Tag: chalavadi narayanaswamy

  • ಮೈಕ್ರೋ ಫೈನಾನ್ಸ್ ದಂಧೆಗೆ ಸರ್ಕಾರದ ಕುಮ್ಮಕ್ಕು: ಛಲವಾದಿ ನಾರಾಯಣಸ್ವಾಮಿ

    ಮೈಕ್ರೋ ಫೈನಾನ್ಸ್ ದಂಧೆಗೆ ಸರ್ಕಾರದ ಕುಮ್ಮಕ್ಕು: ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ಮೈಕ್ರೋ ಫೈನಾನ್ಸ್ (Microfinance) ದಂಧೆಗೆ ಸರ್ಕಾರದ ಕುಮ್ಮಕ್ಕು ಇದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆರೋಪಿಸಿದ್ದಾರೆ.

    ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಸರ್ಕಾರದ ಕುಮ್ಮಕ್ಕು ಇಲ್ಲದಿದ್ದರೆ ಇದು ಇಲ್ಲಿನವರೆಗೆ ಮುಂದುವರೆಯುತ್ತಿರಲಿಲ್ಲ. ಎರಡೂ ಕಡೆಯಿಂದ ವಸೂಲಿ ಮಾಡಲು ಪೊಲೀಸರಿಗೆ ಇದು ದಂಧೆಯಾಗಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೇಂದ್ರ ಬಜೆಟ್‌ನಲ್ಲಿ ಬೆಂಗಳೂರಿನ ಪ್ರಮುಖ ಯೋಜನೆಗಳಿಗೆ ಅನುದಾನ ನೀಡಿ: ನಿರ್ಮಲಾ ಸೀತಾರಾಮನ್‌ಗೆ ಡಿಕೆಶಿ ಪತ್ರ

    ಅನೇಕರ ಮಾರಣಹೋಮ ಆದ ಬಳಿಕ ಸರ್ಕಾರ ಎಚ್ಚೆತ್ತು ಇವತ್ತು ಒಂದು ಸಭೆ ಕರೆದು ಮೈಕ್ರೋ ಫೈನಾನ್ಸ್ ವಿಚಾರದಲ್ಲಿ ಚರ್ಚೆ ನಡೆಸಿದೆ. ಹೊಸ ಕಾನೂನು ಜಾರಿಗೆ ತಂದು, ಅವರನ್ನು ಹದ್ದುಬಸ್ತಿನಲ್ಲಿಡುವ ಕೆಲಸ ಮಾಡುವುದಾಗಿ ತಿಳಿಸಿದೆ ಎಂದಿದ್ದಾರೆ.

    ಮೈಕ್ರೋ ಫೈನಾನ್ಸ್‌ಗಳ ಸಮಸ್ಯೆ ಕುರಿತು ಅನೇಕ ಮುಖಂಡರು ಗಮನ ಸೆಳೆದರೂ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿತ್ತು. ಕೊನೆಗೂ ಇವತ್ತು ಒಂದು ತೀರ್ಮಾನಕ್ಕೆ ಬಂದಿದೆ. ಫೈನಾನ್ಸ್ ವಸೂಲಿಗೆ ತೊಂದರೆ ಕೊಟ್ಟರೆ, ಗೂಂಡಾಗಳನ್ನು ಕಳುಹಿಸಿದರೆ ಅವರನ್ನು ಬಂಧಿಸುವುದಾಗಿ ಹೇಳಿದ್ದಾರೆ. ಜನರ ಹಿತದೃಷ್ಟಿಯಿಂದ ಇದು ಸ್ವಾಗತಾರ್ಹ. ಕಾಂಗ್ರೆಸ್ ಸರ್ಕಾರದ ಹಿತದೃಷ್ಟಿಯಿಂದ ಅಲ್ಲ ಎಂದಿದ್ದಾರೆ.

    ಮಂತ್ರಿಗಳು, ಶಾಸಕರಿಂದ ಆನ್‍ಲೈನ್ ಗೇಮ್ಸ್ ಕಂಪನಿ
    ಮೈಕ್ರೋ ಫೈನಾನ್ಸ್‌ನಲ್ಲಿ ಆಗುವ ಅನಾಹುತಕ್ಕಿಂತ 10ರಷ್ಟು ಅನಾಹುತಗಳು ಆನ್‍ಲೈನ್ ಗೇಮ್ಸ್ ಮೂಲಕ ಆಗುತ್ತಿದೆ. ಸರ್ಕಾರ ಕೆಲವು ಮಂತ್ರಿಗಳು, ಶಾಸಕರು ಆನ್‍ಲೈನ್ ಗೇಮ್ಸ್ ಕಂಪೆನಿಗಳನ್ನು ಮಾಡಿಕೊಂಡು ಜನರಿಂದ ಸುಲಿಗೆ ಮಾಡುತ್ತಿದ್ದಾರೆ. ಅನೇಕ ಯುವಕರು ಬೀದಿಪಾಲಾಗುತ್ತಿದ್ದಾರೆ. ರಮ್ಮಿ ಆಟದ ಮೂಲಕ ಸುಲಭದಲ್ಲಿ ಹಣ ಬರುವ ಸಾಮಾಜಿಕ ಜಾಲತಾಣದ ಜಾಹೀರಾತುಗಳನ್ನು ನಂಬಿ ಜನರ ಪ್ರಾಣ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಎಷ್ಟೋ ಜನರು ಗೇಮ್‍ನಲ್ಲಿ ಸೋತ ಬಳಿಕ ಕಳ್ಳತನ ಮಾಡಿ ಆ ದುಡ್ಡು ಕಟ್ಟುತ್ತಾರೆ. ಇವತ್ತು ದರೋಡೆಗಳು, ಕಳ್ಳತನಗಳು ಇದೇ ಕಾರಣಕ್ಕಾಗಿ ಆಗುತ್ತಿವೆ ಎಂದು ಹೇಳಿದ್ದಾರೆ.

    ಇದರ ಬೇರು ಹುಡುಕಬೇಕಿದೆ. ಆನ್‍ಲೈನ್ ಗೇಮ್ ಕಾರಣದಿಂದ ಕಳ್ಳತನ, ದರೋಡೆ ಆಗುತ್ತಿದೆ. ಅನೇಕರು ಕೆಲಸ ಬಿಟ್ಟು ಈ ಗೇಮ್ ಆಡುತ್ತಿದ್ದಾರೆ. ಇನ್ನೂ ಅನೇಕರು ಹೆಚ್ಚು ಸಾಲ ಮಾಡಿಕೊಂಡು ಕಟ್ಟಲಾಗದೆ ಪ್ರಾಣ ಬಿಡುತ್ತಿದ್ದಾರೆ. ಇದರ ಬಗ್ಗೆಯೂ ತೀಕ್ಷ್ಣ ಕ್ರಮ ಕೈಗೊಳ್ಳಬೇಕು. ಆದರೆ ಆನ್‍ಲೈನ್ ಗೇಮ್‍ನಲ್ಲಿ ಇರುವವರ ರಕ್ಷಣೆ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.

    ಇದು ಹಗೆತನದ ರಾಜಕೀಯವಲ್ಲವೇ?
    ಯದುವೀರ್ ಅವರು ಬಿಜೆಪಿ ಸಂಸದರಾಗಿದ್ದು, ಅವರ ಆಸ್ತಿಗಳ ಮೇಲೆ ಕಾಂಗ್ರೆಸ್ ಸರ್ಕಾರ ಕಣ್ಣು ಹಾಕಿದೆ. ಒಂದು ಕಡೆ ಚಾಮುಂಡೇಶ್ವರಿ ಬೆಟ್ಟಕ್ಕೆ, ಅಲ್ಲಿನ ಆಸ್ತಿಗಳ ಮೇಲೆ ಕಣ್ಣು ಹಾಕಿದ್ದಾರೆ. ಇನ್ನೊಂದು ಕಡೆ ಬೆಂಗಳೂರಿನ ಅರಮನೆ ಮೇಲೆ ಕೂಡ ಕಣ್ಣು ಹಾಕಿದ್ದಾರೆ ಎಂದು ಆರೋಪಿಸಿದರು. ಅವರು ಕಾಂಗ್ರೆಸ್ಸಿನ ಸಂಸದರಾಗಿದ್ದರೆ ಅವರ ಆಸ್ತಿಗಳ ಮೇಲೆ ಕಣ್ಣು ಹಾಕುತ್ತಿರಲಿಲ್ಲ. ಇದು ಹಗೆತನದ ರಾಜಕಾರಣವಲ್ಲವೇ? ಇದಕ್ಕೆ ಸುಗ್ರೀವಾಜ್ಞೆ ಬೇಕಿತ್ತೇ? ಸದಾಶಿವನಗರದಲ್ಲಿ ಒಂದಡಿ ಜಾಗಕ್ಕೆ ಒಂದು ಲಕ್ಷ ಇರಬಹುದು. ಇಂಥ ಪರಿಸ್ಥಿತಿಯಲ್ಲಿ ನೀವು ಯಾರ ಆಸ್ತಿಗೆ ಕಣ್ಣು ಹಾಕುತ್ತಿದ್ದೀರಿ? ಇದು ಹಗೆತನದ ಪರಮಾವಧಿಯ ರಾಜಕಾರಣ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಗ್ರಾಮೀಣ ಜನರಲ್ಲಿ ಪುಸ್ತಕ ಓದುವ ಹವ್ಯಾಸ ಮೂಡಿಸಿ: ಪ್ರಿಯಾಂಕ್ ಖರ್ಗೆ

  • ಮೈಕ್ರೋ ಫೈನಾನ್ಸ್ ಕಿರುಕುಳ| ಸರ್ಕಾರ ಬದುಕಿದ್ಯಾ.. ಸತ್ತಿದ್ಯಾ?: ಛಲವಾದಿ ನಾರಾಯಣಸ್ವಾಮಿ ಆಕ್ರೋಶ

    ಮೈಕ್ರೋ ಫೈನಾನ್ಸ್ ಕಿರುಕುಳ| ಸರ್ಕಾರ ಬದುಕಿದ್ಯಾ.. ಸತ್ತಿದ್ಯಾ?: ಛಲವಾದಿ ನಾರಾಯಣಸ್ವಾಮಿ ಆಕ್ರೋಶ

    ಬೆಂಗಳೂರು: ಮೈಕ್ರೋ ಫೈನಾನ್ಸ್‌ನಿಂದ ತಪ್ಪಾಗಿದೆ ಅಂತ ತಕ್ಷಣ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಈಗಾಗಲೇ ಕಠಿಣ ಕಾನೂನು ಇದೆ. ಆದರೆ,‌ ಸರ್ಕಾರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಕ್ರೋಶ ಹೊರ ಹಾಕಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಕಿರುಕುಳದ ಬಗ್ಗೆ ಸರ್ಕಾರ ಬೇಜವಾಬ್ದಾರಿತನ ತೋರಿಸುತ್ತಿದೆ. ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಸಿಎಂ ಸಭೆ ಮಾಡಲು ಇಷ್ಟು ದಿನ ಬೇಕಾಯ್ತಾ? ಪೊಲೀಸರು, ಅಧಿಕಾರಿಗಳು ಇಲ್ವಾ ಎಂದು ಕಿಡಿಕಾರಿದರು. ಇದನ್ನೂ ಓದಿ: ಎರಡು ಲಕ್ಷಕ್ಕೆ 25 ಲಕ್ಷ.. ಮೀಟರ್ ಬಡ್ಡಿ ದಂಧೆಯಲ್ಲಿ ಯಕ್ಷಗಾನ ಕಲಾವಿದನ ಮೇಲೆ ಮಾರಣಾಂತಿಕ ಹಲ್ಲೆ

    ಮೈಕ್ರೋ ಫೈನಾನ್ಸ್‌ನಿಂದ ಸಾಕಷ್ಟು ಜನರು ಸಾವನ್ನಪ್ಪುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇತಿಮಿತಿಯಿಲ್ಲದೆ ಮೈಕ್ರೋ ಫೈನಾನ್ಸ್ ಹಾವಳಿ ನಡೆಯುತ್ತಿದೆ. ಮೈಕ್ರೋ ಫೈನಾನ್ಸ್‌ನಿಂದ ಬಡವರಿಗೆ ವಂಚನೆಯಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ಕುಮಾರಸ್ವಾಮಿ ಕಾಲದಲ್ಲಿ ಕಾನೂತ್ಮಕವಾಗಿ ತಿದ್ದುಪಡಿ ತಂದಿದ್ದರು. ಈ ಸರ್ಕಾರ ಬಂದ್ಮೇಲೆ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದೆ. ರಾಮನಗರದಲ್ಲಿ ಮೈಕ್ರೋ ಫೈನಾನ್ಸ್‌ನಿಂದ ಕಿಡ್ನಿ ಮಾರಿಕೊಂಡ ವರದಿಯಾಗಿದೆ. ಈ ಸರ್ಕಾರ ನಿದ್ದೆ ಮಾಡ್ತಿದ್ಯಾ? ಬದುಕಿದ್ಯಾ.. ಸತ್ತಿದ್ಯಾ ಅಂತ ಕೇಳಬೇಕಾಗುತ್ತೆ ಎಂದು ಕಿಡಿಕಾರಿದರು. ಇದನ್ನೂ ಓದಿ: ರೆಡ್ಡಿ ಜೊತೆ ಸಂಪರ್ಕವೇ ಬೇಡ – ಮನೆಯ ಗೇಟನ್ನೇ ಬಂದ್‌ ಮಾಡಿದ ರಾಮುಲು

  • ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣ: ಹಲವು ಅನುಮಾನ ವ್ಯಕ್ತಪಡಿಸಿದ ಛಲವಾದಿ ನಾರಾಯಣಸ್ವಾಮಿ

    ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣ: ಹಲವು ಅನುಮಾನ ವ್ಯಕ್ತಪಡಿಸಿದ ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅಪಘಾತ ಪ್ರಕರಣದ ಬಗ್ಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅನುಮಾನ ವ್ಯಕ್ತಪಡಿಸಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಹೆಬ್ಬಾಳ್ಕರ್ ಅವರು ಬೇಗ ಗುಣಮುಖರಾಗಲಿ. ಆದರೆ ಎಲ್ಲ ಸೆಕ್ಯೂರಿಟಿ ಬಿಟ್ಟು ಯಾಕ್ ಹೋಗಿದ್ರಿ? ಆ ಡ್ರೈವರ್ ಯಾರು? ಎಲ್ಲಿದ್ದಾನೆ? ಬಹಿರಂಗಪಡಿಸಿ ಅಂತಾ ಆಗ್ರಹಿಸಿದ್ದಾರೆ.

    ನಾಯಿ ಎದುರು ಬಂದಾಗ ಘಟನೆ ಆಯ್ತು ಅಂತೀರಿ? ಹಿಂದಿನಿಂದ ಬಂದು ಗುದ್ದಿದ್ದಾರೆ ಅಂದ್ರಿ. ಹಾಗಾದ್ರೆ ಯಾವುದು ‌ಸತ್ಯ? ಟಿಪಿ‌ ಕೂಡ ಹಾಕಿಲ್ಲ. ಎಸ್ಕಾರ್ಟ್ ಕೂಡ‌ ಇಲ್ಲ. ಬಹಳಷ್ಟು ದೊಡ್ಡ ಮೊತ್ತದ ಹಣ ಆ‌ ಕಾರಿನಲ್ಲಿ ಸಾಗಿಸಲಾಗ್ತಿತ್ತು. ದೂರು ದಾಖಲಾಗಿಲ್ಲ. ಎಫ್‌ಐಆರ್ ಕೂಡ ಆಗಿಲ್ಲ. ಯಾಕೆ? ಪೊಲೀಸ್ ಬೆಂಗಾವಲಿನಲ್ಲಿ‌ ಕಾರ್ ಲಿಫ್ಟ್ ಮಾಡಿದ್ದು ಯಾಕೆ ತರಾತುರಿಯಲ್ಲಿ ಎಂದು ಪ್ರಶ್ನಿಸಿದರು.

    ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆಯಾಗಬೇಕು. ಅದರಲ್ಲಿ ಯಾರೆಲ್ಲ ಪ್ರಯಾಣ ಮಾಡ್ತಿದ್ರು, ಅವರನ್ನ ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಅದರಲ್ಲಿ‌ ಬಹಳ ಹಣ ಇತ್ತು ಅಂತಾ‌ ಜನ ನಮಗೆ ಹೇಳ್ತಿದಾರೆ. ಯಾವುದನ್ನೂ ಮಹಜರು ಮಾಡದೇ ಆ ಬ್ಯಾಗ್‌ಗಳನ್ನ ತೆಗೆದುಕೊಂಡು ‌ಹೋಗಿದ್ದಾರೆ ಎಂದು ಆರೋಪಿಸಿದರು.

  • ಈಗಿನದು ಮಹಾತ್ಮ ಗಾಂಧಿ ಕಾಲದ ಕಾಂಗ್ರೆಸ್ ಅಲ್ಲ, ಪಕ್ಷದ ಸಮಾವೇಶಕ್ಕೆ ಹಣ ಎಲ್ಲಿಂದ?: ಛಲವಾದಿ ನಾರಾಯಣಸ್ವಾಮಿ

    ಈಗಿನದು ಮಹಾತ್ಮ ಗಾಂಧಿ ಕಾಲದ ಕಾಂಗ್ರೆಸ್ ಅಲ್ಲ, ಪಕ್ಷದ ಸಮಾವೇಶಕ್ಕೆ ಹಣ ಎಲ್ಲಿಂದ?: ಛಲವಾದಿ ನಾರಾಯಣಸ್ವಾಮಿ

    – ಕುಡುಕರು ಗಾಂಧಿ ಕಾಂಗ್ರೆಸ್‌ಗೆ ಸದಸ್ಯರಾಗುವಂತಿರಲಿಲ್ಲ, ಈಗಿನ ಕಾಂಗ್ರೆಸ್‌ನವ್ರು ರಾತ್ರಿಯಿಡೀ ಕುಡಿದು ಬೆಳಗ್ಗೆ ಸಮಾವೇಶ ಮಾಡ್ತಾರೆ

    ಬೆಂಗಳೂರು: ಕಾಂಗ್ರೆಸ್ಸಿಗರು ಇಂದಿನ ಸಮಾವೇಶಕ್ಕೆ ಬಳಸಿದ ಹಣ ಯಾವುದು? ಅದರ ಲೆಕ್ಕ ಕೊಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಗ್ರಹಿಸಿದ್ದಾರೆ.

    ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅದು ಕಾಂಗ್ರೆಸ್ಸಿನ ಖಾತೆಯಿಂದ ಖರ್ಚಾದ ಹಣವೇ? ಅಥವಾ ನೀವು ಸರ್ಕಾರದ ಬೊಕ್ಕಸದಿಂದ ಖರ್ಚು ಮಾಡಿದ್ದೀರಾ ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು. ಸುವರ್ಣಸೌಧದ ಮುಂದೆ ಗಾಂಧಿ ಪ್ರತಿಮೆಯನ್ನು ಇವತ್ತು ಪ್ರತಿಷ್ಠಾಪನೆ ಮಾಡಿದ್ದಾರೆ. ಸರ್ಕಾರಿ ಬೊಕ್ಕಸದಿಂದ ಗಾಂಧಿ ಪ್ರತಿಮೆ ಪ್ರತಿಷ್ಠಾಪನೆಗೆ ನಮ್ಮ ವಿರೋಧವಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಹೋಗಲ್ಲ: ರವಿಕುಮಾರ್

    ಇದು ಮಹಾತ್ಮ ಗಾಂಧಿಯವರ ಕಾಲದ ಕಾಂಗ್ರೆಸ್ ಪಕ್ಷ ಅಲ್ಲ. ಮಹಾತ್ಮ ಗಾಂಧಿ ಸಿದ್ಧಾಂತಕ್ಕೂ ಇವತ್ತಿನ ಗಾಂಧಿಗಳ ಕಾಂಗ್ರೆಸ್ಸಿನ ಸಿದ್ಧಾಂತಕ್ಕೂ ಅಜಗಜಾಂತರವಿದೆ. ಅವತ್ತಿನ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ಯಾರು ಮದ್ಯಪಾನ ಮಾಡುತ್ತಿದ್ದರೋ ಅವರು ಸದಸ್ಯರಾಗುವ ಹಾಗಿರಲಿಲ್ಲ. ಇವತ್ತಿನ ಕಾಂಗ್ರೆಸ್ಸಿನವರು ರಾತ್ರಿಯಿಡೀ ಕುಡಿದು ಮಲಗಿದ್ದು, ಬೆಳಗ್ಗೆ ಸಮಾವೇಶ ಮಾಡುತ್ತಾರೆ ಎಂದು ಟೀಕಿಸಿದರು.

    ಎಲ್ಲರೂ ಖಾದಿಧಾರಿಗಳಾಗಿ ಇರಬೇಕು ಎಂಬುದು ಹಳೆ ಕಾಂಗ್ರೆಸ್ಸಿನ ಸಿದ್ಧಾಂತ. ಇವತ್ತು ಶೇ. 5-10 ರಷ್ಟು ಖಾದಿಧಾರಿಗಳೂ ಅಲ್ಲಿ ಸಿಗುವುದಿಲ್ಲ ಎಂದು ವ್ಯಂಗ್ಯವಾಡಿದರು. ಮಹಾತ್ಮ ಗಾಂಧಿಯವರು ಈ ಕಾಲದಲ್ಲಿ ಇದ್ದಿದ್ದರೆ, ಈ ಕಾಂಗ್ರೆಸ್ಸಿನವರನ್ನು ಅಟ್ಟಾಡಿಸಿ, ಕಾಂಗ್ರೆಸ್ಸಿನಿಂದ ಹೊರಕ್ಕೆ ಓಡಿಸುತ್ತಿದ್ದರು ಎಂದು ಟಾಂಗ್‌ ಕೊಟ್ಟರು. ಇದನ್ನೂ ಓದಿ: ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ಹೋರಾಡುವ ಶಕ್ತಿ ಇರುವ ಹೆಣ್ಣು ಪ್ರಿಯಾಂಕಾ – ಮಲ್ಲಿಕಾರ್ಜುನ ಖರ್ಗೆ

    ಕಾಂಗ್ರೆಸ್ ಸುಡುವ ಮನೆ ಎಂದಿದ್ದ ಡಾ.ಅಂಬೇಡ್ಕರರು
    ಇಂಥ ಪರಿಸ್ಥಿತಿಯಲ್ಲಿ ಇಲ್ಲಿ ಕಾಂಗ್ರೆಸ್ಸಿನ ಒಂದು ಸಮಾವೇಶ ನಡೆಯುತ್ತಿದೆ. ಇದು ಗಾಂಧಿ ತತ್ವಗಳ ವಿರೋಧಿ ಕಾಂಗ್ರೆಸ್ಸಿನ ಸಮಾವೇಶ. ಜೈ ಭೀಮ್ ಎಂದಿದ್ದಾರೆ. ಬಾಬಾ ಸಾಹೇಬ ಅಂಬೇಡ್ಕರರು ಯಾವತ್ತಾದರೂ ಕಾಂಗ್ರೆಸ್ಸಿನವರಾಗಿದ್ದರೇ ಎಂದು ಛಲವಾದಿ ಪ್ರಶ್ನಿಸಿದರು.

    ಕಾಂಗ್ರೆಸ್ ಸುಡುವ ಮನೆ ಎಂದವರು, ಕಾಂಗ್ರೆಸ್ಸಿನ ಮೊದಲ ಕ್ಯಾಬಿನೆಟ್‍ನಿಂದ ರಾಜೀನಾಮೆ ಕೊಟ್ಟು ಹೊರಕ್ಕೆ ಹೋದವರು ಬಾಬಾ ಸಾಹೇಬ ಅಂಬೇಡ್ಕರರು. ಅಂಬೇಡ್ಕರರ ತತ್ವಗಳ ವಿರೋಧಿ, ಅವರನ್ನು ಜೀವಿತಾವಧಿಯಲ್ಲಿ ಅವಮಾನಿಸಿದ್ದ, ಚುನಾವಣೆಗಳಲ್ಲಿ ಸೋಲಿಸಿದ್ದ, ಅವರು ಗೆದ್ದ ಸ್ಥಳವನ್ನು ಪಾಕಿಸ್ತಾನಕ್ಕೆ ಬಿಟ್ಟು ಕೊಟ್ಟ ಕಾಂಗ್ರೆಸ್ ಪಕ್ಷವು ಇವತ್ತು ವೋಟ್‌ಬ್ಯಾಂಕ್‌ಗಾಗಿ ಈ ನಾಟಕ ಮಾಡುತ್ತಿದೆ. ದಲಿತ ಸಮುದಾಯಗಳನ್ನು ಸೆಳೆಯಲು ಜೈ ಭೀಮ್ ಘೋಷಣೆ ಮಾಡಿದೆ ಎಂದು ಟೀಕಿಸಿದರು.

    ಸಂವಿಧಾನಕ್ಕೆ ದ್ರೋಹ ಮಾಡಿದ್ದರೆ, ಅನ್ಯಾಯ ಮಾಡಿದ್ದರೆ ಅದು ಕಾಂಗ್ರೆಸ್ ಪಕ್ಷ. ತಮ್ಮ ಸ್ಥಾನಮಾನಗಳನ್ನು ಉಳಿಸಿಕೊಳ್ಳಲು ಬಾಬಾ ಸಾಹೇಬ ಅಂಬೇಡ್ಕರರು ಬರೆದ ಸಂವಿಧಾನವನ್ನು ತಿರುಚಿ, 1975-76 ರಲ್ಲಿ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿ ಸಂವಿಧಾನಕ್ಕೆ ಘೋರ ಅಪರಾಧ ಮಾಡಿದ ಪಕ್ಷ ಕಾಂಗ್ರೆಸ್ ಎಂದು ಆಕ್ಷೇಪಿಸಿದರು. ಇದನ್ನೂ ಓದಿ: ಸಿ.ಟಿ ರವಿಯನ್ನ ಊರೆಲ್ಲ ತಿರುಗಿಸಿದ್ದೇ ಸಾಧನೆ ಅಲ್ಲ – ಸಾಲು ಸಾಲು ದರೋಡೆಗೆ ಕೋಟಾ ಕಿಡಿ

    ಕಳೆದ ವಾರ ಮಾನ್ಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪ್ರಯಾಣ ಮಾಡುತ್ತಿದ್ದ ಕಪ್ಪು ಕಾರು ಅಪಘಾತಕ್ಕೆ ಈಡಾಗಿದೆ. ಆ ಕಾರಿನಲ್ಲಿ ಯಾರ‍್ಯಾರು ಇದ್ದರು? ನೀವು ಸಚಿವರಾಗಿ ಸರ್ಕಾರಿ ಕಾರಿದ್ದರೂ, ಸೆಕ್ಯುರಿಟಿ, ಎಸ್ಕಾರ್ಟ್ ಬಿಟ್ಟು ಯಾಕೆ ಹೋಗಿದ್ದೀರಿ? ಪ್ರವಾಸ ಯೋಜನೆ (ಟಿಪಿ) ಯಾಕಿಲ್ಲ? ಎಂದು ಕೇಳಿದರು. ಅವರಿಗೆ ಆದ ಅಪಘಾತ, ನೋವಿಗೆ ವಿಷಾದ, ಬೇಸರ ವ್ಯಕ್ತಪಡಿಸಿದರು. ಆ ನೋವು, ಪೆಟ್ಟು ಬೇಗನೆ ವಾಸಿ ಆಗಲಿ ಎಂದರು.

    ಸೆಕ್ಯುರಿಟಿ ಬಿಟ್ಟು ಪ್ರಯಾಣಿಸಿದ್ದೇಕೆ? ಘಟನೆ ನಡೆದಿದ್ದು ಹೇಗೆಂದು ಜನರಿಗೆ ತಿಳಿಸಿ. ಚಾಲಕ ಎಲ್ಲಿದ್ದಾರೆಂದು ತಿಳಿಸಿ. ನಾಯಿ ಅಡ್ಡ ಬಂದದ್ದು, ಹಿಂದಿನಿಂದ ಗುದ್ದಿ ಹೋದದ್ದು, ಡ್ರೈವರ್ ನಿದ್ದೆಗೆ ಜಾರಿದ್ದ- ಇವುಗಳಲ್ಲಿ ಯಾವುದು ಸತ್ಯ? ಎಸ್ಕಾರ್ಟ್ ಯಾಕೆ ಇರಲಿಲ್ಲ ಎಂದು ಕೇಳಿದರು.

    ಬೆಳಗಾವಿಗೆ ಕರೆನ್ಸಿ ಲೋಡ್ ತೆಗೆದುಕೊಂಡು ಹೋಗುತ್ತಿದ್ದರೆಂದು ಜನರು ಹೇಳುತ್ತಾರೆ. ಇದು ಮನೆ ಮಾತಾಗಿದೆ. ದೊಡ್ಡ ಮೊತ್ತದ ಹಣ ಆ ಕಾರಿನಲ್ಲಿ ಸಾಗಿಸುತ್ತಿದ್ದರೆನ್ನಲಾಗಿದೆ. ದೂರು ಕೊಡದೆ ಆ ಕಾರನ್ನು ಲಿಫ್ಟ್ ಮಾಡಿ ಒಯ್ದದ್ದು ಯಾಕೆ ಎಂದು ಪ್ರಶ್ನಿಸಿದರು. ಕಾರಿನಲ್ಲಿದ್ದ ವಸ್ತುಗಳ ಕುರಿತು ಸರ್ಕಾರ ಉತ್ತರಿಸಬೇಕು ಎಂದು ಒತ್ತಾಯಿಸಿದರು.

  • ಜಮೀರ್ ನೂರು ಹಸು ಕೊಡಿಸಿದ್ರೂ ಪಾಪ ಪರಿಹಾರ ಆಗಲ್ಲ – ಛಲವಾದಿ ಸಿಡಿಮಿಡಿ

    ಜಮೀರ್ ನೂರು ಹಸು ಕೊಡಿಸಿದ್ರೂ ಪಾಪ ಪರಿಹಾರ ಆಗಲ್ಲ – ಛಲವಾದಿ ಸಿಡಿಮಿಡಿ

    ಬೆಂಗಳೂರು: 3 ಹೊಸ ಹಸು ಕೊಡಿಸ್ತೀನಿ ಎಂದು ಹೇಳಿದ್ದಾರೆ. ಜಮೀರ್ ನೂರು ಹಸು ಕೊಡಿಸಿದ್ರೂ ಪಾಪ ಪರಿಹಾರ ಆಗಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಿಡಿಕಾರಿದ್ದಾರೆ.

    ನಗರದ ಬಿಜೆಪಿ (BJP) ಕಚೇರಿಯಲ್ಲಿ ಮಾತನಾಡಿ, ಇದು ಮಾನವರು ತಲೆ ತಗ್ಗಿಸುವ ಕೆಲಸ. ಹಸುಗಳಿಗೆ ಕೆಚ್ಚಲು ಕುಯ್ಯೋ ಅಮಾನವೀಯ ಕೆಲಸ ಮಾನವರು ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಮಾತ್ರ ಕೆಚ್ಚಲು ಕೊಯ್ಯಬಹುದು. ಮೂಕ ಪ್ರಾಣಿಗಳ ಕೆಚ್ಚಲು ಯಾರು ಕೊಯ್ದರು ಎಂದು ಬಯಲಿಗೆ ತರಬೇಕು. ಆದರೆ ಈ ಕೇಸ್ ಮುಚ್ಚಿ ಹಾಕೋ ಪ್ರಯತ್ನ ಆಗ್ತಿದೆ. ಸಿಎಂ ರಾಜಕೀಯ ಮಾಡಬೇಡಿ, ಶಾಸಕರು ನಾನು 3 ಹಸು ಕೊಡಿಸ್ತೀನಿ ಎಂದಿದ್ದಾರೆ. ನೂರು ಹಸು ಕೊಡಿಸಿದ್ರು ಪಾಪ ಪರಿಹಾರ ಆಗಲ್ಲ ಎಂದು ಸಿಡಿಮಿಡಿಗೊಂಡಿದ್ದಾರೆ.ಇದನ್ನೂ ಓದಿ: ದರ್ಶನ್‌ಗೆ ಸಿನಿಮಾ ಮಾಡೇ ಮಾಡ್ತೀನಿ: ಡೈರೆಕ್ಟರ್‌ ಪ್ರೇಮ್‌

    ಈ ಸರ್ಕಾರದಲ್ಲಿ ಲಾ ಅಂಡ್ ಆರ್ಡರ್ ಕೆಡುತ್ತಿದೆ. ತಮ್ಮ ಅಧಿಕಾರದ ಕಿತ್ತಾಟದಲ್ಲಿ ರಾಜ್ಯವನ್ನು ಈ ಸರ್ಕಾರ ಮರೆಯುತ್ತಿದೆ. ಇದು ಕಿವುಡು ಸರ್ಕಾರ, ಕಿವುಡು ಮಂತ್ರಿಗಳಿಗೆ ಯಾರು ಹೇಳಬೇಕು? ಪ್ರಿಯಾಂಕ್ ಖರ್ಗೆ ಬಿಜೆಪಿ ಮೇಲೆ ಆರೋಪ ಮಾಡ್ತಾರೆ. ಗುತ್ತಿಗೆದಾರ ಸಂಘ ಪತ್ರ ಬರೆದಿದೆ. ಯಾರಪ್ಪನ ಮನೆಯಿಂದ ತಂದು ಕೊಡುತ್ತಾರೆ. ಗುತ್ತಿಗೆದಾರರು ಕೆಲಸ ಮಾಡಿದ್ದಾರೆ. ಅದರ ಹಣ ಕೇಳುತ್ತಿದ್ದಾರೆ. ಸುಮ್ಮನೆ ಆರೋಪ ಮಾಡಬೇಡಿ ಎಂದು ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ವಾಗ್ದಾಳಿ ನಡೆಸಿದರು.

    ಇದೇ ವೇಳೆ 60% ಆಪಾದನೆ ವಿಚಾರವಾಗಿ ಮಾತನಾಡಿ, ನಾನು ಕಂಟ್ರಾಕ್ಟರ್ ಜೊತೆ ಮಾತಾಡಿದೆ. ಈ ಸರ್ಕಾರದಲ್ಲಿ 60% ಕಮೀಷನ್ ಇದೆ. ಗುತ್ತಿಗೆದಾರರು ಬಾಯಿ ಬಿಟ್ಟರೆ ರಾಜಕಾರಣಿಗಳು, ಅಧಿಕಾರಿಗಳು ತೊಂದರೆ ಕೊಡುತ್ತಾರೆ. ಇದು ಭ್ರಷ್ಟ ಸರ್ಕಾರ. ಇವರ ಪಕ್ಷದ ಒಳ ಬೇಗುದಿಯಿಂದ ಈ ಸರ್ಕಾರ ಬೇಗ ಬಿದ್ದು ಹೋಗುತ್ತದೆ ಎಂದು ಅನಿಸುತ್ತದೆ. ಹಿಂದೆ ಚುನಾವಣೆ ಸಮಯದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಅವರು ಪತ್ರ ಬರೆಸಿದ್ದರು. ನಾವು ಅವತ್ತು ಸರಿಯಾಗಿ ಉತ್ತರ ಕೊಟ್ಟಿಲ್ಲ. ಇವತ್ತು ಗುತ್ತಿಗೆದಾರರು ಸತ್ಯ ಹೇಳ್ತಿದ್ದಾರೆ. ಇದು 60% ಗ್ಯಾರಂಟಿ ಸರ್ಕಾರ ಆಗಿದೆ. ಅವತ್ತು ವಿಪಕ್ಷದಲ್ಲಿ ಇದ್ದ ಸಿದ್ದರಾಮಯ್ಯ, ಡಿಕೆಶಿಗೆ ಗುತ್ತಿಗೆದಾರರು ಪತ್ರ ಬರೆದಿದ್ದರು. ಇವತ್ತು ನೇರವಾಗಿ ಸಚಿವರಿಗೇ ಪತ್ರ ಬರೆಯುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಯಾವ ಆಧಾರ ಇರುತ್ತದೆ. ಆರೋಪ ಮಾಡಿದರೆ ಗೊತ್ತಾಗುತ್ತದೆ. ಹಣ ಬರಲ್ಲ ಎಂದು ಗುತ್ತಿಗೆದಾರರು ಹೇಳೋಕೆ ಭಯ ಬೀಳುತ್ತಿದ್ದಾರೆ ಅಷ್ಟೇ ಎಂದು ಹೇಳಿದರು.ಇದನ್ನೂ ಓದಿ: Haveri | ತಡರಾತ್ರಿ ಫ್ರಿಡ್ಜ್ ಬ್ಲಾಸ್ಟ್ – ಮನೆಯ ವಸ್ತುಗಳು ಸುಟ್ಟು ಕರಕಲು

     

  • ಸರ್ಕಾರವೇ ನಕ್ಸಲರಿಗೆ ಶರಣಾಗಿದೆ: ಛಲವಾದಿ ನಾರಾಯಣಸ್ವಾಮಿ

    ಸರ್ಕಾರವೇ ನಕ್ಸಲರಿಗೆ ಶರಣಾಗಿದೆ: ಛಲವಾದಿ ನಾರಾಯಣಸ್ವಾಮಿ

    ಚಿತ್ರದುರ್ಗ: ನಕ್ಸಲರು (Naxals) ಸರ್ಕಾರಕ್ಕೆ ಶರಣಾಗಿಲ್ಲ, ಸರ್ಕಾರವೇ ನಕ್ಸಲರಿಗೆ ಶರಣಾಗಿದೆ. ಇಷ್ಟುವರ್ಷ ಸಿಗದವರು ಈಗ ಹೇಗೆ ಸಿಕ್ಕರು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಪ್ರಶ್ನಿಸಿದ್ದಾರೆ.

    ಚಿತ್ರದುರ್ಗದ (Chitradurga) ಮಾದಾರಚನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಕ್ಸಲರು ಬರಿಗೈನಲ್ಲಿ ಶರಣಾಗಿದ್ದಾರೆ. ಅವರ ಶಸ್ತ್ರಾಸ್ತ್ರ ಎಲ್ಲೋದವು? ಇವರ ಹಿಂದೆ ಇನ್ನೂ ನಕ್ಸಲಿರಿದ್ದಾರಾ? ಶಸ್ತ್ರಾಸ್ತ್ರ ಅವರಿಗೆ ಕೊಟ್ಟು ಬಂದಿದ್ದಾರೆಂಬ ಪ್ರಶ್ನೆ ಮೂಡಲಿವೆ. ನಕ್ಸಲರನ್ನು ಕೋರ್ಟ್, ಪೊಲೀಸರ ಮುಂದೆ ಶರಣಾಗತಿ ಮಾಡಬೇಕು. ಸಿಎಂ ಮುಂದೆ ನಕ್ಸಲರ ಶರಣಾಗತಿ ಸರಿಯಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: 5 ವರ್ಷಗಳಲ್ಲಿ 64 ಜನರಿಂದ ಲೈಂಗಿಕ ಶೋಷಣೆ – ಕರಾಳ ಅನುಭವ ಬಿಚ್ಚಿಟ್ಟ ದಲಿತ ಬಾಲಕಿ

    ಈ ಸರ್ಕಾರ ಸಂಪೂರ್ಣ ಭ್ರಷ್ಟರ ರಕ್ಷಣೆ ಮಾಡುತ್ತಿದೆ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ನಾನು ಸಿಎಂ, ನೀನು ಸಿಎಂ ಆಗಬೇಕೆಂಬ ಪರಿಸ್ಥಿತಿ ಇದೆ. ಯಾರೂ ಊಟಕ್ಕೂ ಸೇರುವ ಸ್ವತಂತ್ರ ಇಲ್ಲ. ಒಡೆದು ಆಳುವ ನೀತಿ ರಾಜ್ಯದಲ್ಲಿದೆ. ದಲಿತ ಮಾಫಿಯಾ ಕಾಂಗ್ರೆಸ್‌ನಲ್ಲಿದೆ. ದಲಿತ ವಿರೋಧಿ ಸರ್ಕಾರವಿದು. ಕಾಂಗ್ರೆಸ್ ಕೆಲ ಕುಟುಂಬಗಳ ಹಿಡಿತದಲ್ಲಿದೆ. ಖರ್ಗೆ, ಮುನಿಯಪ್ಪ, ಹೆಚ್.ಸಿ ಮಹದೇವಪ್ಪನ ಕುಟುಂಬಗಳು ಕಾಂಗ್ರೆಸ್‌ನಲ್ಲಿ ಹಿಡಿತ ಸಾಧಿಸಿವೆ. ಇತರರಿಗೆ ಅವಕಾಶವೇ ಇಲ್ಲದಂತಾಗಿದೆ. ಇವರನ್ನು ಹೊರತುಪಡಿಸಿ ಯಾರು ಸಹ ಸಿಎಂ ಆಗಬಾರದೆಂಬ ಮಾಫಿಯಾವಿದೆ. ಇವರಲ್ಲಿ ಎರಡು ಗುಂಪುಗಳಿವೆ. ಒಂದು ದಲಿತ ವಿರೋಧಿ ಮಾಫಿಯಾವಿದೆ. ಇನ್ನೊಂದು ದಲಿತ ಮಾಫಿಯಾವಿದೆ. ಇವರೆಲ್ಲರೂ ಮತ್ತೋರ್ವ ದಲಿತ ಬೆಳೆಯಲು ಬಿಡಲ್ಲ. ಕಾಂಗ್ರೆಸ್‌ನಲ್ಲಿ ದಲಿತರಿಗೆ ಬೆಲೆ ಇಲ್ಲ. ಕಾಂಗ್ರೆಸ್ ನಾಶವಾಗುವ ಸ್ಥಿತಿಯಲ್ಲಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: MUDA Scam | ಜೆಡಿಎಸ್‌ ಶಾಸಕ ಜಿಟಿಡಿ ವಿರುದ್ಧವೂ ಲೋಕಾಯುಕ್ತಕ್ಕೆ ದೂರು – 2 ಸೈಟು ಕಿಕ್‌ಬ್ಯಾಕ್‌ ಆರೋಪ

    ಮುಡಾದಲ್ಲಿ ಸುಳ್ಳು ದಾಖಲೆ ನೀಡಿ ಜಿಟಿಡಿ ಫ್ಯಾಮಿಲಿ ಸೈಟ್ ಪಡೆದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು 14 ಸೈಟ್‌ಗಳ ವಿಚಾರವಲ್ಲ, ಸಾವಿರಾರು ಸೈಟ್‌ಗಳ ವಿಚಾರ. ಅವರನ್ನು ರಕ್ಷಣೆ ಮಾಡಲು ಎಲ್ಲಾ ಕೇಸ್ ಮುಚ್ಚಿ ಹಾಕುವ ಪ್ರಯತ್ನ. ಜಗ್ಗಲ್ಲ, ಬಗ್ಗಲ್ಲ ಎಂದು ಹೇಳಿ ರಾತ್ರೋರಾತ್ರಿ ಹೋಗಿ ಸೈಟ್ ವಾಪಾಸ್ ಕೊಟ್ಟಿದ್ದು ಯಾಕೆ? ತಪ್ಪು ಮಾಡಿದ್ದು ಅರಿವಾದ ಮೇಲೆ ಸಿಎಂ ಸೈಟ್ ವಾಪಸ್ ಕೊಟ್ಟಿದ್ದಾರೆ. ನಿಮಗೂ ಭ್ರಷ್ಟಾಚಾರಕ್ಕೂ ಹತ್ತಿರದ ನಂಟಿದೆ. ಈ ಕೇಸ್ ಕೂಡ ಸಿಬಿಐಗೆ ಕೊಟ್ಟರೆ ಎಲ್ಲರ ಬಂಡವಾಳ ಹೊರಗಡೆ ಬರುತ್ತದೆ. ಇದರಲ್ಲಿ ಯಾರಿದ್ದಾರೆ, ಯಾರಿಲ್ಲ ಎಂಬುದು ಪ್ರಶ್ನೆಯಲ್ಲ. ನನ್ನ ಸಂಬಂಧಿಗಳು ಇದ್ದರೂ ನಾನು ಇದನ್ನೇ ಮಾತನಾಡೋದು. ಜನಪರ ವ್ಯವಸ್ಥೆ ಆಗಬೇಕೆ ಹೊರತು, ಸಂಬಂಧಿಕರು, ಸ್ವಾರ್ಥದ ವ್ಯವಸ್ಥೆ ಆಗಬಾರದು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು – ಮಾದಕ ವಸ್ತು ಮಾರಾಟ ಮಾಡ್ತಿದ್ದ ಆರೋಪಿ ಮೇಲೆ ಫೈರಿಂಗ್‌!

  • ಹೊಸ ವರ್ಷದಲ್ಲಿ 3 ದಿನಕ್ಕೆ 3 ನಾಮ ಹಾಕಿದ್ದಾರೆ, ಇನ್ನೂ ಬಾಕಿಯಿದೆ: ಛಲವಾದಿ ನಾರಾಯಣಸ್ವಾಮಿ

    ಹೊಸ ವರ್ಷದಲ್ಲಿ 3 ದಿನಕ್ಕೆ 3 ನಾಮ ಹಾಕಿದ್ದಾರೆ, ಇನ್ನೂ ಬಾಕಿಯಿದೆ: ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ಹೊಸ ವರ್ಷದಲ್ಲಿ ಮೂರು ದಿನಕ್ಕೆ ಮೂರು ನಾಮ ಹಾಕಿದ್ದಾರೆ. ಇನ್ನೂ ಬಾಕಿಯಿದೆ ಎಂದು ಕಾಂಗ್ರೆಸ್ ವಿರುದ್ಧ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.

    ಬಸ್ ಟಿಕೆಟ್ ದರ ಏರಿಕೆ ಖಂಡಿಸಿ ಆರ್ ಅಶೋಕ್ ನೇತೃತ್ವದಲ್ಲಿ ಮೆಜೆಸ್ಟಿಕ್‌ನಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಹೆಣ್ಮಕ್ಕಳಿಗೆ ಫ್ರೀ ಕೊಟ್ಟು, ಗಂಡಸರಿಗೆ ಬರೆ ಕೊಡುತ್ತಿದ್ದೀರಿ. ಹಾಲು, ವಿದ್ಯುತ್, ನೋಂದಣಿ ದರ ಏರಿಕೆ ಮಾಡಿ ತಲೆ ಬೋಳಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಜ.6 ರಿಂದ ಹಳದಿ ಮಾರ್ಗದಲ್ಲಿ ಮೆಟ್ರೋ ಶುರುವಾಗಲ್ಲ: BMRCL ಸ್ಪಷ್ಟನೆ

    ಕಾಂಗ್ರೆಸ್ ಸರ್ಕಾರದ ಖಾಜನೆ ಖಾಲಿಯಾಗಿದೆ. ದಿನ ದೂಡಲು ಹಣವೂ ಬೇಕು. ಆದ್ದರಿಂದ ಬರೆ ಹಾಕುವ ಕೆಲಸ ಮಾಡುತ್ತಿದೆ. ಬಿಜೆಪಿ ಸಾಲ ಮಾಡಿಲ್ಲ. ಕಾಂಗ್ರೆಸ್‌ನವರು ಸುಳ್ಳು ಹೇಳಬೇಡಿ. ದಿವಾಳಿ ಮಾಡಿರೋದು ಕಾಂಗ್ರೆಸ್ ಎಂದು ಹರಿಹಾಯ್ದರು. ಇದನ್ನೂ ಓದಿ: ಮಟನ್‌ 100 ರೂಪಾಯಿ ಇದ್ದದ್ದು 500 ರೂಪಾಯಿ ಆದ್ರೆ ತಗೋತೀರ – ಟಿಕೆಟ್‌ ದರ ಏರಿಕೆ ಬಗ್ಗೆ ಚಲುವರಾಯಸ್ವಾಮಿ ಪ್ರತಿಕ್ರಿಯೆ

    ಅಧಿಕಾರಿಗಳು ಸೂಸೈಡ್ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳಿಗೆ ನೀವು ಸೂಸೈಡ್ ಭಾಗ್ಯ ಕೊಡುತ್ತಿದ್ದೀರಿ. ಈ ದರ್ಬಾರ್ ಜನರಿಗೆ ಸಾಕಾಗಿದೆ ಎಂದು ಗುಡುಗಿದರು. ಇದನ್ನೂ ಓದಿ: ಐಫೋನ್‌ನಿಂದ ಭಾರತದ ಕಾನೂನು ಉಲ್ಲಂಘನೆ – ಆಪಲ್‌ಗೆ ಸಿಸಿಐ ಬಿಸಿ

  • ಡಿಕೆಶಿಗೆ ಹೊಸ ಲೋಕದಲ್ಲಿ ಶೋಕ ಕಾಣಬಹುದು – ವಿದೇಶ ಪ್ರವಾಸಕ್ಕೆ ಛಲವಾದಿ ವ್ಯಂಗ್ಯ

    ಡಿಕೆಶಿಗೆ ಹೊಸ ಲೋಕದಲ್ಲಿ ಶೋಕ ಕಾಣಬಹುದು – ವಿದೇಶ ಪ್ರವಾಸಕ್ಕೆ ಛಲವಾದಿ ವ್ಯಂಗ್ಯ

    ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್‌ಗೆ (DCM DK Shivakumar) ಹೊಸ ಲೋಕದಲ್ಲಿ ಶೋಕ ಕಾಣಬಹುದು ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಶೋಕಾಚರಣೆಯನ್ನು ವಿದೇಶದಲ್ಲೇ ಮಾಡಲು ಹೋಗಿರಬೇಕು. ಕರ್ನಾಟಕದಲ್ಲೂ ಶೋಕಾಚರಣೆ ಇದೆ. ಅವರಿಗೆ ಈ ಲೋಕದಲ್ಲಿ ಶೋಕ ಕಾಣುತ್ತಿಲ್ಲ. ಹೊಸ ಲೋಕದಲ್ಲಿ ಅವರಿಗೆ ಶೋಕ ಕಾಣಬಹುದು, ಹಾಗಾಗಿ ಹೋಗಿರಬಹುದು. ರಾಹುಲ್ ಗಾಂಧಿಯವರು ಸಹ ವಿದೇಶಕ್ಕೆ ಹೋಗಿದ್ದಾರೆ. ರಾಹುಲ್ ಅವರಿಗೆ ಒಂಟಿತನ ಕಾಡುತ್ತಿದೆ. ಅವರು ಮೊದಲಿನಿಂದಲೂ ಹೊರಗೆ ಹೋಗುತ್ತಾರೆ. ಹಾಗಾಗಿ ಅದರ ಬಗ್ಗೆ ನಾನು ಏನೂ ಮಾತನಾಡಲ್ಲ ಎಂದು ಹೇಳಿದರು.ಇದನ್ನೂಓದಿ: ವಿಷಾಹಾರ ಸೇವಿಸಿ 80ಕ್ಕೂ ಹೆಚ್ಚು ಎನ್‌ಸಿಸಿ ಕೆಡೆಟ್‌ಗಳು ಅಸ್ವಸ್ಥ – ಸೇನಾಧಿಕಾರಿ ಮೇಲೆ ಸ್ಥಳೀಯರಿಂದ ಹಲ್ಲೆ

    ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡುವಂತೆ ಅವರ ಕುಟುಂಬ ಆಗ್ರಹಿಸಿದೆ. ಸಿಬಿಐಗೆ ವಹಿಸಬೇಕು, ಇಲ್ಲದಿದ್ದರೆ ನ್ಯಾಯ ಸಿಗಲ್ಲ. ಆದರೆ ಪ್ರಿಯಾಂಕ್ ಖರ್ಗೆ ಇದನ್ನು ವೈಯಕ್ತಿಕವಾಗಿ ತೆಗೆದುಕೊಂಡು ನಮಗೆ ಸವಾಲ್ ಹಾಕಿದ್ದಾರೆ. ನೀವು ಬಟ್ಟೆ ಹರಿದುಕೊಂಡರೂ ರಾಜೀನಾಮೆ ಕೊಡಲ್ಲ ಎಂದು ಸವಾಲ್ ಹಾಕಿದ್ದಾರೆ. ಪ್ರಿಯಾಂಕ್ ಖರ್ಗೆ ರೈಟು ಲೆಫ್ಟ್ನಲ್ಲಿವವರೇ ಆತ್ಮಹತ್ಯೆಗೆ ಕಾರಣೀಕರ್ತರು. ನಿಮಗೆ ಉತ್ತರ ಕೊಡಲು ಭಯನಾ? ಪ್ರಿಯಾಂಕ್ ಖರ್ಗೆ ಉದ್ಧಟತನ ಬದಿಗಿರಿಸಬೇಕು, ಸ್ವಪ್ರತಿಷ್ಠೆ ಬಿಡಬೇಕು ಎಂದು ಕಿಡಿಕಾರಿದ್ದಾರೆ.

    ನಾವು ಪ್ರಿಯಾಂಕ್ ಖರ್ಗೆಯವರನ್ನ ಟಾರ್ಗೆಟ್ ಮಾಡುತ್ತಿಲ್ಲ. ಬಟ್ಟೆ ಹರಿದುಕೊಳ್ಳುವುದು ಬಿಜೆಪಿ ಅಲ್ಲ, ಬಟ್ಟೆ ಹರಿದುಕೊಳ್ಳುವ ಕೆಲಸ ಮಾಡಿರುವುದು ನೀವು, ನಾವೇನು ನಿಮ್ಮ ಬಟ್ಟೆ ಹರಿಯಲ್ಲ. ಆಪಾದನೆ ಬಂದಾಗ ಯಾವ ರೀತಿ ಎದುರಿಸಬೇಕು ಹಾಗೆಯೇ ಎದುರಿಸಿ, ನ್ಯಾಯ ಕೊಡುವ ಕೆಲಸ ಮಾಡಿ. ರಾಜೀನಾಮೆ ತೀರ್ಮಾನ ನಿಮ್ಮದು ಹೋರಾಟ ನಮ್ಮದು ಎಂದಿದ್ದಾರೆ.ಇದನ್ನೂಓದಿ: Year 2024 – ಸೋಲು – ಗೆಲುವಿನ ʻಆಟʼ

    ಇಂದು (ಡಿ.31)  ಡಿಸಿಎಂ ಡಿ.ಕೆ.ಶಿವಕುಮಾರ್ ಕುಟುಂಬ ಸಮೇತ ನಾಲ್ಕು ದಿನಗಳ ಕಾಲ ಕೆನಡಾ ಹಾಗೂ ಟರ್ಕಿ ಪ್ರವಾಸಕ್ಕೆ  ತೆರಳಿದ್ದು,  ಜ.04 ರಂದು ವಾಪಸಾಗಲಿದ್ದಾರೆ.

  • ಖರ್ಗೆಗೆ ಕಾಂಗ್ರೆಸ್ ಪದೇ ಪದೇ ಅಪಮಾನ ಮಾಡ್ತಿದೆ: ಛಲವಾದಿ ನಾರಾಯಣಸ್ವಾಮಿ ಕಿಡಿ

    ಖರ್ಗೆಗೆ ಕಾಂಗ್ರೆಸ್ ಪದೇ ಪದೇ ಅಪಮಾನ ಮಾಡ್ತಿದೆ: ಛಲವಾದಿ ನಾರಾಯಣಸ್ವಾಮಿ ಕಿಡಿ

    ಬೆಂಗಳೂರು: ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಕಾಂಗ್ರೆಸ್ ನಾಯಕರು ಪದೇ ಪದೇ ಅಪಮಾನ ಮಾಡ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ‌.

    ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಕಾಂಗ್ರೆಸ್ ದಲಿತರ ವಿರೋಧಿ. ವಯನಾಡ್‌ನಲ್ಲಿ ಪ್ರಿಯಾಂಕ್ ವಾದ್ರಾ ನಾಮಪತ್ರ ಸಲ್ಲಿಕೆ ವೇಳೆ ಮಲ್ಲಿಕಾರ್ಜುನ ಖರ್ಗೆಯವರನ್ನ ಬಾಗಿಲ ಬಳಿ ನಿಲ್ಲಿಸಿದ್ದರು. ಮೊನ್ನೆ ಬೆಳಗಾವಿಯಲ್ಲಿ ನಡೆಯೋ ಎಐಸಿಸಿ ಅಧಿವೇಶನಕ್ಕೆ ರಾಹುಲ್ ಗಾಂಧಿ ಬಂದ ಸಮಯದಲ್ಲಿ ಡಿ.ಕೆ ಶಿವಕುಮಾರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನ ತಳ್ಳೋ ಕೆಲಸ ಮಾಡಿದ್ದಾರೆ. ಇದನ್ನು ನೋಡಿದ್ರೆ ಕಾಂಗ್ರೆಸ್ ದಲಿತ ವಿರೋಧಿಗಳು ಎಂದು ಗೊತ್ತಾಗುತ್ತದೆ. ಖರ್ಗೆ ಅವರನ್ನು ಕಾಂಗ್ರೆಸ್ ಸಿಎಂ ಮಾಡಲಿಲ್ಲ. ಯಾಕೆ ಮಾಡಲಿಲ್ಲ? ದಲಿತರನ್ನ ಅಪಮಾನ ಮಾಡೋದು ಕಾಂಗ್ರೆಸ್ ಗುಣ ಎಂದು ಕಿಡಿಕಾರಿದ್ದಾರೆ.

    ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ ವಿಚಾರವಾಗಿ, ಕಾಂಗ್ರೆಸ್ ಅಂಬೇಡ್ಕರ್‌ಗೆ ಗೌರವ ಕೊಡೋ ಕೆಲಸ ಮಾಡಿಲ್ಲ. ಜಗಜೀವನರಾಮ್ ಸೇರಿ ಎಲ್ಲಾ ನಾಯಕರಿಗೆ ಅಪಮಾನ ಮಾಡಿದ್ದಾರೆ. ಕೆಲವು ದಲಿತ ಸಂಘಟನೆಗಳು ಅಮಿತ್ ಶಾ ವಿರುದ್ಧ ಪ್ರತಿಭಟನೆ ಮಾಡ್ತಿದ್ದಾರೆ. ಅಮಿತ್ ಶಾ ಎಲ್ಲೂ ಕೂಡಾ ಅಂಬೇಡ್ಕರ್‌ಗೆ ಅಪಮಾನ ಮಾಡಿಲ್ಲ. ಅಪಮಾನ ಮಾಡಿದ್ದು ಕಾಂಗ್ರೆಸ್, ಇದನ್ನ ಅಮಿತ್ ಶಾ ಹೇಳಿದ್ದಕ್ಕೆ ಅವರ ವಿರುದ್ಧ ಹೇಳಿಕೆ ತಿರುಚಿ ಆರೋಪ ಮಾಡ್ತಿದ್ದಾರೆ. ಹೀಗಿದ್ದರೂ ಯಾಕೆ ನಮ್ಮ ಬಂಧುಗಳು ಪ್ರತಿಭಟನೆ ಮಾಡ್ತಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

    ದಲಿತ ಸಂಘಟನೆಗಳು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಪಾಪದ ಕೊಡ ತುಂಬಿದೆ. ಕಾಂಗ್ರೆಸ್‌ನ ಎಲ್ಲಾ ಸಂಭ್ರಮದ ದಿನಗಳು ಸಂತಾಪದ ದಿನಗಳು ಆಗಲಿವೆ. ಅರ್ಥ ಮಾಡಿಕೊಳ್ಳಿ, ಅಂಬೇಡ್ಕರ್‌ಗೆ ಬಿಜೆಪಿ ಅಪಮಾನ ಮಾಡಿಲ್ಲ. ಮೀಸಲಾತಿ ಜಾಸ್ತಿ ಮಾಡಿದ್ದು ಬಿಜೆಪಿ. ಇದನ್ನು ದಲಿತ ಬಂಧುಗಳು ಅರ್ಥ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಮತ್ತು ಕೆಲವು ದಲಿತ ಸಂಘಟನೆಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • ಕಾಂಗ್ರೆಸ್‌ನಲ್ಲಿ ಎರಡು ಪವರ್ ಸೆಂಟರ್‌ಗಳಿವೆ: ಛಲವಾದಿ ನಾರಾಯಣಸ್ವಾಮಿ

    ಕಾಂಗ್ರೆಸ್‌ನಲ್ಲಿ ಎರಡು ಪವರ್ ಸೆಂಟರ್‌ಗಳಿವೆ: ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ಕಾಂಗ್ರೆಸ್‌ನಲ್ಲಿ (Congress) ಎರಡು ಪವರ್ ಸೆಂಟರ್ ಇವೆ‌. ಈ ಪವರ್ ಸೆಂಟರ್‌ಗಳು ಯಾವಾಗ ಬ್ಲ್ಯಾಸ್ಟ್ ಆಗುತ್ತೋ ಗೊತ್ತಿಲ್ಲ ಅಂತ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಸಿ.ಟಿ ರವಿ (C.T Ravi) ಕೇಸ್‌ ವಿಚಾರವಾಗಿ ಪೊಲೀಸರ ವರ್ತನೆ ಬಗ್ಗೆ ವಿಧಾನಸೌಧದಲ್ಲಿ ಅವರು ಮಾತನಾಡಿದರು. ಈ ವೇಳೆ, ಕಾಂಗ್ರೆಸ್‌ನಲ್ಲಿ ಎರಡು ಪವರ್ ಸೆಂಟರ್ ಇವೆ. ಸಿಎಂ ಸೆಂಟರ್ ಮತ್ತು ಡಿಸಿಎಂ ಸೆಂಟರ್ ಇದೆ. ಸಿಎಂ ಪವರ್ ಸೆಂಟರ್‌ನ್ನು ಡಿಸಿಎಂ ಪವರ್ ಸೆಂಟರ್ ನುಂಗಿ ಹಾಕಿದೆ ಎಂದಿದ್ದಾರೆ.

    ಈ ವಿಚಾರದ ಬಗ್ಗೆ ಗೃಹ ಸಚಿವರು ನನಗೇನು ಗೊತ್ತಿಲ್ಲ ಅಂದರು. ಸಿಎಂ ಅವರು ಕೂಡಾ ಮಾತಾಡಿಲ್ಲ. ಹೀಗಾಗಿ ಇದರ ಹಿಂದೆ ಇರೋರು ಯಾರು ಎಂದು ಈ‌ ಸರ್ಕಾರ ಹೇಳಬೇಕು. ಯಾವಾಗಾ ಈ ಸರ್ಕಾರ ಬ್ಲ್ಯಾಸ್ಟ್ ಆಗುತ್ತೋ ಗೊತ್ತಿಲ್ಲ. ಸಿಟಿ ರವಿ ಕೇಸ್‌ನಲ್ಲಿ ಪೊಲೀಸರ ವರ್ತನೆ ಈ ಪವರ್ ಸೆಂಟರ್‌ಗಳ ನಡುವಿನ ಪವರ್ ಕಿತ್ತಾಟ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.