Tag: chalavadi narayanaswamy

  • ಕೊಪ್ಪಳದ ಗವಿಸಿದ್ದಪ್ಪ ಕೊಲೆ ಕೇಸನ್ನ NIAಗೆ ವಹಿಸಿ – ಛಲವಾದಿ ನಾರಾಯಣಸ್ವಾಮಿ

    ಕೊಪ್ಪಳದ ಗವಿಸಿದ್ದಪ್ಪ ಕೊಲೆ ಕೇಸನ್ನ NIAಗೆ ವಹಿಸಿ – ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ಕೊಪ್ಪಳದ (Koppal) ಗವಿಸಿದ್ದಪ್ಪ (Gavisiddappa) ಕೊಲೆ ಕೇಸನ್ನು ಎನ್‌ಐಎಗೆ (NIA) ವಹಿಸಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಒತ್ತಾಯಿಸಿದರು.

    ಬಿಜೆಪಿ (BJP) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ನಾವು ಹೇಳುತ್ತಾ ಬಂದಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರ ಎಮ್ಮೆ ಚರ್ಮದ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಅವರ ಮನಸ್ಥಿತಿ ಕೂಡ ಹಾಗೆ ಇದೆ. ಕರಾವಳಿಯಲ್ಲಿ ಹಿಂದೂ ಕಾರ್ಯಕರ್ತರ ಕೊಲೆ ಹೆಚ್ಚಾಗಿ ಆಗುತ್ತಿತ್ತು. ಆದರೆ ಈಗ ಅದನ್ನ ಮೀರಿ ಬೀದರ್‌ನಿಂದ ಬೆಂಗಳೂರಿನವರೆಗೂ ವ್ಯಾಪಿಸಿದೆ. ಆ.3ರಂದು ಕೊಪ್ಪಳದಲ್ಲಿ ಹಿಂದೂ ಕಾರ್ಯಕರ್ತ ಗವಿಸಿದ್ದಪ್ಪ ನಾಯಕ್ ಎಂಬ ಯುವಕನ ಕೊಲೆ ಆಗಿದೆ. ಪರಿಶಿಷ್ಟ ವರ್ಗಕ್ಕೆ ಸೇರಿದ ವ್ಯಕ್ತಿ ಆತ. ಈತನನ್ನ ಸಾದಿಕ್ ಹಾಗೂ ಐದಾರು ಜನ ಸೇರಿ ಮಸೀದಿಯ ಮುಂಭಾಗ ಕೊಲೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಕಿಡಿಕಾರಿದರು.ಇದನ್ನೂ ಓದಿ: ಆಪರೇಷನ್‌ ಸಿಂಧೂರಕ್ಕೆ ಜೈಶ್‌ ನೆಲೆಗಳು ಉಡೀಸ್‌ – ಪುನರ್‌ ನಿರ್ಮಾಣಕ್ಕೆ ನಿಧಿ ಕೋರಿದ ಉಗ್ರ ಸಂಘಟನೆ

    ಇದು ಸುಹಾಸ್ ಶೆಟ್ಟಿ ಮಾದರಿಯ ಕೊಲೆ. ಪೊಲೀಸರು ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕಿತ್ತು. ಕೊಲೆಗೂ ಎರಡು ದಿನ ಮುಂಚೆ ಆರೋಪಿ ತಲ್ವಾರ್ ಹಿಡಿದುಕೊಂಡಿದ್ದ. ಆರೋಪಿ ಯಾವಾಗಲೂ ಹೈವೇಯಲ್ಲಿ ವ್ಹೀಲಿಂಗ್ ಮಾಡ್ತಿದ್ದ. ಗಾಂಜಾ ಹೊಡೆಯೋದು, ಹೊಗೆ ಬಿಡೋದು ಮಾಡ್ತಿದ್ದ. ಆದರೂ ಈ ಕೇಸ್ ಮುಚ್ಚಿ ಹಾಕೋ ಪ್ರಯತ್ನ ಆಗ್ತಿದೆ. ಬಾನುವನ್ನು ಯಾಕೆ ಪೊಲೀಸರು ಬಂಧನ ಮಾಡಿಲ್ಲ. ಜಿಲ್ಲಾ ಮಂತ್ರಿಗಳು ಈವರೆಗೂ ಹೋಗಿಲ್ಲ ಎಂದು ಆರೋಪಿಸಿದರು.

    ಬಳ್ಳಾರಿ ಸಾಕಿದ ನಾಯಿ ಕೊಪ್ಪಳಕ್ಕೆ (Koppal) ಬಂದಿದೆ ಅಂತ ಶ್ರೀರಾಮುಲುಗೆ ಫರೀದ್ ಎಂಬಾತ ಹೇಳಿದ್ದಾನೆ. ಪೊಲೀಸ್ ಇಲಾಖೆ ಕತ್ತೆ ಕಾಯ್ತಿದೆಯಾ? ಬಿಜೆಪಿ ಕಾರ್ಯಕರ್ತರು ಅಂದರೆ ಅವರ ಮೇಲೆ ಕೇಸ್ ಹಾಕ್ತೀರಾ. ಇಂತಹ ವಿಷಯಗಳು ಪೊಲೀಸರಿಗೆ ಕಾಣೋದಿಲ್ಲವಾ? ಪೊಲೀಸ್ ಇಲಾಖೆ, ಉಸ್ತುವಾರಿ ಸಚಿವರ ವಿರುದ್ಧ ಹರಿಹಾಯ್ದರು.

    ಒಲೈಕೆ ರಾಜಕೀಯ ಎಷ್ಟು ದಿನ ಮಾಡ್ತೀರಾ? ವೋಟ್‌ಬ್ಯಾಂಕ್‌ಗಾಗಿ ಮಾಡ್ತಿರೋದು ಜನರ ಪ್ರಾಣ ತೆಗೆದುಕೊಳ್ತಿದೆ. ಇದಕ್ಕಾಗಿ ಬಿಜೆಪಿ ದೊಡ್ಡ ಹೋರಾಟ ಮಾಡುತ್ತದೆ. ಆ.10, 11ರಂದು ಕೊಪ್ಪಳದಲ್ಲಿ ಪ್ರತಿಭಟನೆ ಮಾಡೋ ಚಿಂತನೆ ಆಗಿದೆ. ಸುಹಾಸ್ ಶೆಟ್ಟಿ ಕೇಸ್‌ನಲ್ಲೂ ಇದೆ ಆಗಿದೆ. ಬಿಜೆಪಿ, ಆರ್‌ಎಸ್‌ಎಸ್, ಭಜರಂಗದಳದ ಕಾರ್ಯಕರ್ತರನ್ನ ಹೆದರಿಸೋ ಕೆಲಸ ಸರ್ಕಾರ ಮಾಡ್ತಿತ್ತು. ಎನ್‌ಐಎಗೆ ಕೊಟ್ಟ ಮೇಲೆ ತನಿಖೆ ಆಗ್ತಿದೆ. ಉತ್ತರ ಕರ್ನಾಟಕ ಭಾಗಕ್ಕೆ ಇದು ಹರಡಬಾರದು ಎನ್ನುವುದಾದರೆ ಈ ಕೇಸ್‌ನ್ನು ಎನ್‌ಐಎ ತನಿಖೆಗೆ ಕೊಡಿ ಎಂದರು.

    ಸಿಎಂ ಕೂಡಾ ಇವತ್ತು ಕೊಪ್ಪಳಕ್ಕೆ ಹೋಗಬೇಕಿತ್ತು. ಹವಾಮಾನ ಸಮಸ್ಯೆ ಅಂತ ಹೋಗಿಲ್ಲ. ಹವಾಮಾನ ಸರಿಯಾಗಿಯೇ ಇದೆ. ಈ ಕೊಲೆ ಸಂಬಂಧ ಉತ್ತರ ಕೊಡಬೇಕು ಅಂತ ಸಿಎಂ ಅಲ್ಲಿಗೆ ಹೋಗಿಲ್ಲ. ಸಿಎಂ ಪಲಾಯನವಾದ ಮಾಡೋ ಕೆಲಸ ಮಾಡಬಾರದು. ಈ ಕೇಸ್‌ನ್ನು ಎನ್‌ಐಎಗೆ ಕೊಡಬೇಕು. ಆ ಕುಟುಂಬಕ್ಕೆ ಪೊಲೀಸ್ ಭದ್ರತೆ ಕೊಡಬೇಕು. ಪರಿಹಾರ ಕೊಡಬೇಕು. ಕುಟುಂಬದ ಸದಸ್ಯರಿಗೆ ಉದ್ಯೋಗ ಕೊಡಬೇಕು ಎಂದು ಆಗ್ರಹಿಸಿದರು.ಇದನ್ನೂ ಓದಿ: ಕರ್ನಾಟಕ ಲೋಕಸಭೆ ಚುನಾವಣೆಯಲ್ಲಿ ಅಕ್ರಮವಾಗಿದೆ – ರಾಹುಲ್ ಗಾಂಧಿ ದಾಖಲೆ ಬಿಡುಗಡೆ ಮಾಡ್ತಾರೆ: ಸಚಿವ ಸುಧಾಕರ್

  • ಚುನಾವಣಾ ಅಕ್ರಮ ಆರೋಪ ಹಿನ್ನೆಲೆ ಕಾಂಗ್ರೆಸ್ ಪ್ರತಿಭಟನೆ; ರಾಹುಲ್ ಗಾಂಧಿಗೆ ಸರಣಿ ಪ್ರಶ್ನೆ ಕೇಳಿದ ಛಲವಾದಿ ನಾರಾಯಣಸ್ವಾಮಿ

    ಚುನಾವಣಾ ಅಕ್ರಮ ಆರೋಪ ಹಿನ್ನೆಲೆ ಕಾಂಗ್ರೆಸ್ ಪ್ರತಿಭಟನೆ; ರಾಹುಲ್ ಗಾಂಧಿಗೆ ಸರಣಿ ಪ್ರಶ್ನೆ ಕೇಳಿದ ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ಕೇಂದ್ರ ಚುನಾವಣಾ ಆಯೋಗದ (Election Commission) ಮೇಲೆ ಮತಗಳ್ಳತನ ಆರೋಪ ಮಾಡಿರುವ ರಾಹುಲ್ ಗಾಂಧಿ, ಆ.5 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ರಾಹುಲ್ ಗಾಂಧಿ (Rahul Gandhi) ಆರೋಪ ಮತ್ತು ಪ್ರತಿಭಟನೆ ಈಗ ಬಿಜೆಪಿಯ ವಿರೋಧಕ್ಕೆ ಕಾರಣವಾಗಿದೆ.

    ಪ್ರತಿಭಟನೆಗಾಗಿ ಬೆಂಗಳೂರಿಗೆ ರಾಹುಲ್ ಗಾಂಧಿ ಆಗಮನ ಹಿನ್ನೆಲೆಯಲ್ಲಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಎಕ್ಸ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ರಾಹುಲ್ ಗಾಂಧಿಗೆ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ. ಇದನ್ನೂ ಓದಿ: ತೇಜಸ್ವಿ ಯಾದವ್ ಆರೋಪ ಸುಳ್ಳು – ಕರಡು ಮತದಾರರ ಪಟ್ಟಿಯಲ್ಲಿ ಹೆಸರಿದೆ: ಚುನಾವಣಾ ಆಯೋಗ ಸ್ಪಷ್ಟನೆ

    ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಕಪಟ ನಾಟಕದ ‘ಸೂತ್ರದಾರ’ರಿದ್ದಾರೆ, ಅವರಿಂದ ಪ್ರೇರೇಪಿತರಾದ ನೀವು ‘ಪಾತ್ರದಾರಿ’ಯಾಗಿ ಕರ್ನಾಟಕಕ್ಕೆ ಬರುತ್ತಿದ್ದೀರಿ. ಇಲ್ಲಿಗೆ ಆಗಮಿಸುತ್ತಿರುವ ನಿಮಗೆ ಸ್ವಾಗತ ಕೋರುತ್ತೇನೆ. ದಯವಿಟ್ಟು ನನ್ನ ಈ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ, ನಂತರ ನೈತಿಕತೆ ಬೋಧಿಸುವ ಔದಾರ್ಯ ತೋರಿಸಿ. ನೀವು ಈ ಪ್ರಶ್ನೆಗಳಿಗೆ ಉತ್ತರ ನೀಡದೇ ಪ್ರತಿಭಟನೆ ನಡೆಸಿದರೆ, ನೀವು ಕಾಂಗ್ರೆಸ್ ಪಕ್ಷದ ನಾಯಕರಾಗಿ ಮತ್ತು ವಿರೋಧ ಪಕ್ಷದ ನಾಯಕರಾಗಿ ಮುಂದುವರೆಯುವ ಯೋಗ್ಯತೆ ನಿಮ್ಮಲ್ಲಿಲ್ಲ ಎಂಬ ಸಂದೇಶವೇ ಪ್ರಧಾನವಾಗುತ್ತದೆ ಎಂದು ಛಲವಾದಿ ಪೋಸ್ಟ್ ಹಾಕಿದ್ದಾರೆ.

    ಇತಿಹಾಸವನ್ನು ನೀವು ಮರೆಯಬೇಡಿ ಎಂದಿರುವ ಅವರು ರಾಹುಲ್ ಗಾಂಧಿಗೆ 13 ಪ್ರಶ್ನೆಗಳನ್ನು ಕೇಳಿದ್ದಾರೆ. ಇದನ್ನೂ ಓದಿ: ಚುನಾವಣಾ ಆಯೋಗ ಸಂಪೂರ್ಣ ಸತ್ತು ಹೋಗಿದ್ದು, ತನ್ನ ಸ್ವಾಯತ್ತತೆ ಕಳೆದುಕೊಂಡಿದೆ: ರಾಹುಲ್ ಗಾಂಧಿ

    ರಾಹುಲ್ ಗಾಂಧಿಗೆ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆಗಳೇನು?
    * ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಹಲವು ಚುನಾವಣೆಗಳಲ್ಲಿ ಸೋಲಿಸಲು ಕಾಂಗ್ರೆಸ್ ಪಕ್ಷ ಮತಗಳ್ಳತನ ಮಾಡಲಿಲ್ಲವೇ?
    * ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಸೋಲಿಸಲು ಕಾಂಗ್ರೆಸ್ ತೆಗೆದುಕೊಂಡ ನೈತಿಕ ಕಾರಣಗಳೇನು?
    * ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಪಕ್ಷವು ನೀಡಿದ ನಿರಂತರ ಅವಮಾನಗಳ ಹಿಂದಿರುವ ನಿಮ್ಮ ನಿಜವಾದ ನಿಲುವೇನು?
    * 1975 ರಲ್ಲಿ ನಿಮ್ಮ ಅಜ್ಜಿ ಇಂದಿರಾ ಗಾಂಧಿಯವರು ನ್ಯಾಯಾಲಯದ ತೀರ್ಪಿನ ಪ್ರಕಾರ ಅನರ್ಹರಾಗಲು ಕಾರಣಗಳೇನು? ಅನರ್ಹರಾಗದಂತೆ ನಡೆಸಿದ ಕಾನೂನು ಬದಲಾವಣೆಗಳು ಹಾಗೂ ತುರ್ತು ಪರಿಸ್ಥಿತಿ ಘೋಷಣೆಯ ಹಿಂದಿನ ಕಾರಣಗಳೇನು?
    * 1946 ರ ತಾತ್ಕಾಲಿಕ ಸರ್ಕಾರದ ಪ್ರಧಾನ ಮಂತ್ರಿ ಆಯ್ಕೆಯ ಸಂದರ್ಭದಲ್ಲಿ ಮಾನ್ಯ ನೆಹರೂ ಅವರಿಗೆ ಬೆಂಬಲ ಇರದಿದ್ದರೂ, ಅವರಿಗೆ ಅಧಿಕಾರ ಹೇಗೆ ಸಿಕ್ಕಿತು? ನೆಹರೂ ಅವರು ಶೂನ್ಯ ಮತಗಳನ್ನು ಪಡೆದಾಗಲೂ ಪ್ರಧಾನಿಯಾಗಲು ಆಗುವುದನ್ನು ಮತಗಳ್ಳತನವೆಂದರೆ ತಪ್ಪೆನಿಸುತ್ತದೆಯೇ?
    * ನೀವು ಹೇಳುವಂತೆ ಪ್ರಧಾನಿ ನರೇಂದ್ರ ಮೋದಿಯವರು ಮತಗಳ್ಳತನ ಮಾಡಿದ್ದರೆ, ನೀವು ವಿರೋಧ ಪಕ್ಷದ ನಾಯಕನಾಗಿ ಸದನದಲ್ಲಿ ಕುಳಿತುಕೊಳ್ಳುವ ಅವಕಾಶ ಸಿಗುತ್ತಿತ್ತೇ?
    * ಕರ್ನಾಟಕದಲ್ಲಿ ಪರಿಶಿಷ್ಟರ ಶ್ರೇಯೋಭಿವೃದ್ಧಿಗೆ ಮೀಸಲಾಗಿದ್ದ SCSP-TSP ಯೋಜನೆಯ 39,000 ಕೋಟಿ ಹಣವನ್ನು ರಾಜ್ಯ ಸರ್ಕಾರ ಕಳ್ಳತನ ಮಾಡಿದೆ. ಇದರ ವಿರುದ್ಧ ಯಾವಾಗ ಹೋರಾಟ ಮಾಡುತ್ತೀರಿ? ಕರ್ನಾಟಕದಲ್ಲಿ ಆಗಿರುವುದು ಮತಗಳ್ಳತನ ಅಲ್ಲ, ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣ ಕಳ್ಳತನ ಆಗಿದೆ. ನಿಮ್ಮ ಹೋರಾಟ ದಲಿತರಿಗೆ ನ್ಯಾಯ ಕೊಡಿಸಲಿಕ್ಕೆ ಇರಬೇಕೇ ಹೊರತು, ಅನ್ಯಾಯದ ಪರವಾಗಿ ಅಲ್ಲ.
    * ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂ. ಹಗರಣದ ಬಗ್ಗೆ ನೀವು ಯಾವಾಗ ಪ್ರತಿಭಟನೆ ಮಾಡುತ್ತೀರಿ?
    * ಮೈಸೂರು MUDA ದಲ್ಲಿ 14 ನಿವೇಶನ ಕಳ್ಳತನವಾಗಿತ್ತು, ನಂತರ ‘ಕಳ್ಳನಲ್ಲ’ ಎಂದು ವಾಪಸ್ ನೀಡಿದ ಪ್ರಕರಣದ ವಿರುದ್ಧ ನಿಮ್ಮ ಪ್ರತಿಕ್ರಿಯೆ ಏನು?
    * ಎಕರೆಗಟ್ಟಲೆ ಸಿಎ ಸೈಟ್ ಹಗರಣ, ರೈತರ ಆತ್ಮಹತ್ಯೆ, ಬಾಣಂತಿಯರ ಸಾವು, ಅಧಿಕಾರಿಗಳ ಆತ್ಮಹತ್ಯೆ — ಇವೆಲ್ಲವೂ ಕಾಂಗ್ರೆಸ್ ಸರ್ಕಾರದ ವಿಫಲತೆಗಳನ್ನು ತೋರಿಸುತ್ತಿಲ್ಲವೆ? ಇವುಗಳ ವಿರುದ್ಧದ ನಿಮ್ಮ ಹೋರಾಟ ಯಾವಾಗ?
    * RCB ವಿಜಯೋತ್ಸವದಲ್ಲಿ ಅಮಾಯಕರು ಮೃತಪಟ್ಟಿದ್ದು, ಕಾಂಗ್ರೆಸ್ ಸರ್ಕಾರದ ಅವ್ಯವಸ್ಥೆಯ ಕಾರಣದಿಂದಾಗಿಯೇ ಅಲ್ಲವೆ?
    * ಎಲ್ಲಾ ಇಲಾಖೆಗಳಲ್ಲಿಯೂ ಭ್ರಷ್ಟಾಚಾರ, ಸೀಮಿತ ಸಮುದಾಯಕ್ಕೆ ಒಲವು ತೋರುತ್ತಿರುವ ಓಲೈಕೆ ರಾಜಕಾರಣ, ರಾಜ್ಯದ ಆರ್ಥಿಕ ಸ್ಥಿತಿ ಕುಸಿತ – ಇದರ ವಿರುದ್ಧ ನೀವು ಯಾವಾಗ ಹೋರಾಟ ಮಾಡುತ್ತೀರಿ?
    * ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ, ಇದರ ವಿರುದ್ಧ ಯಾವಾಗ ಹೋರಾಟ ಮಾಡುತ್ತೀರಿ?

    ಈ ಎಲ್ಲಾ ಪ್ರಶ್ನೆಗಳಿಗೆ ನೈತಿಕ, ಸಾಂವಿಧಾನಿಕ ಉತ್ತರಗಳಿಲ್ಲದೆ ನೀವು ಪ್ರತಿಭಟನೆ ಮಾಡಿದರೆ, ಅದು ನಿಮ್ಮ ರಾಜಕೀಯದ ಕಪಟ ನಾಟಕವೇ ಹೊರತು, ಹೋರಾಟವಲ್ಲ. ನನ್ನ ಈ ಪ್ರಶ್ನೆಗಳಿಗೆ ನೀವು ಸ್ಪಷ್ಟವಾದ ಉತ್ತರಗಳನ್ನು ನೀಡಬೇಕು. ಇಲ್ಲವಾದರೆ, ನೀವು ನಡೆಸುತ್ತಿರುವ ಕಪಟ ನಾಟಕದ ಪ್ರತಿಭಟನೆಗೆ ನೀತಿಭಾರವಿಲ್ಲ. ನೀವು ನಿಜವಾಗಿಯೂ ಹೋರಾಟದ ಮನೋಭಾವ ಹೊಂದಿದ್ದರೆ, ಮೊದಲಿಗೆ ಮೋಸ, ವಂಚನೆ & ಅನ್ಯಾಯವನ್ನೇ ಸಿದ್ಧಾಂತವನ್ನಾಗಿ ಮಾಡಿಕೊಂಡಿರುವ ನಿಮ್ಮ ಕಾಂಗ್ರೆಸ್‌ನ ಒಳಗಣದ ದ್ವಂದ್ವ, ದ್ವಿಮುಖ ನೀತಿ ಮತ್ತು ಇತಿಹಾಸದ ದೋಷಗಳನ್ನು ಎದುರಿಸಿ, ನನ್ನ ಪ್ರಶ್ನೆಗಳಿಗೆ ಉತ್ತರ ನೀಡಿ. ನಂತರ ಹೋರಾಟ ನಡೆಸಿ. ನಿಮ್ಮ ಈ ಕಪಟ ಹೋರಾಟದಲ್ಲಿ ಕಾಂಗ್ರೆಸ್‌ನ ಬೌದ್ಧಿಕ ದಿವಾಳಿತನ ಎದ್ದು ಕಾಣಿಸುತ್ತಿದೆ ಎಂದು ಛಲವಾದಿ ಟೀಕಿಸಿದ್ದಾರೆ.

  • ಬೆಂಗಳೂರು ವಿಶ್ವವಿದ್ಯಾಲಯದ ಸಮಸ್ಯೆಗಳನ್ನ ಪರಿಹಾರ ಮಾಡಿ: ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು ವಿಶ್ವವಿದ್ಯಾಲಯದ ಸಮಸ್ಯೆಗಳನ್ನ ಪರಿಹಾರ ಮಾಡಿ: ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (Bengaluru University) ದಲಿತ ಅಧಿಕಾರಿಗಳು, ಪ್ರೊಫೆಸರ್‌ಗಳು, ಸಿಬ್ಬಂದಿ ಸಾಮೂಹಿಕ ರಾಜೀನಾಮೆ ನೀಡಿದ ವಿಚಾರ ಹಾಗೂ ವಿವಿ ಬಗ್ಗೆ ಅನೇಕ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಜ್ಞಾನಭಾರತಿ ಕ್ಯಾಂಪಸ್‌ಗೆ ಭೇಟಿ ನೀಡಿ ಪರಿಶೀಲನೆ ಮಾಡಿ, ವಿಸಿ, ಕುಲಸಚಿವರ ಜೊತೆ ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಅವರು, ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ವಿದ್ಯಾ ದೇಗುಲ. ನಾವು ಇದರ ಆಶ್ರಯದಲ್ಲಿ ಬಂದವರು. ಹಲವು ಕಾರಣಗಳಿಗೆ ಈ ವಿವಿ ನ್ಯೂಸ್ ಆಗ್ತಿತ್ತು. ಇತ್ತೀಚೆಗೆ ಯಾವುದೇ ಗೊಂದಲ ಇರಲಿಲ್ಲ. 2 ತಿಂಗಳ ಹಿಂದೆ ಕೆಲವು ಗೊಂದಲ ಆಗಿತ್ತು‌. SC ಸಮುದಾಯದ ಪ್ರೊಫೆಸರ್‌ಗಳು ರಾಜೀನಾಮೆ ಕೊಟ್ಟಿದ್ದರು. ಅದರ ಬಗ್ಗೆ ತಿಳಿದುಕೊಂಡಿದ್ದೇನೆ. ಅಂಬೇಡ್ಕರ್ ಅವರ ಅಧ್ಯಯನ ಪೀಠ ಸರಿಯಾಗಿ ಬಳಕೆ ಆಗಬೇಕು. ಬಸವ ಲಿಂಗಪ್ಪ ಪೀಠ ಇದುವರೆಗೂ ಸ್ಥಾಪನೆ ಆಗಿಲ್ಲ. ಅಂಬೇಡ್ಕರ್ ಬಗ್ಗೆ ಕಳೆದ ವಾರದಲ್ಲಿ ದೊಡ್ಡ ಗೊಂದಲದ ವಾತಾವರಣ ಸೃಷ್ಟಿ ಆಗಿತ್ತು. ಇದು ವಿವಿಯಲ್ಲಿ ಆಗಬಾರದು ಎಂದು ತಿಳಿಸಿದರು. ಇದನ್ನೂ ಓದಿ: ನಮ್ಮ ವಿಶ್ವವಿದ್ಯಾಲಯದಲ್ಲಿ ದಲಿತ ವಿರೋಧಿ ನೀತಿ ಇಲ್ಲ – ಬೆಂಗಳೂರು ವಿವಿಯಿಂದ ಸ್ಪಷ್ಟನೆ

    ಪ್ರೊಫೆಸರ್ ಒಬ್ಬರು ಬ್ಯಾಕ್ ಲ್ಯಾಗ್‌ನಲ್ಲಿ ಬಂದಿದ್ದರು. ಅಂಬೇಡ್ಕರ್ ಫೋಟೋವನ್ನು ಅವರು ಕಾಲಿಗೆ ತಾಗುವ ರೀತಿ ಇಟ್ಟುಕೊಂಡಿದ್ದರು. ಈ ಬಗ್ಗೆ ನಾನು ವಿಸಿ ಜೊತೆ ಮಾತಾಡಿದ್ದೇನೆ. ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದ್ದೇನೆ. ವಿವಿಯಲ್ಲಿರೋ ಇರೋ ಬ್ಯಾಕ್ ಲ್ಯಾಗ್ ಹುದ್ದೆ ಭರ್ತಿ ಮಾಡಬೇಕು. 1-2 ತಿಂಗಳಲ್ಲಿ ಎಲ್ಲಾ ಸಮಸ್ಯೆ ಪರಿಹಾರ ಮಾಡೋ ಭರವಸೆ ವಿಸಿ ಕೊಟ್ಟಿದ್ದಾರೆ. ವಿಸಿ ಬಗ್ಗೆ ಎಲ್ಲರೂ ಉತ್ತಮ ಅಭಿಪ್ರಾಯ ಕೊಟ್ಡಿದ್ದಾರೆ. ಒಂದು ವೇಳೆ ಸಮಸ್ಯೆ ಪರಿಹಾರ ಆಗದೇ ಹೋದ್ರೆ ಹೋರಾಟ ಮಾಡ್ತೀವಿ. ಸರ್ಕಾರದ ಗಮನಕ್ಕೆ ತರುತ್ತೇವೆ‌ ಎಂದರು.

    ವಿಶ್ವವಿದ್ಯಾಲಯದಲ್ಲಿ SC ಸಮುದಾಯಗಳಿಗೆ ಉನ್ನತ ಹುದ್ದೆ ಸಿಗುತ್ತಿಲ್ಲ ಅಂತ ಆರೋಪ ಇದೆ‌. ಅನುಭವ ಇರೋರನ್ನು ಅತಿಥಿ ಉಪನ್ಯಾಸಕರನ್ನು ಕೈ ಬಿಡಲಾಗಿದೆ. ಅವರನ್ನು ವಾಪಸ್ ತೆಗೆದುಕೊಳ್ಳಬೇಕು. ಸರ್ಕಾರಕ್ಕೆ ಒತ್ತಾಯ ಮಾಡ್ತೀನಿ, ಬೇರೆ ರಾಜ್ಯದ ಪ್ರೊಫೆಸರ್‌ಗಳಿಗೆ ನಮ್ಮ ವಿವಿಯಲ್ಲಿ ಅವಕಾಶ ಕೊಡಬೇಕು. ಬೇರೆ ವಿವಿ ಅವರಿಗೆ ಇಲ್ಲಿ ಅವಕಾಶ ಕೊಡಬಾರದು. ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರದ ಗಮನಕ್ಕೂ ನಾನು ತರುತ್ತೇನೆ ಎಂದರು.

    ಜಾತಿ ಪ್ರಭಾವ ವಿವಿಗಳಲ್ಲಿ ನಡೆಯಬಾರದು‌. ಇದು ರಾಜಕೀಯ ಮಾಡೋ ಜಾಗ ಅಲ್ಲ. ಇಲ್ಲಿ ಜಾತಿ ಪ್ರಭಾವ ಮಾಡೋದು, ಜಾತಿ ಒಡೆಯೋ ಕೆಲಸ ಯಾರು ಮಾಡಬಾರದು. ಬೇರೆ ಕಡೆಯಿಂದ ಪ್ರೊಫೆಸರ್‌ಗಳು ಉನ್ನತ ಹುದ್ದೆಗೆ ಬರೋದನ್ನ ಸರ್ಕಾರವೇ ತಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ವಿಶ್ವಾದ್ಯಂತ ಟಾಪ್ ವಿಜ್ಞಾನಿಗಳ ಪಟ್ಟಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ 8 ಪ್ರಾಧ್ಯಾಪಕರು

  • ಕಾಂಗ್ರೆಸ್‌ನವ್ರು ಗ್ಯಾರಂಟಿ ಹಣ ನೀಡದೇ ಜನರನ್ನು ಭಿಕ್ಷಕರು ಅನ್ಕೊಂಡಿದ್ದಾರೆ – ಛಲವಾದಿ

    ಕಾಂಗ್ರೆಸ್‌ನವ್ರು ಗ್ಯಾರಂಟಿ ಹಣ ನೀಡದೇ ಜನರನ್ನು ಭಿಕ್ಷಕರು ಅನ್ಕೊಂಡಿದ್ದಾರೆ – ಛಲವಾದಿ

    ಬೀದರ್: ಕಾಂಗ್ರೆಸ್‌ನವರು (Congress) ಗ್ಯಾರಂಟಿ ಹಣ ನೀಡದೇ ಜನರನ್ನು ಭಿಕ್ಷಕರು ಅಂದುಕೊಂಡಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಿಡಿಕಾರಿದ್ದಾರೆ.

    ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯರಂತ (CM Siddaramaiah) ಭ್ರಷ್ಟ ರಾಜಕಾರಣಿ ಮತ್ತೊಬ್ಬರಿಲ್ಲ. ಇಷ್ಟೊಂದು ನಾಚಿಕೆಗೆಟ್ಟ ವ್ಯಕ್ತಿ ನಾನು ಎಂದು ತೋರಿಸಿದ್ದು ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರ ಇಂದು ಪಾಪರ್ ಸರ್ಕಾರ ಆಗಿದೆ. ಸರ್ಕಾರ ನಡೆಸಲು ಮೂರು ಕಾಸಿಲ್ಲ. ಬಂದಿರುವ ಹಣ ಎಲ್ಲಿಗೆ ಹೋಗುತ್ತಿದೆ ಎಂದು ಗೊತ್ತಿಲ್ಲ. ಇಡೀ ದೇಶದಲ್ಲೇ ಕಾಂಗ್ರೆಸ್ ನಡೆಸಲು ಹಣವಿಲ್ಲ, ಆದ್ರೆ ಹೈಕಮಾಂಡ್ ರಾಜ್ಯ ಕಾಂಗ್ರೆಸ್‌ನ್ನು ಎಟಿಎಂ ಮಾಡಿಕೊಂಡಿದೆ ಎಂದರು.ಇದನ್ನೂ ಓದಿ: ಸೈಬರ್‌ ಪೊಲೀಸರ ಸೋಗಿನಲ್ಲಿ ಬ್ಲ್ಯಾಕ್‌ಮೇಲ್‌ – ಖರ್ತನಾಕ್‌ ಲೇಡಿ ಸೇರಿ 7 ಲಕ್ಷ ಸುಲಿಗೆ ಮಾಡಿದ್ದ ಐವರು ಅರೆಸ್ಟ್‌

    ಯಾರಿಗಾದ್ರು ಗ್ಯಾರಂಟಿ ಸಿಗುತ್ತಿದೆಯಾ, ಮೂರು ನಾಲ್ಕು ತಿಂಗಳಾದರೂ ಗ್ಯಾರಂಟಿ ಹಣ ಬರುತ್ತಿಲ್ಲ, ಕೇಳಿದರೆ ನಾವು ತಿಂಗಳಿಗೆ ಸಂಬಳ ಕೊಡುತ್ತಿಲ್ಲಾ ಎಂದು ಹೇಳುತ್ತಾರೆ. ಜನರಿಗೆ ಮೋಸ ಮಾಡುವ ಜೊತೆಗೆ ಅಪಮಾನ ಕೂಡ ಮಾಡುತ್ತಿದ್ದೀರಿ, ಕಾಂಗ್ರೆಸ್‌ನವರು ಗ್ಯಾರಂಟಿ ಹಣ ನೀಡದೆ ಜನರನ್ನು ಭಿಕ್ಷಕರು ಎಂದುಕೊಂಡಿದ್ದಾರೆ ಎಂದು ಹೇಳಿದರು.

    ಇನ್ನೂ ಬಿಜೆಪಿಯಲ್ಲಿ ಭಿನ್ನಮತಕ್ಕೆ ವಿಜಯೇಂದ್ರಗೆ ಹೈಕಮಾಂಡ್‌ನಿಂದ ಬುಲಾವ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮಲ್ಲಿ ಅಸಮಾಧಾನ ಎನ್ನುವ ಪ್ರಶ್ನೆ ಇಲ್ಲ. ಯಾರಿಗೆ ಬೇಕಾದರೂ ನಮ್ಮ ಹೈಕಮಾಂಡ್ ಬುಲಾವ್ ಕೊಡಬಹುದು. ಹೇಳೋದು, ಕೇಳೋದು, ವಿಚಾರ ವಿನಿಯಮ ಮಾಡೋದು ಇರುತ್ತದೆ. ಅದಕ್ಕಾಗಿ ವಿಜಯೇಂದ್ರರನ್ನು ಕರೆದಿದ್ದಾರೆ ಅಷ್ಟೇ. ಪಕ್ಷ ಹೇಗೆ ನಡೆಸಬೇಕು ಎಂದು ಸಲಹೆ, ಸೂಚನೆಗಾಗಿ ಕರೆದಿದ್ದಾರೆ ಎಂದು ತಿಳಿಸಿದರು.ಇದನ್ನೂ ಓದಿ: ಮುಂದೆ ರಾಮನಗರದಲ್ಲೇ ಚುನಾವಣೆಗೆ ನಿಲ್ಲುತ್ತೇನೆ – ನಿಖಿಲ್‌ ಕುಮಾರಸ್ವಾಮಿ

  • ಕಾಂಗ್ರೆಸ್ ಲೂಟಿಕೋರರ ಸರ್ಕಾರ, ಮಾನ ಮರ್ಯಾದೆ ಇದ್ದರೆ ಸಿಎಂ, ಡಿಕೆಶಿ ರಾಜೀನಾಮೆ ಕೊಡಲಿ: ಛಲವಾದಿ ನಾರಾಯಣಸ್ವಾಮಿ

    ಕಾಂಗ್ರೆಸ್ ಲೂಟಿಕೋರರ ಸರ್ಕಾರ, ಮಾನ ಮರ್ಯಾದೆ ಇದ್ದರೆ ಸಿಎಂ, ಡಿಕೆಶಿ ರಾಜೀನಾಮೆ ಕೊಡಲಿ: ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರ ಲೂಟಿಕೋರರ ಸರ್ಕಾರ. ಇದು ವ್ಯಾಪಾರಕ್ಕೆ ಕುಳಿತಿರೋ ಕಾಂಗ್ರೆಸ್ ಸಂತೆ ಸರ್ಕಾರ ಎಂದು ಸರ್ಕಾರದ ವಿರುದ್ಧ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ವಾಗ್ದಾಳಿ ನಡೆಸಿದ್ದಾರೆ.

    ಸರ್ಕಾರದ ವಿರುದ್ಧ ಶಾಸಕ ರಾಜು ಕಾಗೆ ಹಾಗೂ ಬಿಆರ್ ಪಾಟೀಲ್ (BR Patil) ಆರೋಪ ವಿಚಾರಕ್ಕೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದನ್ನು ನಾವು ಪದೇ ಪದೇ ಹೇಳುತ್ತಿದ್ದೆವು. ಈಗ ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ಹೇಳುತ್ತಿದ್ದಾರೆ. ರಾಯರೆಡ್ಡಿ ಕರ್ನಾಟಕ ನಂಬರ್ ಒನ್ ಭ್ರಷ್ಟಾಚಾರ ರಾಜ್ಯ ಎಂದು ಹೇಳಿದರು. ಈಗ ರಾಜು ಕಾಗೆ ಹೇಳಿದ್ದಾರೆ. ಸಿಎಂ ಹಾರಿಕೆ ಉತ್ತರ ಕೊಡುತ್ತಾರೆ. ಬಿ.ಆರ್ ಪಾಟೀಲ್ ವಸತಿ ಇಲಾಖೆಯಲ್ಲಿ ಅಕ್ರಮ ಅಂತ ಹೇಳಿದ್ದಾರೆ. ದುಡ್ಡು ಕೊಡದೆ ಏನು ಆಗಲ್ಲ ಎಂದು ಹೇಳಿದ್ದಾರೆ. ಸಿಎಂ ಅವರಿಗೂ ವಿವರಣೆ ಕೊಡುತ್ತೇನೆ ಎಂದು ಹೇಳಿದ್ದಾರೆ. ಮಂತ್ರಿಗಳ ವಿರುದ್ಧ ಕೋಲಾರದಲ್ಲಿ ತಿರುಗಿಬಿದ್ದಿದ್ದಾರೆ. ಜಮೀರ್ ರಾಜೀನಾಮೆ ಕೊಡಿಸಿ ಎಂದು ಬೇಳೂರು ಹೇಳಿದ್ದಾರೆ. ಗ್ಯಾರಂಟಿ ಬಗ್ಗೆ ದೇಶಪಾಂಡೆ ಹೇಳಿದ್ದಾರೆ. ಈ ಸರ್ಕಾರಕ್ಕೆ ಏನು ಬೇಕಿದೆ. ಇದು ಲೂಟಿ ಕೋರರ ಸರ್ಕಾರ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಾಂಬಾರ್ ಮಾಡುವ ವಿಚಾರಕ್ಕೆ‌ ಸ್ನೇಹಿತರ ನಡುವೆ ಗಲಾಟೆ – ಕೊಲೆಯಲ್ಲಿ ಅಂತ್ಯ

    ಸಿಎಂ, ಡಿಸಿಎಂ ಸತ್ಯ ಹೇಳಿದರೆ ಅವರ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಈ ಸರ್ಕಾರದಲ್ಲಿ ಹಣ ಕೊಡದೇ ಏನು ಆಗಲ್ಲ. ಇದು ವ್ಯಾಪಾರಕ್ಕೆ ಕೂತಿರುವ ಕಾಂಗ್ರೆಸ್ ಸಂತೆ ಸರ್ಕಾರ. ಇದು ವ್ಯಾಪಾರಕ್ಕೆ ಬಂದ ಸರ್ಕಾರ ಇದು. ನಮ್ಮ ಮೇಲೆ 40% ಪೇ ಸಿಎಂ ಅಂದರು, ಯೋಗ್ಯತೆಗೆ ಅದನ್ನ ಪ್ರೂವ್ ಮಾಡಿಲ್ಲ. ಸಿಎಂ, ಡಿಸಿಎಂಗೆ ನಾಚಿಕೆ ಆಗಲ್ವಾ. ಮಂತ್ರಿಗಳು ರಾಜೀನಾಮೆ ಕೊಡೋ ಬದಲು ಸಿಎಂ, ಡಿಸಿಎಂ ರಾಜೀನಾಮೆ ಕೊಟ್ಟು ತೊಲಗಿದರೆ ಬದಲಾವಣೆ ಕಾಣಬಹುದು. ಇವರೇ ಇದ್ದರೆ ಇವರು ಲೂಟಿ, ದರೋಡೆಗೆ ನಿಂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದುಡ್ಡು ಕೊಟ್ಟರೆ ಮಾತ್ರ ವರ್ಕ್‌ ಆರ್ಡರ್‌: ಬಿಆರ್‌ ಪಾಟೀಲ್‌ ಬಳಿಕ ರಾಜು ಕಾಗೆ ದಂಗೆ

    ಬಿಹಾರ ಚುನಾವಣೆಗೆ ಕಪ್ಪ ಕಾಣಿಕೆ ಕೊಡಬೇಕು. ಅದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಅನ್ನಿಸುತ್ತೆ. ಈ ಸರ್ಕಾರದಲ್ಲಿ ಪ್ರತಿಯೊಬ್ಬರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಸಿದ್ದರಾಮಯ್ಯಗೆ ಅವರೇ ನೀವು ಜನರಿಂದ ಛೀ ಥೂ ಅಂತ ಉಗಿಯುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಮಾನ ಮರ್ಯಾದೆ ಇದ್ದರೆ ತಕ್ಷಣ ರಾಜೀನಾಮೆ ಕೊಡಬೇಕು. ನಿತ್ಯ 2-3 ಹಗರಣ ಈ ಸರ್ಕಾರದಲ್ಲಿ ಆಗುತ್ತಿದೆ. ಇದೆಲ್ಲ ನೋಡಿದ್ರೆ ಈ ಸರ್ಕಾರದ ಆಯಸ್ಸು ಕಡಿಮೆ ಆಗುತ್ತಿದೆ ಅನ್ನಿಸುತ್ತೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: 40 ಸಾವಿರ ನೀಡಿದ್ರೂ ಶೋ ಸಿಕ್ಕಿಲ್ಲ – ಡ್ಯಾನ್ಸ್‌ ಆಯೋಜಕಿಗೆ ಪೋಷಕರ ತರಾಟೆ

  • ಸಿಎಂ, ಡಿಸಿಎಂ ತಲೆದಂಡದ ಬದಲು ಜಾತಿಗಣತಿ ಅಡ್ಡ ಇಟ್ಟ ಎಐಸಿಸಿ: ಛಲವಾದಿ ಕಿಡಿ

    ಸಿಎಂ, ಡಿಸಿಎಂ ತಲೆದಂಡದ ಬದಲು ಜಾತಿಗಣತಿ ಅಡ್ಡ ಇಟ್ಟ ಎಐಸಿಸಿ: ಛಲವಾದಿ ಕಿಡಿ

    – ಕಾಂಗ್ರೆಸ್ ದಿನಕ್ಕೊಂದಲ್ಲ, ಒಂದೇ ದಿನಕ್ಕೆ 3 ಹಗರಣ ಮಾಡ್ತಿದೆ

    ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದಲ್ಲಿ 11 ಸಾವಿಗೆ ಸಂಬಂಧಿಸಿದಂತೆ ಎಐಸಿಸಿ ಸಿಎಂ, ಡಿಸಿಎಂ ಅವರ ತಲೆದಂಡ ಮಾಡುತ್ತದೆ ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ ಜಾತಿಗಣತಿ ಅಡ್ಡ ಇಟ್ಟು ಜನರ ಗಮನ ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ವಾಗ್ದಾಳಿ ನಡೆಸಿದ್ದಾರೆ.

    ಬಿಜೆಪಿ (BJP) ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ (Congress) ಸರ್ಕಾರವು ಆರ್‌ಸಿಬಿ ಗೆಲುವಿನ ಪ್ರಯೋಜನ ಪಡೆಯಲು ಪಂದ್ಯ ಗೆಲ್ಲುವ ಮೊದಲೇ ಸಂಭ್ರಮಾಚರಣೆಗೆ ಪ್ಲ್ಯಾನ್‌ ಮಾಡಿತ್ತು. ಬಳಿಕ ಸಂಭ್ರಮ ಆಚರಿಸಲು ಹೋಗಿ 11 ಜನರ ಸಾವಿಗೆ ಕಾರಣವಾಯಿತು. ಇದೀಗ ಈ ಘಟನೆ ಇಡೀ ದೇಶದಲ್ಲಿ ಸುದ್ದಿಯಾಗಿದೆ. ನೂರಾರು ಜನರು ಗಾಯಗೊಂಡ ಈ ದುರ್ಘಟನೆಯ ಬಗ್ಗೆ ಬಿಜೆಪಿ, ದುರಂತವನ್ನು ಎಳೆ ಎಳೆಯಾಗಿ ಬಿಡಿಸಿ ಖಂಡಿಸಿದೆ. ಈ ಹಿನ್ನೆಲೆ ಎಐಸಿಸಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ದೆಹಲಿಗೆ ಕರೆಸಿಕೊಂಡಿದ್ದರು. ಇವರು ಮಾಡಿದ ಅಪರಾಧಕ್ಕೆ ಇವರಿಬ್ಬರ ತಲೆದಂಡವಾಗುತ್ತದೆ ಎಂದುಕೊಂಡಿದ್ದೆವು. ಅವರು ಜಾತಿಗಣತಿಯನ್ನು ಮುಂದಿಟ್ಟು ಜನರ ಗಮನ ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಬಿಜೆಪಿ ಯಾವುದೇ ಕಾರಣಕ್ಕೂ ಇವರ ವಿರುದ್ಧ ಹೋರಾಟ ನಿಲ್ಲಿಸುವುದಿಲ್ಲ, ಇವರಿಬ್ಬರೂ ಘಟನೆಯ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸುವವರೆಗೂ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: ವಿಧಾನಸೌಧದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು KSCA, RCB : ಸಿದ್ದರಾಮಯ್ಯ

    ಕಾಂಗ್ರೆಸ್ ಶಾಸಕರ ಮನೆ ಮೇಲೆ ಇಂದು ಇಡಿ ದಾಳಿಯಾಗಿದೆ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಹಣವನ್ನು ಕದ್ದು ತಿಂದಿದ್ದರು. ಶಾಸನ ಸಭೆಯಲ್ಲಿ ಮುಖ್ಯಮಂತ್ರಿಗಳು ಕೇವಲ 87 ಕೋಟಿ ರೂ. ಎಂದು ಒಪ್ಪಿಕೊಂಡಿದ್ದರು. ಭ್ರಷ್ಟಾಚಾರವನ್ನು ಒಪ್ಪಿಕೊಂಡ ನಂತರವೂ ಅಧಿಕಾರದಲ್ಲಿ ಮುಂದುವರೆದಿರುವುದು ನಾಚಿಕೆಗೇಡಿನ ಸಂಗತಿ ಎಂದು ವ್ಯಂಗ್ಯವಾಡಿದ್ದಾರೆ.

    ಇ.ಡಿ ದಾಳಿಗೊಳಗಾದ ಜನನಾಯಕರು ಯರ‍್ಯಾರು? ಎಷ್ಟೆಷ್ಟು ಬಳಸಿದ್ದಾರೆ? ಎಂಬ ವಿವರ ಸಿಕ್ಕಿದೆ, ಈ ಪ್ರಕರಣದಲ್ಲಿ ಅಧಿಕಾರಿ ಚಂದ್ರಶೇಖರ್ ಮರಣ ಹೊಂದಿದ್ದು, ಇವರ ಸಾವಿನ ಬಗ್ಗೆ ಸರ್ಕಾರ ಒಂದು ದಿನವೂ ಪ್ರಸ್ತಾಪ ಮಾಡಿಲ್ಲ. ಯಾರೆಲ್ಲ ಈ ಅಪರಾಧದಲ್ಲಿ ಪಾಲ್ಗೊಂಡಿದ್ದಾರೋ ಅವರೆಲ್ಲರ ಸದಸ್ಯತ್ವವು ರದ್ದಾಗುತ್ತದೆ. ಸೋಮವಾರ ಇ.ಡಿ ಬಿಡುಗಡೆ ಮಾಡಿದ ಪತ್ರದಲ್ಲಿ ಮುಡಾದಲ್ಲಿ 400 ಕೋಟಿ ರೂ.ಗಳ ಆಸ್ತಿಯನ್ನು ವಶಪಡಿಸಿಕೊಂಡಿರುವ ಬಗ್ಗೆ ಉಲ್ಲೇಖಿಸಿದೆ. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರವನ್ನು ದೂರುತ್ತಿದ್ದಾರೆ. ಜನರ ಗಮನ ಬೇರೆಡೆಗೆ ಸೆಳೆಯಲು ಪ್ರಯತ್ನ ಮಾಡಬಾರದು. ಬಿಜೆಪಿ, ಈ ಕಾಲ್ತುಳಿತದ ಪ್ರಕರಣವನ್ನು ಬಿಡುವ ಪ್ರಶ್ನೆಯೇ ಇಲ್ಲ, ಸರ್ಕಾರವು ತಮ್ಮ ಭ್ರಷ್ಟಾಚಾರ ಮತ್ತು ಕಾಲ್ತುಳಿತದ ಪ್ರಕರಣವನ್ನು ಒಪ್ಪಿಕೊಂಡು ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದ್ದಾರೆ.

    ಕಾಂಗ್ರೆಸ್ ಸರ್ಕಾರವು ದಿನಕ್ಕೊಂದು ಹಗರಣವಲ್ಲ, ಒಂದೇ ದಿನಕ್ಕೆ ಮೂರು ಹಗರಣಗಳನ್ನು ಮಾಡುತ್ತಿದೆ. ಸರ್ಕಾರದಲ್ಲಿರುವವರು ಮುಖಭಂಗ, ಅವಮಾನವನ್ನೆಲ್ಲ ಗಾಳಿಗೆ ತೂರಿ, ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ. ಸರ್ಕಾರ ಎಲ್ಲಾ ತರದ ತಪ್ಪುಗಳನ್ನು ಮಾಡಿ, ನಾಚಿಕೆ, ಮಾನ-ಮರ್ಯಾದೆ ಬಿಟ್ಟು ಏನೂ ಆಗಿಲ್ಲವೆಂದು ವರ್ತಿಸುತ್ತಿದೆ. ಇವರು ತಪ್ಪು ಮಾಡಿದ್ದಕ್ಕಾಗಿಯೇ ಇ.ಡಿ ಮತ್ತು ಸಿಬಿಐ ತನಿಖೆ ಮಾಡಲು ಬರೋದು? ಇವರು ತಪ್ಪು ಮಾಡಿಲ್ಲವೆಂದರೆ ತನಿಖಾ ಸಂಸ್ಥೆಗಳು ಏಕೆ ಬರುತ್ತವೆ? ಎಂದು ಪ್ರಶ್ನಿಸಿದ್ದಾರೆ.ಇದನ್ನೂ ಓದಿ: ಗಲಾಟೆಗೆ ಕೇಸ್ ಇಲ್ಲದೇ ರೌಡಿಶೀಟರ್ ಓಪನ್, ಕೊಲೆಗಳಿಗೆ ಅದೆಷ್ಟು ರೌಡಿಶೀಟರ್ ತೆರೆದಿದ್ದೀರಿ? – ರೇವಣ್ಣ ಕಿಡಿ

  • ಕಾಲ್ತುಳಿತ ಪ್ರಕರಣಕ್ಕೆ ಸಿಎಂ, ಡಿಸಿಎಂ ನೇರ ಹೊಣೆ: ಚಲವಾದಿ ನಾರಾಯಣಸ್ವಾಮಿ

    ಕಾಲ್ತುಳಿತ ಪ್ರಕರಣಕ್ಕೆ ಸಿಎಂ, ಡಿಸಿಎಂ ನೇರ ಹೊಣೆ: ಚಲವಾದಿ ನಾರಾಯಣಸ್ವಾಮಿ

    – ನಿಮ್ಮ ಪ್ರಚಾರದ ತೆವಲಿಗೆ ಅಮಾಯಕರ ಜೀವ ಹೋಗಿದೆ

    ಬೆಂಗಳೂರು: ಕಾಲ್ತುಳಿತ ಪ್ರಕರಣಕ್ಕೆ (Chinnaswamy Stampede) ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ನೇರ ಹೊಣೆ, ತಕ್ಷಣ ಇವರು ರಾಜೀನಾಮೆ ಕೊಡಬೇಕು ಎಂದು ಪರಿಷತ್‌ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಗ್ರಹಿಸಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿಮ್ಮ ತೆವಲಿಗಾಗಿ 11 ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಯಾರೇ ಸತ್ತರು ಹತ್ತು ಲಕ್ಷ ಬಿಸಾಕಿ ನಮಗೇನು ಗೊತ್ತಿಲ್ಲ ಅಂತಾ ಸುಮ್ಮನೆ ಇರೋದು. ಅದೇ ರೌಡಿ ಶೀಟರ್ ಗೆ ಆದರೆ 25 ಲಕ್ಷ ರೂ. ಪರಿಹಾರ, ನಮ್ಮ ಆನೇ ಹೋಗಿ ತುಳಿದಿದ್ದಕ್ಕೆ ಕೇರಳದವರಿಗೆ 25 ಲಕ್ಷ ರೂ. ಕೊಟ್ಟಿದ್ದಾರೆ ಎಂದು ಚಲವಾದಿ ನಾರಾಯಣಸ್ವಾಮಿ ಆಕ್ರೋಶ ಹೊರ ಹಾಕಿದರು.

    ಸಿಎಂ, ಡಿಸಿಎಂ ಅವರಿಂದ ಇಡೀ ರಾಜ್ಯವೇ ಸೂತಕದಲ್ಲಿದೆ. ಜನರ ಉದ್ದಾರಕ್ಕಾಗಿ ಸರ್ಕಾರ ಬಂದಿಲ್ಲ, ಸರ್ವನಾಶಕ್ಕೆ ಬಂದಿದೆ ಎಂದು ಸಿಟ್ಟು ಹೊರಹಾಕಿದರು. ಇದನ್ನೂ ಓದಿ: Stampede Case | ಮೃತಪಟ್ಟ 11 ಸಂತ್ರಸ್ತರ ಕುಟುಂಬಳಿಗೆ RCB ಆಡಳಿತ ಮಂಡಳಿಯಿಂದ ತಲಾ 10 ಲಕ್ಷ ರೂ. ಪರಿಹಾರ ಘೋಷಣೆ

    ನಾಲ್ಕೈದು ಜನರು ಸತ್ತ ನಂತರ ಸಿದ್ದರಾಮಯ್ಯ ಎಲ್ಲಿ ಹೋಗಿದ್ರು? ಜನಾರ್ದನ ಹೋಟೆಲ್ ಗೆ ಬಾದಾಮಿ ಹಲ್ವಾ ಮತ್ತೆ ದೋಸೆ ತಿನ್ನೋಕೆ ಹೋಗಿದ್ದರು. ಒಂದು ಕ್ರಿಕೆಟ್ ತಂಡದಲ್ಲಿ 11 ಜನ ಇದ್ದಂತೆ, ಒಂದು ತಂಡದಷ್ಟು ಜನರನ್ನು ಬಲಿ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.

    ವಿಧಾನಸೌಧವನ್ನು ಇವರು ಡಬ್ಬಾ ಅಂಗಡಿ ಮಾಡಿ ಇಟ್ಟುಕೊಂಡಿದ್ದಾರೆ. ಅನೇಕರ ತಿಥಿಗಳು, ಜನ್ಮದಿನಾಚರಣೆಗಳು ಇಲ್ಲಿ ಆಗುತ್ತಿವೆ. ನಿಮ್ಮ ಬೇಜವಾಬ್ದಾರಿಯಿಂದ ದುರಂತ ಸಂಭವಿಸಿದೆ ಎಂದು ದೂರಿದರು.

  • ಕೇಸ್‌ನಿಂದ ಬಾಯಿ ಮುಚ್ಚಿಸಲು ಸಾಧ್ಯವಾಗದು, ಮಾನನಷ್ಟ ಮೊಕದ್ದಮೆಯ ನಾಟಕ ಬಿಡಿ: ಛಲವಾದಿ

    ಕೇಸ್‌ನಿಂದ ಬಾಯಿ ಮುಚ್ಚಿಸಲು ಸಾಧ್ಯವಾಗದು, ಮಾನನಷ್ಟ ಮೊಕದ್ದಮೆಯ ನಾಟಕ ಬಿಡಿ: ಛಲವಾದಿ

    ಬೆಂಗಳೂರು: ಕಾಂಗ್ರೆಸ್ಸಿನವರು ಮಾನನಷ್ಟ ಮೊಕದ್ದಮೆಯ ನಾಟಕವನ್ನು ಬಿಟ್ಟು ಬಿಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ(Chalavadi Narayanswamy) ಎಂದು ಹೇಳಿದರು.

    ಬೆಂಗಳೂರಿನಲ್ಲಿ(Bengaluru) ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲು ಸರ್ಕಾರಕ್ಕೆ ಯಾವುದೇ ನೈತಿಕತೆ ಇಲ್ಲ. ಸರ್ಕಾರದ 5 ಗ್ಯಾರಂಟಿಗಳೂ ಅರ್ಧಕ್ಕರ್ಧ ಜನರಿಗೆ ಮುಟ್ಟಿಲ್ಲ. ಆದರೂ, 5 ಗ್ಯಾರಂಟಿಗಳ ಹೆಸರಿನಲ್ಲಿ 5 ವರ್ಷ ದೂಡಿ ಹೋಗಬೇಕೆಂಬ ಯೋಚನೆಯಲ್ಲಿ ಕಾಂಗ್ರೆಸ್(Congress) ಸರ್ಕಾರ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಕರ್ನಾಟಕ ಸಿಜೆ ಸೇರಿ ಮೂವರ ಹೆಸರು ಸುಪ್ರೀಂ ಕೋರ್ಟ್ ಜಡ್ಜ್ ನೇಮಕಕ್ಕೆ ಶಿಫಾರಸು

    ಯಾವುದೇ ಸಾಧನೆ ಮಾಡದೆ 2 ವರ್ಷ ಕಳೆದಿದ್ದಾರೆ. ಸಾಧನೆ ಇಲ್ಲದ ವೇದನಾ ಸಮಾವೇಶ ಮಾಡಿದ್ದಾಗಿ ಮೊದಲೇ ಹೇಳಿದ್ದೇವೆ. ಬೆಂಗಳೂರಿನ ಮಳೆಯಿಂದ ಆದ ಹಾನಿ ಪರಿಸ್ಥಿತಿ ನೋಡಲಿಲ್ಲ. ಮಳೆಯಿಂದ 5 ಜನರು ಮರಣ ಹೊಂದಿದರೂ ಗಮನಿಸಲಿಲ್ಲ. ನಿಮಗೆ ಜನರ ಪ್ರಾಣ, ಮಾನ ಮುಖ್ಯವಲ್ಲ. ಕೇವಲ ಅಧಿಕಾರ ಮಾತ್ರ ಮುಖ್ಯ ಎಂಬುದನ್ನು ತೋರಿಸಿಕೊಡುತ್ತಾ ಹೋಗುತ್ತಿದ್ದೀರಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಮೈಸೂರು ರಾಜಮನೆತನಕ್ಕೆ ಟಿಡಿಆರ್ ನೀಡಲು ಸುಪ್ರೀಂ ಆದೇಶ – ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರದಿಂದ ಅರ್ಜಿ

    ಇವತ್ತು ನಮ್ಮ ವಿರುದ್ಧ ಮೊಕದ್ದಮೆ ಹೂಡಿದ್ದೀರಿ. ನಮ್ಮ ಸರ್ಕಾರ ಇದ್ದಾಗ ನೀವು ಸುಳ್ಳು ಆರೋಪ ಮಾಡಿದ್ದೀರಿ. ನಿಮ್ಮ ಸರ್ಕಾರವು ಬೆಳಗ್ಗೆ ಎದ್ದು ಬಳಸುವ ಹಾಲಿನಿಂದ ಆಲ್ಕೋಹಾಲಿನವರೆಗೆ ಎಲ್ಲಾ ದರಗಳನ್ನೂ ಹೆಚ್ಚಿಸಿದೆ. ಅದನ್ನೇ ನಾವು ಹೇಳಿದ್ದೇವೆ. ಇದರಲ್ಲಿ ಸುಳ್ಳಿದೆಯೇ? ಹೆಚ್ಚಿಸಿದ ಹಾಲಿನ ದರವನ್ನು ರೈತರಿಗೆ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮಂಡ್ಯ | ಟ್ರಾಫಿಕ್‌ ಪೊಲೀಸರ ಯಡವಟ್ಟಿನಿಂದ ಪ್ರಾಣಬಿಟ್ಟ ಮಗು – ಮೂವರು ASI ಸಸ್ಪೆಂಡ್‌

    ಪೆಟ್ರೋಲ್ ದರ, ದವಸ-ಧಾನ್ಯಗಳ ದರ ಏರಿಸಿದ್ದೀರಿ. ಸ್ಟಾಂಪ್ ಡ್ಯೂಟಿ ಏರಿಸಿದ್ದೀರಿ. ಕಸಕ್ಕೆ ತೆರಿಗೆ ವಿಧಿಸಿದ್ದೀರಿ. ನೀರಿಗೆ ಟ್ಯಾಕ್ಸ್ ಹಾಕಿದ್ದೀರಿ. ಇದಲ್ಲದೆ ನಮ್ಮ ಮೇಲೆ 40% ಭ್ರಷ್ಟಾಚಾರದ ಆರೋಪ ಮಾಡಿದ್ದೀರಿ. ಈಗ ಅವರೇ, ಕಾಂಗ್ರೆಸ್ ಮೇಲೆ 60% ಭ್ರಷ್ಟಾಚಾರದ ಆರೋಪ ಮಾಡುತ್ತಾರೆ. ಅವರ ಮುಂದೆ ನೀವು ಬೆತ್ತಲಾಗಿದ್ದೀರಿ. ನಾವು ನ್ಯಾಯಾಲಯಕ್ಕೆ ಗೌರವ ಕೊಡುತ್ತೇವೆ. ಕೇಸಿನ ವಿರುದ್ಧ ಹೋರಾಟ ಮಾಡುತ್ತೇವೆ. ಇದರಿಂದ ನೀವು ನಮ್ಮ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು.

  • ಛಲವಾದಿ ನಾರಾಯಣಸ್ವಾಮಿ ನಾಯಿ ಅಲ್ಲ, ನಿಮ್ಮ ಮೇಲೆ ಅಪಾರ ಗೌರವವಿದೆ – ಪ್ರದೀಪ್ ಈಶ್ವರ್

    ಛಲವಾದಿ ನಾರಾಯಣಸ್ವಾಮಿ ನಾಯಿ ಅಲ್ಲ, ನಿಮ್ಮ ಮೇಲೆ ಅಪಾರ ಗೌರವವಿದೆ – ಪ್ರದೀಪ್ ಈಶ್ವರ್

    – ದಲಿತ ರಾಜಕಾರಣಿಗಳ ಮೇಲೆಯೇ ದಾಳಿಯೇಕೆ? ಎಂದು ಕಿಡಿ

    ಬೆಂಗಳೂರು: ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅವರು ನಾಯಿ ಅಲ್ಲ, ನಿಮ್ಮಂತೆ ನಾನು ನಿಮ್ಮನ್ನ ನಾಯಿ ಎನ್ನುವುದಿಲ್ಲ. ನಿಮ್ಮೇಲೆ ನಮಗೆ ಗೌರವವಿದೆ. ನಮಗೆ ಸಂಸ್ಕೃತಿ ಅನ್ನೋದಿದೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಟಾಂಗ್ ಕೊಟ್ಟಿದ್ದಾರೆ.

    ಮಾಧ್ಯಮದವರೊಂದಿಗೆ ಸಚಿವ ಜಿ.ಪರಮೇಶ್ವರ್ (G Parameshwar) ಮೇಲಿನ ಇಡಿ ದಾಳಿ ವಿಚಾರವಾಗಿ ಮಾತನಾಡಿದ ಅವರು, ದಲಿತ ರಾಜಕಾರಣಿಗಳ ಮೇಲೆಯೇ ಯಾಕೆ ಇಡಿ ದಾಳಿಯಾಗುತ್ತದೆ? ಪರಮೇಶ್ವರ್ ಒಬ್ಬ ದಲಿತ ನಾಯಕರು. ಪ್ರಾಮಾಣಿಕ ರಾಜಕಾರಣಿ. ಅಪ್ಪರ್ ಕಮ್ಯುನಿಟಿಯವರಿಗೆ ಕಮಿಟಿಯವರಿಗೆ ಬಿಜೆಪಿ ಬೇಕು. ಗಾನಬಜಾನಾ ಮಾಡೋರೆ ಬೇಕು ಅನಿಸುತ್ತದೆ. ಯಾಕೆ ಬಿಜೆಪಿಯಲ್ಲಿ ಯಾರು ಹಣ ಮಾಡಿಲ್ವಾ? ಅಶೋಕ್ ಏನು ಸತ್ಯಹರಿಶ್ಚಂದ್ರರಾ? ವಿಜಯೇಂದ್ರ ಏನು ಹಣ ವರ್ಗಾಯಿಸಿಲ್ವಾ? ಯಾಕೆ ದಲಿತರ ಮೇಲೆಯೇ ದಾಳಿ ನಡೆಯುತ್ತದೆ ಎಂದು ಆಗ್ರಹಿಸಿದರು.ಇದನ್ನೂ ಓದಿ: ರಾಮನಗರ ಹೆಸರು ಬದಲಾವಣೆ – ತಮ್ಮ ಭೂಮಿಗಳ ಬೆಲೆ ಹೆಚ್ಚಿಸುವ ಷಡ್ಯಂತ್ರದ ಭಾಗ: ಹೆಚ್‌ಡಿಕೆ ಕೆಂಡ

    ಅಪ್ಪರ್ ಕಮ್ಯುನಿಟಿಯವರಿಗೆ ದಲಿತರನ್ನು ಕಂಡ್ರೆ ಆಗುವುದಿಲ್ಲವಾ? ನಮ್ಮ ಮೇಲೆ ದಾಳಿ ಮಾಡಿಸಿದರೆ, ನಾವೇನು ನಿಮ್ಮ ದಾಳಿಗೆ ಹೆದರಿ ಬಿಡುತ್ತೇವೆ ಅಂದುಕೊಂಡಿದ್ದೀರಾ? ಇಡಿಯವರಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿಲ್ವಾ? ನಾವೇನು ಸುಮ್ಮನೆ ಕುಳಿತುಕೊಳ್ಳುತ್ತೀವಾ? ಕಾನೂನಿದೆ ನಾವು ಹೋರಾಟ ಮಾಡುತ್ತೇವೆ. ನಾವೇನು ನಿಮ್ಮ ದಾಳಿಗೆಲ್ಲ ಹೆದರುವವರಲ್ಲ. ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಕ್ಕೆ ಅಪ್ಪರ್ ಕಮ್ಯುನಿಟಿಯವರು ಸಹಿಸಿಕೊಳ್ಳುತ್ತಿಲ್ಲ, ಪ್ರಿಯಾಂಕ್ ಖರ್ಗೆಯವರು ಬೆಳೆಯೋದನ್ನ ಸಹಿಸುತ್ತಿಲ್ಲ. ಅವರು ನಮ್ಮ ಪಕ್ಷದ ಫೈರ್ ಬ್ರ್ಯಾಂಡ್‌. ಅದಕ್ಕೆ ಬಿಜೆಪಿಯವರು ಕಷ್ಟವಾಗುತ್ತಿದೆ. ಅದಕ್ಕೆ ಛಲವಾದಿಯನ್ನ ಮುಂದೆ ಬಿಟ್ಟಿದ್ದಾರೆ ಎಂದು ಕಿಡಿಕಾರಿದರು.

    ಛಲವಾದಿಯವರು ತಮ್ಮ ಸೀಟು ಭದ್ರ ಮಾಡಿಕೊಳ್ಳಲು ಖರ್ಗೆಯವರನ್ನ ಬೈಯಬೇಕು. ಇದೇನು ಸರ್ವಾಧಿಕಾರವಲ್ಲ. ಐಟಿ, ಇಡಿ ರೇಡ್ ಮಾಡಿದರೆ ಭಯ ಬೀಳ್ತಿವಾ? ಸಾವಿರ ಸಲ ರೇಡ್ ಮಾಡಲಿ, ಏನಾದರೂ ಟಾರ್ಚರ್ ಕೊಡಿ ನೋ ಪ್ರಾಬ್ಲಂ. ಮೋದಿ, ಅಮಿತ್ ಶಾ ಅವರಿಗೆ ಧಂ ಇದ್ಯಾ? ಬಿಜೆಪಿಯವರಿಗೆ ಧಮ್ಮು ತಾಕತ್ತು ಇದ್ದರೆ ಏನು ಬೇಕಾದರೂ ಮಾಡಿಕೊಳ್ಳಲಿ. ಆದರೆ ಇಡಿಯವರು ಯಾಕೆ ಸಡನ್ ಆಗಿ ಎಂಟ್ರಿ ಆಗಬೇಕು. ಆರ್.ಅಶೋಕ್, ವಿಜಯೇಂದ್ರ ಟ್ರಾನ್ಸಾಕ್ಷಮ್ ಕರೆಕ್ಟ್ ಇದ್ಯಾ? ನೀವು ಏನೇ ಮಾಡಿಕೊಳ್ಳಿ ತಲೆಕೆಡಿಸಿಕೊಳ್ಳಲ್ಲ. ಎಲ್ಲವನ್ನೂ ನಾವು ಎದರಿಸುತ್ತೇವೆ. ನೀವೇನು ಅಲ್ಲೇ ಇರಲ್ಲ. 2029ಕ್ಕೆ ದೆಹಲಿಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ. ನಮ್ಮ ರಾಹುಲ್ ಗಾಂಧಿ ಪಿಎಂ ಆಗುತ್ತಾರೆ ಎಂದರು.

    ಛಲವಾದಿ ನಾರಾಯಣಸ್ವಾಮಿ 40 ವರ್ಷ ಬಕೆಟ್ ಹಿಡಿದು ಹೋದವರು. ಅವರು ಖರ್ಗೆಯವರ ಬಗ್ಗೆ ಮಾತನಾಡುತ್ತಾರೆ. ಅವರು ಹೇಳಿದ ಪದ ನಾನು ಬಳಸಲ್ಲ. ನೀವು ಪ್ರತಿಪಕ್ಷ ನಾಯಕರು ಅಂತ ಭದ್ರತೆ ಕೊಟ್ಟಿದ್ದಾರೆ. ಪೊಲೀಸರು ನಿಮ್ಮನ್ನ ನೋಡಿಕೊಂಡಿದ್ದಾರೆ. ನಾವು ಯಾವುದಕ್ಕೂ ಹೆದರೋರಲ್ಲ ಅವರು ಮುಂದೆ ಮುಖ್ಯಮಂತ್ರಿಯಾಗುವವರು. ಅದಕ್ಕೆ ಬಿಜೆಪಿಯವರಿಗೆ ಅವರನ್ನು ಕಂಡರೆ ಭಯ, ಆ ಕಾರಣಕ್ಕೆ ಅವರನ್ನು ಟಾರ್ಗೆಟ್ ಮಾಡ್ತಾ ಇದ್ದಾರೆ ಎಂದು ಆರೋಪಿಸಿದರು.ಇದನ್ನೂ ಓದಿ: ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ & ಉಕ್ಕು ಕಾರ್ಖಾನೆ ಪುನಶ್ಚೇತನಕ್ಕೆ ಕೇಂದ್ರ ಅಸ್ತು

  • ದೇಶದ ವಿರುದ್ಧ ಮಾತಾಡಿದ್ರೆ ಜನ ನಿಮ್ಮ ನಾಲಿಗೆ ಇಲ್ಲದಂತೆ ಮಾಡ್ಬಹುದು – ʻಕೈʼ ನಾಯಕರಿಗೆ ಛಲವಾದಿ ಎಚ್ಚರಿಕೆ

    ದೇಶದ ವಿರುದ್ಧ ಮಾತಾಡಿದ್ರೆ ಜನ ನಿಮ್ಮ ನಾಲಿಗೆ ಇಲ್ಲದಂತೆ ಮಾಡ್ಬಹುದು – ʻಕೈʼ ನಾಯಕರಿಗೆ ಛಲವಾದಿ ಎಚ್ಚರಿಕೆ

    ಬೆಂಗಳೂರು: ಕಾಂಗ್ರೆಸ್ (Congress) ನಾಯಕರ ಅಪಕ್ವ ಹೇಳಿಕೆಗಳಿಗೆ ನಾನು ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ಕೆಲವರ ಪ್ರಶ್ನೆಗಳು ಪಾಕಿಸ್ತಾನದ ಪರವಾಗಿವೆ. ನಿನ್ನೆ ತಾನೇ ಮೂವರು ಸತ್ತು ಬಿದ್ದಿದ್ದಾರೆ ಅಲ್ಲವೇ? ನಿಮಗೆ ಕಣ್ಣು ಕಾಣಲಿಲ್ಲವೇ? ನಿಮಗೇನಾದರೂ ಆಪರೇಷನ್ ಆಗಿದೆಯೇ? ನಿಮಗೆಲ್ಲ ವಿಶೇಷ ಆಸ್ಪತ್ರೆ ತೆರೆಯಬೇಕಿದೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಇಂದಿನಿಂದ ಜಾರಿ – ಸಿದ್ದರಾಮಯ್ಯ

    ಅವರ ಸ್ಥಾನದಲ್ಲಿ ನಾನು ಇದ್ದರೆ ಪಕ್ವತೆ ಇಲ್ಲದ ಪ್ರಶ್ನೆ ಕೇಳುತ್ತಿರಲಿಲ್ಲ. ದೇಶದ ವಿರುದ್ಧ ಮಾತನಾಡಿದರೆ ಜನರು ನಿಮ್ಮ ನಾಲಿಗೆ ಇಲ್ಲದಂತೆ ಮಾಡಬಹುದು ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮೋದಿಗೆ ಟಕ್ಕರ್‌ ಕೊಡಲು ಹೋಗಿ ನಗೆಪಾಟಲು – ಧ್ವಂಸಗೊಂಡ ಏರ್‌ಫೀಲ್ಡ್‌ ಮುಚ್ಚಿಕೊಳ್ಳಲು ಮೈದಾನದಲ್ಲಿ ಪಾಕ್‌ ಪ್ರಧಾನಿ ಸಂವಾದ