Tag: chalavadi narayanaswamy

  • ಮಂಗಳವಾರ ಸಚಿವ ಸಂಪುಟ ಸಭೆ – ಇಂದೇ ಕಲಬುರಗಿ ತಲುಪಿದ ಸಿಎಂ

    ಮಂಗಳವಾರ ಸಚಿವ ಸಂಪುಟ ಸಭೆ – ಇಂದೇ ಕಲಬುರಗಿ ತಲುಪಿದ ಸಿಎಂ

    -ಸಚಿವ ಸಂಪುಟ ಸಭೆಗೆ ಬಿಜೆಪಿ ವ್ಯಂಗ್ಯ

    ಬೆಂಗಳೂರು: ದಶಕದ ಬಳಿಕ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಾದ ಕಲಬುರಗಿಯಲ್ಲಿ (Kalaburagi) ನಾಳೆ (ಮಂಗಳವಾರ) ಸಚಿವ ಸಂಪುಟ ಸಭೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಇಂದೇ ಕಲಬುರಗಿ ತಲುಪಿದ್ದಾರೆ.

    ನಾಳೆ ಬೆಳಗ್ಗೆ 8.25ಕ್ಕೆ ಸರ್ಧಾರ್ ವಲ್ಲಭಭಾಯಿ ಪಟೇಲ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಿರುವ ಸಿಎಂ ಸಿದ್ದರಾಮಯ್ಯ, 9 ಗಂಟೆಗೆ ಡಿಎಆರ್ ಪೊಲೀಸ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನದ ಅಂಗವಾಗಿ ಧ್ವಜಾರೋಹಣ ಮಾಡಲಿದ್ದಾರೆ. ಸಂಜೆ 4 ಗಂಟೆಗೆ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಸಂಪುಟ ಸಭೆಯ ಸಿದ್ಧತೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ್ ಪಾಟೀಲ್ ಪರಿಶೀಲನೆ ನಡೆಸಿದರು. ನಾಳಿನ ಸಚಿವ ಸಂಪುಟ ಸಭೆಗೆ ಬಿಜೆಪಿ ವ್ಯಂಗ್ಯವಾಡಿದೆ. ಇದನ್ನೂ ಓದಿ: ಕೋಮುಗಲಭೆ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಿ: ಅಶೋಕ್ ಆಗ್ರಹ

    ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಮಾತಾಡಿ, ಕಾಂಗ್ರೆಸ್ (Congress) ಪಕ್ಷ ಅಂದರೆ ನಾಟಕ ಕಂಪನಿಯಿದ್ದಂತೆ. ಹೀಗಾಗಿ ನಾಳೆ 2 ಗಂಟೆಗಳ ಕ್ಯಾಬಿನೆಟ್ ಡ್ರಾಮಾ ನಡೆಯಲಿದೆ. ಬರೀ ಸಚಿವರು ಓಡಾಡುವ ರಸ್ತೆ ಮಾತ್ರ ಧೂಳು ತೆಗೆದು ಗುಂಡಿ ಮುಚ್ಚುತ್ತಿದ್ದಾರೆ. ಕಲಬುರಗಿಗೆ ಪ್ರವಾಸಿಗರ ರೀತಿ ಸಚಿವರು ಬರಬಾರದು. ಜನರ ಸಮಸ್ಯೆ ಕೇಳಲು ಬರಬೇಕು ಎಂದಿದ್ದಾರೆ. ಇದನ್ನೂ ಓದಿ: ಈದ್ ಮಿಲಾದ್ ಹೊತ್ತಲ್ಲೇ ರಾಜ್ಯದಲ್ಲಿ ಪ್ಯಾಲೆಸ್ತೀನ್ ಪ್ರೇಮ – ಚಿಕ್ಕಮಗಳೂರಲ್ಲಿ ಬಾವುಟ; 6 ಮಂದಿ ವಿರುದ್ಧ ಕೇಸ್

  • ನಾಗಮಂಗಲ ಕೇಸ್ ಸೇರಿದಂತೆ ಎಲ್ಲಾ ಪ್ರಕರಣದಲ್ಲೂ ಇದು ಕ್ಲೀನ್‌ಚಿಟ್ ಸರ್ಕಾರ: ಛಲವಾದಿ ನಾರಾಯಣಸ್ವಾಮಿ ಕಿಡಿ

    ನಾಗಮಂಗಲ ಕೇಸ್ ಸೇರಿದಂತೆ ಎಲ್ಲಾ ಪ್ರಕರಣದಲ್ಲೂ ಇದು ಕ್ಲೀನ್‌ಚಿಟ್ ಸರ್ಕಾರ: ಛಲವಾದಿ ನಾರಾಯಣಸ್ವಾಮಿ ಕಿಡಿ

    ಬೀದರ್: ನಾಗಮಂಗಲ ಗಲಭೆ ಪ್ರಕರಣದಲ್ಲಿ (Nagamangala Violence) ಮೊದಲೇ ಕ್ಲೀನ್‌ಚಿಟ್ ನೀಡಿದ ಗೃಹ ಸಚಿವರು ಹಾಗೂ ಸರ್ಕಾರದ ವಿರುದ್ಧ ಪರಿಷತ್ ವಿರೋಧ ಪಕ್ಷದ ನಾಯಕ ನಾರಾಯಣಸ್ವಾಮಿ (Chalavadi Narayanaswamy) ಕಿಡಿಕಾರಿದ್ದಾರೆ.ಇದನ್ನೂ ಓದಿ: ಮೊದಲ ಬಾರಿಗೆ ಮಗನ ಮುಖ ರಿವೀಲ್ ಮಾಡಿದ ‘ಹೆಬ್ಬುಲಿ’ ನಟಿ ಅಮಲಾ

    ನಗರದಲ್ಲಿ ಮಾತನಾಡಿದ ಅವರು, ಪಿಎಸ್‌ಐ ಪರಶುರಾಮ ಪ್ರಕಣದಲ್ಲೂ ಗೃಹ ಸಚಿವ ಪರಮೇಶ್ವರ ಮೊದಲೇ ಕ್ಲೀನ್‌ಚಿಟ್ ನೀಡಿದ್ದು, ಅದು ಏನು ಆಗಿಲ್ಲಾ ಆತ್ಮಹತ್ಯೆ ಅಷ್ಟೇ ಎಂದರು. ವಾಲ್ಮೀಕಿ ನಿಗಮ ಹಗರಣದಲ್ಲಿ ಕಿಂಗ್‌ಪಿನ್ ನಾಗೇಂದ್ರ ಅಂಥಾ ಆದ್ರೆ ಈ ಹೆಸರುಗಳು ಐಎಸ್ ಐಟಿಯಲ್ಲಿ ಇರಲ್ಲಾ ಎಂದು ಇಡಿಯವರು ಹೇಳುತ್ತಾರೆ. ಹೀಗಾಗಿ ಅವರ ಶಾಸಕರಿಗೆ ಹಾಗೂ ಮಂತ್ರಿಗಳಿಗೆ ಕ್ಲೀನ್‌ಚಿಟ್ ಕೊಡಲು ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದಾರೆ. 20ಕ್ಕೂ ಅಧಿಕ ಅಂಗಡಿಗಳು ಅನ್ಯಕೋಮಿನ ಜನರು ಸುಟ್ಟಾಕಿದ್ದಾರೆ. ಇದನ್ನು ನೋಡಿದರೆ ಗೊತ್ತಾಗುತ್ತದೆ. ಈ ಪ್ರಕರಣಕ್ಕೆ ಕೇರಳದವರ ಲಿಂಕ್ ಇದೆ ಎಂದಿದ್ದಾರೆ.

    ಅಲ್ಲಿ ಬಾಂಗ್ಲಾದೇಶದವರು ನೆಲಿಸಿದ್ದು, ಎಸ್‌ಡಿಪಿಐನವರ ಕಾರ್ಯ ಶಾಲೆಗಳು ನಡೆಯುತ್ತಿದ್ದು, ಬ್ಯಾನ್ ಮಾಡಿದ ಸಂಸ್ಥೆಗಳು ನಾಗಮಂಗಲ ಗಲಭೆ ಪ್ರಕರಣದಲ್ಲಿ ಬಂದಿದ್ದು ಹೇಗೆ? ಕಾಂಗ್ರೆಸ್ ಸರ್ಕಾರ ಮುಂದುವರೆದರೆ ಈ ದೇಶಕ್ಕೆ ಗಂಡಾಂತರ ಗ್ಯಾರಂಟಿ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಅಗತ್ಯ ಸಿದ್ಧತೆಗೆ ಬೋಸರಾಜು ಸೂಚನೆ

  • ಮೀಸಲಾತಿ ಸ್ಥಗಿತ ಬಗ್ಗೆ ರಾಹುಲ್ ಹೇಳಿಕೆ – ದಲಿತರ ಹಣ ನುಂಗಿ ಹೀಗೆ ಮಾತಾಡುವ ಕಾಂಗ್ರೆಸಿಗರು ಪಾಪಿಗಳು: ಛಲವಾದಿ

    ಮೀಸಲಾತಿ ಸ್ಥಗಿತ ಬಗ್ಗೆ ರಾಹುಲ್ ಹೇಳಿಕೆ – ದಲಿತರ ಹಣ ನುಂಗಿ ಹೀಗೆ ಮಾತಾಡುವ ಕಾಂಗ್ರೆಸಿಗರು ಪಾಪಿಗಳು: ಛಲವಾದಿ

    ಬೆಂಗಳೂರು: ರಾಹುಲ್ ಗಾಂಧಿಯವರ (Rahul Gandhi) ಹೇಳಿಕೆಯಿಂದ ಕಾಂಗ್ರೆಸ್ (Congress) ಪಕ್ಷವು ದಲಿತ (Dalit) ವಿರೋಧಿ ಮತ್ತು ಮೀಸಲಾತಿ ವಿರೋಧಿ ಎಂಬುದು ಸಾಬೀತಾಗಿದೆ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅವರು ವಿಶ್ಲೇಷಿಸಿದರು.

    ಸ್ವಾತಂತ್ರ್ಯ ಉದ್ಯಾನವನದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ದೇಶದ ಪ್ರಥಮ ಪ್ರಧಾನಿ ನೆಹರೂ ಅವರು ತಾವು ಮೀಸಲಾತಿ (Reservation) ವಿರೋಧಿ ಎಂದಿದ್ದರು. ಇಂದಿರಾಗಾಂಧಿ, ರಾಜೀವ್ ಗಾಂಧಿಯವರೂ ಅದನ್ನೇ ಮುಂದುವರೆಸಿದ್ದರು. ಈಗ ರಾಹುಲ್ ಗಾಂಧಿಯವರು ಈ ಪರಂಪರೆಯನ್ನು ಮುಂದುವರೆಸಿದ್ದಾರೆ ಎಂದು ಟೀಕಿಸಿದರು. ನೆಹರೂ- ಇಂದಿರಾ ಗಾಂಧಿ ಕುಟುಂಬವು ಮೀಸಲಾತಿ ವಿರೋಧಿ ಪರಂಪರೆಯನ್ನು ಹೊಂದಿದೆ ಎಂದು ಆಕ್ಷೇಪಿಸಿದರು.

    1961ರಲ್ಲಿ ನೆಹರೂ ಅವರು ಈ ದೇಶದಲ್ಲಿ ಯಾವುದೇ ರೀತಿಯ ಮೀಸಲಾತಿಗಳಿಗೆ (Reservation) ತಾವು ವಿರುದ್ಧ ಇರುವುದಾಗಿ ತಿಳಿಸಿದ್ದರು. ಮೀಸಲಾತಿಯಿಂದ ಅಧಿಕಾರ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ಕುಂಠಿತ ಆಗಲಿದೆ ಎಂದಿದ್ದರು. ಪ್ರಧಾನಿ ನರೇಂದ್ರ ಮೋದಿಯವರು, ನೆಹರೂ ಅವರು ಆ ಕಾಲದಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮೀಸಲಾತಿ ವಿರೋಧಿಸಿ ಬರೆದ ಪತ್ರವನ್ನು ಸದನದಲ್ಲಿ ಪ್ರಸ್ತಾಪಿಸಿ ಪತ್ರವನ್ನು ಪ್ರದರ್ಶನ ಮಾಡಿದ್ದಾರೆ ಎಂದು ಛಲವಾದಿ ವಿವರಿಸಿದರು. ಇದನ್ನೂ ಓದಿ: ದಲಿತ ವಿಕಲಚೇತನ ವ್ಯಕ್ತಿಗೆ ಹಂಚಿಕೆಯಾದ ಜಾಗದಲ್ಲಿ ಸಿದ್ದರಾಮಯ್ಯ ಮನೆ: ಹೆಚ್‌ಡಿಕೆ ಬಾಂಬ್‌

    ನಂತರ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅದೇರೀತಿ ನಡೆದುಕೊಂಡಿದ್ದರು. ಈಗ ರಾಹುಲ್ ಗಾಂಧಿಯವರು ಅದೇ ಮನೋಭಾವವನ್ನು ಪ್ರದರ್ಶನ ಮಾಡಿದ್ದಾರೆ. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 50 ಸೀಟನ್ನೂ ಗೆದ್ದಿರಲಿಲ್ಲ. ಆಗ ಕೇವಲ ಸದನದ ನಾಯಕರಾಗಲು ಖರ್ಗೇಜೀ ಅವರಿಗೆ ಆ ಸ್ಥಾನ ಕೊಟ್ಟಿದ್ದರು. 2019ರಲ್ಲೂ ಕಾಂಗ್ರೆಸ್ ಅಧಿಕೃತ ವಿಪಕ್ಷ ಆಗಲಿಲ್ಲ. ಆಗ ಪಶ್ಚಿಮ ಬಂಗಾಳದ ಚೌಧರಿಯನ್ನು ಸದನದ ನಾಯಕರನ್ನಾಗಿ ಮಾಡಿದ್ದರು. ಈಗ ಅಧಿಕೃತ ವಿಪಕ್ಷ ಸ್ಥಾನ ಲಭಿಸಿದಾಗ ಅವರನ್ನೆಲ್ಲ ದೂರ ಮಾಡಿ ತಾವೇ ಆ ಸ್ಥಾನ ಪಡೆದಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.

    ಬಿಜೆಪಿ ದಲಿತ ವಿರೋಧಿ ಎನ್ನುವ ಕಾಂಗ್ರೆಸ್ಸಿನ ಸಚಿವರು ಈಗ ಯಾರು ದಲಿತ ವಿರೋಧಿ ಎಂಬ ಪ್ರಶ್ನೆಗೆ ಉತ್ತರ ಕೊಡಬೇಕಿದೆ ಎಂದು ಸವಾಲು ಹಾಕಿದರು. ಮೀಸಲಾತಿ ಹೆಚ್ಚಿಸಿದವರು ನಾವು, ನೀವು ದಲಿತ ವಿರೋಧಿಗಳು ಮತ್ತು ಮೀಸಲಾತಿ ವಿರೋಧಿಗಳು. ಕಾಂಗ್ರೆಸ್ಸಿನವರು ಪಾಪಿಗಳಲ್ಲವೇ ಎಂದು ಪ್ರಶ್ನಿಸಿದರು.

    ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ದಲಿತರಿಗೆ ಮೀಸಲಿಟ್ಟ, ಪರಿಶಿಷ್ಟರಿಗೆ ಮೀಸಲಿಟ್ಟಿದ್ದ ಗಂಗಾ ಕಲ್ಯಾಣ ಯೋಜನೆಯಿಂದ ಆರಂಭಿಸಿ, ಅವರ ಶ್ರೇಯೋಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಚುನಾವಣೆಗೆ ನೇರವಾಗಿ ಬಳಸಿದ್ದೀರಲ್ಲವೇ? ದಲಿತರ ಹಣ ತಿನ್ನಲು ನಿಮಗೆ ನಾಚಿಕೆ ಆಗುವುದಿಲ್ಲವೇ? ಪಾಪದವರ ಹಣ ತಿಂದ ಎಂಥ ಪಾಪಿಗಳು ನೀವು ಕಾಂಗ್ರೆಸ್‍ನವರು. ನೀವು ಪಾಪಿಗಳಲ್ಲವೇ? ಉತ್ತರ ಕೊಡಿ ಎಂದು ಛಲವಾದಿ ಆಗ್ರಹಿಸಿದರು.

    ರಾಹುಲ್‌ ಗಾಂಧಿ ಹೇಳಿದ್ದೇನು?
    ಅಮೆರಿಕ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ ಜಾರ್ಜ್‌ಟೌನ್‌ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳ ಜೊತೆಗಿನ ಸಂವಾದ ನಡೆಸಿದರು. ಮೀಸಲಾತಿಯು ಎಷ್ಟು ಕಾಲ ಮುಂದುವರಿಯಲಿದೆ ಎಂಬ ಪ್ರಶ್ನೆಗೆ ರಾಹುಲ್‌ ಗಾಂಧಿ, ಭಾರತದಲ್ಲಿ ಸಮಾನತೆಯ ಸ್ಥಿತಿ ಮೂಡಿದಾಗ ಮೀಸಲಾತಿಯನ್ನು ತೆಗೆದುಹಾಕುವ ಬಗ್ಗೆ ಕಾಂಗ್ರೆಸ್ ಪಕ್ಷವು ಆಲೋಚನೆ ಮಾಡಲಿದೆ. ಈಗ ಸಮಾನತೆಯ ಪರಿಸ್ಥಿತಿ ಇಲ್ಲ ಎಂದು ಅವರು ಉತ್ತರಿಸಿದ್ದರು.

  • ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂಗಳು, ದಲಿತರೇ ಟಾರ್ಗೆಟ್: ಛಲವಾದಿ ನಾರಾಯಣಸ್ವಾಮಿ

    ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂಗಳು, ದಲಿತರೇ ಟಾರ್ಗೆಟ್: ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂಗಳು ಮತ್ತು ದಲಿತರೇ ಟಾರ್ಗೆಟ್ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

    ನಾಗಮಂಗಲ ಗಲಭೆ ಕೇಸ್‌ನಲ್ಲಿ ಹಿಂದೂ ಯುವಕರ ಮೇಲೆ ಕೇಸ್ ಹಾಕಿರೋ ವಿಚಾರಕ್ಕೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಇವತ್ತು ಮಾತ್ರವಲ್ಲ ಹಿಂದಿನಿಂದಲೂ ಒಂದು ಸಮುದಾಯದ ತುಷ್ಟೀಕರಣ ಮಾಡಿಕೊಂಡು ಬರುತ್ತಿದೆ. ಈ‌ ಸರ್ಕಾರಕ್ಕೆ ಹಿಂದೂಗಳು, ದಲಿತರೇ ಟಾರ್ಗೆಟ್ ಆಗ್ತಿದ್ದಾರೆ. ಯಾದಗಿರಿಯಲ್ಲಿ ಊರಿನಿಂದ ದಲಿತರನ್ನ ಬಹಿಷ್ಕಾರ ಮಾಡಿದ್ದಾರೆ. ರಾಮನಗರದಲ್ಲಿ ಇಂತಹ ಘಟನೆ ಆಗಿದೆ. ಕಾಂಗ್ರೆಸ್‌ಗೆ ತುಷ್ಟೀಕರಣ ರಾಜಕೀಯದ ಭಾಗವಾಗಿದೆ ಅಂತಾ ಕಿಡಿಕಾರಿದರು. ಇದನ್ನೂ ಓದಿ: Nagamangala Violence | ರಾಜ್ಯಪಾಲರು ಮಧ್ಯ ಪ್ರವೇಶ ಮಾಡಲಿ- ರವಿಕುಮಾರ್ ಆಗ್ರಹ

    ಜನರು ‌ನೆಮ್ಮದಿಯಿಂದ ಇರಬೇಕು ಅಂತಾ ಕಾಂಗ್ರೆಸ್‌‌ಗೆ ಅನ್ನಿಸೋದಿಲ್ಲ. ಹಿಂದೂ ವಿಚಾರ ಬಂತು ಅಂದರೆ‌ ಸಾಕು ಎತ್ತಿಕಟ್ಟಿ ಧಮನ ಮಾಡೋ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಹೀಗೆ ಕಾಂಗ್ರೆಸ್ ಮಾಡುತ್ತಾ ಹೋದ್ರೆ ಈ ದೇಶದಲ್ಲಿ ನಿರ್ನಾಮ ಆಗುತ್ತೆ‌. ಹಿಂದೂಗಳ ಪರ ಬಿಜೆಪಿ ನಿಲ್ಲುತ್ತದೆ. ಹಿಂದೂಗಳ ರಕ್ಷಣೆಗೆ ಬಿಜೆಪಿ ಇರುತ್ತದೆ. ಕಾಂಗ್ರೆಸ್ ಮಾತು ಕೇಳುವ ಮುಸ್ಲಿಮರು ಹಿಂದೂಗಳನ್ನ ವಿರೋಧ ಮಾಡೋದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

  • ವಾಲ್ಮೀಕಿ ಹಗರಣದ ವಿರುದ್ಧ ಬಿಜೆಪಿಯಿಂದ ಬಳ್ಳಾರಿ ಪಾದಯಾತ್ರೆ – ಛಲವಾದಿ ನಾರಾಯಣಸ್ವಾಮಿ

    ವಾಲ್ಮೀಕಿ ಹಗರಣದ ವಿರುದ್ಧ ಬಿಜೆಪಿಯಿಂದ ಬಳ್ಳಾರಿ ಪಾದಯಾತ್ರೆ – ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ವಾಲ್ಮೀಕಿ ಹಗರಣದ (Valmiki Scam) ವಿರುದ್ಧ ಬಿಜೆಪಿಯಿಂದ (BJP) ಬಳ್ಳಾರಿ ಪಾದಯಾತ್ರೆ ನಡೆಸಲು ಹೈಕಮಾಂಡ್ ಒಪ್ಪಿಗೆ ನೀಡಿದೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ನಾವೂ ಕೂಡ ವಾಲ್ಮೀಕಿ ಹಗರಣದ ವಿಚಾರದಲ್ಲಿ ಪಾದಯಾತ್ರೆ ಮಾಡುತ್ತೇವೆ. ಹೈಕಮಾಂಡ್ ನಮಗೆ ಸಲಹೆ ನೀಡಿದೆ. ವಾಲ್ಮೀಕಿ ಹಗರಣದಲ್ಲಿ ನಮ್ಮ ಎರಡನೇ ಹಂತದ ಹೋರಾಟ ಶುರುವಾಗಲಿದೆ. ಅದು ಯತ್ನಾಳ್ ಪಾದಯಾತ್ರೆ ಅಂತಲ್ಲ, ನಮ್ಮದೇ ಬಿಜೆಪಿ ಪಾದಯಾತ್ರೆ. ದಿನಾಂಕ ಮತ್ತು ಸ್ವರೂಪವನ್ನು ಬಿಜೆಪಿ ನಾಯಕರೆಲ್ಲ ಕೂತು ಚರ್ಚೆ ಮಾಡುತ್ತೇವೆ. ನಮ್ಮೆಲ್ಲ ಸ್ನೇಹಿತರು ಕೂಡ ವಾಲ್ಮೀಕಿ ಪಾದಯಾತ್ರೆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಅಧ್ಯಕ್ಷರು ಇದನ್ನು ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ.ಇದನ್ನೂ ಓದಿ: ಕೇಂದ್ರದ ತೆರಿಗೆ ಹಂಚಿಕೆ ಅನ್ಯಾಯ ಕುರಿತು ಪಕ್ಕದ ರಾಜ್ಯಗಳಿಗೆ ಪತ್ರ ಬರೆದ ಸಿಎಂ

    ಬಳ್ಳಾರಿಗೆ ಪಾದಯಾತ್ರೆ ಮಾಡುತ್ತೇವೆ ಎಲ್ಲಿಂದ ಎನ್ನುವುದೆಲ್ಲಾ ತೀರ್ಮಾನ ಆಗಲಿದೆ. ಮೈಸೂರು ಪಾದಯಾತ್ರೆ ಮುಡಾ (MUDA) ಪಾದಯಾತ್ರೆ ಅಂತಾ ಆಗಿದೆ. ಈಗ ವಾಲ್ಮೀಕಿ ಹಗರಣದ ವಿರುದ್ಧ ಪಾದಯಾತ್ರೆಗೆ ಹೈಕಮಾಂಡ್ ಕೂಡ ಸಮ್ಮತಿ ಸೂಚಿಸಿದೆ. 187 ಕೋಟಿ ರೂ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮದ ಬಗ್ಗೆ ಬಿಜೆಪಿ ಹೋರಾಟ ಮಾಡಿತ್ತು. ಆದರೆ ಮೈಸೂರು ಪಾದಯಾತ್ರೆಯಿಂದ ವಾಲ್ಮೀಕಿ ಅಕ್ರಮದ ಬಗ್ಗೆ ಅಷ್ಟೊಂದು ಸದ್ದು ಆಗಿರಲಿಲ್ಲ ಎಂದು ತಿಳಿಸಿದರು.

    ಬಿಜೆಪಿ ಹೋರಾಟ ಮಾಡಿದ ಬಳಿಕ ಸರ್ಕಾರ ಎಚ್ಚೆತ್ತುಕೊಂಡು ಎಸ್‌ಐಟಿ (SIT-Special Investigation Team) ರಚನೆ ಮಾಡಿತ್ತು. ಆರಂಭದಲ್ಲಿ ನಾಗೇಂದ್ರ ಹಾಗೂ ದದ್ದಲ್ ಹೆಸರು ಹೇಳಲಿಲ್ಲ. ಈಗ ಚಾರ್ಜ್ಶೀಟ್‌ನಲ್ಲಿ ನಾಗೇಂದ್ರ ಹೆಸರು ಪ್ರಕರಣದಲ್ಲಿ ಪ್ರಸ್ತಾಪ ಆಗಿದೆ. ನಾವು ಆ ದಿನವೇ ಪ್ರಕರಣವನ್ನು ಹಗುರವಾಗಿ ತೆಗೆದುಕೊಳ್ಳಬಾರದು ಅಂತಾ ಹೇಳಿದ್ದೇವೆ. ಈಗ ಇಡಿ ನೇರವಾಗಿ ನಾಗೇಂದ್ರ ಮಾಸ್ಟರ್‌ಮೈಂಡ್ ಎಂದು ಹೇಳಿದೆ. ಎಸ್‌ಐಟಿನಲ್ಲಿ ಎಫ್‌ಐಆರ್ (FIR) ಕೂಡ ಹಾಕಿಲ್ಲ. ಈಗ ಸರ್ಕಾರ ಏನು ಹೇಳುತ್ತದೆ. ಇದು ಸಾಮಾನ್ಯ ಹಗರಣ ಅಲ್ಲ. ಇದನ್ನು ಬಹಳ ಲಘುವಾಗಿ ಸರ್ಕಾರ ಪರಿಗಣಿಸಿದೆ ಎಂದಿದ್ದಾರೆ.ಇದನ್ನೂ ಓದಿ: ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ: ಮೀಸಲಾತಿ ರದ್ದು ಮಾಡಲು ಬಿಜೆಪಿ ಬಿಡುವುದಿಲ್ಲ- ಸುನಿಲ್ ಕುಮಾರ್

    ಪ್ರಜಾಪ್ರಭುತ್ವ ಅಡಿಯಲ್ಲಿ ಕೆಲಸ ಮಾಡುವ ಮಂತ್ರಿಗಳು ಅಪವಾದ ಬಂದಾಗ ತಕ್ಷಣ ರಾಜೀನಾಮೆ ಕೊಡಬೇಕು. ಈಗ ಮುಖ್ಯಮಂತ್ರಿ ಏನು ಹೇಳ್ತಾರೆ? ಅವರ ಮೇಲೆ ಬಹಳ ಅಪವಾದ ಬಂದಿದೆ. ಹಾಗಾಗಿ ಅವರು ವಿಚಲಿತರಾಗಿದ್ದಾರೆ. ನೇರವಾಗಿ ಅಕೌಂಟಿಗೆ ಹಣ ಹೋಗಿದೆ. ಹಾಗಾಗಿ ಇದು ದೊಡ್ಡ ಅಪವಾದ. ಇದರಿಂದ ದೊಡ್ಡ ಹೋರಾಟ ಶುರುವಾಗಲಿದೆ. ನಮಗೆ ಹೈಕಮಾಂಡ್ ಕೂಡ ಸೂಚನೆ ಕೊಟ್ಟಿದೆ ಎಂದಿದ್ದಾರೆ.

  • ಮೀಸಲಾತಿ ಬಗ್ಗೆ ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ, ರಾಹುಲ್‌ಗೆ ಪಾಠ ಕಲಿಸಬೇಕಿದೆ: ಛಲವಾದಿ ನಾರಾಯಣಸ್ವಾಮಿ

    ಮೀಸಲಾತಿ ಬಗ್ಗೆ ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ, ರಾಹುಲ್‌ಗೆ ಪಾಠ ಕಲಿಸಬೇಕಿದೆ: ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ಅಮೆರಿಕಾದಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು (Rahul Gandhi) ಮೀಸಲಾತಿ ರದ್ದು ಮಾಡುವ ಹೇಳಿಕೆ ಕೊಟ್ಟಿದ್ದಾರೆ. ಅವರ ಹೇಳಿಕೆಯಿಂದ ದೇಶಾದ್ಯಂತ ವಿರೋಧ ಪಕ್ಷಗಳು, ದಲಿತ ಸಮುದಾಯಗಳು ಕುಪಿತಗೊಂಡಿವೆ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಿಡಿಕಾರಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರು ಈಗ ರಾಹುಲ್ ಅವರ ಹೇಳಿಕೆಗೆ ಉತ್ತರ ಕೊಡಲಾಗದೇ ತೇಪೆ ಹಾಕುವ ಕೆಲಸ ಮಾಡುತ್ತಿದ್ದಾರೆ. ದೇಶದ ಪ್ರಥಮ ಪ್ರಧಾನಿ ನೆಹರೂ (Jawaharlal Neharu) ಅವರು ಆ ಕಾಲದಲ್ಲೇ ಇದನ್ನು ಹೇಳಿದ್ದರು. ಮೀಸಲಾತಿ ಸರಿಯಾದ ಕ್ರಮ ಅಲ್ಲ. ಇದೊಂದು ಅನಿಷ್ಟ. ಇದರಿಂದ ದೇಶ ಉದ್ಧಾರವಾಗದು. ಇದರ ಬಗ್ಗೆ ನನಗೆ ಒಲವಿಲ್ಲ. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ನೆಹರೂ ಪತ್ರ ಬರೆದಿದ್ದರು. ಈ ಪತ್ರದ ಕುರಿತು ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಕೂಡ ಸದನದಲ್ಲಿ ಪ್ರಸ್ತಾಪ ಮಾಡಿ ಪತ್ರ ಪ್ರದರ್ಶನ ಮಾಡಿದ್ದರು ಎಂದು ವಿವರಿಸಿದ್ದಾರೆ.ಇದನ್ನೂ ಓದಿ: ಶಿಮ್ಲಾದಲ್ಲಿ ಅಕ್ರಮ ಮಸೀದಿ ನಿರ್ಮಾಣ ವಿಚಾರ – ಸ್ಥಳೀಯರು, ಪೊಲೀಸರ ನಡುವೆ ಗಲಾಟೆ

    ಮೀಸಲಾತಿ ವಿಚಾರದಲ್ಲಿ ನೆಹರೂ ಅವರ ಮನೋಭಾವವನ್ನೇ ರಾಹುಲ್ ಅವರೂ ಪ್ರಸ್ತಾಪ ಮಾಡಿದ್ದಾರೆ. ಕಾಂಗ್ರೆಸ್ ದಲಿತ ವಿರೋಧಿ. ಕಾಂಗ್ರೆಸ್ಸಿಗರು ಹೇಳೋದೊಂದು ಮಾಡೋದೊಂದು. ಮೀಸಲಾತಿಗೆ ವಿರುದ್ಧವಾಗಿಯೇ ಇದ್ದಾರೆ. ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಇವರು ಓಲೈಕೆ ಮಾಡಿ ಈ ರೀತಿ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

    ರಾಹುಲ್ ಗಾಂಧಿಯವರಿಗೆ ಸರಿಯಾದ ಪಾಠ ಕಲಿಸಬೇಕಿದೆ. ಈ ಕಾಂಗ್ರೆಸ್ಸಿಗೂ ಬುದ್ಧಿ ಕಲಿಸಬೇಕಾಗಿದೆ. ರಾಹುಲ್ ಗಾಂಧಿಯವರು ಮಾನಸಿಕ ಅಸ್ವಸ್ಥರಂತೆ ಭಾರತ ದೇಶದ ಮಾನಹಾನಿ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಆಗಿಂದಾಗ್ಗೆ ಭಾರತ ದೇಶದ ಮಾನಹಾನಿ ಮಾಡುವುದನ್ನು ನಾವು ಗಮನಿಸುತ್ತಿದ್ದೇವೆ. ಈ ದೇಶದ ಮಣ್ಣಿನಿಂದ ಹೊರಗಡೆ ಹೋದ ತಕ್ಷಣ ಭಾರತವನ್ನು ಅಪಮಾನ ಮಾಡುತ್ತಲೇ ಇರುತ್ತಾರೆ. ಇವತ್ತೂ ಅದನ್ನು ಮುಂದುವರೆಸಿದ್ದಾರೆ. ನಾವು ಈ ದೇಶವನ್ನು ತಾಯಿಗೆ ಹೋಲಿಸಿ ಭಾರತ್ ಮಾತಾ ಕೀ ಜೈ ಎನ್ನುತ್ತೇವೆ. ಭಾರತಾಂಬೆಯ ಕುರಿತು ರಾಹುಲ್ ಅವರ ಹೇಳಿಕೆ ಪೀಡಕ ಎಂದರೆ, ಸ್ಯಾಡಿಸ್ಟ್ ಮನೋಭಾವದಿಂದ ಕೂಡಿದೆ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಟಾಟಾ ನೆಕ್ಸಾನ್ EV ಬೆಲೆ 3 ಲಕ್ಷ ರೂಪಾಯಿ ಕಡಿತ

    ತಾಯಿಯನ್ನು ವಿವಸ್ತ್ರಗೊಳಿಸುವಂತಹ ಮಾತು ಅವರದು. ಈ ಮಾತು ಹೇಳಲು ನೋವಾಗುತ್ತದೆ. ಇವರು ವಿರೋಧ ಪಕ್ಷದ ನಾಯಕರಾಗಲು ಯೋಗ್ಯರೇ? ಇವರಿಗೆ ಎಂಥ ಪಾಠ ಕಲಿಸಬೇಕು. 2014, 2029ರಲ್ಲಿ ಅಧಿಕೃತ ವಿಪಕ್ಷ ಸ್ಥಾನ ಇರದ ಕಾರಣ ರಾಹುಲ್ ಅವರು ವಿಪಕ್ಷ ನಾಯಕರಾಗಲಿಲ್ಲ. ಈ ಬಾರಿ ಅಧಿಕೃತ ವಿಪಕ್ಷ ಸ್ಥಾನ ಸಿಕ್ಕಿದಾಗ ಬೇರೆಲ್ಲರನ್ನೂ ಬದಿಗೆ ಸರಿಸಿ ವಿಪಕ್ಷ ನಾಯಕರಾಗಿದ್ದಾರೆ. ಆದರೆ, ಅವರು ಈ ಸ್ಥಾನಕ್ಕೆ ಅರ್ಹರಲ್ಲ ಎಂದು ತಿಳಿಸಿದರು.

    ವಿದೇಶಕ್ಕೆ ಹೋಗಿ ದೇಶದ ಅಪಮಾನ ಮಾಡುವುದು, ಕೆಟ್ಟದಾಗಿ ನಡೆದುಕೊಳ್ಳುವುದು ಎಷ್ಟು ಸರಿ. ವಿಪಕ್ಷ ನಾಯಕನಾಗಿ ದೇಶದೊಳಗಡೆ ತಪ್ಪುಗಳನ್ನು ಹೇಳಬೇಕಿತ್ತು. ನೀವು ಹೊರದೇಶದಲ್ಲಿ ಭಾರತದ ಅವಮಾನ ಮಾಡುವುದು ಸರಿಯೇ? ಮೀಸಲಾತಿ ಯಾವ ಕಾರಣಕ್ಕೆ ಬಂದಿದೆ? ಬಡತನ ಎಂದರೇನು? ಎಂಬುದು ನಿಮಗೆ ಗೊತ್ತಿದೆಯೇ? ನೀವೆಲ್ಲರೂ ಶ್ರೀಮಂತಿಕೆಯಿಂದ ಮೆರೆಯುತ್ತಿದ್ದೀರಿ. ಬಡವರ ಬಗ್ಗೆ ಚಿಂತನೆ ಬಿಟ್ಟು, ಅವರ ಶ್ರೇಯೋಭಿವೃದ್ಧಿ ಬಯಸುವುದು ಬಿಟ್ಟು ಮೀಸಲಾತಿ ತೆಗೆಯುವುದಾದರೆ ನಿಮ್ಮ ಕಾಂಗ್ರೆಸ್ ಪಕ್ಷವು ಈ ದೇಶದಿಂದಲೇ ಹೋಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

    ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ನಾವು ಜನರನ್ನು ಸಜ್ಜುಗೊಳಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಮುಡಾ ಕೇಸ್‌ನ್ನು ಬಿತ್ತರಿಸದಿರಲಿ ಅಂತಾ ದರ್ಶನ್ ಕೇಸ್ ಫೋಟೋ ವೈರಲ್ ಮಾಡ್ತಾ ಇದ್ದೀರಾ? – ಛಲವಾದಿ ಆಕ್ಷೇಪ

    ಮುಡಾ ಕೇಸ್‌ನ್ನು ಬಿತ್ತರಿಸದಿರಲಿ ಅಂತಾ ದರ್ಶನ್ ಕೇಸ್ ಫೋಟೋ ವೈರಲ್ ಮಾಡ್ತಾ ಇದ್ದೀರಾ? – ಛಲವಾದಿ ಆಕ್ಷೇಪ

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ಚಾರ್ಜ್‌ಶೀಟ್‌ ವೈರಲ್ ಆಗಿರುವುದಕ್ಕೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮ ಪ್ರಕಟಣೆಯ ಮೂಲಕ ತಿಳಿಸಿದ ಅವರು, ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮೂರು ದಿನಗಳ ಹಿಂದೆ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ ಬೆನ್ನಲ್ಲೇ ಹಲವಾರು ಫೋಟೋಗಳು ವೈರಲ್ ಆಗುತ್ತಲೇ ಇವೆ. ಸದ್ಯ ಇನ್ನೂ ನ್ಯಾಯಾಲಯದಲ್ಲಿ ವಾದ-ಪ್ರತಿವಾದಗಳು ನಡೆಯುತ್ತಿರಬೇಕಾದರೆ ಈ ರೀತಿ ಫೋಟೋಗಳು ವೈರಲ್ ಆಗುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ರಾಗಿಣಿ, ಶುಭಾಗೂ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್: ‘ಚಾರ್ಜ್‌ಶೀಟ್’ನಲ್ಲಿ ಬಯಲು

    ನ್ಯಾಯಾಲಯದಲ್ಲಿ ಸಿನಿಮಾ ಸ್ಟಾರ್ ದರ್ಶನ್ ಗ್ಯಾಂಗ್‌ನಿಂದಾದ ಕೊಲೆ ಪ್ರಕರಣದ ಬಗ್ಗೆ ವಾದ-ಪ್ರತಿವಾದಗಳು ನಡೆಯುತ್ತಿರುವಾಗ, ದರ್ಶನ್ ಪೊಲೀಸ್ ಠಾಣೆಯಲ್ಲಿ ಹೀಗೆ ಕುಳಿತಿದ್ದನು, ಹಾಗೆ ಮಾಡಿದ್ದನು ಎಂಬುದಾಗಿ ಸರ್ಕಾರ ಅವರ ಫೋಟೋ ಬಿಡುಗಡೆ ಮಾಡುತ್ತಿರುವುದು ಏಕೆ? ತನಿಖಾ ವರದಿ (Investigation Report) ನ್ಯಾಯಾಲಯದಲ್ಲಿ ವಿಚಾರಣೆಗೆ ನೀಡುವ ಬದಲು ಮಾಧ್ಯಮಗಳಿಗೆ ಬಿಡುಗಡೆ ಮಾಡಲು ಕಾರಣವೇನು? ಇದು ಕಾನೂನು ಬಾಹಿರವಾಗಿ ಕಾಣುತ್ತಿಲ್ಲವೇ? ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸಿಎಂಗೆ ಬಾಂಬ್, ಆಟಂ ಬಾಂಬ್, ರಾಕೆಟ್ ಬಾಂಬ್ ಯಾರ‍್ಯಾರಿಟ್ಟಿದ್ದಾರೋ ಗೊತ್ತಿಲ್ಲ: ಆರ್.ಅಶೋಕ್

    ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ (CM Siddaramaiah) ಮುಡಾ ಕೇಸ್ (MUDA) ನ್ಯಾಯಾಲಯದಲ್ಲಿ ನಡೆಯುತ್ತಿರುವುದನ್ನು ಮೀಡಿಯಾಗಳು ಬಿತ್ತರಿಸದಿರಲಿ ಎಂಬ ತಂತ್ರವೇ? ಕೇವಲ ದರ್ಶನ್ ಅವರ ವಿಷಯವನ್ನೇ ಜನರು ನೋಡಲೆಂದು ಸರ್ಕಾರ ಈ ರೀತಿಯ ತಂತ್ರಗಾರಿಕೆ ಮಾಡುತ್ತಿದೆಯಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

  • ಉತ್ತಮ ಶಿಕ್ಷಕ ಪ್ರಶಸ್ತಿಗೆ ತಡೆ ಪ್ರಕರಣ; ಎಸ್‌ಡಿಪಿಐ ಕೇಳಿ ಈ ಸರ್ಕಾರ ನಡೀತಿದ್ಯಾ? – ಛಲವಾದಿ ಕಿಡಿ

    ಉತ್ತಮ ಶಿಕ್ಷಕ ಪ್ರಶಸ್ತಿಗೆ ತಡೆ ಪ್ರಕರಣ; ಎಸ್‌ಡಿಪಿಐ ಕೇಳಿ ಈ ಸರ್ಕಾರ ನಡೀತಿದ್ಯಾ? – ಛಲವಾದಿ ಕಿಡಿ

    ಬೆಂಗಳೂರು: ಉತ್ತಮ ಶಿಕ್ಷಕರ (Best Teacher) ಆಯ್ಕೆ ವಿಚಾರದಲ್ಲಿ ಸರ್ಕಾರಕ್ಕೆ ದೂರು ಕೊಟ್ಟಿದ್ದು ಯಾರು? ಎಸ್‌ಡಿಪಿಐನವರು (SDPI) ದೂರು ಕೊಟ್ಟಿದ್ದಾರೆ. ಎಸ್‌ಡಿಪಿಐ ಕೇಳಿ ಈ ಸರ್ಕಾರ ನಡೆಯುತ್ತಿದೆಯಾ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಪ್ರಶ್ನಿಸಿದ್ದಾರೆ.

    ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಯಾರನ್ನೋ ಓಲೈಕೆ ಮಾಡುವ ಕಾರಣಕ್ಕೆ ಇವತ್ತು ಕುಂದಾಪುರ ಸರ್ಕಾರಿ ಕಾಲೇಜು ಪ್ರಾಂಶುಪಾಲ ರಾಮಕೃಷ್ಣರಿಗೆ ನೀಡಿದ್ದ ಉತ್ತಮ ಪ್ರಶಸ್ತಿ ತಡೆಹಿಡಿಯುವ ಕ್ರಮ ಕೈಗೊಂಡಿದ್ದು ಸರಿಯಲ್ಲ. ಶಾಲೆಗಳು ಪವಿತ್ರ ಸ್ಥಳಗಳು. ಮಕ್ಕಳ ಮನಸ್ಸಿನಲ್ಲಿ ಇಂಥ ಕುಚೋದ್ಯತನ ಹುಟ್ಟುಹಾಕುವ ಕೆಲಸ ಮಾಡಬಾರದು ಎಂದು ತಿಳಿಸಿದರು. ಇದನ್ನೂ ಓದಿ: ಎತ್ತಿನಹೊಳೆ ಯೋಜನೆಯಲ್ಲಿ ಭ್ರಷ್ಟಾಚಾರ- ಸಮಗ್ರ ಅಧ್ಯಯನ ವರದಿ ಪಡೆದು ಮುಂದುವರೆಯಿರಿ: ಸಿಎಂಗೆ ಸಿ.ಟಿ.ರವಿ ಆಗ್ರಹ

    ಹನುಮಾನ್ ವಿಚಾರದಲ್ಲೂ ಎಸ್‌ಡಿಪಿಐ ದೂರು ನೀಡಿತ್ತು. ನೀವು ಆದೇಶ ಮಾಡಿಬಿಟ್ಟಿರಿ. ಆದೇಶ ಮಾಡಲು ನಿಮಗೆ ಅಧಿಕಾರ ಕೊಟ್ಟಿದ್ದು ಯಾರು? ಒಬ್ಬ ತಹಶೀಲ್ದಾರರಿಗೆ ಅದನ್ನು ಮಾಡಲು ಅಧಿಕಾರ ಇದೆಯೇ? ಮತ್ತೆ ಆದೇಶ ವಾಪಸ್ ಪಡೆದಿರಿ. ಅಲ್ಲಿ ಶಾಂತಿ ಕದಡುವ ವಾತಾವರಣ ಸೃಷ್ಟಿ ಆಗುತ್ತಿತ್ತು. ಜನ ನಿಮಗೆ ಛೀಮಾರಿ ಹಾಕಲು ಪ್ರಾರಂಭಿಸಿದ್ದರು. ಅದಕ್ಕೆ ವಾಪಸ್ ಪಡೆದಿರಿ ಅಲ್ಲವೇ ಎಂದು ತಹಶೀಲ್ದಾರರನ್ನು ಸಸ್ಪೆಂಡ್ ಮಾಡಲು ಒತ್ತಾಯಿಸಿದರು. ಇದನ್ನೂ ಓದಿ: ಶಿಕ್ಷಕರ ಸಮಸ್ಯೆಗೆ ಶೀಘ್ರವೇ ಪರಿಹಾರ: ಸಿದ್ದರಾಮಯ್ಯ

    ಇಂಥವೆಲ್ಲ ಮಾಡುತ್ತಿದ್ದರೆ ಈ ರಾಜ್ಯವನ್ನು ಕಾಪಾಡುವವರು ಯಾರು? ನಾವು ಇರಬಹುದು, ನೀವು ಇರಬಹುದು, ಯಾರೇ ಇರಬಹುದು, ಸ್ವಲ್ಪ ದಿನಕ್ಕೆ ಅಧಿಕಾರದಲ್ಲಿ ಇರುತ್ತೇವೆ. ಆದರೆ ಸಾಂವಿಧಾನಿಕ ವ್ಯವಸ್ಥೆ ಬಿಟ್ಟು ನೀವೇನೇ ಮಾಡಿದರೂ ಕೂಡ ಶಾಂತಿ ಕದಡುವ ವಾತಾವರಣ ಸೃಷ್ಟಿ ಆಗುತ್ತದೆ. ಅಂಥ ಕೆಲಸ ಮಾಡದಿರಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: Canada | ಅಲ್ಪ ಮತಕ್ಕೆ ಕುಸಿದ ಜಸ್ಟಿನ್‌ ಟ್ರುಡೊ ಸರ್ಕಾರ

  • ಕಾಂಗ್ರೆಸ್ ಭ್ರಷ್ಟಾಚಾರದ ಹಡಗು, ಸಿದ್ದರಾಮಯ್ಯ ರಾಜೀನಾಮೆ ಖಚಿತ – ಬಿಜೆಪಿ ನಾಯಕರ ವಾಗ್ದಾಳಿ

    ಕಾಂಗ್ರೆಸ್ ಭ್ರಷ್ಟಾಚಾರದ ಹಡಗು, ಸಿದ್ದರಾಮಯ್ಯ ರಾಜೀನಾಮೆ ಖಚಿತ – ಬಿಜೆಪಿ ನಾಯಕರ ವಾಗ್ದಾಳಿ

    – ಅಧಿಕಾರವಿಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಬದುಕಲು ಸಾಧ್ಯವೇ ಇಲ್ಲ
    – ಕಾಂಗ್ರೆಸ್ ಕುಟುಂಬ ಮೊದಲು, ದೇಶ ಕೊನೆಯಲ್ಲಿ ಎಂಬ ಧ್ಯೇಯ ಹೊಂದಿದೆ

    ಬೆಂಗಳೂರು: ಕಾಂಗ್ರೆಸ್ (Congress) ಎಂದರೆ ಅದು ಅಧಿಕಾರದಿಂದ, ಅಧಿಕಾರಕ್ಕೋಸ್ಕರ ಇರುವ ಪಕ್ಷ. ಅಧಿಕಾರ ಇಲ್ಲವೆಂದರೆ ಕಾಂಗ್ರೆಸ್ ಪಕ್ಷದವರು ನೀರಿನಿಂದ ಹೊರಗೆ ಬಿದ್ದ ಮೀನಿನಂತೆ ಚಡಪಡಿಸುತ್ತಾರೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B Y Vijayendra) ಟೀಕಿಸಿದ್ದಾರೆ.

    ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಧಿಕಾರವಿಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಬದುಕಲು ಸಾಧ್ಯವೇ ಇಲ್ಲ. ಬಿಜೆಪಿ ಮತ್ತೊಂದು ಕಡೆ ಸೇವೆಯೇ ಸಂಘಟನೆ ಎಂಬ ಶ್ರೇಷ್ಠ ಭಾವನೆಯಿಂದ ದೇಶ ಮೊದಲು, ನಂತರ ಪಕ್ಷ ಎಂಬ ಉತ್ತಮ ಸಿದ್ಧಾಂತ ಹೊಂದಿದೆ. ಕೋವಿಡ್ ದಿನಗಳಲ್ಲಿ ದೇಶದ ಇತರ ರಾಜಕೀಯ ಪಕ್ಷದವರು ಮನೆಯಲ್ಲಿ ಕೂತಿದ್ದರು. ಆದರೆ ನಮ್ಮ ಪಕ್ಷವು ದೇಶದ ಲಕ್ಷಾಂತರ ಜನರ ಸಂಕಷ್ಟಕ್ಕೆ ಸ್ಪಂದಿಸಿತ್ತು ಎಂದು ವಿವರಣೆ ನೀಡಿದರು.ಇದನ್ನೂ ಓದಿ: ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಬೇಡಿಕೆ ಪರಿಶೀಲಿಸಿ ಸೂಕ್ತ ಕ್ರಮ: ಸಿದ್ದರಾಮಯ್ಯ

    ಇದೇ ವೇಳೆ ಬಿಜೆಪಿಯ ರಾಜ್ಯ ಸಹ-ಉಸ್ತುವಾರಿ ಸುಧಾಕರ್ ರೆಡ್ಡಿ (Sudhakar Reddy) ಮಾತನಾಡಿ, ಇಲ್ಲಿ ಹಬ್ಬದ ವಾತಾವರಣ ಇದೆ. ಇದಕ್ಕಾಗಿ ವಿಜಯೇಂದ್ರ ಮತ್ತು ಅವರ ತಂಡಕ್ಕೆ ಅಭಿನಂದನೆಗಳು. ಗುರಿ ಮೀರಿ ಸಾಧನೆ ಮಾಡಿ. ನಮ್ಮದು ಸೇವೆ, ನಿಷ್ಠೆಯೊಂದಿಗೆ ದೇಶಹಿತ ಪಕ್ಷ. ಕಾಂಗ್ರೆಸ್ಸಿನದು ಕುಟುಂಬದ ಪಕ್ಷ ಎಂದರು.

    ಕಾಂಗ್ರೆಸ್, ಕುಟುಂಬ ಮೊದಲು, ದೇಶ ಕೊನೆಯಲ್ಲಿ ಎಂಬ ಧ್ಯೇಯ ಹೊಂದಿದೆ. ಕಾಂಗ್ರೆಸ್ ಪಕ್ಷವನ್ನು ವಿದೇಶಿಯರು ಸ್ಥಾಪಿಸಿದರೆ, ನಮ್ಮದು ಭಾರತೀಯರೇ ಸ್ಥಾಪಿಸಿದ ಪಕ್ಷ. ಕಾಂಗ್ರೆಸ್‌ನದು ಬೆಲೆ ಏರಿಸುವ, ಬೇಜವಾಬ್ದಾರಿ, ಹಗರಣಗಳ ಸರ್ಕಾರವಾಗಿದೆ. ಖರ್ಗೆ, ಸಿದ್ದರಾಮಯ್ಯರು ಭ್ರಷ್ಟರು. ಮುಖ್ಯಮಂತ್ರಿಯವರಿಗೆ ಆ ಹುದ್ದೆಯಲ್ಲಿ ಮುಂದುವರೆಯುವ ಹಕ್ಕಿಲ್ಲ. ಅವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

    ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R Ashok) ಮಾತನಾಡಿ, ಕಾಂಗ್ರೆಸ್ ಪಕ್ಷವು ಸದಸ್ಯತ್ವ ಆಧಾರದಲ್ಲಿ ಪಕ್ಷ ಬೆಳೆಸುವುದಿಲ್ಲ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ಕುಟುಂಬ ಇದೆಯೇ ಎಂಬುದು ಅವರಿಗೆ ಮಹತ್ವದ್ದು. ಒಂದೊಮ್ಮೆ ರಾಹುಲ್ ಗಾಂಧಿ (Rahul Gandhi) ಅವರಿಗೆ ಬೇಸರವಾಗಿ ಇಟಲಿಗೆ ಹೋದರೆ ಆ ಪಕ್ಷ ಇರುವುದಿಲ್ಲ. ಅದು ಲೀಡರ್‌ಗಳ ಪಕ್ಷ. ನಮ್ಮದು ಕಾರ್ಯಕರ್ತರ ಪಕ್ಷ ಎಂದು ತಿಳಿಸಿದರು.ಇದನ್ನೂ ಓದಿ: ಕಳಸಾ-ಬಂಡೂರಿ ಕಾಮಗಾರಿ ಪ್ರಾರಂಭಕ್ಕೆ ಕೇಂದ್ರದ ಮೇಲೆ ಒತ್ತಡ ಹಾಕಲು ಸಭೆ ಕರೆಯಿರಿ- ಸಿಎಂಗೆ ಕೋನರೆಡ್ಡಿ ಒತ್ತಾಯ

    ಸದಸ್ಯತ್ವವನ್ನು ವಿಸ್ತೃತವಾಗಿ ಮಾಡಬೇಕಿದೆ. ಅದಕ್ಕಾಗಿ ಬೀದಿಗೆ ಇಳಿಯಬೇಕು. ಕಾಂಗ್ರೆಸ್ ಪಕ್ಷವು ಹೆಸರಿಗೆ ಬೇಕಾಗಿ ಹಣ ತಾವೇ ನೀಡಿ ಸದಸ್ಯರನ್ನು ಮಾಡುತ್ತದೆ. ಇಲ್ಲಿ ಹಾಗಿಲ್ಲ. ನಾವು ಸದಸ್ಯತ್ವಕ್ಕೆ ಶುಲ್ಕ ಇಟ್ಟಿಲ್ಲ. ಸಕ್ರಿಯ ಸದಸ್ಯರು 100 ರೂ. ಕೊಡಬೇಕಿದೆ. ಬಿಜೆಪಿಯ ಜೀವ ಕಾರ್ಯಕರ್ತರು ಮತ್ತು ಸದಸ್ಯರಲ್ಲಿದೆ ಎಂದರು.

    ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy)ಮಾತನಾಡಿ, ಸದಸ್ಯತ್ವ ನೋಂದಣಿ ಕಾರ್ಯವು ಹಬ್ಬದ ಮಾದರಿಯಲ್ಲಿ ನಡೆಯಲಿ. ರಾಜ್ಯದಲ್ಲಿ ನಾವು ಯಾವುದೇ ಸಂದರ್ಭದಲ್ಲೂ ಚುನಾವಣೆ ಎದುರಿಸುವ ಸ್ಥಿತಿ ಬರಬಹುದು. ಆದ್ದರಿಂದ ಪಕ್ಷವನ್ನು ಬಲಪಡಿಸಲು ಶ್ರಮಿಸೋಣ ಎಂದು ಅಭಿಪ್ರಾಯಪಟ್ಟರು.

    ಬಿಜೆಪಿ ತಳಮುಖವಾಗಿ ಮೇಲಕ್ಕೆ ಬೆಳೆದ ಪಕ್ಷ. ಇದರ ಶಕ್ತಿ ನಾಯಕರಲ್ಲ. ಬಿಜೆಪಿ ಶಕ್ತಿ ಕಾರ್ಯಕರ್ತರ ರೂಪದಲ್ಲಿದೆ. ಸಮಾಜದ ಅನೇಕಾನೇಕ ಪ್ರಕೋಷ್ಠಗಳಲ್ಲಿ ಕೆಲಸ ಮಾಡುವವರೇ ಕಾರ್ಯಕರ್ತರು. 1980ರಲ್ಲಿ 1% ರಷ್ಟು ಮತ ಪಡೆದರೆ ಖುಷಿ ಪಡುವ ಪಕ್ಷ ನಮ್ಮದಾಗಿತ್ತು. ಇದೀಗ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿದ ಪಕ್ಷ ಬಿಜೆಪಿ. ಹಿಂದೆ ದೇಶದಲ್ಲಿ 18 ಕೋಟಿ ಸದಸ್ಯರಿದ್ದು, ರಾಜ್ಯದಲ್ಲಿ 1.04 ಕೋಟಿ ಸದಸ್ಯರಿದ್ದರು. ವಿಜಯೇಂದ್ರ ಅವರು ಅಧ್ಯಕ್ಷರಾದ ಬಳಿಕ ನವಚೈತನ್ಯ ನಮ್ಮ ಪಕ್ಷಕ್ಕೆ ಲಭಿಸಿದೆ. ನಮ್ಮ ಶಕ್ತಿ ಈಗ ಏರುಮುಖವಾಗುತ್ತಿದೆ. ಕಾಂಗ್ರೆಸ್ ಪಕ್ಷದ ಆಡಳಿತವುಳ್ಳ ರಾಜ್ಯಗಳು ಇಳಿಮುಖವಾಗುತ್ತಿದೆ ಎಂದರು.

    ಸAಸದರಾದ ಗೋವಿಂದ ಕಾರಜೋಳ, ಪಿ.ಸಿ.ಮೋಹನ್, ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸುನೀಲ್ ಕುಮಾರ್, ಪ್ರೀತಂ ಗೌಡ, ಶಾಸಕರಾದ ಗೋಪಾಲಯ್ಯ, ರಾಮಮೂರ್ತಿ, ಎಸ್‌ಆರ್ ವಿಶ್ವನಾಥ್, ಮುನಿರತ್ನ, ಪ್ರಕೋಷ್ಠಗಳ ಸಂಯೋಜಕ ದತ್ತಾತ್ರಿ, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಕೋರ್ ಕಮಿಟಿ ಸದಸ್ಯರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಪಕ್ಷದ ಮುಖಂಡರು ಉಪಸ್ಥಿತರಿದ್ದರು.ಇದನ್ನೂ ಓದಿ: ಪ್ರೀತಿಸಲು ಕೋರ್ಟ್ ಅನುಮತಿ ಬೇಡ: ಮದುವೆ ಲೈಫ್‌ ಬಗ್ಗೆ ಮಾತನಾಡಿದ ರಿಯಾ ಚಕ್ರವರ್ತಿ

    ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಸದಸ್ಯತ್ವ ಅಭಿಯಾನದ ಸಂಚಾಲಕ ನಂದೀಶ್ ರೆಡ್ಡಿ ಸ್ವಾಗತಿಸಿದರು. ಒಂದೇ ದಿನದಲ್ಲಿ 50.31 ಲಕ್ಷ ಜನರಿಗೂ ಹೆಚ್ಚು ಜನರು ಸದಸ್ಯರಾಗಿದ್ದಾರೆ. ಈಗ ಕರ್ನಾಟಕ ರಾಜ್ಯದಲ್ಲಿ 5 ಲಕ್ಷಕ್ಕೂ ಹೆಚ್ಚು ಸದಸ್ಯರ ನೋಂದಣಿ ಆಗಿದೆ ಎಂದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಕಾರ್ಯಕ್ರಮ ನಿರ್ವಹಿಸಿದರು.

  • ನಾನು ಛಲವಾದಿ, ನನ್ನ ವಿರುದ್ಧ ದೂರು ಕೊಟ್ಟರೂ ನಾನು ಹೆದರಲ್ಲ: ನಾರಾಯಣಸ್ವಾಮಿ

    ನಾನು ಛಲವಾದಿ, ನನ್ನ ವಿರುದ್ಧ ದೂರು ಕೊಟ್ಟರೂ ನಾನು ಹೆದರಲ್ಲ: ನಾರಾಯಣಸ್ವಾಮಿ

    ಬೆಂಗಳೂರು: ಕಾಂಗ್ರೆಸ್ (Congress) ಅವರು ರಾಜ್ಯಪಾಲರಿಗೆ ಕೊಟ್ಟಿರುವ ದೂರನ್ನು ನಾನು ಸ್ವಾಗತ ಮಾಡುತ್ತೇನೆ. ನಾನು ಛಲವಾದಿ. ಯಾವುದಕ್ಕೂ ಹೆದರಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಸವಾಲ್ ಹಾಕಿದ್ದಾರೆ.

    ಛಲವಾದಿ ನಾರಾಯಣಸ್ವಾಮಿ ಸಿಎ ಸೈಟ್ ಅಕ್ರಮವಾಗಿ ಖರೀದಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಶಾಸಕರು ರಾಜ್ಯಪಾಲರಿಗೆ ದೂರು ನೀಡಿರುವ ವಿಚಾರಕ್ಕೆ ವಿಧಾನಸೌಧದಲ್ಲಿ ಅವರು ಪ್ರತಿಕ್ರಿಯೆ ನೀಡಿದರು. ನನ್ನ ವಿರುದ್ಧ ರಾಜ್ಯಪಾಲರಿಗೆ ಕಾಂಗ್ರೆಸ್ ಅವರು ದೂರು ಕೊಟ್ಟಿರೋದನ್ನು ನಾನು ಸ್ವಾಗತ ಮಾಡುತ್ತೇನೆ. 20 ವರ್ಷಗಳ ಹಿಂದಿನ ಪ್ರಕರಣ ಇದು. ಇದು ಪೊಲಿಟಿಕಲ್ ಗೇಮ್. ಇದಕ್ಕೆ ನಾನು ಹೆದರಲ್ಲ. ಕಾಂಗ್ರೆಸ್ ಅವರು ಬಹಳ ಕಷ್ಟ ಪಟ್ಟಿದ್ದಾರೆ. ನಾನು ಕೆಲಸ ಕೊಟ್ಟ ಮೇಲೆ ಅವರು ನನ್ನ ವಿರುದ್ಧ ಕೆಲಸ ಶುರು ಮಾಡಿದ್ದಾರೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಕೊಡಿಸಲು ಕೋರ್ಟ್‌ನಲ್ಲಿ ಹೋರಾಟ: ಜಿ.ಪರಮೇಶ್ವರ್

    ಯಾರೋ ಒಬ್ಬರು ಟ್ರಸ್ಟ್ ಮಾಡಿ ನನ್ನನ್ನು ಟ್ರಸ್ಟ್ ಮೆಂಬರ್ ಮಾಡಿದ್ದರು. ನಾನು ಟ್ರಸ್ಟ್ ಬಿಟ್ಟು 10 ವರ್ಷ ಆಗಿತ್ತು. ಅದಕ್ಕೂ ನನಗೂ ಸಂಬಂಧವಿಲ್ಲ. ಯಾಕೆ ದೂರು ಕೊಟ್ಟರು ಅಂತ ನಾನು ಪ್ರಶ್ನೆ ಕೇಳಲ್ಲ. ಆದರೆ ನಮ್ಮ ಆರೋಪಕ್ಕೆ ಇದೇ ಕಾಂಗ್ರೆಸ್ ಉತ್ತರನಾ? ಮೊದಲು ನನ್ನ ಆರೋಪಕ್ಕೆ ಕಾಂಗ್ರೆಸ್ ನಾಯಕರು ಉತ್ತರ ಕೊಡಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಹಾವೇರಿ ವಿವಿಯ ಕುಲಸಚಿವರಾಗಿದ್ದ ದಿನೇಶ್ ಕುಮಾರ್ ನೇಮಕಾತಿ ರದ್ದು

    ದೂರು ಕೊಟ್ಟ ಯಾರೂ ನನ್ನನ್ನು ಎಂಎಲ್‌ಸಿ ಮಾಡಿಲ್ಲ. ಬಿಜೆಪಿ (BJP) ನನ್ನನ್ನು ವಿಪಕ್ಷ ನಾಯಕ ಮಾಡಿದ್ದು. ನಾನು ತಪ್ಪು ಮಾಡಿದರೆ ಪಕ್ಷ ಕ್ರಮ ತೆಗೆದುಕೊಳ್ಳುತ್ತದೆ. ನಾನು ಛಲವಾದಿ. ನಾನು ಇರೋದು ಹೀಗೆ. ನಾನು ಯಾರನ್ನೂ ಸುಮ್ಮನೆ ಬಿಡಲ್ಲ. KIADB ಅವರು ಜಮೀನು ನೀಡಿದ್ದಾರೆ. ನಿಯಮದ ಪ್ರಕಾರವೇ ಎಲ್ಲವೂ ಆಗಿದೆ. ಕಾಂಗ್ರೆಸ್‌ನಲ್ಲಿ ಇದ್ದಾಗ ಆ ಸೈಟ್ ವಾಪಸ್ ಪಡೆದರು. ಕೋರ್ಟ್‌ಗೆ ಹೋಗಿ ನಾನು ಆ ಸೈಟ್ ಪಡೆದಿದ್ದೇನೆ ಎಂದು ವಿವರಣೆ ನೀಡಿದರು. ಇದನ್ನೂ ಓದಿ: ಬಂಗಾಳ ವಿಧಾನಸಭೆಯಲ್ಲಿ ಅತ್ಯಾಚಾರ ವಿರೋಧಿ ಮಸೂದೆ ಮಂಡನೆ

    ಆದರ್ಶ ಸ್ಕೂಲ್ ಜಾಗಕ್ಕೆ ನಾನು ಮಾಲೀಕ ಅಲ್ಲ. ಅದೊಂದು ಟ್ರಸ್ಟ್. ಕಾಂಗ್ರೆಸ್ ಅವರು ಧಂ ಬಿರಿಯಾನಿ ಮಾಡಿಕೊಳ್ಳಲಿ ಏನಾದ್ರು ಮಾಡಿಕೊಳ್ಳಲಿ. ನಾನು ಆ ಟ್ರಸ್ಟ್ ಮೆಂಬರ್ ಆಗಿದ್ದೆ ಅಷ್ಟೆ. ಟ್ರಸ್ಟ್ ಜಾಗ ನನ್ನ ಹೆಸರಿಗೆ ಮಾಡಿಕೊಳ್ಳಲು ಆಗಲ್ಲ. 10 ವರ್ಷಗಳ ಹಿಂದೆಯೇ ನಾನು ಮೆಂಬರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆ ಟ್ರಸ್ಟ್ ಜಾಗ ನಾನು ಖರೀದಿ ಮಾಡಿಲ್ಲ. ಅದು ಟ್ರಸ್ಟ್ ಜಾಗ. ಅದನ್ನು ಖರೀದಿ ಮಾಡಲು ಆಗಲ್ಲ. ಪಾಪ ಕಾಂಗ್ರೆಸ್ ಅವರಿಗೆ ಇದೆಲ್ಲ ಏನು ಗೊತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಆಂಧ್ರ, ತೆಲಂಗಾಣದಲ್ಲಿ ಭಾರಿ ಮಳೆ ಪ್ರವಾಹ; 35 ಮಂದಿ ಸಾವು

    ನಾನು ಎಲ್ಲೂ ಮಲ್ಲಿಕಾರ್ಜುನ ಖರ್ಗೆ ಹೆಸರು ಹೇಳೇ ಇಲ್ಲ. ದಿನೇಶ್ ಕಲ್ಲಹಳ್ಳಿ ದೂರು ಕೊಟ್ಟಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದೂರು ಕೊಟ್ಟಿದ್ದಾರೆ. ಅದಕ್ಕೆ ನಾವು ಕ್ರಮ ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದೆವು. ಖರ್ಗೆ ಮೇಲೆ ಸಂಪೂರ್ಣ ಗೌರವ ಇದೆ. ನಮ್ಮ ಸಮುದಾಯದ ದೊಡ್ಡ ನಾಯಕರು ಅವರು. ಸಮುದಾಯದ ವಿಷಯ ಬೇರೆ. ಪಕ್ಷದ ವಿಷಯ ಬೇರೆ. ಸರ್ಕಾರ ಮಾಡುವ ತಪ್ಪು ನಾನು ಹೇಳಬೇಕು. ದಾಖಲಾತಿ ಬಿಡುಗಡೆ ಮಾಡಿದ್ದೇನೆ. ನಾನು ಎರಡು ಕೇಸ್ ಹೇಳಿದ ಕೂಡಲೇ KIADB ಕಚೇರಿ ಬಾಗಿಲು ಹಾಕಿದ್ದಾರೆ. ಯಾವುದೇ ಡಾಕ್ಯುಮೆಂಟ್ ಪಡೆಯಲು ಬಿಡುತ್ತಿಲ್ಲ. ಅನುಮತಿ ಪಡೆದು ಒಳಗೆ ಹೋಗಬೇಕು ಎಂದು ಮಾಡಿದ್ದಾರೆ. ನಿಮ್ಮ ತಪ್ಪು ಇಲ್ಲ ಅಂದರೆ ಯಾಕೆ KIADB ಕ್ಲೋಸ್ ಮಾಡಿ ಕೆಲಸ ಮಾಡಿಸುತ್ತಿದ್ದೀರಾ. ನೀವು ಬಾಗಿಲು ಹಾಕಿದರೆ ನಮಗೆ ಡಾಕ್ಯುಮೆಂಟ್ ಸಿಗೋದಿಲ್ಲ. ನಿಯಮದ ಪ್ರಕಾರ 100 ಸೈಟ್ ಬೇಕಾದರೂ ಪಡೆಯಲಿ. ಆದರೆ ಇಲ್ಲಿ ನಿಯಮ ಉಲ್ಲಂಘನೆ ಆಗಿದೆ ಅಂತ ದೂರು ಕೊಟ್ಟಿದ್ದಾರೆ. ಅದನ್ನು ತನಿಖೆ ಮಾಡಿ ಅಂತ ನಾನು ಕೇಳಿದ್ದೇನೆ ಅಷ್ಟೆ. ಇದರಲ್ಲಿ ತಪ್ಪೇನಿದೆ. ಇದಕ್ಕೆ ನನ್ನ ಮೇಲೆ ದೂರು ಕೊಟ್ಟರೆ ಅದನ್ನು ನಾನು ಎದುರಿಸುತ್ತೇನೆ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಫಿಲಿಪೈನ್ಸ್‌ನಲ್ಲಿ ಭಾರೀ ಮಳೆಯಿಂದ ಭೂಕುಸಿತ – 14 ಮಂದಿ ದುರ್ಮರಣ