Tag: chalavadi narayanaswamy

  • ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ: ಛಲವಾದಿ ನಾರಾಯಣಸ್ವಾಮಿ

    ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ: ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ವಿರುದ್ಧ ಕಾಂಗ್ರೆಸ್ (Congress) ಪಕ್ಷ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ದಲಿತ ಬಂಧುಗಳು ಕಾಂಗ್ರೆಸ್ ಸುಳ್ಳನ್ನು ನಂಬಬಾರದು ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ದಲಿತ ಸಮುದಾಯಗಳಿಗೆ ಕರೆ ನೀಡಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಮಿತ್ ಶಾ ವಿರುದ್ಧ ಹೋರಾಟ ಮಾಡುತ್ತಿದೆ. ಈ ಕಾಂಗ್ರೆಸ್ ಪಕ್ಷ ಬೀದಿಗಿಳಿಯುವ ಸ್ಥಿತಿ ನಿರ್ಮಾಣ ಮಾಡಿದೆ. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅಪಮಾನ ಮಾಡಿದ್ದಲ್ಲದೇ ನೋಯಿಸಿತ್ತು. ಈ ವಿಚಾರವಾಗಿ ಅಮಿತ್ ಶಾ ಕಾಂಗ್ರೆಸ್‌ನ್ನು ಅಮಿತ್ ಶಾ ತರಾಟೆಗೆ ತೆಗೆದುಕೊಂಡಿದ್ದರು.ಇದನ್ನೂ ಓದಿ: ಬೀದರ್ | ಚಳಿ ಹೆಚ್ಚಳಕ್ಕೆ ಸರ್ಕಾರಿ ಶಾಲೆಯ ಶೈಕ್ಷಣಿಕ ಪ್ರವಾಸ ರದ್ದುಪಡಿಸಲು ಒತ್ತಾಯ

    ಯಾವಾಗ ಇದನ್ನು ಹೇಳಿದರೋ ಆಗದಿಂದ ಅಂಬೇಡ್ಕರ್ ಫೋಟೋ ಇಟ್ಟುಕೊಂಡು ಓಡಾಡುತ್ತಿದ್ದಾರೆ. ಕಾಂಗ್ರೆಸ್ ದ್ರೋಹವನ್ನು ಅಮಿತ್ ಶಾ ಎಳೆಎಳೆಯಾಗಿ ಬಿಚ್ಚಿಡುತ್ತಾರೆ. ಅಮಿತ್ ಶಾ ಹೇಳಿಕೆಯಂತೆಯೇ ಕಾಂಗ್ರೆಸ್ ಅಂಬೇಡ್ಕರ್‌ಗೆ ಅಪಮಾನ ಮಾಡಿದರು ಹಾಗೂ ಕಾಂಗ್ರೆಸ್ ಪ್ರತಿಭಟನೆ ಮಾಡುವ ಕೆಲಸ ಮಾಡುತ್ತಿದೆ ಎಂದು ಆರೋಪ ಮಾಡಿದರು.

    ದಲಿತ ಬಂಧುಗಳೇ, ಯಾರೇ ಅಂಬೇಡ್ಕರ್ ಅವರನ್ನು ನಿಂದಿಸಿದರೂ, ನಾನು ಅವರ ವಿರೋಧಿಯಾಗುತ್ತೇನೆ. ಆದರೆ ಅಮಿತ್ ಶಾ, ಅಂಬೇಡ್ಕರ್ ಬಗ್ಗೆ ಅವಹೇಳನ ಮಾಡಿಲ್ಲ. ಕಾಂಗ್ರೆಸ್ ಸುಮ್ಮನೆ ಬೊಬ್ಬೆ ಹೊಡೆಯುತ್ತಿದ್ದಾರೆ. ಅಂಬೇಡ್ಕರ್ ವಿರೋಧಿ ಕಾಂಗ್ರೆಸ್. ಆದರೆ ಕಾಂಗ್ರೆಸ್‌ನವರು ಕೂಡಾ ಅಂಬೇಡ್ಕರ್ ಅವರನ್ನು ಗೌರವಿಸುವಂತೆ ಅಮಿತ್ ಶಾ ಮಾಡಿದ್ದಾರೆ. ದಲಿತ ಬಂಧುಗಳು ಆತುರ ಬೀಳಬೇಡಿ. ಅವರು ಹೇಳಿದ ಮಾತು ಪೂರ್ಣವಾಗಿ ಕೇಳಿ. ಅಮಿತ್ ಶಾ ಅಂಬೇಡ್ಕರ್‌ಗೆ ಅಪಮಾನ ಮಾಡಿಲ್ಲ. ಕಾಂಗ್ರೆಸ್‌ಗೆ ಅಪಮಾನ ಮಾಡಿದ್ದಾರೆ. ದಲಿತರು ಆತುರ ಬೀಳದೇ ಅವರ ಹೇಳಿಕೆ ಸರಿಯಾಗಿ ಕೇಳಿಸಿಕೊಂಡು ತೀರ್ಮಾನ ಮಾಡಬೇಕು ಅಂತ ಮನವಿ ಮಾಡಿದರು.ಇದನ್ನೂ ಓದಿ: ಕ್ರಿಸ್‌ಮಸ್ ಪ್ರಯುಕ್ತ ನೈಋತ್ಯ ರೈಲ್ವೆಯಿಂದ ವಿಶೇಷ ರೈಲುಗಳ ಸಂಚಾರ

  • 2024-25ರಲ್ಲಿ 1.4 ಲಕ್ಷ ಕೋಟಿ ಸಾಲ ಮಾಡಿದ್ದೇವೆ, ಬೇರೆ ರಾಜ್ಯಗಳಿಗಿಂತ ನಮ್ಮದು ಕಡಿಮೆ: ಸಿದ್ದರಾಮಯ್ಯ

    2024-25ರಲ್ಲಿ 1.4 ಲಕ್ಷ ಕೋಟಿ ಸಾಲ ಮಾಡಿದ್ದೇವೆ, ಬೇರೆ ರಾಜ್ಯಗಳಿಗಿಂತ ನಮ್ಮದು ಕಡಿಮೆ: ಸಿದ್ದರಾಮಯ್ಯ

    ಬೆಂಗಳೂರು: 2023-24ರ ಅವಧಿಯಲ್ಲಿ ನಮ್ಮದು ಒಟ್ಟು ಸಾಲ (Loan) 90,280 ಕೋಟಿ ರೂ. ಇತ್ತು. 2024-25ರಲ್ಲಿ 1.4 ಲಕ್ಷ ಕೋಟಿ ಸಾಲ ಮಾಡಿದ್ದೇವೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ ನಮ್ಮದು ಸಾಲದ ಪ್ರಮಾಣ ಕಡಿಮೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು.

    ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ತಿಪ್ಪೇಸ್ವಾಮಿ ಪ್ರಶ್ನೆಗೆ ಸಿಎಂ ಅಂಕಿ ಅಂಶ ಸಮೇತ ಉತ್ತರಿಸಿದರು. ಇದನ್ನೂ ಓದಿ: ಡಿ.14ರಂದು ʻಮಹಾʼ ಸಂಪುಟ ವಿಸ್ತರಣೆ – ಪ್ರಧಾನಿ ಮೋದಿ ಭೇಟಿಯಾದ ಸಿಎಂ ಫಡ್ನವಿಸ್‌

    ಯಾವುದೇ ಸರ್ಕಾರ ತನ್ನ ಕೆಲಸಗಳಿಗೆ ಹಣ ಖರ್ಚು ಮಾಡಲು ಸಾಲ ಮಾಡಬೇಕಾಗುತ್ತದೆ. ಸಾಮರ್ಥ್ಯ ನೋಡಿಕೊಂಡು ಸಾಲ ಮಾಡಬೇಕು. ಎಷ್ಟು ಸಾಲ ಕೊಡಬೇಕು ಅಂತ ಕೇಂದ್ರ ಸರ್ಕಾರ ನಿಗದಿ ಮಾಡುತ್ತದೆ. ಅದರ ಪ್ರಕಾರ ನಾವು ಸಾಲ ಪಡೆಯುತ್ತೇವೆ, ಸಾಲದ ಮಿತಿ ಕೊಟ್ಟಷ್ಟು ಸಾಲ ಪಡೆದಿದ್ದೇವೆ. ನಿಯಮದ ಪ್ರಕಾರ 3 ಮಾನದಂಡ ನಿಗದಿಯಾಗಿದೆ. ನಮ್ಮಲ್ಲಿ ವಿತ್ತೀಯ ಕೊರತೆಯು (Financial Deficit) 2024-25ರಲ್ಲಿ 2.9% ಇದೆ, 2023-24ರಲ್ಲಿ 2.6% ಇತ್ತು ಎಂದು ತಿಳಿಸಿದರು.

    2023-24 ರಲ್ಲಿ ನಮ್ಮದು ಒಟ್ಟು ಸಾಲ 90,280 ಕೋಟಿ ರೂ. ಇತ್ತು. 2024-25ರಲ್ಲಿ 1.4 ಲಕ್ಷ ಕೋಟಿ ರೂ. ಸಾಲ ಮಾಡಿದ್ದೇವೆ. ಆಂಧ್ರ, ಅಸ್ಸಾಂ, ಹಿಮಾಲಯ ಪ್ರದೇಶ, ಕೇರಳ, ಮಹಾರಾಷ್ಟ್ರ, ಮಧ್ಯ ಪ್ರದೇಶ, ತಮಿಳುನಾಡು ಸೇರಿ ಬೇರೆ ರಾಜ್ಯಕ್ಕೆ ಹೋಲಿಕೆ ಮಾಡಿದರೆ ನಮ್ಮ ಸಾಲದ ಪ್ರಮಾಣ ಕಡಿಮೆ ಎಂದು ಸಿಎಂ ಹೇಳಿದರು. ಇದನ್ನೂ ಓದಿ: ಪ್ರತಿಭಟನೆಯಲ್ಲಿ ಭಾಗಿಯಾಗಿ ಸಮಾಜದ ಋಣ ತೀರಿಸಿ – ವಚನಾನಂದ ಶ್ರೀಗಳ ವಿರುದ್ಧ ಮಾಜಿ ಶಾಸಕ ಗರಂ

    ಅನಗತ್ಯ ಖರ್ಚಿಗೆ ಕಡಿವಾಣ:
    ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳಿಗೆ 52,009 ಕೋಟಿ ರೂ. ಬಜೆಟ್‌ನಲ್ಲಿ ಒದಗಿಸಲಾಗಿದೆ. ಇದು ಹೆಚ್ಚಾಗಬಹುದು. ಹೆಚ್ಚಾದರೆ ಪೂರಕ ಬಜೆಟ್‌ನಲ್ಲಿ ಸೇರಿಸಿಕೊಳ್ತೀವಿ. ಗ್ಯಾರಂಟಿಯಿಂದ ರಾಜ್ಯದ ಬೊಕ್ಕಸ ಖಾಲಿ ಆಯ್ತು ಅಂತ ವಿಪಕ್ಷಗಳು ಆರೋಪ ಮಾಡುತ್ತಿವೆ. ಇದರಲ್ಲಿ ಯಾವುದೇ ಹುರುಳಿಲ್ಲ. ಅಭಿವೃದ್ಧಿಗೆ ಹಣ ಇದೆ, ರಾಜ್ಯದಲ್ಲಿ ಈ ವರ್ಷ 3.71 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡನೆ ಆಗಿದೆ. ಇದರಲ್ಲಿ 1.20 ಲಕ್ಷ ಕೋಟಿ ರೂ. ಅಭಿವೃದ್ಧಿಗೆ ಬಳಕೆ ಮಾಡ್ತಿದ್ದೇವೆ. ಇನ್ನೂ ಈ ಬಾರಿ 14 ಸಾವಿರ ಕೋಟಿ ರೂ. ವಿತ್ತೀಯ ಕೊರತೆ ಆಗಿದ್ದು, ಅನಗತ್ಯ ಖರ್ಚಿಗೆ ಕಡಿವಾಣ ಹಾಕಿ, ಸರಿ ದೂಗಿಸುತ್ತೇವೆ ಎಂದು ಸಿಎಂ ವಿವರಿಸಿದರು.

    ಇದೇ ವೇಳೆ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾಯಾರಣಸ್ವಾಮಿ ಮಾತನಾಡಿ, 52 ಸಾವಿರ ಕೋಟಿ ರೂ. ಗ್ಯಾರಂಟಿಗೆ ಹಣ ಇಟ್ಡಿದ್ದೇವೆ ಅಂತ ಸಿಎಂ ಹೇಳಿದ್ದಾರೆ. SCSP-TSPಯಿಂದ ಹಣ ತೆಗೆದಿದ್ದೀರಾ? ಅದನ್ನ ಯಾವುದಕ್ಕೆ ಖರ್ಚು ಮಾಡಿದ್ದೀರಾ? ಗ್ಯಾರಂಟಿ ಕೊಡಬೇಡಿ ಎಂದು ನಾವು ಹೇಳಿಲ್ಲ. ಆದ್ರೆ ಅಭಿವೃದ್ಧಿಗೆ ಹಣ ಕೊಟ್ಟಿಲ್ಲ, ಗ್ಯಾರಂಟಿ ನಿಲ್ಲಿಸಿ ಅಂತ ನಿಮ್ಮ ಶಾಸಕರೇ ಹೇಳ್ತಿದ್ದಾರೆ, ಇದಕ್ಕೇನು ಹೇಳ್ತೀರಾ? ಅಂತ ಪ್ರಶ್ನೆ ಮಾಡಿದರು.

    ಇದಕ್ಕೆ ಪ್ರತ್ಯುತ್ತರ ನೀಡಿದ ಸಿಎಂ, ಗಣಿಗಾರಿಕೆಗೆ ತೆರಿಗೆ ಪರಿಷ್ಕರಣೆ ಮಾಡಿದ್ದೇವೆ. ಅದರ ಪ್ರಕಾರ 4,700 ಕೋಟಿ ರೂ. ಹೆಚ್ಚುವರಿ ಆದಾಯ ಬರುತ್ತದೆ. ಶಾಸಕ ರಾಜು ಕಾಗೆ ಅವರು ಕೇಳಿದ್ದು, ಹೆಚ್ಚುವರಿ ಅನುದಾನ ಕೊಡಿ ಅಂತ. ಅದನ್ನ ಕೊಡೋಕೆ ಹೇಳಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ:  ಸೋನಿಯಾ ಗಾಂಧಿ ಮನವೊಲಿಸಲು ವಯನಾಡಿಗೆ ನೂರು ಮನೆ: ಈಶ್ವರಪ್ಪ ವ್ಯಂಗ್ಯ

    ಮುಂದುವರಿದು, SCSP-TSP ಯೋಜನೆ ಹಣ ಬಿಜೆಪಿ ಅವಧಿಯಲ್ಲಿ ಕಡಿಮೆ ಮಾಡಿದ್ದರು. ನಾವು ಈ ಬಾರಿ 39,000 ಕೋಟಿ ರೂ. ಇಟ್ಟಿದ್ದೇವೆ. ಬಿಜೆಪಿ ಅಧಿಕಾರ ಮಾಡ್ತಿರೋ ಬೇರೆ ರಾಜ್ಯಗಳಲ್ಲಿ SCSP-TSP ಕಾಯ್ದೆಯೇ ಇಲ್ಲ. ಇಡೀ ದೇಶದಲ್ಲಿ ಕರ್ನಾಟಕ, ಆಂಧ್ರ, ತೆಲಂಗಾಣ ಬಿಟ್ಟು ಇನ್ಯಾವುದೇ ರಾಜ್ಯದಲ್ಲಿ ಈ ಕಾಯ್ದೆ ಇಲ್ಲ. ಅಲ್ಲದೇ ಪರಿಶಿಷ್ಟ ಜಾತಿಯವರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಇರೋದು ಕರ್ನಾಟಕದಲ್ಲಿ ಮಾತ್ರ ಎಂದು ಸ್ಪಷ್ಟನೆ ನೀಡಿದರು. ಸಿಎಂ ಉತ್ತರಕ್ಕೆ ವಿಪಕ್ಷ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು, ಈ ವೇಳೆ ಸದನದಲ್ಲಿ ಗದ್ದಲ ಏರ್ಪಟ್ಟಿತು.

  • ಸಿಪಿವೈ ಗೆದ್ರೆ ಡಿಕೆಶಿ ಸಿಎಂ ಆಗ್ತಾರೆ ಅಂದ್ರು ಈಗೇನು ಮಾಡ್ತಾರೆ: ಛಲವಾದಿ ಪ್ರಶ್ನೆ

    ಸಿಪಿವೈ ಗೆದ್ರೆ ಡಿಕೆಶಿ ಸಿಎಂ ಆಗ್ತಾರೆ ಅಂದ್ರು ಈಗೇನು ಮಾಡ್ತಾರೆ: ಛಲವಾದಿ ಪ್ರಶ್ನೆ

    ದಾವಣಗೆರೆ: ಚನ್ನಪಟ್ಟಣ ಉಪಚುನಾವಣೆಯಲ್ಲಿ ಯೋಗೇಶ್ವರ್ (C.P Yogeshwar) ಗೆದ್ದರೆ ಡಿಕೆಶಿ (D.K Shivakumar) ಸಿಎಂ ಆಗ್ತಾರೆ ಎಂದು ಸಿದ್ದರಾಮಯ್ಯ (Siddaramaiah) ಹೇಳಿದ್ದರು. ಈಗ ಗೆದ್ದಿದ್ದಾರೆ ಏನು ಮಾಡ್ತಿರಾ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಪ್ರಶ್ನಿಸಿದ್ದಾರೆ.

    ದಾವಣಗೆರೆಯಲ್ಲಿ (Davanagere) ಅವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ, ಕಾಂಗ್ರೆಸ್ (Congress) ಪವರ್ ಶೇರಿಂಗ್ ಗೊಂದಲದ ವಿಚಾರವಾಗಿ ಪ್ರತಿಕ್ರಿಯಿಸಿದರು. ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಇದೇ ನನ್ನ ಕೊನೆ ಚುನಾವಣೆ ಎಂದು ಹೇಳಿಕೊಂಡು ಇಲ್ಲಿವರೆಗೂ ಬಂದಿದ್ದಾರೆ. ರಾತ್ರಿ ಮಾತು ಖಾತ್ರಿ ಇರೋದಿಲ್ಲ ಎನ್ನುವಂತೆ ಇವರ ಮಾತುಗಳಿವೆ. ಅವರು ರಾಜಕೀಯವಾಗಿ ಇರುವ ತನಕ ಡಿಕೆಶಿ ಸಿಎಂ ಆಗೋದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

    ಇನ್ನೂ ವಕ್ಫ್ (Waqf Board) ಜಾಗದ ವಿವಾದದ ವಿಚಾರವಾಗಿ, ರೈತರ ಮಠ ಮಂದಿಗಳ ಆಸ್ತಿ ಪಹಣಿಯಲ್ಲಿ ವಕ್ಫ್ ಹೆಸರು ಬಂದಿದೆ. ಬ್ರಿಟಿಷರು ಮಾಡಿದ್ದ ಕಾನೂನನ್ನು ನೆಹರು ಉಳಿಸಿಕೊಂಡು ಬಂದರು. ಅದನ್ನು ಹಾಗೇ ಇಂದಿರಾಗಾಂಧಿಯವರು ಮುಂದುವರೆಸಿದರು. ಬಳಿಕ ಮನಮೋಹನ್ ಸಿಂಗ್ ಅವರು ವಕ್ಫ್‌ಗೆ ಪರಮಾಧಿಕಾರ ನೀಡಿದ್ದರು.

    ಇದರ ಪರಿಣಾಮ ಯಾರು ಕೂಡ ವಕ್ಫ್‌ ಆಸ್ತಿಯನ್ನು ಪ್ರಶ್ನೆ ಮಾಡುವಂತಿಲ್ಲ. ಏನಾದರೂ ಪ್ರಶ್ನೆ ಮಾಡಬೇಕಾದರೆ ಅದು ವಕ್ಫ್ ನ್ಯಾಯಾಧಿಕರಣಕ್ಕೆ ಹೋಗಬೇಕು. ಇದು ತೋಳ ಕುರಿಯನ್ನು ತಿಂದಿದ್ದು, ಇನ್ನೊಂದು ಕುರಿ ನ್ಯಾಯಕ್ಕಾಗಿ ಅದೇ ತೋಟದ ಮುಂದೆ ನಿಂತಂತೆ ಆಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

    ಈಗ ನಮಗೆ ತೊಂದರೆ ಆಗುತ್ತದೆ ಎಂದು ಸಿಎಂ ಎಚ್ಚೆತ್ತುಕೊಂಡಿದ್ದಾರೆ. 11ನೇ ಕಾಲಂನಲ್ಲಿ ವಕ್ಫ್‌ನ ಹೆಸರು ತೆಗೆಯುತ್ತೇನೆ ಎಂದು ಹೇಳಿದ್ದಾರೆ. ಪಹಣಿಯಲ್ಲಿ ಅಷ್ಟೇ ಅಲ್ಲ ಗೆಜೆಟ್ ನೋಟಿಫಿಕೇಷನ್ ರದ್ದು ಮಾಡಬೇಕಿದೆ. ಈ ಎಲ್ಲಾ ಗೊಂದಲಕ್ಕೆ ಕಾರಣ ಕಾಂಗ್ರೆಸ್, ಬರೀ ಗೊಂದಲಕ್ಕೆ ಮುಳುಗಿಸಿ ಲೂಟಿ ಹೊಡೆಯುವಂತಾಗಿದೆ ಎಂದು ಕಿಡಿಕಾರಿದ್ದಾರೆ.

    ಬೆಂಗಳೂರಿನಲ್ಲಿ ಜಾಗ ಖರೀದಿ ಮಾಡಬೇಕಾದರೆ ಬಿಡಿಎಯಿಂದ ಎನ್‍ಓಸಿ ತೆಗೆದುಕೊಳ್ಳಬೇಕಿದೆ. ಆದರೆ ಈಗ ರಾಜ್ಯದಲ್ಲಿ ಜಮೀನು ಕೊಳ್ಳಬೇಕಾದರೆ ವಕ್ಫ್ ಬೋರ್ಡ್‍ನಿಂದ ಎನ್‍ಒಸಿ ಪಡೆಯಬೇಕಿದೆ ಎಂದು ವ್ಯಂಗ್ಯವಾಡಿದ್ದಾರೆ.

  • ಕೂಡಿ ಬಾಳಿದರೆ ಸ್ವರ್ಗ ಸುಖ – ಬಿಜೆಪಿ ಭಿನ್ನಮತಕ್ಕೆ ಛಲವಾದಿ ನಾರಾಯಣಸ್ವಾಮಿ ಅಸಮಾಧಾನ

    ಕೂಡಿ ಬಾಳಿದರೆ ಸ್ವರ್ಗ ಸುಖ – ಬಿಜೆಪಿ ಭಿನ್ನಮತಕ್ಕೆ ಛಲವಾದಿ ನಾರಾಯಣಸ್ವಾಮಿ ಅಸಮಾಧಾನ

    ಬೆಂಗಳೂರು: ಎಲ್ಲರೂ ಕೂಡಿ ಬಾಳಿದರೆ ಸ್ವರ್ಗ ಸುಖ, ಸ್ವಾರ್ಥಕ್ಕಾಗಿ ಪಕ್ಷದ ವಿರುದ್ಧ ಯಾರು ಮಾತಾಡಬಾರದು ಎಂದು ಬಿಜೆಪಿಯಲ್ಲಿನ ಭಿನ್ನಮತಕ್ಕೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅಸಮಾಧಾನ ಹೊರ ಹಾಕಿದ್ದಾರೆ.

    ನಗರದಲ್ಲಿ (Bengaluru) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಯತ್ನಾಳ್ ಟೀಂ ಮತ್ತು ವಿಜಯೇಂದ್ರ ಟೀಂ ಕಿತ್ತಾಟಕ್ಕೆ ಪ್ರತಿಕ್ರಿಯೆ ನೀಡಿದರು. ಸದಾನಂದಗೌಡರು ಹೇಳಿರೋದು ಸತ್ಯ. ಚಿನ್ನದ ತಟ್ಟೆಯಲ್ಲಿ ಇಟ್ಟುಕೊಡುತ್ತಿದ್ದಾರೆ. ನಾವು ಅದನ್ನ ಇನ್ನೂ ಕ್ರೀಯಾಶೀಲವಾಗಿ ಬಳಸಿಕೊಳ್ಳಬೇಕು. ಪಕ್ಷ ಯಾರಿಂದಲೂ ಇಲ್ಲ. ಯಾರೇ‌ ಇದ್ದರೂ ಇಲ್ಲದೇ ಇದ್ದರೂ ಪಕ್ಷ ಇರುತ್ತದೆ. ನಮ್ಮ ಹೈಕಮಾಂಡ್ ಶಕ್ತಿಯುತವಾಗಿದೆ. ಅವರು ಕ್ರಮ ತೆಗೆದುಕೊಳ್ಳುತ್ತಾರೆ. ಬಿಚ್ಚೋರು ಇದ್ದರೆ ಯಾರು ಬೇಕಾದರೂ ಬಿಚ್ಚಲಿ. ನಾನು ಹೇಳೋದು ಕೂಡಿ ಬಾಳಿದರೇ ಸ್ವರ್ಗ ಸುಖ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಈ ಸರ್ಕಾರ ಭ್ರಷ್ಟಾಚಾರದಲ್ಲಿ ನರ್ತನ ಮಾಡುತ್ತಿದೆ. ಇದನ್ನ ನಾವು ಬಳಕೆ ಮಾಡಿಕೊಳ್ಳಬೇಕು. ಸ್ವಾರ್ಥಕ್ಕೆ ಪಕ್ಷದ ವಿರುದ್ಧ ಮಾತಾಡುವುದು ಸರಿಯಲ್ಲ ಎಂದಿದ್ದಾರೆ.

    ಈಗ ವಿಜಯೇಂದ್ರ (B.Y Vijayendra) ರಾಜ್ಯಾಧ್ಯಕ್ಷರು. ಅಧ್ಯಕ್ಷರ ಆದೇಶ ಬಂದಾಗ ನಾವು ಕೆಲಸ ಮಾಡ್ತೀವಿ. ಯತ್ನಾಳ್‌ರನ್ನು ನಾವು ಕಡೆಗಣಿಸಿಲ್ಲ. ವಿಜಯಪುರದಲ್ಲಿ ಹೋರಾಟದಲ್ಲಿ ನಾನು ಭಾಗವಹಿಸಿದ್ದೆ. ಆದರೆ ಅಧ್ಯಕ್ಷರ ತೀರ್ಮಾನವೇ ನಮ್ಮ ಕೆಲಸ. ಈಗ ನನ್ನ ಅಧ್ಯಕ್ಷರು ವಿಜಯೇಂದ್ರ. ಅವರು ಹೇಳಿದಂತೆ ನಾನು ಕೇಳುತ್ತೇನೆ. ಪಕ್ಷದ ಗುಂಪುಗಳ ಬಗ್ಗೆ ಹೈಕಮಾಂಡ್ ನೋಡಿಕೊಳ್ಳುತ್ತದೆ. ನಾನು ಪಕ್ಷದ ಗೆರೆ ದಾಟುವುದಿಲ್ಲ ಎಂದಿದ್ದಾರೆ.

  • ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ರಾಹುಲ್, ಸಿದ್ದರಾಮಯ್ಯ ತಮ್ಮ ನಿಲುವು ತಿಳಿಸಲಿ – ಛಲವಾದಿ

    ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ರಾಹುಲ್, ಸಿದ್ದರಾಮಯ್ಯ ತಮ್ಮ ನಿಲುವು ತಿಳಿಸಲಿ – ಛಲವಾದಿ

    ಬೆಂಗಳೂರು: ಬಾಂಗ್ಲಾದೇಶದಲ್ಲಿ(Bangladesh) ಇಸ್ಕಾನ್ (ISKCON)ಸಂಸ್ಥೆ ಬ್ಯಾನ್ ಮಾಡಲು ಹೊರಟಿರುವುದು ಮತ್ತು ಹಿಂದೂಗಳ ಮೇಲೆ ದೌರ್ಜನ್ಯ ಆಗುತ್ತಿರುವ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮತ್ತು ಸಿಎಂ ಸಿದ್ದರಾಮಯ್ಯ (CM Siddaramaiah) ತಮ್ಮ ನಿಲುವು ತಿಳಿಸಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಗ್ರಹಿಸಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಿಂಸಾಚಾರ, ಅಟ್ಟಹಾಸ ಮಿತಿ ಮೀರಿದೆ. ಮೋದಿ ಸರ್ಕಾರ ಈಗಾಗಲೇ ಬಾಂಗ್ಲಾದೇಶಕ್ಕೆ ಹಿಂದೂಗಳಿಗೆ ತೊಂದರೆ ಕೊಡದಂತೆ ಚಿನ್ಮಯ್‌ ಕೃಷ್ಣದಾಸ್ ಬಿಡುಗಡೆಗೆ ಆಗ್ರಹ ಮಾಡಿದ್ದಾರೆ. ಇಸ್ಕಾನ್ ಅನುಮತಿ ರದ್ದು ಮಾಡಬೇಕು ಎಂಬ ಬಾಂಗ್ಲಾದೇಶ ಸರ್ಕಾರದ ಮನವಿಯನ್ನ ಹೈಕೋರ್ಟ್ ತಿರಸ್ಕಾರ ಮಾಡಿದೆ. ಈ ವಿಚಾರದಲ್ಲಿ ಮಮತ ಬ್ಯಾನರ್ಜಿ ಕೇಂದ್ರದ ಪರವಾಗಿ ಇರುತ್ತೇನೆ ಅಂತ ಹೇಳಿದ್ದಾರೆ. ಬ್ಯಾನರ್ಜಿ ಮಾತನ್ನ ನಾನು ಸ್ವಾಗತ ಮಾಡುತ್ತೇನೆ. ಈ ವಿಚಾರದಲ್ಲಿ ಕಾಂಗ್ರೆಸ್ ನಡೆ ಏನು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಸಿಎಂ ಇರೋ ಕೆಲಸ ಮೊದಲು ಮಾಡಲಿ, ರಾಜ್ಯಪಾಲರ ಕೆಲಸ ಯಾಕೆ ಕಡಿತ ಮಾಡ್ತೀರಾ? – ಅಶ್ವಥ್ ನಾರಾಯಣ ಕಿಡಿ

     

    ರಾಹುಲ್ ಗಾಂಧಿ ನಾನು ಹಿಂದು ಪರ ಅಂತಾರೆ ಯಾಕೆ ಈ‌ ಬಗ್ಗೆ ಮಾತಾಡಿಲ್ಲ. ನಮ್ಮ ರಾಜ್ಯ ಸರ್ಕಾರ ಯಾಕೆ ಇದರ ಬಗ್ಗೆ ಮಾತಾಡಿಲ್ಲ. ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧ ಸರ್ಕಾರ. ಇಂದೇ ಸಿದ್ದರಾಮಯ್ಯ ಅವರು ಈ‌ ಬಗ್ಗೆ ಪ್ರತಿಕ್ರಿಯೆ ನೀಡಬೇಕು. ಕೇಂದ್ರದ ನಿಲುವು ನಾವು ಬೆಂಬಲಿಸಬೇಕು ಅಂತ ಆಗ್ರಹ ಮಾಡುತ್ತೇವೆ ಎಂದರು.

    ಕಾಂಗ್ರೆಸ್ ಯಾಕೆ ತಟಸ್ಥವಾಗಿದೆ. ಕಾಂಗ್ರೆಸ್ ನಡೆ ಸಂಶಯವಾಗಿದೆ. ತುಷ್ಟೀಕರಣದ ನಡೆಯಿಂದ ಬಾಂಗ್ಲಾದೇಶ, ಮತ್ತೊಂದು ಪಾಕಿಸ್ತಾನದ ಕವಲು ರಾಜ್ಯದಲ್ಲಿ ಒಡೆಯೋ ಸುಳಿವು ಸಿಗುತ್ತಿದೆ. ಕೇಂದ್ರ ಸರ್ಕಾರ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ವ್ಯವಸ್ಥೆಯನ್ನ ಕಡಿವಾಣ ಹಾಕಲು ಕ್ರಮವಹಿಸಬೇಕು. ದೇಶದ ಎಲ್ಲಾ ರಾಜ್ಯಗಳು ಕೇಂದ್ರಕ್ಕೆ ಬೆಂಬಲಕ್ಕೆ ನಿಲ್ಲಬೇಕು. ಚಿನ್ಮಯ ಕೃಷ್ಣದಾಸ್ ರನ್ನ ಬಿಡುಗಡೆ ಮಾಡಬೇಕು. ಬಾಂಗ್ಲಾದೇಶದಲ್ಲಿ‌ ಇರುವ ಹಿಂದೂಗಳ ರಕ್ಷಣೆಯಾಬೇಕು. ಕಾಂಗ್ರೆಸ್ ನಿಲುವು ಏನು ಅಂತ ತಿಳಿಸಬೇಕು ಅಂತ ಆಗ್ರಹ ಮಾಡಿದರು.

     

  • ಬಳ್ಳಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು – ದಿನೇಶ್‌ ಗುಂಡೂರಾವ್ ವಜಾಕ್ಕೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

    ಬಳ್ಳಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು – ದಿನೇಶ್‌ ಗುಂಡೂರಾವ್ ವಜಾಕ್ಕೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

    ಬೆಂಗಳೂರು: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ (Dinesh Gundurao) ಅವರನ್ನ ಸಿಎಂ ಸಿದ್ದರಾಮಯ್ಯ ಸಂಪುಟದಿಂದ ವಜಾ ಮಾಡಬೇಕು ಅಂತ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಗ್ರಹಿಸಿದ್ದಾರೆ.

    ವಿಧಾನಸೌಧದಲ್ಲಿ (VidhanSoudha) ಮಾತನಾಡಿದ ಅವರು, ದಿನೇಶ್ ಗುಂಡೂರಾವ್ ಆರೋಗ್ಯ ಮಂತ್ರಿ ಆಗಲು ಯೋಗ್ಯರು ಇದ್ದೀರಾ? ಅವರೇ ವೈದ್ಯರಾ? ನಾವು ಸದನದಲ್ಲಿ ವೆಟನರಿ ಔಷಧಿ ಕೊಟ್ರು ಅಂತ ಆರೋಪ ಮಾಡಿದಾಗ ಯೂಟರ್ನ್ ಹೊಡೆದಿದ್ರಿ. ಈಗ ಬಾಣಂತಿಯರಿಗೆ ಕೊಟ್ಟ ಔಷಧಿ ಕಳಪೆ ಮತ್ತು ದ್ರಾವಣ ಕೂಡ ಕಳಪೆ ಆಗಿದೆ ಅಂತ ರಿಪೋರ್ಟ್ ಬಂದಿದೆ. ಹೀಗಿದ್ರು ದಿನೇಶ್ ಗುಂಡೂರಾವ್ ಬದಲಾವಣೆ ಮಾಡಿಲ್ಲ. ಆರೋಗ್ಯ ಇಲಾಖೆ (Health Department) ಅವರು ಜನರ ಜೀವಗಳ ಜೊತೆ ಆಟ ಆಡ್ತಿದ್ದಾರೆ. ಕೂಡಲೇ ದಿನೇಶ್ ಗುಂಡೂರಾವ್‌ರನ್ನ ವಜಾ ಮಾಡಬೇಕು ಅಂತ ಸಿಎಂರನ್ನ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಎಂಎಸ್ಸಿ ನರ್ಸಿಂಗ್, ಎಂಪಿಟಿ ಕೋರ್ಸ್ ಅರ್ಜಿ ಸಲ್ಲಿಸಲು ಡಿ.2 ಕೊನೆ ದಿನ: ಕೆಇಎ

    IV ದ್ರಾವಣವೇ ಸಾವಿಗೆ ಕಾರಣ:
    ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇಡೀ ಅನಾಹುತಕ್ಕೆ ಗ್ಲೂಕೋಸ್ ಸಹಿತ ಇಂಟ್ರಾವೀನಸ್ (ಐವಿ) ದ್ರಾವಣ ಕಾರಣ ಅನ್ನೋ ವರದಿ ಬಹಿರಂಗವಾಗಿದೆ. ಬಾಣಂತಿಯರ ಸರಣಿ ಸಾವಿನ ಕುರಿತು ತನಿಖೆ ನಡೆಸಲು ನೇಮಕವಾಗಿದ್ದ ತಂಡ ವರದಿಯೊಂದನ್ನು ನೀಡಿದ್ದು, ಹೆರಿಗೆಯಾಗುವ ಗರ್ಭಿಣಿಯರಿಗೆ ಶಸ್ತ್ರ ಚಿಕಿತ್ಸೆ ವೇಳೆ ನೀಡಿದ ದ್ರಾವಣ (ಗ್ಲೂಕೋಸ್) ಕಳಪೆಯಾಗಿತ್ತು ಎಂಬ ವರದಿ ನೀಡಿದೆ ಎಂಬುದಾಗಿ ಉನ್ನತ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: BBK 11: ಉಗ್ರಂ ಮಂಜು, ಮೋಕ್ಷಿತಾ ದಿಢೀರ್‌ ಬಂಧನ- ಟ್ವಿಸ್ಟ್‌ ಕೊಟ್ಟ ʻಬಿಗ್‌ ಬಾಸ್‌ʼ

    ದ್ರಾವಣದ ಬಗ್ಗೆ ದೂರು ಬಂದಿರುವುದರಿಂದ ಇಂಟ್ರಾವೀನಸ್ ದ್ರಾವಣ ಬಳಕೆ ಮಾಡದಂತೆ ಈಗಾಗಲೇ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಗ್ಲೂಕೋಸ್ ಬಳಸದಂತೆ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ರಾಜ್ಯದ ಎಲ್ಲ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಪತ್ರ ಬರೆದಿದೆ. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿನ ಸಾವಿನ ಬಗ್ಗೆ ತನಿಖೆ ನಡೆಸಲು ಸರ್ಕಾರ ತಂಡ ಕಳುಹಿಸಿತ್ತು. ಇದೀಗ ಶಸ್ತ್ರ ಚಿಕಿತ್ಸೆ ವೇಳೆ ಈ ಕಳಪೆ ಐವಿ ದ್ರಾವಣದಿಂದ ದೇಹದಲ್ಲಿ ದಿಢೀರ್ ಬದಲಾವಣೆ, ಅಡ್ಡ ಪರಿಣಾಮಗಳಿಂದ ಸಾವಾಗಿದೆ ಎಂದು ತಂಡ ವರದಿ ಸಲ್ಲಿಕೆ ಮಾಡಿದೆ.

    ಇದೇ ವಿಚಾರವನ್ನ ನವೆಂಬರ್ 16 ರಂದು ʻಪಬ್ಲಿಕ್ ಟಿವಿʼ ವರದಿ ಪ್ರಸಾರ ಮಾಡಿತ್ತು. ವೈದ್ಯರು ನೀಡಿದ್ದ ಗ್ಲೂಕೋಸ್ ರಿಯಾಕ್ಷನ್‌ನಿಂದಲೇ ಬಾಣಂತಿಯರ ಸಾವಾಗಿದ್ದು ಎಂದು ವಿಸ್ತೃತ ವರದಿ ಬಿತ್ತರಿಸಲಾಗಿತ್ತು. ?ಪಬ್ಲಿಕ್ ಟಿವಿ’ ವರದಿ ಬಳಿಕ ಎಚ್ಚೆತ್ತುಕೊಂಡಿದ್ದ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ರಾಜ್ಯದ ಎಲ್ಲ ಡಿಹೆಚ್‌ಒಗಳಿಗೆ ಪತ್ರ ಬರೆದು ಬಾಂಗ್ಲಾ ಮೂಲದಿಂದ ಸರಬರಾಗಿದ್ದ ಗ್ಲೂಕೋಸ್ ಬಳಸದಂತೆ ಹೇಳಿತ್ತು. ಇದನ್ನೂ ಓದಿ: ಹೈಕೋರ್ಟ್‌ಗೆ ತೆರಳುವಂತೆ ಶಾಹಿ ಈದ್ಗಾ ಸಮಿತಿಗೆ ಸೂಚನೆ; ʻಹೈʼಆದೇಶ ಬರೋವರೆಗೆ ಮಸೀದಿ ಸಮೀಕ್ಷೆಗೆ ಸುಪ್ರೀಂ ತಡೆ

  • ಕಾಂಗ್ರೆಸ್‌ನಿಂದ ಅಘೋಷಿತ ಕಾನೂನು ಜಾರಿ ಆದಂತಿದೆ: ಛಲವಾದಿ ನಾರಾಯಣಸ್ವಾಮಿ

    ಕಾಂಗ್ರೆಸ್‌ನಿಂದ ಅಘೋಷಿತ ಕಾನೂನು ಜಾರಿ ಆದಂತಿದೆ: ಛಲವಾದಿ ನಾರಾಯಣಸ್ವಾಮಿ

    ಚಿತ್ರದುರ್ಗ: ಕಾಂಗ್ರೆಸ್‌ನಿಂದ (Congress) ಅಘೋಷಿತ ಕಾನೂನು ಜಾರಿ ಆದಂತಿದೆ. ಯಾರೆಷ್ಟು ಬೇಕಾದರೂ ಕದಿಯಬಹುದು, ಸಿಕ್ಕಿಬಿದ್ದಾಗ ವಾಪಸ್ ಕೊಟ್ಟರಾಯ್ತು. ದರೋಡೆ ಮಾಡಿದ್ದು ವಾಪಸ್ ಕೊಟ್ಟರೆ ಕ್ರಮ ಬೇಡವೇ ಎಂದು ಕಾಂಗ್ರೆಸ್ ವಿರುದ್ಧ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಿಡಿಕಾರಿದ್ದಾರೆ.

    ಈ ಕುರಿತು ಚಿತ್ರದುರ್ಗದಲ್ಲಿ (Chitradurga) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ದಿನಕ್ಕೊಂದು ಹಗರಣ ಬಯಲಾಗುತ್ತಿವೆ. ಸಿಎಂ ಸಿದ್ದರಾಮಯ್ಯ ಮಾತ್ರ ರಾಜೀನಾಮೆ ನೀಡುತ್ತಿಲ್ಲ. ಜಗ್ಗೋದಿಲ್ಲ, ಬಗ್ಗೋದಿಲ್ಲ ಅಂದವರು ಸೈಟ್ ಯಾಕೆ ವಾಪಸ್ ಕೊಟ್ಟರು? ಪ್ರಿಯಾಂಕ್ ಖರ್ಗೆ 5 ಎಕರೆ ಜಾಗ ಯಾಕೆ ವಾಪಸ್ ಕೊಟ್ಟರು? ಹಾಗಿದ್ದರೆ ನಿಮ್ಮ ಮೇಲೇಕೆ ಕ್ರಮ ಬೇಡ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮನೆ ಮನೆಗಳಿಂದ ಕಸ ಸಂಗ್ರಹಕ್ಕೆ ಶುಲ್ಕ ವಸೂಲಿ – ರಾಜ್ಯ ಸರ್ಕಾರಕ್ಕೆ ಬಿಬಿಎಂಪಿಯಿಂದ ಪ್ರಸ್ತಾವನೆ

    ಸಿಎಂ ಸಿದ್ಧರಾಮಯ್ಯ ಬಗ್ಗೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅನ್ಸಾರಿ ಹೇಳಿಕೆ ಸಿದ್ದರಾಮಯ್ಯ ಬಗ್ಗೆ ಸ್ಪಷ್ಟಪಡಿಸುತ್ತದೆ. ನಾನೇನು ಹೇಳಲ್ಲ, ರಾಜ್ಯದ ಜನರೇ ತೀರ್ಮಾನಿಸಲಿ. ಸಚಿವ ಜಮೀರ್ ವಿರುದ್ಧ ಕ್ರಮಕ್ಕೆ ರಾಜ್ಯಪಾಲರ ಆದೇಶ ಸರಿಯಿದೆ. ನ್ಯಾಯಾಂಗದ ಆದೇಶ ಬೀದೀಲಿ ಪ್ರಶ್ನಿಸೋದು ಸರಿಯಲ್ಲ. ಸುಳ್ಳು ನಮ್ಮ ಮನೆ ದೇವರಲ್ಲ, ಭ್ರಷ್ಟಾಚಾರ, ಸುಳ್ಳು, ಮೋಸ ಕಾಂಗ್ರೆಸ್ ಮನೆ ದೇವರು ಎಂದು ಹರಿಹಾಯ್ದರು. ಇದನ್ನೂ ಓದಿ: ಚೋಟಾ ಮುಂಬೈಯಲ್ಲಿ ಬೆಲೆ ನಿಯಂತ್ರಿಸಲು ಅಖಾಡಕ್ಕಿಳಿದ ಕೇಂದ್ರ; ಹುಬ್ಬಳ್ಳಿ- ಧಾರವಾಡದಲ್ಲಿ ಭಾರತ್ ಬ್ರ‍್ಯಾಂಡ್ ಆಹಾರ ಧಾನ್ಯ ಪೂರೈಕೆಗೆ ಚಾಲನೆ

  • ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕಾಗಿತ್ತು: ಛಲವಾದಿ ಕಿಡಿ

    ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕಾಗಿತ್ತು: ಛಲವಾದಿ ಕಿಡಿ

    ಹಾವೇರಿ: ಸಿದ್ದರಾಮಯ್ಯ (Siddaramaiah) ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕಾಗಿತ್ತು ಎಂದು ಶಿಗ್ಗಾಂವಿಯಲ್ಲಿ (Shiggaon) ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಿಡಿಕಾರಿದ್ದಾರೆ.

    ಈ ಬಗ್ಗೆ ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಶ್ನೆ ಮಾಡುವುದಕ್ಕೆ ಲೋಕಾಯುಕ್ತ ಅಧಿಕಾರಿಗಳು ಎಷ್ಟು ಧೈರ್ಯ ಮಾಡಬಹುದು. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕಾಗಿತ್ತು. 10 ಗಂಟೆಗೆ ಸಿದ್ದರಾಮಯ್ಯ ತನಿಖೆಗೆ ಹೋಗಿದ್ದಾರೆ. ಎರಡು ತಾಸಿಗೆ ವಿಚಾರಣೆ ಮುಗಿದು ಹೋಗುತ್ತದೆ. ಇದು ಪೂರ್ವನಿರ್ಧಾರಿತವಾಗಿದೆ. ಈ ವಿಚಾರಣೆಯಿಂದ ಸತ್ಯ ಹೊರಗೆ ಬರುವುದು ಸಾಧ್ಯವೇ ಇಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಜಾಗತಿಕ ಶಾಂತಿಗಾಗಿ ಒಟ್ಟಾಗಿ ಕೆಲಸ ಮಾಡೋಣ – ಟ್ರಂಪ್‌ಗೆ ಮೋದಿ ಅಭಿನಂದನೆ

    ಇವರೇ ಸ್ಕ್ರಿಪ್ಟ್ ಬರೆದುಕೊಟ್ಟು ಇವರೇ ಉತ್ತರ ಕೊಟ್ಟು ಹೀಗೇ ಕೇಳಬೇಕು ಎಂದು ಇವರೇ ಹೇಳಿಕೊಟ್ಟಿದ್ದಾರೆ. ಇಷ್ಟೇ ಪ್ರಶ್ನೆ ಕೇಳ್ತಾರೆ, ಇಷ್ಟೇ ಸಮಯಕ್ಕೆ ಮುಗಿಯುತ್ತದೆ ಎಂಬುದು ಮೊದಲೇ ಸಿದ್ದರಾಮಯ್ಯಗೆ ಗೊತ್ತಾ? ಇದೆಲ್ಲ ಸ್ಟೆಜ್ ಮ್ಯಾನೇಜ್ಡ್ ವಿಚಾರಣೆ. ನಿಮ್ಮನ್ನು ಕಂಡು ಲೋಕಾ ಅಧಿಕಾರಿಗಳಿಗೆ ಭಯ ಬಂದಿರಬೇಕು. ಎಲ್ಲರ ಬಗ್ಗೆಯೂ ಮಾತನಾಡುವ ಸಿಎಂ ನೀವು ಮಾತ್ರ ಹೇಗೆ ಅಧಿಕಾರದಲ್ಲಿ ಇರ್ತೀರಿ? ನಾಗೇಂದ್ರನನ್ನು ಜೈಲಿಗೂ ಕಳಿಸಿದ್ರಿ, ರಾಜೀನಾಮೆ ಪಡೆದು ಕೆಳಗೆ ಇಳಿಸಿದ್ದೀರಿ ಎಂದು ಗುಡುಗಿದರು. ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆ; ಟ್ರಂಪ್‌ಗೆ ಐತಿಹಾಸಿಕ ಗೆಲುವು

    ಲೋಕಾ ಅಧಿಕಾರಿಗಳು ನಿಮ್ಮನ್ನು ಪ್ರಶ್ನೆ ಮಾಡುವುದಕ್ಕೆ ಸಾಧ್ಯ ಇಲ್ಲ. ವಿಚಾರಣೆಗೆ ಬರಲಿಲ್ಲ ಅಂತ ಅನಿಸಿಕೊಳ್ಳಬಾರದು ಎಂದು ಹೋಗಿದ್ದಾರೆ. ಇದು ಪೂರ್ವನಿರ್ಧಾರಿತ ಎಂದು ನಿಮ್ಮ ಟಿಪಿ ನೋಡಿದರೆ ಗೊತ್ತಾಗುತ್ತದೆ. ಕೋರ್ಟ್‌ಗೂ ನಾವು ಹೋಗುತ್ತೇವೆ. ಸಿಎಂ ದೋಖಾ ಮಾಡುತ್ತಿದ್ದಾರೆ, ರಾಜ್ಯದ ಜನರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: Mysuru| ಬಿಜೆಪಿಯಿಂದ ಸಿಎಂ ವಿರುದ್ಧ ‘ಗೋ ಬ್ಯಾಕ್’ ಚಳುವಳಿ- ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು

    ಈ ಹಿಂದೆ ಸಿಎಂ ಆಗಿದ್ದ ಬೊಮ್ಮಾಯಿ (Basavaraj Bommai) ಮೇಲೆ ಹಿಂದೆ ಗೂಬೆ ಕೂರಿಸುವ ಕೆಲಸ ಮಾಡಿದ್ದರು. ಪೇ ಸಿಎಂ ಇವತ್ತಿಗೂ ಸಾಬೀತು ಮಾಡುವುದಕ್ಕೆ ಆಗಲಿಲ್ಲ. ಅಬಕಾರಿ ಇಲಾಖೆಯಲ್ಲಿ ಲಂಚದ ಆರೋಪ ಕೇಳಿ ಬಂದಿದೆ. ನಮ್ಮ ಮೇಲಿನ ಆರೋಪ ಸತ್ಯವಾದರೆ ಈಗಿನ ಆರೋಪ ಕೂಡ ಸತ್ಯವೇ. ಅಬಕಾರಿ ಇಲಾಖೆ ಸಚಿವರ ಕೆಲಸ ಏನು? ಅವರೇನಾದರೂ ಬಾಟಲ್ ಲೆಕ್ಕ ಹಾಕ್ತಾರಾ? ಸಚಿವರಿಗೆ ಕೆಲಸ ಇಲ್ಲ ಅಂದಮೇಲೆ ಸಚಿವರು ಯಾಕೆ? ವಸೂಲಿ ಮಾಡುವುದೇ ಸಚಿವರ ದಂಧೆಯಾ? ಕಾಂಗ್ರೆಸ್‌ನವರು (Congress) ಇದನ್ನು ಒಪ್ಪಿಕೊಳ್ಳಬೇಕು. ವಾಲ್ಮೀಕಿ ನಿಗಮದಲ್ಲೂ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರು. ಎಸ್.ಡಿ.ಎ ಆತ್ಮಹತ್ಯೆ ತೀವ್ರ ತನಿಖೆ ಆಗಬೇಕು. ಸಚಿವರು ತಪ್ಪಿತಸ್ಥರಾದರೆ ಅವರನ್ನೂ ಅರೆಸ್ಟ್ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: MUDA Case; ಸತತ 2 ಗಂಟೆ ವಿಚಾರಣೆ; ಸಿಎಂ ಸಿದ್ದರಾಮಯ್ಯಗೆ 40 ಕ್ಕೂ ಹೆಚ್ಚು ಪ್ರಶ್ನೆಗಳು

  • ಮೋದಿಗೆ ಜನ ಮರ್ಯಾದೆ ಕೊಡ್ತಾರೆ, ಸಿಎಂ ಹೋದ್ರೆ ಸೈಟ್‌ ಕಳ್ಳ ಅಂತಾರೆ: ಛಲವಾದಿ

    ಮೋದಿಗೆ ಜನ ಮರ್ಯಾದೆ ಕೊಡ್ತಾರೆ, ಸಿಎಂ ಹೋದ್ರೆ ಸೈಟ್‌ ಕಳ್ಳ ಅಂತಾರೆ: ಛಲವಾದಿ

    -ನೋಟಿಸ್ ವಾಪಸ್ ಪಡೆದ್ರೆ, ವಕ್ಫ್ ಜಮೀನು ವಾಪಸ್ ಹೋಗೋದಿಲ್ಲ

    ಬೆಂಗಳೂರು: ವಕ್ಫ್ ಬೋರ್ಡ್ (Waqf Board) ಏನು ಎಂದು ಸಿಎಂ ಸಿದ್ದರಾಮಯ್ಯಗೆ (Siddaramaiah) ಗೊತ್ತಿಲ್ಲ. ನೋಟಿಸ್ ವಾಪಸ್ ಪಡೆದ ತಕ್ಷಣ ವಕ್ಫ್‌ನಿಂದ ಜಮೀನು ವಾಪಸ್ ಹೋಗೊದಿಲ್ಲ ಎಂದು ವಿಧಾನ ಪರಿಷತ್‍ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

    ನಗರದಲ್ಲಿ (Bengaluru) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ರೈತರಿಗೆ ವಕ್ಫ್ ಬೋರ್ಡ್ ನೀಡಿರುವ ನೋಟಿಸ್ ವಾಪಸ್ ಪಡೆಯುವಂತೆ ಸಿಎಂ ಸೂಚನೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದರು. ನೋಟಿಸ್ ವಾಪಸ್ ಪಡೆದರೆ, ನೋಟಿಸ್ ಮಾತ್ರ ಹೋಗುತ್ತದೆ. ಜಮೀನು ಹೋಗಲ್ಲ. ಮುಂದೆ ಚಕ್ರ ಬಡ್ಡಿ ಸೇರಿ ವಸೂಲಿ ಆಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

    1974 ರಲ್ಲಿ ಕಾಂಗ್ರೆಸ್ (Congress) ಸರ್ಕಾರ ಇದ್ದಾಗ ಹೊರಡಿಸಿದ್ದ ಗೆಜೆಟ್ ನೋಟಿಫಿಕೇಷನ್ ವಾಪಸ್ ಪಡೆಯಬೇಕು. ಆಗ ಮಾತ್ರ ರೈತರಿಗೆ ನ್ಯಾಯ ಸಿಗಲಿದೆ ಎಂದು ಅವರು ಹೇಳಿದ್ದಾರೆ.

    ಗ್ಯಾರಂಟಿ ಯೋಜನೆಗಳ ವಿಚಾರವಾಗಿ ಪ್ರತಿಕ್ರಿಯಿಸಿ, ಮಲ್ಲಿಕಾರ್ಜುನ ಖರ್ಗೆಯವರು ಈ ಬಗ್ಗೆ ಸ್ಪಷ್ಟ ನಿಲುವು ಹೇಳಿದ್ದಾರೆ. ಡಿ.ಕೆ ಶಿವಕುಮಾರ್ ಶಕ್ತಿ ಯೋಜನೆ ಬಗ್ಗೆ ಮಾತನಾಡಿರೋದಕ್ಕೆ ಅವರು ದೆಹಲಿಯಿಂದ ಬಂದಿದ್ದಾರೆ. ಮಹಾರಾಷ್ಟ್ರದಲ್ಲೂ ಗ್ಯಾರಂಟಿ ಘೋಷಣೆ ಮಾಡುವ ವೇಳೆ ಹೀಗೆ ಹೇಳಿದರೆ ಜನರಿಗೆ ಅನುಮಾನ ಬರಲಿದೆ ಎಂದಿದ್ದಾರೆ. ಸದ್ಯ ಶಕ್ತಿ ಯೋಜನೆಯನ್ನ ಹಿಂಪಡೆಯುವುದನ್ನ ತಡೆದಿದ್ದಾರೆ. ಇದು ಸ್ಟೇ ರೀತಿ, ಚುನಾವಣೆ ಬಳಿಕ ಶಕ್ತಿ ಯೋಜನೆ ನಿಲ್ಲಿಸೋದು ನೂರಕ್ಕೆ ನೂರು ಸತ್ಯ ಎಂದು ಭವಿಷ್ಯ ನುಡಿದಿದ್ದಾರೆ.

    ಶಾಸಕರು ಕೂಡ ಇದರ ಬಗ್ಗೆ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಶಿವಕುಮಾರ್ ಹಾಗೂ ಸಿ.ಎಂ ಸಿದ್ದರಾಮಯ್ಯ ಮಧ್ಯೆ ಹೊಂದಾಣಿಕೆ ಇಲ್ಲ. ಅವರು ನಿಲ್ಲಿಸುತ್ತೇವೆ ಎನ್ನುತ್ತಾರೆ, ಇವರು ಮುಂದುವರೆಸುತ್ತೇವೆ ಎನ್ನುತ್ತಾರೆ. ಇದನ್ನ ಪ್ರಧಾನಿ ಪ್ರಸ್ತಾಪ ಮಾಡಿದ್ದಕ್ಕೆ ಅವರನ್ನ ಕೆಟ್ಟದಾಗಿ ಬಿಂಬಿಸಿ, ಪುಡಾರಿ ಎಂದಿದ್ದಾರೆ. ಇದರಿಂದ ನಾವು ವಿಚಲಿತ ಆಗೋದಿಲ್ಲ ಎಂದಿದ್ದಾರೆ.

    ಪ್ರಧಾನಿಯನ್ನ ಲಘುವಾಗಿ ನಿಂದಿಸುವ ಕೆಲಸವನ್ನು ಸಿಎಂ ಮಾಡಿದ್ದಾರೆ. ಪ್ರಧಾನಿಗೆ ಎಲ್ಲಿ ಹೋದ್ರು ಗೌರವ ಇದೆ, ಮರ್ಯಾದೆ ಕೊಡ್ತಾರೆ. ಸಿದ್ದರಾಮಯ್ಯ ಬಂದ್ರೆ, ಬಂದ ಬಂದ ಸೈಟ್ ಕಳ್ಳ ಎನ್ನುತ್ತಾರೆ. ಈ ರೀತಿ ಕೆಟ್ಟ ಭಾವನೆ ಸಿಎಂ ಮೇಲೆ ಜನರಿಗೆ ಇದೆ ಎಂದು ಕುಟುಕಿದ್ದಾರೆ.

  • ರಾಜ್ಯವನ್ನು ಮಸೀದಿಗಳೇ ನಡೆಸುತ್ತಿರುವ ಹಾಗನ್ನಿಸುತ್ತಿದೆ, ಕೂಡಲೇ ವಕ್ಫ್ ಬೋರ್ಡ್ ರದ್ದುಪಡಿಸಿ: ಛಲವಾದಿ ತಾಕೀತು

    ರಾಜ್ಯವನ್ನು ಮಸೀದಿಗಳೇ ನಡೆಸುತ್ತಿರುವ ಹಾಗನ್ನಿಸುತ್ತಿದೆ, ಕೂಡಲೇ ವಕ್ಫ್ ಬೋರ್ಡ್ ರದ್ದುಪಡಿಸಿ: ಛಲವಾದಿ ತಾಕೀತು

    ಕಲಬುರಗಿ: ರೈತರ ಜಮೀನು, ಹಿಂದೂ ದೇವಾಲಯ ಹಾಗೂ ಮಠಗಳು ವಕ್ಫ್ ಆಸ್ತಿ ಎಂದು ನೋಟಿಸ್ ನೀಡುತ್ತಿರುವುದನ್ನು ನೋಡಿದರೆ ಈ ರಾಜ್ಯವನ್ನು ಮಸೀದಿಗಳೇ ನಡೆಸುತ್ತಿರುವ ಹಾಗೆ ಅನಿಸುತ್ತಿದೆ. ಕೂಡಲೇ ವಕ್ಫ್ ಬೋರ್ಡ್ (Waqf Board) ರದ್ದುಪಡಿಸಬೇಕೆಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ತಾಕೀತು ಮಾಡಿದರು.

    ಕಲಬುರಗಿಯ (Kalaburagi) ಐವಾನ್-ಇ-ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜಾಪುರ, ಯಾದಗಿರಿ, ಕಲಬುರಗಿ, ತುಮಕೂರು, ಚಿತ್ರದುರ್ಗದಲ್ಲಿ ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಹಾಗಾಗಿ, ಮಸೀದಿಗಳು ಆ ಜಾಗ, ಈ ಜಾಗ ನಮಗೆ ಸೇರಿದ್ದು ಎಂದು ಸರ್ಕಾರಕ್ಕೆ ಪತ್ರ ಬರೆದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಚಿತ್ರದುರ್ಗ| ಚಳ್ಳಕೆರೆಯಲ್ಲಿ ವಕ್ಫ್ ಬೋರ್ಡ್ ವಿರುದ್ಧ ಆಸ್ತಿ ಕಬಳಿಕೆ ಯತ್ನ ಆರೋಪ

    ಹೀಗೆ ಮಸೀದಿಗಳು ಸರ್ಕಾರ ನಡೆಸುವಂತಹ ಪರಿಸ್ಥಿತಿ ಇವರು ತಂದುಕೊಂಡಿದ್ದಾರೆ. ಹಾಗಾಗಿ, ತಕ್ಷಣ ವಕ್ಫ್ ಬೋರ್ಡ್ ರದ್ದುಪಡಿಸಬೇಕು. ಎಲ್ಲೆಲ್ಲಿ ಎಷ್ಟೆಷ್ಟು ಆಸ್ತಿ ಇದೆ ಎಂಬುದನ್ನು ವಕ್ಫ್ ಬೋರ್ಡ್ ಮೊದಲು ಘೋಷಿಸಲಿ ಎಂದು ಸವಾಲು ಹಾಕಿದರಲ್ಲದೆ, ಈ ದೇಶ ಯಾರಪ್ಪನ ಆಸ್ತಿಯೂ ಅಲ್ಲ. ಇದು ಹಿಂದೂಸ್ತಾನ್ ಎಂಬುದನ್ನು ಮರೆಯಬಾರದು. ಇದೇ ರೀತಿ ಮುಂದುವರೆದರೆ ಈ ದೇಶಕ್ಕೆ ಗಂಡಾಂತರ ಒದಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಇದನ್ನೂ ಓದಿ: ವಿಜಯಪುರದಲ್ಲಿ ರೈತರಿಗೆ ನೀಡಿರೋ ನೋಟಿಸ್ ವಾಪಸ್ ಪಡೆಯುತ್ತೇವೆ: ಸಿಎಂ ಘೋಷಣೆ

    ಮುಡಾ ಪ್ರಕರಣ (Muda Case) ಕುರಿತು ಪ್ರಸ್ತಾಪಿಸಿ, 14 ಸೈಟ್ ವಾಪಸ್ ಕೊಟ್ಟಾದ ಬಳಿಕ ಸಿದ್ಧಾರ್ಥ ಟ್ರಸ್ಟ್ ಪಡೆದಿದ್ದ 5 ಎಕರೆ ಜಮೀನು ಕೂಡ ಸರ್ಕಾರಕ್ಕೆ ವಾಪಸ್ ಕೊಟ್ಟಿದ್ದಾರೆ. ಇದನ್ನೆಲ್ಲಾ ನೋಡುತ್ತಿದ್ದರೆ ಈ ದೇಶದ ಕಾನೂನಿಗೆ ಇಲ್ಲಿ ಗೌರವ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪಿಸದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಾಮಾಜಿಕ ನ್ಯಾಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ: ಸಿಎಂ

    ಈ ಮಂದಿ ಸಂವಿಧಾನ ಕೈಯಲ್ಲಿ ಹಿಡಿದು ಓಡಾಡುತ್ತಾರೆ. ಮತ್ತೊಂದೆಡೆ ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಾರೆ. ನಮ್ಮದು ಶೇ.40 ಸರ್ಕಾರ ಎಂದು ಟೀಕಿಸಿದವರು ಈಗ ಶೇ.60 ಪಡೆಯುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರಲ್ಲದೆ, ಹೀಗಾದರೆ ಅಭಿವೃದ್ಧಿ ಹೇಗಾಗುತ್ತದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಜಾತಿಗಣತಿಯನ್ನ ಈ ಸರ್ಕಾರ ಯಾಕೆ ಬಿಡುಗಡೆ ಮಾಡ್ತಿಲ್ಲ: ಕುಮಾರಸ್ವಾಮಿ ಪ್ರಶ್ನೆ

    ಒಳಮೀಸಲಾತಿಗೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿರುವುದು ಕೇವಲ ಕಾಲಹರಣದ ಸಂಚು. ಒಳಮೀಸಲಾತಿ ಕುರಿತಂತೆ ಸಂಪೂರ್ಣ ವರದಿ ಸಿದ್ಧವಿತ್ತು. ಆದರೂ ಇವರು ಕಾಲಹರಣ ಮಾಡುತ್ತಿದ್ದಾರೆ. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಯಲ್ಲೇ ಒಳಮೀಸಲಾತಿ ಜಾರಿಗೆ ತರುವುದಾಗಿ ಪ್ರಣಾಳಿಕೆಯಲ್ಲೇ ಹೇಳಿದ್ದನ್ನು ಮರೆತಿದ್ದಾರೆ. ಈ ಸರ್ಕಾರ, ಮೋಸ ವಂಚನೆಗೆ ಹೆಸರಾಗಿದೆ. ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದರು. ಇದನ್ನೂ ಓದಿ: 3 ತಿಂಗಳ ಒಳಗೆ ಒಳಮೀಸಲಾತಿ ಜಾರಿಗೆ ಕ್ರಮ: ಸಿದ್ದರಾಮಯ್ಯ

    ಕೆಕೆಆರ್ ಡಿಬಿ ಹಗರಣ ಸಿಬಿಐ ತನಿಖೆಗೆ ಆಗ್ರಹ:
    ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ನಡೆದಿರುವ ಹಗರಣದ ಸಮಗ್ರ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಕಲ್ಯಾಣ ಕರ್ನಾಟಕವನ್ನು ಸ್ಮಶಾನ ಕರ್ನಾಟಕ ಮಾಡಲು ಹೊರಟಿದ್ದಾರೆ ಎಂದು ಯಾರದ್ದೇ ಹೆಸರು ಪ್ರಸ್ತಾಪಿಸದೆ ಸ್ಥಳೀಯ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಯಾರನ್ನೋ ಓಲೈಸಲು ಹೋದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ: ರಾಜ್ಯ ಸರ್ಕಾರಕ್ಕೆ ಹೆಚ್‌ಡಿಕೆ ಎಚ್ಚರಿಕೆ

    ಶಾಸಕ ಬಸವರಾಜ ಮತ್ತಿಮುಡ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ರವಿಚಂದ್ರ ಕಾಂತಿಕಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.  ಇದನ್ನೂ ಓದಿ: ಕಾಂಗ್ರೆಸ್ ನಾಯಕರ ಟೀಕೆಗೆ ನ.23ಕ್ಕೆ ಉತ್ತರ ಕೊಡ್ತೀನಿ: ಹೆಚ್‌ಡಿಕೆ