Tag: chalavadi narayanaswamy

  • ಪೊಲೀಸರು ಇವರ ಗುಲಾಮರು ಅಂದುಕೊಂಡಿದ್ದಾರಾ? – ಸಿಎಂ ನಡೆಗೆ ಛಲವಾದಿ ನಾರಾಯಣಸ್ವಾಮಿ ಕಿಡಿ

    ಪೊಲೀಸರು ಇವರ ಗುಲಾಮರು ಅಂದುಕೊಂಡಿದ್ದಾರಾ? – ಸಿಎಂ ನಡೆಗೆ ಛಲವಾದಿ ನಾರಾಯಣಸ್ವಾಮಿ ಕಿಡಿ

    ಬೆಂಗಳೂರು: ಬೆಳಗಾವಿ (Belagavi) ಕಾರ್ಯಕ್ರಮದಲ್ಲಿ ವೇದಿಕೆಯಲ್ಲೇ ಎಎಸ್‌ಪಿ (ASP) ಮೇಲೆ ಸಿಎಂ ಗರಂ ಆದ ವಿಚಾರವಾಗಿ, ಪೊಲೀಸರು ಇವರ ಗುಲಾಮರು ಅಂದುಕೊಂಡಿದ್ದಾರಾ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಿಡಿಕಾರಿದ್ದಾರೆ.

    ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವನಲೇ ಎಸ್ಪಿ ಅಂತ ಕರೆದಾಗ ಎಎಸ್‌ಪಿ ನಾರಾಯಣ್ ಅನ್ನೋರು ಬರುತ್ತಾರೆ. ಸಿಎಂ ಕರೆದು ಕಪಾಳಮೋಕ್ಷ ಮಾಡಲು ಮುಂದಾಗುತ್ತಾರೆ. ಆಗ ಹೆಚ್ಚುವರಿ ಎಸ್‌ಪಿ ಒಂದು ಹೆಜ್ಜೆ ಹಿಂದೆ ಹೋಗುತ್ತಾರೆ. ಇಲ್ಲದಿದ್ರೆ ಅವರಿಗೆ ಕಪಾಳಮೋಕ್ಷ ಆಗುತ್ತಿತ್ತು. ಪೊಲೀಸರು ಇವರ ಗುಲಾಮರು ಅಂದುಕೊಂಡಿದ್ದಾರಾ? ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಘೇರಾವ್ ಹಾಕುತ್ತಾರೆ ಅನ್ನೋದೇ ಗೊತ್ತಿಲ್ಲ. ಇದು ಇಂಟೆಲಿಜೆನ್ಸ್ ಫೇಲ್ಯೂರ್ ಅಲ್ವಾ? ಕದ್ದು ಮುಚ್ಚಿ ಬಂದ ಭಯೋತ್ಪಾದಕರು ಪಹಲ್ಗಾಮ್‌ನಲ್ಲಿ ಗುಂಡು ಹಾರಿಸಿದರು. ಅದನ್ನ ಇಂಟಲಿಜೆನ್ಸ್ ಫೇಲ್ಯೂರ್, ಮೋದಿ ಫೇಲ್ಯೂರ್ ಎನ್ನುತ್ತಾರೆ. ಮುತ್ತಿಗೆಯಂತಹ ಸಣ್ಣ ವಿಷಯವೇ ನಿಮಗೆ ಗೊತ್ತಾಗಿಲ್ಲ. ಇನ್ನು ಜನರನ್ನು ಕೊಲ್ಲೋ ವಿಚಾರ ಹೇಗೆ ಗೊತ್ತಾಗಲಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಲಾರಿ ಚಾಲಕನ ಯಡವಟ್ಟು – ರೈಲ್ವೆ ಹಳಿ ಮೇಲೆ ಬಿದ್ದ ಕಬ್ಬಿಣದ ಪ್ಲೇಟ್, ತಪ್ಪಿದ ಭಾರೀ ಅನಾಹುತ

    ಬೆಳಗಾವಿಯಲ್ಲಿ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಪಕ್ಷದ ಕಾರ್ಯಕ್ರಮ ಮಾಡಲು ಹೋಗಿದ್ದಾರೆ. ಕಾರ್ಯಕ್ರಮದ ಸಂದರ್ಭದಲ್ಲಿ ದೇಶದ ವಿರುದ್ಧವಾಗಿ ಹೇಳಿಕೆ ನೀಡಿದ್ದರು. ಇದನ್ನು ವಿರೋಧಿಸಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಕಪ್ಪು ಬಟ್ಟೆ ತೋರಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಿದ್ದಾರೆ. ಯಾರೂ ಮಚ್ಚು, ದೊಣ್ಣೆ, ಎಕೆ-47 ತೆಗೆದುಕೊಂಡು ಹೋಗಿಲ್ಲ. ಪೊಲೀಸರು ಬಂಧನ ಮಾಡಿದ ಬಳಿಕ, ಕಾಂಗ್ರೆಸ್ ಗೂಂಡಾಗಳು ಅವರ ಮೇಲೆ ಮುಗಿಬಿದ್ದಿದ್ದಾರೆ. ಇದು ಈ ಗೂಂಡಾ ಸರ್ಕಾರದ ವರ್ತನೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಉಗ್ರರು ನಿಮ್ಮ ಚಡ್ಡಿ ಬಿಚ್ಚಿಸಿ ಚೆಕ್ ಮಾಡಿದ್ರೆ ಏನ್ ಮಾಡ್ತೀರಿ – ತಿಮ್ಮಾಪೂರ್‌ ವಿರುದ್ಧ ಸೂರ್ಯ ಆಕ್ರೋಶ

    ಸಿದ್ದರಾಮಯ್ಯ ವಿರುದ್ಧ ರಾಜ್ಯದಲ್ಲಿ ಉಳಿದಿರೋದು ಜನಾಕ್ರೋಶ ಮಾತ್ರ. ಇನ್ನು ಮುಂದೆ ಎಲ್ಲೇ ಹೋದರೂ ನಿಮ್ಮ ಪರಿಸ್ಥಿತಿ ಹೀಗೇ ಇರುತ್ತದೆ. ರಾಜ್ಯದ ಜನರು ಇದೇ ರೀತಿ ಉತ್ತರ ಕೊಡುತ್ತಾರೆ ಎಂದರು. ಇದನ್ನೂ ಓದಿ: ಬೆಳಗಾವಿ | ಹೆಚ್ಚುವರಿ ಎಸ್‌ಪಿ ವಿರುದ್ಧ ಸಿಎಂ ಗರಂ – ವೇದಿಕೆಯಲ್ಲೇ ತರಾಟೆ

  • ಮುಸ್ಲಿಂ ಸಮುದಾಯದ ಜಾತಿಗಳನ್ನು ಒಂದು ಮಾಡಿ ಮುಸ್ಲಿಮರೇ ಹೆಚ್ಚು ಅಂತ ಬಿಂಬಿಸಿದ್ದಾರೆ: ಛಲವಾದಿ ನಾರಾಯಣಸ್ವಾಮಿ

    ಮುಸ್ಲಿಂ ಸಮುದಾಯದ ಜಾತಿಗಳನ್ನು ಒಂದು ಮಾಡಿ ಮುಸ್ಲಿಮರೇ ಹೆಚ್ಚು ಅಂತ ಬಿಂಬಿಸಿದ್ದಾರೆ: ಛಲವಾದಿ ನಾರಾಯಣಸ್ವಾಮಿ

    ಹುಬ್ಬಳ್ಳಿ: ಮುಸ್ಲಿಂ ಸಮುದಾಯದಲ್ಲಿ ಅನೇಕ ಜಾತಿಗಳಿವೆ. ಅದರಲ್ಲಿ ಎಲ್ಲರನ್ನೂ ಒಂದು ಮಾಡಿ ಮುಸ್ಲಿಮರನ್ನು ಅತಿ ಹೆಚ್ಚು ಎಂದು ಬಿಂಬಿಸಿದ್ದಾರೆಂದು ಜಾತಿಗಣತಿ ವಿರುದ್ಧ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಿಡಿಕಾರಿದ್ದಾರೆ.

    ಹುಬ್ಬಳ್ಳಿಯಲ್ಲಿ (Hubballi) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಷ್ಟು ದಿನ ಯಾರು ಅಲ್ಪಸಂಖ್ಯಾತರು ಇದ್ದರು, ಈಗ ಅವರು ಬಹುಸಂಖ್ಯಾತರು ಆಗಿದ್ದಾರೆ. ಹಾಗಿದ್ದರೆ ಅವರಿಗೆ ಅಲ್ಪಸಂಖ್ಯಾತ ಸೌಲಭ್ಯ ಯಾಕೆ? ಕಾಂಗ್ರೆಸ್ ಮಾಡುತ್ತಿರುವುದು ಮುಸ್ಲಿಮರಿಗೆ ಯಾವುದೂ ಉಪಯೋಗಕ್ಕೆ ಬರೋದಿಲ್ಲಾ. ಮುಸ್ಲಿಮರನ್ನು ಅತಿ ಹೆಚ್ಚು ಅಂತ ತೋರಿಸಿ ಅವರಿಗೆ ಇತರರ ಕೆಂಗಣ್ಣಿಗೆ ಗುರಿ ಮಾಡಿದ್ದೀರಿ. ಇದು ಅಲ್ಪಾಯುಶಿ ಸರ್ಕಾರ, ಈ ಸರ್ಕಾರ‌ ಯಾವತ್ತಾದ್ರೂ ಹೋಗಬಹುದು ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಜಾತಿ ಸಂಖ್ಯೆ ಕಡಿಮೆ ಆಯ್ತು ಅಂತಾ ಮಂಗ್ಯಾಗಳ ತರ ಕಿತ್ತಾಡಬೇಡಿ – ಪ್ರತಾಪ್ ಸಿಂಹ

    ರಾಜ್ಯದಲ್ಲಿ ಜನಾಕ್ರೋಶ ಆರಂಭವಾಗಿ, ಅಭಿವೃದ್ಧಿ ಶೂನ್ಯವಾಗಿದೆ. ಐದು ವರ್ಷ ಆಡಳಿತ ಮುಗಿಸಿದ್ರೆ ಸಾಕು ಎನ್ನುವ ಸ್ಥಿತಿಗೆ ಸರ್ಕಾರ‌ ಬಂದು ತಲುಪಿದೆ. ಇಡೀ ರಾಜ್ಯದಲ್ಲಿ ಗೊಂದಲದಲ್ಲಿದೆ. ಹೀಗಾಗಿ ನಮ್ಮ ಪಕ್ಷ ಜನಾಕ್ರೋಶ ಯಾತ್ರೆ ಕೈಗೊಂಡಿದೆ. ನಾಳೆ ಬೆಳಗಾವಿಯಿಂದ ಎರಡನೇ ಸುತ್ತಿನ ಯಾತ್ರೆ ಆರಂಭವಾಗುತ್ತಿದೆ ಎಂದು ತಿಳಿಸಿದ್ದಾರೆ.

    ಕಾಂಗ್ರೆಸ್ ದೊಡ್ಡ ಗೊಂದಲದ ಗೂಡಾಗಿದೆ. ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಗೌರವದ ಬದಲು ಅಪಮಾನ ಮಾಡುತ್ತಿದೆ. ಬೆಳಗಾವಿ ಗಾಂಧೀಜಿ ಬಂದು ನೂರು ವರ್ಷವಾದ ಹಿನ್ನೆಲೆ ದೊಡ್ಡ ಕಾರ್ಯಕ್ರಮ ಮಾಡಿತು. ಆದರೆ, ಅಂಬೇಡ್ಕರ್ ಬಂದು ನೂರು ವರ್ಷವಾಗಿದೆ. ಯಾಕೆ ಕಾರ್ಯಕ್ರಮ ಮಾಡಿಲ್ಲ. ಈ ಕಾರ್ಯಕ್ರಮವನ್ನು ಬಿಜೆಪಿ ಮಾಡುತ್ತಿದೆ ಎಂದು ಹೇಳಿದ್ದಾರೆ. ಅಂಬೇಡ್ಕರ್‌ರನ್ನು ಸೋಲಿಸಿದ್ದು ಸಾರ್ವಕರ್ ಅಂತ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯ ಇದನ್ನು ಸಾಬೀತು ಮಾಡಿದ್ರೆ ನನ್ನ ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಅವರು ಸಾಬೀತು ಮಾಡಲು‌ ಆಗದಿದ್ದರೆ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳಬೇಕು ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಒಕ್ಕಲಿಗ ಸಮುದಾಯಕ್ಕೆ ಅನ್ಯಾಯ ಆಗಿರುವ ಸಮೀಕ್ಷೆ ನಾನು ಒಪ್ಪಲ್ಲ – ಕುಮಾರಸ್ವಾಮಿ

    ಕಾಂಗ್ರೆಸ್ ಸುಳ್ಳು ಹೇಳುವ ಫ್ಯಾಕ್ಟರಿ ಓಪನ್ ಮಾಡಿದ್ದೇವೆ. ಅಂಬೇಡ್ಕರ್ ಪ್ರಶಸ್ತಿ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡಿದೆ. ದಲಿತರಲ್ಲೇ ರೈಟು, ಲೆಫ್ಟ್ ಅಂತ ಕಾಂಗ್ರೆಸ್ ಗೊಂದಲ ಸೃಷ್ಟಿ ಮಾಡಿದೆ. ಅವರಿಗೆ ಜಾಸ್ತಿ ಕೊಟ್ಟಿದ್ದೇವೆ, ಇವ್ರಿಗೆ ಜಾಸ್ತಿ ಕೊಟ್ಟಿದ್ದೇವೆ ಅಂತ ಅಸಮಾಧಾನ ಹುಟ್ಟಿಸಿದ್ದಾರೆ. ಒಕ್ಕಲೆಬ್ಬಿಸಿ ಜನರ ನಡುವೆ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ ಎಂದು ಟೀಕಿಸಿದ್ದಾರೆ.

  • ಬೆಲೆ ಏರಿಕೆಗೆ ಖಂಡನೆ – 2ನೇ ದಿನಕ್ಕೆ ಕಾಲಿಟ್ಟ ಬಿಜೆಪಿ ಅಹೋರಾತ್ರಿ ಧರಣಿ

    ಬೆಲೆ ಏರಿಕೆಗೆ ಖಂಡನೆ – 2ನೇ ದಿನಕ್ಕೆ ಕಾಲಿಟ್ಟ ಬಿಜೆಪಿ ಅಹೋರಾತ್ರಿ ಧರಣಿ

    – ಇಂದು ಸಿಎಂ ಮನೆ ಮುತ್ತಿಗೆಗೆ ಬಿಜೆಪಿ ನಿರ್ಧಾರ

    ಬೆಂಗಳೂರು: ರಾಜ್ಯ ಸರ್ಕಾರದ ದರ ಏರಿಕೆ ನೀತಿ ಖಂಡಿಸಿ ಬಿಜೆಪಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.

    ಇಂದು ಮಧ್ಯಾಹ್ನಕ್ಕೆ ಅಹೋರಾತ್ರಿ ಹೋರಾಟ ಕೊನೆಗೊಳಿಸಲು ನಿರ್ಧರಿಸಲಾಗಿದೆ. ಹೀಗಾಗಿ, ಇಂದು ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ತೀವ್ರಗೊಳಿಸಲಿದೆ. ಸಿಎಂ ಮನೆ ಮುತ್ತಿಗೆ ಯತ್ನ ಹಾಗೂ ರಸ್ತೆ ತಡೆಗೆ ಬಿಜೆಪಿ ನಿರ್ಧರಿಸಿದೆ. ಫ್ರೀಡಂ ಪಾರ್ಕ್ ಇರುವ ಶೇಷಾದ್ರಿ ರಸ್ತೆ ತಡೆ ನಡೆಸುವ ಮೂಲಕ ಸರ್ಕಾರಕ್ಕೆ ಬಿಜೆಪಿ ನಾಯಕರು ಬಿಸಿ ಮುಟ್ಟಿಸಲಿದ್ದಾರೆ. ನೂರಾರು ಕಾರ್ಯಕರ್ತರೊಂದಿಗೆ ರಸ್ತೆಗಿಳಿದು ಸಿಎಂ ಮನೆ ಕಡೆ ತೆರಳಲು ಪ್ಲ್ಯಾನ್ ಮಾಡಲಾಗಿದೆ.

    ಪ್ರತಿಭಟನೆ ಕುರಿತು ಮಾತನಾಡಿದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಇಂದು ಬೆಳಗ್ಗೆ 11ಕ್ಕೆ ಸಿಎಂ ಮನೆ ಮುತ್ತಿಗೆ ಹಾಕ್ತೇವೆ. 5-10 ಸಾವಿರ ಕಾರ್ಯಕರ್ತರು ಬರ್ತಾರೆ. ಸಿಎಂ ಮನೆ ಮುತ್ತಿಗೆ ಹಾಕಿ ರಸ್ತೆ ತಡೆ ಮಾಡ್ತೇವೆ. ನಾವು ಗಾಂಧಿ ತತ್ವದಡಿ ಶಾಂತಿಯುತವಾಗಿ ಹೋರಾಟ ಮಾಡ್ತೇವೆ. ಗಾಂಧಿ ತತ್ವದ ಮೇಲೆ ಕಾಂಗ್ರೆಸ್‌ಗೆ ನಂಬಿಕೆ ಇದ್ದರೆ, ನಮ್ಮ ಹೋರಾಟಕ್ಕೆ ಅವಕಾಶ ಕೊಡಲಿ. ಈ ಸರ್ಕಾರ ಚಂಡಿ ಹೆಂಡ್ತಿ ಥರ. ನಾವೇನೆ ಮಾಡಿದ್ರೂ ಅದಕ್ಕೆ ವಿರುದ್ಧ ಮಾಡ್ತಿದೆ ಸರ್ಕಾರ. ದರ ಏರಿಕೆ ಬೇಡ ಅಂದರೆ ಮಾಡ್ತೀವಿ ಅಂತಿದ್ದಾರೆ. ಡೀಸೆಲ್ ದರ ಏರಿಸಿದ್ರು. ಈಗ ನೀರಿನ ದರ ಏರಿಸಲು ಹೊರಟಿದ್ದಾರೆ. ಇದು ಭಂಡತನದ ಸರ್ಕಾರ, ಜಿಲ್ಲೆಗಳಲ್ಲೂ ಹೋರಾಟ ಮಾಡ್ತೇವೆ. ಇವರಿಗೆ ಲೂಟಿ ಹೊಡೆಯಲು ಬಿಡಲ್ಲ ಎಂದು ತಿಳಿಸಿದರು.

    ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿ ಲೋಕಾಯುಕ್ತಕ್ಕೆ ಕೊಟ್ಟರು. ಲೋಕಾಯುಕ್ತ ಸಾಬೀತು ಮಾಡಲಿಲ್ಲ. ನಂತರ ನ್ಯಾ.ನಾಗಮೋಹನ ದಾಸ್ ಆಯೋಗಕ್ಕೆ ಕೊಟ್ರು. ನಾಹಮೋಹನದಾಸ್ ಅವರೇನು ನಾಗಲೋಕದಿಂದ ಬಂದಿದ್ದಾರಾ? ಪ್ರತಿಯೊಂದಕ್ಕೂ ಅವರನ್ನೇ ನೇಮಕ ಮಾಡ್ತಿರೋದ್ಯಾಕೆ ಸರ್ಕಾರ? ಕ್ಲೀನ್‌ಚಿಟ್ ತಗೊಳ್ಳೋಕ್ಕಾ? ನಮಗೆ ಅವರ ಮೇಲೆ ಗೌರವ ಇದೆ. ನಾವು ಗೌರವ ಕೊಡಬೇಕು ಅಂದರೆ ಅವರೂ ಸರಿ ದಾರಿಯಲ್ಲಿ ಇರಬೇಕು. ಲೋಕಾಯುಕ್ತದವರು ಪತ್ತೆಹಚ್ಚಲು ಆಗದ್ದನ್ನು ಇವ್ರು ಪತ್ತೆ ಮಾಡಿದ್ರಾ? ಗುತ್ತಿಗೆದಾರರ ಮೂಲಕ ಇದೇ ಕಾಂಗ್ರೆಸ್ ಆಧಾರ ಇಲ್ಲದಿದ್ದರೂ ನಮ್ಮ ಮೇಲೆ ಆರೋಪ ಮಾಡಿಸಿದ್ರು. ಅದನ್ನೇ ಬಂಡವಾಳ ಮಾಡಿ ಸರ್ಕಾರ ರಚಿಸಿದ್ರು. ಅದೇ ಗುತ್ತಿಗೆದಾರರು ಈಗ ಕಾಂಗ್ರೆಸ್ ಸರ್ಕಾರದ ವಿರುದ್ಧ 60% ಕಮಿಷನ್ ಆರೋಪ ಮಾಡ್ತಿದ್ದಾರಲ್ಲ. ಇದಕ್ಕೆ ನಾಗಮೋಹನ ದಾಸ್ ಏನ್ ಹೇಳ್ತಾರೆ ನೋಡಬೇಕು ಎಂದು ಟಾಂಗ್ ಕೊಟ್ಟರು.

    ಮುಡಾ ಪ್ರಕರಣದಲ್ಲಿ ಇಡಿ ತನಿಖೆಗೆ ಸಮ್ಮತಿ ವಿಚಾರವಾಗಿ ಮಾತನಾಡಿ, ಲೋಕಾಯುಕ್ತ ಮೂಲಕ ಕ್ಲೀನ್‌ಚಿಟ್ ಪಡೆದ್ರು. ಹೈಕೋರ್ಟ್ ಡಬಲ್ ಬೆಂಚ್ ಈಗ ಇಡಿಗೆ ಅನುಮತಿ ಕೊಟ್ಟಿದೆ. ಹೈಕೋರ್ಟ್ ಆದೇಶಕ್ಕೆ ಸ್ವಾಗತ. ಮುಡಾ ಪ್ರಕರಣ ಸಿಬಿಐ ತನಿಖೆಗೆ ಸೂಕ್ತವಾದ ಪ್ರಕರಣ. ಈಗ ಇಡಿ ತನಿಖೆಗೆ ಅನುಮತಿ ಸಿಕ್ಕಿದೆ. ಇದರಲ್ಲಿ ಸಿಎಂ ಸಿಕ್ಕಿ ಬೀಳ್ತಾರೆ ಎಂದು ತಿಳಿಸಿದರು.

  • ಜನರ ರಕ್ತ ಹೀರುವ ಸರ್ಕಾರ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ

    ಜನರ ರಕ್ತ ಹೀರುವ ಸರ್ಕಾರ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ

    ಬೆಂಗಳೂರು: ಕಾಂಗ್ರೆಸ್ ಸರ್ಕಾರ ಜನರ ರಕ್ತ ಹೀರುವ ಕೆಲಸ ಮಾಡುತ್ತಿದೆ. ಹಾಲಿನ ದರ ಏರಿಸುವ ವಿಷಯ ಕ್ಯಾಬಿನೆಟ್ ಮುಂದಿದೆ. ಹಾಲಿನ ದರ ಸಬ್ಸಿಡಿ ರೈತರಿಗೆ ಕೊಡಿ. ಆದರೆ, ಜನರ ಮೇಲೆ ಯಾಕೆ ಹೊರೆ ಹಾಕುತ್ತೀರಿ? ನಿಮಗೆ ಯೋಗ್ಯತೆ ಇಲ್ಲದಿದ್ದರೆ ಬಿಟ್ಟು ಹೋಗಿ ಎಂದು ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.

    ಬೆಂಗಳೂರಿನಲ್ಲಿ ಮಾತಾಡಿದ ಅವರು, ಗ್ಯಾರಂಟಿಗಳನ್ನು ಘೋಷಿಸಿದ್ದೀರಿ. ಎಲ್ಲದರ ಬೆಲೆಗಳನ್ನೂ ಹೆಚ್ಚಿಸಿದ್ದೀರಿ. ಕಾನೂನು, ಸಂವಿಧಾನದಲ್ಲಿ ಇಲ್ಲದ ಮುಸ್ಲಿಮರಿಗೆ ಶೇ.4 ಮೀಸಲಾತಿ ನೀಡುವ ಮಸೂದೆ ಮಂಜೂರು ಮಾಡಿಕೊಂಡಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅದು ಊರ್ಜಿತ ಆಗುವುದಿಲ್ಲ ಎಂಬುದು ಅವರಿಗೂ ಗೊತ್ತಿದೆ. ಒಂದು ಕಡೆ ಕೊಟ್ಟಂತಿರಬೇಕು. ಆದರೆ, ಅದು ಕೈ ಸೇರಬಾರದು. ಇದು ನಿಮ್ಮ ದುರುದ್ದೇಶ ಎಂದು ಟೀಕಿಸಿದರು.

    ದಲಿತರನ್ನು ನಿರಂತರ ವಂಚಿಸುತ್ತ ಬಂದ ಸರ್ಕಾರ. ಇದೀಗ ಅಲ್ಪಸಂಖ್ಯಾತರನ್ನೂ ವಂಚಿಸಲು ಮುಂದಾಗಿದೆ. ದಲಿತರಿಗೆ ಮೀಸಲಿಟ್ಟ 39 ಸಾವಿರ ಕೋಟಿ ಆ ಜನಾಂಗಗಳಿಗೆ ತಲುಪದಂತೆ ಮಾಡಿದ್ದೀರಿ. ಈಗ ಅಲ್ಪಸಂಖ್ಯಾತರನ್ನೂ ವಂಚಿಸಲು ಹೊರಟಿದ್ದೀರಿ ಎಂದು ಆರೋಪಿಸಿದರು.

  • ಅಲ್ಪಸಂಖ್ಯಾತರಿಗೆ ಗುತ್ತಿಗೆ ಮೀಸಲಾತಿಗೆ ವಿರೋಧ; ಪರಿಷತ್‌ನಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಜಟಾಪಟಿ

    ಅಲ್ಪಸಂಖ್ಯಾತರಿಗೆ ಗುತ್ತಿಗೆ ಮೀಸಲಾತಿಗೆ ವಿರೋಧ; ಪರಿಷತ್‌ನಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಜಟಾಪಟಿ

    ಬೆಂಗಳೂರು: ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಕೊಡೋದಕ್ಕೆ ‌ಬಿಜೆಪಿ ಪ್ರಬಲವಾಗಿ ವಿರೋಧಿಸಿದೆ. ವಿಧಾನ ಪರಿಷತ್ ‌ಕಲಾಪ‌ ಪ್ರಾರಂಭವಾಗುತ್ತಲೇ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಟ್ಟ ಬಗ್ಗೆ ಪ್ರಸ್ತಾಪ ಮಾಡಿದರು.

    ಸಂವಿಧಾನದಲ್ಲಿ ಧರ್ಮ ಆಧಾರಿತ ಗುತ್ತಿಗೆಗೆ ಅವಕಾಶ ಇಲ್ಲ. ಸರ್ಕಾರ ಗುತ್ತಿಗೆಯಲ್ಲಿ ಮೀಸಲಾತಿ ಕೊಡಲು ಮುಂದಾಗಿದೆ. ಇದಕ್ಕೆ ನಮ್ಮ ವಿರೋಧ ಇದೆ. ಗುತ್ತಿಗೆ ವಾಪಸ್ ಪಡೆಯಬೇಕು‌ ಎಂದು ಆಗ್ರಹಿಸಿದರು.

    ಛಲವಾದಿ ನಾರಾಯಣಸ್ವಾಮಿ ಮಾತಿಗೆ ಕಾಂಗ್ರೆಸ್ ಸದಸ್ಯ ಹರಿಪ್ರಸಾದ್‌, ಪಾಯಿಂಟ್ ಅರ್ಡರ್ ಎತ್ತಿ ವಿರೋಧ ವ್ಯಕ್ತಪಡಿಸಿದರು. ಸಂವಿಧಾನದಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿಗೆ ಹಕ್ಕು ಇದೆ. ಅಲ್ಪಸಂಖ್ಯಾತರಿಗೆ ಹಕ್ಕು ಇದೆ. ಪೂರ್ವಾಗ್ರಹ ಪೀಡತವಾಗಿ ಕೆಲವರನ್ನ ದೂರ ಇಡೋದು ಸರಿಯಲ್ಲ. ಜನರು ತೆರಿಗೆ ಕಟ್ಟುವ ಹಣಕ್ಕೆ ದೇಶದ 140 ಕೋಟಿ ಜನರ ಪ್ರತಿಯೊಬ್ಬರಿಗೂ ಹಕ್ಕು ಇದೆ. ಯಾರ ಮೇಲೂ ದ್ವೇಷದ ಭಾವನೆಯಲ್ಲಿ ಮಾತಾಡೋದು ಸರಿಯಲ್ಲ. ಛಲವಾದಿ ನಾರಾಯಣಸ್ವಾಮಿ ಹೇಳಿದ ಮಾತು ಕಡತದಿಂದ ತೆಗೆಯಬೇಕು ಎಂದು ಆಗ್ರಹಿಸಿದರು.

    ಇದಕ್ಕೆ ಛಲವಾದಿ ನಾರಾಯಣಸ್ವಾಮಿ ವಿರೋಧ ವ್ಯಕ್ತಪಡಿಸಿದರು. ಅಲ್ಪಸಂಖ್ಯಾತರರಿಗೆ ಸೌಲಭ್ಯ ಕೊಡೋದ್ರಲ್ಲಿ ನಮ್ಮ ವಿರೋಧ ಇಲ್ಲ. ಧರ್ಮದ ಆಧಾರದಲ್ಲಿ ಮೀಸಲಾತಿ ‌ಕೊಡೋದು ಸರಿಯಲ್ಲ. ಇದಕ್ಕೆ ನಮ್ಮ ವಿರೋಧ ಇದೆ. ಧರ್ಮದ ಆಧಾರದಲ್ಲಿ ಮೀಸಲಾತಿಗೆ ನಮ್ಮ ವಿರೋಧ ಇದೆ ಎಂದರು.

    ಸಿಟಿ ರವಿ ಮಾತನಾಡಿ, ಕೆ.ಎಂ.ಮುನ್ಷಿ ಹೇಳಿಕೆ ಪ್ರಸ್ತಾಪ ಮಾಡಿದರು. ಧರ್ಮ ಆಧಾರಿತ ಮೀಸಲಾತಿಗೆ ಅವಕಾಶ ಇಲ್ಲ ಎಂದು ಹೇಳಿದರು. ಧರ್ಮದ ಆಧಾರದಲ್ಲಿ ಮೀಸಲಾತಿ ಕೊಡಬಾರದು ಅಂತ ಕಾನ್ಸ್ಟಿಟ್ಯೂಷನ್ ಅಸೆಂಬ್ಲಿಯಲ್ಲಿ ಮುನ್ಷಿ ಹೇಳಿದ್ರು. ಸುಪ್ರೀಂ ಕೋರ್ಟ್ ಕೂಡಾ ಧರ್ಮದ ಆಧಾರದಲ್ಲಿ ಮೀಸಲಾತಿ ಕೊಡಬಾರದು ಅಂತ ಕೇಳಿತ್ತು ಅಂತ ಹರಿಪ್ರಸಾದ್‌‌ಗೆ ತಿರುಗೇಟು ‌ಕೊಟ್ಟರು. ಈ ವೇಳೆ ‌ಬಿಜೆಪಿ-ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಆಡಳಿತ-ವಿಪಕ್ಷಗಳ ನಡುವೆ ಗಲಾಟೆ ಶುರುವಾಯ್ತು. ಬಳಿಕ ಚರ್ಚೆಗೆ ನೋಟಿಸ್ ಕೊಡಿ‌, ಅವಕಾಶ ಕೊಡೋದಾಗಿ ಗಲಾಟೆಗೆ ಉಪ ಸಭಾಪತಿಗಳು ತೆರೆ ಎಳೆದರು.

  • ಮುಸ್ಲಿಂ ಮನಸ್ಥಿತಿ ಹೊಂದಿರುವ ಹಿಂದೂಗಳಿಂದ ದೇಶಕ್ಕೆ ಗಂಡಾಂತರ: ಛಲವಾದಿ ನಾರಾಯಣಸ್ವಾಮಿ

    ಮುಸ್ಲಿಂ ಮನಸ್ಥಿತಿ ಹೊಂದಿರುವ ಹಿಂದೂಗಳಿಂದ ದೇಶಕ್ಕೆ ಗಂಡಾಂತರ: ಛಲವಾದಿ ನಾರಾಯಣಸ್ವಾಮಿ

    – ನಮ್ಮ ಸರ್ಕಾರ ಬಂದಾಗ ಯಾರನ್ನು ಎಲ್ಲಿ ಇಡಬೇಕೋ ಅಲ್ಲಿ ಇಡ್ತೀವಿ: ಬಿಜೆಪಿ ನಾಯಕ

    ಬೆಂಗಳೂರು: ಮುಸ್ಲಿಮರಿಂದ ದೇಶಕ್ಕೆ ಗಂಡಾಂತರ ಬರುತ್ತೆ ಅಂತ ನಾನು ಹೇಳಲ್ಲ. ಆದರೆ, ಮುಸ್ಲಿಂ ಮನಸ್ಥಿತಿ ಹೊಂದಿರುವ ಈ ಹಿಂದೂಗಳಿಂದ ದೇಶಕ್ಕೆ ಗಂಡಾಂತರ ಬರಲಿದೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ನೀಡಿದ್ದಾರೆ.

    ಮುಸ್ಲಿಮರಿಗೆ ಗುತ್ತಿಗೆ ಮೀಸಲಾತಿ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು, ಹಿಂದೆಯೂ ಮುಸ್ಲಿಮರಿಗೆ 4% ಮೀಸಲಾತಿ ಇತ್ತು. ಸಂವಿಧಾನದ ಪ್ರಕಾರ ಧಾರ್ಮಿಕ ಮೀಸಲಾತಿ ಕೊಡಲು ಅವಕಾಶ ಇಲ್ಲ. ಬೊಮ್ಮಾಯಿ ಸಿಎಂ ಇದ್ದಾಗ ಮುಸ್ಲಿಮರ ಮೀಸಲಾತಿ ಹಿಂದಕ್ಕೆ ಪಡೆಯಲಾಯಿತು. ಕಾಂಗ್ರೆಸ್ ನವ್ರು ಬಂದ ಮೇಲೆ ಮುಸ್ಲಿಮರಿಗೆ ಮೀಸಲಾತಿ ಕೊಡೋದಾಗಿ ಹೇಳಿದ್ರು. ಇದರ ಭಾಗವಾಗಿ ಈಗ ಗುತ್ತಿಗೆಯಲ್ಲೂ ಮೀಸಲಾತಿ ಕೊಡಲು ಮುಂದಾಗಿದ್ದಾರೆ. ಇದರ ವಿರುದ್ಧ ನಾವು ಸದನದ ಒಳಗೆ ಮತ್ತು ಹೊರಗೆ ಹೋರಾಡ ಮಾಡ್ತೇವೆ. ನಮ್ಮ ರಾಷ್ಟ್ರೀಯ ನಾಯಕರೂ ಇದು ದೇಶ ವಿರೋಧಿ ನಡೆ ಅಂದಿದ್ದಾರೆ. ಇದು ಓಲೈಕೆ ರಾಜಕಾರಣ, ದೇಶಕ್ಕೆ ಗಂಡಾಂತರ ತರುವ ಕೆಲಸ ಎಂದು ತಿಳಿಸಿದ್ದಾರೆ.

    ಒಳಮೀಸಲಾತಿ ಬಗ್ಗೆ ಪ್ರತಿಕ್ರಿಯಿಸಿ, ಒಳಮೀಸಲಾತಿ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟ. ಒಳಮೀಸಲಾತಿಯನ್ನು ಪರಿಶಿಷ್ಟ ವರ್ಗಕ್ಕೆ ಕೊಡಲೇಬೇಕು. ತೆಲಂಗಾಣದಲ್ಲಿ ಈಗಾಗಲೇ ಘೋಷಣೆ ಆಗಿದೆ. ಆದರೆ, ರಾಜ್ಯ ಸರ್ಕಾರ ವಿಳಂಬ ಮಾಡ್ತಿದೆ. ಒಳಮೀಸಲಾತಿ ಕೊಡಲೇಬೇಕು. ಆದಷ್ಟು ಬೇಗ ಸರ್ಕಾರ ತೀರ್ಮಾನ ಕೈಗೊಳ್ಳಲಿ. ಒಳಮೀಸಲಾತಿಗೆ ಆಗ್ರಹಿಸಿ ಪಾದಯಾತ್ರೆ ಕೂಡಾ ನಡೀತಿದೆ ಎಂದಿದ್ದಾರೆ.

    ಅಲ್ಪಸಂಖ್ಯಾತರು ಎಂದರೆ ಕೇವಲ ಮುಸ್ಲಿಮರು ಅಲ್ಲ ಎಂಬ ಡಿಕೆಶಿ ಹೇಳಿಕೆ ಕುರಿತು ಮಾತನಾಡಿ, ಜೈನರನ್ನೆಲ್ಲಾ ನೆಪ ಮಾಡಿಕೊಂಡಿದ್ದಾರೆ ಅವರು ಅಷ್ಟೇ. ಆದರೆ ಅವರ ಉದ್ದೇಶ ಕೇವಲ ಮುಸ್ಲಿಮರನ್ನು ಗಮನದಲ್ಲಿಟ್ಟುಕೊಂಡು ಮೀಸಲು ಕೊಡೋದಾಗಿದೆ. ತುಷ್ಟೀಕರಣದ ಭಾಗವಾಗಿ ಇದು ನಡೀತಿದೆ. ನಮ್ಮ ಸರ್ಕಾರ ಬಂದಾಗ ಯಾರನ್ನು ಎಲ್ಲಿ ಇಡಬೇಕು ಇಡ್ತೇವೆ ಎಂದು ಟಾಂಗ್ ಕೊಟ್ಟಿದ್ದಾರೆ.

    ಬಿಡದಿಯಲ್ಲಿ ದೇಶ ವಿರೋಧ ಬರಹ ಪತ್ತೆ ಬಗ್ಗೆ ಪ್ರತಿಕ್ರಿಯಿಸಿ. ರಾಜ್ಯದಲ್ಲಿ ಇಂದು ಕಾನೂನು ಸುವ್ಯವಸ್ಥೆ ಕೆಟ್ಟಿದೆ. ತನ್ನದೇ ಆದ ಶಕ್ತಿ ಕೆಲವರಿಗೆ ಬಂದಿದೆ. ಈ ಸರ್ಕಾರ ಓಲೈಕೆ ಮಾಡಲು ಮುಂದಾಗಿದೆ. ಅದನ್ನ ಅವರು ಈ ರೀತಿ ದುರ್ಬಳಕೆ ಮಾಡಿಕೊಳ್ತಿದ್ದಾರೆ. ನಮ್ಮನ್ನ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಅಂತ ಅಂದುಕೊಂಡಿದ್ದಾರೆ. ಸರ್ಕಾರ ತನ್ನ ಕಾರ್ಯಕರ್ತರನ್ನ ಕಾಪಾಡಿಕೊಳ್ಳಬೇಕು. ಕಾರ್ಯಕರ್ತರ ಜೇಬು ತುಂಬಬೇಕು. ದೇಶ, ರಾಜ್ಯಕ್ಕಿಂತ ಕಾರ್ಯಕರ್ತರೇ ಹೆಚ್ಚು ಅಂತ ಹೊರಟಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • ಯೂನಿವರ್ಸಿಟಿ ಮುಚ್ಚುವ ಬದಲು ಕಾಂಗ್ರೆಸ್ ಪಕ್ಷವನ್ನೇ ಮುಚ್ಚಿ ಬಿಡಿ: ಛಲವಾದಿ ನಾರಾಯಣಸ್ವಾಮಿ

    ಯೂನಿವರ್ಸಿಟಿ ಮುಚ್ಚುವ ಬದಲು ಕಾಂಗ್ರೆಸ್ ಪಕ್ಷವನ್ನೇ ಮುಚ್ಚಿ ಬಿಡಿ: ಛಲವಾದಿ ನಾರಾಯಣಸ್ವಾಮಿ

    – ರಾಜ್ಯ ಸರ್ಕಾರದಿಂದ ಖಜಾನೆಗೆ ಕನ್ನ ಹಾಕುವ ಕೆಲಸ

    ಬೆಂಗಳೂರು: ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬದಲು ನಿಮ್ಮ ಕಾಂಗ್ರೆಸ್ (Congress) ಪಕ್ಷವನ್ನೇ ಮುಚ್ಚಿಬಿಡಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅವರು ಆಗ್ರಹಿಸಿದ್ದಾರೆ.

    ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಬಿಜೆಪಿ-ಜೆಡಿಎಸ್ (BJP – JDS) ಪಕ್ಷಗಳ ಪ್ರತಿಭಟನೆ ವೇಳೆ ಅವರು ಮಾತನಾಡಿದರು. ಈ ವೇಳೆ, ಕಾಂಗ್ರೆಸ್ ಮುಚ್ಚಿಬಿಟ್ಟರೆ ದೇಶಕ್ಕೇನೂ ಆಗುವುದಿಲ್ಲ. ಕಾಂಗ್ರೆಸ್ ಇರುವವರೆಗೆ ಈ ದೇಶಕ್ಕೆ ಅಭಿವೃದ್ಧಿ, ನೆಮ್ಮದಿ ಇಲ್ಲ. ಆ ಪಕ್ಷ ದೇಶಕ್ಕೆ ಗಂಡಾಂತರ ತರುವ ಕೆಲಸ ಮಾಡುತ್ತಿದೆ. ಕಾರ್ಯಕರ್ತರಿಗೆ ಖಜಾನೆ ಹಣವನ್ನು ಕೊಡಲು ನಾವು ಬಿಡುವುದಿಲ್ಲ. ಇದನ್ನು ಸಂವಿಧಾನದ ಅಡಿಯಲ್ಲಿ ಕೊಡ್ತಾ ಇದ್ದೀರಾ? ಇದನ್ನು ಕೂಡಲೇ ನಿಲ್ಲಿಸಿ ಎಂದು ಆಗ್ರಹಿಸಿದ್ದಾರೆ.

    ಗ್ಯಾರಂಟಿ ಅನುಷ್ಠಾನ ಸಮಿತಿಗಳು ಕಾನೂನುಬಾಹಿರ ಮತ್ತು ಅಸಾಂವಿಧಾನಿಕವಾಗಿವೆ. ಸಂವಿಧಾನದಂತೆ ಕೆಲಸ ಮಾಡುವುದು ಸರ್ಕಾರದ ಕರ್ತವ್ಯ. ಅವು ಸಾಂವಿಧಾನಿಕ ಹುದ್ದೆಗಳಲ್ಲ. ಆದ್ದರಿಂದ ಕೈಬಿಡಲೇಬೇಕು ಎಂದು ಒತ್ತಾಯಿಸಿದ್ದಾರೆ.

    ಕಾಂಗ್ರೆಸ್ಸಿನವರು ಖಜಾನೆಗೆ ಕನ್ನ ಹಾಕುತ್ತಿದ್ದಾರೆ. ಪ್ರತಿಯೊಂದು ವಿಷಯಕ್ಕೆ ಕೇಳಿದರೂ ಹಣ ಇಲ್ಲ ಎನ್ನುತ್ತೀರಿ. ಅಂಗನವಾಡಿ ಕಾರ್ಯಕರ್ತರಿಗೆ ಹಣ ಕೊಡುತ್ತಿಲ್ಲ; 9 ಯುನಿವರ್ಸಿಟಿ ಮುಚ್ಚುತ್ತಿದ್ದಾರೆ. ಕಾರ್ಯಕರ್ತರನ್ನು ಕಾಪಾಡಲು ಕಾಂಗ್ರೆಸ್ಸಿನಲ್ಲಿ ಹಣ ಇಲ್ಲವಾದರೆ, ಖಜಾನೆಗೆ ಕನ್ನ ಹಾಕುವುದಲ್ಲ; ಯೂನಿವರ್ಸಿಟಿ ಮುಚ್ಚುವುದು ಸರಿಯಲ್ಲ. ದುಡ್ಡಿಲ್ಲ ಎಂದಾದರೆ ಕಾಂಗ್ರೆಸ್ ಕಚೇರಿಯನ್ನೇ ಮುಚ್ಚಿ ಬಿಡಿ ಎಂದು ಕಿಡಿಕಾರಿದ್ದಾರೆ.

    ಕಾಂಗ್ರೆಸ್ ಸರ್ಕಾರ ದಿನಕ್ಕೊಂದು ಹಗರಣ ಮಾಡಿ ಸಿಕ್ಕಿ ಹಾಕಿಕೊಳ್ಳುತ್ತಿದೆ. ಹಗರಣ ಸಂಬಂಧ ಉತ್ತರಿಸದೇ ವಾಮಮಾರ್ಗದಿಂದ ತಪ್ಪಿಸಿಕೊಳ್ಳುತ್ತಿದೆ. ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಪಾಲ್ಗೊಂಡ ಸಚಿವರು ಯಾರೆಂದು ಹೇಳಲಿ. ಕಾಂಗ್ರೆಸ್ಸಿನ ದುಂಡಾವರ್ತಿ ಕಥೆಗಳನ್ನು ಮಾನ್ಯ ರಾಜ್ಯಪಾಲರ ಮುಂದೆ ಬಿಚ್ಚಿ ಹೇಳಲಿದ್ದೇವೆ ಎಂದು ಎಚ್ಚರಿಸಿದ್ದಾರೆ.

    ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಜೆಡಿಎಸ್ ವಿಧಾನ ಪರಿಷತ್ತಿನ ನಾಯಕ ಬೋಜೆಗೌಡ ಮತ್ತು ಬಿಜೆಪಿ-ಜೆಡಿಎಸ್ ಶಾಸಕರು ಹಾಗೂ ವಿಧಾನ ಪರಿಷತ್ತಿನ ಸದಸ್ಯರು ಭಾಗವಹಿಸಿದ್ದರು.

  • ರಾಜ್ಯಪಾಲರ ಬಾಯಲ್ಲಿ ಹಸಿ ಸುಳ್ಳು ಹೇಳಿಸಿದ ಸರ್ಕಾರ: ಬಿಜೆಪಿ ಟೀಕೆ

    ರಾಜ್ಯಪಾಲರ ಬಾಯಲ್ಲಿ ಹಸಿ ಸುಳ್ಳು ಹೇಳಿಸಿದ ಸರ್ಕಾರ: ಬಿಜೆಪಿ ಟೀಕೆ

    ಬೆಂಗಳೂರು: ರಾಜ್ಯಪಾಲರಿಗೆ (Governor) ಅಪಮಾನ ಮಾಡಿರುವ ಕಾಂಗ್ರೆಸ್ ಸರ್ಕಾರ (Congress Government) ಕೊನೆಗೆ ಅವರಿಂದಲೇ ಹೊಗಳಿಸಿಕೊಳ್ಳಬೇಕಾಯಿತು. ರಾಜ್ಯಪಾಲರಿಂದ ಸರ್ಕಾರ ಸುಳ್ಳು ಭಾಷಣ ಮಾಡಿಸಿದೆ ಎಂದು ಬಿಜೆಪಿ ನಾಯಕರು (BJP Leaders) ಟೀಕಿಸಿದರು.

    ರಾಜ್ಯಪಾಲರ ಭಾಷಣ ಬಳಿಕ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra), ಈ ಸರ್ಕಾರ್ ನಟ್ ಮತ್ತು ಬೋಲ್ಟ್ ಎರಡೂ ಸಡಿಲ ಆಗಿದೆ ಎಂಬುದು ಸ್ಪಷ್ಟ. ಅಭಿವೃದ್ಧಿ ವಿಷಯದಲ್ಲಿ ಈ ಸರಕಾರದ ನಟ್ ಮತ್ತು ಬೋಲ್ಟ್ ಲೂಸ್ ಆಗಿದೆ. ಇದು ಮಾನ್ಯ ರಾಜ್ಯಪಾಲರ ಭಾಷಣದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಕಿಡಿ ಕಾರಿದರು.

    ಒಂದು ಕಡೆ ಹೈನುಗಾರಿಕೆಗೆ ಪ್ರೋತ್ಸಾಹಧನದ ಪ್ರಸ್ತಾಪ ಮಾಡಿದ್ದಾರೆ. ಸಾವಿರಾರು ಕೋಟಿ ಹಳೆಯ ಪ್ರೋತ್ಸಾಹಧನ ಹಾಗೇ ಬಾಕಿ ಉಳಿಸಿಕೊಂಡಿದ್ದಾರೆ. ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು 90 ಸಾವಿರ ಕೋಟಿ ರೂ. ಖರ್ಚು ಮಾಡುವುದಾಗಿ ಹೇಳಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಎಷ್ಟು ಮೀಸಲಿಟ್ಟಿದ್ದಾರೆ? ಎಷ್ಟು ಖರ್ಚಾಗಿದೆ ಎಂದು ಪ್ರಶ್ನಿಸಿದರು.

    ರಾಜ್ಯಪಾಲರ ಭಾಷಣ ಕೇಳಿಸಿಕೊಂಡರೆ ರಾಜ್ಯಪಾಲರ ಸಮಯವನ್ನು ಕೂಡ ಈ ಸರ್ಕಾರ ವ್ಯರ್ಥ ಮಾಡಿದೆ. ಅಭಿವೃದ್ಧಿಯ ವೇಗವನ್ನು ಚುರುಕುಗೊಳಿಸುವುದರಲ್ಲಿ ಮತ್ತು ಸರಕಾರದ ಹಣಕಾಸಿನ ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂಬ ಹಸಿಸುಳ್ಳನ್ನು ಈ ಕಾಂಗ್ರೆಸ್ ಸರಕಾರವು ರಾಜ್ಯಪಾಲರ ಬಾಯಲ್ಲಿ ಹೇಳಿಸಿದೆ ಎಂದು ವಿಜಯೇಂದ್ರ ಟೀಕಿಸಿದರು. ಇದನ್ನೂ ಓದಿ: ರಾಮ ಮಂದಿರದ ಮೇಲೆ ಹ್ಯಾಂಡ್ ಗ್ರೆನೇಡ್ ದಾಳಿಗೆ ಸಂಚು – ಶಂಕಿತ ಭಯೋತ್ಪಾದಕ ಅರೆಸ್ಟ್

    ವಿರೋಧ ಪಕ್ಷದ ನಾಯಕ ಆರ್. ಅಶೋಕ್‌ (R Ashok) ಅವರು ಮಾತನಾಡಿ, ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ಕಳಪೆ ಸಾಧನೆ ಮಾಡಿದ ಸರಕಾರ ಇದೆಂದು ದೂರಿದರು. ಆದರೆ, ಮಾನ್ಯ ಗವರ್ನರ್ ಕೈಯಲ್ಲಿ ತಾವೇನೋ ಚಾಂಪಿಯನ್ ಎಂಬಂತೆ ಹೇಳಿಕೊಂಡಿದ್ದಾರೆ. ಇದಕ್ಕೆ ಕಾಂಗ್ರೆಸ್ ಸರಕಾರಕ್ಕೆ ನಾಚಿಕೆ ಆಗಬೇಕು ಎಂದು ನುಡಿದರು.

    ಒಂದು ರೀತಿಯ ಪಾಪರ್ ಚೀಟಿ ಎತ್ತಿಕೊಂಡ ಈ ಸರಕಾರವು ಕೇವಲ ಸುಳ್ಳುಗಳನ್ನು ಪಟ್ಟಿ ಮಾಡಿ ಗೌರವಾನ್ವಿತ ರಾಜ್ಯಪಾಲರ ಕಡೆಯಿಂದ ಹೇಳಿಸಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅವರು ಆಕ್ಷೇಪಿಸಿದರು.

     

  • ಗುತ್ತಿಗೆ ಶುಶ್ರೂಷಾಧಿಕಾರಿಗಳ ಬೇಡಿಕೆ ಸದನದಲ್ಲಿ ಪ್ರಸ್ತಾಪ: ಛಲವಾದಿ ನಾರಾಯಣಸ್ವಾಮಿ

    ಗುತ್ತಿಗೆ ಶುಶ್ರೂಷಾಧಿಕಾರಿಗಳ ಬೇಡಿಕೆ ಸದನದಲ್ಲಿ ಪ್ರಸ್ತಾಪ: ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ. ಇವತ್ತಾ ನಾಳೆಯಾ ಎಂಬ ಪರಿಸ್ಥಿತಿಗೆ ಅದು ತಲುಪಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿದರು.

    ಫ್ರೀಡಂ ಪಾರ್ಕಿನಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕರ್ನಾಟಕ ರಾಜ್ಯ ಗುತ್ತಿಗೆ ನರ್ಸ್‌ಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದಡಿ ಹೋರಾಟ ನಡೆಸುತ್ತಿರುವ ಶುಶ್ರೂಷಾಧಿಕಾರಿಗಳ (Nurses Protest) ನೋವಿನಲ್ಲಿ ನನಗೂ ಪಾಲಿದೆ. ನಿಮ್ಮ ಹೋರಾಟದಲ್ಲಿ ನಾನೂ ಜೊತೆಗೂಡುವೆ ಎಂದರು.

    ಸದನದಲ್ಲಿ ನಿಮ್ಮ ಸಮಸ್ಯೆಗಳನ್ನು ಪಟ್ಟಿ ಮಾಡಿ ಈ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತೇನೆ. ನಿಮ್ಮ ಸದಸ್ಯನ ರೂಪದಲ್ಲಿ ಅಲ್ಲಿ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು. ಸಂಸದ ಡಾ. ಮಂಜುನಾಥ್ (Dr Manjunath) ಅವರಿಂದ ನಿಮ್ಮ ಬೇಡಿಕೆಗಳ ಕುರಿತಂತೆ ವಿವರ ಪಡೆದುಕೊಳ್ಳುವೆ ಎಂದು ಹೇಳಿದರು.

    ಮುಖ್ಯಮಂತ್ರಿಗಳ ಜೊತೆ ಮಾತನಾಡುವೆ. ಆರೋಗ್ಯ ಸಚಿವರ ಆರೋಗ್ಯ ಸರಿಯಾದರೆ ಅವರ ಜೊತೆಗೂ ಮಾತನಾಡುವೆ ಎಂದು ತಿಳಿಸಿದರು. ಅವರು ವೈದ್ಯರೇನೂ ಅಲ್ಲ. ಆರೋಗ್ಯ ಸಚಿವರಾಗುವ ಯೋಗ್ಯತೆ ಅವರಲ್ಲಿಲ್ಲ ಎಂದು ವ್ಯಂಗ್ಯವಾಡಿದರು. ದನಗಳಿಗೆ ಕೊಡುವ ಔಷಧಿಯನ್ನೂ ಜನರಿಗೆ ಕೊಡುತ್ತಿದ್ದಾರೆ. ಕಳಪೆ ಔಷಧಿ ಖರೀದಿಸುವ ಕೆಲಸವನ್ನೂ ಮಾಡುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.

    ಸಂಸದ ಡಾ. ಮಂಜುನಾಥ್ ಅವರು ಮಾತನಾಡಿ, ನಾವು ನಿಮ್ಮ ಜೊತೆ ಇದ್ದೇವೆ. ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಿಸುವುದು, ಖಾಯಂ ಮಾಡುವ ಬಗ್ಗೆ ಒತ್ತಾಯಿಸುತ್ತೇವೆ. ನರ್ಸ್‍ಗಳು, ತಂತ್ರಜ್ಞರು ಸೇರಿ ವೈದ್ಯೇತರ ಸಿಬ್ಬಂದಿ ಅತ್ಯಂತ ಅನಿವಾರ್ಯ ಎಂದು ತಿಳಿಸಿದರು.

  • ಗ್ರೇಟರ್ ಬೆಂಗಳೂರು ಮಾಡಿ ಕೆಂಪೇಗೌಡ ಕಟ್ಟಿದ ನಾಡನ್ನ ಛಿದ್ರ ಮಾಡೋಕೆ ಕಾಂಗ್ರೆಸ್ ಮುಂದಾಗಿದೆ: ಛಲವಾದಿ

    ಗ್ರೇಟರ್ ಬೆಂಗಳೂರು ಮಾಡಿ ಕೆಂಪೇಗೌಡ ಕಟ್ಟಿದ ನಾಡನ್ನ ಛಿದ್ರ ಮಾಡೋಕೆ ಕಾಂಗ್ರೆಸ್ ಮುಂದಾಗಿದೆ: ಛಲವಾದಿ

    – ಬೆಂಗಳೂರು ಅಭಿವೃದ್ಧಿ ಮಾಡೋಕೆ ಆಗಲ್ಲ ಅಂದ್ರೆ ರಾಜೀನಾಮೆ ಕೊಡಿ ಎಂದು ವಾಗ್ದಾಳಿ

    ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ರೇಟರ್ ಬೆಂಗಳೂರು ಪ್ರಸ್ತಾಪಕ್ಕೆ ಬಜೆಪಿ ವಿರೋಧ ಮಾಡಿದೆ. ಈ ಸಂಬಂಧ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸರ್ಕಾರದ ನಡೆ ಖಂಡಿಸಿದರು.

    ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬಿಬಿಎಂಪಿ ಚುನಾವಣೆ ಅಗಬೇಕಿತ್ತು‌. ಹೀಗೆ ಚುನಾವಣೆ ಮುಂದೂಡೋದ್ರಿಂದ ಪ್ರಜಾಪ್ರಭುತ್ವಕ್ಕೆ ಚ್ಯುತಿ ಬರುತ್ತದೆ. ಬ್ರ್ಯಾಂಡ್ ಬೆಂಗಳೂರು ಅಂದೋರು ಈಗ ಯಾಕೆ ಗ್ರೇಟರ್ ಬೆಂಗಳೂರು ಅಂತಿದ್ದೀರಾ. ಬ್ರ್ಯಾಂಡ್ ಬೆಂಗಳೂರು ಮಾಡಲು ಆಗದವರು‌ ಗ್ರೇಟರ್ ಬೆಂಗಳೂರು ಮಾಡ್ತಾರಾ ಎಂದು ಪ್ರಶ್ನಿಸಿದರು.

    ಇದು ಸರಿಯಾದ ಕ್ರಮ ಅಲ್ಲ. ಗ್ರೇಟರ್ ಬೆಂಗಳೂರು ಮಾಡಿ ಕೆಂಪೇಗೌಡ ಕಟ್ಟಿದ ಬೆಂಗಳೂರನ್ನ ಛಿದ್ರ ಮಾಡೋಕೆ ಕಾಂಗ್ರೆಸ್ ಹೊರಟಿದೆ. ಬೆಂಗಳೂರನ್ನ ಒಗ್ಗಟ್ಟಾಗಿ ಇಡೋ ಕೆಲಸ ಆಗಬೇಕು. ವಿಚಿತ್ರಕಾರಿ ಜನ ಬೆಂಗಳೂರಿಗೆ ಬಂದು ಹಾಳು ಮಾಡಿದ್ದು ಆಯ್ತು. ಬೆಂಗಳೂರನ್ನ ಸುಭದ್ರಗೊಳಿಸಬೇಕು. ಅದು ಬಿಟ್ಟು 6, 7 ಭಾಗ ಮಾಡ್ತೀವಿ. 6 ಮೇಯರ್ ಮಾಡ್ತೀವಿ ಅನ್ನೋದು ಸರಿಯಲ್ಲ. ಗ್ರೇಟರ್ ಬೆಂಗಳೂರಿಗೆ ನಮ್ಮ ವಿರೋಧ ಇದೆ ಎಂದರು‌.

    ದೇವರೇ ಬಂದರು ಬೆಂಗಳೂರು ಅಭಿವೃದ್ಧಿ ಮಾಡೋಕೆ ಆಗಲ್ಲ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕೈಲಾಗದವರು ಮೈ ಪರಚಿಕೊಂಡ ರೀತಿ ಇವರದ್ದು ಆಗಿದೆ. ಬೆಂಗಳೂರನ್ನ ಹಾಗೆ ಮಾಡ್ತೀವಿ ಹೀಗೆ ಮಾಡ್ತೀವಿ ಅಂತ ಸುಳ್ಳು ಹೇಳಿ ಅಧಿಕಾರಕ್ಕೆ ಬಂದವರು ಇವರು.ಅವರು ಕೊಟ್ಟ ಗ್ಯಾರಂಟಿಗೆ ವಾರಂಟಿ ಇಲ್ಲದ ಹಾಗೇ ಆಗಿದೆ.ಇವರು ನಮ್ಮನ್ನ ಗ್ಯಾರಂಟಿ ಒಂದೇ ಕಾಪಾಡುತ್ತೆ ಅಂತ ಅಂದುಕೊಂಡಿದ್ದಾರೆ. ದೇವರು ಬಂದರೂ ಅಭಿವೃದ್ಧಿ ಮಾಡೋಕೆ ಆಗಲ್ಲ ಅಂದರೆ ನೀವು ಯಾಕೆ ಅಧಿಕಾರದಲ್ಲಿ ಇದ್ದೀರಾ? ಅಧಿಕಾರ ಬಿಟ್ಟು ತೊಲಗಿ ಹೋಗಿ. ರಾಜೀನಾಮೆ ಕೊಟ್ಟುಬಿಡಿ. ಇಷ್ಟು ದಿನ ಬೆಂಗಳೂರನ್ನ ನೀವೇ ಕಾಪಾಡಿರೋದಾ? ನಿಮ್ಮಿಂದ ಆಗಿಲ್ಲ ಅಂದರೆ ಅಧಿಕಾರ ಬಿಟ್ಟು ಹೋಗಿ ಅಂತ ಕಾಂಗ್ರೆಸ್ ವಿರುದ್ದ, ಡಿಕೆಶಿ ವಿರುದ್ದ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು