ಅವರು, ನಿಮ್ಮದ್ದಕ್ಕೇ ನೀವು 2 ಸೈಟ್ ಬರೆದುಕೊಂಡಿದ್ದೀರಿ. ಇನ್ನು ಮೂರು ವಿಜಯಪುರದಲ್ಲಿ ಬರೆದುಕೊಂಡಿದ್ದೀರಿ. ಸೋಲಾಪುರ ರಸ್ತೆ, ಕೆಎಚ್‍ಬಿ ಕಾಲೊನಿಯಲ್ಲಿ ಅವು ಇವೆ. ಈಗ ಹೇಳಿ ಲೂಟಿ ಮಾಡುತ್ತಿರುವುದು ನಾನಾ ನೀವಾ? ಅಂತ ಪ್ರಶ್ನೆ ಮಾಡಿದರು.
ಪತ್ರಕರ್ತರನ್ನು ಕೂರಿಸಿ 2 ಗಂಟೆ ಅವರ ತಲೆ ತಿನ್ನಲು ನನ್ನ ಅಪರಾಧವಾದರೂ ಏನು? ನೀವು ನನ್ನ ಬಡತನವನ್ನು ಇಷ್ಟು ಹೀಯಾಳಿಸಿ ಬಿಟ್ಟಿರಲ್ಲವೇ? ಲಜ್ಜೆಗೆಟ್ಟ ವ್ಯಕ್ತಿ ಎಂದಿರಲ್ಲವೇ? ನಾನು ಯಾವುದರಲ್ಲಿ ಲಜ್ಜೆಗೆಟ್ಟವ? ಹೇಳಿ ಎಂದು ಮರುಪ್ರಶ್ನೆ ಮಾಡಿದರು.
ದುಡ್ಡು ಪೂರ್ತಿ ಕಟ್ಟಿದ್ದೇನೆ:
ನಾನು ಮಾಡಿದ ಲೋಪ ಏನು? ಅಪರಾಧವಾದರೂ ಏನು? ಹೇಳಿ ನೋಡೋಣ. ಸೇಲ್ ಡೀಡ್‍ಗೆ ಲೆಟರ್ (Sale Deed Letter) ಬರೆದಿದ್ದಾರೆ ಎಂದಿದ್ದೀರಿ. ಸೇಲ್ ಡೀಡ್‍ಗೆ ಅಲ್ಲದೇ ಇನ್ನೇನಕ್ಕೆ ಲೆಟರ್ ಕೊಡಬೇಕು? ಅದು ನನ್ನ ನಿವೇಶನ. ದುಡ್ಡು ಪೂರ್ತಿ ಕಟ್ಟಿದ್ದೇನೆ. ಶೆಡ್ ಗಿರಾಕಿ ಎಂದಿದ್ದೀರಲ್ಲವೇ? ಶೆಡ್ ಕಟ್ಟಿದೀನಿ. ನ್ಯಾಯವಾಗಿಯೇ ಕಟ್ಟಿದ್ದೇನೆ. ಸಾಕಾಗದಿದ್ದರೆ ನೋಟಿಸ್ ಕೊಡಿ. ಇದುವರೆಗೆ ಸಾಲಗಾರನಲ್ಲದ ನಾನು ಸಾಲ ಮಾಡಿಯಾದರೂ ನಿಮಗೆ ತೃಪ್ತಿ ಆಗುವಂತೆ ಶೆಡ್ ಕಟ್ಟಿಸುವೆ. ನನ್ನ ದುಡಿಮೆಯಲ್ಲಿ ಏನು ಸಾಧ್ಯವೋ ಅದನ್ನು ಮಾಡಿದ್ದೇನೆ. ಕಾನೂನು ಬಿಟ್ಟು ಆಚೆ ಈಚೆ ಹೋಗುವವನಲ್ಲ. ನಾನೇನಾದರೂ ನಿಮ್ಮ ಬಗ್ಗೆ ವಿಷಯ ಹೊರಗಡೆ ತಂದರೆ ನಿಮಗೆ ನಿದ್ದೆ ಬರೋದಿಲ್ಲ ಎಂದು ಎಚ್ಚರಿಕೆ ನೀಡಿದರು.
ಖರ್ಗೆ ಕುಟುಂಬವನ್ನು ರಕ್ಷಣೆ ಮಾಡಿ. ನನಗೇನೂ ತೊಂದರೆ ಇಲ್ಲ. ಅಲ್ಲಿ ಆಗಿರುವುದೇನು ಎಂದು ನನಗೆ ಗೊತ್ತಿದೆ. ಈಗಾಗಲೇ ಅವರು ನಿದ್ದೆ ಬಿಟ್ಟಿದ್ದಾರೆ. ಅವರು ನಿಮ್ಮನ್ನು ಎತ್ತಿಕಟ್ಟಿ ನನ್ನ ಮೇಲೆ ಏನೋ ಮಾಡಿಸಲು ಹೊರಟಿದ್ದಾರೆ. ನಾನು ಯಾರಿಗೂ ಭಯ ಪಡಬೇಕಿಲ್ಲ, ನನ್ನನ್ನು ಏನೂ ಮಾಡಲಾಗೋದಿಲ್ಲ. ನೀವೇನೂ ಮಾಡಲಾಗುವುದಿಲ್ಲ ಎಂದು ತಿರುಗೇಟು ನೀಡಿದರು.
ನೀವು ಇನ್ನೂ ಒಂದು ವರ್ಷ ಹುಡುಕಿದರೂ ನನ್ನ ಒಂದೇ ಒಂದು ತಪ್ಪನ್ನು ತರಲಾಗದು. ಈ ಶೆಡ್ ಖರ್ಗೆ, ದೇಶಪಾಂಡೆಯವರಿಗೂ ಗೊತ್ತಿತ್ತು. ನಾನೇ ಹೇಳಿಕೊಂಡಿದ್ದೆ. ಕಾಂಗ್ರೆಸ್‌ನಲ್ಲಿರುವ ನನಗ್ಯಾಕೆ ಅನ್ಯಾಯ ಮಾಡುತ್ತೀರಿ ಎಂದಿದ್ದೆ. ಕಾಂಗ್ರೆಸ್ಸಿಗರಿಗೆ ನನ್ನ ಬಗ್ಗೆ ಮುಂದೆ ಪ್ರೀತಿ, ಹಿಂದಿನಿಂದ ದ್ವೇಷ ಇದ್ದುದು ಈಗ ಗೊತ್ತಾಗಿದೆ ಎಂದು ವಿಶ್ಲೇಷಿಸಿದರು.
ಸೈಟ್ ಪುಕ್ಕಟೆ ಕೊಟ್ಟದ್ದಲ್ಲ:
ಸಚಿವ ಎಂ.ಬಿ ಪಾಟೀಲ್ ಅವರು 2 ಗಂಟೆಗಳ ಕಾಲ ಪತ್ರಿಕಾಗೋಷ್ಠಿ ನಡೆಸಿ ನಾನು ಏನೋ ಮಾಡಬಾರದ ತಪ್ಪು ಮಾಡಿದ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದರು. ಕೆಐಎಡಿಬಿ ಸೈಟ್ ಮಾಡುವುದು ಯಾಕಾಗಿ? ಅದರಲ್ಲಿ ನಾನು 2006-07ರಲ್ಲಿ ಸೈಟ್ ಪಡೆದುದು ನಿಜ. ಅದೇನೂ ಪುಕ್ಕಟೆ ಕೊಟ್ಟಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಸ್ಪಷ್ಟಪಡಿಸಿದರು.
ಎಲ್ಲರಂತೆ ನಾನು ವೇರ್‍ಹೌಸ್ ಇನ್ನೇನೋ ಉದ್ದೇಶದಿಂದ ನಿವೇಶನ ಪಡೆದಿದ್ದೇನೆ. ನಾವು ಬಡತನದಲ್ಲಿ ಬಂದವರು. ನಮ್ಮಲ್ಲಿ ಹಣ ಇರಲಿಲ್ಲ. ಅದಾದ ನಂತರ ಕಂತು ಕಟ್ಟಲು ಕಷ್ಟವಾದುದೂ ನಿಜ. ನಿಮ್ಮಲ್ಲಿ ನಾನು ಹಣ ಕೊಡಿ; ವಿನಾಯಿತಿ ಕೊಡಿ ಎಂದು ಕೇಳಿದ್ದೇನಾ? ಆದರೆ, ಕಾಂಗ್ರೆಸ್ ಕಾಲದಲ್ಲಿ ನನಗೆ ಅನ್ಯಾಯ ಆಗಿದೆ. ಆಗ ಅದನ್ನು ಕ್ಯಾನ್ಸಲ್ ಮಾಡಿದರು. ನಾನು ಆಗ ಕಾಂಗ್ರೆಸ್ ಪಕ್ಷದಲ್ಲಿದ್ದೆ. ಜನರಲ್ ಸೆಕ್ರೆಟರಿ ಆಗಿದ್ದೆ. ಆದರೂ ನೀವು ನಿವೇಶನ ರದ್ದು ಮಾಡಿದ್ರಿ, ಯಾಕೆ ಮಾಡಿದ್ದೀರಿ ಅಂತ ಹೇಳಿ? ಅದಾದ ಬಳಿಕ ನಾನು ಕೋರ್ಟ್‌ಗೆ ಹೋದೆ. ಇವತ್ತು ಶೆಡ್ ಕಟ್ಟಿದ್ದೇನೆ ಎಂದು ಛಲವಾದಿ ವಿವರಿಸಿದರು.
– ಚಾಣಕ್ಯ ವಿವಿಗೆ 50 ಕೋಟಿಗೆ ಜಮೀನು ನೀಡಿ, 137 ಕೋಟಿ ರೂ. ನಷ್ಟ ಆಗಿದೆ
– ಕೆಐಎಡಿಬಿ ನಷ್ಟದ ಬಗ್ಗೆ ರಾಜ್ಯಪಾಲರಿಗೆ ದೂರು ಏಕಿಲ್ಲ? ಅಂತ ಪ್ರಶ್ನೆ
ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಪುತ್ರ ರಾಹುಲ್ ಖರ್ಗೆ ಅವರ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಏರೋಸ್ಪೇಸ್ ಪಾರ್ಕಿನಲ್ಲಿ 5 ಎಕರೆ ಸಿ.ಎ. ನಿವೇಶನ ಕೊಟ್ಟಿದ್ದಕ್ಕೆ ಎಗರಾಡುತ್ತಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಸತ್ಯ ಹರಿಶ್ಚಂದ್ರರೇನಲ್ಲ. 2006ರಲ್ಲಿ ಮೈಸೂರಿನ ಹೆಬ್ಬಾಳದಲ್ಲಿ 2 ಎಕರೆ ಜಾಗ ಪಡೆದುಕೊಂಡಿರುವ ಅವರು 18 ವರ್ಷಗಳಾದರೂ ಅಲ್ಲಿ ಏನೂ ಮಾಡದೇ ಕಾಟಾಚಾರಕ್ಕೆ ಒಂದು ಶೆಡ್ ಹಾಕಿಕೊಂಡು ಕೂತಿರುವ ಆಸಾಮಿ. ಅವರೊಬ್ಬ ಶೆಡ್ ಗಿರಾಕಿಯೇ ವಿನಾ ರಾಹುಲ್ ಖರ್ಗೆ ಅವರಂತೆ ಉದ್ಯಮಶೀಲರಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (MB Patil) ಆಕ್ರೋಶ ವ್ಯಕ್ತಪಡಿಸಿದರು.
ಚಾಣಕ್ಯ ವಿವಿ ಗೂ ಜಮೀನು ನೀಡಿಲ್ಲವೇ?
* ಚಾಣಕ್ಯ ಯೂನಿವರ್ಸಿಟಿಯ ವಿಚಾರಕ್ಕೆ ಬರೋಣ. ಬಿಜೆಪಿ ಸರಕಾರದಲ್ಲಂತೂ ತರಾತುರಿಯಲ್ಲಿ, ದೇವನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ಇದಕ್ಕೆಂದು 116 ಎಕರೆ ಜಮೀನನ್ನು ಕೊಡಲಾಯಿತು. ಇದರ ಮಾರುಕಟ್ಟೆ ಬೆಲೆ 187 ಕೋಟಿ ರೂ. ಇತ್ತು. ಆದರೆ ಬಿಜೆಪಿ ಸರಕಾರ ಇದಕ್ಕೆ ಕೇವಲ 50 ಕೋಟಿ ರೂ. ನಿಗದಿಪಡಿಸಿತು. ಅಂದರೆ,… pic.twitter.com/fK8DxSY4Ue
ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ 2 ಗಂಟೆ ಕಾಲ ದಾಖಲೆ ಸಮೇತ ಮಾತನಾಡಿದ ಅವರು, `ರಾಹುಲ್ ಖರ್ಗೆ (Rahul Kharge) ಎರಡು ಬಾರಿ ಯುಪಿಎಸ್ಸಿ ಪರೀಕ್ಷೆ ಪಾಸು ಮಾಡಿದ್ದಾರೆ. ಎಂಜಿನಿಯರಿಂಗ್ ಪದವೀಧರರು, ಡಿಆರ್‌ಡಿಓ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಇಂಥ ಅರ್ಹರಿಗೆ ಸಿ.ಎ. ನಿವೇಶನ ಕೊಡದೇ ಬಿಜೆಪಿಯವರಂತೆ ನಿಯಮಗಳನ್ನು ಗಾಳಿಗೆ ತೂರಿ ಯಾರಿಗೆ ಬೇಕೋ ಅವರಿಗೆ ಕೊಡಬೇಕಾಗಿತ್ತೇನು? ನಾರಾಯಣಸ್ವಾಮಿ ಈಗ ತಮಗೆ ಮಂಜೂರಾಗಿರುವ ಕೈಗಾರಿಕಾ ನಿವೇಶನದ ಸಮರ್ಪಕ ಬಳಕೆಗೆ ಮತ್ತೊಮ್ಮೆ 6 ತಿಂಗಳ ಕಾಲಾವಕಾಶ ಪಡೆದುಕೊಂಡಿದ್ದಾರೆ. ಇಲ್ಲೂ ಅವರು ವಿಫಲರಾದರೆ, ನಿಯಮಗಳ ಪ್ರಕಾರ ಆ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮುರುಗೇಶ ನಿರಾಣಿ
* ಬಿಜೆಪಿ ಮಾಜಿ ಸಚಿವ ಮುರುಗೇಶ ನಿರಾಣಿ ಅವರು 2008ರಲ್ಲಿ ಬಂದ ಮೊದಲ ಅವಧಿಯ ಬಿಜೆಪಿ ಸರಕಾರದಲ್ಲಿ ಸ್ವತಃ ಕೈಗಾರಿಕಾ ಸಚಿವರಾಗಿದ್ದರು. ಅವರ ಸಾಹಸವೇನೆಂದರೆ, ಬಾಗಲಕೋಟೆ ನವನಗರದ ಕೈಗಾರಿಕಾ ಪ್ರದೇಶದ, ಅದರಲ್ಲೂ ಅಗ್ರಿಟೆಕ್ ಪಾರ್ಕ್ನ 25 ಎಕರೆ ಜಮೀನನನ್ನು ತಾವೇ ಹಂಚ್ಚಿಕೊಂಡು (12-3-2012), ಅಲ್ಲಿ ತೇಜಸ್ ಇಂಟರ್ ನ್ಯಾಷನಲ್… pic.twitter.com/oDVtsErGsU
ದಲಿತರಾದ ನಾರಾಯಣಸ್ವಾಮಿ ಸ್ವತಃ ತಮ್ಮ ಸಮುದಾಯದ ಹಿರಿಯರೂ ಮುತ್ಸದ್ದಿಗಳೂ ಆದ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ವಿರುದ್ಧ ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ. ಇದು ಬಿಜೆಪಿಯ ಕುತಂತ್ರ. ದಲಿತರು ಪರಸ್ಪರ ಹೊಡೆದಾಡುತ್ತಿದ್ದರೆ ಅವರಿಗೆ ಲಾಭವಿದೆ. ತಮಗೆ ನೀಡಿರುವ ಕೈಗಾರಿಕಾ ನಿವೇಶನದಲ್ಲಿ ನಾರಾಯಣಸ್ವಾಮಿ ಇಷ್ಟು ಹೊತ್ತಿಗೆ ಶೇ.51ರಷ್ಟು ಭೂಮಿಯ ಬಳಕೆ ಮಾಡಿಕೊಳ್ಳಬೇಕಾಗಿತ್ತು. ಆದರೆ ಅವರು ಕೇವಲ ಶೇ.5ರಷ್ಟು ಭೂಮಿಯಲ್ಲಿ ಕಾಟಾಚಾರಕ್ಕೆ ಶೆಡ್ ಹಾಕಿ, `ಬಾಡಿಗೆಗೆ ಇದೆ’ ಎಂದು ಬೋರ್ಡ್ ನೇತು ಹಾಕಿದ್ದಾರೆ. ಇಂಥ ಲಜ್ಜೆಗೆಟ್ಟ ವ್ಯಕ್ತಿ ದೇಶದ ನೇತಾರರಲ್ಲಿ ಒಬ್ಬರಾದ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಮಾತನಾಡುವ ದುಸ್ಸಾಹಸ ಮಾಡುತ್ತಿದ್ದಾರೆ ಎಂದು ಅವರು ಹರಿಹಾಯ್ದರು.
ರಾಹುಲ್ ಖರ್ಗೆ ಅವರಿಗೆ ಸಿ.ಎ ನಿವೇಶನ ಹಂಚಿಕೆಯಲ್ಲಿನ ಪಾರದರ್ಶಕತೆಯೂ ಮತ್ತು ಬಿಜೆಪಿಗರ ಕಾಲದಲ್ಲಿ ನಡೆದ ಅಕ್ರಮಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ವಿವರಣೆ
* ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದವರು ಸಕ್ರಿಯರಾಗಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ದೇವನಹಳ್ಳಿ ಸಮೀಪದ ಏರೋಸ್ಪೇಸ್ ಪಾರ್ಕಿನಲ್ಲಿ 5 ಎಕರೆಯಷ್ಟು… pic.twitter.com/2Xt79DpA9h
ನಾರಾಯಣಸ್ವಾಮಿ 2006ರಲ್ಲಿ `ಬೃಂದಾವನ್ ಸಾಫ್ಟ್ವೇರ್’ (Brindavan Software) ಎನ್ನುವ ಕಂಪನಿ ಶುರು ಮಾಡುವುದಾಗಿ ಭೂಮಿ ಪಡೆದುಕೊಂಡರು. ಆ ಮೇಲೆ ಅಲ್ಲಿ ಅದೇ ಹೆಸರಿನ ಗಾರ್ಮೆಂಟ್ಸ್ ಕಾರ್ಖಾನೆ ಆರಂಭಿಸುತ್ತೇನೆ ಎಂದರು. ಬಳಿಕ ಗೋದಾಮು ಮಾಡುತ್ತೇನೆಂದರು. ಅವರು ಕಾಲಕಾಲಕ್ಕೆ ಬೇರೆಬೇರೆ ಉದ್ದೇಶಕ್ಕೆ ಬದಲಿಸಿಕೊಂಡರೇ ವಿನಾ ಏನನ್ನೂ ದಡ ಮುಟ್ಟಿಸಲಿಲ್ಲ. ಇದಾದ ಮೇಲೆ ಸರ್ಕಾರವು ನಿಯಮದಂತೆ 2016ರ ನ.11ರಂದು ಜಮೀನನ್ನು ವಾಪಸ್ ಪಡೆಯಲು ಆದೇಶಿಸಿತು. ಇದರ ವಿರುದ್ಧ ಹೈಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದ ಈ ವ್ಯಕ್ತಿ ಈಗ ಪುಕ್ಕಟೆ ಪ್ರಚಾರಕ್ಕೆ ಇಳಿದಿದ್ದಾರೆ ಎಂದು ಅವರು ಕಿಡಿ ಕಾರಿದರು.
ನಾರಾಯಣಸ್ವಾಮಿ ರಾಜಕೀಯದಲ್ಲಿ ಮೇಲಕ್ಕೆ ಬರಲು ಖರ್ಗೆಯವರೇ ಕಾರಣ. ಅವರು ರೈಲ್ವೇ ಸಚಿವರಾಗಿದ್ದಾಗ ಈ ವ್ಯಕ್ತಿಯನ್ನು ರೈಲ್ವೆ ಬಳಕೆದಾರರ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿ, ರೈಲ್ವೆ ಭವನದಲ್ಲಿ ಕಚೇರಿ ಕೂಡ ಕೊಟ್ಟಿದ್ದರು. ಆದರೂ ನಾರಾಯಣಸ್ವಾಮಿ ಉಂಡ ಮನೆಗೆ ಎರಡು ಬಗೆಯುತ್ತಿದ್ದಾರೆ. ಹೀಗೆ ಮಾತನಾಡಿದರೆ ಬಿಜೆಪಿಯಲ್ಲಿ ಇನ್ನೂ ಮೇಲೇರಬಹುದು ಎನ್ನುವ ಭ್ರಮೆಯಲ್ಲಿ ಅವರಿರಬಹುದು ಎಂದು ಪಾಟೀಲ್ ಕುಟುಕಿದರು.
ಇವರು ಹೇಳುವ ಹಾಗೆ ಈ ನಿವೇಶಕ್ಕೆ 72 ಅರ್ಜಿ ಬಂದಿರಲಿಲ್ಲ. ಬಂದಿದ್ದು ಕೇವಲ 6 ಅರ್ಜಿ. ಅದರಲ್ಲಿ ಮೂರು ವಸತಿ ಉದ್ದೇಶದ್ದು. ಅಲ್ಲಿ ಈಗಾಗಲೇ ಅಂತಹ ಉದ್ದೇಶಕ್ಕೆ ಕೊಟ್ಟಿದ್ದರಿಂದ ಅವುಗಳನ್ನು ತಿರಸ್ಕರಿಸಲಾಗಿದೆ. ಉಳಿದಂತೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಅರ್ಜಿ ಬಂದಿದ್ದರೂ ಸಮಪರ್ಕ ದಾಖಲೆ ಸಲ್ಲಿಸಿರಲಿಲ್ಲ. ಇನ್ನು ಉಳಿದಿದ್ದು ರಾಹುಲ್ ಮಾತ್ರ. ಇವರು ಎಲ್ಲ ರೀತಿಯಲ್ಲೂ ಸಮರ್ಥರಿದ್ದು, ಸಾಮಾನ್ಯ ವರ್ಗದ ಕೋಟಾದಲ್ಲೂ ಅವರು ಅರ್ಹರಾಗಿದ್ದರು ಎಂದು ತಿರುಗೇಟು ನೀಡಿದರು.
ಆರ್‌ಎಸ್‌ಎಸ್ (RSS) ಅಂಗವಾಗಿರುವ ರಾಷ್ಟ್ರೋತ್ಥಾನ ಪರಿಷತ್ತಿಗೆ ಹೈಟೆಕ್ ಡಿಫೆನ್ಸ್ ಪಾರ್ಕಿನಲ್ಲಿ ವಿವಿಧೋದ್ದೇಶ ವಾಣಿಜ್ಯ ಸಂಕೀರ್ಣಕ್ಕೆಂದು 2013ರಲ್ಲಿ 5 ಎಕರೆ ಕೊಡಲಾಗಿದೆ. ಇದುವರೆಗೂ ಅವರು ಅಲ್ಲಿ ಏನೂ ಮಾಡಿಲ್ಲ. ಕೋವಿಡ್ ನೆಪ ಹೇಳಿಕೊಂಡು ಮತ್ತೆ ಮತ್ತೆ ಕಾಲಾವಕಾಶ ಕೇಳಿಕೊಂಡು ಬಂದಿದ್ದಾರೆ. ಇತ್ತೀಚೆಗೆ 2023ರ ಡಿ.26ರಂದು ಪುನಃ ಎರಡು ವರ್ಷಗಳ ಸಮಯ ತೆಗೆದುಕೊಂಡಿದ್ದಾರೆ. ಈ ಜಮೀನನ್ನು ವಾಪಸ್ ಪಡೆಯಬೇಕೋ ಬೇಡವೋ ಅನ್ನೋದನ್ನ ಲೆಹರ್ ಸಿಂಗ್ ಮತ್ತು ನಾರಾಯಣಸ್ವಾಮಿ ಹೇಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮುರುಗೇಶ ನಿರಾಣಿ ಹಿಂದೆ ಕೈಗಾರಿಕಾ ಸಚಿವರಾಗಿದ್ದಾಗ ಬಾಗಲಕೋಟೆಯ ನವನಗರ ಕೈಗಾರಿಕಾ ಪ್ರದೇಶದಲ್ಲಿ 2012ರ ಮಾರ್ಚ್ 12ರಂದು ತಮಗೆ ತಾವೇ 25 ಎಕರೆ ಕೊಟ್ಟುಕೊಂಡು, ಅಲ್ಲಿ ತೇಜಸ್ ಇಂಟರ್ನ್ಯಾಷನಲ್ ಸ್ಕೂಲ್ ಕಟ್ಟಿದ್ದಾರೆ. ಅದು ಆಗ್ರೋ ಟೆಕ್ ಪಾರ್ಕ್‌ಗೆ ಮೀಸಲಾಗಿದ್ದ ಜಾಗ. ಆಮೇಲೆ ಪುನಃ ಕೈಗಾರಿಕಾ ಸಚಿವರಾದಾಗ ಕೂಡ 2022ರ ಡಿ.19ರಂದು ಅಲ್ಲೇ ಮತ್ತೆ 6.17 ಎಕರೆ ತೆಗೆದುಕೊಂಡು, ತಮಗೆ ತಾವೇ ಅಭಿನಂದನಾ ಪತ್ರ ಬರೆದುಕೊಂಡಿದ್ದಾರೆ. ಇಂಟರ್ನೆಟ್ ಜಾಲಾಡಿದರೇ ಇವರೆಲ್ಲರ ಜಾತಕ ಬಯಲಾಗುತ್ತದೆ ಎಂದು ಅವರು ಅಂಕಿ-ಅಂಶಗಳ ಸಹಿತ ವಿವರಿಸಿದರು.
ಚಾಣಕ್ಯ ವಿಶ್ವವಿದ್ಯಾಲಯದ್ದು (Chanakya University) ಇದೇ ಕತೆಯಾಗಿದೆ. 2025ರ ಜೂನ್ ಒಳಗೆ ಅವರು 116 ಎಕರೆಯಲ್ಲಿ ಕನಿಷ್ಠ ಶೇ.51ರಷ್ಟು ಜಾಗವನ್ನು ಬಳಕೆ ಮಾಡದಿದ್ದರೆ ಉಳಿದ ಜಾಗವನ್ನು ವಾಪಸ್ ತೆಗೆದುಕೊಳ್ಳಲಾಗುವುದು. ಚಾಣಕ್ಯ ವಿವಿಗೂ ಕೇವಲ 50 ಕೋಟಿ ರೂ.ಗೆ ಈ ಜಮೀನು ನೀಡಲಾಯಿತು. ಇದರ ಮಾರುಕಟ್ಟೆ ಬೆಲೆ 187 ಕೋಟಿ ರೂ. ಇತ್ತು. ಆದರೆ ಬಿಜೆಪಿ ಸರಕಾರ ಇದಕ್ಕೆ ಕೇವಲ 50 ಕೋಟಿ ರೂ. ನಿಗದಿಪಡಿಸಿತು. ಇದರಿಂದ ಕೆಐಎಡಿಬಿಗೆ 137 ಕೋಟಿ ರೂ. ನಷ್ಟ ಆಗಿದೆ. ಇದರ ವಿರುದ್ಧ ಏಕೆ ನಾರಾಯಣಸ್ವಾಮಿ ರಾಜ್ಯಪಾಲರಿಗೆ ದೂರು ನೀಡಿಲ್ಲ? ಎಂದು ಸಚಿವರು ಪ್ರಶ್ನಿಸಿದರು.
ಬೆಂಗಳೂರು: ಬಿಜೆಪಿಯವರಿಗೆ ನೈತಿಕತೆ ಇದ್ದರೆ, ಪೋಕ್ಸೋ ಕೇಸ್‌ನಲ್ಲಿರುವ ಪೂಜ್ಯ ಜನನ ತಂದೆಯವರನ್ನು ಶರಣಾಗತಿ ಮಾಡಲಿ. ಕಾಂಗ್ರೆಸ್‌ನವರ ನೈತಿಕತೆ ಪ್ರಶ್ನಿಸುವ ಬಿಜೆಪಿ ನಾಯಕರು ಅಪ್ಪಾಜಿಯವರನ್ನು ಶರಣಾಗತಿ ಮಾಡಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿರುಗೇಟು ನೀಡಿದ್ದಾರೆ.ಇದನ್ನೂ ಓದಿ: ಘಟಪ್ರಭಾ ನದಿ ಪ್ರವಾಹ ಪರಿಹಾರ ಕುರಿತು ಶೀಘ್ರ ಕ್ರಮ: ಸಿಎಂ ಸಿದ್ದರಾಮಯ್ಯ
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಸಿದ್ದಾರ್ಥ ವಿಹಾರ್ ಟ್ರಸ್ಟ್ಗೆ ಕಾನೂನು ಬಾಹಿರವಾಗಿ ಭೂಮಿ ನೀಡಿಲ್ಲ. ನಮಗಾಗಿ ಯಾವುದೇ ನಿಯಮ ಬದಲಾವಣೆ ಮಾಡಿಲ್ಲ. ಕಾನೂನು ಯಾರಾದರೂ ಬದಲಾವಣೆ ಮಾಡಿದ್ದರೆ ದಾಖಲೆ ಬಿಡುಗಡೆ ಮಾಡಲಿ. ನಮ್ಮ ಟ್ರಸ್ಟ್ ಮೇಲೆ ಅವರಿಗೆ ಆಕ್ಷೇಪ ಇಲ್ಲ. ಅವರಿಗೆ ಆಕ್ಷೇಪ ಇರೋದು ಪ್ರಿಯಾಂಕ್ ಖರ್ಗೆ ಮೇಲೆ ಮಾತ್ರ. ಟ್ರಸ್ಟ್ ಚಟುವಟಿಕೆಗಳನ್ನು ಅವರು ಒಪ್ಪುತ್ತಾರೆ. ಆದರೆ ಈಗ ಭೂಮಿ ಪಡೆದ ಪ್ರಕ್ರಿಯೆ ಬಗ್ಗೆ ಈಗ ಅವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ನಾವು ಪಡೆದ ಭೂಮಿಗೆ ಮಾತ್ರ ನಿಯಮಗಳು ಬದಲಾವಣೆ ಆಗಿದೆಯಾ…? ಅಥವಾ ಎಲ್ಲಾ ಪ್ಲಾಟ್‌ಗಳಿಗೆ ಬದಲಾವಣೆ ಮಾಡಲಾಗಿದೆಯಾ..? ಸಮರ್ಪಕವಾಗಿ ದಾಖಲೆ ಕೊಡಲಿ ಎಂದು ಸವಾಲು ಹಾಕಿದ್ದಾರೆ.
ಯಾವ ರಾಜ್ಯದಲ್ಲಿ ಬಿಜೆಪಿ (BJP) ನಾಯಕತ್ವ ವೀಕ್ ಇದೆಯೋ ಅಲ್ಲಿ ರಾಜಭವನ ದುರ್ಬಳಕೆ ಆಗ್ತಿದೆ. ಸರ್ಕಾರಿ ಯಂತ್ರದ ದುರ್ಬಳಕೆ ಆಗುತ್ತಿದೆ. ಪಾದಯಾತ್ರೆ ವಿಫಲ ಆಯ್ತು. ಅದಕ್ಕೆ ಇದೆಲ್ಲಾ ಈಗ ಹೊರಗೆ ಬರ್ತಾ ಇದೆ. ನಾನು ವೈಯಕ್ತಿಕವಾಗಿ ಛಲವಾದಿ ನಾರಾಯಣಸ್ವಾಮಿ (Chalavadi Narayanswamy) ಅವರನ್ನು ಟೀಕೆ ಮಾಡಿಲ್ಲ. ಬಿಜೆಪಿಯವರಿಗೆ ಇಂಗ್ಲಿಷ್ ಬರಲ್ಲ, ಕಾನೂನು ಅರ್ಥ ಆಗಿಲ್ಲ ಎಂದು ಹೇಳಿದ್ದೆ. ವೈಯಕ್ತಿಕವಾಗಿ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್‌ನಲ್ಲಿ ಬೆಳೆದವರು. ಕಾಂಗ್ರೆಸ್ (Congress) ಬಹಳ ಅವಕಾಶ ಕೊಟ್ಟಿತ್ತು. ಈಗ ಅವರು ಬಿಜೆಪಿಗೆ ಹೋಗಿದ್ದಾರೆ. ಅವರಿಗೆ ನಮ್ಮ ಆಸ್ತಿ ಬಗ್ಗೆ ದಾಖಲೆ ಇದ್ದರೆ ಬಹಿರಂಗ ಪಡಿಸಲಿ. ನಾವು ಹೋಗಿ ಕ್ಲೈಮ್ ಮಾಡುತ್ತೇವೆ ಎಂದು ಹೇಳಿದ್ದರು. ನಿಯಮ ಮೀರಿ ಆಸ್ತಿ ಮಾಡಿದ್ದರೆ ಮೋದಿ, ಅಮಿತ್ ಶಾ ಬಿಡ್ತಾ ಇದ್ರಾ…? ಅವರು ದೆಹಲಿಗೆ ಹೋರಾಟ ಮಾಡಿಕೊಂಡು ಹೋಗಲಿ, ಪರವಾಗಿಲ್ಲ ಬಿಡಿ ಎಂದು ವ್ಯಂಗ್ಯವಾಡಿದ್ದಾರೆ.ಇದನ್ನೂ ಓದಿ: ಮದುಮಗನ ಗೆಟಪ್‌ನಲ್ಲಿ ನಾಗಚೈತನ್ಯ- ಸೀಕ್ರೆಟ್ ಆಗಿ ಶೋಭಿತಾ ಜೊತೆ ಮದುವೆಗೆ ರೆಡಿಯಾದ್ರಾ ಸಮಂತಾ ಮಾಜಿ ಪತಿ?
– ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಭೂಮಿ ನೀಡಲಾಗಿದೆ – ಜಾಸ್ತಿ ಮಾತನಾಡಿದ್ರೆ ಕೋರಮಂಗಲ, ಗುಲ್ಬರ್ಗಾದಲ್ಲಿರುವ ಆಸ್ತಿ ವಿವರ ಹೊರಗೆ ಬರುತ್ತೆ – ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು
ಬೆಂಗಳೂರು: ಕೆಐಎಡಿಬಿಯಿಂದ ಸಿಎ ನಿವೇಶನ ಮಾರಾಟ ಪ್ರಕರಣದಲ್ಲಿ ಲೋಪವಾಗಿದೆ. ಒಂದೇ ವಿಳಾಸಕ್ಕೆ ಎರಡು ಮೂರು ಸೈಟು ಕೊಟ್ಟಿದ್ದಾರೆ. ಖರ್ಗೆ ಸ್ವಜನ ಪಕ್ಷಪಾತಕ್ಕೆ ಇದೇ ಸಾಕ್ಷಿ ಎಂದು ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ (BJP) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಖರ್ಗೆಯವರ ಟ್ರಸ್ಟ್‌ಗೆ ಭೂಮಿ ನೀಡುವ ವಿಚಾರದಲ್ಲಿ ಲೋಪ ಆಗಿದೆ. ಭೂಮಿ ಮೀಸಲಿಡುವಾಗ ನಿರ್ದಿಷ್ಟ ಉದ್ದೇಶವನ್ನು ಸ್ಪಷ್ಟಪಡಿಸಿರಲಿಲ್ಲ. ಕೆಐಎಡಿಬಿಯಿಂದ (KIADB) ಭೂಮಿ ಹಂಚಿಕೆಯಾದ ಕ್ರಮ ಸರಿಯಲ್ಲ ಎಂದಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಪ್ರಭಾವ ಬೀರಿ ಇದನ್ನು ಪಡೆದುಕೊಂಡಿದ್ದಾರೆ. ಸೈಟು ಹಂಚಿಕೆ ಪ್ರಕ್ರಿಯೆ ಒಂದೇ ತಿಂಗಳಲ್ಲಿ ಮುಗಿದಿದೆ. ಒಂದೇ ಕುಟುಂಬದ ಐವರಿಗೆ ಸೈಟು ಹಂಚಿಕೆ ಆಗಿದೆ. ಹೀಗಾಗಿ ಅಧಿಕಾರ ದುರ್ಬಳಕೆ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.ಇದನ್ನೂ ಓದಿ: ವಾಲ್ಮೀಕಿ ಹಗರಣ – ನಾಗೇಂದ್ರ ಆಪ್ತರ ಮನೆ ಮೇಲೆ ED ದಾಳಿ
ಈ ವರ್ಷ ಫೆ.5 ರಂದು ಭೂಮಿ ನೀಡಲು ಕೆಐಎಡಿಬಿ ತೀರ್ಮಾನ ಮಾಡಿತ್ತು. ಅದೇ ತಿಂಗಳ 8 ರಂದು ಭೂಮಿ ನೀಡುವ ಪ್ರಕ್ರಿಯೆ ಆರಂಭ ಆಗಿತ್ತು. ಅದಾದ ಬಳಿಕ ಮಾ.5 ರಂದು ಕೈಗಾರಿಕಾ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಭೂಮಿ ನೀಡಲು ನಿರ್ಣಯ ಮಾಡಲಾಗಿತ್ತು. ಮಾ.6 ರಂದು ಭೂಮಿ ಹಂಚಿಕೆಗೆ ಆದೇಶ ನೀಡಲಾಗಿತ್ತು. ಹಂಚಿಕೆ ಮಾಡುವಾಗ ಎಸ್‌ಸಿಗಳಿಗೆ ಕಡಿಮೆ ಭೂಮಿ ನೀಡಲಾಗಿದೆ. ಸಚಿವರು ಸದಸ್ಯರಾಗಿರುವ ಟ್ರಸ್ಟ್‌ಗೆ ಹೆಚ್ಚು ಭೂಮಿ ಕೊಡಲಾಗಿದೆ. ಇಲ್ಲಿ ಅಧಿಕಾರ ದುರ್ಬಳಕೆ ಆಗಿದೆ. ಅದಕ್ಕೆ ಸಚಿವ ಪ್ರಿಯಾಂಕಾ ಖರ್ಗೆ (Priyank Kharge) ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಅಕ್ರಮ ಎಸಗಿದ್ದಕ್ಕೆ ರಾಜ್ಯಪಾಲರನ್ನು ನಾವು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಏರೋಸ್ಪೇಸ್ ಪಾರ್ಕ್‌ನಲ್ಲಿ 71 ಜನ ದಲಿತ ಉದ್ಯಮಿಗಳಿಗೆ 2022 ರಲ್ಲಿ ಭೂಮಿ ಹಂಚಿಕೆಯಾಗಿದೆ. ಎರಡೂವರೆ ವರ್ಷ ಕಳೆದರೂ ಅವರಿಗೆ ಭೂಮಿ ಕೊಟ್ಟಿಲ್ಲ. ಸಚಿವ ಪ್ರಿಯಾಂಕಾ ಖರ್ಗೆಯವರು ಸದಸ್ಯರಾಗಿರುವ ಟ್ರಸ್ಟ್‌ಗೆ ಭೂಮಿ ಶೀಘ್ರವಾಗಿ ಪಡೆದಿದ್ದಾರೆ. ಆದರೆ ದಲಿತ ಉದ್ಯಮಿಗಳಿಗೆ ಹಂಚಿಕೆಯಾದ ಭೂಮಿ ಕೊಡಲು ಹಿಂದೇಟು ಹಾಕುತ್ತಾರೆ. ಇವರಿಗೊಂದು ನ್ಯಾಯ? ಅವರಿಗೊಂದು ನ್ಯಾಯನಾ? ಕೆಐಎಡಿಬಿಯಿಂದ ಭೂಮಿ ಹಂಚಿಕೆಯಾದ ಕ್ರಮ ಸರಿಯಲ್ಲ. ಇದರಿಂದ ರಾಜ್ಯ ಸರ್ಕಾರಕ್ಕೆ 500 ಕೋಟಿ ರೂ. ನಷ್ಟ ಆಗಿದೆ. ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಭೂಮಿ ನೀಡಲಾಗಿದೆ. ಇವರೂ ಲೂಟಿ ಮಾಡುವ ದುರುದ್ದೇಶವನ್ನು ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಜೊತೆಗೆ ಎಸ್‌ಆರ್ ಬೆಲೆ ಕಟ್ಟುವಿಕೆಯಲ್ಲೂ ಸರ್ಕಾರಕ್ಕೆ ವಂಚನೆ ಆಗಿದೆ. ಹೀಗಾಗಿ ಈ ಸೈಟು ಹಂಚಿಕೆ ಅಕ್ರಮದ ರೂಪ ಪಡೆದಿದೆ. ಈ ಕಾರಣದಿಂದ ಈ ಸೈಟು ಹಂಚಿಕೆ ನೋಟಿಫಿಕೇಷನ್ ವಾಪಾಸ್ ಪಡೆಯಬೇಕು. ಮರು ಹರಾಜು ಪ್ರಕ್ರಿಯೆ ನಡೆಸಬೇಕು ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಜನ್‌ಧನ್ ಯೋಜನೆಯಿಂದ ಕೋಟ್ಯಂತರ ಜನರಿಗೆ ಅನುಕೂಲ – 10ರ ಸಂಭ್ರಮಕ್ಕೆ ಮೋದಿ ಹರ್ಷ
ಪ್ರಿಯಾಂಕ್ ಖರ್ಗೆ ನನ್ನ ಸಹೋದರ. ಅವರು ಕೆಲವೊಮ್ಮೆ ನನ್ನ ಬಗ್ಗೆ ಹಗುರವಾಗಿ ಮಾತಾಡಿದ್ದಾರೆ. ನನ್ನ ಬಗ್ಗೆ ಮಾತಾಡಲು ಬಿಜೆಪಿ ನಾರಾಯಣ ಸ್ವಾಮಿ ಅವರನ್ನು ನೇಮಿಸಿದ್ದಾರೆ ಎಂದಿದ್ದಾರೆ. ನೀವು ತಪ್ಪು ಮಾಡಿದ್ದೀರಿ, ಹಾಗಾಗಿ ನಾನು ಮಾತಾಡುತ್ತೇನೆ. ನನಗೆ ಇಂಗ್ಲೀಷ್ ಬರಲ್ಲ ಎಂದು ಹೇಳಿದ್ದೀರಿ. ಹೌದು ನನಗೆ ಇಂಗ್ಲಿಷ್ ಬರಲ್ಲ ನಿಜ. ನಮ್ಮಪ್ಪ ಕೂಲಿ ಮಾಡ್ತಿದ್ದವರು, ಇಂಗ್ಲಿಷ್ ಸ್ವಲ್ಪ ಕಲಿತಿದ್ದೇನೆ. ಇಂಗ್ಲಿಷ್ ಸಂವಹನಕ್ಕೆ ಅಷ್ಟೇ ಇರುವ ಭಾಷೆ. ನೀವು ಕಾನ್ವೆಂಟ್‌ನಲ್ಲಿ ಓದಿದವರು, ಇಂಗ್ಲಿಷ್ ಕಲಿತಿದ್ದೀರಿ. ಆದ್ರೆ ನೀವು ಎಷ್ಟು ಓದಿದ್ದೀರಿ, ಎಲ್ಲಿ ಫೇಲ್ ಆಗಿದ್ದೀರಿ ಅನ್ನೋದು ನಮಗೆ ಗೊತ್ತಿದೆ. ನಾನು ವಾಟಾಳ್ ನಾಗರಾಜ್, ನಾರಾಯಣಗೌಡ ಜೊತೆ ಕನ್ನಡಪರ ಹೋರಾಟ ಮಾಡಿಕೊಂಡು ಬಂದವನು. ನನ್ನ ವಿರುದ್ಧ ವೈಯಕ್ತಿಕ ದಾಳಿ ಮಾಡಿದ್ರೆ, ಸರಿ ಇರಲ್ಲ. ಮೈಂಡ್ ಯುವರ್ ಲಾಂಗ್ವೇಜ್ ಮಿಸ್ಟರ್ ಪ್ರಿಯಾಂಕ್ ಖರ್ಗೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನನಗೂ ನಮ್ಮಪ್ಪನ ಹೆಸರು ನನ್ನ ಮುಂದಿದೆ ಅದನ್ನು ಬಳಸಿಕೊಂಡಿಲ್ಲ. ಆದ್ರೆ ನಿಮ್ಮ ಹೆಸರಿನ ಮುಂದೆ, ಮಲ್ಲಿಕಾರ್ಜುನ ಖರ್ಗೆ ಅಂತಿದೆ ಅದನ್ನು ಬಳಸಿಕೊಂಡು ಬೆಳೆದಿದ್ದೀರಿ. ನೀನು ಯಾವ ಹೋರಾಟ ಮಾಡಿ ಬೆಳೆದಿದ್ದೀಯಪ್ಪಾ? ನಾನು ಗೋಣೀಚೀಲ ಹೊದ್ದು ಮಲಗಿದವನು. ನೀನು ಯಾವ ಗೋಣೀಚೀಲ ಹೊದ್ದು ಮಲಗಿದ್ದೀಯಾ? ನಿನ್ನ ಹಾಗೆ ಗೋಲ್ಡ್ ಸ್ಪೂನ್ ಇಟ್ಟುಕೊಂಡು ಹುಟ್ಟಿಲ್ಲ. ನಿಮ್ಮ ಅಣ್ಣ ರಾಹುಲ್ ಖರ್ಗೆ ನಿಮ್ಮ ಹಾಗೆ ಅಲ್ಲ. ಅವರು ಚೆನ್ನಾಗಿ ಓದಿಕೊಂಡವರು, ಅವರ ಬಗ್ಗೆ ನಾನು ಮಾತಾಡಲ್ಲ. ಅವರು ಐಆರ್‌ಎಸ್ (IRS) ಮಾಡಿದವರು, ರಾಜಕಾರಣಕ್ಕೆ ಬರಲಿಲ್ಲ. ಪರ್ಸನಲ್ ಅಟ್ಯಾಕ್ ಮಾಡಿದ್ರೆ ನಾನು ಸುಮ್ಮನೇ ಕೂರಲ್ಲ. ದಾಳಿ ಮಾಡುತ್ತಾ ಹೋದ್ರೆ ಕೋರಮಂಗಲದಲ್ಲಿ ನಿಮ್ಮ ಆಸ್ತಿ ಎಲ್ಲಿದೆ? ಬೆಂಗಳೂರಿನ ಬೇರೆ ಕಡೆ ಎಲ್ಲಿದೆ, ಗುಲ್ಬರ್ಗಾದಲ್ಲಿ ಎಲ್ಲೆಲ್ಲಿದೆ ಎಲ್ಲವೂ ಹೊರಗೆ ಬರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: ‘ಕೂಲಿ’ ಚಿತ್ರಕ್ಕಾಗಿ 30 ವರ್ಷಗಳ ನಂತರ ಒಂದಾದ ರಜನಿಕಾಂತ್, ಆಮೀರ್ ಖಾನ್
5-2-2024 ರಂದು ತೀರ್ಮಾನ ಮಾಡಿ ಫೆ. 8ರಿಂದ ವೆಬ್ ಸೈಟಿನಲ್ಲಿ ಅರ್ಜಿ ಲಭಿಸುತ್ತದೆ, ಅದನ್ನು ಡೌನ್‍ಲೋಡ್ ಮಾಡಿ ಫೆ. 23ರೊಳಗೆ ಅರ್ಜಿಗಳನ್ನು ಹಾಕಲು ತಿಳಿಸಿದ್ದರು. ಒಂದು ತಿಂಗಳ ಬದಲಾಗಿ ಕೇವಲ 14 ದಿನಗಳನ್ನು ಕೊಟ್ಟಿದ್ದರು. ಇದು ಯಾರಿಗೂ ಗೊತ್ತಾಗಬಾರದೆಂಬ ಉದ್ದೇಶದಿಂದಲೇ ಕೇವಲ 14 ದಿನಗಳನ್ನು ನೀಡಿದ್ದರು ಎಂದು ಆರೋಪಿಸಿದ್ದಾರೆ.
ಮಾ.4 ರಂದು ಸಿಂಗಲ್ ವಿಂಡೋ ಏಜೆನ್ಸಿಯಲ್ಲಿ ಪರಿಶೀಲನೆ ಮಾಡಲಾಗಿದೆ. ಒಂದೇ ದಿನ ಇಷ್ಟೂ ಅರ್ಜಿಗಳನ್ನು ಪರಿಶೀಲಿಸಿ, ಮರುದಿನವೇ ಸಂಜೆ 5 ಗಂಟೆಗೆ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರ ಉಪಸ್ಥಿತಿಯಲ್ಲಿ ಬೆಂಗಳೂರಿನ ಕರ್ನಾಟಕ ಉದ್ಯೋಗ ಮಿತ್ರದಲ್ಲಿ ಸಭೆ ಸೇರಿ ತೀರ್ಮಾನ ಮಾಡಿದ್ದಾರೆ. 6 ರಿಂದ ಮಂಜೂರಾತಿ ಪತ್ರ ನೀಡಲಾಗಿದೆ ಎಂದು ವಿವರಣೆ ನೀಡಿದ್ದಾರೆ.
ಅತ್ಯಂತ ದೊಡ್ಡ ಪ್ರಮಾದ…
12 ಜಿಲ್ಲೆಗಳಲ್ಲಿ 193 ಸಿ.ಎ ಸೈಟ್‍ಗಳಿವೆ. ಒಟ್ಟು 377.69 ಎಕರೆ ಇದ್ದು, 283 ಅರ್ಜಿಗಳಿದ್ದವು. 30 ದಿನಗಳ ಕಾಲ ನೀಡಿದ್ದರೆ ಇನ್ನಷ್ಟು ಅರ್ಜಿ ಬರುತ್ತಿತ್ತು. ಅಧಿಸೂಚನೆ ಹೊರಡಿಸಿದ್ದೇ ಜನರಿಗೆ ಗೊತ್ತಿಲ್ಲ. 14 ದಿನಗಳಲ್ಲಿ ಅರ್ಜಿ ಸ್ವೀಕರಿಸಿ, 15ನೇ ದಿನ ಪರಿಶೀಲಿಸಿ, 16ನೇ ದಿನವೇ ಮಂಜೂರಾತಿ ಆಗಿದೆ. ಇದು ಕೆಐಎಡಿಬಿ ಚರಿತ್ರೆಯ ಬಹು ದೊಡ್ಡ ಪ್ರಮಾದ ಎಂದು ಟೀಕಿಸಿದ್ದಾರೆ.
ಬಿಡದಿಯಲ್ಲಿ ಸುನಿತಾ ರಾಜಶೇಖರ್ ಅವರಿಗೆ ಅಪಾರ್ಟ್‍ಮೆಂಟ್ ನಿರ್ಮಿಸಲು ಜಾಗ ಕೊಟ್ಟಿದ್ದು, ಇದು ಸೌಲಭ್ಯದಡಿ ಬರುವುದೇ? ಅಥವಾ ವಾಣಿಜ್ಯ ಉದ್ದೇಶದ್ದೇ? ಎಂದರು. ಹಾರೋಹಳ್ಳಿಯಲ್ಲಿ ಸ್ಕಿಲ್ ಡೆವಲಪ್‍ಮೆಂಟ್ ಸಂಸ್ಥೆಗೆ 2.5 ಎಕರೆ ಕೊಟ್ಟಿದ್ದಾರೆ. ಎಸ್‍ಸಿಗಳಿಗೆ ಕೇವಲ ಕಾಲು ಎಕರೆ ಜಾಗ ಕೊಟ್ಟಿದ್ದಾರೆ. 5 ಎಕರೆ, ಆರು ಎಕರೆ ಯಾರಿಗೂ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಅಕ್ರಮದ ಪರ ನಿಂತಿರುವ ಸ್ವಾಮೀಜಿಗಳು, ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಅಹಿಂದಾ ಸಮುದಾಯಗಳ ಪ್ರತಿಭಟನೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ವಿರೋಧ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಅವರು ಜಾತ್ಯಾತೀತ ಅಂತಾರೆ. ಅವರು ಎಲ್ಲಿ ಜಾತಿ ಉಳಿಸಿಕೊಂಡಿದ್ದಾರೆ ಅವರೇ ಹೇಳಬೇಕು. ಕಾವಿಧಾರಿಗಳನ್ನು ಕಂಡ್ರೆ ಆಗ್ತಿರಲಿಲ್ಲ. ಈಗ ತಮ್ಮ ಸಂಕಷ್ಟಕ್ಕೆ ಕಾವಿಧಾರಿಗಳನ್ನೂ ಬಳಸಿಕೊಳ್ತಿದ್ದಾರೆ. ನಮಗೆ ಗುರುಗಳು, ಮಠಾಧೀಶರ ಮೇಲೆ ಗೌರವ ಇದೆ. ಅವರು ರಾಜಕಾರಣ ತೊಳೆಯುವ ಕೆಲಸ ಮಾಡಬೇಕೇ ಹೊರತು ಭ್ರಷ್ಟಾಚಾರ ಮಾಡಿದವರ ಬೆಂಬಲಿಸುವುದು ಎಷ್ಟು ಸರಿ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ನೀರಿನಲ್ಲಿ ಅಮಲು ಪದಾರ್ಥ ಸೇರಿಸಿ ಆಟೋ ಚಾಲಕನಿಂದ ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ರೇಪ್
ಈ ಸರ್ಕಾರ ಮುಡಾದಲ್ಲಿ ಭ್ರಷ್ಟಾಚಾರ ಮಾಡಿದೆ. ವಾಲ್ಮೀಕಿ ನಿಗಮದಲ್ಲಿ ಕೂಡ ಭ್ರಷ್ಟಾಚಾರ ಆಗಿ, ತನಿಖೆ ನಡೆಯುತ್ತಿದೆ. ದಲಿತ ಸಮುದಾಯಕ್ಕೆ ಅನ್ಯಾಯ ಆದಾಗ ಜನರ ಬೆಂಬಲಕ್ಕೆ ನಿಲ್ಲಬೇಕು. ಅದು ಬಿಟ್ಟು ದಲಿತ ವರ್ಗಕ್ಕೆ ಅನ್ಯಾಯ ಮಾಡಿದವರ ಸಪೋರ್ಟ್‌ಗೆ ನಿಲ್ಲೋದು ಎಷ್ಟು ಸರಿ. ಅಂಬೇಡ್ಕರ್ ಹೆಸರೇಳಿ ದಲಿತರಿಗೆ ಅನ್ಯಾಯ ಮಾಡಿದೆ. ಕಾಂಗ್ರೆಸ್ ಸರ್ಕಾರ ದಲಿತರ ಸಮಾಧಿ ಕಟ್ಟುತ್ತಿದೆ. ಸ್ವಾಮೀಜಿಗಳು ದಲಿತರಿಗೆ ಅನ್ಯಾಯ ಮಾಡಿದ್ದೀರಿ ಅಂತ ಸರ್ಕಾರಕ್ಕೆ ಪ್ರಶ್ನೆ ಮಾಡಬೇಕು. ಆದರೆ ಸರ್ಕಾರದ ಪರ ನಿಂತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಅಹಿಂದಾ ಸಂಘಟನೆಗಳಿಂದ ಸಿಎಂ ಪರ ಹೋರಾಟಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಲವು ದಲಿತ ಸಂಘಟನೆಗಳು ಸಿಎಂ ಪರವಾಗಿ ರಾಜಭವನ ಚಲೋ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ನಾಳೆ ದಲಿತ ಸಂಘಟನೆಗಳು ಸಭೆ ಕರೆದಿವೆ. ಕೆಲ ದಲಿತ ಸಂಘಟನೆಗಳು ಚಾಟಿ ಬೀಸಿವೆ. ಅಂಬೇಡ್ಕರ್ ಹೆಸರೇಳಿಕೊಂಡು ಹೋರಾಟ ಮಾಡುತ್ತಿದ್ದಾರೆ. ದಲಿತರ ಪರವಾಗಿ ನಿಲ್ಲಬೇಕೇ ಹೊರತು. ದಲಿತರಿಗೆ ಅನ್ಯಾಯ ಮಾಡಿದವರ ಪರ ನಿಲ್ಲಬಾರದು. ಅವರ ಬೆಂಬಲಕ್ಕೆ ನಿಂತಿರೋದು ಯಾಕೆ? ಎಂದು ಪ್ರಶ್ನಿಸಿದ್ದಾರೆ.ಇದನ್ನೂ ಓದಿ: ತಮಿಳಿನತ್ತ ನಟಿ- ಶಿವಕಾರ್ತಿಕೇಯನ್‌ಗೆ ಶ್ರೀಲೀಲಾ ಜೋಡಿ
ಸರ್ಕಾರದ ಪರವಾಗಿ ನಿಂತರೆ ಆಮಿಷಕ್ಕೆ ನಿಂತಿದ್ದೀರಿ ಅಂತಾಗುತ್ತದೆ. ದಲಿತರ ಪರವಾಗಿ ನಿಲ್ಲೋದು ಬಿಟ್ಟು, ಸರ್ಕಾರದ ಪರ ನಿಲ್ಲೋದು ಯಾಕೆ? ಸಿಎಂ ಪರ ಆಗಲಿ, ಯಾರ ಪರ ಯಾರಾದ್ರೂ ನಿಲ್ಲಲಿ. ಸರ್ಕಾರ ದಲಿತರಿಗೆ ಸವಲತ್ತು ನೀಡದೇ ಇದ್ದಾಗ ಹೋರಾಟ ಮಾಡಲಿ. 24 ಸಾವಿರ ಕೋಟಿ ರೂ. 187 ಕೋಟಿ ಖಾತೆಗಳಿಗೆ ವರ್ಗಾವಣೆ ಆಗಿದೆ. ಅದನ್ನು ವಿರೋಧ ಮಾಡುತ್ತಿಲ್ಲ. ಹೊಟ್ಟೆಪಾಡಿಗಾಗಿ ಕೆಲ ಸಂಘಟನೆಗಳು ಅವರ ಪರ ನಿಲ್ಲುತ್ತಿದ್ದಾರೆ ಅನ್ನೋದು ಸ್ಪಷ್ಟವಾಗಲಿದೆ ಎಂದು ಕಿಡಿಕಾರಿದ್ದಾರೆ.
– ದಲಿತರು ಅಂದ್ರೆ ಒಂದು ಕುಟುಂಬ ಅಲ್ಲ – ಕಾಂಗ್ರೆಸ್ ಸರ್ಕಾರ ದಲಿತರ ಸಮಾಧಿ ಕಟ್ಟುತ್ತಿದೆ
ಬೆಂಗಳೂರು: ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್‌ಗೆ ಕೆಐಎಡಿಬಿಯಿಂದ ಐದು ಎಕರೆ ಜಾಗ ಪಡೆದಿರುವ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆರೋಪಿಸಿದ್ದಾರೆ.
ಸಚಿವರಾಗಿ ಪ್ರಿಯಾಂಕ್ ಖರ್ಗೆ (Priyank Kharge) ಅವರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದ್ದಾರೆ. ಜೊತೆಗೆ ಜಿಂದಾಲ್ ಕಂಪನಿಗೆ ಸಚಿವ ಸಂಪುಟದ ನಿರ್ಧಾರದಂತೆ ಜಮೀನು ಹಸ್ತಾಂತರ ಪ್ರಕ್ರಿಯೆ ಸ್ಥಗಿತಗೊಳಿಸಿ ತನಿಖೆ ಮಾಡಿಸಬೇಕು ಮತ್ತು ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಕೆಐಎಡಿಬಿಯಿಂದ ಕೊಟ್ಟಿರುವ ರೀತಿಯಲ್ಲಿ ಬೇರೆ ಸಂಸ್ಥೆಗಳಿಗೂ ನೀಡಿರುವ ಎಲ್ಲಾ ಜಮೀನುಗಳ ತನಿಖೆ ಮಾಡಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.ಇದನ್ನೂ ಓದಿ: 3 ವರ್ಷಗಳಿಂದ ಸೆಕ್ಸ್ ಮಾಡಿಲ್ಲ- ಕಾರಣ ಬಿಚ್ಚಿಟ್ಟ ಉರ್ಫಿ ಜಾವೇದ್
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೆಐಎಡಿಬಿಯಿಂದ ಸಿಎ ನಿವೇಶನವನ್ನು ಖರ್ಗೆ ಕುಟುಂಬಕ್ಕೆ ಹಂಚಿಕೆ ಮಾಡಲಾಗಿದೆ. ಸಿಎ ಸೈಟ್‌ಗಳನ್ನು ಆಸ್ಪತ್ರೆ, ಪೋಸ್ಟ್ ಆಫೀಸ್ ಹೀಗೆ ಸಾರ್ವಜನಿಕ ಉದ್ದೇಶಕ್ಕೆಂದು ಮೊದಲೇ ನಿರ್ಧಾರ ಮಾಡಲಾಗಿದೆ. ವೈಯಕ್ತಿಕವಾಗಿ ಸೈಟ್ ಹಂಚಿಕೆ ಮಾಡಲು ಸಾಧ್ಯವಿಲ್ಲ. ಟ್ರಸ್ಟ್‌ಗೆ ಮಾತ್ರ ಕೊಡೋದು. ಇದು ಒಂದು ಮನೆಗೆ ಸೀಮಿತವಾಗಿ ಟ್ರಸ್ಟ್ ಇದೆ. ಗುಲ್ಬರ್ಗದಲ್ಲಿ ರಿಜಿಸ್ಟರ್ ಆಗಿದ್ದು, ಅದು ಪ್ರಿಯಾಂಕ್ ಖರ್ಗೆ, ರಾಧಾಕೃಷ್ಣ ಇವರ ಹೆಸರಲ್ಲಿದೆ ಎಂದರು.
ದಲಿತರು ಅಂದ್ರೆ ಒಂದೇ ಒಂದು ಕುಟುಂಬ ಅಲ್ಲ. ಅನೇಕ ಕುಟುಂಬಗಳಿವೆ. ಒಂದೇ ಕುಟುಂಬಕ್ಕೆ ಹಲವು ಎಕರೆ ಜಮೀನು ಕೊಟ್ಟಿದ್ದಾರೆ. ಅದು ಏರೋಸ್ಪೇಸ್ ಹೆಸರಲ್ಲಿ ತೆಗೆದುಕೊಂಡಿದ್ದಾರೆ. ಇತರೆ ಟ್ರಸ್ಟ್ಗೂ ಅರ್ಧ ಎಕರೆ ಸಿಕ್ಕಿದ್ರೂ ಅನುಕೂಲ ಆಗ್ತಿತ್ತು. ಇದು ನಂಬಿಕೆಯ ಪ್ರಶ್ನೆ. ಆ ಜಾಗ ಬೇಕು ಅಂತ ಅನೇಕರು ಅರ್ಜಿ ಹಾಕಿದ್ದಾರೆ. ಇದು ಮತ್ತೊಂದು ಮುಡಾ ಕೇಸ್ ಆಗಲಿದೆ. ಈ ಬಗ್ಗೆ ನಾನು ನಾಳೆ ಸಂಪೂರ್ಣ ದಾಖಲೆ ಇಟ್ಟು ಮಾತಾಡ್ತೀನಿ ಎಂದಿದ್ದಾರೆ.ಇದನ್ನೂ ಓದಿ: Exclusive | ಪರಪ್ಪನ ಅಗ್ರಹಾರ ಸೆಲ್ ಒಳಗಡೆ ಜಾಲಿ ಟ್ರಿಪ್‌ಗೆ ಹೋದಂತೆ ಕೈದಿಗಳ ಫೋಟೋ ಶೂಟ್!
ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddarmaiah) ಅವರು ಮುಡಾ ಪ್ರಕರಣದಲ್ಲಿ (MUDA) ಸೆಷನ್ ಆರಂಭಕ್ಕೂ ಮುನ್ನ ಆಯೋಗ ರಚನೆ ಮಾಡಿ ತನಿಖೆಗೆ ಕೊಡ್ತಾರೆ. ಅದು ಸಂಡೇ.. ಇದು ಸಂಡೇ ಲಾಯರ್ ಕೆಲಸ, ಮಂಡೇ ಲಾಯರ್ ಕೆಲಸ ಅಲ್ಲ ಎಂದು ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ವ್ಯಂಗ್ಯವಾಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ (Rahul Gandhi)ಭ್ರಷ್ಟಾಚಾರ ಸಹಿಸಲ್ಲ ಅಂತಾ ಹೇಳಿದ್ದರು. ಈಗ ಕರ್ನಾಟಕ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಆದರೆ ರಾಹುಲ್ ಗಾಂಧಿ ಏಕೆ ಮೌನವಾಗಿದ್ದಾರೆ. ಅವರಿಗೆ ಇನ್ನೂ ಭ್ರಷ್ಟಾಚಾರ ಗಮನಕ್ಕೆ ಬಂದಿಲ್ಲವಾ? ಅಥವಾ ಭ್ರಷ್ಟಾಚಾರಕ್ಕೆ ಬೆಂಬಲ ಕೊಟ್ಟಿದ್ದೀರಾ? ಜೊತೆಗೆ ಈ ಕುರಿತು ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಮಾತಾಡಿಲ್ಲ, ಈ ಬಗ್ಗೆ ಸ್ಪಷ್ಟನೆ ಕೊಡಬೇಕು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ಪರಿಷತ್ ಸದಸ್ಯ
ದೆಹಲಿಯ ಎಐಸಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕು ಅಂದುಕೊಂಡಿದ್ದೇವೆ. ಕಾಂಗ್ರೆಸ್ ಪಕ್ಷದ ನಿಲುವು, ಸ್ಪಷ್ಟನೆ ಕುರಿತು ಕೇಳಬೇಕು ಅಂದುಕೊಂಡಿದ್ದೇವೆ. ಬಿಜೆಪಿ ಹೈಕಮಾಂಡ್ ನಾಯಕರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಅಂತಾ ಹೇಳಿದ್ದಾರೆ.
ಇನ್ನೊಂದೆಡೆ ಹೆಚ್.ಡಿ ಕುಮಾರಸ್ವಾಮಿ (H D Kumaraswamy) ಕುರಿತು ಮಾತನಾಡಿ, ನೀವು ಕೇಂದ್ರ ಸಚಿವರಾಗಿ ಕೆಲಸ ಮಾಡುತ್ತಿದ್ದೀರಿ. ನೀವು ಕೇಂದ್ರದ ಕೆಲಸ ಮಾಡಿ, ಎನ್‌ಡಿಎ (NDA) ಪರ ದೇಶ ಸುತ್ತಿ ಕೆಲಸ ಮಾಡಿ. ನೀವು ಮೋದಿ ಜತೆ ಸೇರಿ ಕೆಲಸ ಮಾಡಿ. ಬೆಳಗ್ಗೆ ಒಂದು ಹೇಳಿಕೆ ಕೊಡುತ್ತಾರೆ. ಅದಕ್ಕೆ ನೀವು ರಿಪ್ಲೈ ಕೊಡಬೇಕು ಈ ರೀತಿ ಮಾಡಿ ನಿಮ್ಮನ್ನು ಡೈವರ್ಟ್ ಮಾಡುತ್ತಾರೆ. ನಿಮ್ಮನ್ನು ಟ್ರ್ಯಾಪ್ ಮಾಡಲು ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ (D K Shivakumar) ಈ ರೀತಿ ಮಾಡ್ತಿದ್ದಾರೆ. ರಾಜ್ಯದ ಸಮಸ್ಯೆಗಳ ಬಗ್ಗೆ ನಾವು ನೋಡಿಕೊಳ್ಳುತ್ತೇವೆ. ಪಾದಯಾತ್ರೆಯಲ್ಲಿ ಬರೀ ಅವರ ಆಸ್ತಿ ಇವರ ಆಸ್ತಿ ಬಗ್ಗೆ ಅಷ್ಟೇ ಚರ್ಚೆಯಾಯಿತು. ಅವರ ಹೇಳಿಕೆಗಳಿಗೆ ರಿಯಾಕ್ಟ್ ನೀವು ಮಾಡಬೇಡಿ ಅಂತಾ ಸಲಹೆ ಕೊಟ್ಟಿದ್ದಾರೆ.ಇದನ್ನೂ ಓದಿ: ರಾಜ್ಯಪಾಲರು ಸರ್ಕಾರದ ವಿರುದ್ಧ ಇರೋದು ಸ್ಪಷ್ಟ – ಪರಮೇಶ್ವರ್ ಆರೋಪ
ಇದೇ ವೇಳೆ ಡಿಕೆಶಿ ವಿರುದ್ಧ ಮಾತನಾಡಿ, ನೀರಿನ ತೆರಿಗೆ ವಿಚಾರದಲ್ಲಿ ಡಿಕೆಶಿ ಬೆಂಗಳೂರಿಗರ ಮೇಲೆ ಸಿಟ್ಟು ತೋರಿಸಿದ್ದಾರೆ. ನಿಮಗೆ ಯಾಕೆ ಅಷ್ಟೊಂದು ಸಿಟ್ಟು? ಹೆಚ್ಚು ತೆರಿಗೆ ಕಟ್ಟಲು ಬೆಂಗಳೂರು ಆಗ ಬೇಕು.. ಈಗ ಬೇಡ್ವಾ? ಬೆಂಗಳೂರಿಗೆ ನೀವು ಏಕೆ ಬೇಕು? ಬೆಂಗಳೂರಿಗೆ ನಿಮ್ಮ ಕೊಡುಗೆ ಏನು? ಡಿಸಿಎಂ ಅವರು ಬೆಂಗಳೂರಿಗರ ಮೇಲೆ ಗದಾಪ್ರಹಾರ ಮಾಡಿದ್ದಾರೆ. ಇಲ್ಲಿಯವರ ಬಗ್ಗೆ ನೀವು ಮಾತನಾಡಿದ್ದು ಅಪರಾಧ. ಡಿಕೆಶಿ ಅವರೇ ನಮ್ಮ ನಗರದ ಜನರ ಪರವಾಗಿ ನಾವು ರಾಜೀನಾಮೆ ಕೊಡಿ ಎಂದು ಕೇಳ್ತಾ ಇದ್ದೀವಿ. ಯೋಗ್ಯತೆ ಇರೋರು ಬರಲಿ ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು: ದಲಿತರ ವಿರುದ್ಧ ಕಾಂಗ್ರೆಸ್ (Congress) ಪಕ್ಷದ ಅನ್ಯಾಯವನ್ನು ಪ್ರತಿಭಟಿಸಿ ಕಾಂಗ್ರೆಸ್ಸಿನಲ್ಲಿರುವ ದಲಿತ ಮುಖಂಡರು, ಜನಪ್ರತಿನಿಧಿಗಳು ರಾಜೀನಾಮೆ ಕೊಡಬೇಕು ಎಂದು ವಿಧಾನಪರಿಷತ್‌ನ ವಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅವರು ಒತ್ತಾಯಿಸಿದರು.
ಬೆಂಗಳೂರಿನ ಸ್ವಾತಂತ್ರ‍್ಯ ಉದ್ಯಾನವನದಲ್ಲಿ ಇಂದು ನಡೆದ ಬಿಜೆಪಿಯ (BJP) ಬೃಹತ್ ಪ್ರತಿಭಟನೆ ಸಂದರ್ಭದಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿರುವ ಎಲ್ಲ ದಲಿತ ಮುಖಂಡರಿಗೂ ಧಿಕ್ಕಾರವಿರಲಿ. ದಲಿತರಿಗೆ ಅನ್ಯಾಯ ಮಾಡಿದ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದು ಆಗ್ರಹವನ್ನು ಮುಂದಿಟ್ಟರು. ಇದನ್ನೂ ಓದಿ :ಜನಹಿತಕ್ಕಾಗಿ ಮುಖ್ಯಮಂತ್ರಿ ರಾಜೀನಾಮೆ ಕೊಟ್ಟು ತೊಲಗಲಿ: ಅಶ್ವತ್ಥನಾರಾಯಣ್
ನಾನು ಹಿಂದುಳಿದ ವರ್ಗದ ನಾಯಕ. ಆದ್ದರಿಂದಲೇ ನನಗೆ ಬಿಜೆಪಿಯವರು ತೊಂದರೆ ಕೊಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಹಾಗಿದ್ದರೆ ಈ ದೇಶದ ಪ್ರಧಾನಮಂತ್ರಿ ಯಾರು? ಅವರು ಕೂಡ ಹಿಂದುಳಿದವರು. ಅವರು ನಿಮ್ಮ ಥರ ಕರಿ ಕಾಗೆ ಅಲ್ಲ. ಸಿದ್ದರಾಮಯ್ಯ(CM Siddaramaiah) ರಾಜೀನಾಮೆ ಕೊಡುವವರೆಗೆ ನಾವು ವಿರಮಿಸುವುದಿಲ್ಲ ಎಂದು ಪ್ರಕಟಿಸಿದ ಅವರು, ಭ್ರಷ್ಟಾಚಾರದ ಕಪ್ಪನ್ನು ಅಳಿಸುವವರೆಗೆ, ನಿಮ್ಮನ್ನು ಮನೆಗೆ ಕಳಿಸುವವರೆಗೆ ನಾವು ವಿರಮಿಸುವುದಿಲ್ಲ. ನಾವು ಹೋರಾಟದಿಂದ ವಿರಮಿಸುವುದಿಲ್ಲ ಎಂದರು. ಇದನ್ನೂ ಓದಿ : ಡಿ.ಕೆ ಶಿವಕುಮಾರ್‌ಗೆ ನಾಡಿನ ಜನ ಪಾಠ ಕಲಿಸೋ ದಿನ ದೂರವಿಲ್ಲ: ಜೆಡಿಎಸ್
ನಿಮ್ಮ ಮಂಡೆಯಲ್ಲಿ ಬುದ್ಧಿ ಇಲ್ಲ. ಹುಲಿಯಾ ಎಂದಾಗ ಖುಷಿ ಪಡುತ್ತಿದ್ದ ನೀವೀಗ ಕರಿಯಾ ಆಗಿ ಕೂತಿದ್ದೀರಲ್ಲಾ ಎಂದು ಕೇಳಿದರು. ಎಷ್ಟು ವೈಟ್ನರ್ ಹಾಕಿದ್ರೂ ಬಿಳಿ ಆಗೋದಿಲ್ಲ ಮಾರಾಯರೇ. ದಯವಿಟ್ಟು ರಾಜೀನಾಮೆ ಕೊಟ್ಟು ಹೋಗಿಬಿಡಿ ಎಂದರು. ಇದನ್ನೂ ಓದಿ : ದಲಿತರ ಬಗ್ಗೆ ಮಾತಾಡೋ ನೈತಿಕತೆ ಬಿಜೆಪಿಯವರಿಗೆ ಇಲ್ಲ – ಸಿದ್ದರಾಮಯ್ಯ
ಬೆಂಗಳೂರು: ಎಲ್ಲರಿಗೂ ವಿಜಯೇಂದ್ರನೇ (B.Y.Vijayendra) ನಾಯಕ. ಸಣ್ಣವರು ದೊಡ್ಡವರು ಎಂಬ ಪ್ರಶ್ನೆ ಬರಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಾದಯಾತ್ರೆಗೆ ಪಕ್ಷದ ತೀರ್ಮಾನ ಅಂತಾ ಹೇಳಿಕೊಳ್ತಿರಬೇಕು. ಪಕ್ಷ ಇನ್ನೂ ಅಧಿಕೃತವಾಗಿ ಅನುಮತಿ ಕೊಟ್ಟಿಲ್ಲ. ಗೋಲ್ಡ್ ಪಿಂಚ್‌ನಲ್ಲಿ ಒಂದು ಸಭೆ ಆಗಿತ್ತು. ಪಾದಯಾತ್ರೆ ಅಲ್ಲಿ ಮಾಡಿ ಅಂತಾ ಶ್ರೀರಾಮುಲು ಹೇಳಿದ್ರು. ಆದರೆ ವಿಜಯೇಂದ್ರ ಪಾದಯಾತ್ರೆಗೆ ಯತ್ನಾಳ್ ವಿರೋಧಿಸಿಲ್ಲ ಅಂದ್ರು. ಅಧ್ಯಕ್ಷರನ್ನ ಬಿಟ್ಟು ಯಾರು ಏನೂ ಮಾಡಿಲ್ಲ. ರಮೇಶ್ ಜಾರಕಿಹೊಳಿ ಸಣ್ಣಪುಟ್ಟ ಮೀಟಿಂಗ್‌ಗೆ ಬಂದಿಲ್ಲ ಅಂತೇಳಿದ್ರು ಎಂದರು. ಇದನ್ನೂ ಓದಿ: ನನಗೆ ಕಾರು, ಗನ್ ಮ್ಯಾನ್ ಕೊಟ್ಟಿಲ್ಲ, ಏನಾದ್ರೂ ಆದ್ರೆ ಸರ್ಕಾರವೇ ಹೊಣೆ: ಛಲವಾದಿ ನಾರಾಯಣಸ್ವಾಮಿ
ಇದೇ ವೇಳೆ ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ಆಗಿ ಸಿ.ಪಿ.ಯೋಗೇಶ್ವರ್ ಸ್ಪರ್ಧೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಛಲವಾದಿ ನಾರಾಯಣಸ್ವಾಮಿ, ವೈಯುಕ್ತಿಕ ಅಭಿಪ್ರಾಯಗಳಿಗೆ ನಾನು ಮನ್ನಣೆ ಕೊಡಲ್ಲ. ಅದು ಪಕ್ಷದ ನಿರ್ಧಾರ ಅಲ್ಲ. ರಾಜ್ಯ ಹಾಗೂ ದೇಶದ ಹಿತದೃಷ್ಟಿಯಿಂದ ಕೆಲವೊಂದು ನಿರ್ಧಾರ ಅನಿವಾರ್ಯವಾಗುತ್ತೆ. ಹೀಗಾಗಿ ಮೈತ್ರಿ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತೆ. ನಾವು ಜೆಡಿಎಸ್‌ಗೆ ಶರಣಾಗಿಲ್ಲ ಎಂದು ಸ್ಪಷ್ಟಪಡಿಸಿದರು.