Tag: chalavadi narayanaswamy

  • ಶಕ್ತಿ ಯೋಜನೆಯಿಂದ ಹೆಣ್ಣುಮಕ್ಕಳು ಬಸ್ಸನ್ನು ಕಿಟಕಿಯಿಂದೇರಿ ಇಳಿಯುವಂತಾಗಿದೆ: ಛಲವಾದಿ ನಾರಾಯಣಸ್ವಾಮಿ

    ಶಕ್ತಿ ಯೋಜನೆಯಿಂದ ಹೆಣ್ಣುಮಕ್ಕಳು ಬಸ್ಸನ್ನು ಕಿಟಕಿಯಿಂದೇರಿ ಇಳಿಯುವಂತಾಗಿದೆ: ಛಲವಾದಿ ನಾರಾಯಣಸ್ವಾಮಿ

    – ಬಹುಕಾಲ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌ಗೆ ಈಗ ಮೋದಿ ಎದುರಿಸೋ ಶಕ್ತಿ ಇಲ್ಲ

    ಬೆಳಗಾವಿ: ನರೇಂದ್ರ ಮೋದಿ ಜಾರಿಗೆ ತಂದ ಯೋಜನೆಗಳನ್ನು ಜನರಿಗೆ ತಲುಪಿಸಿದರೆ ಸಾಕು. ಮೂರನೇ ಬಾರಿಗೆ ಮೋದಿ ಪ್ರಧಾನಿ ಆಗುವುದನ್ನು ತಡೆಯಲು ವಿಪಕ್ಷಗಳು ತಾಲೀಮು ನಡೆಸುತ್ತಿವೆ. ಬಹುಕಾಲ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌ಗೆ (Congress) ಈಗ ನರೇಂದ್ರ ಮೋದಿ ಅವರನ್ನು ಎದುರಿಸುವ ಶಕ್ತಿ ಇಲ್ಲ ಎಂದು ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿದರು.

    ಬೆಳಗಾವಿಯ (Belagavi) ಗಾಂಧಿ ಭವನದಲ್ಲಿ ನಡೆಯುತ್ತಿರುವ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷವಾಗಿದ್ದರೂ ಪ್ರಾದೇಶಿಕ ಪಕ್ಷದ ಸಭೆಗೆ ಕಾಂಗ್ರೆಸ್ ನಾಯಕರು ಹೊಗಿದ್ದಾರೆ. ವಿಪಕ್ಷಗಳು ಏನೇ ಕಸರತ್ತು ಮಾಡಲಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ (BJP) ಗೆದ್ದು, ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ. ಅಧಿಕಾರಕ್ಕೆ ಬರುವುದಕ್ಕಾಗಿ ಕಾಂಗ್ರೆಸ್ 5 ಗ್ಯಾರಂಟಿ (Guarantee) ಯೋಜನೆ ಜಾರಿಗೆ ತಂದಿದೆ. ಹೆಣ್ಣು ಮಕ್ಕಳನ್ನು ಕೇಂದ್ರೀಕರಿಸಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ ಎಂದರು.

    ಬೊಮ್ಮಾಯಿ ಸರ್ಕಾರದಲ್ಲಿ ರಾಜ್ಯದ ಹೆಣ್ಣು ಮಕ್ಕಳು ಬಸ್‌ನ (Bus) ಬಾಗಿಲಿನಿಂದ ಏರಿ, ಅಲ್ಲಿಂದಲೇ ಇಳಿಯುತ್ತಿದ್ದರು. ಸಿದ್ದರಾಮಯ್ಯನವರ ಶಕ್ತಿ ಯೋಜನೆಯಿಂದ ಹೆಣ್ಣು ಮಕ್ಕಳು ಕಿಟಕಿಯಿಂದ ಏರಿ, ಇಳಿಯುವಂತಾಗಿದೆ ಎಂದು ಕಾಂಗ್ರೆಸ್‌ನ ಮಹತ್ವಾಕಾಂಕ್ಷೆಯ ಶಕ್ತಿಯೋಜನೆ ಬಗ್ಗೆ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದರು. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ಚಪ್ಪಲಿಯಿಂದ ಹೊಡೆದಾಡಿಕೊಳ್ತಾರೆ: ಯತ್ನಾಳ್

    ಈಗ ಕಾಂಗ್ರೆಸ್ ಸರ್ಕಾರದ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ಲೋಕಸಭೆ ಚುನಾವಣೆ ಕಡೆಗೆ ಗಮನ ಹರಿಸೋಣ. ರಾಜ್ಯ ಸರ್ಕಾರದ ಜುಟ್ಟು ನಮ್ಮ ಕೈಯಲ್ಲಿದೆ. ಲೋಕಸಭಾ ಚುನಾವಣೆ ಬಳಿಕ ಅದನ್ನು ಅಲ್ಲಾಡಿಸೋಣ. ಲೋಕಸಭಾ ಚುನಾವಣೆಗೆ ಪಕ್ಷ ಯಾರಿಗೆ ಟಿಕೆಟ್ ನೀಡಲಿ. ಅಭ್ಯರ್ಥಿ ನೋಡದೇ ಪಕ್ಷವನ್ನು ನೋಡಿ. ಬಿಜೆಪಿ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದು ಬೆಳಗಾವಿಯಲ್ಲಿ ಛಲವಾದಿ ನಾರಾಯಣಸ್ವಾಮಿ ಹೇಳಿದರು. ಇದನ್ನೂ ಓದಿ: ಲಾರಿ ಟಾರ್ಪಲ್ ಕಿತ್ತು ಆಹಾರಕ್ಕಾಗಿ ಒಂಟಿಸಲಗದ ಚೆಕ್ಕಿಂಗ್

  • ಸಿದ್ದರಾಮಯ್ಯ ವಿರುದ್ಧ ಐಶಾರಾಮಿ ವಾಚ್ ಬಾಂಬ್

    ಸಿದ್ದರಾಮಯ್ಯ ವಿರುದ್ಧ ಐಶಾರಾಮಿ ವಾಚ್ ಬಾಂಬ್

    ಬೆಂಗಳೂರು: ಸಿದ್ದರಾಮಯ್ಯ ಬಳಿ 8 ವಾಚ್‌ಗಳಿವೆ. ಎಲ್ಲವೂ ಉಡುಗೊರೆ ನೀಡಿರುವುದಾಗಿ ಇದೆ ಎಂದು ಎಂಎಲ್‍ಸಿ ಛಲವಾದಿ ನಾರಾಯಣಸ್ವಾಮಿ(Chalavadi Narayanaswamy) ಆರೋಪಿಸಿದ್ದಾರೆ.

    ಸಿದ್ದರಾಮಯ್ಯ(Siddaramaiah) ಅವಧಿಯ ಹಗರಣಗಳನ್ನು ಕೆದಕಲು ಬಿಜೆಪಿ(BJP) ನೋಡುತ್ತಿದೆ. ಇದರ ಮೊದಲ ಭಾಗವಾಗಿ ಇವತ್ತು ಬಿಜೆಪಿ ನಾಯಕರು ಸುದ್ದಿಗೋಷ್ಠಿ ನಡೆಸಿ ವಾಚ್ ಬಾಂಬ್ ಸಿಡಿಸಿದ್ದಾರೆ. ಸಿದ್ದರಾಮಯ್ಯ ಬಳಿ 8 ವಾಚ್(Watch) ಇವೆ. ಕಲ್ಲಿದ್ದಲು ಡೀಲ್ ಭಾಗವಾಗಿ ಹೈದ್ರಾಬಾದ್ ಮೂಲದ ಉದ್ಯಮಿ ವಿಜಯ್ ಮಂದಾನಿಯಿಂದ ರೋಲೆಕ್ಸ್ ವಾಚ್ ಪಡೆದುಕೊಂಡಿದ್ದಾರೆ ಎಂದು ಎಂಎಲ್‍ಸಿ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಸದ್ಯದಲ್ಲೇ ಎಲ್ಲಾ 8 ವಾಚ್‍ಗಳ ಇತಿಹಾಸ ಬಿಚ್ಚಿಡ್ತೀನಿ ಎಂದು ಎಚ್ಚರಿಸಿದ್ದಾರೆ.

    ಈ ಮಧ್ಯೆ, ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಕೆಪಿಸಿಸಿ ಅಧ್ಯಕ್ಷರಿಗೆ ಮತ್ತೊಮ್ಮೆ ಸಮನ್ಸ್ ನೀಡಿದೆ. ಇದಕ್ಕೆ ಡಿಕೆಶಿ ಗರಂ ಆಗಿದ್ದಾರೆ. ಭಾರತ್ ಜೋಡೋ, ಅಧಿವೇಶನ ನಡೆಯುತ್ತಿರುವ ಹೊತ್ತಲ್ಲೇ ನನಗೆ ಮತ್ತೊಮ್ಮೆ ಇಡಿ ಸಮನ್ಸ್ ನೀಡಿದೆ. ನಾನು ತನಿಖೆಗೆ ಸಹಕರಿಸಲು ಸಿದ್ಧ. ಆದರೆ, ಮೇಲಿಂದ ಮೇಲೆ ಸಮನ್ಸ್ ಕೊಟ್ಟು ಕಿರಕುಳ ನೀಡ್ತಿದ್ದಾರೆ. ಇದರಿಂದ ನನ್ನ ಸಾಂವಿಧಾನಿಕ ಮತ್ತು ಕರ್ತವ್ಯಗಳನ್ನು ನಿರ್ವಹಿಸಲು ತೊಂದ್ರೆ ಆಗ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಭಾರತವನ್ನು ಅಂತಾರಾಷ್ಟ್ರೀಯ ಸಂಶೋಧನಾ ಕೇಂದ್ರವಾಗಿ ರೂಪಿಸಿ – ಗೆಹ್ಲೋಟ್

    Congress

    ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡಿ, ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆಯ ತಯಾರಿಯಲ್ಲಿರುವ ಕಾಂಗ್ರೆಸ್‍ಗೆ ಅಡ್ಡಿ ಮಾಡಲು ಮೋದಿ ಸರ್ಕಾರ ಇಡಿಯನ್ನು ಛೂ ಬಿಟ್ಟಿದೆ. ಡಿಕೆಶಿ ಟಾರ್ಗೆಟ್ ಮಾಡಲು ಬಿಜೆಪಿ ಇಂತಹ ಹೇಡಿತನದ ಕೃತ್ಯಕ್ಕೆ ಮುಂದಾಗಿದೆ ಎಂದು ಟೀಕಿಸಿದ್ದಾರೆ. ಈ ಮಧ್ಯೆ ಮೈಸೂರಲ್ಲಿ ಮಾತಾಡಿದ ಡಿಕೆ ಶಿವಕುಮಾರ್, ದಾಖಲೆ ಒದಗಿಸುವಂತೆ ಸರ್ಕಾರದ ಮಂದಿ ಇಂಧನ ಇಲಾಖೆ ಅಧಿಕಾರಿಗಳನ್ನು ಹೆದರಿಸ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ವಿರೋಧದ ಮಧ್ಯೆ ಮತಾಂತರ ನಿಷೇಧ ಮಸೂದೆ ಅಂಗೀಕಾರ

    Live Tv
    [brid partner=56869869 player=32851 video=960834 autoplay=true]

  • ನೀನು ನಾಲಾಯಕ್‌, ಯಾವತ್ತಿದ್ರೂ ಅಸ್ಪೃಶ್ಯ ಅಂದಿದ್ರು: ಸಿದ್ದು ವಿರುದ್ಧ ಠಾಣೆಗೆ ಛಲವಾದಿ ನಾರಾಯಣಸ್ವಾಮಿ ದೂರು

    ನೀನು ನಾಲಾಯಕ್‌, ಯಾವತ್ತಿದ್ರೂ ಅಸ್ಪೃಶ್ಯ ಅಂದಿದ್ರು: ಸಿದ್ದು ವಿರುದ್ಧ ಠಾಣೆಗೆ ಛಲವಾದಿ ನಾರಾಯಣಸ್ವಾಮಿ ದೂರು

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ನನ್ನ ಮೇಲೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಈ ರಾಜ್ಯದ ಮಾಜಿ ಮುಖ್ಯಮಂತ್ರಿ, ಸದ್ಯ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡುವ ಭರದಲ್ಲಿ ತಾವು ಸದಾ ಅಸ್ಪೃಶ್ಯ ಅಂತಾ ನಮ್ಮ ಜಾತಿ ನಿಂದನೆ ಮಾಡಿದ್ದಾರೆ. ಸಿದ್ದರಾಮಯ್ಯ ಬಗ್ಗೆ ನಮಗೆ ಬಹಳ ಗೌರವ ಇದೆ. ಅವರು ಮುಖ್ಯಮಂತ್ರಿ ಆಗಿದ್ದವರು, ಇಂದು ವಿಪಕ್ಷ ನಾಯಕರಾಗಿರುವವರು. ಈ ತಿಂಗಳ 7ರಂದು ನಾರಾಯಣಸ್ವಾಮಿ ಅವರೇ, ನೀವು ಸದಾ ಅಸ್ಪೃಶ್ಯರು ಅಂತಾ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ರೈತರನ್ನು ಬಲಿ ಕೊಟ್ಟಾಯಿತು, ಈಗ ಸೈನಿಕರ ಸರದಿಯೇ?: ಅಗ್ನಿಪಥ್ ಯೋಜನೆಗೆ ಸಿದ್ದು ವಿರೋಧ

    ನಿಮ್ಮ ಗುಲಾಮ ಮನಸ್ಥಿತಿಗೆ ನನ್ನ ಧಿಕ್ಕಾರವಿರಲಿ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ನನ್ನನ್ನ ನಿಂದಿಸುವ ಭರದಲ್ಲಿ ನನ್ನ ಜಾತಿಯನ್ನ ನಿಂದಿಸಿದ್ದಾರೆ. ಈ ವಿಚಾರ ದೌರ್ಜನ್ಯ ತಡೆ ಕಾಯ್ದೆಅಡಿ ದೂರು ನೀಡಿದ್ದೇನೆ. ಜಾತಿ ನಿಂದನೆ ಕೇಸ್ ದಾಖಲಿಸಿದ್ದೇನೆ, ಅವರನ್ನ ಅರೆಸ್ಟ್ ಮಾಡಬೇಕಾಗುತ್ತದೆ. ಇದರಲ್ಲಿ ಯಾವುದೇ ರೀತಿಯ ತಡ ಮಾಡಿದ್ರೆ ನಾನು ಧರಣಿ ಮಾಡ್ತೇನೆ ಎಂದು ತಿಳಿಸಿದ್ದಾರೆ.

    ಜಾತಿಗೆ ಅಪಮಾನ ಮಾಡುವ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ವಿರುದ್ಧ ಜಾತಿ ನಿಂದನೆ, ದಲಿತ ವಿರೋಧಿ ಕೇಸ್ ದಾಖಲಿಸಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.

    Live Tv

  • ಸಿದ್ದರಾಮಯ್ಯ ಗೋಮಾಂಸ ತಿನ್ನೋದಾದ್ರೆ ತಿನ್ನಲಿ, ವಕೀಲಿಕೆ ಮಾಡೋದು ಬೇಡ: ಛಲವಾದಿ ನಾರಾಯಣಸ್ವಾಮಿ  

    ಸಿದ್ದರಾಮಯ್ಯ ಗೋಮಾಂಸ ತಿನ್ನೋದಾದ್ರೆ ತಿನ್ನಲಿ, ವಕೀಲಿಕೆ ಮಾಡೋದು ಬೇಡ: ಛಲವಾದಿ ನಾರಾಯಣಸ್ವಾಮಿ  

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿದ್ದರಾಮಯ್ಯ ಗೋಮಾಂಸ ತಿನ್ನೋದಾದ್ರೆ ತಿನ್ನಲಿ. ಆದರೆ ವಕೀಲಿಕೆ ಮಾಡೋದು ಬೇಡ ಎಂದು ಬಿಜೆಪಿ ರಾಜ್ಯ ವಕ್ತಾರ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

    ತುಮಕೂರಿನಲ್ಲಿ ಗೋಮಾಂಸ ಸೇವನೆ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರ ಸಂಬಂಧ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯಿಸಿದ ಅವರು, ವಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ನಿನ್ನೆ ತುಮಕೂರಿನಲ್ಲಿ ಹೇಳಿಕೆ ನೀಡಿದ್ದಾರೆ. ದಲಿತರು, ಹಿಂದುಳಿದವರು, ಹಿಂದೂಗಳು, ಕ್ರೈಸ್ತರು ಗೋಮಾಸ ತಿಂತಾರೆ ಅಂದಿದ್ದಾರೆ. ಹಾಗಾಗಿ ಗೋ ಮಾಂಸ ನಿಷೇಧ ಮಾಡಬಾರದು ಅಂದಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಗೋಮಾಂಸವನ್ನು ಹಿಂದೂಗಳು, ಕ್ರಿಶ್ಚಿಯನ್ ಕೂಡ ತಿನ್ನುತ್ತಾರೆ: ಸಿದ್ದರಾಮಯ್ಯ

    ಸಿದ್ದರಾಮಯ್ಯ ಅವರು ಗೋಮಾಂಸ ತಿನ್ನೋದಾದ್ರೆ ತಿನ್ನಲಿ. ವಕೀಲಿಕೆ ಮಾಡೋದು ಬೇಡ. ಸರ್ಕಾರ ನಿರ್ಧಾರ ತೆಗೆದುಕೊಂಡಾಗ ಅದಕ್ಕೆ ಬೆಂಬಲ ನೀಡಬೇಕು. ಆದರೆ ಅದನ್ನ ವಿರೋಧಿಸೋದು ಬೇಡ. ಅವರು ದೇವಸ್ಥಾನಕ್ಕೆ ಹೋಗುವಾಗ ಮಾಂಸ ತಿಂದು ಹೋದ್ರು. ಅದನ್ನೂ ಸಮರ್ಥನೆ ಮಾಡಿಕೊಂಡರು ಎಂದರು. ಇದನ್ನೂ ಓದಿ: ಟಿಪ್ಪು ದೇಶ ಭಕ್ತ – ಮತಾಂಧ ಆಗಿದ್ದರೆ ಹಿಂದೂ ದೇವಾಲಯಗಳು ಉಳೀತಿತ್ತಾ?: ಸಿದ್ದರಾಮಯ್ಯ

    ಸಿದ್ದರಾಮಯ್ಯಗೆ ಬಜೆಪಿ, ಆರ್‍ಎಸ್‍ಎಸ್ ಬಗ್ಗೆ ಮಾತನಾಡೋ ಚಟ. ಅವರು ಬೇರೆ ಬೇರೆ ಸಂದರ್ಭದಲ್ಲಿ ಮಾತನಾಡುವಾಗ ದಲಿತರನ್ನ ಹಿಂದುಳಿದವರನ್ನ ಎತ್ತಿ ಕಟ್ಟಿ ಮಾತಾಡೋ ಚಟ. ದೇಶ ದೊಡ್ಡದು, ದೇಶ ಕಟ್ಟೋ ಕೆಲಸ ಮಾಡಬೇಕು. ವಿಷ ಬೀಜ ಬಿತ್ತೋ ಕೆಲಸ ಮಾಡಬಾರದು ಎಂದು ನಾರಾಯಣಸ್ವಾಮಿಯವರು ಗರಂ ಆದರು.