Tag: chalavadi narayanaswamy

  • ಮುಡಾ ಕೇಸ್‌ನಲ್ಲಿ ನಿಜವಾದ ಕಳ್ಳ ಸಚಿವ ಬೈರತಿ ಸುರೇಶ್: ಛಲವಾದಿ ನಾರಾಯಣಸ್ವಾಮಿ

    ಮುಡಾ ಕೇಸ್‌ನಲ್ಲಿ ನಿಜವಾದ ಕಳ್ಳ ಸಚಿವ ಬೈರತಿ ಸುರೇಶ್: ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ಮುಡಾ ಕೇಸ್‌ನಲ್ಲಿ (MUDA Case) ನಿಜವಾದ ಕಳ್ಳ ಸಚಿವ ಬೈರತಿ ಸುರೇಶ್ (Byrathi Suresh) ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಬೈರತಿ ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಶುಕ್ರವಾರ ಗೃಹ ಕಚೇರಿ ಕೃಷ್ಣದಲ್ಲಿ ಸಚಿವ ಬೈರತಿ ಸುರೇಶ್ ಮಾತನಾಡಿ, ಛಲವಾದಿ ನಾರಾಯಣಸ್ವಾಮಿ ಮುಡಾ ದಾಖಲೆ ಕದ್ದಿರಬಹುದು ಎಂದು ಆರೋಪ ಮಾಡಿದ್ದರು. ಇದಕ್ಕೆ ಇಂದು ಛಲವಾದಿ ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಸಿಎಂ ಪತ್ನಿ ವಿರುದ್ಧ ಮತ್ತೊಂದು ಭೂ ಅಕ್ರಮ ಆರೋಪ

    ಈ ಕುರಿತು ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಮುಡಾ ಕಚೇರಿ ಮೇಲೆ ಇ.ಡಿ ದಾಳಿ ಮಾಡಿದೆ. ದಾಖಲೆಗಳನ್ನು ಕಲೆ ಹಾಕುತ್ತಿದೆ. ಸಿಎಂ ರಾಜೀನಾಮೆ ಕೊಡಬೇಕು ಎಂದು ಕೇಳಿದ್ದೆ. ಬೈರತಿ ಸುರೇಶ್ ಅವರು ಹೆಲಿಕಾಪ್ಟರ್‌ನಲ್ಲಿ ಹೋಗಿ ದಾಖಲೆ ಹೊತ್ತು ತಂದಿದ್ದರು ಎಂದು ಚರ್ಚೆ ಆಗುತ್ತಿತ್ತು. ಹೀಗಾಗಿ ಅವರನ್ನು ತನಿಖೆ ಮಾಡಬೇಕು ಅಂತ ಹೇಳಿದ್ದೆ. ಇದಕ್ಕೆ ನನ್ನನ್ನೇ ಸುರೇಶ್ ಕಳ್ಳ ಅಂದಿದ್ದಾರೆ. ಆದರೆ ನಿಜವಾದ ಕಳ್ಳ ನೀವು ಎಂದು ಕಿಡಿಕಾರಿದರು. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ – ಬೇಲ್ ಸಿಕ್ಕರೂ ಆರೋಪಿ ರವಿಶಂಕರ್‌ಗೆ ಇಲ್ಲ ಬಿಡುಗಡೆ ಭಾಗ್ಯ

    ಮುಡಾ ಕೇಸ್ ಹೊರಗೆ ಬಂದ ಕೂಡಲೇ ಹೆಲಿಕಾಪ್ಟರ್‌ನಲ್ಲಿ ಮುಡಾ ಕಚೇರಿಗೆ ಹೋಗಿದ್ದು ಸುರೇಶ್. ಅವತ್ತು ಅವರು ಹೆಲಿಕಾಪ್ಟರ್‌ನಲ್ಲಿ ದಾಖಲಾತಿ ತರದೇ ಇದ್ದರೆ ಈ ಕೇಸ್ ಇಷ್ಟು ಹೈಪ್ ಆಗುತ್ತಿರಲಿಲ್ಲ. ಸಿಎಂ ಅವರನ್ನು ಸಿಕ್ಕಿಸಿದ್ದು ಇದೇ ಸುರೇಶ್. ಶುಕ್ರವಾರ ಸುರೇಶ್ ಕುಮಾರಸ್ವಾಮಿ ಫೈಲ್ ತಂದಿರಬಹುದು ಎಂದು ಆರೋಪಿಸಿದರು. ಇದನ್ನೂ ಓದಿ: ಇಸ್ರೇಲ್‌ ಅಧ್ಯಕ್ಷ ನೆತನ್ಯಾಹು ನಿವಾಸದ ಮೇಲೆ ಹಿಜ್ಬುಲ್ಲಾ ಡ್ರೋನ್‌ ದಾಳಿ

    ಛಲವಾದಿ ನಾರಾಯಣಸ್ವಾಮಿ ದಾಖಲಾತಿ ಕದ್ದಿದ್ದಾರೆ ಎಂದು ಹೇಳಿದ್ದಾರೆ. ಮಿಸ್ಟರ್ ಸುರೇಶ್ ಅವರೇ, ನೀವು ಮಂತ್ರಿ ಆಗೋಕೆ ಯೋಗ್ಯರು ಅಲ್ಲ. ನಾನು ದಾಖಲಾತಿ ಕದ್ದಿದ್ದರೆ ನೀವು ಏನು ಕಡ್ಲೆಪುರಿ, ಚುರುಮುರಿ ತಿಂತಿದ್ರಾ? ನನ್ನ ಮೇಲೆ ದೂರು ಕೊಡಬೇಕಿತ್ತು. ನಾಲಿಗೆ ಹೇಗೆ ಹೋಗುತ್ತೆ ಅಂತ ಮಾತಾಡಬಾರದು. ನನ್ನನ್ನು ಕಳ್ಳ ಅಂತ ಹೇಳಿದ್ದೀರಿ. ಕುಮಾರಸ್ವಾಮಿ ಅವರನ್ನು ಯಾಕೆ ಕಳ್ಳ ಅಂದಿಲ್ಲ. ನಾನು ದಲಿತ ಸಮುದಾಯದವನು ಅಂತ ನನ್ನನ್ನು ಕಳ್ಳ ಅಂದ್ರಾ? ನಾನು ಏನು ಮಾತಾಡಲ್ಲ ಅಂತ ನನ್ನನ್ನ ಕಳ್ಳ ಅಂದ್ರಾ? ಸಮಯ ಬಂದಾಗ ನಮ್ಮ ಸಮುದಾಯದ ಜನ ನಿಮಗೆ ಉತ್ತರ ಕೊಡುತ್ತಾರೆ. ತಪ್ಪು ಮಾಡಿದ್ದು ನೀವು. ನೀವು ಕಳ್ಳ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮುಡಾ ಫೈಲ್‌ಗಳನ್ನು ಸುಟ್ಟು ಹಾಕಿರುವ ಬೈರತಿ ಸುರೇಶ್‌ರನ್ನು ಕೂಡಲೇ ಬಂಧಿಸಿ – ಶೋಭಾ ಕರಂದ್ಲಾಜೆ

    ನಿಮಗೆ ತಾಕತ್ ಇದ್ದರೆ ನನ್ನ ಮೇಲೆ ಒಂದು ಕೇಸ್ ಹೇಳಿ ನೋಡೋಣ. ಬಿರಿಯಾನಿ ಅಂಗಡಿ ಇಟ್ಟಿದ್ದಾನೆ ಛಲವಾದಿ ನಾರಾಯಣಸ್ವಾಮಿ ಅಂತ ನಿಮಗೆ ಹೊಟ್ಟೆ ಉರಿ. ನಾನು ಯಾವುದೇ ಬಿರಿಯಾನಿ ಅಂಗಡಿ ಇಟ್ಟಿಲ್ಲ. ದಲಿತರು ಅಂಗಡಿ ಇಟ್ಟರೆ ನೀವು ತಿನ್ನುತ್ತೀರಾ? ಹಾರಿಕೆ ಉತ್ತರ ನೀಡೋದು, ಅಪಾದನೆ ಮಾಡೋದು ಕಾಂಗ್ರೆಸ್‌ಗೆ ಒಂದು ಚಟ ಆಗಿದೆ. ಮುಡಾ ಫೈಲ್ ಕದ್ದು ತಂದಿದ್ದು ನೀವು. ವೈಟ್ನರ್ ಹಾಕಿದ್ದು ಯಾರು? ನೀವು ಕದ್ದು ಆಸ್ತಿ ಮಾಡಿರೋದು ಪಟ್ಟಿ ಹೇಳಲಾ? ನೂರಾರು ಇದೆ. ನನನ್ನು ಕೆಣಕಿದರೆ ನಾನು ಸುಮ್ಮನೆ ಇರಲ್ಲ. ನಾನು ಯಾರಿಗೂ ಜಗ್ಗೋನು ಅಲ್ಲ, ಬಗ್ಗೋದು ಇಲ್ಲ. ನೀವು ಯಾರಿಗೂ ಜಗ್ಗಲ್ಲ ಅಂದರೆ ಯಾಕೆ ಸೈಟ್ ವಾಪಸ್ ಕೊಟ್ರಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನಾಗಸಂಧ್ರ to ಮಾದಾವರ ಮೆಟ್ರೋ ಉದ್ಘಾಟನೆ ಸಿದ್ಧತೆಗೆ ಬಿಬಿಎಂಪಿಗೆ ಪತ್ರ

    ಬಿಜೆಪಿ ಅವರು ಬಟ್ಟೆ ಹರಿದುಕೊಂಡರೂ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡಲ್ಲ ಎನ್ನುತ್ತಾರೆ. ನಾವು ಯಾಕೆ ಬಟ್ಟೆ ಹರಿದುಕೊಳ್ಳೋಣ. ನಿಮ್ಮ ಬಟ್ಟೆ ಹರಿಯುತ್ತೇವೆ. ಈ ಸರ್ಕಾರದಲ್ಲಿರುವ ಸಚಿವರು ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಸಚಿವರು ಜಾಮೀನಿನ ಮೇಲೆ ಹೊರಗೆ ಬರುತ್ತಿದ್ದಾರೆ. ಸುರೇಶ್ ಅವರೇ ನಾಲಿಗೆ ಬಿಗಿ ಹಿಡಿದು ಮಾತನಾಡಿ. ನಾನು ಕಳ್ಳ ಅಲ್ಲ. ನಿಜವಾದ ಕಳ್ಳ ಬೈರತಿ ಸುರೇಶ್. ಸುರೇಶ್ ರಾಜೀನಾಮೆ ಕೊಡಬೇಕು ಎಂದರು. ಇದನ್ನೂ ಓದಿ: ದೀಪಾವಳಿ, ಛತ್ ಪೂಜೆಗೂ ಮುನ್ನವೇ ದೆಹಲಿಯಲ್ಲಿ ಮಾಲಿನ್ಯ – ಯಮುನಾ ನದಿಯಲ್ಲಿ ದಪ್ಪ ನೊರೆ, ಆತಂಕದಲ್ಲಿ ಜನರು

    ಇ.ಡಿ ಕೇಳಿದಾಗ ತಕ್ಷಣ ದಾಖಲೆ ಕೊಡಬೇಕಿತ್ತು. 3 ಸಾರಿ ನೋಟಿಸ್ ಬಂದರೂ ಯಾಕೆ ದಾಖಲೆ ಕೊಡಲಿಲ್ಲ. ನೀವು ಸಿಎಂ ಅವರು ಮಾನಸಪುತ್ರ. ಸಿದ್ದರಾಮಯ್ಯ ಬೇನಾಮಿ ಸುರೇಶ್ ಎಂದು ಎಲ್ಲರೂ ಹೇಳುತ್ತಾರೆ. ನೀವು ಏನು ಕದ್ದಿದ್ದೀರಿ ಎಂದು ನಾನು ಮುಂದೆ ಸಾಬೀತು ಮಾಡುತ್ತೇನೆ ಎಂದು ಸವಾಲ್ ಹಾಕಿದರು. ಇದನ್ನೂ ಓದಿ: ಮುಡಾ ಕೇಸ್‌ನಲ್ಲಿ ಆರೋಪಿಗಳ ಪಾಸ್‌ಪೋರ್ಟ್ ವಶಪಡಿಸಿಕೊಳ್ಳಿ: ಇ.ಡಿಗೆ ಅಶೋಕ್ ಮನವಿ

    ಮುಡಾ ಕೇಸ್‌ನಲ್ಲಿ ಸಹಾಯ ಮಾಡಿದ್ದಕ್ಕೆ ಕುಮಾರ್ ನಾಯಕ್ ಅವರಿಗೆ ಟಿಕೆಟ್ ಕೊಟ್ಟು ಸಿದ್ದರಾಮಯ್ಯ ಋಣ ತೀರಿಸಿದ್ದಾರೆ. ವಾಲ್ಮೀಕಿ ನಿಗಮದ ಹಣ ಬಳ್ಳಾರಿ ಚುನಾವಣೆಗೆ ಹೋಗಿದೆ ಎಂದು ಇ.ಡಿ ಹೇಳಿದೆ. ಹೀಗಾಗಿ ತುಕಾರಾಂ, ಕುಮಾರ್ ನಾಯಕ್ ರಾಜೀನಾಮೆ ನೀಡಬೇಕು. ಸಿದ್ದರಾಮಯ್ಯ ಮತ್ತು ಬೈರತಿ ಸುರೇಶ್ ಕೂಡಾ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಉತ್ತರ ಕುಮಾರ ಇದ್ದಂತೆ: ಈಶ್ವರಪ್ಪ ಲೇವಡಿ

  • MUDA Scam| ಸಿಎಂ ತಕ್ಷಣ ರಾಜೀನಾಮೆ ನೀಡಬೇಕು, ಸಿಬಿಐಗೆ ನೀಡದಿದ್ರೆ ಕೇಸ್‌ ಮುಚ್ಚಿ ಹಾಕ್ತಾರೆ: ಛಲವಾದಿ ನಾರಾಯಣಸ್ವಾಮಿ

    MUDA Scam| ಸಿಎಂ ತಕ್ಷಣ ರಾಜೀನಾಮೆ ನೀಡಬೇಕು, ಸಿಬಿಐಗೆ ನೀಡದಿದ್ರೆ ಕೇಸ್‌ ಮುಚ್ಚಿ ಹಾಕ್ತಾರೆ: ಛಲವಾದಿ ನಾರಾಯಣಸ್ವಾಮಿ

    – ನಿಗಮವನ್ನು ತಿಂದು ತೇಗಿದವರು ವಾಲ್ಮೀಕಿ ಜಯಂತಿ ಆಚರಿಸುತ್ತಿದ್ದಾರೆ
    – ವಾಲ್ಮೀಕಿ ಜಯಂತಿಯನ್ನು ಪಶ್ಚಾತ್ತಾಪ ದಿನವನ್ನಾಗಿ ಆಚರಿಸಬೇಕಿತ್ತು

    ಬೆಂಗಳೂರು: ಮೈಸೂರು ಮುಡಾ (MUDA) ನಿವೇಶನ ಹಂಚಿಕೆ ಹಗರಣವನ್ನು ಸಿಬಿಐಗೇ (CBI) ಕೊಡಬೇಕು. ಹಾಗಿದ್ದರೆ ಮಾತ್ರ ಸತ್ಯಾಂಶ ಹೊರಬರಲು ಸಾಧ್ಯ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅವರು ಆಗ್ರಹಿಸಿಸಿದರು.

    ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ತನಿಖೆಯನ್ನು ಸಿಬಿಐಗೆ ಕೊಡದೇ ಇದ್ದಲ್ಲಿ ಕೇಸನ್ನು ಸಂಪೂರ್ಣವಾಗಿ ಮುಚ್ಚಿ ಹಾಕುವ ವ್ಯವಸ್ಥೆ ನಡೆಯುತ್ತಿದೆ ಎಂಬ ಅನುಮಾನವಿದೆ ಎಂದು ತಿಳಿಸಿದರು.

    ಕಾಂಗ್ರೆಸ್ಸಿನವರಿಗೆ ಮಾನವೀಯತೆ ಇದ್ದರೆ ವಾಲ್ಮೀಕಿ ಜಯಂತಿಯನ್ನು (Valmiki Jayanti) ಪಶ್ಚಾತ್ತಾಪ ದಿನ ಎಂದು ಆಚರಣೆ ಮಾಡಬೇಕಿತ್ತು ಎಂದ ಅವರು, ಮುಖ್ಯಮಂತ್ರಿಗಳು ತಕ್ಷಣ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

    ಎಲ್ಲ ಕಡತಗಳನ್ನು ಹೆಲಿಕಾಪ್ಟರ್‌ನಲ್ಲಿ ತುಂಬಿಕೊಂಡು ಬಂದವರನ್ನೂ ತನಿಖೆಗೆ ಒಳಪಡಿಸಬೇಕು. ಮುಖ್ಯಮಂತ್ರಿಗಳು ತಕ್ಷಣ ರಾಜೀನಾಮೆ ಕೊಡಬೇಕು. ಮಾನ್ಯ ಸುರೇಶ್ ಅವರೂ ರಾಜೀನಾಮೆ ನೀಡಬೇಕು. ಇಲ್ಲವಾದರೆ ಇಡಿ. ಅಧಿಕಾರಿಗಳು ಮಾನ್ಯ ಮುಖ್ಯಮಂತ್ರಿಗಳನ್ನು ಬಂಧಿಸಲಿ ಎಂದು ಛಲವಾದಿ ಒತ್ತಾಯಿಸಿದರು. ಇದನ್ನೂ ಓದಿ: ಮುಡಾದಲ್ಲಿ ಬರೋಬ್ಬರಿ 5,000 ಕೋಟಿ ಅವ್ಯವಹಾರ ಆಗಿದೆ – ಶಾಸಕ ಎ ಮಂಜು ಹೊಸ ಬಾಂಬ್‌

    ತಿಂದು ತೇಗಿದ್ದಾರೆ:
    ಭ್ರಷ್ಟಾಚಾರ (Corruption) ಅಪರಾಧವಲ್ಲ ಎಂಬ ಮನಸ್ಥಿತಿಗೆ ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ ಪಕ್ಷ ಬಂದ ಹಾಗಿದೆ. ಕುರಿಗಳನ್ನು ಕಾಯಲು ತೋಳನನ್ನು ಕಾಂಗ್ರೆಸ್ ಸರ್ಕಾರ ನೇಮಿಸಿದಂತಿದೆ. ಇವತ್ತು ಇಷ್ಟೊಂದು ಭ್ರಷ್ಟಾಚಾರ ನಡೆಯುತ್ತಿದ್ದರೂ ಜೈಲಿನಿಂದ ಬಂದವರು ವಿಜೃಂಭಿಸಿ ಬರುತ್ತಿದ್ದಾರೆ. ನಿನ್ನೆ ತಾನೇ ವಾಲ್ಮೀಕಿ ಜಯಂತಿ ನಡೆದಿದೆ. ಸಿದ್ದರಾಮಯ್ಯನವರು ವಾಲ್ಮೀಕಿ ಜಯಂತಿ ಮಾಡುವಾಗ ನನಗೇ ನಾಚಿಕೆ ಅನಿಸಿತ್ತು. ವಾಲ್ಮೀಕಿ ನಿಗಮವನ್ನು ತಿಂದು ತೇಗಿದವರು ವಾಲ್ಮೀಕಿ ಜಯಂತಿ ಮಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

    ಇಂದು ಬೆಳಿಗ್ಗೆ ಮುಡಾ ಕಚೇರಿ, ತಾಲೂಕು ಕಚೇರಿ ಮತ್ತು ದೇವರಾಜು ಅವರ ಮನೆಗೆ ಇಡಿ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಮೂರು ಬಾರಿ ಮುಡಾ ಕಡತಗಳನ್ನು ಕೇಳಿದ್ದರೂ ಅಧಿಕಾರಿಗಳು ತಿರಸ್ಕರಿಸಿದ್ದೇ ಇದಕ್ಕೆ ಕಾರಣ ಎಂದು ವಿವರಿಸಿದರು.

     

    ಈ ಹಗರಣದಲ್ಲಿ ಸತ್ಯ ಹೊರಗಡೆ ಬರುವುದು ರಾಜ್ಯ ಸರ್ಕಾರಕ್ಕೆ ಬೇಕಾಗಿಲ್ಲ. ಮುಡಾ ನಿವೇಶನಗಳನ್ನು ಅವಶ್ಯಕತೆ ಇಲ್ಲದಿದ್ದರೂ ವಾಪಸ್ ಕೊಡಲಾಗಿದೆ. ಅಧ್ಯಕ್ಷರಾಗಿದ್ದ ಮರಿಗೌಡರನ್ನು ಎತ್ತಂಗಡಿ ಮಾಡಿಸಲಾಗಿದೆ. ಅಲ್ಲಿನ ಅಧಿಕಾರಿಗಳನ್ನು ಬೇರೆ ಬೇರೆ ಇಲಾಖೆಗಳಿಗೆ ಕಳುಹಿಸಲಾಗಿದೆ. ಮುಡಾದಲ್ಲಿ ಅಪಾರವಾದ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಇದೆಲ್ಲವೂ ತೋರಿಸುತ್ತದೆ ಎಂದು ವಿಶ್ಲೇಷಿಸಿದರು.

    ಮುಖ್ಯಮಂತ್ರಿ ಕುಟುಂಬವೇ ಪಾಲ್ಗೊಂಡ ಇಂಥ ಹಗರಣವನ್ನು ಮುಚ್ಚಿ ಹಾಕುವ ಉದ್ದೇಶ ಸರ್ಕಾರದ್ದು. ಮೊದಲು ಎಸ್‍ಐಟಿಗೆ ತನಿಖೆಯನ್ನು ಕೊಡಲಾಗಿತ್ತು. ಕೋರ್ಟ್ ಆದೇಶವಾಗಿದ್ದರೂ ಎಸ್‍ಐಟಿ ಈ ಕೇಸನ್ನು ವಾಪಸ್ ಪಡೆದಿಲ್ಲ. ಐಎಎಸ್ ಅಧಿಕಾರಿಗಳ ತಂಡ ತನಿಖೆ ಮಾಡಲಿದೆ ಎಂದು ಹೇಳಲಾಗಿತ್ತು. ಅದನ್ನೂ ವಾಪಸ್ ತೆಗೆದುಕೊಂಡಿಲ್ಲ ಎಂದು ತಿಳಿಸಿದರು.

    ಲೋಕಾಯುಕ್ತ ಕೂಡ ತನ್ನ ಕೆಲಸ ಪ್ರಾರಂಭಿಸಿತ್ತು. ಆದರೆ ಲೋಕಾಯುಕ್ತದ ಬಗ್ಗೆ ನನಗೆ ನನ್ನದೇ ಆದ ಅನುಮಾನವಿದೆ. ಇದುವರೆಗೂ ಕೂಡ ಯಾರನ್ನೂ ಕರೆದು ತನಿಖೆಗೆ ಒಳಪಡಿಸಿಯೇ ಇಲ್ಲ. ಕೋರ್ಟ್ ಆದೇಶಗಳನ್ನು ಮೀರಿ ಲೋಕಾಯುಕ್ತ ಇದರಲ್ಲಿ ಒಳಗೊಳ್ಳುತ್ತಿದೆ ಎಂದು ಅನುಮಾನ ಕಾಡುತ್ತಿದೆ ಎಂದು ನಾರಾಯಣಸ್ವಾಮಿ ಅನಿಸಿಕೆ ವ್ಯಕ್ತಪಡಿಸಿದರು.

     

  • ದುಷ್ಟ ಶಕ್ತಿ ಯಾರಾದರೂ ರಾಜ್ಯದಲ್ಲಿ ಇದ್ದಾರೆ ಅಂದರೆ ಅದು ಸಿದ್ದರಾಮಯ್ಯ: ಛಲವಾದಿ ನಾರಾಯಣಸ್ವಾಮಿ

    ದುಷ್ಟ ಶಕ್ತಿ ಯಾರಾದರೂ ರಾಜ್ಯದಲ್ಲಿ ಇದ್ದಾರೆ ಅಂದರೆ ಅದು ಸಿದ್ದರಾಮಯ್ಯ: ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ಕೆಟ್ಟವರ ಸಂಹಾರ ಆಗಬೇಕು ನಿಜ. ಆದರೆ ಸರ್ಕಾರ ಚಾಮುಂಡೇಶ್ವರಿ ಚಿತ್ರ ಬಳಕೆ ಮಾಡಿ ಜಾಹೀರಾತು ಕೊಟ್ಟಿದ್ದು ತಪ್ಪು. ದುಷ್ಟ ಶಕ್ತಿಗಳು ರಾಜ್ಯಕ್ಕೆ ಯಾರು ಅಂದರೆ ಅದು ಸಿದ್ದರಾಮಯ್ಯ (Siddaramaiah). ಅವರಿಂದಲೇ ದುಷ್ಟ ಶಕ್ತಿಗಳ ಸಂಹಾರ ಶುರು ಆಗಲಿ ಎಂದು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ತಿರುಗೇಟು ನೀಡಿದ್ದಾರೆ.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ (Hubballi) ಪೊಲೀಸ್ ಠಾಣೆ ಮೇಲೆ ದಾಳಿ, ಗಲಭೆ ಮಾಡಿದವರು ಹಾಗೂ ಕ್ರಿಮಿನಲ್‌ಗಳ ಮೇಲೆ ಸರ್ಕಾರ ಕೇಸ್ ದಾಖಲು ಮಾಡಿತ್ತು. ಈಗ ಒಂದು ಸಮುದಾಯವನ್ನು ಓಲೈಕೆ ಮಾಡಲು ಎಲ್ಲಾ ಕೇಸ್ ವಾಪಸ್ ಪಡೆದಿದ್ದಾರೆ. ಇದು ಸರ್ಕಾರ ಮಾಡಿರುವ ಅಕ್ಷಮ್ಯ ಅಪರಾಧ. ಸಂಘಟಿತ ಅಪರಾಧ ಮಾಡಿರೋ ಕೇಸ್ ವಾಪಸ್ ಪಡೆದಿರೋದು ಕೂಡ ಸರ್ಕಾರದ ಸಂಘಟಿತ ಅಪರಾಧವೇ ಆಗಿದೆ. ಹೀಗಾಗಿ ಇದನ್ನು ನಾವು ಸುಮ್ಮನೆ ಬಿಡುವುದಿಲ್ಲ. ಇದರ ಬಗ್ಗೆ ಜನರಿಗೆ ತಿಳಿಸಲು ಹೋರಾಟ ಮಾಡುತ್ತೇವೆ. ನಾವು ಕೋರ್ಟ್ನಲ್ಲಿ ಆಕ್ಷೇಪಣೆ ಅರ್ಜಿ ಹಾಕುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಮೈಸೂರು ದಸರಾ ಜಂಬೂಸವಾರಿಗೆ ವಿಜೃಂಭಣೆಯ ಚಾಲನೆ

    ಉಡುಪಿ, ಮಂಗಳೂರು, ಶಿವಮೊಗ್ಗದಲ್ಲಿನ ಹಿಂದೂ ಕಾರ್ಯಕರ್ತರ ಮೇಲೆ ಯಾಕೇ ಕೇಸ್ ವಾಪಸ್ ತಗೊಂಡಿಲ್ಲ? ಅವರು ಕ್ರಿಮಿನಲ್‌ಗಳು, ಇವರು ಕ್ರಿಮಿನಲ್‌ಗಳು ಅಲ್ವಾ? ಜನರನ್ನು ಕೆರಳಿಸುವ ಕೆಲಸ ಮಾಡಿ ಮುಡಾ, ವಾಲ್ಮೀಕಿ ಹಗರಣ ತಪ್ಪಿಸಿದ್ದೀರಿ. ಈ ಸರ್ಕಾರದ ವಿರುದ್ಧ ಕ್ರಮ ಜರುಗಿಸಬೇಕು ಎಂದು ನಾನು ಇವತ್ತು ಕೇಂದ್ರದ ಕಾನೂನು ಸಚಿವರಿಗೂ ಪತ್ರ ಬರೆಯುತ್ತಿದ್ದೇನೆ. ಕೇಂದ್ರ ಸರ್ಕಾರ ತಕ್ಷಣ ಗಂಭೀರವಾಗಿ ಪರಿಗಣಿಸಿ, ತಕ್ಷಣ ಕ್ರಮ ತಗೆದುಕೊಳ್ಳಬೇಕು. ಪ್ರಧಾನ ಮಂತ್ರಿಗಳು, ಕೇಂದ್ರ ಗೃಹ ಸಚಿವರು ಹಾಗೂ ರಾಷ್ಟ್ರಪತಿ ಗಳಿಗೂ ಗಮನ ಸೆಳೆಯಲು ಪತ್ರ ಬರೆಯುತ್ತೇನೆ ಎಂದರು. ಇದನ್ನೂ ಓದಿ: ಇವತ್ತಿಲ್ಲಾ ನಾಳೆ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು: ಜಗದೀಶ್ ಶೆಟ್ಟರ್

  • ದಸರಾ ಉದ್ಘಾಟನೆ ವೇದಿಕೆ ರಾಜಕೀಯವಾಗಿ ಬಳಸಿದ ಸಿಎಂ; ಜಿಟಿಡಿ ಹೇಳಿಕೆ ಸಿಎಂ ಓಲೈಕೆಗಾಗಿ – ಛಲವಾದಿ ನಾರಾಯಣಸ್ವಾಮಿ

    ದಸರಾ ಉದ್ಘಾಟನೆ ವೇದಿಕೆ ರಾಜಕೀಯವಾಗಿ ಬಳಸಿದ ಸಿಎಂ; ಜಿಟಿಡಿ ಹೇಳಿಕೆ ಸಿಎಂ ಓಲೈಕೆಗಾಗಿ – ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ಮೈಸೂರು ದಸರಾ (Mysuru Dasara) ಉದ್ಘಾಟನೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕೇವಲ ಮುಡಾ ವಿಚಾರದ ಜಪ ಮಾಡುತ್ತ ತಾವು ಮಾಡಿದ ತಪ್ಪುಗಳನ್ನು ಇಲ್ಲ, ಇಲ್ಲ ಎಂಬ ರೀತಿ ಭಾಷಣ ಮಾಡಿದ್ದಾರೆ. ಜೊತೆಯಲ್ಲಿ ಇರುವವರನ್ನು ಪ್ರೇರೇಪಿಸಿ ಪ್ರಮಾಣಪತ್ರ ತೆಗೆದುಕೊಳ್ಳುವ ಕೆಲಸ ಮಾಡಿದ್ದಾರೆ. ಇದು ರಾಜ್ಯದ ಜನತೆಗೆ ಮಾಡಿದ ಅಪಮಾನ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಕ್ಷೇಪಿಸಿದರು.

    ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಇದೊಂದು ನಾಚಿಕೆಗೇಡಿನ ಸಂಗತಿ. ಇಂಥ ವೇದಿಕೆಗಳನ್ನು ತಮ್ಮ ರಾಜಕೀಯ ತೆವಲನ್ನು ತೀರಿಸಿಕೊಳ್ಳಲು ಬಳಸಿಕೊಳ್ಳಬಾರದು. ರಾಜ್ಯ ಕನ್ನಡಕ್ಕೆ ಕೊಡುಗೆ ಕೊಟ್ಟ ಮುತ್ಸದ್ದಿಗಳಿಂದ ದಸರಾ ಉತ್ಸವ ಉದ್ಘಾಟಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ‌ದರ್ಶನ್‌ಗೆ ಇವತ್ತೂ ಸಿಗಲಿಲ್ಲ ಬೇಲ್‌ – ಜಾಮೀನು ಅರ್ಜಿ ವಿಚಾರಣೆ ಶನಿವಾರಕ್ಕೆ ಮುಂದೂಡಿಕೆ

    ದಸರಾ ಸಡಗರ ನಿನ್ನೆಯಿಂದ ಪ್ರಾರಂಭವಾಗಿದೆ. ಮೈಸೂರಿನ ವೈಭವ, ಮೈಸೂರು ರಾಜರ ಕೊಡುಗೆ, ರಾಜ್ಯದ ಇತಿಹಾಸ ಸ್ಮರಣೆ, ಚಾಮುಂಡಿ ತಾಯಿಯ ವಿಚಾರ ಸ್ಮರಿಸಬೇಕಿತ್ತು ಎಂದರು. ಕಾಂಗ್ರೆಸ್ಸಿನ (Congress) ಪ್ರಮುಖರಾದ ಪರಮೇಶ್ವರ್, ಕೃಷ್ಣಬೈರೇಗೌಡ, ಸತೀಶ್ ಜಾರಕಿಹೊಳಿ, ಎಚ್.ಕೆ.ಪಾಟೀಲ ಅವರು ಪತ್ರಿಕಾಗೋಷ್ಠಿ ಮಾಡಿದ್ದರು. ಅವರು ಬೆಟ್ಟ ಅಗೆದು ಇಲಿ ಹಿಡಿದಿದ್ದಾರೆ. ಆರ್.ಅಶೋಕ್ ಅವರು ವಿಪಕ್ಷ ನಾಯಕರಾಗಿದ್ದು, ಹಿಂದೆ ಆದ ಘಟನೆಯನ್ನು ತೆಗೆದು ಅವರು ರಾಜೀನಾಮೆ ಕೊಡಲಿ ಎಂದು ಹೇಳಿದ್ದಾರೆ. ಸತ್ತು ಹೋದ ಕಥೆಯನ್ನು ತೆಗೆದು ಏನು ರಾಜೀನಾಮೆ ಕೇಳುತ್ತೀರಿ? ಮುಡಾ ಕೇಸಿಗೂ ಈ ಮುಗಿದು ಹೋದ ಕಥೆಗೂ ನೀವು ತಾಳೆ ಹಾಕುತ್ತಿದ್ದೀರಿ ಎಂದು ಟೀಕಿಸಿದರು. ಇದನ್ನೂ ಓದಿ: 5,600 ಕೋಟಿ ಮೌಲ್ಯದ ಕೊಕೇನ್ ಹಿಂದೆ ಕಾಂಗ್ರೆಸ್ ನಾಯಕನ ಕೈವಾಡ – ನಾಚಿಕೆಗೇಡು ಎಂದ ಅಮಿತ್ ಶಾ

    ಇದು ಸರಿಯಾದ ರೀತಿ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದ ಅವರು, ಮುಡಾ ಕೇಸಿನಲ್ಲಿ (MUDA Scam Case) ತನಿಖೆಗೆ ಎರಡು ಕೋರ್ಟ್‌ಗಳ ಆದೇಶ ಆಗಿದೆ. ಇಡಿ ಈಗಾಗಲೇ ಅದರಲ್ಲಿ ಪ್ರವೇಶ ಆಗಿದೆ. ನೀವು ಸೈಟ್‌ಗಳನ್ನು ವಾಪಸ್ ಕೊಟ್ಟರೂ ಒಂದೇ, ಕೊಡದಿದ್ದರೂ ಒಂದೇ. ಮುಡಾದವರು ಈ ಸೈಟ್‌ಗಳನ್ನು ವಾಪಸ್ ಪಡೆಯಬಾರದಿತ್ತು. ಕೋರ್ಟಿನಲ್ಲಿರುವಾಗ ಮುಡಾ ಮಾಡಿರುವುದು ಕೂಡ ತಪ್ಪೇ ಆಗಿದೆ. ಆರ್.ಅಶೋಕ್ ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ. ಮುಡಾ ವಿಚಾರದಲ್ಲಿ ತನಿಖೆ ಆಗಲಿದೆ. ಮುಖ್ಯಮಂತ್ರಿಗಳು ಇದರಲ್ಲಿ ರಾಜೀನಾಮೆ ಕೊಡಬೇಕಾಗುತ್ತದೆ ಎಂದು ವಿಶ್ಲೇಷಿಸಿದರು. ಇದನ್ನೂ ಓದಿ: ನಾವು ದಾಳಿ ಮಾಡುವ ಮೊದಲೇ ಅಪರಾಧ ಕೃತ್ಯಗಳನ್ನ ಬಿಟ್ಟುಬಿಡಿ: ರೌಡಿಗಳಿಗೆ ಎಸ್ಪಿ ಖಡಕ್ ವಾರ್ನಿಂಗ್

    ಎಚ್‌ಡಿಕೆ ವಿರುದ್ಧ ಕೇಸಿನ ಕುರಿತು ಮಾತನಾಡಿದ ಅವರು, ಇದು ಕಾಂಗ್ರೆಸ್ ಸಂಸ್ಕೃತಿ. ಖೆಡ್ಡಾ ತೋಡಿ ಕೆಲವರನ್ನು ಹಳ್ಳಕ್ಕೆ ಬೀಳಿಸುವ ಕೆಲಸ ಪ್ರಾರಂಭ ಮಾಡಿದ್ದಾರೆ ಬಿಜೆಪಿ- ಜೆಡಿಎಸ್ ಅಂದರೆ ಎನ್‌ಡಿಎ ಮಿತ್ರಕೂಟದ ಮೇಲೆ ಆರೋಪ ಹೊರಿಸಲು ಕಾಂಗ್ರೆಸ್ಸಿನಲ್ಲಿ ಒಂದು ಪಡೆಯೇ ಸಿದ್ಧವಾಗಿದೆ. ಎರಡೂ ಪಕ್ಷದ ಮುಖಂಡರು ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಶ್ರೀರಂಗಪಟ್ಟಣ ದಸರಾ | ಜಂಬೂಸವಾರಿ ವೇಳೆ ಬೆದರಿ ಓಡಿದ ಹಿರಣ್ಯ ಆನೆ – ತಪ್ಪಿದ ಭಾರೀ ಅನಾಹುತ

  • ವಾರದಲ್ಲಿ ಸಿಎಂ ರಾಜೀನಾಮೆ ಕೊಡ್ತಾರೆ, ಸರ್ಕಾರ ಉರುಳುತ್ತೆ: ಛಲವಾದಿ

    ವಾರದಲ್ಲಿ ಸಿಎಂ ರಾಜೀನಾಮೆ ಕೊಡ್ತಾರೆ, ಸರ್ಕಾರ ಉರುಳುತ್ತೆ: ಛಲವಾದಿ

    ಯಾದಗಿರಿ: ಒಂದು ವಾರದಲ್ಲಿ ಸಿದ್ದರಾಮಯ್ಯ (CM Siddaramaiah) ರಾಜೀನಾಮೆ ಕೊಡ್ತಾರೆ, ಸರ್ಕಾರ ಉರುಳುತ್ತದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಜಿಲ್ಲೆಯಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಇನ್ನೊಂದು ವಾರ ಇರುವುದು ಕಷ್ಟ. ಒಂದು ವಾರದಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರೆ, ಸರ್ಕಾರ ಉರುಳುತ್ತದೆ. ಜಗ್ಗುವುದಿಲ್ಲ, ಬಗ್ಗುವುದಿಲ್ಲ ಅಂತ ಹೇಳಿದ್ದರು. ಮೊನ್ನೆ ರಾತ್ರಿಯೇ ಜಗ್ಗಿದು ಆಯ್ತು. ಗ್ಗಿದು ಆಯ್ತು. ಇನ್ನೆನೂ ಉಳಿದಿದೆ. ಈ ಸರ್ಕಾರ ರಾಜ್ಯದಲ್ಲಿ ಇರಲಿಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಇದು ಪಾಪದ ಸರ್ಕಾರ. ಜನರಿಗೆ ಸುಳ್ಳು ಹೇಳಿ, ವಂಚನೆ ಮಾಡಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಇದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾದ ಶೂಟಿಂಗ್‌ಗೆ ತಾತ್ಕಾಲಿಕ ಬ್ರೇಕ್‌

    ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೇ ಸರ್ಕಾರ ಬಿದ್ದ ಹಾಗೇ ಅಲ್ಲವಾ. ಕಾಂಗ್ರೆಸ್‌ನಲ್ಲೇ (Congress) ಸಿಎಂ ಸ್ಥಾನಕ್ಕಾಗಿ ಹತ್ತು ಜನ ಬಟ್ಟೆ ಹೊಲಿಸಿಕೊಂಡು ಕೂತಿದ್ದಾರೆ. ಸಿಎಂ ಬದಲಾವಣೆ ಆದರೇ ದಲಿತರೇ ಸಿಎಂ ಆಗಬೇಕು. ಯಾಕೆಂದರೆ 77 ವರ್ಷ ಜೈಲಿನಲ್ಲಿ ಇಟ್ಟುಕೊಂಡ ಹಾಗೇ ಕಬ್ಜಾ ಮಾಡಿಕೊಂಡು ಮತ ಪಡೆದಿದ್ದೀರಿ. ದಲಿತರ ಮತ ಪಡೆದು ಅವರಿಗೆ ಅನ್ಯಾಯ ಮಾಡ್ತಿದ್ದೀರಿ. ದಲಿತರನ್ನ ಸಿಎಂ ಮಾಡಿ ಇಲ್ಲದೇ ಇದ್ದರೆ ಅವರ ಕೋಪಕ್ಕೆ ನೀವು ಗುರಿ ಆಗುತ್ತೀರಿ ಎಂದು ಹೇಳಿದರು.

    ಆರ್.ಅಶೋಕ್ ಬಿಡಿಎ ಜಮೀನು ವಾಪಸ್ ನೀಡಿರುವ ವಿಚಾರವಾಗಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಮುಡಾ ನಿವೇಶನ ಕೇಸಿಗೂ ಆರ್.ಅಶೋಕ್ ಕೇಸ್‌ಗೂ ಸಂಬಂಧವಿಲ್ಲ. ಆರ್.ಅಶೋಕ್ (R Ashok) ವಾಪಸ್ ಕೊಟ್ಟಿರೋದರಲ್ಲಿ ಏನು ತಪ್ಪಿದೆ. ನೀವು ತೊಡೆತಟ್ಟಿ ಹೋಗಿ ನಂತರ ಸೈಟ್ ವಾಪಸ್ ಕೊಟ್ಟಿದ್ದೀರಿ. ಅವತ್ತೇ ಸಿಎಂ ಸಿದ್ದರಾಮಯ್ಯ ಅವರು ಸೈಟ್ ವಾಪಸ್ ಕೊಡಬೇಕಿತ್ತು. ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವಾಗ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸೈಟ್ ವಾಪಸ್ ಕೊಟ್ಟರೆ ಈಗ ಕ್ಷಮೆ ಇಲ್ಲ ಎಂದು ತಿಳಿಸಿದರು.ಇದನ್ನೂ ಓದಿ: ಸರ್ಕಾರ ಉರುಳಿಸುವ ದುರಾಲೋಚನೆ ಬರದಿರಲಿ: ದಸರಾ ಉದ್ಘಾಟಿಸಿ ಹಂಪ ನಾಗರಾಜಯ್ಯ

  • ಜಗ್ಗಲ್ಲ, ಬಗ್ಗಲ್ಲ ಅಂದೋರು ಸೈಟ್ ವಾಪಸ್ ಮೂಲಕ ಜಗ್ಗಿದ್ಯಾಕೆ?: ಛಲವಾದಿ ನಾರಾಯಣಸ್ವಾಮಿ ಲೇವಡಿ

    ಜಗ್ಗಲ್ಲ, ಬಗ್ಗಲ್ಲ ಅಂದೋರು ಸೈಟ್ ವಾಪಸ್ ಮೂಲಕ ಜಗ್ಗಿದ್ಯಾಕೆ?: ಛಲವಾದಿ ನಾರಾಯಣಸ್ವಾಮಿ ಲೇವಡಿ

    ಬೆಂಗಳೂರು: ಜಗ್ಗಲ್ಲ, ಬಗ್ಗಲ್ಲ ಅಂದವರು ಸೋಮವಾರ ಯಾಕೆ ಸೈಟ್ ವಾಪಸ್ ಪತ್ರ ಮೂಲಕ ಜಗ್ಗಿದ್ರು ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswami) ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಲೇವಡಿ ಮಾಡಿದ್ದಾರೆ.

    ಸಿಎಂ ಪತ್ನಿ ಮುಡಾ ಸೈಟ್ (MUDA Site Scam) ವಾಪಸ್ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಾಚಾ ಅಲ್ಲ ಎಂದು ಗೊತ್ತಾಗಿದೆ. ಇನ್ನೂ ಸೈಟ್ ವಾಪಸ್ ಅಧಿಕೃತ ಆಗಿಲ್ಲ. ಅದರಲ್ಲಿ ದಿನಾಂಕ ಇಲ್ಲ. ಈ ಹಿಂದೆ ಹ್ಯೂಬ್ಲೊಟ್ ವಾಚ್ ವಾಪಸ್ ಕೊಟ್ಟರು. ಅದು ಕಳವು ಮಾಲು ಅಂತ ಗೊತ್ತಾಗಿ ವಾಪಸ್ ಕೊಟ್ಟು ತಪ್ಪಿಸಿಕೊಂಡರು ಎಂದು ಟೀಕಿಸಿದರು. ಇದನ್ನೂ ಓದಿ: ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದ್ದೇನೆ, ರಾಜೀನಾಮೆ ಕೊಡಲ್ಲ: ಸಿಎಂ ಸ್ಪಷ್ಟನೆ

    ಯಡಿಯೂರಪ್ಪ ಅವರು ಸೈಟ್ ವಾಪಸ್ ಕೊಟ್ಟಿದ್ದಾಗ, ತಪ್ಪು ಒಪ್ಪಿಕೊಂಡತಾಯಿತು ಎಂದು ಸಿದ್ದರಾಮಯ್ಯ ಹೇಳಿದ್ದರು. ಈಗ ಸಿದ್ದರಾಮಯ್ಯ ಸೈಟ್ ವಾಪಸ್ ಮಾಡಿ ತಮ್ಮ ತಪ್ಪನ್ನು ಒಪ್ಪಿಕೊಂಡಂತಾಗಿದೆ. ಸೋಮವಾರ ಸೈಟ್‌ಗಳನ್ನು ವಾಪಸ್ ಕೊಟ್ಟಮೇಲೆ 95% ತನಿಖೆ ಮುಗಿದಂತೆ. ಉಳಿದಿದ್ದು 5% ತನಿಖೆ ಮಾತ್ರ. ಅಲ್ಲಿಗೆ ಸಿದ್ದರಾಮಯ್ಯ ಹಗರಣಗಳ ವೀರ, ಮೋಸ್ಟ್ ಕರಪ್ಟ್ ಸಿಎಂ ಅಂತ ಸಾಬೀತು ಆಯಿತು. ಒಂದೇ ಒಂದು ಕಪ್ಪು ಚುಕ್ಕೆ ತೋರಿಸಿ ಅಂದಿದ್ದರು. ಈಗ ಅವರೇ ಅವರ ಕಪ್ಪು ಚುಕ್ಕೆ ತೋರಿಸಿಕೊಂಡಿದ್ದಾರೆ. ಇನ್ನು ನಿಧಾನ ಮಾಡೋದು ಬೇಡ. ರಾಜೀನಾಮೆ ಕೊಡಿ. ಸಿದ್ದರಾಮಯ್ಯ ಜೊತೆಗಿದ್ದವರೇ ಗುಂಡಿ ತೋಡಿರೋದು. ಸಿದ್ದರಾಮಯ್ಯ ಆ ಗುಂಡಿಗೆ ಬಿದ್ದರು. ತಕ್ಷಣ ಅವರು ರಾಜೀನಾಮೆ ಕೊಡಬೇಕು. ಕೆಲವರು ಉದ್ದ ಮೂಗು ಮಾಡಿಕೊಂಡು ನಿಮ್ಮ ಪರ ಸಮರ್ಥನೆ ಮಾಡಿದ್ದಾರೋ ಅವರು ಕೂಡ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ನೆಲಮಂಗಲ – ಹಿರಿಯ ಇತಿಹಾಸ ತಜ್ಞ ಗೋಪಾಲ ರಾವ್ ವಿಧಿವಶ

    ನಮಗೆ ಇವತ್ತು ಬಹಳ ಖುಷಿ ಆಗಿದೆ. ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಸರ್ಕಾರ ಸೋಲು ಒಪ್ಪಿಕೊಂಡಿದೆ. ಇದು ನಮಗೆ ಬಿಜೆಪಿ ಗೆದ್ದಷ್ಟೇ ಖುಷಿ ಕೊಟ್ಟಿದೆ. ಇನ್ನು ಉದ್ಧಟತನ ಮಾಡದೇ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ:  ರಸ್ತೆ, ರೈಲು ಹಳಿಗಳನ್ನು ಅತಿಕ್ರಮಿಸುವ ಯಾವುದೇ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಬೇಕು: ಸುಪ್ರೀಂ

    ತಮ್ಮ ವಿರುದ್ಧ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಬೆಂಬಲಿಗರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿ, ಅನಂತ್ ಕುಮಾರ್ ಹೆಗಡೆ ಅವರು ಸಂವಿಧಾನ ಬಗ್ಗೆ ಹೇಳಿಕೆ ಕೊಟ್ಟಿದ್ದರು. ಹಾಗಾಗಿ ಅವರಿಗೆ ಟಿಕೆಟ್ ಕೊಡಬೇಡಿ ಎಂದು ನಾನು ಹೈಕಮಾಂಡ್‌ಗೆ ಹೇಳಿದ್ದು ಹೌದು. ಆದರೆ ಅನಂತ್ ಕುಮಾರ್ ಹೆಗಡೆ ವಿರುದ್ಧ ನಾನು ಇಲ್ಲ. ಅವರು ಹಿಂದುತ್ವದ ಗಟ್ಟಿ ದನಿ. ಆದರೆ ಸಂವಿಧಾನ ವಿಚಾರಕ್ಕೆ ಅವರನ್ನು ವಿರೋಧಿಸಿದ್ದೆ. ನಾನೇ ಅವರಿಗೆ ಟಿಕೆಟ್ ತಪ್ಪಿಸಿದೆ ಅಂತ ಹೇಳಿಲ್ಲ. ಟಿಕೆಟ್ ತಪ್ಪಿಸಲು ನಾನು ಬಿಜೆಪಿ ರಾಜ್ಯಾಧ್ಯಕ್ಷ ಅಲ್ಲ. ಆದರೆ ಅವರ ಬೆಂಬಲಿಗರ ಪ್ರತಿಭಟನೆಯನ್ಮು ಗೌರವಿಸುತ್ತೇನೆ ಎಂದರು. ಇದನ್ನೂ ಓದಿ: ಅಣ್ಣನಿಗೆ ಆಗದೇ ಇರೋರು ಹಗರಣ ಮಾಡಿದ್ದಾರೆ, ಸಿದ್ದರಾಮಯ್ಯ ರಾಜೀನಾಮೆ ಕೊಡಬಾರದು: ಸಿಎಂ ಸಹೋದರ

  • ಪ್ರಾಸಿಕ್ಯೂಷನ್‌ ಆದೇಶ ಎತ್ತಿ ಹಿಡಿದ ಹೈಕೋರ್ಟ್‌; ಸುಪ್ರೀಂ ಕೋರ್ಟ್‌ಗೆ ಹೋಗಲು ತಯಾರಿದ್ದೇವೆ – ಪ್ರಿಯಾಂಕ್‌ ಖರ್ಗೆ

    ಪ್ರಾಸಿಕ್ಯೂಷನ್‌ ಆದೇಶ ಎತ್ತಿ ಹಿಡಿದ ಹೈಕೋರ್ಟ್‌; ಸುಪ್ರೀಂ ಕೋರ್ಟ್‌ಗೆ ಹೋಗಲು ತಯಾರಿದ್ದೇವೆ – ಪ್ರಿಯಾಂಕ್‌ ಖರ್ಗೆ

    – ಹೆಣದ ಮೇಲೆ ಹಣ ಮಾಡೋರಿಗೆ ರಾಜೀನಾಮೆ ಕೇಳುವ ನೈತಿಕತೆ ಇದೆಯೇ ಎಂದ ಸಚಿವ

    ನವದೆಹಲಿ: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ – MUDA) ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾಗಿದ್ದು ತನಿಖೆಗೆ ಹೈಕೋರ್ಟ್‌ (High Court) ಗ್ರೀನ್‌ ಸಿಗ್ನಲ್‌ ನೀಡಿದೆ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್‌ ಸಿದ್ದರಾಮಯ್ಯ (CM Siddaramaiah) ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ವಜಾಗೊಳಿಸಿದೆ. ಈ ಬೆನ್ನಲ್ಲೇ ಕಾಂಗ್ರೆಸ್‌-ಬಿಜೆಪಿ ನಾಯಕರ ನಡುವೆ ರಾಜಕೀಯ ಜಟಾಪಟಿ ಶುರುವಾಗಿದೆ.

    ರಾಜ್ಯ ಹೈಕೋರ್ಟ್‌ ತೀರ್ಪಿನ ಕುರಿತು ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge), ಇದು ನಿರೀಕ್ಷಿತ, ತನಿಖಾ ಸಂಸ್ಥೆಗಳಿಂದ ಸಾಧ್ಯವಾಗದ ಕಾರಣ, ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ತಿದ್ದಾರೆ. ಮೋದಿ, ಅಮಿತ್ ಶಾ, ರಾಜ್ಯಪಾಲರು ಎಲ್ಲರೂ ಅವರ ಬಳಿಕ ಇರಬಹುದು. ನಮ್ಮ ಬಳಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಇದೆ. ವೈಯುಕ್ತಿಕವಾಗಿ ಆಶ್ಚರ್ಯವಾಗಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು, ಕೊಡದಿದ್ದರೆ ರಾಷ್ಟ್ರಮಟ್ಟದಲ್ಲಿ ಹೋರಾಟ ಗ್ಯಾರಂಟಿ: ಛಲವಾದಿ

    ಈ ಹಿಂದೆ ಬೇರೆ ಬೇರೆ ರಾಜ್ಯಗಳಲ್ಲಿ ಏನೇಲ್ಲ ಆಗಿದೆ? ದೆಹಲಿ, ಜಾರ್ಖಂಡ್ ಕೇಸ್‌ನಲ್ಲಿ ಏನಾಯಿತು? ಸುಪ್ರೀಂ ಕೋರ್ಟ್ ಛೀಮಾರಿ ಹಾಕಿಲ್ವಾ? ಇವರಿಗೆ ರಾಜೀನಾಮೆ ಕೇಳುವ ನೈತಿಕತೆ ಇದಿಯಾ? ಆಪರೇಷನ್ ಕಮಲ, ಹೆಣದ ಮೇಲೆ, ಕಸದ ಮೇಲೆ ಹಣ ಮಾಡೊದು ಇವರು. ದಲಿತರ ಮೇಲೆ ದೌರ್ಜನ್ಯ ಮಾಡುವುದು ಇವರು ಎಂದು ತಿವಿದಿದ್ದಾರೆ. ಇದನ್ನೂ ಓದಿ: ಬೆಂಗಳೂರು- ಮೈಸೂರು ಪಾದಯಾತ್ರೆ, ಹೋರಾಟಕ್ಕೆ ಮೊದಲ ಜಯ – ಗೌರವಯುತವಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ: ವಿಜಯೇಂದ್ರ

    ವಿಜಯೇಂದ್ರ ಮೊದಲು ರಾಜೀನಾಮೆ ನೀಡಬೇಕಾಗುತ್ತದೆ. ಅವರ ತಂದೆ ಮೇಲೆ ಪೋಕ್ಸೋ ಕೇಸ್ ಇದೆ. ಅವರು ರಾಜೀನಾಮೆ ಕೊಡಬೇಕು. ತನಿಖಾ ಸಂಸ್ಥೆಗಳು ಸಿಎಂ ಸಿದ್ದರಾಮಯ್ಯ ಹೆಸರು ಹೇಳುವಂತೆ ಒತ್ತಾಯ ಮಾಡಿಲ್ವಾ? ನಾವು ಎರಡು ನ್ಯಾಯಲಯಕ್ಕೆ ಹೋಗಲು ತಯಾರಿದ್ದೇವೆ? ಸುಪ್ರೀಂ ಕೋರ್ಟ್ ಮತ್ತು ಜನತಾ ನ್ಯಾಯಾಲಯಕ್ಕೆ ಹೋಗಲು ತಯಾರಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಎಂ ಸಲ್ಲಿಸಿದ್ದ ರಿಟ್‌ ಅರ್ಜಿ ವಜಾ – ರಾಜ್ಯಪಾಲರ ಪ್ರಾಸಿಕ್ಯೂಷನ್‌ ಆದೇಶ ಎತ್ತಿಹಿಡಿದ ಹೈಕೋರ್ಟ್‌

  • ಬೆಂಗಳೂರು- ಮೈಸೂರು ಪಾದಯಾತ್ರೆ, ಹೋರಾಟಕ್ಕೆ ಮೊದಲ ಜಯ – ಗೌರವಯುತವಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ: ವಿಜಯೇಂದ್ರ

    ಬೆಂಗಳೂರು- ಮೈಸೂರು ಪಾದಯಾತ್ರೆ, ಹೋರಾಟಕ್ಕೆ ಮೊದಲ ಜಯ – ಗೌರವಯುತವಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ: ವಿಜಯೇಂದ್ರ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ರಾಜ್ಯ ಹೈಕೋರ್ಟಿನ ತೀರ್ಪನ್ನು ಗೌರವಿಸಿ ಗೌರವಯುತವಾಗಿ ಸಿಎಂ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (BY Vijayendra) ಅವರು ಆಗ್ರಹಿಸಿದರು.

    ಬಿಜೆಪಿ ರಾಜ್ಯ ಕಾರ್ಯಾಲಯ (BJP Office) ಜಗನ್ನಾಥ ಭವನದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅವಕಾಶ ಕೊಟ್ಟಿದ್ದ ಮಾನ್ಯ ರಾಜ್ಯಪಾಲರ ಕ್ರಮವನ್ನು ರಾಜ್ಯ ಹೈಕೋರ್ಟ್ (Karnataka Highcourt) ಎತ್ತಿ ಹಿಡಿದಿದೆ. ಸಿದ್ದರಾಮಯ್ಯನವರ ಅರ್ಜಿಯನ್ನು ವಜಾ ಮಾಡಿದ್ದಾರೆ. ಕಾನೂನಿನ ಎದುರು ಎಲ್ಲರೂ ಒಂದೇ ಎಂದು ಹೈಕೋರ್ಟ್ ತಿಳಿಸಿದೆ ಎಂದು ವಿಜಯೇಂದ್ರ ವಿಶ್ಲೇಷಿಸಿದರು. ಇದನ್ನೂ ಓದಿ: ಸಿಎಂ ಸಲ್ಲಿಸಿದ್ದ ರಿಟ್‌ ಅರ್ಜಿ ವಜಾ – ರಾಜ್ಯಪಾಲರ ಪ್ರಾಸಿಕ್ಯೂಷನ್‌ ಆದೇಶ ಎತ್ತಿಹಿಡಿದ ಹೈಕೋರ್ಟ್‌

    ಹೈಕೋರ್ಟ್‍ನಲ್ಲಿ ಸುದೀರ್ಘ ವಾದ, ಪ್ರತಿವಾದದ ಬಳಿಕ ಈ ತೀರ್ಪು ಹೊರಬಿದ್ದಿದೆ. ಗೌರವಾನ್ವಿತ ರಾಜ್ಯಪಾಲರು ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಶನ್‍ಗೆ ಅನುಮತಿ ಕೊಟ್ಟಿದ್ದರು. ಕಾಂಗ್ರೆಸ್ಸಿಗರು ಗೌರವಾನ್ವಿತ ರಾಜ್ಯಪಾಲರು, ರಾಜಭವನವನ್ನು ಕೇಂದ್ರದ ಏಜೆಂಟ್ ಎಂದು ಆಕ್ಷೇಪಿಸಿದ್ದರು ಎಂದು ಟೀಕಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು, ಕೊಡದಿದ್ದರೆ ರಾಷ್ಟ್ರಮಟ್ಟದಲ್ಲಿ ಹೋರಾಟ ಗ್ಯಾರಂಟಿ: ಛಲವಾದಿ

    ಕಳೆದ ಕೆಲವು ತಿಂಗಳಿನಿಂದ ಬಿಜೆಪಿ ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ನಿರಂತರ ಹೋರಾಟ ನಡೆಸಿತ್ತು. ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ಮಾಡಿದ್ದೆವು. ನಂತರ ಸ್ವತಃ ಸಿಎಂ ಕುಟುಂಬವೇ ಫಲಾನುಭವಿಗಳಾಗಿರುವ ಮೈಸೂರಿನ ಮುಡಾ ಹಗರಣ ವಿರುದ್ಧ ಹೋರಾಟ ಹಮ್ಮಿಕೊಂಡಿದ್ದೆವು. ಬೆಂಗಳೂರು- ಮೈಸೂರು ಪಾದಯಾತ್ರೆಯನ್ನು ನಡೆಸಿ ಬಿಜೆಪಿ- ಜೆಡಿಎಸ್ ಒಟ್ಟಾಗಿ ಯಶಸ್ವಿ ಹೋರಾಟ ಮಾಡಿದ್ದಾಗಿ ವಿಜಯೇಂದ್ರ ವಿವರಿಸಿದರು. ಇದನ್ನೂ ಓದಿ: ತಿರುಪತಿ ಲಡ್ಡಿನಲ್ಲಿ ಪ್ರಾಣಿ ಕೊಬ್ಬು ಮಿಶ್ರಣ ಆರೋಪ – ಸರ್ಕಾರಕ್ಕೆ 40 ಪುಟಗಳ ವರದಿ ಸಲ್ಲಿಸಿದ ಟಿಟಿಡಿ

    ಗೌರವಾನ್ವಿತ ರಾಜ್ಯಪಾಲರಿಗೆ ಅನೇಕ RTI ಕಾರ್ಯಕರ್ತರು ಖಾಸಗಿ ದೂರು ನೀಡಿದ್ದರು. ಸೂಕ್ತ ತನಿಖೆ ನಡೆಸಲು ಒತ್ತಾಯಿಸಿದ್ದರು ಎಂದು ಅವರು ತಿಳಿಸಿದರು. ಭ್ರಷ್ಟಾಚಾರ ರಹಿತ ಆಡಳಿತ ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದರು ಎಂದ ಅವರು, ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಭ್ರಷ್ಟಾಚಾರದ ಕಳಂಕ ಹೊತ್ತ ಸಿದ್ದರಾಮಯ್ಯನವರು ಕೂಡಲೇ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದರು. ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ವಿಶ್ವಾಸ ಇದೆ. ಅವರು ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಪ್ರಶ್ನೆಗೆ ಉತ್ತರಿಸಿದರು.

    ಮುಡಾ ವಿಚಾರದಲ್ಲಿ ತಮ್ಮ ಪಾತ್ರ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಬಳಿಕ ರಾಜಭವನ, ರಾಜ್ಯಪಾಲರ ವಿರುದ್ಧ ತೇಜೋವಧೆ ಮಾಡಿದ್ದರು. ಈಗ ಹೈಕೋರ್ಟ್ ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಆದ್ದರಿಂದ ಸಿಎಂ ರಾಜೀನಾಮೆ ಕೊಡಲೇಬೇಕು ಎಂದು ಆಗ್ರಹವನ್ನು ಮುಂದಿಟ್ಟರು. ನಮ್ಮ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಿದೆ ಎಂದೂ ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ಪಕ್ಷದ ಮುಂದಿನ ನಡೆಯ ಕುರಿತು ಪ್ರಮುಖರು, ಹಿರಿಯರ ಜೊತೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದು ವಿಜಯೇಂದ್ರ ಉತ್ತರ ನೀಡಿದರು.

  • ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು, ಕೊಡದಿದ್ದರೆ ರಾಷ್ಟ್ರಮಟ್ಟದಲ್ಲಿ ಹೋರಾಟ ಗ್ಯಾರಂಟಿ: ಛಲವಾದಿ

    ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು, ಕೊಡದಿದ್ದರೆ ರಾಷ್ಟ್ರಮಟ್ಟದಲ್ಲಿ ಹೋರಾಟ ಗ್ಯಾರಂಟಿ: ಛಲವಾದಿ

    – ಉಪ್ಪು ತಿಂದವರು ನೀರು ಕುಡಿಯಲೇಬೇಕು
    – ದೇಶದ ಕಾನೂನು ಎಷ್ಟು ಗಟ್ಟಿ ಅನೋದು ಕೋರ್ಟ್‌ ಆದೇಶದಿಂದ ಖಾತ್ರಿಯಾಗಿದೆ

    ಮೈಸೂರು: ಸಿಎಂ ಸಿದ್ದರಾಮಯ್ಯ (ChalavadiNarayanaswamy) ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಕಾಂಗ್ರೆಸ್ ಹೈಕಮಾಂಡ್ ಅವರ ಪರ ಇದ್ದರೂ ಈ ಸ್ಥಾನದಲ್ಲಿ ಮುಂದುವರಿಯಲು ಬರಲ್ಲ‌. ರಾಜೀನಾಮೆ ಕೊಡದಿದ್ದರೆ ರಾಜ್ಯದಲ್ಲಿ ಮಾತ್ರವಲ್ಲ. ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡ್ತೀವಿ ಅಂತ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ (Chalavadi Narayanaswamy) ಗುಡುಗಿದರು.

    ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ – MUDA) ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ (CM Siddaramaiah) ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ಈ ಕುರಿತು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಈ ದೇಶದ ಕಾನೂನು ಎಷ್ಟು ಗಟ್ಟಿಯಾಗಿದೆ ಅನೋದು ಕೋರ್ಟ್‌ ಇಂದಿನ ಆದೇಶದಿಂದ ಖಾತ್ರಿಯಾಗಿದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಅನ್ನೋದು ಸಹ ಇದರಿಂದ ಜನ ಅರ್ಥಮಾಡಿಕೊಂಡಿದ್ದಾರೆ. ಈ ದೇಶದ ಕಾನೂನನ್ನು ಧಿಕ್ಕರಿಸಿ ಮಾಡುವ ಯಾವುದೇ ಪ್ರಯತ್ನಗಳು ಸಹ ಸಾಂದರ್ಭಿಕವಾಗಿ ತತಕ್ಷಣಕ್ಕೆ ಅವರಿಗೆ ಒಳ್ಳೆಯದಾಗಬಹುದು. ಆದ್ರೆ ದೀರ್ಘಕಾಲವಾಗಿ ಇರಲ್ಲ. ಕಾನೂನನ್ನು ಮುರಿಯುವವರಿಗೆ, ವಿರೋಧಿಸುವವರಿಗೆ ನ್ಯಾಯ ಸಿಗ್ಲಲ ಅನ್ನೋದನ್ನ ಹೈಕೋರ್ಟ್‌ ಆದೇಶ ಎತ್ತಿಹಿಡಿದಿದೆ ಎಂದು ಹೇಳಿದರು.

    ಮುಂದುವರಿದು… ಸಿಎಂ ಕುಟುಂಬವೇ ಇಂತಹ ಅವ್ಯವಹಾರದಲ್ಲಿ ತೊಡಗಿರುವುದು ಇದೇ ಮೊದಲು. ಸಿದ್ದರಾಮಯ್ಯ ಅವರು 2 ಬಾರಿ ಡಿಸಿಎಂ ಆಗಿದ್ದವರು, ವಿಪಕ್ಷ ನಾಯಕರಾಗಿದ್ದವರು. 2ನೇ ಬಾರಿಗೆ ಮುಖ್ಯಮಂತ್ರಿ ಸಹ ಆಗಿದ್ದಾರೆ. ಅವರು ತಮ್ಮದೇ ಅಲ್ಲದ ಮುಡಾದ ಭೂಮಿಗೆ ಪರಿಹಾರ ಕೇಳಿದ್ದು ತಪ್ಪು, ಇದರ ವಿರುದ್ಧ ಬೆಂಗಳೂರಿನ ಮೈಸೂರಿನ ವರೆಗೆ ಬಿಜೆಪಿ ದೊಡ್ಡ ಹೋರಾಟ ಬಯಲಿಗೆಳೆಯುವ ಕೆಲಸ ಮಾಡಿದೆ ಎಂದು ಶ್ಲಾಘಿಸಿದರು.

    ರಾಜ್ಯಪಾಲರು ತನಿಖೆಗೆ ಒಪ್ಪಿಗೆ ಕೊಟ್ಟದ್ದು ಸರಿಯಿದೆ. ಸಿಎಂ ಇವತ್ತೇ ರಾಜೀನಾಮೆ ಕೊಡ್ತಾರೆ ಅನ್ನಿಸುತ್ತೆ. ಅವರು ಅರವಿಂದ್‌ ಕೇಜ್ರಿವಾಲ್‌ರನ್ನ ನಿದರ್ಶನವಾಗಿಟ್ಟುಕೊಳ್ಳಕ್ಕೆ ಸಾಧ್ಯವಿಲ್ಲ. ಏಕೆಂದರೆ ದೆಹಲಿ ಕೇಂದ್ರಾಡಳಿತ ಪ್ರದೇಶ, ಅಲ್ಲಿ ಸರ್ಕಾರ ಇದ್ದರೂ ಕೆಲವು ವ್ಯವಸ್ಥೆಗಳು ಕೇಂದ್ರಾಡಳಿತದಲ್ಲಿದೆ ಎಂದು ವಿವರಿಸಿದರು.

    ನಿಮ್ಮ ಹೈಕಮಾಂಡ್‌ ಸಪೋರ್ಟ್‌ ನಿಮಗಿದ್ದರೆ, ಸಿಎಂ ಮಾಡಬಹುದು ಅಷ್ಟೇ. ನ್ಯಾಯಾಲಯದಿಂದ ಪಾರು ಮಾಡೋಕೆ ಆಗಲ್ಲ. ಅವರಿಗೆ ನ್ಯಾಯಾಲಯ, ವ್ಯವಸ್ಥೆ, ಅಂಬೇಡ್ಕರ್‌, ಸಂವಿಧಾನದ ಬಗ್ಗೆ ಗೌರವ ಇದ್ದರೇ ರಾಜೀನಾಮೆ ಕೊಟ್ಟೇ ಕೊಡ್ತಾರೆ ಎಂದು ನುಡಿದರು.

    ಕಾಂಗ್ರೆಸ್‌ ಕಾಲದಲ್ಲೂ ಬೇಕಾದಷ್ಟು ಗೌರ್ನರ್‌ ಬಂದು ಹೋಗಿದ್ದಾರೆ. ಆಗ ಅವರನ್ನ ಕಂಟ್ರೋಲ್‌ ಮಾಡುತ್ತಿದ್ದದ್ದು ಯಾರು? ಈಗ ರಾಜ್ಯಪಾಲರನ್ನು ಬಿಜೆಪಿಯವರು ಕಂಟ್ರೋಲ್‌ ಮಾಡ್ತಿದ್ದಾರೆ ಅನ್ನೋದು ಆರೋಪವಾದ್ರೆ, ನ್ಯಾಯಾಲಯವನ್ನ ಯಾರು ಕಂಟ್ರೋಲ್‌ ಮಾಡ್ತಾರೆ? ನ್ಯಾಯಾಲಯವನ್ನ ಕಂಟ್ರೋಲ್‌ ಮಾಡಲು ಸಾಧ್ಯವೇ ಎಂದು ತಿರುಗೇಟು ನೀಡಿದರು.

  • ಕಲಬುರಗಿಯಲ್ಲಿ ನಾಟಕ ಕಂಪನಿಯನ್ನು ತಂದು ನಾಟಕ ತೋರಿಸಿ ಹೋಗಿದ್ದಾರೆ: ಛಲವಾದಿ ಲೇವಡಿ

    ಕಲಬುರಗಿಯಲ್ಲಿ ನಾಟಕ ಕಂಪನಿಯನ್ನು ತಂದು ನಾಟಕ ತೋರಿಸಿ ಹೋಗಿದ್ದಾರೆ: ಛಲವಾದಿ ಲೇವಡಿ

    ರಾಯಚೂರು: ಕಲಬುರಗಿಯಲ್ಲಿ (Kalaburagi) ಸಚಿವ ಸಂಪುಟ ಸಭೆ ಮಾಡಿ ಕಾಂಗ್ರೆಸ್‌ನವರು (Congress) ಕೇವಲ ನಾಟಕ ಕಂಪನಿಯನ್ನು ತಂದು ನಾಟಕ ತೋರಿಸಿ ಹೋಗಿದ್ದಾರೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಲೇವಡಿ ಮಾಡಿದ್ದಾರೆ.

    ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಖಜಾನೆ ಖಾಲಿಯಾಗಿದೆ ಎಲ್ಲಿಂದ ತಂದು ಅನುದಾನ ಕೊಡುತ್ತಾರೆ ಗೊತ್ತಿಲ್ಲ. ಕಲ್ಯಾಣ ಕರ್ನಾಟಕಕ್ಕೆ (Kalyana Karnataka) 5 ಸಾವಿರ ಕೋಟಿ ರೂ. ಕೊಡುತ್ತೇನೆ ಅಂತಿದ್ದಾರೆ. ಅದು ಕೊಡುವುದಿದ್ದರು ಪರವಾಗಿಲ್ಲ, ಕಲಬುರಗಿಯಲ್ಲಿನ 5 ಸಾವಿರ ಗುಂಡಿಗಳನ್ನಾದರೂ ಮುಚ್ಚಲಿ. ಈ ಸರ್ಕಾರ ಅಭಿವೃದ್ಧಿ ಪರವಾಗಿಲ್ಲ, ಅವರನ್ನ ಗೇಲಿ ಮಾಡುವಂತಹ ಪರಿಸ್ಥಿತಿ ಬಂದಿದೆ ಎಂದು ಟೀಕಿಸಿದರು. ಇದನ್ನೂ ಓದಿ: ನಾಗಮಂಗಲ ಪ್ರಕರಣ; ಶೋಭಾ ಕರಂದ್ಲಾಜೆ, ಆರ್ ಅಶೋಕ್ ವಿರುದ್ಧ FIR

    ನಾಗಮಂಗಲ ಗಲಭೆ (Nagamangala Violence) ಪ್ರಕರಣ ವಿಚಾರವಾಗಿ ಮಾತನಾಡಿ, ರಾಜ್ಯದಲ್ಲಿ ಬೆಂಕಿ ಹಚ್ಚುತ್ತಿರುವುದು ಕಾಂಗ್ರೆಸ್. ಅದನ್ನು ಆರಿಸುವ ಕೆಲಸ ನಮಗಿದೆ. ನಾಗಮಂಗಲಕ್ಕೆ ನಾನು ಹೋಗಿದ್ದೆ. ಅಲ್ಲಿನ ಪರಿಸ್ಥಿತಿ ನೋಡಿ ಬಂದಿದ್ದೇನೆ. ಹಿಂದೂಗಳನ್ನ ಟಾರ್ಗೆಟ್ ಮಾಡಿ ಅವರ ಅಂಗಡಿಗಳಿಗೆ ಬೆಂಕಿ ಹಾಕಿದ್ದಾರೆ. ಪೆಟ್ರೋಲ್ ಬಾಂಬ್ ಹಾಕಿದ್ದಾರೆ. ಇದರಲ್ಲಿ ಪಶ್ಚಿಮ ಬಂಗಾಳ ಹಾಗೂ ಕೇರಳದವರು ಭಾಗಿಯಾಗಿದ್ದಾರೆ. ನಾಗಮಂಗಲದಲ್ಲಿ ಅವರಿಗೆ ಏನ್ ಕೆಲಸ ಎಂದು ಪ್ರಶ್ನಿಸಿದರು. ಎಸ್‌ಡಿಪಿಐ, ಪಿಎಫ್‌ಐ ನಿಷೇಧಿತ ಸಂಘಟನೆಯವರು ಅಲ್ಲಿದ್ದಾರೆ. ವ್ಯವಸ್ಥಿತವಾಗಿ ಅವರು ಇದನ್ನ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ಅವರಿಗೆ ಕುಮ್ಮಕ್ಕು ಕೊಡುತ್ತಿದ್ದಾರೆ ಆರೋಪಿಸಿದರು. ಇದನ್ನೂ ಓದಿ: ಹಿಜ್ಬುಲ್ಲಾ ಮೇಲೆ ಮತ್ತೊಂದು ಸ್ಟ್ರೈಕ್‌ – ಪೇಜರ್‌ ಆಯ್ತು ಈಗ ಏಕಕಾಲದಲ್ಲಿ ವಾಕಿಟಾಕಿಗಳು ಸ್ಫೋಟ

    ಅರಣ್ಯ ಸಚಿವ ಈಶ್ವರ ಖಂಡ್ರೆ ಅರಣ್ಯ ಭೂಮಿ ಪಡೆದಿರುವ ಬಗ್ಗೆ ಆರೋಪಿಸಿ ಮಾತನಾಡಿ, ಬೀದರ್‌ನಲ್ಲಿ ಸಚಿವ ಈಶ್ವರ ಖಂಡ್ರೆ ಸುಮಾರು 70-80 ಎಕರೆ ಭೂಮಿ ಅವರ ಕುಟುಂಬಕ್ಕೆ ತೆಗೆದುಕೊಂಡಿದ್ದಾರೆ ಅನ್ನೋದಿದೆ. ಎರಡು ಎಕರೆ, ಒಂದು ಎಕರೆ, ಅರ್ಧ ಎಕರೆ, ದಲಿತ ಸಮುದಾಯ, ಹಿಂದುಳಿದ ಸಮುದಾಯದವರು ಮಾಡಿಕೊಂಡಿದ್ದಾರೆ ಅವುಗಳನ್ನೆಲ್ಲಾ ಎತ್ತಂಗಡಿ ಮಾಡಿಸುವ ಕೆಲಸ ಮಾಡುತ್ತಿದ್ದಾರೆ. ಇವರೇ ಇವರ ಕುಟುಂಬಕ್ಕೆ ಅರಣ್ಯ ಭೂಮಿಯನ್ನು ತೆಗೆದುಕೊಳ್ಳಲು ಹೇಗೆ ಸಾಧ್ಯವಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಒಂದು ವಾರದೊಳಗೆ ಸಿಎಂ ಅಧಿಕೃತ ನಿವಾಸ ತ್ಯಜಿಸಲಿದ್ದಾರೆ ಕೇಜ್ರಿವಾಲ್

    ಇಡೀ ರಾಜ್ಯದಲ್ಲಿ ಇವರು ಅರಣ್ಯ ಭೂಮಿಗಳನ್ನ ಲೂಟಿ ಮಾಡುತ್ತಿದ್ದಾರೆ. ಆದರೆ ಸಣ್ಣಪುಟ್ಟವರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ನಾವು ಕೂಲಂಕಷವಾಗಿ ಪರಿಶೀಲನೆ ಮಾಡಿ ದಾಖಲಾತಿಗಳೊಂದಿಗೆ ಸದನದಲ್ಲಿ ಅವರ ವಿರುದ್ಧವಾಗಿ ವಿಚಾರಗಳನ್ನ ಮಂಡಿಸುತ್ತೇವೆ. ಒತ್ತುವರಿ ಮಾಡಿಕೊಳ್ಳಲಿಕ್ಕೆ ಅವರ ಸ್ವಂತ ಜಮೀನುಗಳಲ್ಲಾ, ಸರಕಾರಿ ಜಮೀನುಗಳನ್ನ ಎಲ್ಲೇ ಒತ್ತುವರಿ ಮಾಡಿದರೂ ನಮ್ಮ ಸರ್ಕಾರ ಬಂದರೆ ಎಲ್ಲವನ್ನೂ ಮುಟ್ಟುಗೋಲು ಹಾಕಿಕೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಹಿಜ್ಬುಲ್ಲಾ ಮೇಲೆ ಫಿಲ್ಮಿ ಸ್ಟೈಲ್‌ ದಾಳಿ – ಒಂದೇ ಸಮಯದಲ್ಲಿ 2 ಸಾವಿರ+ ಪೇಜರ್‌ಗಳು ಸ್ಫೋಟಗೊಂಡಿದ್ದು ಹೇಗೆ?